Lionel Messi | ಅರ್ಜೆಂಟೀನಾ ತಂಡದ ಸ್ಟಾರ್​ ಫುಟ್ಬಾಲ್​ ಆಟಗಾರ ಮೆಸ್ಸಿ ಎಡ ಪಾದದ ಇನ್ಸುರೆನ್ಸ್‌ ಎಷ್ಟು ಸಾವಿರ ಕೋಟಿ? ಇಲ್ಲಿದೆ ಮಾಹಿತಿ! - Vistara News

Latest

Lionel Messi | ಅರ್ಜೆಂಟೀನಾ ತಂಡದ ಸ್ಟಾರ್​ ಫುಟ್ಬಾಲ್​ ಆಟಗಾರ ಮೆಸ್ಸಿ ಎಡ ಪಾದದ ಇನ್ಸುರೆನ್ಸ್‌ ಎಷ್ಟು ಸಾವಿರ ಕೋಟಿ? ಇಲ್ಲಿದೆ ಮಾಹಿತಿ!

ಅರ್ಜೆಂಟೀನಾ ತಂಡದ ಸ್ಟಾರ್​ ಫುಟ್ಬಾಲ್​ ಆಟಗಾರ ಲಿಯೋನೆಲ್​ ಮೆಸ್ಸಿ ಅವರ ಎಡ ಪಾದದ ಇನ್ಶುರೆನ್ಸ್ ಮೌಲ್ಯ ಕೇಳಿದರೆ ಅಚ್ಚರಿಯಾಗುತ್ತದೆ!

VISTARANEWS.COM


on

fifa world cup 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕತಾರ್​: ಅರ್ಜೆಂಟೀನಾ ತಂಡದ ಸ್ಟಾರ್​ ಫುಟ್ಬಾಲ್​ ಆಟಗಾರ ಲಿಯೋನೆಲ್​ ಮೆಸ್ಸಿ(Lionel Messi) ಅವರ ಖ್ಯಾತಿ ವಿಶ್ವಾದ್ಯಂತ ಇದೆ. ಆದರೆ ಅವರ ಬಗ್ಗೆ ತಿಳಿಯದ ಅನೇಕ ವಿಷಯಗಳಿವೆ. ಮೆಸ್ಸಿ ಕಾಲಿನ ಬೆಲೆ ತಿಳಿದರೆ ಇದೀಗ ಎಲ್ಲರೂ ಒಮ್ಮೆ ದಿಗ್ಭ್ರಮೆ ಆಗುವುದರಲ್ಲಿ ಅನುಮಾನವಿಲ್ಲ. ಹೌದು ಫುಟ್ಬಾಲ್ ಜಗತ್ತಿನಲ್ಲಿ ಅತ್ಯಂತ ದುಬಾರಿ ಪಾದವೆಂದರೆ ಅದು ಲಿಯೋನೆಲ್ ಮೆಸ್ಸಿ ಅವರದ್ದು. ಮೆಸ್ಸಿಯ ಎಡ ಪಾದದ ಪ್ರಸ್ತುತ ಬೆಲೆ 750 ಮಿಲಿಯನ್ ಯುರೋಗಳು. ಭಾರತೀಯ ರೂಪಾಯಿಗಳಲ್ಲಿ ಇದು ಸುಮಾರು 6,140 ಸಾವಿರ ಕೋಟಿ ಆಗುತ್ತದೆ.

ಇತ್ತೀಚಿನ ದಿನಗಳಲ್ಲಿ ಫುಟ್ಬಾಲ್ ಆಟದಲ್ಲಿ ಗಾಯದ ಸಮಸ್ಯೆ ಹೆಚ್ಚಾಗಿದೆ. ಆದ್ದರಿಂದ ಫುಟ್ಬಾಲ್ ಆಟಗಾರರು ತಮ್ಮ ಪಾದಗಳಿಗೆ ಚಿಕಿತ್ಸೆಗಾಗಿ ವಿಮೆ ಮಾಡಿಸುತ್ತಾರೆ. ಆ ವಿಮೆಯಲ್ಲಿ ಮೆಸ್ಸಿ ಪಾದದ ಮೌಲ್ಯ 6 ಸಾವಿರ ಕೋಟಿ ಮೌಲ್ಯದ್ದಾಗಿದ್ದು ಅತ್ಯಂತ ದುಬಾರಿಯಾಗಿದೆ.

23ರಂದು ಸೌದಿ ಅರೇಬಿಯಾ ವಿರುದ್ಧದ ಪಂದ್ಯದೊಂದಿಗೆ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ವಿಶ್ವ ಕಪ್ ಅಭಿಯಾನ ಆರಂಭಿಸಲಿದೆ. ಮೆಸ್ಸಿ ಈಗಾಗಲೇ ಕತಾರ್ ವಿಶ್ವ ಕಪ್​ ಬಳಿಕ ನಿವೃತ್ತಿ ಹೇಳುವುದಾಗಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ವಿಶ್ವಾದ್ಯಂತ ಮೆಸ್ಸಿ ಆಟವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಹೀಗಾಗಿ ಅರ್ಜೆಂಟೀನಾ ತಂಡದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ಇದನ್ನೂ ಓದಿ | Fifa World Cup 2022 | ಫಿಫಾ ಫುಟ್ಬಾಲ್-2022​ ವಿಶ್ವ ಕಪ್​ನ ಟಾಪ್​ 5 ಆಟಗಾರರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Sushil Kumar Modi : ಬಿಹಾರದ ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ನಿಧನ

VISTARANEWS.COM


on

Sushil Kumar Modi
Koo

ನವದೆಹಲಿ: ಬಿಹಾರದ ಮಾಜಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ಮುಖಂಡ ಸುಶೀಲ್ ಕುಮಾರ್ ಮೋದಿ (72) ಸೋಮವಾರ ನಿಧನನ ಹೊಂದಿದ್ದಾರೆ. ಸುಶೀಲ್ ಕುಮಾರ್ ಮೋದಿ ಅವರು ಕ್ಯಾನ್ಸರ್​​ ಸಮಸ್ಯೆಯಿಂದ ಬಳಲುತ್ತಿದ್ದರು. ತಮ್ಮ ಆರೋಗ್ಯ ಸ್ಥಿತಿಯಿಂದಾಗಿ 2024 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈ ವರ್ಷದ ಏಪ್ರಿಲ್​​ನಲ್ಲಿ ಘೋಷಿಸಿದ್ದರು. ಮಾಜಿ ರಾಜ್ಯಸಭಾ ಸಂಸದರಾಗಿದ್ದ ಅವರ ಪಾರ್ಥಿವ ಶರೀರವನ್ನು ನಾಳೆ (ಮೇ 14) ಪಾಟ್ನಾದ ರಾಜೇಂದ್ರ ನಗರ ಪ್ರದೇಶದಲ್ಲಿರುವ ಅವರ ನಿವಾಸಕ್ಕೆ ತರಲಾಗುವುದು ಎಂದು ಮೂಲಗಳು ತಿಳಿಸಿವೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಹಾರದ ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಸುಶೀಲ್ ಕುಮಾರ್ ಮೋದಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಪಕ್ಷದಲ್ಲಿ ನನ್ನ ಮೌಲ್ಯಯುತ ಸಹೋದ್ಯೋಗಿ ಮತ್ತು ದಶಕಗಳಿಂದ ನನ್ನ ಸ್ನೇಹಿತ ಸುಶೀಲ್ ಮೋದಿ ಜಿ ಅವರ ಅಕಾಲಿಕ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಬಿಹಾರದಲ್ಲಿ ಬಿಜೆಪಿಯ ಏಳಿಗೆ ಮತ್ತು ಅದರ ಯಶಸ್ಸಿನ ಹಿಂದೆ ಅವರ ಕೊಡುಗೆ ಅಮೂಲ್ಯವಾಗಿದೆ. ತುರ್ತು ಪರಿಸ್ಥಿತಿಯನ್ನು ಬಲವಾಗಿ ವಿರೋಧಿಸಿದ ಅವರು ವಿದ್ಯಾರ್ಥಿ ರಾಜಕಾರಣದಿಂದ ತಮ್ಮನ್ನು ಪ್ರೇರಿತರಾಗಿದ್ದರು. ಅವರು ತುಂಬಾ ಶ್ರಮಜೀವಿ ಮತ್ತು ಸ್ನೇಹಪರ ಶಾಸಕ ಎಂದು ಹೆಸರುವಾಸಿಯಾಗಿದ್ದರು. ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಅವರ ತಿಳುವಳಿಕೆ ಬಹಳ ಆಳವಾಗಿತ್ತು. ಅವರು ಆಡಳಿತಗಾರರಾಗಿ ಪ್ರಶಂಸನೀಯ ಕೆಲಸವನ್ನೂ ಮಾಡಿದರು. ಜಿಎಸ್ಟಿ ಅಂಗೀಕಾರದಲ್ಲಿ ಅವರ ಸಕ್ರಿಯ ಪಾತ್ರವನ್ನು ಯಾವಾಗಲೂ ನೆನಪಿಸಿಕೊಳ್ಳಲಾಗುತ್ತದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಬೆಂಬಲಿಗರೊಂದಿಗೆ ನನ್ನ ಸಂತಾಪವಿದೆ. ಓಂ ಶಾಂತಿ! ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Tejasvi Surya: ಈ ದಲಿತ ನಾಯಕನ ಜತೆ ಚರ್ಚೆಗೆ ಬನ್ನಿ ರಾಹುಲ್‌ ಗಾಂಧಿ; ತೇಜಸ್ವಿ ಸೂರ್ಯ ಪಂಥಾಹ್ವಾನ!

ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಮುಖಂಡ ತೇಜಸ್ವಿ ಯಾದವ್ ಕೂಡ ಎಕ್ಸ್ ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಸುಶೀಲ್ ಕುಮಾರ್ ಮೋದಿ ಯಾರು?

ಜನವರಿ 5, 1952 ರಂದು ಜನಿಸಿದ ಸುಶೀಲ್ ಕುಮಾರ್ ಮೋದಿ ಅವರು ಪಾಟ್ನಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಕಾರ್ಯಕರ್ತನಾಗಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು, ಅಲ್ಲಿ ಅವರು 1973 ರಲ್ಲಿ ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.

ತಮ್ಮ ಮೂರು ದಶಕಗಳ ರಾಜಕೀಯ ಜೀವನದಲ್ಲಿ ಸುಶೀಲ್ ಮೋದಿ ಅವರು ಶಾಸಕ, ಎಂಎಲ್ಸಿ ಮತ್ತು ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯ ಸೇರಿದಂತೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರು 2005 ರಿಂದ 2013 ರವರೆಗೆ ಮತ್ತು ಮತ್ತೆ 2017 ರಿಂದ 2020 ರವರೆಗೆ ಬಿಹಾರದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.

ಹಿರಿಯ ರಾಜಕಾರಣಿ 1990 ರಲ್ಲಿ ಪಾಟ್ನಾ ಸೆಂಟ್ರಲ್ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 1996 ರಿಂದ 2004 ರವರೆಗೆ ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದರು.

2004 ರಲ್ಲಿ ಸುಶೀಲ್ ಮೋದಿ ಭಾಗಲ್ಪುರದಿಂದ ಲೋಕಸಭೆಗೆ ಆಯ್ಕೆಯಾಗುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಿದ್ದರು. ಆದಾಗ್ಯೂ, 2005 ರಲ್ಲಿ, ಅವರು ತಮ್ಮ ಲೋಕಸಭಾ ಹುದ್ದೆಗೆ ರಾಜೀನಾಮೆ ನೀಡಿ ವಿಧಾನ ಪರಿಷತ್ತಿಗೆ ಸೇರಿ ಬಿಹಾರದ ಉಪಮುಖ್ಯಮಂತ್ರಿಯ ಪಾತ್ರವನ್ನು ವಹಿಸಿಕೊಂಡಿದ್ದರು.

Continue Reading

ಪ್ರಮುಖ ಸುದ್ದಿ

IPL 2024 : ಮಳೆಯಿಂದಾಗಿ ಪಂದ್ಯ ರದ್ದು, ಕೆಕೆಆರ್​ಗೆ ಮೊದಲೆರಡಲ್ಲೊಂದು ಸ್ಥಾನ ಫಿಕ್ಸ್​

IPL 2024: ಪಂದ್ಯವು ಟಾಸ್​ ಸೇರಿದಂತೆ ಒಂದೇ ಒಂದು ಎಸೆತ ಕಾಣದೇ ರದ್ದಾಯಿತು. ಸ್ಟೇಡಿಯಮ್​ನಲ್ಲಿ ಸೇರಿದ್ದ 45,000 ಅಭಿಮಾನಿಗಳು ಪಂದ್ಯ ಆರಂಭವಾಗುವ ನಿರೀಕ್ಷೆಯಿಂದ ಸ್ಥಳದಿಂದ ಕದಲಲಿಲ್ಲ. ರಾತ್ರಿ 10:56 ಕ್ಕೆ 5 ಓವರ್​ಗಳ ಪಂದ್ಯದ ಕಟ್ ಆಫ್ ಸಮಯವಾಗಿತ್ತು. ಮೈದಾನದ ಸಿಬ್ಬಂದಿ ಎಲ್ಲ ಪ್ರಯತ್ನಗಳನ್ನು ಮಾಡಿದ ಹೊರತಾಗಿಯೂ ಆಡಿಲು ಯಾವುದೇ ಅವಕಾಶ ದೊರೆಯಲಿಲ್ಲ. ರಾತ್ರಿ 10:40 ರ ಸುಮಾರಿಗೆ ಅಧಿಕಾರಿಗಳು ಪಂದ್ಯವನ್ನು ರದ್ದುಗೊಳಿಸಿದರು.

VISTARANEWS.COM


on

IPL 2024
Koo

ಅಹಮದಾಬಾದ್​​: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜನೆಗೊಂಡಿದ್ದ ಗುಜರಾತ್​ ಜೈಂಟ್ಸ್​ ಮತ್ತು ಕೋಲ್ಕೊತಾ ನೈಟ್​ ರೈಡರ್ಸ್​ ನಡುವಿನ ಪಂದ್ಯ ರದ್ದಾಗಿದೆ. ಇದು ಹಾಲಿ ಆವೃತ್ತಿಯಲ್ಲಿ ಮಳೆಯಿಂದ ರದ್ದಾಗಿರುವ ಮೊದಲ ಪಂದ್ಯವಾಗಿದೆ. ಹೀಗಾಗಿ ಎರಡೂ ತಂಡಗಳಿಗೆ ತಲಾ ಒಂದು ಅಂಕವನ್ನು ಹಂಚಲಾಯಿತು. ಈ ಫಲಿತಾಂಶದಿಂದಾಗಿ ಜಿಟಿ ತಂಡದ ಪ್ಲೇಆಫ್​ ಅವಕಾಶ ಅಂತ್ಯವಾಯಿತು. ಇದೇ ವೇಳೆ ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ಅಗ್ರ 2 ರಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಪಂದ್ಯವು ಟಾಸ್​ ಸೇರಿದಂತೆ ಒಂದೇ ಒಂದು ಎಸೆತ ಕಾಣದೇ ರದ್ದಾಯಿತು. ಸ್ಟೇಡಿಯಮ್​ನಲ್ಲಿ ಸೇರಿದ್ದ 45,000 ಅಭಿಮಾನಿಗಳು ಪಂದ್ಯ ಆರಂಭವಾಗುವ ನಿರೀಕ್ಷೆಯಿಂದ ಸ್ಥಳದಿಂದ ಕದಲಲಿಲ್ಲ. ರಾತ್ರಿ 10:56 ಕ್ಕೆ 5 ಓವರ್​ಗಳ ಪಂದ್ಯದ ಕಟ್ ಆಫ್ ಸಮಯವಾಗಿತ್ತು. ಮೈದಾನದ ಸಿಬ್ಬಂದಿ ಎಲ್ಲ ಪ್ರಯತ್ನಗಳನ್ನು ಮಾಡಿದ ಹೊರತಾಗಿಯೂ ಆಡಿಲು ಯಾವುದೇ ಅವಕಾಶ ದೊರೆಯಲಿಲ್ಲ. ರಾತ್ರಿ 10:40 ರ ಸುಮಾರಿಗೆ ಅಧಿಕಾರಿಗಳು ಪಂದ್ಯವನ್ನು ರದ್ದುಗೊಳಿಸಿದರು.

ಎಂಐ ಮತ್ತು ಪಿಬಿಕೆಎಸ್ ನಂತರ ಟೈಟಾನ್ಸ್ ಸ್ಪರ್ಧೆಯಿಂದ ಹೊರಗುಳಿದ ಮೂರನೇ ತಂಡವಾಗಿದೆ. ಏತನ್ಮಧ್ಯೆ, ನೈಟ್ಸ್ 13 ಪಂದ್ಯಗಳಲ್ಲಿ 9 ರಲ್ಲಿ ಗೆಲುವು ಸಾಧಿಸಿ 19 ಅಂಕಗಳೊಂದಿಗೆ +1.428 ನೆಟ್ ರನ್ ರೇಟ್​ನೊಂದಿಗೆ ಅಗ್ರಸ್ಥಾನ ಉಳಿಸಿಕೊಂಡಿದೆ. 2012 ಮತ್ತು 2014ರಲ್ಲಿ ಕೆಕೆಆರ್ ಅಗ್ರ 2ರಲ್ಲಿ ಸ್ಥಾನ ಪಡೆದಿತ್ತು. ಗುವಾಹಟಿಯ ಬರ್ಸಪಾರಾ ಕ್ರೀಡಾಂಗಣದಲ್ಲಿ ಮೇ 19 ರ ಭಾನುವಾರ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ರಾಯಲ್ಸ್ ತಂಡವನ್ನು ಸೋಲಿಸಿದರೆ ಈ ಬಾರಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವಿದೆ. ಗೌತಮ್ ಗಂಭೀರ್ ಕೆಕೆಆರ್​​ಗೆ ಮರಳಿದ ಕಾರಣ ತಂಡಕ್ಕೆ ಭಾರೀ ಅನುಕೂಲಗಳು ಆಗಿವೆ.

ಗುಜರಾತ್​ಗೆ ನಿರಾಶಾದಾಯಕ ಅಭಿಯಾನ

ಗುಜರಾತ್​ ಟೈಟಾನ್ಸ್ ಪ್ಲೇಆಫ್​ನಲ್ಲಿ ಸ್ಥಾನ ಪಡೆಯುವ ರೇಸ್​​ನಿಂದ ಹೊರಗುಳಿದಿದೆ. ಹಾರ್ದಿಕ್ ಪಾಂಡ್ಯ ನಿರ್ಗಮನ ಮತ್ತು ಮೊಹಮ್ಮದ್ ಶಮಿ ಗಾಯಗೊಂಡ ನಂತರ ಜಿಟಿಗೆ ಉತ್ತಮ ಅನುಕೂಲಗಳು ಸಿಗಲಿಲ್ಲ. ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಮುಂಚಿತವಾಗಿ ಮುಂದಿನ ಸುತ್ತಿಗೆ ಪ್ರವೇಶಿಸುವ ಅವಕಾಶ ಆ ತಂಡಕ್ಕೆ ಇತ್ತು. ಆದರೆ, ಮಳೆ ಅವರ ಭರವಸೆಗಳನ್ನು ಭಗ್ನಗೊಳಿಸಿತು.

ಇದನ್ನೂ ಓದಿ: IPL 2024: ಮಾಲೀಕನ ಜತೆ ಜಗಳ, ತಂಡದ ಬಸ್​ ಬಿಟ್ಟು ಸ್ವಂತ ಖರ್ಚಲ್ಲಿ ಪ್ರಯಾಣ

ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೇ 16 ರಂದು ನಡೆಯಲಿರುವ ಪಂದ್ಯದಲ್ಲಿ ಶುಭ್ಮನ್ ಗಿಲ್ ಪಡೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. 2022ರಲ್ಲಿ, ಜಿಟಿ ತಮ್ಮ ಮೊದಲ ಪ್ರವೇಶದಲ್ಲಿ ಪ್ರಶಸ್ತಿ ಗೆದ್ದಿತ್ತು. 2023ರಲ್ಲಿ ಸಿಎಸ್​ಕೆ ತಂಡವನ್ನು ಮಣಿಸುವಲ್ಲಿ ವಿಫಲವಾದ ಬಳಿಕ ರನ್ನರ್ ಅಪ್ ಸ್ಥಾನ ಪಡೆದಿತ್ತು. ಆದರೆ ಈ ಋತುವಿನಲ್ಲಿ ಗಿಲ್ ಒತ್ತಡದ ನಡುವೆ ನಾಯಕತ್ವ ಹಾಗೂ ಬ್ಯಾಟಿಂಗ್​ನಲ್ಲಿ ವೈಫಲ್ಯ ಕಂಡಿದ್ದರು.

Continue Reading

ಪ್ರಮುಖ ಸುದ್ದಿ

Dust Storm : ಧೂಳು ಗಾಳಿಗೆ ಹೋರ್ಡಿಂಗ್ ಕುಸಿದು ಮೂವರ ಸಾವು, 59 ಮಂದಿಗೆ ಗಾಯ

Dust Storm: ಭಯಾನಕ ಘಟನೆಯಲ್ಲಿ, ವಡಾಲಾದಲ್ಲಿ ಅಟ್ಟಣಿಗೆಯೊಂದು ಕುಸಿದಿದೆ. ಸಂಜೆ 4:22 ಕ್ಕೆ, ಶ್ರೀ ಜಿ ಟವರ್ ಬಳಿಯ ಬರ್ಕತ್ ಅಲಿ ನಾಕಾದಲ್ಲಿ ಘಟನೆ ನಡೆದಿದೆ. ಹಲವಾರು ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದು, ಒಬ್ಬರು ಕಾರಿನೊಳಗೆ ಸಿಲುಕಿಕೊಂಡಿದ್ದಾರೆ. ಮುಂಬೈ ಅಗ್ನಿಶಾಮಕ ದಳ ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

VISTARANEWS.COM


on

Dust Storm
Koo

ಮುಂಬೈ: ಇಲ್ಲಿನ ಘಾಟ್​ಕೋಪರ್​ನಲ್ಲಿ ಧೂಳು ಬಿರುಗಾಳಿ ಮತ್ತು ಭಾರಿ ಮಳೆಯಿಂದಾಗಿ ಜಾಹೀರಾತು ಫಲಕ ಕುಸಿದು ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು 59 ಜನರು ಗಾಯಗೊಂಡಿದ್ದಾರೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ (ಎನ್​​ಡಿಆರ್​) ಒಂದು ತಂಡ ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ನಡೆಸುತ್ತಿದೆ. ಧೂಳು ಗಾಳಿಗೆ ಅನೇಕ ಕಡೆ ಅನಾಹುತಗಳು ಸಂಭವಿಸಿವೆ.

ಭಯಾನಕ ಘಟನೆಯಲ್ಲಿ, ವಡಾಲಾದಲ್ಲಿ ಅಟ್ಟಣಿಗೆಯೊಂದು ಕುಸಿದಿದೆ. ಸಂಜೆ 4:22 ಕ್ಕೆ, ಶ್ರೀ ಜಿ ಟವರ್ ಬಳಿಯ ಬರ್ಕತ್ ಅಲಿ ನಾಕಾದಲ್ಲಿ ಘಟನೆ ನಡೆದಿದೆ. ಹಲವಾರು ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದು, ಒಬ್ಬರು ಕಾರಿನೊಳಗೆ ಸಿಲುಕಿಕೊಂಡಿದ್ದಾರೆ. ಮುಂಬೈ ಅಗ್ನಿಶಾಮಕ ದಳ ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

ಭಾರತೀಯ ಹವಾಮಾನ ಇಲಾಖೆ (IMD) ಈ ಹಿಂದೆ ಮೇ 13 ರಂದು ನಗರದ ಕೆಲವು ಭಾಗಗಳಿಗೆ ಯೆಲ್ಲೊ ಅಲರ್ಟ್​ (Yellow Alret) ಎಚ್ಚರಿಕೆ ನೀಡಿತ್ತು. ವಿಶೇಷವಾಗಿ ಥಾಣೆ ಮತ್ತು ರಾಯಗಡ್ ಜಿಲ್ಲೆಗಳಲ್ಲಿ ಭಾರಿ ಮಳೆ, ಗುಡುಗು ಮತ್ತು ಶುಷ್ಕ, ವೇಗದ ಗಾಳಿಯ ಎಚ್ಚರಿಕೆ ನೀಡಿತ್ತು.

2024 ರ ಮೇ 16 ರಿಂದ ವಾಯುವ್ಯ ಭಾರತದಲ್ಲಿ ಹೊಸ ಶಾಖದ ಅಲೆ ಪ್ರಾರಂಭವಾಗುವ ಸಾಧ್ಯತೆಯಿದೆ. 2. 2024 ರ ಮೇ 17 ರವರೆಗೆ ದಕ್ಷಿಣ ಪರ್ಯಾಯ ದ್ವೀಪ ಭಾರತದಲ್ಲಿ ಗುಡುಗು, ಮಿಂಚು ಮತ್ತು ಗಾಳಿಯೊಂದಿಗೆ ಪ್ರತ್ಯೇಕ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಎಕ್ಸ್ ನಲ್ಲಿ ಪೋಸ್ಟ್​ನಲ್ಲಿ ತಿಳಿಸಿತ್ತು.

ಇದನ್ನೂ ಓದಿ: Metro Penalty: ಮೆಟ್ರೊ ಸ್ಟೇಷನ್‌ನಲ್ಲಿ ಗರ್ಲ್‌ ಫ್ರೆಂಡ್‌ಗೆ ಕಾಯುತ್ತ ಕೂತರೆ ಬೀಳುತ್ತೆ 50 ರೂ. ದಂಡ!

ಹೋರ್ಡಿಂಗ್ ಬಿದ್ದ ಕಾರಣ ಪೂಜಾ ಜಂಕ್ಷನ್ (ವಡಾಲಾ) ನಾರ್ತ್ ಬೌಂಡ್ ಮತ್ತು ಫ್ರೀವೇ ಟನಲ್ ಟ್ರಾಂಬೆ ಸೌತ್ ನಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಮುಂಬೈ ಸಂಚಾರ ಪೊಲೀಸರು ತಿಳಿಸಿದ್ದಾರೆ. ಏತನ್ಮಧ್ಯೆ, ಮುಂಬೈ ಮೆಟ್ರೋದ ಸಂಚಾರಕ್ಕೂ ಸಮಸ್ಯೆಯಾಗಿದೆ. ಭಾರೀ ಗಾಳಿಯಿಂದಾಗಿ, ಏರ್ಪೋರ್ಟ್ ರಸ್ತೆ ಮೆಟ್ರೋ ನಿಲ್ದಾಣದ ಬಳಿಯ ಒಹೆಚ್ಇಯಲ್ಲಿ ಬಟ್ಟೆ ಸಿಲುಕಿಕೊಂಡಿತು/ ಇದರ ಪರಿಣಾಮವಾಗಿ ಮೆಟ್ರೋ ಸೇವೆಗೆ ಅಡ್ಡಿಯಾಯಿತು. ರೈಲುಗಳು ಈಗ ನಿಗದಿತ ಸಮಯಕ್ಕೆ ತಲುಪಲಿಲ್ಲ ಎಂದು ಹೇಳಿದ್ದರು.

Continue Reading

ಬೆಂಗಳೂರು

Metro Penalty: ಮೆಟ್ರೊ ಸ್ಟೇಷನ್‌ನಲ್ಲಿ ಗರ್ಲ್‌ ಫ್ರೆಂಡ್‌ಗೆ ಕಾಯುತ್ತ ಕೂತರೆ ಬೀಳುತ್ತೆ 50 ರೂ. ದಂಡ!

Metro Penalty: ಭಾರೀ ಮಳೆಯ ಸಮಯದಲ್ಲಿ ವಿಜಯನಗರದ ಮೆಟ್ರೋ ನಿಲ್ದಾಣದಲ್ಲಿ ಐದು ನಿಮಿಷ ಹೆಚ್ಚು ನಿಂತ ಅರುಣ್ ಜುಗಲ್ ಅವರಿಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಅಧಿಕಾರಿಗಳು 50 ರೂ. ದಂಡ (Penalty For Passenger) ವಿಧಿಸಿದ್ದಾರೆ. ಏನಿದು ನಿಯಮ? ಈ ವರದಿ ಓದಿ.

VISTARANEWS.COM


on

By

Metro Penalty
Koo

ಬೆಂಗಳೂರು: ಭಾರಿ ಮಳೆಯ ಕಾರಣದಿಂದ (Metro Penalty) ಮೆಟ್ರೋ ನಿಲ್ದಾಣದಲ್ಲಿ (Metro station) 20 ನಿಮಿಷಕ್ಕಿಂತ ಹೆಚ್ಚು ಕಾಲ ನಿಂತು ಮೊಬೈಲ್ ಚಾರ್ಜ್ ಮಾಡಿದ ವ್ಯಕ್ತಿಯೊಬ್ಬರಿಗೆ 50 ರೂ. ದಂಡ (Penalty For Passenger) ವಿಧಿಸಿದ್ದು ಗೊತ್ತಲ್ಲವೆ? ಬೆಂಗಳೂರಿನ (bengaluru) ವಿಜಯನಗರ (vijayanagar) ಮೆಟ್ರೊ ನಿಲ್ದಾಣದಲ್ಲಿ ಈ ವಿದ್ಯಮಾನ ಸಂಭವಿಸಿತ್ತು. ಇದರ ಸಂದೇಶ ಏನೆಂದರೆ, ನಾವು ಯಾವುದೇ ಮೆಟ್ರೊ ನಿಲ್ದಾಣದಲ್ಲಿ 20 ನಿಮಿಷಕ್ಕಿಂತ ಹೆಚ್ಚು ಹೊತ್ತು ಕಾಲ ಕಳೆದರೆ 50 ರೂ. ದಂಡ ತೆರಬೇಕಾಗುತ್ತದೆ. ಮೆಟ್ರೊ ನಿಲ್ದಾಣದಲ್ಲಿ ಯಾರಾದರು ತಮ್ಮ ಗರ್ಲ್‌ ಫ್ರೆಂಡ್‌ ಅಥವಾ ಬಾಯ್‌ ಫ್ರೆಂಡ್‌ಗಾಗಿ ಕಾಯುತ್ತ 20 ನಿಮಿಷಕ್ಕಿಂತ ಹೆಚ್ಚು ಸಮಯ ಕಳೆದರೆ ದಂಡ ಬಿದ್ದೇ ಬೀಳುತ್ತದೆ.

ಅರುಣ್ ಜುಗಲ್ ಬಂದಿ ಎಂಬವರು ಭಾರೀ ಮಳೆಯ ಸಮಯದಲ್ಲಿ ವಿಜಯನಗರದ ಮೆಟ್ರೋ ನಿಲ್ದಾಣದಲ್ಲಿ ಕುಳಿತು ತಮ್ಮ ಫೋನ್ ಅನ್ನು ಚಾರ್ಜ್ ಮಾಡಲು ನಿಂತಿದ್ದರು. ನಿಲ್ದಾಣದಲ್ಲಿ ಜನ ದಟ್ಟಣೆಯನ್ನು ತಡೆಗಟ್ಟುವ ಅಗತ್ಯವನ್ನು ಉಲ್ಲೇಖಿಸಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಅಧಿಕಾರಿಗಳು ದಂಡ ವಿಧಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರಿನ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಅನುಮತಿಸಿದ 20 ನಿಮಿಷಗಳ ಅವಧಿಯನ್ನು ಮೀರಿದ್ದಕ್ಕಾಗಿ ಜುಗಲ್ ಅವರಿಗೆ 50 ರೂ. ದಂಡವನ್ನು ವಿಧಿಸಲಾಯಿತು. ನಿಲ್ದಾಣದಿಂದ ನಿರ್ಗಮಿಸಿದ ಮೇಲೆ ಅವರ ಮೆಟ್ರೋ ಕಾರ್ಡ್‌ನಿಂದ ದಂಡವನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸಲಾಯಿತು.

5 ನಿಮಿಷ ಹೆಚ್ಚು ಕಳೆದಿದ್ದರು

ಅರುಣ್ ಜುಗಲ್ ಅವರು ಸಂದಿಗ್ಧತೆಗೆ ಸಿಲುಕಿದ್ದರು. ಏಕೆಂದರೆ ಹೊರಗೆ ಭಾರೀ ಮಳೆಯಿಂದಾಗಿ ನಿಲ್ದಾಣದಲ್ಲಿ ತಮ್ಮ ಫೋನ್ ಅನ್ನು ಚಾರ್ಜ್ ಮಾಡಲು ನಿರ್ಧರಿಸಿದರು. ಅವರ ಫೋನ್ ಬ್ಯಾಟರಿಯೂ ಖಾಲಿಯಾಗಿತ್ತು. ನಿರಂತರ ಮಳೆ ಒಂದು ಕಡೆಯಾದರೆ ಮೊಬೈಲ್ ನಲ್ಲಿ ಬ್ಯಾಟರಿ ಮುಗಿದಿದ್ದುದರಿಂದ ಚಾರ್ಜ್ ಮಾಡಲು ನಿರ್ಧರಿಸಿದ್ದರು. ಅಲ್ಲೇ ಉಳಿಯುವ ಹೊರತು ಅವರ ಬಳಿ ಬೇರೆ ದಾರಿಯಿರಲಿಲ್ಲ. ಆದರೆ, ಇದರಿಂದಾಗಿ ಅವರು ಒಟ್ಟು 25 ನಿಮಿಷ ಅಲ್ಲಿ ಕಾಲ ಕಳೆದಿದ್ದರು. ಹಾಗಾಗಿ ದಂಡ ತೆರಬೇಕಾಯಿತು.

ಮೆಟ್ರೊ ಕಾರ್ಡ್‌ನಿಂದ ಕಡಿತ

ಅಲ್ಲಿಂದ ನಿರ್ಗಮಿಸಿದ ಮೇಲೆ ಮೆಟ್ರೊ ಕಾರ್ಡ್‌ನಿಂದ 50 ರೂ. ಹೆಚ್ಚುವರಿ ಕಡಿತವಾಗಿರುವುದನ್ನು ಕಂಡು ಜುಗಲ್ ಅವರಿಗೆ ಅಚ್ಚರಿಯಾಗಿದೆ. ಶುಲ್ಕದ ಬಗ್ಗೆ ಅವರು ವಿಚಾರಿಸಿದಾಗ, ಮೆಟ್ರೋ ಸಿಬ್ಬಂದಿ ಬಿಎಂಆರ್‌ಸಿಎಲ್‌ನ ನಿಲ್ದಾಣದ ಸಮಯ ಮಿತಿ ನಿಯಮವನ್ನು ಉಲ್ಲಂಘಿಸಿದ ಅವರ ವಿಸ್ತೃತ ವಾಸ್ತವ್ಯದ ಕಾರಣ ಎಂದು ಅವರಿಗೆ ತಿಳಿಸಿದರು.

ಇದನ್ನೂ ಓದಿ: Karnataka Politics: ಆಪರೇಶನ್ ಕಮಲ ಆಗೋಕೆ ಸಾಧ್ಯಾನೇ ಇಲ್ಲ; ಇದು ಬಿಜೆಪಿಯ ಹಗಲುಗನಸು: ಸಿಎಂ ಸಿದ್ದರಾಮಯ್ಯ

ದಟ್ಟಣೆಯನ್ನು ತಡೆಗಟ್ಟಲು ಮತ್ತು ಪ್ರಯಾಣಿಕರ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಿರುವ ಈ ನಿಯಮವು ವ್ಯಕ್ತಿಗಳು 20 ನಿಮಿಷಗಳ ಅನಂತರ ನಿಲ್ದಾಣದ ಒಳಗೆ ಇರಬಾರದು ಎಂದು ಷರತ್ತು ವಿಧಿಸುತ್ತದೆ.
ದಂಡ ವಿಧಿಸಿರುವುದನ್ನು ಬಿಎಂಆರ್ ಸಿಎಲ್ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದು, ಈ ನಿಯಮ ಮೊದಲಿನಿಂದಲೂ ಜಾರಿಯಲ್ಲಿದ್ದು, ಮೆಟ್ರೊ ವ್ಯವಸ್ಥೆಯಲ್ಲಿ ಸುವ್ಯವಸ್ಥೆ ಹಾಗೂ ದಕ್ಷತೆ ಕಾಪಾಡುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಎಲ್ಲಾ ಪ್ರಯಾಣಿಕರು ಹೆಚ್ಚು ತಂಗಿದರೆ ಅದು ಜನದಟ್ಟಣೆ ಮತ್ತು ಇತರರಿಗೆ ಅನಾನುಕೂಲತೆಗೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Continue Reading
Advertisement
HD Revanna Bail
ಪ್ರಮುಖ ಸುದ್ದಿ5 mins ago

HD Revanna Bail: ನಿನ್ನೆ ಜಾಮೀನು ಸಿಕ್ಕರೂ ಇಂದು ಸಂಜೆಯವರೆಗೆ ರೇವಣ್ಣ ಜೈಲಿನಲ್ಲಿರಬೇಕು!

Kalki 2898 AD
ಸಿನಿಮಾ6 mins ago

Kalki 2898 AD: ʼಕಲ್ಕಿʼ ಚಿತ್ರಕ್ಕಾಗಿ ಕನ್ನಡದಲ್ಲಿ ಡಬ್‌ ಮಾಡಲಿದ್ದಾರೆ ದೀಪಿಕಾ ಪಡುಕೋಣೆ

mumbai hoarding collapse
ಪ್ರಮುಖ ಸುದ್ದಿ41 mins ago

Hoarding Collapse: ಹೋರ್ಡಿಂಗ್‌ ಕುಸಿತದಲ್ಲಿ ಸತ್ತವರ ಸಂಖ್ಯೆ 14ಕ್ಕೆ ಏರಿಕೆ, ಇನ್ನಷ್ಟು ಜನ ಅದರಡಿಯಲ್ಲಿ

Vertigo Problem
ಆರೋಗ್ಯ1 hour ago

Vertigo Problem: ನಿಮಗೆ ಇದ್ದಕ್ಕಿದ್ದಂತೆ ತಲೆ ಸುತ್ತುತ್ತಿದೆಯೆ? ಈ ವಿಷಯ ತಿಳಿದುಕೊಂಡಿರಿ

king dasharatha dhavala dharini
ಅಂಕಣ1 hour ago

ಧವಳ ಧಾರಿಣಿ ಅಂಕಣ: ಆತುರಗೆಟ್ಟು ಸ್ತಿಮಿತ ಕಳೆದುಕೊಂಡವನ ವಿಲಾಪ

karnataka weather Forecast
ಮಳೆ2 hours ago

Karnataka weather: ವ್ಯಾಪಕ ಮಳೆಯೊಂದಿಗೆ 60 ಕಿ.ಮೀ ವೇಗದಲ್ಲಿ ಅಪ್ಪಿಳಿಸಲಿದೆ ಗಾಳಿ; 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Food Tips Kannada
ಆಹಾರ/ಅಡುಗೆ2 hours ago

Food Tips Kannada: ಸಸ್ಯಾಹಾರಿಗಳಿಗೆ ಒಮೇಗಾ 3 ಕೊಬ್ಬಿನಾಮ್ಲ ಯಾವುದರಲ್ಲಿ ದೊರೆಯುತ್ತದೆ?

Narendra Modi
ದೇಶ3 hours ago

Narendra Modi: ಇಂದು ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಕೆ ಜತೆಗೆ ಮೋದಿ ಕಾರ್ಯಕ್ರಮ ಏನೇನು?

Dina Bhavishya
ಭವಿಷ್ಯ3 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

IPL 2024
ಪ್ರಮುಖ ಸುದ್ದಿ8 hours ago

IPL 2024 : ಆರ್​ಸಿಬಿ, ಆರ್​ಆರ್​ಗೆ ಆಘಾತ; ಐಪಿಎಲ್ ಬೇಡ ಎಂದು ಹೊರಟ ಹಲವು ಆಟಗಾರರು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ3 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ13 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ13 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ14 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ14 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ15 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ21 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ1 day ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ1 day ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ2 days ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

ಟ್ರೆಂಡಿಂಗ್‌