2023 New Year Celebration | ವರ್ಷದ ಹರ್ಷ ವಿಸ್ತಾರ ನ್ಯೂಸ್​​​ನಲ್ಲಿ Vistara News

Year End 2022

2023 New Year Celebration | ವರ್ಷದ ಹರ್ಷ ವಿಸ್ತಾರ ನ್ಯೂಸ್​​​ನಲ್ಲಿ

VISTARANEWS.COM


on

new year
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

New year 2023

‌New Year 2023 | ಹೊಸ ವರ್ಷಾಚರಣೆಗೆ ಕೆಲವೇ ಗಂಟೆಗಳು ಬಾಕಿ, ಬೆಂಗಳೂರಿನಲ್ಲಿ ಸಕಲ ಸಿದ್ಧತೆ, ಬಂದೋಬಸ್ತ್

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಭದ್ರತೆಗೆ 8,500 ಪೊಲೀಸರನ್ನು (New Year 2023) ನಿಯೋಜಿಸಲಾಗಿದೆ.

VISTARANEWS.COM


on

new year
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಲಿಕಾನ್ ಸಿಟಿಯ ಮೂಲೆ ಮೂಲೆಯಲ್ಲೂ ಬಿಗಿ ಬಂದೋಬಸ್ತ್‌ (New Year 2023) ಅನ್ನೂ ಏರ್ಪಡಿಸಲಾಗಿದೆ.

ಮುಂಜಾಗರೂಕತಾ ಕ್ರಮವಾಗಿ ನಗರದಲ್ಲಿ ಭಧ್ರತೆಗೆ 8,500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಮುಖ್ಯವಾಗಿ ಎಂ.ಜಿ.ರೋಡ್, ಬಿಗ್ರೇಡ್ ರೋಡ್, ರೆಸಿಡೆನ್ಸಿ‌ ರೋಡ್ ನಲ್ಲಿ 4 ಮಂದಿ ಡಿಸಿಪಿ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ.

ಇದನ್ನೂ ಓದಿ: Nandi Hills | ವರ್ಷದ ಕೊನೆಯ ದಿನ ಹೊಸ ವರ್ಷಾಚರಣೆಗೆ ನಂದಿ ಬೆಟ್ಟಕ್ಕೆ ನೋ ಎಂಟ್ರಿ

10 ಎಸಿಪಿ, 30 ಇನ್ ಸ್ಪೆಕ್ಟರ್ ಒಳಗೊಂಡಂತೆ ಭದ್ರತೆಗೆ 3 ಸಾವಿರ ಪೊಲೀಸರ ನಿಯೋಜಿಸಲಾಗಿದೆ. ಬೆಂಗಳೂರಲ್ಲಿ 160 ಇನ್ ಸ್ಪೆಕ್ಟರ್, 600 ಪಿಎಸ್ಐ, 800 ಎಎಸ್ಐ, 5200 ಕಾನ್ ಸ್ಟೇಬಲ್ 1800 ಹೆಡ್ ಕಾನ್ ಸ್ಟೇಬಲ್ ಗಳನ್ನು ನಿಯೋಜಿಸಲಾಗಿದೆ. ಎಂಜಿ ರೋಡ್ ನ ಪ್ರವೇಶದ್ವಾರದಲ್ಲಿ ಮೆಟೆಲ್  ಡಿಟೆಕ್ಟರ್ ಉಪಕರಣ ಅಳವಡಿಸಲಾಗಿದೆ. ಕೋರಮಂಗಲ, ಇಂದಿರಾನಗರ, ವೈಟ್ ಫೀಲ್ಡ್‌ ಪ್ರದೇಶಗಳಲ್ಲಿ 2,500 ಪೊಲೀಸರು ಬಂದೋಬಸ್ತ್‌ ನಿರ್ವಹಿಸುತ್ತಿದ್ದಾರೆ.

ರಾತ್ರಿ 1 ಗಂಟೆಯವರೆಗೆ ಮಾತ್ರ ಆಚರಣೆಗೆ ಅವಕಾಶ

ರಾತ್ರಿ 1ಗಂಟೆವರೆಗೆ ಮಾತ್ರ ಹೊಸ ವರ್ಷ ಆಚರಣೆಗೆ ಅವಕಾಶ ನೀಡಲಾಗಿದೆ. ಅವಧಿ ಮೀರಿದ್ರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ವಾಚ್ ಟವರ್, ವುಮೆನ್ ಸೇಫ್ ಹೌಸ್, ಕಿಡಿಗೇಡಿಗಳ ಮೇಲೆ ನಿಗಾ ಹಿಡಲು ಆರೆಂಜ್ ಸ್ಕ್ವಾಡ್ ಸೇರಿದಂತೆ ಭದ್ರತೆ ಕಲ್ಪಿಸಲಾಗಿದೆ.

ಮಹಿಳೆಯರ ಭದ್ರತೆಗೆ ಸೇಫ್‌ ಹೌಸ್‌ ವ್ಯವಸ್ಥೆ

ಹೊಸ ವರ್ಷಾಚರಣೆ ಪ್ರಯುಕ್ತ ಮಹಿಳೆಯರ ಸುರಕ್ಷತೆಗೆ ಬೆಂಗಳೂರಿನಲ್ಲಿ ಆದ್ಯತೆ ವಹಿಸಲಾಗಿದೆ. ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಒಟ್ಟು 37 ವುಮೆನ್ ಸೇಪ್ ಹೌಸ್ ವ್ಯವಸ್ಥೆ ಮಾಡಲಾಗಿದೆ.

ಹೊಸ ವರ್ಷದ ಸಂಭ್ರಮಾಚರಣೆ ನಡೆಯುವ ಪ್ರತಿ ರಸ್ತೆಗೆ ಎರಡರಿಂದ ಮೂರು ವುಮೆನ್ ಸೇಫ್ ಹೌಸ್ ಕಲ್ಪಿಸಲಾಗಿದೆ. ಮಹಿಳೆಯರು ಮದ್ಯಪಾನ ಮಾಡಿ ಅನಾರೋಗ್ಯಕ್ಕೀಡಾದರೆ, ಬಳಲಿದರೆ, ವಿಶ್ರಾಂತಿ ಪಡೆಯಲು ಬೆಡ್ ವ್ಯವಸ್ಥೆ ಕಲ್ಪಿಸಲಾಗಿದೆ. ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿ ಬೆಡ್ ಅಳವಡಿಸಲಾಗಿದೆ.

ಇದನ್ನೂ ಓದಿ: New Year 2023 | ಹೊಸ ವರ್ಷಾಚರಣೆ; ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ, ಪಾರ್ಕಿಂಗ್‌ಗೆ ನಿರ್ಬಂಧ

Continue Reading

New year 2023

New Year 2023 | ಹೊಸ ವರ್ಷಕ್ಕೆ ಹೊಸದೇನು ಮಾಡಬಹುದು? ನೋಡಿ, ಇಂಥವೂ ಸಾಧ್ಯ!

ಪಾರ್ಟಿ, ಮೋಜು, ಮಸ್ತಿಯ ಹೊರತಾಗಿಯೂ ಹೊಸವರ್ಷಕ್ಕೆ ಬೇರೇನನ್ನೋ ಹುಡುಕುತ್ತಿರುವವರು ನೀವಾಗಿದ್ದರೆ, ಇಂಥ ಯಾವುದಾದರೂ ಒಳ್ಳೆಯ ಹವ್ಯಾಸವನ್ನು ಜೀವನದುದ್ದಕ್ಕೂ ಸಂಗಾತಿಯನ್ನಾಗಿ ಇರಿಸಿಕೊಳ್ಳಬಹುದು.

VISTARANEWS.COM


on

New Year 2023
Koo

ಅಲಕಾ ಕೆ, ಮೈಸೂರು
ಹೊಸ ವರ್ಷದ ಹೊಸಿಲಲ್ಲಿದ್ದೇವೆ. ಪ್ರತಿವರ್ಷವೂ ಬರುವಂಥದ್ದೇ ಹೌದಾದರೂ, ಈ ವರ್ಷವಾದರೂ ಏನಾದರೂ ಭಿನ್ನವಾಗಿದ್ದೀತೆ ಎಂಬ ಆಸೆ ಸರಿಯಾದದ್ದೇ. ವರ್ಷಾರಂಭಕ್ಕೆ ಏನು ಮಾಡಬಹುದು ಎಂದು ಯೋಚಿಸಿದರೆ- ಮನಸ್ಸು ತುಂಬುವಷ್ಟು ಪ್ರಯಾಣ, ಕುಡಿದು ಬೀಳುವಷ್ಟು ಪಾರ್ಟಿ, ಕಿಸೆ ಬರಿದಾಗುವಷ್ಟು ಶಾಪಿಂಗ್‌, ಹೊಟ್ಟೆ ಬಿರಿಯುವಷ್ಟು ತಿನಿಸು, ನಿದ್ದೆ ಬರುವಷ್ಟು ಬೋಧನೆ, ಮಾಡಲೆಡೆಯದಷ್ಟು ಪ್ರತಿಜ್ಞೆಗಳು- ಇಂಥವೆಲ್ಲಾ ಹೊಸ ಸೀಸೆಯ ಹಳೆಯ ಮಧುವಿನಂತೆ ನಮ್ಮೆದುರು ಕಾಣಿಸಿಕೊಳ್ಳುತ್ತವೆ. ಇಂಥ ಯಾವುದರಲ್ಲೂ ಆಸಕ್ತಿ ಇಲ್ಲದವರು ಹೊಸ ವರ್ಷಕ್ಕೆ ಹೊಸದಾಗಿ ಏನು ಮಾಡಬಹುದು? ಈವರೆಗೆ ಮಾಡದೆ ಇರುವುದನ್ನು, ಏನಾದರೂ ಸೃಜನಶೀಲವಾದ್ದನ್ನು, ನಮ್ಮ ಬದುಕಿನ ಮೌಲ್ಯವರ್ಧಿಸುವುದನ್ನು ಮಾಡುವ ಉದ್ದೇಶವಿದ್ದರೆ- ಅದಕ್ಕೂ ಆಯ್ಕೆಗಳಿವೆ. ಬದುಕಿನಲ್ಲಿ ಆಯ್ಕೆಗಳು ಮುಗಿಯುವುದೇ ಇಲ್ಲ, ಆಯ್ದುಕೊಳ್ಳುವವರಿಗೆ ಮಾಹಿತಿ ಇರಬೇಕಷ್ಟೆ.

New Year 2023

ಮನೆಯ ಸುತ್ತಮುತ್ತ ನಾಲ್ಕಾರು ಮರ-ಗಿಡಗಳು ಇರಬಹುದಲ್ಲ, ಸಮೀಪದಲ್ಲಿ ವಾಕಿಂಗ್‌ ಮಾಡುವಂಥ ಪಾರ್ಕು ಇದ್ದರೆ ಇನ್ನೂ ಒಳ್ಳೆಯದು. ಕಿಸೆಯಲ್ಲೊಂದು ಸಣ್ಣ ಪುಸ್ತಕ-ಪೆನ್ನು, ಇದ್ದರೊಂದು ಬೈನಾಕ್ಯುಲರ್‌, ಮನದಲ್ಲಿಷ್ಟು ಆಸಕ್ತಿ- ಇವಿಷ್ಟಿದ್ದರೆ ಹೊಸದೊಂದು ಹವ್ಯಾಸ ಪ್ರಾರಂಭಿಸಬಹುದು- ಬರ್ಡ್‌ ವಾಚಿಂಗ್‌ ಅಥವಾ ಪಕ್ಷಿ ವೀಕ್ಷಣೆ. ಹೆಚ್ಚಿನ ಖರ್ಚಿಲ್ಲದೆ, ಸದ್ದು-ಗದ್ದಲವಿಲ್ಲದೆ ನಾವೆಲ್ಲೇ ಇದ್ದರೂ ನಮ್ಮಷ್ಟಕ್ಕೇ ಬೆಳೆಸಿಕೊಳ್ಳಬಹುದಾದ ಆರೋಗ್ಯಕರ ಹವ್ಯಾಸವಿದು. ಒಂದಿಷ್ಟು ಪ್ರಯಾಣ ಮಾಡಲು ಪ್ರೇರೇಪಿಸುವ, ನಿಸರ್ಗದ ಜೊತೆ ಸಮಯ ಕಳೆಯಲು ಉತ್ಸಾಹ ತುಂಬುವ, ಸಮಾನ ಮನಸ್ಕರೊಂದಿಗೆ ಮೈತ್ರಿ ಬೆಳೆಸುವಂಥ ಉತ್ತಮ ಹವ್ಯಾಸವಿದು.

New Year 2023

ಕಾಗೆ, ಗುಬ್ಬಿಗಳನ್ನು ಬಿಟ್ಟು ಬೇರೆ ಹಕ್ಕಿಗಳೇ ಗೊತ್ತಿಲ್ಲ. ಇದನ್ನು ಪ್ರಾರಂಭಿಸುವುದಾದರೂ ಹೇಗೆ ಎಂಬ ಸಮಸ್ಯೆ ಬಹಳಷ್ಟು ಜನರದ್ದು. ಹಕ್ಕಿಗಳು ನೋಡಿದಾಕ್ಷಣ ಅವುಗಳ ಪ್ರವರ ತಿಳಿಯಬೇಕೆಂದೇನೂ ಇಲ್ಲ. ಮೊದಲಿಗೆ ಇವುಗಳ ಇರುವಿಕೆಯನ್ನು ಗುರುತಿಸುವುದು ಮುಖ್ಯ. ಮನೆಯ ಮಾಡಿನ ಮೂಲೆಯಲ್ಲಿ, ಮರದ ಪೊಟರೆಯಲ್ಲಿ, ಸಣ್ಣ ಪೊದೆಗಳ ಒಳಗೆ- ಹೀಗೆ ಎಲ್ಲೆಂದರಲ್ಲಿ ನಮ್ಮ ಆವಾಸಗಳ ಸುತ್ತಲೇ ಬಹಳಷ್ಟು ಬಗೆಯ ಹಕ್ಕಿಗಳು ವಾಸಿಸುತ್ತವೆ. ಸುಮ್ಮನೆ ಕೆಲಕಾಲ ನೋಡುತ್ತಿದ್ದರೂ ಅವುಗಳ ಗಾತ್ರ, ಬಣ್ಣ, ಕೂಗು, ಗೂಡಿನ ಸ್ವರೂಪಗಳ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯುತ್ತದೆ. ಇಂಥವುಗಳಿಂದಲೇ ಪ್ರಾರಂಭ! ನೋಡಿದ್ದನ್ನು ಅಲ್ಲಲ್ಲೇ ಕಿಸೆಪುಸ್ತಕದಲ್ಲಿ ಗೀಚಿಕೊಳ್ಳಲು ಪ್ರಾರಂಭಿಸಿ. ಕೈಯಲ್ಲಿ ಫೋನಿದ್ದರೆ ಫೋಟೊ ತೆಗೆಯುವುದೂ ಸೂಕ್ತವೇ. ಪಕ್ಷಿವೀಕ್ಷಕರ ಕೈಪಿಡಿಗಳು ಅಥವಾ ಇಂಟರ್ನೆಟ್‌ನಲ್ಲಿ ಮಾಹಿತಿ ದೊರೆಯುವುದು ಖಂಡಿತಾ ಕಷ್ಟವಲ್ಲ.

New Year 2023

ಇದೇ ನೆಪದಲ್ಲಿ ಬೆಳಗಿನ ಹೊತ್ತು ಸಮೀಪದ ಪಾರ್ಕ್‌ನಲ್ಲಿ ಅಥವಾ ಹೆಚ್ಚು ಮರಗಿಡಗಳಿರುವಲ್ಲಿ ವಾಕಿಂಗ್‌ ಆರಂಭಿಸುತ್ತೀರಿ. ಈಗಾಗಲೇ ಮಾಡುತ್ತಿದ್ದರೆ, ಹಕ್ಕಿಗಳ ಬಗ್ಗೆ ಗಮನ ಹರಿಸಿದರಾಯಿತು. ಸಾಮಾನ್ಯವಾಗಿ ಎಲ್ಲಾ ಊರುಗಳಲ್ಲೂ ಆಸಕ್ತ ಪಕ್ಷಿವೀಕ್ಷಕರ ಗುಂಪುಗಳಿರುತ್ತವೆ. ಸಾಮಾಜಿಕ ಮಾಧ್ಯಮಗಳಲ್ಲೂ ಇಂಥ ಗುಂಪುಗಳು ಬೇಕಷ್ಟಿವೆ. ಇವುಗಳಲ್ಲಿ ಯಾವ ಕಾಲಕ್ಕೆ, ಯಾವ ಪ್ರದೇಶಕ್ಕೆ ಎಂಥ ಹಕ್ಕಿಗಳು ಎಲ್ಲಿಂದ ವಲಸೆ ಬರುತ್ತವೆ, ಅವುಗಳ ವಿವರಗಳೇನು ಇತ್ಯಾದಿ ಮಾಹಿತಿಗಳು ನಿಖರವಾಗಿ ದೊರೆಯುತ್ತವೆ. ನಿಸರ್ಗಕ್ಕೆ ಹತ್ತಿರವಾದಷ್ಟೂ ನೆಮ್ಮದಿ ಹತ್ತಿರವಾಗುತ್ತದೆ.

ಇಂಥ ಯಾವುದೇ ಹವ್ಯಾಸಗಳು ಬದುಕಿನ ಪಥ ಬದಲಿಸಬಲ್ಲವು. ಪರಿಸರ ಪ್ರೇಮ, ಆರೋಗ್ಯ ವೃದ್ಧಿಸುವಂಥ ನಡಿಗೆ ಅಥವಾ ಚಾರಣಗಳು, ನಿಸರ್ಗದ ನಿಯಮಗಳನ್ನು ಗೌರವಿಸುವ ಮೌಲ್ಯಗಳು, ಮತ್ತೊಬ್ಬರಿಗೆ ತೊಂದರೆಯಾಗದಂತೆ ಬದುಕುವ ಪರಿ, ಪ್ರಾಣಿ-ಪಕ್ಷಿಗಳ ಬಗೆಗಿನ ಕಾಳಜಿ- ಇಂಥ ಎಷ್ಟೋ ಗುಣಾತ್ಮಕ ಅಂಶಗಳನ್ನು ನಮ್ಮಲ್ಲಿ ಹುಟ್ಟುಹಾಕಬಲ್ಲವು. ಪಾರ್ಟಿ, ಮೋಜು, ಮಸ್ತಿಯ ಹೊರತಾಗಿಯೂ ಹೊಸವರ್ಷಕ್ಕೆ ಬೇರೇನನ್ನೋ ಹುಡುಕುತ್ತಿರುವವರು ನೀವಾಗಿದ್ದರೆ, ಇಂಥ ಯಾವುದಾದರೂ ಒಳ್ಳೆಯ ಹವ್ಯಾಸವನ್ನು ಜೀವನದುದ್ದಕ್ಕೂ ಸಂಗಾತಿಯನ್ನಾಗಿ ಇರಿಸಿಕೊಳ್ಳಬಹುದು.

ಇದನ್ನೂ ಓದಿ| New year Fashion | ಹೊಸ ವರ್ಷದ ನ್ಯೂ ಲುಕ್‌ಗೆ ಸಾಥ್‌ ನೀಡುವ 5 ಸ್ಟೈಲ್‌ ಸ್ಟೇಟ್‌ಮೆಂಟ್ಸ್‌

Continue Reading

New year 2023

New Year 2023 | ಭಾರತದ ಕ್ರೀಡಾ ಕ್ಷೇತ್ರಕ್ಕೆ ಶುಭ ಸುದ್ದಿ ತರಬಹುದಾದ 2023ರ ಕ್ರೀಡಾಕೂಟಗಳು ಎಲ್ಲೆಲ್ಲಿ ನಡೆಯುತ್ತವೆ?

2023ರಲ್ಲಿ (New Year 2023) ನಡೆಯಲಿರುವ ಪ್ರಮುಖ ಕ್ರೀಡಾಕೂಟಗಳು ಹಾಗೂ ಅವುಗಳಿಗೆ ಆತಿಥ್ಯ ವಹಿಸುವ ದೇಶಗಳ ಪಟ್ಟಿ ಇಲ್ಲಿದೆ.

VISTARANEWS.COM


on

new year 2023
ಬಾಕ್ಸಿಂಗ್​ ವಿಶ್ವ ಚಾಂಪಿಯನ್​ ನಿಖತ್​ ಜರೀನ್​
Koo

ಬೆಂಗಳೂರು : 2022 ಮುಗಿದೇ ಹೋಯಿತು. ಕಳೆದ ಹೋದ ವರ್ಷದಲ್ಲಿ ಭಾರತದ ಕ್ರೀಡಾ ಕ್ಷೇತ್ರವೂ ಮಿಶ್ರ ಫಲ ಉಂಡಿತು. ಕೆಲವೊಂದು ಟೂರ್ನಿಗಳಲ್ಲಿ ಭಾರತಕ್ಕೆ ಟ್ರೋಫಿ ಸಿಕ್ಕಿದರೆ ಇನ್ನು ಕೆಲವು ಟೂರ್ನಮೆಂಟ್​ಗಳಲ್ಲಿ ನಿರಾಸೆಯೂ ಉಂಟಾಯಿತು. ಇನ್ನೇನಿದ್ದರೂ ಮುಂದಿನ ವರ್ಷದಲ್ಲಿ (New Year 2023) ನಡೆಯಲಿರುವ ಟೂರ್ನಿಗಳ ಕಡೆಗೆ ಗಮನ. ಕ್ರಿಕೆಟ್​ ತಂಡ, ಅಥ್ಲೀಟ್​ಗಳು, ಬ್ಯಾಡ್ಮಿಂಟನ್​ ಆಟಗಾರರು ಮುಂದಿನ ವರ್ಷದ ಅಭಿಯಾನಕ್ಕೆ ಸಜ್ಜಾಗಬೇಕಾಗಿದೆ. ಈ ರೀತಿಯಾಗಿ ಭಾರತ ಆಥ್ಲೀಟ್​ಗಳಿಗೆ ಪದಕ ಗೆಲ್ಲುವ ಅವಕಾಶ ಇರುವ ಕೆಲವು ಟೂರ್ನಿಗಳ ಪಟ್ಟಿ ಇಲ್ಲಿದೆ.

ಪುರುಷರ ಹಾಕಿ ವಿಶ್ವ ಕಪ್​ 2023

ವರ್ಷಾರಂಭದಲ್ಲೇ ಪುರುಷರ ಹಾಕಿ ವಿಶ್ವ ಕಪ್​ ನಡೆಯಲಿದೆ. ಜನವರಿ 13ರಿಂದ 29ರವರೆಗೆ ಒಡಿಶಾದ ಭುವನೇಶ್ವರ ಹಾಗೂ ರೂರ್​ಕೆಲಾದಲ್ಲಿ ಟೂರ್ನಿ ಆಯೋಜನೆಗೊಂಡಿದೆ. ಭಾರತವೇ ಇದಕ್ಕೆ ಆತಿಥ್ಯ ವಹಿಸುತ್ತಿದ್ದು, ಒಟ್ಟು 44 ಪಂದ್ಯಗಳು ನಡೆಯಲಿವೆ. ಒಟ್ಟು 16 ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಎಫ್​ಐಎಚ್​ ರ್ಯಾಂಕಿಂಗ್​ನಲ್ಲಿ ಭಾರತ ನಾಲ್ಕನೇ ಸ್ಥಾನ ಪಡೆದಿದ್ದು, ನೆದರ್ಲೆಂಡ್ಸ್, ಬೆಲ್ಜಿಯಮ್ ಹಾಗೂ ಆಸ್ಟ್ರೇಲಿಯಾ ತಂಡ ಕ್ರಮವಾಗಿ ಮೂರು, ಎರಡು ಹಾಗೂ ಒಂದನೇ ಸ್ಥಾನ ಪಡೆದುಕೊಂಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿರುವ ಭಾರತಕ್ಕೆ ಚಾಂಪಿಯನ್​ಪಟ್ಟ ಅಲಂಕರಿಸುವ ಎಲ್ಲ ಅವಕಾಶಗಳಿವೆ.

ಮಹಿಳೆಯರ ಟಿ20 ವಿಶ್ವ ಕಪ್

ಎಂಟನೇ ಆವೃತ್ತಿಯ ಮಹಿಳೆಯರ ಟಿ20 ವಿಶ್ವ ಕಪ್​ ದಕ್ಷಿಣ ಆಫ್ರಿಕಾದಲ್ಲಿ ಆಯೋಜನೆಗೊಂಡಿದೆ. ಫೆಬ್ರವರಿ 10ರಿಂದ 26ವರೆಗೆ ಟೂರ್ನಿ ನಡೆಯಲಿದೆ. 10 ತಂಡಗಳು ಈ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿವೆ. 2022ರಲ್ಲಿನಡೆದ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಬೆಳ್ಳಿಯ ಪದಕ ಗೆದ್ದಿರುವ ಹರ್ಮನ್​ಪ್ರೀತ್​ಕೌರ್​ ನೇತೃತ್ವದ ತಂಡಕ್ಕೆ ಇಲ್ಲೂ ಚಾಂಪಿಯನ್​ ಪಟ್ಟ ಅಲಂಕರಿಸುವ ಅವಕಾಶಗಳಿವೆ. ಇದುವರೆಗಿನ ಏಳು ಆವೃತ್ತಿಗಳಲ್ಲಿ ಆಸ್ಟ್ರೇಲಿಯಾ ಐದು ಬಾರಿ ಚಾಂಪಿಯನ್​ಪಟ್ಟ ಅಲಂಕರಿಸಿದೆ. ಭಾರತ ಕಳೆದ ಆವೃತ್ತಿಯ ರನ್ನರ್​ಅಪ್ ತಂಡವಾಗಿದೆ. ಐಸಿಸಿ ಮಹಿಳೆಯರ ಟಿ20 ರ್ಯಾಂಕ್​ ಪಟ್ಟಿಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನವಿದೆ.

ಐಪಿಎಲ್​ 2023

Star Sports will telecast live competition, 12 IPL matches for free

ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ ಐಪಿಎಲ್​ ಈ ವರ್ಷ ಮಾರ್ಚ್ 26ರಿಂದ ಮೇ 28ವರೆಗೆ ನಡೆಯಲಿದೆ. ಈಗಾಗಲೇ ಆಟಗಾರರ ಹರಾಜು ಸೇರಿದಂತೆ ಬಹುತೇಕ ಎಲ್ಲ ಪ್ರಕ್ರಿಯೆಗಳು ಮುಕ್ತಾಯಗೊಂಡಿವೆ. ಮುಂದಿನ ಬೇಸಿಗೆಯಲ್ಲಿ ಈ ಕ್ರಿಕೆಟ್​ ಜಾತ್ರೆ ನಡೆಯಲಿದೆ. ಕೊರೊನಾ ಬಳಿಕ ನಡೆಯಲಿರುವ ಮೊದಲ ಬಾರಿ ಹೋಮ್​- ಅವೇ (ತವರು ನೆಲ ಹಾಗೂ ಬೇರೆ ರಾಜ್ಯಗಳ ಸ್ಥಳಗಳು) ಮಾದರಿಯಲ್ಲಿ ಟೂರ್ನಿ ನಡೆಯಲಿದೆ. 10 ಫ್ರಾಂಚೈಸಿಗಳ ನಡುವಿನ ಈ ಟೂರ್ನಿಗಾಗಿ ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಕಾಯುತ್ತಿದ್ದಾರೆ.

ಫಿಫಾ ಮಹಿಳೆಯರ ಫುಟ್ಬಾಲ್​ ವಿಶ್ವ ಕಪ್​

2022ರಲ್ಲಿ ಕತಾರ್​ನಲ್ಲಿ ಪುರುಷರ ತಂಡಗಳ ವಿಶ್ವ ಕಪ್​ ನಡೆದಿದ್ದು, ಅರ್ಜೆಂಟೀನಾ ಚಾಂಪಿಯನ್ ಆಗಿದೆ. ಅಂತೆಯೇ 2023ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ತಂಡಗಳ ಜಂಟಿ ಆತಿಥ್ಯದಲ್ಲಿ ಮಹಿಳೆಯರ ವಿಶ್ವ ಕಪ್​ ನಡೆಯಲಿದೆ. ಭಾರತ ತಂಡ ಈ ಟೂರ್ನಿಗೆ ಅರ್ಹತೆ ಪಡೆದಿಲ್ಲ. ಆದರೆ, ವಿಶ್ವ ಮಟ್ಟದಲ್ಲಿ ನಡೆಯುವ ದೊಡ್ಡ ಟೂರ್ನಿ ಎನಿಸಿಕೊಳ್ಳಲಿದ್ದು ಫುಟ್ಬಾಲ್​ ಅಭಿಮಾನಿಗಳ ಪಾಲಿಗೆ ದೊಡ್ಡ ಜಾತ್ರೆಯಾಗಿರಲಿದೆ. ಜುಲೈ 20ರಿಂದ ಆಗಸ್ಟ್​​ 20ರವರೆಗೆ ಟೂರ್ನಿ ನಡೆಯಲಿದೆ.

ಏಷ್ಯಾ ಕಪ್​ ಕ್ರಿಕೆಟ್

ಏಷ್ಯಾ ಕ್ರಿಕೆಟ್​ ಕೌನ್ಸಿಲ್​ ಅಯೋಜಿಸುವ ಏಷ್ಯಾ ಕಪ್​ ಕ್ರಿಕೆಟ್​ ಈ ಬಾರಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿದೆ. ಆದರೆ, ಟೂರ್ನಿ ಎಲ್ಲಿ ನಡೆಯುತ್ತದೆ ಎಂಬುದು ಇನ್ನೂ ಖಾತರಿಯಾಗಿಲ್ಲ. ಬಿಸಿಸಿಐ ಕಾರ್ಯದರ್ಶಿ ಜಯ್​ಶಾ ಅವರೇ ಏಷ್ಯಾ ಕ್ರಿಕೆಟ್​ ಕೌನ್ಸಿಲ್​ನ ಮುಖ್ಯಸ್ಥರಾಗಿರುವ ಕಾರಣ ಯುಎಇನಲ್ಲಿ ಆಯೋಜನೆಗೊಳ್ಳಬಹುದು ಎನ್ನಲಾಗಿದೆ. ಸೆಪ್ಟೆಂಬರ್​ 2ರಿಂದ 17ರವರೆಗೆ ಟೂರ್ನಿ ನಡೆಯಲಿದ್ದು, ಏಷ್ಯಾದ ಆರು ತಂಡಗಳು ಪಾಲ್ಗೊಳ್ಳಲಿವೆ. ಕಳೆದ ಬಾರಿ ಭಾರತ ತಂಡದ ಚಾಂಪಿಯನ್​ ಪಟ್ಟ ಅಲಂಕರಿಸಲು ವಿಫಲಗೊಂಡಿತ್ತು. ಈ ಬಾರಿ ಮತ್ತೊಂದು ಪ್ರಯತ್ನ ಮಾಡಲಿದೆ.

ವರ್ಲ್ಡ್​​ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​

ಹಂಗರಿಯ ಬುಡಾಪೆಸ್ಟ್​ನಲ್ಲಿ 19ನೇ ಆವೃತ್ತಿಯ ವರ್ಲ್ಡ್​ ಅಥ್ಲೆಟಿಕ್​ ಚಾಂಪಿಯನ್​ಶಿಪ್​ ನಡೆಯಲಿದೆ. ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ ಅವರು ಈ ಟೂರ್ನಿಯಲ್ಲಿ ಭಾರತದ ಪದಕದ ಭರವಸೆಯಾಗಿದ್ದಾರೆ. ಅವರು ಚಿನ್ನದ ಭರವಸೆ ಮೂಡಿಸಿದ್ದಾರೆ. 48 ಪದಕದ ಸ್ಪರ್ಧೆಗಳ ಇಲ್ಲಿ ನಡೆಯಲಿವೆ.

ಏಷ್ಯನ್ ಗೇಮ್ಸ್​

2022ರ ಸೆಪ್ಟೆಂಬರ್​ನಲ್ಲಿ ಚೀನಾದಲ್ಲಿ ನಡೆಯಬೇಕಾಗಿದ್ದ ಏಷ್ಯನ್ ಗೇಮ್ಸ್​ 2023ಕ್ಕೆ ಮುಂದೂಡಿಕೆಯಾಗಿದೆ. ಸೆಪ್ಟೆಂಬರ್​ 23ರಿಂದ ಅಕ್ಟೋಬರ್​ 8ರ ವರೆಗೆ ಈ ಬಹು ಕ್ರೀಡೆಗಳ ಕೂಟ ನಡೆಯಲಿದೆ. ಏಷ್ಯಾದ 45 ದೇಶಗಳು ಈ ಕೂಟದಲ್ಲಿ ನಡೆಯಲಿವೆ. 2018ರ ಏಷ್ಯಾ ಕಪ್​ನಲ್ಲಿ ಭಾರತ 1 5 ಚಿನ್ನ, 24 ಬೆಳ್ಳಿ ಹಾಗೂ 30 ಕಂಚಿನ ಪದಕಗಳನ್ನು ಗೆದ್ದಿತ್ತು. ಮುಂದಿನ ಆವೃತ್ತಿಯಲ್ಲಿ ಇದರ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆಯಿದೆ.

ಏಕ ದಿನ ವಿಶ್ವ ಕಪ್​

ಭಾರತದ ಆತಿಥ್ಯದಲ್ಲಿ ಐಸಿಸಿ ಏಕ ದಿನ ಕ್ರಿಕೆಟ್​ ವಿಶ್ವ ಕಪ್​ ನಡೆಯಲಿದೆ. ಅಕ್ಟೋಬರ್​ ಮತ್ತು ನವೆಂಬರ್​ ತಿಂಗಳಲ್ಲಿ ಈ ಟೂರ್ನಿ ನಡೆಯುವ ಸಾಧ್ಯತೆಗಳಿವೆ. ದಿನಾಂಕ ಇನ್ನೂ ಪ್ರಕಟಗೊಂಡಿಲ್ಲ. 2019ರಲ್ಲಿ ಇಂಗ್ಲೆಂಡ್​ ಆತಿಥ್ಯದಲ್ಲಿ ಟೂರ್ನಿ ನಡೆದು, ಆತಿಥೇಯ ತಂಡವೇ ಚಾಂಪಿಯನ್ ಆಗಿತ್ತು. 12 ವರ್ಷಗಳಿಂದ ಐಸಿಸಿ ಟ್ರೋಫಿಯ ಬರ ಎದುರಿಸುತ್ತಿರುವ ಭಾರತಕ್ಕೆ ಕಪ್ ಗೆಲ್ಲಲು ಇದು ಸುವರ್ಣವಕಾಶ. 2011ರಲ್ಲಿ ಭಾರತದಲ್ಲಿ ನಡೆದ ವಿಶ್ವ ಕಪ್​ನಲ್ಲಿ ಧೋನಿ ನೇತೃತ್ವದ ಭಾರತ ತಂಡ ಚಾಂಪಿಯನ್ ಆಗಿತ್ತು.

ಇನ್ನೇನು ಇವೆ?

ಉಳಿದಂತೆ ವಾರ್ಷಿಕವಾಗಿ ನಡೆಯುವ ಬ್ಯಾಡ್ಮಿಂಟನ್​ ಟೂರ್​ ಮತ್ತು ಚಾಂಪಿಯನ್​ಶಿಪ್​ಗಳು, ಹಾಕಿ ಟೂರ್​ಗಳು, ಕ್ರಿಕೆಟ್​ ದ್ವಿಪಕ್ಷೀಯ ಸರಣಿಗಳು, 2023ರ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್, ಬಾಕ್ಸಿಂಗ್, ಕುಸ್ತಿ, ಶೂಟಿಂಗ್​ ಕೂಟಗಳು ನಡೆಯಲಿವೆ.

ಇದನ್ನೂ ಓದಿ | Year Ender 2022 | ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ ನಾಯಕತ್ವದ ಏಳು, ಬೀಳುಗಳು

Continue Reading

Year End 2022

Year Ender 2022 | ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ ನಾಯಕತ್ವದ ಏಳು, ಬೀಳುಗಳು

ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ ಅವರು 2022ರಲ್ಲಿ ಎದುರಿಸಿದ ಜಯ ಹಾಗೂ ಅಪಜಯಗಳ ಹಿನ್ನೆಲೆ ಇಲ್ಲಿದೆ.

VISTARANEWS.COM


on

Asia Cup
Koo

ಬೆಂಗಳೂರು : ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಭಾರತ ಕ್ರಿಕೆಟ್​ ತಂಡ 2022ರಲ್ಲಿ ಜಯಾಪಜಯದ ಮಿಶ್ರ ಫಲವನ್ನು ಉಂಡಿದೆ. ದ್ವಿಪಕ್ಷೀಯ ಸರಣಿಯಲ್ಲಿ ಅದರಲ್ಲೂ ತವರು ನೆಲದಲ್ಲಿ ಅಮೋಘ ಪ್ರದರ್ಶನ ನೀಡಿರುವ ಭಾರತ ತಂಡ ಪ್ರಮುಖ ಟೂರ್ನಿಗಳಲ್ಲಿ ವೈಫಲ್ಯ ಕಂಡಿದೆ. ಆದಾಗ್ಯೂ ತನ್ನ ಪಾರಮ್ಯ ಮುಂದುವರಿಸುವ ಎಲ್ಲ ಸೂಚನೆ ನೀಡಿದೆ. ಆದರೆ, ವಿರಾಟ್​ ಕೊಹ್ಲಿ ಅವರಿಂದ ನಾಯಕತ್ವದ ಹೊಣೆಗಾರಿಕೆ ವಹಿಸಿಕೊಂಡ ನಾಯಕ ರೋಹಿತ್​ ಶರ್ಮ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಯಶಸ್ಸು ಕಂಡಿಲ್ಲ. ಗಾಯದ ಸಮಸ್ಯೆ, ಬ್ಯಾಟಿಂಗ್​ ವೈಫಲ್ಯ. ಏಷ್ಯಾ ಕಪ್​ ಮತ್ತು ಟಿ20 ವಿಶ್ವ ಕಪ್​ನ ನಿರಾಸೆ ಅವರ ಮುಂದಾಳತ್ವದ ಬಗ್ಗೆ ಪ್ರಶ್ನೆ ಮಾಡುವಂತೆ ಮಾಡಿದೆ.

ವಿರಾಟ್​ ಕೊಹ್ಲಿ ಟಿ20 ನಾಯಕತ್ವ ತ್ಯಜಿಸಿದ ಬಳಿಕ ಅವರನ್ನು ಏಕದಿನ ಮಾದರಿ ಹಾಗೂ ಟೆಸ್ಟ್​ ನಾಯಕತ್ವದಿಂದ ಹೊರಕ್ಕೆ ಇಡಲಾಯಿತು. ಈ ವೇಳೆ ಬಿಸಿಸಿಐ ಆಯ್ಕೆ ಸಮಿತಿಗೆ ರೋಹಿತ್​ ಶರ್ಮ ಅತ್ಯುತ್ತಮ ಆಯ್ಕೆ ಎನಿಸಿಕೊಂಡರು. ಐಪಿಎಲ್​ನಲ್ಲಿ ಐದು ಟ್ರೋಫಿ ಗೆದ್ದಿರುವ ಅವರಿಗೆ ಹೆಚ್ಚು ಯೋಚಿಸದೇ ಪಟ್ಟ ಕಟ್ಟಲಾಯಿತು. ಆದರೆ, ರೋಹಿತ್​ ಅವರ ಸಾಮರ್ಥ್ಯ ಮತ್ತು ಅದೃಷ್ಟ ಟೀಮ್​ ಇಂಡಿಯಾದ ನಾಯಕತ್ವ ವಹಿಸಿಕೊಂಡ ನಂತರ ಮುಂದುವರಿಯಲಿಲ್ಲ. ಬದಲಾಗಿ ಸೋಲು ಗೆಲುವಿನ ಗ್ರಾಫ್​ ಮೇಲೆ ಕೆಳಗೆ ಓಲಾಡಿತು. ಜತೆಗೆ ಟೀಮ್​ ಇಂಡಿಯಾದ ಸಹಾಯಕ ಸಿಬ್ಬಂದಿ ಬದಲಾದರು.

ಚೇತನ್​ ಶರ್ಮ ನೇತೃತ್ವದ ಆಯ್ಕೆ ಸಮಿತಿ ರೋಹಿತ್​ ಶರ್ಮ ಅವರನ್ನು ತಂಡದ ನಾಯಕರನ್ನಾಗಿ ಆಯ್ಕೆ ಮಾಡಿದಾಗ ಕ್ರಿಕೆಟ್​ ಅಭಿಮಾನಿಗಳು ದೊಡ್ಡ ಭರವಸೆ ಇಟ್ಟುಕೊಂಡಿದ್ದರು. ಆದರೆ ಯಶಸ್ಸು ದ್ವಿಪಕ್ಷೀಯ ಸರಣಿಗಷ್ಟೇ ಸೀಮಿತವಾಯಿತು . ಅದಕ್ಕಿಂತ ಹೆಚ್ಚಾಗಿ ರೋಹಿತ್​ ಶರ್ಮ ಅವರು ಗಾಯದ ಸಮಸ್ಯೆ ಹಾಗೂ ವಿಶ್ರಾಂತಿ ಎಂಬ ಕಾರಣಕ್ಕೆ ಹಲವು ಸರಣಿಗಳು ಹಾಗೂ ಪಂದ್ಯಗಳಿಗೆ ಅಲಭ್ಯರಾದರು. ಇದು ತಂಡದ ಸಂಯೋಜನೆಗೆ ಪೆಟ್ಟು ಕೊಟ್ಟಿತು.

ಏಳು ನಾಯಕರ ಗೊಂದಲ

ರೋಹಿತ್​ ಶರ್ಮ ಅವರ ಅಲಭ್ಯತೆಯ ಕಾರಣಕ್ಕೆ ಟೀಮ್​ ಇಂಡಿಯಾದ ನಾಯಕನ ಸ್ಥಾನ ಸಂಗೀತ ಕುರ್ಚಿಯಂತಾಯಿತು. ರಾಹುಲ್​, ಪಾಂಡ್ಯ, ರಿಷಭ್​, ಶಿಖರ್​ ಧವನ್, ಬುಮ್ರಾ​ ಸೇರಿದಂತೆ ಒಟ್ಟಾರೆ ಏಳು ನಾಯಕರನ್ನು ಕಂಡಿತು. ಜತೆಗೆ ತಂಡದ ಸ್ಥಿರತೆಗೂ ಪೆಟ್ಟು ಬಿತ್ತು.

ಭಾರತ ತಂಡ 2022ರಲ್ಲಿ ಒಟ್ಟು 71 ಅಂತಾರಾಷ್ಟ್ರಿಯ ಪಂದ್ಯಗಳನ್ನು ಆಡಿದ್ದರೆ, ರೋಹಿತ್​ 39ರಲ್ಲಿ ಮಾತ್ರ ಆಡಿದ್ದಾರೆ. 32 ಪಂದ್ಯಗಳಿಗೆ ಗಾಯ ಹಾಗೂ ಒತ್ತಡ ನಿರ್ವಹಣೆಯ ವಿಶ್ರಾಂತಿಗಾಗಿ ಅಲಭ್ಯರಾಗಿದ್ದಾರೆ. ಈ ಅವಧಿಯಲ್ಲಿ ಬೇರೆಬೇರೆ ನಾಯಕರನ್ನು ಹೀಗಾಗಿ, ಟೆಸ್ಟ್​ ಪಂದ್ಯಗಳನ್ನು 4 ನಾಯಕರು ಹಾಗೂ ಸೀಮಿತ ಓವರ್​ಗಳ ಕ್ರಿಕೆಟ್ ತಂಡವನ್ನು 5 ನಾಯಕರು ನಿರ್ವಹಿಸಿದರು.

ಫಿಟ್ನೆಸ್​ ಸಮಸ್ಯೆ

ನಾಯಕರಾಗಿ ಆಯ್ಕೆಯಾದ 34 ವರ್ಷದ ರೋಹಿತ್​ ಶರ್ಮ ಅವರು ಫಿಟ್ನೆಸ್​ ಸಮಸ್ಯೆಯನ್ನು ಎದುರಿಸಿದರು. ಅನಾರೋಗ್ಯ ಮತ್ತು ಗಾಯದ ಕಾರಣಕ್ಕೆ 9 ಪಂದ್ಯಗಳಲ್ಲಿ ಆಡಲಿಲ್ಲ. ಪುನಶ್ಚೇತನ ಹಾಗೂ ವಿಶ್ರಾಂತಿ ಎಂದು 22 ಪಂದ್ಯಗಳಿಗೆ ಅಲಭ್ಯರಾದರು. ಇಂಗ್ಲೆಂಡ್ ವಿರುದ್ಧ ಬಾಕಿ ಉಳಿದಿದ್ದ ಏಕೈಕ ಟೆಸ್ಟ್​ ಪಂದ್ಯ, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಗೆ ಅವರು ಅಲಭ್ಯರಾದರು. ಟೀಮ್​ ಇಂಡಿಯಾ ಪಾಲಿಗೆ ಇವೆಲ್ಲ ಪ್ರಮುಖ ಟೂರ್ನಿಗಳಾಗಿದ್ದವು. ಎರಡರಲ್ಲೂ ಭಾರತ ನಿರಾಸೆ ಎದುರಿಸಿತು.

ಯಾವ್ಯಾವ ಮಾದರಿಗೆ ರೋಹಿತ್​ ಅಲಭ್ಯ?

ಭಾರತ ಆಡಿದ್ದ 7 ಟೆಸ್ಟ್​ ಪಂದ್ಯಗಳಲ್ಲಿ ರೋಹಿತ್​ 5 ಪಂದ್ಯಗಳಲ್ಲಿ ಇರಲಿಲ್ಲ. ಎಲ್ಲವನ್ನೂ ಗಾಯದ ಕಾರಣಕ್ಕೆ ಕಳೆದುಕೊಂಡರು. 24 ಏಕ ದಿನ ಕ್ರಿಕೆಟ್​ ಪಂದ್ಯದಲ್ಲಿ 16 ಪಂದ್ಯಗಳಲ್ಲಿ ಆಡಲಿಲ್ಲ. 12 ಪಂದ್ಯಗಳಿಂದ ವಿಶ್ರಾಂತಿ ಪಡೆದುಕೊಂಡರೆ 4 ಪಂದ್ಯಗಳಲ್ಲಿ ಗಾಯದ ಸಮಸ್ಯೆ ಎದುರಿಸಿದರು. 40 ಟಿ20 ಪಂದ್ಯಗಳಲ್ಲಿ 11ರಲ್ಲಿ ಆಡಲಿಲ್ಲ. ಈ ಎಲ್ಲ ಪಂದ್ಯಗಳಲ್ಲಿ ಅವರಿಗೆ ವಿಶ್ರಾಂತಿ ಕಲ್ಪಿಸಲಾಗಿತ್ತು.

ಕೂಲ್​ ಕಳೆದುಕೊಂಡ ಕ್ಯಾಪ್ಟನ್​

ಐಪಿಎಲ್​ನಲ್ಲಿ ಐದು ಟ್ರೋಫಿ ಗೆದ್ದಿರುವ ರೋಹಿತ್​ ಶರ್ಮ ಶಾಂತ ಮೂರ್ತಿಯಂತೆ ಕಂಡಿದ್ದರು. ಆದರೆ, ಟೀಮ್​ ಇಂಡಿಯಾದಲ್ಲಿ ಅವರು ತಾಳ್ಮೆ ಕಳೆದುಕೊಂಡಿದ್ದರು. ತಂಡ ಸೋಲಿನ ಹಾದಿಯಲ್ಲಿದ್ದಾಗ ಒತ್ತಡಕ್ಕೆ ಬೀಳಲು ಆರಂಭಿಸಿದರು. ತಪ್ಪು ನಿರ್ಧಾರಗಳನ್ನು ತೆಗೆದುಕೊಂಡರು. ತಂಡದ ಸಹ ಸದಸ್ಯರನ್ನು ಕೆಟ್ಟ ಪದಗಳಿಂದ ನಿಂದಿಸಿದರು.

ಏಷ್ಯಾ ಕಪ್​ನಲ್ಲಿ ಭಾರತ ತಂಡ ಗ್ರೂಪ್​ 4ರ ಹಂತದಲ್ಲಿ ಹೊರಕ್ಕೆ ಬಿತ್ತು. ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡದ ವಿರುದ್ಧದವೇ ಸೋತಿತು. ಇದು ರೋಹಿತ್​ ನಾಯಕತ್ವದ ಸಾಮರ್ಥ್ಯವನ್ನೇ ಪ್ರಶ್ನಿಸುವಂತೆ ಮಾಡಿತು. ರೋಹಿತ್​ ಶರ್ಮ ನಾಯಕತ್ವದೊಂದಿಗೆ ಆಸ್ಟ್ರೇಲಿಯಾಗೆ ವಿಶ್ವ ಕಪ್​ಗೆ ತೆರಳಿದ್ದ ಭಾರತ ತಂಡಕ್ಕೂ ನಿರಾಸೆ ಉಂಟಾಯಿತು. ಸೆಮಿಫೈನಲ್​ನಲ್ಲಿ ಇಂಗ್ಲೆಂಡ್​ ವಿರುದ್ಧ 10 ವಿಕೆಟ್​ ಸೋಲನುಭವಿಸಿ ದೊಡ್ಡ ಬೆಲೆ ತೆರಬೇಕಾಯಿತು.

ರೋಹಿತ್​- ವಿರಾಟ್​ ನಡುವಿನ ತುಲನೆ

ವಿರಾಟ್​ ಕೊಹ್ಲಿ 68 ಟೆಸ್ಟ್​ ಪಂದ್ಯಗಳಿಗೆ ನಾಯಕರಾಗಿದ್ದು, 54.80 ಸರಾಸರಿಯಂತೆ 5864 ರನ್ ಬಾರಿಸಿದ್ದಾರೆ. ರೋಹಿತ್​ ಶರ್ಮ ಎರಡು ಟೆಸ್ಟ್​ ಪಂದ್ಯಗಳಲ್ಲಿ ಆಡಿದ್ದು, 30 ಸರಾಸರಿಯಂತೆ 90 ರನ್ ಬಾರಿಸಿದ್ದಾರೆ. ವಿರಾಟ್​ 95 ಏಕ ದಿನ ಪಂದ್ಯಗಳಲ್ಲಿ ಆಡಿದ್ದು 72.65 ಸರಾಸರಿಯಂತೆ 5449 ರನ್​ ಬಾರಿಸಿದ್ದಾರೆ. ರೋಹಿತ್​ 8 ಏಕ ದಿನ ಪಂದ್ಯದಲ್ಲಿ 41.50 ಸರಾಸರಿಯಂತೆ 249 ರನ್​ ಬಾರಿಸಿದ್ದಾರೆ. ವಿರಾಟ್​ 50 ಟಿ20 ಪಂದ್ಯಗಳಿಗೆ ನಾಯಕರಾಗಿದ್ದು 47.57 ಸರಾಸರಿಯಂತೆ 1570 ರನ್​ ಬಾರಿಸಿದ್ದಾರೆ. ರೋಹಿತ್​ 32 ಪಂದ್ಯಗಳಲ್ಲಿ 27.16 ಸರಾಸರಿಯಂತೆ 815 ರನ್​ ಬಾರಿಸಿದ್ದಾರೆ.

ಇದನ್ನೂ ಓದಿ | INDvsBAN | ರೋಹಿತ್​ ಶರ್ಮಗೆ ಮನೆಯಲ್ಲೇ ಕುಳಿತುಕೊಳ್ಳಲು ಹೇಳಿ; ಹೀಗೆಂದಿದ್ದು ಯಾರು?

Continue Reading
Advertisement
Supreme Court Says than actions must be taken against hate speeches
ಕೋರ್ಟ್6 mins ago

Hate Speeches: ದ್ವೇಷ ಭಾಷಣಗಳ ವಿರುದ್ಧ ಕ್ರಮ ಜರುಗಿಸಲೇಬೇಕು! ಸರ್ಕಾರಗಳಿಗೆ ಸುಪ್ರೀಂ ತಾಕೀತು

Fashion Show
ದೇಶ42 mins ago

Fashion Show : ಏಕತೆಗೆ ಧಕ್ಕೆ; ಫ್ಯಾಶನ್​ ಶೋದಲ್ಲಿ ಬುರ್ಖಾ ಹಾಕಿದ್ದಕ್ಕೆ ಮುಸ್ಲಿಂ ನಾಯಕನ ಆಕ್ಷೇಪ!

kalpamrutha cold pressed oil production unit inaugurated
ಕರ್ನಾಟಕ43 mins ago

ಕಲ್ಪಾಮೃತ ಶುದ್ಧ ಗಾಣದ ಎಣ್ಣೆ ಉತ್ಪಾದನಾ ಘಟಕಕ್ಕೆ ಚಾಲನೆ

Gadaga accident two bike riders dead
ಕರ್ನಾಟಕ43 mins ago

Road Accident : ಸೋದರನ ನಿಶ್ಚಿತಾರ್ಥ ಮುಗಿಸಿ ಹೊರಟ ಇಬ್ಬರು ಅಪಘಾತದಲ್ಲಿ ಮೃತ್ಯು

Anju who went to Pakistan for to marry her lover, returns to India
ದೇಶ45 mins ago

Anju Love Story: ಪಾಕ್‌ಗೆ ಹೋಗಿ ಪ್ರಿಯಕರನ ಮದ್ವೆಯಾಗಿದ್ದ ಅಂಜು ಭಾರತಕ್ಕೆ ವಾಪಸ್!

vijaypura accident
ಕರ್ನಾಟಕ59 mins ago

Road Accident : ಕಬ್ಬು ತುಂಬಿದ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

Task force committee meeting at Kottur
ವಿಜಯನಗರ1 hour ago

Vijayanagara News: ಮೂಲ ಸೌಕರ್ಯಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಿ: ಶಾಸಕ ನೇಮಿರಾಜ ನಾಯ್ಕ

Pooja Gandhi and Vijay Ghorpade
ಕರ್ನಾಟಕ1 hour ago

Pooja Gandhi: ಮಳೆ ಹುಡುಗಿಗೆ ಮಂತ್ರ ಮಾಂಗಲ್ಯ; ಹೊಸ ಬಾಳಿಗೆ ಕಾಲಿಟ್ಟ ಪೂಜಾ ಗಾಂಧಿ

Bombay High court orders to son to vacate his mother flat
ಕೋರ್ಟ್1 hour ago

ಆರೈಕೆ ಮಾಡದ ಮಗನಿಗೆ ತಾಯಿಯ ಫ್ಲ್ಯಾಟ್ ಖಾಲಿ ಮಾಡಲು ಬಾಂಬೆ ಹೈಕೋರ್ಟ್ ಆದೇಶ

TV Mohandas Pai Priyank Kharge
ಕರ್ನಾಟಕ2 hours ago

Mohandas Pai : ಐಟಿ ಸಿಟಿ ಗರಿ ಉದುರೀತು ಎಂದ ಮೋಹನ್‌ ದಾಸ್‌ ಪೈ, ಪ್ರಿಯಾಂಕ್‌ ತಿರುಗೇಟು

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ4 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ6 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Dina Bhavishya
ಪ್ರಮುಖ ಸುದ್ದಿ17 hours ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್‌ ಎಚ್ಚರಿಕೆ

CM Janatha Darshana solved mysore citizens problem
ಕರ್ನಾಟಕ2 days ago

Janatha Darshan : ಮಾಲೀಕನ ಮನೆ ಹರಾಜು; ಲೀಸ್‌ ದುಡ್ಡಿಗೆ ಯಾರು ಗ್ಯಾರಂಟಿ? ಕಂಗೆಟ್ಟ ಕುಟುಂಬಕ್ಕೆ ಸಿಎಂ ರಕ್ಷಣೆ!

Shivajingar School building collapses The children escaped unhurt
ಕರ್ನಾಟಕ2 days ago

Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಿಎಂಗೆ ದೂರು ನೀಡಬೇಕೇ? ಜನತಾ ದರ್ಶನಕ್ಕೆ ಹೋಗಬೇಕಿಲ್ಲ; ಈ ನಂಬರ್‌ಗೆ ಕರೆ ಮಾಡಿ!

read your daily horoscope predictions for november 27 2023
ಪ್ರಮುಖ ಸುದ್ದಿ3 days ago

Dina Bhavishya: ನಿಮ್ಮನ್ನು ಉರುಳಿಸಲು ಪಿತೂರಿ ಮಾಡ್ತಾರೆ ಹುಷಾರ್‌!

Danger Influenza People are suffering from the flu
ಆರೋಗ್ಯ3 days ago

Viral fever: ಡೆಡ್ಲಿ ಚೀನಾ ವೈರಸ್‌; ಮಕ್ಕಳಿಗೆ ಇದರಿಂದ ಅಪಾಯ ಇದೆಯಾ?

ಟ್ರೆಂಡಿಂಗ್‌