US Open 2023: ರನ್ನರ್​ ಅಪ್​ ಸ್ಥಾನ ಪಡೆದ ಬೋಪಣ್ಣ-ಎಬ್ಡೆನ್‌ ಜೋಡಿ - Vistara News

ಕ್ರೀಡೆ

US Open 2023: ರನ್ನರ್​ ಅಪ್​ ಸ್ಥಾನ ಪಡೆದ ಬೋಪಣ್ಣ-ಎಬ್ಡೆನ್‌ ಜೋಡಿ

ರೋಹನ್ ಬೋಪಣ್ಣ (Rohan Bopanna) ಮತ್ತು ಮ್ಯಾಥ್ಯೂ ಎಬ್ಡೆನ್‌(Matthew Ebden) ಜೋಡಿ ಯುಎಸ್ ಓಪನ್‌ 2023ರ(US Open 2023) ಪುರುಷರ ಡಬಲ್ಸ್ ವಿಭಾಗದ ಫೈನಲ್​ನಲ್ಲಿ ಸೋಲು ಕಂಡಿದ್ದಾರೆ

VISTARANEWS.COM


on

US Open 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನ್ಯೂಯಾರ್ಕ್​: ರೋಹನ್ ಬೋಪಣ್ಣ (Rohan Bopanna) ಮತ್ತು ಮ್ಯಾಥ್ಯೂ ಎಬ್ಡೆನ್‌(Matthew Ebden) ಜೋಡಿ ಯುಎಸ್ ಓಪನ್‌ 2023ರ(US Open 2023) ಪುರುಷರ ಡಬಲ್ಸ್ ವಿಭಾಗದ ಫೈನಲ್​ನಲ್ಲಿ ಸೋಲು ಕಂಡಿದ್ದಾರೆ. ಈ ಟೂರ್ನಿಯಲ್ಲಿ ದ್ವಿತೀಯ ಬಾರಿ ಫೈನಲ್​ ಪ್ರವೇಶಿಸಿದ್ದ ಬೋಪಣ್ಣ ಎರಡು ಬಾರಿಯೂ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟರು.

ಶುಕ್ರವಾರ ತಡರಾತ್ರಿ ನಡೆದ ಫೈನಲ್​ನಲ್ಲಿ ಇಂಡೋ-ಆಸ್ಟ್ರೇಲಿಯನ್ ಜೋಡಿ ಮೂರನೇ ಶ್ರೇಯಾಂಕದ ಯುಎಸ್‌ಎ ರಾಜೀವ್ ರಾಮ್ ಮತ್ತು ಗ್ರೇಟ್ ಬ್ರಿಟನ್‌ನ ಜೋ ಸಾಲಿಸ್‌ಬರಿ ವಿರುದ್ಧ 6-2, 3-6, 4-6 ಸೆಟ್​ಗಳ ಅಂತರದಲ್ಲಿ ಸೋಲು ಕಂಡರು. ಮೊದಲ ಸೆಟ್​ ಗೆದ್ದಾಗ ಬೋಪಣ್ಣ ಜೋಡಿ ಐತಿಹಾಸಿಹ ಸಾಧನೆ ಮಾಡಲಿದ್ದಾರೆ ಎಂದು ನಿರೀಕ್ಷೆ ಮಾಡಲಾಯಿತು. ಆದರೆ ಆ ಬಳಿಕದ ಎರಡು ಸೆಟ್​ಗಳಲ್ಲಿ ಆಕ್ರಮಣಕಾರಿ ಆಟವಾಡಿದ ಸಾಲಿಸ್‌ಬರಿ ಮತ್ತು ರಾಜೀವ್ ರಾಮ್​ ಸತತ ಎರಡು ಸೆಟ್​ ಗೆದ್ದು ಪಂದ್ಯದಲ್ಲಿ ಮೇಲುಗೈ ಸಾಧಿಸಿದರು.

2010ರ ಯುಎಸ್ ಓಪನ್‌ನಲ್ಲಿ ಬೋಪಣ್ಣ ಅವರು ಪಾಕಿಸ್ತಾನದ ಐಸಾಮ್-ಉಲ್-ಹಕ್ ಖುರೇಷಿ ಜತೆಗೆ ಕಣಕ್ಕಿಳಿದು ಈ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದರು. ಆದರೆ ಇಲ್ಲಿ 7–6(7–5), 7–6(7–4) ಅಂತರದಿಂದ ಸೋತು ರನ್ನರ್​ ಅಪ್​ಗೆ ತೃಪ್ತಿಪಟ್ಟಿದ್ದರು. ಇದೀಗ ಎರಡನೇ ಪ್ರಯತ್ನಲ್ಲಿಯೂ ಅವರು ರನ್ನರ್​ ಅಪ್ ಸ್ಥಾನ ಪಡೆದರು.

ಇದನ್ನೂ ಓದಿ US Open 2023: ಯುಎಸ್‌ ಓಪನ್‌ ಟೂರ್ನಿಯಲ್ಲಿ ಕಾಣಿಸಿಕೊಂಡ ಧೋನಿ

ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದ ಬೋಪಣ್ಣ ಯುವ ಆಟಗಾರರಿಗೆ ಸೋಲಿನ ರುಚಿ ತೋರಿಸಿದ್ದರು. ಸೆಮಿಫೈನಲ್​ ಪಂದ್ಯದಲ್ಲಿ ಇಂಡೋ-ಆಸೀಸ್​ ಜೋಡಿ ಫ್ರೆಂಚ್ ಜೋಡಿಯಾದ ಪಿಯರೆ-ಹ್ಯೂಗ್ಸ್ ಹರ್ಬರ್ಟ್ ಮತ್ತು ನಿಕೋಲಸ್ ಮಹುತ್ ವಿರುದ್ಧ 7-6 (3), 6-2 ನೇರ ಸೆಟ್‌ಗಳ ಜಯದೊಂದಿಗೆ ಫೈನಲ್​ಗೆ ಲಗ್ಗೆಯಿಟ್ಟಿದ್ದರು. ಕ್ವಾರ್ಟರ್-ಫೈನಲ್ ಹಣಾಹಣಿಯಲ್ಲಿ ಇಂಡೋ-ಆಸೀಸ್​ ಜೋಡಿ ಅಮೆರಿಕಾದ 15ನೇ ಶ್ರೇಯಾಂಕದ ಜೋಡಿಯಾದ ನಥಾನಿಯಲ್ ಲ್ಯಾಮನ್ಸ್ ಮತ್ತು ಜಾಕ್ಸನ್ ವಿಥ್ರೋ ಅವರನ್ನು 7-6(10), 6-1 ನೇರ ಸೆಟ್‌ಗಳ ಅಂತರದಿಂದ ಮಣಿಸಿ ಸೆಮಿಫೈನಲ್​ ಪ್ರವೇಶಿಸಿದ್ದರು.

43 ವರ್ಷದ ಕೊಡಗಿನವರಾದ ರೋಹನ್ ಬೋಪಣ್ಣ ಅವರು ಗ್ರ್ಯಾಂಡ್ ಸ್ಲಾಮ್ ಡಬಲ್ಸ್ ಫೈನಲ್ ತಲುಪಿದ ಅತ್ಯಂತ ಹಿರಿಯ ಆಟಗಾರ ಎಂಬ ವಿಶ್ವ ದಾಖಲೆ ಬರೆದಿದ್ದಾರೆ. ಇದೇ ವರ್ಷ ದೋಹಾ ಮತ್ತು ಇಂಡಿಯನ್ ವೆಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಎರಡು ತಿಂಗಳ ಹಿಂದೆ ನಡೆದಿದ್ದ ವಿಂಬಲ್ಡನ್​ ಟೂರ್ನಿಯ(Wimbledon 2023) ಸೆಮಿಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿತ್ತು. ಆದರೆ ಇಲ್ಲಿ ಅಗ್ರ ಶ್ರೇಯಾಂಕದ ನೆದರ್ಲೆಂಡ್ಸ್‌-ಬ್ರಿಟಿಷ್‌ ಜೋಡಿಯಾದ ವೆಸ್ಲೆ ಕೂಲ್‌ಹೋಫ್ ಮತ್ತು ನೀಲ್‌ ಸ್ಕಾಪ್‌ಸ್ಕಿ ಎದುರು ಸೋಲು ಕಂಡಿದ್ದರು. 

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IND vs USA: ಅಪಾಯಕಾರಿ ಅಮೆರಿಕ ಸವಾಲಿಗೆ ಸಡ್ಡು ಹೊಡೆದೀತೇ ಟೀಮ್​ ಇಂಡಿಯಾ?

IND vs USA: ಸಂಪೂರ್ಣ ಬೌಲಿಂಗ್​ ಟ್ರ್ಯಾಕ್ ಆಗಿರುವ ನಸ್ಸೌ ಪಿಚ್​ನಲ್ಲಿ ಬ್ಯಾಟಿಂಗ್​ ನಡೆಸುವುದು ಅಷ್ಟು ಸುಲಭವಲ್ಲ. 100 ರನ್​ ಬಾರಿಸಿದರೂ ಇದನ್ನು ತಡೆದು ನಿಲ್ಲಿಸುವ ಸಾಮರ್ಥ್ಯ ಬೌಲರ್​ಗಳಿಗಿದೆ. ಪಿಚ್​ನಲ್ಲಿ ಬಿರುಕು ಇರುವ ಕಾರಣ ಚೆಂಡಿನ ಚಲನೆ ಯಾವ ರೀತಿ ಇರುತ್ತದೆ ಎನ್ನುವುದನ್ನು ಅರಿತುಕೊಳ್ಳುವಲ್ಲಿ ಬ್ಯಾಟರ್​ಗಳು ವಿಫಲರಾಗುತ್ತಿದ್ದಾರೆ.

VISTARANEWS.COM


on

IND vs USA
Koo

ನ್ಯೂಯಾರ್ಕ್​: ಪ್ರಸಕ್ತ ಸಾಗುತ್ತಿರುವ ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ಲೀಗ್​ ಹಂತದ ಪಂದ್ಯದಲ್ಲಿ ಸತತ 2 ಪಂದ್ಯಗಳನ್ನು ಗೆದ್ದು ಅಜೇಯ ಓಟ ಕಾಯ್ದುಕೊಂಡಿರುವ ಭಾರತ ಮತ್ತು ಅಮೆರಿಕ(IND vs USA) ನಾಳೆ ನಡೆಯುವ ಪಂದ್ಯದಲ್ಲಿ ಕಣಕ್ಕಿಳಿಯಲಿವೆ. ಇತ್ತಂಡಗಳ ನಡುವಣ ಮೊದಲ ಕ್ರಿಕೆಟ್​ ಮುಖಾಮುಖಿ ಇದಾಗಿದೆ.

ಸವಾಲು ಸುಲಭದಲ್ಲ


ಅಮೆರಿಕ ತಂಡ ಕ್ರಿಕೆಟ್​ ಶಿಶು ಆಗಿದ್ದರೂ ಕೂಡ ತಂಡದಲ್ಲಿ ಆಡುವ ಆಟಗಾರರಿಗೆ ಕ್ರಿಕೆಟ್​ ಹೊಸದಲ್ಲ. ಎಲ್ಲರು ಅನುಭವಿ ಆಟಗಾರರು. ಈ ತಂಡದ ವಿಶೇಷವೆಂದರೆ ಭಾರತ, ಪಾಕಿಸ್ತಾನ, ನ್ಯೂಜಿಲ್ಯಾಂಡ್​, ಕೆನಡಾ ಸೇರಿ ಹಲವು ದೇಶಗಳ ಕ್ರಿಕೆಟಿಗರು ಈ ತಂಡದಲ್ಲಿ ಕಾಣಿಸಿಕೊಂಡಿರುವುದು. ಬಹುಪಾಲು ಭಾರತೀಯ ಆಟಗಾರರೇ ನೆಚ್ಚಿಕೊಂಡಿದ್ದಾರೆ. ಕನ್ನಡಿಗ ನಾಸ್ತುಷ್‌ ಕೆಂಜಿಗೆ, 2010ರಲ್ಲಿ ಭಾರತ ಪರ 19 ವಿಶ್ವಕಪ್​ ಆಡಿದ್ದ ಎಡಗೈ ವೇಗದ ಬೌಲರ್ ಸೌರಭ್ ನೇತ್ರವಲ್ಕರ್, ನಾಯಕ ಮೊನಾಂಕ್ ಪಟೇಲ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ.

ವಿಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾದ ಆರನ್ ಜೋನ್ಸ್ ಕೂಡ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ಭಾರತ ಯಾವುದೇ ಕಾರಣಕ್ಕೂ ಎದುರಾಳಿಗಳನ್ನು ಕಡೆಗಣಿಸುವಂತಿಲ್ಲ. ಈಗಾಗಲೇ ಪಾಕಿಸ್ತಾನಕ್ಕೂ ಅಮೆರಿಕ ನೀರು ಕುಡಿಸಿದೆ. ಹೀಗಾಗಿ ಅತಿಯಾದ ಆತ್ಮವಿಶ್ವಾಸದಿಂದ ಈ ಸವಾಲನ್ನು ಹಗುರವಾಗಿ ಕಂಡೆರೆ ಭಾರತಕ್ಕೂ ಸೋಲು ಕಟ್ಟಿಟ್ಟ ಬುತ್ತಿ! ಎನ್ನಲಡ್ಡಿಯಿಲ್ಲ.

ಗೆದ್ದರೆ ಸೂಪರ್​-8 ಪ್ರವೇಶ


ಉಭಯ ತಂಡಗಳ ಪೈಕಿ ಯಾರೇ ಗೆದ್ದರೂ ಕೂಡ ‘ಎ’ ವಿಭಾಗದಿಂದ ಮೊದಲ ತಂಡವಾಗಿ ಸೂಪರ್​-8 ಹಂತಕ್ಕೆ ಪ್ರವೇಶ ಪಡೆಯಲಿದ್ದಾರೆ. ಈಗಾಗಲೇ ‘ಡಿ’ ವಿಭಾಗದಿಂದ ದಕ್ಷಿಣ ಆಫ್ರಿಕಾ ಸೂಪರ್​-8 ಹಂತಕ್ಕೆ ಪ್ರವೇಶ ಪಡೆದಿದೆ. ಒಂದು ಗ್ರೂಪ್​ನಿಂದ ಕೇವಲ 2 ತಂಡಗಳು ಮಾತ್ರ ಈ ಹಂತಕ್ಕೇರುತ್ತದೆ.

ಇದನ್ನೂ ಓದಿ IND vs PAK: ಟ್ರ್ಯಾಕ್ಟರ್ ಮಾರಿ ಭಾರತ-ಪಾಕ್​ ಪಂದ್ಯ ವೀಕ್ಷಿಸಿ ಕಣ್ಣೀರು ಹಾಕಿದ ಅಭಿಮಾನಿ

ಮಳೆ ಭೀತಿ


ಭಾನುವಾರ ಇಲ್ಲೇ ನಡೆದಿದ್ದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಇದೀಗ ನಾಳೆ ನಡೆಯುವ ಪಂದ್ಯಕ್ಕೂ ಮಳೆ ಕಾಟ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಕ್ಯುವೆದರ್‌ನ ಮುನ್ಸೂಚನೆಯ ಪ್ರಕಾರ ಅಮೆರಿಕದ ಕಾಲಮಾನದ ಪ್ರಕಾರ ಮಧ್ಯಾಹ್ನದ ವೇಳೆ ಶೇ. 40 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಭಾರತದಲ್ಲಿ ಈ ಪಂದ್ಯ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತದೆ. ಮಳೆಯಿಂದ ಪಂದ್ಯ ರದ್ದುಗೊಂಡರೆ ಉಭಯ ತಂಡಗಳಿಗೂ ತಲಾ 1 ಅಂಕ ನೀಡಲಾಗುತ್ತದೆ. ಏಕೆಂದರೆ ಲೀಗ್​ ಪಂದ್ಯಗಳಿಗೆ ಮೀಸಲು ದಿನ ಇಲ್ಲ. ಒಂದೊಮ್ಮೆ ಭಾರತ ಮತ್ತು ಅಮೆರಿಕ ಪಂದ್ಯ ಮಳೆಯಿಂದ ರದ್ದಾದರೆ ಪಾಕಿಸ್ತಾನ ಲೀಗ್​ನಿಂದ ಹೊರಬೀಳಲಿದೆ. ಈಗಾಗಲೇ 4 ಅಂಕಗಳಿಸಿರುವ ಭಾರತ ಮತ್ತು ಅಮೆರಿಕಗೆ ಈ ಒಂದು ಅಂಕದಿಂದ ಒಟ್ಟು ಅಂಕ 5 ಆಗಲಿದೆ. ಪಾಕ್​ ಮುಂದಿನ 2 ಪಂದ್ಯಗಳನ್ನು ಗೆದ್ದರೂ ಕೂಡ 4 ಅಂಕ ಮಾತ್ರ ಆಗಲಿದೆ. ಹೀಗಾಗಿ ಪಾಕ್​ ಹೊರಬೀಳಲಿದೆ.

ಪಿಚ್​ ರಿಪೋರ್ಟ್​


ಸಂಪೂರ್ಣ ಬೌಲಿಂಗ್​ ಟ್ರ್ಯಾಕ್ ಆಗಿರುವ ನಸ್ಸೌ ಪಿಚ್​ನಲ್ಲಿ ಬ್ಯಾಟಿಂಗ್​ ನಡೆಸುವುದು ಅಷ್ಟು ಸುಲಭವಲ್ಲ. 100 ರನ್​ ಬಾರಿಸಿದರೂ ಇದನ್ನು ತಡೆದು ನಿಲ್ಲಿಸುವ ಸಾಮರ್ಥ್ಯ ಬೌಲರ್​ಗಳಿಗಿದೆ. ಪಿಚ್​ನಲ್ಲಿ ಬಿರುಕು ಇರುವ ಕಾರಣ ಚೆಂಡಿನ ಚಲನೆ ಯಾವ ರೀತಿ ಇರುತ್ತದೆ ಎನ್ನುವುದನ್ನು ಅರಿತುಕೊಳ್ಳುವಲ್ಲಿ ಬ್ಯಾಟರ್​ಗಳು ವಿಫಲರಾಗುತ್ತಿದ್ದಾರೆ. ಇದುವರೆಗೂ ಇಲ್ಲಿ ನಡೆದ ಪಂದ್ಯದಲ್ಲಿ 120 ರನ್​ಗಳ ಗಡಿ ದಾಟಿಲ್ಲ.

ಸಂಭಾವ್ಯ ತಂಡ


ಅಮೆರಿಕ:
ಸ್ಟೀವನ್ ಟೇಲರ್, ಮೊನಾಂಕ್ ಪಟೇಲ್ (ನಾಯಕ), ಆಂಡ್ರೀಸ್ ಗೌಸ್, ಆರನ್ ಜೋನ್ಸ್, ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಜಸ್ದೀಪ್ ಸಿಂಗ್, ನಾಸ್ತುಷ್‌ ಕೆಂಜಿಗೆ, ಸೌರಭ್ ನೇತ್ರವಲ್ಕರ್, ಅಲಿ ಖಾನ್.

ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

Continue Reading

ಕ್ರೀಡೆ

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಕನ್ನಡಿಗ ಬೋಪಣ್ಣ, ಸುಮಿತ್‌ ನಾಗಲ್‌

Paris Olympics 2024: 44 ವರ್ಷದ ಬೋಪಣ್ಣ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ ಗೆದ್ದು ಕಳೆದ ವಾರ ಫ್ರೆಂಚ್ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದ್ದರು. ಬೋಪಣ್ಣ ಲಂಡನ್ 2012 ಗೇಮ್ಸ್ ಮತ್ತು ರಿಯೊ 2016 ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆದರೆ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಕಳೆದುಕೊಂಡಿದ್ದರು.

VISTARANEWS.COM


on

Paris Olympics 2024
Koo

ನವದೆಹಲಿ: ಭಾರತದ ಹಿರಿಯ ಟೆನಿಸ್​ ಆಟಗಾರ ರೋಹನ್‌ ಬೋಪಣ್ಣ(Rohan Bopanna) ಮತ್ತು ಸುಮಿತ್‌ ನಾಗಲ್‌(Sumit Nagal) ಮುಂದಿನ ತಿಂಗಳು ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ಗೆ(Paris Olympics 2024) ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ನೂತನ ಎಟಿಪಿ ರ್‍ಯಾಂಕಿಂಗ್‌ನಲ್ಲಿ ಸುಮಿತ್‌ 18 ಸ್ಥಾನ ಮೇಲೇರಿ 77ನೇ ರ್‍ಯಾಂಕಿಂಗ್‌ ಪಡೆದ ಕಾರಣ ಅವರಿಗೆ ಒಲಿಂಪಿಕ್ಸ್‌ ಅರ್ಹತೆ ಲಭಿಸಿತು.

ಭಾನುವಾರ ಜರ್ಮನಿಯಲ್ಲಿ ನಡೆದ ಹೀಲ್‌ಬ್ರಾನ್ ನೆಕರ್‌ಕಪ್‌ ಚಾಲೆಂಜರ್‌ ಫೈನಲ್​ನಲ್ಲಿ ಸುಮಿತ್‌ ಅವರು ಸ್ವಿಜರ್ಲೆಂಡ್‌ನ‌ ಅಲೆಕ್ಸಾಂಡರ್‌ ರಿಚರ್ಡ್ಸ್‌ ವಿರುದ್ಧ 6 -1, 6-7 (5), 6-3 ಅಂತರದ ಜಯ ಗಳಿಸಿ ಚಾಂಪಿಯನ್‌ ಆಗಿ ಮಿಂಚಿದ್ದರು. ಈ ಗೆಲುವಿನಿಂದಾಗಿ ಸುಮಿತ್‌ ರ್‍ಯಾಂಕಿಂಗ್‌ನಲ್ಲಿ ಭಾರೀ ಪ್ರಗತಿ ಕಂಡುಬಂದಿತ್ತು. ಇದೀಗ ಒಲಿಂಪಿಕ್ಸ್​ ಟಿಕೆಟ್​ ಕೂಡ ಪಡೆದಿದ್ದಾರೆ. ಸುಮಿತ್‌ ನಾಗಲ್‌ 2012ರ ಬಳಿಕ ಒಲಿಂಪಿಕ್ಸ್‌ ಟೆನಿಸ್‌ ಸಿಂಗಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. 2012ರಲ್ಲಿ ಸೋಮದೇವ್‌ ದೇವವರ್ಮನ್‌ ಆಡಿದ್ದರು.

ಇದನ್ನೂ ಓದಿ Paris Olympics 2024: ಕೊನೆಗೂ ಪ್ಯಾರಿಸ್​ ಒಲಿಂಪಿಕ್ಸ್​ ಟಿಕೆಟ್​ ಪಡೆದ ಬಾಕ್ಸರ್​ ಅಮಿತ್‌ ಪಂಘಲ್‌

ವಯಸ್ಸು 40 ದಾಟಿದರೂ ಕೂಡ ಯುವ ಆಟಗಾರರು ಕೂಡ ನಾಚುವಂತ ಪ್ರದರ್ಶನ ತೋರುತ್ತಿರುವ ಕನ್ನಡಿಗ ಬೋಪಣ್ಣ ಕೂಡ ಒಲಿಂಪಿಕ್ಸ್​ನಲ್ಲಿ ಕಣಕ್ಕಿಳಿಯಲಿದ್ದಾರೆ. ಪುರುಷರ ಡಬಲ್ಸ್​ನಲ್ಲಿ ಅವರು ಸ್ಪರ್ಧಿಸಲಿದ್ದಾರೆ. ಅವರು ವಿಶ್ವ ಶ್ರೇಯಾಂಕದ 67ನೇ ಶ್ರೇಯಾಂಕದ ಶ್ರೀರಾಮ್ ಬಾಲಾಜಿ ಅವರನ್ನು ಒಲಿಂಪಿಕ್ಸ್‌ನಲ್ಲಿ ತಮ್ಮ ಜತೆಗಾರನಾಗಿ ಆಯ್ಕೆ ಮಾಡುವ ನಿರೀಕ್ಷೆಯಿದೆ.

44 ವರ್ಷದ ಬೋಪಣ್ಣ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ ಗೆದ್ದು ಕಳೆದ ವಾರ ಫ್ರೆಂಚ್ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದ್ದರು. ಬೋಪಣ್ಣ ಲಂಡನ್ 2012 ಗೇಮ್ಸ್ ಮತ್ತು ರಿಯೊ 2016 ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆದರೆ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಕಳೆದುಕೊಂಡಿದ್ದರು.

ಜುಲೈ 26ಕ್ಕೆ ಒಲಿಂಪಿಕ್ಸ್​ ಆರಂಭ

ಮಹತ್ವದ ಕ್ರೀಡಾಕೂಡವಾದ ಪ್ಯಾರಿಸ್ ಒಲಿಂಪಿಕ್ಸ್‌ನ(Paris Olympics 2024) ಉದ್ಘಾಟನಾ ಸಮಾರಂಭಕ್ಕೆ(paris olympics 2024 opening ceremony) ದಿನಾಂಕ ನಿಗದಿಯಾಗಿದೆ. ಜುಲೈ 26ರಂದು ಸೀನ್ ನದಿಯಲ್ಲಿ ಸಂಜೆ 7.30ಕ್ಕೆ ಅದ್ಧೂರಿ ಕಾರ್ಯಕ್ರಮ ನೆರವೇರಲಿದೆ.

ಒಲಿಂಪಿಕ್ಸ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

ಚಿನ್ನ ಗೆದ್ದ ಬಾಕ್ಸರ್​ಗಳಿಗೆ ಭಾರೀ ನಗದು ಪ್ರಶಸ್ತಿ ಘೋಷಣೆ


ಕೆಲವು ತಿಂಗಳ ಹಿಂದೆ ವಿಶ್ವ ಅಥ್ಲೆಟಿಕ್ (ಡಬ್ಲ್ಯುಎ) ಸಂಸ್ಥೆ ಟ್ರ್ಯಾಕ್ ಮತ್ತು ಫೀಲ್ಡ್(track & field gold medallists) ವಿಭಾಗದಲ್ಲಿ ಚಿನ್ನ ಜಯಿಸುವ ಅಥ್ಲೀಟ್‌ಗಳಿಗೆ 41.60 ಲಕ್ಷ ನಗದು ಪ್ರಶಸ್ತಿ ನೀಡುವುದಾಗಿ ಪ್ರಕಟಿಸಿತ್ತು. ಇದೀಗ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (International Boxing Association) ಕೂಡ ಮಹತ್ವದ ನಿರ್ಧಾರ ಕೈಗೊಂಡಿದ್ದು, ಚಿನ್ನ ಗೆಲ್ಲುವ ಪ್ರತಿಯೊಬ್ಬ ಬಾಕ್ಸರ್​ಗಳಿಗೆ 41.68 ಲಕ್ಷ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ. ಜತೆಗೆ ಕೋಚ್‌, ರಾಷ್ಟ್ರೀಯ ತಂಡಗಳಿಗೆ 10 ಲಕ್ಷ ನೀಡುವುದಾಗಿಯೂ ಪ್ರಕಟಿಸಿದೆ. ಆದರೆ, 2020ರ ಟೋಕಿಯೊ ಒಲಿಂಪಿಕ್ಸ್‌ ಬಾಕ್ಸಿಂಗ್ ಸ್ಪರ್ಧೆಗಳನ್ನು ಐಬಿಎ(IBA) ನೆರವಿಲ್ಲದೇ ಐಒಸಿಯೇ ಸಂಘಟಿಸಿತ್ತು. ಕ್ರೀಡಾ ಸಂಸ್ಥೆಗಳು ನೀಡುವ ಬಹುಮಾನ ಹಣಕ್ಕೂ ಐಒಸಿ ಸಮ್ಮತಿ ನೀಡಿಲ್ಲ.

Continue Reading

ಕ್ರೀಡೆ

Danielle Wyatt Marriage: ಸಲಿಂಗ ಸಂಗಾತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇಂಗ್ಲೆಂಡ್ ಮಹಿಳಾ ಕ್ರಿಕೆಟ್​ ತಂಡದ ಆಟಗಾರ್ತಿ

Danielle Wyatt Marriage: ಕಳೆದ ವರ್ಷ ಮಾರ್ಚ್ 2ರಂದು ಜಾರ್ಜಿ ಹಾಡ್ಜ್ ಅವರೊಂದಿಗೆ ವ್ಯಾಟ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದು ಇಂಗ್ಲೆಂಡ್​ ಆಟಗಾರ್ತಿ ಸಲಿಂಗ ವಿವಾಹವಾದ ಎರಡನೇ ನಿದರ್ಶನವಾಗಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ಮಹಿಳಾ ರಾಷ್ಟ್ರೀಯ ತಂಡದ ಕ್ರಿಕೆಟಿಗರಾದ ನತಾಲಿಯಾ ಸೀವರ್ ಮತ್ತು ಕ್ಯಾಥರಿನ್ ಬ್ರಂಟ್ ಸಲಿಂಗ ವಿವಾಹವಾಗಿದ್ದರು.

VISTARANEWS.COM


on

Danielle Wyatt Marriage
Koo

ಲಂಡನ್: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್​ ಆಟಗಾರ್ತಿ ಡೇನಿಯಲ್ ವ್ಯಾಟ್(Danielle Wyatt) ಅವರು ತನ್ನ ಬಹುಕಾಲ ಗೆಳತಿ ಜಾರ್ಜಿ ಹಾಡ್ಜ್(Georgie Hodge) ಅವರೊಂದಿಗೆ ಮದುವೆಯಾಗಿದ್ದಾರೆ. ಮದುವೆಯ ಫೋಟೊಗಳನ್ನು ವ್ಯಾಟ್ ತಮ್ಮ ಇನ್​​ಸ್ಟಾಗ್ರಾಮ್ ಮತ್ತು ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.


ಕಳೆದ ವರ್ಷ ಮಾರ್ಚ್ 2ರಂದು ಜಾರ್ಜಿ ಹಾಡ್ಜ್ ಅವರೊಂದಿಗೆ ವ್ಯಾಟ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದು ಇಂಗ್ಲೆಂಡ್​ ಆಟಗಾರ್ತಿ ಸಲಿಂಗ ವಿವಾಹವಾದ ಎರಡನೇ ನಿದರ್ಶನವಾಗಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ಮಹಿಳಾ ರಾಷ್ಟ್ರೀಯ ತಂಡದ ಕ್ರಿಕೆಟಿಗರಾದ ನತಾಲಿಯಾ ಸೀವರ್ ಮತ್ತು ಕ್ಯಾಥರಿನ್ ಬ್ರಂಟ್ ಸಲಿಂಗ ವಿವಾಹವಾಗಿದ್ದರು.


ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ 2014ರಲ್ಲಿ ಡೇನಿಯಲ್ ವ್ಯಾಟ್​ “ಕೊಹ್ಲಿ ನನ್ನನ್ನು ಮದುವೆಯಾಗು!!’ ಎಂದು ಟ್ವೀಟ್ ಮೂಲಕ ಪ್ರೇಮ ನಿವೇದನೆ ಮಾಡಿದ್ದರು. ಆದರೆ ಕೊಹ್ಲಿ ಇದಕ್ಕೆ ಕೊಹ್ಲಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಇದನ್ನೂ ಓದಿ WPL Auction: ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಅವಕಾಶ ಸಿಗದೆ, ಹೃದಯ ಒಡೆದು ಹೋಗಿದೆ; ಡೇನಿಯಲ್ ವ್ಯಾಟ್

‘ನಮ್ಮ ಮುಂದಿನ ಜೀವನವನ್ನು ದೃಢಪಡಿಸಿಕೊಳ್ಳುತ್ತಿದ್ದೇವೆ’ ಎಂದು ಮನೆಯ ಎಮೊಜಿಗಳನ್ನು ಹಾಕಿ ಟ್ವಿಟರ್​ ಪೋಸ್ಟ್​ ಮೂಲಕ ಡೇನಿಯಲ್‌ ವ್ಯಾಟ್‌ ತಮ್ಮ ವಿವಾಹದ(Danielle Wyatt Marriage) ವಿಚಾರವನ್ನು ತಿಳಿಸಿದ್ದಾರೆ. ಮದುವೆಯ ಮೂರು ಫೋಟೊಗಳನ್ನು ಕೂಡ ಹಂಚಿಕೊಂಡಿದ್ದಾರೆ.


ದಾಂಪತ್ಯ ಜೀವನಕ್ಕೆ ಕಾಲಿರಿಸಿ ಈ ಜೋಡಿಗಳಿಗೆ ಭಾರತ ಮಹಿಳಾ ತಂಡದ ಆಟಗಾರ್ತಿ ಶೆಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮೀಮಾ ರೋಡ್ರಿಗಸ್​ ಸೇರಿ ಹಲವು ದೇಶದ ಆಟಗಾರ್ತಿಯರು ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಕೂಡ ಶುಭ ಕೋರಿದೆ. ನಾಯಕಿ ಹೀದರ್ ನೈಟ್, ಡ್ಯಾನಿ ವ್ಯಾಟ್, ಇಶಾ ಗುಹಾ, ಜೆನ್ನಿ ಗನ್ ಸೇರಿದಂತೆ ಇಂಗ್ಲೆಂಡ್ ತಂಡದ ಪ್ರಸ್ತುತ ಮತ್ತು ಹಿಂದಿನ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.


33 ವರ್ಷದ ಡೇನಿಯಲ್‌ ವ್ಯಾಟ್‌ ಅವರು ಇಂಗ್ಲೆಂಡ್​ ಪರ 2 ಟೆಸ್ಟ್​, 110 ಏಕದಿನ ಮತ್ತು 156 ಟಿ20 ಪಂದ್ಯಗಳನ್ನು ಆಡಿ ಒಟ್ಟು 4,762 ರನ್​ ಬಾರಿಸಿದ್ದಾರೆ. ಏಕದಿನ ಮತ್ತು ಟಿ20ಯಲ್ಲಿ ತಲಾ 2 ಶತಕ ಬಾರಿಸಿದ್ದಾರೆ. ಬೌಲಿಂಗ್​ನಲ್ಲಿಯೂ ಸಾಧನೆ ಮಾಡಿರುವ ಇವರು 73 ಅಂತಾರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ. ಮಹಿಳಾ ಐಪಿಎಲ್​ ಟೂರ್ನಿಯಾದ ಡಬ್ಲ್ಯುಪಿಎಲ್​ನಲ್ಲಿ ಯುಪಿ ವಾರಿಯರ್ಸ್​ ತಂಡದ ಆಟಗಾರ್ತಿಯಾಗಿದ್ದಾರೆ.​

Continue Reading

ಕ್ರಿಕೆಟ್

Champions Trophy 2025: ಲಾಹೋರ್​ನಲ್ಲಿ ಭಾರತದ ಪಂದ್ಯ ಆಯೋಜನೆಗೆ ಸಿದ್ಧತೆ ಆರಂಭಿಸಿದ ಪಾಕ್​ ಕ್ರಿಕೆಟ್​ ಮಂಡಳಿ

Champions Trophy 2025: ಟೂರ್ನಿ ನಡೆಸಲು ಎಲ್ಲ ಸಿದ್ಧತೆ ನಡೆಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೆಚ್ಚಿನ ಪ್ರಯಾಣ ತಪ್ಪಿಸಲು ಭಾರತದ ಎಲ್ಲಾ ಪಂದ್ಯ ಗಳನ್ನು ಲಾಹೋರ್ ಕ್ರೀಡಾಂಗಣದಲ್ಲೇ ನಿಗದಿಪಡಿಸಿ ಎಂದು ಐಸಿಸಿಗೆ ತಿಳಿಸಿದೆ. ಟೂರ್ನಿಯ ಅಧಿಕೃತ ವೇಳಾ ಪಟ್ಟಿ, ಆತಿಥ್ಯ ನಗರ ಇನ್ನಷ್ಟೇ ಅಧಿಕೃತಗೊಳ್ಳಬೇಕಿದೆ.

VISTARANEWS.COM


on

Champions Trophy 2025
Koo

ಕರಾಚಿ: ಪಾಕಿಸ್ತಾನ(IND vs PAK) ಆತಿಥ್ಯದಲ್ಲಿ ಮುಂದಿನ ವರ್ಷ(2025) ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿ(Champions Trophy 2025) ಕ್ರಿಕೆಟ್ ಪಂದ್ಯಾವಳಿ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಟೂರ್ನಮೆಂಟ್ ನಡೆಯಲಿದೆ ಎಂದು ವರದಿಯಾಗಿದೆ. ಭಾರತ ತಂಡ ಟೂರ್ನಿಯಲ್ಲಿ ಆಡಲು ಪಾಕಿಸ್ತಾನಕ್ಕೆ ತೆರಳುವುದು ಇನ್ನೂ ಖಚಿತಗೊಂಡಿಲ್ಲ. ಈ ಮಧ್ಯೆ ಭಾರತದ ಪಂದ್ಯಗಳನ್ನು ಲಾಹೋರ್‌ನಲ್ಲಿ(Lahore) ಆಯೋಜಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(PCB) ಐಸಿಸಿಗೆ ಸಲಹೆ ನೀಡಿದೆ.

ಟೂರ್ನಿ ನಡೆಸಲು ಎಲ್ಲ ಸಿದ್ಧತೆ ನಡೆಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೆಚ್ಚಿನ ಪ್ರಯಾಣ ತಪ್ಪಿಸಲು ಭಾರತದ ಎಲ್ಲಾ ಪಂದ್ಯ ಗಳನ್ನು ಲಾಹೋರ್ ಕ್ರೀಡಾಂಗಣದಲ್ಲೇ ನಿಗದಿಪಡಿಸಿ ಎಂದು ಐಸಿಸಿಗೆ ತಿಳಿಸಿದೆ. ಟೂರ್ನಿಯ ಅಧಿಕೃತ ವೇಳಾ ಪಟ್ಟಿ, ಆತಿಥ್ಯ ನಗರ ಇನ್ನಷ್ಟೇ ಅಧಿಕೃತಗೊಳ್ಳಬೇಕಿದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಕೂಡ ಭಾರತ ಈ ಬಾರಿ ಪಾಕ್​ನಲ್ಲಿ ಕ್ರಿಕೆಟ್ ಆಡಲಿದೆ ಎಂದು ಬಲವಾದ ಹೇಳಿಕೆಯನ್ನು ಕೂಡ ನೀಡಿದ್ದಾರೆ.

ಇದನ್ನೂ ಓದಿ IND vs PAK: ಟ್ರ್ಯಾಕ್ಟರ್ ಮಾರಿ ಭಾರತ-ಪಾಕ್​ ಪಂದ್ಯ ವೀಕ್ಷಿಸಿ ಕಣ್ಣೀರು ಹಾಕಿದ ಅಭಿಮಾನಿ

2014ರಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ನೆರೆಯ ರಾಷ್ಟ್ರದೊಂದಿಗೆ ಯಾವುದೇ ಸ್ನೇಹಪರ ರೀತಿಯಲ್ಲಿ ಸಂಬಂಧ ಹೊಂದಿಲ್ಲ. ಶತ್ರು ದೇಶದ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪುಲ್ವಾಮಾ ಮತ್ತು ಉರಿ ದಾಳಿಯ ನಂತರ ಎರಡೂ ದೇಶಗಳ ಸಂಬಂಧ ಹದಗೆಟ್ಟಿದೆ. ಇತ್ತೀಚೆಗೆ ಮುಕ್ತಾಯಗೊಂಡ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಯು ಎನ್​ಡಿಎ ಜತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದರೂ ಕೂಡ ಈ ಸರ್ಕಾರದ ವಿದೇಶಾಂಗ ನೀತಿ ಬದಲಾಗುವ ಸಾಧ್ಯತೆಗಳು ಇಲ್ಲದ ಕಾರಣ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದು ಖಚಿತವಲ್ಲ ಎಂದು ಕ್ರಿಕ್​ಬಜ್​ ವರದಿ ಮಾಡಿದೆ. ಆದರೆ, ಪಾಕ್​ ಕ್ರಿಕೆಟ್​ ಮಂಡಳಿ ಮಾತ್ರ ಭಾರತ ಕೂಡ ಪಾಕ್​ನಲ್ಲಿಯೇ ಆಡಲಿದೆ ಎಂದು ಬಲವಾಗಿ ನಂಬಿದೆ.

ಕಳೆದ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆದಿದ್ದ ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ ಪಾಕ್​ಗೆ ಹೋಗಲು ಒಪ್ಪದ ಕಾರಣ ಹೈಬ್ರೀಡ್​ ಮಾದರಿಯಲ್ಲಿ ಪಾಕ್​ ಮತ್ತು ಶ್ರೀಲಂಕಾದಲ್ಲಿ ಆಡಿಸಲಾಗಿತ್ತು. ಭಾರತ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಭಾರತದಲ್ಲಿ ಡಿಸೆಂಬರ್ 2012 ರಿಂದ ಜನವರಿ 2013 ರವರೆಗಿನ ದ್ವಿಪಕ್ಷೀಯ ಸರಣಿಯು ಎರಡು ರಾಷ್ಟ್ರಗಳ ನಡುವಿನ ಅಂತಿಮ ದ್ವಿಪಕ್ಷೀಯ ಸರಣಿಯಾಗಿದೆ. ಇದಾದ ಬಳಿಕ ಉಭಯ ತಂಡಗಳು ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಆಡುತ್ತವೆ.

ಒಂದು ತಿಂಗಳ ಹಿಂದಷ್ಟೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ(Rajeev Shukla) ಅವರು ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಮಾತ್ರ ಭಾರತ(India Travelling To Pakistan) ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುವುದು ಎಂದು ಹೇಳಿದ್ದರು. ಎಎನ್‌ಐ ಜತೆ ಮಾತನಾಡಿದ್ದ ಶುಕ್ಲಾ, “ಚಾಂಪಿಯನ್ ಟ್ರೋಫಿಯ ಸಂದರ್ಭದಲ್ಲಿ, ಭಾರತ ಸರ್ಕಾರ ನಮಗೆ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇವೆ. ಭಾರತ ಸರ್ಕಾರ ನಮಗೆ ಅನುಮತಿ ನೀಡಿದಾಗ ಮಾತ್ರ ನಾವು ನಮ್ಮ ತಂಡವನ್ನು ಕಳುಹಿಸುತ್ತೇವೆ. ಹಾಗಾಗಿ ಭಾರತ ಸರ್ಕಾರದ ನಿರ್ಧಾರದ ಮೇಲೆ ತಂಡದ ಪ್ರಯಾಣದ ಭವಿಷ್ಯ ಅಡಗಿದೆ” ಎಂದು ಶುಕ್ಲಾ ಹೇಳಿದ್ದರು.

Continue Reading
Advertisement
actor Darshan
ಚಿತ್ರದುರ್ಗ7 mins ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Mohan Bhagwat
ದೇಶ14 mins ago

Mohan Bhagwat: ಜನ ಸೇವಕ ಎಂದಿಗೂ ಅಹಂಕಾರಿ ಆಗಿರುವುದಿಲ್ಲ: ಮೋಹನ್‌ ಭಾಗವತ್‌

Lifetime achievement felicitation ceremony for retired Judge Chandrashekharaiah on June 29 in Bengaluru
ಬೆಂಗಳೂರು34 mins ago

Bengaluru News: ಬೆಂಗಳೂರಿನಲ್ಲಿ ಜೂ. 29ರಂದು ನಿವೃತ್ತ ನ್ಯಾ. ಚಂದ್ರಶೇಖರಯ್ಯಗೆ ಅಭಿನಂದನೆ

murder case
ಮೈಸೂರು38 mins ago

Murder case : ಹಿರಿಯ ಸ್ವಾಮೀಜಿ ಕೊಂದ‌ ಆರೋಪಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

Womens Commission president Dr Nagalakshmi Chaudhary visit bisaadihatti village
ತುಮಕೂರು40 mins ago

Koratagere News: ಗ್ರಾಮೀಣ ಹೆಣ್ಣುಮಕ್ಕಳಿಗೆ ಮೂಲಸೌಕರ್ಯ ಒದಗಿಸುವುದು ಮೊದಲ ಆದ್ಯತೆ: ಮಹಿಳಾ ಆಯೋಗದ ಅಧ್ಯಕ್ಷೆ

IND vs USA
ಕ್ರೀಡೆ45 mins ago

IND vs USA: ಅಪಾಯಕಾರಿ ಅಮೆರಿಕ ಸವಾಲಿಗೆ ಸಡ್ಡು ಹೊಡೆದೀತೇ ಟೀಮ್​ ಇಂಡಿಯಾ?

Chandrababu Naidu
ದೇಶ55 mins ago

Chandrababu Naidu: ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿ; ಚಂದ್ರಬಾಬು ನಾಯ್ಡು ಘೋಷಣೆ

Contaminated water
ಕರ್ನಾಟಕ1 hour ago

Contaminated Water: ಮಧುಗಿರಿಯ ಚಿನ್ನೇನಹಳ್ಳಿಯಲ್ಲಿ ವಾಂತಿ, ಭೇದಿಯಿಂದ 35 ಜನ ಅಸ್ವಸ್ಥ; ಕಲುಷಿತ ನೀರು ಸೇವನೆ ಶಂಕೆ

Actor Darshan
ಕರ್ನಾಟಕ1 hour ago

Actor Darshan: ಕೊಲೆ ಕೇಸ್‌ನಲ್ಲಿ ದರ್ಶನ್‌ ಬಂಧನ; ನಟಿ ಸಂಜನಾಗೆ ಶಾಕ್‌, ರಕ್ಷಿತಾ ಹಾರ್ಟ್‌ಬ್ರೇಕ್, ದೇವರಲ್ಲಿ ಪ್ರಾರ್ಥನೆ!

Actor Darshan gets a series of questions from the police
ಸಿನಿಮಾ1 hour ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

actor Darshan
ಚಿತ್ರದುರ್ಗ7 mins ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ1 hour ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ3 hours ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ5 hours ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ24 hours ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ4 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ4 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 week ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

ಟ್ರೆಂಡಿಂಗ್‌