Submarine Tourism In Dwarka: ಇನ್ನು ಶ್ರೀಕೃಷ್ಣನ ದ್ವಾರಕೆಯ ಗತವೈಭವವನ್ನು ಸಮುದ್ರದಾಳದಲ್ಲಿ ಸಬ್‌ಮರೀನ್‌ ಮೂಲಕ ನೋಡಿ! - Vistara News

ಪ್ರವಾಸ

Submarine Tourism In Dwarka: ಇನ್ನು ಶ್ರೀಕೃಷ್ಣನ ದ್ವಾರಕೆಯ ಗತವೈಭವವನ್ನು ಸಮುದ್ರದಾಳದಲ್ಲಿ ಸಬ್‌ಮರೀನ್‌ ಮೂಲಕ ನೋಡಿ!

ಭಾರತದಲ್ಲಿ ಇದೇ ಮೊದಲ ಬಾರಿಗೆ ಸಬ್‌ಮರೀನ್‌ ಪ್ರವಾಸೋದ್ಯಮವೂ (submarine tourism in dwarka) ಆರಂಭವಾಗಲಿದೆ! ಮುಳುಗಿದ ದ್ವಾರಕೆಯನ್ನು ನೋಡಲು ಸಬ್‌ಮರೀನ್‌ ಮೂಲಕ ಪಯಣ ಮಾಡಬಹುದಾದಂಥ ಹೊಸ ಅವಕಾಶ ಇನ್ನು ಪ್ರವಾಸಿಗರಿಗೆ ಲಭ್ಯವಾಗಲಿದೆ!

VISTARANEWS.COM


on

submarine tourism in dwarka
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಳುಗಿದ ಟೈಟಾನಿಕ್‌ ಹಡಗಿನ ದರ್ಶನಕ್ಕೆ ಸಬ್‌ಮರೀನ್‌ ಮೂಲಕ (submarine tourism in dwarka) ಹೋಗುವ ಪ್ರವಾಸೋದ್ಯಮ ಇತ್ತೀಚೆಗೆ ಹೆಚ್ಚು ಸುದ್ದಿಯಾಗಿದ್ದು ಬಹುತೇಕರಿಗೆ ತಿಳಿದೇ ಇದೆ. ಅಂತೆಯೇ, ಭಾರತದಲ್ಲಿ ಸಬ್‌ಮರೀನ್‌ ಮೂಲಕ ನೀರಿನಡಿಯ ಲೋಕವನ್ನು ನೋಡಬಹುದಾದರೆ, ಇತಿಹಾಸವನ್ನು ಕಣ್ತುಂಬಬಹುದಾದರೆ, ಅದಕ್ಕೆ ಶ್ರೀಕೃಷ್ಣನೂರು ದ್ವಾರಕೆಗಿಂತ ಅದ್ಭುತ ಜಾಗ ಇನ್ನೊಂದು ಸಿಗಲಿಕ್ಕಿಲ್ಲ.ಸಾಗರದ ಗರ್ಭದೊಳಕ್ಕೆ ಹೊಕ್ಕು, ಗತಕಾಲದದಲ್ಲಿ ಹುದುಗಿ ಹೋದ, ಕೇಳಿ ತಿಳಿದ ರೋಮಾಂಚನಗೊಳಿಸಬಲ್ಲ ಕಥೆಗಳನ್ನು ಕೇಳಿದ ಲೋಕವನ್ನೊಮ್ಮೆ ನೋಡಿ ಬರಬೇಕೆಂದು ಅನಿಸಿದರೆ, ಅದಕ್ಕೆ ನೀವು ಗುಜರಾತಿನ ದ್ವಾರಕೆಗೆ ಪಯಣ ಬೆಳೆಸಬೇಕು. ಶೀಘ್ರದಲ್ಲೇ, ಗುಜರಾತ್‌ ಪ್ರವಾಸೋದ್ಯಮ ಇಲಾಖೆ ಮಾಜ್‌ಗಾಂ ಡಾಕ್‌ಯಾರ್ಡ್‌ ಲಿಮಿಟೆಡ್‌ (ಎಂಡಿಎಲ್‌) ಸಂಸ್ಥೆಯೊಂದಿಗೆ ಹೊಸ ಒಪ್ಪಂದಕ್ಕೆ ಮುಂದಾಗಿದ್ದು, ಆ ಮೂಲಕ ಸಮುದ್ರದಾಳದಲ್ಲಿರುವ ಶ್ರೀಕೃಷ್ಣನ ದ್ವಾರಕೆಯ ಗತಕಾಲದ ವೈಭವವನ್ನು ಜನರ ಕಣ್ಣ ಮುಂದಿರಿಸಲು ಯೋಜನೆಗಳನ್ನು ರೂಪಿಸಿದೆ.

Submarine

ಈಗಾಗಲೇ ಗುಜರಾತ್‌ ರಾಜ್ಯ ಸರ್ಕಾರ ಈ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಮೂಲಕ ಈವರೆಗೆ ಜನಸಾಮಾನ್ಯರು ಕಾಣದ ಸಮುದ್ರದಾಳದ ಜಗತ್ತನ್ನು ಲೋಕದ ಮುಂದಿಡಲು ಸರ್ಕಾರ ನಿರ್ಧರಿಸಿದೆ. ಬೆಟ್‌ ದ್ವಾರಕಾ ಎಂಬ ಸಣ್ಣ ದ್ವೀಪದ ಸುತ್ತಮುತ್ತಲ ಅರಬ್ಬೀ ಸಮುದ್ರದಾಳದ ಜಗತ್ತು ಹಿಂದಿನ ದ್ವಾರಕೆ ಎಂಬ ನಗರವಾಗಿದ್ದು, ಈ ಪ್ರದೇಶದಲ್ಲಿ ಸಬ್‌ಮರೀನ್‌ ಮೂಲಕ ಆರಂಭವಾಗಲಿರುವ ಪ್ರವಾಸೋದ್ಯಮ ಇದಾಗಿದೆ.

ಹಿಂದೂಗಳ ಪವಿತ್ರ ಕ್ಷೇತ್ರವಾದ ದ್ವಾರಕೆಯನ್ನು ಶ್ರೀಕೃಷ್ಣನೇ ನಿರ್ಮಿಸಿದ ಎಂಬ ನಂಬಿಕೆ ಹಿಂದೂಗಳದ್ದು. ಮಹಾಭಾರತದ ಪ್ರಕಾರ ಶ್ರೀಕೃಷ್ಣ ಸುಮಾರು ೮೪ ಕಿಮೀಗಳಷ್ಟು ದೊಡ್ಡ ದ್ವಾರಕೆ ಎಂಬ ನಗರವನ್ನು ಗೋಮತಿ ಅರಬ್ಬೀ ಸಮುದ್ರವನ್ನು ಸೇರುವ ಪ್ರದೇಶದಲ್ಲಿ ನಿರ್ಮಿಸಿದ ಎಂಬ ವಿವರಣೆ ದಕ್ಕುತ್ತದೆ. ಆದರೆ, ಈ ನಗರ ಶ್ರೀಕೃಷ್ಣನ ಕಾಲಾನಂತರ ಸಮುದ್ರದಲ್ಲಿ ಮುಳುಗಿ ಹೋಯಿತು ಎಂಬ ಮಾಹಿತಿಗಳೂ ದಕ್ಕುತ್ತವೆ. ಈ ಪುರಾಣದ ಉಲ್ಲೇಖಗಳಿಗೆ ಪೂರಕವಾಗಿ ಭಾರತೀಯ ಪುರಾತತ್ವ ಇಲಾಖೆಗೆ ಸಾಕಷ್ಟು ಆಧಾರಗಳೂ ದೊರಕಿವೆ. ಉತ್ಖನನಗಳೂ ನಡೆದಿವೆ. ಆ ಕಾಲದ್ದೆಂದು ಹೇಳಲಾದ ಮಡಿಕೆ ಕುಡಿಕೆಗಳಿಂದ ಹಿಡಿದು ಕಲ್ಲಿನ ಕೆತ್ತನೆಗಳವರೆಗೆ ಸಾಕಷ್ಟು ಪಳೆಯುಳಿಕೆಗಳೂ ಸಮುದ್ರದಾಳದಲ್ಲಿ ಲಭಿಸಿದ್ದು, ಈ ಬಗ್ಗೆ ಸಂಶೋಧನೆಗಳೂ ನಡೆದಿವೆ. ಆ ಮೂಲಕ, ಶ್ರೀಕೃಷ್ಣನ ದ್ವಾಪರಯುಗ ಕೇವಲ ಪುರಾಣದ ಕಟ್ಟು ಕಥೆಯಲ್ಲ, ನಿಜವಾದ ಕಥೆ ಎಂಬುದಕ್ಕೆ ಸಾಕಷ್ಟು ಆಧಾರಗಳೂ ದೊರೆತಿವೆ ಎಂದು ಹೇಳಲಾಗುತ್ತದೆ. ಈಗ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇದನ್ನು ಜನಸಾಮಾನ್ಯರ ಮುಂದಿಡುವ ಈ ಸಬ್‌ಮರೀನ್‌ ಪ್ರವಾಸೋದ್ಯಮದ ಯೋಜನೆಯನ್ನೂ ರೂಪಿಸಿರುವುದು ವಿಶೇಷವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ಯೋಜನೆಯ ಪ್ರಕಾರ ದೀಪಾವಳಿಯ ಸಮಯಕ್ಕೆ ನಾವು ಸಬ್‌ಮರೀನ್‌ ಮೂಲಕ ಸಮುದ್ರದಾಳಕ್ಕೆ ಪಯಣಿಸಿ ದ್ವಾರಕೆಯನ್ನು ಕಣ್ತುಂಬಿಕೊಳ್ಳಬಹುದು. ಇದೇ ಜನವರಿ ೧೦ರಂದು ಗುಜರಾತ್‌ನ ಗಾಂಧೀನಗರದಲ್ಲಿ ನಡೆಯುವ ಜಾಗತಿಕ ಸಮಾವೇಶದಲ್ಲಿ ಈ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಲಿವೆ.

ಈ ಯೋಜನೆಯ ಪ್ರಕಾರ, ೩೫ ಟನ್‌ ತೂಕದ ಸಬ್‌ಮರೀನ್‌ನಲ್ಲಿ ಸುಮಾರು ೩೦ ಮಂದಿ ಇರಬಹುದಾದ ಸಾಮರ್ಥ್ಯ ಹೊಂದಿದೆ. ಇದರಲ್ಲಿ ೨೪ ಮಂದಿ ಆರಾಮವಾಗಿ ಎರಡು ಸಾಲುಗಳಲ್ಲಿ ಕೂರಬಹುದಾಗಿದೆ. ೩೦೦ಅಡಿ ಸಮುದ್ರದಾಳದವರೆಗೆ ಈ ಸಬ್‌ಮರೀನ್‌ ಪಯಣಿಸಲಿದ್ದು, ಅಲ್ಲಿನ ಪುರಾತನ ದ್ವಾರಕೆಯ ಸೊಬಗನ್ನು ನೋಡಿ ಮರಳಬಹುದು. ಶುಲ್ಕವೂ ಸೇರಿದಂತೆ, ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳು ಶೀಘ್ರದಲ್ಲೇ ಹೊರಬರಲಿದೆ.

ಇದನ್ನೂ ಓದಿ: Adventure Tourism: ನೀವು ಸಾಹಸ ಪ್ರಿಯರೇ? ಈ ಚಳಿಗಾಲದಲ್ಲಿ ನೀವು ಇಷ್ಟಾದರೂ ಸಾಹಸ ಮಾಡದಿದ್ದರೆ ಹೇಗೆ?!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Wildlife Tourism: ನೀವು ವನ್ಯಜೀವಿ ಪ್ರಿಯರೇ? ಹಾಗಿದ್ದರೆ ಪ್ರವಾಸಕ್ಕೆ ಮಾರ್ಚ್‌ ತಿಂಗಳು ಸಕಾಲ!

ಮಾರ್ಚ್‌ ತಿಂಗಳಲ್ಲಿ ಪ್ರವಾಸ ಪ್ರಿಯರಿಗೆ ಅದರಲ್ಲೂ, ವನ್ಯಜೀವಿ ಪ್ರಿಯರಿಗೆ ಸುಗ್ಗಿ. ಕಾರಣ, ವನ್ಯಧಾಮಗಳಿಗೆ (wildlife tourism) ಹೋಗಲು ಮಾರ್ಚ್‌ ತಿಂಗಳು ಸಕಾಲ.

VISTARANEWS.COM


on

Wildlife Tourism
Koo

ಚಳಿಗಾಲ ಅಂತ್ಯವಾಗುತ್ತಿದ್ದಂತೆ ವಸಂತ ಕಾಲ ಕಾಲಿಡುತ್ತಿದ್ದರೆ, ಲೋಕವೆಲ್ಲ ಸುಂದರ. ಚಿಗುರುವ ಗಿಡಮರಗಳು, ಒಣಭೂಮಿಯೆಲ್ಲ ಮತ್ತೆ ತಿಳಿ ಹಸಿರಿನಿಂದ ಕಂಗೊಳಿಸಿ ಹೂವಿನ ರಾಶಿಯಿಂದ ಕಂಗೊಳಿಸುವ ಕಾಲ. ಭೂಮಿಯ ಮೇಲಿನ ಸ್ವರ್ಗದಂತಹ ಸುಂದರ ಜಾಗಗಳೆಲ್ಲ ಅಕ್ಷರಶಃ ಸ್ವರ್ಗವಾಗಿ ಬಿಡುವ ಸಮಯವಿದು. ವಸಂತಕಾಲವೆಂದರೆ, ಎಲ್ಲರಲ್ಲೂ ಲವಲವಿಕೆ, ಚಿಗುರುವ ಉತ್ಸಾಹ, ಚಳಿಗಾಲದ ಸೋಮಾರಿತನ ಬಿಟ್ಟೆದ್ದು ಹಿತವಾದ ಬಿಸಿಲಿಗೆ ಮೈಯೊಡ್ಡಿ ಚುರುಕಾಗುವ ಸಮಯ. ಇಂಥ ಸಮಯ ಮಾರ್ಚ್‌ ತಿಂಗಳು. ಈ ಮಾರ್ಚ್‌ ತಿಂಗಳಲ್ಲಿ ಪ್ರವಾಸ ಪ್ರಿಯರಿಗೆ ಅದರಲ್ಲೂ, ವನ್ಯಜೀವಿ ಪ್ರಿಯರಿಗೆ ಸುಗ್ಗಿ. ಕಾರಣ, ವನ್ಯಧಾಮಗಳಿಗೆ (wildlife tourism) ಹೋಗಲು ಮಾರ್ಚ್‌ ತಿಂಗಳು ಸಕಾಲ. ಹೌದು. ಮಾರ್ಚ್‌ ತಿಂಗಳಲ್ಲಿ ಎಲ್ಲಾದರೂ ಪ್ರವಾಸ ಹೋಗಬೇಕು ಎಂಬ ಯೋಚನೆ ನಿಮಗಿದ್ದರೆ, ನೀವು ಪ್ರಕೃತಿ ಪ್ರಿಯರೂ ಮೇಲಾಗಿ ವನ್ಯಜೀವಿ ಪ್ರಿಯರೂ ಆಗಿದ್ದಲ್ಲಿ ಖಂಡಿತ ಭಾರತದ ವನ್ಯಜೀವಿಧಾಮಗಳಿಗೆ ಬೇಟಿ ಕೊಡಬಹುದು. ಬನ್ನಿ, ವನ್ಯಜೀವಿಗಳನ್ನು ನೋಡಲು ಮಾರ್ಚ್‌ ಯಾಕೆ ಸಕಾಲ ಎಂಬುದನ್ನು ನೋಡೋಣ.

African Safari Animals

ಪ್ರಾಣಿ ಪಕ್ಷಿಗಳ ಪ್ರಿಯವಾದ ಕಾಲ

ವಸಂತ ಕಾಲವೆಂಬುದು ಪ್ರಾಣಿ ಪಕ್ಷಿಗಳ ಪ್ರಿಯವಾದ ಕಾಲ. ಇದು ಪ್ರಾಣಿ ಪಕ್ಷಿಗಳ ನಡವಳಿಕೆಯಲ್ಲಿ ಗಮನಾರ್ಹ ಬದಲಾವಣೆಯನ್ನು ತರುವ ಕಾಲ. ಹಾಗಾಗಿ, ವನ್ಯಜೀವಿಗಳ ದರ್ಶನ ಮಾಡಬಯಸುವವರಿಗೆ ಲವಲವಿಕೆ ಪ್ರಾಣಿ ಪಕ್ಷಿಗಳು ಕಾಣ ಸಿಗಬಹುದು. ಅವುಗಳ ನಡವಳಿಕೆಯನ್ನು ಅಭ್ಯಾಸ ಮಾಡಬಯಸುವವರಿಗೆ ಇದು ಸುಗ್ಗಿಕಾಲ. ಈ ಸಮಯದಲ್ಲಿ ಸಾಕಷ್ಟು ವಲಸೆ ಹಕ್ಕಿಗಳೂ, ಸಂತಾನೋತ್ಪತ್ತಿ ಮಾಡುವ ಪಕ್ಷಿ ಸಂಕುಲಗಳೂ, ಮರಿಗಳೊಂದಿಗಿರುವ ಪ್ರಾಣಿಗಳೂ ಕಾಣಸಿಗುವುದು ಹೆಚ್ಚು. ಹೀಗಾಗಿ ಇದೊಂದು ಅದ್ಭುತ ಅನುಭವ ನೀಡಬಲ್ಲ ಸಮಯ.

ಮಿಲನದ ಸಂದರ್ಭ

ಮಾರ್ಚ್‌ ತಿಂಗಳು ಚಳಿಗಾಲವನ್ನು ಈಗಷ್ಟೇ ಮುಗಿಸಿಕೊಂಡು ಬೇಸಿಗೆ ಕಾಲಕ್ಕೆ ಕಾಲಿಡುವ ಕಾಲ. ಈ ಸಮಯದಲ್ಲಿ ಉಷ್ಣತೆ ನಿಧಾನವಾಗಿ ಏರತೊಡಗುತ್ತದೆ. ಈ ಸಂದರ್ಭ ಪ್ರಾಣಿ ಪಕ್ಷಿಗಳು ಹೆಚ್ಚು ಚುರುಕಾಗುತ್ತವೆ. ಅವುಗಳ ಚಟುವಟಿಕೆ, ಓಡಾಟ ಹೆಚ್ಚುತ್ತವೆ. ಮುಖ್ಯವಾಗಿ ಅವು ಸಂತಾನೋತ್ಪತ್ತಿಯಲ್ಲಿ ತೊಡಗುವ ಕಾಲವೂ ಇದಾದ್ದರಿಂದ ಅವುಗಳ ಮಿಲನದ ಅಪರೂಪದ ಸಂದರ್ಭಗಳಿಗೂ ನೀವು ಸಾಕ್ಷಿಯಾಗಬಹುದು.

Photography Careers for Creative Individuals

ಹಕ್ಕಿ ಛಾಯಾಗ್ರಾಹಕರಿಗೆ ಸುಗ್ಗಿ

ಮಾರ್ಚ್‌ ಹೇಳಿ ಕೇಳಿ ವಲಸಿಗ ಹಕ್ಕಿಗಳ ಕಾಲ. ಸಾವಿರಾರು ಕಿ.ಮೀಗಟ್ಟಲೆ ದೂರ ಹಾರಿಕೊಂಡು ಬಂದ ವಲಸಿಗ ಹಕ್ಕಿಗಳು ತಮ್ಮ ಸಂತಾನೋತ್ಪತ್ತಿಯನ್ನು ಮಾಡಿಕೊಂಡಿರುವುದನ್ನು ನೋಡಬಹುದಾದ ಕಾಲ ಇದು. ಹಾಗಾಗಿ ಪಕ್ಷಿಪ್ರಿಯರಿಗೆ, ಹಕ್ಕಿ ಛಾಯಾಗ್ರಾಹಕರಿಗೆ ಇದು ಸಕಾಲ.

ಕಣ್ಮನ ತಣಿಸುವ ತಿಳಿಹಸಿರು

ಮಾರ್ಚ್‌ ತಿಂಗಳು ಗಿಡಮರಗಳೆಲ್ಲ ಚಿಗಿತುಕೊಂಡು ಹೂಬಿಡುವ ಕಾಲ. ಹಾಗಾಗಿ ಕಾಡೊಳಗೊಂದು ಪಾಸಿಟಿವಿಡಿ, ಉತ್ಸಾಹ, ಉಲ್ಲಾಸ ತುಂಬಿರುತ್ತದೆ. ಕಣ್ಮನ ತಣಿಸುವ ತಿಳಿಹಸಿರು, ಬಣ್ಣಬಣ್ಣದ ಹೂವುಗಳು, ದುಂಬಿ, ಚಿಟ್ಟೆಗಳು, ಹೀಗೆ ಎಲ್ಲೆಡೆ ಪ್ರಕೃತಿಯ ಸಂಭ್ರಮದ ವಾತಾವರಣವನ್ನು ಮೈಮನಸ್ಸು ತುಂಬಿಕೊಳ್ಳಬಹುದು. ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸುವವರಿಗೆ ಇದು ಅತ್ಯುತ್ತಮ ಕಾಲ.

Wildlife

ಗದ್ದಲ ಕಡಿಮೆ ಇರುವ ಸಮಯ

ಪ್ರವಾಸಿಗರ ವಿಚಾರಕ್ಕೆ ಬಂದಾಗ ಮಾರ್ಚ್‌ ತಿಂಗಳು ಕಡಿಮೆ ಪ್ರವಾಸಿಗರಿರುವ, ಗದ್ದಲ ಕಡಿಮೆ ಇರುವ ಸಮಯ. ಮಕ್ಕಳ ಪರೀಕ್ಷೆಗಳ ಕಾಲ. ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿರುವ ಕಾಲವಾದ್ದರಿಂದ ಕಡಿಮೆ ಮಂದಿ ಪ್ರವಾಸಕ್ಕೆ ಹೋಗುತ್ತಾರೆ. ಹೀಗಾಗಿ, ಜನರ ಗದ್ದಲವಿಲ್ಲವಾದ್ದರಿಂದ ಪ್ರಾಣಿ ಪಕ್ಷಿಗಳು ತಮ್ಮದೇ ಏಕಾಂತದಲ್ಲಿ ಚಟುವಟಿಕೆಯಿಂದಿರುತ್ತವೆ. ಮೌನವಾಗಿದ್ದುಕೊಂಡು, ಪ್ರಕೃತಿಯೊಳಗೆ ಒಂದಾಗಿ ಪ್ರಾಣಿಪಕ್ಷಿಗಳ ಏಕಾಂತವನ್ನು ಸದ್ದುಗದ್ದಲವಿಲ್ಲದೆ ನೋಡಲು ಇದು ಹೇಳಿ ಮಾಡಿಸಿದಂತಹ ಕಾಲ. ಅಪರೂಪದ ದೃಶ್ಯಗಳಿಗೆ ಸಾಕ್ಷಿಯಾಗುವ ಸಂದರ್ಭವೂ ನಿಮಗೆ ದಕ್ಕೀತು!

ಹಿತಕರ ವಾತಾವರಣ

ಈ ತಿಂಗಳು ತೀರಾ ಸೆಖೆಯಿಲ್ಲದ, ಹೆಚ್ಚು ತಾಳಲಾರದ ಬಿಸಿಲಿಲ್ಲದೆ ಇರುವುದರಿಂದ ಈ ಸಂದರ್ಭ ಪ್ರವಾಸ ಸುಲಭ. ಅದರಲ್ಲೂ ಕಾಡಿನೊಳಗೆ ಹೆಚ್ಚು ಚಳಿಯೂ ಅಲ್ಲದ, ಹೆಚ್ಚು ಸೆಖೆಯೂ ಇಲ್ಲದ ತಣ್ಣನೆಯ ಹವಾಮಾನ ತಿರುಗಾಡಲು ಸೂಕ್ತವೂ ಆಗಿರುತ್ತದೆ.

Continue Reading

ಪ್ರವಾಸ

Spring Tourism: ವಸಂತ ಕಾಲದಲ್ಲಿ ವೀಕ್ಷಿಸಲೇಬೇಕಾದ ಭಾರತದ ರಮ್ಯ ತಾಣಗಳಿವು!

ತಿಳಿ ಹಸಿರಿನಿಂದ ಬೆಟ್ಟ ಗುಡ್ಡಗಳೆಲ್ಲ ನಳನಳಿಸಿ ಅದ್ಭುತವಾಗಿ ಕಾಣುವ ಇಂಥ ಸಂದರ್ಭದಲ್ಲಿ ಪ್ರವಾಸವೇ ಒಂದು ಮಧುರ ಅನುಭೂತಿ. ಅತ್ತ ಬಿಸಿಲೂ ಖಾರವಿಲ್ಲದ, ಇತ್ತ ಚಳಿಯೂ ಇಲ್ಲದ ಹಿತವಾದ ತಂಗಾಳಿ ಬೀಸುವ ಕಾಲ. ಈ ಕಾಲದಲ್ಲಿ ಎಲ್ಲಿ ಪ್ರವಾಸ (Spring Tourism) ಮಾಡಬಹುದು? ಇಲ್ಲಿದೆ ಮಾಹಿತಿ.

VISTARANEWS.COM


on

Spring Tourism
Koo

ವಸಂತ ಕಾಲಕ್ಕೆ ಅತ್ಯಂತ ಸುಂದರ ಕಾಲಗಳಲ್ಲಿ ಪ್ರಮುಖ ಸ್ಥಾನ. ಚಳಿಗಾಲದಲ್ಲಿ ಬೋಳಾಗಿದ್ದ ಮರಗಿಡಗಳೆಲ್ಲ ಚಿರುಗಿ ಮೊಗ್ಗರಳಿ ಹೂವಾಗಿ ಜಗತ್ತೆಲ್ಲ ಖುಷಿಯಿಂದ ನಳನಳಿಸುವಂತೆ ಕಾಣುವ ಕಾಲ. ಈ ಕಾಲದಲ್ಲಿ ಪ್ರವಾಸ ಅತ್ಯಂತ ಮಧುರ. ಹಕ್ಕಿಗಳೆಲ್ಲ ಸಂತಸದಿಂದ ಹಾಡಿ ಹಾರಾಡಿ ಕುಣಿವ ಕಾಲವಿದು. ತಿಳಿ ಹಸಿರಿನಿಂದ ಬೆಟ್ಟ ಗುಡ್ಡಗಳೆಲ್ಲ ನಳನಳಿಸಿ ಅದ್ಭುತವಾಗಿ ಕಾಣುವ ಇಂಥ ಸಂದರ್ಭದಲ್ಲಿ ಪ್ರವಾಸವೇ ಒಂದು ಮಧುರ ಅನುಭೂತಿ. ಅತ್ತ ಬಿಸಿಲೂ ಖಾರವಿಲ್ಲದ, ಇತ್ತ ಚಳಿಯೂ ಇಲ್ಲದ ಹಿತವಾದ ತಂಗಾಳಿ ಬೀಸುವ ಕಾಲ. ಕೆಲವು ಸ್ಥಳಗಳನ್ನು ಅಕ್ಷರಶಃ ವಸಂತ ಕಾಲದಲ್ಲೇ ನೋಡಬೇಕು. ಯಾಕೆಂದರೆ, ಎಲ್ಲ ಕಾಲದಲ್ಲೂ ಸುಂದರವಾಗಿ ಕಾಣುವ ಸ್ಥಳ ವಸಂತಕಾಲದಲ್ಲಿ ಹೇಗಿದ್ದೀತು ಎಂಬ ಕಲ್ಪನೆಯನ್ನು ಯಾವುದೇ ಪ್ರಕೃತಿ ಪ್ರಿಯನೂ ಮಾಡಬಲ್ಲ. ಹಾಗಾದರೆ ಬನ್ನಿ, ವಸಂತಕಾಲದಲ್ಲಿ ಹೋಗಲೇಬೇಕಾದ (Spring Tourism) ಭಾರತದ ಪ್ರವಾಸೀ ಸ್ಥಳಗಳ್ಯಾವುವು ಎಂಬುದನ್ನು ನೋಡೋಣ.

Dal lake at Srinagar, Kashmir, India India Tourism

ಶ್ರೀನಗರ, ಕಾಶ್ಮೀರ

ಭೂಲೋಕದ ಸ್ವರ್ಗ ಎಂದೇ ಹೆಸರು ಪಡೆದ ಕಾಶ್ಮೀರವನ್ನು ಚಳಿಗಾಲದಲ್ಲಿ ಹಿಮದಲ್ಲಿ ನೋಡಿ ಖುಷಿ ಪಡುವುದು ಬೇರೆಯೇ ಆದರೂ ವಸಂತ ಕಾಲದಲ್ಲಿ ನೋಡುವುದು ಇನ್ನೂ ಸೊಗಸು. ಕಾಶ್ಮೀರದ ಶ್ರೀನಗರದ ಟ್ಯುಲಿಪ್‌ ಉದ್ಯಾನದಲ್ಲಿ ಬಣ್ಣಬಣ್ಣದಲ್ಲಿ ಟ್ಯುಲಿಪ್‌ ಹೂವರಳಿ ನಗುವುದನ್ನು ನೋಡಲು ಎರಡು ಕಣ್ಣು ಸಾಲದು. ವಿದೇಶಗಳಲ್ಲಿ ಕಾಣುವ ಈ ಹೂವು ಭಾರತದಲ್ಲಿ ಕಾಣಸಿಗುವ ಕೆಲವೇ ನಗರಗಳ ಪೈಕಿ ಶ್ರೀನಗರಕ್ಕೆ ಪ್ರಮುಖ ಸ್ಥಾನ. ಕಾಶ್ಮೀರದ ಗುಲ್ಮಾರ್ಗ್‌, ಸೋನ್‌ಮಾರ್ಗ್‌ ಸೇರಿದಂತೆ ಎಲ್ಲ ಪ್ರೇಕ್ಷಣೀಯ ಸ್ಥಳಗಳೂ ಈ ಕಾಲದಲ್ಲಿ ಮನಮೋಹಕ.

munnar

ಮುನ್ನಾರ್‌, ಕೇರಳ

ಕೇರಳದ ಮುನ್ನಾರ್‌ ಕೂಡಾ ಅತ್ಯಂತ ಸುಂದರ ಊರುಗಳಲ್ಲಿ ಒಂದು ಈ ಬೆಟ್ಟದೂರು ಹಸಿರ ಸ್ವರ್ಗ. ಹಲವಾರು ಜಲಪಾತಗಳು, ಟೂರಿಸ್ಟ್‌ ಪಾಯಿಂಟ್‌ಗಳು ಇಲ್ಲಿದ್ದು, ವಸಂತ ಕಾಲದ ಚಿಗುರು ಹಸಿರಿನಲ್ಲಿ ಚಂದವಾಗಿ ಕಾಣುತ್ತದೆ. ಹೆಚ್ಚು ಸೆಖೆಯೂ ಇಲ್ಲದ ಈ ಕಾಲದಲ್ಲಿ ಮುನ್ನಾರ್‌ ನೋಡುವುದು ಬಲು ಸೊಗಸು.

ಶಿಲ್ಲಾಂಗ್‌, ಮೇಘಾಲಯ

ಮೇಘಾಲಯವನ್ನು ನೋಡಲು ಸಕಾಲ ಎಂದರೆ ಅದು ವಸಂತ ಕಾಲ. ಹಸಿರಿನಿಂದ ನಳನಳಿಸುವ ಈ ಕಾಲದಲ್ಲಿ ಮಳೆಯೂ ಅಷ್ಟಾಗಿ ಸುರಿಯದ ಕಾರಣ ಶಿಲ್ಲಾಂಗ್‌ ಸುತ್ತಿ ನೋಡಲು ಮಳೆ ಅಡ್ಡ ಬರದು. ಅದ್ಭುತ ಸೌಂದರ್ಯದ ದಟ್ಟ ಹಸಿರಿನ ಮೇಘಾಲಯದ ಪ್ರಕೃತಿ ಸೌಂದರ್ಯವನ್ನು ಸವಿಯಲು ಇದು ಅತ್ಯುತ್ತಮ ಕಾಲ.

Darjeeling

ಡಾರ್ಜಿಲಿಂಗ್‌, ಪಶ್ಚಿಮ ಬಂಗಾಳ

ತನ್ನ ಚಹಾ ತೋಟಗಳ ಹಾಗೂ ಹಿಮಾಲಯ ಅದ್ಭುತ ಸೌಂದರ್ಯವನ್ನು ಜೊತೆಯಾಗಿ ಕಟ್ಟಿಕೊಡಬಲ್ಲ ತಾಣಗಳಲ್ಲಿ ಡಾರ್ಜಿಲಿಂಗ್‌ಗೆ ಮಹತ್ವದ ಸ್ಥಾನವಿದೆ. ಹಾಗಾಗಿ ಇದು ಪ್ರೇಮಿಗಳಿಗೆ ಸ್ವರ್ಗ. ಚಳಿಗಾಲದ ಚಳಿಯಿಂದ ಕೊಂಚ ಹೊರಬಂದು ಹಿತವಾದ ಬಿಸಿಲು, ಹೊದ್ದು ಮಲಗುವ ಚಳಿ ಎರಡನ್ನೂ ನೀಡಬಲ್ಲ ಸಮಯವೆಂದರೆ ಅದು ವಸಂತ ಕಾಲ. ಡಾರ್ಜಿಲಿಂಗನ್ನು ಈ ಕಾಲದಲ್ಲಿ ನೋಡಬೇಕು.

Gangtok, Sikkim

ಗ್ಯಾಂಗ್ಟಕ್‌, ಸಿಕ್ಕಿಂ

ಸಿಕ್ಕಿಂ ಎಂಬ ಭಾರದ ರಾಜ್ಯದ ಸೌಂದರ್ಯವನ್ನು ಬಣ್ಣಿಸಲು ಪದಗಳ ಶ್ರೀಮಂತಿಕೆ ಬೇಕು. ಸದಾ ಸುಂದರವಾಗಿ ಕಾಣುವ, ಹಿಮಾಲಯದ ಸೌಂದರ್ಯವನ್ನು ತೋರಿಸುವ ರಾಜ್ಯ. ಇಲ್ಲಿನ ಹಿಮದೂರುಗಳನ್ನೂ ನೋಡಿಕೊಂಡು, ವಸಂತದಲ್ಲಿ ನಿಧಾನವಾಗಿ ಚಿಗುರೊಡೆವ ಮರಗಿಡಗಳನ್ನೂ ಕಣ್ತುಂಬಿಕೊಂಡು, ಹೂಗಳ ರಾಶಿಯನ್ನು ನೋಡಲು ಜೀವನದಲ್ಲೊಮ್ಮೆಯಾದರೂ ಹೋಗಲೇ ಬೇಕಲ್ಲವೇ?

City of ooty, Tamil Nadu

ಊಟಿ, ತಮಿಳುನಾಡು

ನಮ್ಮ ನೆರೆಯ ರಾಜ್ಯದ ಈ ಊರಿಗೆ ನಾವು ಮನಸು ಮಾಡಿದಾಗಲೆಲ್ಲ ಹೋಗಬಹುದು. ಮೊದಲೇ ಊಟಿ ಪ್ರೇಮಿಗಳಿಗೆ ಸ್ವರ್ಗ. ಇನ್ನು, ವಸಂತ ಕಾಲದಲ್ಲಿ ಉದ್ಯಾನಗಳಲ್ಲೆಲ್ಲ ನಳನಳಿಸುವ ಹೂಗಳರಳಿದ್ದರೆ ಕೇಳಬೇಕೇ? ಪ್ರೇಮಿಗಳಿಗೆ, ನವದಂಪತಿಗಳಿಗೆ ರಮ್ಯಗಳಿಗೆಯನ್ನು ತಂದು ಕೊಡುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ, ದೂರ ಪ್ರವಾಸ ಹೋಗಲಾಗದೆ ಇರುವವರು ಬೇಸರ ಪಡಬೇಕಾಗಿಲ್ಲ. ಹತ್ತಿರದ ಊಟಿಗೇ ಹೋಗಿ ಬಣ್ಣಬಣ್ಣದ ಹೂಗಳನ್ನು ಕಣ್ತುಂಬಿಕೊಂಡು ಬರಬಹುದು.

Continue Reading

ಪ್ರವಾಸ

Valentine Day: ಪ್ರೀತಿಸುವ ಜೋಡಿಗಳಿಗೆ ಸೂಕ್ತ ರೊಮ್ಯಾಂಟಿಕ್ ಪ್ರವಾಸೀ ತಾಣಗಳಿವು!

ಪ್ರೇಮಿಗಳ ದಿನ (Valentine Day) ಸಮೀಪಿಸುತ್ತಿದೆ. ಪ್ರೇಮಿಗಳು ಹೋಗಬಹುದಾದ, ಪ್ರೇಮಿಗಳ ಸ್ವರ್ಗವೇ ಆಗಿರುವ ಭಾರತದ ಕೆಲವು ಪ್ರವಾಸಿ ತಾಣಗಳನ್ನು ನೋಡೋಣ.

VISTARANEWS.COM


on

Valentine Day destination
Koo

ಫೆಬ್ರವರಿ ತಿಂಗಳು ಬಂದ ತಕ್ಷಣ ಪ್ರವಾಸ ಎಂದರೆ ನೆನಪಾಗುವುದು ರೊಮ್ಯಾಂಟಿಕ್‌ ಜಾಗಗಳು! ಕಾರಣ ವ್ಯಾಲೆಂಟೈನ್ಸ್‌ ಡೇ (Valentine Day) ಅರ್ಥಾತ್‌ ಪ್ರೇಮಿಗಳ ದಿನ. ಪ್ರೇಮಿಗಳ ದಿನ ಪ್ರೇಮಿಗಳ ಪಾಲಿನ ಹಬ್ಬ. ಪ್ರೀತಿಸುವವರಿಗೆ, ಪ್ರೀತಿಸಿ ಮದುವೆಯಾದ ಹೊಸ ಜೋಡಿಗಳಿಗೆ ಈ ಪ್ರೇಮಿಗಳ ದಿನವನ್ನು ಅರ್ಥಪೂರ್ಣವಾಗಿ ನೆನಪಿನಲ್ಲಿಡುವಂತೆ ಆಚರಿಸಬೇಕು ಎಂದು ಮನಸ್ಸಾಗುವುದು ಸಹಜವೇ. ಪ್ರೇಮಿಯ ಜೊತೆಗೆ ಊಟಕ್ಕೋ, ಪಾರ್ಕಿಗೋ ಅಥವಾ ಸಿನಿಮಾಕ್ಕೋ ಹೋಗುವುದು ಸಾಮಾನ್ಯವೇ ಆದರೂ, ಹಲವು ಜೋಡಿಗಳು ಪ್ರವಾಸದ ಯೋಜನೆಯನ್ನೂ ರೂಪಿಸುತ್ತಾರೆ. ಬನ್ನಿ, ಪ್ರೇಮಿಗಳು ಹೋಗಬಹುದಾದ, ಪ್ರೇಮಿಗಳ ಸ್ವರ್ಗವೇ ಆಗಿರುವ ಭಾರತದ ಕೆಲವು ಪ್ರವಾಸಿ ತಾಣಗಳನ್ನು ನೋಡೋಣ.

ooty

ಊಟಿ, ತಮಿಳುನಾಡು

ಹನಿಮೂನ್‌ ಅಥವಾ ಪ್ರೀತಿ ಮಾಡುವವರ ಕಣ್ಣಿಗೆ ಸ್ವರ್ಗವಾಗಿ ಕಾಣುವ ಊರು ಎಂದರೆ ಅದು ಊಟಿ. ಹತ್ತಿರದಲ್ಲೇ ಇರುವುದರಿಂದಲೋ ಅಥವಾ, ಅದಕ್ಕಿರುವ ಈ ಪರಿಭಾಷೆಯಿಂದಲೋ, ಜೋಡಿಗಳಿಗೆ ಒಮ್ಮೆಯಾದರೂ ಊಟಿಗೆ ಹೋಗಿ ಬರಬೇಕು ಅನಿಸದೆ ಇರದು. ಊಟಿಯ ಬೊಟಾನಿಕಲ್‌ ಗಾರ್ಡನ್‌ನಿಂದ ಮೊದಲ್ಗೊಂಡು ಪುಟಾಣಿ ರೈಲಿನಲ್ಲಿ ಕೂರುವವರೆಗೆ ಜೋಡಿಗಳು ಕಾಲ ಜೊತೆಯಾಗಿ ಕಾಲ ಕಳೆಯಲು ಇಲ್ಲಿ ಬೇಕಾದಷ್ಟು ಜಾಗಗಳಿವೆ. ಜೊತೆಗೆ ಚುಮುಚುಮು ಚಳಿಯ ಊಟಿ ಎಂದರೆ ಪ್ರೇಮಿಗಳಿಗೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಎನ್ನಲು ಅಡ್ಡಿಯಿಲ್ಲ.

Gangtok, Sikkim

ಗ್ಯಾಂಗ್‌ಟಕ್‌, ಸಿಕ್ಕಿಂ

ಹಿಮಾಲಯದ ತಪ್ಪಲ ಗ್ಯಾಂಗ್‌ಟಕ್‌ ನಗರವು ಅತ್ತ ಸುಂದರ ಅಷ್ಟೇ ರೊಮ್ಯಾಂಟಿಕ್‌ ಆದ ನಗರಗಳಲ್ಲಿ ಒಂದು. ಇಲ್ಲಿಂದ ವಿಶ್ವದ ಮೂರನೇ ಅತ್ಯಂತ ಎತ್ತರದ ಪರ್ವತವಾದ ಕಾಂಚನಜುಂಗಾವನ್ನು ಕಾಣಬಹುದು. ಬೆಳ್ಳಂಬೆಳಗ್ಗೆ ಎದ್ದು ಹಿಮಪರ್ವತಗಳಿಗೆ ಸೂರ್ಯ ರಶ್ಮಿ ಚುಂಬಿಸುವ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಹಿಮಪರ್ವತಗಳು, ಸರೋವರ, ಜಲಪಾತ, ಕಡಿದಾದ ರಸ್ತೆಗಳು ಹೀಗೆ ಪ್ರಕೃತಿ ಪ್ರೇಮಿಗಳಿಗೆ ಖಂಡಿತಾ ಇಷ್ಟವಾಗುವ ಜಾಗವಿದು.

Jaisalmer Rajasthan Sunset Spots in India

ಜೈಸಲ್ಮೇರ್‌, ರಾಜಸ್ಥಾನ

ರಾಜಸ್ಥಾನದಲ್ಲೇನಿದೆ, ಮರುಳುಗಾಡು, ಅದ್ಹೇಗೆ ರೊಮ್ಯಾಂಟಿಕ್‌ ಆದೀತು ಎಂದು ನೀವಂದುಕೊಂಡರೆ ಅದು ನಿಮ್ಮ ಮೂರ್ಖತನ. ಚಳಿಗಾಲದಲ್ಲಿ ಅದ್ಭುತ ಚಳಿಯನ್ನು ಹೊಂದಿರುವ ಜೈಸಲ್ಮೇರ್‌ ಪ್ರವಾಸ ಯುವ ಜೋಡಿಗಳಿಗೆ ಸಹಾಸಮಯ ಪ್ರವಾಸವಾಗಬಲ್ಲದು. ಇಲ್ಲಿನ ಮರಳುಗಾಡಿನಲ್ಲಿ ಒಂಟೆಯ ಮೇಲೆ ಕೂತು ಸಫಾರಿ ಮಾಡಬಹುದು, ಅಷ್ಟೇ ಯಾಕೆ, ಮೈನವಿರೇಳಿಸುವ ಜೀಪ್‌ ಸಫಾರಿಯೂ ಇಲ್ಲಿ ಲಭ್ಯ. ಜೊತೆಗೆ ಕೂತು ಬೇಕಾದಷ್ಟು ಫೋಟೋ ತೆಗೆದುಕೊಳ್ಳಲು ಅರಮನೆಗಳೂ, ಕೋಟೆ ಕೊತ್ತಲಗಳೂ ಇವೆ. ಪ್ರೇಮಿಗಳ ದಿನವನ್ನು ರಸಮಯವನ್ನಾಗಿಸಲು, ಈ ಗೋಲ್ಡನ್‌ ಸಿಟಿಗಿಂತ ಅದ್ಭುತ ತಾಣ ಇನ್ನೆಲ್ಲಿದೆ ಹೇಳಿ!

Andaman and Nicobar Islands Honeymoon Places In India

ಅಂಡಮಾನ್‌ ಮತ್ತು ನಿಕೋಬಾರ್

ಈ ದ್ವೀಪಸಮೂಹ ಸಮುದ್ರ ತೀರವನ್ನು ಇಷ್ಟಪಡುವ ಮಂದಿಗೆ ಹೇಳಿ ಮಾಡಿಸಿದ್ದು. ಮೈಚಾಚಿ ಚಳಿಗಾಲದ ಮೆದುವಾದ ಸೂರ್ಯನ ಕಿರಣಗಳಿಗೆ ಮೈಯೊಡ್ಡುತ್ತಾ, ಸಮುದ್ರದಲ್ಲಿ ಸಾಹಸಮಯ ಕ್ರೀಡೆಗಳನ್ನಾಡುತ್ತಾ ಸ್ವಚ್ಛಂದವಾಗಿ ವಿಹರಿಸಲು ಅಂಡಮಾನ್‌ ಅದ್ಭುತ ತಾಣ.

ಶಿಲ್ಲಾಂಗ್‌, ಮೇಘಾಲಯ

ಮಳೆಯೂರು ಮೇಘಾಲಯವನ್ನು ಸುತ್ತಿ ನೋಡಲು ಚಳಿಗಾಲಕ್ಕಿಂತ ಹೊರತಾದ ಇನ್ನೊಂದು ಕಾಲವಿಲ್ಲ. ಕಾರಣ ಮಳೆ ಬರದೇ ಇರುವ ಪ್ರಶಾಂತವಾದ ಕಾಲವಿದು. ಪ್ರೇಮಿಗಳಿಗೆ ಹೇಳಿ ಮಾಡಿಸಿದ ಚಳಿ, ಹಸಿರು ಪ್ರಕೃತಿ, ಕಾಡುಮೇಡು, ನದಿ, ಝರಿ, ಬೆಟ್ಟಗುಡ್ಡ ಎಲ್ಲವೂ ಇಲ್ಲಿದೆ.

Alleppey, Kerala

ಅಲೆಪ್ಪಿ, ಕೇರಳ

ಕೇರಳವೆಂಬ ದೇವರನಾಡು ಯಾವ ಪ್ರೇಮಿಗಳಿಗೆ ತಾನೇ ಇಷ್ಟವಾಗಲಿಕ್ಕಿಲ್ಲ! ಪ್ರೇಮ ಇದ್ದಾಗ ಜಗತ್ತೇ ಚಂದ ಕಾಣುತ್ತದಂತೆ. ಇನ್ನು ಕೇರಳವೆಂಬ ಸುಂದರ ಊರು ಪ್ರೇಮಿಗಳ ಕಣ್ಣಿಗೆ ಸ್ವರ್ಗವಾಗಿಯೇ ಕಂಡರೆ ಆಶ್ಚರ್ಯವಿಲ್ಲ. ಅದರಲ್ಲೂ, ಅಲೆಪ್ಪಿಯಂತಹ ಊರಿನಲ್ಲಿ ಹೌಸ್‌ಬೋಟ್‌ನಲ್ಲಿ ವಿಹರಿಸುತ್ತಾ, ಏಕಾಂತ ಅನುಭವಿಸಲು ಪ್ರೇಮಿಗಳಿಗೆ ಪರ್ಫೆಕ್ಟ್‌ ತಾಣ.

Goa

ಗೋವಾ

ಹೇಳಿ ಕೇಳಿ ಗೋವಾವನ್ನು ಬಿಟ್ಟರೆ ಹೇಗೆ? ಎಡವಿಬಿದ್ದರೆ ಸಾಕು, ಒಂದೊಂದು ಬೀಚು ಸಿಗುವಷ್ಟು ಬೀಚುಗಳಿರುವ ನಗರಿ. ಯುವಜನರ ಮೋಜು ಮಸ್ತಿಗಳಿಗೆ ಬೇಕಾದ ಎಲ್ಲವನ್ನೂ ಪೂರೈಸುವ ಪ್ರವಾಸೀ ತಾಣ. ಈ ಗೌಜು ಗದ್ದಲ ಬೇಡವೆಂದರೆ, ಪ್ರಶಾಂತ ಬೀಚುಗಳು ಬೇಕಾದಷ್ಟಿವೆ. ಸಾಹಸೀ ಕ್ರೀಡೆಗಳೀಗೂ ಅಚ್ಚುಮೆಚ್ಚಿನ ತಾಣ. ಪ್ರೇಮಿಗಳಿಗೆ ಜಗವ ಮರೆಯಲು ಇದಕ್ಕಿಂತ ಇನ್ನೇನು ಬೇಕು!

ಇದನ್ನೂ ಓದಿ: Winter Travel Fashion Tips: ಆಕರ್ಷಕ ವಿಂಟರ್‌ ಟ್ರಾವೆಲ್‌ ಫ್ಯಾಷನ್‌ಗೆ 5 ಸಿಂಪಲ್‌ ಟಿಪ್ಸ್

Continue Reading

ದೇಶ

Budget 2024: ಲಕ್ಷದ್ವೀಪದಲ್ಲಿ ಹೂಡಿಕೆಯ ಮದ್ದು, ತಗಾದೆ ತೆಗೆದ ಮಾಲ್ಡೀವ್ಸ್‌ಗೆ ಗುದ್ದು

Budget 2024: ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ ತಗಾದೆ ತೆಗೆದಿದ್ದ ಮಾಲ್ಡೀವ್ಸ್‌ಗೆ ಕೇಂದ್ರ ಸರ್ಕಾರ ಗುದ್ದು ನೀಡಿದೆ. ಲಕ್ಷದ್ವೀಪ ಪ್ರವಾಸೋದ್ಯಮಕ್ಕಾಗಿ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಆದ್ಯತೆ ನೀಡಿದೆ.

VISTARANEWS.COM


on

Vistara Editorial, Balanced budget by Central Government
Koo

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ತೆರಳಿ, ಅಲ್ಲಿನ ಪ್ರವಾಸೋದ್ಯಮಕ್ಕೆ (Lakshadweep Tourism) ಉತ್ತೇಜನ ನೀಡಬೇಕು ಎಂದಿದ್ದಕ್ಕೇ ತಗಾದೆ ತೆಗೆದಿದ್ದ ಮಾಲ್ಡೀವ್ಸ್‌ಗೆ ಈಗ ಬಜೆಟ್‌ನಲ್ಲಿ (Budget 2024) ಭಾರತ (India Maldives Row) ತಿರುಗೇಟು ನೀಡಿದೆ. “ಲಕ್ಷದ್ವೀಪ ಸೇರಿ ದೇಶದ ಎಲ್ಲೆಡೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು. ಲಕ್ಷದ್ವೀಪದಲ್ಲಿ ಭಾರಿ ಪ್ರಮಾಣದ ಹೂಡಿಕೆಯಾಗಲಿದೆ” ಎಂದು ಬಜೆಟ್‌ ಭಾಷಣದ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪ್ರಸ್ತಾಪಿಸಿದರು.

“ದೇಶದ ಪ್ರವಾಸೋದ್ಯಮಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಬಂದರು ಸಂಪರ್ಕ, ಪ್ರವಾಸೋದ್ಯಮ ಮೂಲ ಸೌಕರ್ಯಗಳ ಅಭಿವೃದ್ಧಿ, ಲಕ್ಷದ್ವೀಪ ಸೇರಿ ದೇಶದ ಎಲ್ಲ ದ್ವೀಪಗಳನ್ನು ಅಭಿವೃದ್ಧಿಗೊಳಿಸಲಾಗುವುದು” ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು. ಭಾರತದ ಆಂತರಿಕ ವಿಚಾರದಲ್ಲಿ ಸುಖಾಸುಮ್ಮನೆ ಮೂಗು ತೂರಿಸಿದ್ದ ಮಾಲ್ಡೀವ್ಸ್‌ಗೆ ಇದರಿಂದ ಭಾರಿ ಹಿನ್ನಡೆಯಾಗಲಿದೆ. ಈಗಾಗಲೇ ಭಾರತದಲ್ಲಿ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಆರಂಭವಾದ ಬಳಿಕ ಮಾಲ್ಡೀವ್ಸ್‌ಗೆ ಭೇಟಿ ನೀಡುವ ಭಾರತೀಯರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಇದರಿಂದಾಗಿ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಕೊಡುಗೆ ನೀಡುವ ಅಗ್ರ ರಾಷ್ಟ್ರಗಳಲ್ಲಿ ಭಾರತವು ಅಗ್ರ ಸ್ಥಾನದಿಂದ 5ನೇ ಸ್ಥಾನಕ್ಕೆ ಕುಸಿದಿದೆ. ಇದರಿಂದ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ ಎಂದೇ ಹೇಳಲಾಗುತ್ತಿದೆ.

ಜನವರಿ 28ರವರೆಗೆ ಮಾಲ್ಡೀವ್ಸ್‌ಗೆ ಭೇಟಿ ನೀಡಿದವರು

ದೇಶಭೇಟಿ ನೀಡಿದವರುಮಾರುಕಟ್ಟೆಗೆ ಕೊಡುಗೆ
ರಷ್ಯಾ 18,561 10.6%
ಇಟಲಿ 18,111 10.4%
ಚೀನಾ 16,529 9.5%
ಬ್ರಿಟನ್‌ 14,588 8.4%
ಭಾರತ 13,989 8.0%

ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ ಭಾರತ ಹಾಗೂ ಮೋದಿ ವಿರುದ್ಧ ಮಾಲ್ಡೀವ್ಸ್‌ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಮಾಲ್ಡೀವ್ಸ್‌ನಲ್ಲಿಯೇ ಟೀಕೆಗಳು ವ್ಯಕ್ತವಾಗಿದ್ದವು ಮಾಲ್ಡೀವ್ಸ್‌ ಸಂಸದರು ಭಾರತದ ಕ್ಷಮೆಯಾಚಿಸಿದ್ದರು. ಭಾರತದಲ್ಲಂತೂ ಮಾಲ್ಡೀವ್ಸ್‌ ವಿರುದ್ಧ ಅಭಿಯಾನವೇ ಶುರುವಾಗಿತ್ತು. ನೂರಾರು ಸೆಲೆಬ್ರಿಟಿಗಳು, ನಟರು ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು. ಇದಾದ ಬಲಿಕ ಮಾಲ್ಡೀವ್ಸ್‌ ಟ್ರಿಪ್‌ ಕ್ಯಾನ್ಸಲ್‌ ಮಾಡಿಕೊಂಡಿದ್ದರು. ಈಗ ಅದರ ಪರಿಣಾಮವನ್ನು ಮಾಲ್ಡೀವ್ಸ್‌ ಎದುರಿಸುತ್ತಿದೆ.

ಇದನ್ನೂ ಓದಿ: Budget 2024: ಗರ್ಭಕಂಠ ಕ್ಯಾನ್ಸರ್‌ ತಡೆಗೆ ಬಾಲಕಿಯರಿಗೆ ಉಚಿತ ಲಸಿಕೆ; ‘ಆರೋಗ್ಯ’ಕ್ಕೆ ಸಿಕ್ಕಿದ್ದೇನು?

ಮಾಲ್ಡೀವ್ಸ್‌ ಪ್ರವಾಸೋದ್ಯಮ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, 2023ರಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಮಾಲ್ಡೀವ್ಸ್‌ಗೆ ತೆರಳಿದ್ದಾರೆ. 2023ರಲ್ಲಿ ಭಾರತದಿಂದ ಮಾಲ್ಡೀವ್ಸ್‌ಗೆ 2,09,198 ಜನ ಭೇಟಿ ನೀಡಿದರೆ, ರಷ್ಯಾದಿಂದ 2,09,146 ಪ್ರವಾಸಿಗರು ಭೇಟಿ ನೀಡಿದ್ದಾರೆ. ಇನ್ನು, ಚೀನಾದಿಂದ ಕಳೆದ ವರ್ಷ 1,87,118 ಮಂದಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ. ಇದೇ ಕಾರಣಕ್ಕಾಗಿಯೇ ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಸಂಘವು, ಭಾರತದ ವಿರುದ್ಧ ಸಚಿವರು ನೀಡಿದ ಉದ್ಧಟತನದ ಹೇಳಿಕೆಯನ್ನು ಖಂಡಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
KSRTC to operate special buses for Mahashivratri
ಮಹಾ ಶಿವರಾತ್ರಿ2 mins ago

Maha Shivratri : ಮಹಾಶಿವರಾತ್ರಿಗೆ ಕೆಎಸ್‌ಆರ್‌ಟಿಸಿಯಿಂದ ಸ್ಪೆಷಲ್‌ ಬಸ್‌; ಶೇ.10ರಷ್ಟು ಡಿಸ್ಕೌಂಟ್‌!

Stones pelted at 3 Vande Bharat train in a single day
ರಾಜಕೀಯ13 mins ago

Vande Bharat Train: ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟ​; ಒಂದೇ ದಿನ 2 ಟ್ರೈನ್‌ ಮೇಲೆ 3 ಕಡೆ ದಾಳಿ!

Sedition Case BY Vijayendra
ಬೆಳಗಾವಿ21 mins ago

BY Vijayendra :‌ ನಾಸಿರ್‌ ಹುಸೇನ್‌ ಕೂಡಾ ಅಪರಾಧಿ, FIRನಲ್ಲಿ ಸೇರಿಸಿ; ವಿಜಯೇಂದ್ರ ಆಗ್ರಹ

elon musk
ವಾಣಿಜ್ಯ49 mins ago

World’s Richest Person: ವಿಶ್ವದ ಅತ್ಯಂತ ಸಿರಿವಂತ ವ್ಯಕ್ತಿ ಪಟ್ಟ ಕಳೆದುಕೊಂಡ ಎಲಾನ್‌ ಮಸ್ಕ್‌; ಈಗ ಯಾರು ನಂ. 1 ಶ್ರೀಮಂತ?

Guest Lecturers salarys
ನೌಕರರ ಕಾರ್ನರ್54 mins ago

Guest Lecturers : ಅತಿಥಿ ಉಪನ್ಯಾಸಕರ ವೇತನ 8000 ರೂ. ಹೆಚ್ಚಳ, ಪಾಠದ ಅವಧಿಯೂ ಜಾಸ್ತಿ

Is there a drinking water problem in your area Call this helpline number
ಬೆಂಗಳೂರು55 mins ago

Water Crisis : ನಿಮ್ಮ ಏರಿಯಾದಲ್ಲಿ ಕುಡಿಯುವ ನೀರಿನ ಸಮಸ್ಯೆನಾ?; ಈ ಹೆಲ್ಪ್‌ಲೈನ್‌ ನಂಬರ್‌ಗೆ ಕಾಲ್‌ ಮಾಡಿ

soumya shetty
ಸಿನಿಮಾ56 mins ago

Soumya Shetty: ಗೆಳತಿಯ ಮನೆಯಿಂದಲೇ ಚಿನ್ನ ಕದ್ದು ಸಿಕ್ಕಿಬಿದ್ದ ತೆಲುಗು ನಟಿ

railway crossing work Bengaluru Mysuru train services suspended for 5 days
ಬೆಂಗಳೂರು1 hour ago

Train services: ರೈಲ್ವೆ ಕ್ರಾಸಿಂಗ್‌ ಕಾಮಗಾರಿ; 5 ದಿನ ಬೆಂಗಳೂರು-ಮೈಸೂರು ರೈಲು ಸಂಚಾರ ಬಂದ್‌

Sedition Case Mandya
ಮಂಡ್ಯ2 hours ago

Sedition Case : ಪಾಕಿಸ್ತಾನ್‌ ಮುರ್ದಾಬಾದ್‌ ಬದಲು ಜಿಂದಾಬಾದ್‌ ಎಂದ ಬಿಜೆಪಿ ಕಾರ್ಯಕರ್ತ ಜೈಲಿಗೆ!

Couple
ದೇಶ2 hours ago

ಹೆಣ್ಣುಮಕ್ಕಳನ್ನು ‘ಡಾರ್ಲಿಂಗ್‌’ ಎಂದು ಕರೆಯುವುದೂ ಇನ್ನು ಲೈಂಗಿಕ ಕಿರುಕುಳ; ಹುಡುಗರೇ ಹುಷಾರ್!

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

BJP JDS alliance to finalise seats for Lok Sabha polls this week HD DeveGowda
ರಾಜಕೀಯ19 hours ago

HD Devegowda: ಈ ವಾರದಲ್ಲಿ ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸೀಟು ಅಂತಿಮ: ಎಚ್‌.ಡಿ. ದೇವೇಗೌಡ

Elephant attacks in Sakaleshpur workers escaped
ಹಾಸನ22 hours ago

Elephant Attack : ಆನೆ ಅಟ್ಯಾಕ್‌ಗೆ ಬಾಯಿಗೆ ಬಂತು ಜೀವ; ಜಸ್ಟ್‌ ಎಸ್ಕೇಪ್‌ ಆಗಿದ್ದು ಹೀಗೆ..

dina bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಇಂದು ಗಾಬರಿಯಲ್ಲೇ ದಿನ ಕಳೆಯುವಿರಿ

read your daily horoscope predictions for march 3rd 2024
ಭವಿಷ್ಯ2 days ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು3 days ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು3 days ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು4 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು4 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ4 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ4 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

ಟ್ರೆಂಡಿಂಗ್‌