ನಾಗಿನ್‌ ಹಾರ್ನ್‌ ಸದ್ದಿಗೆ ರಸ್ತೆಯಲ್ಲೇ ಕುಣಿದ ಯುವಕರು, ವಿಡಿಯೋ ವೈರಲ್ - Vistara News

ಪ್ರಮುಖ ಸುದ್ದಿ

ನಾಗಿನ್‌ ಹಾರ್ನ್‌ ಸದ್ದಿಗೆ ರಸ್ತೆಯಲ್ಲೇ ಕುಣಿದ ಯುವಕರು, ವಿಡಿಯೋ ವೈರಲ್

ಲಾರಿಯೊಂದರ ನಾಗಿಣಿ ಡ್ಯಾನ್ಸ್‌ ಮಾದರಿಯ ಹಾರ್ನ್‌ ಸದ್ದಿಗೆ ಯುವಕರು ಬೈಕ್‌ ನಿಲ್ಲಿಸಿ ರಸ್ತೆಯಲ್ಲಿಯೇ ಉರುಳಾಡಿ ಡ್ಯಾನ್ಸ್‌ ಮಾಡಿದ ದೃಶ್ಯವೀಗ ವೈರಲ್‌ ಆಗಿದೆ.

VISTARANEWS.COM


on

nagini dance
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗಾವಿ:‌ ಲಾರಿ ಚಾಲಕನೊಬ್ಬ ಮಾಡಿದ ನಾಗಿಣಿ ಹಾರ್ನ್ ಸೌಂಡ್‌ಗೆ ನಡುರಸ್ತೆಯಲ್ಲೇ ಯುವಕರು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ.

ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬೈಕ್‌ಗಳಲ್ಲಿ ಹೋಗುತ್ತಿದ್ದ ಯುವಕರ ಹಿಂದಿನಿಂದ ಲಾರಿ ಬಂದಿದೆ. ಲಾರಿ ಚಾಲಕ ನಾಗಿನಿ ರೀತಿಯಲ್ಲಿ ಹಾರ್ನ್‌ ಧ್ವನಿ ಮಾಡಿದ್ದಾನೆ. ಇದರಿಂದ ಉತ್ಸಾಹ ತುಂಬಿಕೊಂಡ ಯುವಕರು ಬೈಕ್‌ಗಳನ್ನು ಅಲ್ಲಲ್ಲೇ ನಿಲ್ಲಿಸಿ, ಲಾರಿಯನ್ನು ಅಡ್ಡ ಹಾಕಿ ರಸ್ತೆಯಲ್ಲೇ ಕುಣಿದು ಕುಪ್ಪಳಿಸಿದ್ದಾರೆ. ಮಳೆಯಿಂದ ರಸ್ತೆ ಒದ್ದೆಯಾಗಿದ್ದರೂ ಲೆಕ್ಕಿಸದೆ ರಸ್ತೆಯಲ್ಲಿ ಉರುಳಾಡಿ ಕುಣಿದಾಡಿದ್ದಾರೆ. ಈ ನರ್ತನ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್‌ ಆಗುತ್ತಿದೆ.

ಇದನ್ನೂ ನೋಡಿ: ಅಮರನಾಥ ದುರಂತದ ಭಯಂಕರ ಕ್ಷಣ ಹೀಗಿತ್ತು: ವಿಡಿಯೋ ವೈರಲ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

ವಿಸ್ತಾರ ಸಂಪಾದಕೀಯ: ಯುಪಿಎಸ್‌ಸಿ ಸಾಧಕರ ಕತೆಗಳು ಇತರರಿಗೆ ಸ್ಫೂರ್ತಿಯಾಗಲಿ

ಈ ಬಾರಿಯ ಯುಪಿಎಸ್‌ಸಿ ಸಾಧಕರ ಕತೆಗಳು, ಮುಂದಿನ ದಿನಗಳಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿವೆ.

VISTARANEWS.COM


on

UPSC Results 2023
Koo

ಕೇಂದ್ರ ಲೋಕ ಸೇವಾ ಆಯೋಗ (UPSC) ನಡೆಸಿದ ನಾಗರಿಕ ಸೇವೆಗಳ ಪರೀಕ್ಷೆಯ (UPSC Results 2023) ಫಲಿತಾಂಶ ಪ್ರಕಟವಾಗಿದೆ. ಅನೇಕ ಸಾಧಕರು ತಮ್ಮ ಸಾಧನೆಯ ವಿಜಯಧ್ವಜಗಳನ್ನು ಹಾರಿಸಿದ್ದಾರೆ. ಉತ್ತರ ಪ್ರದೇಶದ ಆದಿತ್ಯ ಶ್ರೀವಾಸ್ತವ್‌ ಅವರು ದೇಶದಲ್ಲೇ ಮೊದಲ ರ‍್ಯಾಂಕ್‌ ಗಳಿಸಿದ್ದಾರೆ. ಅನಿಮೇಶ್ ಪ್ರಧಾನ್, ಡೊನೂರು ಅನನ್ಯಾ ರೆಡ್ಡಿ ಮುಂತಾದವರು ಎರಡು ಮತ್ತು ಮೂರನೇ ರ‍್ಯಾಂಕ್‌ ಪಡೆದಿದ್ದಾರೆ. ಕರ್ನಾಟಕದಲ್ಲೂ ಈ ಪರೀಕ್ಷೆಯನ್ನು ಗೆದ್ದ ಅನೇಕ ಮಂದಿಯ ಸಾಧನೆಯ ಕತೆಗಳು ಸ್ಫೂರ್ತಿದಾಯಕವಾಗಿವೆ.

ಐಐಟಿ ಕಾನ್ಪುರದಲ್ಲಿ ಎಂ.ಟೆಕ್‌ ಸ್ನಾತಕೋತ್ತರ ಪದವಿ ಪಡೆದ ಆದಿತ್ಯ ಶ್ರೀವಾಸ್ತವ ಹಣಕಾಸು ಕೊರತೆ ಪರಿಸ್ಥಿತಿಯ ಹಿನ್ನೆಲೆಯಲ್ಲಿ 15 ತಿಂಗಳು ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು. ಆದರೆ, ಐಎಎಸ್‌ ಅಧಿಕಾರಿಯಾಗಬೇಕು ಎಂಬ ಕನಸು ಹೊತ್ತ ಇವರು ಎಲೆಕ್ಟ್ರಿಕಲ್‌ ಎಂಜಿನಿಯರ್ ಉದ್ಯೋಗ ಬಿಟ್ಟು ಐಎಎಸ್‌ಗೆ ಅಧ್ಯಯನ ಮಾಡಲು ಆರಂಭಿಸಿದರು. 2017ರಿಂದಲೂ ಸತತ ಪ್ರಯತ್ನ ನಡೆಸಿ, ಈಗ ಯುಪಿಎಸ್‌ಸಿಯಲ್ಲಿ ಮೊದಲ ರ‍್ಯಾಂಕ್‌ ಗಳಿಸಿದ್ದಾರೆ.

ಇದನ್ನೂ ಓದಿ | UPSC Results 2023: ಕನ್ನಡದಲ್ಲೇ ಯುಪಿಎಸ್‌ಸಿ ಪರೀಕ್ಷೆ ಬರೆದು ಪಾಸ್‌ ಆದ ಪೊಲೀಸ್‌ ಅಧಿಕಾರಿ!

ದೇಶದಲ್ಲಿ 100ನೇ ರ‍್ಯಾಂಕ್‌ ಪಡೆದ ವಿಜಯಪುರ ಮೂಲದ ವಿಜೇತಾ ಬಿ. ಹೊಸಮನಿ, ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಎಲ್‌ಕೆಜಿಯಿಂದ 5ನೇ ಕ್ಲಾಸ್‌ವರೆಗೆ ವಿಜಯಪುರದ ಸೈನಿಕ ಶಾಲೆಯಲ್ಲಿ ಓದಿದ ವಿಜೇತಾ ಗುಜರಾತಿನ ನ್ಯಾಷನಲ್ ಲಾ ಯುನಿವರ್ಸಿಟಿಯಲ್ಲಿ ಬಿಎ, ಎಲ್‌ಎಲ್‌ಬಿ ಪದವಿ ಪಡೆದಿದ್ದು, ಕ್ರಿಮಿನಲ್ ಲಾದಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದಾರೆ. 2020ರಿಂದ ಮೂರು ಬಾರಿ ಯುಪಿಎಸ್ಸಿ ಪರೀಕ್ಷೆ ಎದುರಿಸಿದ್ದು, ಆನ್‌ಲೈನ್ ತರಬೇತಿ ಹಾಗೂ ಮನೆಯಲ್ಲೇ ಹೆಚ್ಚಿನ ಅಭ್ಯಾಸ ಮಾಡಿ ಇವರು ಸಾಧನೆ ಮಾಡಿದ್ದಾರೆ. ಇಂಡಿಯನ್ ರೆವೆನ್ಯೂ ಸರ್ವೀಸ್‌ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ 2ನೇ ಸ್ಥಾನ ಪಡೆದ ದಾವಣಗೆರೆಯ ಸೌಭಾಗ್ಯ ಎಸ್. ಬೀಳಗಿಮಠ್ (101ನೇ ರ‍್ಯಾಂಕ್‌) ಬಿಎಸ್ಸಿ ಅಗ್ರಿಕಲ್ಚರ್ ಪದವಿ ಪಡೆದಿದ್ದಾರೆ. ಇವರ ತಂದೆ ರೈತರು. 939ನೇ ರ‍್ಯಾಂಕ್‌ ಪಡೆದ ಕೋಲಾರದ ಯುವಕ, ಶಿಕ್ಷಕ ದಂಪತಿ ಪುತ್ರ ಗೌತಮ್ ಮತ್ತೊಂದು ಬಾರಿ ಪರೀಕ್ಷೆ ಬರೆಯುವುದಾಗಿ ಹೇಳಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡು ಯುಪಿಎಸ್ಸಿಗೆ ಇವರು ತಯಾರಿ ನಡೆಸಿದ್ದರು.

644ನೇ ರ‍್ಯಾಂಕ್‌ ಪಡೆದ ಬಳ್ಳಾರಿಯ ಶಾಂತಪ್ಪ ಕುರುಬರ್ ಕತೆ ಕುತೂಹಲಕಾರಿಯಾಗಿದೆ. ಬಳ್ಳಾರಿಯಿಂದ ಬೆಂಗಳೂರಿಗೆ ವಲಸೆ ಬಂದ ಶಾಂತಪ್ಪ, ನಿರಂತರ ಕಷ್ಟದಲ್ಲಿ ಬೆಳೆದಿದ್ದು, ಪಿಯುಸಿಯಲ್ಲಿ ಎರಡು ಬಾರಿ ಫೇಲ್ ಆಗಿದ್ದವರು. ತಾಯಿ ಕೂಲಿ ಕೆಲಸ ಮಾಡಿ ಇವರನ್ನು ಸಾಕಿದ್ದಾರೆ. ಇವರು PSI ಹುದ್ದೆಯಲ್ಲಿದ್ದು, ಕೆಲಸದ ಜೊತೆಜೊತೆಗೇ ಕನ್ನಡದಲ್ಲೇ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದರು. ಜೊತೆಗೆ ಕನ್ನಡದಲ್ಲೇ ಪರೀಕ್ಷೆ ಬರೆದು ಪಾಸಾಗಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿರುವ ಶಾಂತಪ್ಪ ಕುರುಬರ್ ಬೆಂಗಳೂರಿನ ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಲ್ಲಿ ಸಾರ್ವಜನಿಕರಿಗಾಗಿ 10 ಮೊಬೈಲ್‌ ಟಾಯ್ಲೆಟ್‌ ವ್ಯವಸ್ಥೆ ಮಾಡಿದ್ದಾರೆ. ಹಿಂದೊಮ್ಮೆ ಅವರ ತಾಯಿಗೆ ಆದ ಪ್ರಯಾಸದ ಅನುಭವದಿಂದ, ಇನ್ಯಾರಿಗೂ ಇಂಥ ತೊಂದರೆ ಆಗದಿರಲಿ ಎಂದು, ಸಾರ್ವಜನಿಕರಿಗಾಗಿ ಮೊಬೈಲ್‌ ಟಾಯ್ಲೆಟ್‌ಗಳ ವ್ಯವಸ್ಥೆ ಮಾಡಿದವರು ಇವರು.

ಇದನ್ನೂ ಓದಿ | UPSC Results 2023: ಯುಪಿಎಸ್‌ಸಿಯಲ್ಲಿ ವಿಜಯಪುರದ ವಿಜೇತಾ ರಾಜ್ಯಕ್ಕೆ ಪ್ರಥಮ, 20ಕ್ಕೂ ಹೆಚ್ಚು ಮಂದಿ ತೇರ್ಗಡೆ

ಸಾಧಕರ ಇಂಥ ಕತೆಗಳು ಇತರ ವಿದ್ಯಾರ್ಥಿಗಳಿಗೆ, ಮುಂದಿನ ವರ್ಷಗಳಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಮುಂದಾಗುವವರಿಗೆ ಸ್ಫೂರ್ತಿದಾಯಕವಾಗಿವೆ. ಕಷ್ಟಗಳನ್ನು ಹೊಂದಿರುವವರು, ಕಷ್ಟಗಳಲ್ಲಿ ಬೆಳೆದವರು, ಶ್ರೀಮಂತ ಹಿನ್ನೆಲೆಯಿಲ್ಲದವರು ಓದಿ ಪರೀಕ್ಷೆ ಬರೆದು ರ‍್ಯಾಂಕ್‌ಗಳನ್ನು ಪಡೆದಿದ್ದಾರೆ. ಶ್ರೀಮಂತ ಹಿನ್ನೆಲೆಯ, ಇಂಗ್ಲಿಷ್‌ನಲ್ಲಿಯೇ ಆರಂಭಿಕ ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳು ಮಾತ್ರ ಇಂಥ ಪರೀಕ್ಷೆಗಳನ್ನು ಬರೆಯಬಹುದು ಎಂಬ ಮಿಥ್ಯೆಯೊಂದು ಬೇರೂರಿದೆ. ಇದನ್ನು ಹೋಗಲಾಡಿಸಲು ಇಂಥ ಫಲಿತಾಂಶಗಳು ನೆರವಾಗುತ್ತವೆ. ದಿನವಿಡೀ ಡ್ಯೂಟಿ ಮಾಡಬೇಕಾದ ಪೊಲೀಸ್‌ ಒಬ್ಬರು ಯುಪಿಎಸ್‌ಸಿ ಪರೀಕ್ಷೆ ಬರೆದು ರ‍್ಯಾಂಕ್‌ ಗಳಿಸಬಹುದಾದರೆ, ಇತರರು ಯಾಕೆ ಮಾಡಲು ಸಾಧ್ಯವಿಲ್ಲ? ಹತ್ತು ಸಲ ಪರೀಕ್ಷೆ ಬರೆದು ಹಿನ್ನಡೆ ಕಂಡವರೂ, ಹನ್ನೊಂದನೇ ಸಲ ಪರೀಕ್ಷೆಯಲ್ಲಿ ಸಾಧನೆ ಮಾಡಬಹುದು ಎಂಬುದು ಕೂಡ ಧನಾತ್ಮಕ ಸಂದೇಶ ನೀಡುವಂಥದು. ಇವರ ಸಾಧನೆಗಳು ಭವಿಷ್ಯದ ಸಾಧಕರಿಗೆ ದಾರಿದೀಪವಾಗಲಿ.

Continue Reading

ಪ್ರಮುಖ ಸುದ್ದಿ

Ram Navami : ಇಂದು ದೇಶಾದ್ಯಂತ ರಾಮ ನವಮಿ ಸಂಭ್ರಮ; ಏನು ಈ ದಿನದ ಮಹತ್ವ?

Ram Navami : ರಾಮ ನವಮಿಯಂದು ಸಾಮಾನ್ಯವಾಗಿ ರಾಮ ಭಕ್ತರು (Ram Bhaktas) ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಹಲವಾರು ಮಂದಿ ಉಪವಾಸ (fasting) ವ್ರತವನ್ನು ಆಚರಿಸುತ್ತಾರೆ. ದೇವಾಲಯಗಳಲ್ಲಿ (temple) ಆಧ್ಯಾತ್ಮಕ ಪ್ರವಚನ, ಭಜನೆ, ಸಂಕೀರ್ತನೆಗಳನ್ನು ಆಯೋಜಿಸಲಾಗುತ್ತದೆ. ತೊಟ್ಟಿಲಲ್ಲಿ ಪುಟ್ಟ ರಾಮನನ್ನು ಇಟ್ಟು ತೂಗಿ ಪೂಜೆ ಸಲ್ಲಿಸಲಾಗುತ್ತದೆ. ಒಟ್ಟಿನಲ್ಲಿ ಈ ದಿನ ಎಲ್ಲರೂ ರಾಮನ ಭಕ್ತಿಯಲ್ಲಿ ಮಿಂದೇಳುತ್ತಾರೆ.

VISTARANEWS.COM


on

Ram Navami
Koo

ಪ್ರತಿ ವರ್ಷದಂತೆ ಈ ಬಾರಿಯು ಭಗವಾನ್ ಶ್ರೀ ರಾಮನ (sriram) ಜನ್ಮ ದಿನವಾದ ರಾಮ ನವಮಿ (Ram Navami) ಮತ್ತೆ ಬಂದಿದೆ. ದೇಶಾದ್ಯಂತ ರಾಮ ನವಮಿ ಉತ್ಸವಕ್ಕೆ ರಾಮ ಭಕ್ತರು ಸಜ್ಜಾಗಿದ್ದಾರೆ. ರಾಮ ಮಂದಿರಗಳನ್ನೂ (ram mandir) ಸುಂದರವಾಗಿ ಅಲಂಕರಿಸಿ ಅತ್ಯಂತ ವೈಭವದಿಂದ ಉತ್ಸವವನ್ನು ಆಚರಿಸಲು ಸಿದ್ದತೆಗಳು ಭರದಿಂದ ಸಾಗುತ್ತಿದೆ.

ರಾಮ ನವಮಿಯಂದು ಸಾಮಾನ್ಯವಾಗಿ ರಾಮ ಭಕ್ತರು (Ram Bhaktas) ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಹಲವಾರು ಮಂದಿ ಉಪವಾಸ (fasting) ವ್ರತವನ್ನು ಆಚರಿಸುತ್ತಾರೆ. ದೇವಾಲಯಗಳಲ್ಲಿ (temple) ಆಧ್ಯಾತ್ಮಕ ಪ್ರವಚನ, ಭಜನೆ, ಸಂಕೀರ್ತನೆಗಳನ್ನು ಆಯೋಜಿಸಲಾಗುತ್ತದೆ. ತೊಟ್ಟಿಲಲ್ಲಿ ಪುಟ್ಟ ರಾಮನನ್ನು ಇಟ್ಟು ತೂಗಿ ಪೂಜೆ ಸಲ್ಲಿಸಲಾಗುತ್ತದೆ. ಒಟ್ಟಿನಲ್ಲಿ ಈ ದಿನ ಎಲ್ಲರೂ ರಾಮನ ಭಕ್ತಿಯಲ್ಲಿ ಮಿಂದೇಳುತ್ತಾರೆ.

ರಾಮ ನವಮಿ ಆಚರಣೆ ಯಾವಾಗ?

ಶ್ರೀ ರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಜನಿಸಿದ್ದಾನೆ. ಹೀಗಾಗಿ ಹಿಂದೂ ಚಾಂದ್ರಮಾನ ಪಂಚಾಂಗದಲ್ಲಿ ಬರುವ ಏಪ್ರಿಲ್ 17 ಬುಧವಾರದಂದು ರಾಮನವಮಿಯನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ:

ರಾಮ ನವಮಿ ದಿನ ಮಧ್ಯಾಹ್ನ ಗಂಟೆ 11.03 ರಿಂದ 1.38 ವಿಶೇಷವೆಂದು ಪರಿಗಣಿಸಲಾಗಿದೆ. ರಾಮ ನವಮಿ ತಿಥಿಯು ಏಪ್ರಿಲ್ 16ರಂದು ಬೆಳಗ್ಗೆ 1.23ಕ್ಕೆ ಪ್ರಾರಂಭವಾಗಿ ಏಪ್ರಿಲ್ 17ರಂದು ರಾತ್ರಿ 3.14 ಕ್ಕೆ ಮುಕ್ತಾಯವಾಗುತ್ತದೆ.

ರಾಮ ನವಮಿಯ ಇತಿಹಾಸವೇನು?

ಹಿಂದೂ ಪುರಾಣಗಳಲ್ಲಿ ಅತ್ಯಂತ ಶ್ರೇಷ್ಠ ವ್ಯಕ್ತಿಯೆಂದೇ ಪರಿಗಣಿಸಲ್ಪಟ್ಟಿರುವ ಭಗವಾನ್ ರಾಮನ ರಾಮ ನವಮಿಯಂದು ಜನ್ಮ ತಾಳಿದ್ದನು. ಹಿಂದೂ ಕ್ಯಾಲೆಂಡರ್‌ನಲ್ಲಿ ಸಾಂಪ್ರದಾಯಿಕವಾಗಿ ಚೈತ್ರ ಮಾಸದ ಒಂಬತ್ತನೇ ದಿನದಂದು ರಾಮ ನವಮಿಯನ್ನು ಆಚರಿಸಲಾಗುತ್ತದೆ. ಶ್ರೀರಾಮನು ವಿಷ್ಣುವಿನ ಏಳನೇ ಅವತಾರವೆಂದು ನಂಬಲಾಗುತ್ತದೆ. ಸದಾಚಾರ ಮತ್ತು ಸದ್ಗುಣಗಳ ಪ್ರತಿಪಾದಕನೆಂದು ರಾಮನನ್ನು ಕರೆಯಲಾಗುತ್ತದೆ. ಅನೇಕ ಶತಮಾನಗಳಿಂದ ರಾಮ ನವಮಿಯನ್ನು ಅತ್ಯಂತ ವೈಭವಾಗಿ ಆಚರಿಸಲಾಗುತ್ತದೆ.

ರಾಮ ನವಮಿ ಆಚರಣೆ ಏಕೆ ?

ಪ್ರಪಂಚದಾದ್ಯಂತದ ಹಿಂದೂಗಳು ಅಪಾರ ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದ್ದಾರೆ. ರಾಮ ನವಮಿಯು ಧರ್ಮ ಅಥವಾ ಸದಾಚಾರದ ನಿರಂತರ ಮೌಲ್ಯಗಳನ್ನು ಗೌರವಿಸುವ ಆಚರಣೆಯಾಗಿದೆ. ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಇದು ಸೂಚಿಸುತ್ತದೆ. ಭಗವಾನ್ ರಾಮನ ಕರ್ತವ್ಯ, ಗೌರವ ಮತ್ತು ತ್ಯಾಗದ ಉದಾಹರಣೆಯು ಜನರಲ್ಲಿ ನೈತಿಕ ತತ್ತ್ವ ಗಳನ್ನು ಸಂರಕ್ಷಿಸಲು ಮತ್ತು ಸದ್ಗುಣಶೀಲ ಜೀವನವನ್ನು ನಡೆಸಲು ಪ್ರೇರೇಪಿಸುತ್ತದೆ.

ಹೇಗೆ ಆಚರಣೆ ?

ರಾಮ ನವಮಿಯನ್ನು ಭಾರತದಲ್ಲಿ ಜನರು ಬಹಳ ಉತ್ಸಾಹ ಮತ್ತು ಆಸಕ್ತಿಯಿಂದ ಆಚರಿಸುತ್ತಾರೆ. ಭಗವಾನ್ ರಾಮನ ಸಣ್ಣ ವಿಗ್ರಹವನ್ನು ಪೀಠದ ಮೇಲೆ ಇರಿಸಲಾಗುತ್ತದೆ. ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ಅಲಂಕರಿಸಲಾಗುತ್ತದೆ. ಮನೆ ಬಾಗಿಲಲ್ಲಿ ರಂಗೋಲಿಗಳನ್ನು ಬರೆಯಲಾಗುತ್ತದೆ. ಭಗವಾನ್ ರಾಮನಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಉಪವಾಸ, ಮೆರವಣಿಗೆ, ಮಹಾಕಾವ್ಯ ರಾಮಾಯಣ ಪಠಿಸುವುದು ಮತ್ತು ಕೇಳುವುದು, ಹವನಗಳಂತ ವಿವಿಧ ಆಚರಣೆಗಳಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ. ರಾಮ ನವಮಿಯು ಒಂಬತ್ತು ದಿನಗಳ ಚೈತ್ರ ನವರಾತ್ರಿ ಉತ್ಸವದ ಅಂತ್ಯವನ್ನು ಸೂಚಿಸುತ್ತದೆ. ಈ ಸಂದರ್ಭದಲ್ಲಿ ಜಾತಿ, ಧರ್ಮ ಮತ್ತು ರಾಷ್ಟ್ರೀಯತೆಯನ್ನು ಮೀರಿ ಎಲ್ಲ ಸಮುದಾಯಗಳು ಏಕತೆ ಮತ್ತು ಸಾಮರಸ್ಯದಿಂದ ಹಬ್ಬದಲ್ಲಿ ಪಾಲ್ಗೊಳ್ಳುತ್ತದೆ.

ಅಯೋಧ್ಯೆಯತ್ತ ಎಲ್ಲರ ಚಿತ್ತ

ಉತ್ತರಪ್ರದೇಶದ ಅಯೋಧ್ಯೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಯಾಕೆಂದರೆ ರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರ ಉದ್ಘಾಟನೆಯಾದ ಬಳಿಕ ಮೊದಲ ಬಾರಿಗೆ ಹೊಸ ಮಂದಿರದಲ್ಲಿ ರಾಮನ ಜನ್ಮ ದಿನವನ್ನು ಆಚರಿಸಲಾಗುತ್ತದೆ. ಈಗಾಗಲೇ ಇಲ್ಲಿ ಸಾಕಷ್ಟು ತಯಾರಿಗಳು ನಡೆದಿದ್ದು, ವಿಶ್ವದ ಗಮನ ಸೆಳೆದಿದೆ. ಹೊರದೇಶಗಳಲ್ಲೂ ಆಚರಣೆ ರಾಮ ಜನ್ಮದಿನವನ್ನು ಭಾರತದಲ್ಲಿ ಮಾತ್ರವಲ್ಲ ನೇಪಾಳ, ಬಾಂಗ್ಲಾದೇಶದ ಹಿಂದೂಗಳೂ ಅತ್ಯಂತ ವೈಭವದಿಂದ ಆಚರಿಸುತ್ತಾರೆ. ಉತ್ತರ ಅಮೆರಿಕ ಮತ್ತು ಯುರೋಪ್ ನ ಕೆಲವು ರಾಷ್ಟ್ರಗಳಲ್ಲೂ ರಾಮನವಮಿಯನ್ನು ಆಚರಿಸಲಾಗುತ್ತದೆ.

Continue Reading

ಪ್ರಮುಖ ಸುದ್ದಿ

IPL 2024 : ಬಟ್ಲರ್ ಮುಂದೆ ಮಂಕಾದ ನರೈನ್​; ಕೆಕೆಆರ್ ವಿರುದ್ಧ ಆರ್​​ಆರ್​ಗೆ 2 ವಿಕೆಟ್ ಜಯ

IPL 2024 : ಮೊದಲು ಬ್ಯಾಟ್ ಮಾಡಿದ ಕೆಕೆಆರ್​​ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 223 ರನ್ ಬಾರಿಸಿತು ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಇನಿಂಗ್ಸ್​ನ ಕೊನೇ ಎಸೆತಕ್ಕೆ 8 ವಿಕೆಟ್ ನಷ್ಟ ಮಾಡಿಕೊಂಡು 224 ರನ್​ ಬಾರಿಸಿ ಗೆಲುವು ಸಾಧಿಸಿತು. ಈ ಮೂಲಕ ತವರಿನ ಪ್ರೇಕ್ಷಕ ಮುಂದೆ ಕೆಕೆಆರ್ ತಂಡಕ್ಕೆ ಸೋಲುಣಿಸಿತು.

VISTARANEWS.COM


on

IPL 2024
Koo

ಕೋಲ್ಕೊತಾ: ಆರಂಭಿಕ ಬ್ಯಾಟರ್​ ಜೋಶ್ ಬಟ್ಲರ್​ ಅವರ (109 ರನ್​, 56 ಎಸೆತ, 13 ಫೋರ್​, 6 ಸಿಕ್ಸರ್​) ಅಜೇಯ ಶತಕದ ನೆರವು ಪಡೆದ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್​ 2024ನೇ ಆವೃತ್ತಿಯ 31ನೇ ಪಂದ್ಯದಲ್ಲಿ 2 ವಿಕೆಟ್​ಗಳ ಗೆಲುವು ಸಾಧಿಸಿದೆ. ಪಂದ್ಯದ ಒಂದು ಹಂತದಲ್ಲಿ ಕೆಕೆಆರ್​ ತಂಡದ ಕೈ ಮೇಲಾದರೂ ಬಳಿಕ ಬಟ್ಲರ್​ ಅಬ್ಬರದ ಬ್ಯಾಟಿಂಗ್ ನಡೆಸಿ ಗೆಲುವು ತಂದುಕೊಟ್ಟರು. ಬಟ್ಲರ್​​ಗೆ ಇದು ಹಾಲಿ ಆವೃತ್ತಿಯಲ್ಲಿ ಎರಡನೇ ಶತಕ. ಆರ್​ಸಿಬಿ ವಿರುದ್ಧ ಬಟ್ಲರ್​ ಮೊದಲ ಶತಕ ಬಾರಿಸಿದ್ದರು.

ಈ ವಿಜಯ ರಾಜಸ್ಥಾನ್ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಆರನೇ ಗೆಲುವಾಗಿದೆ. ಅಲ್ಲದೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಪಾಡಿಕೊಂಡಿದೆ. ಈ ಸೋಲಿನೊಂದಿಗೆ ಕೆಕೆಆರ್​ ಪರ ಸುನೀಲ್​ ನರೈನ್​ (109 ರನ್​, 56 ಎಸೆತ, 13 ಫೋರ್​, 6 ಸಿಕ್ಸರ್​) ಸ್ಫೋಟಕ ಶತಕ ಹಾಗೂ ಬೌಲಿಂಗ್​ನಲ್ಲಿ 30 ರನ್​ ವೆಚ್ಚದಲ್ಲಿ 2 ವಿಕೆಟ್​ಗಳ ಆಲ್​ರೌಂಡರ್ ಆಟ ವ್ಯರ್ಥಗೊಂಡಿತು. ಇದು ಕೆಕೆಆರ್​ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಎರಡನೇ ಸೋಲು.

ಇಲ್ಲಿನ ಐತಿಹಾಸಿಕ ಈಡನ್​ ಗಾರ್ಡನ್ಸ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಆರ್​​ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 223 ರನ್ ಬಾರಿಸಿತು ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಇನಿಂಗ್ಸ್​ನ ಕೊನೇ ಎಸೆತಕ್ಕೆ 8 ವಿಕೆಟ್ ನಷ್ಟ ಮಾಡಿಕೊಂಡು 224 ರನ್​ ಬಾರಿಸಿ ಗೆಲುವು ಸಾಧಿಸಿತು. ಈ ಮೂಲಕ ತವರಿನ ಪ್ರೇಕ್ಷಕ ಮುಂದೆ ಕೆಕೆಆರ್ ತಂಡಕ್ಕೆ ಸೋಲುಣಿಸಿತು.

ಈ ಪಂದ್ಯ ಅಂಕಪಟ್ಟಿಯ ಎರಡು ಅಗ್ರ ತಂಡಗಳ ನಡುವಿನ ಕದವಾಗಿತ್ತು. ರಾಜಸ್ಥಾನ ಗೆದ್ದು ಮೊದಲ ಸ್ಥಾನ ಕಾಪಾಡಿಕೊಂಡಿದೆ. ಕೆಕೆಆರ್ ಗೆದಿದ್ದರೆ ಆ ತಂಡಕ್ಕೆ ಮೊದಲ ಸ್ಥಾನ ಸಿಗುತ್ತಿತ್ತು.

ಇದನ್ನೂ ಓದಿ: Sanju Samson : ಸಂಜು ಸ್ಯಾಮ್ಸನ್​ಗೆ ರಾಯಲ್ಸ್​ ತಂಡದಲ್ಲಿ ದಶಕದ ಸಾಧನೆ; ಬೆಸ್ಟ್​ ಕ್ಯಾಪ್ಟನ್ ಎಂದ ಅಭಿಮಾನಿಗಳು

ಬಟ್ಲರ್ ಏಕಾಂಗಿ ಹೋರಾಟ

ದೊಡ್ಡ ಮೊತ್ತದ ಗುರಿಯನ್ನು ಬೆನ್ನಟ್ಟಲುಹೊರಟ ರಾಜಸ್ಥಾನ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಯಶಸ್ವಿ ಜೈಸ್ವಾಲ್ ಮತ್ತೆ ವೈಫಲ್ಯ ಎದುರಿಸಿ 19 ರನ್​ಗೆ ಔಟಾದರು. ಸಂಜು ಸ್ಯಾಮ್ಸನ್​ 12 ರನ್​ಗಳಿಗೆ ಸೀಮಿತಗೊಂಡರು. ಆದರೆ, ಬಟ್ಲರ್ ತಳವೂರಿ ಆಡಲು ಆರಂಭಿಸಿದರು. ಇವರಿಗೆ ಸ್ವಲ್ಪ ಹೊತ್ತು ರಿಯಾನ್ ಪರಾಗ್​ (14 ಎಸೆತಕ್ಕೆ 34 ರನ್​) ಸಾಥ್​ ಕೊಟ್ಟರು. ಆದರೆ ಆ ಬಳಿಕದಿಂದ ಸತತವಾಗಿ ವಿಕೆಟ್​ಗಳು ಉರುಳಿದವು. ಜುರೆಲ್​ 2 ರನ್​ಗೆ ಔಟಾದರೆ ಅಶ್ವಿನ್ 8 ರನ್​​ಗೆ ವಿಕೆಟ್ ಒಪ್ಪಿಸಿದರು. ಶಿಮ್ರೋನ್ ಹೆಟ್ಮಾಯರ್ ಶೂನ್ಯಕ್ಕೆ ಔಟಾದರು. ಬಳಿಕ ಬಂದ ರೊವ್ಮನ್ ಪೊವೆಲ್ 13 ಎಸೆತಕ್ಕೆ 26 ರನ್​ ಬಾರಿಸಿ ಗೆಲುವಿನ ಹಾದಿ ತೋರಿದರು. ಅಂತಿಮವಾಗಿ ಬುದ್ಧಿವಂತಿಕೆಯಿಂದ ಬ್ಯಾಟ್ ಮಾಡಿದ ಬಟ್ಲರ್ ಅಜೇಯವಾಗಿ ಉಳಿದು ತಂಡವನ್ನು ಗೆಲ್ಲಿಸಿದರು.

ನರೈನ್ ಚೊಚ್ಚಲ ಶತಕ

ಆರಂಭಿಕರಾಗಿ ಕಣಕ್ಕೆ ಇಳಿದ ಸುನೀಲ್​ ನರೈನ್​ ಆರಂಭದಿಂದಲೇ ಅಬ್ಬರಿಸಿದರು. ರಾಜಸ್ಥಾನ ತಂಡ ಬೌಲರ್​​ಗಳನ್ನು ಸತತವಾಗಿ ದಂಡಿಸಿ ರನ್ ಪೇರಿಸಲು ಆರಂಭಿಸಿದರು. ಆದರೆ, ಹಿಂದಿನ ಪಂದ್ಯಗಳಲ್ಲಿ ಅಬ್ಬರಿಸಿದ್ದ ಫಿಲ್ ಸಾಲ್ಟ್ ಇಲ್ಲಿ ಹೆಚ್ಚಿನ ಪರಿಣಾಮ ಬೀರಲಿಲ್ಲ. ಆದಾಗ್ಯೂ ತಮ್ಮ ಬ್ಯಾಟಿಂಗ್ ಅಬ್ಬರವನ್ನು ಮುಂದುವರಿಸಿದ ನರೈನ್​ 49 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಐಪಿಎಲ್​ನಲ್ಲಿ ಅವರ ಚೊಚ್ಚಲ ಶತಕವಾಗಿದೆ. ಬಳಿಕ ಅದಕ್ಕೆ 9 ರನ್ ಸೇರಿಸಿದ ಅವರು ಔಟಾದರು. ರಸೆಲ್​ 13 ರನ್ ಬಾರಿಸಿದರೆ ರಿಂಕು ಸಿಂಗ್​ 20 ರನ್​ಗಳ ಕೊಡುಗೆ ಕೊಟ್ಟರು.

Continue Reading

ಪ್ರಮುಖ ಸುದ್ದಿ

Dalip Singh Majithia : 2ನೇ ಮಹಾಯುದ್ಧದಲ್ಲಿ ಸೇವೆ ಸಲ್ಲಿಸಿದ ಐಎಎಫ್ ಯೋಧ 103 ನೇ ವಯಸ್ಸಿನಲ್ಲಿ ನಿಧನ

Dalip Singh Majithia: ಆಕಾಶದಲ್ಲಿ ಗಸ್ತು ತಿರುಗುವುದರಿಂದ ಹಿಡಿದು ಬೇಹುಗಾರಿಕೆ ಮತ್ತು ಬಾಂಬ್ ದಾಳಿ ಕಾರ್ಯಾಚರಣೆಗಳವರೆಗೆ, ಅವರು ಪ್ರತಿ ಸವಾಲನ್ನು ಧೈರ್ಯ, ಕೌಶಲ್ಯ ಮತ್ತು ಸಾಟಿಯಿಲ್ಲದ ಧೈರ್ಯದಿಂದ ಸ್ವೀಕರಿಸಿದ್ದರು. 1942 ರಿಂದ 1943 ರವರೆಗೆ ಬರ್ಮಾದಲ್ಲಿ ಸಂಖ್ಯೆ 4 ಸ್ಕ್ವಾಡ್ರನ್ – ‘ದಿ ಫೈಟಿಂಗ್ ಓರಿಯಲ್ಸ್’ ನ ಫ್ಲೈಟ್ ಕಮಾಂಡರ್ ಆಗಿ ಅವರು ಸೇವೆ ಸಲ್ಲಿಸಿದ್ದರು ಎಂದು ಐಎಎಫ್ ಮೂಲಗಳು ತಿಳಿಸಿವೆ.

VISTARANEWS.COM


on

Dalip Singh Majithia
Koo

ನವದೆಹಲಿ: ಎರಡನೇ ಮಹಾಯುದ್ಧದ ಪ್ರಕ್ಷುಬ್ಧ ವರ್ಷಗಳಲ್ಲಿ ಭಾರತೀಯ ವಾಯುಪಡೆಗೆ ಸೇರಿದ ಮತ್ತು ತಮ್ಮ ವೃತ್ತಿಜೀವನದಲ್ಲಿ “ನಿರ್ಭೀತ ವಿಮಾನಯಾನಿ” ಎಂದು ಗುರುತಿಸಿಕೊಂಡಿದ್ದ ಹಿರಿಯ ಪೈಲೆಟ್ ಸ್ಕ್ವಾಡ್ರನ್ ಲೀಡರ್ ದಲೀಪ್ ಸಿಂಗ್ ಮಜಿಥಿಯಾ (ನಿವೃತ್ತ) ನಿಧನರಾಗಿದ್ದಾರೆ. ಅವರು 103 ವರ್ಷಗಳ ಬದುಕಿದ್ದರು.

ಚಂಡಮಾರುತದಂಥ ಕಠಿಣ ಪರಿಸ್ಥಿತಿ ಸೇರಿದಂತೆ ಹಲವಾರು ಪ್ರಕ್ಷುಬ್ಧ ಪರಿಸ್ಥಿಯಲ್ಲಿ ಯುದ್ಧ ವಿಮಾನಗಳ ಕಾರ್ಯಾಚರಣೆ ನಡೆಸಿದ್ದರು ದಲೀಪ್​​ ಸಿಂಗ್​. ಅವರು 1,100 ಕ್ಕೂ ಹೆಚ್ಚು ಗಂಟೆಗಳ ಕಾಲ ಹಾರಾಟ ನಡೆಸಿದ್ದಾರೆ. ಅವರು ಮಂಗಳವಾರ ಮುಂಜಾನೆ ಉತ್ತರಾಖಂಡದ ರುದ್ರಪುರದಲ್ಲಿ ನಿಧನ ಹೊಂದಿದ್ದಾರೆ ಎಂದು ಐಎಎಫ್ ಮೂಲಗಳು ತಿಳಿಸಿವೆ. ಅವರನ್ನು ಅವರ ಸಹ ವಾಯು ಯೋಧರು ಪ್ರೀತಿಯಿಂದ ‘ಮಾಜಿ’ ಎಂದೇ ಕರೆಯುತ್ತಿದ್ದರು.

ಆಕಾಶದಲ್ಲಿ ಗಸ್ತು ತಿರುಗುವುದರಿಂದ ಹಿಡಿದು ಬೇಹುಗಾರಿಕೆ ಮತ್ತು ಬಾಂಬ್ ದಾಳಿ ಕಾರ್ಯಾಚರಣೆಗಳವರೆಗೆ, ಅವರು ಪ್ರತಿ ಸವಾಲನ್ನು ಧೈರ್ಯ, ಕೌಶಲ್ಯ ಮತ್ತು ಸಾಟಿಯಿಲ್ಲದ ಧೈರ್ಯದಿಂದ ಸ್ವೀಕರಿಸಿದ್ದರು. 1942 ರಿಂದ 1943 ರವರೆಗೆ ಬರ್ಮಾದಲ್ಲಿ ಸಂಖ್ಯೆ 4 ಸ್ಕ್ವಾಡ್ರನ್ – ‘ದಿ ಫೈಟಿಂಗ್ ಓರಿಯಲ್ಸ್’ ನ ಫ್ಲೈಟ್ ಕಮಾಂಡರ್ ಆಗಿ ಅವರು ಸೇವೆ ಸಲ್ಲಿಸಿದ್ದರು ಎಂದು ಐಎಎಫ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Lok Sabah Election : ಹೇಮಮಾಲಿನಿಗೆ ಅವಹೇಳನ; ಕಾಂಗ್ರೆಸ್​ ನಾಯಕ ಸುರ್ಜೇವಾಲಾಗೆ 48 ಗಂಟೆ ನಿಷೇಧ

ದಲೀಪ ಸಿಂಗ್​ ಜುಲೈ 27, 1920 ರಂದು ಶಿಮ್ಲಾದಲ್ಲಿ ಜನಿಸಿದದರು. ವಾಯುಯಾನದ ಮೇಲಿನ ಅವರ ಉತ್ಸಾಹವು ಎರಡನೇ ಮಹಾಯುದ್ಧದ ಪ್ರಕ್ಷುಬ್ಧ ವರ್ಷಗಳಲ್ಲಿ 1940ರಲ್ಲಿ ಐಎಎಫ್ ಸ್ವಯಂಸೇವಕ ಮೀಸಲು ಪಡೆಗೆ ಸೇರಲು ಅವರನ್ನು ಪ್ರೇರೇಪಿಸಿತು ಎಂದು ಐಎಎಫ್ ಮೂಲಗಳು ತಿಳಿಸಿವೆ. ಲಾಹೋರ್ನ ವಾಲ್ಟನ್​ನಲ್ಲಿರುವ ಆರಂಭಿಕ ತರಬೇತಿ ಶಾಲೆಯಲ್ಲಿ ಅವರು ತರಬೇತಿ ಪಡೆದಿದದ್ದರು. ಈ ವೇಳೆ ಅವರು ‘ಅತ್ಯುತ್ತಮ ಪೈಲಟ್ ಟ್ರೋಫಿ’ ಗಳಿಸಿದ್ದರು.

Continue Reading
Advertisement
UPSC Results 2023
ದೇಶ4 hours ago

ವಿಸ್ತಾರ ಸಂಪಾದಕೀಯ: ಯುಪಿಎಸ್‌ಸಿ ಸಾಧಕರ ಕತೆಗಳು ಇತರರಿಗೆ ಸ್ಫೂರ್ತಿಯಾಗಲಿ

Ram Navami
ಪ್ರಮುಖ ಸುದ್ದಿ4 hours ago

Ram Navami : ಇಂದು ದೇಶಾದ್ಯಂತ ರಾಮ ನವಮಿ ಸಂಭ್ರಮ; ಏನು ಈ ದಿನದ ಮಹತ್ವ?

State Administrative Reforms Commission Chairman R V Deshpande statement
ಉತ್ತರ ಕನ್ನಡ4 hours ago

Lok Sabha Election 2024: ಗ್ಯಾರಂಟಿ ಬಗ್ಗೆ ಟೀಕೆ ಮಾಡಿದ್ದ ಬಿಜೆಪಿಗರೇ ಈಗ ಗ್ಯಾರಂಟಿ ಪದ ಬಳಸುತ್ತಿದ್ದಾರೆ: ಆರ್.ವಿ.ದೇಶಪಾಂಡೆ

IPL 2024
ಪ್ರಮುಖ ಸುದ್ದಿ4 hours ago

IPL 2024 : ಬಟ್ಲರ್ ಮುಂದೆ ಮಂಕಾದ ನರೈನ್​; ಕೆಕೆಆರ್ ವಿರುದ್ಧ ಆರ್​​ಆರ್​ಗೆ 2 ವಿಕೆಟ್ ಜಯ

Murder Case
ಕರ್ನಾಟಕ4 hours ago

Chitradurga News: ಚಿತ್ರದುರ್ಗದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಾಯಿ-ಮಗಳ ಶವ ಪತ್ತೆ

amith shah
ದೇಶ5 hours ago

Amit Shah: ಶೀಘ್ರದಲ್ಲೇ ಭಾರತ ನಕ್ಸಲ್‌ ಮುಕ್ತವಾಗಲಿದೆ; ಅಮಿತ್ ಶಾ

Nitin Gadkari
ದೇಶ5 hours ago

Nitin Gadkari : ನಾಗ್ಪುರ ಕ್ಷೇತ್ರಕ್ಕೆ ಮತ್ತೊಂದು ಪ್ರಣಾಳಿಕೆ ಬಿಡುಗಡೆ ಮಾಡಿದ ನಿತಿನ್ ಗಡ್ಕರಿ

UPSC Results 2023
ಕರ್ನಾಟಕ5 hours ago

UPSC Results 2023: ಯುಪಿಎಸ್‌ಸಿಯಲ್ಲಿ 644 ರ‍್ಯಾಂಕ್‌ ಪಡೆದ ಶಾಂತಪ್ಪ ಕುರುಬರ; ಸೋಲನ್ನು ಗೆಲುವಿನ ಮೆಟ್ಟಿಲಾಗಿಸಿಕೊಂಡ ಸಾಧಕ!

Dalip Singh Majithia
ಪ್ರಮುಖ ಸುದ್ದಿ5 hours ago

Dalip Singh Majithia : 2ನೇ ಮಹಾಯುದ್ಧದಲ್ಲಿ ಸೇವೆ ಸಲ್ಲಿಸಿದ ಐಎಎಫ್ ಯೋಧ 103 ನೇ ವಯಸ್ಸಿನಲ್ಲಿ ನಿಧನ

Ayodhya Ram Mandir
ದೇಶ5 hours ago

Ayodhya Ram Mandir: ನಾಳೆ ಅಯೋಧ್ಯೆ ಶ್ರೀರಾಮನಿಗೆ ಸೂರ್ಯ ತಿಲಕ; ಮನೆಯಲ್ಲೇ ಕೂತು ಹೀಗೆ ಕಣ್ತುಂಬಿಕೊಳ್ಳಿ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ23 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20242 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ3 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ4 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ5 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ5 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ6 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20246 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌