IPL 2023: ಚೆನ್ನೈ,ಗುಜರಾತ್​ ಫೈನಲ್​ ಪಂದ್ಯದ ಪಿಚ್​ ರಿಪೋರ್ಟ್​, ಹವಾಮಾನ ವರದಿಯ ಸಂಪೂರ್ಣ ಮಾಹಿತಿ Vistara News
Connect with us

ಕ್ರಿಕೆಟ್

IPL 2023: ಚೆನ್ನೈ,ಗುಜರಾತ್​ ಫೈನಲ್​ ಪಂದ್ಯದ ಪಿಚ್​ ರಿಪೋರ್ಟ್​, ಹವಾಮಾನ ವರದಿಯ ಸಂಪೂರ್ಣ ಮಾಹಿತಿ

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್​ ಸಂಪೂರ್ಣ ಬ್ಯಾಟಿಂಗ್​ ಸ್ನೇಹಿಯಾಗಿದೆ. ಇಲ್ಲಿ 200ರ ಮೊತ್ತಕ್ಕೇನು ಅಡ್ಡಿಯಿಲ್ಲ.

VISTARANEWS.COM


on

Narendra Modi Stadium Ahmedabad
Koo

ಅಹಮದಾಬಾದ್​: ನಾಲ್ಕು ಬಾರಿಯ ಐಪಿಎಲ್​ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಹಾಲಿ ಚಾಂಪಿಯನ್​ ಗುಜರಾತ್​ ಟೈಟನ್ಸ್​ ತಂಡಗಳು ಭಾನುವಾರ ಫೈನಲ್​ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದ ಪಿಚ್​ ರಿಪೋರ್ಟ್​, ಸಂಭಾವ್ಯ ತಂಡಗಳು ಮತ್ತು ಹವಾಮಾನ ವರದಿಯ ಸಂಪೂರ್ಣ ಮಾಹಿತಿ ಇಂತಿದೆ.

ಮಳೆ ಸಾಧ್ಯತೆ ಅಧಿಕ

ಪೈನಲ್​ ಪಂದ್ಯಕ್ಕೆ ಮಳೆ ಸಾಧ್ಯತೆ ಅಧಿಕ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ. ಕಳೆದ ಕ್ವಾಲಿಫೈಯರ್​ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿತ್ತು. ಹೀಗಾಗಿ ಈ ಪಂದ್ಯ ವಿಳಂಬವಾಗಿ ಆರಂಭಗೊಂಡಿತ್ತು. ಇಧಿಗ ಫೈನಲ್​ ಪಂದ್ಯದ ವೇಳೆಯೂ ಮಳೆ ಬರುವ ಸಾಧ್ಯತೆ ಇದೆ. ಒಂದೊಂಮ್ಮೆ ಮಳೆಯಿಂದ ಈ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ. ಮೇ 29ರ ಮೀಸಲು ದಿನದಂದು ಪಂದ್ಯ ನಡೆಸಲಾಗುತ್ತದೆ.

ಇದನ್ನೂ ಓದಿ IPL 2023: ಐಪಿಎಲ್​ನಲ್ಲಿ ಧೋನಿ, ಪಾಂಡ್ಯ ಎಷ್ಟು ಫೈನಲ್​ ಆಡಿದ್ದಾರೆ? ಇಲ್ಲಿದೆ ಮಾಹಿತಿ

ಪಿಚ್​ ರಿಪೋರ್ಟ್​

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್​ ಸಂಪೂರ್ಣ ಬ್ಯಾಟಿಂಗ್​ ಸ್ನೇಹಿಯಾಗಿದೆ. ಇಲ್ಲಿ 200ರ ಮೊತ್ತಕ್ಕೇನು ಅಡ್ಡಿಯಿಲ್ಲ. ಇದಕ್ಕೆ ಶುಕ್ರವಾರದ ಕ್ವಾಲಿಫೈಯರ್​ ಪಂದ್ಯವೇ ಉತ್ತಮ ಸಾಕ್ಷಿ. ಹೀಗಾಗಿ ಇಲ್ಲಿ ಬೌಲರ್​ಗಳು ಶಕ್ತಿ ಮೀರಿ ಪ್ರದರ್ಶನ ತೋರಬೇಕಿದೆ. ಸ್ಲೋ ಬೌಲ್​ ಎಸೆಯುವ ಬೌಲರ್​ಗಳಿಗೆ ಈ ಪಿಚ್​ ಹೆಚ್ಚಿನ ನೆರವು ನೀಡುತ್ತದೆ. ಇದೇ ಕಾರಣಕ್ಕೆ ಮುಂಬೈ ವಿರುದ್ಧ ಮೋಹಿತ್​ ಶರ್ಮ ಅವರು 5 ವಿಕೆಟ್​ ಕಬಳಿಸಲು ಪ್ರಮುಖ ಕಾರಣ. ಸ್ಪಿನ್​ ಬೌಲಿಂಗ್​ ಅಷ್ಟರ ಮಟ್ಟಿಗೆ ಇಲ್ಲಿ ಯಶಸ್ಸು ಕಾಣುವುದು ಕಷ್ಟ.

ಮುಖಾಮುಖಿ

ಚೆನ್ನೈ ಮತ್ತು ಗುಜರಾತ್​ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ 4 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಗುಜರಾತ್​ ಮೂರು ಬಾರಿ ಗೆದ್ದಿದೆ. ಚೆನ್ನೈ ತಂಡ ಒಂದು ಪಂದ್ಯ ಗೆದ್ದಿದೆ. ಈ ಗೆಲುವು ಇದೇ ಆವೃತ್ತಿಯ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ದಾಖಲಾಗಿತ್ತು. ಅಹಮದಾಬಾದ್​ನಲ್ಲೇ ನಡೆದ ಉದ್ಘಾಟನ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗುಜರಾತ್​ ಗೆದ್ದು ತನ್ನ ಅಭಿಯಾನವನ್ನು ಆರಂಭಿಸಿತ್ತು. ಇದೀಗ ಅಂತಿಮ ಪಂದ್ಯದಲ್ಲಿಯೂ ಇತ್ತಂಡಗಳು ಮುಖಾಮುಖಿಯಾಗಿವೆ. ಇಲ್ಲಿ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದು ಈ ಪಂದ್ಯದ ಕೌತುಕ.

ಸಂಭಾವ್ಯ ತಂಡಗಳು

ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ರಶೀದ್ ಖಾನ್, ರಾಹುಲ್ ತೇವಾಟಿಯಾ, ವಿಜಯ್ ಶಂಕರ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಪ್ರದೀಪ್ ಸಾಂಗ್ವಾನ್, ದರ್ಶನ್ ನಲ್ಕಂಡೆ, ಜಯಂತ್ ಯಾದವ್, ಆರ್ ಸಾಯಿ ಕಿಶೋರ್, ನೂರ್ ಅಹ್ಮದ್, ದಸುನ್ ಶನಕಾ, ಒಡಿಯನ್ ಸ್ಮಿತ್, ಕೆಎಸ್ ಭರತ್, ಶಿವಂ ಮಾವಿ, ಉರ್ವಿಲ್ ಪಟೇಲ್, ಜೋಶುವಾ ಲಿಟಲ್, ಮೋಹಿತ್ ಶರ್ಮಾ.

ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ಧೋನಿ(ನಾಯಕ), ರವೀಂದ್ರ ಜಡೇಜಾ, ಡೆವೊನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು, ಸುಬ್ರಾಂಶು ಸೇನಾಪತಿ, ಮೊಯೀನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೇನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹರ್, ತುಷಾರ್ ದೇಶಪಾಂಡೆ, ಆಕಾಶ್ ಸಿಂಗ್, ಮಥೀಶಾ ಪತಿರಾನಾ, ಸಿಮರ್ಜೀತ್ ಸಿಂಗ್, ಪ್ರಶಾಂತ್ ಸೋಲಂಕಿ, ಮಹೀಶ್ ತೀಕ್ಷಾನಾ, ಅಜಿಂಕ್ಯ ರಹಾನೆ, ಬೆನ್ ಸ್ಟೋಕ್ಸ್, ಶೇಖ್ ರಶೀದ್, ನಿಶಾಂತ್ ಸಿಂಧು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ಕ್ರಿಕೆಟ್

WTC Final 2023: ಹಣಕ್ಕಾಗಿ ಅಲ್ಲ, ದೇಶಕ್ಕಾಗಿ ಆಡು; ಔಟಾದ ಬಳಿಕ ಊಟದ ಜತೆ ಬೈಗುಳ ತಿಂದ ಕೊಹ್ಲಿ

ವಿರಾಟ್​ ಕೊಹ್ಲಿ ಅವರು ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಔಟಾದ ತಕ್ಷಣ ಡಗೌಟ್​ನಲ್ಲಿ ಆಹಾರ ಸೇವಿಸಿದ ಕಾರಣಕ್ಕೆ ಟ್ರೋಲ್​ ಆಗಿದ್ದಾರೆ.

VISTARANEWS.COM


on

Edited by

Virat Kohli troll
Koo

ಲಂಡನ್​: ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅವರು ನಿರೀಕ್ಷಿತ ಮಟ್ಟದ ಬ್ಯಾಟಿಂಗ್​ ಪ್ರದರ್ಶನ ತೋರುವಲ್ಲಿ ಎಡವಿದ್ದಾರೆ. ಆದರೆ ಅವರು ಔಟ್​​ ಆಗಿರುವ ವಿಚಾರವನ್ನು ಹೊರತುಪಡಿಸಿ ಬೇರೆಯೇ ಕಾರಣಕ್ಕೆ ಇದೀಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಲಂಡನ್​ನ ಓವಲ್​ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ದ್ವಿತೀಯ ದಿನದಾಟದ ವೇಳೆ ವಿರಾಟ್​ ಅವರು 14 ರನ್​ ಗಳಿಸಿ ವಿಕೆಟ್​ ಕೈಚೆಲ್ಲಿದರು. ಪೆವಿಲಿಯನ್‌ಗೆ ತೆರಳಿದ ವಿರಾಟ್‌ ಕೊಹ್ಲಿ ಯಾವುದೇ ಚಿಂತೆ ಇಲ್ಲದವರಂತೆ ಇಶಾನ್​ ಕಿಶನ್​ ಮತ್ತು ಗಿಲ್​ ಜತೆ ಹರಾಟೆ ಹೊಡೆಯುತ್ತಾ ಆಹಾರ ಸೇವಿಸಿದ್ದಾರೆ. ಇದರ ಫೋಟೊ ಮತ್ತು ವಿಡಿಯೊ ಎಲ್ಲಡೆ ವೈರಲ್​ ಆಗಿದೆ.

ಕೊಹ್ಲಿಯ ಈ ವರ್ತನೆ ಕಂಡ ಅನೇಕ ಟೀಮ್​ ಇಂಡಿಯಾದ ಅಭಿಮಾನಿಗಳು ಮತ್ತು ಕೆಲವು ಕ್ರಿಕೆಟ್​ ಪಂಡಿತರು ಟೀಕೆ ವ್ಯಕ್ತಪಡಿಸಿದ್ದಾರೆ. ಜತೆಗೆ ಅವರನ್ನು ತೀಕ್ಷ್ಣ ಮಾತುಗಳಿಂದ ಟ್ರೋಲ್​ ಮಾಡಿದ್ದಾರೆ. ಐಪಿಎಲ್​ನಲ್ಲಿ ಪಂದ್ಯ ಸೋತಾಗ ಕಣ್ಣೀರು ಸುರಿಸುವ ನೀವು ಭಾರತ ತಂಡಕ್ಕೆ ಆಡುವಾಗ ಮಾತ್ರ ಈ ರೀತಿ ಮಾಡುತ್ತೀರಿ ಇದರ ಅರ್ಥ ನೀವು ಹಣಕ್ಕಾಗಿ ಆಡುತ್ತೀರಿ, ದೇಶಕಾಕ್ಕಾಗಿ ಅಲ್ಲ ಎಂದು ನೆಟ್ಟಿಗರೊಬ್ಬರು ಟ್ರೋಲ್​ ಮಾಡಿದ್ದಾರೆ.

ಇದನ್ನೂ ಓದಿ WTC Final 2023: ಇನಿಂಗ್ಸ್​ ಹಿನ್ನಡೆ ಭಯದಲ್ಲಿ ಟೀಮ್​ ಇಂಡಿಯಾ

ತಂಡ ಸಂಕಷ್ಟದಲ್ಲಿದ್ದರೂ ನೀವು ಈ ರೀತಿ ಆನಂದದಲ್ಲಿರುವುದನ್ನು ಕಾಣುವಾಗ ಭಾರತ ತಂಡಕ್ಕಿಂತ ನಿಮಗೆ ಐಪಿಎಲ್​ ಟೂರ್ನಿಯೇ ಹೆಚ್ಚಾದಂತೆ ಕಾಣುತ್ತಿದೆ ಎಂದು ಮತ್ತೊಬ್ಬ ನೆಟ್ಟಿಗ ಟ್ರೋಲ್​ ಮಾಡಿದ್ದಾರೆ. ಇನ್ನಿ ಕೆಲವರು ಅರೇ ನೀವು ತಿನ್ನುತ್ತಿರುವ ಆಹಾರ ಯಾವುದು? ಎಂದು ಪ್ರಶ್ನೆ ಮಾಡುವ ಮೂಲಕ ಕೊಹ್ಲಿಯ ಕಾಲೆಳೆದಿದ್ದಾರೆ.

ಎಷ್ಟ್ರೇ ಸಾಧನೆ ಮಾಡಿದ್ದರೂ ಹಣಕ್ಕೆ ಆಸೆಪಡುವ ವಿರಾಟ್​ ಕೊಹ್ಲಿಯನ್ನು ಸಚಿನ್​ ತೆಂಡೂಲ್ಕರ್​ ಜತೆ ಯಾವತ್ತೂ ಹೋಲಿ ಮಾಡಬೇಡಿ ಎಂದು ನೆಟ್ಟಿಗೊರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಕೊಹ್ಲಿಯ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹಲವು ಕಾರಣಕ್ಕೆ ಟ್ರೋಲ್​ ಆಗುತ್ತಿದೆ.

Continue Reading

Live News

WTC Final 2023: ಭಾರತ-ಆಸೀಸ್​ ಮೂರನೇ ದಿನದಾಟದ ಹೈಲೆಟ್ಸ್​

ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಮೂರನೇ ದಿನದಾಟದ ಹೈಲೆಟ್ಸ್​ ಇಲ್ಲಿದೆ.

VISTARANEWS.COM


on

Edited by

ICC World Test Championship Final 2023
Koo

ಲಂಡನ್​: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಮೂರನೇ ದಿನದಾಟದ ಹೈಲೆಟ್ಸ್​ ಇಲ್ಲಿದೆ.

Continue Reading

ಕ್ರಿಕೆಟ್

Wrestlers Protest: ಬ್ರಿಜ್ ಭೂಷಣ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಮಹತ್ವದ ತಿರುವು

ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್ ವಿರುದ್ಧ ಸುಳ್ಳು ಕೇಸು ದಾಖಲಿಸಿರುವುದಾಗಿ ಕೇಸು ನೀಡಿದ ಅಪ್ರಾಪ್ತ ಕುಸ್ತಿಪಟುವಿನ ತಂದೆ ಯೂ ಟರ್ನ್​ ಹೊಡೆದಿದ್ದಾರೆ.

VISTARANEWS.COM


on

Edited by

Brij Bhushan Sharan Singh
Koo

ನವದೆಹಲಿ: ಡಬ್ಲ್ಯುಎಫ್ಐ ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪ ಪ್ರಕರಣಕ್ಕೆ ಮಹತ್ವದ ತಿರುವೊಂದು ಲಭಿಸಿದೆ. ಬ್ರಿಜ್‌ ಭೂಷಣ್‌ ಅವರನ್ನು ಬಂಧಿಸುವಂತೆ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ಜೂನ್​ 15ರ ತನಕ ತಮ್ಮ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ದೂರು ನೀಡಿದ ಅಪ್ರಾಪ್ತ ಕುಸ್ತಿಪಟುವಿನ ತಂದೆ ಯೂ-ಟರ್ನ್​ ಹೊಡೆದಿದ್ದಾರೆ.

ಭಾರತೀಯ ಕುಸ್ತಿ ಒಕ್ಕೂಟದ ನಿರ್ಗಮಿತ ಅಧ್ಯಕ್ಷ ಬ್ರಿಜ್​ಭೂಷಣ್​​ ವಿರುದ್ಧ ಲೈಂಗಿಕ ಕಿರುಕುಳದ ಸುಳ್ಳು ದೂರು ದಾಖಲಿಸಿರುವುದಾಗಿ ಅಪ್ರಾಪ್ತ ಬಾಲಕಿಯ ತಂದೆ ಶುಕ್ರವಾರ ಹೇಳಿಕೆ ನೀಡಿದ್ದಾರೆ. ಜತೆಗೆ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವುದಾಗಿ ಬಾಲಕಿಯ ತಂದೆ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಅವರ ಈ ಹೇಳಿಕೆಯಿಂದಾಗಿ ಇಷ್ಟು ದಿನ ಎಲ್ಲ ಮಹತ್ವದ ಟೂರ್ನಿಯನ್ನು ಬಹಿಷ್ಕರಿಸಿ ದೆಹಲಿಯ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾಗಿದ್ದ ಬಜರಂಗ್​ ಪೂನಿಯಾ, ಸಾಕ್ಷಿ ಮಲಿಕ್​, ವಿನೇಶ್​ ಫೋಗಾಟ್​ ಸೇರಿ ಹಲವು ಕುಸ್ತಿಪಟುಗಳ ಹೋರಾಟ ಇದೀಗ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಪ್ರಕರಣ ದಾಖಲಿಸಲು ಕಾರಣವೇನು?

ಬ್ರಿಜ್​ ಭೂಷಣ್​ ವಿರುದ್ಧ ಈ ಸುಳ್ಳು ಪ್ರಕರಣ ದಾಖಲಿಸಲು ಪ್ರಮುಖ ಕಾರಣ ಏನೆಂಬುದನ್ನು ಕೂಡ ಬಾಲಕಿಯ ತಂದೆ ಹೇಳಿದ್ದಾರೆ. 2022ರಲ್ಲಿ ಲಕ್ನೋದಲ್ಲಿ ನಡೆದಿದ್ದ ಏಷ್ಯನ್ ಅಂಡರ್-17 ಚಾಂಪಿಯನ್‌ಶಿಪ್‌ ಟ್ರಯಲ್ಸ್​ನ ಫೈನಲ್‌ನಲ್ಲಿ ಸೋತ ಬಳಿಕ ತನ್ನ ಮಗಳಿಗೆ ಭಾರತೀಯ ತಂಡಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ರೆಫ್ರಿಯ ತಪ್ಪು ನಿರ್ಧಾರಗಳಿಂದಾಗಿ ಮಗಳು ಫೈನಲ್​ನಲ್ಲಿ ಸೋಲು ಕಾಣಬೇಕಾಯಿತು. ಇದಕ್ಕೆ ಬ್ರಿಜ್ ಭೂಷಣ್ ಅವರೇ ಕಾರಣ. ಮಗಳ ಒಂದು ವರ್ಷದ ಪರಿಶ್ರಮ ನೀರುಪಾಲಾಯಿತು ಎಂಬ ಕಾರಣಕ್ಕೆ ನಾನು ಬ್ರಿಜ್​ ಭೂಷಣ್​ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ನಿರ್ಧಾರ ಕೈಗೊಂಡೆ ಎಂದು ಬಾಲಕಿಯ ತಂದೆ ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ Wrestlers Protest: ಜೂನ್​ 15ರ ತನಕ ಪ್ರತಿಭಟನೆ ಸ್ಥಗಿತಗೊಳಿಸಿದ ಕುಸ್ತಿಪಟುಗಳು

ರೆಫ್ರಿ ತಪ್ಪಿಗೆ ಬ್ರಿಜ್​ಭೂಷಣ್​ ಮೇಲೇಕೆ ಕೋಪ?

ರೆಫ್ರಿ ಮಾಡಿದ ತಪ್ಪಿಗೆ ಬ್ರಿಜ್​ ಭೂಷಣ್​ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಣವೇನು ಎಂದು ಕೇಳಿದ ಪ್ರಶ್ನೆ ಉತ್ತರಿಸಿದ ಬಾಲಕಿಯ ತಂದೆ, ರೆಫರಿಯನ್ನು ನಿಯೋಜಿಸಿದವರು ಯಾರು? ಅದು ಫೆಡರೇಶನ್, ಫೆಡರೇಶನ್ ಮುಖ್ಯಸ್ಥರು ಯಾರು? ಬ್ರಿಜ್​ ಭೂಷಣ್​. ಹೀಗಾಗಿ ಅವರ ಮೇಲೆ ನಾನು ದ್ವೇಷ ಸಾಧಿಸಲು ಮುಂದಾದೆ ಎಂದರು. ಇದೇ ವೇಳೆ ಪಿಟಿಐ ಸಂದರ್ಶಕ, ನೀವು ನೀಡಿದ ದೂರಿನ ಮೇರೆಗೆ ಬ್ರಿಜ್​ ಭೂಷಣ್​ ವಿರುದ್ಧ ಪೋಕ್ಸೋ ಕಾಯ್ದೆಯಡಿ ತನಿಖೆ ನಡೆಯುತ್ತಿದೆ. ಈಗ ಏಕೆ ನೀವು ನಿಮ್ಮ ನಿರ್ಧಾರ ಬದಲಾಯಿದ್ದೀರ ಎಂಬ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರ ನೀಡಿದ ಅಪ್ರಾಪ್ತ ಕುಸ್ತಿಪಟುವಿನ ತಂದೆ ಕೋರ್ಟ್‌ನಲ್ಲಿ ಸತ್ಯ ಹೇಗಾದರೂ ಹೊರಬರುತ್ತದೆ ಎಂದು ನನಗೆ ತಿಳಿದಿದೆ. ಆದರೆ ಇದೀಗ ಅಲ್ಲಿಗೆ ಹೋಗುವಾ ಮೊದಲೇ ಸತ್ಯ ಬಹಿರಂಗಗೊಂಡರೆ ಉತ್ತಮ ಎಂದು ನನಗೆ ಅನಿಸಿತು ಇದೇ ಕಾರಣಕ್ಕೆ ನಾನು ನನ್ನ ತಪ್ಪನ್ನು ಒಪ್ಪಿಕೊಂಡೆ ಎಂದರು.

ಒಂದು ಸೋಲಿಗೆ ಈ ನಿರ್ಧಾರ ಏಕೆ?

ಕೇವಲ ಒಂದು ಪಂದ್ಯದ ಸೋಲಿಗಾಗಿ ನೀವು ಇಷ್ಟು ಕೀಳು ಮಟ್ಟದ ಆರೋಪ ಹೊರಿಸಲು ಕಾರಣವೇನು ಎಂದು ಕೇಳಿದ ಪ್ರಶ್ನೆ ಉತ್ತರಿಸಿದ ಕುಸ್ತಿಪಟುವಿನ ತಂದೆ, ಇದು ನಿಮಗೆ ಕೇವಲ ಒಂದು ಸೋಲಾಗಿ ಕಾಣಬಹುದು. ಆದರೆ ಇದು ಒಂದು ವರ್ಷದ ಕಠಿಣ ಪರಿಶ್ರಮ. ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಕಷ್ಟಪಟ್ಟು ಪುನರಾಗಮನ ಮಾಡುತ್ತಿರುವ ಮಗುವಿನ ನೋವು ಒಬ್ಬ ತಂದೆಗೆ ಮಾತ್ರ ಗೊತ್ತು. ನನ್ನ ಮಗಳ ನೋವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಆ ಒಂದು ಪಂದ್ಯದ ಸೋಲಿನಿಂದ 4 ಅಂತಾರಾಷ್ಟ್ರೀಯ ಟೂರ್ನಿ ಕೈತಪ್ಪಿತು. ಇದೆಲ್ಲವನ್ನು ಕಂಡ ನಾನು ಅಂತಿಮವಾಗಿ ಈ ನಿರ್ಧಾರವನ್ನು ಕೈಗೊಂಡೆ ಎಂದು ಹೇಳಿದರು.

ದೂರು ಹಿಂಪಡೆಯಲು ಕಾರಣವೇನು?

ತಮ್ಮ ತಪ್ಪನ್ನು ಮತ್ತು ದೂರು ಹಿಂಪಡೆಯುವ ಕುರಿತು ಸ್ಪಷ್ಟನೆ ನೀಡಿರುವ ಕುಸ್ತಿಪಟುವಿನ ತಂದೆ, ತನ್ನ ಮಗಳ ಸೋಲಿನ ಬಗ್ಗೆ ನ್ಯಾಯಯುತ ತನಿಖೆಗೆ ಸರ್ಕಾರ ಭರವಸೆ ನೀಡಿದೆ. ಹಾಗಾಗಿ ನಾನು ನನ್ನ ನಿರ್ಧಾರವನ್ನು ಬದಲಾಯಿಸಿದ್ದೇನೆ ಎಂದು ಹೇಳಿದರು.

Continue Reading

ಕ್ರಿಕೆಟ್

WTC Final 2023: ಇನಿಂಗ್ಸ್​ ಹಿನ್ನಡೆ ಭಯದಲ್ಲಿ ಟೀಮ್​ ಇಂಡಿಯಾ

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತ ತಂಡ ಮೊದಲ ಇನಿಂಗ್ಸ್​ನಲ್ಲಿ 151 ರನ್​ಗೆ 5 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದೆ.

VISTARANEWS.COM


on

Edited by

Ajinkya Rahane and Srikar Bharat
Koo

ಲಂಡನ್​: ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಭಾರತ ತಂಡ ಇನಿಂಗ್ಸ್​ ಹಿನ್ನಡೆಯ ಭಯದಲ್ಲಿದೆ. ಆಸ್ಟ್ರೇಲಿಯಾ ಬಾರಿಸಿದ 469 ರನ್​ಗಳ ದೊಡ್ಡ ಮೊತ್ತವನ್ನು ಬೆನ್ನಟ್ಟುತ್ತಿರುವ ಭಾರತ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಸದ್ಯದ ಪರಿಸ್ಥಿತಿ ಗಮನಿಸುವಾಗ ಭಾರತ ತಂಡ 200 ರನ್​ಗಳ ಗಡಿ ದಾಟುವುದೂ ಕಷ್ಟಕರ ಎಂಬಂತಿದೆ. ಭಾರತ ಇನ್ನೂ 318 ರನ್​ಗಳನ್ನು ಬಾರಿಸಬೇಕಿದೆ.

ಮೊದಲ ದಿನದಾಟದ ಅಂತ್ಯಕ್ಕೆ 85 ಓವರ್​ಗಳಲ್ಲಿ ನಾಲ್ಕು ವಿಕೆಟ್​ ನಷ್ಟಕ್ಕೆ 327 ರನ್​ ಗಳಿಸಿದ್ದ ಆಸ್ಟ್ರೇಲಿಯಾ, ದ್ವಿತೀಯ ದಿನದಾಟದಲ್ಲಿ 142 ರನ್​ ಕಲೆ ಹಾಕುವ ಮೂಲಕ ಮೊದಲ ಇನಿಂಗ್ಸ್​​ನಲ್ಲಿ 469ರನ್​ಗೆ ಆಲೌಟ್​ ಆಯಿತು. ಸ್ಟೀವನ್​ ಸ್ಮಿತ್​ ಅವರ ಶತಕದ ಆಟ ದ್ವಿತೀಯ ದಿನದ ಪ್ರಮುಖ ಹೈಲೆಟ್​ ಆಗಿತ್ತು. ಭಾರತ ಪರ ಮೊಹಮ್ಮದ್​ ಸಿರಾಜ್​ ಅವರು ಒಟ್ಟು ನಾಲ್ಕು ವಿಕೆಟ್​ ಕಿತ್ತು ಮಿಂಚಿದರು.

ನಾಟಕೀಯ ಕುಸಿತ ಕಂಡ ಭಾರತ

ದೊಡ್ಡ ಮೊತ್ತವನ್ನು ಕಂಡು ಆರಂಭದಲ್ಲೇ ಬೆದರಿದ ಭಾರತದ ಬ್ಯಾಟರ್​ಗಳು ಸತತವಾಗಿ ವಿಕೆಟ್​ ಕೈಚೆಲ್ಲಿದರು. ಅದರಲ್ಲೂ ಶುಭಮನ್​ ಗಿಲ್​ ಮತ್ತು ಚೇತೇಶ್ವರ​ ಪೂಜಾರ ಅವರು ಅತ್ಯಂತ ಕೆಟ್ಟ ರೀತಿಯಲ್ಲಿ ವಿಕೆಟ್​ ಕೈಚೆಲ್ಲಿದರು. ವಿಕೆಟ್​ಗೆ ಬರುವ ಚೆಂಡಿಗೆ ಬ್ಯಾಟ್​ ಬೀಸುವ ಬದಲು ಬ್ಯಾಟ್​ ಎತ್ತಿ ಈ ಚೆಂಡನ್ನು ಬಿಡುವ ಮೂಲಕ ಕ್ಲೀನ್​ ಬೌಲ್ಡ್​​ ಆದರು. ಇದನ್ನು ಕಂಡ ಕ್ರಿಕೆಟ್​ ಪಂಡಿತರು ಗಿಲ್​ ಮತ್ತು ಪೂಜಾರ ವಿರುದ್ಧ ಕಿಡಿಕಾರಿದ್ದಾರೆ. ಇದು ಅತ್ಯಂತ ಕೆಟ್ಟ ರೀತಿಯ ಬ್ಯಾಟಿಂಗ್​ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ WTC Final 2023: ಪಂತ್​ ದಾಖಲೆ ಮುರಿದ ಟ್ರಾವಿಸ್​ ಹೆಡ್​

ರೋಹಿತ್​ ಶರ್ಮ, ವಿರಾಟ್​ ಕೊಹ್ಲಿಯೂ ಕೂಡ ನಿರೀಕ್ಷಿತ ಮಟ್ಟದ ಬ್ಯಾಟಿಂಗ್​ ನಡೆಸುವಲ್ಲಿ ವಿಫಲರಾದರು. ರವೀಂದ್ರ ಜಡಜೇ ಅವರು ಕೆಲ ಕಾಲ ದಿಟ್ಟ ರೀತಿಯ ಬ್ಯಾಟಿಂಗ್​ ಪ್ರದರ್ಶನ ತೋರಿದರೂ 48 ರನ್​ ಗಳಿಸಿದ್ದ ವೇಳೆ ನಥಾನ್​ ಲಿಯೋನ್​ ಅವರ ಮೊದಲ ಓವರ್​ನಲ್ಲಿಯೇ ಸ್ಲಿಪ್​ನಲ್ಲಿ ಕ್ಯಾಚ್​ ನೀಡಿ ನಿರ್ಗಮಿಸಿದರು. ಸದ್ಯ ಅಜಿಂಕ್ಯ ರಹಾನೆ 29* ಮತ್ತು ಶ್ರೀಕರ್​ ಭರತ್​ 5* ರನ್​ ಗಳಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ. ಮೂರನೇ ದಿನವಾದ ಶುಕ್ರವಾರ ಉಭಯ ಆಟಗಾರರು ದೊಡ್ಡ ಮೊತ್ತದ ಇನಿಂಗ್ಸ್ ಕಟ್ಟಿದರೆ ಮಾತ್ರ ಭಾರತ ಈ ಪಂದ್ಯವನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಆಸೀಸ್​ ಪರ ಬೌಲಿಂಗ್​ ನಡೆಸಿದ ಐದೂ ಬೌಲರ್​ಗಳು ತಲಾ ಒಂದೊಂದು ವಿಕೆಟ್​ ಪಡೆದಿದ್ದಾರೆ.

Continue Reading
Advertisement
Monsoon Fashion 2023
ಫ್ಯಾಷನ್10 mins ago

Monsoon Fashion 2023: ಫ್ಯಾಷನ್‌ ಲೋಕಕ್ಕೆ ಲಗ್ಗೆ ಇಟ್ಟ ಮಾನ್ಸೂನ್‌ ಸೀಸನ್‌ ವೈಬ್ರೆಂಟ್‌ ಔಟ್‌ಫಿಟ್ಸ್!

Chamarajanagar oxygen tragedy and Dinesh Gundu Rao
ಆರೋಗ್ಯ13 mins ago

Dinesh Gundu Rao: ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ ಮರು ತನಿಖೆ; ರೆಡಿ ಆಗ್ತಿದೆ ಡಿಪಿಆರ್!

Manja Thread dead person
ಕರ್ನಾಟಕ15 mins ago

Manja Thread: ಯಾರೋ ಹಾರಿಸಿದ ಗಾಳಿಪಟದ ಮಾಂಜಾ ದಾರ ತೆಗೆಯಿತು ಅಮಾಯಕನ ಪ್ರಾಣ!

Lock and unlock of aadhar services through online
ತಂತ್ರಜ್ಞಾನ18 mins ago

Aadhaar Services: ಆನ್‌ಲೈನ್ ಮೂಲಕ ಆಧಾರ್ ‘ಲಾಕ್’ ಮತ್ತು ‘ಅನ್‌ಲಾಕ್’ ಮಾಡುವುದು ಹೇಗೆ?

Gujarat High Court On Termination Of Pregnancy
ದೇಶ26 mins ago

17 ವರ್ಷದ ಹೆಣ್ಣುಮಕ್ಕಳು ಮಗು ಹೆರುವ ಕಾಲವಿತ್ತು; ರೇಪ್‌ ಸಂತ್ರಸ್ತೆಯ ಗರ್ಭಪಾತ ಬೇಡವೆಂದ ಹೈಕೋರ್ಟ್

Virat Kohli troll
ಕ್ರಿಕೆಟ್37 mins ago

WTC Final 2023: ಹಣಕ್ಕಾಗಿ ಅಲ್ಲ, ದೇಶಕ್ಕಾಗಿ ಆಡು; ಔಟಾದ ಬಳಿಕ ಊಟದ ಜತೆ ಬೈಗುಳ ತಿಂದ ಕೊಹ್ಲಿ

Appeals to CM not to increase liquor prices
ಕರ್ನಾಟಕ1 hour ago

Viral News: ಮುಖ್ಯಮಂತ್ರಿಗಳೇ ಎಣ್ಣೆ ರೇಟ್‌ ಜಾಸ್ತಿ ಮಾಡ್ಬೇಡಿ; BPL ಕಾರ್ಡ್‌ದಾರನ ವಾರ್ಷಿಕ ಲೆಕ್ಕ ಮುಂದಿಟ್ಟ ಕುಡುಕರ ಸಂಘ!

A new country is ready in just Rs 15 lakh and the name is Slowjamastan
ಪ್ರಮುಖ ಸುದ್ದಿ1 hour ago

New Country: ಕೇವಲ 15 ಲಕ್ಷ ರೂ.ನಲ್ಲಿ ರೆಡಿ ಆಯ್ತು ಹೊಸ ದೇಶ, ಹೆಸರು ಸ್ಲೋಜಾಮ್‌ಸ್ತಾನ!

water issuse
ಉಡುಪಿ1 hour ago

Viral News: ಶಾಲೆಗೆ ನೀರು ಪೂರೈಸಲು ಹೊರಟಿದ್ದ ಟ್ಯಾಂಕರ್‌ ವಾಪಸ್‌; ನೀರು ಕೊಡ್ಬೇಡ ಎಂದು ಗ್ರಾಪಂ ಅಧ್ಯಕ್ಷ ಅವಾಜ್‌

ICC World Test Championship Final 2023
Live News1 hour ago

WTC Final 2023: ಭಾರತ-ಆಸೀಸ್​ ಮೂರನೇ ದಿನದಾಟದ ಹೈಲೆಟ್ಸ್​

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ11 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ4 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ6 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್8 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Cancellation of tenders for 108 ambulances and Dinesh Gundu rao
ಆರೋಗ್ಯ4 hours ago

Dinesh Gundu Rao: ಬಿಜೆಪಿ ಅವಧಿಯ 108 ಆಂಬ್ಯುಲೆನ್ಸ್‌, ಡಯಾಲಿಸಿಸ್‌ ಟೆಂಡರ್‌ ರದ್ದು; ಆರೋಗ್ಯ ಇಲಾಖೆಯಲ್ಲಿ ಮೇಜರ್‌ ಸರ್ಜರಿ

Meghalaya Villagers Chase Bangladesh soldiers
ದೇಶ4 hours ago

Viral Video : ಗಡಿ ದಾಟಿ ಭಾರತಕ್ಕೆ ನುಗ್ಗಿದ ಬಾಂಗ್ಲಾ ಯೋಧರು! ಅಟ್ಟಾಟಿಸಿಕೊಂಡು ಒದ್ದೋಡಿಸಿದ ಹಳ್ಳಿಗರು

snake mate in chamarajnagar 2
ಕರ್ನಾಟಕ4 hours ago

Video Viral: ಚಾಮರಾಜನಗರದಲ್ಲಿ ಹಾವುಗಳ ಮಿಲನ; ಗಂಟೆಗೂ ಹೆಚ್ಚು ಸರಸ ಸಲ್ಲಾಪ! ವೈರಲ್‌ ಆಯ್ತು ವಿಡಿಯೊ

Rain in mangalore
ಉಡುಪಿ6 hours ago

Rain News: ಬಿಪರ್‌ಜಾಯ್‌ ಸೈಕ್ಲೋನ್ ಎಫೆಕ್ಟ್‌; ಮಂಗಳೂರಲ್ಲಿ ಚಿಟಪಟ ಮಳೆ

Rain in koppal
ಉಡುಪಿ21 hours ago

Weather Report: ಕರಾವಳಿಯಲ್ಲಿ ಗುಡುಗಲಿರುವ ಮಳೆ; ಮಲೆನಾಡು, ಒಳನಾಡಲ್ಲಿ ಹೇಗಿರಲಿದೆ ಪ್ರಭಾವಳಿ

youths rescued in Kaveri river
ಕರ್ನಾಟಕ22 hours ago

Video Viral: ತಲಕಾಡಿನ ಕಾವೇರಿ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಯುವಕರ ರಕ್ಷಣೆ!

Elephant attack in muttunga wildlife sanctuary
ಕರ್ನಾಟಕ1 day ago

Viral Video: ವನ್ಯಧಾಮದಲ್ಲಿ ಮೂತ್ರಕ್ಕೆಂದು ಕಾಡಿಗೆ ಹೋದ; ಆನೆ ದಾಳಿಗೆ ಹೆದರಿ ಪ್ಯಾಂಟ್‌ ಹಿಡಿದು ಓಡೋಡಿ ಬಂದ!

abhishek ambareesh wedding Reception
ಕರ್ನಾಟಕ2 days ago

Abhishek Ambareesh Reception: ಅಭಿ- ಅವಿವ ಅದ್ಧೂರಿ ಆರತಕ್ಷತೆ; ಲೈವ್‌ ವಿಡಿಯೊ ಇಲ್ಲಿದೆ

N Chaluvarayaswamy about Congress guarantee
ಕರ್ನಾಟಕ2 days ago

Video Viral: ಉಚಿತ ಗ್ಯಾರಂಟಿ ಯೋಜನೆ ಚುನಾವಣೆಯ ಚೀಪ್‌ ಗಿಮಿಕ್‌ ಎಂದ ಕೃಷಿ ಸಚಿವ ಚಲುವರಾಯಸ್ವಾಮಿ!

horoscope today love and horoscope
ಪ್ರಮುಖ ಸುದ್ದಿ2 days ago

Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!

ಟ್ರೆಂಡಿಂಗ್‌

error: Content is protected !!