csk-vs-g-ipl-2023-playoff-match-ma-chidambaram-stadium-chennai IPL 2023 : ಕ್ವಾಲಿಫೈಯರ್​ 1ರಲ್ಲಿ ಗೆಲ್ಲುವವರು ಯಾರು? ಸಿಎಸ್​ಕೆ ಅಥವಾ ಗುಜರಾತ್​? - Vistara News

ಕ್ರಿಕೆಟ್

IPL 2023 : ಕ್ವಾಲಿಫೈಯರ್​ 1ರಲ್ಲಿ ಗೆಲ್ಲುವವರು ಯಾರು? ಸಿಎಸ್​ಕೆ ಅಥವಾ ಗುಜರಾತ್​?

ಸಿಸಿಎಸ್​ಕೆ ವಿರುದ್ಧ ತಮ್ಮ ಪ್ರಾಬಲ್ಯವನ್ನು ಮುಂದುವರಿಸಲು ನೋಡುತ್ತಿದ್ದರೆ, ಚೆನ್ನೈ ಫ್ರಾಂಚೈಸಿ ಗುಜರಾತ್​ ವಿರುದ್ಧ ತಮ್ಮ ಮೊದಲ ಗೆಲುವನ್ನು ದಾಖಲಿಸಲು ಎದುರು ನೋಡುತ್ತಿದೆ.

VISTARANEWS.COM


on

CSK vs GT Preview, Playing XI, Live Streaming Details & Updates
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚೆನ್ನೈ: ಐಪಿಎಲ್​ 16ನೇ ಆವೃತ್ತಿಯ (IPL 2023) ಪ್ಲೇಆಫ್ ಹಂತದ ಮೊದಲ ಕ್ವಾಲಿಫೈಯರ್​ ಪಂದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮೇ 23ರಂದು ನಡೆಯಲಿದೆ. ಈ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವ ಗುಜರಾತ್​ ಹಾಗೂ ಎರಡನೇ ಸ್ಥಾನ ಪಡೆದುಕೊಂಡಿರುವ ಚೆನ್ನೈ ಸೂಪರ್​ ಕಿಂಗ್ಸ್ ತಂಡ ಸೆಣಸಾಸಲಿದೆ. ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಕೊನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 77 ರನ್​ಗಳ ಭರ್ಜರಿ ವಿಜಯ ಕಂಡಿತ್ತು. ಲೀಗ್ ಹಂತದ ಉದ್ದಕ್ಕೂ ತಂಡದ ಎಲ್ಲ ಆಟಗಾರರು ಗೆಲುವಿಗಾಗಿ ಎಲ್ಲ ರೀತಿಯಲ್ಲಿ ನೆರವು ನೀಡಿದ್ದರು.

ಗುಜರಾತ್ ಟೈಟನ್ಸ್ ಹಿಂದಿನ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ತಂಡದ ಆರಂಭಿಕ ಬ್ಯಾಟರ್​ ಶುಭ್​ಮನ್​ ಗಿಲ್​ ಅದ್ಭುತ ಪ್ರದರ್ಶನ ನೀಡಿದ್ದು ಸತತ ಎರಡು ಶತಕಗಳನ್ನು ಸಿಡಿಸಿದ್ದಾರೆ. ಮೊದಲ ಶತಕ ಎಸ್​​​ಆರ್​ಎಚ್​ ವಿರುದ್ಧ ಎರಡನೇ ಶತಕ ಆರ್​ಸಿಬಿ ವಿರುದ್ಧ. ಮೊದಲ ಕ್ಯಾಲಿಫೈಯರ್​ನಲ್ಲಿ ಮುಖಾಮುಖಿಯಾಗುವ ಎರಡೂ ತಂಡಗಳು ಬಲಿಷ್ಠವಾಗಿರುವ ಕಾರಣ ಜಿದ್ದಾಜಿದ್ದಿನ ಸ್ಪರ್ಧೆಯನ್ನು ನಿರೀಕ್ಷಿಸಬಹುದು. ಅಲ್ಲದೆ, ಗುಜರಾತ್​ ತಂಡ ಚೆನ್ನೈ ವಿರುದ್ಧ ಕಳೆದ ಎರಡು ಆವೃತ್ತಿಗಳ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ.

ತಂಡಗಳ ಬಲವೇನು?

ಸಿಎಸ್​ಕೆ ತಂಡದ ಪರ ಋತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೇ ಜೋಡಿ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದೆ. ಡೆವೊನ್ ಕಾನ್ವೇ ಇದುವರೆಗಿನ 13 ಇನಿಂಗ್ಸ್​ಗಳಲ್ಲಿ 53.18 ಸರಾಸರಿಯಲ್ಲಿ 585 ರನ್ ಗಳಿಸಿದ್ದರೆ, ಋತುರಾಜ್ ಗಾಯಕ್ವಾಡ್ 42 ಸರಾಸರಿಯಲ್ಲಿ 504 ರನ್ ಗಳಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ತುಷಾರ್ ದೇಶಪಾಂಡೆ 14 ಪಂದ್ಯಗಳಲ್ಲಿ 20 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಮತ್ತು ಮಥೀಶಾ ಪತಿರಾಣಾ ಕ್ರಮವಾಗಿ 17 ಮತ್ತು 15 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಎಲ್ಲ ಆಟಗಾರರು ಸಿಎಸ್​ಕೆಯ ಬಲವಾಗಿದ್ದು, ಗೆಲುವಿನ ಅಭಿಯಾನ ಮುಂದುವರಿಸಲಿದೆ. ಅಲ್ಲದೆ, ಮೊದಲ ಬಾರಿಗೆ ಗುಜರಾತ್ ತಂಡವನ್ನು ಸೋಲಿಸುವ ಉತ್ಸಾಹದಲ್ಲಿದೆ.

ಗುಜರಾತ್ ತಂಡ ವಿಚಾರಕ್ಕೆ ಬಂದಾಗ ಗಿಲ್ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಆ ತಂಡದಲ್ಲಿ ಯಾರೂ ಕೂಡ ಒಟ್ಟು 300ಕ್ಕಿಂತ ಹೆಚ್ಚು ರನ್ ಗಳಿಸಿಲ್ಲ. ಆದರೆ, ಗಿಲ್ ಏಕಾಂಗಿಯಾಗಿ 14 ಪಂದ್ಯಗಳಲ್ಲಿ 56.67 ಸರಾಸರಿಯಲ್ಲಿ 680 ರನ್ ಗಳಿಸಿದ್ದಾರೆ. ಪ್ರಸ್ತುತ, ಐಪಿಎಲ್ 2023 ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್​​ಗಳ ಪಟ್ಟಿಯಲ್ಲಿ ಗಿಲ್​ ಎರಡನೇ ಸ್ಥಾನದಲ್ಲಿದ್ದಾರೆ ಹಾಗೂ ಆರೆಂಜ್ ಕ್ಯಾಪ್​​ಗೆ ಸ್ಪರ್ಧಿಯಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ ಮತ್ತು ರಶೀದ್ ಖಾನ್ ಇಬ್ಬರೂ ತಲಾ 28 ವಿಕೆಟ್​ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಪರ್ಪಲ್ ಕ್ಯಾಪ್ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಗುಜರಾತ್​ ತಂಡವೂ ಗೆಲುವಿನ ಆವೇಗವನ್ನು ಮುಂದುವರಿಸಲು ಎದುರು ನೋಡುತ್ತಿದೆ. ಸಿಎಸ್​ಕೆ ವಿರುದ್ಧ ನಾಲ್ಕನೇ ಗೆಲುವಿನ ಗುರಿಯನ್ನು ಹೊಂದಿದೆ.

ಪಿಚ್ ರಿಪೋರ್ಟ್

ಎಂ.ಎ.ಚಿದಂಬರಂ ಸ್ಟೇಡಿಯಂನ ಮೇಲ್ಮೈ ಪಂದ್ಯದಿಂದ ಪಂದ್ಯಕ್ಕೆ ನಿಧಾನಗೊಳ್ಳುತ್ತಿದೆ. ಟಾಸ್ ಗೆಲುವಿನಲ್ಲಿ ಪಾತ್ರ ವಹಿಸಲಿದೆ. ಇಲ್ಲಿ ಮೊದಲು ಬ್ಯಾಟಿಂಗ್ ಮಾಡುವುದು ಸೂಕ್ತ ಆಯ್ಕೆ. ಆದರೆ, ಗುಜರಾತ್​​ ತಂಡ ಬಲವಾದ ಬೌಲಿಂಗ್ ದಾಳಿಯನ್ನು ಹೊಂದಿರುವುದರಿಂದ ಯಾವುದೇ ಮೊತ್ತವನ್ನು ರಕ್ಷಿಸಲು ಸಾಧ್ಯವಿದೆ. 170ಕ್ಕಿಂತ ಹೆಚ್ಚಿನ ಮೊತ್ತ ಬಾರಿಸಿದರಷ್ಟೇ ಗೆಲುವಿನ ಅವಕಾಶ ಇರುತ್ತದೆ.

ಇತ್ತಂಡಗಳ ಮುಖಾಮುಖಿ

ಒಟ್ಟು ಪಂದ್ಯಗಳು- 03

ಗುಜರಾತ್​ ಗೆಲವು- 03

ಚೆನ್ನೈ ಗೆಲುವು- 01

ಸಂಭಾವ್ಯ ತಂಡಗಳು

ಚೆನ್ನೈ ಸೂಪರ್​ ಕಿಂಗ್ಸ್​ : ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಅಂಬಾಟಿ ರಾಯುಡು, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ ( ನಾಯಕ), ದೀಪಕ್ಹ ಚಾರ್, ತುಷಾರ್ ದೇಶಪಾಂಡೆ, ಮಹೀಶ್ ತೀಕ್ಷಣಾ.

ಇದನ್ನೂ ಓದಿ : IPL 2023 : ವಿರಾಟ್​ ಕೊಹ್ಲಿಗೆ ಗಾಯ, ಟೆಸ್ಟ್​​ ಚಾಂಪಿಯನ್​ಷಿಪ್​ ಮೊದಲೇ ಟೀಮ್​ ಇಂಡಿಯಾಗೆ ಆತಂಕ

ಗುಜರಾತ್​ ಟೈಟನ್ಸ್​: ಶುಬ್ಮನ್ ಗಿಲ್, ವೃದ್ಧಿಮಾನ್ ಸಹಾ (ವಿಕೆ), ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ (ಸಿ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ದಸುನ್ ಶನಕಾ, ಮೋಹಿತ್ ಶರ್ಮಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್.

ನೇರ ಪ್ರಸಾರದ ವಿವರಗಳು

ಪಂದ್ಯ ಸಮಯ: ಸಂಜೆ 07:30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್

ಲೈವ್ ಸ್ಟ್ರೀಮಿಂಗ್: ಜಿಯೋ ಸಿನೆಮಾ ಅಪ್ಲಿಕೇಶನ್ ಮತ್ತು ವೆಬ್​ಸೈಟ್​

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IND vs BNG: ಬಾಂಗ್ಲಾ ಟಿ20 ಸರಣಿಗೆ ಆಯ್ಕೆಯಾದ ಕನ್ನಡತಿ ಶ್ರೇಯಾಂಕಾ ಪಾಟೀಲ್

IND vs BNG: ಬೆನ್ನು ನೋವಿನ ಕಾರಣದಿಂದಾಗಿ ಜೆಮೀಮಾ ರೋಡ್ರಿಗಸ್​(Jemimah Rodrigues) ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಇತ್ತೀಚೆಗೆ ಭಾರತ ಆಡಿದ ಎಲ್ಲ ಸರಣಿಯಲ್ಲೂ ಜೆಮೀಮಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು.

VISTARANEWS.COM


on

IND vs BNG
Koo

ನವದೆಹಲಿ: ಇದೇ ತಿಂಗಳು ಭಾರತ ಮಹಿಳಾ ಕ್ರಿಕೆಟ್(IND vs BNG)​ ತಂಡ 5 ಪಂದ್ಯಗಳ ಟಿ20 ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಗಾಗಿ ಪ್ರಕಟಗೊಂಡ ತಂಡದಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್(Shreyanka Patil)​ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಮೊದಲ ಪಂದ್ಯ ಏಪ್ರಿಲ್​ 28ರಂದು ನಡೆಯಲಿದೆ.

ತಂಡವನ್ನು ಹರ್ಮನ್​ಪ್ರೀತ್​ ಕೌರ್​ ಮುನ್ನಡೆಸಲಿದ್ದಾರೆ. ಸ್ಮೃತಿ ಮಂಧನಾ ಉಪನಾಯಕಿಯಾಗಿದ್ದಾರೆ. ಇತ್ತೀಚೆಗೆ ಮುಕ್ತಾಯ ಕಂಡಿದ್ದ 2ನೇ ಆವೃತ್ತಿಯ ಡಬ್ಲ್ಯುಪಿಎಲ್​ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ ಆಶಾ ಸೋಭನಾ(Asha Sobhana), ಸಜನಾ ಸಜೀವನ್‌(Sajana Sajeevan) ಸೀನಿಯರ್​ ತಂಡದಲ್ಲಿ ಮೊದಲ ಕರೆ ಪಡೆದಿದ್ದಾರೆ. ಬೆನ್ನು ನೋವಿನ ಕಾರಣದಿಂದಾಗಿ ಜೆಮೀಮಾ ರೋಡ್ರಿಗಸ್​(Jemimah Rodrigues) ಸರಣಿಯಿಂದ ಹೊರಬಿದ್ದಿದ್ದಾರೆ. ಇತ್ತೀಚೆಗೆ ಭಾರತ ಆಡಿದ ಎಲ್ಲ ಸರಣಿಯಲ್ಲೂ ಜೆಮೀಮಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು.

ಭಾರತ ತಂಡ


ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಸ್ಮೃತಿ ಮಂಧನಾ, ಶಫಾಲಿ ವರ್ಮ, ಡಿ. ಹೇಮಲತಾ, ಸಜನಾ ಸಜೀವನ್‌, ರಿಚಾ ಘೋಷ್‌, ಯಾಸ್ತಿಕಾ ಭಾಟಿಯಾ, ರಾಧಾ ಯಾದವ್‌, ದೀಪ್ತಿ ಶರ್ಮ, ಪೂಜಾ ವಸ್ತ್ರಾಕರ್‌, ಅಮನ್‌ಜೋತ್‌ ಕೌರ್‌, ಶ್ರೇಯಾಂಕಾ ಪಾಟೀಲ್‌, ಸೈಕಾ ಇಶಾಖ್‌, ಆಶಾ ಸೋಭನಾ, ರೇಣುಕಾ ಸಿಂಗ್‌ ಠಾಕೂರ್‌, ಟಿತಾಸ್‌ ಸಾಧು.

ಸ್ಥಾನ ಪಡೆದ ಶ್ರೇಯಾಂಕ


21 ವರ್ಷದ ಶ್ರೇಯಾಂಕಾ ಪಾಟೀಲ್ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಆರ್‌ಸಿಬಿ ಮಹಿಳಾ ತಂಡಕ್ಕೆ ಆಯ್ಕೆಯಾದರು. ಇಲ್ಲಿ ತೋರಿದ ಪ್ರದರ್ಶನದಿಂದ ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿಯೂ ಆಡುವಂತೆ ಮಾಡಿತ್ತು. ಹಂತ ಹಂತವಾಗಿ ಬೆಳೆದ ಇವರು 2023ರಲ್ಲಿ 21 ವಷದೊಳಗಿನ ಮಹಿಳಾ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅವಕಾಶ ಪಡೆದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 2023ರ ಡಿಸೆಂಬರ್ 6ರಂದು ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಆಡುವ ಮೂಲಕ ಭಾರತ ಹಿರಿಯರ ಮಹಿಳಾ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಇದೀಗ ಬಾಂಗ್ಲಾ ಸರಣಿಗೂ ಆಯ್ಕೆಯಾಗಿದ್ದಾರೆ. ಇದುವರೆಗೆ ಭಾರತ ಪರ 2 ಏಕದಿನ ಮತ್ತು 6 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. 2 ಮಾದರಿಯ ಕ್ರಿಕೆಟ್​ನಲ್ಲಿ ಒಟ್ಟು 12 ವಿಕೆಟ್​ ಕಿತ್ತಿದ್ದಾರೆ.

ಇದನ್ನೂ ಓದಿ IPL 2024: ವಿಮಾನ ಚಲಾಯಿಸಿದ ಯಜುವೇಂದ್ರ ಚಹಲ್; ವಿಡಿಯೊ ವೈರಲ್​

ಸರಣಿಯ ವೇಳಾಪಟ್ಟಿ


ಮೊದಲ ಟಿ20 ಪಂದ್ಯ-ಏಪ್ರಿಲ್​ 28
.

ದ್ವಿತೀಯ ಟಿ20 ಪಂದ್ಯ-ಏಪ್ರಿಲ್​ 30.

ಮೂರನೇ ಟಿ20 ಪಂದ್ಯ-ಮೇ 2.

ನಾಲ್ಕನೇ ಟಿ20 ಪಂದ್ಯ- ಮೇ 6.

ಐದನೇ ಟಿ20 ಪಂದ್ಯ- ಮೇ 9.

Continue Reading

ಕ್ರೀಡೆ

Mohammed Shami: ‘ಕ್ರಿಕೆಟ್​ಗೆ ಮರಳುವ ಹಸಿವು ಹೆಚ್ಚಾಗಿದೆ’; ಚೇತರಿಕೆಯ ಅಪ್‌ಡೇಟ್‌ ನೀಡಿದ ಶಮಿ

Mohammed Shami: ಶಮಿ ತಮ್ಮ ಮೊನಚಾದ ಬೌಲಿಂಗ್​ ದಾಳಿಯ ಮೂಲಕ ವಿಶ್ವಕಪ್​ ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದರು. ಅವರ ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

VISTARANEWS.COM


on

mohammed shami
Koo

ಲಕ್ನೋ: ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್ ಶಮಿ(Mohammed Shami) ಅವರು ತಮ್ಮ ಕಾಲಿನ ಗಾಯದಿಂದ ಚೇತರಿಕೆ ಕಾಣುತ್ತಿದ್ದಾರೆ. 2 ತಿಂಗಳ ಹಿಂದೆ ಲಂಡನ್​ನಲ್ಲಿ ಶಮಿ ಪಾದದ ಶಸ್ತ್ರಚಿಕಿತ್ಸೆಗೆ(mohammed shami injury update) ಒಳಗಾಗಿದ್ದರು. ಇದೀಗ ಶೀಘ್ರ ಚೇತರಿಸಿಕೊಳ್ಳುತ್ತಿರುವ(Mohammed Shami injury update) ಫೋಟೊವನ್ನು ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡು ಮತ್ತೆ ಕ್ರಿಕೆಟ್​ ಅಂಗಳಕ್ಕೆ ಮರಳುವ ಹಸಿವು ಹೆಚ್ಚಾಗಿದೆ ಎಂದು ಬರೆದುಕೊಂಡಿದ್ದಾರೆ.

ಶಮಿ ಅವರು 2 ಸ್ಟಿಕ್​ ವಾಕರ್​ಗಳೊಂದಿಗೆ ಗಾರ್ಡನ್​ನಲ್ಲಿ ನಿಂತಿರುವ ಫೋಟೊವನ್ನು ಹಂಚಿಕೊಂಡು, ‘ಮತ್ತೆ ಟ್ರ್ಯಾಕ್‌ಗೆ ಮರಳುವ ಹಸಿದಿದೆ. ಈ ಹಾದಿ ಕಠಿಣವಾಗಿರಬಹುದು, ಆದರೆ ಇದನ್ನೇಲ್ಲ ಎದುರಿಸಿ ಶೀಘ್ರದಲ್ಲೇ ಕ್ರಿಕೆಟ್​ಗೆ ಮರಳುವ ವಿಶ್ವಾಸವಿದೆ’ ಎಂದು ಬರೆದುಕೊಂಡಿದ್ದಾರೆ.

ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ವೇಳೆ ಗಾಯಗೊಂಡಿದ್ದ ಶಮಿ, ಈ ಗಾಯವನ್ನು ಮರೆಮಾಚಿ ವಿಶ್ವಕಪ್​ನಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ತೋರಿದ್ದರು. ಈ ಟೂರ್ನಿ ಬಳಿಕ ಇದೇ ವರ್ಷದ ಫೆಬ್ರವರಿಯಲ್ಲಿ ಲಂಡನ್​ನಲ್ಲಿ ಎಡಗಾಲಿನ ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಅವರು 17ನೇ ಆವೃತ್ತಿಯ ಐಪಿಎಲ್(IPL 2024)ನಿಂದ ಹೊರಗುಳಿದಿದ್ದರು.

ಕೆಲವು ವಾರಗಳ ಹಿಂದೆ ಶಮಿ ತಮ್ಮ ಮನೆಯಲ್ಲಿ ಪಾದಕ್ಕೆ ಎಲೆಕ್ಟ್ರಿಕ್​ ಮಸಾಜ್​ ಮಾಡುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದರು. ಇದಿಗ ವಾಕ್​ ಸ್ಟಿಕ್​ನೊಂದಿಗೆ(ಊರುಗೋಲಿನ ಸಹಾಯದಿಂದ) ಇರುವ ಫೋಟೊವನ್ನು ಹಂಚಿಕೊಂಡು ಮತ್ತಷ್ಟು ಚೇತರಿಕೆ ಕಂಡಿದ್ದೇನೆ ಎನ್ನುವ ಅಪ್​ಡೇಟ್​ ನೀಡಿದ್ದಾರೆ.

ಇದನ್ನೂ ಓದಿ ನಾನು ಭಾರತೀಯ, ಮುಸ್ಲಿಂ ಎಂದು ಹೆಮ್ಮೆಪಡುತ್ತೇನೆ; ಮೊಹಮ್ಮದ್ ಶಮಿ

ಟಿ20 ವಿಶ್ವಕಪ್​ಗೆ ಅಲಭ್ಯ


ಶಮಿ ಅವರು ಜೂನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಟೂರ್ನಿಯಿಂದಲೂ ಹೊರಗುಳಿಯಲಿದ್ದಾರೆ ಎನ್ನಲಾಗಿದೆ. ಶಮಿ ಗಾಯದ ಬಗ್ಗೆ ಮಾಹಿತಿ ಕಳೆದ ವಾರ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಮಾಹಿತಿ ನೀಡಿದ್ದರು. ‘ಶಮಿ ಅವರಿಗೆ ಶಸ್ತ್ರಚಿಕಿತ್ಸೆ ಮುಗಿದಿದೆ. ಅವರು ಭಾರತಕ್ಕೆ ವಾಪಸಾಗಿದ್ದಾರೆ. ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಗೆ ಪುನರಾಗಮನ ಮಾಡುವ ನಿರೀಕ್ಷೆಯಿದೆ‘ ಹೇಳಿದ್ದರು. ಭಾರತ ತಂಡವು ಮುಂದಿನ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಎರಡು ಟೆಸ್ಟ್ ಮತ್ತು ಮೂರು ಟಿ20 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.

ವಿಶ್ವಕಪ್​ ಟೂರ್ನಿಯಲ್ಲಿ ಶಮಿ ಅವರು ತಮ್ಮ ಮೊನಚಾದ ಬೌಲಿಂಗ್​ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿದ್ದರು. ಅವರ ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮೊಹಮ್ಮದ್ ಶಮಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದರು. ಮೊಹಮ್ಮದ್ ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ.

Continue Reading

ಕ್ರೀಡೆ

IPL 2024: ವಿಮಾನ ಚಲಾಯಿಸಿದ ಯಜುವೇಂದ್ರ ಚಹಲ್; ವಿಡಿಯೊ ವೈರಲ್​

ಕಳೆದ ಗುಜರಾತ್(Gujarat Titans)​ ನಡುವಣ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಚಹಲ್​ ಅವರು ಐಪಿಎಲ್​ನಲ್ಲಿ 150 ಪಂದ್ಯಗಳನ್ನಾಡಿದ ಸಾಧನೆ ಮಾಡಿದ್ದರು. ಇದುವರೆಗೆ 151 ಐಪಿಎಲ್​ ಪಂದ್ಯಗಳನ್ನಾಡಿರುವ ಚಹಲ್​ 198 ವಿಕೆಟ್​ ಕಿತ್ತು ಐಪಿಎಲ್​ನಲ್ಲಿ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎಂದ ದಾಖಲೆ ಬರೆದಿದ್ದಾರೆ.

VISTARANEWS.COM


on

Koo

ಕೋಲ್ಕತ್ತಾ: ಟೀಮ್​ ಇಂಡಿಯಾದ ಆಟಗಾರ ಯಜುವೇಂದ್ರ ಚಹಲ್(Yuzvendra Chahal)​ ಅವರು ಮೈದಾನದಲ್ಲಿ ಆಗಾಗ ಚೇಷ್ಟೆ ಮಾಡುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುತ್ತದೆ. ಅಂಪೈರ್​, ಎದುರಾಳಿ ಆಟಗಾರನ್ನು ತಮ್ಮ ಕುಚೇಷ್ಟೆ(yuzvendra chahal funny videos) ಮೂಲಕ ನಗಿಸುತ್ತಿರುತ್ತಾರೆ. ಇದೀಗ(IPL 2024) ವಿಮಾನದಲ್ಲಿ ಪೈಲೆಟ್​ಗಳ ಜತೆ ಮಾಡಿದ ಚೇಷ್ಟೆಯೊಂದರ ವಿಡಿಯೊ ವೈರಲ್(viral video)​ ಆಗಿದೆ.

ಐಪಿಎಲ್​ನಲ್ಲಿ ಇಂದು ರಾಜಸ್ಥಾನ್(Rajasthan Royals) ತಂಡ ಕೆಕೆಆರ್​ ವಿರುದ್ಧ ಆಡಲಿಳಿದೆ. ಈ ಪಂದ್ಯ ಐತಿಹಾಸಿಕ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಈ ಪಂದ್ಯವನ್ನಾಡಲು ಆಟಗಾರರೊಂದಿಗೆ ಕೋಲ್ಕತ್ತಾಕ್ಕೆ ತೆರಳುವ ವೇಳೆ ಚಹಲ್​ ಅವರು ಪೈಲೆಟ್​ಗಳ ಕೊಠಡಿಗೆ ತೆರಳಿ ಅವರಿಗೆ ಚಮಕ್​ ನೀಡಿದ್ದಾರೆ. ಇಂದು ನನ್ನ ಇಬ್ಬರು ಸಹೋದರ ಪೈಲೆಟ್​ಗಳು ವಿಮಾನ ಚಲಾಯಿಸಲಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ ಪೈಲೆಟ್​ಗಳು ಕೂಡ ಯೋ ಯೋ ಕೈ ಬೆರಳಿನ ಮೂಲಕ ಚಿಯರ್​ ಅಪ್​ ಮಾಡಿದ್ದಾರೆ. ಈ ವಿಡಿಯೊವನ್ನು ರಾಜಸ್ಥಾನ್​ ರಾಯಲ್ಸ್​ ತನ್ನ ಅಧಿಕೃತ ಟ್ವಿಟರ್​ನಲ್ಲಿ ಹಂಚಿಕೊಂಡು ‘ಇದು ನಿಮ್ಮ ಕ್ಯಾಪ್ಟನ್ ಹಾಡುಗಾರಿಕೆ’ ಎಂದು ಬರೆದುಕೊಂಡು ಹಿಂದಿ ಸಿನೆಮಾದ ಹಾಡೊಂದನ್ನು ಹಾಕಿದೆ. ಜತೆಗೆ ಚಹಲ್​ ಅವರ ಮುಖದ ಚಿತ್ರವನ್ನು ಎಡಿಟ್​ ಮಾಡಿ ವಿಮಾನ ಚಲಾಯಿಸಿದಂತೆ ತೋರಿಸಿದೆ. ಈ ವಿಡಿಯೊ ವೈರಲ್​ ಆಗಿದೆ.

ಕಳೆದ ಆವೃತ್ತಿಯಲ್ಲಿ ಜೋ ರೂಟ್​ ಅವರ ಟ್ರಾಲಿ ಬ್ಯಾಗ್​ನಲ್ಲಿ ಕುಳಿತು ಜಾಲಿ ರೈಡ್​ ಮಾಡಿದ್ದರು. ಈ ವಿಡಿಯೊ ಕೂಡ ವೈರಲ್​ ಆಗಿತ್ತು. ಕಳೆದ ಗುಜರಾತ್(Gujarat Titans)​ ನಡುವಣ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಚಹಲ್​ ಅವರು ಐಪಿಎಲ್​ನಲ್ಲಿ 150 ಪಂದ್ಯಗಳನ್ನಾಡಿದ ಸಾಧನೆ ಮಾಡಿದ್ದರು. ಇದುವರೆಗೆ 151 ಐಪಿಎಲ್​ ಪಂದ್ಯಗಳನ್ನಾಡಿರುವ ಚಹಲ್​ 198 ವಿಕೆಟ್​ ಕಿತ್ತು ಐಪಿಎಲ್​ನಲ್ಲಿ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎಂದ ದಾಖಲೆ ಬರೆದಿದ್ದಾರೆ. ಇನ್ನೆರಡು ವಿಕೆಟ್​ ಕಿತ್ತರೆ 200 ವಿಕೆಟ್​ ಪೂರ್ತಿಗೊಳಿಸಲಿದ್ದಾರೆ. ಇಂದಿನ ಪಂದ್ಯದಲ್ಲಿ ಈ ಮೈಲಿಗಲ್ಲು ನಿರ್ಮಿಸಲು ಅವಕಾಶವಿದೆ.

ಇದನ್ನೂ ಓದಿ IPL 2024: ದಯವಿಟ್ಟು ಆರ್​ಸಿಬಿ ತಂಡವನ್ನು ಮಾರಿಬಿಡಿ; ಅಳಲು ತೋಡಿಕೊಂಡ ಟೆನಿಸ್​ ದಿಗ್ಗಜ

ಪ್ರಸಕ್ತ ಆವೃತ್ತಿಯಲ್ಲಿ ಉತ್ತಮ ಬೌಲಿಂಗ್​ ಪ್ರದರ್ಶನ ತೋರುತ್ತಿರುವ ಚಹಲ್​ಗೆ ಇದೇ ಜೂನ್​ನಲ್ಲಿ ನಡೆಎಯುವ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಆಡುವ ಅವಕಾಶ ಸಿಗಲಿದೆ ಎಂಬ ಮಾತು ಕೂಡ ಕೇಳಿ ಬಂದಿದೆ. ಚಹಲ್​ ಇದುವರೆಗೆ ಭಾರತ ಪರ 72 ಏಕದಿನ ಪಂದ್ಯಗಳಿಂದ 121 ವಿಕೆಟ್​, 80 ಟಿ20 ಆಡಿ 96 ವಿಕೆಟ್​ ಕಡೆವಿದ್ದಾರೆ. ಐಪಿಎಲ್​ನಲ್ಲಿ 195* ವಿಕೆಟ್​ ಪಡೆದಿದ್ದಾರೆ. ಇದುವರೆಗೂ ಟೆಸ್ಟ್​ ಕ್ರಿಕೆಟ್​ ಆಡಿಲ್ಲ.

ರಾಜಸ್ಥಾನ್​ ರಾಯಲ್ಸ್(RR vs KKR)​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders)​ ತಂಡಗಳು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಯಾರೇ ಗೆದ್ದರು ಅಗ್ರಸ್ಥಾನ ಪಡೆಯಲಿದ್ದಾರೆ. ಉಭಯ ತಂಡಗಳು ಕೂಡ ಬಲಿಷ್ಠವಾಗಿರುವ ಕಾರಣ ಈ ಪಂದ್ಯವನ್ನು ಹೈವೋಲ್ಟೇಜ್​ ಪಂದ್ಯ ಎಂದು ನಿರೀಕ್ಷೆ ಮಾಡಲಾಗಿದೆ. ರಾಜಸ್ಥಾನ(Rajasthan Royals) ಸದ್ಯ 6 ಪಂದ್ಯಗಳಲ್ಲಿ 5 ಗೆದ್ದಿದ್ದು ಅಗ್ರಸ್ಥಾನದಲ್ಲಿದೆ. ಕೋಲ್ಕತಾ 5ರಲ್ಲಿ 4 ಪಂದ್ಯಗಳಲ್ಲಿ ಜಯಿಸಿ ದ್ವಿತೀಯ ಸ್ಥಾನದಲ್ಲಿದೆ.

Continue Reading

ಕ್ರೀಡೆ

RR vs KKR: ಅಗ್ರಸ್ಥಾನಕ್ಕೆ ಇಂದು ಕೆಕೆಆರ್​-ರಾಜಸ್ಥಾನ್ ಮಧ್ಯೆ ಹೈವೋಲ್ಟೇಜ್ ಕದನ

RR vs KKR: ಉಭಯ ತಂಡಗಳು ಇದುವರೆಗೆ ಒಟ್ಟು 28 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ರಾಜಸ್ಥಾನ ರಾಯಲ್ಸ್​ 13 ಪಂದ್ಯ ಗೆದ್ದರೆ, ಕೋಲ್ಕತಾ ನೈಟ್​ ರೈಡರ್ಸ್​ 14 ಪಂದ್ಯ ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಕಳೆದ ಆವೃತ್ತಿಯಲ್ಲಿ ಒಂದೇ ಪಂದ್ಯ ಆಡಿ, ಈ ಪಂದ್ಯವನ್ನು ರಾಜಸ್ಥಾನ್​ 9 ವಿಕೆಟ್​ ಅಂತರದಿಂದ ಗೆದ್ದು ಬೀಗಿತ್ತು.

VISTARANEWS.COM


on

RR vs KKR
Koo

ಕೋಲ್ಕತ್ತಾ: ಈ ಬಾರಿಯ ಐಪಿಎಲ್‌ನಲ್ಲಿ(IPL 2024) ಸದ್ಯ ಅಗ್ರ 2 ಸ್ಥಾನಗಳನ್ನು ಪಡೆದಿರುವ ರಾಜಸ್ಥಾನ್​ ರಾಯಲ್ಸ್(RR vs KKR)​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders)​ ತಂಡಗಳು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಯಾರೇ ಗೆದ್ದರು ಅಗ್ರಸ್ಥಾನ ಪಡೆಯಲಿದ್ದಾರೆ. ಉಭಯ ತಂಡಗಳು ಕೂಡ ಬಲಿಷ್ಠವಾಗಿರುವ ಕಾರಣ ಈ ಪಂದ್ಯವನ್ನು ಹೈವೋಲ್ಟೇಜ್​ ಪಂದ್ಯ ಎಂದು ನಿರೀಕ್ಷೆ ಮಾಡಲಾಗಿದೆ. ರಾಜಸ್ಥಾನ(Rajasthan Royals) ಸದ್ಯ 6 ಪಂದ್ಯಗಳಲ್ಲಿ 5 ಗೆದ್ದಿದ್ದು ಅಗ್ರಸ್ಥಾನದಲ್ಲಿದೆ. ಕೋಲ್ಕತಾ 5ರಲ್ಲಿ 4 ಪಂದ್ಯಗಳಲ್ಲಿ ಜಯಿಸಿ ದ್ವಿತೀಯ ಸ್ಥಾನದಲ್ಲಿದೆ.

ಕೆಕೆಆರ್​ ತಂಡಕ್ಕೆ ದೊಡ್ಡ ಲಾಭವೆಂದರೆ ಸುನೀಲ್​ ನರೈನ್​ ಅವರ ಪ್ರಚಂಡ ಬ್ಯಾಟಿಂಗ್​ ಫಾರ್ಮ್ ಪಂದ್ಯದಿಂದ ಪಂದ್ಯಕ್ಕೆ ಅವರು ಸಿಡಿಯುತ್ತಲೇ ಇದ್ದಾರೆ. ಬೌಲರ್​ ಆಗಿರುವ ಅವರು ಆರಂಭಿಕಾಗಿ ಕಣಕ್ಕಿಳಿದು ಕಡಿಮೆ ಎಸೆತಗಳಿಂದ ದೊಡ್ಡ ಮೊತ್ತ ಪೇರಿಸುತ್ತಾರೆ. ಇದು ತಂಡಕ್ಕೆ ಬೋನಸ್​ ಆಗಿದೆ. ತಂಡಕ್ಕೆ ಹೆಚ್ಚುವರಿ ಬ್ಯಾಟರ್​ ಆಯ್ಕೆಯೂ ಸಿಕ್ಕಂತಾಗುತ್ತದೆ. 18 ವರ್ಷದ ಆಂಗ್ಕ್ರಿಶ್ ರಘುವಂಶಿ ಕೂಡ ಬಿರುಸಿನ ಬ್ಯಾಟಿಂಗ್​ ಮೂಲಕ ಗಮನಸೆಳೆದಿದ್ದರು. ಈ ಪಂದ್ಯದಲ್ಲೂ ತಂಡ ಇವರ ಮೇಲೆ ಹೆಚ್ಚಿನ ಬರವಸೆ ಇರಿಸಿದೆ. ರಸೆಲ್ ಅವರಂತೂ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ಉತ್ತಮ ಫಾರ್ಮ್​ನಲ್ಲಿದ್ದಾರೆ. ಫಿಲ್​ ಸಾಲ್ಟ್​​ ಫಾರ್ಮ್​ಗೆ ಮರಳಿರುವುದು ತಂಡಕ್ಕೆ ಇನ್ನೂ ಹೆಚ್ಚಿನ ಬಲ ಬಂದಂತಾಗಿದೆ. ಕಳೆದ ಲಕ್ನೋ ವಿರುದ್ಧ ಅರ್ಧಶತಕ ಬಾರಿಸಿ ಮಿಂಚಿದ್ದರು.

ಫಾರ್ಮ್​ ಕಳೆದುಕೊಂಡ ಜೈಸ್ವಾಲ್


ಟೀಮ್​ ಇಂಡಿಯಾದ ಭವಿಷ್ಯದ ಆಟಗಾರ ಎಂದೇ ಗುರುತಿಸಲ್ಪಟ್ಟಿದ್ದ ಯುವ ಬ್ಯಾಟರ್​ ಯಶಸ್ವಿ ಜೈಸ್ವಾಲ್​ ಈ ಬಾರಿ ಐಪಿಎಲ್​ನಲ್ಲಿ ಸಂಪೂರ್ಣ ಮಂಕಾಗಿದ್ದಾರೆ. ಆಡಿದ ಪ್ರತಿ ಪಂದ್ಯದಲ್ಲಿಯೂ ವೈಫಲ್ಯ ಕಂಡಿದ್ದಾರೆ. ಟಿ20 ವಿಶ್ವಕಪ್​ಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವಾಗ ಫಾರ್ಮ್​ ಕಳೆದುಕೊಂಡಿರುವುದು ಅವರಿಗೆ ಹಿನ್ನಡೆಯಾಗಿ ಪರಿಣಮಿಸಿದೆ. ಮುಂದಿನ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಮತ್ತೆ ವಿಫಲವಾದರೆ ಟಿ20 ವಿಶ್ವಕಪ್​ಗೆ ಆಯ್ಕೆಯಾವುದು ಅನುಮಾನವಾಗಿದೆ. ರಾಜಸ್ಥಾನ್(Rajasthan Royals) ತಂಡ ಕೂಡ ಬ್ಯಾಟಿಂಗ್​ ಮತ್ತು ಬೌಲಿಂಗ್​ ವಿಭಾಗದಲ್ಲಿ ಉತ್ತಮವಾಗಿದೆ. ಆದರೂ ಕೂಡ ಈ ತಂಡದ ಪ್ರದರ್ಶನದ ಮೇಲೆ ಹೆಚ್ಚು ನಂಬಿಕೆ ಇಡುವಂತಿಲ್ಲ. ಕಾರಣ ಪ್ರತಿ ಆವೃತ್ತಿಯಲ್ಲಿಯೂ ಆರಂಭಿಕ ಹಂತದಲ್ಲಿ ಸತತ ಗೆಲುವು ಸಾಧಿಸಿ ಆ ಬಳಿಕ ಸತತ ಸೋಲು ಕಂಡು ಪಾತಾಳಕ್ಕೆ ಕುಸಿದ ಹಲವು ನಿದರ್ಶನಗಳಿವೆ.

ಇದನ್ನೂ ಓದಿ IPL 2024: ಸ್ಟ್ರೈಕ್ ರೇಟ್​ ಮೂಲಕ ನೂತನ ದಾಖಲೆ ಬರೆದ ಅಬ್ದುಲ್​ ಸಮದ್

ಮುಖಾಮುಖಿ


ಉಭಯ ತಂಡಗಳು ಇದುವರೆಗೆ ಒಟ್ಟು 28 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ರಾಜಸ್ಥಾನ ರಾಯಲ್ಸ್​ 13 ಪಂದ್ಯ ಗೆದ್ದರೆ, ಕೋಲ್ಕತಾ ನೈಟ್​ ರೈಡರ್ಸ್​ 14 ಪಂದ್ಯ ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಕಳೆದ ಆವೃತ್ತಿಯಲ್ಲಿ ಒಂದೇ ಪಂದ್ಯ ಆಡಿ, ಈ ಪಂದ್ಯವನ್ನು ರಾಜಸ್ಥಾನ್​ 9 ವಿಕೆಟ್​ ಅಂತರದಿಂದ ಗೆದ್ದು ಬೀಗಿತ್ತು. ಈ ಸೋಲಿಗೆ ಕೆಕೆಆರ್​ ಈ ಬಾರಿ ತವರಿನಲ್ಲಿ ಸೇಡು ತೀರಿಸುವ ತವಕದಲ್ಲಿದೆ.

ಸಂಭಾವ್ಯ ಆಟಗಾರರ ಪಟ್ಟಿ


ರಾಜಸ್ಥಾನ್​: ಯಶಸ್ವಿ ಜೈಸ್ವಾಲ್‌, ಜೋಸ್ ಬಟ್ಲರ್‌, ಸಂಜು ಸ್ಯಾಮ್ಸನ್‌(ನಾಯಕ), ರಿಯಾನ್‌ ಪರಾಗ್, ಧೃವ್ ಜುರೆಲ್‌, ಶಿಮ್ರೊನ್ ಹೆಟ್ಮೇಯರ್‌, ರವಿಚಂದ್ರನ್ ಅಶ್ವಿನ್‌, ಕೇಶವ್‌ ಮಹರಾಜ್, ಟ್ರೆಂಟ್ ಬೌಲ್ಟ್‌, ಆವೇಶ್‌ ಖಾನ್, ಯುಜುವೇಂದ್ರ ಚಹಲ್‌.

ಕೋಲ್ಕತಾ: ಫಿಲ್ ಸಾಲ್ಟ್‌, ಸುನಿಲ್ ನರೈನ್‌, ವೆಂಕಟೇಶ್‌ ಅಯ್ಯರ್, ಶ್ರೇಯಸ್‌ ಅಯ್ಯರ್(ನಾಯಕ),ಅಂಗಕೃಷ್ ರಘುವಂಶಿ, ಆಂಡ್ರೆ ರಸೆಲ್‌, ರಮನ್‌ದೀಪ್‌ ಸಿಂಗ್, ಮಿಚೆಲ್ ಸ್ಟಾರ್ಕ್‌, ಹರ್ಷಿತ್ ರಾಣಾ, ವೈಭವ್‌ ಅರೋರ, ವರುಣ್‌ ಚಕ್ರವರ್ತಿ.

ಪಂದ್ಯ: ಸಂಜೆ 7.30ಕ್ಕೆ. ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಸಿನಿಮಾ.

Continue Reading
Advertisement
Lok Sabha Election 2024 Farmer farm set on fire in support of CN Manjunath
Lok Sabha Election 202431 mins ago

Lok Sabha Election 2024: ಡಾ. ಮಂಜುನಾಥ್‌ ಬೆಂಬಲಿಸಿದ ರೈತನ ಜಮೀನಿಗೆ ಬೆಂಕಿ; ಇದು ಕೈ ಕಾರ್ಯಕರ್ತರ ಕೃತ್ಯ ಎಂದ ಬಿಜೆಪಿ!

Actor Dwarakish
ಸಿನಿಮಾ36 mins ago

‌Actor Dwarakish: ಚಿತ್ರರಂಗ ಮಾತ್ರವಲ್ಲ, ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದ ದ್ವಾರಕೀಶ್!

Uttarakaanda Movie
ಸ್ಯಾಂಡಲ್ ವುಡ್42 mins ago

Uttarakaanda Movie: ಶಿವಣ್ಣ- ಧನಂಜಯ್‌ ಅಭಿನಯದ ʼಉತ್ತರಕಾಂಡʼ ಚಿತ್ರಕ್ಕೆ ಚೈತ್ರಾ ಆಚಾರ್‌ ಎಂಟ್ರಿ

IND vs BNG
ಕ್ರೀಡೆ1 hour ago

IND vs BNG: ಬಾಂಗ್ಲಾ ಟಿ20 ಸರಣಿಗೆ ಆಯ್ಕೆಯಾದ ಕನ್ನಡತಿ ಶ್ರೇಯಾಂಕಾ ಪಾಟೀಲ್

Aditya Srivastava
ಪ್ರಮುಖ ಸುದ್ದಿ1 hour ago

UPSC Results 2023: ಎಂಎನ್‌ಸಿ ಕೆಲಸ ಬಿಟ್ಟ ಆದಿತ್ಯಗೆ ಯುಪಿಎಸ್‌ಸಿ ಫಸ್ಟ್‌ ರ‍್ಯಾಂಕ್;‌ ಯಾರಿವರು?

Robbery Case In Bengaluru
ಬೆಂಗಳೂರು1 hour ago

Robbery case : ಎಎಸ್‌ಐ ಬೈಕ್‌ ಎಗರಿಸಿ ಹೆದ್ದಾರಿಯಲ್ಲಿ ರಾಬರಿ; ಖತರ್ನಾಕ್‌ ಗ್ಯಾಂಗ್‌ ಅರೆಸ್ಟ್‌

Arun Yogiraj
ಕಿರುತೆರೆ1 hour ago

Arun Yogiraj: ಕಿರುತೆರೆಗೆ ಕಾಲಿಟ್ಟ ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್‌; ಯಾವ ಕಾರ್ಯಕ್ರಮ?

UPSC Result 2024:
ಪ್ರಮುಖ ಸುದ್ದಿ2 hours ago

UPSC Result 2024: ಯುಪಿಎಸ್‌ಸಿ ಫಲಿತಾಂಶ ಪ್ರಕಟ; ಆದಿತ್ಯ ಶ್ರೀವಾಸ್ತವ ಪ್ರಥಮ ರ್‍ಯಾಂಕ್

mohammed shami
ಕ್ರೀಡೆ2 hours ago

Mohammed Shami: ‘ಕ್ರಿಕೆಟ್​ಗೆ ಮರಳುವ ಹಸಿವು ಹೆಚ್ಚಾಗಿದೆ’; ಚೇತರಿಕೆಯ ಅಪ್‌ಡೇಟ್‌ ನೀಡಿದ ಶಮಿ

lok sabha Election 2024 digital QR code voter slip
Lok Sabha Election 20242 hours ago

Lok Sabha Election 2024: ಬೆಂಗಳೂರಿನಲ್ಲಿ ದೊರೆಯಲಿದೆ ಕ್ಯುಆರ್‌ ಕೋಡ್ ಸಹಿತ ವೋಟರ್‌ ಸ್ಲಿಪ್‌:‌ ಏನಿದರ ಉಪಯೋಗ?

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ11 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20241 day ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ2 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ3 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ4 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ4 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ5 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20245 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌