Travel Guide: ನವೆಂಬರ್‌ನ ಹಿತವಾದ ಚಳಿಗೆ ಈ ಯಾವುದಾದರೂ ಜಾಗಕ್ಕೆ ಪ್ರವಾಸ ಮಾಡಿ ಬನ್ನಿ! - Vistara News

ಪ್ರವಾಸ

Travel Guide: ನವೆಂಬರ್‌ನ ಹಿತವಾದ ಚಳಿಗೆ ಈ ಯಾವುದಾದರೂ ಜಾಗಕ್ಕೆ ಪ್ರವಾಸ ಮಾಡಿ ಬನ್ನಿ!

ಚಳಿಗಾಲ ಇನ್ನೇನು ಆವರಿಸಿಕೊಳ್ಳುವ ಹಿತವಾದ ಚಳಿಯಿದೆ ಅನಿಸುವಾಗ ಇಂತಹ ಕೆಲವು ಸ್ಥಳಗಳಿಗೆ ಹೋಗಬೇಕು (winter travel). ಆಗ ಆ ಜಾಗಗಳು ಕಾಣುವ ರೀತಿಯೇ ಭಿನ್ನ. ಹಾಗಾದರೆ ಬನ್ನಿ, ಈ ನವೆಂಬರ್‌ನಲ್ಲಿ ನೀವು ಎಲ್ಲೆಲ್ಲಿ ಹೋಗಿ ಬರಬಹುದು (travel guide) ಎಂಬುದನ್ನು ನೋಡೋಣ.

VISTARANEWS.COM


on

winter travel
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವೆಂಬರ್‌ ತಿಂಗಳು ಪ್ರವಾಸ ಹೋಗಲು ಅತ್ಯುತ್ತಮ ಕಾಲ. ಭಾರತದಲ್ಲಿ ಕೆಲವು ಸ್ಥಳಗಳಿಗೆ ನವೆಂಬರ್‌ ತಿಂಗಳಲ್ಲದೆ, ಬೇರೆ ಕಾಲದಲ್ಲಿ ಹೋದರೂ ಆ ಜಾಗವನ್ನು ಹಾಗೆ ನೋಡಲು ಸಾಧ್ಯವಿಲ್ಲ. ನವೆಂಬರ್‌ ಚಳಿಗಾಲದ ಆರಂಭ. ನಿಧಾನವಾಗಿ ಚಳಿ ಆವರಿಸುತ್ತಿದ್ದರೆ, ಸುದೀರ್ಘ ಬೇಸಗೆಯ ಸೆಖೆ ಕಳೆದು ಹಾಯೆನಿಸುವ ಸುಖ. ಚಳಿಗಾಲ ಇನ್ನೇನು ಆವರಿಸಿಕೊಳ್ಳುವ ಹಿತವಾದ ಚಳಿಯಿದೆ ಅನಿಸುವಾಗ ಇಂತಹ ಕೆಲವು ಸ್ಥಳಗಳಿಗೆ ಹೋಗಬೇಕು (winter travel). ಆಗ ಆ ಜಾಗಗಳು ಕಾಣುವ ರೀತಿಯೇ ಭಿನ್ನ. ಹಾಗಾದರೆ ಬನ್ನಿ, ಈ ನವೆಂಬರ್‌ನಲ್ಲಿ ನೀವು ಎಲ್ಲೆಲ್ಲಿ ಹೋಗಿ ಬರಬಹುದು (travel guide) ಎಂಬುದನ್ನು ನೋಡೋಣ.

1. ಜೈಪುರ, ರಾಜಸ್ಥಾನ: ರಾಜಸ್ಥಾನ ನವೆಂಬರ್‌ನಲ್ಲಿ ಹಿತವಾಗಿರುತ್ತದೆ. ಭಾರತದಲ್ಲೇ ಅತೀ ಹೆಚ್ಚಿನ ಸೆಖೆಯನ್ನೂ ಬಿಸಿಲನ್ನೂ ಕಾಣುವ ರಾಜಸ್ಥಾನದ ಊರುಗಳನ್ನು ಚಳಿಗಾಲದಲ್ಲೇ ನೋಡಬೇಕು. ಪಿಂಕ್‌ ಸಿಟಿ ಎಂಬ ಹೆಸರಿನಿಂದಲೇ ಪ್ರಖ್ಯಾತವಾದ ಜೈಪುರದ (Jaipur travel) ಕೋಟೆ ಕೊತ್ತಲಗಳನ್ನು ನೋಡಲು ಬಿಸಿಲಿನಲ್ಲಿ ಸುತ್ತಲು ಕಷ್ಟವೇ. ಹಾಗಾಗಿ. ನವೆಂಬರ್‌ ತಿಂಗಳು ಇದಕ್ಕೆ ಸರಿಯಾದ ಕಾಲ. ಮಾರ್ಚ್‌- ಎಪ್ರಿಲ್‌ ಆರಂಭದವರೆಗೂ ರಾಜಸ್ಥಾನದ ನಗರಿಗಳನ್ನು ಸುತ್ತಿ ಬರಬಹುದು.

Hawa Mahal jaipur

2. ವಾರಣಾಸಿ, ಉತ್ತರ ಪ್ರದೇಶ: ಬೇಸಿಗೆಯಲ್ಲಿ ಬೆವರಿಳಿಸುವ ಸೆಖೆ ವಾರಣಾಸಿಯಲ್ಲಿದ್ದರೂ, ಎಲ್ಲ ಕಾಲದಲ್ಲೂ ನೋಡಿ ಬರಬಹುದಾದ ತಾಣ (Varanasi travel) ಆಗಿದ್ದರೂ ಚಳಿಗಾಲದಲ್ಲಿ ಇದನ್ನು ನೋಡುವ ಮಜಾವೇ ಬೇರೆ. ಯಾಕೆಂದರೆ, ಚಳಿಗಾಲದಲ್ಲಿ ಇಲ್ಲಿ ಬೀದಿಗಳು ತೆರೆದುಕೊಳ್ಳುವ ಮಾಯಾಲೋಕವೇ ಬೇರೆ. ಬಗೆಬಗೆಯ ತಿನಿಸುಗಳು, ಬಿಸಿಬಿಸಿ ತಿಂಡಿಗಳನ್ನು ಚಳಿಗಾಲದಲ್ಲಿ ಸವಿಯುವ ಜೊತೆಗೆ ಹಬ್ಬಗಳು ಕಳೆಗಟ್ಟಿ ವಾರಣಾಸಿ ಇನ್ನಷ್ಟು ಮತ್ತಷ್ಟು ಝಗಮಗಿಸುತ್ತಿರುತ್ತದೆ. ಹಿತವಾದ ಚಳಿಯಲ್ಲಿ ಗಂಗಾರತಿಯನ್ನು ನೋಡುವುದೂ ಕೂಡಾ ದೈವಿಕವಾಗಿ ಆನಂದವನ್ನು ನೀಡುತ್ತದೆ.

varanasi

3. ಗೋವಾ: ಡಿಸೆಂಬರ್‌ ತಿಂಗಳಲ್ಲಿ ಇಲ್ಲಿಗೆ ಪ್ರವಾಸಿಗರ ದಂಡು ಬರಲು ಆರಂಭವಾಗುವುದಾದರೂ ಒಂದು ತಿಂಗಳು ಮುಂಚಿತವಾಗಿ, ಅಷ್ಟಾಗಿ ಜನಜಂಗುಳಿಯಿಲ್ಲದ ಗೋವಾವನ್ನು (Goa travel) ನೋಡುವ ಸೊಬಗೇ ಬೇರೆ. ಬಗೆಬಗೆಯ ವಾಟರ್‌ ಸ್ಪೋರ್ಟ್ಸ್‌ಗಳ ಮಜಾ ಅನೂಭವಿಸುತ್ತಾ ಹಿತವಾದ ಬಿಸಿಲಿಗೆ ಮೈಯೊಡ್ಡಿಕೊಂಡು ಬೀಚ್‌ ಬದಿಯಲ್ಲಿ ಕೂರುವ ಸುಖ ಯಾರಿಗೆ ಬೇಡ ಹೇಳಿ!

Beaches of Goa

4. ಮುನ್ನಾರ್:‌ ನವೆಂಬರ್‌ನಲ್ಲೂ ಹಸಿರು ಹಸಿರಿನ ಸೊಬಗನ್ನು ಕಣ್ತುಂಬಿಕೊಳ್ಳಬೇಕೆಂಬ ಬಯಕೆಯಿದ್ದರೆ ಮುನ್ನಾರ್‌ಗೆ (Munnar travel) ಹೋಗಬೇಕು. ಯಾಕೆಂದರೆ, ನವೆಂಬರ್‌ ತಿಂಗಳು ಕೇರಳದಲ್ಲಿ ಮಳೆಗಾಲಕ್ಕೆ ಟಾಟಾ ಹೇಳುವ ಕಾಲ. ಹೀಗಾಗಿ, ಮುನ್ನಾರ್‌ ಹಾಗೂ ಕೇರಳದ ಕೆಲವು ಚಹಾತೋಟಗಳ ಊರುಗಳು ನವೆಂಬರ್‌ನಲ್ಲೂ ಹಸಿರುಹಸಿರಾಗಿ ಕಂಗೊಳಿಸುತ್ತವೆ. ಹಿತವಾದ ವಾತಾವರಣವಿರುವ ಕಾಲದಲ್ಲಿ ಕಣ್ಣಿಗೆ ಹಸಿರಿನ ತಂಪೂ ಜೊತೆಗೂಡಿದರೆ ಎಷ್ಟು ಸುಖವಿದ್ದೀತು ಅಲ್ಲವೇ!

Munnar

ಇದನ್ನೂ ಓದಿ: Travel Guide: ಈ ಜಾಗಗಳಿಗೆ ಚಾಕೊಲೇಟ್‌ ಸವಿಯುವುದಕ್ಕಾಗಿಯೇ ಪ್ರವಾಸ ಹೋಗಿ!

5. ಪುಷ್ಕರ್‌, ರಾಜಸ್ಥಾನ: ರಾಜಸ್ಥಾನದ ಪುಷ್ಕರ್‌ ಎಂಬ ಸ್ಥಳದಲ್ಲೊಂದು ಇತಿಹಾಸ ಪ್ರಸಿದ್ಧ ಉತ್ಸವವೊಂದು ನಡೆಯುತ್ತದೆ. ಪುಷ್ಕರ್‌ ಮೇಳ ಹೆಸರಿನ ಒಂಟೆ ಮೇಳದಲ್ಲಿ ಭಾಗವಹಿಸಲು ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಹೀಗಾಗಿ ಪುಷ್ಕರ್‌ಗೆ ಹೋಗಿ ಈ ಐತಿಹಾಸಿಕ ಉತ್ಸವದಲ್ಲಿ ಪಾಲ್ಗೊಂಡು ರಾಜಸ್ಥಾನದ ಸಂಸ್ಕೃತಿಯ ಪರಿಚಯ ಮಾಡಿಕೊಂಡು ಬರಲು ಇದು ಸಕಾಲ.

Explosion near Golden Temple In Punjab

6. ಅಮೃತ್‌ಸರ, ಪಂಜಾಬ್‌: ಪಂಜಾಬ್‌ನ ಅಮೃತ್‌ಸರ ನವೆಂಬರ್‌ ತಿಂಗಳಲ್ಲಿ ಹಿತವಾದ ತಂಪಿನಲ್ಲಿರುತ್ತದೆ. ಅತ್ತ ಹೆಚ್ಚು ಚಳಿಯೂ ಅಲ್ಲದ, ಸೆಖೆಯೂ ಅಲ್ಲದ ಕಾಲವಿದು. ಅಮೃತಸರದ ಗೋಲ್ಡನ್‌ ಟೆಂಪಲ್‌, ಜಲಿಯನ್‌ ವಾಲಾಬಾಗ್‌ ಹಾಊಗೂ ಭಾರತ ಪಾಕ್‌ ಗಡಿಯಾದ ವಾಘಾ ಬಾರ್ಡರ್‌ನ ಕವಾಯತು ಪ್ರದರ್ಶನವನ್ನು ನೋಡಲೂ ಕೂಡಾ ಇದು ಸಕಾಲ.

ಇದನ್ನೂ ಓದಿ: Travel Guide: ಯುರೋಪನ್ನು ಭಾರತದಲ್ಲೇ ನೋಡಬೇಕೇ? ಹಾಗಾದರೆ ಈ ಜಾಗಗಳಿಗೆ ಹೋಗಿ ಬನ್ನಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Monsoon Tour: ಮಳೆಗಾಲದ ಪ್ರವಾಸಕ್ಕೆ ಸೂಕ್ತ ಬೆಂಗಳೂರು ಸಮೀಪದ ಈ 8 ಅದ್ಭುತ ಸ್ಥಳಗಳು

ಮಳೆಯ ಸೌಂದರ್ಯವನ್ನು ಅನುಭವಿಸಲು ಮಲೆನಾಡಿಗೆ ಹೋಗಬೇಕಿಲ್ಲ. ಯಾಕೆಂದರೆ ಬೆಂಗಳೂರಿನ ಸುತ್ತಮುತ್ತಲಿರುವ ಕೆಲವು ತಾಣಗಳು ಮಳೆಗಾಲದ ಅದ್ಭುತ ನೋಟವನ್ನು ತೆರೆದಿಡುತ್ತದೆ. ಈ ಬಾರಿ ಮಳೆಗಾಲದಲ್ಲಿ ಮನೆಯಲ್ಲೇ ಸುಮ್ಮನೆ ಹೊದಿಕೆ ಹೊದ್ದು ಮಲಗುವ ಬದಲು ಬೆಂಗಳೂರು ಸುತ್ತಮುತ್ತಲೂ ಇರುವ ಸುಂದರ ತಾಣಗಳಿಗೆ (Monsoon Tour) ಭೇಟಿ ನೀಡೋಣ. ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳೋಣ.

VISTARANEWS.COM


on

By

Monsoon Tour
Koo

ಸುರಿಯುತ್ತಿರುವ ಮಳೆಯ ನಡುವೆ ಹೊರಗೆ ಹೋಗುವುದು ಬೇಜಾರು. ಆದರೆ ಪ್ರಕೃತಿಯ ಸೌಂದರ್ಯ ಎದ್ದು ಕಾಣುವುದೇ ಮಳೆಗಾಲದಲ್ಲಿ (Monsoon Tour). ಈ ಸಂದರ್ಭದಲ್ಲಿ ದೂರ ಹೋಗುವುದು ಅಸಾಧ್ಯವಾದರೂ ಹತ್ತಿರ ಇರುವ ಕೆಲವು ತಾಣಗಳಲ್ಲಿ (tourist place) ಸುತ್ತಾಡಬಹುದು. ಮಳೆಯ ನಡುವೆ ಸುತ್ತಮುತ್ತಲಿನ ಪರಿಸರದಲ್ಲಿ (nature) ಕಾಣುವ ಹೊಸತನದ ಚಿಗುರನ್ನು ನೋಡಿ ಆನಂದಿಸಬಹುದು.

ಮಳೆಯ ಸೌಂದರ್ಯವನ್ನು ಅನುಭವಿಸಲು ಮಲೆನಾಡಿಗೆ (malenadu) ಹೋಗಬೇಕಿಲ್ಲ. ಯಾಕೆಂದರೆ ಬೆಂಗಳೂರಿನ (bengaluru) ಸುತ್ತಮುತ್ತಲಿರುವ ಕೆಲವು ತಾಣಗಳು ಮಳೆಗಾಲದ ಅದ್ಭುತ ನೋಟವನ್ನು ತೆರೆದಿಡುತ್ತದೆ. ಪ್ರಾಚೀನ ಭಾರತೀಯ ದೇವಾಲಯಗಳು ದೇಶದ ಶ್ರೀಮಂತ ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪದ ಪರಂಪರೆಯನ್ನು ಪ್ರದರ್ಶಿಸುತ್ತವೆ. ಈ ಪವಿತ್ರ ತಾಣಗಳು ಕೇವಲ ಪೂಜಾ ಸ್ಥಳಗಳಲ್ಲ. ಇತಿಹಾಸ, ಕಲೆ ಮತ್ತು ಆಧ್ಯಾತ್ಮಿಕತೆಯ ಭಂಡಾರಗಳಾಗಿವೆ. ಇವುಗಳಲ್ಲಿ ಹಲವು ದೇವಾಲಯ ನಮ್ಮ ಬೆಂಗಳೂರಿನ ಸುತ್ತಮುತ್ತಲಿದೆ. ಈ ಬಾರಿ ಮಳೆಗಾಲದಲ್ಲಿ ಈ ಎಂಟು ದೇವಾಲಯಗಳಲ್ಲಿ ಹೆಜ್ಜೆ ಹಾಕಿ ಮಳೆಗಾಲದ ನೆನಪನ್ನು ಬೆಚ್ಚಗೆ ಮನದಲ್ಲಿ ತುಂಬಿ ಇಡೋಣ.


1. ಚೆನ್ನಕೇಶವ ದೇವಸ್ಥಾನ

ಹಾಸನ ಜಿಲ್ಲೆಯಲ್ಲಿರುವ 12ನೇ ಶತಮಾನದ ಬೇಲೂರಿನ ಚೆನ್ನಕೇಶವ ದೇವಾಲಯವು ತನ್ನ ಸಂಕೀರ್ಣವಾದ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿದೆ. ಇದು ನಕ್ಷತ್ರಾಕಾರದ ದೇವಾಲಯವಾಗಿದ್ದು, ಹಿಂದೂ ದೇವರಾದ ವಿಷ್ಣುವಿಗೆ ಸಮರ್ಪಿತವಾಗಿದೆ.


2. ಕೋಟಿಲಿಂಗೇಶ್ವರ ದೇವಸ್ಥಾನ

ಬೃಹತ್ ಶಿವಲಿಂಗಕ್ಕೆ ಹೆಸರುವಾಸಿಯಾಗಿರುವ ಈ ದೇವಾಲಯವು ವಿಶ್ವದ ಅತಿದೊಡ್ಡ ಲಿಂಗಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ. ಕೋಟಿಲಿಂಗೇಶ್ವರ ದೇವಸ್ಥಾನ ಕೋಲಾರದಲ್ಲಿದೆ.


3. ಹೊಯ್ಸಳೇಶ್ವರ ದೇವಸ್ಥಾನ

12ನೇ ಶತಮಾನದ ಈ ದೇವಾಲಯವು ಹಾಸನ ಜಿಲ್ಲೆಯಲ್ಲಿದೆ ಮತ್ತು ಇದು ಶಿವನಿಗೆ ಸಮರ್ಪಿತವಾಗಿದೆ. ಹೊಯ್ಸಳ ವಾಸ್ತುಶೈಲಿಗೆ ಹೆಸರುವಾಸಿಯಾದ. ಇದು ಹಳೇಬೀಡುನಲ್ಲಿರುವ ಅತಿ ದೊಡ್ಡ ದೇವಾಲಯವಾಗಿದೆ.

Monsoon Tour


4. ಶ್ರೀ ರಂಗನಾಥಸ್ವಾಮಿ ದೇವಸ್ಥಾನ

ಮೈಸೂರಿನ ಸಮೀಪ ಶ್ರೀರಂಗಪಟ್ಟಣದಲ್ಲಿರುವ ಈ ದೇವಾಲಯವು ಕರ್ನಾಟಕದಲ್ಲಿಯೇ ಅತಿ ದೊಡ್ಡದಾಗಿದೆ ಮತ್ತು ವಿಷ್ಣುವಿನ ರೂಪವಾದ ರಂಗನಾಥನಿಗೆ ಸಮರ್ಪಿತವಾಗಿದೆ. ವೈಷ್ಣವ ಸಂಪ್ರದಾಯದ 108 ಅಭಿಮಾನ ಕ್ಷೇತ್ರಗಳಲ್ಲಿ ಒಂದಾಗಿ ಇದು ವಿಶೇಷ ಸ್ಥಾನವನ್ನು ಹೊಂದಿದೆ.


5. ಲೇಪಾಕ್ಷಿ ದೇವಸ್ಥಾನ

ಬೆಂಗಳೂರಿನಿಂದ ಇದು ತುಂಬ ದೂರ ಏನಿಲ್ಲ. ಆಂಧ್ರಪ್ರದೇಶದ ಅನಂತಪುರದಲ್ಲಿದೆ ಲೇಪಾಕ್ಷಿ ದೇವಾಲಯ. ಇಲ್ಲಿನ ಅದ್ಭುತ ವಿಜಯನಗರ ವಾಸ್ತುಶಿಲ್ಪ ಮತ್ತು ಪ್ರಸಿದ್ಧ ನೇತಾಡುವ ಸ್ತಂಭಗಳು ಪ್ರವಾಸಿಗರಲ್ಲಿ ಬೆರಗು ಮೂಡಿಸುತ್ತದೆ. 16 ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯದ ಸಂಕೀರ್ಣ ಕೆತ್ತನೆಗಳು ಮತ್ತು ವರ್ಣಚಿತ್ರಗಳು ನಯನ ಮನೋಹರವಾಗಿದೆ.


6. ಭೋಗ ನಂದೀಶ್ವರ ದೇವಸ್ಥಾನ

ನಂದಿ ಬೆಟ್ಟದ ತಪ್ಪಲಿನಲ್ಲಿರುವ ಈ ದೇವಾಲಯದ ಸಂಕೀರ್ಣವು ಶಿವನಿಗೆ ಸಮರ್ಪಿತವಾಗಿದೆ ಮತ್ತು ದ್ರಾವಿಡ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ನಿಖರವಾದ ಮೂಲಗಳು ತಿಳಿದಿಲ್ಲವಾದರೂ ವಾಸ್ತುಶಿಲ್ಪವು 9ನೇ – 10ನೇ ಶತಮಾನದ ಹಿಂದಿನದು ಎಂದು ನಂಬಲಾಗಿದೆ.


7. ಶ್ರೀ ಚಾಮುಂಡೇಶ್ವರಿ ದೇವಸ್ಥಾನ

ಮೈಸೂರಿನಲ್ಲಿರುವ ವಿಶ್ವಪ್ರಸಿದ್ಧ ಈ ದೇವಾಲಯವು ಚಾಮುಂಡಿ ಬೆಟ್ಟದ ಮೇಲಿದೆ ಮತ್ತು ದುರ್ಗದ ರೂಪವಾದ ಚಾಮುಂಡೇಶ್ವರಿ ದೇವಿಯನ್ನು ಇಲ್ಲಿ ಪೂಜಿಸಲಾಗುತ್ತದೆ.

ಇದನ್ನೂ ಓದಿ: Sri Lanka Tour: ಕಡಿಮೆ ವೆಚ್ಚದಲ್ಲಿ ಶ್ರೀಲಂಕಾ ಪ್ರವಾಸ; ಐಆರ್‌ಸಿಟಿಸಿ ಸ್ಪೆಷಲ್‌ ಪ್ಯಾಕೇಜ್‌


8. ತಲಕಾಡು ಪಂಚಲಿಂಗ ದೇವಾಲಯಗಳು

ತಲಕಾಡು ಶಿವನಿಗೆ ಅರ್ಪಿತವಾದ ಪಂಚಲಿಂಗ ದೇವಾಲಯಗಳು ಸೇರಿದಂತೆ ಹಲವಾರು ಪುರಾತನ ದೇವಾಲಯಗಳಿಗೆ ನೆಲೆಯಾಗಿದೆ. ಪಂಚ ಲಿಂಗ ದರ್ಶನವು ಸಾಮಾನ್ಯವಾಗಿ ಪ್ರತಿ ಹನ್ನೆರಡು, ಏಳು, ಐದು ಅಥವಾ ಮೂರು ವರ್ಷಗಳಿಗೊಮ್ಮೆ ನಡೆಯುವ ಪ್ರಮುಖ ಕಾರ್ಯಕ್ರಮವಾಗಿದ್ದು, ಆಶೀರ್ವಾದ ಪಡೆಯಲು ಭಕ್ತರು ಐದು ದೇವಾಲಯಗಳಿಗೆ ಭೇಟಿ ನೀಡುತ್ತಾರೆ.

Continue Reading

ದೇಶ

Akasa Air: ಗೋರಖ್​ಪುರದಿಂದ ದೆಹಲಿ ಮತ್ತು ಬೆಂಗಳೂರಿಗೆ ಆಕಾಶ ಏರ್ ನೇರ ವಿಮಾನ

Akasa Air: ಗೋರಖಪುರದಿಂದ ದೆಹಲಿ ಮತ್ತು ಬೆಂಗಳೂರಿಗೆ ಪ್ರತಿನಿತ್ಯ ಹಾರಾಟ ಮಾಡುವಂತಹ ವಿಮಾನ ಸಂಪರ್ಕವನ್ನು ಕಲ್ಪಿಸಿದ ಆಕಾಶ ಏರ್ ಪ್ರಯಾಣಿಕರಿಗೆ ಅನೇಕ ಗುಣಮಟ್ಟದ ಉತ್ಪನ್ನಗಳು ಹಾಗೂ ವಿಭಿನ್ನ ಸೇವೆಗಳನ್ನು ಪರಿಚಯಿಸಿದೆ. ಪ್ರಯಾಣಿಕರಿಗೆ ಕೈಗೆಟಕುವ ದರಗಳಲ್ಲಿ ಎಲ್ಲವನ್ನು ಒಳಗೊಂಡ ಮತ್ತು ಅಗತ್ಯಕ್ಕೆ ತಕ್ಕಂತೆ ಬದಲಾಯಿಸಬಹುದಾದಂತಹ ರಜಾ ಪ್ಯಾಕೇಜ್ ಅನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

VISTARANEWS.COM


on

Akasa Air
Koo

ದೆಹಲಿ: ಭಾರತದ ಪ್ರಸಿದ್ಧ ವಿಮಾನಸಂಸ್ಥೆಯಾದ ಆಕಾಶ ಏರ್ (Akasa Air) ಗೋರಖ್​ಪುರದಿಂದ ದೆಹಲಿ ಮತ್ತು ಬೆಂಗಳೂರಿಗೆ ಪ್ರತಿನಿತ್ಯ ವಿಮಾನ ಸಂಪರ್ಕವನ್ನು ಕಲ್ಪಿಸಿದೆ. 2024 ಮೇ 29 ರಂದು ಸೇವೆ ಆರಂಭಗೊಂಡಿದ್ದು  ಮೊದಲ ವಿಮಾನ ಹಾರಾಟವು ಮಹಾಯೋಗಿ ಗೋರಖ್​ನಾಥ್ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 2:45 ಗಂಟೆಗೆ ಹೊರಟು, ಸಂಜೆ 4 ಗಂಟೆಗೆ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಲಿದೆ.

ಇದು  ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿರುವ ಜನರ ಬೇಡಿಕೆಯನ್ನು ಪೂರೈಸುವ ಮೂಲಕ ಆಕಾಶ ಏರ್ ತನ್ನ  ಖ್ಯಾತಿಯನ್ನು ಹೆಚ್ಚಿಸಿಕೊಂಡಿದೆ. ಅಲ್ಲದೇ ಗೋರಖಪುರ ಹಾಗೂ ಬೆಂಗಳೂರ ನಡುವೆ ನೇರ ವಿಮಾನ ಸಂಪರ್ಕವನ್ನು ಕಲ್ಪಸಿದ ಏಕೈಕ ಸಂಸ್ಥೆ ಆಕಾಶ ಏರ್ ಎನಿಸಿಕೊಂಡಿದೆ. ದೇಶದಾದ್ಯಂತ ಮೆಟ್ರೋ ಹಾಗೂ ಮೆಟ್ರೋ ಇಲ್ಲದ ನಗರಗಳಿಗೆ ತಡೆರಹಿತ ಸಂಪರ್ಕ ಒದಗಿಸಬೇಕೆನ್ನುವ ವಿಮಾನ ಸಂಸ್ಥೆಯ ಧೋರಣೆಯನ್ನು ಎತ್ತಿ ಹಿಡಿದಿದೆ.

ಇತಿಹಾಸ ಮತ್ತು ಸಂಸ್ಕೃತಿಯ ಭಂಡಾರವಾದ ಗೋರಖಪುರ ನಗರ ಅತಿ ಶೀಘ್ರದಲ್ಲಿಯೇ ಆರ್ಥಿಕ ಕೇಂದ್ರವಾಗಿ ಪರಿವರ್ತನೆಗೊಳ್ಳುವುದರಲ್ಲಿ ಅನುಮಾನವಿಲ್ಲ. ಹಾಗೇ ಈ ನಗರ ತಮ್ಮ ಮೂಲ ಸೌಕರ್ಯಗಳ ಮೂಲಕ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮೆಟ್ರೋ ನಗರಗಳಾದ ಬೆಂಗಳೂರು ಮತ್ತು ದೆಹಲಿಯಲ್ಲಿ ಪ್ರತಿನಿತ್ಯದ ವಿಮಾನ ಹಾರಾಟ ಮತ್ತು ವಿಮಾನ ಪ್ರಯಾಣದಲ್ಲಿ ಕೈಗೆಟಕ್ಕುವ ಆಯ್ಕೆಗಳನ್ನು ಒದಗಿಸಿ ಈ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಇದು ಕಾರಣವಾಗಿದೆ.

ಈ ಸಂಸ್ಥೆಯ ವತಿಯಿಂದ ವಿಮಾನ ಹಾರಾಟ ಪ್ರಾರಂಭವಾದಾಗಿನಿಂದಲೂ ಉತ್ತರ ಪ್ರದೇಶದಲ್ಲಿ ಪ್ರಗತಿ ಹೆಚ್ಚುತ್ತಿದೆ. ಮತ್ತು  ಈ ಪ್ರದೇಶದಲ್ಲಿ ಇದು ತನ್ನ ಅಸ್ತಿತ್ವವನ್ನು ಬಲವಾಗಿ ನೆಲೆಯೂರಲಿದೆ ಎನ್ನಲಾಗಿದೆ. ಈಗ ಈ ರಾಜ್ಯದಲ್ಲಿ ಲಕ್ನೌ, ವಾರಣಾಸಿ, ಅಯೋಧ್ಯ, ಪ್ರಯಾಗ ಹಾಗೂ ಗೋರಖಪುರ ಸೇರಿದಂತೆ 5 ಮೆಟ್ರೋ ನಗರಗಳನ್ನು ದೇಶದಾದ್ಯಂತ ಇರುವ ಇತರ ಮೆಟ್ರೋಗಳೊಂದಿಗೆ ತಡೆರಹಿತವಾಗಿ ಸಂಪರ್ಕಿಸುತ್ತಿದೆ.

ಪ್ರಯಾಣಿಕರು ಆರಾಮದಾಯಕವಾದ ಪ್ರಯಾಣದ ಅನುಭವವನ್ನು ಪಡೆಯುತ್ತಿದ್ದಾರೆಯೇ ಎಂಬುದನ್ನು ತಿಳಿಯಲು ಆಕಾಶ ಏರ್ ಅನೇಕ ಗುಣಮಟ್ಟದ ಉತ್ಪನ್ನಗಳು ಹಾಗೂ ವಿಭಿನ್ನ ಸೇವೆಗಳನ್ನು ಪರಿಚಯಿಸಿದೆ. ಇದರಲ್ಲಿ ಕಾಲನ್ನು ಆರಾಮದಾಯಕವಾಗಿ ಇರಿಸಿಕೊಳ್ಳುವಂತೆ ಹೆಚ್ಚು ಸ್ಥಳಾವಕಾಶವಿರುವ ಸೀಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹಾಗೇ ಇದರಲ್ಲಿ ಯುಎಸ್ ಬಿ ಪೋರ್ಟ್ಸ್ ಅಳವಡಿಸಿದ್ದು, ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸುವಾಗಲೇ ತಮ್ಮ ಮೊಬೈಲ್ , ಇತರ ಸಾಧನಗಳನ್ನು ಚಾರ್ಜ್ ಮಾಡಬಹುದಾಗಿದೆ. ಇಲ್ಲಿ ‘café akasa’ ದ ಮೂಲಕ ಆಹಾರ ಸೇವೆಯನ್ನು ಒದಗಿಸಲಾಗುತ್ತದೆ. ಇದರಲ್ಲಿ ಹಬ್ಬದ ಮೆನುಗಳು, ಹಾಗೂ ಕೊಂಬುಚಾದಂತಹ ಆಯ್ಕೆಗಳಿವೆ. ಒಟ್ಟಾರೆ ಇಲ್ಲಿ ಆರೋಗ್ಯಕರವಾದ ಸ್ವಾದಿಷ್ಟ ಭೋಜನವನ್ನು ಪ್ರಯಾಣಿಕರಿಗೆ ಒದಗಿಸುತ್ತದೆ. ಹಾಗೇ ಪ್ರಯಾಣಿಕರು ತಮ್ಮ ಜೊತೆ ತಮ್ಮ ಸಾಕು ಪ್ರಾಣಿಗಳನ್ನು ಅವುಗಳ ತೂಕದ ಆಧಾರದ ಮೇಲೆ ಕ್ಯಾಬಿನ್ ಒಳಗೆ ಅಥವಾ ಕಾರ್ಗೋದಲ್ಲಿ ಕರೆದೊಯ್ಯಲು ಅವಕಾಶವಿದೆ. ಹಾಗೇಆಕಾಶಏರ್ ದೃಷ್ಟಿಮಾಂದ್ಯತೆಯಿರುವವರಿಗಾಗಿ ಬ್ರೇಲ್ ನಲ್ಲಿ ತನ್ನ ಸುರಕ್ಷತಾ ಸೂಚನಾಕಾರ್ಡ್ ಮತ್ತು ಆನ್ ಬೋರ್ಡ್ ಮೆನು ಕಾರ್ಡ್ ಪರಿಚಯಿಸಿದೆ. ಪ್ರಯಾಣಿಕರಿಗೆ ಕೈಗೆಟಕುವ ದರಗಳಲ್ಲಿ ಎಲ್ಲವನ್ನು ಒಳಗೊಂಡ ಮತ್ತು ಅಗತ್ಯಕ್ಕೆ ತಕ್ಕಂತೆ ಬದಲಾಯಿಸಬಹುದಾದಂತಹ ರಜಾ ಪ್ಯಾಕೇಜ್ಅನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Air India Flight: ಏರ್ ಇಂಡಿಯಾ ವಿಮಾನ 20 ಗಂಟೆ ವಿಳಂಬ; ಎಸಿ ಇಲ್ಲದೆ ಪ್ರಜ್ಞೆ ತಪ್ಪಿ ಬಿದ್ದ ಪ್ರಯಾಣಿಕರು

ಆಕಾಶ ಏರ್ ನ ನಿರಂತರವಾದ ಕಾರ್ಯ ಚರಣೆ ಸಾಮರ್ಥ್ಯಗಳು ಹಾಗೂ ಪ್ರಯಾಣಿಕರ ಮೆಚ್ಚುಗೆಯ ಮೂಲಕ ಅದು ಭಾರತದ ನಂಬರ್ ಒನ್ ಆಗಿದೆ ಮತ್ತು  ಕಳೆದ 12 ತಿಂಗಳುಗಳಿಂದ 85%ಗಿಂತ ಹೆಚ್ಚಿನ ಸರಾಸರಿ ಪ್ರಯಾಣಿಕರು ಇದರಲ್ಲಿ ಪ್ರಯಾಣಿಸುತ್ತಿದ್ದಾರೆ ಎನ್ನಲಾಗಿದೆ.

Continue Reading

ಪ್ರವಾಸ

Norway Tour: ಜಗತ್ತಿನ ಕೊನೆಯ ದೇಶ ಇದು! ಇಲ್ಲಿ 6 ತಿಂಗಳು ಹಗಲು, 6 ತಿಂಗಳು ರಾತ್ರಿ!

ಉತ್ತರ ಧ್ರುವದ ಸಾಮೀಪ್ಯದಿಂದಾಗಿ ಭೂಮಿಯ ಮೇಲಿನ ಕೊನೆಯ ದೇಶ ಎಂದು ಕರೆಯಲ್ಪಡುವ ನಾರ್ವೆಯಲ್ಲಿ (Norway Tour) ಮಧ್ಯರಾತ್ರಿ ಸೂರ್ಯ ಕಾಣಿಸಿಕೊಳ್ಳುತ್ತಾನೆ. ಆರು ತಿಂಗಳ ನಿರಂತರ ಹಗಲು ಅಥವಾ ಕತ್ತಲೆಯಂತಹ ವಿಶಿಷ್ಟ ವಿದ್ಯಮಾನಗಳನ್ನು ಇಲ್ಲಿ ಅನುಭವಿಸಬಹುದು. ಇಲ್ಲಿನ ಇ-69 ಹೆದ್ದಾರಿಯು ಜಗತ್ತಿನ ಕೊನೆಯನ್ನು ಸೂಚಿಸುತ್ತದೆ. ಆದರೆ ಈ ರಸ್ತೆಯಲ್ಲಿ ಏಕವ್ಯಕ್ತಿ ಪ್ರಯಾಣವನ್ನು ನಿಷೇಧಿಸಲಾಗಿದೆ.

VISTARANEWS.COM


on

By

Norway Tour
Koo

ಭೂಮಿಯು (earth) ದುಂಡಗಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಈ ಭೂಮಿಯ ಮೂಲೆ ಮೂಲೆಯಲ್ಲಿ ಒಂದಲ್ಲ ಒಂದು ದೇಶವಿದೆ (country). ಪ್ರತಿಯೊಂದು ದೇಶವು ಅದರ ನೈಸರ್ಗಿಕ ಸೌಂದರ್ಯದಿಂದಾಗಿ (natural beauty) ಸುಂದರವಾಗಿರುತ್ತದೆ. ಕೆಲವು ದೇಶಗಳು ತಮ್ಮ ಐತಿಹಾಸಿಕ ಕಟ್ಟಡಗಳಿಗೆ (historical buildings) ಪ್ರಸಿದ್ಧವಾಗಿವೆ, ಇತರವುಗಳು ತಮ್ಮ ನೈಸರ್ಗಿಕ ದೃಶ್ಯಾವಳಿಗಳಿಂದ. ವಿಶ್ವದ ಅತಿದೊಡ್ಡ ಮತ್ತು ಶ್ರೀಮಂತ ದೇಶಗಳ ಬಗ್ಗೆ ಎಲ್ಲರೂ ಕೇಳಿರಬಹುದು, ಆದರೆ ಭೂಮಿಯ ಮೇಲಿನ ಕೊನೆಯ ದೇಶ ಯಾವುದು ಗೊತ್ತೇ ಅಲ್ಲಿನ ವಿಶೇಷತೆ ಏನು ಗೊತ್ತೇ ?

ವಿಶ್ವದ ಕೊನೆಯ ದೇಶ ನಾರ್ವೆ (Norway Tour). ಇಲ್ಲಿ ಭೂಮಿ ಕೊನೆಗೊಳ್ಳುತ್ತದೆ. ಈ ದೇಶವು ಉತ್ತರ ಧ್ರುವದ ಬಳಿ ಇದೆ. ಅಲ್ಲಿ ಭೂಮಿಯು ತನ್ನ ಅಕ್ಷದ ಮೇಲೆ ತಿರುಗುತ್ತದೆ. ಆದ್ದರಿಂದ, ನಾರ್ವೆ ಹೇಗಿದೆ ಎಂದು ಊಹಿಸಿಕೊಳ್ಳಬಹುದು.
ಬಹಳ ಸುಂದರವಾಗಿರುವ ಈ ದೇಶದಲ್ಲಿ ರಾತ್ರಿ ಬಹಳ ಕಡಿಮೆ. ರಾತ್ರಿಯೇ ಇರುವುದಿಲ್ಲ ಎಂದು ತಿಳಿದರೆ ಆಶ್ಚರ್ಯವಾಗಬಹುದು.

ಉತ್ತರ ನಾರ್ವೆಯ ಹ್ಯಾವರ್‌ಫೆಸ್ಟ್ ನಗರದಲ್ಲಿ, ಸೂರ್ಯ ಕೇವಲ 40 ನಿಮಿಷಗಳ ಕಾಲ ಅಸ್ತಮಿಸುತ್ತಾನೆ. ಆದ್ದರಿಂದ, ಇದನ್ನು ಮಧ್ಯರಾತ್ರಿ ಸೂರ್ಯನ ದೇಶ ಎಂದೂ ಕರೆಯುತ್ತಾರೆ. ಇಲ್ಲಿ ಕೇವಲ 40 ನಿಮಿಷ ಮಾತ್ರ ಕತ್ತಲು, ಉಳಿದ 23 ಗಂಟೆ 20 ನಿಮಿಷಗಳ ಕಾಲ ಈ ನಗರವು ಬೆಳಕಿನಿಂದ ತುಂಬಿರುತ್ತದೆ.


ಬೇಸಿಗೆಯಲ್ಲಿ ಹಿಮ

ಬೇಸಿಗೆಯಲ್ಲಿ ಇಲ್ಲಿ ಹಿಮ ಹೆಪ್ಪುಗಟ್ಟುತ್ತದೆ. ಈ ದೇಶವು ಅತ್ಯಂತ ತಂಪಾದ ವಾತಾವರಣವನ್ನು ಹೊಂದಿದೆ. ಪ್ರಪಂಚದ ಕೆಲವು ದೇಶಗಳಲ್ಲಿ ಬೇಸಿಗೆಯಲ್ಲಿ ತಾಪಮಾನವು 45 ರಿಂದ 50 ಡಿಗ್ರಿಗಳ ನಡುವೆ ಇದ್ದರೆ ಈ ದೇಶದಲ್ಲಿ ಬೇಸಿಗೆಯಲ್ಲಿ ಹಿಮ ಇರುತ್ತದೆ. ಈ ಸಮಯದಲ್ಲಿ ಇಲ್ಲಿ ತಾಪಮಾನ ಶೂನ್ಯ ಡಿಗ್ರಿ. ತೀವ್ರವಾದ ಚಳಿಗಾಲದಲ್ಲಿ ಇಲ್ಲಿ ತಾಪಮಾನವು ಮೈನಸ್ 45 ಡಿಗ್ರಿಗಳಿಗೆ ಇಳಿಯುತ್ತದೆ. ಇಲ್ಲಿನ ಸೌಂದರ್ಯವೇ ಬೇರೆಯದೇ ಪ್ರಪಂಚವನ್ನು ಸೃಷ್ಟಿಸುತ್ತದೆ.

ರಾತ್ರಿಯೇ ಇರುವುದಿಲ್ಲ

ಬೇಸಿಗೆಯಲ್ಲಿ ಇಲ್ಲಿ ರಾತ್ರಿ ಇರುವುದಿಲ್ಲ. ಉತ್ತರ ಧ್ರುವದ ಸಾಮೀಪ್ಯದಿಂದಾಗಿ ಇತರ ದೇಶಗಳಂತೆ ಪ್ರತಿದಿನ ಹಗಲು ಅಥವಾ ರಾತ್ರಿ ಇರುವುದಿಲ್ಲ. ಬದಲಾಗಿ ಇದು ಆರು ತಿಂಗಳು ಹಗಲು ಮತ್ತು ಆರು ತಿಂಗಳು ರಾತ್ರಿಯನ್ನು ಹೊಂದಿದೆ. ಚಳಿಗಾಲದಲ್ಲಿ ಇಲ್ಲಿ ಸೂರ್ಯನು ಕಾಣಿಸುವುದಿಲ್ಲ, ಆದರೆ ಬೇಸಿಗೆಯಲ್ಲಿ ಇಲ್ಲಿ ಸೂರ್ಯ ಮುಳುಗುವುದಿಲ್ಲ. ತುಂಬಾ ಆಸಕ್ತಿದಾಯಕವಾಗಿರುವ ಈ ದೇಶವನ್ನು ನೋಡಲು ಸಾಕಷ್ಟು ಪ್ರವಾಸಿಗರು ಆಗಮಿಸುತ್ತಾರೆ.


ಜಗತ್ತಿನ ಕೊನೆ

ಇಷ್ಟೆಲ್ಲಾ ಗೊತ್ತಾದ ಮೇಲೆ ನಾವು ನಾರ್ವೆಗೆ ಹೋಗಬೇಕು ಎನಿಸುವುದರಲ್ಲಿ ಸಂದೇಹವಿಲ್ಲ. ಆದರೆ ಈ ದೇಶದ ಇ-69 ಹೆದ್ದಾರಿಯಲ್ಲಿ ಏಕಾಂಗಿಯಾಗಿ ಹೋಗುವುದನ್ನು ನಿಷೇಧಿಸಲಾಗಿದೆ. ಯಾಕೆಂದರೆ ಈ ಹೆದ್ದಾರಿಯು ಭೂಮಿಯ ತುದಿಗಳನ್ನು ನಾರ್ವೆಗೆ ಸಂಪರ್ಕಿಸುತ್ತದೆ. ಮುಂದೆ ಹೋದಂತೆ ಇಲ್ಲಿಯೇ ರಸ್ತೆ ಕೊನೆಗೊಳ್ಳುತ್ತದೆ. ಅಲ್ಲಿಗೆ ತಲುಪಿದಾಗ ಎಲ್ಲಿಗೆ ಹೋಗಬೇಕೆಂದು ತಿಳಿಯುವುದಿಲ್ಲ. ಯಾಕೆಂದರೆ ಇಲ್ಲಿ ಜಗತ್ತು ಕೊನೆಗೊಳ್ಳುತ್ತದೆ.


ಏಕವ್ಯಕ್ತಿ ಪ್ರಯಾಣ ನಿಷೇಧ

ಈ ಹೆದ್ದಾರಿಯಲ್ಲಿ ಹೋಗಬೇಕೆಂದರೂ ಒಬ್ಬರೇ ಹೋಗುವುದು ನಿಷಿದ್ಧ. ಒಂದು ದೊಡ್ಡ ಗುಂಪಿಗೆ ಮಾತ್ರ ಹೋಗಲು ಅನುಮತಿಸಲಾಗುತ್ತದೆ. ಈ ರಸ್ತೆಯಲ್ಲಿ ಯಾವುದೇ ವ್ಯಕ್ತಿ ಏಕಾಂಗಿಯಾಗಿ ಹೋಗಲು ಅಥವಾ ಏಕಾಂಗಿಯಾಗಿ ವಾಹನ ಚಲಾಯಿಸಲು ಅವಕಾಶವಿಲ್ಲ. ಇಲ್ಲಿ ಎಲ್ಲೆಂದರಲ್ಲಿ ಹಿಮವಿದ್ದು, ಏಕಾಂಗಿಯಾಗಿ ಪ್ರಯಾಣಿಸಿ ದಾರಿ ತಪ್ಪುವ ಸಾಧ್ಯತೆ ಇರುವುದರಿಂದ ಏಕಾಂಗಿ ಪ್ರಯಾಣವನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: Konark Tourist Destination: ರಜೆಯಲ್ಲಿ ಕೋನಾರ್ಕ್‌ಗೆ ಹೋದಾಗ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಲು ಮರೆಯಬೇಡಿ

ಈ ದೇಶದಲ್ಲಿ ಪೋಲಾರ್ ಲೈಟ್‌ಗಳನ್ನು ನೋಡಿ ಆನಂದಿಸಬಹುದು. ಇಲ್ಲಿ ಸೂರ್ಯಾಸ್ತ ಮತ್ತು ಧ್ರುವ ದೀಪಗಳನ್ನು ವೀಕ್ಷಿಸುವುದು ವಿನೋದಮಯವಾಗಿದೆ. ವರ್ಷಗಳ ಹಿಂದೆ ಇಲ್ಲಿ ಮೀನು ವ್ಯಾಪಾರ ನಡೆಯುತ್ತಿತ್ತು ಎಂದು ಹೇಳಲಾಗುತ್ತದೆ. ಆದರೆ ಕ್ರಮೇಣ ದೇಶವು ಅಭಿವೃದ್ಧಿ ಹೊಂದಿತು ಮತ್ತು ಪ್ರವಾಸಿಗರು ಇಲ್ಲಿಗೆ ಬರಲು ಪ್ರಾರಂಭಿಸಿದರು. ಈಗ ಪ್ರವಾಸಿಗರು ಇಲ್ಲಿ ಉಳಿದುಕೊಳ್ಳಲು ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳ ಸೌಲಭ್ಯವನ್ನೂ ಪಡೆಯುತ್ತಾರೆ.

Continue Reading

ಪ್ರವಾಸ

Sri Lanka Tour: ಕಡಿಮೆ ವೆಚ್ಚದಲ್ಲಿ ಶ್ರೀಲಂಕಾ ಪ್ರವಾಸ; ಐಆರ್‌ಸಿಟಿಸಿ ಸ್ಪೆಷಲ್‌ ಪ್ಯಾಕೇಜ್‌

ಐಆರ್‌ಸಿಟಿಸಿಯು ಕೈಗೆಟುಕುವ ಪ್ರಯಾಣದ ಕೊಡುಗೆಯೊಂದಿಗೆ ಶ್ರೀಲಂಕಾದ (Sri Lanka Tour) ಅದ್ಭುತ ಸ್ಥಳಗಳಲ್ಲಿ ಸುತ್ತಾಡಲು ವಿಶೇಷ ಅವಕಾಶವನ್ನು ನೀಡಿದೆ. IRCTC ನೀಡಿರುವ ಕೊಡುಗೆಯಲ್ಲಿ ಶ್ರೀಲಂಕಾದ ಆಕರ್ಷಣೀಯ ಗಮ್ಯಸ್ಥಾನಗಳನ್ನು ಕಾಣಬಹುದು. ಶ್ರೀಲಂಕಾದಲ್ಲಿ ಏನೆಲ್ಲ ನೋಡಬಹುದು? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Sri Lanka Tour
Koo

ಮೋಡಿ ಮಾಡುವ ಭೂ ದೃಶ್ಯಾವಳಿಗಳು, ಶ್ರೀಮಂತ ಸಾಂಸ್ಕೃತಿಕ ಪರಂಪರೆಯೊಂದಿಗೆ ಪ್ರಪಂಚದಾದ್ಯಂತದ (world) ಪ್ರವಾಸಿಗರನ್ನು (tourists) ಕೈಬೀಸಿ ಕರೆಯುತ್ತಿದೆ ಭಾರತದ (india) ನೆರೆಯ ರಾಷ್ಟ್ರ ಶ್ರೀಲಂಕಾ (Sri Lanka Tour). ಭಾರತೀಯ ರೈಲ್ವೆಯ IRCTCಯಿಂದ ವಿವಿಧ ಕೊಡುಗೆಯೊಂದಿಗೆ ಈ ದ್ವೀಪ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಡುತ್ತಿದೆ. ಅದೂ ಕೈಗೆಟುಕುವ ದರದಲ್ಲಿ.

IRCTC ನೀಡಿರುವ ಕೊಡುಗೆಯಲ್ಲಿ ಶ್ರೀಲಂಕಾದ ಆಕರ್ಷಣೀಯ ಗಮ್ಯಸ್ಥಾನಗಳನ್ನು ಕಾಣಬಹುದು. ಶ್ರೀಲಂಕಾದಲ್ಲಿ ಏನೆಲ್ಲ ನೋಡಬಹುದು? ಈ ಕುರಿತ ಮಾಹಿತಿ ಇಲ್ಲಿದೆ.


ಕೊಲಂಬೊ

ಶ್ರೀಲಂಕಾದ ವಾಣಿಜ್ಯ ಹೃದಯವಾಗಿರುವ ಕೊಲಂಬೊದ ಗದ್ದಲದ ಬೀದಿಗಳು, ವಸಾಹತುಶಾಹಿ ವಾಸ್ತುಶಿಲ್ಪ ಮತ್ತು ರೋಮಾಂಚಕ ಮಾರುಕಟ್ಟೆಗಳು ಗಮನ ಸೆಳೆಯುತ್ತವೆ. ಗಂಗಾರಾಮಯ್ಯ ದೇವಸ್ಥಾನ, ರಾಷ್ಟ್ರೀಯ ವಸ್ತುಸಂಗ್ರಹಾಲಯದಂತಹ ಆಕರ್ಷಣೆಗಳನ್ನು ಇದು ಹೊಂದಿದೆ. ಗಾಲ್ ಫೇಸ್ ಗ್ರೀನ್‌ನಲ್ಲಿ ಅಡ್ಡಾಡಿ ಆನಂದಿಸಬಹುದಾಗಿದೆ.


ಕ್ಯಾಂಡಿ ದೇವಾಲಯ

ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾದ ಟೂತ್ ರೆಲಿಕ್ ನ ಪವಿತ್ರ ದೇವಾಲಯ ಕ್ಯಾಂಡಿ. ಸಾಂಪ್ರದಾಯಿಕ ನೃತ್ಯ ಪ್ರದರ್ಶನಗಳಿಗೆ ಸಾಕ್ಷಿಯಾಗಿರುವ ಇದು ಪ್ರಶಾಂತವಾದ ಕ್ಯಾಂಡಿ ಸರೋವರದ ಸುತ್ತಲೂ ಅಡ್ಡಾಡಲು ಅವಕಾಶ ಕಲ್ಪಿಸುತ್ತದೆ. ಇಲ್ಲಿ ಪೆರಾಡೆನಿಯಾದ ರಾಯಲ್ ಬೊಟಾನಿಕಲ್ ಗಾರ್ಡನ್‌ಗೆ ಭೇಟಿ ನೀಡುವುದನ್ನು ತಪ್ಪಿಸಲೇಬಾರದು.


ನುವಾರ ಎಲಿಯಾ

ಸೊಂಪಾದ ಚಹಾ ತೋಟಗಳು ಮತ್ತು ಮಂಜಿನ ಬೆಟ್ಟಗಳ ನಡುವೆ ನೆಲೆಸಿರುವ ನುವಾರಾ ಎಲಿಯ ಮೋಡಿ ಮಾಡುವುದರಲ್ಲಿ ಸಂದೇಹವಿಲ್ಲ. ವಸಾಹತುಶಾಹಿ ವಾಸ್ತುಶಿಲ್ಪವನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಸಿಲೋನ್ ಚಹಾವನ್ನು ಸವಿಯಬಹುದು. ಸುಂದರವಾದ ಹಾರ್ಟನ್ ಪ್ಲೇನ್ಸ್ ರಾಷ್ಟ್ರೀಯ ಉದ್ಯಾನವನವನ್ನು ವೀಕ್ಷಿಸಬಹುದು.


ಸಿಗಿರಿಯಾ

ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಸಿಗಿರಿಯಾದ ಪ್ರಾಚೀನ ರಾಕ್ ಕೋಟೆಯನ್ನು ಏರಿ ವಿಹಂಗಮ ನೋಟಗಳನ್ನು ಕಣ್ತುಂಬಿಕೊಳ್ಳಬಹುದು. ದೃಷ್ಟಿ ಹಾಯಿಸಿದಷ್ಟು ದೂರ ಹಸಿರು ದೃಶ್ಯವಾಳಿಗಳು ನಯನ ಮನೋಹರವಾಗಿರುತ್ತದೆ. ರಾಯಲ್ ಗಾರ್ಡನ್ಸ್ ಮತ್ತು ವಿವಿಧ ವಾಸ್ತುಶಿಲ್ಪದ ಅದ್ಭುತ ಇತಿಹಾಸದ ಬಗ್ಗೆ ಇಲ್ಲಿ ತಿಳಿದುಕೊಳ್ಳಬಹುದು.


ಡಂಬುಲ್ಲಾ

ಗುಹಾ ದೇವಾಲಯಗಳ ಭೂಮಿ ಡಂಬುಲ್ಲಾ ಸಂಕೀರ್ಣವಾದ ಭಿತ್ತಿಚಿತ್ರಗಳು ಮತ್ತು ಶಿಲ್ಪಕಲೆಗಳಿಂದ ಅಲಂಕರಿಸಲ್ಪಟ್ಟಿದೆ. ಪವಿತ್ರ ಯಾತ್ರಾ ಸ್ಥಳವಾದ ಗೋಲ್ಡನ್ ಟೆಂಪಲ್ ಮತ್ತು ವಿಸ್ಮಯಕಾರಿ ಡಂಬುಲ್ಲಾ ರಾಕ್ ಟೆಂಪಲ್ ಅನ್ನು ವೀಕ್ಷಿಸಬಹುದು.


ಗಾಲೆ

ವಸಾಹತುಶಾಹಿ ಮೋಡಿಯಿಂದ ತುಂಬಿರುವ ಯುನೆಸ್ಕೋ ಪಟ್ಟಿ ಮಾಡಿದ ಕೋಟೆಯ ನಗರವಾದ ಗಾಲೆಯ ಕಲ್ಲುಮಣ್ಣುಗಳ ಬೀದಿಗಳಲ್ಲಿ ಅಲೆದಾಡುವಾಗ ಪುರಾತನ ಕಾಲಕ್ಕೆ ಹಿಂದಿರುಗಿದ ಅನುಭವ ಕೊಡುವುದು. ಸಾಂಪ್ರದಾಯಿಕವಾದ ಗಾಲೆ ಕೋಟೆ, ಐತಿಹಾಸಿಕ ಚರ್ಚು ಮತ್ತು ಮೋಡಿಮಾಡುವ ತಾಣದ ಕರಾವಳಿ ಸೌಂದರ್ಯವನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು.

ಐಆರ್‌ಸಿಟಿಸಿಯಿಂದ ವಿಶೇಷ ಕೊಡುಗೆ

ಐಆರ್‌ಸಿಟಿಸಿಯ ವಿಶೇಷ ಪ್ರಯಾಣ ಪ್ಯಾಕೇಜ್‌ ಅನ್ನು ನೀಡಿದ್ದು, ಶ್ರೀಲಂಕಾದಲ್ಲಿ ಸುತ್ತಾಡಿ ಮರೆಯಲಾಗದ ಅನುಭವವನ್ನು ಪಡೆಯಬಹುದು. ಕೈಗೆಟುಕುವ ದರದಲ್ಲಿ ಪ್ರಯಾಣಿಕರಿಗೆ ಅತ್ಯಂತ ಸುಂದರ ಅನುಭವವನ್ನು ನೀಡಲು ಈ ಯೋಜನೆಯನ್ನು ರೂಪಿಸಲಾಗಿದೆ. ಆರಾಮದಾಯಕ ವಸತಿ ಸೌಕರ್ಯ, ಮಾರ್ಗದರ್ಶಿ ಪ್ರವಾಸ ಮತ್ತು ರುಚಿಕರವಾದ ಊಟದವರೆಗೆ ಪ್ರವಾಸದ ಪ್ರತಿಯೊಂದು ಅಂಶವು ಗರಿಷ್ಠ ಆನಂದ ಮತ್ತು ಅನುಕೂಲತೆಯನ್ನು ಇದು ಖಚಿತಪಡಿಸುತ್ತದೆ.

ಪ್ಯಾಕೇಜ್‌ನಲ್ಲಿ ಏನಿದೆ?

ನಿರ್ದಿಷ್ಟ ಹೊಟೇಲ್‌ಗಳಲ್ಲಿ ಆರಾಮದಾಯಕ ವಸತಿ, ಸ್ಥಳೀಯ ಉಪಾಹಾರ ಮತ್ತು ರಾತ್ರಿಯ ಊಟದ ವ್ಯವಸ್ಥೆ, ಸ್ಥಳೀಯ ಮಾರ್ಗದರ್ಶಕರೊಂದಿಗೆ ಮಾರ್ಗದರ್ಶಿ ದೃಶ್ಯವೀಕ್ಷಣೆಯ ಪ್ರವಾಸ, ಸರಾಗ ಪ್ರಯಾಣಕ್ಕಾಗಿ ಹವಾನಿಯಂತ್ರಿತ ವಾಹನಗಳಲ್ಲಿ ಸಾರಿಗೆಯೊಂದಿಗೆ ಪ್ರಮುಖ ಆಕರ್ಷಣೆಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳಿಗೆ ಕನಿಷ್ಠ ಪ್ರವೇಶ ಶುಲ್ಕ. ಕೇವಲ 62,660 ರೂ. ನಿಂದ ಪ್ರಾರಂಭವಾಗುವ ಶ್ರೀಲಂಕಾ ಪ್ರವಾಸ ಯೋಜನೆ ಪ್ರತಿಯೊಬ್ಬ ಪ್ರವಾಸಿಗನಿಗೆ ವಿಶಿಷ್ಟ ಅನುಭವ ಕೊಡುವುದು.

ಇದನ್ನೂ ಓದಿ: Best Tourist Places In Tamilnadu: ಈ ಸುಂದರ ದೇವಾಲಯಗಳ ದರ್ಶನಕ್ಕಾದರೂ ತಮಿಳುನಾಡಿಗೆ ಹೋಗಲೇಬೇಕು!

ಐಆರ್ ಸಿಟಿಸಿಯನ್ನು ಏಕೆ ಆರಿಸಬೇಕು?

ವಿಶ್ವಾಸಾರ್ಹ ಖ್ಯಾತಿ

ಪ್ರಯಾಣ ಉದ್ಯಮದಲ್ಲಿ ದಶಕಗಳ ಅನುಭವದೊಂದಿಗೆ ಐಆರ್‌ಸಿಟಿಸಿ ವಿಶ್ವಾಸಾರ್ಹತೆ ಮತ್ತು ಗ್ರಾಹಕರ ತೃಪ್ತಿಗೆ ಸಮಾನಾರ್ಥಕವಾಗಿದೆ, ಪ್ರತಿ ಪ್ರಯಾಣಿಕರಿಗೆ ತಡೆರಹಿತ ಮತ್ತು ಆನಂದದಾಯಕ ಪ್ರಯಾಣವನ್ನು ಖಾತ್ರಿಪಡಿಸುತ್ತದೆ.

ತಜ್ಞರ ಮಾರ್ಗದರ್ಶನ

ಅನುಭವಿ ಪ್ರವಾಸ ನಿರ್ವಾಹಕರು ಮತ್ತು ಸ್ಥಳೀಯ ಮಾರ್ಗದರ್ಶಕರ ಪರಿಣತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಅವರು ಪ್ರವಾಸದ ಪ್ರತಿ ಕ್ಷಣವು ಸಮೃದ್ಧ ಮತ್ತು ಸ್ಮರಣೀಯಗೊಳಿಸುತ್ತಾರೆ.

ಕಡಿಮೆ ವೆಚ್ಚದಲ್ಲಿ ವಿಶೇಷ ಪ್ಯಾಕೇಜ್

ಐಆರ್‌ಸಿಟಿಸಿಯ ಪ್ಯಾಕೇಜ್‌ಗಳು ಕಡಿಮೆ ವೆಚ್ಚದಲ್ಲಿ ವಿಶೇಷ ಪ್ಯಾಕೇಜ್ ಅನ್ನು ಒದಗಿಸುತ್ತದೆ. ಗುಣಮಟ್ಟದ ವಸತಿ, ತಲ್ಲೀನಗೊಳಿಸುವ ಅನುಭವ ಮತ್ತು ಜಗಳ-ಮುಕ್ತ ಪ್ರಯಾಣದ ವ್ಯವಸ್ಥೆಗಳನ್ನು ಕಡಿಮೆ ಬೆಳೆಗೆ ಸಂಯೋಜಿಸುತ್ತವೆ.

ಸರಾಗ ಬುಕ್ಕಿಂಗ್

ಐಆರ್‌ಸಿಟಿಸಿಯೊಂದಿಗೆ ಶ್ರೀಲಂಕಾ ಗೇಟ್‌ಅವೇ ಅನ್ನು ಬುಕ್ ಮಾಡುವುದು ಸರಳ ಮತ್ತು ಅನುಕೂಲಕರವಾಗಿದೆ. ಸುರಕ್ಷಿತ ಆನ್‌ಲೈನ್ ಬುಕ್ಕಿಂಗ್ ಆಯ್ಕೆಗಳಿವೆ. ಪ್ರತಿ ಹಂತದಲ್ಲೂ ಸಹಾಯ, ಸಲಹೆ ಸಿಗುತ್ತದೆ.

Continue Reading
Advertisement
Narendra Modi 3.20
ಪ್ರಮುಖ ಸುದ್ದಿ37 mins ago

Narendra Modi 3.0 : ಮೋದಿ ಅಧಿಕಾರಕ್ಕೆ ಬಾರದಿರಲಿ ಎಂದು ಕಾದು ಕೂತು, ಕೊನೆಗೂ ಅಭಿನಂದನೆ ತಿಳಿಸಿದ ಪಾಕಿಸ್ತಾನ!

Election Results 2024
ಕರ್ನಾಟಕ40 mins ago

Election Results 2024: ಟಾರ್ಗೆಟ್ 20 ರೀಚ್ ಆಗಲು ವಿಫಲ; ಎಐಸಿಸಿಯಿಂದ ಪರಾಮರ್ಶೆ ಸಮಿತಿ, ಸಚಿವರ ಮೇಲೆ ತೂಗುಗತ್ತಿ!

Yuva Rajkumar Allegation of cruelty against wife
ಸ್ಯಾಂಡಲ್ ವುಡ್53 mins ago

Yuva Rajkumar: ರಾಘಣ್ಣ ದಂಪತಿ ವಿರೋಧದ ನಡುವೆಯೂ ಯುವನಿ​ಗೆ ಮದ್ವೆ ಮಾಡಿಸಿದ್ದು ‘ಅಪ್ಪು’!

UGCET 2024
ಬೆಂಗಳೂರು55 mins ago

UGCET 2024: ಸಿಇಟಿ ಅಪ್‌ಡೇಟ್‌; ಮೊದಲ ದಿನ 250 ವಿಕಲಚೇತನರ ವೈದ್ಯಕೀಯ ತಪಾಸಣೆ

Reasi Terror Attack
ಪ್ರಮುಖ ಸುದ್ದಿ1 hour ago

Reasi Terror Attack : ಉಗ್ರರ ಮುಂದೆ ಸತ್ತಂತೆ ನಟಿಸಿ ಬದುಕುಳಿದ ಹಿಂದೂ ಯಾತ್ರಿಗಳು…

murder case
ಮೈಸೂರು1 hour ago

Murder Case : ಮೈಸೂರಿನಲ್ಲಿ ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿಯ ಬರ್ಬರ ಕೊಲೆ

pm narendra modi leopord
ಪ್ರಮುಖ ಸುದ್ದಿ1 hour ago

PM Narendra Modi: ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಕಾಣಿಸಿಕೊಂಡ ನಿಗೂಢ ಪ್ರಾಣಿ! ವಿಡಿಯೋ ಇದೆ ನೋಡಿ

Yuva Rajkumar son of raghavendra Rajkumar yuva divorce
ಸ್ಯಾಂಡಲ್ ವುಡ್1 hour ago

Yuva Rajkumar: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಯುವ ರಾಜ್​ಕುಮಾರ್​ ; ಅಣ್ಣಾವ್ರ ಕುಟುಂಬದಲ್ಲಿ ಇದೇ ಮೊದಲ ಪ್ರಕರಣ!

Congress Guaratee
ಕರ್ನಾಟಕ2 hours ago

Congress Guarantee: ಗ್ಯಾರಂಟಿ ನಿಲ್ಲಿಸುವ ಮಾತು ಬೇಡ: ಕೈ ನಾಯಕರಿಗೆ ಎಚ್.ಎಂ ರೇವಣ್ಣ ಎಚ್ಚರಿಕೆ

Suresh Gopi
ದೇಶ2 hours ago

Suresh Gopi : ಪ್ರಮಾಣವಚನ ಸ್ವೀಕರಿಸಿದ ಒಂದೇ ಗಂಟೆಯೊಳಗೆ ಸಚಿವ ಸ್ಥಾನ ಬೇಡ ಎಂದ ಸುರೇಶ್​ ಗೋಪಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ7 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ7 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌