Mohammad Shami who scored a century in bowling, what is the achievement? IPL 2023 : ಬೌಲಿಂಗ್​ನಲ್ಲಿ ಶತಕ ಬಾರಿಸಿದ ಮೊಹಮ್ಮದ್​ ಶಮಿ, ಏನಿದು ಸಾಧನೆ? - Vistara News

ಕ್ರಿಕೆಟ್

IPL 2023 : ಬೌಲಿಂಗ್​ನಲ್ಲಿ ಶತಕ ಬಾರಿಸಿದ ಮೊಹಮ್ಮದ್​ ಶಮಿ, ಏನಿದು ಸಾಧನೆ?

ಮೊಹಮ್ಮದ್​ ಶಮಿ ಐಪಿಎಲ್​ನ 94 ಇನಿಂಗ್ಸ್​​ಗಳಲ್ಲಿ 100 ವಿಕೆಟ್​ ಸಾಧನೆ ಮಾಡಿದ್ದು, ಈ ಪಟ್ಟಿಯಲ್ಲಿ 19ನೇ ಅಟಗಾರ ಎನಿಸಿಕೊಂಡಿದ್ದಾರೆ.

VISTARANEWS.COM


on

Mohammad Shami who scored a century in bowling, what is the achievement?
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಹಮದಾಬಾದ್​: ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ವೇಗದ ಬೌಲರ್​ ಮೊಹಮ್ಮದ್​ ಶಮಿ ಎರಡು ವಿಕೆಟ್​ ಪಡೆದಿದ್ದಾರೆ. ನಾಲ್ಕು ಓವರ್​ಗಳಲ್ಲಿ 29 ರನ್​ಗಳಿಗೆ 2 ವಿಕೆಟ್​ ಕಬಳಿಸಿದರು. ಈ ಮೂಲಕ ಅವರು ತಂಡದ ಯಶಸ್ವಿ ಬೌಲರ್ ಎನಿಸಿಕೊಂಡರು. ಇದೆಲ್ಲದಕ್ಕಿಂತ ಹೆಚ್ಚಾಗಿ ಅವರು ಮೊದಲ ವಿಕೆಟ್​ ಪಡೆದ ತಕ್ಷಣ ಐಪಿಎಲ್​ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಆರಂಭಿಕ ಬ್ಯಾಟರ್​ ಡೆವೋನ್​ ಕಾನ್ವೆ ಒಂದು ರನ್​ಗೆ ಔಟ್​ ಆದರು. ಶಮಿ ಎಸೆದ ಮಾರಕ ಬೌಲಿಂಗ್​ಗೆ ಅವರು ಕ್ಲೀನ್​ ಬೌಲ್ಡ್ ಆದರು. ಈ ವೇಳೆ ಶಮಿ 100 ಐಪಿಎಲ್​ ವಿಕೆಟ್​ಗಳನ್ನು ಕಿತ್ತಿರುವ 19ನೇ ಬೌಲರ್ ಎನಿಸಿಕೊಂಡರು. ಶಮಿ ತಮ್ಮ 94ನೇ ಇನಿಂಗ್ಸ್​​ನಲ್ಲಿ ಈ ಸಾಧನೆ ಮಾಡಿದರು.

ಐಪಿಎಲ್​ನಲ್ಲಿ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ವೆಸ್ಟ್​ ಇಂಡೀಸ್​ನ ಡ್ವೆನ್ ಬ್ರಾವೊ ಮೊದಲ ಸ್ಥಾನದಲ್ಲಿದ್ದಾರೆ. ಅವರು ಐಪಿಎಲ್​ನ 158 ಇನಿಂಗ್ಸ್​​ಗಳಲ್ಲಿ 183 ವಿಕೆಟ್​ ಕಬಳಿಸಿದ್ದಾರೆ. ಮುಂಬಯಿ ಇಂಡಿಯನ್ಸ್​ ಮಾಜಿ ವೇಗದ ಬೌಲರ್​ ಲಸಿತ್​ ಮಾಲಿಂಗ ಎರಡನೇ ಸ್ಥಾನದಲ್ಲಿದ್ದಾರೆ. 122 ಐಪಿಎಲ್​ ಮ್ಯಾಚ್​​ಗಳಲ್ಲಿ ಅವರು 170 ತಮ್ಮದಾಗಿಸಿಕೊಂಡಿದ್ದಾರೆ.

ಆರ್​ಸಿಬಿ ಮಾಜಿ ಸ್ಪಿನ್ನರ್​ ಹಾಗೂ ಹಾಲಿ ರಾಜಸ್ಥಾನ್​ ರಾಯಲ್ಸ್​ ತಂಡದ ಆಟಗಾರ ಯಜ್ವೇಂದ್ರ ಚಹಲ್​ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. 130 ಎಸೆತಗಳಲ್ಲಿ ಅವರು 166 ವಿಕೆಟ್ ಪಡೆದಿದ್ದಾರೆ.

ಉತ್ತಮ ಮೊತ್ತ ಪೇರಿಸಿದ ಚೆನ್ನೈ

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಲು ಆಹ್ವಾನ ಪಡೆದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಬ್ಯಾಟರ್ ಡೆವೋನ್​ ಕಾನ್ವೆ 1 ರನ್​ಗೆ ವಿಕೆಟ್​ ಒಪ್ಪಿಸುವ ಮೂಲಕ ಹಿನ್ನಡೆ ಉಂಟು ಮಾಡಿದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಮೊಯೀನ್ ಅಲಿ ಸ್ಪೋಟಕ ಬ್ಯಾಟಿಂಗ್ ಮಾಡಿದರೂ 23 ರನ್​ಗಳಿಗೆ ಔಟಾದರು. ಹೀಗಾಗಿ ಸಿಎಸ್​ಕೆ ತಂಡಕ್ಕೆ ಮತ್ತೆ ಹಿನ್ನಡೆ ಉಂಟಾಯಿತು.

ಗಾಯಕ್ವಾಡ್​ ಸ್ಫೋಟಕ ಬ್ಯಾಟಿಂಗ್​

ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಬೆನ್​ಸ್ಟೋಕ್ಸ್​ 7 ರನ್​ಗೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಆದರೆ, ಮತ್ತೊಂದು ಬದಿಯಲ್ಲಿ ಅಬ್ಬರಿಸಿದ ಬೆನ್​ಸ್ಟೋಕ್ಸ್​ ಸತತವಾಗಿ ಇನಿಂಗ್ಸ್ ಕಟ್ಟಿದರು. 23 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಅವರು ನಂತರವೂ ಬಿಡುಬೀಸಿನ ಬ್ಯಾಟಿಂಗ್ ನಡೆಸಿದರು. ಆದರೆ, ಅಲ್ಜಾರಿ ಜೋಸೆಫ್​ ಎಸೆದ ಚಾಣಾಕ್ಷ ಬೌಲಿಂಗ್​ಗೆ ಅವರು ಶುಭ್​ಮನ್​ ಗಿಲ್​ಗೆ ವಿಕೆಟ್​ ಒಪ್ಪಿಸಿ ನಿರ್ಗಮಿಸಿದರು.

ಗಾಯಕ್ವಾಡ್​ ಹೊರತುಪಡಿಸಿ ಚೆನ್ನೈ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಉಳಿದ ಆಟಗಾರರು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಅಂಬಾಟಿ ರಾಯುಡು 12 ರನ್​ಗೆ ಔಟಾದರೆ, ಶಿವಂ ದುಬೆ 19 ರನ್ ಕೊಡುಗೆ ಕೊಟ್ಟರು. ಮಹೇಂದ್ರ ಸಿಂಗ್ ಧೋನಿ 7 ಎಸೆತಗಳಿಗೆ 14 ರನ್​ ಬಾರಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

MS Dhoni : ಧೋನಿ ಆಡಲು ಇಳಿದಾಗ ಸ್ಟೇಡಿಯಮ್​ನಲ್ಲಿ ಶಬ್ದ ಮಾಲಿನ್ಯ; ಡಿಕಾಕ್ ಹೆಂಡತಿಯ ಪೋಸ್ಟ್​ ವೈರಲ್​

MS Dhoni: ಸಶಾ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ವಾಚ್​​ನ ಚಿತ್ರವನ್ನು ಹಂಚಿಕೊಂಡಿದ್ದು, ತನ್ನ ಸ್ಮಾರ್ಟ್ ವಾಚ್​​ನಲ್ಲಿ ತೋರಿಸಿರುವಂತೆ ಧ್ವನಿ ಮಟ್ಟವು 95 ಡೆಸಿಬಲ್​​ಗಳನ್ನು ದಾಟಿತ್ತು ಎಂದು ಬಹಿರಂಗಪಡಿಸಿದೆ. ಆದಾಗ್ಯೂ, ನಂತರದ ಸಂದೇಶವು ಎಲ್ಲರ ಗಮನ ಸೆಳೆಯಿತು. ಈ ಶಬ್ದದ ಮಟ್ಟದಲ್ಲಿ ಕೇವಲ 10 ನಿಮಿಷಗಳು ಕಳೆದರೆ ತಾತ್ಕಾಲಿಕ ಶ್ರವಣ ದೋಷ ಉಂಟಾಗಬಹುದು ಎಂದು ಸ್ಮಾರ್ಟ್ ವಾಚ್ ಅಲರ್ಟ್​ ನೀಡಿತ್ತು.

VISTARANEWS.COM


on

MS Dhoni
Koo

ಲಖನೌ: ಲಕ್ನೊ ಸೂಪರ್​ ಜೈಂಟ್ಸ್​ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ನಡುವಿನ ಪಂದ್ಯದ (IPL 2024) ವೇಳೆ ಎಂಎಸ್ ಧೋನಿ (MS Dhoni) ಬ್ಯಾಟಿಂಗ್​ಗೆ ಬಂದಾಗ ಲಕ್ನೋದ ಎಕಾನಾ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಅಬ್ಬರ ಏಕಾಏಕಿ ಜಾಸ್ತಿಯಾಗಿತ್ತು . ಅದು ಎಷ್ಟರ ಮಟ್ಟಿಗೆ ಎಂದರೆ ಆ್ಯಪಲ್​ ವಾಚ್​ ಶಬ್ದ ಮಾಲಿನ್ಯ ಮಿತಿಮೀರಿದೆ ಎಂದು ಅಲರ್ಟ್​ ಕೊಡುವ ತನಕ. ಈ ಮಾಹಿತಿಯನ್ನು ಲಕ್ನೊ ತಂಡದ ವಿಕೆಟ್​ ಕೀಪಿಂಗ್ ಬ್ಯಾಟರ್​ ಕ್ವಿಂಟನ್ ಡಿ ಕಾಕ್ ಅವರ ಪತ್ನಿ ಸಶಾ ಅವರು ಏಪ್ರಿಲ್ 19, ಶುಕ್ರವಾರ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರಕಟಿಸಿದ್ದಾರೆ. ಧೋನಿ ಸ್ಟೇಡಿಯಮ್​​ಗೆ ಬ್ಯಾಟಿಂಗ್​ಗಾಗಿ ನಡೆದಾಗ ಕ್ರೀಡಾಂಗಣದಲ್ಲಿದ್ದ ಧ್ವನಿ ಮಟ್ಟವನ್ನು ಬಹಿರಂಗಪಡಿಸಿದ್ದಾರೆ.

ಸಶಾ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ವಾಚ್​​ನ ಚಿತ್ರವನ್ನು ಹಂಚಿಕೊಂಡಿದ್ದು, ತನ್ನ ಸ್ಮಾರ್ಟ್ ವಾಚ್​​ನಲ್ಲಿ ತೋರಿಸಿರುವಂತೆ ಧ್ವನಿ ಮಟ್ಟವು 95 ಡೆಸಿಬಲ್​​ಗಳನ್ನು ದಾಟಿತ್ತು ಎಂದು ಬಹಿರಂಗಪಡಿಸಿದೆ. ಆದಾಗ್ಯೂ, ನಂತರದ ಸಂದೇಶವು ಎಲ್ಲರ ಗಮನ ಸೆಳೆಯಿತು. ಈ ಶಬ್ದದ ಮಟ್ಟದಲ್ಲಿ ಕೇವಲ 10 ನಿಮಿಷಗಳು ಕಳೆದರೆ ತಾತ್ಕಾಲಿಕ ಶ್ರವಣ ದೋಷ ಉಂಟಾಗಬಹುದು ಎಂದು ಸ್ಮಾರ್ಟ್ ವಾಚ್ ಅಲರ್ಟ್​ ನೀಡಿತ್ತು.

ಅಬ್ಬರದ ವಾತಾವರಣ. ಶಬ್ದ ಮಟ್ಟವು 95 ಡೆಸಿಬಲ್ ಗಳನ್ನು ದಾಟಿದೆ. ಈ ಮಟ್ಟದಲ್ಲಿ ಕೇವಲ 10 ನಿಮಿಷಗಳು ತಾತ್ಕಾಲಿಕ ಶ್ರವಣ ನಷ್ಟಕ್ಕೆ ಕಾರಣವಾಗಬಹುದು” ಎಂದು ಸಾಶಾ ಡಿ ಕಾಕ್ ತಮ್ಮ ಸ್ಮಾರ್ಟ್ ವಾಚ್ ನಲ್ಲಿನ ಅಲರ್ಟ್​ ಅನ್ನು ಬಹಿರಂಗ ಮಾಡಿದ್ದಾರ. ಧೋನಿ ಮತ್ತೊಂದು ಸುಂಟರಗಾಳಿ ಸಿಕ್ಸರ್​ಗಳೊಂದಿಗೆ ಏಕಾನಾ ಕ್ರೀಡಾಂಗಣದಲ್ಲಿ ಪ್ರೇಕ್ಷಕರನ್ನು ಸಂಪೂರ್ಣವಾಗಿ ರಂಜಿಸಿದರು.

ಎಲ್ಎಸ್​ಜಿ ಮತ್ತು ಸಿಎಸ್​​ಕೆ ಮುಖಾಮುಖಿಯಲ್ಲಿ ಧೋನಿಯ ಪ್ರದರ್ಶನ ಹೇಗಿತ್ತು?


ಸಿಎಸ್​ಕೆ 17.5 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತ್ತು. ಧೋನಿ ಕೇವಲ 9 ಎಸೆತಗಳಲ್ಲಿ 28 ರನ್ ಗಳಿಸಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು. ಸಿಎಸ್​ಕೆ ತಂಡ 176 ರನ್​ ಗಳಿಸಲು ನೆರವಾದರು.

ಸಿಎಸ್​ಕೆ ಸ್ಟಾರ್ ಬೌಂಡರಿ ಮೂಲಕ ಇನಿಂಗ್ಸ್ ಆರಂಭಿಸಿದರು. ನಂತರ ಸಿಕ್ಸರ್ ಮೂಲಕ ರಂಜಿಸಿದರು. ಯಶ್ ಠಾಕೂರ್ ಅವರ ಅಂತಿಮ ಓವರ್​ನಲ್ಲಿ ಧೋನಿ ವಿಕೆಟ್​ಗಳ ನಡುವೆ ಓಡುವುದು ಸಹ ಸಂವೇದನಾಶೀಲವಾಗಿತ್ತು. ನಂತರ ಧೋನಿ 101 ಮೀಟರ್ ಸಿಕ್ಸರ್ ಬಾರಿಸಿ ಪ್ರೇಕ್ಷಕರನ್ನು ತಮ್ಮ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದರು. ಅವರು ತಮ್ಮ ದಿನದ ಕೆಲಸವನ್ನು ಮುಗಿಸಲು ಇನ್ನೂ ಒಂದೆರಡು ಬೌಂಡರಿಗಳನ್ನು ಹೊಡೆಯುತ್ತಿದ್ದರು.

Continue Reading

ಕ್ರೀಡೆ

Impact Player Rule : ಇಂಪ್ಯಾಕ್ಟ್​ ಪ್ಲೇಯರ್​​ ಸಿಕ್ಕಾಪಟ್ಟೆ ವಿರೋಧ; ಇದೀಗ ಋತುರಾಜ್​ ಸರದಿ

Impact Player Rule: ಪ್ರಾಮಾಣಿಕವಾಗಿ ಹೇಳುವುದಾದರೆ, ನಾನು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ದೊಡ್ಡ ಅಭಿಮಾನಿಯಲ್ಲ. ಇದು ಆಲ್ರೌಂಡರ್​ಗಳನ್ನು ಹಾಳು ಮಾಡಲಿದೆ. ಶಿವಂ ದುಬೆ ಮತ್ತು ವಾಷಿಂಗ್ಟನ್ ಸುಂದರ್ ಅವರಂತಹ ಆಟಗಾರರು ಬೌಲಿಂಗ್ ಮಾಡಲು ಸಿಗುತ್ತಿಲ್ಲ. ಇದು ನಮಗೆ ಒಳ್ಳೆಯದಲ್ಲ. 12 ಆಟಗಾರರು ಇರುವುದರಿಂದ ಇದು ಮನರಂಜನೆಯಷ್ಟೇ ಎಂದು ರೋಹಿತ್ ಹೇಳಿದ್ದರು.

VISTARANEWS.COM


on

Impact Player Rule
Koo

ಲಖನೌ: ಐಪಿಎಲ್​​ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮದ (Impact Player Rule) ಅಗತ್ಯವಿದೆಯೇ? ಈ ರೀತಿಯ ಚರ್ಚೆಯೊಂದು ಜೋರಾಗಿ ಹುಟ್ಟಿಕೊಂಡಿದೆ. ಅದಕ್ಕೆ ಹಾಲಿ ಆಟಗಾರರು ಧ್ವನಿಗೂಡಿಸಿದ್ದಾರೆ. ಪಂದ್ಯದ ಯಾವುದೇ ಹಂತದಲ್ಲಿ ಆಟಗಾರನನ್ನು ಬದಲಿ ಆಟಗಾರನನ್ನಾಗಿ ಮಾಡಲು ತಂಡಕ್ಕೆ ಅವಕಾಶ ನೀಡುವ ಹೊಸ ಆವಿಷ್ಕಾರವು ತೀವ್ರವಾಗಿ ಟೀಕೆಗೆ ಒಳಗಾಗಿದೆ. ಮೊದಲು ಅಭಿಮಾನಿಗಳು ಮತ್ತು ತಜ್ಞರು ಈಗಾಗಲೇ ಇದಕ್ಕೆ ವಿರುದ್ಧವಾಗಿದ್ದರು. ಇದೀಗ ಆಟಗಾರರು ಅದನ್ನು ತೀವ್ರವಾಗಿ ವಿರೋಧ ಮಾಡುತ್ತಿದ್ದಾರೆ. ಋತುರಾಜ್​ ಗಾಯಕ್ವಾಡ್​ ಆ ಬಗ್ಗೆ ಧ್ವನಿ ಎತ್ತಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ನಾಯಕ ಋತುರಾಜ್ ಗಾಯಕ್ವಾಡ್ ತಮ್ಮ ತಂಡಕ್ಕೆ ಆರಾಮದಾಯಕ ಸೋಲಿನ ನಂತರ ನಿಯಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ ವಿರುದ್ಧ ಕಠಿಣ ಪಿಚ್​​ನಲ್ಲಿ 176 ರನ್ ಗಳಿಸಿದರೂ, ಸಿಎಸ್​ಕೆ 8 ವಿಕೆಟ್​​ಗಳ ಹೀನಾಯ ಸೋಲನ್ನು ಅನುಭವಿಸಿತು. ಪಂದ್ಯದ ನಂತರ ನೀಡಿದ ಸಂದರ್ಶನದಲ್ಲಿ ರುತುರಾಜ್ ಹೀಗೆ ಹೇಳಿದ್ದಾರೆ:

ಅಷ್ಟೊಂದು ರನ್ ಬಾರಿಸಿದರೂ ಗೆಲುವು ಕಷ್ಟವಾಗುತ್ತಿದೆ. ಇಂಪ್ಯಾಕ್ಟ್ ಸಬ್ ರೂಲ್​ನೊಂದಿಗೆ 10-15 ಅಥವಾ 20 ರನ್​​ಗಳು ಹೆಚ್ಚುವರಿಯಾಗಿ ಬೇಕಾಗುತ್ತವೆ ಎಂದು ಹೇಳಿದ್ದಾರೆ.

ಆಲ್​ರೌಂಡರ್​ಗಳ ಬೆಳವಣಿಗೆಗೆ ಅಡ್ಡಿ

ಋತುರಾಜ್ ಗಾಯಕ್ವಾಡ್ ಕೂಡ ಇಂಪ್ಯಾಕ್ಟ್​ ಪ್ಲೇಯರ್​ನಿಂದ ಆಟದ ಬೆಳವಣಿಗೆಗೆ ಅಡ್ಡಿಯಾಗಿದೆ ಎಂದು ಹೇಳಿದ್ದಾರೆ. ಈ ನಿಯಮದಿಂದಾಗಿ ಆಲ್​ರೌಂಡರ್​ಗಳ ಬೆಳವಣಿಗೆಗೆ ಅಡ್ಡಿಯಾಗುತ್ತದೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಈ ಹಿಂದೆ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಿದ್ದಾರೆ.

ಪ್ರಾಮಾಣಿಕವಾಗಿ ಹೇಳುವುದಾದರೆ, ನಾನು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ದೊಡ್ಡ ಅಭಿಮಾನಿಯಲ್ಲ. ಇದು ಆಲ್ರೌಂಡರ್​ಗಳನ್ನು ಹಾಳು ಮಾಡಲಿದೆ. ಶಿವಂ ದುಬೆ ಮತ್ತು ವಾಷಿಂಗ್ಟನ್ ಸುಂದರ್ ಅವರಂತಹ ಆಟಗಾರರು ಬೌಲಿಂಗ್ ಮಾಡಲು ಸಿಗುತ್ತಿಲ್ಲ. ಇದು ನಮಗೆ ಒಳ್ಳೆಯದಲ್ಲ. 12 ಆಟಗಾರರು ಇರುವುದರಿಂದ ಇದು ಮನರಂಜನೆಯಷ್ಟೇ ಎಂದು ರೋಹಿತ್ ಹೇಳಿದ್ದರು.

ಇದನ್ನೂ ಓದಿ: KL Rahul : ಐಪಿಎಲ್​ನಲ್ಲಿ ಧೋನಿಯ ದಾಖಲೆಯೊಂದನ್ನು ಮುರಿದ ಕೆ. ಎಲ್ ರಾಹುಲ್​

ವಿಶ್ವದ ಅತ್ಯುತ್ತಮ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ನಿಯಮದ ಬಗ್ಗೆ ಹೆಚ್ಚು ಸಂತೋಷವಾಗಿಲ್ಲ. ಬೌಲರ್ ಆಗಿ, ನಿಯಮವು ಬ್ಯಾಟರ್​​ಗಳಿಗೆ ಹೆಚ್ಚಿನ ನೆರವು ನೀಡುತ್ತದೆ ಎಂದು ಹೇಳಿದ್ದಾರೆ.

“ಸಮಯದ ನಿರ್ಬಂಧಗಳು ಮತ್ತು ಆಟಗಾರರ ನಿಯಮಗಳಿಂದಾಗಿ ಬೌಲರ್​ಗಳಿಗೆ ಕಷ್ಟವಾಗುತ್ತದೆ. ಇದು ಬೌಲರ್​​ಗಲ ಸಂಯಮ ಹಾಳು ಮಾಡಲು ಬ್ಯಾಟರ್​ಗಳಿಗೆ ನೆರವಾಗುತ್ತದೆ. ಈ ನಿಯಮದಿಂದಾಗಿ ಬೌಲರ್ ಶಕ್ತಿ ಅರ್ಧದಷ್ಟು ಇಳಿಯುತ್ತದೆ ಎಂದು ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

KL Rahul : ಐಪಿಎಲ್​ನಲ್ಲಿ ಧೋನಿಯ ದಾಖಲೆಯೊಂದನ್ನು ಮುರಿದ ಕೆ. ಎಲ್ ರಾಹುಲ್​

KL Rahul: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಕೆಎಲ್ ರಾಹುಲ್ ಭರ್ಜರಿ ಅರ್ಧಶತಕ ಬಾರಿಸುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡ ಗೆಲುವಿನ ನಗೆ ಬೀರಿತು. ಎಲ್ಎಸ್​ಜಿ ನಾಯಕ ಆಕ್ರಮಣಕಾರಿ ಇನ್ನಿಂಗ್ಸ್ ಪ್ರಾರಂಭಿಸಿದರು. ಅವರ 82 ರನ್ ಗಳು ಎಲ್​​ಎಸ್​​ಜಿ ಗೆಲುವಿನಲ್ಲಿ ಪ್ರಮುಖ ಅಂಶವಾಗಿದೆ. ರವೀಂದ್ರ ಜಡೇಜಾ ಅವರ ಅದ್ಭುತ ಕ್ಯಾಚ್​ನಿಂದಾಗಿ ಔಟ್ ಆಗುವ ಮೊದಲು ಅವರು 9 ಬೌಂಡರಿಗಳು ಮತ್ತು 3 ಸಿಕ್ಸರ್​ಗಳನ್ನು ಬಾರಿಸಿದ್ದರು.

VISTARANEWS.COM


on

KL Rahul
Koo

ಲಕ್ನೋ: ಇಲ್ಲಿನ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. 176 ರನ್​ಗಳ ಗುರಿ ಬೆನ್ನತ್ತಿದ ಕೆ. ಎಲ್​ ರಾಹುಲ್ (KL Rahul) 53 ಎಸೆತಗಳಲ್ಲಿ 82 ರನ್ ಸಿಡಿಸಿ ಔಟಾದರು. ಈ ಮೂಲಕ ಐಪಿಎಲ್​ನಲ್ಲಿ ಹೊಸ ದಾಖಲೆ ಮಾಡಿದರು. ಅವರು ಅತಿ ಹೆಚ್ಚು 50+ ರನ್ ಗಳಿಸಿದ ವಿಕೆಟ್ ಕೀಪರ್ ಆಗಿ ಎಂಎಸ್ ಧೋನಿಯ (MS Dhoni) ದಾಖಲೆಯನ್ನು ಮುರಿದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಕೆಎಲ್ ರಾಹುಲ್ ಭರ್ಜರಿ ಅರ್ಧಶತಕ ಬಾರಿಸುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡ ಗೆಲುವಿನ ನಗೆ ಬೀರಿತು. ಎಲ್ಎಸ್​ಜಿ ನಾಯಕ ಆಕ್ರಮಣಕಾರಿ ಇನ್ನಿಂಗ್ಸ್ ಪ್ರಾರಂಭಿಸಿದರು. ಅವರ 82 ರನ್ ಗಳು ಎಲ್​​ಎಸ್​​ಜಿ ಗೆಲುವಿನಲ್ಲಿ ಪ್ರಮುಖ ಅಂಶವಾಗಿದೆ. ರವೀಂದ್ರ ಜಡೇಜಾ ಅವರ ಅದ್ಭುತ ಕ್ಯಾಚ್​ನಿಂದಾಗಿ ಔಟ್ ಆಗುವ ಮೊದಲು ಅವರು 9 ಬೌಂಡರಿಗಳು ಮತ್ತು 3 ಸಿಕ್ಸರ್​ಗಳನ್ನು ಬಾರಿಸಿದ್ದರು.

ಧೋನಿ ಹಿಂದಿಕ್ಕಿದ ರಾಹುಲ್​

ಕೆಎಲ್ ರಾಹುಲ್ ಐಪಿಎಲ್​​ನಲ್ಲಿ ಹೆಚ್ಚು 50+ ಸ್ಕೋರ್​ಗಳನ್ನು ಗಳಿಸಿದ ವಿಕೆಟ್ ಕೀಪರ್ ಆಗಿ ಸಿಎಸ್​ಕೆ ಮಾಜಿ ನಾಯಕನನ್ನು ಹಿಂದಿಕ್ಕಿದರು. ಇದು ಕೆ.ಎಲ್.ರಾಹುಲ್ ಅವರ 25ನೇ ಅರ್ಧಶತಕ. ಧೋನಿ ಈವರೆಗೆ 24 ಅರ್ಧಶತಕಗಳನ್ನು ಬಾರಿಸಿದ್ದಾರೆ. ಕೆಎಲ್ ರಾಹುಲ್ ಅವರ ಆರಂಭಿಕ ಪಾಲುದಾರ ಕ್ವಿಂಟನ್ ಡಿ ಕಾಕ್ 23 50+ ಸ್ಕೋರ್​​ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಐಪಿಎಲ್​​ನಲ್ಲಿ ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು 50+ ಸ್ಕೋರ್

  • 25- ಕೆಎಲ್ ರಾಹುಲ್
  • 24- ಧೋನಿ
  • 23 – ಡಿ ಕಾಕ್
  • 21 – ಡಿ ಕಾರ್ತಿಕ್
  • 18 – ಉತ್ತಪ್ಪ
  • 17- ರಿಷಭ್ ಪಂತ್
  • 17 – ಸ್ಯಾಮ್ಸನ್
  • 14 – ಸಹಾ
  • 13 – ಗಿಲ್ಕ್ರಿಸ್ಟ್
  • 13 – ಪಾರ್ಥಿವ್
  • 11 – ಇಶಾನ್
  • 10 – ಡಿವಿಲಿಯರ್ಸ್

ಪಂದ್ಯದಲ್ಲಿ ಏನಾಯಿತು?

ಲಖನೌ: ಕೆ. ಎಲ್​. ರಾಹುಲ್​ (82 ರನ್​, 53 ಎಸೆತ, 9 ಫೋರ್, 3 ಸಿಕ್ಸರ್​) ಹಾಗೂ ಕ್ವಿಂಟನ್ ಡಿ ಕಾಕ್​ (54 ರನ್​, 43 ಎಸೆತ, 5 ಫೋರ್​, 1 ಸಿಕ್ಸರ್​) ಜೋಡಿಯ ಅರ್ಧ ಶತಕಗಳ ನೆರವು ಪಡೆದ ಲಕ್ನೊ ಸೂಪರ್ ಜೈಂಟ್ಸ್​ ತಂಡ ಐಪಿಎಲ್​ನ 2024ನೇ (IPL 2024) ಆವೃತ್ತಿಯ 34ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 8 ವಿಕೆಟ್​ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಸತತ ಎರಡು ಸೋಲುಗಳ ಬಳಿಕ ಗೆಲವಿನ ಟ್ರ್ಯಾಕ್​ಗೆ ಮರಳಿದೆ. ಲಕ್ನೊ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಆಡಿದ ಏಳು ಪಂದ್ಯಗಳಲ್ಲಿ ನಾಲ್ಕನೇ ಗೆಲುವಾಗಿದೆ. ಅತ್ತ ಚೆನ್ನೈ ತಂಡ ಆಡಿರುವ ಏಳರಲ್ಲಿ ಮೂರನೇ ಸೋಲಿಗೆ ಒಳಗಾಯಿತು.

ಇದನ್ನೂ ಓದಿ: IPL 2024 : ಪಾಂಡ್ಯ ಅಂದ್ರೆ ಡೋಂಟ್​ ಕೇರ್​, ರೋಹಿತ್​ಗೆ ಫುಲ್​ ರೆಸ್ಪೆಕ್ಟ್​; ಯುವ ಬೌಲರ್​ನ ನಡೆ ಫುಲ್ ವೈರಲ್​

ಇಲ್ಲಿನ ಭಾರತ ರತ್ನ ಶ್ರೀ ಅಟಲ್​ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಮಾಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ಆರಂಭಿಕ ವಿಕೆಟ್​ಗಳ ನಷ್ಟದ ಹೊರತಾಗಿಯೂ ಕೊನೇ ಹಂತದಲ್ಲಿ ಉತ್ತಮವಾಗಿ ಆಡಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 176 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಲಕ್ನೊ ತಂಡ 19 ಓವರ್​ಗಳಲ್ಲಿ 2ವಿಕೆಟ್ ನಷ್ಟಕ್ಕೆ 180 ರನ್​ ಬಾರಿಸಿ ಗೆಲುವು ಸಾಧಿಸಿತು.

ಇಲ್ಲಿನ ಭಾರತ ರತ್ನ ಶ್ರೀ ಅಟಲ್​ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಮಾಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ಆರಂಭಿಕ ವಿಕೆಟ್​ಗಳ ನಷ್ಟದ ಹೊರತಾಗಿಯೂ ಕೊನೇ ಹಂತದಲ್ಲಿ ಉತ್ತಮವಾಗಿ ಆಡಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 176 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಲಕ್ನೊ ತಂಡ 19 ಓವರ್​ಗಳಲ್ಲಿ 2ವಿಕೆಟ್ ನಷ್ಟಕ್ಕೆ 180 ರನ್​ ಬಾರಿಸಿ ಗೆಲುವು ಸಾಧಿಸಿತು.

ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಚೆನ್ನೈ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಅಜಿಂಕ್ಯ ರಹಾನೆ 36 ರನ್ ಬಾರಿಸಿದ ಹೊರತಾಗಿಯೂ ರಚಿನ್ ರವಿಂದ್ರ ಶೂನ್ಯಕ್ಕೆ ನಿರ್ಗಮಿಸಿದರು. ನಾಯಕ ಋತುರಾಜ್​ 17 ರನ್​ಗೆ ಸೀಮಿತಗೊಂಡರು. ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ರವಿಂದ್ರ ಜಡೇಜಾ ನಿಧಾನವಾಗಿ ಇನಿಂಗ್ಸ್ ಕಟ್ಟಿದರು. ಅವರು 40 ಎಸೆತ ಬಳಸಿಕೊಂಡು 57 ರನ್ ಬಾರಿಸಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು. ಚೆನ್ನೈತಂಡದ ಆಪತ್ಬಾಂಧವ ಶಿವಂ ದುಬೆ 3 ರನ್​ಗೆ ಸೀಮಿತಗೊಂಡರೆ ರಿಜ್ವಿ ಕೇವಲ 1 ರನ್​ಗೆ ಔಟಾದರು. 90 ರನ್​ಗೆ 5 ವಿಕೆಟ್​ ಕಳೆದುಕೊಂಡ ಚೆನ್ನೈಗೆ ಕೊನೆಯಲ್ಲಿ ಮೊಯಿನ್ ಅಲಿ 30 ರನ್​ ಹಾಗೂ ಮಹೇಂದ್ರ ಸಿಂಗ್ ಧೋನಿ 28 ರನ್ ಬಾರಿಸಿದರು.

Continue Reading

ಕ್ರೀಡೆ

IPL 2024 : ಸೋಲಿನ ಬಳಿಕ ಚೆನ್ನೈ ತಂಡದ ಅಂಕಪಟ್ಟಿಯಲ್ಲಿನ ಸ್ಥಾನವೆಷ್ಟು? ಇಲ್ಲಿದೆ ಎಲ್ಲ ವಿವರ

IPL 2024: ಅಂಕಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್​ ಅಮೋಘ 12 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಕೆಕೆಆರ್​ ತಂಡ 8 ಅಂಕಗಳೊಂದಿಗೆ 2ನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ಮೂಲದ ಆರ್​ಸಿಬಿ ಇನ್ನೂ ಉದ್ಧಾರವಾಗಿಲ್ಲ. ಕೊನೇ ಸ್ಥಾನದಲ್ಲಿಯೇ ಇದೆ.

VISTARANEWS.COM


on

IPL 2024
Koo

ಲಖನೌ: ಶುಕ್ರವಾರ ಇಲ್ಲಿ ನಡೆದ ನಡೆದ ಐಪಿಎಲ್​ 2024ರ (IPL 2024) ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ತಂಡದ ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧ 8 ವಿಕೆಟ್​ಗಳ ಭರ್ಜರಿ ಗೆಲುವು ಪಡೆದಿದೆ. ಈ ಪಂದ್ಯದ ಬಳಿಕವೂ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಯಾಕೆಂದರೆ ಎರಡೂ ತಂಡಗಳು ಇದೀಗ ನಾಲ್ಕು ಗೆಲುವುಗಳ ಮೂಲಕ 8 ಅಂಕಗಳನ್ನು ಪಡೆದುಕೊಂಡಿದೆ. ಆದರೆ ಚೆನ್ನೈ ತಂಡ ಉತ್ತಮ ರನ್​ರೇಟ್ ಹೊಂದಿರುವ ಕಾರಣ ಮೂರನೇ ಸ್ಥಾನದಲ್ಲಿದೆ. ಗೆದ್ದ ಲಕ್ನೊ ತಂಡದ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​76112 (+0.677)
ಕೆಕೆಆರ್​​6428 (+1.399)
ಚೆನ್ನೈ ಸೂಪರ್​ ಕಿಂಗ್ಸ್​​7438 (+0.529)
ಹೈದರಾಬಾದ್​​6428(+0.502)
ಲಕ್ನೋ7488 (+0.123)
ಡೆಲ್ಲಿ ಕ್ಯಾಪಿಟಲ್ಸ್​​7346 (-0.074)
ಮುಂಬೈ​7346 (-0.133)
ಗುಜರಾತ್7346 (-1.303)
ಪಂಜಾಬ್​7254 (-0.251)
ಆರ್​ಸಿಬಿ7162 (-1.185)

ಅಂಕಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್​ ಅಮೋಘ 12 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಕೆಕೆಆರ್​ ತಂಡ 8 ಅಂಕಗಳೊಂದಿಗೆ 2ನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ಮೂಲದ ಆರ್​ಸಿಬಿ ಇನ್ನೂ ಉದ್ಧಾರವಾಗಿಲ್ಲ. ಕೊನೇ ಸ್ಥಾನದಲ್ಲಿಯೇ ಇದೆ.

ಲಕ್ನೊ ತಂಡಕ್ಕೆ ಭರ್ಜರಿ ಜಯ

ಲಖನೌ: ಕೆ. ಎಲ್​. ರಾಹುಲ್​ (82 ರನ್​, 53 ಎಸೆತ, 9 ಫೋರ್, 3 ಸಿಕ್ಸರ್​) ಹಾಗೂ ಕ್ವಿಂಟನ್ ಡಿ ಕಾಕ್​ (54 ರನ್​, 43 ಎಸೆತ, 5 ಫೋರ್​, 1 ಸಿಕ್ಸರ್​) ಜೋಡಿಯ ಅರ್ಧ ಶತಕಗಳ ನೆರವು ಪಡೆದ ಲಕ್ನೊ ಸೂಪರ್ ಜೈಂಟ್ಸ್​ ತಂಡ ಐಪಿಎಲ್​ನ 2024ನೇ (IPL 2024) ಆವೃತ್ತಿಯ 34ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 8 ವಿಕೆಟ್​ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಸತತ ಎರಡು ಸೋಲುಗಳ ಬಳಿಕ ಗೆಲವಿನ ಟ್ರ್ಯಾಕ್​ಗೆ ಮರಳಿದೆ. ಲಕ್ನೊ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಆಡಿದ ಏಳು ಪಂದ್ಯಗಳಲ್ಲಿ ನಾಲ್ಕನೇ ಗೆಲುವಾಗಿದೆ. ಅತ್ತ ಚೆನ್ನೈ ತಂಡ ಆಡಿರುವ ಏಳರಲ್ಲಿ ಮೂರನೇ ಸೋಲಿಗೆ ಒಳಗಾಯಿತು.

ಇಲ್ಲಿನ ಭಾರತ ರತ್ನ ಶ್ರೀ ಅಟಲ್​ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಮಾಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ಆರಂಭಿಕ ವಿಕೆಟ್​ಗಳ ನಷ್ಟದ ಹೊರತಾಗಿಯೂ ಕೊನೇ ಹಂತದಲ್ಲಿ ಉತ್ತಮವಾಗಿ ಆಡಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 176 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಲಕ್ನೊ ತಂಡ 19 ಓವರ್​ಗಳಲ್ಲಿ 2ವಿಕೆಟ್ ನಷ್ಟಕ್ಕೆ 180 ರನ್​ ಬಾರಿಸಿ ಗೆಲುವು ಸಾಧಿಸಿತು.

ಇದನ್ನೂ ಓದಿ : Narendra Modi : ವಿಶ್ವವೇ ನೋಡಿದೆ.. ಯುಪಿ ರ್ಯಾಲಿಯಲ್ಲಿ ಶಮಿಯನ್ನು ಹೊಗಳಿದ ಮೋದಿ

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಲಕ್ನೊ ತಂಡದ ಪರ ಆರಂಭಿಕರಾದ ಕ್ವಿಂಟನ್ ಡಿ ಕಾಕ್ ಹಾಗೂ ಕೆ. ಎಲ್​ ರಾಹುಲ್ ಉತ್ತಮವಾಗಿ ಆಡಿದರು. ಈ ಜೋಡಿ ಮೊದಲ ವಿಕೆಟ್​ಗೆ 134 ರನ್ ಬಾರಿಸಿತು. ಅಷ್ಟರಲ್ಲಿ ಅವರಿಬ್ಬರೂ ಅರ್ಧ ಶತಕಗಳನ್ನು ದಾಖಲಿಸಿದ್ದರು. ನಿಧಾನಗತಿಯ ಪಿಚ್​ನಲ್ಲಿ ಲಕ್ನೊ ಆಟಗಾರರು ಇನಿಂಗ್ಸ್​ ಕಟ್ಟಿದರು. ಸ್ಟ್ರೈಕ್​ ರೇಟ್ ಕಡಿಮೆ ಇದ್ದ ಹೊರತಾಗಿಯೂ ಗೆಲುವಿನಗೆ ಪೂರಕವಾದ ರನ್​ಗಳನ್ನು ಬಾರಿಸಿದರು. ಕ್ವಿಂಟನ್​ ಚೆನ್ನೈ ಬೌಲರ್​ ಮುಸ್ತಾಫಿಜುರ್ ಎಸೆತಕ್ಕೆ ಔಟಾದರೆ, ರಾಹುಲ್ ಪತಿರಾಣಾಗೆ ವಿಕೆಟ್​ ಒಪ್ಪಿಸಿದರು. ನಿಕೋಲಸ್ ಪೂರನ್ 23 ರನ್ ಸೇರಿಸಿದರು.

ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಚೆನ್ನೈ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಅಜಿಂಕ್ಯ ರಹಾನೆ 36 ರನ್ ಬಾರಿಸಿದ ಹೊರತಾಗಿಯೂ ರಚಿನ್ ರವಿಂದ್ರ ಶೂನ್ಯಕ್ಕೆ ನಿರ್ಗಮಿಸಿದರು. ನಾಯಕ ಋತುರಾಜ್​ 17 ರನ್​ಗೆ ಸೀಮಿತಗೊಂಡರು. ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ರವಿಂದ್ರ ಜಡೇಜಾ ನಿಧಾನವಾಗಿ ಇನಿಂಗ್ಸ್ ಕಟ್ಟಿದರು. ಅವರು 40 ಎಸೆತ ಬಳಸಿಕೊಂಡು 57 ರನ್ ಬಾರಿಸಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು. ಚೆನ್ನೈತಂಡದ ಆಪತ್ಬಾಂಧವ ಶಿವಂ ದುಬೆ 3 ರನ್​ಗೆ ಸೀಮಿತಗೊಂಡರೆ ರಿಜ್ವಿ ಕೇವಲ 1 ರನ್​ಗೆ ಔಟಾದರು. 90 ರನ್​ಗೆ 5 ವಿಕೆಟ್​ ಕಳೆದುಕೊಂಡ ಚೆನ್ನೈಗೆ ಕೊನೆಯಲ್ಲಿ ಮೊಯಿನ್ ಅಲಿ 30 ರನ್​ ಹಾಗೂ ಮಹೇಂದ್ರ ಸಿಂಗ್ ಧೋನಿ 28 ರನ್ ಬಾರಿಸಿದರು.

Continue Reading
Advertisement
MS Dhoni
ಪ್ರಮುಖ ಸುದ್ದಿ2 mins ago

MS Dhoni : ಧೋನಿ ಆಡಲು ಇಳಿದಾಗ ಸ್ಟೇಡಿಯಮ್​ನಲ್ಲಿ ಶಬ್ದ ಮಾಲಿನ್ಯ; ಡಿಕಾಕ್ ಹೆಂಡತಿಯ ಪೋಸ್ಟ್​ ವೈರಲ್​

Impact Player Rule
ಕ್ರೀಡೆ21 mins ago

Impact Player Rule : ಇಂಪ್ಯಾಕ್ಟ್​ ಪ್ಲೇಯರ್​​ ಸಿಕ್ಕಾಪಟ್ಟೆ ವಿರೋಧ; ಇದೀಗ ಋತುರಾಜ್​ ಸರದಿ

Tillu Square anupama parameswaran movie tillu square release date
ಒಟಿಟಿ38 mins ago

Tillu Square: ಅನುಪಮಾ ಪರಮೇಶ್ವರನ್‌‌ ಸಿನಿಮಾ ಒಟಿಟಿ ಬಿಡುಗಡೆ ದಿನಾಂಕ ಬಹಿರಂಗ

rowdy sheeters attack bangalore
ಕ್ರೈಂ48 mins ago

Rowdy Sheeters: ಬೆಂಗಳೂರಲ್ಲಿ ಮತ್ತೆ ಝಳಪಿಸಿದ ಮಚ್ಚು ಲಾಂಗ್, ಬೀದಿಯಲ್ಲೇ ಅಟ್ಟಾಡಿಸಿದರು!

KL Rahul
ಪ್ರಮುಖ ಸುದ್ದಿ48 mins ago

KL Rahul : ಐಪಿಎಲ್​ನಲ್ಲಿ ಧೋನಿಯ ದಾಖಲೆಯೊಂದನ್ನು ಮುರಿದ ಕೆ. ಎಲ್ ರಾಹುಲ್​

Neha Murder Case dhruva sarja priya savadi and kavya shastry condemn
ಸಿನಿಮಾ1 hour ago

Neha Murder Case: ನೇಹಾ ಹತ್ಯೆ: ಅಪರಾಧಿಗೆ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ

IPL 2024
ಕ್ರೀಡೆ1 hour ago

IPL 2024 : ಸೋಲಿನ ಬಳಿಕ ಚೆನ್ನೈ ತಂಡದ ಅಂಕಪಟ್ಟಿಯಲ್ಲಿನ ಸ್ಥಾನವೆಷ್ಟು? ಇಲ್ಲಿದೆ ಎಲ್ಲ ವಿವರ

cet exam karnataka exam authority
ಪ್ರಮುಖ ಸುದ್ದಿ1 hour ago

CET Exam: ಸಿಇಟಿ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಭಾರೀ ಗೊಂದಲ, ದೂರು ನೀಡಲು ಏ.27ರವರೆಗೆ ಕಾಲಾವಕಾಶ

Ancient snake vasuki indicus
ವೈರಲ್ ನ್ಯೂಸ್2 hours ago

Ancient snake: ಭಾರತದಲ್ಲಿತ್ತು 1000 ಕಿಲೋ ತೂಕ, 50 ಅಡಿ ಉದ್ದದ ʼವಾಸುಕಿʼ ಹಾವು!

charlie chaplin rajamarga
ಪ್ರಮುಖ ಸುದ್ದಿ2 hours ago

ರಾಜಮಾರ್ಗ ಅಂಕಣ: ಸಿನೆಮಾ ಜಗತ್ತಿನ ಮೊದಲ ಸೂಪರ್ ಸ್ಟಾರ್ ಚಾರ್ಲಿ ಚಾಪ್ಲಿನ್!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ5 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ18 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ1 day ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20245 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20246 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ1 week ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

ಟ್ರೆಂಡಿಂಗ್‌