ಉದ್ಯೋಗಿಯೊಬ್ಬ ರಜೆ ಕೇಳಿ ಬಾಸ್‌ಗೆ ಕಳಿಸಿದ ಇ-ಮೇಲ್‌ ವೈರಲ್‌; ಪ್ರಾಮಾಣಿಕತೆ ಮೆಚ್ಚುವಂಥದ್ದು ! - Vistara News

ವೈರಲ್ ನ್ಯೂಸ್

ಉದ್ಯೋಗಿಯೊಬ್ಬ ರಜೆ ಕೇಳಿ ಬಾಸ್‌ಗೆ ಕಳಿಸಿದ ಇ-ಮೇಲ್‌ ವೈರಲ್‌; ಪ್ರಾಮಾಣಿಕತೆ ಮೆಚ್ಚುವಂಥದ್ದು !

Viral News: ಕೆಲವೊಂದು ಸನ್ನಿವೇಶದಲ್ಲಿ ರಜೆ ಕೇಳುವಾಗ ಸುಳ್ಳು ಹೇಳುವುದು ಅನಿವಾರ್ಯ ಇರುತ್ತದೆ. ಆದರೆ ಈ ಉದ್ಯೋಗಿ ಅಂಥ ಸಂದರ್ಭದಲ್ಲೂ ಸತ್ಯವನ್ನೇ ಹೇಳಿದ್ದಾರೆ.

VISTARANEWS.COM


on

E Mail for Leave
ಸಾಂಕೇತಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಖಾಸಗಿ ಕಂಪನಿಯಿರಲಿ, ಸರ್ಕಾರಿ ಕಚೇರಿಯೇ ಇರಲಿ ಉದ್ಯೋಗಿಗಳಿಗೆ ರಜೆ ಬೇಕೆಂದರೆ ಬಾಸ್‌ ಬಳಿ ಮನವಿ ಮಾಡಬೇಕು. ರಜಾ ಅರ್ಜಿಯನ್ನೂ ಸಲ್ಲಿಸಬೇಕು. ಕೆಲವು ಕಂಪನಿಗಳಲ್ಲಿ ರಜೆ ಕೇಳುವವರು ಕಡ್ಡಾಯವಾಗಿ ಕಾರಣವನ್ನೂ ತಿಳಿಸಬೇಕು ಎಂದು ನಿಯಮ ಮಾಡಿಡಲಾಗುತ್ತದೆ. ʼಮದುವೆಗೆ ಹೋಗಬೇಕು, ಆರೋಗ್ಯ ಸರಿಯಿಲ್ಲ, ಊರಿಗೆ ಹೋಗಬೇಕು, ಮನೆಯಲ್ಲಿ ಪೂಜೆಯಿದೆ..ʼ ಇತ್ಯಾದಿ ಕಾರಣಕ್ಕೆ ರಜಾ ತೆಗೆದುಕೊಳ್ಳುತ್ತಿದ್ದರೆ ಅದನ್ನು ಉಲ್ಲೇಖಿಸಿಬಿಡಬಹುದು. ಆದರೆ ಕೆಲವು ಸನ್ನಿವೇಶಗಳಲ್ಲಿ ಸುಳ್ಳು ಕಾರಣವನ್ನೇ ಕೊಡಬೇಕಾಗುತ್ತದೆ.

ಉದಾಹರಣೆಗೆ, ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿರುವಾಗ, ಇನ್ನೊಂದು ಕಂಪನಿಗೆ ಇಂಟರ್‌ವ್ಯೂಗೆ ಹೋಗಲು ರಜಾ ಕೇಳಬೇಕೆಂದರೆ, ಬಾಸ್‌ಗೆ ಅದೇ ಕಾರಣ ಹೇಳಲು ಸಾಧ್ಯವಿದೆಯೇ?-ಬಹುಶಃ ನಮ್ಮಲ್ಲಿ ಅನೇಕರಿಗೆ ಆಗೋದಿಲ್ಲ. ʼಅಯ್ಯೋ..ಇನ್ನೊಂದು ಕಂಪನಿಗೆ ಇಂಟರ್‌ವ್ಯೂಗೆ ಹೋಗುತ್ತೇನೆಂದು ಈ ಕಂಪನಿಯ ಬಾಸ್‌ಗೆ ಹೇಳಿದರೆ ಏನಾಗಬಹುದು?-ಇಲ್ಲಿಯೂ ಕೆಲಸದಿಂದ ತೆಗೆದು, ಅಲ್ಲೂ ಸಿಗದೆ ಇದ್ದರೆ ಏನು ಮಾಡುವುದು?ʼ ಎಂದೇ ಭಾವಿಸುತ್ತೇವೆ. ಹಾಗಾಗಿ ಮತ್ತೊಂದು ಸಂಸ್ಥೆಯಿಂದ ಆಫರ್‌ ಲೆಟರ್‌ ಸಿಗುವವರೆಗೂ ಗುಟ್ಟಾಗಿಯೇ ಇಡುತ್ತೇವೆ. ಆದರೆ ನಮ್ಮಂತೆ ಎಲ್ಲರೂ ಇರುತ್ತಾರಾ? ಖಂಡಿತ ಇಲ್ಲ. ಇಲ್ಲೊಬ್ಬ ಉದ್ಯೋಗಿ ತನ್ನ ಮೇಲಧಿಕಾರಿಗೆ ರಜಾ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಕಾರಣವನ್ನು ಅತ್ಯಂತ ಸ್ಪಷ್ಟವಾಗಿ ಮತ್ತು ಪ್ರಾಮಾಣಿಕವಾಗಿ ನಮೂದಿಸಿದ್ದಾರೆ. ʼಡಿಯರ್‌ ಸರ್‌, ಗುಡ್‌ ಮಾರ್ನಿಂಗ್‌. ನನಗೆ ಇಂದು ಬೇರೊಂದು ಕಂಪನಿಯಲ್ಲಿ ಇಂಟರ್‌ವ್ಯೂದಲ್ಲಿ ಪಾಲ್ಗೊಳ್ಳಬೇಕಾಗಿದೆ. ಹಾಗಾಗಿ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ರಜೆ ಕೊಡಿʼ ಎಂದು ಇ-ಮೇಲ್‌ನಲ್ಲಿ ಬರೆದಿದ್ದಾರೆ. ಉದ್ಯೋಗಿ ಮಾಡಿದ ಇ-ಮೇಲ್‌ನ ಫೋಟೋ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: Viral News: 6 ಮಂದಿ ಕಾಮುಕರಿಗೆ ಒಬ್ಬಳೇ ಹುಡುಗಿ ಹೆಂಗೆ ಹೊಡೀತಾಳೆ ನೋಡಿ! ಹೆಣ್ಮಕ್ಕಳೇ ಸ್ಟ್ರಾಂಗು ಗುರು!

ಸಾಹಿಲ್‌ ಎಂಬುವರು ಈ ಫೋಟೋ ಶೇರ್‌ ಮಾಡಿಕೊಂಡಿದ್ದು, ʼನನ್ನ ಜ್ಯೂನಿಯರ್ಸ್‌ ಎಷ್ಟು ಒಳ್ಳೆಯವರು ಎಂದರೆ, ಅವರು ಇನ್ನೊಂದು ಕಂಪನಿಗೆ ಸಂದರ್ಶನಕ್ಕೆ ಹೋಗುವುದಾಗಿ ಸತ್ಯವನ್ನೇ ಹೇಳಿ ರಜೆ ತೆಗೆದುಕೊಳ್ಳುತ್ತಾರೆʼ ಎಂದು ಕ್ಯಾಪ್ಷನ್‌ ಬರೆದಿದ್ದಾರೆ. ಅದನ್ನು ನೋಡಿದ ನೆಟ್ಟಿಗರು ಉದ್ಯೋಗಿಯನ್ನು ತುಂಬ ಹೊಗಳಿದ್ದಾರೆ. ʼಇಂಥವರು ನಿಜಕ್ಕೂ ನಂಬಿಕಸ್ಥರುʼ, ʼಈತ ಅತ್ಯಂತ ಪ್ರಾಮಾಣಿಕʼ ಎಂಬಿತ್ಯಾದಿ ಹೊಗಳಿಕೆಯ ಕಮೆಂಟ್‌ಗಳನ್ನು ಬರೆದಿದ್ದಾರೆ.

ಇದನ್ನೂ ಓದಿ: 35 ಸಾವಿರ ಅಡಿ ಎತ್ತರದಲ್ಲಿ ನಡೆಯಬಹುದಾಗಿದ್ದ ವಿಮಾನಗಳ ಡಿಕ್ಕಿಯನ್ನು ಪೈಲಟ್‌ ತಪ್ಪಿಸಿದ್ದು ಹೇಗೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral News: ಕೊಳದಲ್ಲಿ ತೇಲುತ್ತಿದ್ದ ದೇಹ ಮೇಲೆತ್ತಲು ಹೋದ ಪೊಲೀಸರು! ಹೆಣ ನಡೆಯತೊಡಗಿತು!

Viral News: ವ್ಯಕ್ತಿಯ ದೇಹವೊಂದು ನೀರಿನಲ್ಲಿ ತೇಲುತ್ತಿರುವುದನ್ನು ಕಂಡು ಹೆದರಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್ ತಂಡ ವ್ಯಕ್ತಿ ಸತ್ತಿದ್ದಾನೆ ಎಂದು ಎತ್ತಲು ಹೋದಾಗ ಶಾಕ್‌ ಆಗಿದ್ದಾರೆ. ತೆಲಂಗಾಣದಲ್ಲಿ ಈ ಘಟನೆ ನಡೆದಿದೆ. ಈ ಕುರಿತ ವಿಡಿಯೊ ಇಲ್ಲಿದೆ ನೋಡಿ.

VISTARANEWS.COM


on

Viral News
Koo

ತೆಲಂಗಾಣ: ಕೊಳದಲ್ಲಿ, ನದಿಯಲ್ಲಿ ಹೆಣಗಳು ತೇಲುತ್ತಿರುವ ಘಟನೆಯನ್ನು ನಾವು ಹಲವು ಬಾರಿ ನೋಡಿರುತ್ತೇವೆ ಹಾಗೂ ಈ ತರಹದ ಘಟನೆಯ ಬಗ್ಗೆ ಕೇಳಿರುತ್ತೇವೆ. ವ್ಯಕ್ತಿಯನ್ನು ಯಾರಾದರೂ ಕೊಂದು ನದಿಗೆ ಎಸೆದಿರುತ್ತಾರೆ ಅಥವಾ ವ್ಯಕ್ತಿಯೇ ಜೀವನದ ಕಷ್ಟಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಆಗ ಅವರ ಹೆಣ ನೀರಿನ ಮೇಲೆ ಬಂದು ತೇಲುತ್ತಿರುತ್ತದೆ. ಇಂತಹದ್ದೇ ಒಂದು ಘಟನೆ ಹನಮಕೊಂಡನಗರದಲ್ಲಿ ನಡೆದಿದೆ. ಹೆಣ ತೇಲುತ್ತಿದೆ ಎಂದು ಎತ್ತಲು ಹೋದ ಪೊಲೀಸ್‌ ತಂಡ ಬೇಸ್ತು ಬಿದ್ದಿದ್ದಾರೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್‌ (Viral News) ಆಗಿದೆ.

ವ್ಯಕ್ತಿಯ ದೇಹವೊಂದು ನೀರಿನಲ್ಲಿ ತೇಲುತ್ತಿರುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್ ತಂಡ ವ್ಯಕ್ತಿಯ ದೇಹವನ್ನು ಎತ್ತಲು ಹೋದಾಗ ಆ ವ್ಯಕ್ತಿ ಎದ್ದು ನಿಂತಿದ್ದಾನೆ. ಸತ್ತಿದ್ದಾನೆ ಎಂದುಕೊಂಡ ವ್ಯಕ್ತಿ ಎದ್ದು ನಿಂತು ಮಾತನಾಡಿದರೆ ಯಾರಿಗೆ ತಾನೆ ಭಯವಾಗುವುದಿಲ್ಲ? ಅದೇ ರೀತಿ ಪೊಲೀಸರು ಈ ಘಟನೆಯಿಂದ ದಿಗ್ಭ್ರಮೆಗೊಂಡಿದ್ದಾರೆ.

ಹೆಣ ಎತ್ತಲು ಹೋದಾಗ ಎದ್ದು ನಿಂತ ವ್ಯಕ್ತಿ!

ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ವ್ಯಕ್ತಿ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ನಿವಾಸಿಯಾಗಿದ್ದು, ಕಾಜಿಪೇಟೆಯ ಡೀಸೆಲ್ ಕಾಲೋನಿಯಲ್ಲಿ ವಾಸವಾಗಿದ್ದ. ಅವನು ಗ್ರಾನೈಟ್ ಗಣಿಯಲ್ಲಿ ಕೆಲಸ ಮಾಡುತ್ತಿದ್ದು, ಬಿಸಿಲಿನ ತಾಪದಲ್ಲಿ ಸುಮಾರು ಹನ್ನೆರಡು ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡಿ ಸುಸ್ತಾದ ಕಾರಣ ಸ್ವಲ್ಪ ವಿಶ್ರಾಂತಿ ಪಡೆಯಲು ಕೊಳಕ್ಕೆ ಇಳಿದಿರುವುದಾಗಿ ತಿಳಿಸಿದ್ದಾನೆ. ಹಾಗೇ ವಿಶ್ರಾಂತಿ ಪಡೆಯುತ್ತಿದ್ದ ಆತ ಅಲ್ಲೇ ನಿದ್ರೆಗೆ ಜಾರಿದ. ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಆತನ ದೇಹ ಕೊಳದಲ್ಲಿ ತೇಲುತ್ತಿರುವುದನ್ನು ಕಂಡು ಸ್ಥಳೀಯರು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ಬಂದು ವ್ಯಕ್ತಿಯ ದೇಹವನ್ನು ಎತ್ತಲು ಹೋದಾಗ ಆತ ಎದ್ದು ನಿಂತಿದ್ದಾನೆ.

ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತಾಪ ಎಷ್ಟಿದೆ ಎಂದರೆ ಜನರು ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬಿಸಿಲಿನ ತಾಪವನ್ನು ಸಹಿಸಲಾಗದೆ ಹೆಚ್ಚಿನ ಜನರು ನದಿ, ಕೊಳದಲ್ಲೇ ಮುಳುಗಿಕೊಂಡು ಹೆಚ್ಚು ಸಮಯ ಕಳೆಯುತ್ತಿದ್ದರು. ಇದಕ್ಕೆ ಈಗ ಈ ಘಟನೆಯು ಒಂದು ಸಾಕ್ಷಿಯಾಗಿದೆ.

ಇದನ್ನೂ ಓದಿ: salaries of prime minister: ರಾಷ್ಟ್ರಪತಿ, ಪ್ರಧಾನಿಗೆ ಸಂಬಳ, ಸೌಲಭ್ಯ ಎಷ್ಟಿರುತ್ತವೆ ಗೊತ್ತೆ?

ಅಲ್ಲದೇ ಕಳೆದವಾರ ರಾಜ್ಯದ ನಲ್ಗೊಂಡ ನಗರದ ನೀರಿನ ತೊಟ್ಟಿಯಲ್ಲಿ ವ್ಯಕ್ತಿಯ ಶವವೊಂದು ಪತ್ತೆಯಾಗಿತ್ತು. ಈ ವಿಚಾರ ತಿಳಿಯದೇ ಜನರು ಅದೇ ನೀರನ್ನು ಸೇವಿಸುತ್ತಿದ್ದರು. ಈ ಬಗ್ಗೆ ಪೊಲೀಸ್ ತನಿಖೆ ನಡೆದಿದ್ದು, ಸತ್ತ ವ್ಯಕ್ತಿ ಅವುಲಾ ವಂಶಿ ಎಂದು ತಿಳಿದುಬಂದಿದ್ದು, ಮೇ 24ರಿಂದ ಕಾಣೆಯಾಗಿದ್ದ. ನಂತರ ಕುಟುಂಬದವರು ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ಮರಣೋತ್ತರ ಪರೀಕ್ಷೆಯ ನಂತರ ಆತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

Continue Reading

ವೈರಲ್ ನ್ಯೂಸ್

YouTuber Dhruv Rathee: ಧ್ರುವ ರಾಥಿಯ ಮೋದಿ ವಿರೋಧಿ ವಿಡಿಯೊ ಗೊತ್ತು; ಅವರ ಲವ್‌ ಸ್ಟೋರಿ ಗೊತ್ತಾ?

ಜರ್ಮನಿ ಕನ್ಯೆಯೊಂದಿಗಿನ ಪ್ರೇಮ ಆರಂಭದಿಂದ ವಿವಾಹದ ಬಂಧನದವರೆಗಿನ ಕಥೆಯನ್ನು ಭಾರತೀಯ ಯೂಟ್ಯೂಬರ್ ಧ್ರುವ ರಾಥಿ (YouTuber, Dhruv Rathee) ಹೇಳಿಕೊಂಡಿದ್ದಾರೆ. ಜರ್ಮನ್ ನ ಜೂಲಿ ಎಲ್ಬ್ರ್ ಅವರೊಂದಿಗಿನ ಮೊದಲ ಭೇಟಿ, ಮದುವೆ ಯಾವಾಗ, ಹೇಗೆ ನಡೆಯಿತು ಮೊದಲಾದ ವಿಷಯಗಳನ್ನು ಅವರು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

VISTARANEWS.COM


on

By

YouTuber Dhruv Rathee
Koo

ಮೋದಿ ಅಭಿಮಾನಿಗಳು ಮತ್ತು ವಿರೋಧಿಗಳಿಬ್ಬರಿಗೂ ಯೂಟ್ಯೂಬರ್‌ ಧ್ರುವ ರಾಥಿ ಗೊತ್ತು. ಮೋದಿ ಮತ್ತು ಅವರ ಸರ್ಕಾರದ ವಿರುದ್ಧ ಹರಿತ ವಿಡಿಯೊಗಳನ್ನು ಮಾಡುವ ಮೂಲಕ ಇವರು ಖ್ಯಾತರಾಗಿದ್ದಾರೆ. ಆದರೆ ಇವರ ಪ್ರೀತಿ, ಪ್ರೇಮ, ಪ್ರಣಯದ ಕತೆ ನಿಮಗೆ ಗೊತ್ತೆ? ಯೂಟ್ಯೂಬರ್ ಧ್ರುವ ರಾಥಿ (YouTuber Dhruv Rathee) ತಮ್ಮ ಪ್ರೇಮ ಕಥೆಯನ್ನು (Love story) ಹಂಚಿಕೊಂಡಿದ್ದಾರೆ. ಜರ್ಮನ್‌ನ (Germany) ಜೂಲಿ ಎಲ್ಬ್ರ್ (Juli Lbr) ಅವರೊಂದಿಗಿನ ಮೊದಲ ಭೇಟಿ, ಯಾವಾಗ ಪ್ರೀತಿಯಾಯಿತು, ಮದುವೆ ಯಾವಾಗ, ಹೇಗೆ ನಡೆಯಿತು ಮೊದಲಾದ ವಿಷಯಗಳನ್ನು ಅವರು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

17.3 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿರುವ ಧ್ರುವ ರಾಥಿ ಪ್ರಸಿದ್ಧ ಭಾರತೀಯ ಯೂಟ್ಯೂಬರ್‌ಗಳಲ್ಲಿ ಒಬ್ಬರು. ಪ್ರವಾಸದ ವಿಷಯದ ಕುರಿತೂ ಅವರು ಸದಾ ಮಾಹಿತಿಗಳನ್ನು ನೀಡುತ್ತಿರುತ್ತಾರೆ. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹರಿಯಾಣದ ಶಾಲೆಯಲ್ಲಿ ಪೂರ್ಣಗೊಳಿಸಿದರು. ಜರ್ಮನಿಯಲ್ಲಿ ಹೆಚ್ಚಿನ ಅಧ್ಯಯನವನ್ನು ಮುಂದುವರೆಸಿದ ಅವರು ನವೀಕರಿಸಬಹುದಾದ ಇಂಧನ ವಿಷಯದಲ್ಲಿ ಎಂಜಿನಿಯರಿಂಗ್‌ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದಾರೆ.

ಧ್ರುವ ಅವರ ವೃತ್ತಿಪರ ಜೀವನ ಮತ್ತು ವ್ಲಾಗ್‌ಗಳ ಬಗ್ಗೆ ಅವರ ಅಭಿಮಾನಿಗಳಿಗೆ ತಿಳಿದಿದ್ದರೂ ಅವರ ಜರ್ಮನ್ ಪತ್ನಿ ಜೂಲಿ ಎಲ್ಬ್ರ್ ಅವರೊಂದಿಗಿನ ಪ್ರೇಮಕಥೆಯ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. 2021ರಲ್ಲಿ ಧ್ರುವ ಮತ್ತು ಜೂಲಿ ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಬೆಲ್ವೆಡೆರೆ ಅರಮನೆಯಲ್ಲಿ ವಿವಾಹವಾದರು. ಅದೂ ಒಂದೆರಡು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ಬಳಿಕ. ಆದರೂ ಅವರು ತಮ್ಮ ಸಂಬಂಧವನ್ನು ಮಾಧ್ಯಮದಿಂದ ಮತ್ತು ಅಭಿಮಾನಿಗಳ ಊಹಾಪೋಹಗಳಿಂದ ದೂರವಿಟ್ಟಿದ್ದರು. 2022ರಲ್ಲಿ ಅವರು ಹಿಂದೂ ಸಂಸ್ಕೃತಿಯಂತೆ ಮತ್ತೆ ವಿವಾಹವಾದರು.

ಜೂಲಿ ಎಲ್ಬ್ರ್ ಅವರೊಂದಿಗೆ ಮೊದಲ ಭೇಟಿ

ಸಂದರ್ಶನವೊಂದರಲ್ಲಿ ಈ ಕುರಿತು ಮಾಹಿತಿ ನೀಡಿರುವ ಧ್ರುವ, 2014ರಲ್ಲಿ ಜೂಲಿಯೊಂದಿಗಿನ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡರು. ಅವರು ಮೊದಲ ಬಾರಿಗೆ ರೈಲಿನಲ್ಲಿ ಜೂಲಿ ಅವರನ್ನು ಭೇಟಿಯಾಗಿದ್ದರು. ಆಗ ತಮ್ಮಿಬ್ಬರಿಗೂ 19 ವರ್ಷ ವಯಸ್ಸಾಗಿತ್ತು ಎಂದು ಹೇಳಿದರು. ಧ್ರುವ ತಮ್ಮ ಇಂಟರ್ನ್‌ಶಿಪ್‌ಗಾಗಿ ರೈಲು ಮೂಲಕ ಹೋಗುತ್ತಿದ್ದಾಗ ಜೂಲಿ ಶಾಲೆಗೆ ಹೋಗುತ್ತಿದ್ದರು. ಅವರು ಪ್ರತಿದಿನ ರೈಲಿನಲ್ಲಿ ಪರಸ್ಪರ ಭೇಟಿಯಾಗುತ್ತಿದ್ದರು ಮತ್ತು ಮಾತನಾಡಲು ಪ್ರಾರಂಭಿಸಿದರು. ಧ್ರುವ ಅವರು ತಮ್ಮ ಯೂಟ್ಯೂಬ್ ಪ್ರಯಾಣವನ್ನು ಪ್ರಾರಂಭಿಸಿದ್ದು ಅದೇ ವರ್ಷ ಎಂದು ಹೇಳಿದ್ದಾರೆ.


ಕನಸಿನಂತೆ ಮದುವೆ

2021ರ ನವೆಂಬರ್ 24ರಂದು, ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಬೆಲ್ವೆಡೆರೆ ಅರಮನೆಯಲ್ಲಿ ಆತ್ಮೀಯರ ಸಮ್ಮುಖದಲ್ಲಿ ಧ್ರುವ ಅವರು ತಮ್ಮ ದೀರ್ಘಕಾಲದ ಗೆಳತಿ ಜೂಲಿಯನ್ನು ವಿವಾಹವಾದರು. ಈ ಕುರಿತು ಇನ್ ಸ್ಟಾ ಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡ ಕೆಲವೇ ಕ್ಷಣದಲ್ಲಿ ಅದು ಭಾರೀ ವೈರಲ್ ಆಗಿತ್ತು. ಜೂಲಿ ಅವರು ಬಿಳಿ ಗೌನ್ ಧರಿಸಿದ್ದು, ಧ್ರುವ ನೇವಿ ಬ್ಲೂ ಧಿರಿಸಿನಲ್ಲಿ ಮಿಂಚಿದ್ದರು.

ಕೋವಿಡ್ ಸಾಂಕ್ರಾಮಿಕದ ಸಮಯವಾದ್ದರಿಂದ ಇವರ ಮದುವೆಯಲ್ಲಿ ಕೇವಲ 22 ಮಂದಿ ಆತ್ಮೀಯರು ಮಾತ್ರ ಪಾಲ್ಗೊಂಡಿದ್ದರು. ಮದುವೆಯ ಅನಂತರ ದಂಪತಿ ಕೆಲ ಕಾಲ ಜರ್ಮನಿಯ ಬರ್ಲಿನ್‌ನಲ್ಲಿ ನೆಲೆಸಿದ್ದರು. ಅವರು ಆಗಾಗ್ಗೆ ತಮ್ಮ ಜೀವನದ ಕೆಲವೊಂದು ಸುಂದರ ಕ್ಷಣಗಳನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.


ಹಿಂದೂ ಸಂಸ್ಕೃತಿಯಂತೆ ವಿವಾಹ

ಧ್ರುವ ಅವರು ಪತ್ನಿ ಜೂಲಿಯೊಂದಿಗೆ 2022ರಲ್ಲಿ ಭಾರತಕ್ಕೆ ಬಂದರು. ಬಳಿಕ ಇಲ್ಲಿ ದಂಪತಿ ಹಿಂದೂ ಸಂಪ್ರದಾಯಗಳ ಪ್ರಕಾರ ಎರಡನೇ ಬಾರಿಗೆ ವಿವಾಹವಾದರು. ಈ ಕುರಿತು ಧ್ರುವ ಅವರು ವಿಡಿಯೋವನ್ನು ತಮ್ಮ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದಾರೆ. ಜೂಲಿ ಅವರು ಭಾರವಾದ ಕಸೂತಿ ಇರುವ ಕೆಂಪು ಬಣ್ಣದ ಲೆಹೆಂಗಾವನ್ನು ಧರಿಸಿದ್ದರು. ಇದರೊಂದಿಗೆ ಚೋಕರ್, ಕಿವಿಯೋಲೆ ಮತ್ತು ಮೂಗುತಿ ಯೊಂದಿಗೆ ಹಿಂದೂ ವಧುವಿನಂತೆ ಕಂಗೊಳಿಸಿದ್ದಾರೆ. ಮತ್ತೊಂದೆಡೆ ಧ್ರುವ ಅವರು ಪೇಟದೊಂದಿಗೆ ಶೇರ್ವಾನಿ ಧರಿಸಿದ್ದರು.

ಇದನ್ನೂ ಓದಿ: MS Dhoni Fan: ಪ್ಯಾರಿಸ್​ನಲ್ಲಿ ಧೋನಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅಭಿಮಾನಿ

ಜೂಲಿಗೆ ಹಿಂದಿ ಗೊತ್ತು

ಧ್ರುವ ದಂಪತಿ ಪರಸ್ಪರರ ಸಂಸ್ಕೃತಿ, ಭಾಷೆ ಮತ್ತು ಸಂಪ್ರದಾಯಗಳನ್ನು ಅನುಸರಿಸಲು ಇಷ್ಟಪಡುತ್ತಾರೆ. ಧ್ರುವ ಅವರು ಜರ್ಮನ್ ಭಾಷೆ ತಿಳಿದಿದ್ದು, ಅವರ ಪತ್ನಿ ಜೂಲಿ ಹಿಂದಿ ಕಲಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಧ್ರುವ ಅವರು ತಮ್ಮ ಪತ್ನಿ ಜೂಲಿಗಿಂತ ಉತ್ತಮವಾಗಿ ಜರ್ಮನ್ ಮಾತನಾಡುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಜೂಲಿ ಅವರಿಗೆ ಹಿಂದಿ ಸ್ವಲ್ಪ ಕಠಿಣವೆಂದು ಪರಿಗಣಿಸಿದ್ದಾರೆ.

ಧ್ರುವ ರಾಥಿ ಅವರ ಆಸ್ತಿ ಎಷ್ಟು?

ಧ್ರುವ ರಾಥಿ ಅವರು ಕಂಠದಾನ ಮಾಡುತ್ತಾರೆ ಮತ್ತು ಆಗಾಗ ಯೂಟ್ಯೂಬ್‌ನಲ್ಲಿ ತಮ್ಮ ಅನುಭವ, ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅವರ ನಿವ್ವಳ ಸಂಪತ್ತು ಸುಮಾರು 4 ಮಿಲಿಯನ್ ಡಾಲರ್ ಅಂದರೆ, ಸುಮಾರು 33 ಕೋಟಿ ರೂ. ಆಗಿದೆ. ಯೂಟ್ಯೂಬ್ ಚಾನಲ್ ಮತ್ತು ವಿವಿಧ ಬ್ರ್ಯಾಂಡ್‌ಗಳ ಸಹಯೋಗವೇ ಅವರ ಪ್ರಾಥಮಿಕ ಆದಾಯದ ಮೂಲವಾಗಿದೆ.

Continue Reading

ದೇಶ

All Eyes on Raesi: ಹಿಂದೂ ಯಾತ್ರಿಕರ ಹತ್ಯೆ: ಆಲ್ ಐಸ್ ಆನ್ ರಿಯಾಸಿ; ರಫಾ ರಫಾ ಅನ್ನುತ್ತಿದ್ದ ಸೆಲೆಬ್ರಿಟಿಗಳು ಈಗೆಲ್ಲಿ?

All Eyes on Raesi: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಭಾನುವಾರ (ಜೂನ್ 9) ನಡೆದ ಭಯೋತ್ಪಾದಕರ ಗುಂಡಿನ ದಾಳಿಯ ಸಂದರ್ಭದಲ್ಲಿ, ಪುಟ್ಟ ಕಂದಮ್ಮನೂ ಸೇರಿ 10 ಮಂದಿ ಮೃತಪಟ್ಟಿದ್ದಾರೆ. ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ʼಆಲ್ ಐಸ್ ಆನ್ ರಿಯಾಸಿʼ (All Eyes on Raesi) ಎನ್ನುವ ಪೋಸ್ಟ್‌ ವೈರಲ್‌ ಆಗಿದೆ. ಮಾತ್ರವಲ್ಲ ಈ ಹಿಂದೆ ʼಆಲ್ ಐಸ್ ಆನ್ ರಫಾʼ ಎನ್ನುವ ಪೋಸ್ಟ್‌ ಹಂಚಿಕೊಂಡು ರಫಾ (ಪ್ಯಾಲೆಸ್ತೀನ್‌) ಜನರಿಗಾಗಿ ಕಂಬನಿ ಸುರಿಸಿದ್ದ ಸೆಲೆಬ್ರಿಟಿಗಳು ಈಗ ಮೌನವಾಗಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಸೆಲೆಬ್ರಿಟಿಗಳ ಇಬ್ಬಗೆಯ ನೀತಿಯನ್ನು ಹಲವರು ಪ್ರಶ್ನಿಸಿದ್ದಾರೆ.

VISTARANEWS.COM


on

All Eyes on Raesi
Koo

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu & Kashmir) ರಿಯಾಸಿ ಜಿಲ್ಲೆಯಲ್ಲಿ ಭಾನುವಾರ (ಜೂನ್ 9) ನಡೆದ ಭಯೋತ್ಪಾದಕರ ಗುಂಡಿನ ದಾಳಿಯ (Reasi terror attack) ಸಂದರ್ಭದಲ್ಲಿ, ಪುಟ್ಟ ಕಂದಮ್ಮನೂ ಸೇರಿ 10 ಮಂದಿ ಮೃತಪಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಶಿವ ಖೋರಿ ದೇವಸ್ಥಾನಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ವೇಳೆ ಬಸ್‌ ಆಳವಾದ ಕಮರಿಗೆ ಬಿದ್ದು, ದುರಂತ ಸಂಭವಿಸಿದೆ. ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ʼಆಲ್ ಐಸ್ ಆನ್ ರಿಯಾಸಿʼ (All Eyes on Raesi) ಎನ್ನುವ ಪೋಸ್ಟ್‌ ವೈರಲ್‌ ಆಗಿದೆ. ಜತೆಗೆ ಈ ಹಿಂದೆ ʼಆಲ್ ಐಸ್ ಆನ್ ರಫಾʼ ಎನ್ನುವ ಪೋಸ್ಟ್‌ ಹಂಚಿಕೊಂಡು ರಫಾ (ಪ್ಯಾಲೆಸ್ತೀನ್‌) ಜನರಿಗಾಗಿ ಕಂಬನಿ ಸುರಿಸಿದ್ದ ಸೆಲೆಬ್ರಿಟಿಗಳು ಈಗ ಮೌನವಾಗಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.

ಇತ್ತೀಚೆಗೆ ಇಸ್ರೇಲ್‌ನ ವೈಮಾನಿಕ ದಾಳಿಯ ನಂತರ ದಕ್ಷಿಣ ಗಾಜಾದಲ್ಲಿ 45 ಮಂದಿ ಸಾವನ್ನಪ್ಪಿ, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಬಳಿಕ ದಕ್ಷಿಣ ಗಾಜಾದ ರಫಾ ನಗರದಲ್ಲಿನ ನಿರಾಶ್ರಿತರ ಶಿಬಿರದಲ್ಲಿ ಡೇರೆಗಳ ಚಿತ್ರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದರಲ್ಲಿ ʼಆಲ್ ಐಸ್ ಆನ್ ರಫಾʼ ಎಂದು ಬರೆದು, ರಫಾ ನಿರಾಶ್ರಿತರಿಗೆ ಬೆಂಬಲ ವ್ಯಕ್ತಪಡಿಸಲಾಗಿತ್ತು. ಈ ಪೋಸ್ಟ್‌ ಅನ್ನು ಭಾರತದ ಸೆಲೆಬ್ರಿಟಿಗಳೂ ಹಂಚಿಕೊಂಡಿದ್ದರು. ಪ್ರಿಯಾಂಕಾ ಚೋಪ್ರಾ, ವರುಣ್ ಧವನ್, ಆಲಿಯಾ ಭಟ್, ಸಮಂತಾ ರುತ್ ಪ್ರಭು, ತ್ರಿಪ್ತಿ ಡಿಮ್ರಿ, ರಿಚಾ ಚಡ್ಡಾ, ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್ ಮುಂತಾದ ಸೆಲೆಬ್ರಿಟಿಗಳು ʼಆಲ್ ಐಸ್ ಆನ್ ರಫಾʼ ಪೋಸ್ಟ್‌ ಹಂಚಿಕೊಂಡು ಕಂಬನಿ ಮಿಡಿದಿದ್ದರು. ಸದ್ಯ ಇವರೆಲ್ಲ ಭಾರತದಲ್ಲೇ ನಡೆದ ದುರಂತದ ಬಗ್ಗೆ ಮೌನ ವಹಿಸಿದ್ದು ನೆಟ್ಟಿಗರನ್ನು ಕೆರಳಿಸಿದೆ. ʼಆಲ್ ಐಸ್ ಆನ್ ರಿಯಾಸಿʼ ಎನ್ನುವ ಪೋಸ್ಟ್‌ ಈ ಸೆಲೆಬ್ರಿಟಿಗಳ ಸೋಷಿಯಲ್‌ ಮೀಡಿಯಾದಲ್ಲಿ ಯಾಕೆ ಕಾಣಿಸಿಕೊಂಡಿಲ್ಲ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

ಹಿಂದೂಗಳಿಗೆ ಯಾಕೆ ಮನಸ್ಸು ಮಿಡಿಯುತ್ತಿಲ್ಲ?

ʼʼದೂರದ ಪ್ಯಾಲೆಸ್ತೀನಿಯರಿಗಾಗಿ ಮಿಡಿದ ಸೆಲೆಬ್ರಿಟಿಗಳ ಮನಸ್ಸು ನಮ್ಮದೇ ದೇಶದ ಮುಗ್ಧರಿಗಾಗಿ ಯಾಕೆ ಮಿಡಿಯುತ್ತಿಲ್ಲ? ಭಯೋತ್ಪಾದನೆಗಾಗಿ ಬಲಿಯಾದ ಹಿಂದೂಗಳ ಬೆಂಬಲಕ್ಕೆ ಧಾವಿಸಲು ಸೆಲೆಬ್ರಿಟಿಗಳು ಮುಂದಾಗದಿರುವುದು ದುರಂತʼʼ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವರು ಸೋಷಿಯಲ್‌ ಮೀಡಿಯಾದ ಮೂಲಕ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ʼʼಎಲ್ಲರ ಕಣ್ಣು ರಫಾ ಮೇಲೆ ಎನ್ನುತ್ತಿದ್ದವರೆಲ್ಲ ಈಗ ಮೌನಕ್ಕೆ ಶರಣಾಗಿದ್ದಾರೆʼʼ ಎಂದು ಒಬ್ಬರು ರಿಯಾಸಿ ದುರಂತದ ಫೋಟೊವನ್ನು ಪೋಸ್ಟ್‌ ಮಾಡಿ ಸಿನಿಮಾ ನಟ-ನಟಿಯರಿಗೆ ಝಾಡಿಸಿದ್ದಾರೆ.

ʼʼಕೆಲವು ದಿನಗಳ ಹಿಂದೆ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಅವರ ಕಣ್ಣು ರಫಾದತ್ತ ನೆಟ್ಟಿತ್ತು. ಈಗ ಅವರ ಕಣ್ಣು ಮುಚ್ಚಿದೆ. ಅವರಿಗೆ ಮುಸ್ಲಿಂ ಭಯೋತ್ಪಾದಕರು ಹಿಂದೂ ಯಾತ್ರಾರ್ಥಿಗಳನ್ನು ಹತ್ಯೆ ಮಾಡಿರುವುದು ಕಾಣಿಸುತ್ತಿಲ್ಲʼʼ ಎಂದು ಇನ್ನೊಬ್ಬರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಜತೆಗೆ ರೋಹಿತ್‌ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್, ಮಾಧುರಿ ದೀಕ್ಷಿತ್‌ ಮುಂತಾದವರ ಮೌನವನ್ನೂ ಟೀಕಿಸಿದ್ದಾರೆ. ಒಟ್ಟಿನಲ್ಲಿ ಸೆಲೆಬ್ರಿಟಿಗಳ ಇಬ್ಬಗೆಯ ನೀತಿ ಮತ್ತೊಮ್ಮೆ ಬಟಾ ಬಯಲಾಗಿದೆ.

ಇದನ್ನೂ ಓದಿ: Terror Attack: ಕಂದಮ್ಮನನ್ನೂ ಕೊಂದ ಉಗ್ರರು; ಎದೆಗೆ ಗುಂಡು ಬಿದ್ದರೂ ಪ್ರಯಾಣಿಕರನ್ನು ಉಳಿಸಲು ಯತ್ನಿಸಿದ್ದ ಚಾಲಕ

Continue Reading

ಕ್ರೀಡೆ

IND vs PAK: ಟ್ರ್ಯಾಕ್ಟರ್ ಮಾರಿ ಭಾರತ-ಪಾಕ್​ ಪಂದ್ಯ ವೀಕ್ಷಿಸಿ ಕಣ್ಣೀರು ಹಾಕಿದ ಅಭಿಮಾನಿ

IND vs PAK: ಭಾರತ ಮತ್ತು ಪಾಕ್​ ಪಂದ್ಯ ವೀಕ್ಷಿಸಲು ಪಾಕ್​ ಅಭಿಮಾನಿಯೊಬ್ಬ ಕರಾಚಿಯಿಂದ ನ್ಯೂಯಾರ್ಕ್​ಗೆ ಬಂದಿದ್ದ. ಈತ ತನ್ನ ಟ್ರ್ಯಾಕ್ಟರ್ ಮಾರಿ ಪಂದ್ಯವನ್ನು ನೋಡಲು ಆಗಮಿಸಿದ್ದ.

VISTARANEWS.COM


on

IND vs PAK
Koo

ನ್ಯೂಯಾರ್ಕ್​: ಭಾರತ ಮತ್ತು ಪಾಕಿಸ್ತಾನ(IND vs PAK) ಪಂದ್ಯದ ಜೋಶ್‌ ದೊಡ್ಡ ಮಟ್ಟದಲ್ಲೇ ಇರುತ್ತದೆ. ಅಕ್ಷರಶಃ ಇದೊಂದು ಕದನವೇ ಆಗಿರುತ್ತದೆ. ಗೆದ್ದರೆ ಯುದ್ಧವನ್ನೇ ಜಯಿಸಿದ ಮಹಾಸಂಭ್ರಮ. ಅಭಿಮಾನಿಗಳು ಕೂಡ ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ದುಬಾರಿ ಬೆಲೆಯ ಟಿಕೆಟ್​ ಕೊಂಡುಕೊಳ್ಳಲು ಹಿಂದೇಟು ಹಾಕುವುದಿಲ್ಲ. ಪಾಕ್​ ತಂಡದ ಅಭಿಮಾನಿಯೊಬ್ಬ ತನ್ನ ಟ್ರ್ಯಾಕ್ಟರ್(Pakistani fan sells tractor) ಮಾರಿ ಲಕ್ಷಾಂತರ ರೂ ಖರ್ಚು ಮಾಡಿ ಪಂದ್ಯದ ಟಿಕೆಟ್​ ಖರೀದಿ ಮಾಡಿ ಪಂದ್ಯ ಸೋತ ಬಳಿಕ ಕಣ್ಣೀರು ಹಾಕಿದ್ದಾನೆ. ಈ ವಿಡಿಯೊ ವೈರಲ್​ ಆಗಿದೆ.

ಕಳೆದ ಭಾನುವಾರ ಭಾರತ ಮತ್ತು ಪಾಕ್​ ತಂಡಗಳು ಟಿ20 ವಿಶ್ವಕಪ್​ ಲೀಗ್​ ಹಂತದ ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಈ ಪಂದ್ಯವನ್ನು ಭಾರತ ಗೆದ್ದು ಬೀಗಿತ್ತು. ಈ ಪಂದ್ಯವನ್ನು ನೋಡಲು ಪಾಕ್​ ಅಭಿಮಾನಿಯೊಬ್ಬ ಕರಾಚಿಯಿಂದ ನ್ಯೂಯಾರ್ಕ್​ಗೆ ಬಂದಿದ್ದ. ಈತ ತನ್ನ ಟ್ರ್ಯಾಕ್ಟರ್ ಮಾರಿ ಪಂದ್ಯವನ್ನು ನೋಡಲು ಆಗಮಿಸಿದ್ದ. ಆದರೆ ಪಂದ್ಯ ಸೋತ ಕಾರಣ ಆತ ನಿರಾಸೆಗೊಂಡು ಕಣ್ಣೀರು ಹಾಕಿದ್ದಾನೆ. ಪಂದ್ಯದ ಬಳಿಕ ಎಎನ್​ಐ ಜತೆ ಮಾತನಾಡುವ ವೇಳೆ ಆತ ತಾನು ಟ್ರ್ಯಾಕ್ಟರ್ ಮಾರಿ ಪಂದ್ಯ ವೇಖ್ಷಣೆಗೆ ಬಂದ ವಿಚಾರವನ್ನು ತಿಳಿಸಿದ್ದಾನೆ. ಪಾಕ್​ ಆಟಗಾರರ ಕಳಪೆ ಪ್ರದರ್ಶನಕ್ಕೂ ಆತ ಆಕ್ರೋಶ ಹೊರಹಾಕಿದ್ದಾನೆ. ಇದರ ವಿಡಿಯೊ ವೈರಲ್​ ಆಗಿದೆ.

“ತಾನು ಸ್ಟೇಡಿಯಂನಲ್ಲೇ ಲೈವ್ ಆಗಿ ಪಂದ್ಯ ವೀಕ್ಷಿಸುವ ಸಲುವಾಗಿ ಮತ್ತು ನನ್ನ ದೇಶವನ್ನು ಬೆಂಬಲಿಸಲು ನನ್ನ ಟ್ರ್ಯಾಕ್ಟರ್‌ನ್ನು ಮಾರಿದೆ. (ಈ ಟಿಕೆಟ್‌ ಮೊತ್ತ 3000 ಯುಎಸ್‌ಡಿ ಅಂದರೆ ಪಾಕಿಸ್ತಾನದ ರೂಪಾಯಿಗೆ ಪರಿವರ್ತಿಸುವುದಾದರೆ 840,526.93) ಆದರೆ ಪಾಕಿಸ್ತಾನ ಈ ಪಂದ್ಯವನ್ನು ಹೀಗೆ ಆಡುತ್ತದೆ ಎಂದು ನಾನು ಊಹೆಯೂ ಮಾಡಿರಲಿಲ್ಲ. ಸೋಲಿಗೆ ತಂಡದ ಅತಿಯಾದ ಆತ್ಮವಿಶ್ವಾಸವೇ ಕಾರಣ” ಎಂದು ಈ ಅಭಿಮಾನಿ ಹತಾಶೆ ವ್ಯಕ್ತಪಡಿಸಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಭಾರತ, ಪಾಕ್​ ಬೌಲರ್​ಗಳ ನಿಖರ ದಾಳಿಗೆ ತಡೆಯೊಡ್ಡುವಲ್ಲಿ ವಿಫಲವಾಗಿ ಕೇವಲ 119 ರನ್ನಿಗೆ ಆಲೌಟಾಯಿತು. ಗುರಿ ಬೆನ್ನಟ್ಟಿದ ಪಾಕ್ ಕೂಡ ಭಾರತದ ಬೌಲಿಂಗ್ ದಾಳಿಗೆ ನಲುಗಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿ ಸೋಲು ಕಂಡಿತು. ಮೊಹಮ್ಮದ್ ರಿಜ್ವಾನ್(31) ಒಂದು ಹಂತದ ವರೆಗೆ ಭಾರತೀಯ ಬೌಲರ್​ಗಳನ್ನು ಕಾಡಿದರೂ ಕೂಡ ಬುಮ್ರಾ ಎಸೆತಕ್ಕೆ ಕ್ಲೀನ್​ ಬೌಲ್ಡ್​ ಆದರು. ಇಲ್ಲಿಂದ ಪಾಕ್​ ಕುಸಿತ ಕೂಡ ಆರಂಭವಾಯಿಯು. ಕೊನೆಗೂ ಭಾರತ ಪಂದ್ಯವನ್ನು ಗೆದ್ದು ಬೀಗುವಲ್ಲಿ ಯಶಸ್ಸು ಕಂಡಿತು.

ಪಾಕ್​ 2 ಸೋಲು ಕಂಡಿದ್ದರೂ ಕೂಡ ಸೂಪರ್​-8 ಪ್ರವೇಶಿಸುವ ಕ್ಷೀಣ ಅವಕಾಶವೊಂದಿದೆ. ಜತೆಗೆ ಅದೃಷ್ಟ ಕೂಡ ಕೈಹಿಡಿಯಬೇಕಿದೆ.

ಸದ್ಯ ‘ಎ’ ಗುಂಪಿನಲ್ಲಿ ಭಾರತ ಮತ್ತು ಆತಿಥೇಯ ಅಮೆರಿಕ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ತಲಾ 4 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡಿದೆ. ಒಂದು ಪಂದ್ಯ ಗೆದ್ದ ಕೆನಾಡ ಮೂರನೇ ಸ್ಥಾನದಲ್ಲಿದೆ. ಗೆಲುವೇ ಕಾಣದ ಪಾಕಿಸ್ತಾನ 4ನೇ ಸ್ಥಾನಿಯಾಗಿದೆ. ಪಾಕ್​ ಮುಂದಿನ ಪಂದ್ಯದಲ್ಲಿ ಐರ್ಲೆಂಡ್​ ಮತ್ತು ಕೆನಡಾ ವಿರುದ್ಧ ಆಡಲಿದೆ. ಒಂದು ಗುಂಪಿನಿಂದ ಎರಡು ತಂಡಗಳು ಮಾತ್ರ ಸೂಪರ್ 8ಗೆ ಪ್ರವೇಶ ಪಡೆಯಲಿದೆ. ಪಾಕ್​ಗೂ ಕೂಡ ಈ ಹಂತಕ್ಕೇರಲು ಸಣ್ಣ ಅವಕಾಶವೊಂದಿದೆ. ಈ ಲೆಕ್ಕಾಚಾರ ಹೀಗಿದೆ.

ಸೂಪರ್​-8ಗೆ ಪ್ರವೇಶಿಸಲು ಪಾಕಿಸ್ತಾನ ತಂಡವು ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕು. ಅಷ್ಟೇ ಅಲ್ಲದೆ ಯುಎಸ್‌ಎ ಮತ್ತು ಕೆನಡಾ ತಂಡಗಳು ಗುಂಪು ಹಂತದಲ್ಲಿ ಉಳಿದ ಪಂದ್ಯಗಳಲ್ಲಿ ಸೋಲು ಕಾಣಬೇಕು. ಅಮೆರಿಕ ಮುಂದಿನ 2 ಪಂದ್ಯಗಳಲ್ಲಿ ಸೋಲು ಕಂಡು, ಪಾಕ್​ 2 ಪಂದ್ಯ ಗೆದ್ದರೆ ಉಭಯ ತಂಡಗಳಿಗೆ ತಲಾ 4 ಅಂಕ ಆಗಲಿದೆ. ಹೀಗಾಗಿ ಪಾಕ್​ಗೆ ಕೇವಲ ಗೆಲುವು ಮಾತ್ರ ಸಾಲದು ಜತೆಗೆ ರನ್​ರೇಟ್​ ಕೂಡ ಬೇಕಾಗಿದೆ. ಅಮೆರಿಕ ಮತ್ತು ಭಾರತ ಮುಂದಿನ ಪಂದ್ಯದಲ್ಲಿ ಗೆದ್ದರೆ ಪಾಕ್​ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.

Continue Reading
Advertisement
Viral News
ವೈರಲ್ ನ್ಯೂಸ್52 seconds ago

Viral News: ಕೊಳದಲ್ಲಿ ತೇಲುತ್ತಿದ್ದ ದೇಹ ಮೇಲೆತ್ತಲು ಹೋದ ಪೊಲೀಸರು! ಹೆಣ ನಡೆಯತೊಡಗಿತು!

YouTuber Dhruv Rathee
ವೈರಲ್ ನ್ಯೂಸ್17 mins ago

YouTuber Dhruv Rathee: ಧ್ರುವ ರಾಥಿಯ ಮೋದಿ ವಿರೋಧಿ ವಿಡಿಯೊ ಗೊತ್ತು; ಅವರ ಲವ್‌ ಸ್ಟೋರಿ ಗೊತ್ತಾ?

University Grants Commission
ಪ್ರಮುಖ ಸುದ್ದಿ42 mins ago

University Grants Commission : ಇನ್ನು ಮುಂದೆ ವಿಶ್ವವಿದ್ಯಾಲಯಗಳಲ್ಲಿ ವರ್ಷಕ್ಕೆ ಎರಡು ಬಾರಿ ಅಡ್ಮಿಷನ್​

Actor Darshan
ಪ್ರಮುಖ ಸುದ್ದಿ52 mins ago

Actor Darshan: ದರ್ಶನ್ ಸೇರಿ ಎಲ್ಲ ಆರೋಪಿಗಳಿಗೆ 6 ದಿನ ಪೊಲೀಸ್ ಕಸ್ಟಡಿ; ಕಟಕಟೆಯಲ್ಲಿ ಕಣ್ಣೀರಿಟ್ಟ ನಟ!

Wedding Jewel Fashion
ಫ್ಯಾಷನ್1 hour ago

Wedding Jewel Fashion: ವೆಡ್ಡಿಂಗ್‌ ಜ್ಯುವೆಲ್‌ ಫ್ಯಾಷನ್‌ನಲ್ಲಿ ಮಹಿಳೆಯರನ್ನು ಸೆಳೆಯುತ್ತಿವೆ ಈ 3 ಟ್ರೆಡಿಷನಲ್‌ ಮಾಟಿಗಳು

EPF Account Rules
ಮನಿ-ಗೈಡ್1 hour ago

EPF Account Rules: ಕ್ಲೈಮ್ ಇತ್ಯರ್ಥ ಇನ್ನು ಸುಲಭ; ಇಪಿಎಫ್‌ಒ ಮಾಡಿದೆ ಹಲವು ಹೊಸ ಬದಲಾವಣೆ

Renu Desai Second Marriage
ಸಿನಿಮಾ2 hours ago

Pawan Kalyan: ಪವನ್‌ ಕಲ್ಯಾಣ್‌ ಮಾಜಿ ಪತ್ನಿ ಮರು ಮದುವೆಗೆ ರೆಡಿ!

Odisha chief minister
ಪ್ರಮುಖ ಸುದ್ದಿ2 hours ago

Odisha chief minister : ಬಿಜೆಪಿಯ ಮೋಹನ್ ಚರಣ್ ಮಾಝಿ ಒಡಿಶಾದ ನೂತನ ಮುಖ್ಯಮಂತ್ರಿ; ಇಬ್ಬರು ಉಪಮುಖ್ಯಮಂತ್ರಿಗಳ ಆಯ್ಕೆ

Renuka Swamy Murder Case
ಕರ್ನಾಟಕ2 hours ago

Renuka Swamy Murder Case: ರೇಣುಕಾಸ್ವಾಮಿ ಕೊಲೆ ಕೇಸ್‌ ಖಂಡಿಸಿ ನಾಳೆ ಚಿತ್ರದುರ್ಗದಲ್ಲಿ ಬೃಹತ್‌ ಪ್ರತಿಭಟನೆ

Raksha Khadse
ರಾಜಕೀಯ2 hours ago

Raksha Khadse: ಅಂದು ಪಂಚಾಯಿತಿ ಸದಸ್ಯೆ, ಇಂದು ಕೇಂದ್ರ ಸಚಿವೆ! ಯಾರು ಈ ರಕ್ಷಾ ಖಡ್ಸೆ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 hours ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ4 hours ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ5 hours ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ7 hours ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ9 hours ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ4 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ4 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌