ಮನೆಯ ಅಂಗಳದಲ್ಲಿ ವಿಶ್ರಾಂತಿ ಪಡೆಯುತ್ತಿದ್ದವನ ಎದುರಿಗೇ ಬಂದು ನಿಂತ ಕರಡಿ; ಮುಂದೇನಾಯ್ತು?!-ಈ ವಿಡಿಯೊ ನೋಡಿ - Vistara News

ವೈರಲ್ ನ್ಯೂಸ್

ಮನೆಯ ಅಂಗಳದಲ್ಲಿ ವಿಶ್ರಾಂತಿ ಪಡೆಯುತ್ತಿದ್ದವನ ಎದುರಿಗೇ ಬಂದು ನಿಂತ ಕರಡಿ; ಮುಂದೇನಾಯ್ತು?!-ಈ ವಿಡಿಯೊ ನೋಡಿ

ಮನೆಯ ಎದುರಿನ ಉದ್ಯಾನವನದಲ್ಲಿ ಡೆವಿಡ್​ ಅವರು ಒಂದು ಆರಾಮ ಕುರ್ಚಿ ಹಾಕಿಕೊಂಡು, ಫೋನ್​ ನೋಡುತ್ತ ಇದ್ದರು. ಮೈಮೇಲೆಲ್ಲ ದಿಂಬು ಇಟ್ಟುಕೊಂಡು ಅತ್ಯಂತ ಆರಾಮದಾಯಕ ಭಂಗಿಯಲ್ಲಿ ಕುಳಿತಿದ್ದರು. ಆಗ ಅಲ್ಲಿಗೆ ಒಂದು ಕರಡಿ ಬಂದಿದೆ

VISTARANEWS.COM


on

Bear Wanders in Backyard of Man in US What Happened Next
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅದೆಷ್ಟೋ ಹೊತ್ತು ಯಾವುದೋ ಕೆಲಸದಲ್ಲಿ ಮಗ್ನರಾಗಿದ್ದ ನಾವು, ಒಮ್ಮೆಲೇ ತಲೆ ಎತ್ತಿದಾಗ ಅದ್ಯಾವುದೋ ಕಾಡು ಪ್ರಾಣಿಯೋ, ಹಾವೋ ಅಥವಾ ಇನ್ನೇನೋ ಭಯ ಹುಟ್ಟಿಸುವಂಥದ್ದು ನಮ್ಮ ಕಣ್ಣೆದುರು ಕಂಡರೆ ಏನಾಗುತ್ತದೆ ಹೇಳಿ? ಒಮ್ಮೆಲೇ ಶಾಕ್​ ಆಗಿ, ನಾವೇನು ಮಾಡಬೇಕು? ಎಲ್ಲಿ ಓಡಬೇಕು? ಈ ಕ್ಷಣವನ್ನು ಹೇಗೆ ಎದುರಿಸಬೇಕು ಎಂಬುದು ಅರ್ಥವಾಗದೆ ದಿಗುಲು ಬೀಳುತ್ತೇವೆ. ಅಂಥದ್ದೇ ಒಂದು ಸನ್ನಿವೇಶ ಯುಎಸ್​​ನ ಡೆವಿಡ್​ ಓಪನ್ಹೈಮರ್ ಎಂಬುವರಿಗೆ ಎದುರಾಗಿತ್ತು. ರಿಲ್ಯಾಕ್ಸ್​ ಮೂಡ್​​ನಲ್ಲಿ ಕುಳಿತಿದ್ದ ಅವರು ತಲೆ ಎತ್ತಿ, ತಿರುಗಿ ನೋಡಿದಾಗ ಅವರ ಎಡಭಾಗದಲ್ಲೊಂದು ಕರಡಿ ನಿಂತಿತ್ತು..!, ಮುಂದೇನಾಯ್ತು?-ಈ ಸ್ಟೋರಿ ಓದಿ, ವಿಡಿಯೊ ನೋಡಿ

ಮನೆಯ ಎದುರಿನ ಉದ್ಯಾನವನದಲ್ಲಿ ಡೆವಿಡ್​ ಅವರು ಒಂದು ಆರಾಮ ಕುರ್ಚಿ ಹಾಕಿಕೊಂಡು, ಫೋನ್​ ನೋಡುತ್ತ ಇದ್ದರು. ಮೈಮೇಲೆಲ್ಲ ದಿಂಬು ಇಟ್ಟುಕೊಂಡು ಅತ್ಯಂತ ಆರಾಮದಾಯಕ ಭಂಗಿಯಲ್ಲಿ ಕುಳಿತಿದ್ದರು. ಆಗ ಅಲ್ಲಿಗೆ ಒಂದು ಕರಡಿ ಬಂದಿದೆ. ತನ್ನದೇ ಮನೆಯಂಗಳ ಎಂಬ ಭಾವದಲ್ಲಿ ಕರಡಿ ಹೆಜ್ಜೆ ಹಾಕುತ್ತ ಅಲ್ಲಿಗೆ ಬಂತು. ತಕ್ಷಣಕ್ಕೆ ಡೆವಿಡ್​ಗೆ ಅದು ಕಾಣಲಿಲ್ಲ. ಆ ಕರಡಿಗೂ ಡೆವಿಡ್ ಇರುವುದು ಕಣ್ಣಿಗೆ ಬಿದ್ದಿರಲಿಲ್ಲ. ಆದರೆ ಮರುಕ್ಷಣದಲ್ಲೇ ಡೆವಿಡ್​ ಮತ್ತು ಕರಡಿ ಪರಸ್ಪರರು ನೋಡಿಕೊಂಡಿದ್ದಾರೆ. ಡೆವಿಡ್​ ಭಯಗೊಂಡರೆ, ಕರಡಿಯೂ ಗಾಬರಿಗೊಂಡಿತು. ಡೆವಿಡ್​ ಅಲ್ಲಿಂದ ಏಳಲಿಲ್ಲ, ಓಡಲಿಲ್ಲ. ಕರಡಿಯನ್ನು ನೋಡುತ್ತ ಹಾಗೇ ಕುಳಿತೇ ಇದ್ದರು. ಕರಡಿ ಇದು ತನಗೆ ಸೇರಿದ ಏರಿಯಾ ಅಲ್ಲ ಎಂದು ಅಲ್ಲಿಂದ ಕಾಲ್ಕಿತ್ತಿತು. ಡೆವಿಡ್​​ಗೂ ಅಪಾಯವಾಗಲಿಲ್ಲ, ಕರಡಿಗೂ ಏನೂ ಆಗಲಿಲ್ಲ. ಇವಿಷ್ಟೂ ದೃಶ್ಯ ಡೆವಿಡ್ ಮನೆಯ ಡೋರ್​​​ಬೆಲ್​ ಕ್ಯಾಮರಾದಲ್ಲಿ ಸೆರೆಯಾಗಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ:Viral Video: ‘ಪ್ರೀತಿನೇ ಆ ದ್ಯಾವ್ರು ತಂದ..’; ಕಾಯಿಲೆ ಪೀಡಿತ ಪತ್ನಿಗೆ ತುತ್ತುಣಿಸಿದ ಅಜ್ಜ, ಮನಮಿಡಿಯುವ ದೃಶ್ಯವಿದು

ವಿಡಿಯೊವನ್ನು ಮೂರು ಸಾವಿರಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ. ಹಲವರು ಕಮೆಂಟ್ ಮಾಡಿ, ತಮಗೂ ಬೇರೆಬೇರೆ ಸನ್ನಿವೇಶದಲ್ಲಿ ಇಂಥದ್ದೇ ಅನುಭವ ಆಗಿತ್ತು ಎಂದು ಹೇಳಿದ್ದಾರೆ. ‘ಕರಡಿಗಳು ಹೀಗೆ ಮನೆಯಿದ್ದಲ್ಲಿ ಬಂದರೆ ದಾಳಿ ಮಾಡುವುದಿಲ್ಲ’ ಎಂದು ಒಬ್ಬರು ಹೇಳಿದ್ದಾರೆ. ‘ಅಬ್ಬಾ, ಎಚ್ಚರಿಕೆಯಿಂದ ಇರಬೇಕು’ ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Lok Sabha Election 2024: ತಾಳಿ ಕಟ್ಟುವ ಹತ್ತು ನಿಮಿಷ ಮುಂಚೆ ಓಡೋಡಿ ಹೋದ ವರ; ವೋಟ್‌ ಹಾಕಿ ನಿರಾಳ

Lok Sabha Election 2024: ಕರುನಾಡಿನೆಲ್ಲೆಡೆ ಸಂಭ್ರಮದ ಚುನಾವಣೆ ನಡೆಯುತ್ತಿದ್ದು, ಪ್ರತ್ಯೇಕ ಕಡೆಗಳಲ್ಲಿ ವಧು-ವರರಿಂದಲೂ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಕ್ಕು ಚಲಾವಣೆ ಮಾಡಿದ್ದಾರೆ. ಚಾಮರಾಜನಗರದಲ್ಲಿ ವರನೊಬ್ಬ ತಾಳಿ ಕಟ್ಟುವ ಹತ್ತು ನಿಮಿಷ ಮುಂಚೆ ಓಡೋಡಿ ಬಂದರೆ, ಇತ್ತ ಚಿಕ್ಕಮಗಳೂರಲ್ಲಿ ವಧು ಹಸೆಮಣೆ ಏರುವ ಮುನ್ನ ಮತದಾನ ಮಾಡಿದ್ದಾರೆ.

VISTARANEWS.COM


on

By

Lok sabha election 2024
Koo

ಚಾಮರಾಜನಗರ/ಚಿಕ್ಕಮಗಳೂರು: ಲೋಕಸಭಾ ಚುನಾವಣೆ (Lok sabha Election 2024) ಹಿನ್ನೆಲೆಯಲ್ಲಿ ಮತದಾನದ ಹಬ್ಬ ಬಿರುಸಿನ ನಡೆಯುತ್ತಿದೆ. ವಿಶೇಷ ಚೇನತರು, ವೃದ್ಧರೆನ್ನದೆ ಎಲ್ಲರೂ ಸಂಭ್ರಮದಿಂದ ಮತಗಳನ್ನು ಚಲಾವಣೆ ಮಾಡುತ್ತಿದ್ದಾರೆ. ಎಲ್ಲರ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ, ನೂತನ ವರ- ವಧುಗಳೂ ಸಹ ವಿವಾಹಕ್ಕೂ ಮುಂಚೆ ಮತಗಟ್ಟೆಗೆ ಬಂದು ಮತವನ್ನು ಚಲಾಯಿಸುವ ಮೂಲಕ ತಮ್ಮ ಹಕ್ಕನ್ನು ಚಲಾವಣೆ ಮಾಡಿದ್ದಾರೆ. ಈ ಮೂಲಕ ಎಲ್ಲರೂ ಮತದಾನ ಮಾಡುವಂತೆ ಕರೆ ಕೊಟ್ಟಿದ್ದಾರೆ.

ಮತ ಚಲಾವಣೆ ಮಾಡಿದ ವರ ಚೇತನ್‌

ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲೂಕಿನ ಸಂತೇಮರಳ್ಳಿಯಲ್ಲಿ ವರನೊಬ್ಬ ಮತಗಟ್ಟೆಗೆ ಓಡೋಡಿ ಬಂದು ಮತ ಚಲಾಯಿಸಿದ್ದಾರೆ. ತಾಳಿ ಕಟ್ಟುವ ಹತ್ತು ನಿಮಿಷ ಮುಂಚೆ ಮತಕೇಂದ್ರಕ್ಕೆ ಓಡೋಡಿ ಹೋದ ವರ ವೋಟ್‌ ಹಾಕಿ ನಿರಾಳರಾದರು. ವರ ಚೇತನ್ ಎಂಬುವವರು ಮತಗಟ್ಟೆ ಸಂಖ್ಯೆ 60ರಲ್ಲಿ ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸಿ ಇತರರಿಗೂ ಮಾದರಿ ಆದರು. ಚೇತನ್‌ ಅವರು ದೀಪಿಕಾ ಎಂಬುವರ ಜತೆಗೆ ವಿವಾಹವಾಗುತ್ತಿದ್ದು, ತಮ್ಮ ಮುಹೂರ್ತದ ವಸ್ತ್ರದಲ್ಲೇ ಬಂದು ವೋಟ್‌ ಹಾಕಿದ್ದಾರೆ.

ಮುಹೂರ್ತಕ್ಕೂ ಮುನ್ನ ವಧುವಿನ ಮತದಾನ

ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನ ಕೊತ್ತುಗೋಡು ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಮುಹೂರ್ತಕ್ಕೂ ಮುನ್ನ ನವ ವಧುವೊಬ್ಬರು ಮತದಾನ ಮಾಡಿ ಗಮನ ಸೆಳೆದಿದ್ದಾರೆ. ರೇಷ್ಮೆ ಸೀರೆ ಉಟ್ಟಿದ್ದ ಮದುವಣಗಿತ್ತಿ ಸಂಪೂರ್ಣ ರೆಡಿಯಾಗಿ ಬಂದು ಮತ ಚಲಾಯಿಸಿ ಮದುವೆ ಮಂಟಪಕ್ಕೆ ಹೋಗಿದ್ದಾರೆ. ಬಳಿಕ ಹಸೆಮಣೆ ಏರಿದ್ದಾರೆ.

ಈ ಮೂಲಕ ತಮ್ಮ ಹಕ್ಕನ್ನು ಚಲಾವಣೆ ಮಾಡಿದ್ದಾರೆ. ಕುಂದೂರಿನ ತಳವಾರದ ಸೌಮ್ಯ ಅವರು ಮೂಡಿಗೆರೆಯ ಕಲ್ಯಾಣ ಮಂಟಪಕ್ಕೆ ತೆರಳುವ ವೇಳೆ ಕುಟುಂಬ ಸಮೇತ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ.

ಇದನ್ನೂ ಓದಿ: Lok Sabha Election 2024: ಆಕ್ಸಿಜನ್‌ ಸಹಾಯದಿಂದ ಮತ ಚಲಾಯಿಸಿದ ಮಹಿಳೆ; ವೋಟು ಹಾಕಿ ಕುಸಿದು ಮೃತಪಟ್ಟ ವೃದ್ಧೆ!

Lok Sabha Election 2024: ಆಪರೇಷನ್‌ಗೂ ಮುನ್ನ ಆಂಬ್ಯುಲೆನ್ಸ್‌ನಲ್ಲಿ ಬಂದು ವೋಟ್‌ ಮಾಡಿದ ಉತ್ಸಾಹಿ ಮತದಾರ

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ (Lok Sabha Election 2024) ಉತ್ಸಾಹಿ ಮತದಾರರೊಬ್ಬರು ಶಸ್ತ್ರಚಿಕಿತ್ಸೆಗೂ ಮುನ್ನ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ಮುರಳಿಧರ್‌ ಎಂಬುವವರು ತಮ್ಮ ಹಕ್ಕು ಚಲಾಯಿಸಿ ಇತರರಿಗೂ ಮಾದರಿ ಆಗಿದೆ. 39 ವರ್ಷದ ಎಚ್‌.ಎನ್ ಮುರಳಿಧರ್ ಶುಕ್ರವಾರ ಮಧ್ಯಾಹ್ನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಅನಾರೋಗ್ಯದ ನಡುವೆಯೂ ನೋವಿನಲ್ಲೂ ಮತಕೇಂದ್ರಕ್ಕೆ ಬಂದು ಮತವನ್ನು ಚಲಾಯಿಸಿದ್ದಾರೆ.

ಮನಿಪಾಲ್ ಆಸ್ಪತ್ರೆ ವೈಟ್‌ಫೀಲ್ಡ್‌ನ ಯೂರೋಲಾಜಿ, ರೋಬೋಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮುರಳಿಧರ್‌ಗೆ ಮೂತ್ರದ್ವಾರದಲ್ಲಿ 6 MM ಕಲ್ಲಿದೆ. ಹೀಗಾಗಿ ಮಧ್ಯಾಹ್ನ ಡಿಜೆ ಸ್ಟೆಂಟಿಂಗ್ ಸರ್ಜರಿ ಮಾಡಬೇಕಿದೆ. ಸರ್ಜರಿಗೂ ಮುನ್ನ ಖುದ್ದು ಆಂಬ್ಯುಲೆನ್ಸ್‌ ಮೂಲಕ ಬಂದ ಮುರಳಿಧರ್‌ ಅವರು ಮತದಾನ ಮಾಡಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದರೂ, ಡೋಂಟ್‌ ಕೇರ್‌ ಮಾಡದ ಮುರಳಿಧರ್‌ ಶಸ್ತ್ರಚಿಕಿತ್ಸೆಗೂ ಮುನ್ನ ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಮೂಲಕ ಎಲ್ಲರಿಗೂ ಮಾದರಿ ಆಗಿದ್ದಾರೆ.

ಇದನ್ನೂ ಓದಿ: Lok Sabha Election 2024: ಮತದಾರರು ಜಸ್ಟ್‌ ಮಿಸ್‌; ಮತಗಟ್ಟೆ ಸಮೀಪವೇ ನೆಲಕ್ಕುರುಳಿದ ಬೃಹತ್ ಮರ, ಕಾರು ಜಖಂ

ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ (First phase of polling) ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಜೆ.ಪಿ.ನಗರ 8ನೇ ಹಂತದ ಜಂಬೂ ಸವಾರಿ ದಿನ್ನೆಯಲ್ಲಿ ಮತ ಚಲಾಯಿಸಲು ಬಂದ ಮಹಿಳೆಯೊಬ್ಬರಿಗೆ ಹೃದಯ ಸ್ತಂಭನ (cardiac arrest) ಆಗಿದೆ. ಬಳಿಕ ಅಲ್ಲಿಯೇ ಮತ ಚಲಾಯಿಸಲು ಬಂದಿದ್ದರಿಂದ ಅವರ ಜೀವ ಉಳಿದಿದೆ.

ಜೆ.ಪಿ. ನಗರದ 8ನೇ ಹಂತದ ಜಂಬೂ ಸವಾರಿ ದಿನ್ನೆಯಲ್ಲಿ ಮಹಿಳೆಯೊಬ್ಬರು ಮತದಾನ ಮಾಡಲು ಬಂದಿದ್ದಾರೆ. ಅವರು ಆಯಾಸವಾಗಿದೆ ಎಂದು ಮತಗಟ್ಟೆಯಲ್ಲಿ ಇಟ್ಟಿದ್ದ ನೀರು ಕುಡಿಯಲು ಹೋಗಿದ್ದಾರೆ. ಅದೇ ವೇಳೆಗೆ ಅವರು ಕುಸಿದು ಬಿದ್ದಿದ್ದಾರೆ. ಅದೇ ಸಮಯದಲ್ಲಿ ಅಲ್ಲಿಗೆ ಬಂದಿದ್ದ ಬೊಮ್ಮಸಂದ್ರದ ನಾರಾಯಣ ಆರೋಗ್ಯ ಕೇಂದ್ರದ ಮೂತ್ರಪಿಂಡ ತಜ್ಞ ಡಾ. ಗಣೇಶ್ ಶ್ರೀನಿವಾಸ ಪ್ರಸಾದ್ ಅವರು ರಕ್ಷಣೆಗೆ ದಾವಿಸಿದ್ದಾರೆ.

ನಾಡಿಮಿಡಿತವನ್ನು ಪರಿಶೀಲಿಸಿದ ಡಾ. ಗಣೇಶ್ ಶ್ರೀನಿವಾಸ ಪ್ರಸಾದ್, ಪಲ್ಸ್‌ ರೇಟ್‌ ಕಡಿಮೆಯಾಗುತ್ತಿರುವುದನ್ನು ಗಮನಿಸಿದ್ದಾರೆ. ಆ ಸಮಯದಲ್ಲಿ ದೇಹ ಕೂಡ ಯಾವುದೇ ಸ್ಪಂದನೆಯನ್ನು ಮಾಡುತ್ತಿರಲಿಲ್ಲ. ಹೀಗಾಗಿ ಕೂಡಲೇ ಸಿಪಿಆರ್‌ ಮಾಡಿದ್ದು, ಪರಿಸ್ಥಿತಿಯು ಕೊಂಚ ಮಟ್ಟಿಗೆ ಸುಧಾರಿಸುವಂತೆ ಮಾಡಿದ್ದಾರೆ. ಚುನಾವಣಾ ಕರ್ತವ್ಯದಲ್ಲಿದ್ದವರು ಧಾವಿಸಿ ಜ್ಯೂಸ್ ನೀಡಿದ್ದಾರೆ. ಕೂಡಲೇ ಆಂಬ್ಯುಲೆನ್ಸ್‌ಗೆ ಕರೆ ಮಾಡಲಾಗಿದೆ. ಐದು ನಿಮಿಷದೊಳಗೆ ಮತಗಟ್ಟೆ ಬಳಿ ಆಂಬ್ಯುಲೆನ್ಸ್ ಬಂದಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Narendra Modi: ಭ್ರಷ್ಟರ ಬೇಟೆಯಾಡಿದ, ಉಗ್ರರ ಓಡಿಸಿದ; ಮೋದಿಗಾಗಿ ಕನ್ನಡದಲ್ಲಿ ಹಾಡು ಹಾಡಿದ ಅಜ್ಜಿ!

Narendra Modi: ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ರಾಜ್ಯದ 14 ಕ್ಷೇತ್ರಗಳಲ್ಲಿ ಜನ ಮತದಾನ ಮಾಡುತ್ತಿದ್ದಾರೆ. ಇದರ ಮಧ್ಯೆಯೇ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೆಚ್ಚಿ, ಅಜ್ಜಿಯೊಬ್ಬರು ಕನ್ನಡದಲ್ಲಿ ಹಾಡು ಬರೆದು, ಅದನ್ನು ರಾಗವಾಗಿ ಹಾಡಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

VISTARANEWS.COM


on

Narendra Modi
Koo

ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಭರಾಟೆ ಜೋರಾಗಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಪರವಾದ ಅಲೆ ಇದೆ ಎಂದು ಹೇಳಲಾಗುತ್ತಿದೆ. ಚುನಾವಣೆ ಇರಲಿ, ಇಲ್ಲದಿರಲಿ, ಮಕ್ಕಳಿಂದ ಹಿಡಿದು ಹಿರಿಯರವರೆಗೆ ಮೋದಿ ಅವರು ಅಚ್ಚುಮೆಚ್ಚಾಗಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಕರ್ನಾಟಕದಲ್ಲಿ ಅಜ್ಜಿಯೊಬ್ಬರು ನರೇಂದ್ರ ಮೋದಿ ಅವರಿಗಾಗಿ ಹಾಡೊಂದನ್ನು ಬರೆದು, ಹಾಡಿದ್ದಾರೆ. ಕರ್ನಾಟಕ ಬಿಜೆಪಿ (Karnataka BJP) ಘಟಕವು ಅಜ್ಜಿಯ ಈ ವಿಡಿಯೊವನ್ನು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಡಿಯೊ (Viral Video) ವೈರಲ್‌ ಆಗಿದೆ.

“ಮೋದಿಯ ನಿಂದಿಸದಿರೋ ಅಣ್ಣಗಳಿರಾ…” ಎಂಬುದಾಗಿ ಅಜ್ಜಿಯು ಹಾಡು ಬರೆದಿದ್ದು, ರಾಗವಾಗಿ ಮೋದಿ ಅವರನ್ನು ಮೆಚ್ಚಿ ಹಾಡು ಹಾಡಿದ್ದಾರೆ. ನರೇಂದ್ರ ಮೋದಿ ಅವರು ದೊರೆ, ಉತ್ತಮ ಆಡಳಿತಗಾರ, ಭ್ರಷ್ಟಾಚಾರವನ್ನು ನಿಗ್ರಹಿಸಿದವರು, ಭಯೋತ್ಪಾದಕರನ್ನು ಓಡಿಸಿದವರು, ವಿವೇಕಾನಂದರಿಗೆ ಸಮಾನವಾದವರು, ಭಾರತೀಯರ ಮೇಲೆ ಮೋದಿ ಹೊಂದಿರುವ ಪ್ರೇಮ, ದೇಶದ ಮೇಲೆ ಅಭಿಮಾನ ಸೇರಿ ಹಲವು ಅಂಶಗಳನ್ನು ಉಲ್ಲೇಖಿಸಿ ಅಜ್ಜಿಯೊಬ್ಬರು ಹಾಡು ಹಾಡಿದ್ದಾರೆ.

ಅಜ್ಜಿ ಹಾಡಿನ ಸ್ಯಾಂಪಲ್

ಮೋದಿಯ ನಿಂದಿಸದಿರೋ ಅಣ್ಣಗಳಿರಾ
ಸಂತಾನ ನಿಂತಿಸದಿರೋ
ಧರೆಯನುದ್ಧರಿಸಲು ಬಂದ
ದೊರೆಯ ನಿಂದಿಸದರಿ ಅಣ್ಣಗಳಿರಾ
ಮೋದಿಯ ನಿಂದಿಸದಿರೋ…

ಅಜ್ಜಿಯ ವಿಡಿಯೊವನ್ನು ಹಂಚಿಕೊಂಡಿರುವ ಬಿಜೆಪಿಯು, ಕಾಂಗ್ರೆಸ್‌ಗೆ ತಿರುಗೇಟು ನೀಡಿದೆ. “ಸ್ಟುಡಿಯೋದಲ್ಲಿ ರೆಕಾರ್ಡಿಂಗ್‌ ಮಾಡಿಸಿ ಪ್ರಚಾರ ಪಡೆದುಕೊಂಡು ತಮ್ಮ ಬೆನ್ನನ್ನು ತಾವು ತಟ್ಟಿಕೊಳ್ಳುವುದಲ್ಲ ಸಿದ್ದರಾಮಯ್ಯನವರೇ, ಈ ಇಳಿ ವಯಸ್ಸಿನಲ್ಲೂ ತಂತ್ರ‌ಜ್ಞಾನ ಬಳಸದೆ ಮೋದಿಯವರ ಸಾಧನೆಯನ್ನು ವೃದ್ಧೆ ಓರ್ವರು ಹಾಡಿರುವ ಹಾಡನ್ನೊಮ್ಮೆ ಕೇಳಿ” ಎಂಬುದಾಗಿ ಸಿದ್ದರಾಮಯ್ಯ ಅವರು ಹಂಚಿಕೊಂಡ ವಿಡಿಯೊಗೆ ಬಿಜೆಪಿ ತಿರುಗೇಟು ನೀಡಿದೆ.

ಕಾಂಗ್ರೆಸ್‌ಅನ್ನು ಟೀಕಿಸಿದ ಅಜ್ಜಿ

ಅಜ್ಜಿಯು ಹಾಡು ಹಾಡುವ ಮುನ್ನ ಕಾಂಗ್ರೆಸ್ಸಿಗರನ್ನು ಟೀಕಿಸಿದ್ದಾರೆ. “500 ವರ್ಷದಿಂದ ದೇಶದಲ್ಲಿ ರಾಮಮಂದಿರ ನಿರ್ಮಾಣ ಆಗಿರಲಿಲ್ಲ. ಅದನ್ನು ನರೇಂದ್ರ ಮೋದಿ ಅವರು ಸಾಕಾರಗೊಳಿಸಿದ್ದಾರೆ. ಈಗ ಮೋದಿ ಬಗ್ಗೆ ಇಲ್ಲಸಲ್ಲದ ಮಾತನಾಡುತ್ತಾರೆ. ರಾಮ ಎದೆಯಲ್ಲಿದ್ದಾನೆ ಎಂದೆಲ್ಲ ಹೇಳುತ್ತಿದ್ದಾರೆ. ಇವರು ಇಷ್ಟು ದಿನ ಎಲ್ಲಿದ್ದರು” ಎಂಬುದಾಗಿ ಅಜ್ಜಿಯು ಟೀಕಿಸಿದ್ದಾರೆ. ಇದಾದ ಬಳಿಕ ಮೋದಿ ಕುರಿತು ಹಾಡುಹಾಡಿದ್ದಾರೆ.

ಇದನ್ನೂ ಓದಿ: Narendra Modi: ಪ್ರಧಾನಿ ಮೋದಿಗೆ ಜಿ 7 ಶೃಂಗಸಭೆಯ ಆಹ್ವಾನ ನೀಡಿದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ

Continue Reading

ವೈರಲ್ ನ್ಯೂಸ್

Viral News: ಸಿಂಗಾಪುರ ಏರ್‌ಲೈನ್ಸ್‌ ಪೈಲಟ್‌ ಅಂತಾ ಹೇಳ್ಕೊಂಡು ಪೋಸ್‌ ಕೊಡ್ತಿದ್ದವ ಲಾಕ್‌!

Viral News: ತನ್ನನ್ನು ತಾನು ಸಿಂಗಾಪುರ ಏರ್‌ಲೈನ್ಸ್‌ ಪೈಲಟ್‌ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಭೂಪನನ್ನು ಅರೆಸೈನಿಕ ಪಡೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ. ಉತ್ತರ ಪ್ರದೇಶ ಮೂಲದ 24 ವರ್ಷದ ಸಂಗೀತ್‌ ಸಿಂಗ್‌ ಬಂಧಿತ ಆರೋಪಿ.

VISTARANEWS.COM


on

By

Koo

ನವದೆಹಲಿ: ವಿನಾಃಕಾರಣ ಬೂಟಾಟಿಕೆ ಮಾಡೋಕೆ ಹೋಗಿ ಕೆಲವರು ಪೇಚಿಗೆ ಸಿಲುಕುವ ಘಟನೆ ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ನವದೆಹಲಿ (New delhi) ಯಲ್ಲಿ ನಡೆದಿದೆ. ತನ್ನನ್ನು ತಾನು ಸಿಂಗಾಪುರ ಏರ್‌ಲೈನ್ಸ್‌ (Singalore Airlines) ಪೈಲಟ್‌ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಭೂಪನನ್ನು ಅರೆಸೈನಿಕ ಪಡೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Indira Gandhi International Airport) ದಲ್ಲಿ ಬಂಧಿಸಿದೆ. ಉತ್ತರ ಪ್ರದೇಶ ಮೂಲದ 24 ವರ್ಷದ ಸಂಗೀತ್‌ ಸಿಂಗ್‌ (Sangeeth Sing) ಬಂಧಿತ ಆರೋಪಿಯಾಗಿದ್ದಾನೆ.

ಸಿಂಗಾಪುರ ಪೈಲಟ್‌ ಸಮವಸ್ತ್ರ ಧರಿಸಿ, ಕುತ್ತಿಗೆ ಐಡಿ ಕಾರ್ಡ್‌ ಹಾಕಿಕೊಂಡು ದೆಹಲಿ ಮೆಟ್ರೋದ ಸ್ಕೈವಾಕ್‌ ಪ್ರದೇಶದಲ್ಲಿ ತಿರುಗಾಡುತ್ತಿದ್ದ ಸಂಗೀತ್‌, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(CISF) ಕಣ್ಣಿಗೆ ಬಿದ್ದಿದ್ದ. ಈತ ಅನುಮಾನಾಸ್ಪದವಾಗಿ ಓಡಾಡುತ್ತಿದ್ದನ್ನು ಗಮನಿಸಿದ ಸಿಬ್ಬಂದಿ ಆತನನ್ನು ತಡೆದು ವಿಚಾರಿಸಿದರು. ವಿಚಾರಣೆ ವೇಳೆ ಆತನ ಬಳಿ ಇದ್ದ ಐಡಿ ಕಾರ್ಡ್‌ ನಕಲಿ ಎಂಬುದು ಬಯಲಾಗಿದೆ. ಅಷ್ಟೇ ಅಲ್ಲದೇ ಆತನ ಬಳಿ ಇದ್ದ ಎಲ್ಲಾ ದಾಖಲೆಗಳು ಕೂಡ ನಕಲಿಯಾಗಿದ್ದವು. ತನ್ನನ್ನು ತಾನು ಸಿಂಗಾಪುರ ಏರ್‌ಲೈನ್ಸ್‌ ಸಿಬ್ಬಂದಿ ಎಂಬುದನ್ನು ಬಿಂಬಿಸಿಕೊಳ್ಳಲು ಆನ್‌ಲೈನ್‌ ಆಪ್‌ ಬ್ಯುಸಿನೆಸ್‌ ಕಾರ್ಡ್‌ ಮೇಕರ್‌ ಸಹಾಯದಿಂದ ನಕಲಿ ಐಡಿ ತಯಾರು ಮಾಡಿದ್ದ. ಅಲ್ಲದೇ ದ್ವಾರಕಾದಿಂದ ಸಮವಸ್ತ್ರವನ್ನು ಖರೀದಿ ಮಾಡಿದ್ದ ಎಂಬುದು ವಿಚಾರಣೆ ವೇಳೆ ಬಟಾಬಯಲಾಗಿತ್ತು.

ಇನ್ನು ಸಂಗೀತ್‌ ಸಿಂಗ್‌ 2020ರಲ್ಲಿ ಮುಂಬೈನಲ್ಲಿ ಒಂದು ವರ್ಷದ ಏವಿಯೇಷನ್‌ ಕೋರ್ಸ್‌ ಮಾಡಿದ್ದ. ಬಳಿಕ ತನಗೆ ಸಿಂಗಾಪುರ ಏರ್‌ಲೈನ್ಸ್‌ನಲ್ಲಿ ಪೈಲಟ್‌ ಆಗಿ ಕೆಲಸ ಸಿಕ್ಕಿದೆ ಎಂದು ತನ್ನ ಕುಟುಂಬಸ್ಥರಿಗೆ ಸುಳ್ಳು ಹೇಳಿ ನಂಬಿಸಿದ್ದ. ಇದೀಗ ಸಂಗೀತ್‌ನನ್ನು ಅರೆಸ್ಟ್‌ ಮಾಡಿರುವ ಪೊಲೀಸರು ಆತನ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ 420(ವಂಚನೆ), 468( ವಂಚನೆ ಉದ್ದೇಶದಿಂದ ಪೋರ್ಜರಿ) ಹಾಗೂ 471(ನಕಲಿ ದಾಖಲೆಗಳನ ಬಳಕೆ) ಸೆಕ್ಷನ್‌ಗಳ ಅಡಿಯಲ್ಲಿ ಸಂಗೀತ್‌ ಸಿಂಗ್‌ ವಿರುದ್ಧ ಕೇಸ್‌ ದಾಖಲಿಸಲಾಗಿದೆ.

ಇದನ್ನೂ ಓದಿ: Viral News: ವಾಟರ್‌ ಪ್ಯೂರಿಫೈಯರ್‌ನಿಂದ ನೀರು ಕುಡಿದ ಬುದ್ಧಿವಂತ ಮಂಗ; ವಿಡಿಯೊ ನೀವೂ ನೋಡಿ

ಎರಡು ತಿಂಗಳ ಹಿಂದೆಐೂ ಇಂತಹದ್ದೇ ಒಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿತ್ತು. ಪಾತೂರ್ ಪಟ್ಟಣದ ಶಹಬಾಬು ಉರ್ದು ಪ್ರೌಢಶಾಲೆಯಲ್ಲಿ 12 ನೇ ತರಗತಿ ಮೊದಲ ಪರೀಕ್ಷೆಯ ಸಮಯದಲ್ಲಿ ಈ ಘಟನೆ ನಡೆದಿತ್ತು. ಪಂಗ್ರಾ ಬಂಡಿ ಮೂಲದ ಅನುಪಮ್ ಮದನ್ ಖಂಡ್ರೆ ಎಂಬಾತ ತನ್ನ ಸಹೋದರಿಯ ಮೋಸಕ್ಕೆ ಸಹಾಯ ಮಾಡಲು ಉತ್ತರ ಪ್ರತಿಗಳನ್ನು ಕಳ್ಳಸಾಗನೆ ಮಾಡಲು ‘ನಕಲಿ’ ಪೊಲೀಸ್ ಆಗಿ ಮಾರ್ಪಟ್ಟಿದ್ದ. ಈ ವೇಳೆ ಪೊಲೀಸ್ ಇನ್ಸ್ಪೆಕ್ಟರ್ ಕಿಶೋರ್ ಶೆಲ್ಕೆ ಮತ್ತು ಅವರ ತಂಡ ಭದ್ರಗೆಗಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿತ್ತು. ತನ್ನ ‘ಹಿರಿಯ ಅಧಿಕಾರಿಗಳನ್ನು’ ನೋಡಿದ ಖಂಡ್ರೆ ಅವರಿಗೆ ಸೆಲ್ಯೂಟ್ ಹೊಡೆದಿದ್ದ. ಆದರೆ ಪೊಲೀಸರಂತೆ ಸೆಲ್ಯೂಟ್ ಹೊಡೆಯಲು ಆತನಿಗೆ ಸಾಧ್ಯವಾಗಿರಲಿಲ್ಲ. ಆತ ತಪ್ಪಾಗಿ ಸೆಲ್ಯೂಟ್​ ಹೊಡೆದಾಗ ಹಿರಿಯ ಅಧಿಕಾರಿಗಳಿಗೆ ಅನುಮಾನ ಹುಟ್ಟು ಹಾಕಿತ್ತು. ಆತನ ಸೆಲ್ಯೂಟ್ ಪ್ರೋಟೋಕಾಲ್​ಗೆ ಅನುಗುಣವಾಗಿರಲಿಲ್ಲ. ಜತೆಗೆ ಸಮವಸ್ತ್ರದ ನಾಮಫಲಕವು ತಪ್ಪಾಗಿತ್ತು. ತಕ್ಷಣವೇ ಅವರು ರೆಡ್ ಹ್ಯಾಂಡ್​ ಆಗಿ ಹಿಡಿದಿದ್ದರು.

Continue Reading

ಐಪಿಎಲ್ 2024

IPL 2024: ಎಸ್‌ಆರ್‌ಎಚ್‌ ಫ್ಯಾನ್ಸ್‌ ಬಾಯಿಮುಚ್ಚಿಸಿ ಸೇಡು ತೀರಿಸಿಕೊಂಡ ಆರ್‌ಸಿಬಿ ಫ್ಯಾನ್ಸ್;‌ ವಿಡಿಯೊ ವೈರಲ್

IPL 2024: IPL 2024: ಹೈದರಾಬಾದ್‌ನ ರಾಜೀವ್​ಗಾಂಧಿ ಇಂಟರ್​ನ್ಯಾಷನಲ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಆರ್​ಸಿಬಿ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 206 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಹೈದರಾಬಾದ್ ಬಳಗ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ ನಷ್ಟಕ್ಕೆ 181 ರನ್ ಬಾರಿಸಿ ಸೋತಿತು. ಇದರ ಮಧ್ಯೆಯೇ, ಹೈದರಾಬಾದ್‌ ಫ್ಯಾನ್ಸ್‌ಗೆ ಆರ್‌ಸಿಬಿ ಫ್ಯಾನ್ಸ್‌ ತಿರುಗೇಟು ನೀಡಿದ್ದಾರೆ.

VISTARANEWS.COM


on

IPL 2024
Koo

ಹೈದರಾಬಾದ್:‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2024) ಎಂದರೆ, ಅದು ಸ್ಟೇಡಿಯಂನಲ್ಲಿ ಕೇವಲ ಆಟಗಾರರ ನಡುವಿನ ಕಾಳಗ ಅಲ್ಲ. ಮೈದಾನದಲ್ಲಿ ಪಂದ್ಯ ಕುತೂಹಲ ಹಂತ ತಲುಪಿದಾಗ, ಯಾವುದೇ ತಂಡ ಸೋತಾಗ ಎದುರಾಳಿ ತಂಡದ ಅಭಿಮಾನಿಗಳು ಕೂಡ ತಿರುಗೇಟು ನೀಡುತ್ತಾರೆ. ಅದರಲ್ಲೂ, ಆರ್‌ಸಿಬಿ ಅಭಿಮಾನಿಗಳ ಅಬ್ಬರ ಮೈದಾನದಲ್ಲೂ ಅಥವಾ ಹೊರಗೂ ಜೋರಾಗಿರುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಅಭಿಮಾನಿಗಳು (RCB Fans) ಎಸ್‌ಆರ್‌ಎಚ್‌ ಅಭಿಮಾನಿಗಳ (SRH Fans) ಬಾಯಿಮುಚ್ಚಿಸಿ ಸೇಡು ತೀರಿಸಿಕೊಂಡಿದ್ದಾರೆ.

ಹೌದು, ಪ್ರಸಕ್ತ ಆವೃತ್ತಿಯಲ್ಲಿ ಬೆಂಗಳೂರಿನಲ್ಲಿ ನಡೆದ ಎಸ್‌ಆರ್‌ಎಚ್‌ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಸೋಲನುಭವಿಸಿದ್ದಾಗ ಎಸ್‌ಆರ್‌ಎಚ್‌ ಅಭಿಮಾನಿಗಳು ಸುಮ್ಮನಿರಿ, ಬಾಯಿಮುಚ್ಚಿ ಎಂಬ ರೀತಿಯಲ್ಲಿ ಸನ್ನೆ ಮಾಡಿದ್ದರು. ಇದು ಸಹಜವಾಗಿಯೇ ಆರ್‌ಸಿಬಿ ಅಭಿಮಾನಿಗಳನ್ನು ಕೆರಳಿಸಿತ್ತು. ಆದರೆ, ಗುರುವಾರ (ಏಪ್ರಿಲ್‌ 25) ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. ಇದಾದ ಬಳಿಕ ಆರ್‌ಸಿಬಿ ಅಭಿಮಾನಿಗಳು ಕೂಡ ಗಪ್‌ ಚುಪ್‌ ಎಂಬ ಸನ್ನೆ ಮಾಡುವ ಮೂಲಕ ಎಸ್‌ಆರ್‌ಎಚ್‌ ಅಭಿಮಾನಿಗಳಿಗೆ ಟಾಂಗ್‌ ಕೊಟ್ಟಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ರಾಜೀವ್​ಗಾಂಧಿ ಇಂಟರ್​ನ್ಯಾಷನಲ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಆರ್​ಸಿಬಿ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 206 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಹೈದರಾಬಾದ್ ಬಳಗ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ ನಷ್ಟಕ್ಕೆ 181 ರನ್ ಬಾರಿಸಿ ಸೋತಿತು. ಈ ಗೆಲುವಿನೊಂದಿಗೆ ಆರ್​ಸಿಬಿಗೆ ಒಟ್ಟು ನಾಲ್ಕು ಅಂಕಗಳು ದೊರಕಿದವು.

ಕೊಹ್ಲಿ, ಪಾಟೀದಾರ್ ಅರ್ಧ ಶತಕ

ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿಯ ಪ್ರದರ್ಶನವೇನೂ ಉತ್ತಮವಾಗಿರಲಿಲ್ಲ. ಆರಂಭಿಕ ಬ್ಯಾಟರ್​ ವಿರಾಟ್ ಕೊಹ್ಲಿ ಮತ್ತೆ ಸ್ಟ್ರೈಕ್​ ರೇಟ್​ ಟೀಕೆಯನ್ನು ಮರೆತು 43 ಎಸೆತಕ್ಕೆ 51 ರನ್ ಬಾರಿಸಿದರು. ಅದಕ್ಕೆ ಅವರು ಟೀಕೆಯನ್ನೂ ಎದುರಿಸಿದರು. ಆದರೆ, ರಜತ್ ಪಾಟೀದಾರ್​ 20 ಎಸೆತಕ್ಕೆ 50 ರನ್ ಬಾರಿಸಿ ತಂಡಕ್ಕೆ ದೊಡ್ಡ ಪ್ರಮಾಣದಲ್ಲಿ ನೆರವಾದರು. ಕ್ಯಾಮೆರೂನ್ ಗ್ರೀನ್​ 37 ರನ್ ಬಾರಿಸಿದರೆ ಫಾಫ್​​ ಡು ಪ್ಲೆಸಿಸ್​ 25 ಕೊಡುಗೆ ಕೊಟ್ಟರು. ಹೀಗಾಗಿ ಪೇಚಾಡಿ 200 ರನ್​ಗಳ ಗಡಿ ದಾಟಿತು. ಬೌಲಿಂಗ್‌ನಲ್ಲಿ ಪರಾಕ್ರಮ ತೋರಿದ ಆರ್‌ಸಿಬಿ ಬೌಲರ್‌ಗಳು ತಂಡಕ್ಕೆ 35 ರನ್‌ಗಳ ಗೆಲುವು ತಂದುಕೊಟ್ಟರು.

ಇದನ್ನೂ ಓದಿ: Yuzvendra Chahal : ​ ಚಾಹಲ್ ಕೈಬಿಟ್ಟಿರುವುದರ ಹಿಂದಿನ ಕಾರಣ ಬಹಿಂಗ ಮಾಡಿದ ಆರ್​ಸಿಬಿ ಮಾಜಿ ಡೈರೆಕ್ಟರ್​

Continue Reading
Advertisement
Implement the work without damaging the drinking water pipelines says ZP CEO Sadashiva Prabhu
ವಿಜಯನಗರ3 hours ago

Vijayanagara News: ಕುಡಿಯುವ ನೀರಿನ ಪೈಪ್‌ಲೈನ್‌ಗಳು ಹಾಳಾಗದಂತೆ ಕಾಮಗಾರಿ ಅನುಷ್ಠಾನಗೊಳಿಸಿ: ಜಿಪಂ ಸಿಇಒ

Congress leader Rahul Gandhi speech in Ballari
ಕರ್ನಾಟಕ3 hours ago

Lok Sabha Election 2024: ದೇಶ, ರಾಜ್ಯಕ್ಕೆ ಬಿಜೆಪಿಯಿಂದ ಖಾಲಿ ಚೊಂಬು ಕೊಟ್ಟಿದ್ದಾರೆ: ರಾಹುಲ್‌ ಗಾಂಧಿ

lok sabha election
ಪ್ರಮುಖ ಸುದ್ದಿ3 hours ago

ವಿಸ್ತಾರ ಸಂಪಾದಕೀಯ: ಗ್ರಾಮಾಂತರ ಜನರ ಮತೋತ್ಸಾಹ ನಗರದ ‘ಬುದ್ಧಿವಂತ’ ಮತದಾರರಲ್ಲಿ ಏಕಿಲ್ಲ?

Neha Murder Case
ಕರ್ನಾಟಕ4 hours ago

Neha Murder Case: ನೇಹಾ ತಂದೆಗೆ ಗನ್ ಮ್ಯಾನ್, ಮನೆಗೆ ಪೊಲೀಸ್ ಭದ್ರತೆ ಏರ್ಪಡಿಸಿದ ರಾಜ್ಯ ಸರ್ಕಾರ

IPL 2024
ಪ್ರಮುಖ ಸುದ್ದಿ4 hours ago

IPL 2024 : ಬೈರ್​ಸ್ಟೋವ್​ ಸ್ಫೋಟಕ ಶತಕ; ಕೆಕೆಆರ್​ ವಿರುದ್ಧ ಪಂಜಾಬ್​​ಗೆ ವಿಶ್ವ ದಾಖಲೆಯ ವಿಜಯ

Bike Accident
ಕರ್ನಾಟಕ4 hours ago

Bike Accident: ಮತದಾನ ಮಾಡಿ ತೆರಳುತ್ತಿದ್ದ ವೇಳೆ ಬೈಕ್‌ ಅಪಘಾತ; ಸ್ಥಳದಲ್ಲೇ ಇಬ್ಬರ ದುರ್ಮರಣ

lok sabha election
Lok Sabha Election 20244 hours ago

Lok Sabha Election : ಲೊಕಸಭಾ ಚುನಾವಣೆಯ ಎರಡನೇ ಹಂತದ 88 ಕ್ಷೇತ್ರಗಳಲ್ಲಿ ಶೇ 60.96 ಮತದಾನ

Hassan News
ಕರ್ನಾಟಕ5 hours ago

Hassan News: ಎರಡು ಗುಂಪುಗಳ ನಡುವೆ ಮಾರಾಮಾರಿ; ಕೈ ಕಾರ್ಯಕರ್ತನಿಗೆ ಗಂಭೀರ ಗಾಯ

Pandya brothers
ಕ್ರೀಡೆ5 hours ago

Pandya Brothers : ಪಾಂಡ್ಯ ಸಹೋದರರ ಮನೆಗೆ ಹೊಸ ಅತಿಥಿ ಆಗಮನ, ಖುಷಿಯಲ್ಲಿ ಕುಟುಂಬ

ಕರ್ನಾಟಕ5 hours ago

Lok Sabha Election 2024: ಕರ್ನಾಟಕದಲ್ಲಿ ದಾಖಲೆಯ ಮತದಾನ; ಕಳೆದ ಬಾರಿಗಿಂತ ಏರಿಕೆ, ಮಂಡ್ಯದಲ್ಲಿ ಅತಿ ಹೆಚ್ಚು!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ15 hours ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 202416 hours ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 202416 hours ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ22 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ1 day ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ1 day ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ2 days ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20242 days ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ3 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

ಟ್ರೆಂಡಿಂಗ್‌