Virat Kohli | ಟಿ20 ಕ್ರಿಕೆಟ್​ನಲ್ಲಿ ವಿಶ್ವ ದಾಖಲೆ ಬರೆದ ವಿರಾಟ್​ ಕೊಹ್ಲಿ; ಏನಿದು ನೂತನ ರೆಕಾರ್ಡ್‌? - Vistara News

Latest

Virat Kohli | ಟಿ20 ಕ್ರಿಕೆಟ್​ನಲ್ಲಿ ವಿಶ್ವ ದಾಖಲೆ ಬರೆದ ವಿರಾಟ್​ ಕೊಹ್ಲಿ; ಏನಿದು ನೂತನ ರೆಕಾರ್ಡ್‌?

ಟಿ20 ಕ್ರಿಕೆಟ್​ನಲ್ಲಿ ನಾಲ್ಕು ಸಾವಿರ ರನ್​ ಪೂರೈಸಿದ ಮೊದಲ ಆಟಗಾರ ಎಂಬ ಹಿರಿಮೆಗೆ ವಿರಾಟ್​ ಕೊಹ್ಲಿ ಪಾತ್ರರಾಗಿದ್ದಾರೆ.

VISTARANEWS.COM


on

t20
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಡಿಲೇಡ್​: ಇಂಗ್ಲೆಂಡ್​ ವಿರುದ್ಧದ ಟಿ20 ವಿಶ್ವ ಕಪ್​ ಸೆಮಿಫೈನಲ್​ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿ ಮಿಂಚಿವುದರೊಂದಿಗೆ ವಿರಾಟ್​ ಕೊಹ್ಲಿ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ 4 ಸಾವಿರ ರನ್​ ಪೂರೈಸಿದ ಮೊದಲ ಕ್ರಿಕೆಟಿಗ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್​ ವಿರುದ್ಧ 43 ರನ್​ ಗಳಿಸಿದ ವೇಳೆ ಈ ಸಾಧನೆ ಮಾಡಿದರು.

ಏಷ್ಯಾ ಕಪ್​ ಕ್ರಿಕೆಟ್​ ಬಳಿಕ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿರುವ ವಿರಾಟ್​ ಕೊಹ್ಲಿಯನ್ನು ನೋಡುವಾಗ ಕಳೆದ 2 ವರ್ಷಗಳ ರನ್​ ಬರವನ್ನು ಇದೀಗ ಕೆಲವೇ ಪಂದ್ಯಗಳ ಮೂಲಕ ತೀರಿಸುವ ದಾಹದಲ್ಲಿರುವಂತೆ ತೋರುತ್ತಿದೆ. ಇಂಗ್ಲೆಂಡ್​ ವಿರುದ್ಧ 40 ಎಸೆತಗಳಿಂದ ಭರ್ತಿ 50 ರನ್​ ಸಿಡಿಸಿ ಮಿಂಚಿದ ಕೊಹ್ಲಿ ನಾಲ್ಕು ಬೌಂಡರಿ ಒಂದು ಸಿಕ್ಸರ್​ ಸಿಡಿಸಿ ಮಿಂಚಿದರು. ಅವರು ಹಾಲಿ ವಿಶ್ವ ಕಪ್‌ನಲ್ಲಿ ಸತತವಾಗಿ ನಾಲ್ಕು ಅರ್ಧ ಶತಕಗಳನ್ನು ಬಾರಿಸಿದರು. ಅದರಲ್ಲೂ ಪಾಕಿಸ್ತಾನ ವಿರುದ್ಧದ ಅಜೇಯ ೮೨ ರನ್‌ ಅವರ ಸ್ಮರಣೀಯ ಇನಿಂಗ್ಸ್‌ ಎನಿಸಿದೆ.

ಇದನ್ನೂ ಓದಿ | T20 Ranking | ಸೂರ್ಯ ನಂ.1 ಸ್ಥಾನ ಭದ್ರ, ಟಾಪ್​ 10ನಿಂದ ಹೊರಬಿದ್ದ ವಿರಾಟ್​ ಕೊಹ್ಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024 : ಮುಂಬೈ ಬ್ಯಾಟರ್​​ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಮಾಲೀಕರಿಗೆ ಸಲಹೆ ನೀಡಿದ ಮಾಜಿ ಕ್ರಿಕೆಟಿಗ

IPL 2024: ಚೇಸಿಂಗ್ ಮಾಡುತ್ತಿದ್ದ ಮುಂಬೈ ತಂಡದ ಬ್ಯಾಟಿಂಗ್ ಕ್ರಮಾಂಕವು ಮತ್ತೊಮ್ಮೆ ಪರಿಣಾಮಕಾರಿಯಾಗಲಿಲ್ಲ; ಸೂರ್ಯಕುಮಾರ್ ಯಾದವ್ (56) ಹೊರತುಪಡಿಸಿ ರನ್ ಚೇಸ್​​ನಲ್ಲಿ ಯಾವುದೇ ಬ್ಯಾಟ್ಸ್ಮನ್ 30 ಕ್ಕಿಂತ ಹೆಚ್ಚು ರನ್ ಗಳಿಸಲಿಲ್ಲ. ಇದಲ್ಲದೆ, ನಾಯಕ ಹಾರ್ದಿಕ್ ಪಾಂಡ್ಯ 7 ನೇ ಕ್ರಮಾಂಕದಲ್ಲಿ ಮತ್ತು ಟಿಮ್ ಡೇವಿಡ್ 8 ನೇ ಕ್ರಮಾಂಕದಲ್ಲಿ ಬಂದಿದ್ದರಿಂದ ಕೆಲವು ಬ್ಯಾಟಿಂಗ್ ಕ್ರಮಾಂಕದ ಆಯ್ಕೆಗಳು ಪ್ರಶ್ನೆಗಳನ್ನು ಹುಟ್ಟುಹಾಕಿದವು.

VISTARANEWS.COM


on

IPL 2024
Koo

ಬೆಂಗಳೂರು: ಐಪಿಎಲ್​ 17ನೇ ಆವೃತ್ತಿಯಲ್ಲಿ (IPL 2024) ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 24 ರನ್​ಗಳ ಭರ್ಜರಿ ಜಯ ಸಾಧಿಸಿ ಪ್ಲೇ ಆಫ್ಗೆ ಪ್ರವೇಶಿಸುವ ಅವಕಾಶ ಹೆಚ್ಚಿಸಿಕೊಂಡಿದೆ. ಆಡಿರುವ 11 ಪಂದ್ಯಗಳಲ್ಲಿ 8ನೇ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ಅಗ್ರ 4ರಲ್ಲಿ ಸ್ಥಾನ ಪಡೆಯುವ ಅವಕಾಶ ಕಳೆದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ನೈಟ್ ರೈಡರ್ಸ್ 169 ರನ್​ಗಳಿಗೆ ಆಲ್​ಔಟ್ ಆಯಿತು. ಆದರೆ, ಅದಕ್ಕಿಂತ ಮೊದಲು 57 ರನ್​ಗೆ 5 ವಿಕೆಟ್​ ಕಳೆದುಕೊಂಡಿತ್ತು. ಆದರೆ ಆ ಬಳಿಕ ಚೇತರಿಸಿಕೊಂಡಿತ್ತು. ಆದರೆ, ಮುಂಬೈ ತಂಡ ಗೆಲುವಿನ ಅವಕಾಶವನ್ನು ಎಲ್ಲಿಯೂ ಸೃಷ್ಟಿ ಮಾಡಿಕೊಂಡಿರಲಿಲ್ಲ.

ಚೇಸಿಂಗ್ ಮಾಡುತ್ತಿದ್ದ ಮುಂಬೈ ತಂಡದ ಬ್ಯಾಟಿಂಗ್ ಕ್ರಮಾಂಕವು ಮತ್ತೊಮ್ಮೆ ಪರಿಣಾಮಕಾರಿಯಾಗಲಿಲ್ಲ; ಸೂರ್ಯಕುಮಾರ್ ಯಾದವ್ (56) ಹೊರತುಪಡಿಸಿ ರನ್ ಚೇಸ್​​ನಲ್ಲಿ ಯಾವುದೇ ಬ್ಯಾಟ್ಸ್ಮನ್ 30 ಕ್ಕಿಂತ ಹೆಚ್ಚು ರನ್ ಗಳಿಸಲಿಲ್ಲ. ಇದಲ್ಲದೆ, ನಾಯಕ ಹಾರ್ದಿಕ್ ಪಾಂಡ್ಯ 7 ನೇ ಕ್ರಮಾಂಕದಲ್ಲಿ ಮತ್ತು ಟಿಮ್ ಡೇವಿಡ್ 8 ನೇ ಕ್ರಮಾಂಕದಲ್ಲಿ ಬಂದಿದ್ದರಿಂದ ಕೆಲವು ಬ್ಯಾಟಿಂಗ್ ಕ್ರಮಾಂಕದ ಆಯ್ಕೆಗಳು ಪ್ರಶ್ನೆಗಳನ್ನು ಹುಟ್ಟುಹಾಕಿದವು.

“ಟಿಮ್ ಡೇವಿಡ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ತಡವಾಗಿ ಬ್ಯಾಟಿಂಗ್​ಗೆ ಬಂದರು. ಆ ರೀತಿ ಮಾಡುವುದರಿಂದ ನೀವು ಯಾವ ಫಲಿತಾಂಶಗಳನ್ನು ನಿರೀಕ್ಷೆ ಮಾಡುತ್ತೀರಿ. ಕೆಲವೇ ಎಸೆತಗಳು ಉಳಿದಾಗ ಅವರು ಬಂದರೆ ಏನು ಉಪಯೋಗ. ಅವರು ಮೊದಲೇ ಆಡಲು ಬರಬೇಕಿತ್ತು. ಆಟವನ್ನು ಬೇಗನೆ ಮುಗಿಸಬಹುದಿತ್ತು. ಚೇಸಿಂಗ್ ನಲ್ಲಿ ಅವರಿಗೆ ಏನಾಗಿದೆ ಎಂದು ನಾನು ನಿಜವಾಗಿಯೂ ಆಶ್ಚರ್ಯ ಪಡುತ್ತೇನೆ. ಪಾಂಡ್ಯ 7ನೇ ಕ್ರಮಾಂಕದಲ್ಲಿ ಮತ್ತು ಡೇವಿಡ್ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ ಏನು ಪ್ರಯೋಜ ಎಂದು ಸೆಹ್ವಾಗ್ ಹೇಳಿದ್ದಾರೆ.

“ಹಾರ್ದಿಕ್ ಪಾಂಡ್ಯ ಜಿಟಿ ನಾಯಕರಾಗಿದ್ದಾಗ ಅವರು ಸಾಮಾನ್ಯವಾಗಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಅನುಭವಿ ಆಟಗಾರರ ಈಗ ಕೊನೆಯಲ್ಲಿ ಏಕೆ ಬರುತ್ತಿದ್ದಾರೆ? ಇದು ನಿಜವಾಗಿಯೂ ಗೊಂದಲಮಯ” ಎಂದು ಅವರು ಸೆಹ್ವಾಗ್​ ಟೀಕಿಸಿದ್ದಾರೆ.

2025 ರ ಋತುವಿಗೆ ಯೋಜನೆ ಹಾಕುತ್ತಿರುವ ಎಂಐ ನೇಹಾಲ್ ವಧೇರಾ ಮತ್ತು ನಮನ್ ಧೀರ್ ಅವರನ್ನು ಅಗ್ರ ಕ್ರಮಾಂಕದಲ್ಲಿ ಕಳುಹಿಸಿದೆ ಎಂದು ಟಿವಿ ನಿರೂಪಕ ಪ್ರತಿಕ್ರಿಯಿಸಿದ್ದಾರೆ. ಈಗ ಪಂದ್ಯಗಳನ್ನು ಗೆಲ್ಲದಿದ್ದರೆ ತಂಡವು ಭವಿಷ್ಯಕ್ಕಾಗಿ ಯೋಜನೆ ಹಾಕಿ ಏನು ಪ್ರಯೋಜನ ಎಂದು ಸೆಹ್ವಾಗ್ ವಾದಿಸಿದ್ದಾರೆ.

ಇದನ್ನೂ ಓದಿ: Rinku Singh : ಕೊಹ್ಲಿಯ ಬ್ಯಾಟ್​ನಲ್ಲಿ ರಿಂಕು ಚೆನ್ನಾಗಿ ಆಡುತ್ತಿಲ್ಲ; ನೆಟ್ಟಿಗರಿಂದ ಟ್ರೋಲ್​!

“2025 ಕ್ಕೆ ತಯಾರಿ ನಡೆಸಲಿ. ಆದರೆ ಈಗ ಯಾರು ಎಲ್ಲಿ ಬ್ಯಾಟಿಂಗ್ ಮಾಡಬೇಕು ಎಂಬುದರ ಬಗ್ಗೆ ಯೋಚಿಸಬೇಕು. ಈ ಕ್ಷಣದಲ್ಲಿ ಭವಿಷ್ಯವನ್ನು ಹೇಗೆ ಊಹಿಸಬಹುದು? ಪ್ಲೇಆಫ್ ಗೆ ಅರ್ಹತೆ ಪಡೆದಿದ್ದರೆ ಅವಕಾಶಗಳನ್ನು ತೆಗೆದುಕೊಳ್ಳಬಹುದಿತ್ತು. ಮುಂಬಯಿ ತಂಡ ಬ್ಯಾಟಿಂಗ್ ಕ್ರಮಾಂಕದಲ್ಲಿ ಗೊಂದಲದಲ್ಲಿದೆ ಮತ್ತು ಪಂದ್ಯಗಳನ್ನು ಗೆಲ್ಲುತ್ತಿಲ್ಲ,” ಎಂದು ಸೆಹ್ವಾಗ್ ನುಡಿದಿದ್ದಾರೆ.

ಇದು ತುಂಬಾ ವಿಚಿತ್ರವಾಗಿದೆ. ಮ್ಯಾನೇಜ್ಮೆಂಟ್​ ಆಟಗಾರರನ್ನು ಪ್ರಶ್ನಿಸಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪರ್ಯಾಯವಾಗಿ, ಆಟಗಾರರು ತಾವು ವಿಭಿನ್ನ ಸ್ಥಾನದಲ್ಲಿ ಏಕೆ ಬ್ಯಾಟಿಂಗ್ ಮಾಡುತ್ತಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ. ಇದು ಸಹಾಯಕ ಸಿಬ್ಬಂದಿ, ಬ್ಯಾಟಿಂಗ್ ಕೋಚ್, ಬೌಲಿಂಗ್ ಕೋಚ್ ಮತ್ತು ನಾಯಕನ ತಪ್ಪು. ಮಾಲೀಕರು ಕಠಿಣ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ” ಎಂದು ಅವರು ಹೇಳಿದರು.

Continue Reading

ಪ್ರಮುಖ ಸುದ್ದಿ

International Firefighters Day 2024: ಇಂದು ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನ; ಜೀವ ರಕ್ಷಕರಿಗೊಂದು ಸಲಾಂ

ಜನ ಸಮುದಾಯವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಡುವ ಅಗ್ನಿ ಶಾಮಕದಳದ ವೀರರನ್ನು ಗೌರವಿಸಲು ಇಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನವನ್ನು (International Firefighters Day 2024) ಆಚರಿಸಲಾಗುತ್ತಿದೆ. ಈ ದಿನದ ಹಿನ್ನೆಲೆಯ ವಿವರ ಇಲ್ಲಿದೆ.

VISTARANEWS.COM


on

By

International Firefighters Day 2024
Koo

ಪ್ರಾಕೃತಿಕ ವಿಕೋಪವಾಗಿರಬಹುದು (Natural disaster) ಅಥವಾ ಯಾವುದಾದರೂ ದುರಂತ (Tragedy) ಉಂಟಾಗಿರಬಹುದು ಇಂತಹ ವಿವಿಧ ಸಂದರ್ಭದಲ್ಲಿ ಕಷ್ಟಕ್ಕೆ ಸಿಲುಕಿರುವ ಜನ ಸಾಮಾನ್ಯರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕೆ ಇಡುವವರು ಅಗ್ನಿ ಶಾಮಕದಳದ ಸಿಬ್ಬಂದಿ. ಇವರನ್ನು ಗೌರವಿಸುವ ಸಲುವಾಗಿ ಪ್ರತಿ ವರ್ಷ ಮೇ 4ರಂದು ಅಂತಾರಾಷ್ಟ್ರೀಯ ಅಗ್ನಿ ಶಾಮಕ ದಿನವನ್ನು (International Firefighters Day 2024) ಆಚರಿಸಲಾಗುತ್ತದೆ.

Firefighters

ಜನ ಸಮುದಾಯವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಡುವ ಅಗ್ನಿ ಶಾಮಕದಳದ ವೀರರನ್ನು ಗೌರವಿಸಲು ಇಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನವನ್ನು ಆಚರಿಸಲಾಗುತ್ತಿದೆ. ಇವರು ಜನ ಸಮುದಾಯಗಳನ್ನು ರಕ್ಷಿಸುವ ಜೊತೆಗೆ ವಿವಿಧ ಪರಿಸ್ಥಿತಿಗಳಲ್ಲಿ ಅಪಾಯಕ್ಕೆ ಸಿಲುಕಿರುವವರ ಜೀವಗಳನ್ನು ಉಳಿಸುವ ಕೆಲಸವನ್ನೂ ನಿರ್ವಹಿಸುತ್ತಾರೆ. ಅಗ್ನಿಶಾಮಕ ದಳದವರ ತ್ಯಾಗವನ್ನು ಗುರುತಿಸಲು ಮತ್ತು ಪ್ರಶಂಸಿಸಲು ಈ ಒಂದು ದಿನ ಖಂಡಿತ ಸಾಕಾಗಲಾರದು. ಆದರೂ ಅವರ ತ್ಯಾಗ, ಪರಿಶ್ರಮವನ್ನು ನೆನಪಿಸುವ ಈ ಒಂದು ದಿನ ಅತ್ಯಂತ ಮಹತ್ವದ್ದು ಎಂದರೆ ತಪ್ಪಾಗಲಾರದು. ಅಂತಾರಾಷ್ಟ್ರೀಯ ಅಗ್ನಿಶಾಮಕ ದಳದ ದಿನವು (International Firefighters Day) ಇತರರನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಕಳೆದುಕೊಂಡ ಅಗ್ನಿಶಾಮಕರನ್ನು ನೆನಪಿನ ದಿನವಾಗಿಯೂ ಆಚರಿಸಲಾಗುತ್ತದೆ.

Firefighters extinguishing an industrial fire

ಯಾವಾಗ ?

ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನವನ್ನು ಮೇ 4 (international firefighters day may 4)ರಂದು ಪ್ರತಿ ವರ್ಷ ಆಚರಿಸಲಾಗುತ್ತದೆ. ಈ ದಿನವನ್ನು ಅಗ್ನಿಶಾಮಕ ದಳದ ಪೋಷಕ ಸಂತ ಸೇಂಟ್ ಫ್ಲೋರಿಯನ್ ಅವರ ಸ್ಮರಣಾರ್ಥ ಆಚರಿಸಲಾಗುತ್ತಿದೆ. ಸೇಂಟ್ ಫ್ಲೋರಿಯನ್ ಅನ್ನು ರೋಮನ್ ಸಾಮ್ರಾಜ್ಯದಲ್ಲಿ ಅಗ್ನಿಶಾಮಕ ದಳದ ಮೊದಲ ಕಮಾಂಡರ್ ಎಂದು ಪರಿಗಣಿಸಲಾಗಿದೆ. ಅವರು ಪ್ರಾಚೀನ ರೋಮನ್ ನಗರವಾದ ನೊರಿಕಮ್ ನಲ್ಲಿ ಅಗ್ನಿಶಾಮಕ ಘಟಕದ ನಾಯಕರಾಗಿದ್ದರು.

Two firefighters go through the fire

ದಿನದ ಇತಿಹಾಸ

ಆಸ್ಟ್ರೇಲಿಯಾದಲ್ಲಿ ನಡೆದ ದುರಂತ ಘಟನೆಯ ಬಳಿಕ ಅಗ್ನಿ ಶಾಮಕ ದಿನವನ್ನು ಆಚರಿಸಲಾಯಿತು. 1998ರ ಡಿಸೆಂಬರ್ 2ರಂದು ವಿಕ್ಟೋರಿಯಾದ ಲಿಂಟನ್‌ನಲ್ಲಿ ಭೀಕರ ಕಾಡ್ಗಿಚ್ಚು ಉಂಟಾಗಿತ್ತು. ಈ ಸಂದರ್ಭದಲ್ಲಿ ಐವರು ಅಗ್ನಿಶಾಮಕ ದಳದವರು ಪ್ರಾಣ ಕಳೆದುಕೊಂಡರು. ಗೀಲಾಂಗ್ ಪಶ್ಚಿಮ ಅಗ್ನಿಶಾಮಕ ದಳದ ಸದಸ್ಯರಾಗಿದ್ದ ಗ್ಯಾರಿ ವ್ರೆಡೆವೆಲ್ಡ್ಟ್, ಕ್ರಿಸ್ಟೋಫರ್ ಇವಾನ್ಸ್, ಸ್ಟುವರ್ಟ್ ಡೇವಿಡ್ಸನ್, ಜೇಸನ್ ಥಾಮಸ್ ಮತ್ತು ಮ್ಯಾಥ್ಯೂ ಆರ್ಮ್ ಸ್ಟ್ರಾಂಗ್ ಅವರು ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದರು. ಬಳಿಕ ಘಟನೆಯ ಮಹತ್ವವನ್ನು ತಿಳಿಸಲು ಅಂತಿಮವಾಗಿ ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನದ ಆಚರಣೆಯ ಪ್ರಸ್ತಾಪಕ್ಕೆ ಕಾರಣವಾಯಿತು. ಆಸ್ಟ್ರೇಲಿಯನ್ ಅಗ್ನಿಶಾಮಕ ದಳದ ಜೆಜೆ ಎಡ್ಮಂಡ್ಸನ್ ಅವರು ಅಗ್ನಿಶಾಮಕ ದಳದವರಿಗೆ ಮೀಸಲಾದ ದಿನವನ್ನು ಸ್ಥಾಪಿಸುವ ಉಪಕ್ರಮದ ನೇತೃತ್ವ ವಹಿಸಿದ್ದರು. ಎಡ್ಮಂಡ್ಸನ್ 1999 ರ ಹೊಸ ವರ್ಷದ ನಿರ್ಣಯದಂತೆ “ಎಲ್ಲಾ ಅಗ್ನಿಶಾಮಕ ದಳದವರಿಗೆ ಬೆಂಬಲ ಮತ್ತು ಗೌರವದ ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ದಿನವನ್ನು ಆಯೋಜಿಸಲು ಮತ್ತು ಇದನ್ನು ವಿಶ್ವಾದ್ಯಂತ ಸಂಘಟಿಸಬಹುದಾದ ದಿನಾಂಕವನ್ನು ಆಯೋಜಿಸಲು ನಿರ್ಧರಿಸಿದರು.

ಇದನ್ನೂ ಓದಿ: Sunita Williams: ಸುನೀತಾ ವಿಲಿಯಮ್ಸ್‌ 3ನೇ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಲು ಸಜ್ಜು

ಕೆಂಪು ಮತ್ತು ನೀಲಿ ರಿಬ್ಬನ್

ಕೆಂಪು ಮತ್ತು ನೀಲಿ ರಿಬ್ಬನ್ ಸಾಮಾನ್ಯವಾಗಿ ಅಗ್ನಿಶಾಮಕ ದಳದವರನ್ನು ಗೌರವಿಸುವ ಸಂಕೇತವಾಗಿದೆ. IFFD ಯೊಂದಿಗೆ ಸಂಬಂಧ ಹೊಂದಿರುವ ಈ ರಿಬ್ಬನ್ ಅನ್ನು ಸಾಮಾನ್ಯವಾಗಿ ಸೇವೆ ಮತ್ತು ರಕ್ಷಿಸುವ ಅಗ್ನಿಶಾಮಕರಿಗೆ ಬೆಂಬಲ ಮತ್ತು ಮೆಚ್ಚುಗೆಯ ಸಂಕೇತವಾಗಿ ಧರಿಸಲು ನೀಡಲಾಗುತ್ತದೆ.
ಅಗ್ನಿಶಾಮಕ ದಳದವರು ಹೆಚ್ಚಾಗಿ ಎದುರಿಸುವ ಎರಡು ಅಂಶಗಳನ್ನು ಬಣ್ಣಗಳು ಸಂಕೇತಿಸುತ್ತವೆ. ಬೆಂಕಿಗೆ ಕೆಂಪು ಮತ್ತು ನೀರಿಗೆ ನೀಲಿ.

Continue Reading

ಲೈಫ್‌ಸ್ಟೈಲ್

Food Cleaning Tips Kannada: ಹಣ್ಣು, ತರಕಾರಿಗಳಿಂದ ರಾಸಾಯನಿಕ ಅಂಶ ಸ್ವಚ್ಛಗೊಳಿಸುವ 5 ವಿಧಾನಗಳಿವು

ಮಾರುಕಟ್ಟೆಯಿಂದ ತರುವ ಹಣ್ಣು, ತರಕಾರಿಗಳು ಕೀಟನಾಶಕ ಮುಕ್ತವಾಗಿದೆಯೇ ಎಂಬುದನ್ನು ಪರಿಶೀಲಿಸಲು ಸಾಧ್ಯವಿಲ್ಲ. ಆದರೆ ಮನೆಗೆ ತಂದು ಅವುಗಳನ್ನು ಸ್ವಚ್ಛಗೊಳಿಸುವ ಮೂಲಕ (Food Cleaning Tips Kannada) ಅವುಗಳಿಂದ ಕೀಟನಾಶಕಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ ತಿನ್ನಲು ಯೋಗ್ಯವನ್ನಾಗಿ ಮಾಡಬಹುದು. ಈ ಕುರಿತ (Food Cleaning Tips) ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

By

Food Cleaning Tips Kannada
Koo

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಿಂದ ತರುವ ಪ್ರತಿಯೊಂದು ಸಾಮಗ್ರಿಯೂ ಆತಂಕ ಹುಟ್ಟಿಸುತ್ತದೆ. ಅದು ತರಕಾರಿ (vegetables) ಆಗಿರಬಹುದು, ಹಣ್ಣು ಹಂಪಲು (fruits), ಧಾನ್ಯಗಳಾಗಿರಬಹುದು (grain). ಕೃಷಿಯಲ್ಲಿ ಕೀಟನಾಶಕಗಳ ಬಳಕೆಯು ವ್ಯಾಪಕವಾಗಿರುವುದರಿಂದ ನಾವು ಸೇವಿಸುವ ಆಹಾರದ ಸುರಕ್ಷತೆಯನ್ನು (Food Cleaning Tips Kannada) ಖಚಿತಪಡಿಸಿಕೊಳ್ಳುವುದು ಹೆಚ್ಚು ಅಗತ್ಯವಾಗಿದೆ. ಕೀಟಗಳು ಮತ್ತು ರೋಗಗಳಿಂದ ಬೆಳೆಗಳನ್ನು ರಕ್ಷಿಸಲು ಕೀಟನಾಶಕಗಳು ಅಗತ್ಯವಾದಾಗ, ಹಣ್ಣು ಮತ್ತು ತರಕಾರಿಗಳ ಮೇಲೆ ಅದರ ಅವಶೇಷಗಳನ್ನು ಬೀಳುತ್ತವೆ. ಇದನ್ನು ಕಾಲಾನಂತರದಲ್ಲಿ ನಾವು ಸೇವಿಸಿದರೆ ಆರೋಗ್ಯದ ಅಪಾಯವನ್ನು ಉಂಟು ಮಾಡುತ್ತದೆ. ಆದರೆ ಈ ಕೀಟನಾಶಕಗಳ ತೆಗೆದು ಹಾಕಲು ಮನೆಯಲ್ಲೇ ಇರುವ ಕೆಲವು ಸಾಮಗ್ರಿಗಳು ನಮಗೆ ಸಹಾಯ ಮಾಡುತ್ತದೆ. ತರಕಾರಿ, ಹಣ್ಣುಗಳಿಂದ ಕೀಟನಾಶಕಗಳನ್ನು ತೆಗೆದುಹಾಕಲು ಮನೆಯಲ್ಲಿ ಬಳಸಬಹುದಾದ (Food Cleaning Tips) ಐದು ಪ್ರಮುಖ ವಿಧಾನಗಳಿವೆ.

Apple cider vinegar for Fungal Infection Home Remedies

ವಿನೆಗರ್ ದ್ರಾವಣ

ಹಣ್ಣುಗಳು ಮತ್ತು ತರಕಾರಿಗಳಿಂದ ಕೀಟನಾಶಕಗಳನ್ನು ತೆಗೆದುಹಾಕಲು ಸರಳ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಅವುಗಳನ್ನು ವಿನೆಗರ್ ದ್ರಾವಣದಿಂದ ತೊಳೆಯುವುದು. ಒಂದು ಬೌಲ್ ಅಥವಾ ಸಿಂಕ್‌ನಲ್ಲಿ ಮೂರು ಭಾಗಗಳ ನೀರಿನೊಂದಿಗೆ ಒಂದು ಭಾಗ ಬಿಳಿ ವಿನೆಗರ್ ಮಿಶ್ರಣ ಮಾಡಿ. ಉತ್ಪನ್ನವನ್ನು ಈ ದ್ರಾವಣದಲ್ಲಿ 5- 10 ನಿಮಿಷಗಳ ಕಾಲ ನೆನೆಸಿ, ಅನಂತರ ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಿರಿ. ವಿನೆಗರ್ ಕೀಟನಾಶಕಗಳ ಅವಶೇಷಗಳನ್ನು ಸಂಪೂರ್ಣವಾಗಿ ತೆಗೆದು ಹಾಕುತ್ತದೆ. ಹಣ್ಣುಗಳು ಮತ್ತು ತರಕಾರಿಗಳನ್ನು ಸ್ವಚ್ಛಗೊಳಿಸಲು ಮತ್ತು ತಿನ್ನಲು ಹೆಚ್ಚು ಸುರಕ್ಷಿತ ಮಾಡುತ್ತದೆ.

peeling

ಸಿಪ್ಪೆ ಸುಲಿಯುವುದು

ಹಣ್ಣು ಮತ್ತು ತರಕಾರಿಗಳ ಸಿಪ್ಪೆ ಸುಲಿದು ಸೇವಿಸುವುದು ಕೀಟನಾಶಕಗಳನ್ನು ತೆಗೆದು ಹಾಕುತ್ತದೆ. ಅನೇಕ ಕೀಟನಾಶಕಗಳು ಉತ್ಪನ್ನದ ಮೇಲ್ಮೈಯಲ್ಲಿ ಕೇಂದ್ರೀಕೃತವಾಗಿರುತ್ತವೆ. ಆದ್ದರಿಂದ ಹೊರ ಪದರವನ್ನು ತೆಗೆದುಹಾಕುವುದರಿಂದ ಈ ಅವಶೇಷಗಳ ಹೆಚ್ಚಿನ ಭಾಗವನ್ನು ತೆಗೆದುಹಾಕಬಹುದು. ಆದಾಗ್ಯೂ ಸಿಪ್ಪೆಸುಲಿಯುವಿಕೆಯು ಹಣ್ಣು, ತರಕಾರಿಯಲ್ಲಿರುವ ಕೆಲವು ಪೋಷಕಾಂಶಗಳು ಮತ್ತು ಫೈಬರ್ ಅನ್ನು ತೆಗೆದುಹಾಕುತ್ತದೆ ಎಂಬುದನ್ನು ನೆನಪಿನಲ್ಲಿಡಿ, ಆದ್ದರಿಂದ ಪೋಷಕಾಂಶಗಳ ನಷ್ಟದೊಂದಿಗೆ ಪ್ರಯೋಜನಗಳನ್ನು ಸಮತೋಲನಗೊಳಿಸುವುದು ಅತ್ಯಗತ್ಯ.

Baking soda for Fungal Infection Home Remedies

ಅಡುಗೆ ಸೋಡಾ

ಸೋಡಿಯಂ ಬೈಕಾರ್ಬನೇಟ್ ಎಂದೂ ಕರೆಯಲ್ಪಡುವ ಅಡುಗೆ ಸೋಡಾ, ಕೀಟನಾಶಕಗಳ ಅವಶೇಷಗಳನ್ನು ತೆಗೆದುಹಾಕಲು ಮತ್ತೊಂದು ಪರಿಣಾಮಕಾರಿ ವಸ್ತು. ಒಂದು ಚಮಚ ಅಡುಗೆ ಸೋಡಾವನ್ನು ಒಂದು ಕಪ್ ನೀರಿನಲ್ಲಿ ಬೆರೆಸಿ, ಹಣ್ಣು ಮತ್ತು ತರಕಾರಿಗಳನ್ನು 15-20 ನಿಮಿಷಗಳ ಕಾಲ ನೆನೆಸಿಡಿ. ಅನಂತರ ಅವುಗಳನ್ನು ಹರಿಯುವ ನೀರಿನ ಅಡಿಯಲ್ಲಿ ಚೆನ್ನಾಗಿ ತೊಳೆಯಿರಿ. ಬೇಕಿಂಗ್ ಸೋಡಾ ಕೀಟನಾಶಕ ಅಣುಗಳನ್ನು ಇದು ತೆಗೆದು ಹಾಕುತ್ತದೆ.

ಇದನ್ನೂ ಓದಿ: Eating Bread: ನಿತ್ಯವೂ ಬ್ರೆಡ್‌ ತಿನ್ನುತ್ತೀರಾ? ಹಾಗಿದ್ದರೆ ಖರೀದಿಸುವ ಮುನ್ನ ಇವಿಷ್ಟು ತಿಳಿದಿರಲಿ

ಬ್ರಷ್‌ನಿಂದ ಸ್ಕ್ರಬ್ಬಿಂಗ್

ಆಲೂಗಡ್ಡೆ, ಕ್ಯಾರೆಟ್ ಅಥವಾ ಸೌತೆಕಾಯಿಗಳಂತಹ ದಪ್ಪವಾದ ಚರ್ಮ ಅಥವಾ ಮೇಲ್ಮೈ ಹೊಂದಿರುವ ಹಣ್ಣು ಮತ್ತು ತರಕಾರಿಗಳಿಗೆ ಹರಿಯುವ ನೀರಿನ ಅಡಿಯಲ್ಲಿ ಅವುಗಳನ್ನು ಸ್ಕ್ರಬ್ ಮಾಡಲು ಬ್ರಷ್ ಅನ್ನು ಬಳಸುವುದು ಹೆಚ್ಚು ಪರಿಣಾಮಕಾರಿ. ಮೃದುವಾದ ಸ್ಕ್ರಬ್ಬಿಂಗ್ ಕ್ರಿಯೆಯು ಮೇಲ್ಮೈಗೆ ಅಂಟಿಕೊಂಡಿರುವ ಕೀಟನಾಶಕಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದಕ್ಕಾಗಿ ಕ್ಲೀನ್ ಬ್ರಷ್ ಅನ್ನು ಬಳಸಲು ಮರೆಯದಿರಿ.

Vegetables and Fruits

ಉಪ್ಪು ನೀರಿನಲ್ಲಿ ನೆನೆಸುವುದು

ಹಣ್ಣು, ತರಕಾರಿಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಉಪ್ಪುನೀರನ್ನು ಸಹ ಬಳಸಬಹುದು. ಎರಡು ಚಮಚ ಉಪ್ಪನ್ನು ನಾಲ್ಕು ಕಪ್ ನೀರಿನಲ್ಲಿ ಕರಗಿಸಿ ಹಣ್ಣು ಮತ್ತು ತರಕಾರಿಗಳನ್ನು 10- 15 ನಿಮಿಷಗಳ ಕಾಲ ಅದರಲ್ಲಿ ನೆನೆಸಿಡಿ. ಅನಂತರ ಅವುಗಳನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಿರಿ.

Continue Reading

ಪ್ರಮುಖ ಸುದ್ದಿ

Rinku Singh : ಕೊಹ್ಲಿಯ ಬ್ಯಾಟ್​ನಲ್ಲಿ ರಿಂಕು ಚೆನ್ನಾಗಿ ಆಡುತ್ತಿಲ್ಲ; ನೆಟ್ಟಿಗರಿಂದ ಟ್ರೋಲ್​!

Rinku Singh: 2024ರ ಟಿ20 ವಿಶ್ವಕಪ್​​ಗೆ ಭಾರತ ತಂಡದಿಂದ ಹೊರಗುಳಿದಿದ್ದ ರಿಂಕು ಸಿಂಗ್ 2024ರ ಐಪಿಎಲ್​​ನಲ್ಲಿ ಇನ್ನೂ ಉತ್ತಮ ಪ್ರದರ್ಶ ನೀಡಿಲ್ಲ. ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಬೌಲರ್​ಗಳ ದಾಳಿಗೆ ಸಿಕ್ಕಿ ಅವರು ಮತ್ತೊಮ್ಮೆ ಕಡಿಮೆ ಸ್ಕೋರ್​ಗೆ ಪೆವಿಲಿಯನ್​ಗೆ ಮರಳಿದರು.

VISTARANEWS.COM


on

Rinku Singh
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಬ್ಯಾಟರ್​ ರಿಂಕು ಸಿಂಗ್ ಮತ್ತೊಂದು ವೈಫಲ್ಯವನ್ನು ಅನುಭವಿಸಿದರು. ಕೆಕೆಆರ್ ವಿರುದ್ಧ ಅಗತ್ಯ ಸಂದರ್ಭದಲ್ಲಿ ಅವರು ವೈಫಲ್ಯ ಕಂಡರು. ಕ್ರಿಕೆಟ್​ ಅಭಿಮಾನಿಗಳು ಅವರ ಆಟಕ್ಕೆ ಬೇಸರ ವ್ಯಕ್ತಪಡಿಸಿ ಸೋಶಿಯಲ್​ ಮೀಡಿಯಾಗಳಲ್ಲಿ ಟ್ರೋಲ್ ಮಾಡಿದ್ದಾರೆ. ಅವರು ವಿರಾಟ್​ ಕೊಹ್ಲಿಯಿಂದ ಬ್ಯಾಟ್ ಗಿಫ್ಟ್ ಪಡೆದುಕೊಂಡ ನಂತರ ಚೆನ್ನಾಗಿ ಆಡುತ್ತಿಲ್ಲ ಎಂದ ಹೇಳಿದ್ದಾರೆ.

2024ರ ಟಿ20 ವಿಶ್ವಕಪ್​​ಗೆ ಭಾರತ ತಂಡದಿಂದ ಹೊರಗುಳಿದಿದ್ದ ರಿಂಕು ಸಿಂಗ್ 2024ರ ಐಪಿಎಲ್​​ನಲ್ಲಿ ಇನ್ನೂ ಉತ್ತಮ ಪ್ರದರ್ಶ ನೀಡಿಲ್ಲ. ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಬೌಲರ್​ಗಳ ದಾಳಿಗೆ ಸಿಕ್ಕಿ ಅವರು ಮತ್ತೊಮ್ಮೆ ಕಡಿಮೆ ಸ್ಕೋರ್​ಗೆ ಪೆವಿಲಿಯನ್​ಗೆ ಮರಳಿದರು.

ಕೋಲ್ಕತಾ ನೈಟ್ ರೈಡರ್ಸ್ ಆರಂಭಿಕ ನಾಲ್ಕು ವಿಕೆಟ್​​ಗಳನ್ನು ಕಳೆದುಕೊಂಡ ನಂತರ, ರಿಂಕು ಸಿಂಗ್ ಆಡಲು ಬಂದರು. ವಿಶ್ವ ಕಪ್​ನಲ್ಲಿ ಚಾನ್ಸ್ ಸಿಗದ ಕೋಪಕ್ಕೆ ಚಚ್ಚುತ್ತಾರೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. 6 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಅವರು ಆರಂಭದಲ್ಲಿ ಉತ್ತಮವಾಗಿಯೇ ಇದ್ದರು.

ರಿಂಕು ಸಿಂಗ್ ತಮ್ಮ ಇನ್ನಿಂಗ್ಸ್ ನ ಆರಂಭದಲ್ಲಿ ಎರಡು ಬೌಂಡರಿಗಳನ್ನು ಗಳಿಸಿದರು. ಇನಿಂಗ್ಸ್​​ನ 7ನೇ ಓವರ್ ನ ಮೊದಲ ಎಸೆತದಲ್ಲಿ ಪಿಯೂಷ್ ಚಾವ್ಲಾ ಮ್ಯಾಜಿಕ್ ಮಾಡಿದರು. ರಿಂಕು ಸಿಂಗ್ ಮಿಡ್​ ವಿಕೆಟ್ ಕಡೆ ಬಾರಿಸಲು ಮುಂದಾಗಿ ಕ್ಯಾಚ್ ನೀಡಿದರು.

ಇದನ್ನೂ ಓದಿ: T20 World Cup : ಉನ್ಮುಕ್ತ್​ ಚಾಂದ್​ಗೆ ತೆರೆಯದ ಭಾಗ್ಯದ ಬಾಗಿಲು; ಯುಎಸ್​ ತಂಡದಲ್ಲಿ ಇಲ್ಲ ಚಾನ್ಸ್​!

ರಿಂಕು ಸಿಂಗ್ 8 ಎಸೆತಗಳಲ್ಲಿ 9 ರನ್ ಗಳಿಸಿದರು. ಅವರು 100 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್​ನೊಂದಿಗೆ ಬ್ಯಾಟಿಂಗ್ ಮಾಡಿದರು ಮತ್ತು ಅವರ ವಿಕೆಟ್​ನೊಂದಿಗೆ ಕೋಲ್ಕತಾ ನೈಟ್ ರೈಡರ್ಸ್ 57/5 ಕ್ಕೆ ಕುಸಿಯಿತು. ಈ ಋತುವಿನಲ್ಲಿ ಆಡಿರುವ 10 ಪಂದ್ಯಗಳಲ್ಲಿ ಕೇವಲ 18ರ ಸರಾಸರಿಯಲ್ಲಿ ಕೇವಲ 132 ರನ್ ಗಳಿಸಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್ ಬ್ಯಾಟರ್​ ರಿಂಕು ಸಿಂಗ್ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮತ್ತೊಂದು ವೈಫಲ್ಯ ಅನುಭವಿಸುತ್ತಿದ್ದಂತೆ, ಎಕ್ಸ್​ನಲ್ಲಿ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.

Continue Reading
Advertisement
Prajwal Revanna Case
ಕರ್ನಾಟಕ4 mins ago

Prajwal Revanna Case: ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ; ತೀರ್ಪು ಕಾಯ್ದಿರಿಸಿದ ಕೋರ್ಟ್, ಕೆಲವೇ ಕ್ಷಣಗಳಲ್ಲಿ ಆದೇಶ

Rowdy sheeter camel Rohit escapes from DCPs office after ccb officials spotted him
ಬೆಂಗಳೂರು11 mins ago

Rowdy Sheeter: ಸಿಸಿಬಿ ಅಧಿಕಾರಿಗಳ ಕಂಡು ಡಿಸಿಪಿ ಕಚೇರಿಯಿಂದ ರೌಡಿಶೀಟರ್‌ ಒಂಟೆ ರೋಹಿತ್‌ ಎಸ್ಕೇಪ್‌

Job Alert
ಉದ್ಯೋಗ14 mins ago

Job Alert: ಕೋರ್ಟ್‌ನಲ್ಲಿದೆ 41 ಹುದ್ದೆ; ಎಸ್ಸೆಸ್ಸೆಲ್ಸಿ ಪಾಸಾದವರು ಅರ್ಜಿ ಸಲ್ಲಿಸಿ

IPL 2024
ಕ್ರೀಡೆ18 mins ago

IPL 2024 : ಮುಂಬೈ ಬ್ಯಾಟರ್​​ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಮಾಲೀಕರಿಗೆ ಸಲಹೆ ನೀಡಿದ ಮಾಜಿ ಕ್ರಿಕೆಟಿಗ

Nikhil Kumaraswamy
ಕರ್ನಾಟಕ35 mins ago

Prajwal Revanna Case: ಹಾಸನ ಸಂಸದರಿಗೂ ನನಗೂ ಸಂಬಂಧವಿಲ್ಲ ಎಂದ ನಿಖಿಲ್‌ ಕುಮಾರಸ್ವಾಮಿ!

PBKS vs CSK
ಕ್ರೀಡೆ46 mins ago

PBKS vs CSK: ಬ್ಯಾಟಲ್​ ಆಫ್​ ದಿ ಕಿಂಗ್ಸ್​ಗೆ ಚೆನ್ನೈ-ಪಂಜಾಬ್​ ರೆಡಿ; ಗಾಯಕ್ವಾಡ್​ಗೆ ಸೇಡಿನ ಪಂದ್ಯ

Road Accident in bagalakote
ಬಾಗಲಕೋಟೆ46 mins ago

Road Accident : ಟಿಪ್ಪರ್‌ ಲಾರಿ ಡಿಕ್ಕಿಗೆ ಕಾರು ಪುಡಿ ಪುಡಿ; ಸಿದ್ದನಕೊಳ್ಳ ಶ್ರೀಗಳು ಗಂಭೀರ ಗಾಯ

MTR Karunadu Svada food festival inauguration in Bengaluru
ಕರ್ನಾಟಕ47 mins ago

MTR: ಬೆಂಗಳೂರಿನಲ್ಲಿ ಎಂಟಿಆರ್ ಕರುನಾಡು ಸ್ವಾದ; 2 ದಿನಗಳ ಆಹಾರ ಉತ್ಸವದಲ್ಲಿ ಏನೇನಿವೆ?

Vijay Devarakonda announces new film
ಕಿರುತೆರೆ49 mins ago

Vijay Deverakonda: ಸಿನಿಮಾಗಳ ಸತತ ಸೋಲಿನ ಬೆನ್ನಲ್ಲೆ ಹೊಸ ಸಿನಿಮಾ ಅನೌನ್ಸ್‌ ಮಾಡಿದ ವಿಜಯ್‌ ದೇವರಕೊಂಡ!

Amruthadhare Serial Bhumika-Gautham angryness has melted like ice
ಕಿರುತೆರೆ50 mins ago

Amruthadhare Serial : ಐಸ್ ಥರ ಕರಗಿಹೋಯ್ತು ಭೂಮಿಕಾ-ಗೌತಮ್‌ ಮುನಿಸು!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ12 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ1 day ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ1 day ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌