WTC Final 2023: ಲಂಡನ್​ನಲ್ಲಿ ಕಠಿಣ ಫೀಲ್ಡಿಂಗ್​ ಅಭ್ಯಾಸ ನಡೆಸಿದ ಟೀಮ್​ ಇಂಡಿಯಾ; ವಿಡಿಯೊ ವೈರಲ್​ - Vistara News

ಕ್ರಿಕೆಟ್

WTC Final 2023: ಲಂಡನ್​ನಲ್ಲಿ ಕಠಿಣ ಫೀಲ್ಡಿಂಗ್​ ಅಭ್ಯಾಸ ನಡೆಸಿದ ಟೀಮ್​ ಇಂಡಿಯಾ; ವಿಡಿಯೊ ವೈರಲ್​

ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಪ್ರಶಸ್ತಿ ಸಮರ ಜೂನ್‌ 7 ರಿಂದ 11ರವರೆಗೆ ಲಂಡನ್​ನ ದಿ ಓವಲ್‌ ಮೈದಾನದಲ್ಲಿ ನಡೆಯಲಿದೆ.

VISTARANEWS.COM


on

Fun Drill
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಂಡನ್​: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈಗಾಗಲೇ ಭಾರತದ ಮೊದಲ ಬ್ಯಾಚ್​ ಲಂಡನ್​ ತಲುಪಿದ್ದು ಅಭ್ಯಾಸದಲ್ಲಿ ನಿರತವಾಗಿದೆ. ಸದ್ಯ ಓವಲ್​ ಮೈದಾನದಲ್ಲಿ ಆಟಗಾರು ಫೀಲ್ಡಿಂಗ್​ ಅಭ್ಯಾಸ ನಡೆಸುತ್ತಿರುವ ವಿಡಿಯೊವೊಂದು ಇದೀಗ ವೈರಲ್ ಆಗಿದೆ.

ಶಾರ್ದೂಲ್​ ಠಾಕೂರ್​, ಉಮೇಶ್​ ಯಾದವ್​, ಅಕ್ಷರ್​ ಪಟೇಲ್​ ಸೇರಿ ಕೆಲ ಸಿಬ್ಬಂದಿಗಳು ಕಠಿಣ ಫೀಲ್ಡಿಂಗ್​ ನಡೆಸುವ ವಿಡಿಯೊವನ್ನು ಬಿಸಿಸಿಐ ಅಧಿಕೃತ ಟ್ವಿಟರ್​ನಲ್ಲಿ ಹಂಚಿಕೊಂಡಿದೆ. ‘ನಿಮ್ಮ ಸ್ನೇಹಿತರ ಜತೆಗೆ ವೃತ್ತವೊಂದನ್ನು ರಚಿಸಿ ಈ ರೀತಿಯ ಡ್ರಿಲ್​ ಮಾಡಿ’ ಎಂದು ಬರೆದುಕೊಂಡಿದೆ. ಸದ್ಯ ವಿರಾಟ್​ ಕೊಹ್ಲಿ, ಮೊಹಮ್ಮದ್‌ ಸಿರಾಜ್‌, ಇತರ ಐಪಿಎಲ್‌ ತಂಡಗಳ ಆಟಗಾರರಾದ ಆರ್‌. ಅಶ್ವಿ‌ನ್‌, ಅಕ್ಷರ್‌ ಟೇಲ್‌, ಶಾರ್ದೂಲ್ ಠಾಕೂರ್‌, ಉಮೇಶ್‌ ಯಾದವ್‌, ಜೈದೇವ್‌ ಉನಾದ್ಕತ್‌ ಅವರು ಮೊದಲ ಬ್ಯಾಚ್​ನಲ್ಲಿ ಲಂಡನ್​ಗೆ ಆಗಮಿಸಿ ಅಭ್ಯಾಸ ನಡೆಸುತ್ತಿದ್ದಾರೆ. ಚೇತೇಶ್ವರ್​ ಪೂಜಾರ ಅವರು ಕೌಂಟಿ ಆಡುವ ಸಲುವಾಗಿ ಲಂಡನ್​ನಲ್ಲಿಯೇ ಇದ್ದ ಕಾರಣ ಅವರು ಎಲ್ಲರಿಗಿಂತ ಮೊದಲೆ ನೆಟ್ಸ್​​ನಲ್ಲಿ ಬ್ಯಾಟಿಂಗ್​ ಅಭ್ಯಾಸ ನಡೆಸುತ್ತಿರುವ ಫೋಟೊವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು.

ಅಂತಿಮ ಬ್ಯಾಚ್​ನಲ್ಲಿ ನಾಯಕ ರೋಹಿತ್‌ ಶರ್ಮ, ರವೀಂದ್ರ ಜಡೇಜ, ಇಶಾನ್‌ ಕಿಶನ್‌, ಶುಭಮನ್‌ ಗಿಲ್‌, ಮೊಹಮ್ಮದ್‌ ಶಮಿ, ಕೆ.ಎಸ್‌. ಭರತ್‌ ಮತ್ತು ಅಜಿಂಕ್ಯ ರಹಾನೆ ಐಪಿಎಲ್​ ಫೈನಲ್​ ಮುಗಿದ ತಕ್ಷಣವೇ ಲಂಡನ್​ಗೆ ವಿಮಾನ ಏರಲಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಈ ಪ್ರಶಸ್ತಿ ಸಮರ ಜೂನ್‌ 7 ರಿಂದ 11ರವರೆಗೆ ಲಂಡನ್​ನ ದಿ ಓವಲ್‌ ಮೈದಾನದಲ್ಲಿ ನಡೆಯಲಿದೆ.

ಐಪಿಎಲ್​ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ವಿರಾಟ್​ ಕೊಹ್ಲಿ ಮತ್ತು ಶುಭಮನ್​ ಗಿಲ್​ ಅವರ ಮೇಲೆ ಈ ಪಂದ್ಯದಲ್ಲಿಯೂ ಹೆಚ್ಚಿನ ನಿರೀಕ್ಷೆ ಇರಿಸಲಾಗಿದೆ. ಕಳೆದ ಬಾರಿ ಕೈತಪ್ಪಿದ ಟ್ರೋಫಿ ಈ ಬಾರಿ ವಶಪಡಿಸಿಕೊಳ್ಳಬೇಕಿದೆ. ಈ ಮೂಲಕ ಹಲವು ವರ್ಷಗಳ ಐಸಿಸಿ ಟ್ರೋಫಿಯ ಕನಸು ನನಸಾಗಬೇಕಿದೆ.

ಇದನ್ನೂ ಓದಿ IPL 2023: ಚೆನ್ನೈ,ಗುಜರಾತ್​ ಫೈನಲ್​ ಪಂದ್ಯದ ಪಿಚ್​ ರಿಪೋರ್ಟ್​, ಹವಾಮಾನ ವರದಿಯ ಸಂಪೂರ್ಣ ಮಾಹಿತಿ

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್ ಭರತ್ (ವಿಕೆಟ್​ ಕೀಪರ್​), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯ್​ದೇವ್​ ಉನಾದ್ಕತ್, ಇಶಾನ್ ಕಿಶನ್ (ವಿಕೆಟ್​ ಕೀಪರ್​). ಸ್ಟ್ಯಾಂಡ್‌ ಬೈ ಆಟಗಾರರು: ಋತುರಾಜ್ ಗಾಯಕ್ವಾಡ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Suresh Raina : ಧೋನಿ ನೇತೃತ್ವದಲ್ಲಿ ವಿಶ್ವ ಕಪ್ ಗೆದ್ದಿರುವುದು ಪೂರ್ವ ನಿಯೋಜಿತ; ಸ್ಫೋಟಕ ಮಾಹಿತಿ ಬಹಿರಂಗ ಮಾಡಿದ ರೈನಾ!

Suresh Raina: ಆ ವಿಶ್ವಕಪ್ ಆವೃತ್ತಿಯಲ್ಲಿ ಸುರೇಶ್ ಟೀಮ್ ಇಂಡಿಯಾ ಪರ ಹೆಚ್ಚು ಪಂದ್ಯಗಳನ್ನು ಆಡಿರಲಿಲ್ಲ. ಆದರೆ ಅವರು ತಂಡದ ಭಾಗವಾಗಿದ್ದರು. ವಿಶ್ವಕಪ್ ಗೆಲುವಿನ ವೇಳೆಯಲ್ಲಿ ಘಟಿಸಿರು ಪ್ರತಿಯೊಂದು ವಿಷಯವನ್ನೂ ತಿಳಿದಿದ್ದರು. ರೈನಾ ಕಡಿಮೆ ಪಂದ್ಯಗಳನ್ನು ಆಡಿರಬಹುದು. ಆದರೆ ಆಡಿದ ಪಂದ್ಯಗಳು ಬಹಳ ಮುಖ್ಯವಾಗಿದ್ದವು.

VISTARANEWS.COM


on

Suresh Raina
Koo

ನವದೆಹಲಿ: ಎಂಎಸ್ ಧೋನಿ (MS Dhoni) ನಾಯಕತ್ವದಲ್ಲಿ ಭಾರತ ತಂಡ 2011ರ ಏಕ ದಿನ ವಿಶ್ವ ಕಪ್​ (2011 ODI World Cup) ಗೆದ್ದಿದೆ. ಆ ಟೂರ್ನಿಯಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಸುರೇಶ್ ರೈನಾ (Suresh Raina) ಕೂಡಾ ಭಾರತ ತಂಡದ ಭಾಗವಾಗಿದ್ದರು. ಅವರೀಗ ವಿಶ್ವ ಕಪ್​ ಗೆಲುವಿನ ಕುರಿತು ಸ್ಫೋಟಕ ಮಾಹಿತಿ ಬಹಿರಂಗ ಮಾಡಿದ್ದು ಅದು ಪೂರ್ವ ನಿಯೋಜಿತ ಗೆಲುವು ಎಂದು ಹೇಳಿದ್ದಾರೆ. ಶ್ರೀಲಂಕಾ ವಿರುದ್ಧದ ಫೈನಲ್​​ ಫೈನಲ್ ಗೆಲುವು ಸೇರಿದಂತೆ ಇಡೀ ಪಂದ್ಯಾವಳಿಯುನ್ನು ಮೊದಲೇ ಪ್ಲ್ಯಾನ್ ಮಾಡಲಾಗಿತ್ತು ಎಂದು ಎಂದು ರೈನಾ ಇತ್ತೀಚೆಗೆ ಲಾಲಾಂಟಾಪ್ ಸಂದರ್ಶನದಲ್ಲಿ ಹೇಳಿದ್ದಾರೆ. ಮಾಜಿ ಎಡಗೈ ಬ್ಯಾಟರ್​ ಆ ಸಂದರ್ಶನದಲ್ಲಿ ಇನ್ನಷ್ಟು ಆಸಕ್ತಿದಾಯಕ ಬಹಿರಂಗಪಡಿಸಿದ್ದಾರೆ. ಅದರಲ್ಲಿ ಗಮನ ಸೆಳೆದಿರುವುದು ವಿಶ್ವ ಕಪ್ ಗೆಲುವು

ಆ ವಿಶ್ವಕಪ್ ಆವೃತ್ತಿಯಲ್ಲಿ ಸುರೇಶ್ ಟೀಮ್ ಇಂಡಿಯಾ ಪರ ಹೆಚ್ಚು ಪಂದ್ಯಗಳನ್ನು ಆಡಿರಲಿಲ್ಲ. ಆದರೆ ಅವರು ತಂಡದ ಭಾಗವಾಗಿದ್ದರು. ವಿಶ್ವಕಪ್ ಗೆಲುವಿನ ವೇಳೆಯಲ್ಲಿ ಘಟಿಸಿರು ಪ್ರತಿಯೊಂದು ವಿಷಯವನ್ನೂ ತಿಳಿದಿದ್ದರು. ರೈನಾ ಕಡಿಮೆ ಪಂದ್ಯಗಳನ್ನು ಆಡಿರಬಹುದು. ಆದರೆ ಆಡಿದ ಪಂದ್ಯಗಳು ಬಹಳ ಮುಖ್ಯವಾಗಿದ್ದವು. 50 ಓವರ್​ಗಳ ವಿಶ್ವಕಪ್​ನಲ್ಲಿ ಅವರು ವೆಸ್ಟ್ ಇಂಡೀಸ್ ವಿರುದ್ಧ ಚೆನ್ನೈನಲ್ಲಿ ಪಾದಾರ್ಪಣೆ ಮಾಡಿದ್ದರು.

ರೈನಾ ಚೊಚ್ಚಲ ವಿಶ್ವಕಪ್ ಆವೃತ್ತಿ

ಅಹ್ಮದಾಬಾದ್​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್​​ನ 2 ನೇ ಕ್ವಾರ್ಟರ್ ಫೈನಲ್​​ನಲ್ಲಿ ಸುರೇಶ್ ರೈನಾ ಎರಡನೇ ಬಾರಿಗೆ ಕಾಣಿಸಿಕೊಂಡಿದ್ದರು ಅಲ್ಲಿ ಭಾರತವು ಹಾಲಿ ಚಾಂಪಿಯನ್​ಗಳನ್ನು ಸೋಲಿಸಿತು. ನಂತರ ಅವರು ಮೊಹಾಲಿಯಲ್ಲಿ ಪಾಕಿಸ್ತಾನ ವಿರುದ್ಧ ಸೆಮಿಫೈನಲ್​​ನಲ್ಲಿ ಆಡಿದರು. ಅವರ 4ನೇ ಪಂದ್ಯವು ಮುಂಬೈನಲ್ಲಿ ನಡೆದ ಫೈನಲ್ ಆಗಿತ್ತು. ಅಲ್ಲಿ ಭಾರತೀಯರು ಶ್ರೀಲಂಕಾವನ್ನು 6 ವಿಕೆಟ್​ಗಳಿಂದ ಸೋಲಿಸಿ 1983ರ ನಂತರ ಮೊದಲ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿದರು.

ಗೆಲವು ಹೇಗೆ ಪೂರ್ವ ನಿಯೋಜಿತ ಎಂಬ ಸುರೇಶ್ ರೈನಾ ವಿವರಣೆ ಹೀಗಿದೆ

ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರನ್ನು ಬೇಗ ಔಟ್ ಆದ ತಕ್ಷಣ ಡ್ರೆಸ್ಸಿಂಗ್ ಕೋಣೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು ಎಂಬುದನ್ನು ಸುರೇಶ್ ರೈನಾ ಮೊದಲು ಒಪ್ಪಿಕೊಂಡಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ 3 ನೇ ವಿಕೆಟ್​​ಗೆ ಉತ್ತಮ ಜೊತೆಯಾಟ ನೀಡಿದಾಗ ಭರವಸೆಗಳು ಉಂಟಾದವು. ಕೊಹ್ಲಿ ನಿರ್ಗಮನದ ನಂತರ ಎಂಎಸ್ ಧೋನಿ ತಮ್ಮ ಪ್ರಧಾನ ಫಾರ್ಮ್​ನಲ್ಲಿದ್ದ ಯುವರಾಜ್ ಸಿಂಗ್ ಬದಲಿಗೆ ಬ್ಯಾಟಿಂಗ್ ಮಾಡಲು ಹೊರನಡೆದಿದ್ದು ಅಚ್ಚರಿ ರೈನಾ ನೆನಪಿಸಿಕೊಂಡರು.

ಇದನ್ನೂ ಓದಿ: Virat Kohli : ವಿರಾಟ್ ಕೊಹ್ಲಿಯ 50ನೇ ಏಕದಿನ ಕ್ರಿಕೆಟ್​ ಶತಕಕ್ಕೆ ಅಂತಾರಾಷ್ಟ್ರೀಯ ಗೌರವ

ಮುರಳೀಧರನ್ ಅವರ ಸ್ಪಿನ್ ದಾಳಿಯನ್ನು ನಿಭಾಯಿಸಲು ಯೋಜಿಸಿದ ಧೋನಿ, ಎಡಗೈ ಮತ್ತು ಬಲಗೈ ಸಂಯೋಜನೆಯನ್ನು ಬಯಸಿದ್ದರು. ಅದಕ್ಕಾಗಿ ಯುವರಾಜ್ ಅವರಿಗಿಂತ ಮೊದಲು ಧೋನಿ ಬ್ಯಾಟಿಂಗ್ ಮಾಡಲು ಮುಂದಾದರು ಎಂದು ಸುರೇಶ್ ರೈನಾ ಹೇಳಿದ್ದಾರೆ. ಮ್ಯಾನ್​ ಆಫ್​​​ ದಿ ಟೂರ್ನಮೆಂಟ್​ ಪ್ರಶಸ್ತಿ ಪಡೆದ ಯುವರಾಜ್ ಅವರಿಗಿಂತ ಮುಂದೆ ಹೋಗುವ ಧೋನಿಯ ನಿರ್ಧಾರವು ಮಾಸ್ಟರ್ ಸ್ಟ್ರೋಕ್ ಆಗಿತ್ತು. ಇವೆಲ್ಲವೂ ಪೂರ್ವ ನಿಯೋಜಿತ ಎಂದರು. ಅಂದ ಹಾಗೆ ಈ ನಿಯೋಜನೆಯನ್ನು ಮಾಡಿದ್ದು ಯಾರು ಎಂದು ಕೇಳಿದ ಪ್ರಶ್ನೆಗೆ ‘ಮೇಲಿರುವ ಭಗವಂತ’ ಎಂದು ಉತ್ತರಿಸಿದ್ದಾರೆ.

“ಮೊದಲ ಎರಡು ವಿಕೆಟ್​ಗಳು ಬಿದ್ದ ನಂತರ ಡ್ರೆಸ್ಸಿಂಗ್ ರೂಮ್​​ನಲ್ಲಿ ಮೌನವಿತ್ತು. ಆದರೆ ಗೌತಮ್ ಗಂಭೀರ್​ ಮತ್ತು ವಿರಾಟ್ ನಡುವಿನ ಪಾಲುದಾರಿಕೆ (ಪಂದ್ಯವನ್ನು ಬದಲಾಯಿಸಿತು). ವಿರಾಟ್ ವಿಕೆಟ್ ಬಿದ್ದಾಗ ನಾನು ಡ್ರೆಸ್ಸಿಂಗ್ ರೂಮ್​ನಲ್ಲಿದ್ದೆ. ಧೋನಿ ಭಾಯ್ ಬ್ಯಾಟಿಂಗ್ ಮಾಡಲು ಹೊರಗೆ ಹೊರಟರು. ನಾನು ಇದ್ದಕ್ಕಿದ್ದಂತೆ ಏನಾಯಿತು ಎಂದು ನೋಡಿದಾಗ ನಾನು ಹಾಗೆ ಭಾವಿಸಿದೆ”ಎಂದು ಸುರೇಶ್ ರೈನಾ ಹೇಳಿದ್ದಾರೆ.

“ಧೋನಿ ಭಾಯ್ ತೆಗೆದುಕೊಂಡ ಎಲ್ಲಾ ನಿರ್ಧಾರಗಳು ಮಾಸ್ಟರ್ ಸ್ಟ್ರೋಕ್​ಗಳಾಗಿದ್ದವು. ಏಕೆಂದರೆ ಆ ಸಮಯದಲ್ಲಿ ಸಿಎಸ್​ಕೆ ಪರ ಆಡುತ್ತಿದ್ದ ಮುರಳೀಧರನ್ ಎದುರಾಳಿ ತಂಡದಲ್ಲಿದೆ. ಆದ್ದರಿಂದ ಯುವಿ ಪ್ರಧಾನ ಫಾರ್ಮ್​ನಲ್ಲಿದ್ದರೂ ಅವರು ಎಡ-ಬಲ ಸಂಯೋಜನೆಯನ್ನು ಹೊಂದಲು ಬಯಸಿದರು ಎಂದು ಹೇಳಿದ್ದಾರೆ.

ಇಡಿ ಟೂರ್ನಿಯಲ್ಲಿ ಕಾಲಕಾಲಕ್ಕೆ ಬದಲಾವಣೆ ಮಾಡಲಾಗಿದೆ. ಆಟಗಾರರನ್ನು ಬಳಸಿಕೊಳ್ಳಲಾಗಿದೆ. ಆದ್ದರಿಂದ ವಿಶ್ವಕಪ್ ಸ್ಕ್ರಿಪ್ಟ್ ಮಾಡಲಾಗಿದೆ ಎಂದು ನನಗೆ ಅನಿಸಿತು. ಏನಾಗುತ್ತಿದೆಯೋ ಅದು ಖಂಡಿತವಾಗಿಯೂ ಸಂಭವಿಸುತ್ತದೆ ಮತ್ತು ಅದನ್ನು ಮೇಲಿನ ಭಗವಂತ ಬರೆದಿದ್ದಾನೆ”ಎಂದು ರೈನಾ ಮುಕ್ತಾಯಗೊಳಿಸಿದರು.

Continue Reading

ಪ್ರಮುಖ ಸುದ್ದಿ

Virat Kohli : ವಿರಾಟ್ ಕೊಹ್ಲಿಯ 50ನೇ ಏಕದಿನ ಕ್ರಿಕೆಟ್​ ಶತಕಕ್ಕೆ ಅಂತಾರಾಷ್ಟ್ರೀಯ ಗೌರವ

Virat Kohli : ಈ ಮನ್ನಣೆ ನಿಸ್ಸಂದೇಹವಾಗಿ ಅರ್ಹವಾಗಿದೆ. ಏಕೆಂದರೆ ಮುಂಬೈನ ಕ್ರಿಕೆಟ್​ ಪ್ರೇಕ್ಷಕರು ಕೊಹ್ಲಿ ಇತಿಹಾಸವನ್ನು ನಿರ್ಮಿಸುವುದಕ್ಕೆ ಸಾಕ್ಷಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ದಾಖಲೆಯ ಶತಕ ಬಾರಿಸುವ ಮೂಲಕ ತಮ್ಮ 35 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕೊಹ್ಲಿ, ವಿಶ್ವಕಪ್​ನ ಮೊದಲ ಸೆಮಿಫೈನಲ್​​ನಲ್ಲಿ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದರು.

VISTARANEWS.COM


on

Virat kohli
Koo

ಬೆಂಗಳೂರು: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಸೆಮಿಫೈನಲ್​ನಲ್ಲಿ ಪಂದ್ಯದಲ್ಲಿ ಭಾರತೀಯ ಬ್ಯಾಟರ್​ ವಿರಾಟ್ ಕೊಹ್ಲಿ (Virat Kohli) ತಮ್ಮ 50 ನೇ ಏಕದಿನ ಶತಕವನ್ನು ಗಳಿಸಿದ್ದರು. ಈ ಮೂಲಕ ಅವರು ಸಚಿನ್ ತೆಂಡೂಲ್ಕರ್​ ಅವರ 49 ಏಕ ದಿನ ಶತಕಗಳ ಸಾಧನೆಯನ್ನು ಮುರಿದಿದ್ದರು. ಹೀಗಾಗಿ ಅದು ಕ್ರೀಡಾ ಇತಿಹಾಸದಲ್ಲಿ ಚಾರಿತ್ರಿಕ ಘಟನೆಯಾಗಿದೆ. ಅವರು ಶತಕ ಬಾರಿಸಿದ ಬಳಿಕ ದೇಶ ವಿದೇಶಗಳ ಅಥ್ಲೀಟ್​ಗಳಿಂದ ಭಾರೀ ಮೆಚ್ಚುಗೆ ಗಳಿಸಿದ್ದಾರೆ. ಇದೀಗ ಅವರ ಆ ಅವಿಸ್ಮರಣೀಯ ಶತಕಕ್ಕೆ ಅಂತಾರಾಷ್ಟ್ರೀಯ ಗೌರವವೊಂದು ದೊರಕಿದೆ ಎಂಬುದಾಗಿ ವರದಿಯಾಗಿದೆ. ಕೊಹ್ಲಿಯ ಅಭಿಮಾನಿ ಎಂಬ ಹೆಸರಲ್ಲಿ ಸೃಷ್ಟಿ ಮಾಡಿರುವ ಎಕ್ಸ್​ ಖಾತೆಯಲ್ಲಿ ಈ ಮಾಹಿತಿಹಂಚಿಕೊಳ್ಳಲಾಗಿದೆ.

ಸ್ಪೇನ್ ನ ಮ್ಯಾಡ್ರಿಡ್ ನ ಪಲಾಸಿಯೊ ಡಿ ಸಿಬೆಲೆಸ್ ನಲ್ಲಿ ಸೋಮವಾರ (ಏಪ್ರಿಲ್ 22) ನಡೆದ ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್ ನಲ್ಲಿ ಕೊಹ್ಲಿಯ ಈ ಅಸಾಧಾರಣ ಸಾಧನೆಯನ್ನು ಉನ್ನತ ಕ್ರೀಡಾ ಕ್ಷಣಗಳಲ್ಲಿ ಒಂದಾಗಿ ಗೌರವಿಸಲಾಗಿದೆ ಎಂದು ಎಕ್ಸ್​ನಲ್ಲಿ ಬರೆಯಲಾಗಿದೆ.

ಈ ಮನ್ನಣೆ ನಿಸ್ಸಂದೇಹವಾಗಿ ಅರ್ಹವಾಗಿದೆ. ಏಕೆಂದರೆ ಮುಂಬೈನ ಕ್ರಿಕೆಟ್​ ಪ್ರೇಕ್ಷಕರು ಕೊಹ್ಲಿ ಇತಿಹಾಸವನ್ನು ನಿರ್ಮಿಸುವುದಕ್ಕೆ ಸಾಕ್ಷಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ದಾಖಲೆಯ ಶತಕ ಬಾರಿಸುವ ಮೂಲಕ ತಮ್ಮ 35 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕೊಹ್ಲಿ, ವಿಶ್ವಕಪ್​ನ ಮೊದಲ ಸೆಮಿಫೈನಲ್​​ನಲ್ಲಿ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದರು.

ಸಚಿನ್​ ದಾಖಲೆ ಮುರಿದ ಕೊಹ್ಲಿ

ಎರಡು ದಶಕಗಳ ಕಾಲ ರಾಷ್ಟ್ರದ ಭರವಸೆಗಳನ್ನು ಹೊತ್ತ ಬ್ಯಾಟಿಂಗ್ ದಂತಕಥೆ ಸಚಿನ್ ಅವರ ಹೆಜ್ಜೆಗಳನ್ನು ಅನುಸರಿಸಿ, ಸಚಿನ್ ತೆಂಡೂಲ್ಕರ್ ಅವರ ಸ್ಮರಣೀಯ ವಿಶ್ವಕಪ್ ವಿದಾಯದ 12 ವರ್ಷಗಳ ನಂತರ, ಕೊಹ್ಲಿ 50 ನೇ ಏಕದಿನ ಶತಕವನ್ನು ತಲುಪಿದರು.

ಇದನ್ನೂ ಓದಿ: Yuzvendra Chahal : ​ ಚಾಹಲ್ ಕೈಬಿಟ್ಟಿರುವುದರ ಹಿಂದಿನ ಕಾರಣ ಬಹಿಂಗ ಮಾಡಿದ ಆರ್​ಸಿಬಿ ಮಾಜಿ ಡೈರೆಕ್ಟರ್​

ಭಾರತದ 3ನೇ ಕ್ರಮಾಂಕದ ಬ್ಯಾಟರ್​ ತಮ್ಮ 279ನೇ ಏಕದಿನ ಇನ್ನಿಂಗ್ಸ್​ನಲ್ಲಿ ಈ ಮೈಲಿಗಲ್ಲನ್ನು ಸಾಧಿಸಿದ್ದಾರೆ. ವಿಶೇಷವೆಂದರೆ ಕೊಹ್ಲಿಯ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಲು ಮಾಸ್ಟರ್ ಬ್ಲಾಸ್ಟರ್ ತೆಂಡೂಲ್ಕರ್ ಕ್ರೀಡಾಂಗಣದಲ್ಲಿದ್ದರು.

ಸೋಮವಾರ ಸಂಜೆ ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್​​ 25 ನೇ ಆವೃತ್ತಿಗೆ ಸಾಕ್ಷಿಯಾಯಿತು. ಇದು ಹಿಂದಿನ ವರ್ಷದ ಅತ್ಯುತ್ತಮ ವೈಯಕ್ತಿಕ ಮತ್ತು ಕ್ರೀಡಾ ಸಾಧನೆಗಳನ್ನು ಗುರುತಿಸಲು ಮೀಸಲಾಗಿರುವ ಕಾರ್ಯಕ್ರಮವಾಗಿದೆ. ಸರ್ಬಿಯಾದ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಮತ್ತು ಸ್ಪೇನ್ ನ ಐಟಾನಾ ಬೊನ್ಮಾಟಿ ಕ್ರಮವಾಗಿ ವರ್ಷದ ಕ್ರೀಡಾಪಟು ಮತ್ತು ಕ್ರೀಡಾಪಟು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿಶ್ವಕಪ್ ಫೈನಲ್​​ನಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದ ಆಸ್ಟ್ರೇಲಿಯಾದ ಕ್ರಿಕೆಟಿಗ ಟ್ರಾವಿಸ್ ಹೆಡ್ ಅವರ ಗಮನಾರ್ಹ ಕ್ಯಾಚ್ ಸೇರಿದಂತೆ ಗಮನಾರ್ಹ ಕ್ರೀಡಾ ಕ್ಷಣಗಳನ್ನು ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿದೆ.

Continue Reading

ಕ್ರೀಡೆ

IPL 2024: ಹಾರ್ದಿಕ್​ ಪಾಂಡ್ಯ ನಿಜವಾಗಿಯೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರಾ?; ವಿಚಿತ್ರ ವರ್ತನೆಯ ವಿಡಿಯೊ ವೈರಲ್​

IPL 2024: ಮುಂಬೈ ಇಂಡಿಯನ್ಸ್ ತಂಡ ಬ್ಯಾಟಿಂಗ್ ಮಾಡುತಿದ್ದ ವೇಳೆ ಹಾರ್ದಿಕ್ ಪಾಂಡ್ಯ ಡಗೌಟ್‌ನಲ್ಲಿ ತಮ್ಮ ಬ್ಯಾಟಿಂಗ್‌ಗಾಗಿ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಅವರು ಬೌಂಡರಿ ಲೈನ್ ಪಕ್ಕದಲ್ಲಿ ಪುಶ್​ ಅಪ್​​ ಮಾಡುವ ಮೂಲಕ ತಯಾರಿ ಮಾಡಿಕೊಂಡಿದ್ದರು. ಇದರ ವಿಡಿಯೊ ವೈರಲ್​ ಆಗಿದೆ.

VISTARANEWS.COM


on

hardik pandya
Koo

ಜೈಪುರ: ಮುಂಬೈ ಇಂಡಿಯನ್ಸ್(mumbai indians)​ ತಂಡದ ನಾಯಕ ಹಾರ್ದಿಕ್​ ಪಾಂಡ್ಯ(Hardik Pandya) ಅವರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಮಾಜಿ ಆಟಗಾರ ರಾಬಿನ್​ ಉತ್ತಪ್ಪ(Robin Uthappa) ಕೆಲ ದಿನಗಳ ಹಿಂದೆ ಹೇಳಿದ್ದರು. ಹಾರ್ದಿಕ್​ ಅವರ ವರ್ತನೆಯನ್ನು ನೋಡುವಾಗ ಉತ್ತಪ್ಪ ಮಾತು ನಿಜ ಎಂಬಂತೆ ಭಾಸವಾಗುತ್ತಿದೆ. ಸೋಮವಾರ ನಡೆದಿದ್ದ ರಾಜಸ್ಥಾನ್​ ವಿರುದ್ಧದ(IPL 2024) ಪಂದ್ಯದಲ್ಲಿ ಪಾಂಡ್ಯ ವಿಚಿತ್ರ ವರ್ತನೆ ತೋರುತಿದ್ದರು. ಇದರ ವಿಡಿಯೊಗಳು ವೈರಲ್​ ಆಗುತ್ತಿದೆ.

ಮುಂಬೈ ಇಂಡಿಯನ್ಸ್ ತಂಡ ಬ್ಯಾಟಿಂಗ್ ಮಾಡುತಿದ್ದ ವೇಳೆ ಹಾರ್ದಿಕ್ ಪಾಂಡ್ಯ ಡಗೌಟ್‌ನಲ್ಲಿ ತಮ್ಮ ಬ್ಯಾಟಿಂಗ್‌ಗಾಗಿ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಅವರು ಬೌಂಡರಿ ಲೈನ್ ಪಕ್ಕದಲ್ಲಿ ಪುಶ್​ ಅಪ್​​ ಮಾಡುವ ಮೂಲಕ ತಯಾರಿ ಮಾಡಿಕೊಂಡಿದ್ದರು. ಅಲ್ಲದೆ ಪಂದ್ಯ ಸೋತಾಗಲೂ ತಮ್ಮ ಪಾಡಿಗೆ ನಗುತ್ತಿದ್ದರು. ಈ ಎಲ್ಲ ವಿಡಿಯೊಗಳು ವೈರಲ್​ ಆಗಿದ್ದು ನೆಟ್ಟಿಗರು ಪಾಂಡ್ಯಗೆ ಒಂದು ಸುತ್ತು ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಓವರ್​ ಬಿಲ್ಡಪ್​ ಮಾಡಿದ್ದು ಸಾಕು ಮೊದಲು ಬ್ಯಾಟಿಂಗ್​ ಸರಿಯಾಗಿ ಮಾಡಿ ಎಂದು ಹೇಳಿದ್ದಾರೆ. ಪಾಂಡ್ಯ ಈ ಪಂದ್ಯದಲ್ಲಿ ಕೇವಲ 10 ರನ್​ ಗಳಿಸಿ ಔಟ್​ ಆಗಿದ್ದರು.

ಈ ಹಿಂದಿನ ಪಂದ್ಯಗಳಲ್ಲಿಯೂ ಮುಂಬೈ ಬೌಲರ್​ಗಳ ಎಸೆತಗಳಿಗೆ ಸಿಕ್ಸರ್​ ಹೋದರೆ ಪಾಂಡ್ಯ ಚಪ್ಪಾಳೆ ತಟ್ಟುತ್ತಾ ಹುಚ್ಚರಂತೆ ವರ್ತಿಸುತ್ತಿದ್ದರು. ಬೌಲಿಂಗ್​ ಮಾಡಲು ಓಡಿ ಬಂದು ಇನ್ನೇನು ಬೌಲಿಂಗ್​ ನಡೆಸಬೇಕು ಎನ್ನುವಷ್ಟರಲ್ಲಿ ತಕ್ಷಣ ಬೌಲಿಂಗ್​ ನಿಲ್ಲಿಸಿ ಫೀಲ್ಡಿಂಗ್​ ಸೆಟ್​ ಮಾಡುವುದು ಕೂಡ ಕಂಡುಬಂದಿದೆ. ಒಟ್ಟಾರೆಯಾಗಿ ಪಾಂಡ್ಯ ತಲೆಕೆಟ್ಟವರಂತೆ ವರ್ತಿಸುತ್ತಿದ್ದಾರೆ. ಇದುವೇ ತಂಡದ ಹಿನ್ನಡೆಗೆ ಕಾರಣ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ IPL 2024: ಸನ್​ರೈಸರ್ಸ್​ ತಂಡದ ಆಟಗಾರರನ್ನು ಭೇಟಿ ಮಾಡಿದ ನಟ ಮಹೇಶ್‌ ಬಾಬು

ಮುಂಬೈ ತಂಡ 9 ವಿಕೆಟ್​ಗಳ ಅಂತರದ ಹೀನಾಯ ಸೋಲು ಕಂಡಿತು. ಇಲ್ಲಿನ ಸವಾಯ್​ ಮಾನ್​ಸಿಂಗ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಮುಂಬೈ ತಂಡ ಮೊದಲು ಬ್ಯಾಟ್​ ಮಾಡಿತು. ಅಂತೆಯೇ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 179 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಇನ್ನೂ 8 ಎಸೆತಗಳು ಉಳಿದಿರುವಂತೆಯೇ 1 ವಿಕೆಟ್ ನಷ್ಟಕ್ಕೆ 183 ರನ್ ಬಾರಿಸಿ ಗೆಲುವು ಕಂಡಿತು.

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಆರ್​ಆರ್​ ತಂಡಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ನೆರವಾದರು. ಬಟ್ಲರ್​ 25 ಎಸೆತಕ್ಕೆ 35 ರನ್ ಬಾರಿಸ ಔಟಾದರೆ ಜೈಸ್ವಾಲ್ ಅಮೋಘ ಪ್ರದರ್ಶನ ನೀಡಿ 60 ಎಸೆತಕ್ಕೆ ಅಜೇಯ 104 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ನಾಯಕ ಸಂಜು ಸ್ಯಾಮ್ಸನ್​ 28 ಎಸೆತಕ್ಕೆ 38 ರನ್​ ಬಾರಿಸಿ ಕೊನೇ ತನಕ ಉಳಿದರು. ಬೌಲಿಂಗ್​ನಲ್ಲಿ 4 ಓವರ್​​ ದಾಳಿ ನಡೆಸಿದ ಸಂದೀಪ್​ 18 ರನ್​ಗೆ 5 ವಿಕೆಟ್​ ಕೆಡವಿದರು. ಈ ಸಾಧನೆಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.

Continue Reading

ಪ್ರಮುಖ ಸುದ್ದಿ

Yuzvendra Chahal : ​ ಚಾಹಲ್ ಕೈಬಿಟ್ಟಿರುವುದರ ಹಿಂದಿನ ಕಾರಣ ಬಹಿಂಗ ಮಾಡಿದ ಆರ್​ಸಿಬಿ ಮಾಜಿ ಡೈರೆಕ್ಟರ್​

Yuzvendra Chahal: ಐಪಿಎಲ್ ಹರಾಜಿನಲ್ಲಿ ಫ್ರಾಂಚೈಸಿ ಅವರನ್ನು ಮತ್ತೆ ಖರೀದಿಸುತ್ತದೆ ಎಂದು ಅವರಿಗೆ ಸೂಚನೆ ನೀಡಿತ್ತು ಎಂಬ ವರದಿಗಳೂ ಇದ್ದವು. ಆದಾಗ್ಯೂ, ಅವರ ಹೆಸರು ಬಿಡ್ಡಿಂಗ್​​ಗೆ ಬಂದಾಗ, ಆರ್​ಸಿಬಿ ಆಡಳಿತ ಬಗ್ಗೆ ಯಾವುದೇ ಆಸಕ್ತಿ ತೋರಿಸಿರಲಿಲ್ಲ. ಹೀಗಾಗಿ ಉದ್ದೇಶಪೂರ್ವಕ ಕೆಲಸ ಎಂಬುದು ಬಹಿರಂಗಗೊಂಡಿತು.

VISTARANEWS.COM


on

Yuzvendra Chahal
Koo

ನವದೆಹಲಿ: ಐಪಿಎಲ್ 2022 ರ ಹರಾಜಿಗೆ ಮೊದಲು ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB)​ ಫ್ರಾಂಚೈಸಿಯು ಯುಜ್ವೇಂದ್ರ ಚಾಹಲ್ ಅವರನ್ನು ಬಿಡುಗಡೆ ಮಾಡಿದ್ದಕ್ಕೆ ಹಾಗೂ ಆ ಮೇಲೆ ಖರೀದಿ ಮಾಡದಿರುವುದಕ್ಕೆ ಆರ್​ಸಿಬಿಯ ಮಾಜಿ ಮುಖ್ಯ ಕೋಚ್ ಮತ್ತು ಕ್ರಿಕೆಟ್ ನಿರ್ದೇಶಕ ಮೈಕ್ ಹೆಸನ್ ಇದೀಗ ಕಾರಣಕೊಟ್ಟಿದ್ದಾರೆ. ಯಜ್ವೇಂದ್ರ ಚಹಲ್ (Yuzvendra Chahal) 2014ರಿಂದ 2021ರ ಅವಧಿಯಲ್ಲಿ ಆರ್​​ಸಿಬಿ ಪರ 139 ವಿಕೆಟ್​ಗಳನ್ನು ಪಡೆದು ಅತ್ಯಂತ ಯಶಸ್ವಿ ಬೌಲರ್ ಆಗಿದ್ದ ಹೊರತಾಗಿಯೂ ತಂಡದಲ್ಲಿ ಉಳಿದಿರುವ ವಿಚಾರವನ್ನು ತಿಳಿಸಿದ್ದಾರೆ.

ಐಪಿಎಲ್ 2022 ರ ಮೆಗಾ ಹರಾಜಿಗೆ ಮುಂಚಿತವಾಗಿ, ಆರ್​​ಸಿಬಿ ಫ್ರಾಂಚೈಸಿ ಯುಜ್ವೇಂದ್ರ ಚಹಲ್ ಅವರನ್ನು ಉಳಿಸಿಕೊಳ್ಳದಿದ್ದಾಗ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದರು. ತನ್ನನ್ನು ಉಳಿಸಿಕೊಳ್ಳಲಾಗುವುದಿಲ್ಲ ಎಂದು ಫ್ರಾಂಚೈಸಿಯಿಂದ ಫೋನ್ ಕರೆ ಅಥವಾ ಮಾಹಿತಿಯೂ ಸ್ವೀಕರಿಸಿಲ್ಲ ಎಂದು ಸ್ಪಿನ್ನರ್​ ನಂತರ ಬಹಿರಂಗಪಡಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು ಹಾಗೂ ಈಗಲೂ ಅಭಿಮಾನಿಗಳಿಗೆ ಬೇಸರವಿದೆ.

ಐಪಿಎಲ್ ಹರಾಜಿನಲ್ಲಿ ಫ್ರಾಂಚೈಸಿ ಅವರನ್ನು ಮತ್ತೆ ಖರೀದಿಸುತ್ತದೆ ಎಂದು ಅವರಿಗೆ ಸೂಚನೆ ನೀಡಿತ್ತು ಎಂಬ ವರದಿಗಳೂ ಇದ್ದವು. ಆದಾಗ್ಯೂ, ಅವರ ಹೆಸರು ಬಿಡ್ಡಿಂಗ್​​ಗೆ ಬಂದಾಗ, ಆರ್​ಸಿಬಿ ಆಡಳಿತ ಬಗ್ಗೆ ಯಾವುದೇ ಆಸಕ್ತಿ ತೋರಿಸಿರಲಿಲ್ಲ. ಹೀಗಾಗಿ ಉದ್ದೇಶಪೂರ್ವಕ ಕೆಲಸ ಎಂಬುದು ಬಹಿರಂಗಗೊಂಡಿತು.

ಇದನ್ನೂ ಓದಿ: Match Fixing : ಇರ್ಫಾನ್​ ಪಠಾಣ್​, ಸುರೇಶ್ ರೈನಾ ಪಾಲ್ಗೊಂಡಿದ್ದ ​ ಕ್ರಿಕೆಟ್ ಲೀಗ್​ನಲ್ಲಿ ಮ್ಯಾಚ್​ ಫಿಕ್ಸಿಂಗ್?

2019 ರಿಂದ 2023 ರವರೆಗೆ ಫ್ರಾಂಚೈಸಿಯ ಕ್ರಿಕೆಟ್ ವ್ಯವಹಾರಗಳ ನೇತೃತ್ವ ವಹಿಸಿದ್ದ ಮೈಕ್​ ಹೆಸ್ಸನ್, ಚಾಹಲ್ ನಿರ್ಗಮನದ ಹಿಂದಿನ ತಾರ್ಕಿಕತೆಯನ್ನು ಬಹಿರಂಗಪಡಿಸಿದ್ದಾರೆ. ಚಾಹಲ್ ಅವರನ್ನು ಉಳಿಸಿಕೊಳ್ಳದಿರುವುದು ಆರ್​​ಸಿಬಿಗೆ ಹೆಚ್ಚುವರಿ ಆರ್ಥಿಕ ಒತ್ತಡ ಕಡಿಮೆ ಮಾಡುತ್ತದೆ. ಚಹಲ್ ಮತ್ತು ವೇಗಿ ಹರ್ಷಲ್ ಪಟೇಲ್ ಇಬ್ಬರನ್ನೂ ಹರಾಜಿನಲ್ಲಿ ಭದ್ರಪಡಿಸುವ ಗುರಿಯನ್ನು ಹೊಂದಿತ್ತು. ಆದರೆ ಅದು ಸಾಧ್ಯವಾಗಿಲ್ಲ ಎಂದಿದೆ.

ನಾವು ಚಾಹಲ್ ಅವರನ್ನು ಉಳಿಸಿಕೊಳ್ಳಲಿಲ್ಲ. ಏಕೆಂದರೆ ಕೇವಲ ಮೂವರು ಆಟಗಾರರನ್ನು ಬಿಡುಗಡೆ ಮಾಡಿ ಹೆಚ್ಚುವರಿ ನಾಲ್ಕು ಕೋಟಿ ರೂಪಾಯಿ ಮೂಲಕ ಅವರನ್ನು ವಾಪಸ್​ ಕರೆಸಬೇಕಾಗಿತ್ತು. ಅದರ ಮೂಲಕ ನಾವು ಚಹಲ್ ಮತ್ತು ಹರ್ಷಲ್ ಪಟೇಲ್ ಇಬ್ಬರನ್ನೂ ಮರಳಿ ಖರೀದಿಸುವ ಗುರಿ ಹೊಂದಿದ್ದೆವು”ಎಂದು ಹೆಸನ್ ಜಿಯೋ ಸಿನೆಮಾದಲ್ಲಿ ಬಹಿರಂಗಪಡಿಸಿದರು.

ತಡವಾಗಿ ಬಂದ ಹೆಸರು

ಹರಾಜಿನಲ್ಲಿ ಚಾಹಲ್ ಹೆಸರು ತಡವಾಗಿ ಬಂತು. ಈ ವೇಳೆ ಆರ್​ಸಿಬಿ ತನ್ನ ಯೋಜನೆಗಳಲ್ಲಿ ಬಿಕ್ಕಟ್ಟನ್ನು ಎದುರಿಸಿತು. ಇದು ಶ್ರೀಲಂಕಾದ ಸ್ಪಿನ್ ಆಲ್ರೌಂಡರ್ ವನಿಂದು ಹಸರಂಗ ಅವರನ್ನು ತೆಗೆದುಕೊಳ್ಳುವ ಮೂಲಕ ಅವಕಾಶ ನಷ್ಟವಾಯಿತು ಎಂದು ಹೇಳಿದರು.

ಚಹಲ್​ಗಿಂತ ಮೊಲದೇ ಹರಾಜಿನಲ್ಲಿ ಹಸರಂಗ ಅವರ ಹೆಸರು ಕಾಣಿಸಿಕೊಂಡಾಗ ಆರ್​ಸಿಬಿ ಅವರಿಗೆ ಆದ್ಯತೆ ನೀಡಿತು. ಅಜಾಗರೂಕತೆಯಿಂದಾಗಿ ಚಾಹಲ್ ಅವರನ್ನು ಕಳೆದುಕೊಂಡಿತು ಎಂದು ಹೆಸ್ಸಾನ್ ಹೇಳಿದ್ದಾರೆ.

“ನಾನು ನನ್ನ ವೃತ್ತಿಜೀವನವನ್ನು ಮುಗಿಸುವವರೆಗೂ ಮತ್ತು ಬಹುಶಃ ಅದರಾಚೆಗೂ ಯೂಜಿ (ಚಾಹಲ್) ಅವರನ್ನು ಕಳೆದುಕೊಂಡಿರುವುದಕ್ಕೆ ನಾನು ನಿರಾಶೆಗೊಳ್ಳುತ್ತೇನೆ. ಅವರು ಅತ್ಯುತ್ತಮ ಬೌಲರ್, “ಎಂದು ಹೆಸ್ಸನ್ ಸಂದರ್ಶನದಲ್ಲಿ ಹೇಳಿದ್ದಾರೆ.

ಐಪಿಎಲ್​ನಲ್ಲಿ 200 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಚಾಹಲ್ ಪಾತ್ರರಾಗಿದ್ದಾರೆ. ಇದರಲ್ಲಿ ಆರು ನಾಲ್ಕು ವಿಕೆಟ್ ಸಾಧನೆ ಮತ್ತು ಐದು ವಿಕೆಟ್ ಸಾಧನೆಗಳು ಸೇರಿವೆ. ಇರದಲ್ಲೊಂದು ಹ್ಯಾಟ್ರಿಕ್​ ಸಾಧನೆಯೂ ಇದೆ.

Continue Reading
Advertisement
bike taxi services
ಬೆಂಗಳೂರು16 mins ago

Bike Taxi Services: ಬೈಕ್ ಟ್ಯಾಕ್ಸಿ ಸವಾರರಿಗೆ ಕಿರುಕುಳ ನೀಡುವವರ ವಿರುದ್ಧ ಕ್ರಮಕ್ಕೆ ಹೈಕೋರ್ಟ್‌ ಸೂಚನೆ

Lok Sabha Election 2024 Priyanka Gandhi announces constitutional amendment
Lok Sabha Election 202428 mins ago

Lok Sabha Election 2024: ಸಂವಿಧಾನ ತಿದ್ದುಪಡಿ ಮಾಡುವುದಾಗಿ ಘೋಷಿಸಿದ ಪ್ರಿಯಾಂಕಾ ಗಾಂಧಿ!

Lok Sabha Election 2024
Lok Sabha Election 202429 mins ago

Lok Sabha Election 2024: ಸೂರತ್‌ನಲ್ಲಿ ಕಮಲ ಪಡೆಯ ಗೆಲುವಿಗೆ ಪರೋಕ್ಷ ಕಾರಣಕರ್ತರಾದ ಕಾಂಗ್ರೆಸ್‌ ಅಭ್ಯರ್ಥಿ ಬಿಜೆಪಿ ಸೇರ್ಪಡೆ?

Latest56 mins ago

Voter ID: ಮತದಾನಕ್ಕೆ ವೋಟರ್ ಐಡಿ ಇಲ್ಲದಿದ್ದರೆ ಚಿಂತೆ ಬೇಡ, ಈ ದಾಖಲೆಗಳು ಸಾಕು

Road Accident
ಕರ್ನಾಟಕ57 mins ago

Road Accident: ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು; ಅಪಘಾತದ ಬಳಿಕ ಹೊತ್ತಿ ಉರಿದ ಬಸ್

Himanta Biswa Sarma
ರಾಜಕೀಯ1 hour ago

Himanta Biswa Sarma: ಕಾಂಗ್ರೆಸ್ ಪ್ರಣಾಳಿಕೆ ಪಾಕಿಸ್ತಾನದ ಜನರಿಗೆ ಹೆಚ್ಚು ಸೂಕ್ತ: ಹಿಮಂತ ಬಿಸ್ವಾ ಶರ್ಮಾ

Dungarees Fashion In Summer
ಫ್ಯಾಷನ್1 hour ago

Dungarees Fashion In Summer: ಬೇಸಿಗೆ ಸೀಸನ್‌ನಲ್ಲಿ ಹೀಗಿರಲಿ ಲೈಟ್‌ವೈಟ್‌ ಡಂಗ್ರೀಸ್‌ ಕಾಂಬಿನೇಷನ್‌

Voting awareness programme in Shira
ತುಮಕೂರು1 hour ago

Lok Sabha Election 2024: ಶಿರಾದಲ್ಲಿ ಕ್ಯಾಂಡಲ್‌ ಹಿಡಿದು ಮತದಾನ ಜಾಗೃತಿ

Suresh Raina
ಪ್ರಮುಖ ಸುದ್ದಿ1 hour ago

Suresh Raina : ಧೋನಿ ನೇತೃತ್ವದಲ್ಲಿ ವಿಶ್ವ ಕಪ್ ಗೆದ್ದಿರುವುದು ಪೂರ್ವ ನಿಯೋಜಿತ; ಸ್ಫೋಟಕ ಮಾಹಿತಿ ಬಹಿರಂಗ ಮಾಡಿದ ರೈನಾ!

Karnataka Weather Forecast
ಮಳೆ1 hour ago

Karnataka Weather : ಬಿರುಗಾಳಿ ಮಳೆಗೆ ಜನರು ತತ್ತರ; ಸಿಡಿಲಿಗೆ ಎತ್ತುಗಳು ಬಲಿ, ನೆಲಕಚ್ಚಿದ ಬೆಳೆಗಳು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ14 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು1 day ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ1 day ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌