Maharaja Trophy: ನಾಳೆಯಿಂದ ಮಹಾರಾಜ ಟ್ರೋಫಿ ಆರಂಭ; ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ - Vistara News

ಕ್ರೀಡೆ

Maharaja Trophy: ನಾಳೆಯಿಂದ ಮಹಾರಾಜ ಟ್ರೋಫಿ ಆರಂಭ; ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

Maharaja Trophy: ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಪಾಲ್ಗೊಳ್ಳಲಿವೆ. ಇವುಗಳೆಂದರೆ, ಹುಬ್ಬಳ್ಳಿ ಟೈಗರ್ಸ್, ಮೈಸೂರು ವಾರಿಯರ್ಸ್, ಗುಲ್ಬರ್ಗ ಮಿಸ್ಟಿಕ್ಸ್, ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರ್ಯಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್.

VISTARANEWS.COM


on

Maharaja Trophy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಹುನಿರೀಕ್ಷಿತ ಮೂರನೇ ಆವೃತ್ತಿಯ ಮಹಾರಾಜ ಟ್ರೋಫಿ(Maharaja Trophy) ಕ್ರಿಕೆಟ್ ಟೂರ್ನಿ ನಾಳೆ(ಆಗಸ್ಟ್​ 15, ಗುರುವಾರ)ಯಿಂದ ಆರಂಭವಾಗಲಿದೆ. ಟೂರ್ನಿ ಸೆಪ್ಟೆಂಬರ್​ 1ರ ತನಕ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಗುಲ್ಬರ್ಗ ಮಿಸ್ಟಿಕ್ಸ್ ಮುಖಾಮುಖಿಯಾಗಲಿವೆ. ಈ ಬಾರಿ ರಾಜ್ಯದ ವಿವಿಧೆಡೆ ಮಳೆ ಭೀತಿ ಇರುವುದರಿಂದ ಎಲ್ಲ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಬ್‌ ಏರ್‌ ಸಿಸ್ಟಮ್‌ ಇರುವ ಕಾರಣ ಮಳೆ ಬಂದರೂ 7 ನಿಮಿಷಗಳಲ್ಲಿ ಕ್ರೀಡಾಂಗಣ ಪಂದ್ಯಕ್ಕೆ ಸಿದ್ಧವಾಗಿರುತ್ತದೆ.

ತಂಡಗಳು

ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಪಾಲ್ಗೊಳ್ಳಲಿವೆ. ಇವುಗಳೆಂದರೆ, ಹುಬ್ಬಳ್ಳಿ ಟೈಗರ್ಸ್, ಮೈಸೂರು ವಾರಿಯರ್ಸ್, ಗುಲ್ಬರ್ಗ ಮಿಸ್ಟಿಕ್ಸ್, ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರ್ಯಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್.

ವೇಳಾಪಟ್ಟಿ

ಗುರುವಾರ, ಆಗಸ್ಟ್ 15, 2024 : ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್, ಮಧ್ಯಾಹ್ನ 3:00

ಶುಕ್ರವಾರ, ಆಗಸ್ಟ್ 16, 2024 : ಶಿವಮೊಗ್ಗ ಲಯನ್ಸ್ vs ಮೈಸೂರು ವಾರಿಯರ್ಸ್, ಸಂಜೆ 7:00

ಶುಕ್ರವಾರ, ಆಗಸ್ಟ್ 16, 2024 : ಮಂಗಳೂರು ಡ್ರ್ಯಾಗನ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00

ಶುಕ್ರವಾರ, ಆಗಸ್ಟ್ 16, 2024 : ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್, ಸಂಜೆ 7:00

ಶನಿವಾರ, ಆಗಸ್ಟ್ 17, 2024 : ಶಿವಮೊಗ್ಗ ಲಯನ್ಸ್ vs ಮಂಗಳೂರು ಡ್ರಾಗನ್ಸ್, ಮಧ್ಯಾಹ್ನ 3:00

ಶನಿವಾರ, ಆಗಸ್ಟ್ 17, 2024 : ಗುಲ್ಬರ್ಗ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್, ಸಂಜೆ 7:00

ಭಾನುವಾರ, ಆಗಸ್ಟ್ 18, 2024 : ಗುಲ್ಬರ್ಗಾ ಮಿಸ್ಟಿಕ್ಸ್ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 3:00

ಭಾನುವಾರ, ಆಗಸ್ಟ್ 18, 2024 : ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಲಯನ್ಸ್, ಸಂಜೆ 7:00

ಸೋಮವಾರ, ಆಗಸ್ಟ್ 19, 2024 : ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00

ಸೋಮವಾರ, ಆಗಸ್ಟ್ 19, 2024 : ಮೈಸೂರು ವಾರಿಯರ್ಸ್ vs ಮಂಗಳೂರು ಡ್ರಾಗನ್ಸ್, ಸಂಜೆ 7:00

ಮಂಗಳವಾರ, ಆಗಸ್ಟ್ 20, 2024 : ಶಿವಮೊಗ್ಗ ಲಯನ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00

ಇದನ್ನೂ ಓದಿ Maharaja Trophy 2024: ಮಹಾರಾಜ ಟಿ20 ಕ್ರಿಕೆಟ್​ ಟೂರ್ನಿ ಆರಂಭಕ್ಕೆ ಒಂದು ದಿನ ಬಾಕಿ; ತಂಡಗಳ ವಿವರ ಹೀಗಿದೆ

ಮಂಗಳವಾರ, ಆಗಸ್ಟ್ 20, 2024 : ಗುಲ್ಬರ್ಗಾ ಮಿಸ್ಟಿಕ್ಸ್ vs ಮಂಗಳೂರು ಡ್ರಾಗನ್ಸ್, ಸಂಜೆ 7:00

ಬುಧವಾರ, ಆಗಸ್ಟ್ 21, 2024 : ಗುಲ್ಬರ್ಗಾ ಮಿಸ್ಟಿಕ್ಸ್ vs ಶಿವಮೊಗ್ಗ ಲಯನ್ಸ್, 3:00

ಬುಧವಾರ, ಆಗಸ್ಟ್ 21, 2024 : ಮೈಸೂರು ವಾರಿಯರ್ಸ್ vs ಹುಬ್ಬಳ್ಳಿ ಟೈಗರ್ಸ್, ಸಂಜೆ 7:00

ಗುರುವಾರ, ಆಗಸ್ಟ್ 22, 2024 : ಮೈಸೂರು ವಾರಿಯರ್ಸ್ vs ಶಿವಮೊಗ್ಗ ಲಯನ್ಸ್, ಮಧ್ಯಾಹ್ನ 3:00

ಗುರುವಾರ, ಆಗಸ್ಟ್ 22, 2024 : ಬೆಂಗಳೂರು ಬ್ಲಾಸ್ಟರ್ಸ್ vs ಮಂಗಳೂರು ಡ್ರಾಗನ್ಸ್, ಸಂಜೆ 7:00

ಶುಕ್ರವಾರ, ಆಗಸ್ಟ್ 23, 2024 : ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00

ಶುಕ್ರವಾರ, ಆಗಸ್ಟ್ 23, 2024 : ಮಂಗಳೂರು ಡ್ರಾಗನ್ಸ್ vs ಗುಲ್ಬರ್ಗ ಮಿಸ್ಟಿಕ್ಸ್, ಸಂಜೆ 7:00

ಶನಿವಾರ, ಆಗಸ್ಟ್ 24, 2024 : ಗುಲ್ಬರ್ಗ ಮಿಸ್ಟಿಕ್ಸ್ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 3:00

ಶನಿವಾರ, ಆಗಸ್ಟ್ 24, 2024 : ಶಿವಮೊಗ್ಗ ಲಯನ್ಸ್ vs ಹುಬ್ಬಳ್ಳಿ ಟೈಗರ್ಸ್, ಸಂಜೆ 7:00

ಭಾನುವಾರ, ಆಗಸ್ಟ್ 25, 2024 : ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 3:00

ಭಾನುವಾರ, ಆಗಸ್ಟ್ 25, 2024 : ಮಂಗಳೂರು ಡ್ರಾಗನ್ಸ್ vs ಶಿವಮೊಗ್ಗ ಲಯನ್ಸ್, ಸಂಜೆ 7:00

ಸೋಮವಾರ, ಆಗಸ್ಟ್ 26, 2024 : ಮಂಗಳೂರು ಡ್ರಾಗನ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00

ಸೋಮವಾರ, ಆಗಸ್ಟ್ 26, 2024 : ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್, ಸಂಜೆ 7:00

ಮಂಗಳವಾರ, ಆಗಸ್ಟ್ 27, 2024 : ಗುಲ್ಬರ್ಗ ಮಿಸ್ಟಿಕ್ಸ್ vs ಶಿವಮೊಗ್ಗ ಲಯನ್ಸ್, 3:00

ಮಂಗಳವಾರ, ಆಗಸ್ಟ್ 27, 2024 : ಹುಬ್ಬಳ್ಳಿ ಟೈಗರ್ಸ್ vs ಮೈಸೂರು ವಾರಿಯರ್ಸ್, ಸಂಜೆ 7:00

ಬುಧವಾರ, ಆಗಸ್ಟ್ 28, 2024 : ಮಂಗಳೂರು ಡ್ರಾಗನ್ಸ್​ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 3:00

ಬುಧವಾರ, ಆಗಸ್ಟ್ 28, 2024 : ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಲಯನ್ಸ್, ಸಂಜೆ 7:00

ಗುರುವಾರ, ಆಗಸ್ಟ್ 29, 2024 : ಬೆಂಗಳೂರು ಬ್ಲಾಸ್ಟರ್ಸ್ vs ಮಂಗಳೂರು ಡ್ರಾಗನ್ಸ್, ಮಧ್ಯಾಹ್ನ 3:00

ಗುರುವಾರ, ಆಗಸ್ಟ್ 29, 2024 : ಗುಲ್ಬರ್ಗ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್, ಸಂಜೆ 7:00

ಶುಕ್ರವಾರ, ಆಗಸ್ಟ್ 30, 2024 : ಸೆಮಿಫೈನಲ್ 1 (1 vs 4), ಸಂಜೆ 7:00

ಶನಿವಾರ, ಆಗಸ್ಟ್ 31, 2024 : ಸೆಮಿಫೈನಲ್ 2 (2 vs 3), ಸಂಜೆ 7:00

ಭಾನುವಾರ, ಸೆಪ್ಟೆಂಬರ್ 1, 2024 : ಫೈನಲ್, ಸಂಜೆ 7:00

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Manu Bhaker: ಭಾರೀ ಏರಿಕೆ ಕಂಡ ಮನು ಭಾಕರ್ ಬ್ರ್ಯಾಂಡ್​ ಮೌಲ್ಯ

Manu Bhaker: ಪ್ರಮುಖವಾಗಿ ತಂಪು ಪಾನೀಯ, ಸ್ಕಿನ್​ ಕೇರ್​, ನ್ಯೂಟ್ರೀಷಿಯನ್​ ಕಂಪನಿಗಳು ಮನು ಅವರನ್ನು ಸಂಪರ್ಕಿಸಿವೆ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದೆ 40 ಕಂಪನಿಗಳು(40 brands chasing Manu Bhaker) ಮನು ಅವರನ್ನು ಸಂಪರ್ಕಿಸಿದ್ದವು ಎಂದು ವರದಿಯಾಗಿತ್ತು

VISTARANEWS.COM


on

Manu Bhaker
Koo

ನವದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್​ನ(Paris Olympics) ಶೂಟಿಂಗ್​ ವಿಭಾಗದಲ್ಲಿ ಅವಳಿ ಕಂಚಿನ ಪದಕ ಗೆದ್ದ ಮನು ಭಾಕರ್(Manu Bhaker)​ ಅವರ ಜಾಹೀರಾತು ಮೌಲ್ಯದಲ್ಲಿ ಇದೀಗ ಭಾರೀ ಏರಿಕೆ ಕಂಡಿದೆ. ಮನು ಅವರ ಬ್ರ್ಯಾಂಡ್​ ಮೌಲ್ಯ ಈಗ 1.5 ರೂ. ಆಗಿದೆ. ಅವರು ಪ್ರತಿ ಡಿಜಿಟಲ್​ ಜಾಹೀರಾತಿಗೂ 30 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ.

ಪ್ರಮುಖವಾಗಿ ತಂಪು ಪಾನೀಯ, ಸ್ಕಿನ್​ ಕೇರ್​, ನ್ಯೂಟ್ರೀಷಿಯನ್​ ಕಂಪನಿಗಳು ಮನು ಅವರನ್ನು ಸಂಪರ್ಕಿಸಿವೆ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದೆ 40 ಕಂಪನಿಗಳು(40 brands chasing Manu Bhaker) ಮನು ಅವರನ್ನು ಸಂಪರ್ಕಿಸಿದ್ದವು ಎಂದು ವರದಿಯಾಗಿತ್ತು. ಭಾರತ ತಂಡದ ಸ್ಟಾರ್​ ಕ್ರಿಕೆಟಿಗರು ಜಾಹೀರಾತು ಒಪ್ಪಂದಗಳಿಗೆ ವಾರ್ಷಿಕ 3 ರಿಂದ 6 ಕೋಟಿ ರೂ. ಪಡೆಯುತ್ತಾರೆ. ಬ್ಯಾಡ್ಮಿಂಟನ್​ ಆಟಗಾರ್ತಿ ಪಿ,ವಿ ಸಿಂಧು 2022ರಲ್ಲಿ 2.21 ಕೋಟಿ ರೂ. ಮೊತ್ತದ ಒಪ್ಪಂದ ಪಡೆದಿದ್ದೇ ಭಾರತದಲ್ಲಿ ಕ್ರಿಕೆಟಿಗರ ಹೊರತಾಗಿ ಇತರ ಕ್ರೀಡಾಪಟುಗಳು ಪಡೆದ ಇದುವರೆಗಿನ ಗರಿಷ್ಠ ಮೊತ್ತವಾಗಿದೆ. ಒಲಿಂಪಿಕ್ಸ್​ ಪದಕ ಗೆಲ್ಲುವ ಮೊದಲು ಮನು ಪ್ರತಿ ಒಪ್ಪಂದವನ್ನು 20-25 ಲಕ್ಷ ರೂ.ಗೆ ಮಾಡಿಕೊಳ್ಳುತ್ತಿದ್ದರು. ಸದ್ಯ ಮನು ಪಾಮ್ಯಾಕ್ಸ್​ ಆಕ್ಟಿವ್​ವೇರ್​ಗೆ ಮಾತ್ರ ಪ್ರಚಾರ ರಾಯಭಾರಿಯಾಗಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಮನು ಭಾಕರ್​ ಅವರು 12 ಕಂಪನಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದರು. ಪದಕ ಸಾಧನೆಯ ಬಳಿಕ ತನ್ನ ಚಿತ್ರಗಳನ್ನು ಬಳಸಿ, ತನಗೆ ಅಭಿನಂದನೆ ಸಲ್ಲಿಸುವ ಜಾಹೀರಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅನಧಿಕೃತವಾಗಿ ಪ್ರಕಟಿಸಿದ್ದು ಇದಕ್ಕೆ ಕಾರಣ. ಬ್ರ್ಯಾಂಡ್​​ಗಳು ತನಗೆ ಪ್ರಾಯೋಜಕತ್ವ ನೀಡಿರದಿದ್ದರೂ ಮತ್ತು ತನ್ನನ್ನು ಪ್ರಚಾರ ರಾಯಭಾರಿಯಾಗಿ ನೇಮಿಸಿಕೊಳ್ಳದಿದ್ದರೂ, ಇದೀಗ ತನ್ನ ಯಶಸ್ಸಿನಲ್ಲಿ ಪಾಲು ಪಡೆಯಲು ಮುಂದಾಗುವ ಮೂಲಕ ಉಚಿತ ಮಾರ್ಕೆಟಿಂಗ್​ ಮಾಡಿವೆ ಎಂದು ಮನು ಅವರ ವ್ಯವಹಾರಗಳನ್ನು ನೋಡಿಕೊಳ್ಳುವ ತಂಡ ಆರೋಪಿಸಿ ಕಾನೂನು ನೋಟಿಸ್​ ಕಳುಹಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ವ್ಯಕ್ತಿಯೊಬ್ಬರಿಗೆ ಪ್ರಾಯೋಜಕತ್ವ ಒಪ್ಪಂದ ನೀಡದೆ ಅವರ ಚಿತ್ರಗಳ ಹಕ್ಕು ಪಡೆದುಕೊಳ್ಳುವಂತಿಲ್ಲ. ಇದು ಭಾರತದಲ್ಲಿ ಕಾನೂನುಬಾಹಿರ ಎನಿಸಿದೆ.

ಇದನ್ನೂ ಓದಿ Manu Bhaker : ಶೂಟಿಂಗ್​​ನಿಂದ ಬ್ರೇಕ್ ತೆಗೆದುಕೊಂಡ ಮನು ಭಾಕರ್​​, ಡೆಲ್ಲಿಯಲ್ಲಿ ನಡೆಯುವ ವಿಶ್ವಕಪ್​ಗೆ ಅಲಭ್ಯ

ಭಾಕರ್ (Manu Bhaker) ಮೂರು ತಿಂಗಳ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಹೀಗಾಗಿ ಅಕ್ಟೋಬರ್​ನಲ್ಲಿ ನಡೆಯಲಿರುವ ಶೂಟಿಂಗ್​ ವಿಶ್ವಕಪ್​ನಿಂದ ಹೊರಕ್ಕೆ ಉಳಿಯಲಿದ್ದಾರೆ ಎಂದು ಅವರ ಕೋಚ್ ಜಸ್ಪಾಲ್ ರಾಣಾ ಮಾಹಿತಿ ನೀಡಿದ್ದಾರೆ. ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ 22 ವರ್ಷದ ಭಾಕರ್ ಅವರು ಎರಡು ಪದಕ ಗೆದ್ದು ಇತಿಹಾಸ ಬರೆದಿದ್ದರು.

ಮಂಗಳವಾರ ಮುಂಜಾನೆ ಪ್ಯಾರಿಸ್​ನಿಂದ ಹಿಂದಿರುಗಿದ ಮನು ಭಾಕರ್​ ಕ್ರೀಡೆಯಿಂದ ಮೂರು ತಿಂಗಳ ವಿರಾಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಅವರು ಮೂರು ತಿಂಗಳ ವಿರಾಮ ತೆಗೆದುಕೊಳ್ಳುತ್ತಿರುವುದರಿಂದ ಅಕ್ಟೋಬರ್​ನಲ್ಲಿ ಡೆಯಲಿರುವ ಶೂಟಿಂಗ್ ವಿಶ್ವಕಪ್​​ನಲ್ಲಿ ಭಾಗವಹಿಸುತ್ತಾರೆಯೇ ಎಂದು ನನಗೆ ಖಚಿತವಿಲ್ಲ. ಇದು ಸಾಮಾನ್ಯ ವಿರಾಮ. ಬಹಳ ಸಮಯದಿಂದ ಅವರು ತರಬೇತಿ ಪಡೆಯುತ್ತಿದ್ದಾರೆ.” ರಾಣಾ ತಿಳಿಸಿದ್ದಾರೆ. ಅಕ್ಟೋಬರ್ 13 ರಿಂದ 18 ರವರೆಗೆ ನವದೆಹಲಿಯಲ್ಲಿ ಶೂಟಿಂಗ್ ವಿಶ್ವ ಕಪ್​ ಆಯೋಜನೆಗೊಂಡಿದೆ.

Continue Reading

ಕ್ರೀಡೆ

Duleep Trophy 2024: ದುಲೀಪ್ ಟ್ರೋಫಿ ವೇಳಾಪಟ್ಟಿ ಪ್ರಕಟ; ಕೊಹ್ಲಿ, ರೋಹಿತ್​ ಭಾಗವಹಿಸುವ ನಿರೀಕ್ಷೆ

Duleep Trophy 2024: ಈ ವರ್ಷ ದುಲೀಪ್ ಟ್ರೋಫಿಯನ್ನು ಯಾವುದೇ ನಾಕೌಟ್ ಪಂದ್ಯಗಳಿಲ್ಲದೆ ರೌಂಡ್-ರಾಬಿನ್ ಮಾದರಿಯ ಪಂದ್ಯಾವಳಿಯನ್ನು ನಡೆಸಲಾಗುತ್ತದೆ. ಇಂಡಿಯಾ ‘ಎ’, ಇಂಡಿಯಾ ‘ಬಿ’, ಇಂಡಿಯಾ ‘ಸಿ’ ಹಾಗೂ ಇಂಡಿಯಾ ‘ಡಿ’ ತಂಡಗಳೊಂದಿಗೆ ಆಡಲಾಗುತ್ತದೆ.

VISTARANEWS.COM


on

Duleep Trophy
Koo

ಮುಂಬಯಿ: ಈ ಬಾರಿಯ ದುಲೀಪ್​ ಟ್ರೋಫಿ(Duleep Trophy 2024) ಪಂದ್ಯಾವಳಿ ಅತ್ಯಂತ ವಿಶೇಷವಾಗಿರಲಿದೆ. ಹೌದು, ಟೀಮ್​ ಇಂಡಿಯಾದ ಹಿರಿಯ ಆಟಗಾರರಾದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ, ಕೆ.ಎಲ್​ ರಾಹುಲ್​, ರವೀಂದ್ರ ಜಡೇಜಾ ಸೇರಿ ಹಲವು ಆಟಗಾರರು ಈ ಬಾರಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ. ಸೆಪ್ಟೆಂಬರ್ 5ರಿಂದ 22ರ ತನಕ ಟೂರ್ನಿ ನಡೆಯಲಿದೆ.

ಏನಿದು ದುಲೀಪ್​ ಟ್ರೋಫಿ


ದುಲೀಪ್ ಟ್ರೋಫಿಯು ಭಾರತದಲ್ಲಿ ಆಡಲಾಗುವ ದೇಶೀಯ ಟೆಸ್ಟ್ ಕ್ರಿಕೆಟ್ ಟೂರ್ನಿಯಾಗಿದೆ. ಈ ಟೂರ್ನಿಗೆ ಮಾಜಿ ಆಟಗಾರ ದುಲೀಪ್‌ಸಿನ್‌ಜಿ ಅವರ ಹೆಸರನ್ನು ಇಡಲಾಗಿದೆ. 1961-62 ರಲ್ಲಿ ಮೊದಲ ಬಾರಿಗೆ ಈ ಟೂರ್ನಿಯನ್ನು ಆರಂಭಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಭಾರತದ ವಿವಿಧ ಭೌಗೋಳಿಕ ವಲಯಗಳನ್ನು ಪ್ರತಿನಿಧಿಸುವ ತಂಡಗಳು ಕಣಕ್ಕಿಳಿಯುತ್ತವೆ.

ರೌಂಡ್-ರಾಬಿನ್ ಮಾದರಿ


ಈ ವರ್ಷ ದುಲೀಪ್ ಟ್ರೋಫಿಯನ್ನು ಯಾವುದೇ ನಾಕೌಟ್ ಪಂದ್ಯಗಳಿಲ್ಲದೆ ರೌಂಡ್-ರಾಬಿನ್ ಮಾದರಿಯ ಪಂದ್ಯಾವಳಿಯನ್ನು ನಡೆಸಲಾಗುತ್ತದೆ. ಇಂಡಿಯಾ ‘ಎ’, ಇಂಡಿಯಾ ‘ಬಿ’, ಇಂಡಿಯಾ ‘ಸಿ’ ಹಾಗೂ ಇಂಡಿಯಾ ‘ಡಿ’ ತಂಡಗಳೊಂದಿಗೆ ಆಡಲಾಗುತ್ತದೆ. ಅಜಿತ್ ಅಗರ್ಕರ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಯು ತಂಡಗಳನ್ನು ಆಯ್ಕೆ ಮಾಡುತ್ತದೆ.

ಇದನ್ನೂ ಓದಿ Duleep Trophy: 14 ವರ್ಷಗಳ ಬಳಿಕ ದುಲೀಪ್‌ ಟ್ರೋಫಿ ಆಡಲಿದ್ದಾರೆ ವಿರಾಟ್​ ಕೊಹ್ಲಿ?

ಅಂತಾರಾಷ್ಟ್ರೀಯ ಕ್ರಿಕೆಟ್​ ಆಟಗಾರರು ವಿರಾಮದ ವೇಳೆ ದೇಶೀಯ ಕ್ರಿಕೆಟ್​ನಲ್ಲಿ ಆಡಬೇಕೆಂಬುದು ಬಿಸಿಸಿಐ ನಿಲುವಾಗಿದ್ದು, ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಸ್ಥಿರ ಫಾರ್ಮ್​ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲ ಆಟಗಾರರಿಗೂ ದೇಶೀಯ ಟೂರ್ನಿಯಲ್ಲಿ ಪೂರ್ತಿ ಸರಣಿ ಆಡದೇ ಹೋದರೂ ಕೆಲವು ಪಂದ್ಯಗಳಲ್ಲಾದರೂ ಆಡಬೇಕು ಎಂದು ಬಿಸಿಸಿಐ ಸೂಚನೆ ನೀಡಿತ್ತು. ಹೀಗಾಗಿ ಈ ಬಾರಿ ಸೀನಿಯರ್ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಟೆಸ್ಟ್‌ ತಂಡದ ಸಂಭಾವ್ಯ ಆಟಗಾರರಾದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ, ಶುಭಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌, ಕೆ.ಎಲ್‌. ರಾಹುಲ್‌, ರಿಷಭ್‌ ಪಂತ್‌, ರವೀಂದ್ರ ಜಡೇಜ, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌ ಮೊದಲಾದವರೆಲ್ಲ ದುಲೀಪ್‌ ಟ್ರೋಫಿಯ ಕೆಲವು ಪಂದ್ಯಗಳಲ್ಲಿ ಆಡಲಿದ್ದಾರೆ ಎಂದು ತಿಳಿದು ಬಂದಿದೆ. ಜಸ್‌ಪ್ರೀತ್‌ ಬುಮ್ರಾ, ಹಿರಿಯ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿ‌ನ್‌, ಗಾಯಾಳಾಗಿರುವ ವೇಗಿ ಮೊಹಮ್ಮದ್‌ ಶಮಿ ಅವರಿಗೆ ಬಿಸಿಸಿಐ ರಿಯಾಯಿತಿ ನೀಡಿದೆ ಎನ್ನಲಾಗಿದೆ.

ದುಲೀಪ್ ಟ್ರೋಫಿ ವೇಳಾಪಟ್ಟಿ


ಸೆಪ್ಟೆಂಬರ್​ 5-8: ಇಂಡಿಯಾ ಎ-ಇಂಡಿಯಾ ಬಿ-ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಮ್, ಅನಂತಪುರ(ಸ್ಥಳ ಬದಲಾಗುವ ಸಾಧ್ಯತೆ ಇದೆ)

ಸೆಪ್ಟೆಂಬರ್ 5-8: ಇಂಡಿಯಾ ಸಿ- ಇಂಡಿಯಾ ಡಿ-ಅನಂತಪುರದ ಎಸಿಎ ಎಡಿಸಿಎ ಗ್ರೌಂಡ್(ಸ್ಥಳ ಬದಲಾಗುವ ಸಾಧ್ಯತೆ ಇದೆ)

ಸೆಪ್ಟೆಂಬರ್ 12-15: ಇಂಡಿಯಾ ಎ- ಇಂಡಿಯಾ ಡಿ- ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಮ್, ಅನಂತಪುರ

ಸೆಪ್ಟೆಂಬರ್ 12-15: ಇಂಡಿಯಾ ಬಿ- ಇಂಡಿಯಾ ಸಿ-ಎಸಿಎ ಎಡಿಸಿಎ ಗ್ರೌಂಡ್, ಅನಂತಪುರ

ಸೆಪ್ಟೆಂಬರ್ 19-22: ಇಂಡಿಯಾ ಎ-ಇಂಡಿಯಾ ಸಿ- ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಮ್, ಅನಂತಪುರ

ಸೆಪ್ಟೆಂಬರ್ 19-22: ಇಂಡಿಯಾ ಬಿ-ಇಂಡಿಯಾ ಡಿ- ಎಸಿಎ ಎಡಿಸಿಎ ಗ್ರೌಂಡ್, ಅನಂತಪುರ

Continue Reading

ಪ್ರಮುಖ ಸುದ್ದಿ

Ashwini Ponnappa : ಷಟ್ಲರ್​ಗಳನ್ನೇ ಗುರಿಯಾಗಿಸಿದ ಕ್ರೀಡಾ ಇಲಾಖೆ ವಿರುದ್ಧವೇ ತಿರುಗಿ ಬಿದ್ದ ಅಶ್ವಿನಿ ಪೊನ್ನಪ್ಪ

Ashwini Ponnappa : ನನಗೆ ಸಂಪೂರ್ಣ ಅಚ್ಚರಿಯಾಗಿದೆ. ಹಣ ಪಡೆಯದೇ ಇರಲು ನನಗೆ ಮನಸ್ಸಿಲ್ಲ. ಆದರೆ ನನಗೆ ಹಣ ಸಿಕ್ಕಿದೆ ಎಂದು ರಾಷ್ಟ್ರಕ್ಕೆ ಹೇಳುವುದು ಹಾಸ್ಯಾಸ್ಪದ. ನಾನು ಅದನ್ನು ಸ್ವೀಕರಿಸಿಲ್ಲ. ನೀವು ರಾಷ್ಟ್ರೀಯ ಶಿಬಿರದ ಬಗ್ಗೆ ಮಾತನಾಡುವುದಾದರೆ, ಆ 1.5 ಕೋಟಿ ರೂ.ಗಳನ್ನು ಎಲ್ಲಾ ಶಿಬಿರಾರ್ಥಿಗಳಿಗೆ ಖರ್ಚು ಮಾಡಲಾಗಿದೆ ” ಎಂದು ಅಶ್ವಿನಿ ಹೇಳಿದ್ದಾರೆ.

VISTARANEWS.COM


on

Ashwini Ponnappa
Koo

ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್ ಗೆ ತಯಾರಿ ನಡೆಸಲು ಕ್ರೀಡಾ ಸಚಿವಾಲಯದಿಂದ ಯಾವುದೇ ವೈಯಕ್ತಿಕ ಆರ್ಥಿಕ ನೆರವು ದೊರೆತಿಲ್ಲ ಮತ್ತು ಕ್ರೀಡಾಕೂಟಕ್ಕೆ ಮುಂಚಿತವಾಗಿ ವೈಯಕ್ತಿಕ ತರಬೇತುದಾರನ್ನು ಒದಗಿಸುವ ಕೋರಿಕೆಯನ್ನು ಸಹ ತಿರಸ್ಕರಿಸಲಾಗಿದೆ ಎಂದು ಭಾರತದ ಡಬಲ್ಸ್ ಬ್ಯಾಡ್ಮಿಂಟನ್ ಸ್ಪೆಷಲಿಸ್ಟ್ ಅಶ್ವಿನಿ ಪೊನ್ನಪ್ಪ ಮಂಗಳವಾರ ಹೇಳಿಕೆ ಕೊಟ್ಟಿದ್ದಾರೆ. ಪ್ಯಾರಿಸ್​ಗೆ ತೆರಳುವ ಭಾರತೀಯ ಕ್ರೀಡಾಪಟುಗಳಿಗೆ ನೀಡಲಾಗುವ ಆರ್ಥಿಕ ಬೆಂಬಲವನ್ನು ವಿವರಿಸುವ ದಾಖಲೆಯನ್ನು ಭಾರತೀಯ ಕ್ರೀಡಾ ಪ್ರಾಧಿಕಾರ ಬಿಡುಗಡೆ ಮಾಡಿದ ಬಳಿಕ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ತಮಗೆ ಟಾಪ್ಸ್​ ಅಡಿಯಲ್ಲಿ 4,50,000 ರೂಪಾಯಿ ಮತ್ತು ತರಬೇತಿ ಮತ್ತು ಸ್ಪರ್ಧೆಯ ವಾರ್ಷಿಕ ಕ್ಯಾಲೆಂಡರ್ (ಎಸಿಟಿಸಿ) ಅಡಿಯಲ್ಲಿ 1,48,04,080 ರೂ.ಗಳನ್ನು ಒದಗಿಸಲಾಗಿದೆ ಎಂಬ ವರದಿಯನ್ನೂ ಅವರು ನಿರಾಕರಿಸಿದ್ದಾರೆ.

ನನಗೆ ಸಂಪೂರ್ಣ ಅಚ್ಚರಿಯಾಗಿದೆ. ಹಣ ಪಡೆಯದೇ ಇರಲು ನನಗೆ ಮನಸ್ಸಿಲ್ಲ. ಆದರೆ ನನಗೆ ಹಣ ಸಿಕ್ಕಿದೆ ಎಂದು ರಾಷ್ಟ್ರಕ್ಕೆ ಹೇಳುವುದು ಹಾಸ್ಯಾಸ್ಪದ. ನಾನು ಅದನ್ನು ಸ್ವೀಕರಿಸಿಲ್ಲ. ನೀವು ರಾಷ್ಟ್ರೀಯ ಶಿಬಿರದ ಬಗ್ಗೆ ಮಾತನಾಡುವುದಾದರೆ, ಆ 1.5 ಕೋಟಿ ರೂ.ಗಳನ್ನು ಎಲ್ಲಾ ಶಿಬಿರಾರ್ಥಿಗಳಿಗೆ ಖರ್ಚು ಮಾಡಲಾಗಿದೆ ” ಎಂದು ಅಶ್ವಿನಿ ಹೇಳಿದ್ದಾರೆ.

“ನನಗೆ ವೈಯುಕ್ತಿಕ ಕೋಚ್ ಇಲ್ಲ. ನನ್ನ ವೈಯಕ್ತಿಕ ತರಬೇತುದಾರನ ಬಗ್ಗೆ ಹೇಳುವುದಾದರೆ, ನಾನು ಅವರಿಗೆ ನನ್ನದೇ ದುಡ್ಡನ್ನು ನೀಡುತ್ತಿದ್ದೇನೆ. ನಾನು ಯಾರಿಂದಲೂ ಹಣ ತೆಗೆದುಕೊಳ್ಳುತ್ತಿಲ್ಲ. ನಾನು ನವೆಂಬರ್ (2023) ವರೆಗೆ ನನ್ನ ಸ್ವಂತವಾಗಿ ಆಡಿದ್ದೇನೆ. ಅರ್ಹತೆ ಪಡೆದ ನಂತರವೇ ನನ್ನನ್ನು ಟಾಪ್ಸ್ ನ ಭಾಗವಾಗಿ ಸೇರಿಸಲಾಯಿತು…” ಎಂದು ಮಾಹಿತಿ ನೀಡಿದ್ದಾರೆ.

34ರ ಹರೆಯದ ಅಶ್ವಿನಿ 2010, 2014 ಮತ್ತು 2018ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದರು. ಜ್ವಾಲಾ ಗುಟ್ಟಾ ಅವರೊಂದಿಗೆ ಲಂಡನ್ ಮತ್ತು ರಿಯೋ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿದ್ದಾರೆ.

1.48 ಕೋಟಿ ರೂ.ಗಳ ವೆಚ್ಚವನ್ನು ವಿವರಿಸಿದ ಸಾಯ್ ಮೂಲವು, “ಪ್ಯಾರಿಸ್ ಒಲಿಂಪಿಕ್ಸ್ ಋತುವಿನಲ್ಲಿ ಭಾರತೀಯ ತಂಡದ ಭಾಗವಾಗಿ ಅವರು ಭಾಗವಹಿಸಿದ ಎಲ್ಲಾ ಸ್ಪರ್ಧೆಗಳಲ್ಲಿ ಪ್ರಯಾಣ, ವಾಸ್ತವ್ಯ, ಆಹಾರ, ಸ್ಪರ್ಧೆ ಶುಲ್ಕ, ಡಿಎಗಾಗಿ 1.48 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಹಣವನ್ನು ಎಸಿಟಿಸಿಯ ಭಾಗವಾಗಿ ಬಿಎಐಗೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Cricket News : ಬಾಂಗ್ಲಾದೇಶ ವಿರುದ್ಧದ ಸರಣಿಯ ವೇಳಾಪಟ್ಟಿ ಬದಲಾಯಿಸಿದ ಬಿಸಿಸಿಐ

ಆಗಸ್ಟ್ 2022 ರವರೆಗೆ ಎನ್ ಸಿಕ್ಕಿ ರೆಡ್ಡಿ ಅವರೊಂದಿಗೆ ಜೋಡಿಯಾಗಿದ್ದ ಅಶ್ವಿನಿ, ಅದೇ ವರ್ಷದ ಡಿಸೆಂಬರ್​ನಲ್ಲಿ ತನಿಶಾ ಕ್ರಾಸ್ಟೊ ಅವರೊಂದಿಗೆ ಸೇರಿಕೊಂಡರು. ಜನವರಿ 2023 ರಿಂದ ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಆಡಲು ಪ್ರಾರಂಭಿಸಿದರು. ಉತ್ತಮ ಪ್ರದರ್ಶನಗಳ ಹಿನ್ನಲೆಯಲ್ಲಿ ಅವರ ಪ್ಯಾರಿಸ್ ಸ್ಥಾನ ಭದ್ರವಾಯಿತು. ಅವರಿಬ್ಬರನ್ನು ಈ ವರ್ಷದ ಮೇ ತಿಂಗಳಲ್ಲಿ ಟಾಪ್ಸ್ ಯೋಜನೆಯಲ್ಲಿ ಸೇರಿಸಲಾಯಿತು.

ಸಚಿವಾಲಯವು ಯಾವಾಗಲೂ ನನ್ನನ್ನು ಬೆಂಬಲಿಸಿದೆ. ನಾನು ವರ್ಷಗಳಿಂದ ತಂಡದ ಭಾಗವಾಗಿದ್ದೇನೆ ಮತ್ತು ನನಗೆ ದೊರೆತ ಬೆಂಬಲಕ್ಕೆ ನಾನು ಕೃತಜ್ಞನಾಗಿದ್ದೇನೆ” ಎಂದು ಅಶ್ವಿನಿ ಹೇಳಿದರು. “ಕಳೆದ ವರ್ಷ ನನಗೆ ಬೆಂಬಲ ಸಿಗಲಿಲ್ಲ. ಆದರೆ ನನಗೆ 1.5 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ, ಅದು ನಾಲ್ಕು ವರ್ಷಗಳಿಗಿಂತ ಹಳೆಯದು. ಸಿಕ್ಕಿ ರೆಡ್ಡು ಜತೆ ಪಾಲುದಾರನಾಗಿದ್ದಾಗ ನಾನು ಟಾಪ್ಸ್ ವ್ಯಾಪ್ತಿಯಲ್ಲಿದ್ದೆ ಎಂದು ಅವರು ಹೇಳಿದ್ದಾರೆ.

ತನ್ನ ಮೂರನೇ ಒಲಿಂಪಿಕ್ಸ್ ಆಡುತ್ತಿರುವ ಅಶ್ವಿನಿ ಮತ್ತು ಅವರ ಜತೆಗಾರ್ತಿ ತನಿಶಾ ಪ್ಯಾರಿಸ್​​ನಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗದ ಕಾರಣ ಗುಂಪು ಹಂತದಿಂದ ನಿರ್ಗಮಿಸಿದ್ದರು. “ನಾನು ಉತ್ತಮವಾಗಿ ಆಡಿಲ್ಲ, ಕೋಚ್ ಇಲ್ಲದಿದ್ದರೂ, ಅದರ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ಆದರೆ ನನಗೆ ಈ ಮೊತ್ತವೂ ಸಿಗದಿದ್ದಾಗ ನಾನು ಈ ಮೊತ್ತವನ್ನು ಪಡೆದಿದ್ದೇನೆ ಎಂದು ನೀವು ಹೇಳಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

Cricket News : ಬಾಂಗ್ಲಾದೇಶ ವಿರುದ್ಧದ ಸರಣಿಯ ವೇಳಾಪಟ್ಟಿ ಬದಲಾಯಿಸಿದ ಬಿಸಿಸಿಐ

Cricket News : ಗ್ವಾಲಿಯರ್​ನ ನಗರದ ಹೊಸ ಕ್ರೀಡಾಂಗಣವಾದ ಶ್ರೀಮಂತ್ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಅಂತರರಾಷ್ಟ್ರೀಯ ಪಂದ್ಯ ನಡೆಯಲಿದೆ. 2010 ರಲ್ಲಿ ಐತಿಹಾಸಿಕ ಭಾರತ-ದಕ್ಷಿಣ ಆಫ್ರಿಕಾ ಏಕದಿನ ಪಂದ್ಯದ ನಂತರ ಗ್ವಾಲಿಯರ್​ನಲ್ಲಿ ನಡೆಯುತ್ತಿರುವ ಮೊದಲ ಅಂತರರಾಷ್ಟ್ರೀಯ ಪಂದ್ಯ ಇದಾಗಿದೆ. ಅಲ್ಲಿ ದಂತಕಥೆ ಸಚಿನ್ ತೆಂಡೂಲ್ಕರ್ 50 ಓವರ್​​​ಗಳ ಕ್ರಿಕೆಟ್​​ ಮಾದರಿಯಲ್ಲಿ ದ್ವಿಶತಕ ಬಾರಿಸಿದ ಮೊದಲ ಪುರುಷ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

VISTARANEWS.COM


on

Cricket News
Koo

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಂಗಳವಾರ (ಆಗಸ್ಟ್ 13ರಂದು) ಭಾರತ ಪುರುಷರ ಕ್ರಿಕೆಟ್ ತಂಡದ ಮುಂಬರುವ ತವರು ಋತುವಿನ ನವೀಕರಿಸಿದ ವೇಳಾಪಟ್ಟಿಯನ್ನು ಪ್ರಕಟಿಸಿದೆ (Cricket News). ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟಿ 20 ಐ ಸರಣಿಯ ಆರಂಭಿಕ ಪಂದ್ಯವು 2024 ರ ಅಕ್ಟೋಬರ್ 6 ರಂದು ಧರ್ಮಶಾಲಾದಲ್ಲಿ ನಡೆಯಬೇಕಿತ್ತು. ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಡ್ರೆಸ್ಸಿಂಗ್ ಕೊಠಡಿಗಳಲ್ಲಿ ನವೀಕರಣ ಕಾಮಗಾರಿ ನಡೆಯುತ್ತಿರುವ ಕಾರಣ ಅದನ್ನು ಗ್ವಾಲಿಯರ್​ಗೆ ವರ್ಗಾಯಿಸಲಾಗಿದೆ.

ಗ್ವಾಲಿಯರ್​ನ ನಗರದ ಹೊಸ ಕ್ರೀಡಾಂಗಣವಾದ ಶ್ರೀಮಂತ್ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಅಂತರರಾಷ್ಟ್ರೀಯ ಪಂದ್ಯ ನಡೆಯಲಿದೆ. 2010 ರಲ್ಲಿ ಐತಿಹಾಸಿಕ ಭಾರತ-ದಕ್ಷಿಣ ಆಫ್ರಿಕಾ ಏಕದಿನ ಪಂದ್ಯದ ನಂತರ ಗ್ವಾಲಿಯರ್​ನಲ್ಲಿ ನಡೆಯುತ್ತಿರುವ ಮೊದಲ ಅಂತರರಾಷ್ಟ್ರೀಯ ಪಂದ್ಯ ಇದಾಗಿದೆ. ಅಲ್ಲಿ ದಂತಕಥೆ ಸಚಿನ್ ತೆಂಡೂಲ್ಕರ್ 50 ಓವರ್​​​ಗಳ ಕ್ರಿಕೆಟ್​​ ಮಾದರಿಯಲ್ಲಿ ದ್ವಿಶತಕ ಬಾರಿಸಿದ ಮೊದಲ ಪುರುಷ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಇಂಗ್ಲೆಂಡ್ ವಿರುದ್ಧದ ಮೊದಲ ಮತ್ತು ಎರಡನೇ ಟಿ 20 ಪಂದ್ಯಗಳ ಸ್ಥಳಗಳನ್ನು ಬದಲಾಯಿಸುವುದಾಗಿ ಮಂಡಳಿ ಘೋಷಿಸಿತು. ಮೊದಲ ಟಿ20 ಪಂದ್ಯಕ್ಕೆ ಆತಿಥ್ಯ ವಹಿಸಲು ನಿರ್ಧರಿಸಲಾಗಿದ್ದ ಚೆನ್ನೈ ಈಗ ಎರಡನೇ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಮತ್ತೊಂದೆಡೆ, ಎರಡನೇ ಟಿ 20 ಪಂದ್ಯದ ಬದಲು ಕೋಲ್ಕತಾ ಸರಣಿಯ ಆರಂಭಿಕ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.

ಇದನ್ನೂ ಓದಿ: Vinesh Phogat : ವಿನೇಶ್​ ಪೋಗಟ್​ ಅನರ್ಹತೆ ತೀರ್ಪು ಆಗಸ್ಟ್​​​ 16ಕ್ಕೆ ಮುಂದೂಡಿಕೆ

“ಮೊದಲ ಟಿ20 ಪಂದ್ಯ (ಜನವರಿ 22, 2025) ಮತ್ತು ಎರಡನೇ ಟಿ20 ಪಂದ್ಯ (ಜನವರಿ 25, 2025) ಅದೇ ಸ್ಥಳದಲ್ಲಿ ಮುಂದುವರಿಯುತ್ತದೆ ಗಣರಾಜ್ಯೋತ್ಸವದ ಹಿಂದಿನ ಬದ್ಧತೆಗಳು ಮತ್ತು ಬಾಧ್ಯತೆಗಳ ಬಗ್ಗೆ ಕೋಲ್ಕತಾ ಪೊಲೀಸರು ಬಂಗಾಳ ಕ್ರಿಕೆಟ್ ಸಂಸ್ಥೆಗೆ ಮನವಿ ಮಾಡಿದ ನಂತರ ಸ್ಥಳ ಬದಲಾವಣೆ ಅನಿವಾರ್ಯವಾಗಿದೆ” ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

ಪರಿಷ್ಕೃತ ವೇಳಾಪಟ್ಟಿ (ಬಾಂಗ್ಲಾದೇಶದ ಭಾರತ ಪ್ರವಾಸ 2024)

  • ಮೊದಲ ಟೆಸ್ಟ್: ಸೆಪ್ಟೆಂಬರ್ 19 ರಿಂದ ಸೆಪ್ಟೆಂಬರ್ 23, ಚೆನ್ನೈ
  • 2ನೇ ಟೆಸ್ಟ್: ಸೆಪ್ಟೆಂಬರ್ 27-ಅಕ್ಟೋಬರ್ 1, ಕಾನ್ಪುರ
  • ಮೊದಲ ಟಿ20: ಅಕ್ಟೋಬರ್ 6, ಗ್ವಾಲಿಯರ್
  • 2ನೇ ಟಿ20: ಅಕ್ಟೋಬರ್ 9, ದೆಹಲಿ
  • 3ನೇ ಟಿ20: ಅಕ್ಟೋಬರ್ 12, ಹೈದರಾಬಾದ್

ಪರಿಷ್ಕೃತ ವೇಳಾಪಟ್ಟಿ (ಇಂಗ್ಲೆಂಡ್ ತಂಡದ ಭಾರತ ಪ್ರವಾಸ 2025):

  • ಮೊದಲ ಟಿ20: ಜನವರಿ 22, ಕೋಲ್ಕತ್ತಾ
  • 2ನೇ ಟಿ20: ಜನವರಿ 25, ಚೆನ್ನೈ
  • 3ನೇ ಟಿ20: ಜನವರಿ 28, ರಾಜ್ಕೋಟ್
  • 4ನೇ ಟಿ20: ಜನವರಿ 31, ಪುಣೆ
  • 5ನೇ ಟಿ20: ಫೆಬ್ರವರಿ 2, ಮುಂಬೈ
  • ಮೊದಲ ಏಕದಿನ ಪಂದ್ಯ: ಫೆಬ್ರವರಿ 6, ನಾಗ್ಪುರ
  • 2ನೇ ಏಕದಿನ ಪಂದ್ಯ, ಫೆಬ್ರವರಿ 9, ಕಟಕ್
  • 3ನೇ ಏಕದಿನ ಪಂದ್ಯ, ಫೆಬ್ರವರಿ 12, ಅಹಮದಾಬಾದ್
Continue Reading
Advertisement
Bangladesh Unrest
ವಿದೇಶ5 mins ago

Bangladesh Unrest: ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂದೂಗಳ ಮೇಲಿನ ದೌರ್ಜನ್ಯ; ಮತ್ತೊಂದು ದೇಗುಲ, ಮನೆಗೆ ಬೆಂಕಿ

Viral Video
Latest10 mins ago

Viral Video: ಹಸ್ತಮೈಥುನ ಮಾಡಿಕೊಳ್ಳಲು 6 ವರ್ಷದ ಬಾಲಕಿ ಮೇಲೆ ದೌರ್ಜನ್ಯ; ಆಕೆ ತಪ್ಪಿಸಿಕೊಂಡಾಗ ಮೇಕೆ ಮೇಲೆ ಅತ್ಯಾಚಾರ!

Golden Star Ganesh krishnam pranaya sakhi Fans show House Full
ಸ್ಯಾಂಡಲ್ ವುಡ್21 mins ago

Golden Star Ganesh: ಗಣೇಶ್​​ಗೆ ಶುರುವಾಗಿದೆ ಗೋಲ್ಡನ್ ಟೈಮ್:  ಫ್ಯಾನ್ಸ್ ಶೋ ಹೌಸ್ ಫುಲ್!

Independence day 2024 Nanna Deshavu Kannada Video Song Vijay Prakash
ಸಿನಿಮಾ50 mins ago

Independence day 2024: ವಿಜಯ್ ಪ್ರಕಾಶ್‌ ಹೊಸ ಸಾಂಗ್‌ ಔಟ್‌; ಭಾರತೀಯ ಸೇನೆಗೆ ಹಾಡನ್ನು ಅರ್ಪಿಸಿದ ಹೊಸಬರ ತಂಡ!

Viral News
ವೈರಲ್ ನ್ಯೂಸ್51 mins ago

Viral News: ಯೋಧನ ಮೇಲೆ ಪೊಲೀಸರ ದೌರ್ಜನ್ಯ; ನಗ್ನಗೊಳಿಸಿ ಹಿಗ್ಗಾಮುಗ್ಗಾ ಥಳಿತ

Manu Bhaker
ಕ್ರೀಡೆ53 mins ago

Manu Bhaker: ಭಾರೀ ಏರಿಕೆ ಕಂಡ ಮನು ಭಾಕರ್ ಬ್ರ್ಯಾಂಡ್​ ಮೌಲ್ಯ

Duleep Trophy
ಕ್ರೀಡೆ2 hours ago

Duleep Trophy 2024: ದುಲೀಪ್ ಟ್ರೋಫಿ ವೇಳಾಪಟ್ಟಿ ಪ್ರಕಟ; ಕೊಹ್ಲಿ, ರೋಹಿತ್​ ಭಾಗವಹಿಸುವ ನಿರೀಕ್ಷೆ

viral video modi assault case
ವೈರಲ್ ನ್ಯೂಸ್2 hours ago

Viral Video: ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ

Kundapura Festival Kannada Habba On August 17 And 18 In Bengaluru Palace Ground
ಉಡುಪಿ2 hours ago

Kundapura Festival: ಬೆಂಗಳೂರಲ್ಲಿ 17, 18ರಂದು ʻಕುಂದಾಪ್ರ ಕನ್ನಡ ಹಬ್ಬʼ: ಇಲ್ಲಿದೆ ಕಾರ್ಯಕ್ರಮಗಳ ವಿವರ, ಹೋಯ್‌ ಬನಿಯೇ ಹಬ್ಬಕ್‌ ಹೋಪ!

Illicit Relationship
ಕ್ರೈಂ2 hours ago

ಅನೈತಿಕ ಸಂಬಂಧದ ಶಂಕೆಗೆ ಬಲಿಯಾಯ್ತು ಐವರ ಜೀವ; ಪತ್ನಿ, ತಾಯಿ, ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ6 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ6 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ6 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌