Video: ಪೆಪ್ಸಿಗೆ ಐ ಲವ್​​ ಯೂ ಎಂದು ಮುತ್ತಿಟ್ಟ ರಾಕಿಂಗ್​ ಸ್ಟಾರ್​ ಯಶ್​​; ಪ್ರಸಿದ್ಧ ಪಾನೀಯ ಕಂಪನಿಗೆ ರಾಯಭಾರಿ - Vistara News

ದೇಶ

Video: ಪೆಪ್ಸಿಗೆ ಐ ಲವ್​​ ಯೂ ಎಂದು ಮುತ್ತಿಟ್ಟ ರಾಕಿಂಗ್​ ಸ್ಟಾರ್​ ಯಶ್​​; ಪ್ರಸಿದ್ಧ ಪಾನೀಯ ಕಂಪನಿಗೆ ರಾಯಭಾರಿ

ಇಲ್ಲಿಯವರೆಗೆ ಪೆಪ್ಸಿಗೆ ಸಾಮಾನ್ಯವಾಗಿ ಬಾಲಿವುಡ್​ ನಟ/ನಟಿಯರು, ಕ್ರಿಕೆಟ್​ ಆಟಗಾರರೇ ಬ್ರ್ಯಾಂಡ್ ಅಂಬಾಸಿಡರ್​ ಆಗುತ್ತಿದ್ದರು. ಬಾಲಿವುಡ್​ ಗಣ್ಯರಾದ ಅಮಿತಾಬ್​ಬಚ್ಚನ್​, ಅಮೀರ್​ ಖಾನ್​, ಶಾರೂಖ್​ಖಾನ್​, ರಣಬೀರ್ ಕಪೂರ್​, ಸಲ್ಮಾನ್​ ಖಾನ್ ಇತರರೇ ರಾಯಭಾರಿಗಳಾಗಿದ್ದರು.

VISTARANEWS.COM


on

Actor Yash becomes brand ambassador of Pepsi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೆಜಿಎಫ್​ ಸಿನಿಮಾಗಳ ಮೂಲಕ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿರುವ ಕನ್ನಡದ ನಟ ಯಶ್ (Actor Yash)​ ಈಗ ಪ್ರಸಿದ್ಧ ಪಾನೀಯ ಪೆಪ್ಸಿಗೆ ಬ್ರ್ಯಾಂಡ್ ಅಂಬಾಸಿಡರ್​ ಆಗಿದ್ದಾರೆ. ‘ನಟ ಯಶ್​ ಅವರು ಪೆಪ್ಸಿ ಬಾಟಲಿ ಹಿಡಿದು, ಕಂಗ್ರಾಚ್ಯುಲೇಶನ್ಸ್​ ಪೆಪ್ಸಿ, ಐ ಲವ್​ ಯೂ ಎಂದು ಹೇಳಿ, ಒಂದು ಫ್ಲೈಯಿಂಗ್​ ಕಿಸ್ ಕೂಡ ಕೊಟ್ಟಿದ್ದಾರೆ’ ಈ ವಿಡಿಯೊವನ್ನು ತಮ್ಮ ಟ್ವಿಟರ್​ ಅಕೌಂಟ್​​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಪೆಪ್ಸಿ ಇಂಡಿಯಾ (Pepsi India) ಕಂಪನಿ ಕೂಡ ವಿಡಿಯೊವನ್ನು ಶೇರ್ ಮಾಡಿಕೊಂಡಿದೆ.

ಕೆಜಿಎಫ್​ ಸರಣಿಯ 2 ಸಿನಿಮಾಗಳನ್ನು ಕೊಟ್ಟು ಭರ್ಜರಿ ಯಶಸ್ಸು ಕಂಡ ಯಶ್​ ಮುಂದಿನ ಸಿನಿಮಾ ಬಗ್ಗೆ ಯಾವುದೇ ಸುಳಿವೂ ಅಭಿಮಾನಿಗಳಿಗೆ ಇಲ್ಲ. ಎರಡು ದೊಡ್ಡ ಮಟ್ಟದ ಸಿನಿಮಾ ಕೊಟ್ಟ ಯಶ್​ ಮುಂದೆ ಎಂಥ ಸಿನಿಮಾ ಮಾಡಬಹುದು ಎಂಬ ಕುತೂಹಲವಂತೂ ಇದ್ದೇ ಇದೆ. ಈ ಮಧ್ಯೆ ಸ್ಯಾಂಡಲ್​ವುಡ್​​ನಿಂದ, ಬಾಲಿವುಡ್​ವರೆಗೆ ಖ್ಯಾತಿ ವಿಸ್ತರಿಸಿಕೊಂಡ ಯಶ್​ಗೆ ಸಾಲುಸಾಲು ಜಾಹೀರಾತು ಆಫರ್​ ಕೂಡ ಬರುತ್ತಿದೆ. ಅದರಲ್ಲೀಗ ಯಶ್​, ಪೆಪ್ಸಿ ಇಂಡಿಯಾ ಜತೆ ಕೈಜೋಡಿಸಿದ್ದಾರೆ.

ಇಲ್ಲಿಯವರೆಗೆ ಪೆಪ್ಸಿಗೆ ಸಾಮಾನ್ಯವಾಗಿ ಬಾಲಿವುಡ್​ ನಟ/ನಟಿಯರು, ಕ್ರಿಕೆಟ್​ ಆಟಗಾರರೇ ಬ್ರ್ಯಾಂಡ್ ಅಂಬಾಸಿಡರ್​ ಆಗುತ್ತಿದ್ದರು. ಬಾಲಿವುಡ್​ ಗಣ್ಯರಾದ ಅಮಿತಾಬ್​ಬಚ್ಚನ್​, ಅಮೀರ್​ ಖಾನ್​, ಶಾರೂಖ್​ಖಾನ್​, ರಣಬೀರ್ ಕಪೂರ್​, ಸಲ್ಮಾನ್​ ಖಾನ್​, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಕ್ರಿಕೆಟ್​ ತಾರೆಯರಾದ ಸಚಿನ್​ ತೆಂಡೂಲ್ಕರ್​, ವಿರಾಟ್​ ಕೊಹ್ಲಿ ಮತ್ತಿತರರು ರಾಯಭಾರಿಗಳಾಗಿ ಈ ಪೆಪ್ಸಿ ಪಾನೀಯದ ಜನಪ್ರಿಯತೆ ಹೆಚ್ಚಿಸಿದ್ದಾರೆ. ಪೆಪ್ಸಿಯನ್ನು ಸಾಮಾನ್ಯವಾಗಿ ಯುವಜನರೇ ಇಷ್ಟಪಟ್ಟು ಕುಡಿಯುತ್ತಾರೆ. ಸದ್ಯ ಅಪಾರ ಸಂಖ್ಯೆಯಲ್ಲಿ ಯುವಜನರನ್ನು ಅಭಿಮಾನಿಗಳಾಗಿ ಹೊಂದಿರುವ, ರಾಷ್ಟ್ರ/ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಯಶ್​ ತಮ್ಮ ಕೈಯಲ್ಲೀಗ ಪೆಪ್ಸಿ ಬಾಟಲಿ ಹಿಡಿದಿದ್ದಾರೆ. ಇನ್ನು ತಾವು ಪೆಪ್ಸಿ ಇಂಡಿಯಾಕ್ಕೆ ರಾಯಭಾರಿಯಾದ ಬಗ್ಗೆ ಯಶ್​ ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ. ಉತ್ಸಾಹದಿಂದ ತಮ್ಮ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: KGF Kannada Movie : ಕೆಜಿಎಫ್‌ 5 ಕೂಡ ತೆರೆಗೆ ಬರುತ್ತೆ; ಆದರೆ ನಾಯಕ ಯಶ್‌ ಅಲ್ಲ! ಸಲಾರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಾಕಿ ಭಾಯ್‌?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

‘ಐಎಎಸ್‌’ ಗಂಡನ ಬಿಟ್ಟು, ಗ್ಯಾಂಗ್‌ಸ್ಟರ್‌ ಜತೆ ಓಡಿಹೋಗಿದ್ದ ಮಹಿಳೆ ಬಾಳು ಅಂತ್ಯ; ಪತಿ ಮನೆಗೆ ವಾಪಸಾಗಿ ಆತ್ಮಹತ್ಯೆ!

ಐಎಎಸ್‌ ಅಧಿಕಾರಿಯ ಪತ್ನಿ ವಿರುದ್ಧ ಅಪಹರಣದ ಕೇಸ್‌ ದಾಖಲಾಗಿದೆ. ಬಂಧನದಿಂದ ತಪ್ಪಿಸಿಕೊಳ್ಳಲು ಆಕೆ ಪತಿಯ ಮನೆಗೆ ವಾಪಸ್‌ ಬಂದಿದ್ದಳು ಎನ್ನಲಾಗಿದೆ. ಮಹಿಳೆಯ ಬಾಯ್‌ಫ್ರೆಂಡ್‌ ಗ್ಯಾಂಗ್‌ಸ್ಟರ್‌ ಆಗಿದ್ದು, ಆತನನ್ನು ಮಹಾರಾಜ ಸಿಂಗ್‌ ಎಂಬುದಾಗಿ ಗುರುತಿಸಲಾಗಿದೆ. ಈತನ ವಿರುದ್ಧವೂ ಅಪಹರಣ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

VISTARANEWS.COM


on

News
Koo

ಗಾಂಧಿನಗರ: ಜೀವನದಲ್ಲಿ ಕೆಲವರನ್ನು ನೋಡಿದಾಗ ಅನಿಸುತ್ತದೆ. ದೇವರು ಅವರಿಗೆ ಎಲ್ಲವನ್ನೂ ಕೊಟ್ಟಿರುತ್ತಾನೆ. ಸ್ನೇಹಿತರು, ಸಂಬಂಧಿಕರನ್ನು ಕರುಣಿಸಿರುತ್ತಾನೆ. ಇದಕ್ಕೆ ನಿದರ್ಶನ ಎಂಬಂತೆ, ಗುಜರಾತ್‌ನಲ್ಲಿ (Gujarat) ಐಎಎಸ್‌ ಅಧಿಕಾರಿಯಾಗಿದ್ದ (IAS Officer) ಪತಿಯನ್ನು ತೊರೆದು, ಗ್ಯಾಂಗ್‌ಸ್ಟರ್‌ ಜತೆ ಪರಾರಿಯಾಗಿದ್ದ ಮಹಿಳೆಯೊಬ್ಬರ ಬಾಳು ಈಗ ದುರಂತ ಅಂತ್ಯ ಕಂಡಿದೆ. ಗ್ಯಾಂಗ್‌ಸ್ಟರ್‌ನನ್ನು ಬಿಟ್ಟು ಗಂಡನ ಮನೆಗೆ ವಾಪಸ್‌ ಬಂದ 45 ವರ್ಷದ ಮಹಿಳೆಯು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುಜರಾತ್‌ ರಾಜಧಾನಿ ಗಾಂಧಿನಗರದ ಸೆಕ್ಟರ್‌ 19ರಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಸೂರ್ಯ ಜಯ್‌ ಎಂಬ ಮಹಿಳೆಯು 9 ತಿಂಗಳ ಹಿಂದೆ ಗ್ಯಾಂಗ್‌ಸ್ಟರ್‌ ಒಬ್ಬನ ಜತೆ ಪರಾರಿಯಾಗಿದ್ದರು. ಇವರ ಪತಿ ರಂಜೀತ್‌ ಕುಮಾರ್‌ ಅವರು ಗುಜರಾತ್‌ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿಯಾಗಿದ್ದಾರೆ. ಐಎಎಸ್‌ ಅಧಿಕಾರಿಯಾಗಿದ್ದ ಪತಿಯನ್ನು ತೊರೆದು, ಅವರು ಗ್ಯಾಂಗ್‌ಸ್ಟರ್‌ ಜತೆ ಓಡಿಹೋಗಿದ್ದರು. ಆದರೆ, ಅವರು ಶನಿವಾರ (ಜುಲೈ 20) ಗಂಡನ ಮನೆಗೆ ವಾಪಸ್‌ ಬಂದವರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದಾದ ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ (ಜುಲೈ 21) ಮೃತಪಟ್ಟಿದ್ದಾರೆ.

Self Harming

ವಾಪಸ್‌ ಬರುವ ಹಿಂದಿದೆ ದೊಡ್ಡ ಕತೆ

ಒಳ್ಳೆಯ ಗಂಡನ ಬಿಟ್ಟು, ಗ್ಯಾಂಗ್‌ಸ್ಟರ್‌ ಜತೆ ಓಡಿ ಹೋದೆ ಎಂಬ ಪಾಪಪ್ರಜ್ಞೆ ಕಾಡಿ ಸೂರ್ಯ ಜಯ್‌ ವಾಪಸ್‌ ಮನೆಗೆ ಬಂದಿದ್ದಲ್ಲ ಎಂಬ ಭೀಕರ ಮಾಹಿತಿ ಲಭ್ಯವಾಗಿದೆ. ಮಹಿಳೆ ವಿರುದ್ಧ 14 ವರ್ಷದ ಬಾಲಕನನ್ನು ಅಪಹರಣ ಮಾಡಿದ ಕೇಸ್‌ ದಾಖಲಾಗಿದೆ. ಇದರಿಂದಾಗಿ ಆಕೆಗೆ ಬಂಧನದ ಭೀತಿ ಎದುರಾಗಿದೆ. ಪತಿ ಐಎಎಸ್‌ ಆಫೀಸರ್‌ ಆಗಿರುವ ಕಾರಣ, ಆತನ ಮನೆಯಲ್ಲಿದ್ದರೆ ಪೊಲೀಸರು ಬಂಧಿಸುವುದಿಲ್ಲ ಎಂದು ಭಾವಿಸಿ ಮನೆಗೆ ನುಗ್ಗಲು ಯತ್ನಿಸಿದ್ದಾಳೆ. ಆದರೆ, ಅಧಿಕಾರಿ ಮನೆಯಲ್ಲಿದ್ದ ಸಿಬ್ಬಂದಿಯು ಒಳಗೆ ಹೋಗಲು ಬಿಟ್ಟಿಲ್ಲ. ಇದರಿಂದ ವಿಚಲಿತಳಾದ ಆಕೆಯು, ಅಲ್ಲಿಯೇ ವಿಷ ಸೇವಿಸಿದ್ದಾಳೆ. ಬಳಿಕ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾಳೆ. ಕೊನೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಅಧಿಕಾರಿಯ ವಕೀಲರು ಹೇಳುವುದೇನು?

ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್‌ ಅಧಿಕಾರಿ ರಂಜೀತ್‌ ಕುಮಾರ್‌ ಅವರ ಪರ ವಕೀಲ ಹಿತೇಶ್‌ ಗುಪ್ತಾ ಅವರು ಮಾಹಿತಿ ನೀಡಿದ್ದಾರೆ. “2023ರಲ್ಲಿಯೇ ರಂಜೀತ್‌ ಕುಮಾರ್‌ ಹಾಗೂ ಸೂರ್ಯ ಜಯ್‌ ಪ್ರತ್ಯೇಕವಾಗಿದ್ದಾರೆ. ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಶನಿವಾರ (ಜುಲೈ 20) ರಂಜೀತ್‌ ಕುಮಾರ್‌ ಅವರು ವಿಚ್ಛೇದನದ ಅರ್ಜಿ ಕುರಿತಂತೆ ಮನೆಯಿಂದ ಹೊರಗೆ ಹೋದಾಗ ಮಹಿಳೆಯು ಮನೆಗೆ ಬಂದಿದ್ದಾರೆ. ಇದಾದ ಬಳಿಕ ದುರಂತ ನಡೆದಿದೆ” ಎಂದು ವಿವರಿಸಿದ್ದಾರೆ. ಅಂದಹಾಗೆ ಮಹಿಳೆಯ ಬಾಯ್‌ಫ್ರೆಂಡ್‌ ಗ್ಯಾಂಗ್‌ಸ್ಟರ್‌ ಆಗಿದ್ದು, ಆತನನ್ನು ಮಹಾರಾಜ ಸಿಂಗ್‌ ಎಂಬುದಾಗಿ ಗುರುತಿಸಲಾಗಿದೆ. ಈತನ ವಿರುದ್ಧವೂ ಅಪಹರಣ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Road Accident: ಜನ್ಮದಿನದಂದೇ ಯುವತಿಯ ಜೀವ ತೆಗೆದ ಜವರಾಯ; ಕಾರು ಚಾಲಕ ಪರಾರಿ

Continue Reading

ವೈರಲ್ ನ್ಯೂಸ್

Viral Video: ಸ್ಕೂಟರ್‌ಗೆ ಅಪ್ಪಳಿಸಿದ ಕಾರು; 10 ಅಡಿ ಮೇಲಕ್ಕೆ ಹಾರಿ ಬಿದ್ದ ತಾಯಿ, ಮಗ

ಉತ್ತರ ಪ್ರದೇಶದ ಗಾಜಿಯಾಬಾದ್‌ನ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯ ಮೆಹ್ರಾಲಿ ಅಂಡರ್‌ಪಾಸ್ ಬಳಿ ಶನಿವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ತಾಯಿ ಮಗ ಸಾವನ್ನಪ್ಪಿದ್ದಾರೆ. ಇದರ ವಿಡಿಯೋ (Viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಕ್ಸ್ ಪ್ರೆಸ್ ವೇಯಲ್ಲಿ ನಡೆದ ಭಯಾನಕ ಅಪಘಾತದ ದೃಶ್ಯಗಳು ಇದರಲ್ಲಿ ಸೆರೆಯಾಗಿದೆ.

VISTARANEWS.COM


on

By

Viral Video
Koo

ಕಾರು ಮತ್ತು ಸ್ಕೂಟರ್ ಡಿಕ್ಕಿಯಾದ (car and Scooter accident) ಪರಿಣಾಮ ತಾಯಿ ಮಗ ಸಾವನ್ನಪ್ಪಿರುವ ದುರಂತ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ (Delhi-Meerut Expressway) ನಡೆದಿದೆ. ಇದರ ಭೀಕರ ವಿಡಿಯೋ (Viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಹರಿದ್ವಾರದ ಗಂಗಾ ನದಿಯಲ್ಲಿ ಸ್ನಾನ ಮುಗಿಸಿ ದೆಹಲಿಗೆ ಸ್ಕೂಟರ್ ನಲ್ಲಿ ತಾಯಿ ಮಗ ಹಿಂದಿರುಗುತ್ತಿದ್ದರು. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದಿರುವ ಭೀಕರ ಅಪಘಾತವನ್ನು ತೋರಿಸುವ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ಇದರ ವಿಡಿಯೋದಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಕಾರು ಸ್ಕೂಟರ್‌ಗೆ ಡಿಕ್ಕಿಯಾದ ನಿಖರವಾದ ಕ್ಷಣವನ್ನು ತೋರಿಸಿದೆ. ಡಿಕ್ಕಿಯ ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ ಸ್ಕೂಟರ್‌ ನಲ್ಲಿ ಕುಳಿತಿದ್ದ ಮಹಿಳೆ ಗಾಳಿಯಲ್ಲಿ 10 ಅಡಿ ಎತ್ತರಕ್ಕೆ ಹಾರಿ, ರಸ್ತೆಯ ಮೇಲೆ ಬಿದ್ದಿದ್ದಾರೆ.


ಶನಿವಾರ ರಾತ್ರಿ ಗಾಜಿಯಾಬಾದ್‌ನ ಮೆಹ್ರಾಲಿ ಅಂಡರ್‌ಪಾಸ್ ಬಳಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದು, ಗಾಯಗೊಂಡ ಸ್ಕೂಟರ್ ಸವಾರರನ್ನು ತಕ್ಷಣವೇ ಹತ್ತಿರದ ಮಣಿಪಾಲ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.

ಇದನ್ನೂ ಓದಿ: Viral News: ಮಕ್ಕಳ ಹಸಿವು ನೀಗಿಸಲು ಸೈನಿಕರೆದುರು ಬೆತ್ತಲಾಗುತ್ತಿರುವ ಮಹಿಳೆಯರು!

ಮೃತರನ್ನು 20 ವರ್ಷದ ಯಶ್ ಗೌತಮ್ ಮತ್ತು ಆತನ 40 ವರ್ಷದ ತಾಯಿ ಮಂಜು ದೇವಿ ಎಂದು ಗುರುತಿಸಲಾಗಿದೆ. ಇಬ್ಬರೂ ದೆಹಲಿಯ ಪಶ್ಚಿಮ ವಿನೋದ್ ನಗರದ ನಿವಾಸಿಗಳಾಗಿದ್ದರು.

ಘಟನೆಯ ವೇಳೆ ಯಶ್ ಹೆಲ್ಮೆಟ್ ಧರಿಸಿದ್ದು, ಅವರ ತಾಯಿ ಹೆಲ್ಮೆಟ್ ಧರಿಸಿರಲಿಲ್ಲ. ಇದಲ್ಲದೆ ಎಕ್ಸ್‌ಪ್ರೆಸ್‌ವೇಯಲ್ಲಿ ದ್ವಿಚಕ್ರ ವಾಹನಗಳನ್ನು ಓಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

Continue Reading

ದೇಶ

INS Brahmaputra: ನೌಕಾಪಡೆಯ ಐಎನ್‌ಎಸ್‌ ಯುದ್ಧನೌಕೆಯಲ್ಲಿ ಭೀಕರ ಅಗ್ನಿ ದುರಂತ; ನಾವಿಕ ನಾಪತ್ತೆ

INS Brahmaputra: ಮುಂಬೈನಲ್ಲಿರುವ ನೌಕಾಪಡೆಯ ನೌಕಾನೆಲೆಯಲ್ಲಿ ಕ್ಷಿಪಣಿಗಳನ್ನು ಉಡಾಯಿಸಬಹುದಾದ ಸಾಮರ್ಥ್ಯ ಇರುವ ಯುದ್ಧನೌಕೆಯ ನಿರ್ವಹಣೆ ಮಾಡಲಾಗುತ್ತಿತ್ತು. ಸಿಬ್ಬಂದಿಯು ಯುದ್ಧ ನೌಕೆಯ ತಪಾಸಣೆ, ಸಣ್ಣ-ಪುಟ್ಟ ದುರಸ್ತಿಯಲ್ಲಿ ತೊಡಗಿದ್ದರು. ಇದೇ ವೇಳೆ ಅಗ್ನಿ ದುರಂತ ಸಂಭವಿಸಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

INS Brahmaputra
Koo

ನವದೆಹಲಿ: ಭಾರತೀಯ ನೌಕಾಪಡೆಯ ಪ್ರಮುಖ ಯುದ್ಧನೌಕೆಯಾದ ಐಎನ್‌ಎಸ್‌ ಬ್ರಹ್ಮಪುತ್ರದಲ್ಲಿ (INS Brahmaputra) ಭೀಕರ ಅಗ್ನಿ ದುರಂತ (Fire Accident) ಸಂಭವಿಸಿದೆ. ನೌಕೆಯ ಪ್ರಮುಖ ಭಾಗಗಳು ಸುಟ್ಟು ಕರಕಲಾಗಿದ್ದು, ನೌಕೆಯಲ್ಲಿದ್ದವರ ಪೈಕಿ ಒಬ್ಬ ನಾವಿಕ (Sailor) ನಾಪತ್ತೆಯಾಗಿದ್ದಾರೆ. “ಒಬ್ಬ ಕಿರಿಯ ನಾವಿಕ ನಾಪತ್ತೆಯಾಗಿದ್ದು, ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದಾಗ್ಯೂ, ನೌಕೆಯಲ್ಲಿದ್ದ ಎಲ್ಲ ಸಿಬ್ಬಂದಿಯೂ ಸುರಕ್ಷಿತರಾಗಿದ್ದಾರೆ” ಎಂಬುದಾಗಿ ನೌಕಾಪಡೆಯು ಪ್ರಕಟಣೆ ತಿಳಿಸಿದೆ.

ಮುಂಬೈನಲ್ಲಿರುವ ನೌಕಾಪಡೆಯ ನೌಕಾನೆಲೆಯಲ್ಲಿ ಕ್ಷಿಪಣಿಗಳನ್ನು ಉಡಾಯಿಸಬಹುದಾದ ಸಾಮರ್ಥ್ಯ ಇರುವ ಯುದ್ಧನೌಕೆಯ ನಿರ್ವಹಣೆ ಮಾಡಲಾಗುತ್ತಿತ್ತು. ಸಿಬ್ಬಂದಿಯು ಯುದ್ಧ ನೌಕೆಯ ತಪಾಸಣೆ, ಸಣ್ಣ-ಪುಟ್ಟ ದುರಸ್ತಿಯಲ್ಲಿ ತೊಡಗಿದ್ದರು. ಇದೇ ವೇಳೆ ಅಗ್ನಿ ದುರಂತ ಸಂಭವಿಸಿದೆ. ಅಗ್ನಿಯ ಕೆನ್ನಾಲಗೆಗೆ ನೌಕೆಯ ಪ್ರಮುಖ ಭಾಗಗಳು ಸುಟ್ಟಿವೆ. ಇದೇ ವೇಳೆ ಒಬ್ಬ ನಾವಿಕ ನಾಪತ್ತೆಯಾಗಿದ್ದಾನೆ. ಆತನಿಗಾಗಿ ತೀವ್ರ ಪ್ರಮಾಣದಲ್ಲಿ ಶೋಧ ನಡೆದಿದೆ ಎಂದು ನೌಕಾಪಡೆಯು ಮಾಹಿತಿ ನೀಡಿದೆ.

“ಮುಂಬೈನ ನೌಕಾನೆಲೆಯಲ್ಲಿ ಸೋಮವಾರ (ಜುಲೈ 22) ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಯು ಬೆಂಕಿಯ ಕೆನ್ನಾಲಗೆಯು ಬಂದರಿನ ಬೇರೆ ಹಡಗುಗಳಿಗೂ ವ್ಯಾಪಿಸದಂತೆ ನೋಡಿಕೊಂಡರು. ಸಿಬ್ಬಂದಿಯು ಯುದ್ಧನೌಕೆಯನ್ನು ತಪಾಸಣೆ ಮಾಡುವಾಗ ಅವಘಡ ಸಂಭವಿಸಿದೆ. ದುರಂತಕ್ಕೆ ನಿಖರ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತದೆ” ಎಂದು ನೌಕಾಪಡೆ ತಿಳಿಸಿದೆ. ಅಗ್ನಿ ದುರಂತದಲ್ಲಿ ಯುದ್ಧನೌಕೆಗೆ ಭಾರಿ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಐಎನ್‌ಎಸ್‌ ಬ್ರಹ್ಮಪುತ್ರ ಯುದ್ಧನೌಕೆಯನ್ನು ದೇಶೀಯವಾಗಿಯೇ, ಕೋಲ್ಕೊತಾದಲ್ಲಿ ನಿರ್ಮಿಸಲಾಗಿದೆ. 2000ನೇ ಇಸವಿಯಲ್ಲಿ ಇದನ್ನು ಭಾರತೀಯ ನೌಕಾಪಡೆಗೆ ಅಳವಡಿಸಿಕೊಳ್ಳಲಾಗಿದೆ. ಸುಮಾರು 3,600 ಟನ್‌ ತೂಕ ಇರುವ ಇದು, 410 ಅಡಿ ಉದ್ದ ಇದೆ. ಗಂಟೆಗೆ 56 ಕಿಲೋಮೀಟರ್‌ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ಕ್ಷಿಪಣಿಗಳನ್ನು ಉಡಾಯಿಸಿ, ವೈರಿಗಳನ್ನು ನಿರ್ನಾಮ ಮಾಡಬಹುದಾಗಿದೆ. ತುರ್ತು ಸಂದರ್ಭಗಳಲ್ಲಿ ಕಾರ್ಯಾಚರಣೆ, ರಕ್ಷಣಾ ಕಾರ್ಯಾಚರಣೆಗೆ ಇದನ್ನು ಬಳಸಲಾಗಿದೆ.

ಇದನ್ನೂ ಓದಿ: Indian Navy: ನೌಕಾಪಡೆ ಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ

Continue Reading

ದೇಶ

Union Budget 2024: ನಾಳೆ ಕೇಂದ್ರ ಬಜೆಟ್;‌ ಎಷ್ಟು ಗಂಟೆಗೆ ಮಂಡನೆ? ಲೈವ್‌ ವೀಕ್ಷಣೆ ಎಲ್ಲಿ? ಇಲ್ಲಿದೆ ಮಾಹಿತಿ

Union Budget 2024: ಉದ್ಯೋಗಿಗಳು, ಬಡವರು, ಉದ್ಯಮಿಗಳಿಂದ ಹಿಡಿದು ಪ್ರತಿಯೊಬ್ಬರ ಗಮನವೂ ಕೇಂದ್ರ ಸರ್ಕಾರದ ಬಜೆಟ್‌ ಮೇಲಿದೆ. ಮಂಗಳವಾರ ಬೆಳಗ್ಗೆ 11 ಗಂಟೆಗೇ ನಿರ್ಮಲಾ ಸೀತಾರಾಮನ್‌ ಅವರು ಏಳನೇ ಬಾರಿಗೆ ಬಜೆಟ್‌ ಮಂಡಿಸಲಿದ್ದಾರೆ. ಇನ್ನು, ಬಜೆಟ್‌ನ ಪ್ರತಿಕ್ಷಣದ ಅಪ್‌ಡೇಟ್‌ಅನ್ನು ಲೈವ್‌ ವೀಕ್ಷಿಸಬಹುದಾಗಿದೆ.

VISTARANEWS.COM


on

Union Budget 2024
Koo

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸತತ ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್‌ಅನ್ನು (Union Budget 2024) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಮಂಗಳವಾರ (ಜುಲೈ 22) ಮಂಡಿಸಲಿದ್ದಾರೆ. ಉದ್ಯೋಗಿಗಳು, ಬಡವರು, ಉದ್ಯಮಿಗಳಿಂದ ಹಿಡಿದು ಪ್ರತಿಯೊಬ್ಬರ ಗಮನವೂ ಕೇಂದ್ರ ಸರ್ಕಾರದ ಬಜೆಟ್‌ ಮೇಲಿದೆ. ಮಂಗಳವಾರ ಬೆಳಗ್ಗೆ 11 ಗಂಟೆಗೇ ನಿರ್ಮಲಾ ಸೀತಾರಾಮನ್‌ ಅವರು ಏಳನೇ ಬಾರಿಗೆ ಬಜೆಟ್‌ ಮಂಡಿಸಲಿದ್ದಾರೆ. ಇನ್ನು, ಬಜೆಟ್‌ನ ಪ್ರತಿಕ್ಷಣದ ಮಾಹಿತಿಯನ್ನು ಲೈವ್‌ ವೀಕ್ಷಣೆ ಮೂಲಕ ಪಡೆಯಬಹುದಾಗಿದೆ.

ಲೈವ್‌ ಇಲ್ಲಿ ವೀಕ್ಷಿಸಿ

ಸಂಸತ್‌ ಟಿವಿ ಜತೆಗೆ ವಿಸ್ತಾರ ನ್ಯೂಸ್‌ ಚಾನೆಲ್‌ನಲ್ಲೂ ಬೆಳಗ್ಗೆಯಿಂದಲೇ ಲೈವ್‌ ಮಾಹಿತಿ, ಕ್ಷಣ ಕ್ಷಣದ ಅಪ್‌ಡೇಟ್‌, ಬಜೆಟ್‌ ಕುರಿತ ವಿಶ್ಲೇಷಣೆ ಇರಲಿದೆ. ವಿಸ್ತಾರ ನ್ಯೂಸ್ ವೆಬ್‌ಸೈಟ್‌ನಲ್ಲೂ ಪ್ರತಿಪಕ್ಷಣದ ಮಾಹಿತಿ ಲಭ್ಯವಾಗಲಿದೆ. ಮತ್ತೊಂದೆಡೆ, ಬಜೆಟ್‌ನಲ್ಲಿ ಏನೆಲ್ಲ ಘೋಷಣೆ ಮಾಡಲಾಗುತ್ತದೆ ಎಂಬ ನಿರೀಕ್ಷೆಗಳು ಹೆಚ್ಚಾಗಿವೆ. ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಹೊಸ ತೆರಿಗೆ (Income Tax) ಸ್ಲ್ಯಾಬ್‌ಅನ್ನು ಪರಿಚಯಿಸಲಾಗುತ್ತದೆ ಎಂದು ತಿಳಿದುಬಂದಿದೆ. ಇದರ ಜತೆಗೆ ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತವನ್ನೂ ಏರಿಕೆ ಮಾಡುವ ನಿರೀಕ್ಷೆ ಇದೆ.

ಹೊಸ ದಾಖಲೆ ಬರೆಯಲಿದ್ದಾರೆ ನಿರ್ಮಲಾ

ನಿರ್ಮಲಾ ಸೀತಾರಾಮನ್‌ ಅವರು ಇಂದು ಪೂರ್ಣಪ್ರಮಾಣದ ಬಜೆಟ್‌ ಮಂಡಿಸುವ ಮೂಲಕ ಹೊಸ ದಾಖಲೆ ಬರೆಯಲಿದ್ದಾರೆ. ಇದುವರೆಗೆ ನಿರ್ಮಲಾ ಸೀತಾರಾಮನ್‌ ಅವರು ಹಣಕಾಸು ಸಚಿವೆಯಾಗಿ ಐದು ಪೂರ್ಣ ಪ್ರಮಾಣದ ಹಾಗೂ ಒಂದು ಮಧ್ಯಂತರ ಬಜೆಟ್‌ ಮಂಡಿಸಿದ್ದಾರೆ. ಈಗ ಏಳನೇ ಬಾರಿಗೆ ಬಜೆಟ್‌ ಮಂಡಿಸಿದರೆ, ದೇಶದ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದ ಖ್ಯಾತಿಗೆ ಭಾಜನರಾಗಲಿದ್ದಾರೆ. ಮೊರಾರ್ಜಿ ದೇಸಾಯಿ ಅವರು ಆರು ಬಾರಿ ಬಜೆಟ್‌ ಮಂಡಿಸಿದ ದಾಖಲೆ ಮಾಡಿದ್ದಾರೆ. ಇದನ್ನು ನಿರ್ಮಲಾ ಸೀತಾರಾಮನ್‌ ಅವರು ಮುರಿಯಲಿದ್ದಾರೆ.

ನಿರ್ಮಲಾ ಸೀತಾರಾಮನ್‌ ಅವರು ಫೆಬ್ರವರಿ 1ರಂದು ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಕೊನೆಯ ಬಜೆಟ್‌ ಮಂಡಿಸಿದ್ದರು. ಇದು ಮಧ್ಯಂತರ ಬಜೆಟ್‌ ಆದ ಕಾರಣ ಮಹತ್ವದ ಘೋಷಣೆಗಳನ್ನು ಮಾಡಿರಲಿಲ್ಲ. ಆದರೆ, ನೂತನ ಸರ್ಕಾರ ರಚನೆಯಾಗಿದ್ದು, ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲಾಗುತ್ತದೆ. ಉದ್ಯೋಗ ಸೃಷ್ಟಿ, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಕೊಡುಗೆ, ತೆರಿಗೆ ಹೊರೆ ಇಳಿಸುವುದು ಸೇರಿ ಹಲವು ಅಂಶಗಳು ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್‌ನ ಪ್ರಮುಖ ಅಂಶಗಳಾಗಿವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Economic Survey 2023-24: ಉದ್ಯೋಗ ಸೃಷ್ಟಿ, ಕೃಷಿ ಏಳಿಗೆ; ಬಜೆಟ್‌ಗೂ ಮುನ್ನ ಕೇಂದ್ರದಿಂದ ಮಹತ್ವದ ಸುಳಿವು

Continue Reading
Advertisement
News
ದೇಶ2 hours ago

‘ಐಎಎಸ್‌’ ಗಂಡನ ಬಿಟ್ಟು, ಗ್ಯಾಂಗ್‌ಸ್ಟರ್‌ ಜತೆ ಓಡಿಹೋಗಿದ್ದ ಮಹಿಳೆ ಬಾಳು ಅಂತ್ಯ; ಪತಿ ಮನೆಗೆ ವಾಪಸಾಗಿ ಆತ್ಮಹತ್ಯೆ!

Mumbai Indians
ಕ್ರಿಕೆಟ್2 hours ago

Mumbai Indians : ಮುಂದಿನ ಐಪಿಎಲ್​ಗೆ ಮುಂಬೈ ತೊರೆಯಲಿದ್ದಾರೆ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್​

Abhinav Bindra
ಕ್ರೀಡೆ3 hours ago

Abhinav Bindra : ಭಾರತದ ಶೂಟರ್ ಅಭಿನವ್ ಬಿಂದ್ರಾಗೆ ‘ಒಲಿಂಪಿಕ್​ ಆರ್ಡರ್’ ಗೌರವ​

BJP strongly condemns MLA Shivaram Hebbar statement about MP Vishweshwar Hegde Kageri says hariprakash konemane
ಕರ್ನಾಟಕ3 hours ago

Uttara Kannada News: ಸಂಸದ ಕಾಗೇರಿ ಬಗ್ಗೆ ಶಾಸಕ ಹೆಬ್ಬಾರ್‌ ಕೀಳುಮಟ್ಟದ ಹೇಳಿಕೆಗೆ ಬಿಜೆಪಿ ತೀವ್ರ ಖಂಡನೆ

Chaluvadi Narayanaswamy
ಕರ್ನಾಟಕ4 hours ago

Chaluvadi Narayanaswamy : ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್​​ನ ಪ್ರತಿಪಕ್ಷದ ನಾಯಕ

NEET
ಕರ್ನಾಟಕ4 hours ago

NEET: ನೀಟ್‌ ಪರೀಕ್ಷೆಗೆ ವಿರೋಧ, ಬೆಂಗಳೂರು ವಿಭಜನೆಗೆ ಅಸ್ತು; ರಾಜ್ಯ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

DK Shivakumar
ಕರ್ನಾಟಕ5 hours ago

DK Shivakumar: ರೈತನಿಗೆ ಪ್ರವೇಶ ನಿರ್ಬಂಧ ಖಂಡನೀಯ; ಮಾಲ್ ಸೇರಿ ಇತರೆಡೆ ಶೀಘ್ರ ವಸ್ತ್ರ ಸಂಹಿತೆ ಜಾರಿ ಎಂದ ಡಿಕೆಶಿ

Veerabaswanthreddy Mudnal
ಶ್ರದ್ಧಾಂಜಲಿ5 hours ago

Veerabaswanthreddy Mudnal: ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಅನಾರೋಗ್ಯದಿಂದ ನಿಧನ

Rahat Fateh Ali Khan
ವಿದೇಶ5 hours ago

Rahat Fateh Ali Khan: ದುಬೈನಲ್ಲಿ ಪಾಕಿಸ್ತಾನದ ಗಾಯಕನ ಬಂಧನ; ಎಸಗಿದ ಕೃತ್ಯವೇನು?

Valmiki Corporation Scam
ಕರ್ನಾಟಕ5 hours ago

Valmiki Corporation Scam: ಬಿ. ನಾಗೇಂದ್ರ ಹೆಸರೇಳುವಂತೆ ಒತ್ತಡ; ಇಡಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ3 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ4 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ4 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ4 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ7 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 week ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 week ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌