Virat Kohli | ಹೊಸ ವರ್ಷವನ್ನು ದುಬೈಯಲ್ಲಿ ಆಚರಿಸಲು ಸಿದ್ಧತೆ ಆರಂಭಿಸಿದ ವಿರುಷ್ಕಾ ದಂಪತಿ! - Vistara News

New year 2023

Virat Kohli | ಹೊಸ ವರ್ಷವನ್ನು ದುಬೈಯಲ್ಲಿ ಆಚರಿಸಲು ಸಿದ್ಧತೆ ಆರಂಭಿಸಿದ ವಿರುಷ್ಕಾ ದಂಪತಿ!

ಭಾರತ ಕ್ರಿಕೆಟ್ ತಂಡದ ಆಟಗಾರ ವಿರಾಟ್​ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಹೊಸ ವರ್ಷವನ್ನು ದುಬೈನಲ್ಲಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ.

VISTARANEWS.COM


on

virat kohli and anushka sharma
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದುಬೈ: ಟೀಮ್ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್ ಕೊಹ್ಲಿ(Virat Kohli) ಮತ್ತು ಪತ್ನಿ ಅನುಷ್ಕಾ ಶರ್ಮಾ ಸದ್ಯ ರಜಾ ದಿನಗಳ ಸಂಭ್ರಮದಲ್ಲಿದ್ದಾರೆ. ಜತೆಗೆ ಹೊಸ ವರ್ಷದ ಆಚರಣೆಯನ್ನು ಭರ್ಜರಿಯಾಗಿ ಸಂಭ್ರಮಿಸಲು ಎಲ್ಲ ರೀತಿಯ ತಯಾರಿ ನಡೆಸಿದ್ದಾರೆ. ಈ ಕುರಿತ ಕೆಲ ಫೋಟೊಗಳನ್ನು ವಿರುಷ್ಕಾ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಸರಣಿ ಬಳಿಕ ಬಿಡುವಿನಲ್ಲಿರುವ ವಿರಾಟ್​ ಕೊಹ್ಲಿ ಸದ್ಯ ಪತ್ನಿ ಅನುಷ್ಕಾ ಜತೆ ದುಬೈನಲ್ಲಿ ಕಾಲ ಕಳೆಯುತ್ತಿದ್ದಾರೆ. ಅದರಂತೆ ಹೊಸ ವರ್ಷವನ್ನು(2023) ವಿರುಷ್ಕಾ ದಂಪತಿ ಇಲ್ಲೇ ಆಚರಿಸಲು ತೀರ್ಮಾನಿಸಿದ್ದಾರೆ.

ದುಬೈನಲ್ಲಿರುವ ಕೊಹ್ಲಿ ತಮ್ಮ ಪತ್ನಿಯೊಂದಿಗಿನ ಫೋಟೊವನ್ನು ಹಂಚಿಕೊಂಡು “ವರ್ಷದ ಕೊನೆಯ ಅರುಣೋದಯ ಎಂದು” ಶೀರ್ಷಿಕೆ ನೀಡಿ ಟ್ವೀಟ್​ ಮಾಡಿದ್ದಾರೆ. ಅನುಷ್ಕಾ ಶರ್ಮಾ ಕೂಡ ತಮ್ಮ ಇನ್‌ಸ್ಟಾಗ್ರಾಮ್​ ಖಾತೆಯಲ್ಲಿ ಹಲವು ಫೋಟೊಗಳನ್ನು ಹಂಚಿಕೊಂಡು “ಹೊಸ ವರ್ಷವನ್ನು ಹೊಸ ನಿರೀಕ್ಷೆಯೊಂದಿಗೆ ಬರಮಾಡಿಕೊಳ್ಳಲಿದ್ದೇವೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Virat Kohli | ಟಿ20 ಕ್ರಿಕೆಟ್​ನಿಂದ ತಾತ್ಕಾಲಿಕ ಬ್ರೇಕ್ ಪಡೆದ ವಿರಾಟ್​ ಕೊಹ್ಲಿ; ಇದು ನಿವೃತ್ತಿಯ ಸೂಚನೆಯೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

New year 2023

Bharat Jodo Yatra | ರಾಹುಲ್ ಗಾಂಧಿಯನ್ನು ಹೊಗಳಿದ ರಾಮಮಂದಿರ ಟ್ರಸ್ಟ್​ ಪ್ರಮುಖರು; ಆಶೀರ್ವದಿಸಿ ಪತ್ರ ಬರೆದ ಮುಖ್ಯ ಅರ್ಚಕ

ಉತ್ತರ ಪ್ರದೇಶದಲ್ಲಿ ಭಾರತ್ ಜೋಡೋ ಯಾತ್ರೆ ಮೂರು ದಿನ ಸಂಚರಿಸಲಿದೆ. ಜನವರಿ 6ರಂದು ಹರ್ಯಾಣಕ್ಕೆ ಕಾಲಿಡಲಿದೆ. ಜನವರಿ 20ಕ್ಕೆ ಜಮ್ಮು-ಕಾಶ್ಮೀರಕ್ಕೆ ಪ್ರವೇಶಿಸಿ, ಜನವರಿ 30ರಂದು ಕೊನೆಗೊಳ್ಳಲಿದೆ.

VISTARANEWS.COM


on

Congress Leader Rahul Gandhi to address British Parliament
ರಾಹುಲ್ ಗಾಂಧಿ
Koo

ಅಯೋಧ್ಯೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯನ್ನು ಅಯೋಧ್ಯಾ ರಾಮಮಂದಿರ ಟ್ರಸ್ಟ್ ನ ಕಾರ್ಯದರ್ಶಿ ಚಂಪತ್ ರಾಯ್ ಶ್ಲಾಘಿಸಿದ್ದಾರೆ. ಇಂಥ ಪಾದಯಾತ್ರೆಗಳನ್ನು ನಡೆಸುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ.

ಭಾರತ್ ಜೋಡೋ ಯಾತ್ರೆ ಮಂಗಳವಾರ ಉತ್ತರ ಪ್ರದೇಶವನ್ನು ಪ್ರವೇಶಿಸಿದೆ. ಸಹಚರರೊಂದಿಗೆ ಉತ್ತರ ಪ್ರದೇಶಕ್ಕೆ ಕಾಲಿಟ್ಟ ರಾಹುಲ್ ಗಾಂಧಿಯವರಿಗೆ ಅಯೋಧ್ಯಾ ರಾಮ ಜನ್ಮಭೂಮಿ ದೇಗುಲದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಅವರು ಆಶೀರ್ವಾದಪೂರ್ವಕ ಪತ್ರವನ್ನು ಬರೆದು ತಲುಪಿಸಿದ್ದಾರೆ. ಅದರ ಬೆನ್ನಲ್ಲೇ ಚಂಪತ್ ರಾಯ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಇಡೀ ದೇಶವನ್ನು ಕಾಲ್ನಡಿಗೆಯಲ್ಲಿ ಸುತ್ತುತ್ತಿರುವ ರಾಹುಲ್ ಗಾಂಧಿ ಅವರನ್ನು ನಾನು ಶ್ಲಾಘಿಸುತ್ತೇನೆ. ನಾನೊಬ್ಬ ಆರ್ ಎಸ್ ಎಸ್ ಕಾರ್ಯಕರ್ತ. ಆರ್ ಎಸ್ ಎಸ್ ಯಾವತ್ತೂ ಭಾರತ್ ಜೋಡೋ ಯಾತ್ರೆಯನ್ನು ವಿರೋಧಿಸಿಲ್ಲ. ರಾಹುಲ್ ಗಾಂಧಿ ನಡೆಸುತ್ತಿರುವ ಪಾದಯಾತ್ರೆಯಲ್ಲಿ ನನಗೆ ತಪ್ಪೇನೂ ಕಾಣುತ್ತಿಲ್ಲ. ಇಷ್ಟು ಕೆಟ್ಟ ಚಳಿ ಮಧ್ಯೆ ರಾಹುಲ್ ಗಾಂಧಿ ಯಾತ್ರೆ ನಡೆಸುತ್ತಿದ್ದಾರೆ. ಅವರಂತೆ ಪ್ರತಿಯೊಬ್ಬರೂ ದೇಶಕ್ಕಾಗಿ ಯಾತ್ರೆ ಮಾಡಬೇಕು ಎಂದು ಹೇಳಿದ್ದಾರೆ.

ಹಾಗೇ, ರಾಮಮಂದಿರ ಟ್ರಸ್ಟ್ ನ ಹಿರಿಯ ಟ್ರಸ್ಟಿ ಗೋವಿಂದ ದೇವ ಗಿರಿ ಅವರೂ ರಾಹುಲ್ ಗಾಂಧಿಯವರನ್ನು ಹರಿಸಿದ್ದಾರೆ. ಈ ದೇಶ ಒಗ್ಗಟ್ಟಾಗಿರಬೇಕು, ಸಾಮರಸ್ಯದಿಂದ ಇರಬೇಕು ಮತ್ತು ಇನ್ನಷ್ಟು ಬಲಶಾಲಿಯಾಗಬೇಕು ಎಂದು ಯಾತ್ರೆ ಮಾಡುತ್ತಿರುವ ರಾಹುಲ್ ಗಾಂಧಿಗೆ ಶ್ರೀರಾಮ ಆಶೀರ್ವಾದಿಸಲಿ ಎಂದಿದ್ದಾರೆ. ಹಾಗೇ, ಭಾರತ್ ಜೋಡೋ ಎಂಬ ಹೆಸರೇ ಚೆನ್ನಾಗಿದೆ. ಭಾರತ ಒಂದಾಗಬೇಕು ಎಂದೂ ಹೇಳಿದ್ದಾರೆ.

ಮುಖ್ಯ ಅರ್ಚಕ ಬರೆದ ಪತ್ರದಲ್ಲಿ ಏನಿದೆ?
ಮಂಗಳವಾರ ಭಾರತ್​ ಜೋಡೋ ಯಾತ್ರೆ ಉತ್ತರ ಪ್ರದೇಶಕ್ಕೆ ಕಾಲಿಟ್ಟ ಬೆನ್ನಲ್ಲೇ ಅಯೋಧ್ಯಾ ರಾಮ ದೇಗುಲದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್​ ಅವರಿಗೆ ಆಶೀರ್ವಾದ ಪೂರ್ವಕ ಪತ್ರ ಬರೆದಿದ್ದರು. ‘ನೀವು ಸರ್ವಜನ ಹಿತ ಮತ್ತು ಸುಖಕ್ಕಾಗಿ ಒಂದೊಳ್ಳೆ ಕೆಲಸವನ್ನು ಮಾಡುತ್ತಿದ್ದೀರಿ. ನಿಮಗೆ ಶ್ರೀರಾಮ ಒಳ್ಳೆಯದು ಮಾಡಲಿ’ ಎಂದು ರಾಹುಲ್​ ಗಾಂಧಿಯವರಿಗೆ ಹಾರೈಸಿದ್ದರು. ‘ಯಾತ್ರೆಗೆ ಶುಭವಾಗಲಿ, ನಿಮ್ಮ ಆರೋಗ್ಯ ಚೆನ್ನಾಗಿರಲಿ’ ಎಂದೂ ಹೇಳಿದ್ದರು.

ಇದನ್ನೂ ಓದಿ: ಭಾರತ್​ ಜೋಡೋ ಯಾತ್ರೆ ದೆಹಲಿಗೆ ಕಾಲಿಟ್ಟಾಗಿನಿಂದಲೂ ರಾಹುಲ್​ ಗಾಂಧಿ ಭದ್ರತೆಯಲ್ಲಿ ವೈಫಲ್ಯ; ಅಮಿತ್​ ಶಾಗೆ ಕಾಂಗ್ರೆಸ್​ ಪತ್ರ

Continue Reading

New year 2023

BMTC Income | ಆರ್ಥಿಕವಾಗಿ ಕುಗ್ಗಿದ್ದ ಬಿಎಂಟಿಸಿಗೆ ವರ್ಷಾರಂಭದಲ್ಲಿ ಹರ್ಷ!

ಹೊಸ ವರ್ಷ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆ ನಡೆಸಿದ್ದ ಬಿಎಂಟಿಸಿಗೆ ಮೊದಲ ದಿನವೇ ಭರ್ಜರಿ (BMTC Income) ಆದಾಯ ಗಳಿಸಿದೆ. ನಷ್ಟದ ಸುಳಿಯಲಿ ಸಿಲುಕಿ ನರಳಾಡುತ್ತಿದ್ದ ಬಿಎಂಟಿಸಿಗೆ ಕೊಂಚ ಹರ್ಷ ತಂದಿದೆ.

VISTARANEWS.COM


on

By

Demand for implementation of 6th Pay Commission Transport employees call for protest from March 1
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿದ್ದ ಬಿಎಂಟಿಸಿ ನಿಗಮಕ್ಕೆ ಈ ಹೊಸ ವರ್ಷ ಕೊಂಚ ಹರ್ಷ ತಂದಿದೆ. ವರ್ಷದ ಮೊದಲ ದಿನ ಬಿಎಂಟಿಸಿಗೆ ಬಂಪರ್ ಆದಾಯ (BMTC Income) ಗಳಿಸಿದೆ. ಹೊಸ ವರ್ಷಕ್ಕೆಂದು ಸುಮಾರು 87 ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ನಡೆಸಿತ್ತು. ಮೊದಲೇ ಆರ್ಥಿಕವಾಗಿ ಕುಗ್ಗಿದ್ದ ಬಿಎಂಟಿಸಿಗೆ ವರ್ಷದ ಮೊದಲ ದಿನವೇ ಬಂದ ಆದಾಯದ ಕಿಕ್ ಹೆಚ್ಚಿಸಿದೆ.

ಒಂದೇ ದಿನ ಬಿಎಂಟಿಸಿ ಹೆಚ್ಚುವರಿ ಬಸ್ ಕಾರ್ಯಾಚರಣೆಯಿಂದ ₹1,99,983 ಹೆಚ್ಚಿನ ಆದಾಯ ಬಂದಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಡಿ.31 ಹಾಗೂ ಜ.1ರ ಮಧ್ಯರಾತ್ರಿವರೆಗೂ ಹೆಚ್ಚುವರಿ ಬಸ್‌ಗಳನ್ನು ರಸ್ತೆಗಿಳಿಸಿತ್ತು. ಹೆಚ್ಚುವರಿ ಬಸ್‌ಗಳು ಸುಮಾರು 4443.9 ಕಿ.ಮೀ ನಷ್ಟು ಸಂಚಾರ ಮಾಡಿವೆ. ವರ್ಷದ ಮೊದಲ ದಿನ ಹೆಚ್ಚುವರಿ ಕಾರ್ಯಾಚರಣೆ ಮಾಡಿದ ಬಸ್‌ಗಳಲ್ಲಿ ಸುಮಾರು 13,332 ಮಂದಿ ಪ್ರಯಾಣಿಸಿರುವುದಾಗಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿಬ್ಬಂದಿ ಮುಷ್ಕರ-ಕೋವಿಡ್‌ನಿಂದ ಕುಗ್ಗಿದ್ದ ಬಿಎಂಟಿಸಿ
ಮೊದಲೇ ಮುಳುಗುವ ಹಡುಗು ಆಗಿದ್ದ ಬಿಎಂಟಿಸಿ ನಿಗಮಕ್ಕೆ ನೌಕರರ ಸಾಲು ಸಾಲು ಮುಷ್ಕರ ಹಾಗೂ ಸಾಂಕ್ರಾಮಿಕ ಕೊರೊನಾ ಹೊಡೆತದಿಂದಾಗಿ ಬಸ್‌ ಓಡಾಟ ಇಲ್ಲದೆ ನಷ್ಟನ ಸುಳಿಯಲ್ಲಿ ಸಿಲುಕಿತು. ಜತೆಗೆ ತೈಲ ಬೆಲೆ ಏರಿಕೆಯಿಂದಾಗಿ ಬಸ್‌ ಓಡಿಸಿದರೂ ಕಷ್ಟ, ಸುಮ್ಮನೆ ನಿಲ್ಲಿಸಿದರೂ ನಷ್ಟ ಎಂಬ ಪರಿಸ್ಥಿತಿ ಉದ್ಭವಿಸಿತ್ತು. ಸಿಬ್ಬಂದಿಯ ಸಂಬಳವನ್ನು ನೀಡಲು ಆಗದೆ ನಿಗಮವು ಸರ್ಕಾರದ ಸಹಾಯಹಸ್ತ ಚಾಚಿತ್ತು. ಹಾಗೆ ನೌಕರರ ಪಿಎಫ್‌ ಹಣವನ್ನು ಬಳಸಿಕೊಳ್ಳುತ್ತಿದೆ ಎಂಬ ಆರೋಪವನ್ನು ಹೊತ್ತಿತ್ತು. ಇವೆಲ್ಲದರ ನಡುವೆ ಇದೀಗ ನಿಧಾನವಾಗಿ ಆರ್ಥಿಕ ಚೇತರಿಕೆಯನ್ನು ಕಂಡುಕೊಳ್ಳುತ್ತಿದೆ.

ಇದನ್ನೂ ಓದಿ | Siddheshwar Swamiji | ಸಿದ್ದೇಶ್ವರ ಶ್ರೀಗಳ ಮಣ್ಣಿನ ಮೂರ್ತಿ; ಕಲಾವಿದನಿಂದ ವಿಶೇಷ ಗೌರವ

Continue Reading

New year 2023

Swiggy Order | ಹೊಸ ವರ್ಷದ ಪಾರ್ಟಿಗೆ ಸ್ವಿಗ್ಗಿಯಲ್ಲಿ 3.5 ಲಕ್ಷ ಬಿರ್ಯಾನಿ, 1.76 ಲಕ್ಷ ಚಿಪ್ಸ್‌ ಪ್ಯಾಕೆಟ್‌ ಆರ್ಡರ್!

ಹೊಸ ವರ್ಷದ ಪಾರ್ಟಿ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ಆಹಾರ, ಚಿಪ್ಸ್‌ ಪ್ಯಾಕೆಟ್‌ಗಳನ್ನು ಆರ್ಡರ್‌ (Swiggy Order) ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ಸ್ವಿಗ್ಗಿ ತಿಳಿಸಿದೆ.

VISTARANEWS.COM


on

Swiggy Order On New Years Eve
Koo

ನವದೆಹಲಿ: ಹೊಸ ವರ್ಷದ ಹಿನ್ನೆಲೆಯಲ್ಲಿ ಶನಿವಾರವೇ ದೇಶಾದ್ಯಂತ ಸಂಭ್ರಮ ಮನೆಮಾಡಿತ್ತು. ಪಾರ್ಟಿ ಆಯೋಜನೆ, ಪಾರ್ಟಿ ಸಿದ್ಧತೆ, ಕೇಕ್‌ ಕತ್ತರಿಸುವುದು ಸೇರಿ ಹಲವು ರೀತಿಯಲ್ಲಿ ಜನ ಸಂಭ್ರಮಾಚರಣೆ ಮಾಡಿದರು. ಅದರಲ್ಲೂ, ಪಾರ್ಟಿಗಾಗಿ ಆನ್‌ಲೈನ್‌ ಮೂಲಕ ಕೋಟ್ಯಂತರ ಜನ ಫುಡ್‌ ಆರ್ಡರ್‌ (Swiggy Order) ಮಾಡಿದ್ದು, ಇಲ್ಲೂ ಬಿರ್ಯಾನಿಯೇ ಅಗ್ರ ಸ್ಥಾನ ಪಡೆದಿದೆ. ಮದ್ಯಪಾನದ ಪಾರ್ಟಿಗಾಗಿ ಲಕ್ಷಾಂತರ ಚಿಪ್ಸ್‌ ಪ್ಯಾಕೆಟ್‌ಗಳನ್ನೂ ಸ್ವಿಗ್ಗಿಯಲ್ಲಿ ಆರ್ಡರ್‌ ಮಾಡಲಾಗಿದೆ.

ಹೌದು, ಹೊಸ ವರ್ಷದ ಹಿಂದಿನ ದಿನವಾದ ಶನಿವಾರ ರಾತ್ರಿ 10.45ರ ವೇಳೆಗೆ ಸ್ವಿಗ್ಗಿಯಲ್ಲಿ 3.5 ಲಕ್ಷಕ್ಕೂ ಅಧಿಕ ಬಿರ್ಯಾನಿಗಳನ್ನು ಆರ್ಡರ್‌ ಮಾಡಲಾಗಿದೆ. ಹಾಗೆಯೇ, ನಂತರದ ಬೇಡಿಕೆಗೆ ಪಿಜ್ಜಾಗೆ ಇದ್ದು, 61 ಸಾವಿರ ಪಿಜ್ಜಾ ಆರ್ಡರ್‌ ಮಾಡಲಾಗಿದೆ ಎಂದು ಸ್ವಿಗ್ಗಿ ಕಂಪನಿ ತಿಳಿಸಿದೆ.

ಸ್ವಿಗ್ಗಿ ಈ ಕುರಿತು ಸಮೀಕ್ಷೆಯನ್ನೂ ನಡೆಸಿದ್ದು, ಶೇ.75.4ರಷ್ಟು ಜನ ಹೈದರಾಬಾದ್‌ ಬಿರ್ಯಾನಿ, ಶೇ.14.2ರಷ್ಟು ಮಂದಿ ಲಖನೌವಿ ಬಿರ್ಯಾನಿ ಹಾಗೂ ಶೇ.10.4ರಷ್ಟು ಜನ ಕೋಲ್ಕೊತಾ ಬಿರ್ಯಾನಿ ಆರ್ಡರ್‌ ಮಾಡಿದ್ದಾರೆ ಎಂದು ಮಾಹಿತಿ ನೀಡಿದೆ. ಹಾಗೆಯೇ, ಸ್ವಿಗ್ಗಿಯ ಇನ್‌ಸ್ಟಾಮಾರ್ಟ್‌ನಲ್ಲಿ ಸಂಜೆ 7 ಗಂಟೆ ವೇಳೆಗೆ 1.76 ಚಿಪ್ಸ್‌ ಪ್ಯಾಕೆಟ್‌, 2,757 ಪ್ಯಾಕೆಟ್‌ ಡ್ಯುರೆಕ್ಸ್‌ ಕಾಂಡೋಮ್‌ಗಳನ್ನು ಆರ್ಡರ್‌ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ | New Year 2023 | ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಭ್ರಮದ ಹೊಸ ವರ್ಷಾಚರಣೆ

Continue Reading

New year 2023

Ras Al Khaimah | 673 ಡ್ರೋನ್‌, 4.7 ಕಿ.ಮೀವರೆಗೆ ಆಗಸದಲ್ಲಿ ಪಟಾಕಿ, ಬೆಳಕಿನ ಚಿತ್ತಾರ, 2 ಗಿನ್ನೆಸ್‌ ದಾಖಲೆ ಬರೆದ ರಸ್‌ ಅಲ್‌ ಖೈಮಾ

ಹೊಸ ವರ್ಷಾಚರಣೆಗೆ ಹೇಳಿ ಮಾಡಿಸಿದಂತಿರುವ ರಸ್‌ ಅಲ್‌ ಖೈಮಾ (Ras Al Khaimah) ನಗರವು ಈ ಬಾರಿಯೂ ಅದ್ಧೂರಿ ಆಚರಣೆ ಮೂಲಕ ಎರಡು ಗಿನ್ನೆಸ್‌ ದಾಖಲೆ ಬರೆದಿದೆ.

VISTARANEWS.COM


on

Ras Al Khaimah New Year Celebration
Koo

ಅಬುಧಾಬಿ: ಭಾರತ ಸೇರಿ ಜಗತ್ತಿನಾದ್ಯಂತ ಸಂಭ್ರಮ-ಸಡಗರದಿಂದ ಹೊಸ ವರ್ಷ ಆಚರಣೆ ಮಾಡಲಾಗಿದೆ. ಪಟಾಕಿ ಸಿಡಿಸಿ, ಹಾಡಿ, ಕುಣಿದು, ನಲಿದು ಹೊಸ ಸಂವತ್ಸರವನ್ನು ಸ್ವಾಗತಿಸಲಾಗಿದೆ. ಹೀಗೆ, ಅದ್ಧೂರಿಯಾಗಿ ಹೊಸ ವರ್ಷಾವನ್ನು ಸ್ವಾಗತಿಸುವ ಮೂಲಕ ಯುಎಇಯ ರಸ್‌ ಅಲ್‌ ಖೈಮಾ (Ras Al Khaimah) ನಗರವು ಎರಡು ಗಿನ್ನೆಸ್‌ ದಾಖಲೆ ಬರೆದಿದೆ. ಹೊಸ ವರ್ಷಾಚರಣೆಗೆ ತಾನೇ ಅಧಿಪತಿ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ.

ಹೌದು, ರಸ್‌ ಅಲ್‌ ಖೈಮಾದಲ್ಲಿ ಶನಿವಾರ ರಾತ್ರಿ 673 ಡ್ರೋನ್‌ಗಳನ್ನು ಬಳಸಿ ಸುಮಾರು 4.7 ಕಿ.ಮೀ ವ್ಯಾಪ್ತಿಯಲ್ಲಿ ಪಟಾಕಿ ಸಿಡಿಸಿ, ಬೆಳಕಿನ ಚಿತ್ತಾರ ಮೂಡಿಸಿ, ಕೊನೆಗೆ ಆಗಸದಲ್ಲಿಯೇ ‘ಹ್ಯಾಪಿ ನ್ಯೂ ಇಯರ್‌ 2023’ (Happy New Year 2023) ಎಂಬ ಅಕ್ಷರಗಳು ಮೂಡುವ ಮೂಲಕ ಶುಭಕೋರಲಾಗಿದೆ. ಹಾಗಾಗಿ, ರಸ್‌ ಅಲ್‌ ಖೈಮಾದಲ್ಲಿ ಪಟಾಕಿ ಹಾಗೂ ದೀಪಗಳ ಚಿತ್ತಾರ ಮೂಡಿಸಿದ್ದು ಎರಡು ಗಿನ್ನೆಸ್‌ ದಾಖಲೆ ಬರೆದಿದೆ. ಸುಮಾರು 1,100 ಮೀಟರ್‌ ಎತ್ತರದಲ್ಲಿ ಪಟಾಕಿ ಸಿಡಿಸಿ, ವಿದ್ಯುತ್‌ ದೀಪಗಳನ್ನು ಬೆಳಗಲಾಗಿದೆ. ಹೀಗೆ, ಆಗಸದಲ್ಲಿ ಬೆಳಕಿನ ರಂಗಿನಾಟವಿರುವ 12 ನಿಮಿಷದ ವಿಡಿಯೊವನ್ನು ರಸ್‌ ಅಲ್‌ ಖೈಮಾದ ಆಡಳಿತವು ಶೇರ್‌ ಮಾಡಿದೆ.

ಇದಕ್ಕೂ ಮೊದಲು ಸುಮಾರು 458 ಡ್ರೋನ್‌ಗಳನ್ನು ಬಳಸಿ, ಪಟಾಕಿ ಸಿಡಿಸಿ, ಬೆಳಕಿನ ಚಿತ್ತಾರ ಮೂಡಿಸಿದ್ದು ಗಿನ್ನೆಸ್‌ ದಾಖಲೆ ಆಗಿತ್ತು. ಈಗ ಈ ದಾಖಲೆಯನ್ನು ರಸ್‌ ಅಲ್‌ ಖೈಮಾ ಮುರಿದಿದೆ. ಹೊಸ ವರ್ಷಾಚರಣೆಗೆ ರಸ್‌ ಅಲ್‌ ಖೈಮಾ ಖ್ಯಾತಿ ಗಳಿಸಿದ್ದು, ಈ ಬಾರಿ 30 ಸಾವಿರಕ್ಕೂ ಅಧಿಕ ಜನ ಹೊಸ ವರ್ಷ ಆಚರಿಸಲು ನಗರಕ್ಕೆ ಆಗಮಿಸಿದ್ದರು ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | New Year 2023 | ಜಗತ್ತಿನಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದ್ದು ಹೇಗೆ? ಇಲ್ಲಿವೆ ಫೋಟೊಗಳು

Continue Reading
Advertisement
car crossed the divider and collided with a lorry Driver death
ತುಮಕೂರು8 mins ago

Road Accident: ಡಿವೈಡರ್ ದಾಟಿ ಲಾರಿಗೆ ಡಿಕ್ಕಿ ಹೊಡೆದ ಕಾರು; ಚಾಲಕ ಸ್ಥಳದಲ್ಲೇ ಸಾವು

Hassan Pen Drive Case
ಕರ್ನಾಟಕ20 mins ago

Hassan Pen Drive Case: ವಿಚಾರಣೆಗೆ ಕರೆದಾಗ ವಿದೇಶದಿಂದ ಪ್ರಜ್ವಲ್ ಬರುತ್ತಾನೆ ಎಂದ ಎಚ್‌.ಡಿ.ರೇವಣ್ಣ

PF Balance Check
ಮನಿ ಗೈಡ್23 mins ago

PF Balance Check: ಬಡ್ಡಿ ಬಂದಿದೆಯೋ ಇಲ್ಲವೋ… ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?

MLA Srinivasa Mane Election campaign for Haveri Gadag Lok Sabha constituency Congress candidate Anandaswamy Gaddadevaramath
ಹಾವೇರಿ39 mins ago

Lok Sabha Election: ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಶಾಸಕ ಶ್ರೀನಿವಾಸ ಮಾನೆ ಪ್ರಚಾರ

Toyota Kirloskar Motor launched the Tgloss
ವಾಣಿಜ್ಯ40 mins ago

Toyota Kirloskar Motor: ಕಾರ್‌ ಕೇರ್‌ಗೆ ʼಟಿಗ್ಲೊಸ್ʼ ಆರಂಭಿಸಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್

Lok Sabha Election-2024
Lok Sabha Election 202443 mins ago

Lok Sabha Election: ಒಂದೇ ಒಂದು ಕುಟುಂಬಕ್ಕಾಗಿ ಪ್ರತ್ಯೇಕ ಮತಗಟ್ಟೆ! ಹೀಗೂ ಉಂಟು!

Arvind Kejriwal
ದೇಶ45 mins ago

ಸಿಎಂ ಹುದ್ದೆ ಅಲಂಕಾರಿಕ ಅಲ್ಲ; 24×7 ಜನರಿಗೆ ಲಭ್ಯ ಇರಬೇಕು; ರಾಜೀನಾಮೆ ನೀಡದ ಕೇಜ್ರಿವಾಲ್‌ಗೆ ಕೋರ್ಟ್‌ ಚಾಟಿ

LSG vs MI
ಕ್ರೀಡೆ47 mins ago

LSG vs MI: ಲಕ್ನೋ ಸವಾಲಿಗೆ ಮುಂಬೈ ಸಜ್ಜು; ಸೋತರೆ ಪಾಂಡ್ಯ ಪಡೆಯ ಪ್ಲೇ ಆಫ್​ ಹಾದಿ ಕಠಿಣ

Tumkur News 10 huts burnt down in Chimpuganahalli Minister Dr G Parameshwar visited the place
ತುಮಕೂರು48 mins ago

Tumkur News: ಚಿಂಪುಗಾನಹಳ್ಳಿಯಲ್ಲಿ 10 ಗುಡಿಸಲು ಭಸ್ಮ; ಸ್ಥಳಕ್ಕೆ ಪರಮೇಶ್ವರ್‌ ಭೇಟಿ

PM Narendra Modi met four special people in Sirsi visit
Lok Sabha Election 202449 mins ago

PM Narendra Modi: ಶಿರಸಿಗೆ ಬಂದಾಗ ಮೋದಿ ಭೇಟಿ ಮಾಡಿದ ನಾಲ್ವರು ವಿಶೇಷ ವ್ಯಕ್ತಿಗಳಿವರು! ಏನಿವರ ಸಾಧನೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra modi in Bagalakote and Attack on Congress
Lok Sabha Election 20246 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20248 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ15 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Congress fears defeat over EVMs Congress will not win a single seat in Karnataka says PM Narendra Modi
Lok Sabha Election 20241 day ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20241 day ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20241 day ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20241 day ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest1 day ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

ಟ್ರೆಂಡಿಂಗ್‌