ಕ್ರಿಕೆಟ್
Asia Cup 2023 : ಸಿರಾಜ್‌ರಿಂದ 10 ಓವರ್ ಹಾಕಿಸುವ ಉದ್ದೇಶವಿತ್ತು, ಟ್ರೈನರ್ ಬಿಡಲಿಲ್ಲ ಎಂದ ರೋಹಿತ್
ಏಷ್ಯಾ ಕಪ್ ಫೈನಲ್ (Asia Cup 2023) ಸಿರಾಜ್ ಅವರ ದಿನವಾಗಿತ್ತು ಎಂದು ರೋಹಿತ್ ಶರ್ಮ ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿ: ಏಷ್ಯಾ ಕಪ್ ಫೈನಲ್ನಲ್ಲಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರಿಂದ ಪೂರ್ಣ 10 ಓವರ್ಗಳನ್ನು ಹಾಕಿಸುವ ಉದ್ದೇಶ ಇತ್ತು. ಆದರೆ ತರಬೇತುದಾರರು ಅವಕಾಶ ಕೊಡಲಿಲ್ಲ ಎಂಬುದಾಗಿ ನಾಯಕ ವಿರಾಟ್ ಕೊಹ್ಲಿ ಬಹಿರಂಗ ಮಾಡಿದ್ದಾರೆ. ಮೊಹಮ್ಮದ್ ಸಿರಾಜ್ ತಮ್ಮ 7 ಓವರ್ ಸ್ಪೆಲ್ನಲ್ಲಿ 21 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. ಇನ್ನಷ್ಟು ಬೌಲಿಂಗ್ ಮಾಡಿದ್ದರೆ ಅವರಿಗೆ ಇನ್ನಷ್ಟು ವಿಕೆಟ್ಗಳು ಸಿಗುತ್ತಿದ್ದವು ಎಂದು ಅವರು ಪಂದ್ಯದ ಬಳಿಕ ಬಹಿರಂಗ ಮಾಡಿದ್ದಾರೆ.
ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತ ನಾಯಕ, ಮೊಹಮ್ಮದ್ ಸಿರಾಜ್ ಅವರನ್ನು ಭಾರತದ ಹೊಸ ಹೀರೋ ಎಂದು ಶ್ಲಾಘಿಸಿದರ. ವೇಗಿ ಹೆಚ್ಚು ಬೌಲಿಂಗ್ ಮಾಡಲು ಉತ್ಸಾಹ ಹೊಂದಿದ್ದರು. ಆದರೆ 2023 ರ ಏಕದಿನ ವಿಶ್ವಕಪ್ಗೆ ಮುಂಚಿತವಾಗಿ ಅವರ ಮೇಲೆ ಅನಗತ್ಯ ಹೊರೆಯನ್ನು ಹಾಕಲು ಭಾರತೀಯ ತರಬೇತುದಾರ ಬಯಸಲಿಲ್ಲ ಎಂದು ಹೇಳಿದರು.
“ಆ ಸ್ಪೆಲ್ನಲ್ಲಿ ಅವರು 7 ಓವರ್ಗಳನ್ನು ಎಸೆದರು. 7 ಓವರ್ಗಳು ಅವರಿಗೆ ಸಾಕಷ್ಟಾಯಿತು. ಅವರು ಇನ್ನಷ್ಟು ಬೌಲಿಂಗ್ ಮಾಡಬೇಕೆಂದು ನಾನು ಬಯಸಿದ್ದೆ. ಆದರೆ ಬೇಡ ಎಂಬ ಸಂದೇಶ ನಮ್ಮ ತರಬೇತುದಾರರಿಂದ ನನಗೆ ಸಂದೇಶ ಬಂತು. ಅವರು ಬೌಲಿಂಗ್ ಮಾಡಲು ಸಾಕಷ್ಟು ಉತ್ಸಾಹ ಹೊಂದಿದ್ದರು. ಅದು ಯಾವುದೇ ಬೌಲರ್ ಅಥವಾ ಸ್ವಭಾವವಾಗಿದೆ. ಅವಕಾಶವನ್ನು ಸಿಕ್ಕಿದಾಗ ಇನ್ನಷ್ಟು ಸಾಧನೆ ಮಾಡಲು ಬಯಸುತ್ತಾರೆ. ಆದರೆ, ವಿರ್ಶವ ಕಪ್ ಮೊದಲು ಅವರಿಗೆ ಹೆಚ್ಚಿನ ಹೊರೆ ಹೊರಿಸುವುದು ನಮ್ಮ ಉದ್ದೇಶವಲ್ಲ.. ಹೀಗಾಗಿ ಬೌಲಿಂಗ್ ಮುಂದುವರಿಸಲಿಲ್ಲ ಎಂದು ಹೇಳಿದರು.
ಸಿರಾಜ್ 2023ರ ಜನವರಿಯಲ್ಲಿ ಶ್ರೀಲಂಕಾ ವಿರುದ್ಧ ಮಿಂಚಿದ್ದರು. ಸರಣಿಯ ಕೊನೆಯ ಏಕದಿನ ಪಂದ್ಯವನ್ನು ಆಡಿದ ಸಿರಾಜ್ ಶ್ರೀಲಂಕಾದ ಬ್ಯಾಟಿಂಗ್ ಕ್ರಮಾಂಕವನ್ನು ಅಳಿಸಿಹಾಕಿದರು ಮತ್ತು ಹಲವಾರು ಓವರ್ಗಳನ್ನು ಒಂದೇ ಬಾರಿಗೆ ಎಸೆದದಿ್ದರು.
ಸಿರಾಜ್ ಸಾಧನೆ ನನಗೆ ನೆನಪಿದೆ. ಅವರು ತಿರುವನಂತಪುರದಲ್ಲಿ ಶ್ರೀಲಂಕಾ ವಿರುದ್ಧ ಇದೇ ರೀತಿಯಲ್ಲಿ ಬೌಲಿಂಗ್ ಮಾಡಿದ್ದರು. ಅವರು 4 ವಿಕೆಟ್ಗಳನ್ನು ಪಡೆದಿದ್ದರು. ಅವರು ಸತತಬಾಗಿ 8ರಿಂ 9 ಒವರ್ಗಳನ್ನು ಎಸೆದಿದ್ದರು ಎಂದು ನಾನು ಭಾವಿಸುತ್ತೇನೆ ಎಂದು ಶರ್ಮಾ ಹೇಳಿದರು.
ವೇಗದ ಬೌಲರ್ ಸಿರಾಜ್ ಪ್ರಯತ್ನವನ್ನು ನಾಯಕ ರೋಹಿತ್ ಶ್ಲಾಘಿಸಿದರು. ಪಂದ್ಯದಲ್ಲಿ ಸಿರಾಜ್ ಇತರರಿಗಿಂತ ಹೆಚ್ಚು ಸ್ವಿಂಗ್ ಕಂಡುಕೊಂಡರು ಎಂದು ಹೇಳಿದರು. ಪಂದ್ಯದ ಸಮಯದಲ್ಲಿ ಭಾರತವು ವಿಭಿನ್ನ ಹೀರೊ ಪತ್ತೆಯಾಗಿದ್ದಾರೆ. ಏಷ್ಯಾ ಕಪ್ ಫೈನಲ್ ಸಿರಾಜ್ ಅವರ ದಿನವಾಗಿತ್ತು ಎಂದು ಶರ್ಮಾ ಹೇಳಿದರು.
ಪಿಚ್ ನಾನೇನೂ ಮಾತನಾಡಲಾರೆ. ಲಂಕಾ ತಂಡ ಹೇಗೆ ಬ್ಯಾಟಿಂಗ್ ಮಾಡಿತು ಎಂದೂ ಹೇಳಲಾರೆ ಎಂದರು. ನಾವು ಹೇಗೆ ಬೌಲಿಂಗ್ ಮಾಡಿದ್ದೇವೆ ಎಂಬುದರ ಬಗ್ಗೆ ಮಾತ್ರ ನಾನು ಮಾತನಾಡಬಲ್ಲೆ. ಸಿರಾಜ್ ನಿಸ್ಸಂಶಯವಾಗಿ ಇತರ ಎಲ್ಲ ಬೌಲರ್ಗಳಿಗಿಂತ ಸ್ವಲ್ಪ ಹೆಚ್ಚು ಸ್ವಿಂಗ್ ಚೆಂಡನ್ನು ಪಡೆದರು,ಎಂದು ರೋಹಿತ್ ಹೇಳಿದ್ದಾರೆ.
ಕ್ರಿಕೆಟ್
Mohammed Shami : ಬೌಲಿಂಗ್ನಲ್ಲಿ ಹೊಸ ಮಿಂಚು ಸೃಷ್ಟಿಸಿದ ಮೊಹಮ್ಮದ್ ಶಮಿ; ಏನಿದು ಸಾಧನೆ
ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೊಹಮ್ಮದ್ ಶಮಿ (Mohammed Shami) ಐದು ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾವನ್ನು 50 ಓವರ್ಗಳಿಎಗ ಕೇವಲ 276 ರನ್ಗಳಿಗೆ ನಿಯಂತ್ರಿಸಲು ಸಹಾಯ ಮಾಡಿದರು.
ಮೊಹಾಲಿ: ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಅನುಭವಿ ವೇಗದ ಬೌಲರ್ ಏಕದಿನ ಕ್ರಿಕೆಟ್ನಲ್ಲಿ ತಮ್ಮ ಅತ್ಯುತ್ತಮ ಬೌಲಿಂಗ್ ಅಂಕಿ ಅಂಶಗಳನ್ನು ದಾಖಲಿಸಿದ್ದಾರೆ. ಅವರು 51 ರನ್ಗಳಿಗೆ 5 ವಿಕೆಟ್ ಉರುಳಿಸಿದ್ದಾರೆ. ಈ ಮೂಲಕ ಪ್ರವಾಸಿ ತಂಡವನ್ನು 50 ಓವರ್ಗಳಿಗೆ 276 ರನ್ಗಳಿಗೆ ಸೀಮಿತಗೊಳಿಸಲು ಸಹಾಯ ಮಾಡಿದರು. ಡೇವಿಡ್ ವಾರ್ನರ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿದ ಮಿಚೆಲ್ ಮಾರ್ಷ್ ವಿಕೆಟ್ ಪಡೆಯುವ ಮೂಲಕ ಶಮಿ ಆರಂಭಿಕ ಆಘಾತ ನೀಡಿದ್ದರು.
ಅದ್ಭುತ ಎಸೆತದಿಂದ ಮಾರ್ಷ್ ಔಟ್ ಆದರು. ಅವರು ವಿಕೆಟ್ನಿಂದ ಹೊರಕ್ಕೆ ಹೋಗುತ್ತಿದ್ದ ಚೆಂಡನ್ನು ಮುಟ್ಟಲು ಯತ್ನಿಸಿ ಶುಬ್ಮನ್ ಗಿಲ್ ಕ್ಯಾಚ್ ಹಿಡಿಯುವ ಮೂಲಕ ನಿರ್ಗಮಿಸಿದರು.
Mohammed Shami has made a strong case for his inclusion in India's starting XI for #CWC23 💥#INDvAUS pic.twitter.com/u1kAPL54kN
— ICC (@ICC) September 22, 2023
ಶಮಿ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಅವರಿಗೂ ಆಘಾತ ನೀಡಿದರು. ಸ್ಮಿತ್ 41 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು ಬಲಗೈ ವೇಗಿ ಶಮಿ ಅವರನ್ನು ಬೌಲ್ಡ್ ಮಾಡಿದರು. 33 ವರ್ಷದ ವೇಗಿ ಆ ಬಳಿಕ ಮಾರ್ಕಸ್ ಸ್ಟೋಯ್ನಿಸ್, ಮ್ಯಾಥ್ಯೂ ಶಾರ್ಟ್ ಮತ್ತು ಸೀನ್ ಅಬಾಟ್ ಅವರನ್ನು ಔಟ್ ಮಾಡಿ ಅಂತಿಮ ಮೂರು ವಿಕೆಟ್ಗಳನ್ನು ಪಡೆದರು. ಈ ಮೂಲಕ ಐದು ವಿಕೆಟ್ ಸಾಧನೆ ಮಾಡಿದರು.
ಉತ್ತಮ ಸಾಧನೆ
2019ರ ವಿಶ್ವಕಪ್ನಲ್ಲಿ ಬರ್ಮಿಂಗ್ಹಮ್ನ ಎಜ್ಬಾಸ್ಟನ್ನಲ್ಲಿ ಇಂಗ್ಲೆಂಡ್ ವಿರುದ್ಧ 69 ರನ್ಗೆ 5 ವಿಕೆಟ್ ಪಡೆದಿದ್ದು ಅವರ ಹಿಂದಿನ ಅತ್ಯುತ್ತಮ ಸಾಧನೆಯಾಗಿತ್ತು. ಇದು ಏಕದಿನ ಕ್ರಿಕೆಟ್ನಲ್ಲಿ ಶಮಿ ಅವರ ಎರಡನೇ ಐದು ವಿಕೆಟ್ ಸಾಧನೆಯಾಗಿದೆ. ಅಮ್ರೋಹಾ ಮೂಲದ (ಉತ್ತರ ಪ್ರದೇಶ) ಬೌಲರ್ 50 ಓವರ್ಗಳ ಸ್ವರೂಪದಲ್ಲಿ ಒಂಬತ್ತು ನಾಲ್ಕು ವಿಕೆಟ್ಗಳನ್ನು ಪಡೆದಿದ್ದಾರೆ.
ಈ ಪಂದ್ಯದಲ್ಲಿ ಶಮಿ ಗಳಿಸಿದ ಏಕೈಕ ದಾಖಲೆ ಮಾತ್ರವಲ್ಲ, ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಪರ ಪಂದ್ಯವೊಂದರಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶಮಿ ಭಾರತದ ಮಾಜಿ ವೇಗಿ ಮತ್ತು ಅಖಿಲ ಭಾರತ ಹಿರಿಯ ಪುರುಷರ ಆಯ್ಕೆ ಸಮಿತಿಯ ಪ್ರಸ್ತುತ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರನ್ನು ಹಿಂದಿಕ್ಕಿದ್ದಾರೆ.
ಶಮಿ ಈಗ ಏಕದಿನ ಪಂದ್ಯಗಳಲ್ಲಿ ಕಾಂಗರೂ ಬಳಗದ ವಿರುದ್ಧ 37 ವಿಕೆಟ್ಗಳನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಮೆನ್ ಇನ್ ಬ್ಲೂ ಪರ ಅತಿ ಹೆಚ್ಚು ವಿಕೆಟ್ (45) ಪಡೆದ ಕಪಿಲ್ ದೇವ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಮೊಹಾಲಿಯಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ 277 ರನ್ಗಳ ಗುರಿ ಬೆನ್ನತ್ತಿದಿದೆ. ಸರಣಿಯ ಎರಡನೇ ಪಂದ್ಯ ಇಂದೋರ್ನಲ್ಲಿ ಮತ್ತು ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ರಾಜ್ಕೋಟ್ನಲ್ಲಿ ನಡೆಯಲಿದೆ.
ಕ್ರಿಕೆಟ್
T20 World Cup : 2024 ಟಿ20 ವಿಶ್ವ ಕಪ್ ಪಂದ್ಯಗಳು ಎಲ್ಲೆಲ್ಲಿ ನಡೆಯುತ್ತವೆ ಎಂಬ ಮಾಹಿತಿ ಇಲ್ಲಿದೆ
ಅಮೆರಿಕದ ಮೂರು ಸ್ಥಳ ಹಾಗೂ ವೆಸ್ಟ್ ಇಂಡೀಸ್ನ 7 ಸ್ಥಳಗಳು ಸೇರಿ ಒಟ್ಟು 10 ಕಡೆ ವಿಶ್ವ ಕಪ್ (T20 World Cup) ಪಂದ್ಯಗಳು ಆಯೋಜನೆಗೊಳ್ಳಲಿವೆ.
ದುಬೈ: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಐಸಿಸಿ ಶುಕ್ರವಾರ ಪ್ರಕಟಿಸಿದೆ. ವೆಸ್ಟ್ ಇಂಡೀಸ್ ಮತ್ತು ಯುಎಸ್ಎ (ಅಮೆರಿಕ) ಮುಂದಿನ ವರ್ಷ ಜೂನ್ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಅನ್ನು ಜಂಟಿಯಾಗಿ ಆಯೋಜಿಸಲಿದೆ. ಮೆಗಾ ಈವೆಂಟ್ನಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿವೆ. ಐಸಿಸಿ ಬುಧವಾರ ಯುಎಸ್ಎಯಲ್ಲಿ ಪಂದ್ಯ ನಡೆಯಲಿರುವ ಮೂರು ಸ್ಥಳಗಳನ್ನು ಬಹಿರಂಗಪಡಿಸಿದೆ. ಕೆರಿಬಿಯನ್ ರಾಷ್ಟ್ರಗಳಿಂದ ಏಳು ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ.
ಆಂಟಿಗುವಾ ಮತ್ತು ಬಾರ್ಬುಡಾ, ಬಾರ್ಬಡೋಸ್, ಡೊಮಿನಿಕಾ, ಗಯಾನಾ, ಸೇಂಟ್ ಲೂಸಿಯಾ, ಟ್ರಿನಿಡಾಡ್ ಮತ್ತು ಟೊಬಾಗೊ ಮತ್ತು ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ ವೆಸ್ಟ್ ಇಂಡೀಸ್ನಿಂದ ಆಯ್ಕೆಯಾದ ಏಳು ಸ್ಥಳಗಳಾಗಿವೆ, ಡಲ್ಲಾಸ್ನ ಗ್ರ್ಯಾಂಡ್ ಪ್ರೈರಿ, ಫ್ಲೋರಿಡಾದ ಬ್ರೋವರ್ಡ್ ಕೌಂಟಿ ಮತ್ತು ನ್ಯೂಯಾರ್ಕ್ನ ನಸ್ಸಾವು ಕೌಂಟಿ ಯುಎಸ್ಎಯಲ್ಲಿ ವಿಶ್ವ ಕಪ್ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.
All the venues for the ICC Men's #T20WorldCup 2024 have been locked in 🔒
— ICC (@ICC) September 22, 2023
More 👇
ಐಸಿಸಿ ಪುರುಷರ ಟಿ 20 ವಿಶ್ವಕಪ್ಗೆ ಆತಿಥ್ಯ ವಹಿಸಲಿರುವ ಏಳು ಕೆರಿಬಿಯನ್ ಸ್ಥಳಗಳನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ, ಟ್ರೋಫಿಗಾಗಿ 20 ತಂಡಗಳು ಸ್ಪರ್ಧಿಸುತ್ತಿವೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಜೆಫ್ ಅಲ್ಲಾರ್ಡೈಸ್ ಹೇಳಿದರು. ಅವೆಲ್ಲವೂ ಆಟಗಾರರು ಮತ್ತು ಅಭಿಮಾನಿಗಳೊಂದಿಗೆ ಜನಪ್ರಿಯ ಸ್ಥಳಗಳಾಗಿವೆ. ಇದು ಈವೆಂಟ್ಗೆ ಅದ್ಭುತ ರೂಪ ಕೊಡಲಿದೆ ಎಂದು ಹೇಳಿದ್ದಾರೆ.
ವೆಸ್ಟ್ ಇಂಡೀಸ್ಗೆ ಮೂರನೇ ಆತಿಥ್ಯ
ಇದು ವೆಸ್ಟ್ ಇಂಡೀಸ್ ಆತಿಥ್ಯ ವಹಿಸುತ್ತಿರುವ ಮೂರನೇ ಐಸಿಸಿ ಹಿರಿಯ ಪುರುಷರ ಪಂದ್ಯಾವಳಿಯಾಗಿದೆ. ಈ ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳಿಗೆ ಕೆರಿಬಿಯನ್ ನಲ್ಲಿ ಕ್ರಿಕೆಟ್ ಅನ್ನು ಆನಂದಿಸುವ ವಿಶಿಷ್ಟ ಅನುಭವ ನೀಡಲಿದೆ. ಕ್ರೀಡೆಯ ಕಡೆಗೆ ನಮ್ಮ ನಿರಂತರ ಬದ್ಧತೆ ಮತ್ತು ಬೆಂಬಲಕ್ಕಾಗಿ ಕ್ರಿಕೆಟ್ ವೆಸ್ಟ್ ಇಂಡೀಸ್ ಮತ್ತು ಏಳು ಆತಿಥೇಯ ಸರ್ಕಾರಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.
ಕ್ರಿಕೆಟ್ ವೆಸ್ಟ್ ಇಂಡೀಸ್ (ಸಿಡಬ್ಲ್ಯುಐ) ಈ ಹಿಂದೆ 2007 ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಮತ್ತು ನಂತರ 2010 ರಲ್ಲಿ ಟಿ 20 ವಿಶ್ವಕಪ್ ಅನ್ನು ಆಯೋಜಿಸಿತ್ತು. ಸಿಡಬ್ಲ್ಯುಐ ಮುಖ್ಯಸ್ಥ ಜಾನಿ ಗ್ರೇವ್ಸ್ ಅವರು ಮೆಗಾ ಐಸಿಸಿ ಈವೆಂಟ್ ಅನ್ನು ಆಯೋಜಿಸಲು ಮಂಡಳಿಯ ಉತ್ಸಾಹವನ್ನು ಪ್ರಕಟಿಸಿದ್ದಾರೆ ಆಯ್ಕೆಯಾದ ಎಲ್ಲಾ ಏಳು ಸ್ಥಳಗಳು ಮೇಲ್ದರ್ಜೆಗೇರುವ ಅರ್ಹತೆ ಹೊಂದಿವೆ ಎಂದು ಹೇಳಿದರು.
ಇದನ್ನೂ ಓದಿ : World Cup 2023 : ಏಕ ದಿನ ವಿಶ್ವ ಕಪ್ನ ಬಹುಮಾನ ಎಷ್ಟು ಗೊತ್ತೇ? ಇಲ್ಲಿದೆ ಎಲ್ಲ ವಿವರ
ಇತಿಹಾಸದಲ್ಲಿ ಅತಿದೊಡ್ಡ ಐಸಿಸಿ ಟಿ 20 ವಿಶ್ವಕಪ್ ಆತಿಥ್ಯ ವಹಿಸಲು ಕೆರಿಬಿಯನ್ ಸ್ಥಳಗಳನ್ನು ನಾವು ಘೋಷಿಸುತ್ತಿರುವುದರಿಂದ ಇದು ರೋಮಾಂಚನಕಾರಿ ಕ್ಷಣ. ಮುಂದಿನ ವರ್ಷ ಜೂನ್ನಲ್ಲಿ 20 ತಂಡಗಳು 55 ಪಂದ್ಯಗಳಲ್ಲಿ ಆಡಲಿವೆ. ಒಂದು ತಲೆಮಾರುಗಳಿಂದ ವೆಸ್ಟ್ ಇಂಡೀಸ್ ನಲ್ಲಿ ನಡೆಯುವ ಅತ್ಯಂತ ಮಹತ್ವದ ಕ್ರೀಡಾಕೂಟವನ್ನು ಆಯೋಜಿಸಲು ಅನುವು ಮಾಡಿಕೊಟ್ಟ ವೆಸ್ಟ್ ಇಂಡೀಸ್ ನ ಸರ್ಕಾರಗಳಿಗೆ ನಾವು ಕೃತಜ್ಞರಾಗಿದ್ದೇವೆ. ಏಳು ಆತಿಥೇಯ ಸರ್ಕಾರಗಳು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಥಳಗಳು ಮತ್ತು ಅಭ್ಯಾಸ ಸೌಲಭ್ಯಗಳನ್ನು ನವೀಕರಿಸಲು ಬದ್ಧವಾಗಿವೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಹೆಮ್ಮೆಯ ಪರಂಪರೆಯನ್ನು ಬೆಂಬಲಿಸುವುದನ್ನು ಮತ್ತು ಸಂರಕ್ಷಿಸುವುದನ್ನು ಮುಂದುವರಿಸಿವೆ” ಎಂದು ಜಾನಿ ಗ್ರೇವ್ಸ್ ಹೇಳಿಕೊಂಡಿದ್ದಾರೆ.
ಕ್ರಿಕೆಟ್
World Cup : ಅಂಡರ್ 19 ವಿಶ್ವ ಕಪ್ ವೇಳಾಪಟ್ಟಿ ಪ್ರಕಟ; ಆಯೋಜನೆ ಸೇರಿದಂತೆ ಎಲ್ಲ ಮಾಹಿತಿ ಇಲ್ಲಿದೆ
15ನೇ ಆವೃತ್ತಿಯ ಅಂಡರ್-19 ವಿಶ್ವಕಪ್ (World Cup) ಜನವರಿ 13ರಿಂದ ಫೆಬ್ರವರಿ 4ರವರೆಗೆ ಕೊಲಂಬೊದ ಐದು ಸ್ಥಳಗಳಲ್ಲಿ ನಡೆಯಲಿದೆ.
ನವ ದೆಹಲಿ: 2024ರಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಪುರುಷರ ಅಂಡರ್-19 ವಿಶ್ವಕಪ್ (World Cup) ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶುಕ್ರವಾರ ಪ್ರಕಟಿಸಿದೆ. ಇದು 15 ನೇ ಆವೃತ್ತಿಯ ಜೂನಿಯರ್ ವಿಶ್ವಕಪ್ ಆಗಿದ್ದು, ಶ್ರೀಲಂಕಾದ ರಾಜಧಾನಿ ಕೊಲಂಬೊದ ಐದು ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿವೆ. ಅಂಡರ್ 19 ವಿಶ್ವಕಪ್ 2024 ಜನವರಿ 13 ರಿಂದ ಫೆಬ್ರವರಿ 4 ರವರೆಗೆ ನಡೆಯಲಿದ್ದು, ಅಭ್ಯಾಸ ಪಂದ್ಯಗಳು ಜನವರಿ 6 ರಿಂದ 12 ರವರೆಗೆ ನಡೆಯಲಿವೆ. ಮೊದಲ ಸುತ್ತಿನಲ್ಲಿ 16 ತಂಡಗಳನ್ನು ತಲಾ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ, ನಂತರ ಸೂಪರ್ ಸಿಕ್ಸ್ ಹಂತ ನಡೆಯಲಿದೆ.
ಹಾಲಿ ಚಾಂಪಿಯನ್ ಭಾರತ ಜನವರಿ 14 ರಂದು 2020ರ ಚಾಂಪಿಯನ್ ಬಾಂಗ್ಲಾದೇಶ ವಿರುದ್ಧ ತನ್ನ ಅಭಿಯಾನ ಪ್ರಾರಂಭಿಸಲಿದೆ. ‘ಎ’ ಗುಂಪಿನಲ್ಲಿ ಭಾರತದೊಂದಿಗೆ ಐರ್ಲೆಂಡ್ ಮತ್ತು ಅಮೆರಿಕ ಸ್ಥಾನ ಪಡೆದಿವೆ. ಪ್ರತಿ ಗುಂಪಿನಲ್ಲಿ ಅಗ್ರ ಮೂರು ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಪ್ರವೇಶಿಸಲಿವೆ.
ವೇಳಾಪಟ್ಟಿಯನ್ನು ಪ್ರಕಟಿಸಿದ ಐಸಿಸಿ ಈವೆಂಟ್ಸ್ ಮುಖ್ಯಸ್ಥ ಕ್ರಿಸ್ ಟೆಟ್ಲಿ, ಐಸಿಸಿ ಅಂಡರ್ 19 ಪುರುಷರ ಕ್ರಿಕೆಟ್ ವಿಶ್ವಕಪ್ ಜಾಗತಿಕ ಪ್ರೇಕ್ಷಕರಿಗೆ ಕ್ರೀಡೆಯ ಭವಿಷ್ಯದ ತಾರೆಗಳನ್ನು ಪರಿಚಯಿಸುವ ದೀರ್ಘಕಾಲದ ಇತಿಹಾಸವನ್ನು ಹೊಂದಿದೆ. ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್ ಮತ್ತು ಏಂಜೆಲೊ ಮ್ಯಾಥ್ಯೂಸ್ ಈ ಪಂದ್ಯಾವಳಿಯಲ್ಲಿ ವಿಶ್ವ ವೇದಿಕೆಗೆ ಪ್ರವೇಶಿಸಿದ ಕೆಲವು ಹೆಸರುಗಳು, ಮತ್ತು 41 ಪಂದ್ಯಗಳಲ್ಲಿ ಮೂಲಕ ಹೊಸ ಪ್ರತಿಭೆಗಳ ಹುಡುಕಾಟ ನಡೆಯಲಿದೆ ಎಂದು ಹೇಳಿದರು.
ಯಾವ ಸ್ವರೂಪದ ಟೂರ್ನಿ
16 ತಂಡಗಳನ್ನು ಎ, ಬಿ, ಸಿ, ಡಿ ಎಂದು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಅಂಕಗಳ ಆಧಾರದ ಎ ಮತ್ತು ಡಿ ಗುಂಪಿನ ತಲಾ ಮೂರು ತಂಡಗಳು ಒಂದು ಗುಂಪಾಗಿ ಸೂಪರ್ ಸಿಕ್ಸ್ ಹಂತಕ್ಕೇರಿದರೆ ಬಿ ಮತ್ತು ಸಿ ಗುಂಪಿನಿಂದ ತಲಾ ಮೂರು ತಂಡಗಳು ಮತ್ತೊಂದು ಗುಂಪಿನಲ್ಲಿ ಸೂಪರ್ ಸಿಕ್ಸ್ ಹಂತಕ್ಕೆ ಪ್ರವೇಶ ಪಡೆಯುತ್ತವೆ. ಈ ಹಂತದಲ್ಲಿ ಎರಡು ಗುಂಪಿನ ಅಗ್ರ ಎರಡು ತಂಡಗಳು ಸೆಮಿಪೈನಲ್ಗೆ ಪ್ರವೇಶ ಪಡೆಯಲಿದೆ. ಗೆಲ್ಲುವ ತಂಡಗಳು ಫೈನಲ್ಗೆ ಎಂಟ್ರಿ ಗಿಟ್ಟಿಸಲಿದೆ.
ಇದನ್ನೂ ಓದಿ : World Cup 2023 : ಏಕ ದಿನ ವಿಶ್ವ ಕಪ್ನ ಬಹುಮಾನ ಎಷ್ಟು ಗೊತ್ತೇ? ಇಲ್ಲಿದೆ ಎಲ್ಲ ವಿವರ
ಸೂಪರ್ ಸಿಕ್ಸ್ನಲ್ಲಿ ಒಂದು ತಂಡವು ಗುಂಪು ಹಂತದಲ್ಲಿ ವಿಭಿನ್ನ ಸ್ಥಾನಗಳನ್ನು ಪಡೆದ ಮತ್ತೊಂದು ಗುಂಪಿನ ಎರಡು ತಂಡಗಳ ವಿರುದ್ಧ ಆಡುತ್ತದೆ. ‘ಡಿ’ ಗುಂಪಿನಲ್ಲಿ ಎರಡನೇ ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳನ್ನು ಎ1 ತಂಡ ‘ಸಿ’ ಗುಂಪಿನಲ್ಲಿ ಮೊದಲ ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳನ್ನು ಎದುರಿಸಲಿದೆ.
ಸೂಪರ್ ಸಿಕ್ಸ್ ನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಜನವರಿ 30 ಮತ್ತು ಫೆಬ್ರವರಿ 1 ರಂದು ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಸೆಮಿಫೈನಲ್ ಗೆ ಅರ್ಹತೆ ಪಡೆಯಲಿವೆ ಮತ್ತು ಫೈನಲ್ ಫೆಬ್ರವರಿ 4 ರ ಭಾನುವಾರ ಪಿ ಸಾರಾ ಓವಲ್ ನಲ್ಲಿ ನಡೆಯಲಿದೆ.
ನೇರ ಅರ್ಹತೆ ಪಡೆದ ತಂಡಗಳು : ಶ್ರೀಲಂಕಾ (ಆತಿಥೇಯ), ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಐರ್ಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಜಿಂಬಾಬ್ವೆ
ಪ್ರಾದೇಶಿಕ ಅರ್ಹತೆ: ನಮೀಬಿಯಾ (ಆಫ್ರಿಕಾ ಪ್ರಾದೇಶಿಕ ಕ್ವಾಲಿಫೈಯರ್), ನೇಪಾಳ, ನ್ಯೂಜಿಲೆಂಡ್ (ಇಎಪಿ ಪ್ರಾದೇಶಿಕ ಕ್ವಾಲಿಫೈಯರ್), ಸ್ಕಾಟ್ಲೆಂಡ್ (ಯುರೋಪ್ ಪ್ರಾದೇಶಿಕ ಕ್ವಾಲಿಫೈಯರ್), ಯುಎಸ್ಎ (ಅಮೇರಿಕಾಸ್ ಪ್ರಾದೇಶಿಕ ಕ್ವಾಲಿಫೈಯರ್).
ಪಂದ್ಯ ನಡೆಯುವ ಸ್ಥಳಗಳು
ನಾನ್ ಡೆಸ್ಕ್ರಿಪ್ಟ್ಸ್ ಕ್ರಿಕೆಟ್ ಕ್ಲಬ್, ಆರ್.ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ಪಿ.ಸಾರಾ ಓವಲ್. ಕೊಲಂಬೊ, ಕೊಲಂಬೊ ಕ್ರಿಕೆಟ್ ಕ್ಲಬ್, ಸಿಂಘಲೀಸ್ ಸ್ಪೋರ್ಟ್ಸ್ ಕ್ಲಬ್
ಕ್ರಿಕೆಟ್
Ind vs Aus : ಭಾರತ ತಂಡ ಕಳಪೆ ಫೀಲ್ಡಿಂಗ್; ನಿಮಗಿಂತ ಶಾಲಾ ಮಕ್ಕಳೇ ಬೆಸ್ಟ್ ಎಂದರು ಅಭಿಮಾನಿಗಳು
ಆಸ್ಟ್ರೇಲಿಯಾ (Ind vs Aus) ವಿರುದ್ಧದ ಮೊದಲ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಕ್ರಮವಾಗಿ ಡೇವಿಡ್ ವಾರ್ನರ್ ಮತ್ತು ಮಾರ್ನಸ್ ಲಾಬುಶೇನ್ಗೆ ಜೀವ ನೀಡಿದರು.
ಮೊಹಾಲಿ: ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ (Ind vs Aus) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಶುಕ್ರವಾರ (ಸೆಪ್ಟೆಂಬರ್ 22) ನಡೆಯುತ್ತಿದೆ. ಟಾಸ್ ಗೆದ್ದ ಭಾರತ ತಂಡದ ನಾಯಕ ಕೆ.ಎಲ್.ರಾಹುಲ್ ಆಸ್ಟ್ರೇಲಿಯಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಫಾರ್ಮ್ ನಲ್ಲಿರುವ ಮಿಚೆಲ್ ಮಾರ್ಷ್ (4 ಎಸೆತಗಳಲ್ಲಿ 4 ರನ್) ಅವರನ್ನು ಮೊದಲ ಓವರ್ ನಲ್ಲಿಯೇ ಔಟ್ ಮಾಡುವ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು.
Shreyas Iyer😏#INDvsAUS pic.twitter.com/mDhNjjwrlj
— Digital Doctor👨⚕️ (@AlwaysAbhishekk) September 22, 2023
ಸ್ಟೀವ್ ಸ್ಮಿತ್ (60 ಎಸೆತಗಳಲ್ಲಿ 41 ರನ್) ಮತ್ತು ಡೇವಿಡ್ ವಾರ್ನರ್ (53 ಎಸೆತಗಳಲ್ಲಿ 52 ರನ್) 106 ಎಸೆತಗಳಲ್ಲಿ 94 ರನ್ಗಳ ಜೊತೆಯಾಟದೊಂದಿಗೆ ಆಸ್ಟ್ರೇಲಿಯಾದ ಇನ್ನಿಂಗ್ಸ್ ಉತ್ತಮವಾಗಿ ಸಾಗಿತು. ಆದಾಗ್ಯೂ, ಶಾರ್ದೂಲ್ ಠಾಕೂರ್ ಎಸೆದ ಇನ್ನಿಂಗ್ಸ್ನ ಒಂಬತ್ತನೇ ಓವರ್ನಲ್ಲಿ ವಾರ್ನರ್ಗೆ ಶ್ರೇಯಸ್ ಅಯ್ಯರ್ ಜೀವ ನೀಡಿದರು.
ಆ ಓವರ್ನ ಕೊನೆಯ ಎಸೆತದಲ್ಲಿ, ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ವಾರ್ನರ್ ಚೆಂಡನ್ನು ಶ್ರೇಯಸ್ ಅಯ್ಯರ್ ಕಡೆಗೆ ತಪ್ಪಾಗಿ ಹೊಡೆದರು. ಆದರೆ, ಅಯ್ಯರ್ ಸುಲಭ ಕ್ಯಾಚ್ ಕೈಚೆಲ್ಲುವ ಮೂಲಕ ಅವರಿಗೆ ಜೀವದಾನ ನೀಡಿದರು. 14 ರನ್ಗೆ ಔಟಾಗಬೇಕಿದ್ದ ವಾರ್ನರ್ ಅರ್ಧ ಶತಕ ಬಾರಿಸಿದರು.
Imagine missing this easy chance!! @klrahul even a school boy can do better wicket keeping.#INDvsAUS #INDvsAUS pic.twitter.com/epMNI6vAHU
— The Dude (@PuntingDude) September 22, 2023
ಕಳಪೆ ಕೀಪಿಂಗ್
ರವೀಂದ್ರ ಜಡೇಜಾ ಎಸೆದ 23ನೇ ಓವರ್ನಲ್ಲಿ ಕೆಎಲ್ ರಾಹುಲ್ 11 ರನ್ಗಳಿಗೆ ಮಾರ್ನಸ್ ಲಾಬುಶೇನ್ ಅವರನ್ನು ರನ್ ಔಟ್ ಮಾಡುವ ಅವಕಾಶವನ್ನು ಕಳೆದುಕೊಂಡರು. ಓವರ್ಬನ ಮೊದಲ ಎಸೆತದಲ್ಲಿ, ಲಾಬುಶೇನ್ ಚೆಂಡನ್ನು ಕವರ್ ಕಡೆಗೆ ತಳ್ಳಿ ಸಿಂಗಲ್ಗಾಗಿ ಓಡಿದರು. ಸೂರ್ಯಕುಮಾರ್ ಯಾದವ್ 30 ಯಾರ್ಡ್ ವೃತ್ತದೊಳಗೆ ಅದನ್ನು ತಡೆಯುವಲ್ಲಿ ಯಶಸ್ವಿಯಾದರು, ಇಬ್ಬರೂ ಬ್ಯಾಟರ್ಗಳು ಪಿಚ್ ಮಧ್ಯೆ ಸಿಲುಕಿಕೊಂಡರು. ರನ್ ಔಟ್ ಅವಕಾಶವನ್ನು ಗ್ರಹಿಸಿದ ಸೂರ್ಯಕುಮಾರ್ ಬೇಗನೆ ಚೆಂಡನ್ನು ಸ್ಟ್ರೈಕರ್ ನ ತುದಿಗೆ ಎಸೆದರು. ಆದರೆ ನಾಯಕ ಕೆಎಲ್ ರಾಹುಲ್ ಚೆಂಡನ್ನು ಪಡೆದ ಔಟ್ ಮಾಡಲು ವಿಫಲರಾದರು. ಲಾಬುಜೇಶ್ನಗೆ ಜೀವದಾನ ಸಿಕ್ಕಿತು.
🏏 Shreyas Iyer Dropped an Easy Catch Of David Warner on 39 runs.
— BabluMinati (@BabluMinati) September 22, 2023
Me: Bet on over 39.5 runs for Australia and an Indian cricket team supporter. 😬😅
🤷♂️😄#INDvsAUS #Cricket #Betting #GamblingX pic.twitter.com/t98m1aCplu
ಇದನ್ನೂ ಓದಿ : World Cup 2023 : ಏಕ ದಿನ ವಿಶ್ವ ಕಪ್ನ ಬಹುಮಾನ ಎಷ್ಟು ಗೊತ್ತೇ? ಇಲ್ಲಿದೆ ಎಲ್ಲ ವಿವರ
ಭಾರತ ತಂಡದ ಫೀಲ್ಡಿಂಗ್ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿತು. ವಿಶ್ವ ಕಪ್ ಟೂರ್ನಿಗೆ ಇನ್ನು ಎರಡು ವಾರಗಳು ಬಾಕಿ ಇರುವಾಗ ಇಂಥ ಕಳಪೆ ಫೀಲ್ಡಿಂಗ್ ಮಾಡುವುದು ಎಷ್ಟು ಸರಿ ಎಂಬುದಾಗಿ ಅವರು ಪ್ರಶ್ನಸಿದರು. ಭಾರತ ತಂಡದ ಫೀಲ್ಡಿಂಗ್ ಸಾಮರ್ಥ್ಯವನ್ನು ಕುಹಕ ಮಾಡಿದರು.
ಫೀಲ್ಡಿಂಗ್ನಲ್ಲಿ ಭಾರತದ ಕಳಪೆ ಸಾಧನೆ
ಭಾರತದ ಫೀಲ್ಡಿಂಗ್ ತಜ್ಞರಿಂದ ಟೀಕೆಗೆ ಒಳಗಾಗಿವೆ. ಏಷ್ಯಾಕಪ್ 2023ರಲ್ಲಿ ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತೀಯ ಫೀಲ್ಡರ್ಗಳು ಹಲವು ಕ್ಯಾಚ್ಗಳನ್ನು ಹಿಡಿದಿದ್ದರು. ಆ ಪಂದ್ಯದ ನಂತರ, ಭಾರತದ ಕಳಪೆ ಕ್ಯಾಚ್ ದಕ್ಷತೆಯ ದರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ರೋಹಿತ್ ಶರ್ಮಾ ನೇತೃತ್ವದ ತಂಡವು 2019 ರ ವಿಶ್ವಕಪ್ ನಂತರ 75.1% ರಷ್ಟು ಕೆಟ್ಟ ರೇಟಿಂಗ್ಸ್ ಹೊಂದಿದೆ. 71.2% ಕ್ಯಾಚ್ ದಕ್ಷತೆಯ ಪ್ರಮಾಣವನ್ನು ಹೊಂದಿರುವ ಅಫ್ಘಾನಿಸ್ತಾನ 10ನೇ ಸ್ಥಾನ ಹೊಂದಿದ್ದರೆ ಭಾರತ 9ನೇ ಸ್ಥಾನದಲ್ಲಿದೆ.
-
ಪ್ರಮುಖ ಸುದ್ದಿ11 hours ago
Lina Mukherjee: ಇಸ್ಲಾಮಿಕ್ ದೇಶದಲ್ಲಿ ಹಂದಿ ಮಾಂಸ ತಿಂದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ!
-
ಪ್ರಮುಖ ಸುದ್ದಿ24 hours ago
Rupert Murdoch: ಫಾಕ್ಸ್ ಮತ್ತು ನ್ಯೂಸ್ ಕಾರ್ಪ್ ಅಧ್ಯಕ್ಷ ಹುದ್ದೆ ತೊರೆದ ‘ಮಾಧ್ಯಮ ದೊರೆ’ ರೂಪರ್ಟ್ ಮುರ್ಡೋಕ್
-
ಪ್ರಮುಖ ಸುದ್ದಿ3 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಉಡುಪಿ9 hours ago
FB Profile Deleted: 20ಕ್ಕೂ ಅಧಿಕ ಹಿಂದು ಜಾಗರಣ ವೇದಿಕೆ ನಾಯಕರ ಫೇಸ್ ಬುಕ್ ಪ್ರೊಫೈಲ್ ಏಕಕಾಲದಲ್ಲಿ ಡಿಲೀಟ್!
-
ಸುವಚನ17 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕಲೆ/ಸಾಹಿತ್ಯ22 hours ago
Painting: ಕೇವಲ 328 ರೂ.ಗೆ ಖರೀದಿಸಿದ ಪೇಂಟಿಂಗ್ 1.5 ಕೋಟಿ ರೂಪಾಯಿಗೆ ಹರಾಜು!
-
ಕರ್ನಾಟಕ21 hours ago
Honey Bee Attack: ಶವ ಸಂಸ್ಕಾರಕ್ಕೆಂದು ಹೋದವರ ಮೇಲೆ ಹೆಜ್ಜೇನು ದಾಳಿ; 10 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
-
ಆರೋಗ್ಯ15 hours ago
Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!