Virat kohli : ಕೊಹ್ಲಿಗೆ ಮತ್ತೊಂದು ಆಘಾತ; ದೀರ್ಘ ಕಾಲ ಜತೆಗಿದ್ದ ಮ್ಯಾನೇಜರ್ ಜತೆಗಿನ ಸಂಬಂಧ ಅಂತ್ಯ Vistara News

ಕ್ರಿಕೆಟ್

Virat kohli : ಕೊಹ್ಲಿಗೆ ಮತ್ತೊಂದು ಆಘಾತ; ದೀರ್ಘ ಕಾಲ ಜತೆಗಿದ್ದ ಮ್ಯಾನೇಜರ್ ಜತೆಗಿನ ಸಂಬಂಧ ಅಂತ್ಯ

ಕಾರ್ನರ್ ಸ್ಟೋನ್ ಮತ್ತು ಅದರ ಸಂಸ್ಥಾಪಕ ಬಂಟಿ ಸಜ್ದೆ ಅವರೊಂದಿಗಿನ ವಿರಾಟ್ ಕೊಹ್ಲಿ (Virat kohli) ಅವರ ಒಡನಾಟವು ದಶಕಗಳ ಬಳಿಕ ಅಂತ್ಯವಾಗಿದೆ.

VISTARANEWS.COM


on

Bunty Sajdeh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ : 2023 ರ ವಿಶ್ವಕಪ್ ಫೈನಲ್ ಪಂದ್ಯದ ಸೋಲಿನ ಬಳಿಕ ಭಾರತ ತಂಡ ಆಘಾತಕ್ಕೆ ಒಳಗಾಗಿದೆ. ಇದೇ ವೇಳೆ ಟೀಮ್ ಇಂಡಿಯಾದ ಬ್ಯಾಟರ್​ ವಿರಾಟ್​ ಕೊಹ್ಲಿ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಅವರ ದೀರ್ಘ ಕಾಲದ ಜತೆಗಾರ, ಮ್ಯಾನೇಜರ್ ಹಾಗೂ ಉದ್ಯಮ ಪಾಲುದಾರ ಬಂಟಿ ಸಜ್ದೇ ಅವರಿಂದ ಪ್ರತ್ಯೇಕಗೊಂಡಿದ್ದಾರೆ. ಜೆರ್ರಿ ಮ್ಯಾಗೈರ್, ಕಾರ್ನರ್ ಸ್ಟೋನ್ ಸಂಸ್ಥಾಪಕರಾಗಿರುವ ಬಂಟಿ ಕೊಹ್ಲಿಯ ಪಾಲುದಾರಿಕೆಯನ್ನು ಬಿಟ್ಟು ಹೋಗುವುದಕ್ಕೆ ಕಾರಣ ಗೊತ್ತಿಲ್ಲ. ಆದರೆ ಕೊಹ್ಲಿ ಶೀಘ್ರದಲ್ಲೇ ತಮ್ಮದೇ ಆದ ಕಂಪನಿಯನ್ನು ಪ್ರಾರಂಭಿಸಲಿದ್ದಾರೆ ಮತ್ತು ಅದನ್ನು ನೋಂದಾಯಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

“ಹೌದು, ಕೊಹ್ಲಿ ಮತ್ತು ಬಂಟಿ ಬಹಳ ದೀರ್ಘ ಮತ್ತು ಯಶಸ್ವಿನ ಪಾಲುದಾರಿಕೆ ಬಳಿಕ ಇದೀಗ ಬೇರ್ಪಟ್ಟಿದ್ದಾರೆ. ಕಾರ್ನರ್ ಸ್ಟೋನ್ ಸಂಸ್ಥೆಯಿಂದ ಬೇರ್ಪಟ್ಟ ಇತರ ಬಹಳಷ್ಟು ಕ್ರಿಕೆಟಿಗರು ಇದ್ದಾರೆ. ರೋಹಿತ್, ಕೆಎಲ್ ರಾಹುಲ್, ಅಜಿಂಕ್ಯ ರಹಾನೆ, ಶುಭ್ಮನ್ ಗಿಲ್ ಆ ಸಂಸ್ಥೆಯಿಂದ ಬೇರ್ಪಟ್ಟಿದ್ದರು. ಆದರೆ ಕೊಹ್ಲಿ ಈ ಸಂಸ್ಥೆ ಜತೆ ದೀರ್ಘ ಕಾಲದ ನಂಟು ಹೊಂದಿದ್ದರು. ಹೀಗಾಗಿ ಬಿಟ್ಟು ಹೋಗುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಇದೀಗ ಅವರ ಆ ಸಂಬಂಧವೂ ಮುಗಿದಿದೆ” ಎಂದು ಉದ್ಯಮದ ಮೂಲವೊಂದು ತಿಳಿಸಿದೆ.

2020ರಲ್ಲಿ, ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ಸ್. ಕಾರ್ನ್​ ರ್ಸ್ಟೋನ್ ಸಹಭಾಗಿತ್ವದಲ್ಲಿ ಧರ್ಮ ಕಾರ್ನರ್ಸ್ಟೋನ್ ಏಜೆನ್ಸಿ (ಡಿಸಿಎ) ಎಂಬ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯನ್ನು ಸ್ಥಾಪಿಸಿತ್ತು. ಆದಾಗ್ಯೂ, ಕಾರ್ನರ್ ಸ್ಟೋನ್ ಅವರೊಂದಿಗಿನ ಕೊಹ್ಲಿಯ ಪಾಲುದಾರಿಕೆ ಪ್ರತ್ಯೇಕವಾಗಿ ಮುಂದುವರಿದಿತ್ತು ಜೆವಿ ಎಂಬ ಹೊಸ ಸಂಸ್ಥೆಯ ಮೂಲಕ ಉದ್ಯಮದಲ್ಲಿತ್ತು.

ಕಾರ್ನರ್ ಸ್ಟೋನ್​ ಸಂಸ್ಥೆಯಲ್ಲಿ ಬಂಟಿ ಇದ್ದರೂ ಅದನ್ನು ಕೊಹ್ಲಿಯೇ ನಡೆಸುತ್ತಿದ್ದಾರೆ ಎಂಬ ಜೋಕ್​ ಉದ್ಯಮ ಕ್ಷೇತ್ರದಲ್ಲಿ ಇದೆ. ಆದರೀಗ ಇಂಥ ಒಪ್ಪಂದ ಮುರಿದು ಹೋಗಿದೆ.

ಇದನ್ನೂ ಓದಿ : Virat Kohli: ವಿರಾಟ್ ಕೊಹ್ಲಿ… ಕ್ರಿಕೆಟ್ ಲೋಕದ ‘ದೇವರ ದೇವ’!; ಇವರ ಬದುಕಿನ ಹಾದಿ ರೋಚಕ!

ಆತ್ಮೀಯ ಗೆಳೆಯರು

ಕಾರ್ನರ್ಸ್ಟೋನ್​ ಕಂಪನಿಗಿಂತ ಹೆಚ್ಚಾಗಿ ಕೊಹ್ಲಿ ಹಾಗೂ ಬಂಟಿ ಜೀವದ ಗೆಳೆಯರು . ಬಂಟಿ ಕಂಪನಿಯ ವ್ಯವಸ್ಥಾಪಕ ಮತ್ತು ಸ್ಥಾಪಕನಿಗಿಂತ ಹೆಚ್ಚಾಗಿ ಕೊಹ್ಲಿಯ ವಾಣಿಜ್ಯ ಹಿತಾಸಕ್ತಿಗಳು ಮತ್ತು ಬ್ರಾಂಡ್ ಮೌಲ್ಯ ಮತ್ತು ಮೈದಾನದ ಹೊರಗಿನ ಎಲ್ಲ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತಿದ್ದರು. ಪ್ರಮುಖ ಕ್ರಿಕೆಟ್ ವೇದಿಕೆಯಲ್ಲಿ ಬಂಟಿ ಕೊಹ್ಲಿಯ ಪಕ್ಕದಲ್ಲಿದ್ದರು. ಪೂಮಾದೊಂದಿಗೆ 100 ಕೋಟಿ ರೂ.ಗಳ ಒಪ್ಪಂದ ಸೇರಿದಂತೆ ಉನ್ನತ ಕಂಪನಿಗಳೊಂದಿಗೆ ಲಾಭದಾಯಕ ಒಪ್ಪಂದಗಳಿಗೆ ಅವರು ಸಹಿ ಹಾಕಿದ್ದರು.

ಕಾರ್ನರ್ ಸ್ಟೋನ್ ಕಂಪನಿಯು ಇತರ ಕ್ರೀಡಾಪಟುಗಳಿಗಿಂತ ಕೊಹ್ಲಿಯ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಭಾರತದ ಮಾಜಿ ನಾಯಕ ಒಂದು ದಶಕದ ಹಿಂದೆ ಕಾರ್ನರ್ ಸ್ಟೋನ್ ಗೆ ಸೇರಿದ್ದರು. ಅಂದಿನಿಂದ ಬಂಟಿಯೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು.

ಯಾರೆಲ್ಲ ಇದ್ದಾರೆ ಕಾರ್ನರ್​ಸ್ಟೋನ್​ನಲ್ಲಿ?

ಕಾರ್ನರ್​ ಸ್ಟೋನ್​ ಕಂಪನಿಯು ಕೇವಲ ವಿರಾಟ್ ಮೇಲೆ ಕೇಂದ್ರೀಕರಣಗೊಂಡ ಕಾರಣ ರೋಹಿತ್ ಶರ್ಮಾ, ಕೆಎಲ್ ರಾಹುಲ್, ಅಜಿಂಕ್ಯ ರಹಾನೆ, ಶುಭ್ಮನ್ ಗಿಲ್ ಮತ್ತಿತರರು ಅದರಿಂದ ತಮ್ಮ ಹೂಡಿಕೆಯನ್ನು ವಾಪಸ್ ಪಡೆದಿದ್ದರು.

ಪಿ.ವಿ.ಸಿಂಧು, ಸಾನಿಯಾ ಮಿರ್ಜಾ, ಉಮೇಶ್ ಯಾದವ್, ಕುಲದೀಪ್ ಯಾದವ್, ಭಾರತ ಅಂಡರ್ 19 ನಾಯಕ ಯಶ್ ಧುಲ್ ಅವರಂತಹ ಸ್ಟಾರ್ ಅಥ್ಲೀಟ್​ಗಳು ಇನ್ನೂ ಮಂಡಳಿಯಲ್ಲಿದ್ದಾರೆ. ರೋಹಿತ್, ರಾಹುಲ್, ರಹಾನೆ ಮತ್ತು ಗಿಲ್ ವಾಪಸ್ ಪಡೆದಿದ್ದಾರೆ. ಧರ್ಮ ಅವರ ಸಹಭಾಗಿತ್ವದಲ್ಲಿ ಕಾರ್ನರ್ ಸ್ಟೋನ್ ನ ಪೋರ್ಟ್ ಫೋಲಿಯೊ ಬಾಲಿವುಡ್ ಪರವಾಗುತ್ತಿದೆ. ಸಾರಾ ಅಲಿ ಖಾನ್, ಜಾನ್ವಿ ಕಪೂರ್, ಟೈಗರ್ ಶ್ರಾಫ್ ಇತರರು ಆ ಸಂಸ್ಥೆಯಲ್ಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರಿಕೆಟ್

Sachin Tendulkar: ವಿಕ್ಕಿ ಕೌಶಲ್‌ ಸಿನಿಮಾ ಕಂಡು ʻಸೂಪರ್ ಇಂಪ್ರೆಸ್ಡ್ʼ ಆದ ಸಚಿನ್ ತೆಂಡೂಲ್ಕರ್‌!

Sachin Tendulkar: ವಿಕ್ಕಿ ಅವರು ಸಚಿನ್‌ ತೆಂಡೂಲ್ಕರ್ ಅವರೊಂದಿಗಿನ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ತೆಂಡೂಲ್ಕರ್ ಅವರ ಪತ್ನಿ ಅಂಜಲಿ ತೆಂಡೂಲ್ಕರ್ ಕೂಡ ಜತೆಗಿದ್ದರು. ಸ್ಕ್ರೀನಿಂಗ್‌ ಆದ ಬಳಿಕ ಸಚಿನ್ ತೆಂಡೂಲ್ಕರ್ ಜತೆ ವಿಕ್ಕಿ ಪೋಸ್ ನೀಡಿದ್ದಾರೆ.

VISTARANEWS.COM


on

Sachin Tendulkar says he is super impressed by Vicky Kaushal
Koo

ಬೆಂಗಳೂರು: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಡಿಸೆಂಬರ್‌ 2ರ ರಾತ್ರಿ ನಟ ವಿಕ್ಕಿ ಕೌಶಲ್ ಅವರ ʻಸ್ಯಾಮ್ ಬಹದ್ದೂರ್‌ʼ ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ತೆಂಡೂಲ್ಕರ್ ಅವರ ಪತ್ನಿ ಅಂಜಲಿ ತೆಂಡೂಲ್ಕರ್ ಕೂಡ ಜತೆಗಿದ್ದರು. ಸ್ಕ್ರೀನಿಂಗ್‌ ಆದ ಬಳಿಕ ಸಚಿನ್ ತೆಂಡೂಲ್ಕರ್ ಜತೆ ವಿಕ್ಕಿ ಪೋಸ್ ನೀಡಿದ್ದಾರೆ.

ಸಚಿನ್ ಚಿತ್ರವನ್ನು ಕಂಡು “ಇದು ತುಂಬಾ ಒಳ್ಳೆಯ ಸಿನಿಮಾ. ವಿಕ್ಕಿ ಅವರ ನಟನೆಯಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಫೀಲ್ಡ್ ಮಾರ್ಷಲ್ ಸ್ಯಾಮ್ ನಿಜವಾಗಿಯೂ ಇದ್ದಂತೆ ಭಾಸವಾಯಿತು. ನಮ್ಮ ದೇಶದ ಇತಿಹಾಸ ತಿಳಿಯಲು ಎಲ್ಲಾ ಜನರೇಶನ್‌ ಅವರಿಗೆ ಪ್ರಮುಖ ಚಿತ್ರವಾಗಿದೆʼʼ ಎಂದು ಮಾಧ್ಯಮದ ಮುಂದೆ ಹೇಳಿಕೊಂಡರು.

ವಿಕ್ಕಿ ಅವರು ಸಚಿನ್‌ ತೆಂಡೂಲ್ಕರ್ ಅವರೊಂದಿಗಿನ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ನನ್ನ ಬಾಲ್ಯದ ಹೀರೊ ಇಂದು ನನ್ನ ಸಿನಿಮಾವನ್ನು ನೋಡಿದ್ದಾರೆ. ಧನ್ಯವಾದಗಳು ಸಚಿನ್‌ ಸರ್. ನಿಮ್ಮ ಮಾತುಗಳಿಗೆʼʼಎಂದು ಬರೆದುಕೊಂಡಿದ್ದಾರೆ. ಸ್ಯಾಮ್ ಬಹದ್ದೂರ್‌ ಭಾರತದಲ್ಲಿ ಮೊದಲ ದಿನದಂದು 5.50 ಕೋಟಿ ರೂ. ಗಳನ್ನು ಗಳಿಸಿತು. ಭಾರತದಲ್ಲಿ ಶನಿವಾರ 9.25 ಕೋಟಿ ರೂ. ನಿವ್ವಳ ಗಳಿಸಿದೆ ಎಂದೂ ವರದಿಯಾಗಿದೆ. ಡಿಸೆಂಬರ್ 2ರಂದು ಚಿತ್ರದ ಒಟ್ಟು ಕಲೆಕ್ಷನ್‌ 15.5 ಕೋಟಿ ರೂ. ಆಗಿದೆ ಎಂದು ವರದಿಯಾಗಿದೆ.

ಮೇಘನಾ ಗುಲ್ಜಾರ್ ನಿರ್ದೇಶಿಸಿದ ಈ ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ತೆಂಡೂಲ್ಕರ್ ಜತೆಗೆ ಕ್ರಿಕೆಟಿಗರಾದ ಜಹೀರ್ ಖಾನ್ ಮತ್ತು ಅಜಿತ್ ಅಗರ್ಕರ್ ಕೂಡ ಪ್ರದರ್ಶನದಲ್ಲಿ ಹಾಜರಾಗಿದ್ದರು.

ಮೇಘನಾ ಗುಲ್ಜಾರ್ ನಿರ್ದೇಶನದ ಚಿತ್ರ, ರಣಬೀರ್ ಕಪೂರ್ ಅವರ ‘ಅನಿಮಲ್‌ ಸಿನಿಮಾ ಜತೆ ಕ್ಲಾಶ್‌ ಆಗಿದೆ. ‘ವಿಕ್ಕಿ ಹೊರತುಪಡಿಸಿ, ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಇದನ್ನೂ ಓದಿ: Sachin Tendulkar : ಲಂಕಾ ವಿರುದ್ಧ ಪಂದ್ಯದ ಬೆಸ್ಟ್​ ಫೀಲ್ಡರ್ ಯಾರೆಂದು ಘೋಷಿಸಿದ ಸಚಿನ್​ ತೆಂಡೂಲ್ಕರ್​

ದೇಶದ ಮೊದಲ ಫೀಲ್ಡ್‌ ಮಾರ್ಷಲ್‌ ಕಥೆ ಇದು. ಈ ಸಿನಿಮಾ 1971ರ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಸ್ಯಾಮ್‌ ಮಾಣೆಕ್‌ ಶಾ ಅವರ ನಿಜಜೀವನದ ಘಟನೆಗಳನ್ನು ಆಧರಿಸಿದೆ. ವಿಕ್ಕಿ ಕೌಶಲ್ ಅಭಿನಯದ ಸ್ಯಾಮ್ ಬಹದ್ದೂರ್ ದೇಶದ ಮೊದಲ ಫೀಲ್ಡ್‌ ಮಾರ್ಷಲ್‌ ಕಥೆ ಇದು. ಈ ಸಿನಿಮಾ 1971ರ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಸ್ಯಾಮ್‌ ಮಾಣೆಕ್‌ ಶಾ ಅವರ ನಿಜಜೀವನದ ಘಟನೆಗಳನ್ನು ಆಧರಿಸಿದೆ. ಸ್ಯಾಮ್‌ ಮಾಣೆಕ್‌ ಶಾ ಅವರು ಫೀಲ್ಡ್‌ ಮಾರ್ಷಲ್‌ ಹುದ್ದೆಗೇರಿದ ಮೊದಲ ಭಾರತೀಯ ಸೇನಾ ಅಧಿಕಾರಿ. ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ತಮ್ಮ ಮಿಲಿಟರಿ ವೃತ್ತಿಜೀವನವನ್ನು ಪ್ರಾರಂಭಿಸಿ, ನಾಲ್ಕು ದಶಕಗಳ ಕಾಲ. ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಐದು ಯುದ್ಧಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

Continue Reading

ಕ್ರಿಕೆಟ್

AB de Villiers : ನನ್ನ ಹೃದಯ ಆರ್​​ಸಿಬಿಯಲ್ಲೇ ಇದೆ ಎಂದ ಮಿಸ್ಟರ್​ 360

14 ಋತುಗಳಲ್ಲಿ ಬೆಂಗಳೂರು ಫ್ರಾಂಚೈಸಿ ಪರ ಆಡಿದ ಡಿವಿಲಿಯರ್ಸ್ (AB de Villiers) 2021 ರಲ್ಲಿ ಎಲ್ಲಾ ರೀತಿಯ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡಿದ್ದರು.

VISTARANEWS.COM


on

ABD Villiars
Koo

ಬೆಂಗಳೂರು : ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ (AB de Villiers) ಭವಿಷ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಗೆ ಮರಳಲು ಬಯಸುತ್ತೇನೆ ಎಂದು ಶನಿವಾರ ಹೇಳಿದ್ದಾರೆ. 11 ಋತುಗಳಲ್ಲಿ ಬೆಂಗಳೂರು ಫ್ರಾಂಚೈಸಿ ಪರ ಆಡಿದ ಡಿವಿಲಿಯರ್ಸ್ 2021 ರಲ್ಲಿ ಎಲ್ಲಾ ರೀತಿಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದಾರೆ. ಆದರೂ ಅವರಿಗೆ ಆರ್​ಸಿಬಿ ಬಗ್ಗೆ ವಿಶೇಷವಾದ ಅಭಿಮಾನವಿದೆ. ಹೀಗಾಗಿ ಅವರು ಈ ತಂಡವನ್ನು ಅವರು ಪದೇಪದೇ ಉಲ್ಲೇಖಿಸುತ್ತಾರೆ.

ಐಪಿಎಲ್​​ನಲ್ಲಿ ಎಬಿ ಡಿವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಮತ್ತೆ ಒಂದಾಗುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಅದಕ್ಕೆ ಕಾಲ ಕೂಡಿ ಬಂದಿಲ್ಲ. ಅವರು ಆರ್​ಸಿಬಿಗೆ ಮಾರ್ಗದರ್ಶಕರಾಗಿ ಸೇರುತ್ತಾರೆ ಎಂಬ ವದಂತಿಗಳಿದ್ದವು. ಅದು ಸುಳ್ಳಾಯಿತು. ಎಬಿ ಡಿವಿಲಿಯರ್ಸ್ ಕಳೆದ ಋತುವಿನಲ್ಲಿ ಅಭಿಮಾನಿಗಳಿಗೆ ವಿದಾಯ ಹೇಳಲು ಬೆಂಗಳೂರಿಗೆ ಬಂದಿದ್ದರು. ಆದಾಗ್ಯೂ, ಅವರು ಮುಂದಿನ ದಿನಗಳಲ್ಲಿ ಆರ್​​ಸಿಬಿಗೆ ಸೇರಲು ಎದುರು ನೋಡುತ್ತಿದ್ದಾರೆ. ಆರ್​ಸಿಬಿ ನನ್ನ ಹೃದಯದಲ್ಲಿದೆ ಎಂದು ಹೇಳುವ ಮೂಲಕ ಅವರ ಈ ಮಾತಿಗೆ ಪುಷ್ಟಿ ಕೊಟ್ಟಿದ್ದಾರೆ.

“ನಾನು ಹಾಗೆ ಭಾವಿಸುತ್ತೇನೆ. ನನ್ನ ಹೃದಯವು ಆರ್​ಸಿಬಿಯೊಂದಿಗೆ ಇದೆ. ಅಲ್ಲಿ ಅನೇಕ ವರ್ಷ ಆಡಿದ್ದೇನೆ. ಬೆಂಗಳೂರಿನ ಅಭಿಮಾನಿಗಳೊಂದಿಗೆ ನನಗೆ ಉತ್ತಮ ಸಂಪರ್ಕವಿದೆ. ಅವರು ಅಪಾರ ಪ್ರೀತಿ ತೋರುತ್ತಾರೆ ಎಂದು ಎಬಿ ಡಿವಿಲಿಯರ್ಸ್ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಆರ್​​ಸಿಬಿ ಬಣ್ಣ ಇಷ್ಟ

ನಾನು ಸದಾ ಆರ್​ಸಿಬಿಗೆ ಬೆಂಬಲ ನೀಡಿದ್ದೇನೆ. ಎಲ್ಲಾ ಬೆಂಬಲ ಮತ್ತು ಪ್ರೀತಿಯನ್ನು ಪಡೆದುಕೊಂಡಿದ್ದೇನೆ. ಆರ್​ಸಿಬಿ ಸೇರುವ ಬಗ್ಗೆ ನಾನು ಈಗ ಏನನ್ನೂ ಖಾತರಿಪಡಿಸಲಾರೆ. ಆದರೆ ಭವಿಷ್ಯದಲ್ಲಿ ನನ್ನನ್ನು ಆರ್​ಸಿಬಿ ಬಣ್ಣದ ಲ್ಲಿ ನೋಡುವಿರಿ. ಆ ಬಣ್ಣ ನನಗೆ ಇಷ್” ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹೇಳಿದ್ದಾರೆ.

ಇದನ್ನೂ ಓದಿ : Team India : ವಿಶ್ವಕಪ್​ ಫೈನಲ್​ನಲ್ಲಿ ಸೋತಿದ್ದು ಯಾಕೆ? ದ್ರಾವಿಡ್, ರೋಹಿತ್​ಗೆ ಪ್ರಶ್ನೆಗಳ ಸುರಿಮಳೆ

ಆರ್​ಸಿಬಿ ಫ್ರಾಂಚೈಸಿ ಪರ 11 ಋತುಗಳನ್ನು ಆಡಿರುವ ಎಬಿ ಡಿವಿಲಿಯರ್ಸ್ ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದರು. ಮೈದಾನದ ಯಾವುದೇ ಭಾಗಕ್ಕೆ ಚೆಂಡನ್ನು ಹೊಡೆಯುವ ಸಾಮರ್ಥ್ಯಕ್ಕಾಗಿ ಅವರನ್ನು 360 ಡಿಗ್ರಿ ಬ್ಯಾಟ್ಸ್ಮನ್ ಎಂದು ಕರೆಯಲಾಗುತ್ತದೆ. ಅವರು ಬೆಂಗಳೂರು ತಂಡದ ಪರ 184 ಪಂದ್ಯಗಳನ್ನು ಆಡಿದ್ದಾರೆ.

ಐಪಿಎಲ್​​ನ 11 ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿರುವ ಡಿವಿಲಿಯರ್ಸ್ 5000 ರನ್ ಗಳಿಸಿದ್ದಾರೆ. ಅವರು 151 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ನಲ್ಲಿ ಆ ರನ್ ಗಳನ್ನು ಗಳಿಸಿದ್ದಾರೆ. ಅವರು ೪೦ಕ್ಕಿಂತ ಕಡಿಮೆ ಸರಾಸರಿಯನ್ನು ಕಾಯ್ದುಕೊಂಡಿದ್ದಾರೆ. ಅವರು ಮೈದಾನದಲ್ಲಿ ಇರುವಷ್ಟು ಹೊತ್ತು ಕ್ರಿಕೆಟ್ ಅಭಿಮಾನಿಗಳಿಗೆ ಸಂಭ್ರಮವಾಗಿತ್ತು. ಎಂಥದ್ದೇ ಕಠಿಣ ಸಂದರ್ಭವಾದರೂ ಅವರು ಫೋರ್​, ಸಿಕ್ಸರ್​ಗಳನ್ನು ಸುಲಭವಾಗಿ ಬಾರಿಸುವ ಮೂಲಕ ಅಭಿಮಾನಿಗಳಿಗೆ ಖುಷಿ ಕೊಡುತ್ತಿದ್ದರು. ಸೋಲುವ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ಅವರಿಗೆ ಇತ್ತು.

ಅವರ ವೀರೋಚಿತ ಪ್ರದರ್ಶನದ ಹೊರತಾಗಿಯೂ ಅವರಿಗೆ ಐಪಿಎಲ್​ನಲ್ಲಿ ಯಾವುದೇ ಪ್ರಶಸ್ತಿ ದೊರಕಿಲ್ಲ. ಬಹುತೇಕ ವಿರಾಟ್​ ಕೊಹ್ಲಿಯ ನಾಯಕತ್ವದಲ್ಲೇ ಆಡಿರುವ ಅವರು ಅತ್ಯುತ್ತಮ ಜತೆಯಾಟ ನೀಡಿ ಪಂದ್ಯವನ್ನು ಗೆಲ್ಲಿಸುತ್ತಿದ್ದರು. ಆದರೆ ಅವರಿಗೆ ಫೈನಲ್​ಗೆ ತಲುಪಿ ಅಲ್ಲಿ ಗೆದ್ದು ಟ್ರೋಫಿ ಎತ್ತಲು ಸಾಧ್ಯವಾಗಲಿಲ್ಲ. ಭವಿಷ್ಯದಲ್ಲಿ ಡಿವಿಲಿಯರ್ಸ್ ನಿಜವಾಗಿಯೂ ಆರ್​ಸಿಬಿ ಜೆರ್ಸಿಯಲ್ಲಿ ಕಾಣಿಸಿಕೊಂಡರೆ, ದಕ್ಷಿಣ ಆಫ್ರಿಕಾದ ಶ್ರೇಷ್ಠ ಆಟಗಾರ ಆ ಮೂಲಕವಾದರೂ ಟ್ರೋಫಿ ಗೆಲ್ಲಬಹುದು ಎಂಬುದು ಅಭಿಮಾನಿಗಳ ನಿರೀಕ್ಷೆ.

Continue Reading

ಕ್ರಿಕೆಟ್

Team India : ವಿಶ್ವಕಪ್​ ಫೈನಲ್​ನಲ್ಲಿ ಸೋತಿದ್ದು ಯಾಕೆ? ದ್ರಾವಿಡ್, ರೋಹಿತ್​ಗೆ ಪ್ರಶ್ನೆಗಳ ಸುರಿಮಳೆ

ವಿಶ್ವಕಪ್ ಫೈನಲ್​ನಲ್ಲಿ ಭಾರತದ (Team India) ಸೋಲಿಗೆ ಅಹಮದಾಬಾದ್ ಪಿಚ್ ಕಾರಣ ಎಂದು ದ್ರಾವಿಡ್ ಆರೋಪಿಸಿದ್ದಾರೆ. ಭಾರತ ತಂಡವು ನಿರೀಕ್ಷಿಸಿದಷ್ಟು ಪಿಚ್ ಅನುಕೂಲಕರವಾಗಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ.

VISTARANEWS.COM


on

Rohit Sharma1
Koo

ಬೆಂಗಳೂರು : ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ (Team India) ತಂಡ ಸೋಲುವುದಕ್ಕೆ ಕಾರಣಗಳು ಏನು ಎಂಬುದರ ಬಗ್ಗೆ ನಿರಂತರ ಚರ್ಚೆಗಳು ನಡೆದಿವೆ. ಇದೀಗ 11 ದಿನಗಳ ನಂತರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕಾರಿಗಳು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಕುಳಿತು ಪಂದ್ಯಾವಳಿಯಲ್ಲಿ ಭಾರತದ ಪ್ರದರ್ಶನವನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ. ನಾಯಕ ರೋಹಿತ್ ಶರ್ಮಾ ಕೂಡ ವಿಡಿಯೋ ಕಾನ್ಫೆರೆನ್ಸ್​ ಮೂಲಕ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಕೋಚ್ ಹಾಗೂ ನಾಯಕನಿಗೆ ಬಿಸಿಸಿಐ ಸತತವಾಗಿ ಪ್ರಶ್ನೆಗಳ ಸುರಿಮಳೆಗೈದಿದೆ.

ರೋಹಿತ್ ಶರ್ಮಾ ರಜಾ ಕಳೆಯಲೆಂದು ಲಂಡನ್​ಗೆ ಹೋಗಿದ್ದಾರೆ. ಅಲ್ಲಿಂದಲೇ ಅವರು ಸಭೆಯಲ್ಲಿ ಪಾಲ್ಗೊಂಡರು. ಸತತ 10 ಗೆಲುವುಗಳೊಂದಿಗೆ ಭಾರತವು ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ತಂಡಗಳಲ್ಲಿ ಒಂದಾಗಿತ್ತು ಆದರೆ ಫೈನಲ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್​ಗಳಿಂದ ಸೋತಿತು. ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಭಾರತೀಯ ಏಕದಿನ, ಟಿ 20 ಐ ಮತ್ತು ಟೆಸ್ಟ್ ತಂಡಗಳನ್ನು ಆಯ್ಕೆ ಮಾಡುವುದು ಮತ್ತು ಭವಿಷ್ಯದ ಕ್ರಮದ ಬಗ್ಗೆ ಕಲ್ಪನೆ ಪಡೆಯುವುದು ಸಭೆಯ ಮತ್ತೊಂದು ಕಾರ್ಯಸೂಚಿಯಾಗಿತ್ತು. ಈ ಸಭೆಯಲ್ಲಿ ಸೋಲಿಗೆ ಸ್ಪಷ್ಟ ಕಾರಣಗಳನ್ನು ಕೊಡುವಂತೆ ಬಿಸಿಸಿಐ ಅಧಿಕಾರಿಗಳು ಕೋಚ್​ ದ್ರಾವಿಡ್ ಹಾಗೂ ನಾಯಕ ರೋಹಿತ್​ಗೆ ಪ್ರಶ್ನೆಗಳನ್ನು ಕೇಳಿದ್ದಾರೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಖಜಾಂಚಿ ಆಶಿಶ್ ಶೆಲಾರ್ ಸಭೆಯಲ್ಲಿ ಭಾಗವಹಿಸಿದ್ದರು. ವರದಿಗಳ ಪ್ರಕಾರ ನವೆಂಬರ್ 19 ರಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಕಳಪೆ ಪ್ರದರ್ಶನದ ಹಿಂದಿನ ಕಾರಣಗಳ ಬಗ್ಗೆ ಅವರು ಪ್ರಶ್ನಿಸಿದ್ದಾರೆ. ಕೋಚ್​ ದ್ರಾವಿಡ್ ಅವರ ಅವಧಿ ಫೈನಲ್ ಪಂದ್ಯಕ್ಕೆ ಕೊನೆಗೊಂಡಿದ್ದರೂ ಇದೀಗ ಮತ್ತೆ ವಿಸ್ತರಣೆ ಮಾಡಲಾಗಿದೆ. ಅವರು 2024ರ ಟಿ20 ವಿಶ್ವ ಕಪ್​ ಮುಕ್ತಾಯದ ತನಕ ಅದೇ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

ಪಿಚ್​ ಸರಿಯಿರಲಿಲ್ಲ

ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಅನ್ನು ದ್ರಾವಿಡ್ ದೂಷಿಸಿದ್ದಾರೆ ಎಂದು ವರದಿಯಾಗಿದೆ. ಭಾರತೀಯ ತಂಡದ ಮ್ಯಾನೇಜ್ಮೆಂಟ್ ನಿರೀಕ್ಷಿಸಿದಷ್ಟು ಪಿಚ್ ಅನುಕೂಲಕರವಾಗಿರಲಿಲ್ಲ ಎಂದು ಭಾರತದ ಮಾಜಿ ನಾಯಕ ಹೇಳಿದ್ದಾರೆ ಎಂಬುದಾಗಿ ವರದಿಯಾಗಿದೆ. ಚೇಸಿಂಗ್​ನಲ್ಲಿ ಆಸ್ಟ್ರೇಲಿಯಾ ತಂಡದ ಬ್ಯಾಟರ್​ಗಳನ್ನು ಔಟ್​ ಮಾಡದೇ ಇರಲು ಅದುವೇ ಕಾರಣ ಎನ್ನಲಾಗಿದೆ.

ನಿಧಾನಗತಿಯ ಪಿಚ್

ಫೈನಲ್​ ಪಂದ್ಯವನ್ನು ಬಳಸಿದ ಪಿಚ್ ನಲ್ಲಿ ಆಡಿಸಲಾಗಿತ್ತು. ಪಾಕಿಸ್ತಾನ ವಿರುದ್ಧದ ಲೀಗ್ ಪಂದ್ಯಕ್ಕೆ ಇದೇ ಪಿಚ್ ಬಳಸಲಾಗಿತ್ತು. ಭಾರತವು ಆ ಪಂದ್ಯವನ್ನು ಸಾಕಷ್ಟು ಆರಾಮವಾಗಿ ಗೆದ್ದಿತ್ತು. ಇಲ್ಲಿ ಪ್ರಮುಖ ಅಂಶವಾಗಿದ್ದು ಟಾಸ್. ಫೈನಲ್​​ನಲ್ಲಿ ಭಾರತದಂತೆಯೇ ಪಾಕಿಸ್ತಾನವು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿತ್ತು. ಫೈನಲ್​ನಲ್ಲಿ ನಾಯಕ ರೋಹಿತ್ ಶರ್ಮಾ ಚುರುಕಿನ ಆರಂಭದ ಹೊರತಾಗಿಯೂ, ಭಾರತದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಮಧ್ಯಮ ಓವರ್​ಗಳಲ್ಲಿ ಹೆಣಗಾಡಿದ್ದರು.

ಪಿಚ್​ನ ನಿಧಾನಗತಿಯ ಸ್ವಭಾವ ಮತ್ತು ಆಸ್ಟ್ರೇಲಿಯಾದ ಬೌಲರ್​ಗಳ ಕಾರ್ಯಕ್ಷಮತೆಯೂ ಇಲ್ಲಿ ಎದ್ದು ಕಂಡಿದೆ. ಬಳಸಿದ ಪಿಚ್ ಅನ್ನು ಸ್ಥಳೀಯ ಕ್ಯುರೇಟರ್ ಸಲಹೆಯ ಮೇರೆಗೆ ಆಯ್ಕೆ ಮಾಡಲಾಗಿತ್ತು. ವಿಶ್ವಕಪ್​ನ ನಾಕೌಟ್ ಪಂದ್ಯಗಳಿಗೆ ಹೊಸ ಪಿಚ್ ಸಿದ್ಧಪಡಿಸುವುದನ್ನು ಐಸಿಸಿ ನಿಯಮವು ಕಡ್ಡಾಯಗೊಳಿಸಿಲ್ಲ. ಆದಾಗ್ಯೂ ಹೊಸ ಪಿಚ್​ ಸೂಕ್ತ ಎಂದು ಹೇಳಲಾಗುತ್ತದೆ. ಆದರೆ, ಭಾರತದಲ್ಲಿ ಬಹುತೇಕ ಬಳಸಿದ ಪಿಚ್​ನಲ್ಲಿ ಆಡಿಸಲಾಗಿತ್ತು.

ಇದನ್ನೂ ಓದಿ : Rohit Sharma : ಟಿ20 ನಾಯಕತ್ವದ ಗೊಂದಲದ ನಡುವೆಯೇ ವಿದೇಶದಲ್ಲಿ ಪತ್ತೆಯಾದ್ರು ರೋಹಿತ್ ಶರ್ಮಾ

ಸ್ಪಿನ್ನರ್​ಗಳಿಗೆ ನೆರವಾಗುವ ಉದ್ದೇಶದಿಂದ ಪಿಚ್​ಗೆ ಕಡಿಮೆ ನೀರು ಹಾಕಲಾಗಿತ್ತು. ಅದು ಭಾರತಕ್ಕೇ ಮುಳುವಾಯಿತು. ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದ್ದರು. ಮೊದಲ ಇನ್ನಿಂಗ್ಸ್​​ನಲ್ಲಿ 240 ರನ್​ಗಳಿಗೆ ಆಲೌಟ್ ಆಯಿತು. ಟ್ರಾವಿಸ್ ಹೆಡ್ ಅವರ ಅದ್ಭುತ ಶತಕದ ನೆರವಿನಿಂದ ಆಸ್ಟ್ರೇಲಿಯಾ ಗೆದ್ದಿತ್ತು.

Continue Reading

ಕ್ರಿಕೆಟ್

Ind vs Aus : ಭಾರತ – ಆಸ್ಟ್ರೇಲಿಯಾ ಪಂದ್ಯಕ್ಕೆ ಮಳೆಯ ಅಡಚಣೆ ಇದೆಯೇ?

ind vs aus : ಐದು ಪಂದ್ಯಗಳ ಸರಣಿಯನ್ನು ಭಾರತ ತಂಡ 3-1 ಅಂತರದಿಂದ ವಶಪಡಿಸಿಕೊಂಡಿದೆ.

VISTARANEWS.COM


on

Chinnaswamy Stadium
Koo

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಡಿಸೆಂಬರ್ 03) ನಡೆಯಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನವ (Ind vs Aus) 5ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಭಾರತವು ಸರಣಿಯನ್ನು 3-1 ಅಂತರದಿಂದ ಭದ್ರಪಡಿಸಿಕೊಂಡಿದ್ದರೂ, ಹವಾಮಾನ ಪರಿಸ್ಥಿತಿ ಅನುಮತಿಸಿದರೆ ಎರಡೂ ಕಡೆಯವರು ತಮ್ಮ ಬೆಂಚ್ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನ ಮಾಡಬಹುದು. ರಾಯ್ಪುರದಲ್ಲಿ ಭಾರತ ತಂಡ ಬ್ಯಾಟ್ ಮತ್ತು ಬಾಲ್​ನಲ್ಲಿ ಪರಾಕ್ರಮವನ್ನು ಪ್ರದರ್ಶಿಸಿತತ್ತು. ಅಂತೆಯೇ ಬೆಂಗಳೂರಿನಲ್ಲಿ ವರಣದೇವ ಕೃಪೆ ತೋರಿದರ ಸರಣಿಯ ಅಂತಿಮ ಮುಖಾಮುಖಿ ಕುತೂಹಲಕಾರಿಯಾಗಿರುವುದರಲ್ಲಿ ಯಾವುದೇ ಅನುಮಾನ ಇಲ್ಲ.

ರಾಯ್ಪುರದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಮತ್ತು ರಿಂಕು ಸಿಂಗ್ 20 ರನ್ ಗಳ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದರು ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡದಲ್ಲಿ ತಮ್ಮ ಮೇಲಿನ ವಿಶ್ವಾಸವನ್ನು ಹೆಚ್ಚಿಸಿಕೊಂಡರು. 4-1 ಮುನ್ನಡೆ ಸಾಧಿಸಲು ನಿರ್ಧರಿಸಿರುವ ಭಾರತ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದೆ. 2024ರ ಟಿ20 ವಿಶ್ವಕಪ್​​ಗೆ ಮುನ್ನ ಇನ್ನು ಕೇವಲ 6 ಟಿ20 ಪಂದ್ಯಗಳು ಬಾಕಿ ಉಳಿದಿದ್ದು, ಪ್ರತಿಯೊಂದು ಪಂದ್ಯವೂ ಮಹತ್ವದ್ದಾಗಿದೆ . ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಿರ್ಣಾಯಕ ಪಂದ್ಯಕ್ಕೆ ಮಳೆ ಬರುವುದೇ ಎಂಬ ಆತಂಕ ಶುರುವಾಗಿದೆ.

ಮಳೆ ಭೀತಿ ಬಹುತೇಕ ಇಲ್ಲ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಟಿ 20 ಪಂದ್ಯಕ್ಕೆ ಮಳೆ ಅಡ್ಡಿಯಾಗುವ ನಿರೀಕ್ಷೆಯಿಲ್ಲದ ಕಾರಣ ಪ್ರೇಕ್ಷಕರು ರನ್​ಗಳ ಮಳೆಯನ್ನು ಅನುಭವಿಸಬಹುದು. ಬೆಂಗಳೂರಿನಲ್ಲಿ ಡಿಸೆಂಬರ್ 3ರಂದು ಹವಾಮಾನ ಮುನ್ಸೂಚನೆಯು 26 ಡಿಗ್ರಿ ಸ್ಥಿರ ತಾಪಮಾನ ಇದೆ ಎಂದು ಹೇಳಿದೆ ಭಾಗಶಃ ಮೋಡ ಕವಿದ ವಾತಾವರಣ ಇರುತ್ತದೆ. ಇದು 72% ಆರ್ದ್ರತೆಯ ಸೂಚನೆ ನೀಡಿದೆ. ರಾತ್ರಿ 8-9 ರ ನಡುವೆ ಹನಿ ಮಳೆಯಾಗಬಹುದು. ಇದು ಆದರೂ ಪಂದ್ಯ ಕೊಚ್ಚಿಹೋಗುವ ಅಪಾಯವನ್ನುಂಟು ಮಾಡುವುದಿಲ್ಲ.

ಬೌಲರ್​ಗಳಿಗೆ ಕಷ್ಟಕರ ಪಿಚ್​

ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಅಸಾಧಾರಣ ಬ್ಯಾಟಿಂಗ್ ಪ್ರದರ್ಶನಗಳಿಗೆ ಅನುಕೂಲಕರವಾಗಿದೆ. ಇದು ಬ್ಯಾಟರ್​ಗಳಿಗೆ ಸೂಕ್ತ ಹೊಡೆಗಳಿಗೆ ಅನುಕೂಲಕರವಾಗಿದೆ. ಇದು ವೇಗದ ಬೌಲರ್​ಗಳಿಗೆ ಮತ್ತು ಸ್ಪಿನ್ನರ್​ಗಳಿಗೆ ಎಂದಿಗೂ ನೆರವಾಗುವುದಿಲ್ಲ. ಇದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಹೆಚ್ಚಿನ ಸ್ಕೋರ್ ಪಂದ್ಯಕ್ಕೆ ವೇದಿಕೆಯನ್ನು ಒದಗಿಸಲಿದೆ. ಟಾಸ್ ಗೆದ್ದ ತಂಡ ಚೇಸ್ ಮಾಡುವುದೇ ಉತ್ತಮ. ಪಿಚ್​ನ ಸಮ ಸ್ವರೂಪ ಮತ್ತು ಸಣ್ಣ ಬೌಂಡರಿಗಳು ಚೇಸಿಂಗ್ ತಂಡಕ್ಕೆ ಅನುಕೂಲಕರವಾಗಿವೆ.

ಇದನ್ನೂ ಓದಿ : Virat kohli : ಸಿಹಿ ಮಾವಿನ ಹಣ್ಣಿನ ಕತೆ ಕೆದಕಿದ ನವಿನ್ ಉಲ್ ಹಕ್​

ಸಂಭಾವ್ಯ ಪ್ಲೇಯಿಂಗ್ ಇಲೆವೆನ್

ಭಾರತ: ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಂಕು ಸಿಂಗ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ದೀಪಕ್ ಚಹರ್, ಅವೇಶ್ ಖಾನ್, ಮುಖೇಶ್ ಕುಮಾರ್.

ಆಸ್ಟ್ರೇಲಿಯಾ: ಟ್ರಾವಿಸ್ ಹೆಡ್, ಜೋಶ್ ಫಿಲಿಪ್, ಆರೋನ್ ಹಾರ್ಡಿ, ಬೆನ್ ಮೆಕ್ಡರ್ಮಾಟ್, ಟಿಮ್ ಡೇವಿಡ್, ಮ್ಯಾಟ್ ಶಾರ್ಟ್, ಮ್ಯಾಥ್ಯೂ ವೇಡ್ (ನಾಯಕ/ ವಿಕೆಟ್ ಕೀಪರ್), ಬೆನ್ ಡ್ವಾರ್ಶುಯಿಸ್, ತನ್ವೀರ್ ಸಂಘಾ, ಕ್ರಿಸ್ ಗ್ರೀನ್, ಜೇಸನ್ ಬೆಹ್ರೆನ್ಡಾರ್ಫ್.

ಇತ್ತಂಡಗಳ ಮುಖಾಮುಖಿ ವಿವರ

  • ಆಡಿದ ಪಂದ್ಯಗಳು: 30
  • ಭಾರತ ಗೆಲುವು- 18
  • ಆಸ್ಟ್ರೇಲಿಯಾ- 11
  • ಮೊದಲ ಪಂದ್ಯ- 22 ಸೆಪ್ಟೆಂಬರ್, 2007
  • ಕೊನೆಯ ಪಂದ್ಯ: 01 ಡಿಸೆಂಬರ್, 2023

ನೇರ ಪ್ರಸಾರ ವಿವರಗಳು

  • ದಿನಾಂಕ ಭಾನುವಾರ, ಡಿಸೆಂಬರ್ 3
  • ಸಮಯ: ಸಂಜೆ 07:00 (ಭಾರತೀಯ ಕಾಲಮಾನ)
  • ಲೈವ್ ಸ್ಟ್ರೀಮಿಂಗ್ ಜಿಯೋ ಸಿನೆಮಾ
  • ಲೈವ್ ಬ್ರಾಡ್ಕಾಸ್ಟ್ ಸ್ಪೋರ್ಟ್ಸ್18

Continue Reading
Advertisement
Sachin Tendulkar says he is super impressed by Vicky Kaushal
ಕ್ರಿಕೆಟ್9 seconds ago

Sachin Tendulkar: ವಿಕ್ಕಿ ಕೌಶಲ್‌ ಸಿನಿಮಾ ಕಂಡು ʻಸೂಪರ್ ಇಂಪ್ರೆಸ್ಡ್ʼ ಆದ ಸಚಿನ್ ತೆಂಡೂಲ್ಕರ್‌!

Crime Sense Murder Case
ಕರ್ನಾಟಕ26 mins ago

Murder Case : ವ್ಯಕ್ತಿಯ ತಲೆ ಸೀಳಿ ಮೋರಿಗೆ ಶವ ಎಸೆದ ಹಂತಕರು!

election five states
ದೇಶ32 mins ago

Election Results 2023: ಲೋಕಸಭೆ 65 ಸ್ಥಾನಗಳ ಮೇಲೆ ಇದೀಗ ಬಿಜೆಪಿ ಹಿಡಿತ! ಮೋದಿ ಹಾದಿ ಸುಲಭ!

Police call off protest FIR against lawyer who slapped police
ಕರ್ನಾಟಕ45 mins ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Shivraj Singh Chouhan
ದೇಶ48 mins ago

Ladli Behna: ಚೌಹಾಣ್‌ ‘ಗ್ಯಾರಂಟಿ’ಗೆ ಜೈ ಎಂದ ಮಧ್ಯಪ್ರದೇಶ ಜನ;‌ ಏನಿದು ಲಾಡ್ಲಿ ಬೆಹ್ನಾ?

Bobby Deol cries after paparazzi praise him as Animal
ಬಾಲಿವುಡ್50 mins ago

Bobby Deol: ʻಅನಿಮಲ್‌ʼ ಸಕ್ಸೆಸ್‌ ಹೊಗಳಿಕೆಗೆ ಕಣ್ಣೀರಿಟ್ಟ ನಟ ಬಾಬಿ ಡಿಯೋಲ್

R Ashok
ಕರ್ನಾಟಕ1 hour ago

Election Results 2023 : ತೆಲಂಗಾಣ ಶಾಸಕರನ್ನು ರೆಸಾರ್ಟ್‌ಗೆ ಕರೆತಂದು ಸೇವೆ ಮಾಡಿದ್ರೆ ಉಗ್ರ ಪ್ರತಿಭಟನೆ; ಆರ್.‌ ಅಶೋಕ್

Snehit Gowda and Namratha Gowda
ಬಿಗ್ ಬಾಸ್1 hour ago

BBK SEASON 10: ನಮ್ರತಾ ಮೇಲೆ ಸ್ಟ್ರಾಂಗ್​ ಫೀಲಿಂಗ್ಸ್ ಇದೆ ಎಂದ ಸ್ನೇಹಿತ್‌!

Narendra Modi
ದೇಶ1 hour ago

Election Results 2023: ಚುನಾವಣೆ ಗೆಲುವು; ಬಿಜೆಪಿ ಕಚೇರಿಯಲ್ಲಿ ಮೋದಿ ಸ್ವಾಗತಕ್ಕೆ ಸಿದ್ಧತೆ; ಸಂಭ್ರಮ

DK Shivakumar Telangana congress
ಕರ್ನಾಟಕ2 hours ago

Telangana Results 2023 : ತೆಲಂಗಾಣದಲ್ಲಿ ಗೆದ್ದ‌ ಕೈ ಶಾಸಕರೆಲ್ಲರೂ ಹೈದರಾಬಾದ್‌ಗೆ ಶಿಫ್ಟ್

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Police call off protest FIR against lawyer who slapped police
ಕರ್ನಾಟಕ45 mins ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ7 hours ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ20 hours ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ2 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ2 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ3 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ3 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

ಟ್ರೆಂಡಿಂಗ್‌