Malaysia Masters: ಸೆಮಿಫೈನಲ್​ಗೆ ಲಗ್ಗೆಯಿಟ್ಟ ಸಿಂಧು,ಪ್ರಣಯ್; ಶ್ರೀಕಾಂತ್​ಗೆ ಸೋಲು Vistara News
Connect with us

ಕ್ರೀಡೆ

Malaysia Masters: ಸೆಮಿಫೈನಲ್​ಗೆ ಲಗ್ಗೆಯಿಟ್ಟ ಸಿಂಧು,ಪ್ರಣಯ್; ಶ್ರೀಕಾಂತ್​ಗೆ ಸೋಲು

ಪಿ.ವಿ. ಸಿಂಧು ಮತ್ತು ಎಚ್‌.ಎಸ್‌. ಪ್ರಣಯ್‌ ಅವರು ಮಲೇ ಷ್ಯ ಮಾಸ್ಟರ್ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೆಮಿಫೈನಲ್​ ಪ್ರವೇಶಿಸಿದ್ದಾರೆ.

VISTARANEWS.COM


on

Malaysia Masters
Koo

ಕೌಲಾಲಂಪುರ: ಭಾರತದ ಸ್ಟಾರ್‌ ಶಟ್ಲರ್‌ಗಳಾದ ಪಿ.ವಿ. ಸಿಂಧು ಮತ್ತು ಎಚ್‌.ಎಸ್‌. ಪ್ರಣಯ್‌ ಅವರು ಇಲ್ಲಿ ನಡೆಯುತ್ತಿರುವ ಮಲೇಷ್ಯ ಮಾಸ್ಟರ್ ಸೂಪರ್‌ 500 ಬ್ಯಾಡ್ಮಿಂಟನ್‌(Malaysia Masters) ಕೂಟದಲ್ಲಿ ಅಧಿಕಾರಯುತ ಗೆಲುವು ದಾಖಲಿಸಿ ಸೆಮಿಫೈನಲ್​ ಪ್ರವೇಶಿಸಿದ್ದಾರೆ. ಆದರೆ ಕಿದಂಬಿ ಶ್ರೀಕಾಂತ್‌ ಸೋತು ನಿರಾಸೆ ಮೂಡಿಸಿದರು.

ಶುಕ್ರವಾರ ನಡೆದ ಕ್ವಾರ್ಟರ್​ ಫೈನಲ್​ ಪಂದ್ಯದ ಮಹಿಳಾ ಸಿಂಗಲ್ಸ್​ ವಿಭಾಗದಲ್ಲಿ ಅವಳಿ ಒಲಿಂಪಿಕ್ಸ್​ ಪದಕ ವಿಕೇತೆ ಪಿ.ವಿ ಸಿಂಧು ಅವರು ನೆರೆಯ ದೇಶವಾದ ಚೀನಾದ ಯಿ ಮ್ಯಾನ್‌ ಝಾಂಗ್‌ ಅವರನ್ನು 21-16, 13-21, 22-20 ಅಂತರದಿಂದ ಹಿಮ್ಮಟಿಸಿದರು. ಒಂದು ಗಂಟೆ 14 ನಿಮಿಷ ನಡೆದ ಈ ಜಿದ್ದಾಜಿದ್ದಿನ ಹೋರಾಟದಲ್ಲಿ ಆರನೇ ಶ್ರೇಯಾಂಕದ ಸಿಂಧು ತೀವ್ರ ಹೋರಾಟ ನಡೆಸಿ ಗೆಲುವು ಸಾಧಿಸಿದರು. ಆರಂಭಿಕ ಗೇಮ್​ ಗೆದ್ದು ಮುನ್ನಡೆ ಸಾಧಿಸಿದರೂ ದ್ವಿತೀಯ ಗೇಮ್​ನಲ್ಲಿ ತಿರುಗಿಬಿದ್ದ ಮ್ಯಾನ್‌ ಝಾಂಗ್‌ ಗೆಲುವು ದಾಖಲಿಸಿ ಪಂದ್ಯವನ್ನು ಸಮಬಲಕ್ಕೆ ತಂದರು. ಅಂತಿಮ ಹಾಗೂ ನಿರ್ಣಾಯಕ ಗೇಮ್​ನಲ್ಲಿ ತಪ್ಪುಗಳನ್ನು ತಿದ್ದಿಕೊಂಡು ಕೋರ್ಟ್​ಗಿಳಿದ ಸಿಂಧು ಬಲಿಷ್ಠ ಹೊಡೆತಗಳ ಮೂಲಕ ಎದುರಾಳಿಗೆ ಆಘಾತವಿಕ್ಕಿದರು.

ಗುರುವಾರ ನಡೆದಿದ್ದ ಫ್ರೀ ಕಾರ್ಟರ್​ ಫೈನಲ್​ನಲ್ಲಿ ಸಿಂಧು ಅವರು ಜಪಾನಿನ ಆಯಾ ಒಹೋರಿ ಅವರನ್ನು 21-16, 21-11 ಗೇಮ್‌ಗಳಿಂದ ಉರುಳಿಸಿದ್ದರು. ಈ ಮೂಲಕ ಒಹೋರಿ ವಿರುದ್ಧ ಸಿಂಧು 13ನೇ ಗೆಲುವು ದಾಖಲಿಸಿದ್ದರು. ಸದ್ಯ ಅವರ ಪ್ರದರ್ಶನವನ್ನು ಗಮನಿಸುವಾಗ ಟೂರ್ನಿಯಲ್ಲಿ ಪದಕ ಗೆಲ್ಲುವ ಭರವಸೆ ಮೂಡಿದೆ.

ಪುರುಷರ ಸಿಂಗಲ್ಸ್​ ವಿಭಾಗದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಭಾರತಕ್ಕೆ ಮಿಶ್ರ ಫಲಿತಾಂಶ ಕಂಡುಬಂದಿದೆ. ಎಚ್‌.ಎಸ್‌. ಪ್ರಣಯ್‌ ಅವರು ಗೆದ್ದು ಮುಂದಿನ ಹಂತಕ್ಕೆ ತೇರ್ಗಡೆಯಾದರೆ, ಕಿದಂಬಿ ಶ್ರೀಕಾಂತ್‌ ಅವರು ಸೋತು ಟೂರ್ನಿಯಿಂದ ಹೊರಬಿದ್ದರು.

ವಿಶ್ವದ 9ನೇ ರ್‍ಯಾಂಕಿನ ಪ್ರಣಯ್‌ ದ್ವಿತೀಯ ಗೇಮ್‌ನಲ್ಲಿ ಸೋತಿದ್ದರೂ ಅಮೋಘವಾಗಿ ಆಡಿ ಜಪಾನಿನ ಬಲಿಷ್ಠ ಆಟಗಾರ ಕೆಂಟ ನಿಶಿಮೊಟೊಗೆ ಆಘಾತವಿಕ್ಕಿದರು. ಮೂರು ಗೇಮ್​ಗಳ ಈ ಮ್ಯಾರಥಾನ್​ ಫೈಪೋಟಿಯಲ್ಲಿ ಭಾರತದ ಪ್ರಣಯ್‌ ಅಂತಿಮವಾಗಿ ಪ್ರಾಬಲ್ಯ ಮರೆದರು. ಗೆಲುವಿನ ಅಂತರದ 25-23,18-21,21-13. ಉಭಯ ಆಟಗಾರರ ಈ ಹೋರಾಟ 91 ನಿಮಿಷಗಳ ವರೆಗೆ ಸಾಗಿತ್ತು. ಶಿಮೊಟೊ ಅವರು 2022ರ ಜಪಾನ್‌ ಓಪನ್‌ ಮತ್ತು ಈ ವರ್ಷದ ಸ್ಪೇಯ್ನ ಮಾಸ್ಟರ್ ಕೂಟದ ಪ್ರಶಸ್ತಿ ಜಯಿಸಿದ ಸಾಧಕರಾಗಿದ್ದರು. ಕಳೆದ​ ಪಂದ್ಯದಲ್ಲಿ ಪ್ರಣಯ್‌ ಚೀನಾದ ಶಿ ಫೆಂಗ್‌ ಲಿ ಎದುರು 13-21, 21-16, 21-11 ಪ್ರಯಾಸದ ಗೆಲುವು ಕಂಡಿದ್ದರು.

ಇದನ್ನೂ ಓದಿ Malaysia Masters: ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಸಿಂಧು, ಶ್ರೀಕಾಂತ್‌, ಪ್ರಣಯ್​

ದಿನದ ಮತ್ತೊಂದು ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಕಿದಂಬಿ ಶ್ರೀಕಾಂತ್‌ ಅವರು ಇಂಡೋನೇಶ್ಯದ ಅರ್ಹತಾ ಆಟಗಾರ ಕ್ರಿಸ್ಟಿಯನ್‌ ಅದಿನಾಟ ವಿರುದ್ಧ 21-16, 16-21, 11-21 ಅಂತರದ ಆಘಾತಕಾರಿ ಸೋಲು ಕಂಡರು. ಮೊದಲ ಗೇಮ್​ನಲ್ಲಿ ಮುನ್ನಡೆ ಸಾಧಿಸಿದರೂ ಉಳಿದ ಎರಡು ಗೇಲ್​ಗಳಲ್ಲಿ ಅತ್ಯಂತ ನಿರಾಶದಾಯಕ ಆಟವಾಡುವ ಮೂಲಕ ಪರಾಭವಗೊಂಡರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ಕ್ರಿಕೆಟ್

WTC Final 2023 : ಶಮಿ ಎಸೆತಕ್ಕೆ ಮರ್ನಸ್​ ಲಾಬುಶೇನ್​ ಬೌಲ್ಡ್​ ಆದ ರೀತಿ ಹೀಗಿದೆ

ಶಮಿಯ ಎಸೆತವನ್ನು ಗುರುತಿಸಲು ಸಾಧ್ಯವಾಗದೇ ಮರ್ನಸ್​ ಲಾಬುಶೇನ್​ ಕ್ಲೀನ್​ ಬೌಲ್ಡ್ ಆದರು.

VISTARANEWS.COM


on

Marnus Labuschagne
Koo

ಲಂಡನ್​: ವಿಶ್ವ ಟೆಸ್ಟ್​ ಚಾಂಪಿಯನ್​​ಷಿಪ್​ನ ಫೈನಲ್​ ಪಂದ್ಯದಲ್ಲಿ (WTC Final 2023) ಆಸ್ಟ್ರೇಲಿಯಾ ತಂಡದ ಪಾರಮ್ಯ ಮುಂದುವರಿದಿದೆ. ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಆಸೀಸ್ ಬಳಗ ಟಿ ವಿರಾಮದ ವೇಳೆಗೆ ಮೂರು ವಿಕೆಟ್​ ಕಳೆದುಕೊಂಡು 171 ರನ್​ ಬಾರಿಸಿದೆ. ಭಾರತ ತಂಡ ಆರಂಭದಲ್ಲಿ ಮೂರು ವಿಕೆಟ್​ಗಳನ್ನು ಕಬಳಿಸಿದರೂ ಬಳಿಕ ಜತೆಯಾದ ಟ್ರಾವಿಸ್ ಹೆಡ್​ ಹಾಗೂ ಸ್ಟೀವ್​ ಸ್ಮಿತ್​ ಸ್ಥಿರ ಪ್ರದರ್ಶನ ನೀಡಿದರು. ಆದರೆ, ಭಾರತ ತಂಡಕ್ಕೆ ಮೂರನೇ ವಿಕೆಟ್​ ರೂಪದಲ್ಲಿ ದೊರಕಿದ ಮರ್ನಸ್​ ಲಾಬುಶೇನ್​ ವಿಕೆಟ್​ ಹೆಚ್ಚು ಆಕರ್ಷಕವಾಗಿತ್ತು. ಶಮಿ ಎಸೆತಕ್ಕೆ ಅವರು ಬೌಲ್ಡ್​ ಆದ ರೀತಿಯೂ ಕ್ರಿಕೆಟ್​ ಪ್ರೇಮಿಗಳ ಗಮನ ಸೆಳೆಯಿತು.

ಡಬ್ಲ್ಯುಟಿಸಿ ಫೈನಲ್​ ಪಂದ್ಯದ ಮೊದಲ ಸೆಷನ್​ನಲ್ಲಿ ಶಮಿ ತುಂಬಾ ಕಡಿಮೆ ಬೌಲಿಂಗ್ ಮಾಡಿದ್ದಕ್ಕಾಗಿ ಕ್ರಿಕೆಟ್​ ಅಭಿಮಾನಿಗಳಿಂದ ಹಾಗೂ ವೀಕ್ಷಕ ವಿವರಣೆಗಾರರಿಂದ ಟೀಕೆಗೆ ಒಳಗಾದರು. ಆದಾಗ್ಯೂ, ಭೋಜನ ವಿರಾಮದಿಂದ ಹಿಂದಿರುಗಿದ ಕೂಡಲೇ ಶಮಿ ಎಲ್ಲರಿಗೂ ಉತ್ತರ ಕೊಟ್ಟರು. ತಾವು ಭಾರತದ ಮೊದಲ ಆಯ್ಕೆಯ ವೇಗಿ ಎಂಬುದನ್ನು ಸಾಬೀತುಪಡಿಸಿದರು.

ಭೋಜನ ವಿರಾಮದ ನಂತರದ ಎರಡನೇ ಓವರ್​ನಲ್ಲಿ ಮತ್ತು ತಮ್ಮ ಎರಡನೇ ಸ್ಪೆಲ್​ನ ಮೊದಲ ಎಸೆತದಲ್ಲಿ ಮೊಹಮ್ಮದ್ ಶಮಿ ವಿಶ್ವದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್​ಮನ್​ ಲಾಬುಶೇನ್​ ಅವರನ್ನು ಬೌಲ್ಡ್ ಮಾಡಿ ಪೆವಿಲಿಯನ್​​ಗೆ ಕಳುಹಿಸಿದರು.

ಅದಕ್ಕಿಂತ ಮೊದಲು ದಿನದಾಟದ ಮೊದಲ ಅವಧಿಯ ಯಶಸ್ಸನ್ನು ಎರಡೂ ತಂಡಗಳು ಹಂಚಿಕೊಂಡವು, ಭಾರತವು ಆಸೀಸ್ ಆರಂಭಿಕರನ್ನು ಪೆವಿಲಿಯನ್​ಗೆ ಕಳುಹಿಸಿದರೆ ಆಸ್ಟ್ರೇಲಿಯಾ 73 ರನ್ ಗಳಿಸುವ ಮೂಲಕ ಪ್ರತ್ಯುತ್ತರ ನೀಡಿತು. ಡೇವಿಡ್ ವಾರ್ನರ್ ಅದ್ಭುತ ಪ್ರದರ್ಶನ ನೀಡಿ ಎಂಟು ಬೌಂಡರಿಗಳನ್ನು ಗಳಿಸಿದರು. ಆದರೆ 7 ರನ್​​ಗಳಿಂದ ಅರ್ಧ ಶತಕ ವಂಚಿತರಾದರು.

ವಾರ್ನರ್ ವಿಕೆಟ್ ಪಡೆಯುವ ಹಿಂದಿನ ದೊಡ್ಡ ಕಾರಣ ಕೆ.ಎಸ್.ಭರತ್ ಅವರ ಉತ್ತಮ ಕೀಪಿಂಗ್​​. ಇಶಾನ್ ಕಿಶನ್ ಅವರನ್ನು ಹಿಂದಿಕ್ಕಿ ತಂಡಕ್ಕೆ ಆಯ್ಕೆಯಾಗಿದ್ದ ಅವರು ಈ ಕ್ಯಾಚ್ ಮೂಲಕ ಆಯ್ಕೆಯನ್ನು ಸಮರ್ಧಿಸಿಕೊಂಡರು. ಭರತ್​ ಇದಕ್ಕಿಂತ ಹಿಂದೆ ಎರಡು ಬಾರಿ ಇಂಗ್ಲೆಂಡ್​ ಪಿಚ್​ನಲ್ಲಿ ಆಡಿದ್ದಾರೆ. ಒಂದು ಅಭ್ಯಾಸ ಪಂದ್ಯ, ಮತ್ತೊಂದು ವೆಸ್ಟ್ ಇಂಡೀಸ್ ವಿರುದ್ಧದ ಭಾರತ ಎ ಪಂದ್ಯ.

Continue Reading

ಕ್ರೀಡೆ

Wrestlers Protest: ಜೂನ್​ 15ರ ತನಕ ಪ್ರತಿಭಟನೆ ಸ್ಥಗಿತಗೊಳಿಸಿದ ಕುಸ್ತಿಪಟುಗಳು

ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್​ ಅವರ ನಿವಾಸದಲ್ಲಿ ನಡೆಸಿದ ಸಭೆಯ ಬಳಿಕ ಕುಸ್ತಿಪಟುಗಳು ಜೂನ್​ 15 ತನಕ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ.

VISTARANEWS.COM


on

Edited by

wrestlers protest
Koo

ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್​ಭೂಷನ್​ ಶರಣ್ ಸಿಂಗ್​ ಬಂಧನಕ್ಕೆ ಪಟ್ಟುಹಿಡಿದು ಪ್ರತಿಭಟನೆ ನಡೆಸುತ್ತಿದ್ದ ಭಾರತದ ಅಗ್ರಮಾನ್ಯ ಕುಸ್ತಿಪಟುಗಳು ತಾತ್ಕಾಲಿಕವಾಗಿ ಈ ಪ್ರತಿಭಟನೆಯಿಂದ ಹಿಂದೆ ಸರಿದ್ದಿದ್ದಾರೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್​ ಅವರ ನಿವಾಸದಲ್ಲಿ ನಡೆಸಿದ ಸಭೆಯ ಬಳಿಕ ಕುಸ್ತಿಪಟುಗಳು ಜೂನ್​ 15 ತನಕ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ. ಈ ವಿಚಾರವನ್ನು ಅನುರಾಗ್​ ಠಾಕೂರ್​ ಪ್ರಕಟಿಸಿದ್ದಾರೆ.

ಬುಧವಾರ ಕೇಂದ್ರ ಸರ್ಕಾರ ಕುಸ್ತಿಪಟುಗಳನ್ನು ಮತ್ತೊಮ್ಮೆ ಚರ್ಚೆಗೆ ಆಹ್ವಾನಿಸಿತ್ತು. ಇದಕ್ಕೂ ಮುನ್ನ ಅನುರಾಗ್​ ಠಾಕೂರ್​ ಅವರು ತಮ್ಮ ನಿವಾಸದಲ್ಲಿ ಕುಸ್ತಿಪಟುಗಳೊಂದಿಗೆ ಮಹತ್ವದ ಸಭೆಯೊಂದನ್ನು ನಡೆಸಿದ್ದರು. ಇದೀಗ ಸಭೆ ಮುಕ್ತಾಯ ಕಂಡಿದ್ದು ಕುಸ್ತಿ ಪಟುಗಳು ಜೂನ್​ 15ರ ತನಕ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ. ಇದರ ಜತೆಗೆ ಕುಸ್ತಿಪಟುಗಳು ಕೆಲ ಮಹತ್ವದ ಬೇಡಿಕೆ ಮುಂದಿಟ್ಟಿದ್ದಾರೆ ಎಂದು ವರದಿಯಾಗಿದೆ.

ಸಭೆಯ ಬಳಿಕ ಮಾತನಾಡಿದ ಅನುರಾಗ್​ ಠಾಕೂರ್​, ಕುಸ್ತಿಪಟುಗಳ ಎಲ್ಲ ಸಮಸ್ಯೆಯನ್ನು ಆಲಿಸಲಾಗಿದೆ. ಜೂನ್ 15ರೊಳಗೆ ಬ್ರಿಜ್ ಭೂಷಣ್ ವಿರುದ್ಧದ ತನಿಖೆ ಪೂರ್ಣಗೊಳ್ಳಲಿದೆ. ಹೀಗಾಗಿ ಕುಸ್ತಿಪಟುಗಳು ಜೂನ್ 15ರ ವರೆಗೆ ಪ್ರತಿಭಟನೆ ರದ್ದು ಮಾಡಲು ನಿರ್ಧರಿಸಿದ್ದಾರೆ” ಎಂದು ಹೇಳಿದ್ದಾರೆ.

ಸಭೆಯಲ್ಲಿ ಕುಸ್ತಿಪಟುಗಳು ತಮ್ಮ ಮೇಲಿನ ಎಫ್‌ಐಆರ್ ವಾಪಸ್ ಪಡೆಯುವಂತೆ ಮತ್ತು ಜೂನ್ 30ರೊಳಗೆ ನಡೆಯುವ ಡಬ್ಲ್ಯುಎಫ್‌ಐ ಚುನಾವಣೆಯಲ್ಲಿ 3 ಅವಧಿ ಪೂರೈಸಿರುವ ಬ್ರಿಜ್ ಭೂಷಣ್ ಸಿಂಗ್ ಮತ್ತು ಅವರ ಸಹಚರರನ್ನು ಮರು ಆಯ್ಕೆ ಮಾಡದಂತೆ ಒತ್ತಾಯಿಸಿದ್ದಾರೆ. ಜತೆಗೆ ಮಹಿಳಾ ಅಧ್ಯಕ್ಷರನ್ನು ನೇಮಕ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದೇ ವೇಳೆ ಮಾತನಾಡಿದ ಬಜರಂಗ್​ ಪೂನಿಯ, ಸಚಿವರ ಭರವಸೆಯ ಮೇರೆಗೆ ನಾವು ನಮ್ಮ ಪ್ರತಿಭಟನೆಯಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದ್ದೇವೆ, ಆದರೆ ನಮ್ಮ ಹೋರಾಟದಿಂದ ಅಲ್ಲ ಎಂದು ಹೇಳಿದ್ದಾರೆ. ಸಾಕ್ಷಿ ಮಲಿಕ್​ ಮಾತನಾಡಿ ತಮ್ಮ ವಿರುದ್ಧ ದಾಖಲಾದ ಎಲ್ಲ ಎಫ್​ಐಆರ್​ಗಳು ಹಿಂಪಡೆಯುವ ವಿಶ್ವಾಸವಿದೆ ಎಂದು ಹೇಳಿದರು.

ಇದನ್ನೂ ಓದಿ Wrestlers Protest: ಅನುರಾಗ್​ ಠಾಕೂರ್​ ಮನೆಗೆ ಭೇಟಿ ನೀಡಿದ ಕುಸ್ತಿಪಟುಗಳು

ಇದಕ್ಕೂ ಮೊದಲು ಜನವರಿಯಲ್ಲಿ ಕುಸ್ತಿಪಟುಗಳ ಜತೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಸಭೆ ನಡೆಸಿದ್ದರು. ಆ ವೇಳೆ ಬ್ರಿಜ್​ ಭೂಷಣ್​ ಸಿಂಗ್​ ವಿರುದ್ಧ ಸೂಕ್ತ ಕ್ರಮದ ಭರವಸೆ ನೀಡಿದ್ದರು. ಇದರಿಂದ ಕುಸ್ತಿಪಟುಗಳು ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಟ್ಟಿದ್ದರು. ಬಳಿಕ ಲೈಂಗಿಕ ದೌರ್ಜನ್ಯ ಆರೋಪಗಳ ತನಿಖೆಗಾಗಿ ಭಾರತ ಒಲಿಂ‍‍‍ಪಿಕ್‌ ಸಂಸ್ಥೆಯು ಐಒಎ ಮಹಿಳಾ ಬಾಕ್ಸರ್‌ ಎಂಸಿ ಮೇರಿಕೋಮ್ ಮತ್ತು ಕುಸ್ತಿಪಟು ಯೋಗೇಶ್ವರ್‌ ದತ್‌ ಆರ್ಚರಿ ಸ್ಪರ್ಧಿ ಡೋಲಾ ಬ್ಯಾನರ್ಜಿ ಮತ್ತು ಭಾರತ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ ಅಧ್ಯಕ್ಷ ಸಹದೇವ್‌ ಯಾದವ್‌ ಅವರನ್ನೊಳಗೊಂಡ ಸಮಿತಿ ರಚಿಸಲಾಗಿತ್ತು. ಇದರ ಪರಿಣಾಮ ಕುಸ್ತಿಪಟುಗಳು ಭರವಸೆ ನೀಡಿದಂತೆ ಕೆಲವು ತಿಂಗಳ ಕಾಲ ಕಾದಿದ್ದರು. ಆದರೆ ಬ್ರಿಜ್​ ಭೂಷಣ್​ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲ ಕಾರಣ ಮತ್ತೆ ಪ್ರತಿಭಟನೆ ನಡೆಸಿದ್ದರು. ಇದೀಗ ದ್ವಿತೀಯ ಬಾರಿ ಭರವಸೆ ನೀಡಿರುವ ಅನುರಾಗ್​ ಠಾಕೂರ್ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.

Continue Reading

ಕ್ರಿಕೆಟ್

WTC Final 2023 : ವಿಕೆಟ್​ ಕೀಪರ್​ ಕೆಎಸ್​ ಭರತ್​​ ಹಿಡಿದ ರೋಮಾಂಚಕಾರಿ ಕ್ಯಾಚ್​ ಹೀಗಿತ್ತು

ಇಶಾನ್ ಕಿಶನ್ ಅವರನ್ನು ಕೈಬಿಟ್ಟು ಫೈನಲ್ ಪಂದ್ಯದಲ್ಲಿ ವಿಕೆಟ್​ಕೀಪಿಂಗ್ ಜವಾಬ್ದಾರಿಯನ್ನು ಕೆ. ಎಸ್ ಭರತ್​​ಗೆ ನೀಡಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ

VISTARANEWS.COM


on

KS Bharat
Koo

ಲಂಡನ್: ಲಂಡನ್​ನ ಕೆನ್ನಿಂಗ್ಟನ್ ಓವಲ್​​ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್​ ಫೈನಲ್​ ಮುಖಾಮುಖಿಯಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು ಎದುರಿಸುತ್ತಿದೆ. ಟಾಸ್​ ಗೆದ್ದ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ಮೊದಲ ದಿನದ ಟಿ ವಿರಾಮದ ವೇಳೆಗೆ ಆಸ್ಟ್ರೇಲಿಯಾ 3 ವಿಕೆಟ್​ ಕಳೆದುಕೊಂಡು 171 ರನ್ ಬಾರಿಸಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡ ನಿಧಾನವಾಗಿ ಮೇಲುಗೈ ಸಾಧಿಸಿದೆ.

ಲಂಚ್​ ಬ್ರೇಕ್​ಗಿಂತ ಮೊದಲು ಆಸ್ಟ್ರೇಲಿಯಾ 73 ರನ್​ ಗಳಿಸಿತ್ತು. ಈ ವೇಳೆ ಇಬ್ಬರೂ ಆರಂಭಿಕರನ್ನು ಆಸ್ಟ್ರೇಲಿಯಾ ತಂಡ ಕಳೆದುಕೊಂಡಿತು. ವಾರ್ನರ್ 8 ಬೌಂಡರಿಗಳನ್ನು ಬಾರಿಸುವ ಮೂಲಕ ಉತ್ತಮವಾಗಿ ಆಡಿದರು ಆದರೆ ಭೋಜನ ವಿರಾಮಕ್ಕೆ ಕೆಲವೇ ನಿಮಿಷಗಳ ಮೊದಲು ಶಾರ್ದೂಲ್ ಠಾಕೂರ್​​ಗೆ ವಿಕೆಟ್​ ಒಪ್ಪಿಸಿ 7 ರನ್​ಗಳಿಂದ ಅರ್ಧ ಶತಕವನ್ನು ಕಳೆದುಕೊಂಡರು. ಈ ವಿಕೆಟ್​ ಕಬಳಿಸಲು ವಿಕೆಟ್​ಕೀಪರ್​ ಕೆ. ಎಸ್​ ಭರತ್​ ನೆರವಾದರು. ಅವರು ಅದ್ಭುತವಾಗಿ ಕ್ಯಾಚ್​ ಹಿಡಿಯುವ ಮೂಲಕ ವಾರ್ನರ್​ ವಿಕೆಟ್​ ಉರುಳಿಸಿದರು.

ಇದನ್ನೂ ಓದಿ : WTC Final 2023: ಭಾರತ, ಆಸ್ಟ್ರೇಲಿಯಾ​ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡಿದ್ದರ ಹಿಂದಿದೆ ಭಾವುಕ ಕಾರಣ

ಪಂದ್ಯಕ್ಕೆ ಪೂರ್ವದಲ್ಲಿ ಕೀಪಿಂಗ್ ಜವಾಬ್ದಾರಿ ಯಾರಿಗೆ ನೀಡಬೇಕು ಎಂಬ ಗೊಂದಲ ಸೃಷ್ಟಿಯಾಗಿತ್ತು. ಆದರೆ, ಇಶಾನ್​ ಕಿಶನ್​ ಅವರನ್ನು ಹಿಂದಿಕ್ಕಿದ ಭರತ್ ಅವಕಾಶ ಗಿಟ್ಟಿಸಿದರು. ಟೆಸ್ಟ್ ಕ್ರಿಕೆಟ್​ನಲ್ಲಿ ಭರತ್ 5 ಪಂದ್ಯಗಳನ್ನು ಆಡಿದ್ದಾರೆ. ಅವರು ಖಾತೆಯಲ್ಲಿ 100ಕ್ಕೂ ಹೆಚ್ಚು ರನ್​ಗಳಿವೆ. ಇದೀಗ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ನಲ್ಲೂ ಛಾಪು ಮೂಡಿಸಲಿದ್ದಾರೆ.

ಶಮಿಗೆ ಸಿಗದ ಅವಕಾಶ, ನೆಟ್ಟಿಗರ ಆಕ್ರೊಶ

ಆಸ್ಟ್ರೇಲಿಯಾ ವಿರುದ್ಧ ಆರಂಭಗೊಂಡ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಆರ್​. ಅಶ್ವಿನ್​ಗೆ ಆಡುವ ಬಳಗದಲ್ಲಿ ಅವಕಾಶ ಸಿಗಲಿಲ್ಲ. ಇದೇ ವಿಚಾರವಾಗಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಭಾರತ ತಂಡ ಮಾಡಿದ ದೊಡ್ಡ ತಪ್ಪು ಇದಾಗಿದೆ ಎಂದು ಹೇಳಿದ್ದಾರೆ. ಆದರೆ ತಂಡದ ನಾಯಕ ರೋಹಿತ್​ ಶರ್ಮ ಅವರು ಅಶ್ವಿನ್​ ಅವರನ್ನು ಕೈಬಿಟ್ಟ ಕುರಿತು ಸ್ಪಷ್ಟ ಮಾಹಿತಿ ನೀಡಿದ್ದಾರೆ.

ಲಂಡನ್​ನ ಓವಲ್​ ಮೈದಾನದಲ್ಲಿ ಬುಧವಾರ ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್​ ವೇಳೆ ಪ್ರಕಟಗೊಂಡ ಭಾರತ ತಂಡದಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಬೌಲರ್ ಆಗಿರುವ ಆಫ್‌ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್ ಅವರನ್ನು ಆಡುವ 11ರ ಬಳಗದಿಂದ ಕೈಬಿಟ್ಟು ಅಚ್ಚರಿ ಮೂಡಿಸಿತು. ಇದೇ ವೇಳೆ ನೆಟ್ಟಿಗರು ಟೀಮ್​ ಮ್ಯಾನೆಜ್​ಮೆಂಟ್​ ವಿರುದ್ಧ ಟ್ವಿಟರ್​ನಲ್ಲಿ ಆಕ್ರೋಶವ್ಯಕ್ತಪಡಿಸಿದ್ದಾರೆ.

ಅಶ್ವಿನ್​ ಬದಲು ಮಧ್ಯಮ ವೇಗಿ ಹಾಗೂ ಆಲ್​ರೌಂಡರ್​ ಆಗಿರುವ ಶಾರ್ದೂಲ್​ ಠಾಕೂರ್​ ಅವರನ್ನು ಟೀಮ್ ಇಂಡಿಯಾ ಹೆಚ್ಚುವರಿ ವೇಗಿಯನ್ನಾಗಿ ಆಯ್ಕೆ ಮಾಡಿಕೊಂಡಿತು. ಇದೇ ವಿಚಾರವಾಗಿ ಮಾತನಾಡಿದ ರೋಹಿತ್​ ಅವರು “ಇಲ್ಲಿನ ಪರಿಸ್ಥಿತಿಗಳು ಬೌಲಿಂಗ್‌ಗೆ ಉತ್ತಮವಾಗಿದೆ. ಹೀಗಾಗಿ ನಾವು ಮೊದಲು ಬೌಲಿಂಗ್‌ ಮಾಡಲಿದ್ದೇವೆ. ಮೋಡ ಕವಿದ ವಾತಾವರಣವೂ ಇದೆ. ಈ ಪಿಚ್‌ನಲ್ಲಿ ಸ್ಪಿನ್​ ಹೆಚ್ಚು ಪರಿಣಾಮಕಾರಿಯಾಗುವ ಸಾಧ್ಯತೆ ಕಡಿಮೆ. ಹೀಗಾಗಿ ನಾವು 4 ವೇಗಿಗಳು ಮತ್ತು ಒಬ್ಬ ಸ್ಪಿನ್ನರ್‌ನ ಆಯ್ಕೆ ಮಾಡಿಕೊಂಡಿದ್ದೇವೆ. ಜಡೇಜಾ ಅವರನ್ನು ಏಕೈಕ ಸ್ಪಿನ್ನರ್‌ ಆಗಿ ಆಯ್ಕೆ ಮಾಡಿಕೊಂಡಿದ್ದೇವೆ. ಅಶ್ವಿನ್ ಅವರನ್ನು ಹೊರಗಿಡುವುದು ಕಠಿಣ ನಿರ್ಧಾರವಾಗಿದೆ. ಆದರೂ ತಂಡದ ಹಿತದೃಷ್ಟಿಯಿಂದ ಅವರನ್ನು ಅನಿವಾರ್ಯವಾಗಿ ಕೈಬಿಡಬೇಕಾಯಿತು” ಎಂದರು.

Continue Reading

ಕ್ರೀಡೆ

Karim Benzema: ಅಲ್ ಇತ್ತಿಹಾದ್‌ ತಂಡ ಸೇರಿದ ಕರೀಮ್ ಬೆಂಜೆಮಾ

ಬೆಂಜೆಮಾ ಅವರು ರಿಯಲ್ ಮ್ಯಾಡ್ರಿಡ್‌ ತಂಡ ತೊರೆದ ಕೆಲವೇ ದಿನಗಳಲ್ಲಿ ಸೌದಿ ಅರೇಬಿಯಾದ ಫುಟ್ಬಾಲ್ ಕ್ಲಬ್ ಸೇರಿಕೊಂಡಿದ್ದಾರೆ

VISTARANEWS.COM


on

Edited by

Al Ittihad
Koo

ದುಬೈ: ಫ್ರಾನ್ಸ್ ತಂಡದ ಸ್ಟ್ರೈಕರ್ ಕರೀಂ ಬೆಂಜೆಮಾ(Karim Benzema) ಅವರು ರಿಯಲ್ ಮ್ಯಾಡ್ರಿಡ್‌ ತಂಡ ತೊರೆದ ಕೆಲವೇ ದಿನಗಳಲ್ಲಿ ಸೌದಿ ಅರೇಬಿಯಾದ ಫುಟ್ಬಾಲ್ ಕ್ಲಬ್ ಸೇರಿಕೊಂಡಿದ್ದಾರೆ. ಹಾಲಿ ಸೌದಿ ಪ್ರೊ ಲೀಗ್‌ನಲ್ಲಿ ಚಾಂಪಿಯನ್‌ ಆಗಿರುವ ಅಲ್ ಇತ್ತಿಹಾದ್‌ (Al Ittihad) ಕ್ಲಬ್‌ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಕ್ಲಬ್ ಖಚಿತಪಡಿಸಿದ್ದು, ಬೆಂಜೆಮಾ ಅವರ ಸೇರ್ಪಡೆಯೊಂದಿಗೆ ಕ್ಲಬ್‌ ಮತ್ತಷ್ಟು ಬಲಶಾಲಿಯಾಗಿ ಗೋಚರಿಸಲಿದೆ ಎಂದು ತಿಳಿಸಿದೆ.

ರಿಯಲ್‌ ಮ್ಯಾಡ್ರಿಡ್‌ ಕ್ಲಬ್‌ ಪರ 14 ವರ್ಷಗಳ ಕಾಲ ಆಡಿದ ಬೆಂಜೆಮಾ ಅವರು ಕಳೆದ ವಾರ ಈ ತಂಡವನ್ನು ತೊರಿದಿದ್ದರು. ಇದೀಗ ಮುಂದಿನ ಮೂರು ವರ್ಷಗಳ ಒಪ್ಪಂದದಡಿ ಸೌದಿ ಅರೇಬಿಯಾದ ಅಲ್ ಇತ್ತಿಹಾದ್‌ ತಂಡದ ಪರ ಆಡಲಿದ್ದಾರೆ.

“ಏಷ್ಯಾದಲ್ಲಿ ಫುಟ್ಬಾಲ್ ಲೀಗ್ ಆಡಲು ನಾನು ಉತ್ಸುಕನಾಗಿದ್ದೇನೆ. ನನ್ನ ವೃತ್ತಿಜೀವನದಲ್ಲಿ ಕೆಲವೊಂದು ಅದ್ಭುತ ವಿಷಯಗಳನ್ನು ಸಾಧಿಸಲು ಖುಷಿಯಾಗುತ್ತಿದೆ. ತಂಡಕ್ಕೆ ಬೇಕಾದ ಎಲ್ಲ ಸಹಕಾರವನ್ನು ನಾನು ನೀಡಲು ಸಿದ್ಧನಿದ್ದೇನೆ. ಹೊಸ ಸವಾಲು ಮತ್ತು ಯೋಜನೆಗೆ ಇದು ಸರಿಯಾದ ಸಮಯ ಎಂದು ಭಾವಿಸುತ್ತೇನೆ” ಎಂದು ಕರೀಂ ಬೆಂಜೆಮಾ ಹೇಳಿದರು. 35 ವರ್ಷದ ಬೆಂಜೆಮಾ ಅವರು ಕಳೆದ ವರ್ಷ ವಿಶ್ವದ ಅತ್ಯುತ್ತಮ ಪುರುಷರ ಆಟಗಾರರಿಗಾಗಿ ಬ್ಯಾಲನ್ ಡಿ ಓರ್ ಪ್ರಶಸ್ತಿ ಗೆದ್ದುಕೊಂಡಿದ್ದರು.

ಇದನ್ನೂ ಓದಿ Lionel Messi: ಮತ್ತೆ ಬಾರ್ಸಿಲೋನಾ ಪರ ಆಡಲಿದ್ದಾರೆ ಲಿಯೋನೆಲ್‌ ಮೆಸ್ಸಿ!

ಕಳೆದ ವರ್ಷದ ಡಿಸೆಂಬರ್‌ ತಿಂಗಳಲ್ಲಿ ಫುಟ್ಬಾಲ್‌ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ ಅವರು, ಸೌದಿ ಅರೇಬಿಯಾದ ಅಲ್ ನಾಸರ್‌ ಕ್ಲಬ್‌ ಸೇರಿಕೊಂಡಿದ್ದರು. ಇದೀಗ ಬೆಂಜೆಮಾ ಕೂಡ ರಿಯಲ್ ಮ್ಯಾಡ್ರಿಡ್‌ ತಂಡ ತೊರೆದು ರೊನಾಲ್ಡೊ ಅವರ ದಾರಿಯನ್ನೇ ಅನುಸರಿಸಿದ್ದಾರೆ. ಪಿಎಸ್​ಜಿ ತಂಡದಿಂದ ಹೊರಬಂದ್ದಿರುವ ಲಿಯೋನೆಲ್ ಮೆಸ್ಸಿ ಕೂಡ ಸೌದಿ ಅರೇಬಿಯಾದ ತಂಡವೊಂದಕ್ಕೆ ಸೇರಲಿದ್ದಾರೆ ಎಂದು ವರದಿಯಾಗಿದೆ.

Continue Reading
Advertisement
Marnus Labuschagne
ಕ್ರಿಕೆಟ್13 mins ago

WTC Final 2023 : ಶಮಿ ಎಸೆತಕ್ಕೆ ಮರ್ನಸ್​ ಲಾಬುಶೇನ್​ ಬೌಲ್ಡ್​ ಆದ ರೀತಿ ಹೀಗಿದೆ

wrestlers protest
ಕ್ರೀಡೆ56 mins ago

Wrestlers Protest: ಜೂನ್​ 15ರ ತನಕ ಪ್ರತಿಭಟನೆ ಸ್ಥಗಿತಗೊಳಿಸಿದ ಕುಸ್ತಿಪಟುಗಳು

abhishek ambareesh wedding Reception
ಕರ್ನಾಟಕ58 mins ago

Abhishek Ambareesh Reception: ಅಭಿ- ಅವಿವ ಅದ್ಧೂರಿ ಆರತಕ್ಷತೆ; ಲೈವ್‌ ವಿಡಿಯೊ ಇಲ್ಲಿದೆ

KS Bharat
ಕ್ರಿಕೆಟ್59 mins ago

WTC Final 2023 : ವಿಕೆಟ್​ ಕೀಪರ್​ ಕೆಎಸ್​ ಭರತ್​​ ಹಿಡಿದ ರೋಮಾಂಚಕಾರಿ ಕ್ಯಾಚ್​ ಹೀಗಿತ್ತು

for tenants also to wrestlers protest and more news
ಕರ್ನಾಟಕ1 hour ago

ವಿಸ್ತಾರ TOP 10 NEWS: ಬಾಡಿಗೆಯವರಿಗೂ ಫ್ರೀ ಕರೆಂಟ್‌ನಿಂದ, ಅಂತಿಮ ಘಟ್ಟದಲ್ಲಿ ಕುಸ್ತಿ ಕದನದವರೆಗಿನ ಪ್ರಮುಖ ಸುದ್ದಿಗಳಿವು

Anita Madhu Bangarappa was felicitated by Block Mahila Congress at soraba
ಕರ್ನಾಟಕ1 hour ago

Shivamogga News: ಸೊರಬ ಕ್ಷೇತ್ರದ ಮತದಾರರಿಗೆ ಅಭಿನಂದನೆ ಸಲ್ಲಿಸಿದ ಅನಿತಾ ಮಧು ಬಂಗಾರಪ್ಪ

MLA TB Jayachandra visited Shira Public Hospital
ಕರ್ನಾಟಕ1 hour ago

Tumkur News: ಶಿರಾ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಟಿ.ಬಿ. ಜಯಚಂದ್ರ ಭೇಟಿ, ಪರಿಶೀಲನೆ

Farooq Abdullah meets HD Devegowda
ಕರ್ನಾಟಕ1 hour ago

Farooq Abdullah: ಮಾಜಿ ಪಿಎಂ ದೇವೇಗೌಡ, ಸಿಎಂ ಸಿದ್ದರಾಮಯ್ಯ ಜತೆ ಫಾರೂಕ್‌ ಅಬ್ದುಲ್ಲಾ ʼಲೋಕಾʼಭಿರಾಮ!

Good Train Accident
ದೇಶ2 hours ago

Odisha Train Accident : ಅಯ್ಯೊ ದುರ್ವಿಧಿ, ಟ್ರೈನ್ ಕೆಳಗೆ ಮಲಗಿದ್ದವರು ಅಲ್ಲೇ ಅಪ್ಪಚ್ಚಿ!

BJP lose in karnataka
ಕರ್ನಾಟಕ2 hours ago

BJP Karnataka: ಸೋತು 25 ದಿನದ ನಂತರ ಅವಲೋಕನ ನಡೆಸಲಿದೆ ಬಿಜೆಪಿ!: ಗೆದ್ದ-ಸೋತವರ ಸಭೆ ಗುರುವಾರ

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ16 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ4 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ6 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್8 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

abhishek ambareesh wedding Reception
ಕರ್ನಾಟಕ58 mins ago

Abhishek Ambareesh Reception: ಅಭಿ- ಅವಿವ ಅದ್ಧೂರಿ ಆರತಕ್ಷತೆ; ಲೈವ್‌ ವಿಡಿಯೊ ಇಲ್ಲಿದೆ

N Chaluvarayaswamy about Congress guarantee
ಕರ್ನಾಟಕ8 hours ago

Video Viral: ಉಚಿತ ಗ್ಯಾರಂಟಿ ಯೋಜನೆ ಚುನಾವಣೆಯ ಚೀಪ್‌ ಗಿಮಿಕ್‌ ಎಂದ ಕೃಷಿ ಸಚಿವ ಚಲುವರಾಯಸ್ವಾಮಿ!

horoscope today love and horoscope
ಪ್ರಮುಖ ಸುದ್ದಿ16 hours ago

Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!

Salman Khan Bigg Boss ott 2
South Cinema1 day ago

Big Boss OTT 2: ಜೂನ್ 17ಕ್ಕೆ ಬಿಗ್‌ಬಾಸ್ ಒಟಿಟಿ 2 ಪ್ರಸಾರ, ಇಲ್ಲೂ ನಿರೂಪಕ ಸಲ್ಲೂ!

dining table vastu tips
ಭವಿಷ್ಯ1 day ago

Vastu Tips : ಮನೆಯ ಡೈನಿಂಗ್‌ ಹಾಲ್‌ನಲ್ಲಿ ಈ ಆಕಾರದ ಟೇಬಲ್‌ ಇರಲೇಬಾರದು!

pineapple cultivation
ಕೃಷಿ1 day ago

Krishi Khajane : ಆರೋಗ್ಯಕರ ಅನಾನಸ್‌ ಬೆಳೆಯುವುದು ಕಷ್ಟವೇನಲ್ಲ!

health and horoscope horoscope today
ಪ್ರಮುಖ ಸುದ್ದಿ2 days ago

Horoscope Today : ಈ ರಾಶಿಯವರ ಆರೋಗ್ಯ ಕೊಂಚ ಹದಗೆಡುವ ಸಾಧ್ಯತೆ, ಇರಲಿ ಎಚ್ಚರ!

Chakravarthy Sulibele and MB Patil
ಕರ್ನಾಟಕ2 days ago

Chakravarthy Sulibele: ಜೈಲಿಗೆ ಕಳುಹಿಸಲೇ ಬೇಕು ಅಂತಿದ್ದರೆ ಬನ್ನಿ, ನಾನೂ ನೋಡ್ತೇನೆ: ಎಂಬಿಪಿಗೆ ಸೂಲಿಬೆಲೆ ಸವಾಲ್‌

Sevanthige Flower Farming
ಕೃಷಿ2 days ago

Krishi Khajane : ಬಿಳಿ ಸೇವಂತಿಗೆ ಬೆಳೆದರೆ ಒಂದು ಎಕರೆಗೆ 5 ಲಕ್ಷ ರೂ. ಲಾಭ!

Horoscope Today
ಪ್ರಮುಖ ಸುದ್ದಿ3 days ago

Horoscope Today : ಈ ನಾಲ್ಕು ರಾಶಿಯ ಉದ್ಯೋಗಿಗಳಿಗೆ ಇಂದು ಅದೃಷ್ಟದ ದಿನವಂತೆ!

ಟ್ರೆಂಡಿಂಗ್‌

error: Content is protected !!