World Cup final: ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಶತಕ ಬಾರಿಸಿದ ಸಾಧಕರಿವರು - Vistara News

ಕ್ರಿಕೆಟ್

World Cup final: ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಶತಕ ಬಾರಿಸಿದ ಸಾಧಕರಿವರು

ಆಸ್ಟ್ರೇಲಿಯಾದ ಟ್ರಾವಿಸ್​ ಹೆಡ್​ ಅವರು ವಿಶ್ವಕಪ್​ ಫೈನಲ್(World Cup final)​ ಪಂದ್ಯದಲ್ಲಿ ಶತಕ ಬಾರಿಸಿದ 7ನೇ ಬ್ಯಾಟರ್​ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

VISTARANEWS.COM


on

Clive Lloyd
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾರತ ವಿರುದ್ಧ ಭಾನುವಾರ ನಡೆದ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಶತಕ ಬಾರಿಸಿ ಆಸ್ಟ್ರೇಲಿಯಾದ ಗೆಲುವಿನ ರುವಾರಿಯಾದ ಟ್ರಾವಿಸ್​ ಹೆಡ್​ ಅವರು ವಿಶ್ವಕಪ್​ ಫೈನಲ್(World Cup final)​ ಪಂದ್ಯದಲ್ಲಿ ಶತಕ ಬಾರಿಸಿದ 7ನೇ ಬ್ಯಾಟರ್​ ಎಂಬ ಕೀರ್ತಿಗೆ ಪಾತ್ರರಾದರು. ಇದುವರೆಗಿನ ವಿಶ್ವಕಪ್​ ಇತಿಹಾಸದ ಫೈನಲ್​ ಪಂದ್ಯದಲ್ಲಿ ಶತಕ ಬಾರಿಸಿದ ಸಾಧಕರ ವಿವರ ಇಂತಿದೆ.

ಕ್ಲೈವ್​ ಲಾಯ್ಡ್​ (1975)

ಇದು ಚೊಚ್ಚಲ ವಿಶ್ವಕಪ್​ ಟೂರ್ನಿಯಾಗಿತ್ತು. 8 ತಂಡಗಳು ಇಲ್ಲಿ ಆಡಲಿಳಿದಿದ್ದವು. ಆರಂಭಿಕ ಸ್ಪರ್ಧೆಯಾದ ಕಾರಣ ಯಾವ ತಂಡದದ ಬಲಾಬಲವೂ ಸ್ಪಷ್ಟವಾಗಿ ಅರಿವಿರಲಿಲ್ಲ. ಆದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ದೈತ್ಯರೆನಿಸಿದ್ದ ಕೆರಿಬಿಯನ್ನರು ಏಕದಿನದಲ್ಲೂ ಪ್ರಾಬಲ್ಯ ಮೆರೆದರು. ಆಸ್ಟ್ರೇಲಿಯವನ್ನು 17 ರನ್ನುಗಳಿಂದ ಮಣಿಸಿ ಚಾಂಪಿಯನ್‌ ಎನಿಸಿದರು. ಫೈನಲ್​ ಪಂದ್ಯದಲ್ಲಿ ಕ್ಲೈವ್‌ ಲಾಯ್ಡ್ 102 ರನ್​ ಬಾರಿಸಿ ಗೆಲುವಿನ ಹೀರೊ ಎನಿಸಿಕೊಂಡರು. ಇದು ವಿಶ್ವಕಪ್ ಫೈನಲ್​ ಪಂದ್ಯದಲ್ಲಿ ದಾಖಲಾದ ಮೊದಲ ಶತಕ ಎಂದು ಇತಿಹಾಸದ ಪುಟ ಸೇರಿತು.

ಇದನ್ನೂ ಓದಿ ICC World Cup 2023 : ಅಲ್ಲೇ ಡ್ರಾ, ಅಲ್ಲೇ ಬಹುಮಾನ; ಶಕಿಬ್​ ವಿರುದ್ಧ ಸೇಡು ತೀರಿಸಿಕೊಂಡ ಮ್ಯಾಥ್ಯೂಸ್​


ವಿವಿಯನ್‌ ರಿಚರ್ಡ್ಸ್‌​(1979)

ದ್ವಿತೀಯ ಆವೃತ್ತಿಯ ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲೂ ಶತಕ ದಾಖಲಾಯಿತು. ಈ ಸಾಧನೆ ಮಾಡಿದ್ದು ವಿಂಡೀಸ್​ನ ವಿವಿಯನ್‌ ರಿಚರ್ಡ್ಸ್‌. ಇಂಗ್ಲೆಂಡ್​ ವಿರುದ್ಧದ ಫೈನಲ್​ ಪಂದ್ಯದಲ್ಲಿ ಅವರು ಅಜೇಯ 138 ರನ್​ ಬಾರಿಸಿದ್ದರು. ಈ ಪಂದ್ಯದಲ್ಲಿ ನಾಟಕೀಯ ಕುಸಿತ ಅನುಭವಿಸಿದ ಆತಿಥೇಯ ಇಂಗ್ಲೆಡ್‌ 92 ರನ್ನುಗಳಿಂದ ಶರಣಾಯಿತು. ವೆಸ್ಟ್‌ ಇಂಡೀಸ್‌ ತನ್ನ ಪರಾಕ್ರಮ ಮತ್ತೆ ಮೆರೆದು ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 


ಅರಂವಿಂದ ಡಿ ಸಿಲ್ವ(1996)

ಶಾಂತಿಗಾಗಿ ವಿಲ್ಸ್‌ ಪ್ರಾಯೋಜಕತ್ವದಲ್ಲಿ ನಡೆದ ಟೂರ್ನಿ ಇದಾಗಿತ್ತು. ಫೈನಲ್​ನಲ್ಲಿ ಆಸ್ಟ್ರೇಲಿಯವನ್ನು 7 ವಿಕೆಟ್‌ಗಳಿಂದ ಮಣಿಸಿದ ಶ್ರೀಲಂಕಾ ನೂತನ ಚಾಂಪಿಯನ್‌ ಎನಿಸಿತು. ಈ ಪಂದ್ಯದಲ್ಲಿ ಅರಂವಿಂದ ಡಿ ಸಿಲ್ವ ಅವರು ಅಜೇಯ 107 ರನ್​ ಬಾರಿಸಿ ಲಂಕಾ ತಂಡಕ್ಕೆ ಟ್ರೋಫಿ ತಂದುಕೊಟ್ಟರು. ವಿಶ್ವಕಪ್ ಫೈನಲ್​ನಲ್ಲಿ ಶತಕ ಬಾರಿಸಿದ ಮೂರನೇ ಆಟಗಾರ ಎಂಬ ದಾಖಲೆ ಬರೆದರು.

ಇದನ್ನೂ ಓದಿ ಮೀಸಲಾತಿ ಇರುತ್ತಿದ್ದರೆ ಭಾರತ ವಿಶ್ವಕಪ್​ ಗೆಲ್ಲುತ್ತಿತ್ತು ಎಂದ ಚೇತನ್; ಮತ್ತೆ ವಿವಾದ


ರಿಕಿ ಪಾಂಟಿಂಗ್​(2003)

ಆಸ್ಟ್ರೇಲಿಯಾ ಕ್ರಿಕೆಟ್​ ಕಂಡ ಅತ್ಯಂತ ಯಶಸ್ವಿ ನಾಯಕನೆಂದರೆ ಅದು ರಿಕಿ ಪಾಂಟಿಂಗ್​ ಅವರು ನಾಯಕನಾಗಿ 2 ಬಾರಿ ಮತ್ತು ಆಟಗಾರನಾಗಿ ಒಂದು ಬಾರಿ ವಿಶ್ವಕಪ್​ ಗೆದ್ದ ಸಾಧನೆ ಮಾಡಿದ್ದಾರೆ. 2003ರಲ್ಲಿ ನಡೆದ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಭಾರತ ವಿರುದ್ಧ 140 ರನ್​ ಬಾರಿಸಿ ಭಾರತದ ಕಪ್​ ಕನಸನ್ನು ಭಗ್ನಗೊಳಿಸಿದ್ದರು. ಅವರು ವಿಶ್ವಕಪ್ ಫೈನಲ್​ ಪಂದ್ಯದಲ್ಲಿ ಶತಕ ಬಾರಿಸಿದ 4ನೇ ಆಟಗಾರ.


ಆಡಂ ಗಿಲ್​ ಕ್ರಿಸ್ಟ್​​(2007)

ಭಾರತದ ಪಾಲಿಗೆ ಇದು ವಿಶ್ವಕಪ್‌ ಇತಿಹಾಸದ ದುರಂತಮಯ ಕೂಟ. ಭಾರತ ತಂಡ ಲೀಗ್​ ಹಂತದಲ್ಲೇ ನಿರ್ಗಮಿಸಿತ್ತು. ಆಸ್ಟ್ರೇಲಿಯಾ ಮತ್ತೆ ಫೈನಲ್‌ಗೆ ಲಗ್ಗೆ ಇರಿಸಿತು. ಮಳೆಪೀಡಿತ ಪ್ರಶಸ್ತಿ ಸಮರದಲ್ಲಿ ಶ್ರೀಲಂಕಾವನ್ನು ಡಿ-ಎಲ್‌ ನಿಯಮದನ್ವಯ ಸೋಲಿಸಿ ಹ್ಯಾಟ್ರಿಕ್‌ ಕಪ್​ ಗೆದ್ದ ಸಾಧನೆ ಮಾಡಿತ್ತು. ಇಡೀ ಟೂರ್ನಿಯಲ್ಲಿ ಘೋರ ವೈಫಲ್ಯ ಕಂಡಿದ್ದ ಆಡಂ ಗಿಲ್​ ಕ್ರಿಸ್ಟ್​ ಫೈನಲ್​ ಪಂದ್ಯದಲ್ಲಿ ರೌದ್ರಾವತಾರ ತೋರುವ ಮೂಲಕ 149 ರನ್​ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಇದನ್ನೂ ಓದಿ ODI World Cup Team: ಐಸಿಸಿ ವಿಶ್ವಕಪ್​ ತಂಡಕ್ಕೆ ರೋಹಿತ್ ಶರ್ಮ​ ನಾಯಕ, ಟೀಮ್‌ ಹೀಗಿದೆ…


ಮಹೇಲಾ ಜಯವರ್ಧನೆ(2011)

ಏಷ್ಯಾದ ಮೂರು ರಾಷ್ಟ್ರಗಳ ಆತಿಥ್ಯದಲ್ಲಿ ನಡೆದ ಪಂದ್ಯಾವಳಿ ಇದಾಗಿತ್ತು. 2007ರ ಟಿ20 ವಿಶ್ವಕಪ್​ ಗೆದ್ದ ಮಹೇಂದ್ರ ಸಿಂಗ್‌ ಧೋನಿ ಸಾರಥ್ಯದಲ್ಲಿ ಕಣಕ್ಕಿಳಿದ ಭಾರತ ತಂಡ 2ನೇ ಸಲ ಕಪ್‌ ಎತ್ತಿ 28 ವರ್ಷಗಳ ಬಳಿಕ ವಿಶ್ವಕಪ್​ ತನ್ನದಾಗಿಸಿಕೊಂಡಿತು. ಫೈನಲ್‌ನಲ್ಲಿ ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಉರುಳಿಸಿ ಟ್ರೋಫಿಯನ್ನು ಕ್ರಿಕೆಟ್‌ ದೇವರಿಗೆ ಅರ್ಪಿಸಿತು. ಇದೇ ಪಂದ್ಯದಲ್ಲಿ ಲಂಕಾದ ಮಹೇಲಾ ಜಯವರ್ಧನೆ ಅಜೇಯ 103 ರನ್​ ಬಾರಿಸಿದ್ದರು. ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದರೂ ಸೋಲು ಕಂಡ ಮೊದಲ ತಂಡ ಎಂಬ ಕೆಟ್ಟ ದಾಖಲೆ ಲಂಕಾ ಪಾಲಾಯಿತು.


ಟ್ರಾವಿಸ್​ ಹೆಡ್​(2023)

ಟೂರ್ನಿಯುದ್ದಕ್ಕೂ ಒಂದೂ ಸೋಲು ಕಾಣದೆ ಫೈನಲ್​ ತಲುಪಿದ್ಧ ಭಾರತಕ್ಕೆ ಅಡ್ದಗಾಲಿಟ್ಟದ್ದು ಟ್ರಾವಿಸ್​ ಹೆಡ್​. ಅಹಮದಾಬಾದ್​ನಲ್ಲಿ ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ ಭಾರತದ ಬೌಲಿಂಗ್​ ಯೋಜನೆಯನ್ನು ತಲೆ ಕೆಳಗಾಗಿಸಿ 137 ರನ್​ ಹೊಡೆದು ಆಸೀಸ್​ಗೆ ಸ್ಮರಣೀಯ ಗೆಲುವು ತಂದುಕೊಟ್ಟರು. ಜತೆಗೆ ಫೈನಲ್​ ಪಂದ್ಯದಲ್ಲಿ ಶತಕ ಬಾರಿಸಿದ 7ನೇ ಆಟಗಾರ ಎನಿಸಿಕೊಂಡರು. ಈ ಪಂದ್ಯದಲ್ಲಿ ಭಾರತ 6 ವಿಕೆಟ್​ ಅಂತರದ ಸೋಲು ಕಂಡಿತು.

travis head
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

T20 World Cup 2024: ಕೊನೆಗೂ ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಭಾರತದ ಬದ್ಧ ಎದುರಾಳಿ ಪಾಕಿಸ್ತಾನ

T20 World Cup 2024: ಭಾರತದ ಮಾಜಿ ಮುಖ್ಯ ಕೋಚ್, 2011ರಲ್ಲಿ ಏಕದಿನ ವಿಶ್ವಕಪ್​ ಗೆಲ್ಲಿಸಿಕೊಟ್ಟ ಗ್ಯಾರಿ ಕರ್ಸ್ಟನ್(Gary Kirsten) ಮಾರ್ಗದರ್ಶನದಲ್ಲಿ ಪಾಕಿಸ್ತಾನ ಈ ಬಾರಿ ಟಿ20 ವಿಶ್ವಕಪ್​ ಆಡಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್​ 9ರಂದು ನಡೆಯಲಿದೆ.

VISTARANEWS.COM


on

T20 World Cup 2024
Koo

ಕರಾಚಿ: ಇದೇ ಜೂನ್​ 1ರಿಂದ ಆರಂಭಗೊಳ್ಳಲಿರುವ ಪುರುಷರ ಟಿ20 ವಿಶ್ವಕಪ್(T20 World Cup 2024)​ ಟೂರ್ನಿಗೆ ಪಾಲ್ಗೊಳ್ಳುವ 20 ದೇಶಗಳ ಪೈಕಿ 19 ದೇಶಗಳು ತನ್ನ ತಂಡವನ್ನು ಹಲವು ದಿನಗಳ ಹಿಂದೆಯೇ ಪ್ರಕಟಿಸಿತ್ತು. ಆದರೆ, ಪಾಕಿಸ್ತಾನ ಮಾತ್ರ ತಂಡ ಪ್ರಕಟಕ್ಕೆ ಮೀನ-ಮೇಷ ಎಣಿಸುತ್ತಿತ್ತು. ಇದೀಗ ಕೊನೆಗೂ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ(Pakistan squad). ಶುಕ್ರವಾರ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ(Mohsin Naqvi) ಸುದ್ದಿಗೋಷ್ಠಿ ನಡೆಸಿ ತಂಡವನ್ನು ಪ್ರಕಟಿಸಿದ್ದಾರೆ.

“ಇದು ಯುವ ಮತ್ತು ಅನುಭವಿ ಆಟಗಾರರ ಮಿಶ್ರಣವನ್ನು ಹೊಂದಿರುವ ಅತ್ಯಂತ ಪ್ರತಿಭಾವಂತ ಮತ್ತು ಸಮತೋಲಿತ ತಂಡವಾಗಿದೆ” ಎಂದು ಪಿಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಬಾಬರ್​ ಅಜಂ ತಂಡದ ನಾಯಕನಾಗಿದ್ದಾರೆ. ಅಬ್ರಾರ್ ಅಹ್ಮದ್, ಅಜಮ್ ಖಾನ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಸೈಮ್ ಅಯೂಬ್ ಮತ್ತು ಉಸ್ಮಾನ್ ಖಾನ್ ಅವರು ಟಿ20 ವಿಶ್ವಕಪ್​ನಲ್ಲಿ ಚೊಚ್ಚಲ ಅವಕಾಶ ಪಡೆದ ಆಟಗಾರರು. ಆದರೆ ಹಿರಿಯ ಆಟಗಾರ ಹಸನ್ ಅಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಐಸಿಸಿ ನಿಯಮದ ಪ್ರಕಾರ ಮೇ 1 ತಂಡದ ಆಯ್ಕೆಗೆ ಅಂತಿಮ ದಿನವಾಗಿತ್ತು. ಈ ವೇಳೆ ಪಾಕ್​ ತನ್ನ ತಂಡವನ್ನು ಪ್ರಕಟಿಸಿರಲಿಲ್ಲ. ಮೇ 24 ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ಅಂತಿಮ ದಿನವಾಗಿತ್ತು. ಇದೇ ದಿನ ತನ್ನ ತಂಡವನ್ನು ಪ್ರಟಿಸಿದೆ. ಪ್ರಮುಖ ಟಿ20 ಆಟಗಾರರಾದ ಮೊಹಮ್ಮದ್‌ ರಿಜ್ವಾನ್‌, ಆಜಂ ಖಾನ್‌, ಇರ್ಫಾನ್‌ ಖಾನ್‌ ನಿಯಾಜಿ ಮತ್ತು ಹ್ಯಾರಿಸ್‌ ರೌಫ್ ಅವರು ಫಿಟ್‌ನೆಸ್‌ ಹೊಂದಿಲ್ಲದ ಕಾರಣ ಪಾಕ್​ ಈ ತಂತ್ರವನ್ನು ಬಳಸಿತ್ತು.

ಭಾರತದ ಮಾಜಿ ಮುಖ್ಯ ಕೋಚ್, 2011ರಲ್ಲಿ ಏಕದಿನ ವಿಶ್ವಕಪ್​ ಗೆಲ್ಲಿಸಿಕೊಟ್ಟ ಗ್ಯಾರಿ ಕರ್ಸ್ಟನ್(Gary Kirsten) ಮಾರ್ಗದರ್ಶನದಲ್ಲಿ ಪಾಕಿಸ್ತಾನ ಈ ಬಾರಿ ಟಿ20 ವಿಶ್ವಕಪ್​ ಆಡಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್​ 9ರಂದು ನಡೆಯಲಿದೆ. ಪಾಕಿಸ್ತಾನ ತನ್ನ ಮೊದಲ ಲೀಗ್​ ಪಂದ್ಯದಲ್ಲಿ ಅಮೆರಿಕ ವಿರುದ್ಧ ಜೂನ್​ 6ರಂದು ಆಡಲಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ ಟೂರ್ನಿಗೆ ಕಾಮೆಂಟರಿ ಬಳಗ ಘೋಷಿಸಿದ ಐಸಿಸಿ; ದಿನೇಶ್​ ಕಾರ್ತಿಕ್​ಗೂ ಸ್ಥಾನ

ಇಂಡೋ-ಪಾಕ್​ ನಡುವಣ ಹೈವೋಲ್ಟೇಜ್ ಕದನಕ್ಕೆ ನ್ಯೂಯಾರ್ಕ್(NEW YORK) ಅಣಿಯಾಗಲಿದೆ. ಈ ಪಂದ್ಯಕ್ಕಾಗಿ 34,000 ಆಸನ ಸಾಮರ್ಥ್ಯವುಳ್ಳ ತಾತ್ಕಾಲಿಕ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಈ ಪಂದ್ಯವನ್ನು ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಪಂದ್ಯ ಇಲ್ಲಿ ನಡೆಸಲಾಗುತ್ತಿದೆ.

ಪಾಕಿಸ್ತಾನ ತಂಡ


ಬಾಬರ್ ಅಜಂ (ನಾಯಕ), ಅಬ್ರಾರ್ ಅಹ್ಮದ್, ಅಜಮ್ ಖಾನ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಮ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಮೀರ್, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಸೈಮ್ ಅಯೂಬ್, ಶಾದಾಬ್ ಖಾನ್, ಶಾಹೀನ್ ಶಾಹ್ಮಾನ್ ಅಫ್ರಿದಿ, ಉಸ್ಮಾನ್ ಖಾನ್.

Continue Reading

ಕ್ರಿಕೆಟ್

Yuzvendra Chahal: ಸಿಕ್ಸರ್​ ಹೊಡೆಸಿಕೊಂಡು ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ಚಹಲ್​

Yuzvendra Chahal: ಐಪಿಎಲ್​ನ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ಸಿಕ್ಸರ್​ ಹೊಡಿಸಿಕೊಂಡ ಬೌಲರ್​ಗಳ ಪಟ್ಟಿಯಲ್ಲಿ ಚಹಲ್​ಗೆ(30)ಗೆ ಜಂಟಿ 2ನೇ ಸ್ಥಾನ. ಮತೋರ್ವ ಆಟಗಾರ ವನಿಂದು ಹಸರಂಗ(30). ಮೊಹಮ್ಮದ್​ ಸಿರಾಜ್​(31) ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

VISTARANEWS.COM


on

Yuzvendra Chahal
Koo

ಚೆನ್ನೈ: ಟೀಮ್​ ಇಂಡಿಯಾದ ಅನುಭವಿ ಸ್ಪಿನ್ನರ್​ ಯಜುವೇಂದ್ರ ಚಹಲ್(Yuzvendra Chahal)​ ಅವರು ಐಪಿಎಲ್​(IPL 2024)ನಲ್ಲಿ ಕೆಟ್ಟ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಐಪಿಎಲ್​ನಲ್ಲಿ ಅತ್ಯಧಿಕ ಸಿಕ್ಸರ್​ ಹೊಡೆಸಿಕೊಂಡ ಮೊದಲ ಬೌಲರ್​ ಎನಿಸಿಕೊಂಡಿದ್ದಾರೆ.

ಸನ್​ರೈಸರ್ಸ್​ ಹೈದರಾಬಾದ್​​ ವಿರುದ್ಧದ ಕ್ವಾಲಿಫೈಯರ್​-2 ಪಂದ್ಯದಲ್ಲಿ 4 ಓವರ್​ ಎಸೆತ ಚಹಲ್​ 34 ರನ್​ ಬಿಟ್ಟುಕೊಟ್ಟು ವಿಕೆಟ್​ ಲೆಸ್​ ಎನಿಸಿಕೊಂಡರು. ಹೈದರಾಬಾದ್​ ಬ್ಯಾಟರ್​ಗಳಿಂದ ಸಿಕ್ಸರ್​ ಚಚ್ಚಿಸಿಕೊಂಡ ಚಹಲ್​(224 ಸಿಕ್ಸರ್​) ಐಪಿಎಲ್​ನಲ್ಲಿ ಅತ್ಯಧಿಕ ಸಿಕ್ಸರ್​ ಚಚ್ಚಿಸಿಕೊಂಡ ಬೌಲರ್​ ಎನ್ನುವ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಪಿಯೂಷ್ ಚಾವ್ಲಾ(222) ಹೆಸರಿನಲ್ಲಿತ್ತು.

ಐಪಿಎಲ್​ನ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ಸಿಕ್ಸರ್​ ಹೊಡಿಸಿಕೊಂಡ ಬೌಲರ್​ಗಳ ಪಟ್ಟಿಯಲ್ಲಿ ಚಹಲ್​ಗೆ(30)ಗೆ ಜಂಟಿ 2ನೇ ಸ್ಥಾನ. ಮತೋರ್ವ ಆಟಗಾರ ವನಿಂದು ಹಸರಂಗ(30). ಮೊಹಮ್ಮದ್​ ಸಿರಾಜ್​(31) ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಹೈದರಾಬಾದ್​​ ವಿರುದ್ಧ ವಿಕೆಟ್​ ಕೀಳಲಿದ್ದರೂ ಕೂಡ ಚಹಲ್​ 3 ಅಮೋಘ ಕ್ಯಾಚ್​ ಹಿಡಿದು ಮಿಂಚಿದರು.

ಒಂದೇ ಆವೃತ್ತಿಯಲ್ಲಿ ಅತ್ಯಧಿಕ ಸಿಕ್ಸರ್​ ಹೊಡೆಸಿಕೊಂಡ ಬೌಲರ್​


ಮೊಹಮ್ಮದ್​ ಸಿರಾಜ್​ 31 (2022ರಲ್ಲಿ
)

ಯಜುವೇಂದ್ರ ಚಹಲ್​-30 (2024ರಲ್ಲಿ)

ವನಿಂದು ಹಸರಂಗ-30 (2022ರಲ್ಲಿ)

ಡ್ವೇನ್​ ಬ್ರಾವೊ-29 (2018ರಲ್ಲಿ)

ತುಷಾರ್​ ದೇಶ್​ಪಾಂಡೆ-28(2023ರಲ್ಲಿ)

ಐಪಿಎಲ್​ನಲ್ಲಿ ಅತ್ಯಧಿಕ ಸಿಕ್ಸರ್​ ಚಚ್ಚಿಸಿಕೊಂಡ ಬೌಲರ್​


ಯಜುವೇಂದ್ರ ಚಹಲ್​-224 ಸಿಕ್ಸರ್​

ಪಿಯೂಷ್ ಚಾವ್ಲಾ 222 ಸಿಕ್ಸರ್​

ರವೀಂದ್ರ ಜಡೇಜಾ-206 ಸಿಕ್ಸರ್​

ಆರ್​ ಅಶ್ವಿನ್​- 202 ಸಿಕ್ಸರ್​

ಚಹಲ್​ ಅವರು ಐಪಿಎಲ್​ನಲ್ಲಿ ಒಟ್ಟು 205 ವಿಕೆಟ್​ ಕಿತ್ತ ಸಾಧನೆ ಮಾಡಿ ಅತ್ಯಧಿಕ ವಿಕೆಟ್​ ಸರದಾರ ಎನಿಸಿಕೊಂಡಿದ್ದಾರೆ. ಜೂನ್​ನಲ್ಲಿ ನಡೆಯುವ ಟಿ20 ವಿಶ್ವಕಪ್​ನಲ್ಲಿ ಸ್ಥಾನ ಕೂಡ ಪಡೆದಿದ್ದಾರೆ. ಚಹಲ್​ ಪತ್ನಿ ಧನಶ್ರೀ ವರ್ಮಾ(Dhanashree Verma) ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡುವ ಮೂಲಕ ಪತಿಗೆ ಶುಭ ಕೋರಿದ್ದರು.‘ಕಮ್​ ಆನ್ ಯುಜಿ​… ಹಿ ಈಸ್ ಬ್ಯಾಕ್ ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ IPL 2024 : ಅಭಿಮಾನಿಗಳ ದುರಂಹಕಾರವೇ ಆರ್​​ಸಿಬಿ ಸೋಲಿಗೆ ಕಾರಣ ಎಂದ ಮಾಜಿ ಕ್ರಿಕೆಟಿಗ

ಯಜುವೇಂದ್ರ ಚಹಲ್​ ಮತ್ತು ಧನಶ್ರೀ ವರ್ಮಾ ಮಧ್ಯೆ ಎಲ್ಲವೂ ಸರಿಯಿಲ್ಲ. ಶೀಘ್ರದಲ್ಲೇ ಈ ಜೋಡಿ ದೂರವಾಗಲಿದ್ದಾರೆ ಎಂದು ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿತ್ತು. ಆದರೆ ಈ ಜೋಡಿ ಮಾತ್ರ ಈ ಮಾತಿಗೆ ಕ್ಯಾರೆ ಎನ್ನದೆ ನಮ್ಮ ಸಂಸಾರದ ಮಧ್ಯೆ ಯಾವುದೇ ಬಿರುಕು ಮೂಡಿಲ್ಲ ಎಂದು ಹಲವು ಬಾರಿ ತೋರಿಸಿಕೊಟ್ಟಿದ್ದಾರೆ. ಇಬ್ಬರೂ ಕೂಡ ಹಲವು ಬಾರಿ ವಿದೇಶ ಪ್ರವಾಸದಲ್ಲಿ ಜಾಲಿ ಮೂಡ್​ನಲ್ಲಿರುವ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇತ್ತೀಚೆಗೆ 150ನೇ ಐಪಿಎಲ್​ ಪಂದ್ಯವನ್ನಾಡಿದ ಚಹಲ್​ಗೆ ಪತ್ನಿ ಭಾವುಕ ವಿಡಿಯೊ ಸಂದೇಶದ ಮೂಲಕ ಹಾರೈಸಿದ್ದರು. “ಹೇ ಯುಜಿ, ನಿಮ್ಮ 150ನೇ ಐಪಿಎಲ್ ಪಂದ್ಯಕ್ಕೆ ಅಭಿನಂದನೆಗಳು. ನಿವು ಈ ಹಿಂದೆ ಆಡಿದ ತಂಡಕ್ಕೆ ಮತ್ತು ಈಗ ಆಡುತ್ತಿರುವ ರಾಜಸ್ಥಾನ್ ರಾಯಲ್ಸ್‌ಗೆ ನೀವು ಅಪಾರ ಕೊಡುಗೆ ನೀಡಿದ್ದೀರಿ. ನಿಮ್ಮ ಬಗ್ಗೆ ನನಗೆ ಯಾವತ್ತೂ ಹೆಮ್ಮೆ ಇದೆ. ನೀವು ನಿಮ್ಮ ಆಟವನ್ನು ಹೇಗೆ ಆಡುತ್ತೀರಿ ಮತ್ತು ಪ್ರತಿ ಬಾರಿ ನೀವು ಕಮ್​ಬ್ಯಾಕ್​ ಮಾಡುವ ರೀತಿ ನಿಜಕ್ಕೂ ಮೆಚ್ಚಲೇ ಬೇಕು. ಯಾವುದೇ ಪಂದ್ಯ ಒತ್ತಡದಲ್ಲಿದ್ದಾಗಲೆಲ್ಲಾ ವಿಕೆಟ್​ ತೆಗೆಯಬಲ್ಲ ಬೌಲರ್​ ನೀವಾಗಿದ್ದೀರಿ. ನಾನು ನಿಮ್ಮ ದೊಡ್ಡ ಚೀರ್‌ಲೀಡರ್ ಮತ್ತು ನಾನು ಯಾವಾಗಲೂ 100 ಪ್ರತಿಶತದಷ್ಟು ನಿಮ್ಮನ್ನು ಬೆಂಬಲಿಸುತ್ತೇನೆ. ನಿಮ್ಮ 150 ನೇ ಐಪಿಎಲ್ ಪಂದ್ಯವನ್ನು ಆನಂದಿಸಿ” ಎಂದು ಶುಭ ಹಾರೈಸಿದ್ದರು. ವಿಡಿಯೊವನ್ನು ರಾಜಸ್ಥಾನ್​ ರಾಯಲ್ಸ್(Rajasthan Royals)​ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಪೋಸ್ಟ್​ ಮಾಡಿತ್ತು.

Continue Reading

ಕ್ರಿಕೆಟ್

Sara Tendulkar: ಲಂಡನ್​ ಯೂನಿವರ್ಸಿಟಿಯಿಂದ ಪದವಿ ಪಡೆದ ಸಾರಾ ತೆಂಡೂಲ್ಕರ್​; ಮಗಳ ಸಾಧನೆ ಕೊಂಡಾಡಿದ ಸಚಿನ್​

Sara Tendulkar: ಸಚಿನ್ ತೆಂಡೂಲ್ಕರ್(Sachin Tendulkar) ಅವರ ಮಗಳು ಸಾರಾ ತೆಂಡೂಲ್ಕರ್(Sara Tendulkar) ಲಂಡನ್ ಯೂನಿವರ್ಸಿಟಿ(UCL, London) ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ(Sara Tendulkar completed post-graduation).

VISTARANEWS.COM


on

Sara Tendulkar
Koo

ಲಂಡನ್​: ಭಾರತದ ಕ್ರಿಕೆಟ್​ ತಂಡದ ಮಾಜಿ ಆಟಗಾರ, ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar) ಅವರ ಮಗಳು ಸಾರಾ ತೆಂಡೂಲ್ಕರ್(Sara Tendulkar) ಲಂಡನ್ ಯೂನಿವರ್ಸಿಟಿ(UCL, London) ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ(Sara Tendulkar completed post-graduation). ಮಗಳು ಎಲ್ಲಾ ಕಠಿಣ ಪರಿಶ್ರಮವನ್ನು ಹಾಕಿ ದೊಡ್ಡ ಮೈಲಿಗಲ್ಲನ್ನು ಪೂರ್ಣಗೊಳಿಸಿದ್ದಕ್ಕಾಗಿ ಸಚಿನ್ ಭಾವುಕ ಸಂದೇಶದ ಮೂಲಕ ಶ್ಲಾಘಿಸಿದ್ದಾರೆ.

ಟ್ವಿಟರ್​ ಎಕ್ಸ್​ನಲ್ಲಿ ಮಗಳ ಸಾಧನೆ ಬಗ್ಗೆ ಬರೆದುಕೊಂಡಿರುವ ಸಚಿನ್​, “ಇದೊಂದು ಸುಂದರ ದಿನ. ನಮ್ಮ ಮಗಳು ಕ್ಲಿನಿಕಲ್ ಮತ್ತು ಪಬ್ಲಿಕ್ ಹೆಲ್ತ್ ನ್ಯೂಟ್ರಿಷನ್‌ನಲ್ಲಿ ಯುಸಿಎಲ್‌ನ ಮೆಡಿಸಿನ್ ವಿಭಾಗದಿಂದ ಡಿಸ್ಟಿಂಕ್ಷನ್‌ನೊಂದಿಗೆ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ದಿನ. ಪೋಷಕರಾಗಿ, ನೀನು ವರ್ಷಗಳಿಂದ ಮಾಡಿದ ಎಲ್ಲಾ ಕೆಲಸಗಳನ್ನು ನೋಡಿದ್ದಕ್ಕಾಗಿ ನಾವು ತುಂಬಾ ಹೆಮ್ಮೆಪಡುತ್ತೇವೆ. ಇಲ್ಲಿಗೆ ಬರುವುದು ಸುಲಭವಲ್ಲ” ಎಂದು ಬರೆದುಕೊಂಡಿದ್ದಾರೆ. ಸಾರಾ ಲಂಡನ್ ಯೂನಿವರ್ಸಿಟಿಯ ಘಟಿಕೋತ್ಸದಲ್ಲಿ ಪದವಿ ಸ್ವೀಕರಿಸಿದ ಫೋಟೊ, ವಿಡಿಯೊ ಮತ್ತು ತಾಯಿಯೊಂದಿಗೆ ಇರುವ ಫೋಟೊವನ್ನು ಸಚಿನ್​ ಹಂಚಿಕೊಂಡಿದ್ದಾರೆ.

ಸಾರಾ ಕೂಡ ತಾನು ಪದವಿ ಪಡೆದ ದಿನದ ತುಣುಕುಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್​ ಸೇರಿ ಸಚಿನ್​ ಅವರ ಆಪ್ತರು ಸಾರಾಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ Sara Tendulkar: ತಮ್ಮ ಹೆಸರಿನ ಪರೋಡಿ ಖಾತೆ ಮುಚ್ಚಲು ಎಕ್ಸ್‌ಗೆ ಸಾರಾ ತೆಂಡುಲ್ಕರ್ ಆಗ್ರಹ!

ಗಿಲ್​ ಜತೆ ಡೇಟಿಂಗ್​?


ಸಾರಾ ತೆಂಡೂಲ್ಕರ್(Sara Tendulkar) ಅವರು ಟೀಮ್​ ಇಂಡಿಯಾದ ಯುವ ಬ್ಯಾಟರ್​ ಶುಭಮನ್​ ಗಿಲ್(Shubman Gill) ಜತೆ​ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಆಗಾಗ ಮುನ್ನಲೆಗೆ ಬರುತ್ತಲೇ ಇರುತ್ತದೆ. ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ವೇಳೆ ಗಿಲ್​ ಪಂದ್ಯ ವೀಕ್ಷಿಸಲೆಂದೇ ಸಾರಾ ಕೂಡ ಸ್ಟೇಡಿಯಂಗೆ ಬರುತ್ತಿದ್ದರು. ಅಲ್ಲದೆ ಗಿಲ್​ ಸಾಧನೆಗೆ ಗ್ಯಾಲರಿಯಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟಿ ಪ್ರಶಂಸಿಸಿದ್ದ ವಿಡಿಯೊ ಮತ್ತು ಫೋಟೊಗಳು ವೈರಲ್​ ಆಗಿತ್ತು. ಸಾರಾ ಮತ್ತು ಗಿಲ್​ ತಂಗಿ ಜತೆಯಾಗಿ ಒಂದೇ ಕಾರಿನಲ್ಲಿ ಪ್ರಯಾಣ ಬೆಳೆಸಿದ ವಿಡಿಯೊ ಕೂಡ ವೈರಲ್(​Viral Video) ಆಗಿತ್ತು. ಆದರೂ, ಈ ಜೋಡಿ ಡೇಟಿಂಗ್​ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ತುಟಿ ಬಿಚ್ಚಿಲ್ಲ!

ಸಾರಾ ತೆಂಡೂಲ್ಕರ್ ಮತ್ತು ಗಿಲ್ ಡೇಟಿಂಗ್ ಸುದ್ದಿ ಕಳೆದ ಒಂದು ವರ್ಷದಿಂದ ಜಗತ್ತು ಸುತ್ತುತ್ತಿದೆ. ಆದಾಗ್ಯೂ, ಇಬ್ಬರೂ ವದಂತಿಯನ್ನು ನಿರಾಕರಿಸಿಲ್ಲ ಅಥವಾ ದೃಢಪಡಿಸಿಲ್ಲ. ಪಾಪರಾಜಿಗಳು ಇಬ್ಬರು ಸೆಲೆಬ್ರಿಟಿಗಳನ್ನು ಸಾರ್ವಜನಿಕವಾಗಿ ಸಾಕಷ್ಟು ಬಾರಿ ಪ್ರಶ್ನಿಸಿದ್ದಾರೆ. ಕಾಫಿ ವಿತ್ ಕರಣ್ ಸಂಚಿಕೆಯಲ್ಲಿ, ಸಾರಾ ಅಲಿ ಖಾನ್, ಗಿಲ್ ನನ್ನೊಂದಿಗೆ ಡೇಟಿಂಗ್ ಮಾಡುತ್ತಿಲ್ಲ. ಅವರು ಬೇರೆ ಸಾರಾ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳುವ ಅಭಿಮಾನಿಗಳ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದ್ದರು. ಕ್ರಿಕೆಟ್​ ಅಭಿಮಾನಿಗಳೇ ನೀವು ತಪ್ಪು ಹೇಳುತ್ತಿದ್ದೀರಿ. ಸಾರಾ ಕಾ ಸಾರಾ ದುನಿಯಾ ಗಲಾತ್ ಸಾರಾ ಕೆ ಪೀಚೆ ಪಡಾ ಹೈ (ಇಡೀ ಜಗತ್ತು ತಪ್ಪಾದ ಸಾರಾಳ ಹಿಂದೆ ಬಿದ್ದಿದೆ) ಎಂದು ಸಾರಾ ಅಲಿ ಖಾನ್ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಈ ಮೂಲಕ ಗಿಲ್ ಅವರ ಕ್ರಸ್​ ಸಾರಾ ತೆಂಡೂಲ್ಕರ್​ ಎನ್ನುವ ಸುಳಿವು ನೀಡಿದ್ದರು.

Continue Reading

ಕ್ರೀಡೆ

CSK vs RCB: ಮತ್ತೆ ಆರ್​ಸಿಬಿ, ಕೊಹ್ಲಿಯ ಬಗ್ಗೆ ಕಿಡಿಕಾರಿದ ಚೆನ್ನೈ ತಂಡದ ಮಾಜಿ ಆಟಗಾರ

CSK vs RCB: ರಾಯುಡು ಶುಕ್ರವಾರ ಟ್ವೀಟ್​ ಮಾಡಿ ಆರ್‌ಸಿಬಿ ತಂಡ ಇಷ್ಟು ವರ್ಷ ಟ್ರೋಫಿ ಗೆಲ್ಲದೇ ಇರುವುದಕ್ಕೆ ವಿರಾಟ್‌ ಕೊಹ್ಲಿ ಮತ್ತು ತಂಡದ ಮಾಲೀಕರೇ ಮುಖ್ಯ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

VISTARANEWS.COM


on

CSK vs RC
Koo

ಹೈದರಾಬಾದ್: ಬುಧವಾರ ನಡೆದಿದ್ದ ರಾಜಸ್ತಾನ ವಿರುದ್ಧದ ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದ ಅವಮಾನಕ್ಕೆ ಸಿಲುಕಿತ್ತು. ಆರ್​ಸಿಬಿ ಸೋಲು ಕಾಣುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು(Ambati Rayudu) ಆರ್​ಸಿಬಿ(CSK vs RCB) ತಂಡವನ್ನು ಟ್ರೋಲ್​ ಮಾಡಿದ್ದರು. ಇದೀಗ ಮತ್ತೆ ನಾಲಿಗೆ ಹರಿಬಿಟ್ಟಿದ್ದು, ವಿರಾಟ್ ಕೊಹ್ಲಿ ವಿರುದ್ಧ ಕಿಡಿಕಾರಿದ್ದಾರೆ.

ಪ್ಲೇ ಆಫ್ಸ್‌ ರೇಸ್‌ನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಹೊರದಬ್ಬಿದ ದಿನದಿಂದಲೂ ಸಿಎಸ್‌ಕೆ ಮಾಜಿ ಬ್ಯಾಟರ್‌ ಅಂಬಾಟಿ ರಾಯುಡು ನಾನಾ ರೀತಿಯಲ್ಲಿ ಆರ್‌ಸಿಬಿ ತಂಡವನ್ನು ಟೀಕಿಸುತ್ತಾಲೇ ಬಂದಿದಿದ್ದರು. ಇವರಿಗೆ ಚೆನ್ನೈ ತಂಡದ ಅಭಿಮಾನಿಗಳು, ಹಾಲಿ ಆಟಗಾರರು ಕೂಡ ಉತ್ತಮ ಸಾಥ್​ ನೀಡಿದ್ದರು. ಇದೀಗ ರಾಯುಡು ಶುಕ್ರವಾರ ಟ್ವೀಟ್​ ಮಾಡಿ ಆರ್‌ಸಿಬಿ ತಂಡ ಇಷ್ಟು ವರ್ಷ ಟ್ರೋಫಿ ಗೆಲ್ಲದೇ ಇರುವುದಕ್ಕೆ ವಿರಾಟ್‌ ಕೊಹ್ಲಿ ಮತ್ತು ತಂಡದ ಮಾಲೀಕರೇ ಮುಖ್ಯ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

“ಆರ್‌ಸಿಬಿ ಬೆಂಬಲಿಗರನ್ನು ಕಂಡು ನನ್ನ ಹೃದಯ ಉಕ್ಕುತ್ತಿದೆ. ಹಲವು ವರ್ಷಗಳಿಂದ ಒಂದೇ ಉತ್ಸಾಹ ಮತ್ತು ಪ್ರೀತಿಯಿಂದ ಅವರು ತಮ್ಮ ತಂಡವನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ವ್ಯಕ್ತಿ ಪೂಜೆ ಮತ್ತು ವೈಯಕ್ತಿಕ ಮೈಲುಗಲ್ಲುಗಳಿಗಿಂತಲೂ ತಂಡಕ್ಕೆ ಟ್ರೋಫಿ ಗೆದ್ದುಕೊಡಬೇಕು ಎಂಬುದು ತಂಡದ ಉದ್ದೇಶ ಆಗಿದ್ದರೆ, ಈಗಾಗಲೇ ತಂಡ ಟ್ರೋಫಿ ಗೆಲ್ಲುತ್ತಿತ್ತು. ಆರ್‌ಸಿಬಿ ಕಳೆದ 17 ಆವೃತ್ತಿಯಲ್ಲಿ ಎಂತಹ ಅದ್ಭುತ ಆಟಗಾರರನ್ನು ಕೈಬಿಟ್ಟಿದೆ ಎಂಬುದನ್ನು ನೆನಪಿಸಿಕೊಳ್ಳಿ. ತಂಡಕ್ಕೆ ಮೊದಲ ಆದ್ಯತೆ ನೀಡುವ ಆಟಗಾರರನ್ನು ತರುವಂತೆ ಮ್ಯಾನೇಜ್ಮೆಂಟ್‌ ಮೇಲೆ ಒತ್ತಡ ಹಾಕಿ. ಮೆಗಾ ಆಕ್ಷನ್‌ ಮೂಲಕ ತಂಡ ಹೊಸ ಅಧ್ಯಾಯ ಬರೆಯಲಿ” ಎಂದು ರಾಯುಡು ಗೇಲಿ ಮಾಡಿ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ RCB Funny Memes: ಕೊನೆಗೊಂಡ ಆರ್​ಸಿಬಿಯ ಹೊಸ ಅಧ್ಯಾಯ; ಟ್ರೋಲ್​, ಮೀಮ್ಸ್​ಗಳ ಮೂಲಕವೇ ತಿರುಗೇಟು ಕೊಟ್ಟ ಚೆನ್ನೈ ಅಭಿಮಾನಿಗಳು

ರಾಜಸ್ಥಾನ್ ವಿರುದ್ಧ ಆರ್‌ಸಿಬಿ ಎಲಿಮಿನೇಟರ್‌ ಪಂದ್ಯದಲ್ಲಿ ಸೋತ ವೇಳೆ ರಾಯುಡು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡು ‘5 ಬಾರಿ ಚಾಂಪಿಯನ್ಸ್‌ ಯಾರು ಎಂಬುದನ್ನು ಕೆಲವೊಮ್ಮೆ ನೆನಪಿಸಿಕೊಳ್ಳಬೇಕಾಗಿದೆ’ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಗೆ ಸಿಎಸ್‌ಕೆ ಆಟಗಾರರಾದ ದೀಪಕ್ ಚಹರ್‌, ಮತೀಶ ಪತಿರಣ ಮತ್ತು ತುಶಾರ್‌ ದೇಶಪಾಂಡೆ ಕಾಮೆಂಟ್‌ ಮಾಡುವ ಮೂಲಕ ಆರ್‌ಸಿಬಿ ತಂಡವನ್ನು ಗೇಲಿ ಮಾಡಿದ್ದರು.

ಅಭಿಮಾನಿಗಳ ದುರಂಹಕಾರವೇ ಆರ್​​ಸಿಬಿ ಸೋಲಿಗೆ ಕಾರಣ


“ಜೀವನದಲ್ಲಿ ನೀವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವಾಗ ನಿಮ್ಮ ಬಾಯಿ ಮುಚ್ಚಿಕೊಂಡು ಮುಂದುವರಿಯಿರಿ. ನೀವು ಮಾಡುತ್ತಿರುವ ಯಾವುದೇ ಕೆಲಸದ ವೇಳೆ ಗದ್ದಲ ಮಾಡಿದಾಗ ಆ ಕೆಲಸವನ್ನು ಉತ್ತಮವಾಗಿ ಮಾಡಲು ಸಾಧ್ಯವಿಲ್ಲ. ಆರ್​​ಸಿಬಿ ಅಭಿಮಾನಿಗಳು ಅನಗತ್ಯ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದರು. ಅತಿಯಾಗಿ ತೋರಿಸುತ್ತಿದ್ದರು. ಅದಕ್ಕಾಗಿಯೇ ಅಶ್ವಿನ್ ಮುಂದಿನ ಪಂದ್ಯದಲ್ಲಿ ಆರ್​ಸಿಬಿಯ ಅಹಂ ಇಳಿಸಿದರು. ಅದಕ್ಕಾಗಿಯೇ ಕ್ರಿಕೆಟ್​​ನಲ್ಲಿ ನಿಮ್ಮ ಬಾಯಿ ಮುಚ್ಚಿ ಆಡಬೇಕು ಎಂದು ಹೇಳುವುದು ಎಂದು ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಹೇಳಿದ್ದಾರೆ.

Continue Reading
Advertisement
Kangana Ranaut
ದೇಶ56 mins ago

Kangana Ranaut: ಈ ಗುಲಾಬಿಯು ನಿಮಗಾಗಿ; ಮೋದಿಗೆ ಕೆಂಪು ಗುಲಾಬಿ ಕೊಟ್ಟು ಸ್ವಾಗತಿಸಿದ ಕಂಗನಾ! Photo ಇದೆ

T20 World Cup 2024
ಕ್ರೀಡೆ56 mins ago

T20 World Cup 2024: ಕೊನೆಗೂ ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಭಾರತದ ಬದ್ಧ ಎದುರಾಳಿ ಪಾಕಿಸ್ತಾನ

Prajwal Revanna Case
ಕರ್ನಾಟಕ1 hour ago

Prajwal Revanna Case: ವಕೀಲ ದೇವರಾಜೇಗೌಡಗೆ ಇನ್ನೂ 14 ದಿನ ಜೈಲೇ ಗತಿ; ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ

Yuzvendra Chahal
ಕ್ರಿಕೆಟ್1 hour ago

Yuzvendra Chahal: ಸಿಕ್ಸರ್​ ಹೊಡೆಸಿಕೊಂಡು ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ಚಹಲ್​

Lok Sabha Election
ದೇಶ1 hour ago

Lok Sabha Election: ನಾಳೆ 6ನೇ ಹಂತದಲ್ಲಿ 58 ಕ್ಷೇತ್ರಗಳಿಗೆ ಮತದಾನ; ಖಟ್ಟರ್‌, ಕನ್ಹಯ್ಯ ಸೇರಿ ಹಲವರ ಭವಿಷ್ಯ ನಿರ್ಧಾರ

Martin Movie
ಕರ್ನಾಟಕ2 hours ago

Martin Movie: ಬಹುನೀರಿಕ್ಷಿತ ʼಮಾರ್ಟಿನ್ʼ ರಿಲೀಸ್ ಡೇಟ್ ಫಿಕ್ಸ್‌; 3 ವರ್ಷಗಳ ನಂತರ ತೆರೆಗೆ ಆ್ಯಕ್ಷನ್ ಪ್ರಿನ್ಸ್ ಎಂಟ್ರಿ

Congress is rejected expired goods in the country says union minister Pralhad Joshi
ಕೊಪ್ಪಳ2 hours ago

MLC Election: ಕಾಂಗ್ರೆಸ್ ಎಂಬುದು ದೇಶದಲ್ಲಿ ರಿಜೆಕ್ಟೆಡ್, ಎಕ್ಸ್‌ಪೈರಿ ಗೂಡ್ಸ್: ಪ್ರಲ್ಹಾದ್ ಜೋಶಿ ಲೇವಡಿ

Yallapur Tehsildar Tanuja T savadatti instructed to create awareness about infectious diseases
ಉತ್ತರ ಕನ್ನಡ2 hours ago

Uttara Kannada News: ಸಾಂಕ್ರಾಮಿಕ ರೋಗಗಳ ಜಾಗೃತಿ ಮೂಡಿಸಲು ಯಲ್ಲಾಪುರ ತಹಸೀಲ್ದಾರ್ ಸೂಚನೆ

Phalodi Satta Bazar
ದೇಶ2 hours ago

Phalodi Satta Bazar: ಚುನಾವಣೆಯಲ್ಲಿ ಮೋದಿ ಹ್ಯಾಟ್ರಿಕ್ ಖಚಿತ; ಸಟ್ಟಾ ಬಜಾರ್‌ ಸಮೀಕ್ಷಾ ವರದಿ ಇಲ್ಲಿದೆ

Sara Tendulkar
ಕ್ರಿಕೆಟ್2 hours ago

Sara Tendulkar: ಲಂಡನ್​ ಯೂನಿವರ್ಸಿಟಿಯಿಂದ ಪದವಿ ಪಡೆದ ಸಾರಾ ತೆಂಡೂಲ್ಕರ್​; ಮಗಳ ಸಾಧನೆ ಕೊಂಡಾಡಿದ ಸಚಿನ್​

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ2 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ1 week ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌