Basavaraj Horatti: ಹೊರಟ್ಟಿಗೆ ಲಿಮ್ಕಾ ಬುಕ್ ರೆಕಾರ್ಡ್‌; ಗಿನ್ನಿಸ್‌ಗೆ ಸೇರಲೆಂದು ಪರಿಷತ್‌ನಲ್ಲಿ ಶುಭ ಹಾರೈಕೆ - Vistara News

ವಿಧಾನಮಂಡಲ ಅಧಿವೇಶನ

Basavaraj Horatti: ಹೊರಟ್ಟಿಗೆ ಲಿಮ್ಕಾ ಬುಕ್ ರೆಕಾರ್ಡ್‌; ಗಿನ್ನಿಸ್‌ಗೆ ಸೇರಲೆಂದು ಪರಿಷತ್‌ನಲ್ಲಿ ಶುಭ ಹಾರೈಕೆ

Basavaraj Horatti: ಎಂಟು ಬಾರಿ ಒಂದೇ ಕ್ಷೇತ್ರದಿಂದ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗುತ್ತಾ ಬರುತ್ತಿರುವ ಬಸವರಾಜ ಹೊರಟ್ಟಿ ಅವರು ಹೊಸ ದಾಖಲೆಯನ್ನು ಬರೆದಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ ಹರಿಪ್ರಸಾದ್ ಪ್ರಸ್ತಾಪ ಮಾಡಿದರು. ‌ಇದಕ್ಕೆ ಪರಿಷತ್‌ನ ಎಲ್ಲ ಸದಸ್ಯರು ಸಂತಸವನ್ನು ವ್ಯಕ್ತಪಡಿಸಿದ್ದಲ್ಲದೆ, ಅವರ ಬಳಿ ತೆರಳಿ ಅಭಿನಂದನೆಗಳನ್ನು ಸಲ್ಲಿಸಿದರು.

VISTARANEWS.COM


on

Limca Book Award for Basavaraj Horatti Best wishes at the Council for joining the Guinness Book of World Records
ಸಂಗ್ರಹ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಧಾನ ಪರಿಷತ್: ಎಂಟು ಬಾರಿ ಒಂದೇ ಕ್ಷೇತ್ರದಿಂದ ವಿಧಾನ ಪರಿಷತ್‌ ಸದಸ್ಯರಾಗಿ (Member of Legislative Council) ಆಯ್ಕೆಯಾಗುವ ಮೂಲಕ ಸಭಾಪತಿ ಬಸವರಾಜ ಹೊರಟ್ಟಿ ಅವರು ಲಿಮ್ಕಾ ಬುಕ್ ರೆಕಾರ್ಡ್‌ಗೆ (Limca Book of record) ಭಾಜನರಾಗಿದ್ದರು. ಈ ಸಂಬಂಧ ವಿಧಾನ ಪರಿಷತ್‌ನಲ್ಲಿ ಮಂಗಳವಾರ ಬಸವರಾಜ ಹೊರಟ್ಟಿ (Basavaraj Horatti) ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಎಂಟು ಬಾರಿ ಒಂದೇ ಕ್ಷೇತ್ರದಿಂದ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗುತ್ತಾ ಬರುತ್ತಿರುವ ಬಸವರಾಜ ಹೊರಟ್ಟಿ ಅವರು ಹೊಸ ದಾಖಲೆಯನ್ನು ಬರೆದಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ ಹರಿಪ್ರಸಾದ್ ಪ್ರಸ್ತಾಪ ಮಾಡಿದರು. ‌ಇದಕ್ಕೆ ಪರಿಷತ್‌ನ ಎಲ್ಲ ಸದಸ್ಯರು ಸಂತಸವನ್ನು ವ್ಯಕ್ತಪಡಿಸಿದ್ದಲ್ಲದೆ, ಅವರ ಬಳಿ ತೆರಳಿ ಅಭಿನಂದನೆಗಳನ್ನು ಸಲ್ಲಿಸಿದರು.

ಕಾಂಗ್ರೆಸ್‌ಗೆ ಕರೆದರೂ ಬಾರದ ಬಸವರಾಜ ಹೊರಟ್ಟಿ

ವಿಧಾನ ಪರಷತ್‌ನಲ್ಲಿ ಮಾತನಾಡಿದ ಬಿ.ಕೆ. ಹರಿಪ್ರಸಾದ್‌, ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್ ಅನ್ನೋದೇ ಒಂದು ಗೌರವ. ಇತಿಹಾಸ ನೆನಪಿಟ್ಟುಕೊಳ್ಳುವ ಪ್ರಶಸ್ತಿ ಇದಾಗಿದೆ. 43 ವರ್ಷಗಳಿಂದ ಒಂದೇ ಕ್ಷೇತ್ರದಿಂದ ಆಯ್ಕೆಯಾಗಿ ಬಂದವರು ಇವರಾಗಿದ್ದಾರೆ. ನಾವು ಕರೆದರೂ ಅವರು ಕಾಂಗ್ರೆಸ್‌ಗೆ ಬರಲಿಲ್ಲ. ಚುನಾವಣೆ ಬಂದಾಗ ವಲಸೆ ಹಕ್ಕಿಯಾಗುತ್ತಾರೆ. ಕಾಂಗ್ರೆಸ್ ಪಕ್ಷ ಸಿಎಂ ಆಸೆ ತೋರಿಸಿದರೂ ಅವರು ಬರಲಿಲ್ಲ ಎಂದು ಹೇಳಿದರು.

ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಕೂಡ ಸೇರಲಿ: ಬಿ.ಕೆ. ಹರಿಪ್ರಸಾದ್

ಶೈಕ್ಷಣಿಕ ವಲಯದಲ್ಲಿ ಆ ಭಾಗದಲ್ಲಿ ಇಷ್ಟು ಸಲ ಗೆಲ್ಲೋದು ತಮಾಷೆಯ ಮಾತಲ್ಲ. ಹೊರಟ್ಟಿಯವರು ಸರಳ ವ್ಯಕ್ತಿತ್ವದ ವ್ಯಕ್ತಿಯಾಗಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂತಹ ಸರಳ ವ್ಯಕ್ತಿ ಇವರಾಗಿದ್ದಾರೆ. ಹೊರಟ್ಟಿ ಅವರನ್ನು ನಾನು ಕಾಂಗ್ರೆಸ್‌ಗೆ ಕರೆದೆ. ಆದರೆ, ಅವರು ನಮ್ಮ ಪಕ್ಷಕ್ಕೆ ಬರಲೇ ಇಲ್ಲ ಎಂದು ಹೇಳಿದ ಬಿ.ಕೆ. ಹರಿಪ್ರಸಾದ್‌, ಬಸವರಾಜ ಹೊರಟ್ಟಿ ಅವರಿಗೆ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಕೂಡ ಸೇರಲಿ ಎಂದು ಆಶಯ ವ್ಯಕ್ತಪಡಿಸಿದರು.

ಇದನ್ನೂ ಓದಿ: Lok Sabha Election 2024: ದೇವೇಗೌಡರ ನಿವಾಸದಲ್ಲಿ ಮಹತ್ವದ ಸಭೆ; ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಯಾರಿಗೆ?

ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಪರಿಷತ್ ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿದರು. ಇನ್ನಷ್ಟು ದಾಖಲೆಗಳು ಅವರಿಂದ ಆಗಲಿ ಎಂದು ಶುಭ ಹಾರೈಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಪ್ರಮುಖ ಸುದ್ದಿ

Assembly Monsoon Session: ಮುಂಗಾರು ಅಧಿವೇಶನಕ್ಕೆ ಮುನ್ನವೇ 2 ಕೋಟಿ ಖರ್ಚು ಮಾಡಿ ವಿಧಾನಸೌಧ ಸಿಂಗಾರ!

Assembly Monsoon Session: ವಿಧಾನಸಭೆ ಒಳಾಂಗಣ ರೋಸ್‌ವುಡ್ ಡೋರ್, ಕಾರ್ಪೆಟ್, ಫ್ಲೋರ್ ಮ್ಯಾಟ್, ಪಿಲ್ಲರ್‌ಗಳಿಗೆ ರೋಸ್ ವುಡ್ ಕ್ಲಾಡಿಂಗ್ ಸೇರಿದಂತೆ ರೀ ಫರ್ನಿಶಿಂಗ್ ಮಾಡಲಾಗಿದೆ. ಸ್ಪೀಕರ್ ಕಚೇರಿಗೆ ಹೊಸ ಬಾಗಿಲು, ಫ್ಲೋರ್ ಮ್ಯಾಟ್, ಇತರೆ ನವೀಕರಣ ಮಾಡಲಾಗಿದೆ. PWD ಕೆಲಸವನ್ನು ಸ್ಪೀಕರ್ ಕಚೇರಿಯಿಂದಲೇ ನಿರ್ವಹಣೆ ಮಾಡಲಾಗಿದೆ.

VISTARANEWS.COM


on

Assembly monsoon session UT Khader karnataka assembly live
Koo

ಬೆಂಗಳೂರು: 16ನೇ ವಿಧಾನಸಭೆಯ ಮಳೆಗಾಲದ ಅಧಿವೇಶನಕ್ಕೆ (Vidhan Sabha Session, Assembly monsoon session) ) ಮುನ್ನವೇ ವಿಧಾನಸೌಧವನ್ನು (Vidhana Soudha) ಹೊಸದಾಗಿ ಶೃಂಗರಿಸಲಾಗಿದ್ದು, ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಒಳಾಂಗಣವನ್ನು (renovation) ನವೀಕರಣಗೊಳಿಸಲಾಗಿದೆ. ಸ್ಪೀಕರ್‌ ಯು.ಟಿ ಖಾದರ್‌ (Speaker UT Khader) ಅವರು ಮುತುವರ್ಜಿ ವಹಿಸಿ ಈ ನವೀಕರಣ ನಡೆಸಿದ್ದು, ಇದೀಗ ಒಳಾಂಗಣ ಹೈಟೆಕ್ ಸ್ಪರ್ಶದಿಂದ ಕಂಗೊಳಿಸುತ್ತಿದೆ.

ವಿಧಾನಸಭೆ ಒಳಾಂಗಣ ರೋಸ್‌ವುಡ್ ಡೋರ್, ಕಾರ್ಪೆಟ್, ಫ್ಲೋರ್ ಮ್ಯಾಟ್, ಪಿಲ್ಲರ್‌ಗಳಿಗೆ ರೋಸ್ ವುಡ್ ಕ್ಲಾಡಿಂಗ್ ಸೇರಿದಂತೆ ರೀ ಫರ್ನಿಶಿಂಗ್ ಮಾಡಲಾಗಿದೆ. ಸ್ಪೀಕರ್ ಕಚೇರಿಗೆ ಹೊಸ ಬಾಗಿಲು, ಫ್ಲೋರ್ ಮ್ಯಾಟ್, ಇತರೆ ನವೀಕರಣ ಮಾಡಲಾಗಿದೆ. PWD ಕೆಲಸವನ್ನು ಸ್ಪೀಕರ್ ಕಚೇರಿಯಿಂದಲೇ ನಿರ್ವಹಣೆ ಮಾಡಲಾಗಿದೆ.

ಮಧ್ಯಾಹ್ನ ಹೊತ್ತು ಊಟದ ಲಾಂಜ್‌ನಲ್ಲಿ ಶಾಸಕರಿಗೆ ವಿಶ್ರಾಂತಿ ಪಡೆಯಲು ಅಳವಡಿಸಲಾದ ರಿಕ್ಲೈನರ್‌ಗಳ ಬಗೆಗೆ ನಿನ್ನೆ ಸ್ಪೀಕರ್‌ ಕಲಾಪದಲ್ಲಿ ಹೇಳಿದ್ದರು. ಶಾಸಕರ ಗೈರುಹಾಜರು ತಪ್ಪಿಸಲು ಈ ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿದ್ದರು.

ಯಾವುದಕ್ಕೆ ಎಷ್ಟೆಷ್ಟು ಖರ್ಚು?

ವಿಧಾನಸೌಧದ ಪಶ್ಚಿಮ ಭಾಗದ ಅಸೆಂಬ್ಲಿ ಪ್ರವೇಶದ್ವಾರ, ಅಸೆಂಬ್ಲಿ ಪ್ರವೇಶದ ಮುಂಭಾಗ ಮತ್ತು ಹಿಂಭಾಗದ ಪಿಲ್ಲರ್‌ಗಳಿಗೆ ರೋಸ್ ವುಡ್ ಕ್ಲಾಡಿಂಗ್ ಮತ್ತು ಮುಂಭಾಗದ ಪಿಲ್ಲರ್ ಮತ್ತು ಹೊಸ ಬಾಗಿಲಿನ ನಡುವೆ 1 ವಾಲ್ ಕ್ಲಾಡಿಂಗ್ ಹಾಕಲು- 43 ಲಕ್ಷ

ಅಸೆಂಬ್ಲಿ ಪ್ರವೇಶ, ಆಡಳಿತ ಮತ್ತು ವಿರೋಧ ಪಕ್ಷದ ಲಾಂಜ್ ಪ್ರವೇಶ ಕಾರಿಡಾರ್, ಪಶ್ಚಿಮ ಭಾಗದ ಅಸೆಂಬ್ಲಿ ಪ್ರವೇಶ ಹಂತಗಳಿಗೆ ನೆಲದ ಕಾರ್ಪೆಟ್ ಹಾಕಲು- 32 ಲಕ್ಷ 50 ಸಾವಿರ

ಪಾಲಿಕಾರ್ಬೊನೇಟ್ ಶೀಟ್‌ನಿಂದ ಒಳಗಿನ ಕಾರಿಡಾರ್ ಓಪನ್ನಿಂಗ್‌ನ 3 ಅಸೆಂಬ್ಲಿ ಪ್ರವೇಶದ್ವಾರದ ಸುತ್ತಲೂ 10 ರಿಂದ 12 ಮಿಮೀ ದಪ್ಪದ ಟಫನ್ ಗ್ಲಾಸ್ ವಿಭಾಗವನ್ನು ಒದಗಿಸುವುದು ಮತ್ತು ಪ್ಯಾರಪೆಟ್ ರಂಧ್ರಗಳನ್ನು ಮುಚ್ಚುವುದು- 8 ಲಕ್ಷ 90 ಸಾವಿರ

ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಕ್ಕೆ ಯಾಂತ್ರಿಕೃತ ರಿಕ್ಲೈನರ್ ಕುರ್ಚಿಗಳನ್ನು ಒದಗಿಸುವುದು- 23 ಲಕ್ಷ 60 ಸಾವಿರ

ಅಸೆಂಬ್ಲಿ ಪ್ರವೇಶ ಕಾರಿಡಾರ್ ಮತ್ತು ಪೂರ್ವ ಭಾಗದ ಸೆಂಟ್ರಲ್ ಹಾಲ್ ಮತ್ತು ಗ್ರ್ಯಾಂಡ್ ಸ್ಟೆಪ್ ಪ್ರವೇಶ ಗೋಡೆಗಳಿಗೆ ಪೇಂಟಿಂಗ್ ಮತ್ತು ಪಾಲಿಶಿಂಗ್ ಮಾಡುವುದು- 14 ಲಕ್ಷ 80 ಸಾವಿರ

ಸಿಎಂ ಚೇಂಬರ್, ಪ್ರೆಸ್ ಲಾಂಜ್, ಸಚಿವರ ಲಾಂಜ್ ಮತ್ತು ಮಹಿಳಾ ಲಾಂಜ್‌ನ ಶೌಚಾಲಯ ನವೀಕರಣ- 18 ಲಕ್ಷ 50 ಸಾವಿರ

ಮೊದಲ ಮಹಡಿಯ ಸೆಂಟ್ರಲ್ ಹಾಲ್‌ನಲ್ಲಿ ತಾತ್ಕಾಲಿಕ ಅಡಿಗೆ, ಊಟ, ಕುರ್ಚಿಗಳು, ಟೇಬಲ್‌ಗಳು, ವಿಭಜನೆ, ಬ್ಯಾರಿಕೇಡ್‌ಗಳನ್ನು ಹಾಕುವುದು ಮತ್ತು ಊಟದ ಟೇಬಲ್, ಟ್ಯಾಪ್ ಕ್ಲಾತ್‌ಗಳು, ಆಡಳಿತ ಮತ್ತು ವಿರೋಧ ಪಕ್ಷದಲ್ಲಿ ಕುರ್ಚಿಗಳನ್ನು ಹಾಕುವುದು ಅಧಿವೇಶನದಲ್ಲಿ ಅಸೆಂಬ್ಲಿಗೆ ಇತರ ಸಂಬಂಧಿತ ಕೆಲಸಗಳಿಗೆ- 27 ಲಕ್ಷ 75 ಸಾವಿರ

ಕಾರ್ಪೆಟ್, ಕುರ್ಚಿಗಳು, ಸೋಫಾಗಳು ಮತ್ತು ಅವುಗಳನ್ನು ತೊಳೆಯುವುದು, ನೀರು ಸರಬರಾಜು, ಪೇಂಟಿಂಗ್ ಮತ್ತು ಇತರ ಸಂಬಂಧಿತ ಕೆಲಸಗಳಿಗೆ- 10 ಲಕ್ಷ 35 ಸಾವಿರ

ಮೊದಲನೇ ಮಹಡಿಗೆ ಸ್ಟೇನ್‌ಲೆಸ್ ಸ್ಟೀಲ್ ನೇಮ್ ಬೋರ್ಡ್‌ಗಳಲ್ಲಿ ಅಸೆಂಬ್ಲಿ ಪ್ರವೇಶ ಕಾರಿಡಾರ್‌ನ ಎರಡೂ ಬದಿಗಳಿಗೆ ಸ್ಟೇನ್‌ಲೆಸ್ ಸ್ಟೀಲ್ ಗ್ರಿಲ್‌ಗಳನ್ನು ಒದಗಿಸುವುದು, ಅಸೆಂಬ್ಲಿ ಪ್ರವೇಶ ನಾಮ ಫಲಕ ಅಳವಡಿಕೆಗೆ- 16 ಲಕ್ಷ 60 ಸಾವಿರ

ಒಟ್ಟು 1 ಕೋಟಿ 96 ಲಕ್ಷ ವ್ಯಯ ಮಾಡಲಾಗಿದ್ದು, ಈ ಮೂಲಕ ವಿಧಾನಸೌಧ ಹೈಟೆಕ್ ಜೊತೆ ಆಧುನಿಕ ಮಾಡಲಾಗಿದೆ.

ಇದನ್ನೂ ಓದಿ: Karnataka Assembly Live: ಇಡಿಗೆ ಹೆದರುವುದಿಲ್ಲ, ನಿಮ್ಮನ್ನು ಬಲಿ ಹಾಕಿಯೇ ಸಿದ್ಧ: ವಾಲ್ಮೀಕಿ ಹಗರಣ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ

Continue Reading

ಪ್ರಮುಖ ಸುದ್ದಿ

Karnataka Assembly Live: ಇಡಿಗೆ ಹೆದರುವುದಿಲ್ಲ, ನಿಮ್ಮನ್ನು ಬಲಿ ಹಾಕಿಯೇ ಸಿದ್ಧ: ವಾಲ್ಮೀಕಿ ಹಗರಣ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ

Karnataka Assembly Live: ಆಂಧ್ರಪ್ರದೇಶ, ತೆಲಂಗಾಣಕ್ಕೆ ಹೋಗಿರುವುದು 89 ಕೋಟಿ ಮಾತ್ರ. ಅದನ್ನು ವಾಪಸು ತರುವ ಕೆಲಸ ಮಾಡ್ತಿದ್ದೇವೆ. ನಾವು ಯಾರನ್ನು ಸಹ ರಕ್ಷಣೆ ಮಾಡುವುದಿಲ್ಲ. ಇವರ ಕಾಲದಲ್ಲಿ ನಡೆದ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಇವರು ಹೀಗೆ ಮಾಡುತ್ತಿದ್ದಾರೆ. ನಾವು ಈ ಬಿಜೆಪಿ ಹಾಗೂ ಇಡಿಗೆ ಹೆದರುವುದಿಲ್ಲ ಎಂದು ಸಿಎಂ ನುಡಿದರು. ಸಿಎಂ ಭಾಷಣಕ್ಕೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟಿಸಿ ಅಡ್ಡಿ ಒಡ್ಡಿದರು.

VISTARANEWS.COM


on

Karnataka assembly live cm siddaramaiah
Koo

ಬೆಂಗಳೂರು: “ನಾವು ಇಡಿಗೆ, ಬಿಜೆಪಿಗೆ ಹೆದರುವುದಿಲ್ಲ. ತಪ್ಪು ಮಾಡಿದವರನ್ನು ರಕ್ಷಿಸುವುದಿಲ್ಲ. ನಿಮ್ಮನ್ನು ಬಲಿ ಹಾಕಿಯೇ ಸಿದ್ಧ” ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ವಿಧಾನಸಭೆಯಲ್ಲಿ (Vidhan Sabha) ಬಿಜೆಪಿ ಸದಸ್ಯರಿಗೆ ಗುಡುಗಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ (Valmiki Corporation Scam) ಕುರಿತು ನಡೆದ ಚರ್ಚೆಗೆ ಅವರು ಇಂದು ಕಲಾಪದಲ್ಲಿ (Karnataka Assembly Live) ಉತ್ತರ ನೀಡಿದರು.

ʼʼನೀವು ಕಳ್ಳರು, ಲೂಟಿಕೋರರು ಎಂದು ನಿಮ್ಮನ್ನು ಅಲ್ಲಿ ಕೂರಿಸಿದ್ದಾರೆ. ತಾಕತ್ ಇದ್ಯಾ ಅಂದವರು 64ಕ್ಕೆ ಬಂದಿರಿ. ನಾವು 136 ಶಾಸಕರು ಗೆದ್ದು ಬಂದೆವು. ಬೊಮ್ಮಾಯಿ- ಯಡಿಯೂರಪ್ಪ ಆಡಳಿತಾವಧಿಯಲ್ಲಿ ಕೋಟ್ಯಂತರ ರೂಪಾಯಿ ಹಗರಣಗಳು ನಡೆದಿವೆ. ಎಲ್ಲದರ ಬಗ್ಗೆಯೂ ತನಿಖೆ ನಡೆಸುತ್ತೇವೆ. ಯಾರು ತಪ್ಪು ಮಾಡಿದ್ದರೋ ಅವರನ್ನು ಜೈಲಿಗೆ ಕಳುಹಿಸುತ್ತೇವೆ. ನಿಮ್ಮನ್ನು ಬಲಿ ಹಾಕಿಯೇ ಸಿದ್ಧ” ಎಂದು ಸಿಎಂ ಹೇಳಿದರು.

ಆಂಧ್ರಪ್ರದೇಶ, ತೆಲಂಗಾಣಕ್ಕೆ ಹೋಗಿರುವುದು 89 ಕೋಟಿ ಮಾತ್ರ. ಅದನ್ನು ವಾಪಸು ತರುವ ಕೆಲಸ ಮಾಡ್ತಿದ್ದೇವೆ. ನಾವು ಯಾರನ್ನು ಸಹ ರಕ್ಷಣೆ ಮಾಡುವುದಿಲ್ಲ. ಇವರ ಕಾಲದಲ್ಲಿ ನಡೆದ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಇವರು ಹೀಗೆ ಮಾಡುತ್ತಿದ್ದಾರೆ. ನಾವು ಈ ಬಿಜೆಪಿ ಹಾಗೂ ಇಡಿಗೆ ಹೆದರುವುದಿಲ್ಲ ಎಂದು ಸಿಎಂ ನುಡಿದರು. ಸಿಎಂ ಭಾಷಣಕ್ಕೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟಿಸಿ ಅಡ್ಡಿ ಒಡ್ಡಿದರು.

ʼಬೊಮ್ಮಾಯಿ ಕಾಲದಲ್ಲಿ ಹಗರಣ ಆಗಿದೆ. ದೇವರಾಜ ಅರಸು ಟ್ರಕ್ ಟರ್ಮಿನಲ್ 50 ಕೋಟಿ ಅವ್ಯವಹಾರ ಆಗಿದೆ. ವೀರಯ್ಯ ಬಂಧನವಾಗಿದ್ದಾರೆ. ನಿಮಗೆ ನಾಚಿಕೆ ಆಗಲ್ವಾ?ʼ ಎಂದ ಸಿಎಂ ಬಿಜೆಪಿ ಕಾಲದ 21 ಹಗರಣಗಳ ದಾಖಲೆ ಬಿಡುಗಡೆ ಮಾಡಿದರು. ಕಿಯೋನಿಕ್ಸ್‌ನಲ್ಲಿ 500 ಕೋಟಿ ಅವ್ಯವಹಾರ ಆಗಿದೆ. ಆಗ ಯಡಿಯೂರಪ್ಪ ಸಿಎಂ, ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದರು. ಕೋವಿಡ್ ಹಗರಣ, ಭದ್ರಾ ಮೇಲ್ದಂಡೆ ಯೋಜನೆ ಸೇರಿ 40 ಸಾವಿರ ಕೋಟಿ ಹಗರಣ ನಡೆದಿದೆ. ಪಿಎಸ್ಐ ಹಗರಣ ಯಾರ ಕಾಲದಲ್ಲಿ ನಡೆಯಿತು? 40% ಕಮಿಷನ್ ಹಗರಣ ಸಿಎಂ ಬೊಮ್ಮಾಯಿ ಕಾಲದಲ್ಲಿ. ಕಾರ್ಕಳ ಪರುಶುರಾಮ ಥೀಮ್ ಪಾರ್ಕ್ ಹಗರಣ, ಬಿಟ್ ಕಾಯಿನ್ ಹಗರಣ ನಡೆಯಿತು. 750 ಕೋಟಿಗೂ ಹೆಚ್ಚು ಹಣ ಯಡಿಯೂರಪ್ಪ ಆಪ್ತರ ಬಳಿ ಸಿಕ್ಕಿತು. ಇಡಿ ಮತ್ತು ಸಿಬಿಐ ಬರಲಿಲ್ಲ. ಈಶ್ವರಪ್ಪ ರಾಜ್ಯಪಾಲರಿಗೆ ದೂರು ಕೊಟ್ಟರು. ಕೆಕೆಆರ್‌ಡಿಬಿ 200 ಕೋಟಿ ಹಗರಣ ನಡೆಯಿತು. ಆಗ ಕಂದಾಯ ಹಗರಣ ಆಶೋಕ್ ಸಚಿವರಾಗಿದ್ದರುʼ ಎಂದು ಸಿಎಂ ವಿವರಿಸಿದರು.

ಸಿಎಂ ಸಿದ್ದರಾಮಯ್ಯ ಅವರು ನೀಡಿದ ಲಿಖಿತ ಉತ್ತರದ ಪೂರ್ಣ ಪಾಠ ಇಲ್ಲಿದೆ:

ಮಾನ್ಯ ಅಧ್ಯಕ್ಷರೆ,
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತದ ಹಗರಣ ಕುರಿತ ಮುಂದುವರೆದ ಉತ್ತರವನ್ನು ಸದನದಲ್ಲಿ ಲಿಖಿತ ರೂಪದಲ್ಲಿ ಮಂಡಿಸುತ್ತಿದ್ದೇನೆ.

1) ಬಿ.ಜೆ.ಪಿ. ಯವರ ಹುನ್ನಾರ ಇಷ್ಟೆ. ಒಂದು, ಮುಖ್ಯಮಂತ್ರಿಯ ಹೆಸರಿಗೆ ಮಸಿ ಬಳಿಯುವುದು. ಎರಡನೆಯದು, ಸರ್ಕಾರ ಪರಿಶಿಷ್ಟ ಜಾತಿ/ ಪಂಗಡಗಳ ವಿರುದ್ಧ ಎಂದು ಬಿಂಬಿಸುವುದು. ಈ ಎರಡೂ ಎಂದಾದರೂ ಸಾಧ್ಯವೆ? ಇಡೀ ಬಿಜೆಪಿ, ಬಿಜೆಪಿಯ ನಾಯಕತ್ವ ಸಂವಿಧಾನ ಜಾರಿಗೆ ಬಂದ ದಿನದಿಂದಲೂ ದಮನಿತ ಸಮುದಾಯಗಳ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿರುದ್ಧವಾಗಿದೆ. ಮಹಿಳೆಯರ ವಿರುದ್ಧವಾಗಿದೆ. ದಮನಿತರ ಪರವಾದ ಪ್ರತಿ ನಿಲುವು, ಪ್ರತಿ ಕಾಯ್ದೆ, ಯೋಜನೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ನೇತೃತ್ವದ ಸರ್ಕಾರಗಳೆ.

2) ಇದೇ ಬಿಜೆಪಿ ಆಡಳಿತದಲ್ಲಿದ್ದಾಗ ಯಾವ ಯಾವ ನಿಗಮಗಳಲ್ಲಿ ಏನೇನೆಲ್ಲ ನುಂಗಿದ್ದಾರೆ ಎಂದು ಕೂಡ ಚರ್ಚೆ ನಡೆಯುತ್ತಿದೆ. ನುಂಗುವುದರಲ್ಲಿ ಜಾಣರಾಗಿರುವ ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಇದಕ್ಕಿಂತ ದುರಂತ ಬೇರೆ ಇಲ್ಲ. ವಿರೋಧ ಪಕ್ಷದವರು ತಮ್ಮ ಅಜೆಂಡಾ ಸಾಧಿಸಿಕೊಳ್ಳಲು ಯಾವ ಸುಳ್ಳನ್ನು ಬೇಕಾದರೂ ಹೇಳಬಲ್ಲರು ಎಂಬುದು ಇಲ್ಲಿ ಸಾಬೀತಾಗಿದೆ.

3) ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಈ 89.63 ಕೋಟಿಗಳಷ್ಟು ಹಣ ಅಕ್ರಮವಾಗಿ ಹೈದರಾಬಾದಿನ ಆರ್ ಬಿ ಎಲ್ ಬ್ಯಾಂಕಿಗೆ ವರ್ಗಾವಣೆಯಾಗಿರುತ್ತದೆ. [ಈ 89.63 ಕೋಟಿಗಳಲ್ಲಿ 5 ಕೋಟಿ ರೂ ವಾಪಸ್ಸು ಬಂದಿರುತ್ತದೆ]. 89.63 ಕೋಟಿ ರೂಪಾಯಿಗಳಲ್ಲಿ 45,02,98,000 ರೂಪಾಯಿಗಳು ಉಳಿತಾಯ ಖಾತೆಯಿಂದ ವರ್ಗಾವಣೆಯಾಗಿರುತ್ತವೆ. ಇನ್ನುಳಿದ 44.60 ಕೋಟಿ ರೂಪಾಯಿಗಳನ್ನು ನಿಗಮವು ಇಟ್ಟಿದ್ದ ಫಿಕ್ಸೆಡ್ ಡಿಪಾಸಿಟ್ ಮೇಲೆ ಓವರ್ ಡ್ರಾಫ್ಟ್ ತೆಗೆದಿದ್ದಾರೆ. ಓವರ್ ಡ್ರಾಫ್ಟ್ ಎಂದರೆ ಒಂದು ರೀತಿಯ ಸಾಲವೇ. ಇದು ಅತ್ಯಂತ ಪರಿಣತರಾದ, ಪಳಗಿದ ಖದೀಮರ ಕೆಲಸವೆ. ನಿಗಮವು ದಿನಾಂಕ: 30-3-2024 ರಂದು 50.00 ಕೋಟಿ ರೂಪಾಯಿಗಳನ್ನು ಫಿಕ್ಸೆಡ್ ಡಿಪಾಸಿಟ್ ನಲ್ಲಿಟ್ಟಿದೆ. ಸ್ಪಿಕ್ಸ್‌ಲಿ ಸ್ಪೀಕಿಂಗ್, ಈ 50.00 ಕೋಟಿ ಫಿಕ್ಸೆಡ್ ಡಿಪಾಸಿಟ್ ನಮ್ಮ ವಶದಲ್ಲಿಯೇ ಇದೆ. ಯಾಕೆಂದರೆ ಅದು ಫಿಕ್ಸೆಡ್ ಡಿಪಾಸಿಟ್.

4) ವಿರೋಧ ಪಕ್ಷದವರು [ ವಿಜಯೇಂದ್ರ ಹೇಳಿದ ಎರಡನೆ ಸುಳ್ಳು ರಾಜ್ಯ ಸರ್ಕಾರವು ಸಿಬಿಐನವರು ಎಫ್‌ಐಆರ್ ದಾಖಲಿಸಿದ ಮೇಲೆ ಎಸ್.ಐ.ಟಿ. ರಚಿಸಿದೆ ಎಂದು ಹೇಳಿದ್ದಾರೆ. ವಾಸ್ತವವಾಗಿ ನಮ್ಮಲ್ಲಿ ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಿನಾಂಕ 28- 5-2024 ರಂದು ಕ್ರೈಂ ನಂ. 118/2024 ರಂತೆ ಏಫ್ ಐ ಆರ್ ದಾಖಲಾಗಿದೆ. ರಾಜ್ಯ ಸರ್ಕಾರವು 31-5-2024 ರಂದು ಆದೇಶ ಹೊರಡಿಸಿ ಎಸ್.ಐ.ಟಿ. ರಚಿಸಿದೆ. ಸಿಬಿಐ ದಿನಾಂಕ 3-6-2024 ರಂದು ಎಫ್‌ಐಆರ್ ದಾಖಲಿಸಿದ್ದಾರೆ.

5) ದಿನಾಂಕ: 03.06.2024 ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಮ್ಯಾನೇಜರ್ (ಹೆಚ್.ಆರ್.) ಗಿರೀಶ್ ಚಂದ್ರ ಜೋಶಿ ಎನ್ನುವವರು ಎಂ.ಜಿ. ರಸ್ತೆ ಶಾಖೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶ್ರೀಮತಿ ಸುಚಿಸ್ಮಿತಾ ರಾವುಲ್, ಚೀಫ್ ಮ್ಯಾನೇಜರ್ (ಬ್ರಾಂಚ್ ಹೆಡ್) ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಹಾಗೂ Prevention of Corruption Act ರ Section 17(A) ರಡಿ ತನಿಖೆ ಮಾಡಲು ಅನುಮತಿ ನೀಡಿ ಸಿ.ಬಿ.ಐ. ಗೆ ಪತ್ರ ಬರೆದಿರುತ್ತಾರೆ. 17(A) ರಡಿ ತನಿಖೆ ಮಾಡಲು ಅನುಮತಿ ನೀಡಿ ಸಿ.ಬಿ.ಐ. ಗೆ ಪತ್ರ ಬರೆದಿರುತ್ತಾರೆ.

6) ಸಿ.ಬಿ.ಐ.ಗೆ ಬರೆದಿರುವ ಈ ಪತ್ರದ ಮುಖ್ಯಾಂಶಗಳನ್ನು ನಾನು ಅನುಬಂಧ-1 ರಲ್ಲಿಟ್ಟು ಸದನದಲ್ಲಿ ಮಂಡಿಸುತ್ತಿದ್ದೇನೆ. ಈ ಎರಡರಲ್ಲೂ ಬ್ಯಾಂಕಿನವರೆ ಒಪ್ಪಿಕೊಂಡಿರುವ ಹಾಗೆ ಬ್ಯಾಂಕಿನ ಸಿಬ್ಬಂದಿಗಳೇ ನೇರವಾಗಿ ಈ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂಬುದು ಕಂಡುಬರುತ್ತದೆ.

7) ದಿನಾಂಕ 28-5-2024 ರಂದು ಮಹರ್ಷಿ ವಾಲ್ಮೀಕಿ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಎನ್ನವವರು ನಿಗಮದ ಹಣ ಖಾಲಿಯಾಗಿರುವುದರ ಕುರಿತು ಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ. ದಿನಾಂಕ: 28.05.2024 ರಂದು ಶ್ರೀ ಎ. ರಾಜಶೇಖರ, ಪ್ರಧಾನ ವ್ಯವಸ್ಥಾಪಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಇವರು ನಿಗಮದಲ್ಲಿ ನಡೆದ ಅವ್ಯವಹಾರದ ಕುರಿತು ಎ. ಮಣಿಮೇಖಲೈ, ಎಂ.ಡಿ. & ಸಿ.ಇ.ಓ., ಯುಬಿಐ, ಶ್ರೀ ನಿತೇಶ್ ರಂಜನ್, ಶ್ರೀ ರಾಮಸುಬ್ರಮಣ್ಯಂ, ಶ್ರೀ ಸಂಜಯ್‌ ರುದ್ರ, ಶ್ರೀ ಪಂಕಜ್ ದ್ವಿವೇದಿ, ಕಾರ್ಯನಿರ್ವಾಹಕ ನಿರ್ದೇಶಕರು ಯುಬಿಐನ ಮುಖ್ಯ ವ್ಯವಸ್ಥಾಪಕರಾದ ಶ್ರೀಮತಿ ಶುಚಿಸ್ಮಿತಾ ರವುಲ್, ಎಂ.ಜಿ. ರಸ್ತೆ ಶಾಖೆ ಇವರುಗಳ ವಿರುದ್ಧ ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಿಸಿರುತ್ತಾರೆ.

8) ಅಕ್ರಮ ನಡೆದಿದೆಯೆಂದು ಗೊತ್ತಾದ ಕೂಡಲೆ ಎಫ್.ಐ.ಆರ್ ರಿಜಿಸ್ಟರ್ ಆಗಿದೆ. ಅಕ್ರಮದ ಕುರಿತು ತನಿಖೆ ಮಾಡಲು ಸಮರ್ಥ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ದಿನಾಂಕ: 31-5-2024 ರಂದು ಎಸ್‌ಐಟಿ ರಚಿಸಿದ್ದೇವೆ. ಮೇಲಿನ ಎರಡೂ ಕ್ರಿಮಿನಲ್ ಕೇಸುಗಳನ್ನು ತನಿಖೆ ಮಾಡುವ ಉದ್ದೇಶದಿಂದಲೇ 4 ಜನ ಪೊಲೀಸ್ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಎಚ್‌ಡಿ 64 ಸಿಐಡಿ 2024 ರ ಆದೇಶದಂತೆ ಈ ತಂಡ ರಚನೆಯಾಗಿದೆ.

9) ಎಸ್.ಐ.ಟಿ.ಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡುತ್ತಿದೆ. ಎಸ್.ಐ.ಟಿ. ರಚನೆಯಾದ ಕೂಡಲೆ ಕೂಡಲೆ ಕಾರ್ಯಪ್ರವೃತ್ತವಾದ ಈ ತಂಡವು ಕೆಳಕಂಡವರುಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ.

  1. ಜೆ ಜಿ ಪದ್ಮನಾಭ, ಪ್ರಧಾನ ವ್ಯವಸ್ಥಾಪಕ ಮಹರ್ಷಿ ವಾಲ್ಮೀಕಿ ನಿಗಮ
  2. ಪರಶುರಾಮ್ ದುರ್ಗಣ್ಣನವರ್ ಲೆಕ್ಕಾಧೀಕ್ಷಕ
  3. ಸತ್ಯನಾರಾಯಣ ಇಟಕಾರಿ ಅಧ್ಯಕ್ಷರು ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ
    ಆಪರೇಟಿವ್ ಸೊಸೈಟಿ ನಿಯಮಿತ
  4. ನೆಕ್ಕುಂಟೆ ನಾಗರಾಜ್‌- ಇವರು ಹಿಂದೆ ಶ್ರೀರಾಮುಲು ಜೊತೆ ಇದ್ದರು.
  5. ನಾಗೇಶ್ವರರಾವ್, ನೆಕ್ಕುಂಟೆ ನಾಗರಾಜ್ ಅವರ ಭಾವಮೈದುನ
  6. ಎಂ ಚಂದ್ರ ಮೋಹನ್, ಹೈದರಾಬಾದ್
  7. ಗಾದಿರಾಜು ಸೂರ್ಯನಾರಾಯಣ ವರ್ಮ, ಹೈದರಾಬಾದ್
  8. ಜಗದೀಶ್ ಜಿ ಕೆ ಉಡುಪಿ
  9. ತೇಜ ತಮಟಂ, ಬೆಂಗಳೂರು
  10. ಪಿಟ್ಟಲ ಶ್ರೀನಿವಾಸ ಗಚ್ಚಿ ಬೌಲಿ
  11. ಸಾಯಿತೇಜ ಹೈದರಾಬಾದ್
    12.ಕಾಕಿ ಶ್ರೀನಿವಾಸ ರಾವ್, ಆಂಧ್ರಪ್ರದೇಶ.

10) ವಿರೋಧ ಪಕ್ಷದವರು ಉದ್ದೇಶಪೂರ್ವಕವಾಗಿಯೆ ಅನೇಕ ವಿಚಾರಗಳನ್ನು ಮರೆಮಾಚುತ್ತಿದ್ದಾರೆ. ಪ್ರಮುಖವಾಗಿ, ಬ್ಯಾಂಕಿನವರೆ ದಿನಾಂಕ 3-6-2024 ರಂದು ಸಿಬಿಐಗೆ ನೀಡಿರುವ ದೂರಿನಲ್ಲಿ ಒಪ್ಪಿಕೊಂಡಿರುವ ಹಾಗೆ ಎಂಜಿ ರಸ್ತೆಯ ಬ್ರಾಂಚಿನ ಅಧಿಕಾರಿಗಳು ನೇರವಾಗಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಬ್ಯಾಂಕಿನ ಅಧಿಕಾರಿಗಳು ಶಿವಕುಮಾರ ಎಂಬ ಅಕ್ರಮ ವ್ಯಕ್ತಿ [ಇದುವರೆಗೆ ತಿಳಿದು ಬಂದ ಮಾಹಿತಿಯ ಪ್ರಕಾರ ಹೈದರಾಬಾದಿನ ಸಾಯಿತೇಜ ಎಂಬ ವ್ಯಕ್ತಿಯನ್ನು ಶಿವಕುಮಾರ ಎಂದು ಹೇಳಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ] ಯ ವಿವರಗಳನ್ನು ಸರಿಯಾಗಿ ಪರಿಶೀಲಿಸದೆ ಅಕ್ರಮವಾಗಿ ಹಣ ವರ್ಗಾಯಿಸಲು ನೆರವಾಗಿದ್ದಾರೆ. ಈ ಮಾತನ್ನು ನಾನು ಹೇಳುತ್ತಿಲ್ಲ. ಬ್ಯಾಂಕಿನವರೆ ಹೇಳಿದ್ದಾರೆ. ಈ ಅಕ್ರಮ ವ್ಯಕ್ತಿಗೆ ಚೆಕ್ ಬುಕ್ಕನ್ನು ಕೊಟ್ಟಿದ್ದು ಯಾಕೆ? ಆ ಚೆಕ್ಕುಗಳನ್ನು ಆಧರಿಸಿ
NEFT / RTGS ಮಾಡಲು ಅವಕಾಶಕೊಟ್ಟಿದ್ದು ಏಕೆ?

  • ಎಂಜಿ ರಸ್ತೆಯ ಶಾಖೆಯ ಮುಖ್ಯಸ್ಥರು ಉಪ ಮುಖ್ಯಸ್ಥರು ಚೆಕ್ಕುಗಳನ್ನು ಸರಿಯಾಗಿ ಪರಿಶೀಲಿಸದೆ ಅಕ್ರಮ ಎಸಗಿದ್ದಾರೆ ಎಂದು ಬ್ಯಾಂಕಿನವರೆ ಹೇಳಿದ್ದಾರೆ. ಇದನ್ನೆಲ್ಲ ಆಧರಿಸಿಯೇ ಬ್ಯಾಂಕಿನ ಮೇಲಧಿಕಾರಿಗಳು ಸಿಬಿಐಗೆ ಬರೆದ ದೂರಿನಲ್ಲಿ ತಮ್ಮ ಸಿಬ್ಬಂದಿಯ / ಅಧಿಕಾರಿಗಳ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ.
  • ವಿರೋಧ ಪಕ್ಷದವರಿಗೆ ನಾನು ಕೇಳಬಯಸುವುದೇನೆಂದರೆ, ಯೂನಿಯನ್ ಬ್ಯಾಂಕು ರಾಷ್ಟ್ರೀಕೃತ ಬ್ಯಾಂಕ್ ಅಥವಾ ಖಾಸಗಿ ಬ್ಯಾಂಕೊ? ರಾಷ್ಟ್ರೀಕೃತ ಬ್ಯಾಂಕು ಹೌದಾದರೆ ಕೇಂದ್ರದ ಯಾವ ಇಲಾಖೆಯ ಕೆಳಗೆ ಬರುತ್ತಾರೆ? ಹಣಕಾಸು ಇಲಾಖೆಯ ಕೆಳಗೆ ತಾನೆ? ಹಣಕಾಸು ಇಲಾಖೆ ಯಾರ ಅಧೀನದಲ್ಲಿದೆ? ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಹಗರಣದ
    ಜವಾಬ್ದಾರಿಯನ್ನು ಹೊರುತ್ತಾರೆಯೆ? ನಾನು ಯಾಕೆ ಈ ಪ್ರಶ್ನೆಯನ್ನು ಕೇಳಿದೆ ಎಂದರೆ 47.16 ಕೋಟಿ ರೂಗಳ ರಾಜ್ಯದ APMC ಯಲ್ಲಿ ಹಗರಣ ನಡೆದಾಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಬೊಮ್ಮಾಯಿ ಗೃಹ ಸಚಿವರು ಹಾಗೂ ಎಪಿಎಂಸಿ ಸಚಿವರೂ ಆಗಿದ್ದರು. ಈಗ ವಾಲ್ಮೀಕಿ ನಿಗಮದಲ್ಲಿ ಯಾವ ನಿಗಮದಲ್ಲಿ ಯಾವ ರೀತಿ ಹಗರಣ ನಡೆದಿತ್ತೊ ಅದೇ ರೀತಿಯಲ್ಲಿ ಹಗರಣ ನಡೆದಿತ್ತು. ಆದರೆ ಬ್ಯಾಂಕಿನವರು ತಮ್ಮ ಸಸ್ಪೆನ್ಸ್ ಅಕೌಂಟಿನಲ್ಲಿದ್ದ ಹಣವನ್ನು ತೆಗೆದು ವಾಪಸ್ಸು ತುಂಬಿದ್ದರು. ಈಗ ಹಣ ವಾಪಸ್ಸು ತುಂಬಿ ಎಂದು ಸಿಬಿಐಗೆ ಪತ್ರ ಬರೆದಿದ್ದಾರೆ. ವಾಪಸ್ಸು ಕಟ್ಟದಂತೆ ತಡೆದ ಶಕ್ತಿಗಳು ಯಾವುವು? ಎಂಬುದು ಕೂಡ ತನಿಖೆಯಿಂದ ಬಯಲಾಗಬೇಕು. ಸಸ್ಪೆನ್ಸ್ ಖಾತೆಯಿಂದ ಹಣ ವಾಪಾಸ್ ಕೊಟ್ಟರೆ ಲೂಟಿ ಮಾಡಿದವರಿಂದ ವಸೂಲಿ ಮಾಡುವುದು ಯಾವಾಗ? ಅದಕ್ಕೆ ಯಾರು ಜವಾಬ್ದಾರರು?

II) ವಾಲ್ಮೀಕಿ ಅಭಿವೃದ್ಧಿ ನಿಗಮದ ಹೆಸರಿನಲ್ಲಿ ಹಾಗೂ ಇತರೆ ಯಾವುದೇ ನಿಗಮದಲ್ಲಿ ಖಾತೆ ತೆರೆಯುವುದು, ವರ್ಗಾಯಿಸುವುದು ಮತ್ತು ತಮಗೆ ಬಿಡುಗಡೆಯಾದ ಅನುದಾನಗಳನ್ನು ಸಮರ್ಪಕ ರೀತಿಯಲ್ಲಿ ಜನರ ಕಲ್ಯಾಣಕ್ಕೆ ಬಳಸುವುದು ಮುಖ್ಯಸ್ಥರಾದ ವ್ಯವಸ್ಥಾಪಕ ನಿರ್ದೇಶಕರ ಜವಾಬ್ದಾರಿಯಾಗಿರುತ್ತದೆ.

12) ದಿನಾಂಕ:26.02.2014 ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಂ.ಜಿ.ರಸ್ತೆ ಶಾಖೆಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಒಂದು ಪತ್ರವನ್ನು ಸಲ್ಲಿಸಿರುತ್ತಾರೆ. ಆ ಪತ್ರದಲ್ಲಿ ಉಳಿತಾಯ ಖಾತೆಯನ್ನು ವ್ಯವಸ್ಥಾಪಕ ನಿರ್ದೇಶಕರು ಮತ್ತು ಲೆಕ್ಕಾಧಿಕಾರಿಯವರು ಜಂಟಿಯಾಗಿ ನಿರ್ವಹಿಸುತ್ತಾರೆಂದು ತಿಳಿಸಿದ್ದು, ಎರಡು ಮಾದರಿ ಸಹಿ, ಇತರೆ ಕೆ.ವೈ.ಸಿ. ವಿವರಗಳು ಹಾಗೂ ದಾಖಲೆಗಳನ್ನು ಸಲ್ಲಿಸಿರುತ್ತಾರೆ.

13) ದಿನಾಂಕ: 04.03.2024 ರಂದು ವ್ಯವಸ್ಥಾಪಕ ನಿರ್ದೇಶಕರು ಮತ್ತು ಲೆಕ್ಕಾಧಿಕಾರಿಗಳು ಜಂಟಿಯಾಗಿ ಬ್ಯಾಂಕಿಗೆ ಪತ್ರವನ್ನು ನೀಡಿದಂತೆ ಅಕ್ರಮ ಪತ್ರ ನೀಡಲಾಗಿದೆಯೆಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಉಳಿತಾಯ ಖಾತೆಗೆ ಸಂಬಂಧಪಟ್ಟಂತೆ ಎಲ್ಲಾ ರೀತಿಯ ವ್ಯವಹಾರಗಳನ್ನು ಅಂದರೆ, ಚೆಕ್‌ಬುಕ್ ಪಡೆಯುವುದು, ಫಿಕ್ಸೆಡ್ ಡೆಪಾಸಿಟ್ ರಸೀದಿಯನ್ನು ಪಡೆಯುವುದು, ಓವರ್ ಡ್ರಾಫ್ಟ್ ದಾಖಲೆಗಳನ್ನು ಪಡೆಯುವುದು ಹಾಗೂ ನಿಗಮದ ಎಲ್ಲಾ ವ್ಯವಹಾರಗಳನ್ನು ಈ ಖಾತೆಯಲ್ಲಿ ನಿರ್ವಹಿಸಲು ನಕಲಿ ಪತ್ರವೊಂದನ್ನು ಸೃಷ್ಟಿಸಿ, ಅದರಲ್ಲಿ ನಿಗಮದಲ್ಲಿಯೇ ಇಲ್ಲದ ಶ್ರೀ ಶಿವಕುಮಾರ್‌ ಎಂಬ ಅಕ್ರಮ ವ್ಯಕ್ತಿಯನ್ನು ಸೃಷ್ಟಿಸಿ ಅವನನ್ನು ಕಿರಿಯ ಲೆಕ್ಕಾಧಿಕಾರಿ ಎಂದು ಹೇಳಿ ಆತನೇ ಇನ್ನು ಮುಂದಿನ ಅಧಿಕೃತ ಸಹಿದಾರ ಎಂದು ಅನಧಿಕೃತವಾಗಿ ಮಾಡಿ ಆತನ ವಶಕ್ಕೆ ಚೆಕ್ ಬುಕ್‌ನ್ನು ನೀಡಬೇಕೆಂದು ತಿಳಿಸುವ ಪತ್ರವೊಂದನ್ನು ನೀಡಿ, ಚೆಕ್‌ಬುಕ್ಕನ್ನು 04.03.2024 ರಂದು ಪಡೆದಿರುವುದಾಗಿ ತಿಳಿದು ಬಂದಿರುತ್ತದೆ. ಈ ಶಿವಕುಮಾರ್ ಎಂಬ ವ್ಯಕ್ತಿ ನಿಜವಾಗಿ ವಾಲ್ಮೀಕಿ ನಿಗಮದ ಸಿಬ್ಬಂದಿಯೆ? ಎಂಬ ಬಗ್ಗೆ ಬ್ಯಾಂಕಿನ ಮ್ಯಾನೇಜರ್ ತಿಳಿದುಕೊಳ್ಳುವ ಪ್ರಯತ್ನವನ್ನೆ ಮಾಡಲಿಲ್ಲ.

14) ನಿರ್ದೇಶಕರ ಮಂಡಳಿ ಸಭೆ ದಿನಾಂಕ;30-3-2024 ರಂದು ನಡೆಯಿತೆಂದು ಬ್ಯಾಂಕಿಗೆ ತಿಳಿಸಲಾಗಿದೆಯೆಂಬಂತೆ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಆದರೆ ಚುನಾವಣೆಯ ಕೋಡ್ ಆಫ್ ಕಂಡಕ್ಟ್ ಇರುವಾಗ ಯಾವ ಸಭೆ ನಡೆಯಲು ಹೇಗೆ ಸಾಧ್ಯ?

15) ಚುನಾವಣಾ ಸಂದರ್ಭದಲ್ಲಿ ಇಷ್ಟು ದೊಡ್ಡ ಪ್ರಮಾಣದ ವ್ಯವಹಾರಗಳು ನಡೆಯುವಾಗ ಆದಾಯ ತೆರಿಗೆ ಇಲಾಖೆಯವರು ಬ್ಯಾಂಕನ್ನು ಬ್ಯಾಂಕನ್ನು ಕೇಳಲಿಲ್ಲವೆ? ಬ್ಯಾಂಕಿನವರು ಚುನಾವಣಾ ಆಯೋಗದ ಗಮನಕ್ಕೆ ತರಬೇಕಾಗಿಲ್ಲ. ಯಾಕೆ ತರಲಿಲ್ಲ? ಬ್ಯಾಂಕಿನ ಮ್ಯಾನೇಜರ್ ಆದಿಯಾಗಿ ಅನೇಕ ಅಧಿಕಾರಿ, ಸಿಬ್ಬಂದಿಗಳು ವಾಲ್ಮೀಕಿ ನಿಗಮದ ಅಧಿಕಾರಿ ಸಿಬ್ಬಂದಿ ಮತ್ತು ಹೊರಗಿನ ಖಾಸಗಿ Fraud ಮಾಡುವ ವ್ಯಕ್ತಿಗಳು ಸೇರಿ ಇದು ಮಾಡಿರುವ ಹುನ್ನಾರ ಎಂದು ವ್ಯಕ್ತವಾಗುತ್ತದೆ. ತನಿಖೆಯಿಂದ ಈ ಎಲ್ಲಾ ಅಂಶಗಳು ಬಯಲಾಗುತ್ತವೆ.

16) ನಿಗಮದವರು ಹೊಸ ಖಾತೆ ತೆರೆಯಬೇಕಾದರೆ, ಖಾತೆ ವರ್ಗಾವಣೆ ಮಾಡಬೇಕಾದರೆ ಆರ್ಥಿಕ ಇಲಾಖೆಯ ಗಮನಕ್ಕೆ ತರಬೇಕು, ಅನುಮತಿ ಪಡೆದುಕೊಳ್ಳಬೇಕು. ಆದರೆ ಈ ಯಾವ ಕೆಲಸವನ್ನೂ ಮಾಡಿಲ್ಲ. ನೇರವಾಗಿ ಖಾತೆಯ ವಿವರವನ್ನು ಖಜಾನೆ-2 ರಲ್ಲಿ ಅಪ್ ಲೋಡ್ ಮಾಡಿದ್ದಾರೆ. ದಿನಾಂಕ: 19.03.2024 ರಂದು ಡಿಡಿಓ ಕಛೇರಿ, ಅಂದರೆ ನಿರ್ದೇಶಕರು, ಪರಿಶಿಷ್ಟ ಪಂಗಡಗಳ ಇಲಾಖೆಯ ವ್ಯವಸ್ಥಾಪಕರು ಹೊಸ ಬ್ಯಾಂಕ್ ಖಾತೆಯನ್ನು ಕೆ-2 ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದನ್ನು ಡಿ.ಡಿ.ಓ.ರವರು (ನಿರ್ದೇಶಕರು, ಪರಿಶಿಷ್ಟ ಪಂಗಡಗಳ ಇಲಾಖೆ) ಅನುಮೋದಿಸಿದ್ದಾರೆ. ಡಿ.ಡಿ.ಒ.ರವರ ಜವಾಬ್ದಾರಿಯ ಮೇಲೆ ದಿನಾಂಕ 25-2-2024 ರಂದು 43.33 ಕೋಟಿ ರೂಪಾಯಿಗಳನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಂಜಿ ರಸ್ತೆಯ ಶಾಖೆಗೆ ಉಳಿತಾಯ ಖಾತೆಗೆ ವರ್ಗಾಯಿಸಲಾಗಿದೆ. ವರ್ಷದ ಕಡೆಯಲ್ಲಿ ಆಯವ್ಯಯದಲ್ಲಿ ಕಲ್ಪಿಸಿದ ಅನುದಾನವನ್ನು ಎಲ್ಲರಿಗೂ ಬಿಡುಗಡೆ ಮಾಡುವ ಹಾಗೆಯೇ ಈ ಖಾತೆಗೂ ಹಣ ಬಿಡುಗಡೆಯಾಗಿದೆ. ಯೂನಿಯನ್ ಬ್ಯಾಂಕು ಕೂಡ ರಾಷ್ಟ್ರೀಕೃತ ಬ್ಯಾಂಕೆ, ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಕಳ್ಳತನ ನಡೆದಿದೆ.

ಅಶೋಕ್ ಅವರು ನಿಗಮಕ್ಕೆ ಹಣ ಯಾಕೆ ಬಿಡುಗಡೆ ಮಾಡಿದ್ದು ಎಂದು ಕೇಳಿದ್ದಾರೆ. ಹಣ ವರ್ಷ ವರ್ಷವೂ ಬಿಡುಗಡೆಯಾಗಲೇಬೇಕು. ಇಲ್ಲದಿದ್ದರೆ ಲ್ಯಾಪ್ಸ್ ಆಗುತ್ತದೆ. ವಿಚಾರ ಇರುವುದು ಹಣ ಯಾಕೆ ಬಿಡುಗಡೆ ಮಾಡಿದ್ದು ಎಂಬುದಲ್ಲ. ಬಿಡುಗಡೆ ಮಾಡಿದ ಹಣವನ್ನು ಹೇಗೆ ಬಳಕೆ ಮಾಡಲಾಗುತ್ತದೆ ಎಂಬುದು ಮುಖ್ಯ. ಬಿಡುಗಡೆ ಮಾಡಿದ ಹಣಕ್ಕೆ ನಾನು ಟ್ರಸ್ಟಿ ಎಂಬ ನೈತಿಕತೆ ಪ್ರತಿಯೊಬ್ಬರಿಗೂ ಇರಬೇಕಾಗುತ್ತದೆ. ಕಳ್ಳತನ ಮಾಡಿ ಎಂದು ನಾವು ಹಣ ಬಿಡುಗಡೆ ಮಾಡುತ್ತೇವಾ? ಆದರೆ ಕಳ್ಳತನ ಮಾಡಿದ್ದಾರೆ. ಕಳ್ಳತನ ಮಾಡಿದವರು ಯಾರೇ ಆಗಿದ್ದರೂ ಕಳ್ಳರೆ, ಕಳ್ಳರನ್ನು ಈ ಸರ್ಕಾರವು ಸಹಿಸುವುದಿಲ್ಲ. ಬಿಜೆಪಿಯವರು ಇಮ್ಯುನಿಟಿ ಬೂಸ್ಟರ್ ನೀಡಿದ ಹಾಗೆ ನಾವು ನೀಡುವುದಿಲ್ಲ.

18) ಯಾವುದೇ ಸಂದರ್ಭದಲ್ಲಿ ಕಳ್ಳರು ಏಕಾಏಕಿ ಹುಟ್ಟುವುದಿಲ್ಲ. ಅವರು ಪ್ರೊಫೆಶನಲ್ ಆಗಬೇಕಾದರೆ ಅವರಿಗೆ ಹಿಂದೆ ಬಹಳ ಇಮ್ಯುನಿಟಿ ಸಿಕ್ಕಿರುತ್ತದೆ. ಹಾಗಾಗಿ ಕಳ್ಳರು ಎಲ್ಲಿಂದ ಪ್ರಾರಂಭವಾದರು? ಹೇಗೆ ಪ್ರಾರಂಭವಾದರು? ಅವರನ್ನು ಬೆಳೆಸಿದವರು ಯಾರು? ಎಂಬುದೆಲ್ಲ ಬಹಳ ಮುಖ್ಯವಾದ ಸಂಗತಿಗಳು. ಈ ಎಲ್ಲವುಗಳನ್ನು ತನಿಖಾ ಸಂಸ್ಥೆಗಳು ಗಮನದಲ್ಲಿಟ್ಟುಕೊಂಡು ತನಿಖೆ ನಡೆಸಬೇಕಾಗಿದೆ.

19) ಈ ವಿಷಯದಲ್ಲಿ ಆರೋಪಿಗಳಾಗಿರುವ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ. ಪದ್ಮನಾಭ 2017-18 ನೇ ಸಾಲಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಬೆಂಗಳೂರು ನಗರ ಜಿಲ್ಲೆಯಲ್ಲಿ ಜಿಲ್ಲಾ ವ್ಯವಸ್ಥಾಪಕರಾಗಿರುವ ಸಂದರ್ಭದಲ್ಲಿ ಈ ವಾಲ್ಮೀಕಿ ನಿಗಮದಲ್ಲಿ ಮಾಡಿದ ಮಾದರಿಯಲ್ಲಿ 4.96 ಕೋಟಿಗೂ ಹೆಚ್ಚು ಅವ್ಯವಹಾರ ನಡೆಸಿದ್ದ ಆರೋಪದ ಮೇಲೆ ಅಮಾನತ್ತಾಗಿ ಇಲಾಖಾ ವಿಚಾರಣೆ ಪ್ರಾರಂಭಿಸಲಾಗಿತ್ತು. ಆದರೆ, ಅವರನ್ನು ನಿಮ್ಮ ಸರ್ಕಾರ ಆರೋಪಮುಕ್ತಗೊಳಿಸಿ ಆದೇಶಿಸಿತ್ತು.

20) ಹಾಗಿದ್ದರೆ, ಈ ಪದ್ಮನಾಭನನ್ನು ಆರೋಪಮುಕ್ತಗೊಳಿಸಿದ್ದಾಗ ಅಧಿಕಾರದಲ್ಲಿ ಬಿಜೆಪಿ ಸರ್ಕಾರವೆ ಇತ್ತು. ಹಾಗಾಗಿ ಆರೋಪ ಮುಕ್ತಗೊಳಿಸಿ ಅವನಿಗೆ ಇನ್ನೂ ದೊಡ್ಡ ದರೋಡೆ ಮಾಡಲು ಇಮ್ಯುನಿಟಿಯನ್ನು ಒದಗಿಸಿಕೊಟ್ಟಿದ್ದು ಬಿಜೆಪಿ ಸರ್ಕಾರವೇ ಅಲ್ಲವೆ? ಬಿಜೆಪಿ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳು ಪ್ರಕರಣವನ್ನು ಸರಿಯಾಗಿ ನಿಭಾಯಿಸಿದ್ದರೆ ಆತ ಆರೋಪಮುಕ್ತನಾಗುತ್ತಿದ್ದನೆ?

21) ಪರಿಶಿಷ್ಟ ಜಾತಿ/ ಪಂಗಡಗಳ, ಹಿಂದುಳಿದವರ, ರೈತರ, ಕಾರ್ಮಿಕರ, ರೈತರ, ಮಹಿಳೆಯರ ಏಳಿಗೆಗಾಗಿ ಅವರ ಬದುಕು ಸುಧಾರಿಸುವುದಕ್ಕಾಗಿ ನಮ್ಮ ಸರ್ಕಾರ ಯಾವುದೇ ತ್ಯಾಗಕ್ಕೂ ಸಿದ್ಧ. ಈ ವರ್ಗಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ಒಂದು ರೂಪಾಯಿಯನ್ನೂ ಕದಿಯಲು ಬಿಡುವುದಿಲ್ಲ. ದುರುಪಯೋಗವಾಗಲು ಬಿಡುವುದಿಲ್ಲ.

22) ಬಿ.ಜೆ.ಪಿ. ಸರ್ಕಾರದ ಅವಧಿಯಲ್ಲಿ ಅಸಂಖ್ಯಾತ ಹಗರಣಗಳು ನಡೆದಿವೆ. ಕೆಲವು ಮುಖ್ಯ ಹಗರಣಗಳ ಮಾಹಿತಿಯನ್ನು ಸದನದಲ್ಲಿ ಸದನದಲ್ಲಿ ಅನುಬಂಧ-2 ಅನುಬಂಧ-2 ರಲ್ಲಿಟ್ಟು ಮಂಡಿಸುತ್ತಿದ್ದೇನೆ. ತಿಂದವರು ತಿಂದುಕೊಂಡು ಹೋಗಲಿ ಎಂದು ಬಿಡುವುದಕ್ಕೆ ನಮ್ಮದು ಯಡಿಯೂರಪ್ಪನವರ ಸರ್ಕಾರವಲ್ಲ, ಬೊಮ್ಮಾಯಿಯವರ ಸರ್ಕಾರವೂ ಅಲ್ಲ. ಮೋದಿ ಸರ್ಕಾರವೂ ಅಲ್ಲ. ಯಾರೇ ತಪ್ಪೆಸಗಿದ್ದರೂ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ. We will not compromise with corruption.

23) ಕಳ್ಳರಿಗೆ ಇಮ್ಯುನಿಟಿ ಸಿಕ್ಕಾಗ ಮಾತ್ರ ಬಲಿತುಕೊಳ್ಳುತ್ತಾರೆಂದು ಆಗಲೆ ಹೇಳಿದೆ. ಹಿಂದಿನ ಇಬ್ಬರು ಮುಖ್ಯ ಮಂತ್ರಿಗಳ ಕಾಲದಲ್ಲಿ ಈ ಕಳ್ಳರನ್ನು ಮಟ್ಟ ಹಾಕಿದ್ದರೆ, ಅಥವಾ ಮೋದಿ ಸರ್ಕಾರ ಖದೀಮ ಬ್ಯಾಂಕ್ ಮ್ಯಾನೇಜರುಗಳನ್ನು ಮಟ್ಟ ಹಾಕಿದ್ದರೆ ಇಂದು ದೇಶದಲ್ಲಿ ಈ ರೀತಿಯ ಪ್ರಕರಣಗಳು ನಡೆಯುತ್ತಿದ್ದವೆ? ದೇಶದ ಎಷ್ಟೊಂದು ಬ್ಯಾಂಕುಗಳಲ್ಲಿ ಈ ರೀತಿಯ ಪ್ರಕರಣಗಳು ನಡೆದಿವೆ ಎಂಬ ಮಾಹಿತಿಯನ್ನು ಆರ್‌ಬಿಐ ಪ್ರಕಟಿಸಬೇಕು ಆಗ ಸತ್ಯಾಂಶ ಹೊರಬರುತ್ತದೆ.

24) ಕರ್ನಾಟಕದಲ್ಲಿ ಕಳೆದ 5-6 ವರ್ಷಗಳಲ್ಲಿ ಅನೇಕ ಬ್ಯಾಂಕುಗಳಲ್ಲಿ ಫ್ರಾಡುಗಳು ನಡೆದಿವೆ. ರಾಷ್ಟ್ರೀಕೃತ ಬ್ಯಾಂಕುಗಳು ಯಾರ ಅಧೀನದಲ್ಲಿವೆ? ಆ ಖದೀಮ ಮ್ಯಾನೇಜರುಗಳು ಯಾರ ಅಧೀನದಲ್ಲಿದ್ದಾರೆ? ಕೇಂದ್ರದ ಹಣಕಾಸು ಸಚಿವರ ಅಧೀನದಲ್ಲಿದ್ದಾರೆ ತಾನೆ? ಅಂತಿಮವಾಗಿ ಮೋದಿಯವರ ಅಧೀನದಲ್ಲಿದ್ದಾರೆ ತಾನೆ? ನಮ್ಮ ಜನರ ದುಡ್ಡನ್ನು ಹೇಗೆಂದರೆ ಹಾಗೆ ಲೂಟಿ ಮಾಡುವುದಕ್ಕಾ ಈ ಬ್ಯಾಂಕುಗಳು ಇರುವುದು?

25) ಇದೇ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಿಂದೆಯೂ ಹಗರಣಗಳಾಗಿವೆ. ಹಗರಣಗಳನ್ನು ಹೊರತರುವ ಕೆಲಸವನ್ನು ನಾವು ಮಾಡುತ್ತೇವೆ. ವಿವಿಧ ಆರೋಪಿಗಳಿಂದ 34.25 ಕೋಟಿ ಹಣ ವಸೂಲಿ ಮಾಡಲಾಗಿದೆ. ಇದುವರೆಗೆ ಸರ್ಕಾರವು 85,25,07,698 ರೂ. ಹಣವನ್ನು (ರೂ. 85.25 ಕೋಟಿ) ವಿವಿಧ ಹಂತಗಳಲ್ಲಿ ತನ್ನ ವಶಕ್ಕೆ ಪಡೆದಿದೆ. ಉಳಿದದ್ದನ್ನು ವಶಕ್ಕೆ ಪಡೆಯುವ ಕೆಲಸ ಮಾಡುತ್ತಿದೆ. ಈ ವಿವರನ್ನು ಅನುಬಂಧ-2 ರಲ್ಲಿಟ್ಟು ಮಂಡಿಸುತ್ತಿದ್ದೇನೆ. ನಿಮ್ಮ ಅವಧಿಯಲ್ಲಿ ನಡೆದಿರುವ ಹಗರಣಗಳಲ್ಲಿ ಎಷ್ಟು ಮೊತ್ತವನ್ನು ರಿಕವರಿ ಮಾಡಿದ್ದೀರಿ ಹೇಳಿ? ನಾವು ತಪ್ಪು ಮಾಡಿದವರನ್ನು ಜೈಲಿಗೂ ಕಳಿಸಿದ್ದೇವೆ. ಹಣವನ್ನೂ ವಾಪಸ್ಸು ತರುತ್ತಿದ್ದೇವೆ. ಆದರೆ ನೀವು ಕಳ್ಳರು ಇನ್ನಷ್ಟು ಕಳ್ಳರಾಗುವಂತೆ ಮಾಡಿದಿರಿ. ಲೂಟಿ ಮಾಡಿದ ಹಣವನ್ನೂ ವಾಪಸ್ಸು ತರಲಿಲ್ಲ.

26) ಅಂತಿಮವಾಗಿ, ಈಗಾಗಲೇ ಈ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರವು CID, SIT ಗೆ ನೀಡಿ ಆದೇಶಿರುತ್ತದೆ. ಸಿ.ಬಿ.ಐ. ಹಾಗೂ ಇ.ಡಿ. ಸಂಸ್ಥೆಗಳೂ ಕೂಡ ತನಿಖೆ ನಡೆಸುತ್ತಿವೆ. ಈ ಹಗರಣದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಹಾಗೂ ನಿಗಮದ ಖಾತೆಯಿಂದ ಯಾರ ಖಾತೆಗಳಿಗೆ ಹಣ ವರ್ಗಾವಣೆಯಾಗಿರುತ್ತದೆ ಹಾಗೂ ಇದರ ಮೂಲ (Ultimate) ಫಲಾನುಭವಿಗಳು ಯಾರು ಎಂಬುದು ತನಿಖೆಯು ಪೂರ್ಣಗೊಂಡ ನಂತರವೇ ತಿಳಿಯುತ್ತದೆ. ಕಾರಣಕರ್ತರು ತನಿಖೆ ನಡೆಯುತ್ತಿರುವಾಗ ನಾನು ಯಾವುದೇ ವ್ಯಕ್ತಿಯ ಬಗ್ಗೆ ಸ್ಪಷ್ಟವಾಗಿ ಇವರೇ ಎಂದು ಹೇಳಿದರೆ ತಪ್ಪಾಗುತ್ತದೆ. ಹಾಗೂ ತನಿಖಾ ಸಂಸ್ಥೆಯ ತನಿಖೆಯನ್ನು ದಾರಿ ತಪ್ಪಿಸಿದಂತಾಗುತ್ತದೆ. ಆದುದರಿಂದ, ತನಿಖೆ ಮುಗಿಯುವವರೆಗೂ ಕಾಯಬೇಕಾಗುತ್ತದೆ. ತದನಂತರ ತನಿಖೆಯ ಫಲಿತಾಂತದ ಆಧಾರದ ಮೇಲೆ ತಪ್ಪಿಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಹಾಗೂ ನಿಗಮಕ್ಕೆ ಹಣ ವಾಪಸ್ಸು ಪಡೆಯುವ ಕೆಲಸ ಮಾಡಬೇಕಾಗುತ್ತದೆ.

27) ರಾಜ್ಯ ಸರ್ಕಾರವು ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಜೆ.ಜಿ. ಪದ್ಮನಾಭ, ಹಾಗೂ ಲೆಕ್ಕಾಧೀಕ್ಷಕ ಪರಶುರಾಮ್ ದುರ್ಗಣ್ಣನವರ್ ಇವರನ್ನು ಅಮಾನತ್ತು ಮಾಡಿದೆ. ಎಸ್.ಐ.ಟಿ. ಯು ಬಂಧಿಸಿ ಜೈಲಿಗೆ ಅಟ್ಟಿದೆ. ಇಲಾಖೆಯ ಸಚಿವರಾಗಿದ್ದ ನಾಗೇಂದ್ರ ಅವರು ರಾಜೀನಾಮೆ ನೀಡಿ ವಿಚಾರಣೆ ಎದುರಿಸುತ್ತಿದ್ದಾರೆ. ಅವರನ್ನು ಇ.ಡಿ. ಯು ಬಂಧಿಸಿದೆ. ಹಾಗೆಯೇ, ಬ್ಯಾಂಕಿನ ಸಿಬ್ಬಂದಿಗಳನ್ನು ಸಹ ಎಸ್.ಐ.ಟಿ. ಯವರೆ ಅರೆಸ್ಟ್ ಮಾಡಿ ಜೈಲಿಗೆ ಅಟ್ಟಿದ್ದಾರೆ.

28) ಈ ಹಗರಣದಲ್ಲಿ ಹಣಕಾಸು ಇಲಾಖೆಯ ಯಾವುದೇ ಪಾತ್ರ ಇರುವುದಿಲ್ಲ. ಹಣಕಾಸು ಇಲಾಖೆಯ ಆದೇಶದಂತೆ, ಆಯವ್ಯಯದಲ್ಲಿ ತಿಳಿಸಿದಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ನಿಗಮಕ್ಕೆ 4 ಕಂತುಗಳಲ್ಲಿ ಅನುದಾನ ಬಿಡುಗಡೆ ಮಾಡಿರುತ್ತದೆ. ಆಡಳಿತ ಇಲಾಖೆಯ ಆದೇಶದ ನಂತರ ಸಂಬಂಧಪಟ್ಟ DDO (Drawing and Disbursing Officer) (ನಿರ್ದೇಶಕರು, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ) ಇವರು ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕೋರಿಕೆಯಂತೆ, ಖಜಾನೆಯಿಂದ ಹಣ ಸೆಳೆದು ನಿಗಮದ ಖಾತೆಗೆ ಜಮೆ ಮಾಡಿರುತ್ತಾರೆ. ಇದು ಇಲಾಖೆಯಲ್ಲಿ ಪ್ರತಿ ಕಂತಿನ ಹಣವನ್ನು ಸೆಳೆಯಲು ಇರುವಂತಹ ವಿಧಾನ (Procedure).

ಮಾನ್ಯ ವಿರೋಧ ಪಕ್ಷದ ನಾಯಕರು ಎನ್.ಟಿ.ಟಿ. ಮಾಡ್ಯೂಲ್ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅದರಿಂದ ಎಲ್ಲಾ ಬ್ಯಾಂಕ್ ಖಾತೆಗಳಲ್ಲಿ ನಡೆಯುವ ಟ್ರಾನ್ಸಾಕ್ಷನ್ ಆರ್ಥಿಕ ಇಲಾಖೆಗೆ ತಿಳಿಯುವುದರಿಂದ ಈ ಹಗರಣದ ಬಗ್ಗೆ ಮಾಹಿತಿ ಇದ್ದರೂ ಆರ್ಥಿಕ ಇಲಾಖೆ ಏನೂ ಮಾಡಿರುವುದಿಲ್ಲವೆಂದು ಆರೋಪಿಸಿದ್ದಾರೆ. ಆದರೆ, ಎನ್.ಟಿ.ಟಿ. ಮಾಡ್ಯೂಲ್‌ನ್ನು 2022 ರಲ್ಲಿ ಜಾರಿ ಮಾಡಲಾಗಿದೆ. ಇದರಲ್ಲಿ ದಾಖಲಾಗಿರುವ ಎಲ್ಲಾ ಬ್ಯಾಂಕ್ ಖಾತೆಗಳಲ್ಲಿ ಆಯಾ ದಿನ ಎಷ್ಟು ಹಣ ಬ್ಯಾಲೆನ್ಸ್ ಇದೆ ಎಂದು ಮಾಹಿತಿ ಖಜಾನೆಗೆ ಲಭ್ಯವಾಗುತ್ತದೆ. ಈ ಮಾಹಿತಿಯನ್ನು ಖಜಾನೆಯಿಂದ ಹಣ ಬಿಡುಗಡೆಗೊಳಿಸಲು ಓಪನಿಂಗ್ ಬ್ಯಾಲೆನ್ಸ್ ನಿರ್ಧಿಷ್ಟಪಡಿಸಲು ನೆರವಾಗುತ್ತದೆ. ಆಧಾರದ ಮೇಲೆ ಹೊಸದಾಗಿ ಹಣ ಬಿಡುಗಡೆಗೊಳಿಸಲು ನಿರ್ಧಾರ ಮಾಡಲಾಗುವುದು. ಇದನ್ನು ಹೊರತುಪಡಿಸಿ ಯಾವುದೇ ಖಾತೆಯಲ್ಲಿರುವ ಪ್ರತಿದಿನದ ವಹಿವಾಟಿನ ಮಾಹಿತಿ ಬ್ಯಾಂಕ್‌ಗಳಿಂದ ಆರ್ಥಿಕ ಇಲಾಖೆಗೆ ಲಭ್ಯವಾಗುವುದಿಲ್ಲ.

29) ವಿರೋಧ ಪಕ್ಷದವರು ನಿಗಮದಲ್ಲಿ ನಡೆದಿರುವ ಹಗರಣದ ಕುರಿತು ಮಾತನಾಡುವಾಗ ಮುಖ್ಯಮಂತ್ರಿಗಳನ್ನು, ಆರ್ಥಿಕ ಇಲಾಖೆಯನ್ನು ಗುರಿ ಮಾಡುತಿದ್ದಾರೆ. ಆದರೆ, ರಾಜ್ಯದಲ್ಲಿ ಹಗರಣಗಳ ಸರಮಾಲೆಯನ್ನೇ ನಡೆಸಿರುವ ಯೂನಿಯನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹಾಗೂ ಇನ್ನಿತರೆ ಬ್ಯಾಂಕುಗಳು ಯಾರ ಅಧೀನದಲ್ಲಿ ಬರುತ್ತವೆ? ವಿರೋಧ ಪಕ್ಷದವರಿಗೆ ಅರ್ಥವಾಗದಿದ್ದರೆ ಬಿಡಿಸಿ ಹೇಳುತ್ತೇನೆ. ಇವೆಲ್ಲವೂ ರಾಷ್ಟ್ರೀಕೃತ ಬ್ಯಾಂಕುಗಳು, ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯ ಅಧೀನದಲ್ಲಿ ಬರುತ್ತವೆ. ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವರಾಗಿದ್ದಾರೆ. ದೇಶದಲ್ಲಿ ಹೆಚ್ಚು ಬ್ಯಾಂಕಿಂಗ್ ಹಗರಣಗಳು ಪ್ರಾರಂಭವಾಗಿದ್ದೇ ಕಳೆದ 6-7 ವರ್ಷಗಳಿಂದ ಉದಾಹರಣೆಗೆ, ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ಆಗಿರುವ ಬೃಹತ್ ಹಗರಣದ ಕುರಿತು ಯಾಕೆ ಕೇಂದ್ರ ಸರ್ಕಾರ ಯಾವುದೇ ಕ್ರಮವಹಿಸದೆ ಸುಮ್ಮನಿದೆ? ಬಡ ಠೇವಣಿದಾರರಿಗೆ ಮರಳಿಸಲಾಗಿದೆ? ಬ್ಯಾಂಕಿನ ಆಡಳಿತ ಮಂಡಳಿಯಲ್ಲಿದ್ದ ಬಲಿಷ್ಠ ರಾಜಕಾರಣಿಗಳಿಗೆ ಯಾವ ಶಿಕ್ಷೆ ಆಯಿತು? ಜಯನಗರ, ಬಸವನಗುಡಿಯ ಜನ ಮನೆಮನೆಗಳಲ್ಲಿ, ಬೀದಿ ಬೀದಿಗಳಲ್ಲಿ ಹಗರಣದಲ್ಲಿ ಭಾಗವಹಿಸಿದ್ದವರು ವಿಧಾನಸೌಧ, ಪಾರ್ಲಿಮೆಂಟಿಗೂ ಹೋಗಿದ್ದಾರೆ ಎಂದು ಮಾತನಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಸೆಲೆಕ್ಟಿವ್ ಅಪ್ರೋಚ್‌ನಿಂದಾಗಿ ಹಗರಣಗಳು ಹೆಚ್ಚಾಗುತ್ತಿವೆಯೇ ಹೊರತು,
ಕಡಿಮೆಯಾಗುತ್ತಿಲ್ಲ. ವಿರೋಧ ಪಕ್ಷಗಳ ಮುಖಂಡರ ಮೇಲೆ ಹಗರಣಗಳ ಆರೋಪಗಳಿದ್ದರೆ ಅವರನ್ನು ಬಿ.ಜೆ.ಪಿ. ಗೆ ಸೇರಿಸಿಕೊಂಡ ನಂತರವೇ ಹಗರಣ ಮುಕ್ತ ಮಾಡಲಾಗುತ್ತಿದೆ. ಹೀಗಿದ್ದರೆ ಯಾವ ಕಳ್ಳರಿಗೆ ತಾನೆ ಭಯ ಹುಟ್ಟಲು ಸಾಧ್ಯ? ವಿರೋಧ ಪಕ್ಷದವರನ್ನು ನೋಡಿದರೆ ಇಲ್ಲಿ ಗಂಟೆಗಟ್ಟಲೆ ನಿಂತು ನೈತಿಕತೆಯ ಬಗ್ಗೆ ಪಾಠ ಮಾಡುತ್ತಾರೆ.

30) ನಾನು ಪದೆ ಪದೆ ಈ ಸದನಕ್ಕೂ ನಾಡಿನ ಜನರಿಗೂ ಭರವಸೆ ನೀಡಬಯಸುತ್ತೇನೆ. ನಾವು ಪರಿಶಿಷ್ಟ ಜಾತಿ, ಪಂಗಡ, ದಮನಿತ ಸಮುದಾಯದವರಿಗೆ ಒದಗಿಸಿದ ಪ್ರತಿ ಪೈಸೆಯನ್ನೂ ಖರ್ಚು ಮಾಡುತ್ತೇವೆ ಮತ್ತು ಗುಣಾತ್ಮಕವಾಗಿ ವಿನಿಯೋಗಿಸುತ್ತೇವೆ ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಕಳ್ಳರು ಯಾರೇ ಇದ್ದರೂ ಅವರನ್ನು ನಿರ್ಧಾಕ್ಷಿಣ್ಯವಾಗಿ ಶಿಕ್ಷಿಸುತ್ತೇವೆ. ಬಿ.ಜೆ.ಪಿ. ಅವಧಿಯ ಎಲ್ಲ ಹಗರಣಗಳನ್ನೂ ತನಿಖೆಗೆ ಒಪ್ಪಿಸುತ್ತೇವೆ.

ಇದನ್ನೂ ಓದಿ: Karnataka Assembly Live: ವಿಧಾನಸಭೆಯಲ್ಲಿ ಶಾಸಕರಿಗೆ ಮಧ್ಯಾಹ್ನ ಮಲಗಲು ವ್ಯವಸ್ಥೆ ಮಾಡಿಸಿದ ಸ್ಪೀಕರ್!

Continue Reading

ಪ್ರಮುಖ ಸುದ್ದಿ

Karnataka Assembly Live: ವಿಧಾನಸಭೆಯಲ್ಲಿ ಶಾಸಕರಿಗೆ ಮಧ್ಯಾಹ್ನ ಮಲಗಲು ವ್ಯವಸ್ಥೆ ಮಾಡಿಸಿದ ಸ್ಪೀಕರ್!

Karnataka Assembly Live: “ಸದ್ಯ ಪೈಲಟ್‌ ಪ್ರಾಜೆಕ್ಟ್‌ ಆಗಿ ಇದನ್ನು ಅಳವಡಿಸಿದ್ದೇವೆ. ಪರಿಣಾಮ ನೋಡಿಕೊಂಡು ನಿಮ್ಮ ಅಭಿಪ್ರಾಯ ತಿಳಿಸಿ. ಸಕಾರಾತ್ಮಕ ಅಭಿಪ್ರಾಯ ಬಂದರೆ ಮುಂದಿನ ಅಧಿವೇಶನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸುತ್ತೇವೆ” ಎಂದು ಖಾದರ್‌ ತಿಳಿಸಿದರು. ಸ್ಪೀಕರ್‌ ಕ್ರಮಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು. ʼಇನ್ನೂ ಎರಡು ವರ್ಷದಲ್ಲಿ ಏನೇನು ಮಾಡಿಸ್ತೀರೋ ನೀವುʼ ಎಂಬ ಉದ್ಗಾರವೂ ಶಾಸಕರ ಕಡೆಯಿಂದ ಕೇಳಿಬಂತು.

VISTARANEWS.COM


on

Assembly monsoon session UT Khader karnataka assembly live
Koo

ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ (Vidhan sabha Session) ಶಾಸಕರ ಹಾಜರಾತಿ ಕೊರತೆ ತುಂಬುವ ವಿಶಿಷ್ಟ ಪ್ರಯತ್ನವೊಂದನ್ನು ಸ್ಪೀಕರ್‌ ಯ.ಟಿ ಖಾದರ್‌ (Speaker UT Khader) ಕೈಗೊಂಡಿದ್ದಾರೆ. ಮಧ್ಯಾಹ್ನ ಭೋಜನದ ಬಳಿಕ ಶಾಸಕರು ವಿಶ್ರಾಂತಿ ಪಡೆಯಲು ಸುಖಾಸನಗಳನ್ನು (ರಿಕ್ಲೈನರ್ಸ್)‌ ಹಾಕಿಸಿದ್ದು, ಇಲ್ಲಿ ಶಾಸಕರು ವಿಶ್ರಾಂತಿ ಪಡೆಯಬಹುದಾಗಿದೆ. ಈ ವಿಚಾರವನ್ನು ಸ್ಪೀಕರ್‌ ಇಂದು ಕಲಾಪದಲ್ಲಿ (karnataka assembly live) ತಿಳಿಸಿದರು.

ಇಂದು ವಿಧಾನಸಭೆ ಕಲಾಪ ಆರಂಭವಾಗುತ್ತಲೇ ಸ್ಪೀಕರ್‌ ಈ ವಿಚಾರವನ್ನು ಪ್ರಸ್ತಾವಿಸಿದರು. ಹಾಜರಾತಿಯ ಕೊರತೆಯ ಬಗ್ಗೆ ಉಲ್ಲೇಖಿಸಿದರು. ಹಾಜರಾತಿ ಹೆಚ್ಚಿಸಲು ತಾವು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿದರು. “ಶಾಸಕರು ಬೆಳಗ್ಗೆ ಬೇಗ ಬರಲಿ ಅನ್ನುವ ಉದ್ದೇಶದಿಂದ ಬೆಳಗ್ಗೆ ತಿಂಡಿಯ ವ್ಯವಸ್ಥೆ ಮಾಡಿಸಿದೆ. ಆಮೇಲೆ ಮಧ್ಯಾಹ್ನ ಊಟಕ್ಕಾಗಿ ದೂರ ಹೋಗಿ ಬರುವುದಕ್ಕೆ ತಡವಾಗುತ್ತದೆ ಎಂಬ ಕಾರಣಕ್ಕಾಗಿ ಉತ್ತಮವಾದ ಊಟದ ವ್ಯವಸ್ಥೆ ಮಾಡಿಸಲಾಗಿದೆ. ಕೆಲವರು ಊಟ ಚೆನ್ನಾಗಿತ್ತು, ಶಾಸಕರ ಭವನಕ್ಕೆ ಹೋಗಿ ನಿದ್ದೆ ಮಾಡಿ ಬರುತ್ತೇನೆ ಎಂದವನು ಬಳಿಕ ಬರುವುದೇ ಇಲ್ಲ. ಇದನ್ನು ತಡೆಯಲು ಇಲ್ಲೇ ಸುಖಾಸನಗಳನ್ನು (ರಿಕ್ಲೈನರ್ಸ್)‌ ಹಾಕಿಸಿದ್ದೇನೆ. ನಿದ್ರೆ ಬಂದರೆ ಇಲ್ಲೇ ಮಾಡಿ. ದೂರ ಹೋಗಬೇಡಿ. ನಿಮ್ಮ ಅಗತ್ಯ ಬಿದ್ದರೆ ಕೂಡಲೇ ಕರೆಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ” ಎಂದು ಸ್ಪೀಕರ್‌ ವಿವರಿಸಿದರು.

“ಸದ್ಯ ಪೈಲಟ್‌ ಪ್ರಾಜೆಕ್ಟ್‌ ಆಗಿ ಇದನ್ನು ಅಳವಡಿಸಿದ್ದೇವೆ. ಪರಿಣಾಮ ನೋಡಿಕೊಂಡು ನಿಮ್ಮ ಅಭಿಪ್ರಾಯ ತಿಳಿಸಿ. ಸಕಾರಾತ್ಮಕ ಅಭಿಪ್ರಾಯ ಬಂದರೆ ಮುಂದಿನ ಅಧಿವೇಶನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸುತ್ತೇವೆ” ಎಂದು ಖಾದರ್‌ ತಿಳಿಸಿದರು. ಸ್ಪೀಕರ್‌ ಕ್ರಮಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು. ʼಇನ್ನೂ ಎರಡು ವರ್ಷದಲ್ಲಿ ಏನೇನು ಮಾಡಿಸ್ತೀರೋ ನೀವುʼ ಎಂಬ ಉದ್ಗಾರವೂ ಶಾಸಕರ ಕಡೆಯಿಂದ ಕೇಳಿಬಂತು.

ʼಲಾಂಜ್‌ನಲ್ಲಿ ಶಿಸ್ತು ಕಾಪಾಡಿ. ಪಿಎಗಳನ್ನು ಮತ್ತಿತರರನ್ನು ಕರೆದುಕೊಂಡು ಸ್ಪೀಕರ್‌ ಕೊಠಡಿಗೆ ನುಗ್ಗಬೇಡಿ. ಮಾರ್ಷಲ್‌ಗಳ ಜೊತೆಗೆ ಗುದ್ದಾಡಬೇಡಿ. ಇದರಿಂದ ನಿಮ್ಮ ಘನತೆ ಹೆಚ್ಚುವುದಿಲ್ಲ. ಅವರು ನಮ್ಮ ಆದೇಶ ಪಾಲಿಸುತ್ತಾರೆ ಅಷ್ಟೇʼʼ ಎಂದು ಸ್ಪೀಕರ್‌ ಶಾಸಕರಿಗೆ ಕಿವಿಮಾತು ಹೇಳಿದರು.

ಕಲಾಪ ಮುಂದೂಡಿಕೆ

ಇಂದು ಕಲಾಪ ಆರಂಭವಾಗುತ್ತಿದ್ದಂತೆ ಗದ್ದಲ ಶುರುವಾಯಿತು. ವಾಲ್ಮೀಕಿ ಹಗರಣದಲ್ಲಿ (Valmiki corporation Scam) ದುಡ್ಡು ಹೊಡೆದ ಸರ್ಕಾರಕ್ಕೆ ಧಿಕ್ಕಾರ ಎಂದು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಕೂಗಿದರು. ಸದನದಲ್ಲಿ ಮತ್ತೆ ಹೋರಾಟ ಮಾಡಲು ಮುಂದಾದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ನಿಂತರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು ಕೂಡ ಎದ್ದುನಿಂತು ಕೂಗಾಡಿದರು. ಉಭಯ ಪಕ್ಷಗಳ ಸದಸ್ಯರನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗದೆ ಸದನವನ್ನು ಸ್ಪೀಕರ್‌ ಹತ್ತು ನಿಮಿಷಗಳ ಕಾಲ ಮುಂದೂಡಿದರು.

ಇದನ್ನೂ ಓದಿ: Karnataka Assembly Live: 4ನೇ ದಿನದ ವಿಧಾನಮಂಡಲ ಕಲಾಪದಲ್ಲೂ ವಾಲ್ಮೀಕಿ ಹಗರಣದ ಕರಿನೆರಳು ನಿರೀಕ್ಷೆ; ಅಸೆಂಬ್ಲಿ ಲೈವ್‌ ಇಲ್ಲಿದೆ ನೋಡಿ

Continue Reading

ಪ್ರಮುಖ ಸುದ್ದಿ

Karnataka Assembly Live: 4ನೇ ದಿನದ ವಿಧಾನಮಂಡಲ ಕಲಾಪದಲ್ಲೂ ವಾಲ್ಮೀಕಿ ಹಗರಣದ ಕರಿನೆರಳು ನಿರೀಕ್ಷೆ; ಅಸೆಂಬ್ಲಿ ಲೈವ್‌ ಇಲ್ಲಿದೆ ನೋಡಿ

Karnataka Assembly Live: ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲು ಕಡ್ಡಾಯ ವಿಧೇಯಕದ ಕುರಿತ ಚರ್ಚೆಯೂ ಭುಗಿಲೆದ್ದಿದೆ. ವಾಲ್ಮೀಕಿ, ಮುಡಾ ಹಗರಣಗಳಿಂದ ಗಮನವನ್ನು ಬೇರೆಡೆಗೆ ಹರಿಸಲು ಸಿದ್ದರಾಮಯ್ಯ ಸರಕಾರ ಈ ಭಾವನಾತ್ಮಕ ವಿಷಯ ಎತ್ತಿಹಾಕಿದೆ ಎಂಬ ಆರೋಪ ಪ್ರತಿಪಕ್ಷಗಳದ್ದಾಗಿದೆ. ಪ್ರತಿಪಕ್ಷಗಳ ಆ ಆರೋಪದ ಬಿಸಿ ಕಲಾಪದಲ್ಲೂ ಪ್ರತಿಧ್ವನಿಸಬಹುದು.

VISTARANEWS.COM


on

CM Siddaramaiah and R Ashok karnataka assembly live
Koo

ಬೆಂಗಳೂರು: ವಿಧಾನ ಮಂಡಲದ ಮೂರನೇ ದಿನದ ಕಲಾಪ (Karnataka Assembly Live) ಗದ್ದಲದಲ್ಲೇ ಮುಗಿದಿದ್ದು, ನಾಲ್ಕನೇ ದಿನವೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಲು ಪ್ರತಿಪಕ್ಷಗಳು (Opposition parties) ಮುಂದಾಗಿವೆ. ವಾಲ್ಮೀಕಿ ನಿಗಮ ಹಗರಣದ (Valmiki Corporation Scam) ಕುರಿತ ವಿಪಕ್ಷಗಳ ಆರೋಪಗಳಿಗೆ ನಿನ್ನೆ ಉತ್ತರ ನೀಡಲು ಸಿಎಂ ಸಿದ್ದರಾಮಯ್ಯ (CM Siddaramaiah) ಆರಂಭಿಸಿದ್ದು, ಇಂದು ಕೂಡ ಮುಂದುವರಿಸಲಿದ್ದಾರೆ.

ನಿನ್ನೆ ಸಿಎಂ ವಿಧಾನಸಭೆ (Vidhan Sabha) ಕಲಾಪದಲ್ಲಿ ಉತ್ತರ ನೀಡಲು ಆರಂಭಿಸುತ್ತಿದ್ದಂತೆ ಆಕ್ಷೇಪ ತೆಗೆದಿದ್ದ ಪ್ರತಿಪಕ್ಷ ಬಿಜೆಪಿ ಸದಸ್ಯರು ಗದ್ದಲ ಆರಂಭಿಸಿದ್ದರು. ವಾಲ್ಮಿಕಿ ನಿಗಮದ ಹಗರಣ ಪ್ರಕರಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಚಂದ್ರಶೇಖರ್​ ಎಂಬವರ ಡೆತ್ ನೋಟ್​ ಓದುವಾಗ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹೆಸರನ್ನೇ ಬಿಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ (R Ashok) ಆರೋಪಿಸಿದರು. ಬಳಿಕ ಬಿಜೆಪಿ ಹಾಗೂ ಜೆಡಿಎಸ್​ ಕಾರ್ಯಕರ್ತರು ಸದನದ ಬಾವಿಗೆ ಇಳಿದ ಪ್ರತಿಭಟನೆ ನಡೆಸಿದರು.

ಸಿಎಂ ಸಿದ್ದರಾಮಯ್ಯ ಅವರು ಉತ್ತರ ಕೊಡುವಾಗ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್​ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿರುವ ಹಿನ್ನೆಲೆಯಲ್ಲಿಯ ಸ್ಪೀಕರ್​ ಯುಟಿ ಖಾದರ್ (Speaker UT Khader) ಸಂಧಾನ ಸಭೆ ಕರೆದರು. ಆಡಳಿತ ಪಕ್ಷದ ಕಡೆಯಿಂದ ಸಿದ್ದರಾಮಯ್ಯ, ಎಚ್ ಕೆ ಪಾಟೀಲ್, ಜಾರ್ಜ್ ಹಾಗೂ ವಿಪಕ್ಷಗಳಿಂದ ಆರ್ ಆಶೋಕ್, ವಿಜೇಯೇಂದ್ರ, ಸುರೇಶ್ ಬಾಬು ಇದ್ದರು. ಸಂಧಾನ ಸಭೆ ನಡೆಸಿದ ಬಳಿಕವೂ ವಿಪಕ್ಷಗಳ ಸದಸ್ಯರು ತಮ್ಮ ಹೋರಾಟ ಮುಂದುವರಿಸಿದ ಕಾರಣ ಕಲಾಪ ಬಹುತೇಕ ಗದ್ದಲದಲ್ಲಿಯೇ ಅಂತ್ಯಗೊಂಡಿತು.

ನಿಯಮ‌ 69ರ ಅಡಿಯಲ್ಲಿ ನಡೆದ ವಾಲ್ಮೀಕಿ ಅಭಿವೃದ್ಧಿ ನಿಗಮ ಕುರಿತಾದ ಚರ್ಚೆಗೆ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ನೀಡಿದ್ದಾರೆ. ಕಾಂಗ್ರೆಸ್ ಇರುವವರೆಗೂ, ನಾನು ಇರುವವರೆಗೂ ಸಾಮಾಜಿಕ ನ್ಯಾಯಕ್ಕೆ ನಾವು ಬದ್ದರು. ನಿಮ್ಮಿಂದ ಸಾಮಾಜಿಕ ನ್ಯಾಯದ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.

ಇದಕ್ಕೂ ಹಿಂದಿನ ದಿನ ಮಾತನಾಡಿದ್ದ ಪ್ರತಿಪಕ್ಷ ನಾಯಕ ಅಶೋಕ್‌, ಸರ್ಕಾರದ ತಪ್ಪು ನಡೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು. ಹೈಕಮಾಂಡ್‌ಗೆ ಕಪ್ಪಕಾಣಿಕೆ ಸಲ್ಲಿಸಲು ನಿಗಮದ ಹಣವನ್ನು ದುರುಪಯೋಗ ಮಾಡಲಾಗಿದೆ ಎಂದಿದ್ದ ಅಶೋಕ್‌, 187 ಕೋಟಿ ರೂಪಾಯಿ ಅವ್ಯವಹಾರದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದರು. ಈ ಹಣ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಹೇಗೆ ವಿನಿಯೋಗವಾಗಬೇಕಿತ್ತು, ಹೇಗೆ ಅಕ್ರಮವಾಗಿದೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದರು. ಆ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.

ಈ ನಡುವೆ, ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲು ಕಡ್ಡಾಯ ವಿಧೇಯಕದ ಕುರಿತ ಚರ್ಚೆಯೂ ಭುಗಿಲೆದ್ದಿದೆ. ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆಗೆ ಇನ್ನೂ ಪ್ರತಿಪಕ್ಷ ಅವಕಾಶ ಕೇಳಿಲ್ಲ ಹಾಗೂ ಸರಕಾರವೂ ಅದನ್ನು ಪ್ರಸ್ತಾಪಿಸಿಲ್ಲ. ಆದರೆ ವಾಲ್ಮೀಕಿ, ಮುಡಾ ಹಗರಣಗಳಿಂದ ಗಮನವನ್ನು ಬೇರೆಡೆಗೆ ಹರಿಸಲು ಸಿದ್ದರಾಮಯ್ಯ ಸರಕಾರ ಈ ಭಾವನಾತ್ಮಕ ವಿಷಯ ಎತ್ತಿಹಾಕಿದೆ ಎಂಬ ಆರೋಪ ಪ್ರತಿಪಕ್ಷಗಳದ್ದಾಗಿದೆ. ಪ್ರತಿಪಕ್ಷಗಳ ಆ ಆರೋಪದ ಬಿಸಿ ಕಲಾಪದಲ್ಲೂ ಪ್ರತಿಧ್ವನಿಸಬಹುದು.

ಇದಕ್ಕೂ ಮುನ್ನ, ಜಿಟಿ ಮಾಲ್‌ನಲ್ಲಿ ನಡೆದ ರೈತನಿಗೆ ಅವಮಾನ ಸಂಗತಿಯೂ ಸದನದಲ್ಲಿ ಪ್ರಸ್ತಾವವಾಗಿತ್ತು. ಈ ಘಟನೆಯ ಕುರಿತು ಸರ್ಕಾರದ ನಿಲುವು ಏನು ಎಂದು ಸ್ಪೀಕರ್‌ ಪ್ರಶ್ನಿಸಿದ್ದರು. ಮಾಲ್‌ ಅನ್ನು ಏಳು ದಿನ ಮುಚ್ಚಿಸಲಾಗುವುದು ಎಂದು ನಗರಾಭೀವೃದ್ಧಿ ಸಚಿವ ಬೈರತಿ ಸುರೇಶ್‌ ಹೇಳಿದ್ದರು. ಅದರಂತೆ ಇಂದಿನಿಂದ ಜಿಟಿ ಮಾಲ್‌ ಮುಚ್ಚಿ ಸೀಲ್‌ ಮಾಡಲಾಗಿದೆ.

ಇದನ್ನೂ ಓದಿ: Karnataka Assembly Live: ಅನ್ನದಾತನಿಗೆ ಅವಮಾನ ಮಾಡಿದ ಜಿಟಿ ಮಾಲ್‌ 7 ದಿನ ಬಂದ್: ವಿಧಾನಸಭೆಯಲ್ಲಿ ಘೋಷಣೆ, ವಿಸ್ತಾರ್‌ ನ್ಯೂಸ್‌ ಬಿಗ್‌ ಇಂಪ್ಯಾಕ್ಟ್

Continue Reading
Advertisement
Kodava Family Hockey Tournament Website Launched
ಕೊಡಗು2 ವಾರಗಳು ago

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Bengaluru News
ಬೆಂಗಳೂರು2 ವಾರಗಳು ago

Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಯಾವುದಾದರೂ ಪ್ರಸಂಗಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಎಚ್ಚರಿಕೆ ಇರಲಿ

Gadag News Father commits suicide by throwing three children into river
ಗದಗ2 ವಾರಗಳು ago

Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!

Dina Bhavishya
ಭವಿಷ್ಯ2 ವಾರಗಳು ago

Dina Bhavishya: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ, ಯಶಸ್ಸು ಖಂಡಿತ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ

Bengaluru airport
ಬೆಂಗಳೂರು2 ವಾರಗಳು ago

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ವಿಂಗ್ಸ್‌; 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಈ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುತ್ತಾ ಕಾಲಹರಣ ಮಾಡ್ಬೇಡಿ

dina bhavishya read your daily horoscope predictions for november 4 2024
ಭವಿಷ್ಯ3 ವಾರಗಳು ago

Dina Bhavishya : ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಶುಭ ಸುದ್ದಿ

galipata neetu
ಕಿರುತೆರೆ12 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ11 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ1 ವರ್ಷ ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ತಿಂಗಳುಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್3 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ3 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌