VISTARA TOP 10 NEWS : ಕಾವೇರಿ ಹೋರಾಟಕ್ಕೆ ಸ್ವಯಂಪ್ರೇರಿತ ಬೆಂಬಲ, ಮತ್ತೆ ಕೇಂದ್ರ-ಸುಪ್ರೀಂ ಜಟಾಪಟಿ ಮತ್ತಿತರ ದಿನದ ಪ್ರಮುಖ ಸುದ್ದಿಗಳು Vistara News

ಕ್ರೀಡೆ

VISTARA TOP 10 NEWS : ಕಾವೇರಿ ಹೋರಾಟಕ್ಕೆ ಸ್ವಯಂಪ್ರೇರಿತ ಬೆಂಬಲ, ಮತ್ತೆ ಕೇಂದ್ರ-ಸುಪ್ರೀಂ ಜಟಾಪಟಿ ಮತ್ತಿತರ ದಿನದ ಪ್ರಮುಖ ಸುದ್ದಿಗಳು

VISTARA TOP 10 NEWS: ದೇಶ, ವಿದೇಶಗಳ ಸುದ್ದಿಗಳು, ದಿನವಿಡೀ ನಡೆದ ಪ್ರಮುಖ ಬೆಳವಣಿಗೆಗಳ ಸುತ್ತುನೋಟವೇ Vistara Top10 News

VISTARANEWS.COM


on

Top 10 news kannada
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

1. ಬೆಂಗಳೂರು ಬಂದ್‌ ಸಕ್ಸಸ್‌; ಕಾವೇರಿ ಹೋರಾಟಕ್ಕೆ ಜನತೆ ಸ್ವಯಂಪ್ರೇರಿತ ಬೆಂಬಲ
ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದರೂ ತಮಿಳುನಾಡಿಗೆ ನೀರು ಬಿಡುಗಡೆ (Cauvery Water Dispute) ಮಾಡಲೇಬೇಕು ಎಂದು ಆದೇಶ ನೀಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery Water Management authority) ಮತ್ತು ಅದು ಹೇಳಿದಂತೆ ನೀರು ಬಿಡುಗಡ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮಗಳನ್ನು ಖಂಡಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ (Karnataka Jala samrakshana samiti) ಕರೆ ನೀಡಿದ್ದ ಮಂಗಳವಾರದ (ಸೆ. 26) ಬೆಂಗಳೂರು ಬಂದ್‌ (Bangalore bandh) ಯಶಸ್ವಿಯಾಗಿದೆ. ಯಾವುದೇ ಗೊಂದಲ, ಗಲಾಟೆ, ಹಿಂಸಾತ್ಮಕ ಘಟನೆಗಳಿಲ್ಲದೆ ಅದು ಸಫಲತೆಯನ್ನು ಕಂಡಿದೆ. ಆದರೆ, ಇದು ಸರ್ಕಾರದ ನಿರ್ಧಾರಗಳ ಮೇಲೆ ಪರಿಣಾಮ ಬೀರುತ್ತದೆಯೇ ಕಾದು ನೋಡಬೇಕು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ :ಕೇಳಿದ್ದಕ್ಕಿಂತಲೂ ಹೆಚ್ಚು ನೀರು ಕೊಡುತ್ತಿದೆ ಕರ್ನಾಟಕ! ಈಗ ಹರಿಯುತ್ತಿರುವುದು 6300 ಕ್ಯೂಸೆಕ್!‌

2. CWRCಯಿಂದ ಮತ್ತೆ ಹೊಡೆತ, ಇನ್ನೂ 18 ದಿನ 3000 ಕ್ಯೂಸೆಕ್‌ ನೀರು ಬಿಡಲು ಆದೇಶ
ನವದೆಹಲಿ: ಕಾವೇರಿ ನೀರು ನಿಯಂತ್ರಣ ಸಮಿತಿ (Cauvery Water Regulation Committee) ಮಂಗಳವಾರ ನಡೆಸಿದ ಮಹತ್ವದ ಸಭೆಯಲ್ಲಿ ಕರ್ನಾಟಕಕ್ಕೆ ಇನ್ನೊಂದು ಹೊಡೆತ ಬಿದ್ದಿದೆ.ಈವರೆಗೆ ಪ್ರತಿದಿನವೂ ಐದು ಸಾವಿರ ಕ್ಯೂಸೆಕ್‌ ನೀರನ್ನು ಬಿಡುಗಡೆ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದ ಸಮಿತಿ ಸೆ. 28ರಿಂದ ಅಕ್ಟೋಬರ್‌ 15ರವರೆಗೆ ಪ್ರತಿದಿನ 3000 ಕ್ಯೂಸೆಕ್‌ ನೀರು ಬಿಡುವಂತೆ ಆದೇಶ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಕಾವೇರಿ ನೀರು ಬಿಡದಂತೆ ಸುಗ್ರೀವಾಜ್ಞೆ; ಸರ್ಕಾರಕ್ಕೆ ಹೋರಾಟಗಾರರಿಂದ ಮೂರು ದಿನ ಗಡುವು

3. ಬೆಂಗಳೂರು ಬಂದ್‌ ಹತ್ತಿಕ್ಕಲು ಪೊಲೀಸ್‌ ಬಲ ಪ್ರಯೋಗ ನಡೆಯಿತೇ? ಕಮಿಷನರ್‌ ಹೇಳಿದ್ದೇನು?
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ (Cauvery water Dispute) ಕರ್ನಾಟಕ ಜಲ ಸಂರಕ್ಷಣಾ ಸಮಿತಿ (Karnataka Jala Samrakshana Samiti) ಕರೆ ನೀಡಿದ್ದ ಒಂದು ದಿನದ ಬೆಂಗಳೂರು ಬಂದ್‌ (Bangalore Bandh) ಸಾಂಗವಾಗಿ ಮುಕ್ತಾಯಗೊಂಡಿದೆ. ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ನಡೆದ ಪ್ರತಿಭಟನೆಯ ವೇಳೆ ಗಮನೀಯ ಅನಾಹುತಕಾರಿ ಘಟನೆಗಳು ಇಲ್ಲದೆ ಬಂದ್‌ ಬಹುತೇಕ ಶಾಂತಿಯುತವಾಗಿ ನಡೆಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

4. ಜಡ್ಜ್ ನೇಮಕಾತಿ, ಮತ್ತೆ ಕೇಂದ್ರ-ಸುಪ್ರೀಂ ಜಟಾಪಟಿ! 10 ತಿಂಗಳಾದ್ರೂ ಶಿಫಾರಸು ಕ್ಲಿಯರ್ ಮಾಡಿಲ್ಲ ಸರ್ಕಾರ
ಜಡ್ಜ್‌ಗಳ ನೇಮಕಾತಿ ವಿಷಯಕ್ಕೆ (Appointment of Judges) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ (Supreme Court) ಹಾಗೂ ಕೇಂದ್ರ ಸರ್ಕಾರ (Central Government) ನಡುವೆ ಮತ್ತೊದು ಸುತ್ತಿನ ಜಟಾಪಟಿ ಶುರುವಾಗುವ ಸಾಧ್ಯತೆಗಳಿವೆ. ಹೈಕೋರ್ಟ್‌ ಶಿಫಾರಸಗಳನ್ನು (High court Recommendations) ಕೊಲಿಜಿಯಂಗೆ (Collegium) ಏಕೆ ಕಳುಹಿಸಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಮಂಗಳವಾರ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಹೈಕೋರ್ಟ್‌ ನ್ಯಾಯಮೂರ್ತಿಗಳ ಹೆಸರು ಅಂತಿಮಗೊಳಿಸುವ ಸಂಬಂಧ ಕೇಂದ್ರ ಸರ್ಕಾರವು ವಿಳಂ ಧೋರಣೆಯನ್ನು ಅನುಸರಿಸುತ್ತಿದೆ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರಿದ್ದ ಪೀಠವು ಹೇಳಿದೆ. ಅಲ್ಲದೇ ಈ ವಿಷಯವನ್ನು ಸುಪ್ರೀಂ ಕೋರ್ಟ್ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

5. ಮೈತಿ ವಿದ್ಯಾರ್ಥಿಗಳಿಬ್ಬರ ಶವಗಳ ಫೋಟೊ ವೈರಲ್;‌ ಮಣಿಪುರ ಮತ್ತೆ ಉದ್ವಿಗ್ನ?
ಜುಲೈನಲ್ಲಿ ನಾಪತ್ತೆಯಾಗಿದ್ದ ಮೈತಿ ಸಮುದಾಯದ ಇಬ್ಬರು ವಿದ್ಯಾರ್ಥಿಗಳ ಶವಗಳ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ಮಣಿಪುರದಲ್ಲಿ ಮತ್ತೆ ಜನಾಕ್ರೋಶ ಭುಗಿಲೇಳುವ ಸಂಭವ ಕಂಡುಬರುತ್ತಿದೆ. ಬಂದೂಕು ಹಿಡಿದಿರುವ ಇಬ್ಬರು ದುಷ್ಕರ್ಮಿಗಳು ಕೂಡ ಈ ಫೋಟೋದಲ್ಲಿದ್ದಾರೆ. ಇವರು ಕುಕಿ ಸಮುದಾಯದವರು ಎಂದು ಹೇಳಲಾಗಿದೆ.

6. ಮನ ಕಲಕುವ ವಿಡಿಯೊ; ಜಿಮ್ನಾಸ್ಟಿಕ್ಸ್‌ನಲ್ಲಿ ಗೆದ್ದ​ ಬಾಲಕಿಗೆ ಕಪ್ಪು ಬಣ್ಣದವಳೆಂದು ಪದಕ ನೀಡದ ಆಯೋಜಕರು!

7. ಚಾಟ್‌ಜಿಪಿಟಿ ಜತೆ ನೀವಿನ್ನು ಮಾತನಾಡಬಹುದು! ಹೊಸ ಫೀಚರ್ ಪರಿಚಯಿಸಿದ ಓಪನ್ಎಐ

8. ಹೌದು, ನಾನು ಈಗಲೂ ರಶ್ಮಿಕಾ ಜತೆ ಸಂಪರ್ಕದಲ್ಲಿದ್ದೇನೆ! ರಕ್ಷಿತ್ ಶೆಟ್ಟಿ ಹೇಳಿಕೆ

9. Dadasaheb Phalke Award: ವಹೀದಾ ರೆಹಮಾನ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

10. ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಫ್ರೈಡ್‌ ಇಲಿ!
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Danish Kaneria: ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ; ಕಾರಣವೇನು?

Danish Kaneria: ರಾಹುಲ್‌ ಗಾಂಧಿ ವಿರುದ್ಧ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಅವರೇನು ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.

VISTARANEWS.COM


on

danish
Koo

ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ (ICC Cricket World Cup 2023)ಗೆ ಅದ್ಧೂರಿಯಾಗಿ ತೆರೆ ಎಳೆಯಲಾಗಿದೆ. ನವೆಂಬರ್​ 19ರಂದು ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿಸಿ ಆಸ್ಟ್ರೇಲಿಯಾ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಫೈನಲ್‌ ಪಂದ್ಯ ವೀಕ್ಷಣೆಗೆ ಪ್ರಧಾನಮಂತ್ರಿ ನರೆಂದ್ರ ಮೋದಿ (Narendra Modi) ಸ್ಟೇಡಿಯಮ್‌ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಿದ್ದರು. ಮೋದಿ ʼಪನೌತಿʼ (ದುರದೃಷ್ಟದ ವ್ಯಕ್ತಿ). ಇದರಿಂದಲೇ ಭಾರತ ಸೋಲು ಕಂಡಿತ್ತು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಲೇವಡಿ ಮಾಡಿದ್ದರು. ಇದೀಗ ಈ ಚರ್ಚೆಗೆ ಪಾಕಿಸ್ತಾನದ ಮಾಜಿ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ (Danish Kaneria) ಎಂಟ್ರಿ ಕೊಟ್ಟಿದ್ದು, ಹೆಸರು ಹೇಳದೆ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದಾನಿಶ್ ಕನೇರಿಯಾ ಹೇಳಿದ್ದೇನು?

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ದಾನಿಶ್ ಕನೇರಿಯಾ “ಪನೌತಿ ಕೌನ್?” (ಈಗ ಯಾರು ದುರದೃಷ್ಟವಂತರು?) ಎಂದು ಪ್ರಶ್ನಿಸಿದ್ದಾರೆ. ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋತಿದ್ದು, ಇದನ್ನೇ ಮುಂದಿಟ್ಟುಕೊಂಡು ಅವರು ರಾಹುಲ್‌ ಗಾಂಧಿಯ ಕಾಲೆಳೆದಿದ್ದಾರೆ. ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ.

ಮಾಜಿ ಕ್ರಿಕೆಟಿಗ ತಮ್ಮ ಪೋಸ್ಟ್‌ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಆದರೂ ಬಹುತೇಕರು ಇದು ರಾಹುಲ್‌ ಗಾಂಧಿ ಅವರನ್ನು ಉದ್ದೇಶಿಸಿಯೇ ಹೇಳಿದ್ದು ಎಂದು ಊಹಿಸಿದ್ದಾರೆ. ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ. ಈ ಮಧ್ಯೆ ತೆಲಂಗಾಣದಲ್ಲಿ ಗದ್ದುಗೆಗೆ ಏರಿದ್ದೊಂದೇ ಕೈ ಪಡೆಗೆ ಸ್ವಲ್ಪ ಮಟ್ಟಿನ ಸಮಾಧಾನ ತಂದಕೊಟ್ಟ ಯಶಸ್ಸು.

ರಾಹುಲ್‌ ಗಾಂಧಿ ಹೇಳಿದ್ದೇನು?

ರಾಜಸ್ಥಾನದಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ, ಭಾರತ ತಂಡ ಸೋತಿದ್ದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ʼಪನೌತಿʼ (ದುರದೃಷ್ಟದ ವ್ಯಕ್ತಿ) ಎಂದು ಕರೆದಿದ್ದರು. ಮೋದಿ ಕ್ರೀಡಾಂಗಣಕ್ಕೆ ಪ್ರವೇಶಿಸಿದ್ದರಿಂದ ಪಂದ್ಯವನ್ನು ಭಾರತ ತಂಡ ಸೋತಿತು ಎಂದು ಆರೋಪಿಸಿದ್ದರು. 

ಈ ಮಧ್ಯೆ ಬಿಜೆಪಿ ನಾಯಕ ಸಿ.ಟಿ.ರವಿ ಕೂಡ ರಾಹುಲ್ ಗಾಂಧಿ ಹೇಳಿಕೆಗೆತಿರುಗೇಟು ನೀಡಿದ್ದಾರೆ. ‘ಅತಿ ದೊಡ್ಡ ಪನೌತಿ ಯಾರು?’ ಎಂದು ಪ್ರಶ್ನಿಸಿದ್ದಾರೆ. ಅವರು ಒಂದು ಹೆಜ್ಜು ಮುಂದೆ ಹೋಗಿ ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರನ್ನು ಟ್ಯಾಗ್ ಮಾಡಿದ್ದರು. ಸದ್ಯ ದಾನಿಶ್ ಕನೇರಿಯಾ ಪೋಸ್ಟ್‌ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ.

ಇದನ್ನೂ ಓದಿ: ಇಲ್ಲ, ಆಕೆ ನನ್ನನ್ನು ಪಿಎಂ ಮಾಡಲ್ಲ! ಪ್ರಣಬ್ ಮುಖರ್ಜಿ ಹಾಗೇಕೆ ಹೇಳಿದ್ದು?

ಯಾರು ಈ ದಾನಿಶ್ ಕನೇರಿಯಾ?

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ 2000 ಮತ್ತು 2010ರ ನಡುವೆ ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡದ ಪರವಾಗಿ ಆಡಿದ್ದಾರೆ. ಗೂಗ್ಲಿ ಬೌಲಿಂಗ್ ಮಾಡಬಲ್ಲ ಬಲಗೈ ಲೆಗ್ ಸ್ಪಿನ್ನರ್ ಆಗಿದ್ದ ಕನೇರಿಯಾ ಪಾಕಿಸ್ತಾನ ಪರ 61 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 34.79 ಸರಾಸರಿಯಲ್ಲಿ 261 ವಿಕೆಟ್‌ ಪಡೆದುಕೊಂಡಿದ್ದಾರೆ. ಜತೆಗೆ 18 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಅವರು ತಮ್ಮ ಸೋದರ ಸಂಬಂಧಿ ಅನಿಲ್ ದಳಪತ್ ನಂತರ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ ಎರಡನೇ ಹಿಂದೂ ಮತ್ತು ಒಟ್ಟಾರೆಯಾಗಿ ಏಳನೇ ಮುಸ್ಲಿಮೇತರ ಆಟಗಾರರಾಗಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

ಕ್ರಿಕೆಟ್

IPL 2024 : ಐಪಿಎಲ್ ಹರಾಜಿನಲ್ಲಿ ಬೇಡಿಕೆ ಪಡೆಯಲಿರುವ ಆಲ್​​ರೌಂಡರ್​ಗಳು ಇವರು

IPL 2024 : ಫ್ರಾಂಚೈಸಿಗಳು ತಮ್ಮಲ್ಲಿ ಖಾಲಿ ಇರುವ ಸ್ಥಾನಗಳ ಭರ್ತಿಗಾಗಿ ಆಲ್​ರೌಂಡರ್​ಗಳನ್ನು ನೆಚ್ಚಿಕೊಳ್ಳಲಿದ್ದಾರೆ ಎನ್ನಲಾಗಿದೆ.

VISTARANEWS.COM


on

IPL Auction 1
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಹೆಚ್ಚು ಯಶಸ್ಸು ಪಡೆಯುವುದು ಆಲ್​ರೌಂಡರ್​ಗಳು. ಹೀಗಾಗಿ ಅವರಿಗೆ ಹರಾಜಿನಲ್ಲಿ ಹಚ್ಚು ಬೇಡಿಕೆ ಇರುತ್ತದೆ. ಚಾಂಪಿಯನ್ ತಂಡಗಳಂತೂ ಆಲ್​ರೌಂಡರ್​ಗಳ ದೊಡ್ಡ ಬಣವನ್ನೇ ಹೊಂದಿತ್ತು. ಗುಜರಾತ್ ಟೈಟಾನ್ಸ್ ತಂಡವನ್ನು ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಮುನ್ನಡೆಸಿದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿನಲ್ಲಿ ರವೀಂದ್ರ ಜಡೇಜಾ ಅವರ ಪಾತ್ರ ದೊಡ್ಡದಾಗಿದೆ. ಹೀಗಾಗಿ ಐಪಿಎಲ್ 2024 ಹರಾಜಿಗೆ ಕೇವಲ ಎರಡು ವಾರಗಳು ಬಾಕಿ ಇರುವಾಗ, ಹರಾಜಿನಲ್ಲಿ ಬೇಡಿಕೆ ಪಡೆಯಲಿರುವ ಆಲ್​ರೌಂಡರ್​ಗಳ ಕುರಿತು ನೋಡೋಣ.

ಪ್ರಮುಖ ಆಲ್​ರೌಂಡರ್​ಗಳ ವಿವರ ಇಂತಿದೆ

  • ಶಾರ್ದೂಲ್ ಠಾಕೂರ್: ಭಾರತದ ಬೌಲಿಂಗ್ ಆಲ್ರೌಂಡರ್
  • ಶಾರುಖ್ ಖಾನ್ ಭಾರತದ ಬ್ಯಾಟಿಂಗ್ ಆಲ್ರೌಂಡರ್
  • ಅಜ್ಮತುಲ್ಲಾ ಒಮರ್ಜೈ ಅಫ್ಘಾನಿಸ್ತಾನ ಬ್ಯಾಟಿಂಗ್ ಆಲ್​​ರೌಂಡರ್​
  • ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾ ಬೌಲಿಂಗ್ ಆಲ್ರೌಂಡರ್
  • ಡೇವಿಡ್ ವಿಲ್ಲಿ, ಇಂಗ್ಲೆಂಡ್ ಬೌಲಿಂಗ್ ಆಲ್ರೌಂಡರ್
  • ಕೈಲ್ ಜೇಮಿಸನ್, ನ್ಯೂಜಿಲೆಂಡ್ ಬೌಲಿಂಗ್ ಆಲ್ರೌಂಡರ್
  • ಶಕೀಬ್ ಅಲ್ ಹಸನ್ ಬಾಂಗ್ಲಾದೇಶದ ಬ್ಯಾಟಿಂಗ್ ಆಲ್ರೌಂಡರ್
  • ವನಿಂದು ಹಸರಂಗ ಶ್ರೀಲಂಕಾದ ಬೌಲಿಂಗ್ ಆಲ್ರೌಂಡರ್
  • ಮೈಕಲ್ ಬ್ರೇಸ್ವೆಲ್, ನ್ಯೂಜಿಲೆಂಡ್ ಬ್ಯಾಟಿಂಗ್ ಆಲ್ರೌಂಡರ್
  • ಒಡಿಯನ್ ಸ್ಮಿತ್ ವೆಸ್ಟ್ ಇಂಡೀಸ್ ಬೌಲಿಂಗ್ ಆಲ್ರೌಂಡರ್

ಬೌಲಿಂಗ್ ಆಲ್ ರೌಂಡರ್ ಗಳು

ಶಾರ್ದೂಲ್ ಠಾಕೂರ್, ಪ್ಯಾಟ್ ಕಮಿನ್ಸ್, ಡೇವಿಡ್ ವಿಲ್ಲಿ, ಕೈಲ್ ಜೇಮಿಸನ್, ವನಿಂದು ಹಸರಂಗ ಮತ್ತು ಒಡಿಯನ್ ಸ್ಮಿತ್ ಈ ವರ್ಗಕ್ಕೆ ಸೇರುತ್ತಾರೆ. ಸಾಮಾನ್ಯವಾಗಿ ಈ ಕ್ರಿಕೆಟಿಗರು ತಮ್ಮ ಬೌಲಿಂಗ್ ಸಾಮರ್ಥ್ಯದ ಮೂಲಕ ಯಾವುದೇ ಇಲೆವೆನ್​ಗೆ ಸೇರುವ ಅವಕಾಶನವನ್ನು ಹೊಂದಿರುತ್ತಾರೆ.

ಪ್ಯಾಟ್ ಕಮಿನ್ಸ್ ಬೌಲಿಂಗ್ ಆಲ್ರೌಂಡರ್​​ಗೆ ಉತ್ತಮ ಉದಾಹರಣೆ. ಟೂರ್ನಿಯ 6 ಆವೃತ್ತಿಗಳಲ್ಲಿ ಆಡಿರುವ ಅವರು 42 ಪಂದ್ಯಗಳಲ್ಲಿ 45 ವಿಕೆಟ್ ಪಡೆದಿದ್ದಾರೆ. ಐಪಿಎಲ್​​ನಲ್ಲಿ ಅವರ ಬ್ಯಾಟಿಂಗ್ ಅಷ್ಟೊಂದು ಬಲವಾಗಿ ಇರದ ಹೊರತಾಗಿಯೂ ಒಮ್ಮೊಮ್ಮೆ ಅಚ್ಚರಿ ಮೂಡಿಸಿದ್ದೂ ಇದೆ. ವೇಗದ ಬೌಲಿಂಗ್ ಆಲ್ರೌಂಡರ್ 152.21 ಸರಾಸರಿಯಲ್ಲಿ ಬ್ಯಾಟ್​ ಮಾಡಿದ್ದಾರೆ. ಐಪಿಎಲ್​​ನಲ್ಲಿ 3 ನೇ ಅತಿವೇಗ ವೇಗದ ಅರ್ಧ ಶತಕ ಬಾರಿಸಿದ್ದಾರೆ.

ಬ್ಯಾಟಿಂಗ್ ಆಲ್ರೌಂಡರ್​ಗಳು

ಮೈಕೆಲ್ ಬ್ರೇಸ್ವೆಲ್, ಶಾರುಖ್ ಖಾನ್, ಅಜ್ಮತುಲ್ಲಾ ಒಮರ್ಜೈ ಮತ್ತು ಶಕೀಬ್ ಅಲ್ ಹಸನ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬೌಲಿಂಗ್ ಆಲ್ರೌಂಡರ್​ಗಳಿಗಿಂತ ಭಿನ್ನವಾಗಿ ಈ ಆಟಗಾರರು ಯಾವಾಗಲೂ ಅಗ್ರ ಕ್ರಮಾಂಕದ ಬ್ಯಾಟ್ಸ್​​ಮನ್​ಗಳಾಗಿರುವುದಿಲ್ಲ. ಅಜ್ಮತುಲ್ಲಾ ಮತ್ತು ಶಕೀಬ್ ತಮ್ಮ ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಸಾಮರ್ಥ್ಯಗಳ ಆಧಾರದ ಮೇಲೆ ತಂಡವನ್ನು ರಚಿಸಬಹುದಾದರೂ ಬ್ರೇಸ್ವೆಲ್ ಮತ್ತು ಶಾರುಖ್ ಕೆಳ ಕ್ರಮಾಂಕದ ಬ್ಯಾಟರ್​ಗಳಾಗಿ ಮಾತ್ರ ಕರ್ತವ್ಯ ನಿರ್ವಹಿಸಬಲ್ಲರು.

ಇದನ್ನೂ ಓದಿ : Rahul Dravid : ರಿಚ್ಮಂಡ್​ ಸರ್ಕಲ್ ಫ್ಲೈಓವರ್​ ಕೆಳಗಡೆ ಕ್ರಿಕೆಟ್​ ಅಡಿದ ದ್ರಾವಿಡ್​, ಕುಂಬ್ಳೆ, ಶ್ರೀನಾಥ್​…

ಅಜ್ಮತುಲ್ಲಾ ಒಮರ್ಜೈ ಅಗ್ರ ಕ್ರಮಾಂಕಕ್ಕೆ ಸಂಪೂರ್ಣವಾಗಿ ಸರಿಹೊಂದುತ್ತಾರೆ. 2023 ರ ಏಕ ದಿನ ವಿಶ್ವ ಕಪ್​ನಲ್ಲಿ ಅವರು 9 ಪಂದ್ಯಗಳಲ್ಲಿ 350 ಕ್ಕೂ ಹೆಚ್ಚು ರನ್ ಮತ್ತು 7 ವಿಕೆಟ್​​ಗಳನ್ನು ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ನೂರ್ ಅಹ್ಮದ್ ಮತ್ತು ಫಜಲ್ಹಕ್ ಫಾರೂಕಿ ಅವರಿಗಿಂತ ನಂತರದಲ್ಲಿ 23 ವರ್ಷದ ವೇಗಿ ಪಂದ್ಯಾವಳಿಯಲ್ಲಿ ತಮ್ಮ ದೇಶದ ಎರಡನೇ ಅತಿ ಹೆಚ್ಚು ರನ್ ಸ್ಕೋರರ್ ಮತ್ತು ಐದನೇ ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದಾರೆ. ಟಿ 20 ಯಲ್ಲಿ ಅವರ ದಾಖಲೆಯೂ ತುಂಬಾ ಕಳಪೆಯಾಗಿಲ್ಲ. ಆಡಿದ 62 ಪಂದ್ಯಗಳಲ್ಲಿ, ಅವರು ಬ್ಯಾಟ್​ನಿಂದ 129.51 ಸರಾಸರಿಯಲ್ಲಿ ರನ್​ ಮಾಡಿದ್ದಾರೆ. 59 ವಿಕೆಟ್​​ಗಳನ್ನು ಪಡೆದಿದ್ದಾರೆ.

Continue Reading

ಕ್ರಿಕೆಟ್

IPL 2024 : ಐಪಿಎಲ್​ ಹರಾಜಿನಲ್ಲಿ ಆರ್​ಸಿಬಿ ಆಯ್ಕೆಮಾಡಿದ ಅತ್ಯುತ್ತಮ ಆಟಗಾರರ ವಿವರ ಇಲ್ಲಿದೆ

IPL 2024 : ಆರ್​ಸಿಬಿಯ ಅತ್ಯುತ್ತಮ ಆಯ್ಕೆಗಳಲ್ಲಿ ನಾಲ್ಕು ಬ್ಯಾಟರ್​ಗಳಲ್ಲಿ ಒಬ್ಬರು ಬೌಲರ್ ಇದ್ದಾರೆ. ಅವರು ಎಲ್ಲ ಕಾಲಕ್ಕೂ ಮಿಂಚಿದ್ದಾರೆ.

VISTARANEWS.COM


on

RCB Team
Koo

ಬೆಂಗಳೂರು: ಈ ಹಿಂದಿನ ಐಪಿಎಲ್ ಹರಾಜುಗಳಲ್ಲಿ (IPL 2024) ರಾಯಲ್ ಚಾಲೆಂಜರ್ಸ್ (RCB) ಗೆ ಅದ್ಭುತಗಳನ್ನು ಮಾಡಿದ ಆಟಗಾರರನ್ನು ಆಯ್ಕೆ ಮಾಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್​​ನ ಕಳೆದ 16 ಆವೃತ್ತಿಗಳಲ್ಲಿ, ಹಲವಾರು ಆಟಗಾರರು ಈ ತಂಡಕ್ಕೆ ತಮ್ಮ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯವನ್ನು ನೀಡಿದ್ದಾರೆ. ಈ ಆಟಗಾರರು ತಮಗೆ ನೀಡಲಾದ ಬೆಲೆಯನ್ನು ಸಮರ್ಥಿಸಿಕೊಂಡಿದ್ದಾರೆ. ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ನ ಅತ್ಯಂತ ಜನಪ್ರಿಯ ಫ್ರಾಂಚೈಸಿಗಳಲ್ಲಿ ಆರ್​ಸಿಬಿ ಒಂದಾಗಲು ಅವರೆಲ್ಲರೂ ಸಹಾಯ ಮಾಡಿದ್ದಾರೆ. ಆದ್ದರಿಂದ, ಐಪಿಎಲ್ ಹರಾಜು ಇತಿಹಾಸದಲ್ಲಿ ಆರ್​ಸಿಬಿಯ ಅತ್ಯುತ್ತಮ ಆಯ್ಕೆಗಳು ಯಾವುದೆಂದು ನೋಡೋಣ.

  • ವಿರಾಟ್ ಕೊಹ್ಲಿ 2008 $30,000
  • ಎಬಿ ಡಿವಿಲಿಯರ್ಸ್ 2011 – 5.6 ಕೋಟಿ ರೂ.
  • ಕ್ರಿಸ್ ಗೇಲ್ 2011 – 2.9 ಕೋಟಿ ರೂ.
  • ಯಜುವೇಂದ್ರ ಚಾಹಲ್ 2014 – 10 ಲಕ್ಷ ರೂ.
  • ಗ್ಲೆನ್ ಮ್ಯಾಕ್ಸ್ವೆಲ್ 2021 – 14.25 ಕೋಟಿ ರೂ.

ಯಾವ ವರ್ಷ ಯಾವ ಆಟಗಾರ

ವಿರಾಟ್ ಕೊಹ್ಲಿ: ಕೇವಲ 30 ಸಾವಿರ ಡಾಲರ್​​ಗೆ ಆಯ್ಕೆಯಾದ ಕೊಹ್ಲಿ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶ್ರೇಷ್ಠ ಆಟಗಾರ ಹಾಗೂ ಅವಿಭಾಗ್ಯ ಅಂಗ. ಆರ್​ಸಿಬಿ ಎಂದರೆ ಕೊಹ್ಲಿ, ಕೊಹ್ಲಿ ಎಂದರೆ ಆರ್​​ಸಿಬಿ ಎನ್ನುವಷ್ಟು ಮಟ್ಟಕ್ಕಿದೆ. ಅವರು ತಂಡಕ್ಕೆ ಕೊಟ್ಟ ಹಣವನ್ನು ಬಡ್ಡಿಯೊಂದಿಗೆ ಮರುಪಾವತಿ ಮಾಡಿದ್ದಾರೆ ಎನ್ನಬಹುದು. ಲೀಗ್​ನ 16 ಆವೃತ್ತಿಗಳಲ್ಲಿ ಆಡಿರುವ ಕೊಹ್ಲಿ ಈ ಬಾರಿಯೂ ಅದೇ ಫ್ರಾಂಚೈಸಿಯನ್ನು ಪ್ರತಿನಿಧಿಸುತ್ತಿದ್ದಾರೆ. 237 ಪಂದ್ಯಗಳನ್ನಾಡಿರುವ ಕೊಹ್ಲಿ 6, 624 ರನ್ ಬಾರಿಸಿದ್ದಾರೆ. ಇದರಲ್ಲಿ ಐದು ಶತಕಗಳು ಹಾಗೂ 44 ಫೋರ್​ಗಳು ಸೇರಿಕೊಂಡಿವೆ.

ಎಬಿ ಡಿವಿಲಿಯರ್ಸ್: ಸಾರ್ವಕಾಲಿಕ ಅತ್ಯುತ್ತಮ ಟಿ 20 ಬ್ಯಾಟರ್​​ ಎಂದು ಪರಿಗಣಿಸಲ್ಪಟ್ಟ ಎಬಿ ಡಿವಿಲಿಯರ್ಸ್ 2011 ರಿಂದ 2021 ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 157 ಪಂದ್ಯಗಳನ್ನು ಆಡಿದ್ದಾರೆ. 360 ಡಿಗ್ರಿ ಬ್ಯಾಟ್ಸ್ಮನ್ ತಮ್ಮ ಐಪಿಎಲ್ ವೃತ್ತಿಜೀವನವನ್ನು ಈ ಫ್ರಾಂಚೈಸಿಯಲ್ಲಿಯೇ ಕೊನೆಗೊಳಿಸಿದ್ದಾರೆ. 158.33 ಸ್ಟ್ರೈಕ್ ರೇಟ್​ನಲ್ಲಿ ಅವರು 4522 ರನ್ ಗಳಿಸಿದ್ದಾರೆ.

ಕ್ರಿಸ್ ಗೇಲ್: ಯೂನಿವರ್ಸಲ್ ಬಾಸ್ ಟಿ 20 ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಗೇಲ್ 2011 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡರು ಮತ್ತು ಮುಂದಿನ 7 ಋತುಗಳಲ್ಲಿ ಎಲ್ಲ ತಂಡಗಳ ಬೌಲರ್​ಗಳ ಮೇಲೆ ಪ್ರಾಬಲ್ಯ ಸಾಧಿಸಿದರು. 43.29ರ ಸರಾಸರಿಯಲ್ಲಿ 154.40ರ ಸ್ಟ್ರೈಕ್ ರೇಟ್​ನಲ್ಲಿ ಅವರು 3420 ರನ್ ಗಳಿಸಿದ್ದಾರೆ. ಅವರು ಕೊನೆಯಲ್ಲಿ ಪಂಜಾಬ್​ ಕಿಂಗ್ಸ್​ ಸೇರಿಕೊಂಡರು. ಅಲ್ಲಿಂದ ಅವರು ನಿವೃತ್ತಿ ಪಡೆದುಕೊಂಡರು.

ಯಜುವೇಂದ್ರ ಚಹಲ್: 2011 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯುಜ್ವೇಂದ್ರ ಚಹಲ್ ಅವರನ್ನು ಖರೀದಿಸಿತು. ಆ ವೇಳೆ ಅವರು ಕೇವಲ 10 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. ಲೆಗ್ ಸ್ಪಿನ್ನರ್​ ಫ್ರಾಂಚೈಸಿಯ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 100ಕ್ಕೂ ಹೆಚ್ಚು ಪಂದ್ಯಗಳನ್ನಾಡಿ 100ಕ್ಕೂ ಹೆಚ್ಚು ವಿಕೆಟ್ ಪಡೆದ ಆರ್​ಸಿಬಿ ಬೌಲರ್ ಎಂಬ ಹೆಗ್ಗಳಿಕೆಗೆ ಚಹಲ್ ಪಾತ್ರರಾಗಿದ್ದಾರೆ. ಆದರೆ, ಅವರು ಬಳಿಕ ಕೈಬಿಡಲಾಯಿತು. ಅವರು ರಾಜಸ್ಥಾನ್ ರಾಯಲ್ಸ್ ತಂಡ ಸೇರಿಕೊಂಡು ಮಿಂಚುತ್ತಿದ್ದಾರೆ. ಅವರನ್ನು ತಂಡ ಕೈಬಿಟ್ಟಿರುವುದು ದೊಡ್ಡ ಮಟ್ಟದ ಅಚ್ಚರಿಕೆ ಕಾರಣವಾಗಿತ್ತು. ಹಿರಿಯ ಆಟಗಾರನಾದ ವಿರಾಟ್​ ಕೊಹ್ಲಿ ಅಸಮಾಧಾನಕ್ಕೂ ಕಾರಣವಾಗಿತ್ತು.

ಇದನ್ನೂ ಓದಿ : IPL 2024 : ರೋಹಿತ್​, ಪಾಂಡ್ಯ ಅಲ್ಲ; ಮುಂಬಯಿ ಇಂಡಿಯನ್ಸ್​ ತಂಡಕ್ಕೆ ಈ ಬಾರಿ ಹೊಸ ನಾಯಕ?

ಗ್ಲೆನ್ ಮ್ಯಾಕ್ಸ್ವೆಲ್: ಆಕ್ರಮಣಕಾರಿ ಮಧ್ಯಮ ಕ್ರಮಾಂಕದ ಬ್ಯಾಟರ್​​ 2021 ರಲ್ಲಿ ಫ್ರಾಂಚೈಸಿಗೆ ಸೇರಿದರು. ಕೇವಲ 42 ಪಂದ್ಯಗಳನ್ನು ಆಡಿರುವ ಮ್ಯಾಕ್ಸ್​ವೆಲ್ ಈಗಾಗಲೇ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಅವರ 1214 ರನ್​ಗಳ ದಾಖಲೆಯ 161.43 ಸ್ಟ್ರೈಕ್ ರೇಟ್​ನ ಬ್ಯಾಟಿಂಗ್​ನಲ್ಲಿ ಬಂದಿವೆ. ಇದು ಆರ್​ಸಿಬಿ ತಂಡದ ಇತಿಹಾಸಲ್ಲಿಯೇ ಅತಿ ಹೆಚ್ಚು.

Continue Reading

ಕ್ರೀಡೆ

Pro Kabaddi : ಮುಂಬಾ ವಿರುದ್ಧ ಜಯಂಟ್ಸ್​​ಗೆ 39-37 ಅಂಕಗಳ ಜಯ

Pro Kabaddi : ಆತಿಥೇಯ ಗುಜರಾತ್​ ತಂಡ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಭರ್ಜರಿ ಮುನ್ನಡೆ ಪಡೆದುಕೊಂಡಿತು.

VISTARANEWS.COM


on

Kabaddi news
Koo

ಅಹಮದಾಬಾದ್: ಸೋನು ಜಗ್ಲಾನ್ ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು ಮತ್ತು ಮಂಗಳವಾರ ಗುಜರಾತ್ ಜೈಂಟ್ಸ್​​ ತಂಡದ ಪ್ರೊ ಕಬಡ್ಡಿ ಲೀಗ್​​ನ ಹಾಲಿ ಆವೃತ್ತಿಯಲ್ಲಿ (Pro Kabaddi) ಹ್ಯಾಟ್ರಿಕ್ ಗೆಲುವಿನ ಹೀರೋ ಆಗಿ ಹೊರಹೊಮ್ಮಿದರು. ಕೊನೆಯ ನಿಮಿಷದಲ್ಲಿ ಸೋನು ಗಳಿಸಿದ ಸೂಪರ್ ರೈಡ್ ಗೋಲುಗಳ ನೆರವಿನಿಂದ ಜಯಂಟ್ಸ್ ತಂಡ ಯು ಮುಂಬಾ ವಿರುದ್ಧ 39-37 ಅಂಕಗಳ ಅಂತರದಿಂದ ಜಯ ಸಾಧಿಸಿತು. ಅನುಭವಿ ಡಿಫೆಂಡರ್ ಫಜಲ್ ಅತ್ರಾಚಲಿ ಮತ್ತು ಅವರ ತಂಡವು ಗೆಲುವಿನೊಂದಿಗೆ ಅಭಿಯಾನವನ್ನು ಆರಂಭಿಸಿತು.

ಮೊದಲ ಕೆಲವು ನಿಮಿಷಗಳಲ್ಲಿ ಯು ಮುಂಬಾ ಉತ್ತಮವಾಗಿ ಆಡಿತು. 5ನೇ ನಿಮಿಷದಲ್ಲಿ ಗುಮನ್ ಸಿಂಗ್ ಗಳಿಸಿದ ಎರಡು ಅಂಕಗಳ ನೆರವಿನಿಂದ ಯು ಮುಂಬಾ 7-5ರ ಮುನ್ನಡೆ ಸಾಧಿಸಿತು. ಇದರ ನಂತರ, ಜೈಂಟ್ಸ್ 7 ನೇ ನಿಮಿಷದಲ್ಲಿ ತಮ್ಮ ಟ್ರಂಪ್ ಏಸ್ ಸೋನು ಜಗ್ಲಾನ್ ಅವರನ್ನು ಮ್ಯಾಟ್​​ಗೆ ಕರೆತಂದಿತು. ಅವರು ಆರಂಭದಲ್ಲಿ ವಿಫಲರಾದರು. ರಿಂಕು ಸಿಂಗ್ ಅವರನ್ನು ರನ್ನಿಂಗ್ ಹ್ಯಾಂಡ್ ಟಚ್ ಮತ್ತು ಬೋನಸ್ ಪಾಯಿಂಟ್​ ಪಡೆದ ಎಚ್.ಎಸ್.ರಾಕೇಶ್ ಜಯಂಟ್ಸ್ ತಂಡಕ್ಕೆ 10-9ರ ಅಲ್ಪ ಮುನ್ನಡೆ ತಂದುಕೊಟ್ಟರು.

11ನೇ ನಿಮಿಷದಲ್ಲಿ ಮಹೇಂದ್ರ ಸಿಂಗ್ ಗಳಿಸಿದ ಅದ್ಭುತ ಸೂಪರ್ ಟ್ಯಾಕಲ್ ಪಾಯಿಂಟ್​ನಿಂದ ಯು ಮುಂಬಾ 12-10ರ ಮುನ್ನಡೆ ಸಾಧಿಸಿತು. ಸೋನು ಡೂ ಆರ್​ ಡೈ ರಡ್​ ಮೂಲಕ ಅಂತರವನ್ನು ತಗ್ಗಿಸಿದರು. ನಂತರ ಗುಮನ್ ಮತ್ತೊಂದು ರೈಡ್ ಪಾಯಿಂಟ್ನೊಂದಿಗೆ ತಮ್ಮ ತಂಡವನ್ನು ಬಲಪಡಿಸಿದರು.

ಯು ಮುಂಬಾ ಉತ್ತಮ ಮುನ್ನಡೆಯೊಂದಿಗೆ ದ್ವಿತೀಯಾರ್ಧವನ್ನು ತಲುಪುತ್ತದೆ ಎಂದು ತೋರಿತು. ಆದರೆ ಐದು ನಿಮಿಷಗಳು ಬಾಕಿ ಇರುವಾಗ ಫಜಲ್ ಮ್ಯಾಜಿಕ್ ಮಾಡಿದರು. ಮೊದಲಿಗೆ, ಅವರು ರೇಡ್​ ಹೋಗಿ ತಮ್ಮ ಪ್ರತಿಸ್ಪರ್ಧಿ ನಾಯಕ ಸುರಿಂದರ್ ಸಿಂಗ್ ಅವರನ್ನು ಔಟ್ ಮಾಡಿದರು. ನಂತರ ಸೂಪರ್ ಟ್ಯಾಕಲ್​ನೊಂದಿಗೆ ಅಂತರವನ್ನು 16-18 ಕ್ಕೆ ತಗ್ಗಿಸಿದರು.

ದ್ವಿತೀಯಾರ್ಧದ ಆರಂಭದಲ್ಲಿ ಸೋನು ಗಳಿಸಿದ ಮೊದಲ ರೈಡ್ ಪಾಯಿಂಟ್ ಜಯಂಟ್ಸ್ ಗೆ ಸಮಬಲ ತಂದುಕೊಟ್ಟಿತು. ಇದರ ನಂತರ, ಸೋನು ರಿಂಕು ಸಿಂಗ್ ಮತ್ತು ಮಹೇಂದ್ರ ಅವರನ್ನು ಔಟ್ ಮಾಡಿ ಯು ಮುಂಬಾವನ್ನು ಆಲ್ಔಟ್ ಮಾಡಿದರು. ಮುಂದಿನ ರೇಡ್​ನಲ್ಲಿ ಯು ಮುಂಬಾ 23-19 ಅಂಕಗಳ ಮುನ್ನಡೆ ಸಾಧಿಸಿತು. ಸೋನು ಅವರ ಅದ್ಭುತ ರೈಡಿಂಗ್ ಮತ್ತು ಬಲವಾದ ಡಿಫೆನ್ಸ್ ಆಧಾರದ ಮೇಲೆ, ಜೈಂಟ್ಸ್ 30 ನಿಮಿಷಗಳಲ್ಲಿ 30-22 ಮುನ್ನಡೆ ಸಾಧಿಸಿತು.

ಇದನ್ನೂ ಓದಿ : Rahul Dravid : ರಿಚ್ಮಂಡ್​ ಸರ್ಕಲ್ ಫ್ಲೈಓವರ್​ ಕೆಳಗಡೆ ಕ್ರಿಕೆಟ್​ ಅಡಿದ ದ್ರಾವಿಡ್​, ಕುಂಬ್ಳೆ, ಶ್ರೀನಾಥ್​…

ಯು ಮುಂಬಾ ಪರ ಗುಮನ್ ಸತತ ಮೂರು ಪ್ರಯತ್ನಗಳಲ್ಲಿ ಮೂರು ಅಂಕಗಳನ್ನು ಗಳಿಸಿದರು ಮತ್ತು ನಂತರ ಇರಾನಿನ ಆಲ್ರೌಂಡರ್​ಗಳಾಧ ಅಮೀರ್ ಮೊಹಮ್ಮದ್ ಜಫರ್ದಾನೇಶ್ ಮತ್ತು ಪ್ರಣಯ್ ರಾಣೆ ವೇಗದ ರೇಡ್​ನಿಂದ ಮುಂಬಾವನ್ನು 30-34 ಕ್ಕೆ ಹಿಗ್ಗಿತು. ನಂತರ ಸೋನು ತನ್ನ ಪರಾಕ್ರಮ ತೋರಿಸಿದರು. ಪಂದ್ಯದ ಕೊನೆಯ ನಿಮಿಷದಲ್ಲಿ, ಅವರು ಅದ್ಭುತವಾದ ಮೂರು ಪಾಯಿಂಟ್ ಸೂಪರ್ ರೈಡ್ ಅನ್ನು ಮಾಡಿ ಜೈಂಟ್ಸ್​​ಗೆ ಸತತ ಮೂರನೇ ಗೆಲುವನ್ನು ತಂದುಕೊಟ್ಟರು/

ಬುಧವಾರ ನಡೆಯಲಿರುವ ಪಂದ್ಯದ ವಿವರ ಇಲ್ಲಿದೆ

  • ಪಂದ್ಯ 1: ತೆಲುಗು ಟೈಟಾನ್ಸ್ ವಿರುದ್ಧ ಪಾಟ್ನಾ ಪೈರೇಟ್ಸ್ – ರಾತ್ರಿ 8 ಗಂಟೆ
  • ಪಂದ್ಯ 2: ಯುಪಿ ಯೋಧಾಸ್ ವಿರುದ್ಧ ಹರಿಯಾಣ ಸ್ಟೀಲರ್ಸ್ – ರಾತ್ರಿ 9 ಗಂಟೆ

ಪ್ರೊ ಕಬಡ್ಡಿ ಲೀಗ್​ನ ಸೀಸನ್ 10 ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್​ನಲ್ಲಿ ನೇರ ಪ್ರಸಾರವಾಗಲಿದೆ ಮತ್ತು ಡಿಸ್ನಿ + ಹಾಟ್​ಸ್ಟಾರ್​ನಲ್ಲಿ ಉಚಿತವಾಗಿ ಪ್ರಸಾರವಾಗಲಿದೆ.

Continue Reading
Advertisement
kim
ವಿದೇಶ5 mins ago

Viral Video: ತುಂಬಿದ ಸಭೆಯಲ್ಲಿ ಕಣ್ಣೀರಿಟ್ಟ ಉತ್ತರ ಕೊರಿಯಾ ಸರ್ವಾಧಿಕಾರಿ!

narendra modi amit shah jp nadda
ದೇಶ18 mins ago

Assembly Election 2023: 3 ರಾಜ್ಯಗಳಲ್ಲೂ ಮುಖ್ಯಮಂತ್ರಿಯಾಗಿ ಬಿಜೆಪಿಯಿಂದ ಹೊಸ ಮುಖ

Vinay Gowda and sangeetha Bigg boss
ಬಿಗ್ ಬಾಸ್18 mins ago

BBK SEASON 10: ಪಾತ್ರದಿಂದ ಹೊರಗೆ ಬಂದ್ರೆ ಸಂಗೀತಾ ಟೀಮ್‌ಗೆ ʻಹುಚ್ಚೇಟುʼ ಕೊಡ್ತೀನಿ ಎಂದ ವಿನಯ್‌!

murder case in Bengaluru
ಕರ್ನಾಟಕ33 mins ago

Murder Case : ಸ್ನೇಹಿತನ ಹಣ ಕೊಡಿಸಿ ಕಿರಿಕ್ ಮಾಡಿಕೊಂಡು ಹೆಣವಾದ ಯುವಕ!

Government Job Vistara Exclusive
ಉದ್ಯೋಗ52 mins ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

danish
ಕ್ರಿಕೆಟ್57 mins ago

Danish Kaneria: ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ; ಕಾರಣವೇನು?

Snehith Gowda Became Villain In Bigg Boss Kannada in rakshasa task
ಬಿಗ್ ಬಾಸ್1 hour ago

BBK SEASON 10: ನ್ಯಾಯವಾಗಿ ಆಡೋಕ್‌ ಬಂದಿಲ್ಲ ಅಂದ್ರೆ ಹೋಗ್ತಿರ್ಬೇಕು; ಸ್ನೇಹಿತ್‌ ವಿರುದ್ಧ ರಕ್ಕಸರು ಉರಿ ಉರಿ!

pranab mukherjee and rahul gandhi
ದೇಶ1 hour ago

ʼರಾಹುಲ್‌ ಗಾಂಧಿಗೆ ರಾಜಕೀಯದಲ್ಲಿ ಪ್ರಬುದ್ಧತೆ ಇಲ್ಲʼ ಎಂದಿದ್ದರು ಪ್ರಣಬ್‌ ಮುಖರ್ಜಿ!

Murder case in kopal
ಕರ್ನಾಟಕ1 hour ago

Murder Case : ನಿದ್ರೆಗೆ ಜಾರಿದಾಗ ವ್ಯಕ್ತಿಯ ಕತ್ತು ಕೊಯ್ದ ಹಂತಕರು!

gold bride
ಕರ್ನಾಟಕ2 hours ago

Gold Rate Today: ಬಂಗಾರದ ಬೆಲೆಯಲ್ಲಿ ತುಸು ಇಳಿಕೆ, ಬೆಳ್ಳಿ ದರವೂ ಕುಸಿತ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Government Job Vistara Exclusive
ಉದ್ಯೋಗ52 mins ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

read your daily horoscope predictions for december 6 2023
ಪ್ರಮುಖ ಸುದ್ದಿ8 hours ago

Dina Bhavishya : ಈ ರಾಶಿಯವರು ಸುಮ್ಮನಿದ್ದರೂ ನಡೆಯುತ್ತೆ ಕಲಹ!

CM Siddaramaiah and Black magic
ಕರ್ನಾಟಕ16 hours ago

Belagavi Winter Session: ಸಿದ್ದರಾಮಯ್ಯಗೆ ಮಾಟ – ಮಂತ್ರ; ಗಾಳಿ ಬಿಡಿಸಲು ರೇವಣ್ಣಗೆ ಅಶೋಕ್‌ ಮನವಿ!

R Ashok in assembly session
ಕರ್ನಾಟಕ16 hours ago

Belagavi Winter Session: ಟಿಸಿ ಬದಲಾಯಿಸಲು ಹಣ ಕೇಳ್ತಾರೆ, ರೈತರು ಬದುಕೋದು ಬೇಡವಾ? ಅಶೋಕ್‌ ಕ್ಲಾಸ್‌

R Ashok
ಕರ್ನಾಟಕ17 hours ago

Belagavi Winter Session: ಬರ ಪ್ರದೇಶಕ್ಕೆ ಹೋಗದ ಸಿಎಂ, ಸಚಿವರು; ಸರ್ಕಾರಕ್ಕೆ ಆರ್.‌ ಅಶೋಕ್‌ ಚಾಟಿ

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ2 days ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ3 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ3 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ4 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

ಟ್ರೆಂಡಿಂಗ್‌