Viral Video | ‘ನನ್ನ ತಂಗಿ ಕೆಳಗೆ ಬೀಳದಿರಲಿ’; ಈ ಪುಟ್ಟ ಅಣ್ಣನ ಕಾಳಜಿಗೆ ಸೋಲದೆ ಇರದು ಹೃದಯ - Vistara News

ವೈರಲ್ ನ್ಯೂಸ್

Viral Video | ‘ನನ್ನ ತಂಗಿ ಕೆಳಗೆ ಬೀಳದಿರಲಿ’; ಈ ಪುಟ್ಟ ಅಣ್ಣನ ಕಾಳಜಿಗೆ ಸೋಲದೆ ಇರದು ಹೃದಯ

ಆತ 10-12ವರ್ಷದ ಬಾಲಕನಿರಬಹುದು. ತಂಗಿ ತುಂಬ ಚಿಕ್ಕವಳು. ಆಕೆಯನ್ನು ಸೈಕಲ್​ ಮೇಲೆ ಕೂರಿಸಿಕೊಂಡಿದ್ದಾನೆ. ಪುಟ್ಟ ತಂಗಿಯನ್ನು ನಾಜೂಕಾಗಿ ಕರೆದುಕೊಂಡು ಹೋಗಬೇಕು ಎಂಬ ಪ್ರಯತ್ನ ಮಾಡಿದ್ದಾನೆ.

VISTARANEWS.COM


on

Brother protect baby sister Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಒಡ ಹುಟ್ಟಿದವರ ಮಧ್ಯೆ ಇರುವ ಪ್ರೀತಿ-ಬಾಂಧವ್ಯ ಅನನ್ಯ. ಯಾವತ್ತೂ ಮೊದಲು ಹುಟ್ಟಿದವರು, ತಮ್ಮ ಬೆನ್ನಿಗೆ ಹುಟ್ಟುವ ಇನ್ನೊಂದು ಕೂಸಿನ ಬಗ್ಗೆ ತುಂಬ ಅಕ್ಕರೆ-ಪ್ರೀತಿ ಇಟ್ಟುಕೊಳ್ಳುತ್ತಾರೆ. ನಾವು ದೊಡ್ಡವರು, ನಮಗಿಂತಲೂ ಚಿಕ್ಕವರಾದ ತಂಗಿ/ತಮ್ಮನನ್ನು ನಾವು ಕಾಳಜಿ ಮಾಡಬೇಕು ಎಂಬ ಭಾವನೆ ಅವರ ಮನಸಲ್ಲಿ ಮೂಡಿಬಿಡುತ್ತದೆ. ಅದಕ್ಕೆ ಸಾಕ್ಷಿ ಇಲ್ನೋಡಿ ಈ ವಿಡಿಯೊ. ಅಣ್ಣ ತನ್ನ ತಂಗಿಯನ್ನು ಅದೆಷ್ಟು ಕಾಳಜಿ ಮಾಡುತ್ತಿದ್ದಾನೆಂದು..

ಆತ 10-12ವರ್ಷದ ಬಾಲಕನಿರಬಹುದು. ತಂಗಿ ತುಂಬ ಚಿಕ್ಕವಳು. ಆಕೆಯನ್ನು ಸೈಕಲ್​ ಮೇಲೆ ಕೂರಿಸಿಕೊಂಡಿದ್ದಾನೆ. ಆದರೆ ಆಕೆ ಬೀಳಬಹುದು ಎಂಬ ಭಯ ಅವನಿಗೆ. ಪುಟ್ಟ ತಂಗಿಯನ್ನು ನಾಜೂಕಾಗಿ ಕರೆದುಕೊಂಡು ಹೋಗಬೇಕು ಎಂಬ ಕಾರಣಕ್ಕೆ ಅವನು ಆಕೆಯ ಕಾಲುಗಳನ್ನು ಮುಂದಕ್ಕೆ ಚಾಚಿಸಿ, ಟವೆಲ್​​ನಿಂದ ಕಟ್ಟುತ್ತಾನೆ. ಹಾಗೇ, ಅವಳ ಹಿಂಬದಿಗೆ ಒಂದೆರಡು ಪುಟ್ಟ ಚೀಲ ಇಟ್ಟಿದ್ದಾನೆ. ಒಟ್ಟಿನಲ್ಲಿ ತನ್ನ ತಂಗಿ ಎಲ್ಲಿಯೂ ಬೀಳದೆ ಇರಲಿ ಎಂಬ ಮುನ್ನೆಚ್ಚರಿಕೆ ಅವನದು. ಹೀಗೆ ತಂಗಿ ಸುರಕ್ಷಿತವಾಗಿ ಕುಳಿತುಕೊಂಡಿದ್ದಾಳೆ ಎಂಬುದನ್ನು ಖಚಿತಪಡಿಸಿಕೊಂಡು ಅವನು ಸೈಕಲ್​ ಮುಂದೆ ತೆಗೆದುಕೊಂಡು ಹೋಗುತ್ತಾನೆ. ಈ ವಿಡಿಯೊವೊಮ್ಮೆ ನೋಡಿ, ಅಣ್ಣನ ಪ್ರೀತಿ, ನಿಮ್ಮ ಹೃದಯವನ್ನೂ ಸ್ಪರ್ಶಿಸುತ್ತದೆ..

ಇದನ್ನೂ ಓದಿ: Viral Video | ರಾಧಾರಮಣ ದೇಗುಲದಲ್ಲಿ ಭಜನೆ ಹಾಡಿದ ಬಿಜೆಪಿ ಸಂಸದೆ ಹೇಮಾ ಮಾಲಿನಿ; ನೃತ್ಯವಷ್ಟೇ ಅಲ್ಲ, ಗಾಯನಕ್ಕೂ ಸೈ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

IPL 2024: ದಯವಿಟ್ಟು ಆರ್​ಸಿಬಿ ತಂಡವನ್ನು ಮಾರಿಬಿಡಿ; ಅಳಲು ತೋಡಿಕೊಂಡ ಟೆನಿಸ್​ ದಿಗ್ಗಜ

IPL 2024: 16 ಆವೃತ್ತಿಯ ಐಪಿಎಲ್​ನಲ್ಲಿ(IPL 2024) ಆರ್​ಸಿಬಿ(Royal Challengers Bengaluru) ತಂಡ ಕಪ್​ ಗೆಲ್ಲದಿದ್ದರೂ ಕೂಡ ಇಷ್ಟೊಂದು ಕಳಪೆ ಮಟ್ಟದ ಆಟವಾಡಿರಲಿಲ್ಲ. ಈ ಬಾರಿ ಆಡಿದ 7 ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯ ಮಾತ್ರ ಗೆಲುವು ಕಂಡಿದೆ. ದುರಾದೃಷ್ಟವಶಾತ್‌ ಈ ಬಾರಿ ತವರಿನಲ್ಲೇ ಅತ್ಯಧಿಕ ಪಂದ್ಯ ಸೋತ ಅವಮಾನಕ್ಕೆ ಸಿಲುಕಿದೆ.

VISTARANEWS.COM


on

IPL 2024
Koo

ಬೆಂಗಳೂರು: ಕನ್ನಡಿಗರ ನೆಚ್ಚಿನ ತಂಡ ಎನಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು(RCB) ತಂಡದ ಶೋಚನೀಯ ಪ್ರದರ್ಶನ ಕಂಡು ಭಾರತದ ಟೆನಿಸ್​ ದಿಗ್ಗಜ ಮಹೇಶ್‌ ಭೂಪತಿ(Mahesh Bhupathi) ಬೇಸರ ವ್ಯಕ್ತಪಡಿಸಿದ್ದು, ದಯವಿಟ್ಟು ತಂಡವನ್ನು(IPL 2024) ಹೊಸ ಮಾಲಿಕರಿಗೆ ಮಾರಿ ಬಿಡಿ ಎಂದು ಹೇಳಿದ್ದಾರೆ.

“ಕ್ರೀಡೆ, ಐಪಿಎಲ್, ಅಭಿಮಾನಿಗಳು ಮತ್ತು ಆಟಗಾರರ ಸಲುವಾಗಿ ಬಿಸಿಸಿಐ ಇತರ ತಂಡಗಳು ಮಾಡಿದ ರೀತಿಯಲ್ಲಿ ಕ್ರೀಡಾ ಫ್ರಾಂಚೈಸಿಯನ್ನು ನಿರ್ಮಿಸಲು ಕಾಳಜಿವಹಿಸುವ ಹೊಸ ಮಾಲೀಕರಿಗೆ ಆರ್​ಸಿಬಿ ತಂಡವನ್ನು ಮಾರಾಟ ಮಾಡುವ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ” ಎಂದು ಮಹೇಶ್‌ ಭೂಪತಿ ಟ್ವಿಟರ್​ ಎಕ್ಸ್​ನಲ್ಲಿ ಪೋಸ್ಟ್​ ಮಾಡಿ ಅಳಲು ತೋಡಿಕೊಂಡಿದ್ದಾರೆ.

ಕಳೆದ 16 ಆವೃತ್ತಿಯ ಐಪಿಎಲ್​ನಲ್ಲಿ(IPL 2024) ಆರ್​ಸಿಬಿ(Royal Challengers Bengaluru) ತಂಡ ಕಪ್​ ಗೆಲ್ಲದಿದ್ದರೂ ಕೂಡ ಇಷ್ಟೊಂದು ಕಳಪೆ ಮಟ್ಟದ ಆಟವಾಡಿರಲಿಲ್ಲ. ಈ ಬಾರಿ ಆಡಿದ 7 ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯ ಮಾತ್ರ ಗೆಲುವು ಕಂಡಿದೆ. ದುರಾದೃಷ್ಟವಶಾತ್‌ ಈ ಬಾರಿ ತವರಿನಲ್ಲೇ ಅತ್ಯಧಿಕ ಪಂದ್ಯ ಸೋತ ಅವಮಾನಕ್ಕೆ ಸಿಲುಕಿದೆ.


ಟೂರ್ನಿ ಆರಂಭಕ್ಕೂ ಮುನ್ನ ವಿರಾಟ್​ ಕೊಹ್ಲಿ ಇದು ಆರ್​ಸಿಬಿಯ ಹೊಸ ಅಧ್ಯಾಯ ಎಂದು ಹೇಳುವು ಮೂಲಕ ಆರ್‌ಸಿಬಿ ಹವಾ ಸೃಷ್ಟಿಸಿತ್ತು. ಇದೀಗ ಸತತ ಸೋಲಿನಿಂದ ಸಾಮಾಜಿಕ ಜಾಲತಾಣದಲ್ಲಿ ಮುಗಿದು ಹೋದ ಅಧ್ಯಾಯ ಅಂತ ಅಭಿಮಾನಿಗಳು ವ್ಯಂಗ್ಯವಾಗಿ ಹೇಳತೊಡಗಿದ್ದಾರೆ. ಆರ್​ಸಿಬಿ ಮೇಲೆ ಸ್ವತಃ ಅಭಿಮಾನಿಗಳೇ ವಿಶ್ವಾಸ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ IPL 2024: ವಿಶ್ರಾಂತಿ ಬಯಸಿದ ಗ್ಲೆನ್ ಮ್ಯಾಕ್ಸ್​ವೆಲ್​; ಮುಂದಿನ ಪಂದ್ಯಗಳಿಗೆ ಅಲಭ್ಯ

ತಂಡದದಲ್ಲಿ ಸ್ಟಾರ್​ ಆಟಗಾರರಿದ್ದರೂ ಕೂಡ ಯಾರು ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ವಿರಾಟ್​ ಕೊಹ್ಲಿ, ದಿನೇಶ್​ ಕಾರ್ತಿಕ್​ ಮಾತ್ರ ತಂಡದ ನಂಬಿಕಸ್ಥ ಆಟಗಾರರಾಗಿದ್ದಾರೆ. ಆರ್​ಸಿಬಿ ಬ್ಯಾಟಿಂಗ್‌ನಲ್ಲಿ ಯಶಸ್ವಿಯಾದರೆ ಬೌಲಿಂಗ್‌ನಲ್ಲಿ ಎಡವುತ್ತಿದೆ. ಬೌಲಿಂಗ್‌ನಲ್ಲಿ ಯಶಸ್ವಿಯಾದರೆ, ಬ್ಯಾಟಿಂಗ್‌ನಲ್ಲಿ ಪಲ್ಟಿ ಹೊಡೆಯುತ್ತಿದೆ. ಬೌಲಿಂಗ್‌ ಪಡೆಯಂತೂ ಸಂಪೂರ್ಣ ಮೊನಚು ಕಳೆದುಕೊಂಡಿದೆ. ಇದು, ಸಹಜವಾಗಿ ಆರ್‌ಸಿಬಿಯನ್ನು ಸೋಲಿನ ಸುಳಿಗೆ ತಳ್ಳಿದೆ. ಒಟ್ಟಿನಲ್ಲಿ ಸಂಘಟನಾತ್ಮಕ ಹೋರಾಟವೇ ಬರುತ್ತಿಲ್ಲ. 

ಆರ್‌ಸಿಬಿ ಪ್ಲೇ ಆಫ್ ಹಾದಿ ಸಂಪೂರ್ಣ ಮುಚ್ಚಿಲ್ಲ. ಆದರೆ, ಸತತವಾಗಿ ಗೆಲ್ಲಬೇಕಾದ ಒತ್ತಡ ತಂಡದ ಮೇಲಿದೆ. ಈಗಾಗಲೇ 7 ಪಂದ್ಯ ಆಡಿದ್ದು, 1 ಪಂದ್ಯ ಗೆದ್ದು, 6 ಪಂದ್ಯದಲ್ಲಿ ಸೋಲು ಕಂಡಿದೆ. 2 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ, ಲೀಗ್‌ ಹಂತದಲ್ಲಿ ಇನ್ನೂ 7 ಪಂದ್ಯಗಳ ಬಾಕಿ ಇದೆ. ಹೀಗಾಗಿ ಉಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರ ಪ್ಲೇ ಆಫ್ ಅವಕಾಶ ಇದೆ. ಜತೆಗೆ ಉಳಿದ ತಂಡಗಳ ಪ್ರದರ್ಶನವೂ ಆರ್‌ಸಿಬಿ ಪ್ಲೇಆಫ್ ಹಾದಿಯ ಮೇಲೆ ಪರಿಣಾಮ ಬೀರಲಿದೆ

Continue Reading

ಪ್ರಮುಖ ಸುದ್ದಿ

Right To Sleep: ನಿದ್ದೆ ಮನುಷ್ಯನ ಹಕ್ಕು, ಯಾರೂ ಕಸಿಯುವಂತಿಲ್ಲ ಎಂದು ಹೈಕೋರ್ಟ್‌ ಆದೇಶ!

Right To Sleep: ಮಹಾರಾಷ್ಟ್ರದಲ್ಲಿ ಇ.ಡಿ ಅಧಿಕಾರಿಗಳು ಅಕ್ರಮವಾಗಿ ಹಣ ವರ್ಗಾವಣೆ ತಡೆ (PMLA) ಕಾಯ್ದೆ ಅಡಿಯಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಿ, ರಾತ್ರಿಯಿಡೀ ವಿಚಾರಣೆ ನಡೆಸಿದ್ದರು. ನನ್ನ ನಿದ್ದೆಗೆ ಭಂಗವುಂಟಾಗಿದೆ, ಕಾನೂನುಬಾಹಿರವಾಗಿ ಬಂಧಿಸಲಾಗಿದೆ ಎಂಬುದಾಗಿ ಆರೋಪಿಯು ಕೋರ್ಟ್‌ ಮೊರೆ ಹೋಗಿದ್ದರು. ಹಾಗಾಗಿ ನ್ಯಾಯಾಲಯವು, ನಿದ್ದೆಯ ಮಹತ್ವವನ್ನು ತಿಳಿಸಿ, ವಿಚಾರಣೆ, ದಾಳಿಗೆ ಸಮಯ ನಿಗದಿ ಮಾಡಿಕೊಳ್ಳಿ ಎಂಬುದಾಗಿ ಇ.ಡಿ ಅಧಿಕಾರಿಗಳಿಗೆ ಸೂಚಿಸಿದೆ. ಕೋರ್ಟ್‌ ಸೂಚನೆಯ ಸಾರಾಂಶ ಇಲ್ಲಿದೆ.

VISTARANEWS.COM


on

Right To Sleep
Koo

ಮುಂಬೈ: ‘ನಿದ್ದೆಯೇ ಬುದ್ಧಿಯ ಮೂಲ’ ಎನ್ನುತ್ತಾರೆ. ಬೆಳಗ್ಗೆ 2 ಗಂಟೆ ಬೇಗ ಎದ್ದರೆ ದಿನವಿಡೀ ಆಕಳಿಕೆ, ಬೇಸರ, ಕೆಲಸದಲ್ಲಿ ನಿರಾಸಕ್ತಿ ಮೂಡುತ್ತದೆ. ಸತತವಾಗಿ ನಿದ್ದೆ (Sleeping) ಇಲ್ಲದಿದ್ದರೆ ಮನುಷ್ಯ ಹುಚ್ಚನಾಗುತ್ತಾನೆ ಎಂದು ಕೂಡ ಹೇಳುತ್ತಾರೆ. ಈಗ ಬಾಂಬೆ ಹೈಕೋರ್ಟ್‌ (Bombay High Court) ಕೂಡ ಇದನ್ನೇ ಉಚ್ಚರಿಸಿದೆ. “ನಿದ್ದೆ ಮನುಷ್ಯನ ಹಕ್ಕು (Right To Sleep) ಹಾಗೂ ಮೂಲಭೂತ ಅವಶ್ಯಕತೆಯಾಗಿದೆ. ಯಾರೂ ಇದನ್ನು ಕಸಿಯಬಾರದು” ಎಂಬುದಾಗಿ ಅರ್ಜಿಯೊಂದರ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿಯೊಬ್ಬರನ್ನು ರಾತ್ರಿಯಿಡೀ ವಿಚಾರಣೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ರೇವತಿ ಮೊಹಿತೆ ಹಾಗೂ ಮಂಜೂಷ ದೇಶಪಾಂಡೆ ಅವರು ಈ ಮೇಲಿನಂತೆ ಆದೇಶ ಹೊರಡಿಸಿದ್ದಾರೆ. “ಇ.ಡಿ ಅಧಿಕಾರಿಗಳು ಯಾರನ್ನೇ ಆಗಲಿ ವಿಚಾರಣೆ ನಡೆಸಲು, ಸಮನ್ಸ್‌ ನೀಡಲು, ಅವರ ಮನೆಗೆ ದಾಳಿ ನಡೆಸಿ ಪರಿಶೀಲನೆ ಮಾಡಲು, ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ನಿಯಮಿತ ಸಮಯವನ್ನು ನಿಗದಿಪಡಿಸಿಕೊಳ್ಳಬೇಕು” ಎಂದು ಕೂಡ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.

“ನಿದ್ದೆ ಮನುಷ್ಯನ ಹಕ್ಕಾಗಿದೆ. ಅದೊಂದು ಸಾಮಾನ್ಯ ಅವಶ್ಯಕತೆಯಾಗಿದೆ. ಯಾರಾದರೂ ಮನುಷ್ಯನ ನಿದ್ದೆಯ ಹಕ್ಕನ್ನು ಕಸಿದುಕೊಂಡರೆ, ಆತನ ನಿದ್ದೆಗೆ ಭಂಗ ಮಾಡಿದರೆ ಅದು ಮನುಷ್ಯನ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಅದರಲ್ಲೂ, ಇ.ಡಿ ಅಧಿಕಾರಿಗಳು ಹೊತ್ತಲ್ಲದ ಹೊತ್ತಲ್ಲಿ ದಾಳಿ ನಡೆಸಿ, ವಿಚಾರಣೆ ಮಾಡಿದರೆ ಖಂಡಿತವಾಗಿಯೂ ಅವರ ನಿದ್ದೆಗೆ ಭಂಗವುಂಟಾಗುತ್ತದೆ. ಯಾವುದೇ ವ್ಯಕ್ತಿಗೆ ಸರಿಯಾದ ನಿದ್ದೆ ಇಲ್ಲದಿದ್ದರೆ ಆತನ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ” ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು.

ಏನಿದು ಪ್ರಕರಣ?

ಮಹಾರಾಷ್ಟ್ರದ ಗಾಂಧಿಧಾಮ ನಿವಾಸಿಯಾದ ರಾಮ್‌ ಕೋಟುಮಲ್‌ (64) ಎಂಬುವರನ್ನು ಇ.ಡಿ ಅಧಿಕಾರಿಗಳು 2023ರ ಆಗಸ್ಟ್‌ನಲ್ಲಿ ಬಂಧಿಸಿದ್ದಾರೆ. ಅಕ್ರಮವಾಗಿ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಅವರನ್ನು ಬಂಧಿಸಿದ್ದರು. ಇ.ಡಿ ಅಧಿಕಾರಿಗಳು ರಾತ್ರಿಯಿಡೀ ಅವರನ್ನು ವಿಚಾರಣೆ ನಡೆಸಿದ್ದರು. ಆರೋಪಿಯು ಶೌಚಾಲಯಕ್ಕೆ ಹೋದರೆ, ಅಲ್ಲಿಯೂ ಅವರಿಗೆ ತೊಂದರೆ ಕೊಟ್ಟಿದ್ದರು. ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವ ರಾಮ್‌ ಕೋಟುಮಲ್‌ ಅವರ ಬಂಧನವೇ ಕಾನೂನುಬಾಹಿರವಾಗಿದೆ ಎಂಬುದಾಗಿ ಅವರ ಪರ ವಕೀಲರು ಕೋರ್ಟ್‌ನಲ್ಲಿ ವಾದ ಮಂಡಿಸಿದರು. ಆಗ ನ್ಯಾಯಾಲಯವು ಇ.ಡಿ ಅಧಿಕಾರಿಗಳಿಗೆ ಸಮಯ ನಿಗದಿಪಡಿಸಿಕೊಳ್ಳುವಂತೆ ಸೂಚಿಸಿತ್ತು.

ಇದನ್ನೂ ಓದಿ: Robbery Case : ನಿದ್ದೆಗೆ ಜಾರಿದ ಮಾಲೀಕನ ಕೈ-ಕಾಲು ಕಟ್ಟಿ, ಮನೆಯನ್ನೇ ಲೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್‌!

Continue Reading

ವೈರಲ್ ನ್ಯೂಸ್

Viral Video: ಐಎಎಸ್‌ ಅಧಿಕಾರಿಯ ಡೆಸ್ಕ್‌ ಮೇಲೆಯೇ ಕುಣಿದು ಕುಪ್ಪಳಿಸಿದ ಮಗ; ಪರ-ವಿರೋಧ ಚರ್ಚೆ

Viral Video: ಪಮೇಲಾ ಸತ್ಪತಿ ಎಂಬ ಜಿಲ್ಲಾಧಿಕಾರಿಯು ತಮ್ಮ ಮನೆಯಲ್ಲಿರುವ ಕಚೇರಿಯಲ್ಲಿ ಮಗನು ಜಿಗಿದಾಡಿದ, ಡೆಸ್ಕ್‌ ಮೇಲೆ ಕುಣಿದಾಡಿದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಕುಟುಂಬ, ಮಕ್ಕಳು ಹಾಗೂ ವೃತ್ತಿಜೀವನವನ್ನು ಬ್ಯಾಲೆನ್ಸ್‌ ಮಾಡುವ ನಿಮಗೆ ಶರಣು ಎಂದು ಕೆಲವರು ಪ್ರತಿಕ್ರಿಯಿಸಿದರೆ, ಇನ್ನೂ ಕೆಲವರು ಕೊಂಕು ನುಡಿದಿದ್ದಾರೆ. ಆದಾಗ್ಯೂ, ವಿಡಿಯೊ ಭಾರಿ ವೈರಲ್‌ ಆಗಿದೆ.

VISTARANEWS.COM


on

Viral Video
Koo

ನವದೆಹಲಿ: ಈಗಿನ ಕಾಲದಲ್ಲಿ ಮಕ್ಕಳನ್ನು ಸಂಭಾಳಿಸುವುದು ಬಹುಕಷ್ಟದ ಕೆಲಸ ಎಂದು ಹೆಚ್ಚಿನ ಮಹಿಳೆಯರು ಹೇಳುತ್ತಿರುತ್ತಾರೆ. ಅದರಲ್ಲೂ, ತಾಯಿಯು ಕೆಲಸಕ್ಕೆ ಹೋಗುವವರಾದರೆ ಮಕ್ಕಳನ್ನು ಸಂಭಾಳಿಸುವುದು, ಪೋಷಣೆ ಮಾಡುವುದು ಇನ್ನೂ ಕಷ್ಟ. ಇನ್ನು ಬೇಸಿಗೆ ವೇಳೆ ಶಾಲೆಗೆ ರಜೆ ಘೋಷಿಸಿದರಂತೂ ಮಕ್ಕಳನ್ನು ಹಿಡಿದಿಟ್ಟುಕೊಳ್ಳುವುದೇ ತಾಯಂದಿರಿಗೆ ಕೆಲಸವಾಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಪುಟ್ಟ ಮಗುವೊಂದು ಐಎಎಸ್‌ ಅಧಿಕಾರಿ ಕೆಲಸ ಮಾಡುವ ಡೆಸ್ಕ್‌ ಮೇಲೆಯೇ ಕುಣಿದು ಕುಪ್ಪಳಿಸಿದೆ. ಐಎಎಸ್‌ ಅಧಿಕಾರಿಯೇ (IAS Officer) ತಮ್ಮ ಮಗನ ಸಾಹಸದ ವಿಡಿಯೊವನ್ನು (Viral Video) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ಚರ್ಚೆಗೂ ಗ್ರಾಸವಾಗಿದೆ.

ಹೌದು, ಜಿಲ್ಲಾಧಿಕಾರಿಯಾಗಿರುವ ಪಮೇಲಾ ಸತ್ಪತಿ ಅವರು ತಮ್ಮ ಮನೆಯಲ್ಲಿಯೇ ಕಚೇರಿಯೊಂದನ್ನು ಮಾಡಿಕೊಂಡಿದ್ದಾರೆ. “ನೀವೊಬ್ಬ ಗಂಡು ಮಗುವಿನ ತಾಯಿಯಾಗಿದ್ದರೆ, ಬೇಸಿಗೆ ರಜೆಯಲ್ಲಿ ಆತನನ್ನು ಹಿಡಿದಿಡುವ ಕೆಲಸವೇ ಭಯಾನಕವಾಗಿರುತ್ತದೆ” ಎಂಬುದಾಗಿ ಪಮೇಲಾ ಸತ್ಪತಿ ಅವರು ತಮಾಷೆಯಾಗಿ ಬರೆದುಕೊಂಡಿದ್ದಾರೆ. ವಿಡಿಯೊ ವೈರಲ್‌ ಆಗುತ್ತಲೇ ಪರ-ವಿರೋಧ ಚರ್ಚೆಯಾಗುತ್ತಿದೆ. ಐಎಎಸ್‌ ಅಧಿಕಾರಿಯು ಕಚೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದರೆ, ನೀಲಿ ಬಣ್ಣದ ಟಿ-ಶರ್ಟ್‌ ಧರಿಸಿದ ಪುಟ್ಟ ಬಾಲಕನು ಡೆಸ್ಕ್‌ ಮೇಲೆ ಕುಣಿದಾಡಿದ್ದಾನೆ. ಬಾಲಕನ ತುಂಟಾಟವನ್ನು ಕಂಡ ತಾಯಿಯು ತಮ್ಮ ಪಾಡಿಗೆ ತಾವು ಕೆಲಸ ಮಾಡಿದ್ದಾರೆ.

“ಕೆಲಸ ಮಾಡುತ್ತಲೇ ಮಗುವನ್ನು ಸಾಕುವುದು ಕಷ್ಟದ ಕೆಲಸ. ಅದರಲ್ಲೂ, ಮಹಿಳೆಯು ಸರ್ಕಾರಿ ಅಧಿಕಾರಿಯಾಗಿದ್ದುಕೊಂಡು, ವೈಯಕ್ತಿಕ ಹಾಗೂ ವೃತ್ತಿಜೀವನದ ಸಮತೋಲನ ಕಾಪಾಡುವುದು ಇನ್ನೂ ಕಷ್ಟ. ಇಂತಹದ್ದರಲ್ಲಿ ಕೆಲಸದ ಜತೆಗೆ ಮಗನಿಗೂ ಸಮಯ ಕೊಡುತ್ತಿರುವ ನಿಮ್ಮ ಕೆಲಸ ಶ್ಲಾಘನೀಯ” ಎಂದು ಒಬ್ಬರು ಬರೆದುಕೊಂಡಿದ್ದಾರೆ. “ಮೇಡಂ, ಈಗಿನ ಕಾಲದಲ್ಲಿ ಮಕ್ಕಳು ತಂದೆ-ತಾಯಿ ಜತೆ ಕಾಲ ಕಳೆಯುವುದೇ ಅತ್ಯುತ್ತಮ ಕ್ಷಣವಾಗಿದೆ. ನೀವು ಇದನ್ನು ಮಿಸ್‌ ಮಾಡಿಕೊಳ್ಳದಿರಿ. ಏಕೆಂದರೆ, ಸಮಯ ಮರಳಿ ಬರುವುದಿಲ್ಲ” ಎಂಬುದಾಗಿ ಮತ್ತೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ.

ಮತ್ತೊಬ್ಬರು ಪ್ರತಿಕ್ರಿಯಿಸಿದ್ದು, “ಮಹಿಳಾ ಉದ್ಯೋಗಿಗಳು ಮಕ್ಕಳ ಬೇಸಿಗೆ ಸಮಯದಲ್ಲಿ ಕಡ್ಡಾಯ ರಜೆ ಪಡೆಯುವುದು ಒಳಿತು” ಎಂದಿದ್ದಾರೆ. ಇನ್ನು ಮತ್ತೊಂದಿಷ್ಟು ಜನ, ಕೆಲಸ ಮಾಡುವ ಕಚೇರಿಯಲ್ಲಿ ಮಕ್ಕಳನ್ನು ಆಡಲು ಬಿಟ್ಟರೆ ಸರ್ಕಾರದ ಕೆಲಸ ಆದ ಹಾಗೆಯೇ ಎಂದು ನಕಾರಾತ್ಮಕವಾಗಿ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ, ಐಎಎಸ್‌ ಅಧಿಕಾರಿ ಇರಲಿ, ಮುಖ್ಯಮಂತ್ರಿಯೇ ಇರಲಿ, ತಾಯಿ ಯಾವಾಗಲೂ ತಾಯಿಯೇ. ಮಕ್ಕಳ ಖುಷಿಯೇ ಆಕೆಗೆ ಮುಖ್ಯವಾಗಿರುತ್ತದೆ. ಮಕ್ಕಳ ಖುಷಿಯ ಜತೆಗೆ ವೃತ್ತಿಜೀವನವನ್ನೂ ಬ್ಯಾಲೆನ್ಸ್‌ ಮಾಡುವ ತಾಯಂದಿರಿಗೆ ಇವರು ಅತ್ಯುತ್ತಮ ನಿದರ್ಶನ ಎನಿಸಿದ್ದಾರೆ.

ಇದನ್ನೂ ಓದಿ: IPL 2024: ಹೆಲಿಕಾಪ್ಟರ್ ಶಾಟ್ ಮೂಲಕ ಬೌಂಡರಿ ಬಾರಿಸಿದ ಪರಾಗ್; ವಿಡಿಯೊ ವೈರಲ್​

Continue Reading

ಪ್ರಮುಖ ಸುದ್ದಿ

Viral News: ಉತ್ತರ ಪ್ರದೇಶ ಪೊಲೀಸರಿಗೆ ಕುರ್ತಾ-ಧೋತಿ, ಹಣೆಗೆ ವಿಭೂತಿ, ಕುತ್ತಿಗೆಗೆ ರುದ್ರಾಕ್ಷಿಮಾಲೆ!

Viral News: ಪೊಲೀಸ್ ಸಿಬ್ಬಂದಿಗಳು ಸಮವಸ್ತ್ರದ ಬದಲು ಹಣೆಯ ಮೇಲೆ ವಿಭೂತಿ, ಕುತ್ತಿಗೆಗೆ ರುದ್ರಾಕ್ಷಿಮಾಲಾ, ಕಿತ್ತಳೆ ಬಣ್ಣದ ಕುರ್ತಾ ಧೋತಿ ಧರಿಸಿ ಅರ್ಚಕರಂತೆ ಕಾಣುತ್ತಿದ್ದಾರೆ. ಪೊಲೀಸರ ಈ ಉಪಕ್ರಮ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರಿಂದ ಮಿಶ್ರ ಪ್ರತಿಕ್ರಿಯೆ ಬರುತ್ತಿದೆ.

VISTARANEWS.COM


on

Police Issue
Koo

ಲಖನೌ: ಸಾಮಾನ್ಯವಾಗಿ ಹೆಚ್ಚಿನ ದೇವಾಲಯಗಳಲ್ಲಿ ಭಕ್ತರ ನೂಕುನುಗ್ಗಲು ಇರುತ್ತದೆ. ಹಾಗಾಗಿ ಅಲ್ಲಿ ಯಾವುದೇ ಸಮಸ್ಯೆಯಾಗಬಾರದೆಂದು ಪೊಲೀಸ್ ಸಿಬ್ಬಂದಿಗಳನ್ನು (Police Issue) ನೇಮಿಸಿರುತ್ತಾರೆ. ಆದರೆ ಪೊಲೀಸರು ಸ್ವಲ್ಪ ಗದರಿದರೂ ಭಕ್ತರು ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರನ್ನು ದೂರುತ್ತಾರೆ. ಹಾಗಾಗಿ ಇಂತಹ ದೂರುಗಳನ್ನು ತಪ್ಪಿಸಲು ಉತ್ತರ ಪ್ರದೇಶದ ಪೊಲೀಸರು ವಿಶೇಷ ಉಪಕ್ರಮ ತೆಗೆದುಕೊಂಡಿದೆ. ಅಪ್ಪಟ ಭಕ್ತರ ವೇಷದಲ್ಲಿ ಜನರನ್ನು ನಿಯಂತ್ರಿಸುತ್ತಿದ್ದಾರೆ.

ವಾರಣಾಸಿಯ ಕಾಶಿ ವಿಶ್ವನಾಥ ದೇವಾಸ್ಥಾನದ ಒಳಗೆ ಜನಸಂದಣಿಯನ್ನು ನಿಯಂತ್ರಿಸಲು ಉತ್ತರ ಪ್ರದೇಶದ 6 ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು. ಇವರಲ್ಲಿ ಇಬ್ಬರು ಮಹಿಳೆಯರು ಮತ್ತು ನಾಲ್ಕು ಮಂದಿ ಪುರುಷರಿದ್ದಾರೆ. ಆದರೆ ಈ ಸಿಬ್ಬಂದಿಗಳು ಸಮವಸ್ತ್ರದ ಬದಲು ಹಣೆಯ ಮೇಲೆ ವಿಭೂತಿ, ಕುತ್ತಿಗೆಗೆ ರುದ್ರಾಕ್ಷಿಮಾಲಾ, ಕಿತ್ತಳೆ ಬಣ್ಣದ ಕುರ್ತಾ ಧೋತಿ ಧರಿಸಿದ್ದಾರೆ. ಪೊಲೀಸರ ಈ ಉಪಕ್ರಮ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರಿಂದ ಮಿಶ್ರ ಪ್ರತಿಕ್ರಿಯೆಗಳು ಬರುತ್ತಿವೆ.

ದೇವಾಲಯದಲ್ಲಿ ಕರ್ತವ್ಯ ನಿರ್ವಹಿಸುವುದು ಬೇರೆ ಕಡೆಗಿಂತ ವಿಭಿನ್ನವಾಗಿರುತ್ತದೆ. ಪೊಲೀಸರು ಅಲ್ಲಿ ಜನಸಂದಣಿಯನ್ನು ನಿಯಂತ್ರಿಸಬೇಕು. ಹಾಗೆಯೇ ಗುಂಪನ್ನು ನಿಯಂತ್ರಿಸಲು ಆಗಾಗ ಜನರ ಮೇಲೆ ಬಲಪ್ರಯೋಗ ಮಾಡಬೇಕಾಗುತ್ತದೆ. ಆಗ ಜನರು ಪೊಲೀಸರನ್ನು ದೂರುತ್ತಾರೆ. ಭಕ್ತರಿಂದ ಈ ಬಗ್ಗೆ ದೂರುಗಳು ಹೆಚ್ಚಿದ ಬಳಿಕ ಈ ಉಪಕ್ರಮವನ್ನು ಪ್ರಾರಂಭಿಸಲಾಗಿದೆ. ಪೊಲೀಸರು ಅರ್ಚಕರಂತೆ ಕಂಡರೆ ಜನರು ಸೂಚನೆಗಳನ್ನು ಪಾಲಿಸುತ್ತಾರೆ. ಹಾಗಾಗಿ ಜನಸಂದಣೆಯನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಾರಣಾಸಿಯ ಪೊಲೀಸ್ ಕಮಿಷನರ್ ಮೋಹಿತ್ ಅಗರ್ವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅಲ್ಲದೇ ಈ ಪೊಲೀಸ್ ಸಿಬ್ಬಂದಿಗಳಿಗೆ ಮೂರು ದಿನಗಳ ತರಬೇತಿಯನ್ನು ನೀಡಿರುವುದಾಗಿ ತಿಳಿಸಿದ್ದಾರೆ. ಪ್ರಾಯೋಗಿಕವಾಗಿ ಇದನ್ನು 15 ದಿನಗಳ ಕಾಲ ನಡೆಸಲಾಗುವುದು. ಇದರ ಸಾಧಕ ಬಾಧಕ ಪರಿಶೀಲಿಸಿ ಮುಂದುವರಿಸಲಾಗುವುದು ಎಂಬುದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ:Elon Musk: ಭಾರತದಲ್ಲಿ 2 ಲಕ್ಷ ಎಕ್ಸ್‌ ಖಾತೆಗಳು ಬ್ಯಾನ್‌

ಆದರೆ ಪೊಲೀಸರ ಈ ಕ್ರಮದ ಬಗ್ಗೆ ಉತ್ತರ ಪ್ರದೇಶದ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಸಿಎಂ ಅಖಿಲೇಶ್ ಯಾದವ್ ಅವರು ಕಿಡಿಕಾರಿದ್ದಾರೆ. ಯಾವ ಪೊಲೀಸ್ ಕೈಪಿಡಿಯಲ್ಲಿ ಸಮವಸ್ತ್ರದ ಬಗ್ಗೆ ಇಂತಹ ಬದಲಾವಣೆಗೆ ಅನುಮತಿ ಇದೆ ಎಂದು ಅವರು ಪ್ರಶ್ನಿಸಿದ್ದಾರೆ. ಇದಕ್ಕೆ ಆದೇಶ ನೀಡಿದ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಮುಂದೆ ಒಬ್ಬ ವಂಚಕ ಇದರ ಲಾಭ ಪಡೆದು ಅಮಾಯಕ ಜನರನ್ನು ಲೂಟಿ ಮಾಡಿದರೆ ಉತ್ತರ ಪ್ರದೇಶದ ಸರ್ಕಾರ ಹೇಗೆ ಪ್ರತಿಕ್ರಿಯೆ ನೀಡುತ್ತದೆ? ಇದು ಖಂಡನೀಯ ಎಂದು ಅವರು ಕಿಡಿಕಾರಿದ್ದಾರೆ.

Continue Reading
Advertisement
Breast Cancer
ಲೈಫ್‌ಸ್ಟೈಲ್2 mins ago

Brest Cancer: ಮಹಿಳೆಯರೇ ಹುಷಾರ್‌; 2040ರ ವೇಳೆಗೆ ಸ್ತನ ಕ್ಯಾನ್ಸರ್‌ಗೆ 10 ಲಕ್ಷ ಜನ ಬಲಿಯಾಗಲಿದ್ದಾರಂತೆ!

BSP Candidates List
ಪ್ರಮುಖ ಸುದ್ದಿ2 mins ago

BSP List: ವಾರಾಣಸಿಯಲ್ಲಿ ಮೋದಿ ವಿರುದ್ಧ ಬಿಎಸ್‌ಪಿ ಅಭ್ಯರ್ಥಿ ಯಾರು? ಗ್ಯಾಂಗ್‌ಸ್ಟರ್‌ ಪತ್ನಿಗೂ ಟಿಕೆಟ್!

Road Accident in Hubballi
ಹುಬ್ಬಳ್ಳಿ16 mins ago

Road Accident : ಹುಬ್ಬಳ್ಳಿಯಲ್ಲಿ ಭೀಕರ ಅಪಘಾತಕ್ಕೆ ಮೂವರು ಬಲಿ, ಮತ್ತೋರ್ವ ಗಂಭೀರ

Rameshwaram Cafe
ಕ್ರೈಂ34 mins ago

Rameshwaram Cafe Blast: ಐಟಿ ಬಿಟಿ ಜನರೇ ರಾಮೇಶ್ವರಂ ಕೆಫೆ ಬಾಂಬರ್‌ಗಳ ಟಾರ್ಗೆಟ್ ಆಗಿದ್ದರು!

New Job Trend
ಉದ್ಯೋಗ37 mins ago

New Job Trend: ಉದ್ಯೋಗ ಕ್ಷೇತ್ರದಲ್ಲೊಂದು ಹೊಸ ಟ್ರೆಂಡ್; ಏನಿದು ಡ್ರೈ ಪ್ರಮೋಷನ್?

Boat Capsize
ದೇಶ54 mins ago

Boat Capsize: ಕಾಶ್ಮೀರದಲ್ಲಿ ಮುಳುಗಿದ ದೋಣಿ; ನಾಲ್ವರು ಶಾಲಾ ಮಕ್ಕಳು ಜಲಸಮಾಧಿ

IPL 2024
ಕ್ರಿಕೆಟ್58 mins ago

IPL 2024: ದಯವಿಟ್ಟು ಆರ್​ಸಿಬಿ ತಂಡವನ್ನು ಮಾರಿಬಿಡಿ; ಅಳಲು ತೋಡಿಕೊಂಡ ಟೆನಿಸ್​ ದಿಗ್ಗಜ

IPL 2024
ಕ್ರಿಕೆಟ್1 hour ago

IPL 2024: ವಿಶ್ರಾಂತಿ ಬಯಸಿದ ಗ್ಲೆನ್ ಮ್ಯಾಕ್ಸ್​ವೆಲ್​; ಮುಂದಿನ ಪಂದ್ಯಗಳಿಗೆ ಅಲಭ್ಯ

elephant death in dubare camp
ಕೊಡಗು1 hour ago

Elephant Death: ಕ್ಯೂಟ್‌ ಆಗಿ ಆಟವಾಡುತ್ತಿದ್ದ ತಬ್ಬಲಿ ಮರಿಯಾನೆಗೆ ಕೊನೆಗೂ ಸಿಗಲಿಲ್ಲ ತಾಯಿ

Right To Sleep
ಪ್ರಮುಖ ಸುದ್ದಿ1 hour ago

Right To Sleep: ನಿದ್ದೆ ಮನುಷ್ಯನ ಹಕ್ಕು, ಯಾರೂ ಕಸಿಯುವಂತಿಲ್ಲ ಎಂದು ಹೈಕೋರ್ಟ್‌ ಆದೇಶ!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ6 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 202423 hours ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ2 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ3 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ4 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ4 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ5 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20245 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌