Australian Open | ಸರ್ಬಿಯಾದ ನೊವಾಕ್​ ಜೊಕೊವಿಕ್​ ಆಸ್ಟ್ರೇಲಿಯನ್​ ಓಪನ್​ ಚಾಂಪಿಯನ್​ - Vistara News

ಕ್ರೀಡೆ

Australian Open | ಸರ್ಬಿಯಾದ ನೊವಾಕ್​ ಜೊಕೊವಿಕ್​ ಆಸ್ಟ್ರೇಲಿಯನ್​ ಓಪನ್​ ಚಾಂಪಿಯನ್​

ಗ್ರೀಕ್​ನ ಸ್ಫೆಫಾನೋಸ್ ಸಿಸಿಪಾಸ್​ ವಿರುದ್ಧ ಫೈನಲ್​ನಲ್ಲಿ ಗೆದ್ದ ನೊವಾಕ್​ ಜೊಕೊವಿಕ್​ ಅಸ್ಟ್ರೇಲಿಯಾ ಓಪನ್​ (Australian Open) ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿದರು.

VISTARANEWS.COM


on

djokovic
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೆಲ್ಬೋರ್ನ್​: ಸರ್ಬಿಯಾದ ಟೆನಿಸ್​ ಆಟಗಾರ ನೊವಾಕ್​ ಜೊಕೊವಿಕ್​ ಪ್ರತಿಷ್ಠಿತ ಆಸ್ಟ್ರೇಲಿಯನ್​ ಓಪನ್ (Australian Open) ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ. ಅವರ ಪಾಲಿಗೆ ಇದು 22ನೇ ಗ್ರ್ಯಾನ್​ಸ್ಲಾಮ್​ ಪ್ರಶಸ್ತಿಯಾಗಿದ್ದು, ಇದರೊಂದಿಗೆ ಅವರು ಅಷ್ಟೇ ಪ್ರಶಸ್ತಿಗಳನ್ನು ಗೆದ್ದಿರುವ ಸ್ಪೇನ್​ನ ರಾಫೆಲ್​ ನಡಾಲ್​ ಅವರ ಸಾಧನೆಯನ್ನು ಸರಿಗಟ್ಟಿದರು. ಜತೆಗೆ 10 ಆಸ್ಟ್ರೇಲಿಯನ್​ ಓಪನ್​ ಟ್ರೋಫಿ ಗೆದ್ದಿರುವ ಐತಿಹಾಸಿಕ ದಾಖಲೆಯನ್ನೂ ಸೃಷ್ಟಿಸಿದರು.

ಭಾನುವಾರ (ಜನವರಿ 29) ನಡೆದ ಫೈನಲ್​ ಸ್ಪರ್ಧೆಯಲ್ಲಿ ಅವರು ಗ್ರೀಸ್​ನ ಸ್ಪೆಫಾನೋಸ್ ಸಿಸಿಪಾಸ್​ ವಿರುದ್ಧ 6-3, 7-6 (7-4), 7-6(7-5) ನೇರ ಸೆಟ್​ಗಳಿಂದ ವಿಜಯ ಸಾಧಿಸಿ ಟ್ರೋಫಿಗೆ ಮುತ್ತಿಟ್ಟರು. ಪಂದ್ಯದ ಕೊನೇ ತನಕವೂ ಎದುರಾಳಿ ಮೇಲೆ ಪಾರಮ್ಯ ಸಾಧಿಸಿದ ಸರ್ಬಿಯಾದ ಆಟಗಾರ ಹೊಸ ದಾಖಲೆ ಬರೆದರು.

ಕಳೆದ ವರ್ಷ ಜೊಕೊವಿಕ್​ಗೆ ಕೊರೊನಾ ಲಸಿಕೆ ಹಾಕಿಸಿಕೊಳ್ಳದ ಕಾರಣ ಆಸ್ಟ್ರೇಲಿಯಾ ಓಪನ್​ ಟೆನಿಸ್​ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಆಡುವುದಕ್ಕಾಗಿ ಬಂದಿದ್ದ ಅವರನ್ನು ಏರ್​ಪೋರ್ಟ್​ನಲ್ಲಿಯೇ ತಡೆದು ವಿಚಾರಣೆ ನಡೆಸಿ ವಾಪಸ್​ ತವರಿಗೆ ಕಳುಹಿಸಲಾಗಿತ್ತು. ಈ ಅವಮಾನ ಎದುರಿಸಿದ್ದ ಅವರು ಹಾಲಿ ವರ್ಷದಲ್ಲಿ ಚಾಂಪಿಯನ್​ಪಟ್ಟ ಅಲಂಕರಿಸುವ ಮೂಲಕ ಉತ್ತರ ಕೊಟ್ಟರು.

ಇದನ್ನೂ ಓದಿ | Australian Open : ಬೆಲಾರಸ್​ನ ಅರಿನಾ ಸಬಲೆಂಕಾ ಆಸ್ಟ್ರೇಲಿಯನ್​ ಓಪನ್ ಚಾಂಪಿಯನ್​

ಸಿಸಿಪಾಸ್​ ಅವರು 2021ರ ಫ್ರೆಂಚ್​ ಓಪನ್​ ಟೂರ್ನಿಯ ಫೈನಲ್​ನಲ್ಲೂ ಜೊಕೊವಿಕ್​ಗೆ ಎದುರಾಗಿದ್ದರು. ಅಂದು ಕೂಡ ಸರ್ಬಿಯಾದ ಆಟಗಾರನೇ ಮೇಲುಗೈ ಸಾಧಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

T20 World Cup : ವಿಶ್ವ ಕಪ್​ ತಂಡದಲ್ಲಿ ಹಾರ್ದಿಕ್ ಪಾಂಡ್ಯಗೆ ನೋ ಚಾನ್ಸ್​; ಆಯ್ಕೆದಾರರ ಇಂಗಿತ ಬಹಿರಂಗ

T20 World Cup: ವರದಿಗಳ ಪ್ರಕಾರ, ಹಾರ್ದಿಕ್ ಪಾಂಡ್ಯ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ ಆಲ್​ರೌಂಡರ್ ಐಸಿಸಿ ಟಿ 20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಉದ್ದೇಶದಿಂದ ಅವರು ನಿಯಮಿತವಾಗಿ ಬೌಲಿಂಗ್ ಮಾಡಿದರೂ ಪ್ರತಿಫಲ ಸಿಗುತ್ತಿಲ್ಲ. ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್​ನ ಹೊಸ ನಾಯಕ ಒಂದೆರಡು ಪಂದ್ಯಗಳಿಗೆ ಬೌಲಿಂಗ್ ಮಾಡಲಿಲ್ಲ. ಇದು ಪಂಡಿತರು ಅವರ ಫಿಟ್ನೆಸ್ ಅನ್ನು ಪ್ರಶ್ನಿಸುವಂತೆ ಮಾಡಿತ್ತು

VISTARANEWS.COM


on

t20 World Cup
Koo

ಮುಂಬಯಿ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ (T20 World Cup) ಟೀಂ ಇಂಡಿಯಾ ಭರ್ಜರಿ ತಯಾರಿ ಆರಂಭಿಸಿದೆ. ಇದರ ಪರಿಣಾಮವಾಗಿ ರೋಹಿತ್ ಶರ್ಮಾ ಅವರು ರಾಹುಲ್ ದ್ರಾವಿಡ್ ಮತ್ತು ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರನ್ನು ಭೇಟಿಯಾಗಿ ಐಸಿಸಿ ಪಂದ್ಯಾವಳಿಗೆ ತಂಡದ ಆಯ್ಕೆಯ ಬಗ್ಗೆ ಚರ್ಚಿಸಿದ್ದಾರೆ. ಸಭೆಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಆಯ್ಕೆ ಪ್ರಮುಖ ಕಾರ್ಯಸೂಚಿಗಳಲ್ಲಿ ಒಂದಾಗಿತ್ತು. ಆದರೆ, ಫಾರ್ಮ್ ಕಳೆದುಕೊಂಡಿರುವ ಹಾಗೂ ಗಾಯದ ಆತಂಕ ಎದುರಿಸುತ್ತಿರುವ ಅವರು ತಂಡದಲ್ಲಿ ಚಾನ್ಸ್ ಪಡೆಯುವುದು ಬಹುತೇಕ ಕಷ್ಟ ಎನ್ನಲಾಗಿದೆ.

ವರದಿಗಳ ಪ್ರಕಾರ, ಹಾರ್ದಿಕ್ ಪಾಂಡ್ಯ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ ಆಲ್​ರೌಂಡರ್ ಐಸಿಸಿ ಟಿ 20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಉದ್ದೇಶದಿಂದ ಅವರು ನಿಯಮಿತವಾಗಿ ಬೌಲಿಂಗ್ ಮಾಡಿದರೂ ಪ್ರತಿಫಲ ಸಿಗುತ್ತಿಲ್ಲ. ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್​ನ ಹೊಸ ನಾಯಕ ಒಂದೆರಡು ಪಂದ್ಯಗಳಿಗೆ ಬೌಲಿಂಗ್ ಮಾಡಲಿಲ್ಲ. ಇದು ಪಂಡಿತರು ಅವರ ಫಿಟ್ನೆಸ್ ಅನ್ನು ಪ್ರಶ್ನಿಸುವಂತೆ ಮಾಡಿತ್ತು. ಕೆಲವು ಕ್ರಿಕೆಟ್​ ಪಂಡಿತರು ಪಾಂಡ್ಯ ಗಾಯಗೊಂಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದರು.

ಐಪಿಎಲ್ 2024 ರಲ್ಲಿ, ಹಾರ್ದಿಕ್ ಪಾಂಡ್ಯ ಇಲ್ಲಿಯವರೆಗೆ 6 ಪಂದ್ಯಗಳಲ್ಲಿ 4ರಲ್ಲಿ ಬೌಲಿಂಗ್ ಮಾಡಿದ್ದಾರೆ. ಅವರ ಇತ್ತೀಚಿನ ಬೌಲಿಂಗ್ ಪ್ರದರ್ಶನವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬಂದಿತು. ಅವರು ಪಂದ್ಯಾವಳಿಯಲ್ಲಿ ಇಲ್ಲಿಯವರೆಗೆ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿಲ್ಲ. ಸಿಎಸ್ಕೆ ವಿರುದ್ಧ ಅವರು ಕೇವಲ 3 ಓವರ್​ಗಲನ್ನು ಎಸೆಯುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ 43 ರನ್​ಗಳನ್ನು ಬಿಟ್ಟುಕೊಟ್ಟಿದ್ದರು. ಆದರೆ, 2 ವಿಕೆಟ್​ಗಳನ್ನು ಪಡೆದಿದ್ದರು.

ತಲೆ ನೋವಾಗಿರುವ ಪಾಂಡ್ಯ ಪತನ

ಅವರು ತಮ್ಮ ಮೊದಲ ಓವರ್​ನಲ್ಲಿ 15 ರನ್ ಬಿಟ್ಟುಕೊಟ್ಟಿದ್ದರು. ಆದರೆ ಎಂಎಸ್ ಧೋನಿ ಪಂದ್ಯದ ಕೊನೆಯ ಓವರ್​ನಲ್ಲಿ ಸತತ 3 ಸಿಕ್ಸರ್ಗಳನ್ನು ಬಾರಿಸಿದಾಗ ಅವರ ಬೌಲಿಂಗ್​​ ಚರ್ಚೆಯ ವಿಷಯವಾಯಿತು ಪಾಂಡ್ಯ 12 ಎಕಾನಮಿ ಹೊಂದಿದ್ದು, ಟೂರ್ನಿಯಲ್ಲಿ ಈವರೆಗೆ ಕೇವಲ 3 ವಿಕೆಟ್ ಮಾತ್ರ ಕಬಳಿಸಿದ್ದಾರೆ.

ಇದನ್ನೂ ಓದಿ: IPL 2024 : ನಾವು ಪುಟಿದೆದ್ದು ತಿರುಗೇಟು ನೀಡ್ತೇವೆ; ಆರ್​ಸಿಬಿ ಕೋಚ್​ ಭರವಸೆಯ ನುಡಿ

ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ತಂಡದಲ್ಲಿ ಏಕೈಕ ಹಿರಿಯ ವೇಗಿಯಾಗಿದ್ದಾರೆ. ಮೊಹಮ್ಮದ್ ಸಿರಾಜ್ ಟಿ 20 ಪಂದ್ಯಗಳಲ್ಲಿ ಕಳಪೆ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ವಿಶ್ವಕಪ್​​ಗಾಗಿ ಟೀ ಮ್ ಇಂಡಿಯಾ ತಂಡದಲ್ಲಿ ಅವಕಾಶ ಪಡೆಯಲು ಹಾರ್ದಿಕ್ ನಿಯಮಿತವಾಗಿ ಬೌಲಿಂಗ್ ಮಾಡಬೇಕು. ನಿಯಮಿತವಾಗಿ ವಿಕೆಟ್​ಗಳನ್ನು ಪಡೆಯಬೇಕು ಎಂಬುದು ಅತ್ಯಂತ ಮಹತ್ವದ್ದಾಗಿದೆ.

Continue Reading

ಕ್ರೀಡೆ

IPL 2024: ಮುಂಬೈ ಪಂದ್ಯದ ಟಾಸ್​ ಕಳ್ಳಾಟ ಬಿಚ್ಚಿಟ್ಟ ಆರ್​ಸಿಬಿ ನಾಯಕ; ವಿಡಿಯೊ ವೈರಲ್​

IPL 2024: ಆರ್​ಸಿಬಿ ತಂಡದ ನಾಯಕ ಫಾಫ್​ ಡು ಪ್ಲೆಸಿಸ್(Faf du Plessis) ಸನ್​ರೈಸರ್ಸ್​ ಹೈದರಾಬಾದ್(​Sunrisers Hyderabad) ಪಂದ್ಯದ ವಿರುದ್ಧದ ಟಾಸ್​ ವೇಳೆ​ ಪ್ಯಾಟ್​ ಕಮಿನ್ಸ್(Pat Cummins)​ ಜತೆ ಮುಂಬೈ ಎದುರಿನ ಪಂದ್ಯದ ಟಾಸ್​ ಕಳ್ಳಾಟದ ಘಟನೆಯನ್ನು ತೆರೆದಿಟ್ಟಿದ್ದಾರೆ.

VISTARANEWS.COM


on

IPL 2024
Koo

ಬೆಂಗಳೂರು: ಕಳೆದ ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಐಪಿಎಲ್(IPL 2024)​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು(MI vs RCB) ಹಾಗೂ ಮುಂಬೈ ಇಂಡಿಯನ್ಸ್​(Mumbai Indians) ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಪಡೆ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ಆದರೆ, ಪಂದ್ಯದ ಬಳಿಕ ಮುಂಬೈ ಗೆಲುವಿಗೆ ಕಾರಣ ಟಾಸ್​ ಫಿಕ್ಸಿಂಗ್​ ಎಂಬ ಕೂಗು ಜೋರಾಗಿ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಪಟ್ಟ ಕೆಲ ವಿಡಿಯೊಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದೀಗ ಈ ಘಟನೆಯ ನೈಜ ಕಾರಣವನ್ನು ಆರ್​ಸಿಬಿ ತಂಡದ ನಾಯಕ ಫಾಫ್​ ಡು ಪ್ಲೆಸಿಸ್(Faf du Plessis) ಸನ್​ರೈಸರ್ಸ್​ ಹೈದರಾಬಾದ್(​Sunrisers Hyderabad) ಪಂದ್ಯದ ವಿರುದ್ಧದ ಟಾಸ್​ ವೇಳೆ​ ಪ್ಯಾಟ್​ ಕಮಿನ್ಸ್(Pat Cummins)​ ಜತೆ ಚರ್ಚಿಸಿದ್ದಾರೆ. ಇದರ ವಿಡಿಯೊ ವೈರಲ್ ಆಗಿದ್ದು, ಮತ್ತೆ ಟಾಸ್​ ಫಿಕ್ಸ್​ ಚರ್ಚೆ ಮುನ್ನಲೆಗೆ ಬಂದಿದೆ.

ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಚಿನ್ನಶ್ವಾಮಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿತ್ತು. ಉಭಯ ತಂಡದ ನಾಯಕರು ಟಾಸ್​ಗೆ ಆಗಮಿಸಿದ ಈ ವೇಳೆ ಪ್ಯಾಟ್​ ಕಮಿನ್ಸ್ ಅವರು ಡು ಪ್ಲೆಸ್​ ಬಳಿಕ​ ಮುಂಬೈ ವಿರುದ್ಧದ ಟಾಸ್​ ಘಟನೆಯ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಡು ಪ್ಲೆಸಿಸ್​ ಪಾಂಡ್ಯ ಹಿಮ್ಮುಖವಾಗಿ ದೂರಕ್ಕೆ ಟಾಸ್​ ಕಾಯಿನ್​ ಚಿಮ್ಮಿಸಿದರು. ಮ್ಯಾಚ್​ ರೆಫ್ರಿಯಾಗಿದ್ದ ಜಾವಗಲ್​ ಶ್ರೀನಾಥ್(Javagal Srinath)​ ಅವರು ಕಾಯಿನ್​ ತಿರುಗಿಸಿ ಹೆಕ್ಕಿ ಪಾಂಡ್ಯ ಬಳಿ ಏನೋ ಕೇಳಿ ಟಾಸ್​ ಗೆದ್ದಿರುವಂತೆ ಹೇಳಿ ತಕ್ಷಣ ಅಲ್ಲಿಂದ ತೆರಳಿದರು ಎಂದು ಅಂದಿನ ಘಟನೆಯನ್ನು ನಟನೆಯ ಮೂಲಕ ತೋರಿಸಿದರು. ಈ ವಿಡಿಯೊ ವೈರಲ್​ ಆಗಿದ್ದು ನಿಜವಾಗಿಯೂ ಟಾಸ್​ ಫಿಕ್ಸಿಂಗ್​ ನಡೆದಿದೆಯಾ? ಎಂಬ ಚರ್ಚೆ ಮತ್ತೆ ಶುರುವಾಗಿದೆ.

ಚೇಸಿಂಗ್​ಗೆ ಯೋಗ್ಯವಾದ ವಾಂಖೆಡೆ ಸ್ಟೇಡಿಯಂನಲ್ಲಿ ಅಂಪೈರ್​ ಟಾಸ್​ ಕಾಯಿನ್​ ಬದಲಿಸಿ ಮುಂಬೈ ತಂಡಕ್ಕೆ ಸಹಕರಿಸಿದ್ದಾರೆ. ಇಲ್ಲವಾದರೆ ಆರ್​ಸಿಬಿ ಗೆಲ್ಲುತ್ತಿತ್ತು ಎಂದು ಅನೇಕ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಅಂಬಾನಿ ಮತ್ತು ಐಪಿಎಲ್​ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ IPL 2024: ವಿಮಾನ ಚಲಾಯಿಸಿದ ಯಜುವೇಂದ್ರ ಚಹಲ್; ವಿಡಿಯೊ ವೈರಲ್​

ಹೈದರಾಬಾದ್​ ವಿರುದ್ಧ 25 ರನ್​ ಸೋಲು


ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ತಂಡ ಹೈದರಾಬಾದ್​ ವಿರುದ್ಧ 25 ರನ್​ಗಳ ಸೋಲು ಕಂಡಿತು. ಟಾಸ್​ ಗೆದ್ದ ಆತಿಥೇಯ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಎಸ್​ಆರ್​ಎಚ್​ ತಂಡ ವಿಶ್ವ ದಾಖಲೆಯ 287 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆರ್​ಸಿಬಿ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 7 ವಿಕೆಟ್​ಗೆ 262 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ಪ್ಲೇ ಆಫ್ ಆಸೆ ಇನ್ನೂ ಜೀವಂತ

ಸದ್ಯದ ಪರಿಸ್ಥಿತಿಯಲ್ಲಿ ಆರ್‌ಸಿಬಿ ಪ್ಲೇ ಆಫ್ ಹಾದಿ ಸಂಪೂರ್ಣ ಮುಚ್ಚಿಲ್ಲ. ಆದರೆ, ಸತತವಾಗಿ ಗೆಲ್ಲಬೇಕಾದ ಒತ್ತಡ ತಂಡದ ಮೇಲಿದೆ. ಈಗಾಗಲೇ 7 ಪಂದ್ಯ ಆಡಿದ್ದು, 1 ಪಂದ್ಯ ಗೆದ್ದು, 6 ಪಂದ್ಯದಲ್ಲಿ ಸೋಲು ಕಂಡಿದೆ. 2 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ, ಲೀಗ್‌ ಹಂತದಲ್ಲಿ ಇನ್ನೂ 7 ಪಂದ್ಯಗಳ ಬಾಕಿ ಇದೆ. ಹೀಗಾಗಿ ಉಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರ ಪ್ಲೇ ಆಫ್ ಅವಕಾಶ ಇದೆ. ಜತೆಗೆ ಉಳಿದ ತಂಡಗಳ ಪ್ರದರ್ಶನವೂ ಆರ್‌ಸಿಬಿ ಪ್ಲೇಆಫ್ ಹಾದಿಯ ಮೇಲೆ ಪರಿಣಾಮ ಬೀರಲಿದೆ.

Continue Reading

ಪ್ರಮುಖ ಸುದ್ದಿ

IPL 2024 : ನಾವು ಪುಟಿದೆದ್ದು ತಿರುಗೇಟು ನೀಡ್ತೇವೆ; ಆರ್​ಸಿಬಿ ಕೋಚ್​ ಭರವಸೆಯ ನುಡಿ

IPL 2024: ಬ್ಯಾಟ್​ನೊಂದಿಗೆ ಅಂತಹ ಅದ್ಭುತ ಪ್ರದರ್ಶನದ ನಂತರ ತಂಡವು ಪಂದ್ಯದಿಂದ ಸಾಕಷ್ಟು ವಿಶ್ವಾಸ ಪಡೆದುಕೊಂಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್​ನ ಪ್ರಸಕ್ತ ಋತುವಿನ ಪ್ಲೇಆಫ್​ಗೆ ಅರ್ಹತೆ ಪಡೆಯುವ ಸಲುವಾಗಿ ಪ್ರತಿ ಪಂದ್ಯವೂ ಈಗ ತಂಡಕ್ಕೆ ನಾಕೌಟ್ ಪಂದ್ಯವಾಗಲಿದೆ ಎಂದು ಮುಖ್ಯ ಕೋಚ್ ಹೇಳಿದ್ದಾರೆ.

VISTARANEWS.COM


on

IPL 2024
Koo

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore ) ತಂಡವು ಎಸ್​ಆರ್​ಎಚ್ ವಿರುದ್ಧದ ಪಂದ್ಯದಲ್ಲಿ ಅದ್ಭುದ ಸಾಧನೆ ಮಾಡಿದೆ. ಆದಾಗ್ಯೂ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 6 ಸೋಲುಗಳನ್ನು ಅನುಭವಿಸಿರುವ ಫಾಫ್​ ಡು ಪ್ಲೆಸಿಸ್​ ತಂಡ ಪ್ಲೇಆಫ್​ ಹಂತದಿಂದ ಬಹುತೇಕ ಹೊರಕ್ಕೆ ಬಿದ್ದಿದೆ. ಆದರೆ ಕೋಚ್ ಆ್ಯಂ ಡಿ ಫ್ಲವರ್ ಮಾತ್ರ ಪುಟಿದೇಳುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂದಿನ ಪಂದ್ಯದಿಂದ ಸಕಾರಾತ್ಮಕ ಅಂಶಗಳನ್ನು ತೋರಿಸುತ್ತೇವೆ ಹಾಗೂ ಬಲವಾಗಿ ಮರಳುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

288 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಆರ್​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಮೊದಲ ವಿಕೆಟ್​ಗೆ 80 ರನ್​ಗಲ ಜೊತೆಯಾಟ ನೀಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ಇನ್ನಷ್ಟು ಉತ್ತಮವಾಗಿ ಆಡಿತ್ತು. “ನಾವು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ನೊಂದಿಗೆ ಉತ್ತಮ ಹೋರಾಟ ಸಂಘಟಿಸಿದ್ದೆವು. ಆ ಬಗ್ಗೆ ನನಗೆ ನಿಜವಾಗಿಯೂ ಹೆಮ್ಮೆ ಇದೆ. ನಾವು ಪಂದ್ಯವನ್ನು ಕಳೆದುಕೊಂಡಿದ್ದೇವೆ. ಆದರೆ ನಾವು ಹೋರಾಡಿದ ರೀತಿ ಬಗ್ಗೆ ನನಗೆ ನಿಜವಾಗಿಯೂ ಹೆಮ್ಮೆ ಇದೆ “ಎಂದು ಆ್ಯಂಡಿ ಫ್ಲವರ್ ಹೇಳಿದರು.

ಬ್ಯಾಟ್​ನೊಂದಿಗೆ ಅಂತಹ ಅದ್ಭುತ ಪ್ರದರ್ಶನದ ನಂತರ ತಂಡವು ಪಂದ್ಯದಿಂದ ಸಾಕಷ್ಟು ವಿಶ್ವಾಸ ಪಡೆದುಕೊಂಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್​ನ ಪ್ರಸಕ್ತ ಋತುವಿನ ಪ್ಲೇಆಫ್​ಗೆ ಅರ್ಹತೆ ಪಡೆಯುವ ಸಲುವಾಗಿ ಪ್ರತಿ ಪಂದ್ಯವೂ ಈಗ ತಂಡಕ್ಕೆ ನಾಕೌಟ್ ಪಂದ್ಯವಾಗಲಿದೆ ಎಂದು ಮುಖ್ಯ ಕೋಚ್ ಹೇಳಿದ್ದಾರೆ.

ಕಠಿಣ ರಾತ್ರಿ

ಇದು ಮೈದಾನದಲ್ಲಿ ನಿಜವಾಗಿಯೂ ಕಠಿಣ ರಾತ್ರಿಯಾಗಿತ್ತು, ಏಕೆಂದರೆ ಆ ತಂಡ ಸಾಕಷ್ಟು ಪ್ರಬಲವಾಗಿ ಆಡಿತು. ಹೀಗಾಗಿ ನಮ್ಮ ಅವಕಾಶಗಳು ಕ್ಷೀಣಿಸಿದವು. ನಾವು ಯೋಚಿಸುತ್ತೇವೆ ಮತ್ತು ನಾವು ಬಲವಾಗಿ ಹಿಂತಿರುಗುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: IND vs BNG: ಬಾಂಗ್ಲಾ ಟಿ20 ಸರಣಿಗೆ ಆಯ್ಕೆಯಾದ ಕನ್ನಡತಿ ಶ್ರೇಯಾಂಕಾ ಪಾಟೀಲ್

ಕೇವಲ 35 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಏಳು ಸಿಕ್ಸರ್​ಗಳ ಸಹಾಯದಿಂದ 83 ರನ್​ಗಳ ಅದ್ಭುತ ಇನ್ನಿಂಗ್ಸ್ ಆಡಿದ ಕಾರ್ತಿಕ್ ಅವರಿಗೆ ದೊಡ್ಡ ಮಟ್ಟದ ಪ್ರಶಂಸೆಯನ್ನು ಫ್ಲವರ್​ ವ್ಯಕ್ತಪಡಿಸಿದರು. “ದಿನೇಶ್ ಕಾರ್ತಿಕ್ ನಿಜವಾಗಿಯೂ ವಿಶ್ವಕಪ್ ತಂಡಕ್ಕೆ ಸೇರುವಷ್ಟು ಮಟ್ಟಿಗೆ ಉತ್ತೇಜನ ಪಡೆಯುತ್ತಿದ್ದಾರೆ. ಮೈದಾನದಲ್ಲಿ ಇನ್ನಷ್ಟು ಉತ್ತಮಗೊಳ್ಳುತ್ತಿದ್ದಾರೆ” ಎಂದು ಮುಖ್ಯ ಕೋಚ್ ಹೇಳಿದರು.

Continue Reading

ಕ್ರೀಡೆ

IND vs BNG: ಬಾಂಗ್ಲಾ ಟಿ20 ಸರಣಿಗೆ ಆಯ್ಕೆಯಾದ ಕನ್ನಡತಿ ಶ್ರೇಯಾಂಕಾ ಪಾಟೀಲ್

IND vs BNG: ಬೆನ್ನು ನೋವಿನ ಕಾರಣದಿಂದಾಗಿ ಜೆಮೀಮಾ ರೋಡ್ರಿಗಸ್​(Jemimah Rodrigues) ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಇತ್ತೀಚೆಗೆ ಭಾರತ ಆಡಿದ ಎಲ್ಲ ಸರಣಿಯಲ್ಲೂ ಜೆಮೀಮಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು.

VISTARANEWS.COM


on

IND vs BNG
Koo

ನವದೆಹಲಿ: ಇದೇ ತಿಂಗಳು ಭಾರತ ಮಹಿಳಾ ಕ್ರಿಕೆಟ್(IND vs BNG)​ ತಂಡ 5 ಪಂದ್ಯಗಳ ಟಿ20 ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಗಾಗಿ ಪ್ರಕಟಗೊಂಡ ತಂಡದಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್(Shreyanka Patil)​ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಮೊದಲ ಪಂದ್ಯ ಏಪ್ರಿಲ್​ 28ರಂದು ನಡೆಯಲಿದೆ.

ತಂಡವನ್ನು ಹರ್ಮನ್​ಪ್ರೀತ್​ ಕೌರ್​ ಮುನ್ನಡೆಸಲಿದ್ದಾರೆ. ಸ್ಮೃತಿ ಮಂಧನಾ ಉಪನಾಯಕಿಯಾಗಿದ್ದಾರೆ. ಇತ್ತೀಚೆಗೆ ಮುಕ್ತಾಯ ಕಂಡಿದ್ದ 2ನೇ ಆವೃತ್ತಿಯ ಡಬ್ಲ್ಯುಪಿಎಲ್​ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ ಆಶಾ ಸೋಭನಾ(Asha Sobhana), ಸಜನಾ ಸಜೀವನ್‌(Sajana Sajeevan) ಸೀನಿಯರ್​ ತಂಡದಲ್ಲಿ ಮೊದಲ ಕರೆ ಪಡೆದಿದ್ದಾರೆ. ಬೆನ್ನು ನೋವಿನ ಕಾರಣದಿಂದಾಗಿ ಜೆಮೀಮಾ ರೋಡ್ರಿಗಸ್​(Jemimah Rodrigues) ಸರಣಿಯಿಂದ ಹೊರಬಿದ್ದಿದ್ದಾರೆ. ಇತ್ತೀಚೆಗೆ ಭಾರತ ಆಡಿದ ಎಲ್ಲ ಸರಣಿಯಲ್ಲೂ ಜೆಮೀಮಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು.

ಭಾರತ ತಂಡ


ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಸ್ಮೃತಿ ಮಂಧನಾ, ಶಫಾಲಿ ವರ್ಮ, ಡಿ. ಹೇಮಲತಾ, ಸಜನಾ ಸಜೀವನ್‌, ರಿಚಾ ಘೋಷ್‌, ಯಾಸ್ತಿಕಾ ಭಾಟಿಯಾ, ರಾಧಾ ಯಾದವ್‌, ದೀಪ್ತಿ ಶರ್ಮ, ಪೂಜಾ ವಸ್ತ್ರಾಕರ್‌, ಅಮನ್‌ಜೋತ್‌ ಕೌರ್‌, ಶ್ರೇಯಾಂಕಾ ಪಾಟೀಲ್‌, ಸೈಕಾ ಇಶಾಖ್‌, ಆಶಾ ಸೋಭನಾ, ರೇಣುಕಾ ಸಿಂಗ್‌ ಠಾಕೂರ್‌, ಟಿತಾಸ್‌ ಸಾಧು.

ಸ್ಥಾನ ಪಡೆದ ಶ್ರೇಯಾಂಕ


21 ವರ್ಷದ ಶ್ರೇಯಾಂಕಾ ಪಾಟೀಲ್ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಆರ್‌ಸಿಬಿ ಮಹಿಳಾ ತಂಡಕ್ಕೆ ಆಯ್ಕೆಯಾದರು. ಇಲ್ಲಿ ತೋರಿದ ಪ್ರದರ್ಶನದಿಂದ ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿಯೂ ಆಡುವಂತೆ ಮಾಡಿತ್ತು. ಹಂತ ಹಂತವಾಗಿ ಬೆಳೆದ ಇವರು 2023ರಲ್ಲಿ 21 ವಷದೊಳಗಿನ ಮಹಿಳಾ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅವಕಾಶ ಪಡೆದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 2023ರ ಡಿಸೆಂಬರ್ 6ರಂದು ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಆಡುವ ಮೂಲಕ ಭಾರತ ಹಿರಿಯರ ಮಹಿಳಾ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಇದೀಗ ಬಾಂಗ್ಲಾ ಸರಣಿಗೂ ಆಯ್ಕೆಯಾಗಿದ್ದಾರೆ. ಇದುವರೆಗೆ ಭಾರತ ಪರ 2 ಏಕದಿನ ಮತ್ತು 6 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. 2 ಮಾದರಿಯ ಕ್ರಿಕೆಟ್​ನಲ್ಲಿ ಒಟ್ಟು 12 ವಿಕೆಟ್​ ಕಿತ್ತಿದ್ದಾರೆ.

ಇದನ್ನೂ ಓದಿ IPL 2024: ವಿಮಾನ ಚಲಾಯಿಸಿದ ಯಜುವೇಂದ್ರ ಚಹಲ್; ವಿಡಿಯೊ ವೈರಲ್​

ಸರಣಿಯ ವೇಳಾಪಟ್ಟಿ


ಮೊದಲ ಟಿ20 ಪಂದ್ಯ-ಏಪ್ರಿಲ್​ 28
.

ದ್ವಿತೀಯ ಟಿ20 ಪಂದ್ಯ-ಏಪ್ರಿಲ್​ 30.

ಮೂರನೇ ಟಿ20 ಪಂದ್ಯ-ಮೇ 2.

ನಾಲ್ಕನೇ ಟಿ20 ಪಂದ್ಯ- ಮೇ 6.

ಐದನೇ ಟಿ20 ಪಂದ್ಯ- ಮೇ 9.

Continue Reading
Advertisement
jain monk
ಪ್ರಮುಖ ಸುದ್ದಿ55 seconds ago

Viral Video: ಮೆರವಣಿಗೆಯಲ್ಲಿ ಸಾಗಿ 200 ಕೋಟಿ ರೂ. ಜನರ ಮೇಲೆ ಸುರಿದ ಜೈನ ದಂಪತಿ; ವಿಡಿಯೊ ವೈರಲ್​

Summer Fashion
ಫ್ಯಾಷನ್2 mins ago

Summer Fashion: ಸಮ್ಮರ್‌ ಫ್ಯಾಷನ್‌ನಲ್ಲಿ ಬಂತು ತಂಪೆರೆಯುವ ವಾಟರ್‌ಫಾಲ್‌ ಇಯರಿಂಗ್ಸ್‌

Ram Navami
ಧಾರ್ಮಿಕ26 mins ago

Ram Navami: ನಾಳೆ ದೇಶಾದ್ಯಂತ ರಾಮ ನವಮಿ ಸಂಭ್ರಮ; ಈ ದಿನದ ಮಹತ್ವವೇನು ಗೊತ್ತೇ ?

Indian stock market
ವಾಣಿಜ್ಯ30 mins ago

Indian stock market: ಸೆನ್ಸೆಕ್ಸ್ ಕುಸಿತ: ಭಾರತೀಯ ಷೇರು ಮಾರುಕಟ್ಟೆಗೆ ಭಾರಿ ಹೊಡೆತ

Air India
ದೇಶ34 mins ago

Air India: ಕ್ಷಿಪಣಿ ದಾಳಿಗೂ ಮುನ್ನ ಇರಾನ್ ವಾಯು ಪ್ರದೇಶದಲ್ಲಿ ಏರ್​ ಇಂಡಿಯಾ ವಿಮಾನಗಳ ಹಾರಾಟ; ಅಧಿಕಾರಿಗಳು ಹೇಳಿದ್ದೇನು?

Physical Abuse From husband
ಬೆಂಗಳೂರು35 mins ago

Physical Abuse : ಇವನೆಂಥ ಗಂಡ! ಕಾಲ್‌ ಗರ್ಲ್‌ ಕರೆಸಿ ಪತ್ನಿ ಮುಂದೆಯೇ ಅಸಭ್ಯ ವರ್ತನೆ

Actor Dwarakish
ಸ್ಯಾಂಡಲ್ ವುಡ್39 mins ago

Actor Dwarakish: ಪತ್ನಿ, ಮಕ್ಕಳಿದ್ದರೂ ಎರಡನೇ ಬಾರಿ ಪ್ರೀತಿಯಲ್ಲಿ ಬಿದ್ದು ಮದುವೆಯಾಗಿದ್ದರು ದ್ವಾರಕೀಶ್​​

Lok Sabha Election 2024 Dr Manjunath joins PM Narendra Modi team Ashwathnarayan reveals BJP vision
Lok Sabha Election 20241 hour ago

Lok Sabha Election 2024: ಮೋದಿ ಟೀಂಗೆ ಡಾ.ಮಂಜುನಾಥ್ ಸೇರ್ಪಡೆ; ಬಿಜೆಪಿ ವಿಷನ್‌ ಬಿಚ್ಚಿಟ್ಟ ಅಶ್ವತ್ಥನಾರಾಯಣ್

Star Saree Fashion
ಫ್ಯಾಷನ್1 hour ago

Star Saree Fashion: ಮಹಿಳೆಯರನ್ನು ಆಕರ್ಷಿಸಿದ ನಟಿ ಅಮೂಲ್ಯ‌ ಹಸಿರು ಸೀರೆಯ ಸೀಕ್ರೆಟ್ ಇದು!

t20 World Cup
ಕ್ರೀಡೆ1 hour ago

T20 World Cup : ವಿಶ್ವ ಕಪ್​ ತಂಡದಲ್ಲಿ ಹಾರ್ದಿಕ್ ಪಾಂಡ್ಯಗೆ ನೋ ಚಾನ್ಸ್​; ಆಯ್ಕೆದಾರರ ಇಂಗಿತ ಬಹಿರಂಗ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ13 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20241 day ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ3 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ4 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ4 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ5 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ5 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20245 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌