Elephant Attack: ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ; ಬೆಚ್ಚಿಬಿದ್ದ ಡ್ರೈವರ್‌ನಿಂದ ಅಪಘಾತ! - Vistara News

ವೈರಲ್ ನ್ಯೂಸ್

Elephant Attack: ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ; ಬೆಚ್ಚಿಬಿದ್ದ ಡ್ರೈವರ್‌ನಿಂದ ಅಪಘಾತ!

Elephant Attack: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ ಓಡಾಟ ಮಿತಿಮೀರಿದೆ. ಪ್ರತಿ ರಾತ್ರಿ ಎಂಬಂತೆ ಇಲ್ಲಿ 8, 9, 10 ತಿರುವಿನಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗುತ್ತಿದೆ. ನಿನ್ನೆ ರಾತ್ರಿ 9ನೇ ತಿರುವಿನಲ್ಲಿ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷವಾಗಿದೆ. ಇದನ್ನು ಕಂಡು ಗಾಬರಿಯಾದ ಚಾಲಕ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ವಾಹನ ರಸ್ತೆಯ ಬದಿಗೆ ಸರಿದು ಚರಂಡಿಗೆ ಬಿದ್ದಿದೆ.

VISTARANEWS.COM


on

elephant attack charmadi ghat
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿಕ್ಕಮಗಳೂರು: ಬೆಂಗಳೂರು ಹಾಗೂ ಕರಾವಳಿ ಕರ್ನಾಟಕದ ಪ್ರಮುಖ ಕೊಂಡಿಯಾದ ಘಾಟಿಗಳಲ್ಲಿ ಒಂದಾಗಿರುವ ಚಾರ್ಮಾಡಿ ಘಾಟಿಯ (Charmadi Ghat) ರಸ್ತೆಯಲ್ಲಿ ಕಾಡಾನೆ ((Elephant Attack) ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ. ನಿನ್ನೆ ರಾತ್ರಿ ‌ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಕಾಡಾನೆಯನ್ನು ಕಂಡು ಗಾಬರಿಯಾದ ಮಹಿಂದ್ರ ಜೀಪ್‌ ಚಾಲಕನೊಬ್ಬ ಗಾಡಿಯ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ವಾಹನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ ಓಡಾಟ ಮಿತಿಮೀರಿದೆ. ಪ್ರತಿ ರಾತ್ರಿ ಎಂಬಂತೆ ಇಲ್ಲಿ 8, 9, 10 ತಿರುವಿನಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗುತ್ತಿದೆ. ನಿನ್ನೆ ರಾತ್ರಿ 9ನೇ ತಿರುವಿನಲ್ಲಿ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷವಾಗಿದೆ. ಇದನ್ನು ಕಂಡು ಗಾಬರಿಯಾದ ಚಾಲಕ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ವಾಹನ ರಸ್ತೆಯ ಬದಿಗೆ ಸರಿದು ಚರಂಡಿಗೆ ಬಿದ್ದಿದೆ.

ಮಂಜು ಕವಿದ ವಾತಾವರಣದಲ್ಲಿ ರಸ್ತೆಯೇ ಸರಿಯಾಗಿ ಕಾಣುತ್ತಿಲ್ಲ. ವಾಹನ ಚಾಲಕರು ಪರದಾಡುತ್ತ ವಾಹನ ಚಲಾಯಿಸುತ್ತಾರೆ. ಇಂಥ ಹೊತ್ತಿನಲ್ಲಿ ಏಕಾಏಕಿ ಕಾಡಾನೆ ಪ್ರತ್ಯಕ್ಷವಾಗುತ್ತಿರುವುದರಿಂದ ವಾಹನ ಸವಾರರು ಭಯಭೀತರಾಗುತ್ತಿದ್ದಾರೆ. ಕಳೆದ ಒಂದು ವಾರದಿಂದ ಚಾರ್ಮಾಡಿ ಘಾಟಿಯಲ್ಲಿ ಆನೆ ಪ್ರತ್ಯಕ್ಷವಾಗುತ್ತಿದೆ. ಹಗಲು ಕೂಡ ಆನೆ ಕಾಣಿಸಿಕೊಳ್ಳುತ್ತಿರುವುದರಿಂದ ವಾಹನ ಸವಾರರು ಗಲಿಬಿಲಿ ಆಗುತ್ತಿದ್ದಾರೆ.

ಚಾರ್ಮಾಡಿ ಘಾಟಿಯಲ್ಲಿ ಘಾಟಿ ಕೆಳಗಿನ ಧರ್ಮಸ್ಥಳ ಮುಂತಾದ ತೀರ್ಥಕ್ಷೇತ್ರಗಳಿಗೆ ಬರುವವರ ವಾಹನಗಳ ಸಂಖ್ಯೆ ಹೆಚ್ಚು ಇದೆ. ಈಗ ಶಾಲೆಗಳಿಗೆ ರಜೆಯೂ ಇರುವುದರಿಂದ ವಾಹನಗಳು ಇನ್ನಷ್ಟು ಹೆಚ್ಚಿವೆ. ದೊಡ್ಡ ವಾಹನಗಳಲ್ಲಿ ಇರುವವರು ಆನೆಗೆ ಕ್ಯಾರೇ ಎನ್ನದೆ ಸ್ಲೋ ಮಾಡಿ ಆನೆ ನೋಡಲು ನಿಲ್ಲಿಸುತ್ತಿರುವುದರಿಂದ, ಸಣ್ಣ ವಾಹನಗಳಿಗೆ ಹಾಗೂ ದ್ವಿಚಕ್ರ ಸವಾರರಿಗೆ ತೊಂದರೆಯಾಗುತ್ತಿದೆ. ರಸ್ತೆಯಲ್ಲಿ ಆನೆ ಓಡಾಟದಿಂದ ಪದೇಪದೇ ಟ್ರಾಫಿಕ್ ಜಾಮ್ ಆಗುತ್ತಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಸಲಗ ವಾಹನಗಳ ಮೇಲೆ ಎರಗುವುದಕ್ಕೆ ಮೊದಲು ಎಚ್ಚೆತ್ತುಕೊಳ್ಳಬೇಕಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಶಿವಮೊಗ್ಗ: ಶಿವಮೊಗ್ಗದಲ್ಲಿ ಕಾಡು ಪ್ರಾಣಿಗಳ ಹಾವಳಿಗೆ ಜನರು ತತ್ತರಿಸಿ ಹೋಗಿದ್ದಾರೆ. ಮನೆಯಿಂದ ಹೊರಗೆ ಕಾಲಿಟ್ಟರೆ ವಾಪಸ್‌ ಬದುಕಿ ಬರುವ ಗ್ಯಾರಂಟಿ ಇಲ್ಲದಂತಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮನೆ ಸಮೀಪದ ಕಾಡಿಗೆ ತೆರಳುತ್ತಿದ್ದ ವ್ಯಕ್ತಿ ಮಸಣ ಸೇರಿದ್ದಾನೆ. ಕಾಡಾನೆ ದಾಳಿಗೆ ವ್ಯಕ್ತಿ (Elephant attack) ಬಲಿಯಾಗಿದ್ದಾರೆ.

ಶಿವಮೊಗ್ಗದ ಹೊಸನಗರ ತಾಲೂಕಿನ ಬಸವಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ತಿಮ್ಮಪ್ಪ (58) ಕಾಡಾನೆ ದಾಳಿಯಿಂದ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಜನರ ಮೇಲೆ ದಾಳಿ ಮಾಡುತ್ತಿರುವ ಕಾಡಾನೆಯನ್ನು ಸೆರೆಹಿಡಿಯುವಂತೆ ಒತ್ತಾಯ ಕೇಳಿ ಬಂದಿದೆ. ಕಾಡು ಪ್ರಾಣಿಗಳ ಹಾವಳಿಯಿಂದ ಮನೆಯಿಂದ ಹೊರ ಹೋಗಲು ಎದುರುವಂತಾಗಿದೆ ಎಂದು ಗ್ರಾಮಸ್ಥರು ಕಿಡಿಕಾರಿದರು.

ಇದನ್ನೂ ಓದಿ: Elephant attack : ನಿಲ್ಲದ ಕಾಡು ಪ್ರಾಣಿಗಳ ಹಾವಳಿ; ಶಿವಮೊಗ್ಗದಲ್ಲಿ ಆನೆ ದಾಳಿಗೆ ವ್ಯಕ್ತಿ ಬಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ಸೋಷಿಯಲ್ ಮೀಡಿಯಾದಲ್ಲಿ ಕೋಲಾಹಲ ಸೃಷ್ಟಿಸಿದ ಕಲ್ಲಂಗಡಿ ಹಣ್ಣಿನ ತಂದೂರಿ ಚಿಕನ್!

ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿರುವ ವಿಶಿಷ್ಟವಾದ ಕಲ್ಲಂಗಡಿ ತಂದೂರಿ ಚಿಕನ್ ರೆಸಿಪಿಯ ವಿಡಿಯೋವು ಆಹಾರಪ್ರಿಯರ ಗಮನವನ್ನು ಸೆಳೆದಿದೆ. ಎರಡೂ ಪದಾರ್ಥಗಳನ್ನು ಪ್ರತ್ಯೇಕವಾಗಿ ತಿಂದರೆ ರುಚಿಯಲ್ಲಿ ಅದ್ಭುತವಾಗಿರುತ್ತದೆ. ಆದರೆ ಕಲ್ಲಂಗಡಿ ಒಳಗೆ ಕೋಳಿ ಹುರಿಯುವುದೇ? ಸರಿ, ಅದು ಸಂಪೂರ್ಣವಾಗಿ ಅಸಾಂಪ್ರದಾಯಿಕವೆಂದು ತೋರುತ್ತದೆ. ಈ ಬಗ್ಗೆ ನೆಟ್ಟಿಗರು ಏನು ಹೇಳಿದ್ದಾರೆ ಗೊತ್ತೇ? ಈ ಕುತೂಹಲಕರ ವಿಡಿಯೊ ನೋಡಿ.

VISTARANEWS.COM


on

By

Viral Video
Koo

ಯಾರೂ ಮಾಡದ, ಹೆಸರೇ ಕೇಳದ ಚಿತ್ರವಿಚಿತ್ರ ಆಹಾರಗಳು ಸಾಮಾಜಿಕ ಜಾಲತಾಣದಲ್ಲಿ (social media) ಕೆಲವೊಮ್ಮೆ ಎಲ್ಲರ ಗಮನ ಸೆಳೆಯುತ್ತದೆ. ಅಂತಹವುಗಳಲ್ಲಿ ಈಗ ಕಲ್ಲಂಗಡಿ (Watermelon) ಹಣ್ಣಿನ ತಂದೂರಿ (Tandoori Chicken) ಚಿಕನ್ ವಿಡಿಯೋ ವೈರಲ್ (Viral Video) ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಕೋಲಾಹಲ ಸೃಷ್ಟಿಸಿದೆ.

ವಿಲಕ್ಷಣ ಆಹಾರ ಸಂಯೋಜನೆಗಳು ಮತ್ತು ಅಸಾಮಾನ್ಯ ಪಾಕಶಾಲೆಯ ಪ್ರಯೋಗಗಳು ಎಲ್ಲರನ್ನೂ ಆಶ್ಚರ್ಯಗೊಳ್ಳುವಂತೆ ಮಾಡುತ್ತದೆ. ಇದರ ರುಚಿ ಹೇಗಿರುತ್ತದೆ ಎಂಬುದನ್ನು ಮಾಡಿದವರು, ತಿಂದವರೇ ಹೇಳಬಹುದು. ಆದರೆ ಇಂತಹ ಪ್ರಯೋಗಗಳು ಕೆಲವೊಮ್ಮೆ ಭಯ ಹುಟ್ಟುವಂತೆ ಮಾಡಿದರೆ ಇನ್ನು ಕೆಲವೊಮ್ಮೆ ನಮ್ಮನ್ನು ದಂಗಾಗಿ ಬಿಡುವಂತೆ ಮಾಡುತ್ತದೆ.

ಇದೇ ರೀತಿಯಲ್ಲಿ ಈಗ ವಿಶಿಷ್ಟವಾದ ಕಲ್ಲಂಗಡಿ ತಂದೂರಿ ಚಿಕನ್ ರೆಸಿಪಿಯ ವಿಡಿಯೋವು ಆಹಾರಪ್ರಿಯರ ಗಮನವನ್ನು ಸೆಳೆದಿದೆ. ಎರಡೂ ಪದಾರ್ಥಗಳನ್ನು ಪ್ರತ್ಯೇಕವಾಗಿ ತಿಂದರೆ ರುಚಿಯಲ್ಲಿ ಅದ್ಭುತವಾಗಿರುತ್ತದೆ. ಆದರೆ ಕಲ್ಲಂಗಡಿ ಒಳಗೆ ಕೋಳಿ ಹುರಿಯುವುದೇ? ಸರಿ, ಅದು ಸಂಪೂರ್ಣವಾಗಿ ಅಸಾಂಪ್ರದಾಯಿಕವೆಂದು ತೋರುತ್ತದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಹೆಚ್ಚಾಗಿ ಅಪರಿಚಿತ ವಿಧಾನವನ್ನು ಬಳಸಿಕೊಂಡು ಇಡೀ ಕೋಳಿಯನ್ನು ಸಿದ್ಧಪಡಿಸುತ್ತಿದ್ದಾರೆ. ವಿಡಿಯೋ ಕ್ಲಿಪ್ ನಲ್ಲಿ ಅವರು ಕಲ್ಲಂಗಡಿಯ ಮೇಲಿನ ಭಾಗವನ್ನು ಕತ್ತರಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಒಂದು ಲೋಟವನ್ನು ಬಳಸಿ ಅದರಲ್ಲಿರುವ ರಸಭರಿತವಾದ ಕೆಂಪು ಮಾಂಸವನ್ನು ಹೊರಹಾಕುತ್ತಾರೆ ಮತ್ತು ತುಂಡುಗಳನ್ನು ಪ್ರತ್ಯೇಕ ಬಟ್ಟಲಿನಲ್ಲಿ ಇಡುತ್ತಾಳೆ.

ವೈರಲ್ ವಿಡಿಯೋದಲ್ಲಿ ಪಿಂಕ್ ತಂದೂರಿ ಚಿಕನ್ ಅನ್ನು ತೋರಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಇದನ್ನು “ಬಾರ್ಬಿ-ಕ್ಯೂ ಚಿಕನ್” ಎಂದು ಕರೆದಿದ್ದಾರೆ.

ಮಹಿಳೆ ಸಂಪೂರ್ಣವಾಗಿ ಚರ್ಮದ ಚಿಕನ್ ಅನ್ನು ನೀರಿನಲ್ಲಿ ತೊಳೆದು ಮಾಂಸದ ಮೇಲೆ ಮೂರು ನಿಖರವಾದ ಕಡಿತಗಳನ್ನು ಮಾಡಿದ್ದಾಳೆ. ಮತ್ತೊಂದು ಬಟ್ಟಲಿನಲ್ಲಿ ಹಿಟ್ಟು ಮತ್ತು ಬೇಕಿಂಗ್ ಪೌಡರ್ ಅನ್ನು ಸೇರಿಸಿದ್ದಾಳೆ. ಅನಂತರ ಮಸಾಲೆಗಳನ್ನು ಸೇರಿಸಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ನಿಂಬೆ ಹಿಂಡಿ ಮಿಶ್ರಣಕ್ಕೆ ನೀರು ಬೆರೆಸಿ ಚಿಕನ್ ಅನ್ನು ಅದರೊಳಗೆ ಕಲಸುತ್ತಾರೆ.

ಬಳಿಕ ಚಿಕನ್ ಅನ್ನು ಮರದ ಕೋಲಿನ ಮೇಲೆ ಇಡಲಾಗುತ್ತದೆ. ಟೊಳ್ಳಾದ ಕಲ್ಲಂಗಡಿಯೊಳಗೆ ಮುಚ್ಚಲಾಗುತ್ತದೆ. ಮಾಂಸವನ್ನು ಹುರಿಯಲು ತೆಂಗಿನ ಸಿಪ್ಪೆ ಮತ್ತು ಕಡ್ಡಿಗಳನ್ನು ಬಳಸಲಾಗುತ್ತದೆ. ಬೆಂಕಿ ಕಡಿಮೆಯಾದ ಅನಂತರ ಗೋಲ್ಡನ್ ಬ್ರೌನ್ ಮತ್ತು ಸ್ವಲ್ಪ ಸುಟ್ಟ ಕೋಳಿಯನ್ನು ತೆಗೆಯಲಾಗುತ್ತದೆ. ಇದರೊಂದಿಗೆ ಕಲ್ಲಂಗಡಿ ಚಿಕನ್ ಬಡಿಸಲು ಸಿದ್ಧವಾಗುತ್ತದೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಭಕ್ಷ್ಯದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೋಳಿಯನ್ನು ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಈ ಜಗತ್ತಿನಲ್ಲಿ ಏನು ನಡೆಯುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
ಮತ್ತೊಬ್ಬರು ಇದು ಸಸ್ಯಾಹಾರಿ ಅಥವಾ ಮಾಂಸಾಹಾರವೇ ಎಂದು ಪ್ರಶ್ನಿಸಿದ್ದಾರೆ.


ಬಹುಶಃ ಈ ಖಾದ್ಯದಿಂದ ಅಸಹ್ಯಗೊಂಡಿರುವ ಒಬ್ಬ ಬಳಕೆದಾರ, ಸಸ್ಯಾಹಾರಿಯಾಗಲು ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: YouTuber Dhruv Rathee: ಸ್ಪೀಕರ್‌ ಓಂ ಬಿರ್ಲಾ ಪುತ್ರಿ ಬಗ್ಗೆ ಪೋಸ್ಟ್‌; ಯೂಟ್ಯೂಬರ್‌ ಧೃವ್‌ ರಥೀ ವಿರುದ್ಧ FIR

ಇದು ನಿಜವಾಗಿಯೂ ಚೆನ್ನಾಗಿತ್ತು, ನಾನು ಅದನ್ನು ಇಷ್ಟಪಟ್ಟೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಲವ್ಲಿ ಸ್ಟೈಲ್ ಆಫ್ ಅಡುಗೆ ಎಂದು ಇನ್ನೊಬ್ಬರು ಹೊಗಳಿದ್ದಾರೆ.

ಈ ವಿಡಿಯೋ 25 ಮಿಲಿಯನ್‌‌ಗೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

Continue Reading

ವೈರಲ್ ನ್ಯೂಸ್

Viral video: ಮೌಂಟ್ ಎವರೆಸ್ಟ್ ಸೌಂದರ್ಯ ಸೆರೆ ಹಿಡಿದ ಡ್ರೋನ್; ಈ ವಿಡಿಯೊ ನೋಡಿದರೆ ಪರ್ವತ ಏರಿದ ಅನುಭವ!

ಮೌಂಟ್ ಎವರೆಸ್ಟ್‌ನಲ್ಲಿರುವ ಕಠಿಣ ಪರಿಸ್ಥಿತಿಯ ನಡುವೆ ಎತ್ತರದ ಶಿಖರದಲ್ಲಿ ಉನ್ನತ ದರ್ಜೆಯ ಡ್ರೋನ್ ಅನ್ನು ಕಳುಹಿಸಿ ಅದನ್ನು ಟ್ರ್ಯಾಕ್ ಮಾಡುವುದು ಸುಲಭವೇನಲ್ಲ. ಈ ಎಲ್ಲ ಪರಿಸ್ಥಿತಿಗಳ ನಡುವೆಯು ಚೀನಾದ ಡ್ರೋನ್ ತಯಾರಕ ಡಿಜೆಐ ತಯಾರಿಸಿದ ಡಿಜೆಐ ಮಾವಿಕ್ 3 ವಿಡಿಯೋ (Viral Video) ಸೆರೆ ಹಿಡಿದಿದ್ದು. ಈ ವಿಡಿಯೊ ನೋಡಿದರೆ ಹಿಮ ಪರ್ವತವನ್ನು ಸ್ವತಃ ನೋಡಿದ ಅನುಭವ ಆಗುತ್ತದೆ!

VISTARANEWS.COM


on

By

Viral video
Koo

ವಿಶ್ವದ ಅತಿ ಎತ್ತರದ ಪರ್ವತದ ಶಿಖರವಾದ ಮೌಂಟ್ ಎವರೆಸ್ಟ್ ನ (Mount Everest) ಬೇಸ್ ಕ್ಯಾಂಪ್‌ನಿಂದ 3,500 ಮೀಟರ್‌ ಎತ್ತರದಲ್ಲಿ ಮೇಲೆ ಚೀನಾದ (china) ಡ್ರೋನ್ (drone ) ಹಾರುತ್ತಿರುವ ಅಪರೂಪದ ವೈಮಾನಿಕ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಎಕ್ಸ್ ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದ್ದು, ಇದು ವೈರಲ್ (Viral video) ಆಗಿದೆ. ಆದರೆ ಇದನ್ನು ಚೀನಾ ನಿರಾಕರಿಸಿದೆ.

ಡಿಜೆಐ ಮಾವಿಕ್ 3 ಡ್ರೋನ್, 8ಕೆಆರ್ ಡಬ್ಲ್ಯೂ ಸಹಯೋಗದೊಂದಿಗೆ ಎವರೆಸ್ಟ್‌ನ ಬೇಸ್ ಕ್ಯಾಂಪ್‌ನಿಂದ ಶಿಖರದವರೆಗೆ ಬೆರಗುಗೊಳಿಸುವ ವೈಮಾನಿಕ ದೃಶ್ಯಗಳನ್ನು ಸೆರೆಹಿಡಿದಿದೆ.

ಮೌಂಟ್ ಎವರೆಸ್ಟ್‌ನಲ್ಲಿರುವ ಕಠಿಣ ಪರಿಸ್ಥಿತಿಯ ನಡುವೆ ಎತ್ತರದ ಶಿಖರದಲ್ಲಿ ಉನ್ನತ ದರ್ಜೆಯ ಡ್ರೋನ್ ಅನ್ನು ಕಳುಹಿಸಿ ಅದನ್ನು ಟ್ರ್ಯಾಕ್ ಮಾಡುವುದು ಸುಲಭವೇನಲ್ಲ. ಈ ಎಲ್ಲ ಪರಿಸ್ಥಿತಿಗಳ ನಡುವೆಯು ಚೀನಾದ ಡ್ರೋನ್ ತಯಾರಕ ಡಿಜೆಐ ತಯಾರಿಸಿದ ಡಿಜೆಐ ಮಾವಿಕ್ 3 ವಿಡಿಯೋ ಸೆರೆ ಹಿಡಿದಿದೆ ಎನ್ನಲಾಗಿದೆ.

ಬೇಸ್ ಕ್ಯಾಂಪ್‌ನಿಂದ 3,500 ಮೀಟರ್‌ ಗಳಿಗಿಂತಲೂ ಎತ್ತರದಲ್ಲಿ ಡ್ರೋನ್ ಈ ವಿಡಿಯೋವನ್ನು ಸೆರೆ ಹಿಡಿದಿದೆ. ಅತ್ಯದ್ಭುತ ವೈಮಾನಿಕ ನೋಟವನ್ನು ಇದು ಸೆರೆ ಹಿಡಿದಿದೆ. ಡಿಜೆಐ ಮಾವಿಕ್ 3ನ ಸಾಮರ್ಥ್ಯವನ್ನು ಇದು ಪ್ರದರ್ಶಿಸಿದೆ. ಚೈನೀಸ್ ಫೋಟೋಗ್ರಫಿ ಪ್ಲಾಟ್‌ಫಾರ್ಮ್ 8ಕೆಆರ್ ಎಡಬ್ಲ್ಯೂ ಸಹಯೋಗದೊಂದಿಗೆ ಈ ಸಾಧನೆಯನ್ನು ಮಾಡಲಾಗಿದೆ ಎನ್ನಲಾಗಿದೆ.


ಎಕ್ಸ್ ನಲ್ಲಿ @yicaichina ಎಂಬ ಹೆಸರಿನಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ ಡ್ರೋನ್ ಎವರೆಸ್ಟ್‌ನ ಹಿಮದಿಂದ ಆವೃತವಾದ ಶಿಖರಗಳ ಮೇಲೆ ಸಂಚರಿಸಿದೆ. ಸ್ಪಷ್ಟವಾದ ನೀಲಿ ಆಕಾಶವನ್ನು ಸೆರೆ ಹಿಡಿಯಲಾಗಿದೆ. ಪರ್ವತಾರೋಹಿಗಳು ಕಾಣಿಸುತ್ತಾರೆ. ಕೆಮರಾವು ಬೇಸ್ ಕ್ಯಾಂಪ್‌ ನ ಸುತ್ತ ಸುತ್ತಿದೆ. ಡೇರೆಗಳು ಭೂದೃಶ್ಯವನ್ನು ತೋರಿಸಿದೆ .

ಇದನ್ನೂ ಓದಿ: Viral News: ಮೃತ ಇಂಜಿನಿಯರ್‌ನನ್ನು ಟ್ರಾನ್ಸ್‌ಫರ್‌ ಮಾಡಿದ ನಗರಾಭಿವೃದ್ಧಿ ಇಲಾಖೆ!

ಬೆರಗುಗೊಳಿಸುವ ದೃಶ್ಯಗಳನ್ನು ಸೆರೆ ಹಿಡಿದಿರುವ ಈ ವಿಡಿಯೋ 192.4 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಒಬ್ಬ ಬಳಕೆದಾರರು ಇದಕ್ಕೆ ಪ್ರತಿಕ್ರಿಯಿಸಿದ್ದು, ನಾನು ಎವರೆಸ್ಟ್ ಶಿಖರವನ್ನು ಹತ್ತಿದ ಅನುಭವವನ್ನು ಇದು ಕೊಟ್ಟಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಬಳಕೆದಾರರು ಇದು ನಂಬಲಾಗದ್ದು ಎಂದು ತಿಳಿಸಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: ಊಟದಲ್ಲಿ ಮೀನು-ಮಾಂಸ ಮಿಸ್ಸಿಂಗ್;‌ ನೋಡ ನೋಡ್ತಿದ್ದಂತೆ ಮದುವೆ ಮನೆ ರಣರಂಗ-ಇಲ್ಲಿದೆ ನೋಡಿ ವಿಡಿಯೋ

Viral Video: ಊಟದಲ್ಲಿ ಮೀನು ಮಾಂಸ ಇಲ್ಲವೆಂದು ತಿಳಿಯುತ್ತಿದ್ದಂತೆ ಕೆಂಡಾಮಂಡಲವಾದ ಅಭಿಷೇಕ್‌ ತಂದೆ ಹಾಗೂ ಕುಟುಂಬಸ್ಥರು ಗಲಾಟೆ ಶುರುಮಾಡಿದ್ದಾರೆ. ಸಾಲದೆನ್ನುವಂತೆ ವಧುವಿನ ಕಡೆಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಾತಿಗೆ ಮಾತು ಬೆಳೆದು ಎರಡೂ ಕಡೆಯವರು ಪರಸ್ಪರ ಹಲ್ಲೆ ನಡೆಸಿದ್ದಾರೆ. ಕುರ್ಚಿ, ಟೇಬಲ್‌, ಕೋಲನ್ನು ಎಸೆದು ದಾಂಧಲೆ ಎಬ್ಬಿಸಿದ್ದಾರೆ. ವಧುವಿನ ತಂದೆಯನ್ನು ಥಳಿಸಿದ್ದಾರೆ.

VISTARANEWS.COM


on

Viral Video
Koo

ಲಖನೌ: ಮದುವೆ ಎಂಬುವುದೇ ಒಂದು ರೀತಿಯ ಸಂಭ್ರಮ. ಖರ್ಚು-ವೆಚ್ಚಗಳ ತಲೆಬಿಸಿ ಒಂದು ಕಡೆಯಾದ್ರೆ ಖುಷಿ, ಸಂಭ್ರಮ ಮತ್ತೊಂದು ಕಡೆ ಇದ್ದೇ ಇರುತ್ತದೆ. ಇಂತಹ ಸಂಭ್ರಮ ಕೆಲವೊಮ್ಮೆ ಸಣ್ಣ ಕಾರಣಕ್ಕಾಗಿ ಕೊನೇ ಕ್ಷಣದಲ್ಲಿ ದುಃಖದಲ್ಲಿ ಕೊನೆಯಾಗುವುದು ಇದೆ. ಅಂತಹದ್ದೇ ಒಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿತ್ತು. ಮದುವೆ ಅಂದ ಮೇಲೆ ಕೇಳಬೇಕೆ? ಎರಡೂ ಕಡೆಗಳ ನೆಂಟರು, ಬಂಧುಗಳು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪರಸ್ಪರ ಸಂತಸ ಸಂಭ್ರಮದಿಂದ ನಡೆಯುತ್ತಿದ್ದ ಮದುವೆ ಮನೆಯಲ್ಲಿ ಏಕಾಏಕಿ ಗಲಾಟೆ ಶುರುವಾಗಿತ್ತು. ಎರಡೂ ಕುಟುಂಬಸ್ಥರು ಪರಸ್ಪರ, ಖುರ್ಚಿ, ಕೋಲು ಹೀಗೆ ಕೈಗೆ ಸಿಕ್ಕಿದರಲ್ಲಿ ಹೊಡೆದಾಡಿಕೊಳ್ಳಲು ಶುರು ಮಾಡಿದ್ರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ.

ಘಟನೆ ವಿವರ:

ಫಿರೋಜಾಬಾದ್‌ನ ಆನಂದ್‌ ನಗರದಲ್ಲಿ ಈ ಘಟನೆ ನಡೆದಿದ್ದು, ಗುರುವಾರ ಅಭಿಷೇಕ್‌ ಮತ್ತು ಸುಷ್ಮಾ ಎಂಬ ಜೋಡಿಯ ಮದುವೆ ನಿಶ್ಚಯಿಸಲಾಗಿತ್ತು. ವಧುವಿನ ಕಡೆಯಲ್ಲೇ ಮದುವೆ ಆಯೋಜಿಸಿದ್ದ ಕಾರಣ ತನ್ನ ಪರಿವಾರದೊಂದಿಗೆ ಅಭಿಷೇಕ್‌ ಆಗಮಿಸಿದ್ದ. ಎಲ್ಲವೂ ಚೆನ್ನಾಗೇ ನಡೆಯುತ್ತಿತ್ತು. ವರಮಾಲಾ ಕೂಡ ನಡೆದಿತ್ತು. ಇನ್ನು ಮದುವೆ ಊಟ ಅಂದ್ರೆ ಕೇಳಬೇಕೆ? ಲಕ್ಷಾಂತರ ರೂ. ಖರ್ಚು ಮಾಡಿ ಸುಷ್ಮಾ ಮನೆಯವರು ವಿವಿಧ ಭಕ್ಷ್ಯ ಭೋಜನಗಳನ್ನು ಮಾಡಿದ್ದರು. ಸಾಲದೆನ್ನುವುದಕ್ಕೆ 5ಲಕ್ಷ ರೂ. ವರದಕ್ಷಿಣೆಯನ್ನೂ ನೀಡಿದ್ದರು. ಇಷ್ಟೆಲ್ಲಾ ತಯಾರಿ ನಡುವೆ ಎರಡು ವಿಚಾರಗಳು ಮಿಸ್‌ ಆಗಿದ್ದವು. ಮದುವೆ ಊಟದಲ್ಲಿ ಮೀನು ಮತ್ತು ಮಾಂಸ ಇರಲಿಲ್ಲ. ಕೇವಲ ಸಸ್ಯಾಹಾರ ಡಿಶ್‌ಗಳನ್ನು ಸರ್ವ್‌ ಮಾಡಲಾಗಿತ್ತು.

ಇನ್ನೇನು ಅಭಿಷೇಕ್‌ ಸುಷ್ಮಾಳಿಗೆ ತಾಳಿ ಕಟ್ಟಬೇಕೆನ್ನುವ ಹೊತ್ತಿಗೆ ಈ ವಿಚಾರ ವರನ ಕಡೆಯವರಿಗೆ ತಿಳಿದಿತ್ತು. ಊಟದಲ್ಲಿ ಮೀನು ಮಾಂಸ ಇಲ್ಲವೆಂದು ತಿಳಿಯುತ್ತಿದ್ದಂತೆ ಕೆಂಡಾಮಂಡಲವಾದ ಅಭಿಷೇಕ್‌ ತಂದೆ ಹಾಗೂ ಕುಟುಂಬಸ್ಥರು ಗಲಾಟೆ ಶುರುಮಾಡಿದ್ದಾರೆ. ಸಾಲದೆನ್ನುವಂತೆ ವಧುವಿನ ಕಡೆಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಾತಿಗೆ ಮಾತು ಬೆಳೆದು ಎರಡೂ ಕಡೆಯವರು ಪರಸ್ಪರ ಹಲ್ಲೆ ನಡೆಸಿದ್ದಾರೆ. ಕುರ್ಚಿ, ಟೇಬಲ್‌, ಕೋಲನ್ನು ಎಸೆದು ದಾಂಧಲೆ ಎಬ್ಬಿಸಿದ್ದಾರೆ. ವಧುವಿನ ತಂದೆಯನ್ನು ಥಳಿಸಿದ್ದಾರೆ.

ಐದು ಲಕ್ಷ ವರದಕ್ಷಿಣೆ, ಉಂಗುರ ಗಿಫ್ಟ್‌

ಇನ್ನು ಘಟನೆಗೆ ಸಂಬಂಧಿಸಿದ್ದಂತೆ ಸುಷ್ಮಾ ಅವರ ತಂದೆ ದಿನೇಶ್‌ ಶರ್ಮಾ ದೂರು ನೀಡಿದ್ದಾರೆ. ದೂರಿನಲ್ಲಿ ತಾವು ಸುರೇಂದ್ರ ಶರ್ಮಾ ಅವರ ಪುತ್ರ ಅಭಿಷೇಕ್‌ ಶರ್ಮಾಗೆ ಸುಮಾರು ಐದು ಲಕ್ಷ ವರದಕ್ಷಿಣೆ ನೀಡಿದ್ದೇನೆ. ಅದೂ ಅಲ್ಲದೇ 20,000 ರೂ. ಮೌಲ್ಯದ ಚಿನ್ನದ ಉಂಗೂರ ಉಡುಗೊರೆಯಾಗಿ ನೀಡಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: John Cena: ಅನಂತ್‌ ಅಂಬಾನಿ-ರಾಧಿಕಾ ಮದುವೆಗೆ ಆಗಮಿಸಿದ ಖ್ಯಾತ ರಸ್ಲರ್​ ಜಾನ್ ಸೀನ; ವಿಡಿಯೊ ವೈರಲ್​

Continue Reading

ದೇಶ

Skydiving: ಸ್ಕೈಡೈವಿಂಗ್‌ ಮಾಡಿದ ಕೇಂದ್ರ ಸಚಿವ ಗಜೇಂದ್ರ ಸಿಂಗ್‌; ಮೈನವಿರೇಳಿಸುವ ವಿಡಿಯೊ ಇಲ್ಲಿದೆ

Skydiving: 56 ವರ್ಷದ ಗಜೇಂದ್ರ ಸಿಂಗ್‌ ಶೆಖಾವತ್‌ ಅವರು ಸ್ಕೈಡೈವಿಂಗ್‌ ಮಾಡಿದ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ. ಮತ್ತೊಬ್ಬ ಸ್ಕೈಡೈವರ್‌ ಜತೆಗೆ ಅವರು ಸ್ಕೈಡೈವಿಂಗ್‌ ಮಾಡಿದ್ದು, ವಿಡಿಯೊಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಶನಿವಾರ (ಜುಲೈ 13) ವಿಶ್ವ ಸ್ಕೈಡೈವಿಂಗ್‌ ದಿನವಾದ ಕಾರಣ ಹರಿಯಾಣದ ನರ್ನೌಲ್‌ ಏರ್‌ಸ್ಟ್ರಿಪ್‌ನಲ್ಲಿರುವ ಏಕೈಕ ನಾಗರಿಕ ಸ್ಕೈಡೈವಿಂಗ್‌ ಡ್ರಾಪ್‌ ಜೋನ್‌ನಲ್ಲಿ ಗಜೇಂದ್ರ ಸಿಂಗ್‌ ಶೆಖಾವತ್‌ ಅವರು ಸ್ಕೈಡೈವಿಂಗ್‌ ಮಾಡಿದರು.

VISTARANEWS.COM


on

Skydiving
Koo

ನವದೆಹಲಿ: ರಾಜಕಾರಣಿಗಳು ಎಂದರೆ ಸಾಮಾನ್ಯವಾಗಿ ವೇದಿಕೆಗಳಲ್ಲಿ ಅಬ್ಬರದ ಭಾಷಣ ಮಾಡುವುದು, ಯೋಜನೆಗಳಿಗೆ ಚಾಲನೆ, ಶಂಕುಸ್ಥಾಪನೆ ನೆರವೇರಿಸುವುದು ಸೇರಿ ಹತ್ತಾರು ಚಟುವಟಿಕೆಗಳಲ್ಲಿ ಭಾಗಿಯಾಗುವುದೇ ಅವರ ನಿತ್ಯ ಕಾಯಕವಾಗಿರುತ್ತದೆ. ಹೆಚ್ಚೆಂದರೆ, ರಾಜಕಾರಣಿಗಳು (Politicians) ಮದುವೆ ಸೇರಿ ಕೆಲ ಕಾರ್ಯಕ್ರಮಗಳಿಗೆ ಹೋಗುತ್ತಾರೆ. ಸಾಹಸ ಕ್ರೀಡೆಗಳಲ್ಲಿ ರಾಜಕಾರಣಿಗಳು ಆಸಕ್ತಿ ಹೊಂದುವುದು, ಪಾಲ್ಗೊಳ್ಳುವುದು ಅಪರೂಪ. ಆದರೆ, ಇದಕ್ಕೆ ಅಪವಾದ ಎಂಬಂತೆ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ (Gajendra Singh Shekhawat) ಅವರು ಸ್ಕೈಡೈವಿಂಗ್‌ (Skydiving) ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಹೌದು, ಶನಿವಾರ (ಜುಲೈ 13) ವಿಶ್ವ ಸ್ಕೈಡೈವಿಂಗ್‌ ದಿನವಾದ (World Skydiving Day) ಕಾರಣ ಹರಿಯಾಣದ ನರ್ನೌಲ್‌ ಏರ್‌ಸ್ಟ್ರಿಪ್‌ನಲ್ಲಿರುವ ಏಕೈಕ ನಾಗರಿಕ ಸ್ಕೈಡೈವಿಂಗ್‌ ಡ್ರಾಪ್‌ ಜೋನ್‌ನಲ್ಲಿ ಗಜೇಂದ್ರ ಸಿಂಗ್‌ ಶೆಖಾವತ್‌ ಅವರು ಸ್ಕೈಡೈವಿಂಗ್‌ ಮಾಡಿದರು. ಸ್ಕೈಡೈವಿಂಗ್‌ಗೂ ಮುನ್ನ ಕೇಂದ್ರ ಸಚಿವರು ಪರಿಣತರಿಂದ ಸ್ಕೈಡೈವಿಂಗ್‌ ಕುರಿತು ಮಾಹಿತಿ ಪಡೆದರು. ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿದುಕೊಂಡರು. ನಂತರ ಅವರು ಆಗಸದೆತ್ತರಕ್ಕೆ ತೆರಳಿ, ಅಲ್ಲಿಂದ ಸ್ಕೈಡೈವ್‌ ಮಾಡಿದರು. 56 ವರ್ಷದ ಗಜೇಂದ್ರ ಸಿಂಗ್‌ ಶೆಖಾವತ್‌ ಅವರು ಸ್ಕೈಡೈವಿಂಗ್‌ ಮಾಡಿದ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಇನ್ನೊಬ್ಬ ಸ್ಕೈಡೈವರ್‌ ನೆರವಿನೊಂದಿಗೆ ಗಜೇಂದ್ರ ಸಿಂಗ್‌ ಶೆಖಾವತ್‌ ಅವರು ಸ್ಕೈಡೈವ್‌ ಮಾಡಿದ್ದಾರೆ. ಆಗಸದಲ್ಲಿಯೇ ಮತ್ತೊಬ್ಬ ಸ್ಕೈಡೈವರ್‌ “ಹೇಗೆ ಅನಿಸುತ್ತಿದೆ” ಎಂಬ ಪ್ರಶ್ನೆಗೆ ಕೇಂದ್ರ ಸಚಿವರು, ” ಗುಡ್‌ ಗುಡ್‌, ಮಜಾ ಬಂತು” ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ. ಸ್ಕೈಡೈವಿಂಗ್‌ಗೂ ಮೊದಲು ಅವರು “ನಾನು ತುಂಬ ಉತ್ಸುಕನಾಗಿದ್ದೇನೆ” ಎಂದು ಹೇಳಿದ್ದರು. ಸ್ಕೈಡೈವಿಂಗ್‌ ಬಳಿಕ ಅವರು ಸುರಕ್ಷಿತವಾಗಿ ಲ್ಯಾಂಡ್‌ ಆದರು. ಇದಾದ ಬಳಿಕ ಅವರು ತಮಗೆ ಆದ ಅನುಭವವನ್ನು ಹಂಚಿಕೊಂಡರು.

” ಸ್ಕೈಡೈವಿಂಗ್‌ ಮಾಡಲು ಅವಕಾಶ ಸಿಕ್ಕಿದ್ದು ನನಗೆ ಸಂತಸ ತಂದಿದೆ. ಇದು ನನ್ನ ಜೀವನದ ಥ್ರಿಲ್ಲಿಂಗ್‌ ದಿನಗಳಲ್ಲಿ ಒಂದಾಗಿದೆ. ಜಗತ್ತಿನಾದ್ಯಂತ ಸ್ಕೈಡೈವಿಂಗ್‌ ಮಾಡುವುದು, ಈ ಏರೋಸ್ಪೋರ್ಟ್‌ಗೆ ಉತ್ತೇಜನ ನೀಡುವುದು ಪ್ರಮುಖ ಸಂಗತಿಯಾಗಿದೆ. ಅದರಲ್ಲೂ, ಇದೇ ಮೊದಲ ಬಾರಿಗೆ ವಿಶ್ವ ಸ್ಕೈಡೈವಿಂಗ್‌ ಡೇ ಆಚರಿಸಲಾಗುತ್ತಿದೆ. ಏರೋಸ್ಪೋರ್ಟ್ಸ್‌ ಹಾಗೂ ಪ್ರವಾಸೋದ್ಯಮವು ಇಂದಿನಿಂದ ಇನ್ನಷ್ಟು ಬಲಿಷ್ಠವಾಗಲಿದೆ ಎಂಬ ನಂಬಿಕೆ ಇದೆ” ಎಂದು ಅವರು ಲ್ಯಾಂಡ್‌ ಆದ ಬಳಿಕ ಹೇಳಿದರು.

ಇದನ್ನೂ ಓದಿ: Viral Video: ʼಡ್ಯೂಟಿ ಮುಗಿದ ಮೇಲೆ ಮನೆ ಬಾʼ ಎಂದು ಕರೆದ ASI; ಆಮೇಲೆ ಆಗಿದ್ದೇ ಬೇರೆ! ಸ್ಪೈಸ್‌ಜೆಟ್‌ ಸಿಬ್ಬಂದಿ ವಿಡಿಯೋ ವೈರಲ್‌

Continue Reading
Advertisement
ಕರ್ನಾಟಕ2 mins ago

Wakf Board Scam: ವಾಲ್ಮೀಕಿ ನಿಗಮದ ಬಳಿಕ ವಕ್ಫ್ ಬೋರ್ಡ್‌ನಲ್ಲಿ ಹಗರಣ ಬೆಳಕಿಗೆ; ಮಾಜಿ ಸಿಇಒ ವಿರುದ್ಧ ಎಫ್‌ಐಆರ್!

Bhavana Ramanna hoovu foundation Varna Spardhe Bharathanatya Competition
ಸಿನಿಮಾ12 mins ago

Bhavana Ramanna: ನಟಿ ಭಾವನ ಸಂಸ್ಥೆಯಿಂದ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆ; ಪ್ರಥಮ ಬಹುಮಾನಕ್ಕಿದೆ ಒಂದು ಲಕ್ಷ ರೂ.

Road Accident
ಬೆಂಗಳೂರು ಗ್ರಾಮಾಂತರ23 mins ago

Road Accident : ಲಾಂಗ್‌ ಡ್ರೈವ್‌ ಹೋದ ಯುವಕರಿಬ್ಬರು ಹಿಟ್ ಆ್ಯಂಡ್ ರನ್‌ಗೆ ಬಲಿ; ನಿಲ್ಲದ ನಿಶಾಚರಿಗಳ ಕಾಟ

Gold Rate Today
ಚಿನ್ನದ ದರ25 mins ago

Gold Rate Today: ಮತ್ತೆ ಸ್ಥಿರತೆ ಕಾಯ್ದುಕೊಂಡ ಚಿನ್ನದ ಬೆಲೆ; ಆಭರಣ ಕೊಳ್ಳುವ ಮುನ್ನ ದರ ಗಮನಿಸಿ

Chandan Shetty talk about Nivedita other marriage
ಸ್ಯಾಂಡಲ್ ವುಡ್40 mins ago

Chandan Shetty: ನಿವೇದಿತಾ ಇನ್ನೊಂದು ಮದುವೆ ಆದ್ರೆ ಓಕೆ ನಾ? ಚಂದನ್‌ ಶೆಟ್ಟಿ ಹೇಳಿದ್ದೇನು?

Valmiki Corporation Scam
ಕರ್ನಾಟಕ53 mins ago

Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಮಾಜಿ ಸಚಿವ ನಾಗೇಂದ್ರಗೆ ಮುಂದುವರೆದ ಇಡಿ ಡ್ರಿಲ್

Donald Trump Assassination Bid
ವಿದೇಶ54 mins ago

Donald Trump Assassination Bid: ಟ್ರಂಪ್ ಹತ್ಯೆಗೆ ಯತ್ನಿಸಿದವನನ್ನು ಸ್ನೈಪರ್ ರೈಫಲ್‌‌ನಿಂದ ಹೊಡೆದುರುಳಿಸಿದ ಕಮಾಂಡೊ! ವಿಡಿಯೊ ನೋಡಿ

karnataka Rain
ಮಳೆ55 mins ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

Chandan Shetty Nivedita come together holding hands after the divorce
ಸ್ಯಾಂಡಲ್ ವುಡ್1 hour ago

Chandan Shetty: ಡಿವೋರ್ಸ್‌ ಬಳಿಕ ಚಂದನ್‌-ನಿವೇದಿತಾ ಒಟ್ಟಿಗೆ ಕೈ ಕೈ ಹಿಡಿದುಕೊಂಡು ಬಂದಿದ್ದೇಕೆ?

Donald Trump Assassination Bid
ವಿದೇಶ2 hours ago

Donald Trump Assassination Bid: ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನ; ಇದು ಯಾರ ಕೃತ್ಯ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ55 mins ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ18 hours ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ23 hours ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ24 hours ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ5 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

karnataka Rain
ಮಳೆ5 days ago

Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

karnataka weather Forecast
ಮಳೆ5 days ago

Karnataka Weather : 11 ಜಿಲ್ಲೆಗಳಲ್ಲಿ ರಣಮಳೆ; ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌

Rain Effect
ಮಳೆ6 days ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ6 days ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

ಟ್ರೆಂಡಿಂಗ್‌