Who is Ibrahim Zadran, who shattered Shubman Gill's ODI record ODI Cricket : ಈ ಕ್ರಿಕೆಟಿಗ ಧರಿಸುವುದು ಕೊಹ್ಲಿಯ 18 ಸಂಖ್ಯೆಯ ಜೆರ್ಸಿ, ಮುರಿದಿದ್ದು ಶುಭ್​ಮನ್​ ಗಿಲ್​​ ದಾಖಲೆ! - Vistara News

ಕ್ರಿಕೆಟ್

ODI Cricket : ಈ ಕ್ರಿಕೆಟಿಗ ಧರಿಸುವುದು ಕೊಹ್ಲಿಯ 18 ಸಂಖ್ಯೆಯ ಜೆರ್ಸಿ, ಮುರಿದಿದ್ದು ಶುಭ್​ಮನ್​ ಗಿಲ್​​ ದಾಖಲೆ!

ಕೊಹ್ಲಿಯಂತೆ 18ನೇ ಸಂಖ್ಯೆಯ ಜರ್ಸಿಯನ್ನು ಧರಿಸುವ ಅಫಘಾನಿಸ್ತಾನದ ಈ ಆಟಗಾರ ಲಂಕಾ ವಿರುದ್ಧದ ಏಕ ದಿನ ಪಂದ್ಯದಲ್ಲಿ 98 ರನ್ ಗಳಿಸಿ ಗಿಲ್​ ದಾಖಲೆ ಮುರಿದಿದ್ದಾರೆ.

VISTARANEWS.COM


on

ibarhim zadran
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೊಲೊಂಬೊ: ಇಲ್ಲಿನ ಹಂಬಂಟೋಟದ ಮಹಿಂದಾ ರಾಜಪಕ್ಸ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ಅಫ್ಘಾನಿಸ್ತಾನ ವಿರುದ್ಧ ನಡೆದ ಮೂರು ಏಕದಿನ ಪಂದ್ಯಗಳ ಮೊದಲ ಪಂದ್ಯದಲ್ಲಿ ಲಂಕಾ ತಂಡ ಸೋಲು ಕಂಡಿದೆ. ಈ ಪಂದ್ಯದ ಬಗ್ಗೆ ಎಲ್ಲರ ಗಮನವಿದ್ದದ್ದು ಶ್ರೀಲಂಕಾ ತಂಡ ಮತೀಶಾ ಪತಿರಾನಾ ಅವರ ಮೇಲೆ. ಐಪಿಎಲ್​​ನಲ್ಲಿ ಸಿಎಸ್​ಕೆ ವಿರುದ್ಧ ಆಡಿದ್ದ ಅವರು ಮೊದಲ ಬಾರಿಯೇ ಟ್ರೋಫಿ ಗೆದ್ದಿದ್ದರು. ಆದರೆ, ಪಂದ್ಯದಲ್ಲಿ ನೈಜವಾಗಿ ಮಿಂಚಿದ್ದು ಅಫಘಾನಿಸ್ತಾನ ತಂಡದ ಆರಂಭಿಕ ಬ್ಯಾಟರ್​ ಇಬ್ರಾಹಿಂ ಜದ್ರಾನ್​. ಭಾರತದ ಸ್ಟಾರ್​ ಬ್ಯಾಟರ್​ ವಿರಾಟ್ ಕೊಹ್ಲಿಯಂತೆಯೇ 18 ನೇ ಸಂಖ್ಯೆಯ ಜರ್ಸಿ ಧರಿಸುವ ಈ ಯುವ ಆಟಗಾರ ಪಂದ್ಯದಲ್ಲಿ 98 ರನ್ ಗಳಿಸಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್​ನಿಂದಾಗಿ ಅಫಘಾನಿಸ್ತಾನ ತಂಡ ಲಂಕಾವನ್ನು ಮಣಿಸಿದೆ. ಇದೇ ವೇಳೆ ಈ ಬ್ಯಾಟರ್​ ಭಾರತ ತಂಡದ ಯುವ ಪ್ರತಿಭೆ ಶುಭ್​​ಮನ್​ ಗಿಲ್​ ಸೃಷ್ಟಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.

ಆರು ತಿಂಗಳ ಬಳಿಕ ಇಬ್ರಾಹಿಮ್​ ಜದ್ರಾನ್​ ಕ್ರಿಕೆಟ್​ನಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಅಫ್ಘಾನಿಸ್ತಾನ ತಂಡದ 2019 ರಲ್ಲಿ ಪಾದಾರ್ಪಣೆ ಮಾಡಿದ ಜದ್ರಾನ್ ಅವರ ಸ್ಫೋಟಕ ಬ್ಯಾಟಿಂಗ್ ವೈಖರಿ ವರ್ಷದ ಹಿಂದೆ ಜಿಂಬಾಬ್ವೆ ಪ್ರವಾಸದಲ್ಲಿ ಆರಂಭಗೊಂಡಿತ್ತು. ಕಳೆದ ನವೆಂಬರ್​​ನಲ್ಲಿ ಶ್ರೀಲಂಕಾ ಪ್ರವಾಸದ ಸರಣಿಯಲ್ಲಿ ಮೂರು ಶತಕಗಳನ್ನು ಬಾರಿಸಿದ್ದರು. ಅಂತೆಯೇ ಶುಕ್ರವಾರ ಲಂಕಾ ನೀಡಿದ್ದ 269 ರನ್​ಗಳ ಗುರಿ ಬೆನ್ನಟ್ಟಿದ್ದ ಅಫಘಾನಿಸ್ತಾನ ತಂಡದ ಪರ ಜದ್ರಾನ್​ ಏಕಾಂಕಿ ಹೋರಾಟ ನಡೆಇಸದ್ದರು. 35 ಎಸೆತಗಳಲ್ಲಿ ಅರ್ಧಶತಕದ ಗಡಿ ತಲುಪಿದ್ದ ಅವರು 98 ರನ್​ ಬಾರಿಸಿ ಗೆಲುವಿಗೆ ಕಾರಣರಾದರು.

ಈ ಅತ್ಯುತ್ತಮ ಪ್ರದರ್ಶನಕ್ಕಾಗಿ ಇಬ್ರಾಹಿಮ್​ ಜದ್ರಾನ್ ತಮ್ಮ ಒಂಬತ್ತನೇ ಇನಿಂಗ್ಸ್​​ನಲ್ಲಿ 500ಕ್ಕೂ ಹೆಚ್ಚು ರನ್​ ಬಾರಿಸಿದ ಹೊಸ ದಾಖಲೆ ಸೃಷ್ಟಿಸಿದ್ದರು. ಈ ಮೂಲಕ ಅವರು ಪಾಕಿಸ್ತಾನ ತಂಡದ ಇಮಾಮ್​-ಉಲ್​- ಹಕ್​ ಅವರ ದಾಖಲೆಯನ್ನು ಸರಿಗಟ್ಟುವ ಜತೆಗೆ ಭಾರತದ ಯುವ ಬ್ಯಾಟರ್​​ ಶುಬ್ಮನ್ ಗಿಲ್ (10 ಇನ್ನಿಂಗ್ಸ್) ಅವರನ್ನು ಹಿಂದಿಕ್ಕಿದ್ದಾರೆ.

ಜದ್ರಾನ್​ ಇದೀಗ ಅಫಘಾನಿಸ್ತಾನ ತಂಡದ ಶ್ರೇಷ್ಠ ಬ್ಯಾಟರ್​ ಎನಿಸಿಕೊಂಡಿದ್ದಾರೆ. ಅದಕ್ಕಿಂತ ಮೊದಲು ಅವರು ದೇಶೀಯ ಕ್ರಿಕೆಟ್​ನಲ್ಲೂ ಮಿಂಚಿದ್ದರು. ಘಾಜಿ ಅಮಾನುಲ್ಲಾ ಖಾನ್ ಏಕದಿನ ಪಂದ್ಯಾವಳಿಯಲ್ಲಿ ಮತ್ತು ನಂತರ ಶ್ಪಗೆಜಾ ಕ್ರಿಕೆಟ್ ಲೀಗ್​​ನ ಲಿಸ್ಟ್ ಎ ಕ್ರಿಕೆಟ್​​ನಲ್ಲಿ ಮಿಂಚಿದ್ದರು. ಅದೇ ರೀತಿ 2017ರ ಜನವರಿಯಲ್ಲಿ ನಡೆದ 2018ರ ಅಂಡರ್ 19 ವಿಶ್ವ ಕಪ್​ನಲ್ಲೂ ಮಿಂಚಿದ್ದರು.

ಇದನ್ನೂ ಓದಿ : IPL 2023 : ಧೋನಿ ಬಗ್ಗೆ ಹೊಗಳಿ ಬರೆದ ಲಂಕಾ ಬೌಲರ್ ಮತೀಶ್ ಪತಿರಾನಾ ಸಹೋದರಿ ವಿಶುಕಾ; ಕಾರಣವೇನು?

2019ರಲ್ಲಿ ಜದ್ರಾನ್​ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್​ ಪಂದ್ಯಕ್ಕೆ ಆಯ್ಕೆಯಾಗಿದ್ದರು. ಚಟ್ಟೋಗ್ರಾಮ್​ ಸ್ಟೇಡಿಯಮ್​ನಲ್ಲಿ ನಡೆದಿದ್ದ ಆ ಪಂದ್ಯದ ಎರಡನೇ ಇನ್ನಿಂಗ್ಸ್​​​ನಲ್ಲಿ 87 ರನ್ ಗಳಿಸುವ ಮಾರ್ಗದಲ್ಲಿ ಚೊಚ್ಚಲ ಪಂದ್ಯದಲ್ಲೇ ಅರ್ಧ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿ ಪಡೆದಿದ್ದರು. ನಂತರ, ಅವರನ್ನು ಏಕದಿನ ಮತ್ತು ಟಿ 20 ಪಂದ್ಯಗಳಿಗೆ ಆಯ್ಕೆ ಮಾಡಲಾಯಿತು. ಇದೀಗ ಆಫ್ಘನ್​ ತಂಡದ ಆರಂಭಿಕ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

IPL 2024: ಕೆಕೆಆರ್​ ವಿರುದ್ಧ ಹಸಿರು ಜೆರ್ಸಿಯಲ್ಲಿ ಆಡಲಿದೆ ಆರ್​ಸಿಬಿ; ಈ ಬಾರಿಯ ಉದ್ದೇಶವೇನು?

IPL 2024: ಈ ಬಾರಿಯ ಗ್ರೀನ್‌ ಜೆರ್ಸಿಯ ವಿನ್ಯಾಸದಲ್ಲಿ ತುಸು ಬದಲಾವಣೆ ಮಾಡಲಾಗಿದೆ. ಹಸಿರಿನ ಜತೆಗೆ ಕಡು ನೀಲಿ ಬಣ್ಣವನ್ನು ಸೇರಿಸಿಲಾಗಿದೆ. ಹಿಂದಿನ ಆವೃತ್ತಿಯಲ್ಲಿ ಹಸಿರು ಮತ್ತು ಕಪ್ಪು ಬಣ್ಣ ವಿಶ್ರಿತ ಜೆರ್ಸಿಯನ್ನು ಬಳಸಲಾಗಿತ್ತು.

VISTARANEWS.COM


on

IPL 2024
Koo

ಕೋಲ್ಕತ್ತಾ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB) ತಂಡ ಈ ಬಾರಿಯ ಐಪಿಎಲ್​ನಲ್ಲಿ(IPL 2024) ಆಡಿದ 7 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಸೋತು ಕೊನೆಯ ಸ್ಥಾನಿಯಾಗಿದೆ. ಮುಂದಿನ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರ ಪ್ಲೇ ಆಫ್​ ಪ್ರವೇಶ ಪಡೆಯಬಹುದು. ಮುಂದಿನ ಪಂದ್ಯವನ್ನು ಕೆಕೆಆರ್(KKR)​ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಆರ್​ಸಿಬಿ ಗೋ ಗ್ರೀನ್‌ ಅಭಿಯಾನದ ಭಾಗವಾಗಿ ಹಸಿರು(RCB Green Jersey) ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಎಂದು ಫ್ರಾಂಚೈಸಿ ಅಧಿಕೃತ ಮಾಹಿತಿ ನೀಡಿದೆ. ಈ ಮೂಲಕ ಈ ಐಪಿಎಲ್‌ನಲ್ಲೂ(IPL 2024) ಆರ್​ಸಿಬಿಯ ಗೋ ಗ್ರೀನ್‌ ಅಭಿಯಾನ ಮುಂದುವರಿಯಲಿದೆ. ಸ್ವಚ್ಛ ಹಾಗೂ ಹಸಿರು ಪರಿಸರವೇ ಈ ಬಾರಿಯ ಪ್ರಮುಖ ಉದ್ದೇಶ.

“ಬಣ್ಣಗಳ ಬದಲಾವಣೆಯು ಅದೃಷ್ಟದಲ್ಲಿ ಬದಲಾವಣೆಯನ್ನು ತರುತ್ತದೆ ಎಂದು ಭಾವಿಸುತ್ತೇವೆ!” ಎಂದು ಬರೆದಿಕೊಂಡು ಮುಂದಿನ ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ತಂಡ ಕಣಕ್ಕಿಳಿಯಲಿದೆ ಎನ್ನುವ ವಿಚಾರವನ್ನು ಫ್ರಾಂಚೈಸಿ ತನ್ನ ಟ್ವಿಟರ್ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದೆ. ಕೆಕೆಆರ್​ ಮತ್ತು ಆರ್​ಸಿಬಿ ನಡುವಣ ಪಂದ್ಯ ಏಪ್ರಿಲ್​ 21ರಂದು ನಡೆಯಲಿದೆ. ಈಡನ್​ ಗಾರ್ಡನ್ಸ್​ನಲ್ಲಿ ಪಂದ್ಯ ನಡೆಯಲಿದೆ. ಇದು ಹಗಲು ಪಂದ್ಯವಾಗಿದೆ.

​2011 ರಿಂದ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆರ್​ಸಿಬಿ ತಮ್ಮ ‘ಗೋ ಗ್ರೀನ್’ ಅಭಿಯಾನದಲ್ಲಿ ತೊಡಗಿಕೊಂಡಿತ್ತು. ಇದೇ ಕಾರಣಕ್ಕೆ ಪ್ರತಿ ಆವೃತ್ತಿಯಲ್ಲಿಯೂ ಒಂದು ಪಂದ್ಯವನ್ನು ಹಸಿರು ಜೆರ್ಸಿಯಲ್ಲಿ ಆಡುತ್ತಿದೆ. ಆದರೆ 2021ರಲ್ಲಿ, ಹಸಿರು ಜರ್ಸಿಯಲ್ಲಿ ಆಡುವ ಬದಲು ತಂಡವು ಒಂದು ಪಂದ್ಯದಲ್ಲಿ ನೀಲಿ ಜರ್ಸಿಯಲ್ಲಿ ಆಡಿತ್ತು. ಇದಕ್ಕೆ ಕಾರಣ ಕೋವಿಡ್ ಸಂಕಷ್ಟದ ಸಮಯದಲ್ಲಿ ಮುಂಚೂಣಿಯಲ್ಲಿರುವ ಕಾರ್ಮಿಕರಿಗೆ ಅವರ ತ್ಯಾಗ ಮತ್ತು ಕಠಿಣ ಪರಿಶ್ರಮಕ್ಕೆ ಗೌರವ ಸಲ್ಲಿಸಲು ಈ ನೀಲಿ ಜೆರ್ಸಿ ಧರಿಸಿ ಆಡಿತ್ತು.

ಇದನ್ನೂ ಓದಿ IPL 2024 Points Table: 3ನೇ ಗೆಲುವು ಸಾಧಿಸಿದ ಬಳಿಕ ಮುಂಬೈಗೆ ಅಂಕಪಟ್ಟಿಯಲ್ಲಿ ಎಷ್ಟನೇ ಸ್ಥಾನ?

ಈ ಬಾರಿಯ ಗ್ರೀನ್‌ ಜೆರ್ಸಿಯ ವಿನ್ಯಾಸದಲ್ಲಿ ತುಸು ಬದಲಾವಣೆ ಮಾಡಲಾಗಿದೆ. ಹಸಿರಿನ ಜತೆಗೆ ಕಡು ನೀಲಿ ಬಣ್ಣವನ್ನು ಸೇರಿಸಿಲಾಗಿದೆ. ಹಿಂದಿನ ಆವೃತ್ತಿಯಲ್ಲಿ ಹಸಿರು ಮತ್ತು ಕಪ್ಪು ಬಣ್ಣ ವಿಶ್ರಿತ ಜೆರ್ಸಿಯನ್ನು ಬಳಸಲಾಗಿತ್ತು.

ಪ್ಲೇ ಆಫ್ ಆಸೆ ಜೀವಂತ

ಸದ್ಯದ ಪರಿಸ್ಥಿತಿಯಲ್ಲಿ ಆರ್‌ಸಿಬಿ ಪ್ಲೇ ಆಫ್ ಹಾದಿ ಸಂಪೂರ್ಣ ಮುಚ್ಚಿಲ್ಲ. ಆದರೆ, ಸತತವಾಗಿ ಗೆಲ್ಲಬೇಕಾದ ಒತ್ತಡ ತಂಡದ ಮೇಲಿದೆ. ಈಗಾಗಲೇ 7 ಪಂದ್ಯ ಆಡಿದ್ದು, 1 ಪಂದ್ಯ ಗೆದ್ದು, 6 ಪಂದ್ಯದಲ್ಲಿ ಸೋಲು ಕಂಡಿದೆ. 2 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ, ಲೀಗ್‌ ಹಂತದಲ್ಲಿ ಇನ್ನೂ 7 ಪಂದ್ಯಗಳ ಬಾಕಿ ಇದೆ. ಹೀಗಾಗಿ ಉಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರ ಪ್ಲೇ ಆಫ್ ಅವಕಾಶ ಇದೆ. ಜತೆಗೆ ಉಳಿದ ತಂಡಗಳ ಪ್ರದರ್ಶನವೂ ಆರ್‌ಸಿಬಿ ಪ್ಲೇಆಫ್ ಹಾದಿಯ ಮೇಲೆ ಪರಿಣಾಮ ಬೀರಲಿದೆ.

Continue Reading

ಕ್ರೀಡೆ

IPL 2024 Points Table: 3ನೇ ಗೆಲುವು ಸಾಧಿಸಿದ ಬಳಿಕ ಮುಂಬೈಗೆ ಅಂಕಪಟ್ಟಿಯಲ್ಲಿ ಎಷ್ಟನೇ ಸ್ಥಾನ?

IPL 2024 Points Table: ಮುಂಬೈ ಇಂಡಿಯನ್ಸ್​(Mumbai Indians) ತಂಡ ಗುರುವಾರ ರಾತ್ರಿ ನಡೆದ ಐಪಿಎಲ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್(Punjab Kings)​ ವಿರುದ್ಧ ರೋಚಕ 9 ರನ್​ಗಳ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ(IPL 2024 Points Table) ಪ್ರಗತಿ ಸಾಧಿಸಿ 7ನೇ ಸ್ಥಾನಕ್ಕೇರಿದೆ.

VISTARANEWS.COM


on

IPL 2024 Points Table
Koo

ಮುಲ್ಲಾನ್‌ಪುರ್‌: ಮಾಜಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​(Mumbai Indians) ತಂಡ ಗುರುವಾರ ರಾತ್ರಿ ನಡೆದ ಐಪಿಎಲ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್(Punjab Kings)​ ವಿರುದ್ಧ ರೋಚಕ 9 ರನ್​ಗಳ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ(IPL 2024 Points Table) ಪ್ರಗತಿ ಸಾಧಿಸಿದೆ. ಈ ಪಂದ್ಯಕ್ಕೂ ಮುನ್ನ 9ನೇ ಸ್ಥಾನದಲ್ಲಿದ್ದ ಮುಂಬೈ ಈ ಗೆಲುವಿನೊಂದಿಗೆ 7ನೇ ಸ್ಥಾನಕ್ಕೇರಿದೆ. ಸೋಲು ಕಂಡ ಪಂಜಾಬ್​ 9ನೇ ಸ್ಥಾನಕ್ಕೆ ಕುಸಿದಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​76112 (+0.677)
ಕೆಕೆಆರ್​​6428 (+1.399)
ಚೆನ್ನೈ ಸೂಪರ್​ ಕಿಂಗ್ಸ್​​6428 (+0.726)
ಹೈದರಾಬಾದ್​​6428(+0.502)
ಲಕ್ನೋ6336 (+0.038)
ಡೆಲ್ಲಿ ಕ್ಯಾಪಿಟಲ್ಸ್​​7346 (-0.074)
ಮುಂಬೈ​7346 (-0.133)
ಗುಜರಾತ್7346 (-1.303)
ಪಂಜಾಬ್​7254 (-0.251)
ಆರ್​ಸಿಬಿ7162 (-1.185)

ಪಂದ್ಯ ಗೆದ್ದ ಮುಂಬೈ


ಅಶುತೋಷ್​ ಶರ್ಮಾ (61 ರನ್​, 28 ಎಸೆತ, 2 ಫೋರ್​, 7 ಸಿಕ್ಸರ್​), ಶಶಾಂಕ್ ಸಿಂಗ್​ (25 ಎಸೆತ, 41 ರನ್​, 2 ಫೋರ್​, 3 ಸಿಕ್ಸರ್​ ಮಧ್ಯಮ ಕ್ರಮಾಂಕದಲ್ಲಿ ದಿಟ್ಟ ಹೋರಾಟ ನಡೆಸಿದ ಹೊರತಾಗಿಯೂ ಅಗ್ರ ಕ್ರಮಾಂಕದ ಬ್ಯಾಟರ್​ಗಳ ತೀವ್ರ ವೈಫಲ್ಯದ ಹಿನ್ನೆಲೆಯಲ್ಲಿ ಪಂಜಾಬ್ ಕಿಂಗ್ಸ್​ ತಂಡ ಐಪಿಎಲ್​ 2024ನೇ (IPL 2024) ಆವೃತ್ತಿಯಲ್ಲಿ ಮತ್ತೊಂದು ಸೋಲಿಗೆ ಒಳಗಾಯಿತು. ಮಹಾರಾಜಾ ಯಾದವೀಂದ್ರ ಸಿಂಗ್​ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಪಂಜಾಬ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಮುಂಬಯಿ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 192 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಂಜಾಬ್​ 19.1 ಓವರ್​ಗಳಲ್ಲಿ 183 ರನ್​ಗೆ ಆಲ್​ಔಟ್​ ಆಗಿ ಕೇವಲ 9 ರನ್​ ಅಂತರದಿಂದ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ IPL 2024 : ಪಂಜಾಬ್​ ತಂಡಕ್ಕೆ ವಿರೋಚಿತ 9 ರನ್ ಸೋಲು, ಜಯದ ಹಳಿಗೆ ಮರಳಿದ ಮುಂಬೈ

ಮೊದಲು ಬ್ಯಾಟ್ ಮಾಡಿದ ಮುಂಬಯಿ ಪರ ಸೂರ್ಯಕುಮಾರ್​ ಅರ್ಧ ಶತಕ (78 ರನ್​) ಬಾರಿಸಿದರು. ಆದರೆ ಅವರ ಸ್ಕೋರ್ ಹೆಚ್ಚು ವೇಗವಾಗಿರಲಿಲ್ಲ. ರೋಹಿತ್ ಶರ್ಮಾ 36 ರನ್ ಬಾರಿಸಿದರೆ ತಿಲಕ್ ವರ್ಮಾ 34 ರನ್​ ಗಳಿಸಿದರು. ಹಾರ್ದಿಕ್ ಪಾಂಡ್ಯ 10 ರನ್ ಗೆ ಸೀಮಿತಗೊಂಡರೆ ಟಿಮ್ ಡೇವಿಡ್​ 14 ರನ್ ಬಾರಿಸಿದರು. ಆರಂಭಿಕ ಆಟಗಾರ ಇಶಾನ್ ಕಿಶನ್​ 8 ರನ್ ಬಾರಿಸಿ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಎದುರಿಸಿದರು.

Continue Reading

ಪ್ರಮುಖ ಸುದ್ದಿ

IPL 2024 : ಪಂಜಾಬ್​ ತಂಡಕ್ಕೆ ವಿರೋಚಿತ 9 ರನ್ ಸೋಲು, ಜಯದ ಹಳಿಗೆ ಮರಳಿದ ಮುಂಬೈ

IPL 2024: ಟಾಸ್​ ಗೆದ್ದ ಪಂಜಾಬ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಮುಂಬಯಿ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 192 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಂಜಾಬ್​ 19.1 ಓವರ್​ಗಳಲ್ಲಿ 183 ರನ್​ಗೆ ಆಲ್​ಔಟ್​ ಆಗಿ ಸೋಲೊಪ್ಪಿಕೊಂಡಿತು.

VISTARANEWS.COM


on

IPL 2024
Koo

ಮಲ್ಲಾನ್​ಪುರ: ಅಶುತೋಷ್​ ಶರ್ಮಾ (61 ರನ್​, 28 ಎಸೆತ, 2 ಫೋರ್​, 7 ಸಿಕ್ಸರ್​), ಶಶಾಂಕ್ ಸಿಂಗ್​ (25 ಎಸೆತ, 41 ರನ್​, 2 ಫೋರ್​, 3 ಸಿಕ್ಸರ್​ ಮಧ್ಯಮ ಕ್ರಮಾಂಕದಲ್ಲಿ ದಿಟ್ಟ ಹೋರಾಟ ನಡೆಸಿದ ಹೊರತಾಗಿಯೂ ಅಗ್ರ ಕ್ರಮಾಂಕದ ಬ್ಯಾಟರ್​ಗಳ ತೀವ್ರ ವೈಫಲ್ಯದ ಹಿನ್ನೆಲೆಯಲ್ಲಿ ಪಂಜಾಬ್ ಕಿಂಗ್ಸ್​ ತಂಡ ಐಪಿಎಲ್​ 2024ನೇ (IPL 2024) ಆವೃತ್ತಿಯಲ್ಲಿ ಮತ್ತೊಂದು ಸೋಲಿಗೆ ಒಳಗಾಗಿದೆ. ಮುಂಬಯಿ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ 9 ರನ್​ಗಳ ವಿರೋಚಿತ ಸೋಲಿಗೆ ಒಳಗಾಗಿದೆ. ಪಂಜಾಬ್ ತಂಡಕ್ಕೆ ಇದು ಐದನೇ ಸೋಲಾಗಿದೆ. ಇದೇ ವೇಳೆ ಮುಂಬಯಿ ತಂಡ ಮತ್ತೆ ಗೆಲುವಿನ ಹಳಿಗೆ ಮರಳಿದೆ. ಆಡಿರುವ ಏಳು ಪಂದ್ಯಗಳಲ್ಲಿ ಮುಂಬಯಿಗೆ ದೊರೆತ ಮೂರನೇ ಗೆಲುವು ಇದು.

ಇಲ್ಲಿನ ಮಹಾರಾಜಾ ಯಾದವೀಂದ್ರ ಸಿಂಗ್​ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಪಂಜಾಬ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಮುಂಬಯಿ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 192 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಂಜಾಬ್​ 19.1 ಓವರ್​ಗಳಲ್ಲಿ 183 ರನ್​ಗೆ ಆಲ್​ಔಟ್​ ಆಗಿ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ: Preity Zinta : ರೋಹಿತ್​ ಶರ್ಮಾಗಾಗಿ ಪ್ರಾಣ ಪಣಕ್ಕಿಡಲು ಸಿದ್ಧ; ಪ್ರೀತಿ ಜಿಂಟಾ ಹೇಳಿಕೆ ಸಿಕ್ಕಾಪಟ್ಟೆ ವೈರಲ್​

ಮೊದಲು ಬ್ಯಾಟ್ ಮಾಡಿದ ಮುಂಬಯಿ ಪರ ಸೂರ್ಯಕುಮಾರ್​ ಅರ್ಧ ಶತಕ (78 ರನ್​) ಬಾರಿಸಿದರು. ಆದರೆ ಅವರ ಸ್ಕೋರ್ ಹೆಚ್ಚು ವೇಗವಾಗಿರಲಿಲ್ಲ. ರೋಹಿತ್ ಶರ್ಮಾ 36 ರನ್ ಬಾರಿಸಿದರೆ ತಿಲಕ್ ವರ್ಮಾ 34 ರನ್​ ಗಳಿಸಿದರು. ಹಾರ್ದಿಕ್ ಪಾಂಡ್ಯ 10 ರನ್ ಗೆ ಸೀಮಿತಗೊಂಡರೆ ಟಿಮ್ ಡೇವಿಡ್​ 14 ರನ್ ಬಾರಿಸಿದರು. ಆರಂಭಿಕ ಆಟಗಾರ ಇಶಾನ್ ಕಿಶನ್​ 8 ರನ್ ಬಾರಿಸಿ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಎದುರಿಸಿದರು.

ಅಶುತೋಷ್​ ಮಿಂಚಿನ ಬ್ಯಾಟಿಂಗ್

ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ಪಂಜಾಬ್ ತಂಡ ಆರಂಭ ಹೀನಾಯವಾಗಿತ್ತು. 14 ರನ್​ಗಳಿಗೆ ಪ್ರಮುಖ 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಕರ್ರನ್​ 6 ರನ್ ಬಾರಿಸಿದರೆ, ಪ್ರಭ್​ಸಿಮ್ರಾನ್ ಸಿಂಗ್ ಶೂನ್ಯಕ್ಕೆ ಔಟಾದರು. ರೀಲಿ ರೊಸ್ಸೊ ಹಾಗೂ ಲಿಯಾಮ್ ಲಿವಿಂಗ್​ಸ್ಟನ್​ ತಲಾ ಒಂದು ರನ್ ಬಾರಿಸಿ ಔಟಾದರು. ಹರ್ಪ್ರೀತ್ ಸಿಂಗ್​ 13 ರನ್​ಗೆ ಸೀಮಿತಗೊಂಡರು. ಈ ವೇಳೆ ಶಶಾಂಕ್ ಸಿಂಗ್ ವಿಕೆಟ್​ ಪತನವಾಗುವುದನ್ನು ತಪ್ಪಿಸಿ 41 ರನ್ ಬಾರಿಸಿದರು. ಆದರೆ ಸ್ಫೋಟಕ ಬ್ಯಾಟರ್​ ಜಿತೇಶ್ ಶರ್ಮಾ 9 ರನ್​ಗೆ ಸೀಮಿತಗೊಂಡರು.

77 ರನ್​ಗೆ 6 ವಿಕೆಟ್​ಕಳೆದುಕೊಂಡ ಪಂಜಾಬ್​ 100 ರನ್ ಒಳಗೆ ಆಲ್​ಔಟ್ ಆಗುವುದಾಗಿ ಭಾವಿಸಲಾಗಿತ್ತು. ಆದರೆ ಅಶುತೋಷ್​ ಸ್ಟೈಲಿಶ್​ ಬೌಂಡರಿ ಹಾಗೂ ಸಿಕ್ಸರ್​ಗಳ ಮೂಲಕ ಪಂದ್ಯದ ಗತಿಯನ್ನು ಬದಲಾಯಿಸಿದರು. ಪಂಜಾಬ್ ಗೆಲ್ಲುತ್ತದೆ ಎಂಬ ಹಂತಕ್ಕೆ ಹೋಯಿತು. ಈ ವೇಳೆ ಅಶುತೋಷ್​ ಔಟಾದರು. ಜತೆಗೆ ಹರ್ಪ್ರೀತ್ ಬ್ರಾರ್ ಕೂಡ ಔಟಾದರು. ಕೊನೆಯಲ್ಲಿ ರಬಾಡ ಗೆಲ್ಲಿಸುವರೆಂಬ ಆಶಾಭಾವ ಉಂಟಾಗಿತ್ತು. ಆದರೆ ಅವರು ರನ್ಔಟ್ ಆದರು.

ಮುಂಬಯಿ ಪರ ಬುಮ್ರಾ ಹಾಗೂ ಕೋಜಿ ತಲಾ 3 ವಿಕೆಟ್​ ಉರುಳಿಸಿದರು.

Continue Reading

ಕ್ರೀಡೆ

Preity Zinta : ರೋಹಿತ್​ ಶರ್ಮಾಗಾಗಿ ಪ್ರಾಣ ಪಣಕ್ಕಿಡಲು ಸಿದ್ಧ; ಪ್ರೀತಿ ಜಿಂಟಾ ಹೇಳಿಕೆ ಸಿಕ್ಕಾಪಟ್ಟೆ ವೈರಲ್​

Preity Zinta: ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಕ್ಕೂ ಮುನ್ನ ಮಾತನಾಡಿದ ಪ್ರೀತಿ ಜಿಂಟಾ, ಮುಂಬರುವ ಐಪಿಎಲ್ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ರೋಹಿತ್​ ಅವರನ್ನು ಬಿಡುಗಡೆ ಮಾಡಿದರೆ ಅವರನ್ನು ನಾಯಕನನ್ನಾಗಿ ಮಾಡಲು ತಮ್ಮ ಪ್ರಾಣವನ್ನು ಪಣಕ್ಕಿಡಲು ಸಿದ್ಧ ಎಂದು ಹೇಳಿದ್ದಾರೆ.

VISTARANEWS.COM


on

Preity Zinta
Koo

ಬೆಂಗಳೂರು: ಪಂಜಾಬ್ ಕಿಂಗ್ಸ್ ತಂಡದ ಮಾಲೀಕರಾದ ಪ್ರೀತಿ ಜಿಂಟಾ (Preity Zinta) ಅವರು ಐಪಿಎಲ್ 2024 (IPL 2024) ರಲ್ಲಿ ಸಂಪೂರ್ಣವಾಗಿ ಬ್ಯುಸಿಯಾಗಿದ್ದಾರೆ. ಅವರು ತಮ್ಮ ಪಂಜಾಬ್ ಕಿಂಗ್ಸ್ (Punjab Kings) ತಂಡವನ್ನು ಹುರಿದುಂಬಿಸಲೆಂದೇ ಸ್ಟೇಡಿಯಮ್​ಗೆ ಬರುತ್ತಿದ್ದಾರೆ. ಅಂತೆಯೇ ಗುರುವಾರ (ಏಪ್ರಿಲ್​ 18ರಂದು) ಕಾಯಂ ನಾಯಕ ಶಿಖರ್ ಧವನ್ ಇಲ್ಲದೆ ಮುಂಬೈ ಇಂಡಿಯನ್ಸ್ ಆಡುತ್ತಿರುವ ಪಂಜಾಬ್ ತಂಡಕ್ಕೆ ಪ್ರೋತ್ಸಾಹ ನೀಡಲು ಅವರು ಬಂದಿದ್ದರು. ಅಂತೆಯೇ ಅವರು ಪಂದ್ಯಕ್ಕೆ ಮೊದಲು ಮಾತನಾಡುತ್ತಾ ರೋಹಿತ್​ ಶರ್ಮಾ ಅವರನ್ನು ಪಡೆದುಕೊಳ್ಳುವುದಕ್ಕೆ ಜೀವನ ಪಣವಿಡುತ್ತೇನೆ ಎಂದು ಹೇಳಿದ್ದಾರೆ. ಈ ಮಾರು ವೈರಲ್​ ಆಗಿದೆ.

ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಕ್ಕೂ ಮುನ್ನ ಮಾತನಾಡಿದ ಪ್ರೀತಿ ಜಿಂಟಾ, ಮುಂಬರುವ ಐಪಿಎಲ್ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ರೋಹಿತ್​ ಅವರನ್ನು ಬಿಡುಗಡೆ ಮಾಡಿದರೆ ಅವರನ್ನು ನಾಯಕನನ್ನಾಗಿ ಮಾಡಲು ತಮ್ಮ ಪ್ರಾಣವನ್ನು ಪಣಕ್ಕಿಡಲು ಸಿದ್ಧ ಎಂದು ಹೇಳಿದ್ದಾರೆ.

“ರೋಹಿತ್ ಶರ್ಮಾ ಮೆಗಾ ಹರಾಜಿಗೆ ಬಂದರೆ ಅವರನ್ನು ಪಡೆಯಲು ನಾನು ನನ್ನ ಜೀವನವನ್ನು ಪಣಕ್ಕಿಡುತ್ತೇನೆ. ನಮ್ಮ ತಂಡದಲ್ಲಿ ಸ್ಥಿರತೆ ಮತ್ತು ಚಾಂಪಿಯನ್ ಮನಸ್ಥಿತಿಯನ್ನು ತರುವ ನಾಯಕನನ್ನು ಮಾತ್ರ ನಾವು ಕಳೆದುಕೊಳ್ಳುತ್ತಿದ್ದೇವೆ”ಎಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಸೋತ ನಂತರ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಪ್ರೀತಿ ಜಿಂಟಾ ಹೇಳಿದ್ದಾರೆ.

ಐಪಿಎಲ್ 2024 ಪಾಯಿಂಟ್ಸ್ ಟೇಬಲ್​ನ್ಲಲಿ 8 ನೇ ಸ್ಥಾನದಲ್ಲಿರುವ ಶಿಖರ್ ಧವನ್ ನೇತೃತ್ವದ ಪಂಜಾಬ್ ಕಿಂಗ್ಸ್ ಈ ಋತುವಿನಲ್ಲಿ ಕೆಟ್ಟ ಫಾರ್ಮ್​ನಿಂದ ಬಳಲುತ್ತಿದೆ.

ಇದನ್ನೂ ಓದಿ: IPL 2024 : ಮದುವೆ ಆಮಂತ್ರಣಕ್ಕೆ ಸಿಎಸ್​ಕೆ ಥೀಮ್​, ಯುವ ಜೋಡಿಯ ಅಭಿಮಾನಕ್ಕೆ ಮೆಚ್ಚುಗೆ

ಮತ್ತೊಂದು ಫ್ರಾಂಚೈಸಿ ರೋಹಿತ್ ಶರ್ಮಾ ಬಗ್ಗೆ ಆಸಕ್ತಿ ತೋರಿಸುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಐಪಿಎಲ್ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ಲಭ್ಯವಿರಬೇಕು ಎಂದು ಹಲವು ತಂಡಗಳು ಬಯಸಿವೆ. ಇದಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಕೂಡ ರೋಹಿತ್ ಶರ್ಮಾ ಅವರನ್ನು ತಮ್ಮ ತಂಡದಲ್ಲಿ ಹೊಂದುವ ಬಗ್ಗೆ ಮಾತನಾಡಿದ್ದರು.

Continue Reading
Advertisement
Kantara Movie Rishab Shetty And Pragathi Shetty Met Mohanlal
ಸಿನಿಮಾ3 mins ago

Kantara Movie: ‘ಕಾಂತಾರ 2’ ಸಿನಿಮಾದಲ್ಲಿ ಇರಲಿದ್ದಾರಾ ಮೋಹನ್​ಲಾಲ್?

Solution For Pimple
ಆರೋಗ್ಯ7 mins ago

Solution For Pimples: ಈ ಆಹಾರಗಳ ಸಹವಾಸ ಬಿಡಿ; ಮೊಡವೆಯನ್ನು ದೂರವಿಡಿ!

indian navy chief of naval staff dinesh tripathi
ಪ್ರಮುಖ ಸುದ್ದಿ16 mins ago

Indian Navy: ನೌಕಾಪಡೆ ಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ

IPL 2024
ಕ್ರೀಡೆ20 mins ago

IPL 2024: ಕೆಕೆಆರ್​ ವಿರುದ್ಧ ಹಸಿರು ಜೆರ್ಸಿಯಲ್ಲಿ ಆಡಲಿದೆ ಆರ್​ಸಿಬಿ; ಈ ಬಾರಿಯ ಉದ್ದೇಶವೇನು?

Masaba Gupta, Satyadeep Misra expecting 1st child
ಸಿನಿಮಾ27 mins ago

Masaba Gupta: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನೀನಾ ಗುಪ್ತಾ ಮಗಳು ಮಸಾಬಾ!

Modi in Karnataka on April 20 Massive rallies in Chikkaballapura and Bengaluru
Lok Sabha Election 202428 mins ago

Modi in Karnataka: ನಾಳೆ ರಾಜ್ಯಕ್ಕೆ ಮೋದಿ; ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಬೃಹತ್‌ ಸಮಾವೇಶ

IPL 2024 Points Table
ಕ್ರೀಡೆ46 mins ago

IPL 2024 Points Table: 3ನೇ ಗೆಲುವು ಸಾಧಿಸಿದ ಬಳಿಕ ಮುಂಬೈಗೆ ಅಂಕಪಟ್ಟಿಯಲ್ಲಿ ಎಷ್ಟನೇ ಸ್ಥಾನ?

open sump drowned
ಕ್ರೈಂ47 mins ago

Drowned: ನೀರಿನ ಸಂಪ್‌ನಲ್ಲಿ ಮುಳುಗಿ ತಾಯಿ- ಮಗು ಸಾವು, ಮುಚ್ಚಳ ಹಾಕದೆ ಬಿಟ್ಟಿದ್ದ ಮಾಲಿಕ

Benefits of Spinach Juice
ಆರೋಗ್ಯ1 hour ago

Benefits Of Spinach Juice: ದಟ್ಟ ಕೂದಲು ಬೇಕೆ? ಪಾಲಕ್‌ ಜ್ಯೂಸ್‌ ಕುಡಿಯಿರಿ

murder case gadag
ಕ್ರೈಂ1 hour ago

Murder Case: ನಗರಸಭೆ ಉಪಾಧ್ಯಕ್ಷೆಯ ಮಗ ಸೇರಿ 4 ಮಂದಿ ಮಲಗಿದಲ್ಲೇ ಕೊಚ್ಚಿ ಕೊಲೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ4 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ7 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ1 week ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

ಟ್ರೆಂಡಿಂಗ್‌