ಐಪಿಎಲ್ 2023
IPL 2023: ಜಯದ ಖುಷಿಯಲ್ಲೂ ತಿಲಕ್ ವರ್ಮಾ ಬಾಯಿಗೆ ‘ಹುಳಿ’ ಹಿಂಡಿದ ಸೂರ್ಯಕುಮಾರ್; ವಿಡಿಯೊ ನೋಡಿ
IPL 2023: ಎಲ್‌ಎಸ್‌ಜಿ ವಿರುದ್ಧ ಗೆಲುವು ಸಾಧಿಸಿರುವ ಮುಂಬೈ ಇಂಡಿಯನ್ಸ್ ತಂಡವು ಕ್ವಾಲಿಫೈಯರ್ 2ರಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ವಿರುದ್ಧ ಸೆಣಸಲಿದೆ.
ಅಹ್ಮದಾಬಾದ್: ಲಖನೌ ಸೂಪರ್ ಜಯಂಟ್ಸ್ (LSG) ವಿರುದ್ಧ ಭರ್ಜರಿ ಜಯದೊಂದಿಗೆ ಪ್ರಶಸ್ತಿ ಸನಿಹಕ್ಕೆ ತೆರಳಿರುವ ಮುಂಬೈ ಇಂಡಿಯನ್ಸ್ ತಂಡದ (IPL 2023) ಆಟಗಾರರು ಖುಷಿಯಲ್ಲಿದ್ದಾರೆ. ಎಲಿಮಿನೇಟರ್ ಪಂದ್ಯದಲ್ಲಿ ಎಲ್‌ಎಸ್‌ಜಿ ವಿರುದ್ಧ 81 ರನ್ ಅಂತರದಲ್ಲಿ ಗೆಲುವು ಸಾಧಿಸಿರುವ ಮುಂಬೈ, ಎಲಿಮಿನೇಟರ್ 2ರಲ್ಲಿ ಗುಜರಾತ್ ವಿರುದ್ಧ ಸೆಣಸಾಡಲಿದೆ. ಇದಕ್ಕಾಗಿ ತಂಡವು ಚೆನ್ನೈನಿಂದ ಅಹ್ಮದಾಬಾದ್‌ಗೆ ತೆರಳಿದೆ. ಹೀಗೆ, ವಿಮಾನದಲ್ಲಿ ತೆರಳುವಾಗ ಸೂರ್ಯಕುಮಾರ್ ಯಾದವ್ ಅವರು ತಿಲಕ್ ವರ್ಮಾ ಬಾಯಿಯಲ್ಲಿ ನಿಂಬೆ ಹಣ್ಣಿನ ಹುಳಿ ಹಿಂಡುವ ಮೂಲಕ ತಮಾಷೆ ಮಾಡಿದ್ದಾರೆ.
ಚೆನ್ನೈನಿಂದ ಅಹ್ಮದಾಬಾದ್‌ಗೆ ಸ್ಪೈಸ್ ಜೆಟ್ ವಿಮಾನದಲ್ಲಿ ತೆರಳುವಾಗ ಮುಂಬೈ ಇಂಡಿಯನ್ಸ್ ತಂಡದ ತಿಲಕ್ ವರ್ಮಾ ಅವರು ಗಡದ್ದಾಗಿ ನಿದ್ದೆ ಮಾಡುತ್ತಿದ್ದರು. ಇದನ್ನು ಕಂಡ ಸೂರ್ಯಕುಮಾರ್ ಯಾದವ್ ಅವರಿಗೆ ಚೇಷ್ಟೆ ಮಾಡುವ ಮನಸ್ಸಾಗಿದೆ. ಆಗ, ಸೂರ್ಯಕುಮಾರ್ ಯಾದವ್ ಅವರು ಗಗನಸಖಿ ಬಳಿ ನಿಂಬೆ ಹಣ್ಣನ್ನು ಪಡೆದು, ನಿದ್ದೆಯಲ್ಲೇ ಮಗ್ನರಾಗಿದ್ದ ತಿಲಕ್ ವರ್ಮಾ ಬಾಯಲ್ಲಿ ಹಿಂಡಿದ್ದಾರೆ. ಇದರಿಂದ ಎಚ್ಚರಗೊಂಡ ತಿಲಕ್ ವರ್ಮಾ ಗಾಬರಿಗೊಂಡಿದ್ದಾರೆ. ನಿಂಬೆ ಹಣ್ಣಿನ ರುಚಿ ಗೊತ್ತಾದ ಬಳಿಕ ಮುಖ ಸಿಂಡರಿಸಿದ್ದಾರೆ.
ಇಲ್ಲಿದೆ ವಿಡಿಯೊ
ಸೂರ್ಯಕುಮಾರ್ ಅವರು ತಮಾಷೆ ಮಾಡುತ್ತಿದ್ದನ್ನು ನೋಡಿದ ಸಹ ಪ್ರಯಾಣಿಕರು ಹಾಗೂ ಗಗನಸಖಿಯರು ಕೂಡ ನಕ್ಕಿದ್ದಾರೆ. ಸೂರ್ಯಕುಮಾರ್ ಸೇರಿ ತಂಡದ ಆಟಗಾರರು ಕೂಡ ತಿಲಕ್ ವರ್ಮಾ ಅವರ ಸ್ಥಿತಿ ಕಂಡು ಇನ್ನೂ ಜೋರಾಗಿ ನಕ್ಕಿದ್ದಾರೆ. ಹೀಗೆ, ವಿಮಾನದಲ್ಲಿ ಸೂರ್ಯಕುಮಾರ್ ಯಾದವ್ ಅವರ ಚೇಷ್ಟೆಯಿಂದ ತಿಲಕ್ ವರ್ಮಾ ಪೆಚ್ಚಾಗಿದ್ದಾರೆ. ಈ ವಿಡಿಯೊ ಈಗ ವೈರಲ್ ಆಗಿದೆ.
ಇದನ್ನೂ ಓದಿ: IPL 2023: ಗುಜರಾತ್-ಮುಂಬೈ ನಡುವೆ ಕ್ವಾಲಿಫೈಯರ್ ಪಂದ್ಯ; ಯಾರಿಗೆ ಒಲಿಯಲಿದೆ ಫೈನಲ್ ಲಕ್
ಎಲಿಮಿನೇಟರ್ ಪಂದ್ಯದಲ್ಲಿ ಗ್ರೀನ್ ಹಾಗೂ ಸೂರ್ಯಕುಮಾರ್ ಅವರ ಸಮಯೋಚಿತ ಬ್ಯಾಟಿಂಗ್ ಹಾಗೂ ಆಕಾಶ್ ಮಧ್ವಾಲ್ ಆಕ್ರಮಣಕಾರಿ ಬೌಲಿಂಗ್ ನೆರವಿನಿಂದ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್ ತಂಡವು ಕ್ವಾಲಿಫೈಯರ್ 2ರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಶುಕ್ರವಾರ ಸೆಣಸಾಡಲಿದೆ. ಗುಜರಾತ್ ಹಾಗೂ ಮುಂಬೈ ತಂಡದಲ್ಲಿ ಯಾವ ತಂಡ ಗೆದ್ದರೂ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಡಲಿದೆ. ಹಾಗಾಗಿ, ಎಲ್ಲರ ಗಮನ ಎಲಿಮಿನೇಟರ್ 2 ಪಂದ್ಯದ ಮೇಲಿದೆ.
ಐಪಿಎಲ್ 2023
IPL 2023: ಸೋಲಿನೊಂದಿಗೆ ಐಪಿಎಲ್‌ನಿಂದ ಹೊರಬಿದ್ದ ಆರ್‌ಸಿಬಿ; ಹೀಗಿದೆ ತಂಡದ 16 ವರ್ಷದ ಪ್ರದರ್ಶನ
IPL 2023: ಗುಜರಾತ್ ಟೈಟನ್ಸ್ ವಿರುದ್ಧ ಸೋಲನುಭವಿಸುವುದರೊಂದಿಗೆ ಆರ್‌ಸಿಬಿಯು 16ನೇ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದೆ. ಹಾಗಾದರೆ, ಕಳೆದ 16 ಸೀಸನ್‌ಗಳಲ್ಲಿ ಆರ್‌ಸಿಬಿ ಪ್ರದರ್ಶನ ಹೇಗಿತ್ತು? ಇಲ್ಲಿದೆ ಮಾಹಿತಿ.
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (IPL 2023) ತಂಡವು ಸೋಲಿನ ಅಭಿಯಾನ ಮುಂದುವರಿಸಿದೆ. ಗುಜರಾತ್ ಟೈಟನ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಸೋಲನುಭವಿಸುವ ಮೂಲಕ 2023ರ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದೆ. ಇದರೊಂದಿಗೆ ಆರ್‌ಸಿಬಿ ಅಭಿಯಾನ ಅಂತ್ಯವಾಗಿದೆ. ಇನ್ನು ಕಳೆದ 16 ಸೀಸನ್‌ಗಳಲ್ಲಿ ಆರ್‌ಸಿಬಿ ಪ್ರದರ್ಶನ ಹೇಗಿತ್ತು? ಎಷ್ಟು ಬಾರಿ ಪ್ಲೇಆಫ್‌ಗೆ ಹೋಗಿತ್ತು? ಎಷ್ಟು ಸಲ ಫೈನಲ್‌ಗೇರಿತ್ತು ಹಾಗೂ ಎಷ್ಟು ಬಾರಿ ಪ್ಲೇಆಫ್ ಕೂಡ ಪ್ರವೇಶಿಸದೆ ಮನೆಗೆ ಹೋಗಿತ್ತು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಎಂಟು ಬಾರಿ ಪ್ಲೇಆಫ್ ಪ್ರವೇಶ
ಆಡಿರುವ 16 ಸೀಸನ್‌ಗಳಲ್ಲಿ ಆರ್‌ಸಿಬಿಯು ಎಂಟು ಬಾರಿ ಪ್ಲೇಆಫ್‌ಗೆ ತಲುಪಿದ ಸಾಧನೆ ಮಾಡಿದೆ. 2022 ಹಾಗೂ 2021ರಲ್ಲಿ ಪ್ಲೇಆಫ್‌ಗೆ ತೆರಳಿದ್ದ ಆರ್‌ಸಿಬಿ, ಫೈನಲ್‌ಗೇರುವಲ್ಲಿ ವಿಫಲವಾಗಿತ್ತು. 2020ರಲ್ಲಿ ಬೆಂಗಳೂರು ತಂಡವು 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇನ್ನು 2019ರಲ್ಲಿ 8, 2018ರಲ್ಲಿ 6, 2017ರಲ್ಲಿ 8, 2016ರಲ್ಲಿ ರನ್ನರ್ಸ್ ಅಪ್, 2015ರಲ್ಲಿ ತೃತೀಯ, 2014ರಲ್ಲಿ 7, 2013ರಲ್ಲಿ 5, 2012ರಲ್ಲಿ 5, 2011ರಲ್ಲಿ ರನ್ನರ್ಸ್ ಅಪ್, 2010ರಲ್ಲಿ ತೃತೀಯ, 2009ರಲ್ಲಿ ರನ್ನರ್ಸ್ ಅಪ್ ಹಾಗೂ 2008ರಲ್ಲಿ 7ನೇ ಸ್ಥಾನ ಪಡೆದಿತ್ತು. ಈಗ 2023ರಲ್ಲಿ ಆರನೇ ಸ್ಥಾನ ಪಡೆಯುವಲ್ಲಿ ಮಾತ್ರ ಶಕ್ತವಾಗಿದೆ.
ಇದನ್ನೂ ಓದಿ: IPL 2023: ಐಪಿಎಲ್‌ನಲ್ಲಿ ನೂತನ ದಾಖಲೆ ಬರೆದ ಕಿಂಗ್ ಕೊಹ್ಲಿ
ಮೂರು ಬಾರಿ ಫೈನಲ್‌ಗೆ ಲಗ್ಗೆ
ಇದುವರೆಗೆ ಆರ್‌ಸಿಬಿ ತಂಡವು ಮೂರು ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಐಪಿಎಲ್ ಆರಂಭವಾದ ಎರಡನೇ ವರ್ಷ ಅಂದರೆ, 2009ರಲ್ಲಿ ಪ್ರಶಸ್ತಿ ಸುತ್ತಿಗೆ ತೆರಳಿದ್ದ ಬೆಂಗಳೂರು ತಂಡವು ಫೈನಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಸೋಲನುಭವಿಸಿತ್ತು. ಇನ್ನು 2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತು ರನ್ನರ್ಸ್ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು.
ಐಪಿಎಲ್ 2023
IPL 2023: ಮತ್ತೆ ಸೊನ್ನೆ ಸುತ್ತಿದ ದಿನೇಶ್ ಕಾರ್ತಿಕ್; ಡಕ್‌ಔಟ್‌ನಲ್ಲಿ ಈಗ ರೋಹಿತ್ ಶರ್ಮಾಗಿಂತ ಮುಂದು
IPL 2023: ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸೊನ್ನೆಗೆ ಔಟಾಗುವ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಡಕ್‌ಔಟ್ ಆದ ಅಪಖ್ಯಾತಿಯನ್ನು ದಿನೇಶ್ ಕಾರ್ತಿಕ್ ತಮ್ಮದಾಗಿಸಿಕೊಂಡರು.
ಬೆಂಗಳೂರು: 2021 ಹಾಗೂ 2022ರ ಐಪಿಎಲ್ ಪಂದ್ಯಾವಳಿಗಳಲ್ಲಿ ಉತ್ತಮ ಆಟ ಪ್ರದರ್ಶಿಸಿ ಎಲ್ಲ ಗಮನ ಸೆಳೆದಿದ್ದ ಆರ್‌ಸಿಬಿ ಆಟಗಾರ ದಿನೇಶ್ ಕಾರ್ತಿಕ್ ಈ ಬಾರಿಯ (IPL 2023) ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಅದರಲ್ಲೂ, ಭಾನುವಾರ ರಾತ್ರಿ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲ ಎಸೆತದಲ್ಲಿಯೇ ವಿಕೆಟ್ ಒಪ್ಪಿಸುವ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಸೊನ್ನೆಗೆ ಔಟಾದ ಅಪಖ್ಯಾತಿ ಗಳಿಸಿದರು.
ಹೌದು, ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಅತಿ ಹೆಚ್ಚು ಬಾರಿ ಎಂದರೆ, 16 ಬಾರಿ ಡಕ್ ಔಟ್ ಆದ ಖ್ಯಾತಿ ರೋಹಿತ್ ಶರ್ಮಾ ಅವರ ಹೆಸರಲ್ಲಿತ್ತು. ಆದರೆ, 17 ಬಾರಿ ಸೊನ್ನೆಗೆ ಔಟಾಗುವ ಮೂಲಕ ದಿನೇಶ್ ಕಾರ್ತಿಕ್ ಅವರು ಅನವಶ್ಯಕ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಈಗ ದಿನೇಶ್ ಕಾರ್ತಿಕ್ 17 ಬಾರಿ, ರೋಹಿತ್ ಶರ್ಮಾ 16, ಮನ್‌ದೀಪ್ ಸಿಂಗ್ ಹಾಗೂ ಸುನಿಲ್ ನರೈನ್ ತಲಾ 15 ಬಾರಿ ಡಕ್‌ಔಟ್ ಆದ ದಾಖಲೆ ಹೊಂದಿದ್ದಾರೆ.
ಇದನ್ನೂ ಓದಿ: IPL 2023: ಮುಂಬೈ ಗೆದ್ದರೂ ಪ್ಲೇ ಆಫ್ ಭವಿಷ್ಯ ಗುಜರಾತ್ ಕೈಯಲ್ಲಿ
ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿಯೇ ದಿನೇಶ್ ಕಾರ್ತಿಕ್ ಮೂರು ಬಾರಿ ಡಕ್‌ಔಟ್ ಆಗಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ 12 ಪಂದ್ಯ ಆಡಿರುವ ದಿನೇಶ್ ಕಾರ್ತಿಕ್ ಕೇವಲ 140 ರನ್ ಬಾರಿಸಿದ್ದಾರೆ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಯಶ್ ದಯಾಳ್ ಎಸೆತದಲ್ಲಿ ದಿನೇಶ್ ಕಾರ್ತಿಕ್, ವೃದ್ಧಿಮಾನ್ ಸಾಹ ಅವರಿಗೆ ಕ್ಯಾಚಿತ್ತು ಹೊರನಡೆದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಳೆಯಿಂದ ವಿಳಂಬವಾಗಿ ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಆರ್‌ಸಿಬಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 197 ರನ್ ಬಾರಿಸಿದೆ. ವಿರಾಟ್ ಕೊಹ್ಲಿ ಭರ್ಜರಿ ಶತಕದ ನೆರವಿನೊಂದಿಗೆ ಆರ್‌ಸಿಬಿ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ.
ಐಪಿಎಲ್ 2023
IPL 2023: ಟಿಕೆಟ್ ಸಿಗದಕ್ಕೆ ಗರಂ; ರಾಹುಲ್ ದ್ರಾವಿಡ್ ಕಾರಿಗೆ ಅಡ್ಡ ಹಾಕಿದ ಆರ್‌ಸಿಬಿ ಫ್ಯಾನ್ಸ್
ದೇಶದಲ್ಲಿ ಐಪಿಎಲ್ ಫಿವರ್ ಜೋರಾಗಿದ್ದು, ಐಪಿಎಲ್ (IPL 2023) ಅಭಿಮಾನಿಗಳು ಟಿಕೆಟ್‌ಗಾಗಿ ಗಲಾಟೆ ಮಾಡಿದ್ದಾರೆ. ಭಾನುವಾರ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಟಿಕೆಟ್ ಸಿಗದೆ ಅಭಿಮಾನಿಗಳು ಗರಂ ಆಗಿದ್ದು ರಾಹುಲ್ ದ್ರಾವಿಡ್ ಕಾರಿಗೆ ಅಡ್ಡಗಟ್ಟಿದ್ದಾರೆ.
ಬೆಂಗಳೂರು: ಮೇ 21ರಂದು ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆಯಲಿರುವ ಗುಜರಾತ್ ಟೈಟನ್ಸ್ ಮತ್ತು ಆರ್‌ಸಿಬಿ ನಡುವಿನ (IPL 2023) ಹೈ ವೋಲ್ಟೇಜ್ ಪಂದ್ಯದ ಟಿಕೆಟ್ ಸಿಗದೆ ಆಕ್ರೋಶಗೊಂಡ ಕ್ರಿಕೆಟ್ ಅಭಿಮಾನಿಗಳು ಅಧಿಕಾರಿಗಳ ವಿರುದ್ಧ ತಮ್ಮ ಸಿಟ್ಟು ಪ್ರದರ್ಶಿಸಿದರು. ಕ್ರಿಕೆಟ್ ಫ್ಯಾನ್ಸ್ ಆಕ್ರೋಶದ ಬಿಸಿ ಭಾರತ ಕ್ರಿಕಟ್ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ (Rahul dravid) ಅವರಿಗೂ ತಟ್ಟಿತು.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ತಂಡ ಗುರುವಾರ (ಮೇ 18) ಜಯಬೇರಿ ಸಾಧಿಸಿ ಮುಂದಿನ ಪ್ಲೇಆಫ್ ಪ್ರವೇಶಕ್ಕೆ ದೊಡ್ಡ ಹೆಜ್ಜೆಯಿಟ್ಟಿದೆ. ಮೇ 21ರಂದು ಗುಜರಾತ್ ಟೈಟನ್ಸ್ ಮತ್ತು ಆರ್‌ಸಿಬಿ ನಡುವೆ ನಿರ್ಣಾಯಕ ಪಂದ್ಯ ನಡೆಯಲಿದೆ. ಅತ್ಯಂತ ಮಹತ್ವದ ಈ ಪಂದ್ಯವನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ಅದರಲ್ಲೂ ಆರ್‌ಸಿಬಿ ಫ್ಯಾನ್ಸ್ ಕಾತರರಾಗಿದ್ದಾರೆ. ಆದರೆ, ಟಿಕೆಟ್ ಸಿಗದೆ ಅವರು ಸಿಟ್ಟಿಗೆದ್ದಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರವೇ ಅಭಿಮಾನಿಗಳು ಸಾಲುಗಟ್ಟಿ ನಿಂತರೂ ಟಿಕೆಟ್ ಸಿಗದೆ ನಿರಾಸೆಗೊಂಡಿದ್ದಾರೆ. ಟಿಕೆಟ್ ಕೌಂಟರ್‌ನಲ್ಲಿ ಟಿಕೆಟ್ ನೀಡದೆ ಸೋಲ್ಡ್‌ಔಟ್ (Ticket soldout) ಎಂದು ಬೋರ್ಡ್ ಹಾಕಿದ್ದಕ್ಕೆ ಕ್ರಿಕೆಟ್ ಪ್ರೇಮಿಗಳು ಗರಂ ಆಗಿದ್ದಾರೆ.
ರಾಯಚೂರು, ಕೊಪ್ಪಳ, ಬಳ್ಳಾರಿ, ಬೀದರ್, ಗುಲ್ಬರ್ಗ, ಯಾದಗಿರಿ, ಹುಬ್ಬಳ್ಳಿಯಿಂದ ಕ್ರಿಕೆಟ್ ಅಭಿಮಾನಿಗಳು ಆಗಮಿಸಿದ್ದಾರೆ. ಗುರುವಾರ ರಾತ್ರಿಯಿಂದಲೇ ಕ್ಯೂ ನಿಂತಿದ್ದರು ಟಿಕೆಟ್ ಸಿಗುತ್ತಿಲ್ಲ. ಈ ಬಗ್ಗೆ ಕೇಳಿದರೆ ಒಂದು ಟಿಕೆಟ್‌ಗೆ 9 ಸಾವಿರ ಎಂದು ಹೇಳುತ್ತಿದ್ದಾರೆ. ಕೇವಲ 150 ಟಿಕೆಟ್ ಮಾತ್ರ ಕೊಟ್ಟಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಟಿಕೆಟ್ ವಿಚಾರದಲ್ಲಿ ತುಂಬಾ ಮೋಸ ಆಗುತ್ತಿದೆ ಎಂದು ಮ್ಯಾನೇಜ್ಮೆಂಟ್ ವಿರುದ್ಧ ಅಭಿಮಾನಿಗಳು ಕಿಡಿಕಾರಿದರು.
ಈ ನಡುವೆ, ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರು ಚಿನ್ನಸ್ವಾಮಿ ಕ್ರೀಡಾಂಗಣದ ಪರಿಸರಕ್ಕೆ ಬಂದಾಗ ಕಾರನ್ನು ಅಡ್ಡಗಟ್ಟಿ ʻʻಟಿಕೆಟ್ ಸಿಗುತ್ತಿಲ್ಲ ಸರ್ʼʼ ಎಂದು ಆರ್‌ಸಿಬಿ ಅಭಿಮಾನಿಗಳು ಅಳಲು ತೋಡಿಕೊಂಡರು.
ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಐಪಿಎಲ್ 2023
IPL Betting: ಐಪಿಎಲ್ ಬೆಟ್ಟಿಂಗ್ ದಂಧೆ; 100ಕ್ಕೂ ಹೆಚ್ಚು ಮಂದಿ ಬಂಧನ; ಅರ್ಧ ಕೋಟಿಗೂ ಅಧಿಕ ಹಣ ಜಪ್ತಿ
IPL Betting: ಐಪಿಎಲ್ ಕ್ರಿಕೆಟ್ ಹಂಗಾಮ ಜೋರಾಗಿದ್ದು, ಬೆಟ್ಟಿಂಗ್ ಭರಾಟೆಯಲ್ಲಿ ತೊಡಗಿದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ 100ಕ್ಕೂ ಹೆಚ್ಚು ಮಂದಿಯ ಬಂಧನವಾಗಿದ್ದು, ಲಕ್ಷಾಂತರ ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ.
ಬೆಂಗಳೂರು: ದೇಶದಲ್ಲೀಗ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಫೀವರ್ ಶುರುವಾಗಿದೆ. ಒಂದು ಕಡೆ ಕ್ರೀಡಾ ಪ್ರೇಮಿಗಳು ಚುಟುಕು ಪಂದ್ಯವನ್ನು ಕಣ್ಣು ಮಿಟುಕಿಸದಂತೆ ವೀಕ್ಷಿಸುತ್ತಿದ್ದರೆ, ಮತ್ತೊಂದು ಕಡೆ ಐಪಿಎಲ್ ಬೆಟ್ಟಿಂಗ್ ದಂಧೆ (IPL Betting) ಕೂಡ ಜೋರಾಗಿದೆ.
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ 160 ಮಂದಿಯನ್ನು ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ. ಐಪಿಎಲ್ ಬೆಟ್ಟಿಂಗ್ ಸಂಬಂಧ 35 ಪ್ರಕರಣ ದಾಖಲಾಗಿದ್ದು, ಬಂಧಿತರಿಂದ 62 ಲಕ್ಷ ರೂ. ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ: IPL 2023: ಡೆಲ್ಲಿಗೆ ಸತತ 2ನೇ ಗೆಲುವು; ಐಪಿಎಲ್ ಅಂಕಪಟ್ಟಿ ಹೇಗಿದೆ?
ಆನ್‌ಲೈನ್ ಮತ್ತು ಆ್ಯಪ್ ಮೂಲಕ ಬೆಟ್ಟಿಂಗ್ ನಡೆಸುತ್ತಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಬಾಲ್ ಟು ಬಾಲ್ ಬೆಟ್ಟಿಂಗ್ ಕಟ್ಟುತ್ತಿದ್ದವರ ಮೇಲೆ ಸಿಸಿಬಿ ಪೊಲೀಸರು ನಿಗಾ ವಹಿಸಿದ್ದರು. ಇದೀಗ ಕಾರ್ಯಾಚರಣೆ ನಡೆಸಿ ಬೆಟ್ಟಿಂಗ್‌ನಲ್ಲಿ ತೊಡಗಿದ್ದ 160 ಜನರನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಬೆಟ್ಟಿಂಗ್ ಸಂಬಂಧ ನಗರದ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಹಲವು ಗ್ಯಾಂಬ್ಲರ್‌ಗಳ ಮೇಲೆ ನಿಗಾ ಇಟ್ಟಿದ್ದಾರೆ.
-
ಕರ್ನಾಟಕ18 hours ago
Odisha Train Accident: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದ ಮಹಿಳೆ, ಒಡಿಶಾ ಪೊಲೀಸರಿಂದ ತನಿಖೆ
-
ಕರ್ನಾಟಕ16 hours ago
ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
-
ಕರ್ನಾಟಕ13 hours ago
Murder Case: ಟೋಲ್ ವಿಚಾರಕ್ಕೆ ಕಿರಿಕ್; ಹಾಕಿ ಸ್ಟಿಕ್ನಿಂದ ಬಡಿದು ಕೊಂದೇಬಿಟ್ಟರು ದುರುಳರು
-
ಕರ್ನಾಟಕ9 hours ago
DK Shivakumar: ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ಮಾಡಿದ್ದಕ್ಕೆ ಜಾಡಿಸಿದ ಡಿಕೆಶಿ; ಅಧಿಕಾರಿಗಳ ಅಮಾನತಿಗೆ ಆದೇಶ
-
ದೇಶ14 hours ago
Odisha Train Accident: ಗಾಯದ ಮೇಲೆ ಬರೆ ಎಂದರೆ ಇದೇ; ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು
-
ದೇಶ17 hours ago
world environment day : ಇಂದು ವಿಶ್ವ ಪರಿಸರ ದಿನ 2023: ಈ ದಿನದ ಮಹತ್ವ, ಇತಿಹಾಸ, ಥೀಮ್ ತಿಳಿಯಿರಿ
-
ಪರಿಸರ10 hours ago
ವಿಶ್ವ ಪರಿಸರ ದಿನ: ‘ಸಸಿ ನೆಡಿ, ಫೋಟೊ ಕಳುಹಿಸಿ’ ವಿಸ್ತಾರ ಅಭಿಯಾನ; ನಿಮ್ಮ ಮತ್ತಷ್ಟು ಫೋಟೊಗಳು ಇಲ್ಲಿವೆ
-
ಕರ್ನಾಟಕ16 hours ago
ಕಲಬುರಗಿಯಲ್ಲಿ ಚಂಡಿಕಾ ಹೋಮದ ಬೆಂಕಿಯಲ್ಲಿ ಕಾಣಿಸಿಕೊಂಡ ದುರ್ಗಾ ದೇವಿ!; ಇಲ್ಲಿದೆ ನೋಡಿ ಫೋಟೊ