Yuki Bhambri | ಸಿಂಗಲ್ಸ್​ ವಿಭಾಗದ ಟೆನಿಸ್​ಗೆ ವಿದಾಯ ಹೇಳಿದ ಭಾರತದ ಯೂಕಿ ಭಾಂಭ್ರಿ! - Vistara News

ಕ್ರೀಡೆ

Yuki Bhambri | ಸಿಂಗಲ್ಸ್​ ವಿಭಾಗದ ಟೆನಿಸ್​ಗೆ ವಿದಾಯ ಹೇಳಿದ ಭಾರತದ ಯೂಕಿ ಭಾಂಭ್ರಿ!

ಗ್ರ್ಯಾನ್‌ ಸ್ಲಾಮ್‌ ಟೂರ್ನಿಗಳ ಡಬಲ್ಸ್‌ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುವ ನಿಟ್ಟಿನಲ್ಲಿ ಯೂಕಿ ಭಾಂಭ್ರಿ ಅವರು ಸಿಂಗಲ್ಸ್ ಮಾದರಿಯ ಟೆನಿಸ್​ಗೆ ವಿದಾಯ ಹೇಳಿದ್ದಾರೆ.

VISTARANEWS.COM


on

Yuki Bhambri
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಭಾರತದ ಸ್ಟಾರ್​ ಟೆನಿಸ್ ಆಟಗಾರರಲ್ಲಿ ಒಬ್ಬರಾದ ಯೂಕಿ ಭಾಂಭ್ರಿ ಅವರು ಸಿಂಗಲ್ಸ್ ಮಾದರಿಗೆ ಬುಧವಾರ ವಿದಾಯ ಹೇಳಿದ್ದಾರೆ. ಗ್ರ್ಯಾನ್‌ ಸ್ಲಾಮ್‌ ಟೂರ್ನಿಗಳ ಡಬಲ್ಸ್‌ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುವ ನಿಟ್ಟಿನಲ್ಲಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ದೀರ್ಘಕಾಲ ಮೊಣಕಾಲು ನೋವಿನಿಂದ ಬಳಲುತ್ತಿರುವುದೂ ಕೂಡ ಯೂಕಿ ಅವರು ಸಿಂಗಲ್ಸ್ ವಿಭಾಗ ತೊರೆಯಲು ಮತ್ತೊಂದು ಪ್ರಮುಖ ಕಾರಣವಾಗಿದೆ. ಸಾನಿಯಾ ಮಿರ್ಜಾ ಬಳಿಕ ಸಿಂಗಲ್ಸ್ ವಿಭಾಗದ ಟೆನಿಸ್​ಗೆ​ ವಿದಾಯ ಹೇಳಿದ ಎರಡನೇ ಭಾರತದ ಪ್ರಮುಖ ಟೆನಿಸ್‌ ಪಟು ಎನಿಸಿದ್ದಾರೆ.

“ಸಿಂಗಲ್ಸ್ ವಿಭಾಗದಲ್ಲಿ ನಾನು ಇದುವರೆಗೆ ಆಡಿದ ಟೂರ್ನಿಗಳಲ್ಲಿ ಶ್ರೇಷ್ಠ ನಿರ್ವಹಣೆ ತೋರಿದ್ದೇನೆ. ಆ ಕುರಿತು ಸಂತೃಪ್ತಿ ಇದೆ. ಸಿಂಗಲ್ಸ್​ ವಿಭಾಗದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕಿತ್ತೆಂಬ ಪಶ್ಚಾತ್ತಾಪ ಇಲ್ಲ. ಈ ನಿರ್ಧಾರದ ಹಿಂದೆ ಗಾಯದ ಪಾತ್ರವೂ ಪ್ರಮುಖವಾಗಿದೆ” ಎಂದು ಭಾಂಭ್ರಿ ವಿದಾಯದ ಬಳಿಕ ಹೇಳಿದ್ದಾರೆ.

“ಸಿಂಗಲ್ಸ್​ ವಿಭಾಗ ತೊರೆದರೂ ಡಬಲ್ಸ್ ಸ್ಪರ್ಧೆಗಳಲ್ಲಿ ಮುಂದುವರಿಯಲು ನಿರ್ಧರಿಸಿದ್ದೇನೆ. ಗಾಯಗೊಂಡ ಕಾರಣ ಟೆನಿಸ್​ನಿಂದ ಮೂರು ವರ್ಷಗಳ ಕಾಲ ದೂರ ಉಳಿದಿದ್ದೆ. ಆದರೆ 2021ರಲ್ಲಿ ಆಟಕ್ಕೆ ಮರಳಿದರೂ ದೀರ್ಘ ಸಮಯದ ವರೆಗೆ ಹೋರಾಡಲು ಕಷ್ಟವಾಗುತ್ತದೆ. ಈ ಕಾರಣದಿಂದ ಸಿಂಗಲ್ಸ್​ ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿದೆ” ಎಂದು ಭಾಂಭ್ರಿ ಹೇಳಿದರು.

ಯೂಕಿ ಭಾಂಭ್ರಿ ಅವರು ಸಿಂಗಲ್ಸ್ ವಿಭಾಗದಲ್ಲಿ 2015, 2016 ಮತ್ತು 2018ರ ಆಸ್ಟ್ರೇಲಿಯಾ ಓಪನ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಆಡಿದ್ದಾರೆ. 2018ರಲ್ಲಿ ಫ್ರೆಂಚ್‌ ಓಪನ್‌, ವಿಂಬಲ್ಡನ್‌ ಮತ್ತು ಅಮೆರಿಕ ಓಪನ್ ಟೂರ್ನಿಗಳ ಮೊದಲ ಸುತ್ತಿನ ಪಂದ್ಯಗಳಲ್ಲೂ ಕಣಕ್ಕಿಳಿದಿದ್ದರು. ಸಿಂಗಲ್ಸ್ ವಿಭಾಗದಲ್ಲಿ 2018ರ ಏಪ್ರಿಲ್‌ನಲ್ಲಿ ಜೀವನಶ್ರೇಷ್ಠ 83ನೇ ರ‍್ಯಾಂಕಿಂಗ್‌ ತಲುಪಿದ್ದು ಅವರ ಪ್ರಮುಖ ಸಾಧನೆಯಾಗಿದೆ.

ಇದನ್ನೂ ಓದಿ | Asian Cup Table Tennis | ಐತಿಹಾಸಿಕ ಪದಕ ಗೆದ್ದ ಮಣಿಕಾ ಬಾತ್ರಾ; ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2024 : ಆರ್​ಸಿಬಿ, ಕೊಹ್ಲಿಯ ನೆರವು ಸ್ಮರಿಸಿದ ಕೆ. ಎಲ್ ರಾಹುಲ್​

IPL 2024 : ರಣಜಿ ಟ್ರೋಫಿಯನ್ನು ಆಡುವ ಮೂಲಕ
ಉತ್ತಮ ಆಟಗಾರನಾಗಲು ನಾನು ತೆಗೆದುಕೊಂಡ ಸಮಯವು ಬಹುಶಃ 7-8 ಋತುಗಳು. ಆದರೆ ಐಪಿಎಲ್​​ನಲ್ಲಿ ಆ ಎರಡು ತಿಂಗಳುಗಳು ನಾನು ತುಂಬಾ ಜ್ಞಾನ ಮತ್ತು ಅನುಭವ ಪಡೆದುಕೊಂಡೆ. ಎಲ್ಲವೂ ವೇಗವಾಗಿ ಮುಂದುವರಿಯಿತು ಎಂದು ರಾಹುಲ್ ಹೇಳಿದ್ದಾರೆ.

VISTARANEWS.COM


on

IPL 2024
Koo

ಬೆಂಗಳೂರು: ಕೆಎಲ್ ರಾಹುಲ್ 2022ರಲ್ಲಿ ಪ್ರಾರಂಭವಾದಾಗಿನಿಂದ ಸಾಕಷ್ಟು ಸ್ಥಿರವಾಗಿರುವ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯ ನಾಯಕನಾಗಿದ್ದಾರೆ. ಆದರೆ ಅವರ ಹೃದಯದ ಒಂದು ಭಾಗವು ಅವರ ಮೊದಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜತೆಗಿದೆ ಎನ್ನಲಾಗುತ್ತಿದೆ.

2013 ರ ಋತುವಿಗೆ ಮುಂಚಿತವಾಗಿ ಜನಪ್ರಿಯ ಫ್ರಾಂಚೈಸಿಗೆ ಆಡುವುದಾಗಿ ಸಹಿ ಹಾಕಿದ ನಂತರ ರಾಹುಲ್ ಐಪಿಎಲ್​​ನಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಂತರ ರಾಯಲ್ ಚಾಲೆಂಜರ್ಸ್ ತಂಡ ಸೇರಲು ವಿರಾಟ್ ಕೊಹ್ಲಿ ಅವರನ್ನು ಕೇಳಿಕೊಂಡಿದರು. ಎಂದು ವಿಕೆಟ್ ಕೀಪರ್- ಬ್ಯಾಟರ್​ ಬಹಿರಂಗಪಡಿಸಿದ್ದಾರೆ. ವಾಸ್ತವವಾಗಿ, ಕೊಹ್ಲಿ ನನಗೆ ಆಯ್ಕೆ ನೀಡಲಿಲ್ಲ. ಆರ್​ಸಿಬಿ ಪರ ಆಡುವುದು ಯಾವಾಗಲೂ ತನ್ನ ಕನಸು ಎಂದು ಕರ್ನಾಟಕದ ಬ್ಯಾಟರ್​ ಹೇಳಿದ್ದಾರೆ.

ಸಹಿ ಹಾಕು ಅಂದಿದ್ದ ಕೊಹ್ಲಿ

ವಿರಾಟ್ ತರಬೇತುದಾರ ರೇ ಜೆನ್ನಿಂಗ್ಸ್ ಮತ್ತು ಇತರ ಸಹಾಯಕ ಸಿಬ್ಬಂದಿ ಹೋಟೆಲ್​ನಲ್ಲಿದ್ದರು. ವಿರಾಟ್ ‘ನೀವು ಈ ಒಪ್ಪಂದಕ್ಕೆ ಸಹಿ ಹಾಕಿ ಆರ್​ಸಿಬಿಗಾಗಿ ಆಡಲು ಬಯಸುವಿರಾ?’ ಎಂದು ಕೇಳಿದರು. ನಾನು, ‘ನೀವು ತಮಾಷೆ ಮಾಡುತ್ತಿದ್ದೀರಾ? ಅದು ಯಾವಾಗಲೂ ನನ್ನ ಕನಸಾಗಿತ್ತು ಎಂದು ಹೇಳಿದೆ. ಈ ವೇಳೆ ವಿರಾಟ್ ನಾನು ತಮಾಷೆ ಮಾಡುತ್ತಿದ್ದೇನೆ. ಇದು ಆಯ್ಕೆಯಲ್ಲ, ಈ ಒಪ್ಪಂದಕ್ಕೆ ಸಹಿ ಹಾಕಿ ಎಂದು ಹೇಳಿದರು. ಎಂದು ರವಿಚಂದ್ರನ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್​​ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ರಾಹುಲ್ ಮಾತನಾಡಿದ್ದಾರೆ.

ಆ ಎರಡು ತಿಂಗಳಲ್ಲಿ ನಾನು ಕಲಿತ ವಿಷಯಗಳು ಸಾಕಷ್ಟಿವೆ. ಕೇವಲ ರಣಜಿ ಟ್ರೋಫಿಯನ್ನು ಆಡುವ ಮೂಲಕ ಆಟಗಾರನಾಗಲು ನಾನು ತೆಗೆದುಕೊಂಡ ಸಮಯವು ಬಹುಶಃ 7-8 ಋತುಗಳು. ಆದರೆ ಐಪಿಎಲ್​​ನಲ್ಲಿ ಆ ಎರಡು ತಿಂಗಳುಗಳು ನಾನು ತುಂಬಾ ಜ್ಞಾನ ಮತ್ತು ಅನುಭವ ಪಡೆದುಕೊಂಡೆ. ಎಲ್ಲವೂ ವೇಗವಾಗಿ ಮುಂದುವರಿಯಿತು, “ಎಂದು ರಾಹುಲ್ ಹೇಳಿದ್ದಾರೆ.

ನಾನು ಆರ್ಸಿಬಿಯಲ್ಲಿ ಮುಗಿಸಲು ಬಯಸಿದ್ದೆ: ಕೆಎಲ್ ರಾಹುಲ್

ಕೆಎಲ್ ರಾಹುಲ್ ತಮ್ಮ ಅಧಿಕಾರಾವಧಿಯಲ್ಲಿ ಆರ್​ಸಿಬಿ ಪರ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದರು. ಆದಾಗ್ಯೂ, ಅವರು ಇಲೆವೆನ್​ನಲ್ಲಿ ಶಾಶ್ವತ ಸ್ಥಾನವನ್ನು ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಅಂತಿಮವಾಗಿ 2016 ರ ಋತುವಿನ ನಂತರ ಬಿಡುಗಡೆ ಮಾಡಲಾಯಿತು. ತಮ್ಮ ಇಡೀ ಐಪಿಎಲ್ ವೃತ್ತಿಜೀವನವನ್ನು ಬೆಂಗಳೂರು ಮೂಲದ ಫ್ರಾಂಚೈಸಿಯಲ್ಲಿ ಕಳೆಯಲು ಇಷ್ಟಪಡುತ್ತೇನೆ ಎಂದು 32 ವರ್ಷದ ಆಟಗಾರ ಹೇಳಿದ್ದಾರೆ ಆರ್​ಸಿಬಿಯಿಂದ ಬಿಡುಗಡೆಯಾದ ನಂತರ, ರಾಹುಲ್ ಲಕ್ನೋಗೆ ಹೋಗುವ ಮೊದಲು ಸನ್ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ಪರ ಆಡಿದ್ದರು.

ಇದನ್ನೂ ಓದಿ: IPL 2024 : ಪಾಂಡ್ಯನನ್ನು ವಿಚಿತ್ರ ನಾಯಕ ಎಂದ ಮುಂಬೈ ಇಂಡಿಯನ್ಸ್​ ಆಲ್​ರೌಂಡರ್​​

“ನಾನು ಬೆಂಗಳೂರು ಪರ ಆಡಲು ಇಷ್ಟಪಡುತ್ತಿದ್ದೆ. ನಾನು ಅಲ್ಲಿಂದ ಪ್ರಾರಂಭಿಸಿದ್ದೆ, ನಾನು ಅಲ್ಲಿಯೇ ಮುಗಿಸಲು ಬಯಸಿದ್ದೆ. ಅದು ನನ್ನ ತಲೆಯಲ್ಲಿತ್ತು. ಆದರೆ ಐಪಿಎಲ್​ನ ಸೌಂ ದರ್ಯವೆಂದರೆ ನೀವು ವಿಭಿನ್ನ ಆಟಗಾರರೊಂದಿಗೆ ವಿಭಿನ್ನ ತಂಡಗಳಿಗೆ ಹೋಗಬಹುದು ,” ಎಂದು ರಾಹುಲ್ ಹೇಳಿದರು.

Continue Reading

ಕ್ರೀಡೆ

IPL 2024 : ಪಾಂಡ್ಯನನ್ನು ವಿಚಿತ್ರ ನಾಯಕ ಎಂದ ಮುಂಬೈ ಇಂಡಿಯನ್ಸ್​ ಆಲ್​ರೌಂಡರ್​​

IPL 2024: ಅಫ್ಘಾನಿಸ್ತಾನದ ಅನುಭವಿ ಸ್ಪಿನ್ ಆಲ್ರೌಂಡರ್ ಮೊಹಮ್ಮದ್ ನಬಿ ಅವರನ್ನು ಐಪಿಎಲ್ 2024 ರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಖರೀದಿಸಿತು. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಬಿ ಶೂನ್ಯಕ್ಕೆ ಔಟಾಗಿದ್ದರು. ಅವರು ಬೌಲಿಂಗ್ ಮಾಡದಿದ್ದರೂ, ಅವರು ಅಶುತೋಷ್ ಶರ್ಮಾ ಮತ್ತು ಶಶಾಂಕ್ ಸಿಂಗ್ ಅವರ ಕ್ಯಾಚ್​​ಗಳನ್ನು ಪಡೆದಿದ್ದಾರೆ.

VISTARANEWS.COM


on

IPL 2024
Koo

ಬೆಂಗಳೂರು: ಗುರುವಾರ ನಡೆದ ಐಪಿಎಲ್​​ 2024ರ (IPL 2024) ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡದ 9 ರನ್​ಗಳ ರೋಚಕ ಗೆಲುವಿನ ನಂತರ, ಆಸಕ್ತಿದಾಯಕ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮುಂಬೈ ಇಂಡಿಯನ್ಸ್​ ತಂಡದ ಆಲ್​ರೌಂಡರ್​ ಮೊಹಮ್ಮದ್ ನಬಿ (Mohammed Nabi) ಆ ಪೋಸ್ಟ್​ ಅನ್ನು ಮರು ಹಂಚಿಕೊಂಡಿದ್ದಾರೆ. ಆ ಪೋಸ್ಟ್​​ನಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ವಿಚಿತ್ರ ಎಂದು ಹೇಳಲಾಗಿತ್ತು. ಅದನ್ನು ನಬಿ ಹಂಚಿಕೊಳ್ಳುವ ಮೂಲಕ ಚರ್ಚೆ ಹುಟ್ಟು ಹಾಕಿದ್ದಾರೆ. ಹಾರ್ದಿಕ್ ಪಾಂಡ್ಯ (Hardik Pandya) ಅವರ ಕೆಲವೊಂದು ನಿರ್ಧಾರಗಳ ಬಗ್ಗೆ ಈಗಾಗಲೇ ಐಪಿಎಲ್ ವಲಯದಲ್ಲಿ ಜೋರು ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ನವಿ ಕೂಡ ಅವರ ವಿರುದ್ಧ ತಿರುಗಿ ಬಿದ್ದರೇ ಎಂಬ ಅನುಮಾನ ವ್ಯಕ್ತಗೊಂಡಿದೆ.

ಇಜಾಜ್.ಅಜೀಜಿ 07 ಎಂಬ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೀಗೆ ಬರೆದಿದ್ದಾರೆ. ಅದು ಮುಂಬೈ ಇಂಡಿಯನ್ಸ್ ತಂಡದ ಕುರಿತಾಗಿದೆ. “ನಿಮ್ಮಲ್ಲಿ ನಾಯಕನ ಕೆಲವು ನಿರ್ಧಾರವು ತುಂಬಾ ವಿಚಿತ್ರ ಮತ್ತು ಆಶ್ಚರ್ಯಕರ. ತಂಡ ಜನರನ್ನು ಆಶ್ಚರ್ಯಗೊಳಿಸುತ್ತದೆ. ಅಂತೆಯೇ ನಬಿ ಇಂದು ಬೌಲಿಂಗ್ ಮಾಡಲಿಲ್ಲ ಎಂದು ಬರೆದುಕೊಂಡಿದೆ.

ಮತ್ತೊಂದು ಸ್ಟೋರಿಯಲ್ಲಿ ಹೀಗೆ ಬರೆಯಲಾಗಿದೆ. ” ಪ್ರೆಸಿಡೆಂಟ್​ (ಅಧ್ಯಕ್ಷ) ಬಹಳ ಅಗತ್ಯ ಸಮಯದಲ್ಲಿ ಗೇಮ್ ಚೇಂಜರ್! ಎರಡು ಕ್ಯಾಚ್ ಗಳು ಮತ್ತು ಒಂದು ರನ್ ಔಟ್ ಮಾಡಿದ್ದಾರೆ.

ಅಫ್ಘಾನಿಸ್ತಾನದ ಅನುಭವಿ ಸ್ಪಿನ್ ಆಲ್ರೌಂಡರ್ ಮೊಹಮ್ಮದ್ ನಬಿ ಅವರನ್ನು ಐಪಿಎಲ್ 2024 ರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಖರೀದಿಸಿತು. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಬಿ ಶೂನ್ಯಕ್ಕೆ ಔಟಾಗಿದ್ದರು. ಅವರು ಬೌಲಿಂಗ್ ಮಾಡದಿದ್ದರೂ, ಅವರು ಅಶುತೋಷ್ ಶರ್ಮಾ ಮತ್ತು ಶಶಾಂಕ್ ಸಿಂಗ್ ಅವರ ಕ್ಯಾಚ್​​ಗಳನ್ನು ಪಡೆದಿದ್ದಾರೆ. ಇಬ್ಬರು ಆಟಗಾರರು ಪಿಬಿಕೆಎಸ್ ತಂಡವನ್ನು ಮುಂಬೈ ವಿರುದ್ಧ ಗೆಲುವಿನತ್ತ ಕೊಂಡೊಯ್ಯಲು ಮುಂದಾಗಿದ್ದರು. ಕೊನೆಯ ವಿಕೆಟ್ ಆಗಿ ರನ್​ ಔಟ್​ ಕಗಿಸೊ ರಬಾಡ ಅವರ ವಿಕೆಟ್​ ಕೂಡ ನಬಿಯ ಬೆಸ್ಟ್​ ಫೀಲ್ಡಿಂಗ್​ ಕೊಡುಗೆಯಾಗಿದೆ.

ಡಿಲೀಟ್ ಮಾಡಿದ ನಬಿ

ಮೊಹಮ್ಮದ್ ನಬಿ ಅವರು ಈ ಇನ್​ಸ್ಟಾಗ್ರಾಮ್ ಸ್ಟೋರಿಯನ್ನು ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ. ಅವರು ಶೇರ್​ ಮಾಡಿದ್ದಾರೆ ಎನ್ನಲಾಗುವ ಪೋಸ್ಟ್ ಶುಕ್ರವಾರ ಮಧ್ಯಾಹ್ನ ಅವರ ಪ್ರೊಫೈಲ್​ನಲ್ಲಿ ಕಂಡಿರಲಿಲ್ಲ.

ಇನ್ಸ್ಟಾಗ್ರಾಮ್ ಬಳಕೆದಾರರು ಇಜಾಜ್.ಅಜೀಜಿ 07 ಎಂಬ ಡಿಸ್​ಪಲೇ ಹೆಸರಿನಿಂದ ಮಾಡಿದ ಮೂಲ ಪೋಸ್ಟ್ ಇನ್ನೂ ವ್ಯಕ್ತಿಯ ಹ್ಯಾಂಡಲ್​​ನಲ್ಲಿದೆ. ಹೀಗಾಗಿ ಮೊಹಮ್ಮದ್ ನಬಿ ಈ ಪೋಸ್ಟ್ ಅನ್ನು ಮತ್ತೆ ಹಂಚಿಕೊಂಡಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ವೈರಲ್ ಆಗಿರುವ ಸ್ಕ್ರೀನ್ ಶಾಟ್ ಎಂಐ ಶಿಬಿರದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ. ಆದಾಗ್ಯೂ, ಘಟನೆಗೆ ಸಂಬಂಧಿಸಿದಂತೆ ಎಂಐ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈನ ನಿಧಾನಗತಿಯ ಓವರ್ ರೇಟ್​​ಗಾಗಿ ಪಾಂಡ್ಯಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಇದನ್ನೂ ಓದಿ: Preity Zinta : ರೋಹಿತ್​ ಶರ್ಮಾಗಾಗಿ ಪ್ರಾಣ ಪಣಕ್ಕಿಡಲು ಸಿದ್ಧ; ಪ್ರೀತಿ ಜಿಂಟಾ ಹೇಳಿಕೆ ಸಿಕ್ಕಾಪಟ್ಟೆ ವೈರಲ್​

“ಏಪ್ರಿಲ್ 18 ರಂದು ಮುಲ್ಲಾನ್ಪುರದ ಪಿಸಿಎ ನ್ಯೂ ಇಂಟರ್​ನ್ಯಾಷನಲ್​​ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರ ತಂಡವು ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದರು. ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದ ಐಪಿಎಲ್​ನ ನೀತಿ ಸಂಹಿತೆಯ ಅಡಿಯಲ್ಲಿ ಇದು ಅವರ ತಂಡದ ಮೊದಲ ಅಪರಾಧ. ಪಾಂಡ್ಯಗೆ 12 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ” ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ

Continue Reading

ಕ್ರಿಕೆಟ್

IPL 2024: ಅಭ್ಯಾಸದ ವೇಳೆ ರಾಹುಲ್​ಗೆ ಪತ್ನಿಯಿಂದ ಸಾಥ್​; ವಿಡಿಯೊ ವೈರಲ್​

IPL 2024: ಇಂದು ನಡೆಯುವ ಐಪಿಎಲ್(IPL 2024)​ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್ ತಂಡ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆಡಲಿದೆ. ಈ ಪಂದ್ಯ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

VISTARANEWS.COM


on

IPL 2024
Koo

ಲಕ್ನೋ: ನಿನ್ನೆಯಷ್ಟೇ ಕೆ.ಎಲ್​ ರಾಹುಲ್(KL Rahul)​ ಅವರು 32ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇಂದು ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆಡಲಿದ್ದಾರೆ. ಈ ಪಂದ್ಯಕ್ಕೆ ರಾಹುಲ್​ ಅಭ್ಯಾಸ ನಡೆಸುವ ವೇಳೆ ಪತ್ನಿ ಅಥಿಯಾ ಶೆಟ್ಟಿ(Athiya Shetty) ಕೂಡ ಸಾತ್​ ನೀಡಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಮೈದಾನದಲ್ಲಿ ರಾಹುಲ್​ ಅವರು ಅಭ್ಯಾಸ ನಡೆಸುವ ವೇಳೆ ಅಥಿಯಾ ಶೆಟ್ಟಿ ರಾಹುಲ್​ ಅವರ ಲಕ್ನೋ ತಂಡದ ಜೆರ್ಸಿ ತೊಟ್ಟು ಮಾತನಾಡುತ್ತಿರುವ ವಿಡಿಯೊ ವೈರಲ್​ ಆಗಿದೆ. ರಾಹುಲ್​ ನಿನ್ನೆ ರಾತ್ರಿ ತಂಡದ ಆಟಗಾರರೊಂದಿಗೆ ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಅಥಿಯಾ ಶೆಟ್ಟಿ ಲಕ್ನೋಗೆ ಬಂದಿದ್ದರು. ಇಂದು ನಡೆಯುವ ಪಂದ್ಯದ ವೇಳೆಯೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಕೆ.ಎಲ್‌. ರಾಹುಲ್‌ ಅವರು ಹುಟ್ಟಿದ್ದು ಏಪ್ರಿಲ್​ 18, 1992ರಲ್ಲಿ. ಬೆಂಗಳೂರಿನಲ್ಲಿ ಜನಿಸಿದ ಅವರು ಬಾಲ್ಯ ಕಳೆದದ್ದು ಮಂಗಳೂರಿನಲ್ಲಿ. ತನ್ನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸುರತ್ಕಲ್‌ನ ಎನ್‌ಐಟಿಕೆ ಆಂಗ್ಲ ಮಾದ್ಯಮ ಶಾಲೆಯಲ್ಲಿ ಪೂರ್ಣಗೊಳಿಸಿದ ಅವರು, ಪಿಯುಸಿ ವಿದ್ಯಾಬ್ಯಾಸವನ್ನು ಮಂಗಳೂರಿನ ಸೈಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಪಡೆದರು. ಬಳಿಕ ಕ್ರಿಕೆಟ್​ಗಾಗಿ ಬೆಂಗಳೂರಿನತ್ತ ಮುಖ ಮಾಡಿದ್ದರು. ಎಲ್ಲೇ ಇದ್ದರೂ ಕನ್ನಡದ ಪ್ರೇಮವನ್ನು ಅವರು ಮರೆತಿಲ್ಲ. ಕರ್ನಾಟಕ ಮೂಲದ ಕ್ರಿಕೆಟಿಗರಲ್ಲಿ ಕನ್ನಡವನ್ನೇ ಮಾತನಾಡಿ ಹಲವು ಬಾರಿ ಕನ್ನಡಿಗರ ಮನ ಗೆದ್ದಿದ್ದರು.

ಕೆ.ಎಲ್​ ರಾಹುಲ್​ ಅವರು ಭಾರತ ಪರ ಪದಾರ್ಪಣೆ ಮಾಡಿದ್ದು ಟೆಸ್ಟ್​ ಕ್ರಿಕೆಟ್​ ಆಡುವ ಮೂಲಕ. 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ. ಚೊಚ್ಚಲ ಏಕದಿನ ಪಂದ್ಯವನ್ನು 2016ರಲ್ಲಿ ಜಿಂಬಾಬ್ವೆ ವಿರುದ್ಧ ಆಡಿ ಈ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿ ಮಿಂಚಿದ್ದರು. ಇದೇ ವರ್ಷ ಜಿಂಬಾವ್ವೆ ವಿರುದ್ಧವೇ ಟಿ20 ಕ್ರಿಕೆಟ್​ಗೂ ಅಡಿಯಿರಿಸಿದ್ದರು. ಹಲವು ಸರಣಿಗಳಲ್ಲಿ ಹಂಗಾಮಿ ನಾಯಕನಾಗಿ ಸರಣಿ ಗೆದ್ದ ಸಾಧನೆಯೂ ಇವರದ್ದಾಗಿದೆ. ಸದ್ಯ ಐಪಿಎಲ್​ನಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ನಾಯಕನಾಗಿ ಆಡುತ್ತಿದ್ದಾರೆ.

ಇದನ್ನೂ ಓದಿ IPL 2024: ಡಿಆರ್​ಎಸ್​ ಚೀಟಿಂಗ್ ವೇಳೆ ಸಿಕ್ಕಿ ಬಿದ್ದ ಮುಂಬೈ ಇಂಡಿಯನ್ಸ್​; ವಿಡಿಯೊ ವೈರಲ್​

ಇಂದು ನಡೆಯುವ ಐಪಿಎಲ್(IPL 2024)​ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್ ತಂಡ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆಡಲಿದೆ. ಈ ಪಂದ್ಯ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಲಕ್ನೋ ಸೂಪರ್​ ಜೈಂಟ್ಸ್​ ಇದುವರೆಗೆ ಐಪಿಎಲ್​ನಲ್ಲಿ ಮೂರು ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ತಲಾ ಒಂದು ಪಂದ್ಯಗಳಲ್ಲಿ ಉಭಯ ತಮಡಗಳು ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.​

Continue Reading

ಕ್ರೀಡೆ

MS Dhoni: ಧೋನಿ ಅಭಿಮಾನಿಗಳಿಗೆ ನಿರಾಸೆ; ಇಂದಿನ ಪಂದ್ಯಕ್ಕೆ ಅನುಮಾನ

MS Dhoni: ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಧೋನಿ ಇಂದು ನಡೆಯುವ ಲಕ್ನೋ ಸೇರಿ ಮುಂದಿನ ಕೆಲ ಪಂದ್ಯಗಳಿಗೂ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

VISTARANEWS.COM


on

IPL 2024
Koo

ಲಕ್ನೋ: ವಿದಾಯದ ಐಪಿಎಲ್(IPL 2024)​ ಟೂರ್ನಿ ಆಡುತ್ತಿರುವ ಚೆನ್ನೈ ಸೂಪರ್​ ಕಿಂಗ್ಸ್(CSK)​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಇಂದು ನಡೆಯುವ ಲಕ್ನೋ ಸೇರಿ ಮುಂದಿನ ಕೆಲ ಪಂದ್ಯಗಳಿಗೂ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಧೋನಿ ಕಳೆದ ವರ್ಷ ಮುಂಬೈಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಈ ಬಾರಿಯ ಐಪಿಎಲ್​ನ ಮೊದಲ ಪಂದ್ಯದಲ್ಲಿಯೇ ಧೋನಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂದಿತ್ತು. ಕಳೆದ ಮುಂಬೈ ಮತ್ತು ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್​ ನಡೆಸಿದ ವೇಳೆ ಕುಂಟುತಾ ನಡೆದಾಡಿದ ಫೋಟೊ ಮತ್ತು ವಿಡಿಯೊ ವೈರಲ್​ ಆಗಿತ್ತು. ಮೂಲಗಳ ಪ್ರಕಾರ ಧೋನಿ ಮತ್ತೆ ಗಾಯಗೊಂಡಿದ್ದು ಕೆಲ ಪಂದ್ಯಗಳಿಂದ ವಿಶ್ರಾಂತಿ ಬಯಸಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಧೋನಿ ಗಾಯದ ಮಧ್ಯೆಯೇ ಸಂಪೂರ್ಣವಾಗಿ ನೋವು ನಿವಾರಕ ಪ್ಲಾಸ್ಟರ್​ ಸುತ್ತಿ ಟೂರ್ನಿ ಆಡಿದ್ದರು.

ಎಂ.ಎಸ್.ಧೋನಿ(MS Dhoni), ಕ್ಯಾಪ್ಟನ್‌ ಕೂಲ್‌, ಮಾಹಿ, ತಾಲಾ… ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುವ ಮಹೇಂದ್ರ ಸಿಂಗ್‌ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ಹೀಗಾಗಿ ನೆಚ್ಚಿನ ಆಟಗಾರನ ಬ್ಯಾಟಿಂಗ್​ ಕುಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಪ್ರತಿ ಪಂದ್ಯದ ವೇಳೆ ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತಾರೆ.

ಇದನ್ನೂ ಓದಿ IPL 2024: ಡಿಆರ್​ಎಸ್​ ಚೀಟಿಂಗ್ ವೇಳೆ ಸಿಕ್ಕಿ ಬಿದ್ದ ಮುಂಬೈ ಇಂಡಿಯನ್ಸ್​; ವಿಡಿಯೊ ವೈರಲ್​

ಇಂದು ನಡೆಯುವ ಐಪಿಎಲ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ಆಡಲಿದೆ. ಈ ಪಂದ್ಯ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಲಕ್ನೋ ಸೂಪರ್​ ಜೈಂಟ್ಸ್​ ಇದುವರೆಗೆ ಐಪಿಎಲ್​ನಲ್ಲಿ ಮೂರು ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ತಲಾ ಒಂದು ಪಂದ್ಯಗಳಲ್ಲಿ ಉಭಯ ತಮಡಗಳು ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.​

ಸಂಭಾವ್ಯ ತಂಡ

ಚೆನ್ನೈ ಸೂಪರ್​ ಕಿಂಗ್ಸ್​: ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೆರಿಲ್ ಮಿಚೆಲ್, ಸಮೀರ್ ರಿಜ್ವಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್​ ಕೀಪರ್​), ಶಾರ್ದೂಲ್ ಠಾಕೂರ್, ಮುಸ್ತಫಿಜುರ್ ರೆಹಮಾನ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.

ಲಕ್ನೋ: ಕೈಲ್​ ಮೇಯರ್ಸ್, ಕೆಎಲ್ ರಾಹುಲ್ (ನಾಯಕ), ದೀಪಕ್​ ಹೂಡಾ, ಮ್ಯಾಟ್​ ಹೆನ್ರಿ, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೆ. ಗೌತಮ್​, ರವಿ ಬಿಷ್ಣೋಯ್, ಶಮರ್​ ಜೋಸೆಫ್​, ಯಶ್ ಠಾಕೂರ್, ಮಯಾಂಕ್​ ಯಾದವ್​.

Continue Reading
Advertisement
Video Viral Parameshwara statement on ballot paper bogus voting
ವೈರಲ್ ನ್ಯೂಸ್11 seconds ago

Video Viral: ಬ್ಯಾಲೆಟ್‌ ಪೇಪರ್‌ ಕಳ್ಳ ಮತದಾನದ ರಹಸ್ಯ ಬಿಚ್ಚಿಟ್ಟ ಪರಮೇಶ್ವರ್;‌ ಕಾಂಗ್ರೆಸ್‌ EVM ಬೇಡ ಎನ್ನಲು ಇದೇ ಕಾರಣವೆಂದ ಜೆಡಿಎಸ್!

Money Guide
ಮನಿ-ಗೈಡ್24 mins ago

Money Guide: ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಇದರಲ್ಲಿನ ವಿಧಗಳ ಬಗ್ಗೆ ಇಲ್ಲಿದೆ ಮಾಹಿತಿ

‌Assault Case
ಕರ್ನಾಟಕ25 mins ago

‌Assault Case: ಮೋದಿ ಹಾಡು ಬರೆದ ಯುವಕನ ಮೇಲೆ ಹಲ್ಲೆ; ಐವರ ವಿರುದ್ಧ ಎಫ್ಐಆರ್

Char Dham Yatra 2024
Latest38 mins ago

Char Dham Yatra 2024: ಈ ಬೇಸಿಗೆಯಲ್ಲಿ ಚಾರ್ ಧಾಮ್ ಯಾತ್ರೆಗೆ ಸಿದ್ಧರಾಗಿ! ನೋಂದಣಿ ಮಾಹಿತಿ ಇಲ್ಲಿದೆ

Diabetic Controle
ಲೈಫ್‌ಸ್ಟೈಲ್48 mins ago

Diabetic Controle: ಕಾಡುವ ಮಧುಮೇಹ ನಿಯಂತ್ರಣಕ್ಕೆ ಇಲ್ಲಿದೆ ಸುಲಭ ತಂತ್ರ

Banned Films
ಸಿನಿಮಾ49 mins ago

Banned Film: ಈ 9 ಹಾಲಿವುಡ್ ಚಿತ್ರಗಳು ಭಾರತದಲ್ಲಿ ಬ್ಯಾನ್!

Workers protest
ವಿದೇಶ54 mins ago

Workers protest: ಇಸ್ರೇಲ್​ ಜತೆಗಿನ ಒಪ್ಪಂದ ವಿರೋಧಿಸಿ ಪ್ರತಿಭಟಿಸಿದ್ದ ಗೂಗಲ್​​ನ 28​ ಉದ್ಯೋಗಿಗಳ ವಜಾ

Cardiac Arrest
ಲೈಫ್‌ಸ್ಟೈಲ್59 mins ago

Cardiac Arrest: ಮಹಿಳೆಯರೇ ಹುಷಾರು; ನೀವು ಮಾಡುವ ಈ ತಪ್ಪುಗಳೇ ಹೃದಯಾಘಾತಕ್ಕೆಕಾರಣ!

Mathobara Sri Umamadhukeshwara devara Maharathotsava at Banavasi
ಉತ್ತರ ಕನ್ನಡ59 mins ago

Uttara Kannada News: ಬನವಾಸಿಯ ಐತಿಹಾಸಿಕ ಶ್ರೀ ಉಮಾಮಧುಕೇಶ್ವರ ದೇವರ ಮಹಾರಥೋತ್ಸವ

MLA Narendraswamy Election campaign in various places at Malavalli Assembly Constituency
ಮಂಡ್ಯ1 hour ago

Lok Sabha Election 2024: ರೈತನ ಮಗ ಸ್ಟಾರ್ ಚಂದ್ರು ಗೆಲ್ಲಿಸಿ, ಜಿಲ್ಲೆಯ ಸ್ವಾಭಿಮಾನ ಉಳಿಸಿ: ಶಾಸಕ ನರೇಂದ್ರಸ್ವಾಮಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ5 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ15 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ7 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

ಟ್ರೆಂಡಿಂಗ್‌