Lovers Fight: ಫೋನ್‌ಗಾಗಿ ಕಿತ್ತಾಡಿದ ಪ್ರೇಮಿಗಳು, ಲವರ್‌ ಬಾಯ್‌ಗೆ ಸಾರ್ವಜನಿಕರ ಗೂಸಾ - Vistara News

ವೈರಲ್ ನ್ಯೂಸ್

Lovers Fight: ಫೋನ್‌ಗಾಗಿ ಕಿತ್ತಾಡಿದ ಪ್ರೇಮಿಗಳು, ಲವರ್‌ ಬಾಯ್‌ಗೆ ಸಾರ್ವಜನಿಕರ ಗೂಸಾ

Lovers Fight: ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ರಸ್ತೆ ಪಕ್ಕದಲ್ಲಿ ನಿಂತು ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ. ಫೋನ್‌ ಕೊಡು ಎಂದು ಹುಡುಗ ಪೀಡಿಸಿದ್ದು, ಆಕೆ ಕೊಡದೆ ಹೋದಾಗ ಆಕೆಯ ಕೊರಳಿಗೆ ಸ್ಕಾರ್ಫ್‌ ಸುತ್ತು ಹಾಕಿ ಎಳೆದಾಡಿದ್ದಾನೆ ಹುಡುಗ.

VISTARANEWS.COM


on

lovers fight hubli
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹುಬ್ಬಳ್ಳಿ: ಪ್ರೇಮಕಲಹ (Lovers Fight) ಬೀದಿಗೆ ಬಂದರೆ ಸಾರ್ವಜನಿಕರಿಂದ ಏಟೂ ತಿನ್ನಬೇಕಾಗುತ್ತದೆ ಎಂಬುದಕ್ಕೆ ಈ ಘಟನೆ ಉದಾಹರಣೆ. ಫೋನ್‌ಗಾಗಿ (mobile phone) ರಸ್ತೆ ಪಕ್ಕದಲ್ಲೇ ಪ್ರೇಮಿಗಳು ಜಗಳ ಮಾಡಿಕೊಂಡಿದ್ದು, ಅದು ಸಾರ್ವಜನಿಕ ಸಭ್ಯತೆ ಮೀರಿದಾಗ ಹುಡುಗನಿಗೆ ಸಾರ್ವಜನಿಕರ ಗೂಸಾ ಬಿದ್ದಿದೆ.

ಹುಬ್ಬಳ್ಳಿಯ (Hubli news) ಕೊಪ್ಪಿಕರ ರಸ್ತೆಯ ಮಾಲ್ ಬಳಿ ಘಟನೆ ನಡೆದಿದೆ. ಕಿತ್ತಾಡುತ್ತಿರುವ ಪ್ರೇಮಿಗಳ ಜಗಳದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ರಸ್ತೆ ಪಕ್ಕದಲ್ಲಿ ನಿಂತು ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ. ಫೋನ್‌ ಕೊಡು ಎಂದು ಹುಡುಗ ಪೀಡಿಸಿದ್ದು, ಆಕೆ ಕೊಡದೆ ಹೋದಾಗ ಆಕೆಯ ಕೊರಳಿಗೆ ಸ್ಕಾರ್ಫ್‌ ಸುತ್ತು ಹಾಕಿ ಎಳೆದಾಡಿದ್ದಾನೆ ಹುಡುಗ.

ಲವರ್‌ ಬಾಯ್‌ನ ಈ ಕೃತ್ಯ ನೋಡಿದ ಸ್ಥಳೀಯರು ರೊಚ್ಚಿಗೆದ್ದು ಮಧ್ಯಪ್ರವೇಶಿಸಿದ್ದಾರೆ. ನಮ್ಮ ಮಧ್ಯೆ ನೀವು ಬಂದಿದ್ದೇಕೆ ಎಂದು ಉಡಾಫೆಯಿಂದ ಹುಡುಗ ಉತ್ತರಿಸಿದಾಗ ಕ್ರುದ್ಧರಾದ ಸಾರ್ವಜನಿಕರು ಆತನಿಗೆ ಚೆನ್ನಾಗಿ ಗೂಸಾ ಕೊಟ್ಟಿದ್ದಾರೆ. ʼಸಾರ್ವಜನಿಕ ಸಭ್ಯತೆ ಪಾಲಿಸಿʼ ಎಂದು ಪಾಠ ಹೇಳಿದ್ದಾರೆ. ಲವರ್ಸ್ ಜಗಳದ ವಿಡಿಯೋ ಸಾಮಾಜಿಕ‌ ಜಾಲತಾಣಗಳಲ್ಲಿ‌ ಫುಲ್ ವೈರಲ್ ಆಗುತ್ತಿದೆ.

ರೀಲ್ಸ್‌ಗಾಗಿ ಗನ್‌ ತೋರಿಸಿ ಶೋಕಿ ಮಾಡಿದವನು ಜೈಲುಪಾಲು

ಬೆಂಗಳೂರು: ರಿಲ್ಸ್ ಶೋಗಾಗಿ ಶೋಕಿ (Reels Obsession) ಮಾಡಿದವನನ್ನು ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಮುದ್ದೆ ಮುರಿಯಲು ಕಳಿಸಿದ್ದಾರೆ. ಈತ ಎಕೆ 47 (AK 47 Rifle) ರೈಫಲ್‌ ಹಿಡಿದ ಗನ್ ಮ್ಯಾನ್‌ಗಳನ್ನು ಬಾಡಿಗಾರ್ಡ್ಸ್‌ (Bodyguards) ಆಗಿಟ್ಟುಕೊಂಡು, ಪಾಶ್ ಕಾರುಗಳನ್ನು ಚಲಾಯಿಸಿಕೊಂಡು, ಮೈಮೇಲೆ ಕಿಲೋಗಟ್ಟಲೆ ಚಿನ್ನ ಧರಿಸಿಕೊಂಡು ಶೋಕಿ ಮಾಡುತ್ತಿದ್ದ. ಬೀದಿಬೀದಿಯಲ್ಲಿ ಈತನ ಗನ್‌ ಝಳಪಿಸುವಿಕೆ ಕಂಡು ಜನ ಆತಂಕಕ್ಕೊಳಗಾಗಿದ್ದರು.

ಬೆಂಗಳೂರಿನಲ್ಲಿ ಹೀಗೆ ಶೋ ಕೊಡಲು ಹೋಗಿ ಜೈಲು ಸೇರಿದ ರೀಲ್ಸ್ ಸ್ಟಾರ್ ಹೆಸರು ಅರುಣ್ ಕಟಾರೆ. ಕೊತ್ತನೂರು ಪೊಲೀಸರು ಈತನನ್ನು ಬಂಧಿಸಿದ್ದಾರೆ. ರೌಡಿ ಚಟುವಟಿಕೆ ಮತ್ತು ಹಳೆಯ ಎಂಓಬಿಗಳ ಮೇಲೆ ನಿಗಾ ವಹಿಸಿದ್ದ ಕೊತ್ತನೂರು ಸಿಬ್ಬಂದಿ ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಅರುಣ್ ಕಟಾರೆಯನ್ನು ವಶಕ್ಕೆ ಪಡೆದಿದ್ದಾರೆ.

ಈತ ಬಾಡಿಗಾರ್ಡ್ಸ್‌ ಥರ ಮನುಷ್ಯರನ್ನಿಟ್ಟುಕೊಂಡು, ಅವರ ಕೈಲಿ ಎಕೆ 47 ಮಾದರಿಯ ನಕಲಿ ಗನ್ ಹಿಡಿಸಿ ರಸ್ತೆಯಲ್ಲಿ ಶೋಆಫ್‌ ಮಾಡುತ್ತಿದ್ದ. ಮೈಮೇಲೆ ನಕಲಿ ಚಿನ್ನ ಹೇರಿಕೊಳ್ಳುತ್ತಿದ್ದ. ಅರುಣ್ ಕಟಾರೆ ಶೋನಿಂದ ಬೆದರಿದ ಸಾರ್ವಜನಿಕರು ಆತಂಕದಿಂದ ಈ ಬಗ್ಗೆ ಮಾಹಿತಿ ನೀಡಿದ್ದರು.

ಆರ್ಮ್ಸ್ ಕಾಯಿದೆ ಸೆ. 290 ಅಡಿಯಲ್ಲಿ ಪ್ರಕರಣ ದಾಖಲಿಸಿ ಈತನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ, ನಕಲಿ ಗನ್ ಹಿಡಿದು ಏರಿಯಾದಲ್ಲಿ ಹವಾ ಸೃಷ್ಟಿಸಲು ಹೋದವನ ಗುಟ್ಟು ಬಯಲಾಗಿದೆ. ರೀಲ್ಸ್ ಶೋಕಿಗೆ ಬಿದ್ದ ಯುವಕನನ್ನು ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಕಳಿಸಿದ್ದಾರೆ.

ಇದನ್ನೂ ಓದಿ: Murder Case : ರೌಡಿಯಾಗಲು ಹೊರಟವನನ್ನು ಕೊಂದು ಹಾಕಿದ್ರು ಪುಂಡರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Suryakumar Yadav: ದಿಲ್ಲಿಯಲ್ಲಿ ತಮಟೆ ಸದ್ದಿಗೆ ಹೆಜ್ಜೆ ಹಾಕಿದ ಸೂರ್ಯಕುಮಾರ್​ ಯಾದವ್​; ವಿಡಿಯೊ ವೈರಲ್​

Suryakumar Yadav: ಭಾರತ ತಂಡದ ಆಟಗಾರರು 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಬೆಳಗ್ಗಿನ ತಿಂಡಿ ಸವಿಯಲಿದ್ದಾರೆ. ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿಯೇ ಭಾರತ ಕ್ರಿಕೆಟ್‌ ತಂಡದ ಆಟಗಾರರನ್ನು ಭೇಟಿಯಾಗಿ, ಅವರ ಜತೆ ತಿಂಡಿ ತಿನ್ನಲಿದ್ದಾರೆ. ಇದೇ ವೇಳೆ ಆಟಗಾರರಿಗೆ ಮೋದಿ ಅವರು ಅಭಿನಂದನೆ ಸಲ್ಲಿಸಲಿದ್ದಾರೆ.

VISTARANEWS.COM


on

Suryakumar Yadav
Koo

ನವದೆಹಲಿ: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತೀಥ್ಯದಲ್ಲಿ ನಡೆದ ಟಿ-20 ವಿಶ್ವಕಪ್‌(T20 World Cup 2024) ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಜಯಗಳಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆದ್ದು ಚುಟುಕು ಕ್ರಿಕೆಟ್‌ನಲ್ಲಿ 2ನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿರುವ ಭಾರತ ಕ್ರಿಕೆಟ್‌ ತಂಡ ಇಂದು (ಗುರುವಾರ) ಬೆಳಗ್ಗೆ ತವರಿಗೆ ಮರಳಲಿದೆ. ತಾಯ್ನಾಡಿಗೆ ಕಾಲಿಡುತ್ತಿದ್ದಂತೆ ಸೂರ್ಯಕುಮಾರ್​(Suryakumar Yadav) ಅವರು ತಮಟೆ ಸದ್ದಿಗೆ ಮಸ್ತ್​ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಸುಮಾರು 18 ಗಂಟೆಗಳ ಸುದೀರ್ಘ ಪ್ರಯಾಣದ ನಂತರ, ತಂಡವು ಅಂತಿಮವಾಗಿ ಭಾರತಕ್ಕೆ ಬಂದಿಳಿದೆ. ಈ ವೇಳೆ ವಿಮಾನ ನಿಲ್ದಾಣದ ಬಳಿ ನೆರೆದಿದ್ದ ಜನಸ್ತೋಮ ರೋಹಿತ್​ ಪಡೆಗೆ ಜೈಕಾರಗಳ ಮೂಲಕ ಅದ್ಧೂರಿ ಸ್ವಾಗತ ಕೋರಿದರು. ತಾಯ್ನಾಡಿಗೆ ಕಾಲಿಡುತ್ತಿದ್ದಂತೆ ರೋಹಿತ್​ ಶರ್ಮ ವಿಶ್ವಕಪ್​ ಮೇಲೆತ್ತಿ ಪ್ರದರ್ಶಿಸಿದರು. ತಮಟೆ ಬಡಿಯುತ್ತಾ ಸ್ವಾಗತ ಕೋರುತ್ತಿದ್ದವ ಜತೆ ಸೂರ್ಯಕುಮಾರ್​ ಮಸ್ತ್​ ಆಗಿ ಒಂದೆಡರು ಸ್ಟೆಪ್ಸ್​ ಹಾಕಿ ಸಂಭ್ರಮಿಸಿದ್ದಾರೆ. ತಮಡೆ ಬಡಿಯುತ್ತಿರುವವರು ಕೂಡ ಸೂರ್ಯಕುಮಾರ್​ ಜತೆ ಕುಣಿದಿದ್ದಾರೆ.

ಭಾರತ ತಂಡದ ಆಟಗಾರರು 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಬೆಳಗ್ಗಿನ ತಿಂಡಿ ಸವಿಯಲಿದ್ದಾರೆ. ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿಯೇ ಭಾರತ ಕ್ರಿಕೆಟ್‌ ತಂಡದ ಆಟಗಾರರನ್ನು ಭೇಟಿಯಾಗಿ, ಅವರ ಜತೆ ತಿಂಡಿ ತಿನ್ನಲಿದ್ದಾರೆ. ಇದೇ ವೇಳೆ ಆಟಗಾರರಿಗೆ ಮೋದಿ ಅವರು ಅಭಿನಂದನೆ ಸಲ್ಲಿಸಲಿದ್ದಾರೆ.

ಮೋದಿ ಭೇಟಿಯ ಬಳಿಕ ನವದೆಹಲಿಯಿಂದ ವಿಶೇಷ ವಿಮಾನ ಮೂಲಕ ಆಟಗಾರರು ಮುಂಬೈಗೆ ಆಗಮಿಸಿ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಯಕ ರೋಹಿತ್‌ ಶರ್ಮಾ ಗೆದ್ದಿರುವ ವಿಶ್ವಕಪ್‌ ಟ್ರೋಫಿಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾಗೆ ಹಸ್ತಾಂತರಿಸಲಿದ್ದಾರೆ. ಬಳಿಕ ತೆರೆದ ವಾಹನದಲ್ಲಿ ರೋಡ್‌ ಶೋ ನಡೆಯಲಿದೆ.

ಇದನ್ನೂ ಓದಿ Team India: ಭಾರತಕ್ಕೆ ಬಂದಿಳಿದ ಟೀಮ್‌ ಇಂಡಿಯಾ; ವಿಶ್ವಕಪ್‌ ಹೀರೋಗಳಿಗೆ ದಿಲ್ಲಿಯಲ್ಲಿ ಭರ್ಜರಿ ಸ್ವಾಗತ

ಸಹಾಯಕ ಸಿಬ್ಬಂದಿ, ಆಟಗಾರರ ಕುಟುಂಬ ಸದಸ್ಯರು, ಕ್ರಿಕೆಟ್‌ ಮಂಡಳಿಯ ಅಧಿಕಾರಿಗಳು ಮತ್ತು ಪತ್ರಕರ್ತರೊಂದಿಗೆ ಭಾರತೀಯ ತಂಡದ ಆಟಗಾರರು ಗ್ರಾಂಟ್ಲಿ ಆಡಮ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬುಧವಾರ ವಿಶೇಷ ಚಾರ್ಟರ್ ವಿಮಾನ ಏರಿದ್ದರು. ಏರ್ ಇಂಡಿಯಾ ಚಾಂಪಿಯನ್ಸ್ 24 ವರ್ಲ್ಡ್‌ ಕಪ್‌ (Air India Champions 24 World Cup) ಎನ್ನುವ ಹೆಸರಿನ ವಿಮಾನವು ಬೆಳಿಗ್ಗೆ 6:20ರ ಸುಮಾರಿಗೆ ದೆಹಲಿಯ ಇಂದಿರಾ ಗಾಂಧಿ ಇಂಟರ್​ನ್ಯಾಷನ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಬೆರಿಲ್ ಚಂಡಮಾರುತದಿಂದ ಉಂಟಾದ ವಿಳಂಬದಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶೇಷ ಚಾರ್ಟರ್ ವಿಮಾನದ ವ್ಯವಸ್ಥೆ ಮಾಡಿತ್ತು.

ಜೂನ್‌ 29ರಂದು ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ನಡೆದಿದ್ದ ಟಿ20 ವಿಶ್ವಕಪ್​ 2024ರ ಫೈನಲ್​ನಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು 7 ರನ್​ಗಳ ಅಂತರದಿಂದ ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. ಆ ಮೂಲಕ ಸುಮಾರು 17 ವರ್ಷಗಳ ಬಳಿಕ ಟಿ-20 ವಿಶ್ವಕಪ್‌ ಮುಡಿಗೇರಿಸಿಕೊಂಡಿತ್ತು.

Continue Reading

ಕ್ರಿಕೆಟ್

T20 World Cup 2024: ವಿವಾದಾತ್ಮಕ ಕ್ಯಾಚ್​ನ ಮತ್ತೊಂದು ವಿಡಿಯೊ ವೈರಲ್​

T20 World Cup 2024: ರೋಹಿತ್‌ ಶರ್ಮಾ (Rohit Sharma) ನೇತೃತ್ವದ ಭಾರತದ ಕ್ರಿಕೆಟ್‌ ತಂಡವು ಭಾರತಕ್ಕೆ ಆಗಮಿಸಿದೆ. ಏರ್‌ ಇಂಡಿಯಾ ಏರ್‌ಲೈನ್ಸ್‌ನ ವಿಶೇಷ ಚಾರ್ಟರ್ಡ್‌ ವಿಮಾನದಲ್ಲಿ ಭಾರತ ತಂಡದ (Team India) ಆಟಗಾರರು ಇಂದು(ಗುರುವಾರ) ದೆಹಲಿಗೆ ಆಗಮಿಸಿದರು.

VISTARANEWS.COM


on

T20 World Cup 2024
Koo

ಬಾರ್ಬಡೋಸ್​​: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್(T20 World Cup 2024)​ ಫೈನಲ್​ ಪಂದ್ಯದಲ್ಲಿ ಸೂರ್ಯಕುಮಾರ್​ ಯಾದವ್ (Suryakumar Yadav Catch)​ ಅವರು ಹಿಡಿದ ಕ್ಯಾಚ್​ ಬಗೆಗಿನ ಚರ್ಚೆಗಳು ಜೋರಾಗಿ ನಡೆಯುತ್ತಿರುವ ಬೆನ್ನಲ್ಲೇ ಐಸಿಸಿ(ICC) ಈ ಕ್ಯಾಚ್​ನ ಮತ್ತೊಂದು ವಿಡಿಯೊವನ್ನು ಹಂಚಿಕೊಂಡಿದೆ.

ಹೌದು, ಸೂರ್ಯಕುಮಾರ್​ ಅವರು ಕ್ಯಾಚ್​ ಹಿಡಿದ ವಿಡಿಯೊದಲ್ಲಿ ಬೌಂಡರಿ ಲೈನ್​ಗೆ ಬಳಸುವ ಕುಶನ್ ಹಿಂದಕ್ಕೆ ಜಾರಿದ ಮಾರ್ಕ್​ ಕಂಡುಬಂದಿತ್ತು. ಹೀಗಾಗಿ ಇದು ಚರ್ಚೆಗೆ ಗ್ರಾಸವಾಗಲು ಕಾರಣ. ಭಾರತದ ಬೌಲಿಂಗ್ ವೇಳೆ ಬೇಕಂತಲೇ ಕುಶನ್ ಹಿಂದಕ್ಕೆ ದೂಡಲಾಗಿತ್ತು, ಸೂರ್ಯಕುಮಾರ್(Suryakumar Yadav) ಅವರು ಬೌಂಡರಿ ಗೆರೆಯನ್ನು ತುಳಿದಿದ್ದರೂ ಕೂಡ ಔಟ್​ ನೀಡಲಾಗಿದೆ ಎಂದೆಲ್ಲ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.

ಸ್ಪಷ್ಟನೇ ನೀಡಿದ್ದ ಸಂಖ್ಯಾಶಾಸ್ತ್ರಜ್ಞ


ವಿವಾದಾತ್ಮಕ ಕ್ಯಾಚ್​ ಬಗೆಗಿನ ಎಲ್ಲ ಅನುಮಾನಗಳಿಗೆ ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞ ರಜನೀಶ್ ಗುಪ್ತಾ ಎಂಬವರು ಸ್ಪಷ್ಟನೆ ನೀಡಿದ್ದರು. “ನಾನು ಅಂದು ಮೈದಾನದ ಟಿವಿ ಕಾಮೆಂಟರಿ ಬಾಕ್ಸ್‌ನಲ್ಲಿದ್ದೆ. ಬಿಳಿ ಗೆರೆಯು ಬೌಂಡರಿಯಾಗಿರಲಿಲ್ಲ ಎಂದು ನಾನು ಹೇಳಬಲ್ಲೆ. ಏಕೆಂದರೆ ಬೌಂಡರಿ ರೋಪ್ ವೆಡ್ಜ್ ಆ ಬಿಳಿ ಗೆರೆಯ ಹಿಂದೆ ಇತ್ತು. ಪಂದ್ಯದ ಆರಂಭದಿಂದಲೂ ಹಾಗೆಯೇ ಇತ್ತು. ಪಿಚ್ ಅನ್ನು ಬದಲಾಯಿಸಿದಾಗ, ಬೌಂಡರಿಗಳನ್ನು ಸರಿಹೊಂದಿಸಲಾಗುತ್ತದೆ. ಹೀಗಾಗಿ ಈ ಬಗ್ಗೆ ಚರ್ಚೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದರು. ಆದರೂ ಕೂಡ ಚರ್ಚೆಗಳು ನಡೆಯಲುತ್ತಲೇ ಇದೆ. ಇದೇ ಕಾರಣದಿಂದ ಐಸಿಸಿ ಈ ಕ್ಯಾಚ್ನ ಮತ್ತೊಂದು ವಿಡಿಯೊ ಹಂಚಿಕೊಂಡಿದೆ.

ಇದನ್ನೂ ಓದಿ Suryakumar Yadav : ವಿಶ್ವ ಕಪ್​ ಟ್ರೋಫಿಯನ್ನು ಬೆಡ್​ ಮಧ್ಯದಲ್ಲಿಟ್ಟು ನಿದ್ದೆ ಮಾಡಿದ ಸೂರ್ಯಕುಮಾರ್ ದಂಪತಿ!

ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ಜೂನ್​ 29, ಶನಿವಾರ ರಾತ್ರಿ ನಡೆದಿದ್ದ ಅತ್ಯಂತ ರೋಚಕ ಟಿ20 ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ಟೀಮ್​ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್​ ಅಂತರದ ಗೆಲುವು ಸಾಧಿಸಿ 13 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಬರವನ್ನು ನೀಗಿಸಿತ್ತು.

ಕೊನೆಯ ಓವರ್​ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಎಸೆತವನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ನತ್ತ ಬಾರಿಸಿದ್ದರು. ಬೌಂಡರಿ ಲೈನ್ ನಲ್ಲಿದ್ದ ಸೂರ್ಯ ಕುಮಾರ್ ಯಾದವ್ ಯಾರೂ ಊಹಿಸದಂತೆ ಸಾಹಸಮಯ ಅಮೋಘ ಕ್ಯಾಚ್ ಪಡೆದರು. 21 ರನ್ ಗಳಿಸಿದ್ದ ಡೇವಿಡ್​ ಮಿಲ್ಲರ್ ವಿಕೆಟ್​ ಕೈಚೆಲ್ಲಿದರು. ಮಿಲ್ಲರ್​ ಔಟ್​ ಆಗುತ್ತಿದ್ದಂತೆ ಭಾರತದ ಗೆಲುವು ಕೂಡ ಖಚಿತಗೊಂಡಿತು.

ತವರಿಗೆ ಬಂದಿಳಿದ ಟೀಮ್‌ ಇಂಡಿಯಾ

ರೋಹಿತ್‌ ಶರ್ಮಾ (Rohit Sharmaನೇತೃತ್ವದ ಭಾರತದ ಕ್ರಿಕೆಟ್‌ ತಂಡವು ಭಾರತಕ್ಕೆ ಆಗಮಿಸಿದೆ. ಏರ್‌ ಇಂಡಿಯಾ ಏರ್‌ಲೈನ್ಸ್‌ನ ವಿಶೇಷ ಚಾರ್ಟರ್ಡ್‌ ವಿಮಾನದಲ್ಲಿ ಭಾರತ ತಂಡದ (Team India) ಆಟಗಾರರು ಇಂದು(ಗುರುವಾರ) ದೆಹಲಿಗೆ ಆಗಮಿಸಿದ್ದಾರೆ. ಪ್ರತಿಕೂಲ ಹವಾಮಾನದ ಕಾರಣದಿಂದ ಆಟಗಾರರು ಕೆಲವು ದಿನ ಬಾರ್ಬಡಾಸ್​ನಲ್ಲೇ ಸಿಲುಕಿ ಹಾಕಿಕೊಂಡಿದ್ದರು. ಇದೀಗ ತವರಿಗೆ ಆಗಮಿಸಿದ ವಿಶ್ವಕಪ್‌ ಹೀರೋಗಳಿಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ದಾರೆ.

ಸಹಾಯಕ ಸಿಬ್ಬಂದಿ, ಆಟಗಾರರ ಕುಟುಂಬ ಸದಸ್ಯರು, ಕ್ರಿಕೆಟ್‌ ಮಂಡಳಿಯ ಅಧಿಕಾರಿಗಳು ಮತ್ತು ಪತ್ರಕರ್ತರೊಂದಿಗೆ ಭಾರತೀಯ ತಂಡದ ಆಟಗಾರರು ಗ್ರಾಂಟ್ಲಿ ಆಡಮ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬುಧವಾರ ವಿಶೇಷ ಚಾರ್ಟರ್ ವಿಮಾನ ಏರಿದ್ದರು. ಏರ್ ಇಂಡಿಯಾ ಚಾಂಪಿಯನ್ಸ್ 24 ವರ್ಲ್ಡ್‌ ಕಪ್‌ (Air India Champions 24 World Cup) ಎನ್ನುವ ಹೆಸರಿನ ವಿಮಾನವು ಬೆಳಿಗ್ಗೆ 6:20ರ ಸುಮಾರಿಗೆ ದೆಹಲಿಯ ಇಂದಿರಾ ಗಾಂಧಿ ಇಂಟರ್​ನ್ಯಾಷನ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

Continue Reading

Latest

Viral Video: 34 ವರ್ಷಗಳ ಬಳಿಕ ತಾಯ್ನಾಡಿಗೆ ಮರಳಿದ ಕಾಶ್ಮೀರಿ ಪಂಡಿತ; ಪಾಳುಬಿದ್ದ ಮನೆ ನೋಡಿ ಭಾವುಕ

Viral Video: ಉಗ್ರರ ದಾಳಿಯಿಂದ ತಾಯ್ನಾಡನ್ನು ತೊರೆದ ಕಾಶ್ಮೀರಿ ಪಂಡಿತರೊಬ್ಬರು 34 ವರ್ಷಗಳ ಬಳಿಕ ಮತ್ತೆ ತಮ್ಮ ತಾಯ್ನಾಡಿಗೆ ಮರಳಿದ್ದಾರೆ. ಅಲ್ಲಿ ತಮ್ಮ ಮನೆಯನ್ನು ಕಂಡು ಭಾವುಕರಾಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಸ್ಥಳೀಯರೊಂದಿಗೆ ಮಾತನಾಡುತ್ತಾ ಭಾವುಕರಾಗಿ ಅವರ ಕಣ್ಣಂಚು ತೇವವಾಗುವುದು ಈ ವಿಡಿಯೊದಲ್ಲಿ ನೋಡಬಹುದು. ಈ ಕ್ಲಿಪ್ ಅನ್ನು ವಿನೀತಾ ಸಿಂಗ್ ಎನ್ನುವವರು ಹಂಚಿಕೊಂಡಿದ್ದಾರೆ.

VISTARANEWS.COM


on

Viral Video
Koo

ಕಾಶ್ಮೀರದಲ್ಲಿ ಆಗಾಗ ಉಗ್ರರು ದಾಳಿ ನಡೆಸುತ್ತಿರುತ್ತಾರೆ. ಇದರಿಂದ ಅನೇಕ ಜನರು ತಮ್ಮವರನ್ನು ಕಳೆದುಕೊಂಡಿದ್ದಾರೆ. ಅನೇಕರು ತಮ್ಮ ನಾಡನ್ನು ಬಿಟ್ಟು ಬೇರೆ ಪ್ರದೇಶಕ್ಕೆ ವಲಸೆ ಹೋಗಿದ್ದಾರೆ. ಇಂತಹ ನರಕ ಯಾತನೆಯಲ್ಲಿ ಬದುಕುತ್ತಿರುವ ಕಾಶ್ಮೀರಿ ಜನರನ್ನು ನೋಡಿದರೆ ಯಾರಿಗಾದರೂ ಕರುಣೆ ಹುಟ್ಟುವುದು ಸಹಜ. ಅಂತಹದೊಂದು ಘಟನೆ ಇದೀಗ ಕಾಶ್ಮೀರದಲ್ಲಿ ನಡೆದಿದ್ದು, ವಿಡಿಯೊ ವೈರಲ್ (Viral Video) ಆಗಿದೆ.

ಉಗ್ರರ ದಾಳಿಯಿಂದ ತಾಯ್ನಾಡನ್ನು ತೊರೆದ ಕಾಶ್ಮೀರಿ ಪಂಡಿತರೊಬ್ಬರು 34 ವರ್ಷಗಳ ಬಳಿಕ ಮತ್ತೆ ತಮ್ಮ ತಾಯ್ನಾಡಿಗೆ ಮರಳಿದ್ದಾರೆ. ಅಲ್ಲಿ ತಮ್ಮ ಪಾಳು ಬಿದ್ದ ಮನೆಯನ್ನು ಕಂಡು ಭಾವುಕರಾಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ವಿಡಿಯೊದಲ್ಲಿ ಕಪ್ಪು ಟೀ ಶರ್ಟ್ ಮತ್ತು ಜೀನ್ಸ್ ಧರಿಸಿದ 40 ವರ್ಷದ ವ್ಯಕ್ತಿಯೊಬ್ಬರು 34 ವರ್ಷಗಳ ಬಳಿಕ ತಮ್ಮ ಮನೆಗೆ ಬಂದಿದ್ದಾರೆ. ಅಲ್ಲಿ ಅವರು ಸುತ್ತಲೂ ತಿರುಗುತ್ತಾ ಆಕಾಶ ಮತ್ತು ಕಟ್ಟಡಗಳನ್ನು ನೋಡುತ್ತಾ, ತಮ್ಮ ಗತಕಾಲದ ನೆನಪುಗಳನ್ನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತಿದ್ದಾರೆ. ಹಾಗೇ ಸ್ಥಳೀಯರೊಂದಿಗೆ ಮಾತನಾಡುವಾಗ ಭಾವುಕರಾಗಿದ್ದಾರೆ. ಅವರ ಕಣ್ಣಿನಂಚಿನಲ್ಲಿ ನೀರು ಬರುವುದು ಕಾಣಿಸುತ್ತದೆ. ಈ ಕ್ಲಿಪ್ ಅನ್ನು ವಿನೀತಾ ಸಿಂಗ್ ಎನ್ನುವವರು ಹಂಚಿಕೊಂಡಿದ್ದು, ಇದಕ್ಕೆ ಸಾವಿರಾರು ವೀಕ್ಷಣೆಗಳು ಮತ್ತು ಹಲವಾರು ಕಾಮೆಂಟ್ ಗಳು ಬಂದಿವೆ.

ಈ ವಿಡಿಯೊ ನೋಡಿ ಒಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ವಲಸೆ ಬಂದಿದ್ದ ಕಾಶ್ಮೀರಿ ಗೆಳೆಯನ ಜೊತೆ ‘ಕಾಶ್ಮೀರ್ ಫೈಲ್ಸ್’ ಚಿತ್ರ ನೋಡಲು ಹೋದಾಗ ಆತ ತಮ್ಮ ತಾಯ್ನಾಡಿನ ಸಂಕಷ್ಟಗಳನ್ನು ನೋಡಿ ಭಾವುಕರಾಗಿ 10 ನಿಮಿಷಗಳ ಕಾಲ ಆಘಾತಕ್ಕೊಳಗಾಗಿದ್ದರು ಎಂಬುದಾಗಿ ತಿಳಿಸಿದ್ದಾರೆ.

ಇನ್ನೊಬ್ಬರು 25 ವರ್ಷಗಳ ನಂತರ ಕಾಶ್ಮೀರಕ್ಕೆ ಭೇಟಿ ನೀಡಿದಾಗ, ಅವರಿಗೆ ವಿಮಾನದಿಂದ ಇಳಿದು ನೆಲಕ್ಕೆ ಕಾಲಿಟ್ಟ ತಕ್ಷಣ, ಕಣ್ಣೀರು ಹರಿಯಲು ಶುರುವಾಗಿತ್ತು ಮತ್ತು ತನ್ನ ತಾಯಿಗೂ ಅದೇ ಅನುಭವವ ಆಗಿತ್ತು. ಅಲ್ಲಿ ವಾಸಿಸುವವರ ಈ ಭಾವನೆ, ನೋವು ಎಂದಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.

ಅಲ್ಲದೇ ಮತ್ತೊಬ್ಬರು ಬಲವಂತವಾಗಿ ನಿಮ್ಮ ಮನೆಯನ್ನು ತೊರೆಯುವುದು ಎಷ್ಟು ಕಷ್ಟಕರವಾಗಿರುತ್ತದೆ. ನಿಮ್ಮ ಈ ನೋವನ್ನು ಯಾರು ಊಹಿಸಲು ಸಾಧ್ಯವಿಲ್ಲ ಎಂದು ಸಹಾನುಭೂತಿ ತೋರಿದ್ದಾರೆ.

ಇದನ್ನೂ ಓದಿ: ‘ಜೀ ಕರ್ದಾ’ದಲ್ಲಿ ತಮನ್ನಾ ಭಾಟಿಯಾ ಪೂರ್ತಿ ಟಾಪ್‌ಲೆಸ್‌! ವಿಡಿಯೊ ಇದೆ

1990ರಲ್ಲಿ ಈ ಪ್ರದೇಶದಲ್ಲಿ ಉಗ್ರಗಾಮಿಗಳು ನಡೆಸುತ್ತಿದ್ದ ತೀವ್ರ ಉಗ್ರಗಾಮಿ ಕೃತ್ಯಗಳಿಂದಾಗಿ ಕಾಶ್ಮೀರಿ ಪಂಡಿತರು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ತಾಯ್ನಾಡನ್ನು ತೊರೆಯಬೇಕಾಯಿತು.

Continue Reading

ಸ್ಯಾಂಡಲ್ ವುಡ್

Ashika Ranganath: ಪುಷ್ಪ 2 ಹಾಡಿಗೆ ದಿಲ್‌ ಖುಷ್‌ ಆಗಿ ಕುಣಿದ ಆಶಿಕಾ ರಂಗನಾಥ್;‌ Video ಇದೆ ನೋಡಿ

Ashika Ranganath: ಪುಷ್ಪ 2 ಸಿನಿಮಾದ ಸೂಸೇನೆ ಹಾಡಿಗೆ ಆಶಿಕಾ ರಂಗನಾಥ್‌ ಅವರು ಹೆಜ್ಜೆ ಹಾಕಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಆಶಿಕಾ ರಂಗನಾಥ್‌ ಅವರು ನವಿಲಿನಂತೆ ಹೆಜ್ಜೆ ಹಾಕಿರುವುದನ್ನು ನೋಡಿ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಮಿಲ್ಕಿ ಬ್ಯೂಟಿ ಮಾಡಿದ ಡಾನ್ಸ್‌ನ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

VISTARANEWS.COM


on

Ashika Ranganath
Koo

ಬೆಂಗಳೂರು: ಅಲ್ಲು ಅರ್ಜುನ್‌ (Allu Arjun) ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2 (Pushpa 2) ಸಿನಿಮಾದ ಸೂಸೇನೆ ಹಾಡು ಎಲ್ಲರ ಮನೆಮಾತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಹಾಡು ವೈರಲ್‌ ಆಗುವ ಜತೆಗೆ ಯುವತಿಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಈ ಹಾಡಿಗೆ ಡಾನ್ಸ್‌ ಮಾಡಿದ ವಿಡಿಯೊ ಪೋಸ್ಟ್‌ ಮಾಡಿದ್ದಾರೆ. ಅಷ್ಟರಮಟ್ಟಿಗೆ ಈ ಹಾಡು ಎಲ್ಲರ ಗಮನ ಸೆಳೆದಿದೆ. ಇದಕ್ಕೆ ನಿದರ್ಶನ ಎಂಬಂತೆ, ಸ್ಯಾಂಡಲ್‌ವುಡ್‌ನ ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿಯಾದ, ನಟಿ ಆಶಿಕಾ ರಂಗನಾಥ್‌ (Ashika Ranganath) ಅವರು ಕೂಡ ಸೂಸೇನೆ ಹಾಡಿಗೆ ಡಾನ್ಸ್‌ ಮಾಡಿದ್ದಾರೆ. ಡಾನ್ಸ್‌ ಮಾಡಿದ ವಿಡಿಯೊವನ್ನು (Viral Video) ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೊ ಕೂಡ ವೈರಲ್‌ ಆಗಿದೆ.

ಸಾಂಪ್ರದಾಯಿಕ ಉಡುಗೆಯಲ್ಲಿ ಆಶಿಕಾ ರಂಗನಾಥ್‌ ಅವರು ಪುಷ್ಪ 2 ಹಾಡಿಗೆ ಹೆಜ್ಜೆ ಹಾಕಿದ್ದು, ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. “ನಾನು ಈ ಹಾಡಿಗೆ ತುಂಬ ತಡವಾಗಿ ಕುಣಿಯುತ್ತಿರಬಹುದು, ಆದರೆ, ನೀವು ನನ್ನ ನೃತ್ಯವನ್ನು ಇಷ್ಟಪಡುತ್ತೀರಿ ಎಂಬ ಭರವಸೆ ಇದೆ” ಎಂಬುದಾಗಿ ಆಶಿಕಾ ರಂಗನಾಥ್‌ ಅವರು ಬರೆದುಕೊಂಡಿದ್ದಾರೆ. ವಿಡಿಯೊಗೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, “ತುಂಬ ಚೆನ್ನಾಗಿ ಡಾನ್ಸ್‌ ಮಾಡಿದ್ದೀರಿ” ಎಂದಿದ್ದಾರೆ. ಇನ್ನೊಂದಿಷ್ಟು ಕಿಡಿಗೇಡಿಗಳು, “ನೀವು ರಶ್ಮಿಕಾ ಮಂದಣ್ಣ ಅವರಿಗಿಂತ ಚೆನ್ನಾಗಿ ಹೆಜ್ಜೆ ಹಾಕಿದ್ದೀರಿ” ಎಂದಿದ್ದಾರೆ.

ಪುಷ್ಪ 1 ಸಿನಿಮಾದ ಸಾಮಿ ಹಾಡನ್ನೂ ಮೀರಿಸುವಂತಿದೆ ಸೂಸೇನೆ ಹಾಡು. ಅ ದೇವಿಶ್ರೀ ಪ್ರಸಾದ್‌ ಸಂಗೀತ ನಿರ್ದೇಶನದಲ್ಲಿ ಶ್ರೇಯಾ ಘೋಷಾಲ್‌ ಈ ಹಾಡಿಗೆ ಧ್ವನಿಯಾಗಿದ್ದಾರೆ. ಹಾಡಿಗೆ ಬಾಲಿವುಡ್‌ ಗಣೇಶ್ ಆಚಾರ್ಯ ಕೊರಿಯೋಗ್ರಫಿ ಇದೆ. ಈ ಹಾಡು 6 ಭಾಷೆಗಳಲ್ಲಿ ಮೂಡಿ ಬಂದಿದೆ. ಎಲ್ಲ ಭಾಷೆಗಳಲ್ಲಿಯೂ ಶ್ರೇಯಾ ಘೋಷಾಲ್‌ ಹಾಡಿಗೆ ಧ್ವನಿ ನೀಡುತ್ತಿರುವುದು ವಿಶೇಷ. ಸೂಸೆಕಿ (ತೆಲುಗು), ನೋಡೋಕ (ಕನ್ನಡ), ಅಂಗಾರೊನ್‌ (ಹಿಂದಿ), ಸೂಡಾನ (ತಮಿಳು), ಕಂಡಾಲೋ (ಮಲಯಾಳಂ) ಮತ್ತು ಆಗುನೆರ್‌ (ಬಂಗಾಳಿ) ಎಂದು ಆರಂಭವಾಗುವ ಹಾಡನ್ನು ಶ್ರೇಯಾ ಘೋಷಾಲ್‌ ಹಾಡಿದ್ದಾರೆ.

ಡಿಸೆಂಬರ್‌ 6ಕ್ಕೆ ಸಿನಿಮಾ ಬಿಡುಗಡೆ

ಟಾಲಿವುಡ್‌ ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌ ನಟನೆಯ ಬಹುನಿರೀಕ್ಷಿತ ಪುಷ್ಪ 2 ಸಿನಿಮಾದ ಬಿಡುಗಡೆಯನ್ನು ಐದು ತಿಂಗಳು ಮುಂದೂಡಲಾಗಿದೆ. ಪುಷ್ಪ 2 ಸಿನಿಮಾವನ್ನು ಆಗಸ್ಟ್‌ 5ರ ಬದಲಾಗಿ ಇದೇ ವರ್ಷದ ಡಿಸೆಂಬರ್‌ 6ರಂದು ಬಿಡುಗಡೆ ಮಾಡಲು ಚಿತ್ರತಂಡವು ತೀರ್ಮಾನಿಸಿದೆ. ಈ ಕುರಿತು ಅಲ್ಲು ಅರ್ಜುನ್‌ ಅವರೇ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ನಿರ್ದೇಶಕ ಸುಕುಮಾರ್ ಇನ್ನೂ ಚಿತ್ರದ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳಲ್ಲಿ ನಿರತರಾಗಿರುವುದರಿಂದ ಸಿನಿಮಾ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಒಂದು ತಿಂಗಳ ಶೂಟಿಂಗ್ ಬಾಕಿಯಿದ್ದು ಜುಲೈ ವೇಳೆಗೆ ಚಿತ್ರೀಕರಣ ಪೂರ್ಣಗೊಳಿಸುವ ಗುರಿಯನ್ನು ಸುಕುಮಾರ್ ಹೊಂದಿದ್ದಾರೆ ಎನ್ನಲಾಗಿದೆ. ಅಗಸ್ಟ್ 15 ರಂದು ಅಕ್ಷಯ್ ಕುಮಾರ್ ಅವರ ‘ಖೇಲ್ ಖೇಲ್ ಮೇ’ ಕೂಡ ಬಿಡುಗಡೆಗೊಳ್ಳುತ್ತಿದೆ. ಈ ಮೊದಲು, ‘ಖೇಲ್ ಖೇಲ್ ಮೇ’ ಸೆಪ್ಟೆಂಬರ್ 6 ರಂದು ಅದ್ಧೂರಿಯಾಗಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು.

ಇದನ್ನೂ ಓದಿ: Rashmika Mandanna: ರಶ್ಮಿಕಾ ಇದೀಗ ಟಾಲಿವುಡ್‌ಗೆ ಬೈ ಬೈ; ಬಾಲಿವುಡ್‌ನಲ್ಲಿಯೇ ಬಿಡಾರ!

Continue Reading
Advertisement
Varalaxmi Sarathkumar Reception attend By sudeep Family
ಸ್ಯಾಂಡಲ್ ವುಡ್24 mins ago

Varalaxmi Sarathkumar: ವರಲಕ್ಷ್ಮಿ ಶರತ್‌ಕುಮಾರ್ ರಿಸಪ್ಷನ್‌ನಲ್ಲಿ ಮಿಂಚಿದ ಕಿಚ್ಚ ಸುದೀಪ್ ಕುಟುಂಬ!

fraud case bagepalli
ಕ್ರೈಂ30 mins ago

Fraud Case: ಮದುವೆಯಾಗುವುದಾಗಿ ನಂಬಿಸಿ ಪ್ರಿಯಕರ ಎಸ್ಕೇಪ್, ಗರ್ಭಿಣಿಯಿಂದ ಪೊಲೀಸ್‌ಗೆ ದೂರು

Suryakumar Yadav
ಕ್ರೀಡೆ31 mins ago

Suryakumar Yadav: ದಿಲ್ಲಿಯಲ್ಲಿ ತಮಟೆ ಸದ್ದಿಗೆ ಹೆಜ್ಜೆ ಹಾಕಿದ ಸೂರ್ಯಕುಮಾರ್​ ಯಾದವ್​; ವಿಡಿಯೊ ವೈರಲ್​

Kalki 2898 AD records global box office collection
ಟಾಲಿವುಡ್45 mins ago

Kalki 2898 AD: 1000 ಕೋಟಿ ರೂ. ಗಳಿಕೆಯತ್ತ ‘ಕಲ್ಕಿ 2898  ಎಡಿʼ; ಇಲ್ಲಿಯವರೆಗೆ ಕಲೆಕ್ಷನ್‌ ಮಾಡಿದ್ದೆಷ್ಟು?

Dengue Fever In Children
ಆರೋಗ್ಯ49 mins ago

Dengue Fever In Children: ಮಗುವಿನ ಮೈ ಬಿಸಿ ಆಗಿದೆಯೇ? ಡೆಂಗ್ಯು ಜ್ವರದ ಲಕ್ಷಣಗಳನ್ನು ತಿಳಿದುಕೊಳ್ಳಿ

Teachers Transfer
ಶಿಕ್ಷಣ51 mins ago

Teachers Transfer: 10 ವರ್ಷ ಒಂದೇ ಕಡೆ ಇದ್ದ 5,000 ಶಿಕ್ಷಕರ ವರ್ಗಾವಣೆ

Death Penalty
ದೇಶ55 mins ago

Death Penalty: 34 ಕೋಟಿ ರೂ. ದಂಡ ಪಾವತಿ; ಸೌದಿ ಅರೇಬಿಯಾದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಕೇರಳದ ವ್ಯಕ್ತಿಗೆ ಕೊನೆಗೂ ಬಿಡುಗಡೆ ಭಾಗ್ಯ

board exam
ಪ್ರಮುಖ ಸುದ್ದಿ58 mins ago

Board Exam: ಈ ವರ್ಷ 5, 8, 9ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ಇಲ್ಲ: ಶಿಕ್ಷಣ ಇಲಾಖೆ

T20 World Cup 2024
ಕ್ರಿಕೆಟ್1 hour ago

T20 World Cup 2024: ವಿವಾದಾತ್ಮಕ ಕ್ಯಾಚ್​ನ ಮತ್ತೊಂದು ವಿಡಿಯೊ ವೈರಲ್​

Salman Khan shares new pic from for Sikandar
ಸಿನಿಮಾ1 hour ago

Salman Khan: ಸಲ್ಮಾನ್ ಖಾನ್ ಹೊಸ ಲುಕ್‌ ವೈರಲ್‌: ‘ಸಿಕಂದರ್’ಗೆ ಫ್ಯಾನ್ಸ್‌ ಫಿದಾ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ3 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ4 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು4 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ5 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ5 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ6 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ7 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ7 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌