Viral Video | ಲವ್‌ ಇನ್‌ ಏರ್‌; ವಿಮಾನದಲ್ಲಿಯೇ ಮಂಡಿಯೂರಿ ಪ್ರಪೋಸ್‌ ಮಾಡಿದ ಯುವಕ! - Vistara News

ವೈರಲ್ ನ್ಯೂಸ್

Viral Video | ಲವ್‌ ಇನ್‌ ಏರ್‌; ವಿಮಾನದಲ್ಲಿಯೇ ಮಂಡಿಯೂರಿ ಪ್ರಪೋಸ್‌ ಮಾಡಿದ ಯುವಕ!

ಪ್ರೇಮಿಯೊಬ್ಬ ತನ್ನ ಪ್ರಿಯತಮೆಗೆ ವಿಮಾನದಲ್ಲಿ ಸರ್ಪೈಸ್‌ ಆಗಿ ಪ್ರಪೋಸ್‌ ಮಾಡಿದ್ದಾನೆ. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ (Viral Video) ಆಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಪ್ರೇಮಿಗಳಿಗೆ ಪ್ರಪೋಸ್‌ ಎನ್ನುವುದೊಂದು ದೊಡ್ಡ ವಿಚಾರ. ಅದಕ್ಕೆಂದೇ ಎಷ್ಟೋ ದಿನಗಳ ತಯಾರಿ ಮಾಡಿಕೊಳ್ಳುವವರೂ ಇದ್ದಾರೆ. ಅದೇ ರೀತಿ ಈ ಒಬ್ಬ ಪ್ರೇಮಿ ತನ್ನ ಪ್ರಿಯತಮೆಗೆ ಸರ್ಪೈಸ್‌ ಆಗಿ ಪ್ರಪೋಸ್‌ ಮಾಡಲೆಂದು ಮಾಡಿದ ಕೆಲಸ ನೆಟ್ಟಿಗರಿಗೆ (Viral Video) ಮೆಚ್ಚುಗೆಯಾಗಿದೆ.

ಇದನ್ನೂ ಓದಿ: Viral video | ಹೊರೆ ಹೊತ್ತ ಕೈಗಳು, ತಾನಾಗಿಯೇ ಚಲಿಸುವ ಸೈಕಲು! ಇವನ ದುಡಿಮೆಯೇ ಸರ್ಕಸ್
ಯುವತಿಯೊಬ್ಬಳು ಲಂಡನ್‌ನಿಂದ ಮುಂಬೈಗೆ ಹೊರಟಿದ್ದಳು. ಆ ವಿಮಾನ ಹೈದರಾಬಾದ್‌ ಮೂಲಕ ಹಾದು ಹೊರಟಿತ್ತು. ಹೈದರಾಬಾದ್‌ನಿಂದ ವಿಮಾನ ಟೇಕ್‌ ಆಫ್‌ ಆದ ಕೆಲ ಕ್ಷಣದಲ್ಲೇ ಯುವಕನೊಬ್ಬ ಯುವತಿಯ ಬಳಿ ಬರುತ್ತಾನೆ. “ನಾನು ನಿನ್ನ ಜತೆ ಜೀವನದುದ್ದಕ್ಕೂ ನಡೆಯಬಯಸುತ್ತೇನೆ. ನನ್ನೊಂದಿಗೆ ನಡೆಯುವೆಯಾ?” ಎಂದು ಬರೆದಿರುವ ಪೋಸ್ಟರ್‌ ಅನ್ನು ಯುವತಿಯ ಮುಂದೆ ಹಿಡಿದಿದ್ದಾನೆ. ಅದನ್ನು ನೋಡಿದ ತಕ್ಷಣ ಯುವತಿಗೆ ಆಶ್ಚರ್ಯವೋ ಆಶ್ಚರ್ಯ. ಮುಂಬೈನಲ್ಲಿರುವ ಪ್ರಿಯಕರ ಇದ್ದಕ್ಕಿದ್ದಂತೆ ಈ ರೀತಿ ತಾನು ಸಂಚರಿಸುತ್ತಿದ್ದ ವಿಮಾನದಲ್ಲೇ ಬಂದು ಪ್ರಪೋಸ್‌ ಮಾಡಿದ್ದನ್ನು ಕಂಡು ಖುಷಿಯಿಂದ ಸೀಟಿನಿಂದ ಎದ್ದು ಪ್ರಿಯಕರನ ಎದುರು ಬಂದು ನಿಂತಿದ್ದಾಳೆ.


ಪ್ರಿಯತಮೆ ತನ್ನೆದುರು ಬಂದ ನಂತರ ಆತ ಮಂಡಿಯೂರಿ ಉಂಗುರವನ್ನು ಕೊಟ್ಟು ಆಕೆಗೆ ಪ್ರಪೋಸ್‌ ಮಾಡಿದ್ದಾನೆ. ಈ ಎಲ್ಲ ದೃಶ್ಯವನ್ನು ಸಹ ಪ್ರಯಾಣಿಕರೊಬ್ಬರು ವಿಡಿಯೊ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊ ಭಾರೀ ವೈರಲ್‌ ಆಗಿದೆ.

ಇದನ್ನೂ ಓದಿ: Viral Video | ಜತೆಯಾಗಿ, ಅತ್ಯಂತ ಅಪಾಯಕಾರಿಯಾಗಿ ಬುಲೆಟ್​​ ಬೈಕ್​​ನಲ್ಲಿ ಹೊರಟ ಸತಿ-ಪತಿ!
ಅಂದ ಹಾಗೆ ಈ ಘಟನೆ ಜ.2ರಂದು ನಡೆದಿರುವುದು. ಯುವಕ ಪ್ರಿಯತಮೆಗೆ ಪ್ರಪೋಸ್‌ ಮಾಡಬೇಕೆಂದೇ ಮುಂಬೈನಿಂದ ಹೈದರಾಬಾದ್‌ ಹಾಗೂ ಹೈದರಾಬಾದ್‌ನಿಂದ ಮುಂಬೈಗೆ ವಿಮಾನದ ಟಿಕೆಟ್‌ ಬುಕ್‌ ಮಾಡಿಕೊಂಡಿದ್ದ. ಏರ್‌ ಇಂಡಿಯಾ ಸಿಬ್ಬಂದಿ ಸಹಾಯದೊಂದಿಗೆ ಬೇರೆ ಪ್ರಯಾಣಿಕರಿಗೆ ತೊಂದರೆಯುಂಟಾಗದಂತೆ ಪ್ರೀತಿ ನಿವೇದನೆ ಮಾಡಿದ್ದಾನೆ. ಈ ವಿಚಾರದಲ್ಲಿ ಏರ್‌ ಇಂಡಿಯಾ ಅಧಿಕಾರಿಗಳೂ ಸಹ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Babar Azam: ಫೋಟೋ ತೆಗೆಯಲು ಬಂದ ಅಭಿಮಾನಿಗಳಿಗೆ ಬೈದು ಓಡಿಸಿದ ಬಾಬರ್ ಅಜಂ; ವಿಡಿಯೊ ವೈರಲ್​

Babar Azam: ಪಾಕಿಸ್ತಾನ ತಂಡ ಇಂಗ್ಲೆಂಡ್​ ವಿರುದ್ಧ 4 ಪಂದ್ಯಗಳ ಟಿ20 ಸರಣಿಯನ್ನಾಡಲು ಲಂಡನ್​ನಲ್ಲಿದೆ. ಈಗಾಗಲೇ ಸರಣಿಯಲ್ಲಿ 2 ಪಂದ್ಯಗಳು ಮಳೆಯಿಂದ ರದ್ದುಗೊಂಡರೆ, ಒಂದು ಪಂದ್ಯವನ್ನು ಇಂಗ್ಲೆಂಡ್​ ಗೆದ್ದಿದೆ. ಅಂತಿಮ ಪಂದ್ಯ ನಾಳೆ(ಮೇ 30) ನಡೆಯಲಿದೆ.

VISTARANEWS.COM


on

Babar Azam
Koo

ಲಂಡನ್​: ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಂ(Babar Azam) ಅವರು ಇಂಗ್ಲೆಂಡ್​ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟಿ20 ಪಂದ್ಯವನ್ನಾಡಲು(England vs Pakistan) ಹೋಟೆಲ್​ನಿಂದ ತೆರಳುವ ವೇಳೆ ಅಭಿಮಾನಿಗಳು ಫೋಟೊ ತೆಗೆಸಿಕೊಳ್ಳಲು ಮುಗಿಬಿದ್ದ ವೇಳೆ ತಾಳ್ಮೆ ಕಳೆದುಕೊಂಡು ಭದ್ರತಾ ಸಿಬ್ಬಂದಿಗಳಿಗೆ ಎಲ್ಲರನ್ನೂ ದೂರ ಕಳುಹಿಸುವಂತೆ ಹೇಳಿದ್ದಾರೆ. ಈ ವಿಡಿಯೊ ವೈರಲ್(viral video)​ ಆಗಿದೆ.

ಪಾಕಿಸ್ತಾನ ತಂಡ ಇಂಗ್ಲೆಂಡ್​ ವಿರುದ್ಧ 4 ಪಂದ್ಯಗಳ ಟಿ20 ಸರಣಿಯನ್ನಾಡಲು ಲಂಡನ್​ನಲ್ಲಿದೆ. ಈಗಾಗಲೇ ಸರಣಿಯಲ್ಲಿ 2 ಪಂದ್ಯಗಳು ಮಳೆಯಿಂದ ರದ್ದುಗೊಂಡರೆ, ಒಂದು ಪಂದ್ಯವನ್ನು ಇಂಗ್ಲೆಂಡ್​ ಗೆದ್ದಿದೆ. ಅಂತಿಮ ಪಂದ್ಯ ನಾಳೆ(ಮೇ 30) ನಡೆಯಲಿದೆ. ಸರಣಿಯನ್ನು 1-1 ಸಮಬಲಗೊಳಿಸಬೇಕಿದ್ದರೆ ಪಾಕಿಸ್ತಾನಕ್ಕೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಇದೇ ಪಂದ್ಯವನ್ನಾಡಲು ತೆರಳುವ ವೇಳೆ ಬಾಬರ್​ ಅವರೊಂದಿಗೆ ಅಭಿಮಾನಿಗಳು ಫೋಟೊ ಮತ್ತು ಆಟೋಗ್ರಾಫ್ ಪಡೆಯಲು ಮುಂದಾಗಿದ್ದಾರೆ. ಇದರಿಂದ ಬಾಬರ್​ಗೆ ಕಿರಿಕಿರಿ ಉಂಟಾಗಿದೆ.

ಅಭಿಮಾನಿಗಳ ದಂಡೇ ಹಿಂಬಾಲಿಸಿ ಬಂದಿದ್ದರಿಂದ ಕೋಪಗೊಂಡ ಬಾಬರ್ ಸ್ವಲ್ಪ ಹೊತ್ತು ನನ್ನನ್ನು ಪ್ರಶಾಂತವಾಗಿರಲು ಬಿಡಿ ಎಂದು ಕೋಪದಿಂದ ನಿಂದಿಸಿದ್ದಾರೆ. ಬಳಿಕ ಪಕ್ಕದಲ್ಲಿದ್ದ ಭದ್ರತಾ ಸಿಬ್ಬಂದಿಗಳಿಗೆ ಎಲ್ಲರನ್ನೂ ದೂರ ಕಳುಹಿಸುವಂತೆ ಹೇಳಿದ್ದಾರೆ. ಒಂದು ಕ್ಷಣ ಕೋಪಗೊಂಡರೂ ಕೂಡ ಕೊನೆಗೆ ಅಭಿಮಾನಿಗಳೊಂದಿಗೆ ಫೋಟೊ ಕ್ಲಿಕ್ಕಿಸಿದ್ದಾರೆ.

ಇದನ್ನೂ ಓದಿ Babar Azam : ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ ಪಾಕ್​ ನಾಯಕ ಅಜಮ್​

ಕಳೆದ ವರ್ಷ(2023) ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಬಾಬರ್​ ಸಾರಥ್ಯದಲ್ಲಿ ಪಾಕಿಸ್ತಾನ ತಂಡ ನೀರಸ ಪ್ರದರ್ಶನ ತೋರಿತ್ತು. ಆಡಿದ 9 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ ಲೀಗ್​ ಹಂತದಲ್ಲೇ ಹೊರಬಿದ್ದಿತ್ತು. ಹೀಗಾಗಿ ಬಾಬರ್​ ವಿರುದ್ಧ ಪಾಕ್​ ತಂಡದ ಮಾಜಿ ಆಟಗಾರರು ಸೇರಿ ಅಂದಿನ ಪಿಬಿ ಅಧ್ಯಕ್ಷ ಭಾರೀ ಟೀಕೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಬಾಬರ್ ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದಿದ್ದರು. ಬಾಬರ್ ಕೆಳಗಿಳಿದ ಬಳಿಕ ಶಾನ್ ಮಸೂದ್ ಅವರನ್ನು ಟೆಸ್ಟ್ ನಾಯಕರನ್ನಾಗಿ ನೇಮಿಸಿದರೆ, ಶಾಹೀನ್ ಅಫ್ರಿದಿಗೆ ಟಿ20 ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಯಿತು. ಆದರೆ ಇವರ ನಾಯಕತ್ವದಲ್ಲಿ ಪಾಕಿಸ್ತಾನ ಹಿಂದೆಂದು ಕಾಣದ ವೈಫಲ್ಯ ಕಂಡಿತ್ತು. ಆಡಿದ ಹಲವು ಸರಣಿಗಳಲ್ಲಿ ಹೀನಾಯ ಸೋಲು ಕಂಡಿತ್ತು. ಹೀಗಾಗಿ ಮತ್ತೆ ಬಾಬರ್​ ಅಜಂ ಅವರನ್ನು ತಂಡದ ನಾಯಕನನ್ನಾಗಿ ಮರು ನೇಮಕ ಮಾಡಲಾಯಿತು.

ಬಾಬರ್​ ನಾಯಕತ್ವದ ಸಾಧನೆ


ಬಾಬರ್ ಅಜಮ್ ಪಾಕಿಸ್ತಾನದ ನಾಯಕನಾಗಿ 133 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 78 ಪಂದ್ಯಗಳು ಗೆದ್ದರೆ, 43 ಪಂದ್ಯಗಳಲ್ಲಿ ಸೋತಿದ್ದಾರೆ. ಒಂದು ಟೈ ಮತ್ತು ನಾಲ್ಕು ಪಂದ್ಯ ಡ್ರಾಗೊಂಡಿದೆ. ಏಕದಿನ ವಿಶ್ವಕಪ್​ ಟೂರ್ನಿ ಹೊರತುಪಡಿಸಿ ಉಳಿದ ಎಲ್ಲ ಸರಣಿಯಲ್ಲೂ ಬಾಬರ್​ ಸಾರಥ್ಯದಲ್ಲಿ ತಂಡ ಉತ್ತಮ ಪ್ರದರ್ಶನ ತೋರಿತ್ತು.

ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ತನ್ನ ಮೊದಲ ಲೀಗ್​ ಪಂದ್ಯದಲ್ಲಿ ಅಮೆರಿಕ ವಿರುದ್ಧ ಜೂನ್​ 6ರಂದು ಆಡಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿ ಭಾರತ ವಿರುದ್ಧ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ಸೆಣಸಾಡಲಿದೆ. ಈ ಪಂದ್ಯಕ್ಕಾಗಿ ಉಭಯ ದೇಶದ ಕ್ರಿಕೆಟ್​ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ.

Continue Reading

ವೈರಲ್ ನ್ಯೂಸ್

Viral News: 10 ಅಡಿಯ ದೈತ್ಯ ಮೊಸಳೆಯಿಂದ ಕಬ್ಬಿಣದ ಗೇಟು ಹಾರಲು ಯತ್ನ; ಮೈ ಜುಮ್ಮೆನ್ನಿಸುವ ವಿಡಿಯೊ ಇಲ್ಲಿದೆ

Viral News: ಕಾಲುವೆಯ ಗೇಟ್‌ ದಾಟಿ ಜನ ನಿಬಿಡ ಪ್ರದೇಶಕ್ಕೆ ಬಂದಿದ್ದ ಸುಮಾರು 10 ಅಡಿ ಉದ್ದದ ಮೊಸಳೆ ಮರಳಿ ನೀರಿನತ್ತ ತೆರಳಲು ಪ್ರಯತ್ನಪಡುವ ದೃಶ್ಯ ಸದ್ಯ ವೈರಲ್‌ ಆಗಿದೆ. ಉತ್ತರ ಪ್ರದೇಶದ ಬುಲಂದ್ಶಹರ್ನ ನರೋರಾ ಘಾಟ್ ಬಳಿ ಈ ಘಟನೆ ನಡೆದಿದೆ. ಗಂಗಾ ಕಾಲುವೆಯಿಂದ ಆಕಸ್ಮಿಕವಾಗಿ ಹೊರಗೆ ಬಂದ ಈ ಬೃಹತ್‌ ಗಾತ್ರದ ಮೊಸಳೆ ನರೋರಾ ಬ್ಯಾರೇಜ್ ಕೆಳಗಿನ ಗಂಗಾ ನದಿಗೆ ಹಾರಲು ಪ್ರಯತ್ನಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೊ ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Viral News
Koo

ಲಕ್ನೋ: ಮೊಸಳೆ- ಈ ಹೆಸರು ಕೇಳಿದರೆ ಸಾಕು ದೈತ್ಯ ದೇಹ, ಚೂಪಾದ ಹಲ್ಲು, ಸದಾ ಬೇಟೆಯಾಡಲು ಹೊಂಚು ಹಾಕುತ್ತಿರುವ ದೃಶ್ಯವೇ ಕಣ್ಣ ಮುಂದೆ ಬರುತ್ತದೆ. ಮೃಗಾಲಯದಲ್ಲಿ ದೂರದಿಂದ ಮೊಸಳೆಯನ್ನು ನೋಡಿ ಅದರ ಅಗಾಧ ಶಕ್ತಿಗೆ ಬೆರಗಾಗುತ್ತೇವೆ. ಅದು ಬಿಟ್ಟು ಕೋಟಿ ರೂ. ಕೊಡುತ್ತೇವೆ ಎಂದರೆ ಯಾರೂ ಮೊಸಳೆ ಸಮೀಪಕ್ಕೆ ಸುಳಿಯುವ ದುಸ್ಸಾಹಸ ಮಾಡುವುದಿಲ್ಲ. ಹೀಗಿರುವಾಗ ನಗರದ ಮಧ್ಯೆ ದೈತ್ಯ ದೇಹಿ ಮೊಸಳೆ ಕಂಡು ಬಂದರೆ ಏನಾಗಬೇಡ? ಹೌದು, ಇಂತಹದ್ದೊಂದು ವಿಡಿಯೊ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕಾಲುವೆಯ ಗೇಟ್‌ ದಾಟಿ ಜನ ನಿಬಿಡ ಪ್ರದೇಶಕ್ಕೆ ಬಂದಿದ್ದ ಸುಮಾರು 10 ಅಡಿ ಉದ್ದದ ಮೊಸಳೆ ಮರಳಿ ನೀರಿನತ್ತ ತೆರಳಲು ಪ್ರಯತ್ನಪಡುವ ದೃಶ್ಯ ನೋಡಿ ನೆಟ್ಟಿಗರು ರೋಮಾಂಚನಗೊಂಡಿದ್ದಾರೆ (Viral News).

ಉತ್ತರ ಪ್ರದೇಶದ ಬುಲಂದ್ಶಹರ್ನ ನರೋರಾ ಘಾಟ್ ಬಳಿ ಈ ಘಟನೆ ನಡೆದಿದೆ. ಗಂಗಾ ಕಾಲುವೆಯಿಂದ ಆಕಸ್ಮಿಕವಾಗಿ ಹೊರಗೆ ಬಂದ ಈ ಬೃಹತ್‌ ಗಾತ್ರದ ಮೊಸಳೆ ನರೋರಾ ಬ್ಯಾರೇಜ್ ಕೆಳಗಿನ ಗಂಗಾ ನದಿಗೆ ಹಾರಲು ಪ್ರಯತ್ನಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಡಿಯೊದಲ್ಲಿ ಏನಿದೆ?

ಅದು ನರೋರಾ ಘಾಟ್‌ನ ನರೋರಾ ಬ್ಯಾರೇಜ್. ಕಾಲುವೆ ಸುತ್ತಲೂ ಕಬ್ಬಿಣದ ಸರಳುಗಳ ಗೇಟ್‌ ಅಳವಡಿಸಲಾಗಿದೆ. ಹೇಗೋ ಗೇಟ್‌ ದಾಟಿ ಈಚೆ ಬಂದ ಮೊಸಳೆಯೊಂದು ಸಿಮೆಂಟ್‌ ನೆಲದ ಮೇಲೆ ಒದ್ದಾಡುತ್ತಿರುವುದನ್ನು ತೋರಿಸುವ ಮೂಲಕ ದೃಶ್ಯ ಆರಂಭವಾಗುತ್ತದೆ. ನೀರಿಗೆ ಹೋಗಲು ಆ ಗೇಟ್‌ ದಾಟಲು ಮೊಸಳೆ ಪ್ರಯತ್ನಿಸುತ್ತದೆ. ಸರಳು ಹತ್ತಿ ಇನ್ನೇನು ಆಚೆ ಜಿಗಿಯಬೇಕು ಎನ್ನುವಷ್ಟರಲ್ಲಿ ನಿಯಂತ್ರಣ ತಪ್ಪಿ ದೈತ್ಯ ದೇಹದೊಂದಿಗೆ ದೊಪ್ಪೆಂದು ಸಿಮೆಂಟ್‌ ನೆಲಕ್ಕೆ ಬೀಳುತ್ತದೆ. ಮತ್ತೂ ಕೂಡ ಅದು ತನ್ನ ಪ್ರಯತ್ನವನ್ನು ಬಿಡುವುದಿಲ್ಲ. ಗೇಟ್‌ ಆಚೆ ಹಾರಲು ಯತ್ನಿಸುತ್ತದೆ. ಅಲ್ಲೇ ಸಮೀಪದಲ್ಲಿರುವ ಅಧಿಕಾರಿಯೊಬ್ಬರು ದೊಣ್ಣೆ ಹಿಡಿದು ಮೊಸಳೆ ಜನರತ್ತ ಬರದಂತೆ ನೋಡಿಕೊಳ್ಳುತ್ತಿದ್ದಾರೆ. ಇದಿಷ್ಟು ವಿಡಿಯೊದಲ್ಲಿ ದಾಖಲಾಗಿದೆ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಆಗಮಿಸಿ ಅದನ್ನು ಸುರಕ್ಷಿತವಾಗಿ ನೀರಿಗೆ ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾರ್ಯಾಚರಣೆ ಹೇಗಿತ್ತು?

ಈ ಮೊಸಳೆಯನ್ನು ನೀರಿಗೆ ಸಾಗಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ಹರ ಸಾಹಸವನ್ನೇ ಪಡಬೇಕಾಯಿತು. ಆರಂಭದಲ್ಲಿ ಅದರ ತಲೆಯನ್ನು ಬಟ್ಟೆಯಿಂದ ಮುಚ್ಚಿ ಅದರ ಕಾಲುಗಳನ್ನು ಹಗ್ಗದಿಂದ ಕಟ್ಟಲಾಯಿತು. ಬಳಿಕ ನಾಲ್ವರು ಅರಣ್ಯ ಅಧಿಕಾರಿಗಳು ಮೊಸಳೆಯ ತಲೆ ಮತ್ತು ಮುಂಭಾಗದ ಕಾಲುಗಳನ್ನು ಬಿಗಿದಿರುವ ಹಗ್ಗಗಳನ್ನು ಹಿಡಿದರು. ಈ ವೇಳೆ ಇನ್ನೊಬ್ಬ ಅಧಿಕಾರಿ ಅದರ ಹಿಂದಿನ ಕಾಲುಗಳಿಗೆ ಹಗ್ಗವನ್ನು ಸುತ್ತಿದರು. ಇಬ್ಬರು ಮೊಸಳೆಯ ಬಾಲವನ್ನು ಎತ್ತಿಕೊಂಡರು. ಹೀಗೆ ಕೆಲವು ಗಂಟೆಗಳ ಕಾರ್ಯಾಚರಣೆ ಬಳಿಕ ಮೊಸಳೆಯನ್ನು ಸುರಕ್ಷಿತವಾಗಿ ನೀರಿಗೆ ಬಿಡಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಹುಲಿ-ಮೊಸಳೆ ಮಧ್ಯೆ ರಣ ರೋಚಕ ಕದನ; ಕೊನೆಯಲ್ಲಿ ಗೆದ್ದವರು ಯಾರು?

ಹಲವರು ವಿಡಿಯೊ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪಾಪ ಮೊಸಳೆ ಹಸಿದಿರಬೇಕು. ಆಹಾರ ಅರಸಿಕೊಂಡು ಬಂದಿದೆ ಎಂದು ಹಲವರು ಕರುಣೆ ತೋರಿದ್ದಾರೆ. ಇನ್ನು ಕೆಲವರು ಇದು ಫೇಕ್‌ ವಿಡಿಯೊ, ಕೃತಕ ಬುದ್ಧಿಮತ್ತೆ ಬಳಸಿ ತಯಾರಿಸಲಾಗಿದೆ ಎಂದೂ ಹೇಳಿದ್ದಾರೆ. ಅದೇನೇ ಇರಲಿ ಇಷ್ಟು ದೈತ್ಯ ದೇಹಿ ಮೊಸಳೆ, ಅದರ ಸಾಹಸವನ್ನು ನೋಡಿ ಹಲವರು ರೋಮಾಂಚನಗೊಂಡಿದ್ದು ಸುಳ್ಳಲ್ಲ.

Continue Reading

ಕ್ರೀಡೆ

Viral Run Out Video: 11 ಆಟಗಾರರಿಂದ ರನೌಟ್​ ಪ್ರಯತ್ನ; ಕೊನೆಗೂ ನಾಟೌಟ್​ ಆದ ಬ್ಯಾಟರ್​

Viral Run Out Video: ರನೌಟ್​ ಪ್ರಯತ್ನದ ವಿಡಿಯೊವನ್ನು ಅಂಪೈರ್​ ರಿಚರ್ಡ್‌ ಕೆಟಲ್‌ಬರೋ ತಮ್ಮ ಟ್ವಿಟರ್ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡು ‘ಕ್ರಿಕೆಟ್‌ನಲ್ಲಿ ಬಿಲಿಯನ್ ಕ್ಷಣವನ್ನು ನೋಡಿದ್ದೇನೆ. ಆದರೆ ಈ ರೀತಿಯ ರೋಚಕ ಕ್ಷಣವನ್ನು ನೋಡಿದ್ದು ಇದೇ ಮೊದಲು’ ಎಂದು ಬರೆದುಕೊಂಡಿದ್ದಾರೆ.

VISTARANEWS.COM


on

Viral Run Out Video
Koo

ಮುಂಬಯಿ: ಸಾಮಾಜಿಕ ಜಾಲತಾಣದಲ್ಲಿ ಹಲವು ವೈರಲ್​ ವಿಡಿಯೋಗಳು(Viral Video) ಹರಿದಾಡುತ್ತಿರುತ್ತವೆ. ಆದರೆ ಅವುಗಳಲ್ಲಿ ಕೆಲವೊಂದು ವಿಡಿಯೋಗಳು ವಿಶೇಷ ಕಾರಣದಿಂದಾಗಿ ಜನರ ಗಮನ ಸೆಳೆದುಬಿಡುತ್ತದೆ. ಇದೀಗ ಇತಂಹದ್ದೇ ವಿಡಿಯೊವೊಂದು ಕ್ರಿಕೆಟ್​ ಅಭಿಮಾನಿಗಳ ಮನಗೆದ್ದಿದೆ. ಮಕ್ಕಳ ಕ್ರಿಕೆಟ್​ ಟೂರ್ನಿಯಲ್ಲಿ ರನೌಟ್​ ಮಾಡು ಹರಸಾಹಸಪಟ್ಟ ವಿಡಿಯೊವೊಂದು ವೈರಲ್(Viral Run Out Video)​ ಆಗಿದೆ.

ಮೈದಾನದಲ್ಲಿ ಶಾಲಾ ವಿದ್ಯಾರ್ಥಿಗಳು ಕ್ರಿಕೆಟ್ ಟೂರ್ನಿಯೊಂದ ಪಂದ್ಯವನ್ನು ಆಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಟ್ರೈಕರ್​ನಲ್ಲಿದ್ದ ಬ್ಯಾಟರ್​ ಚೆಂಡನ್ನು ಹೊಡೆದು ರನ್​ ಗಳಿಸಲು ನಾನ್​ಸ್ಟ್ರೈಕ್​ಗೆ ಓಡಿದ್ದಾನೆ. ಚೆಂಡು ಫೀಲ್ಡರ್​ ಕೈ ಸೇರಿದ ಕಾರಣ ನಾನ್​ಸ್ಟ್ರೈಕ್​ಕರ್​ನಲ್ಲಿದ್ದ ಬ್ಯಾಟರ್​ ಓಡಲು ನಿರಾಕರಿಸಿ ನಾನ್​ಸ್ಟ್ರೈಕ್​ನಲ್ಲಿಯೇ ನಿಲ್ಲುತ್ತಾನೆ. ಸುಲಭವಾಗಿ ರನೌಟ್​ ಅವಕಾಶ ಸಿಕ್ಕರೂ ಕೂಡ ಫೀಲ್ಡರ್​ ಗಡಿಬಿಡಿಯಲ್ಲಿ ಚೆಂಡನ್ನು ಕೀಪರ್​ ಕೈಗೆ ಎಸೆಯದೆ ನಾನ್​ಸ್ಟ್ರೈಕ್​ನತ್ತ ಬಿಸಾಡುತ್ತಾನೆ. ಚೆಂಡು ವಿಕೆಟ್​ಕೆ ಬಡಿಯದೆ ಮತ್ತೊಂದು ಫೀಲ್ಡರ್​ ಕೈ ಸೇರಿತು. ಆತ ಕೀಪರ್​ ಕಡೆ ಚೆಂಡನ್ನು ಎಸೆದ ವೇಳೆ ಪಿಚ್​ ಬದಿಯಲ್ಲಿ ನಿಂತಿದ್ದ ಫೀಲ್ಡರ್​ ಒಬ್ಬ ಚೆಂಡು ಕ್ಯಾಚ್​ ಹಿಡಿದು ವಿಕೆಟ್​ಕೆ ಎಸೆತುತ್ತಾನೆ. ಇಲ್ಲಿಯೂ ಗುರಿ ತಪ್ಪುತ್ತದೆ. ನಾನ್​ಸ್ಟ್ರೈಕ್​ನಲ್ಲಿದ್ದ ಬ್ಯಾಟರ್​ಗಳು ತಮ್ಮ ಪಾಡಿಗೆ ತಾವು ಚರ್ಚೆಯಲ್ಲಿ ಮಗ್ನರಾಗಿರುತ್ತಾರೆ. ಕೀಪರ್​ ಕೂಡ ರನೌಟ್​ ಮಾಡಲು ಎಡವುತ್ತಾನೆ. ಎದುರಾಳಿಗಳ ಪರದಾಟ ಕಂಡ ಬ್ಯಾಟರ್​ ತಕ್ಷಣ ಸ್ಟ್ರೈಕ್​ಗೆ ಓಡಿ ರನೌಟ್​ ಅಪಾಯದಿಂದ ಪಾರಾಗಿದ್ದಾನೆ.

ಈ ಹಾಸ್ಯಮಯ ರನೌಟ್​ ಪ್ರಯತ್ನದ ವಿಡಿಯೊವನ್ನು ಅಂಪೈರ್​ ರಿಚರ್ಡ್‌ ಕೆಟಲ್‌ಬರೋ ತಮ್ಮ ಟ್ವಿಟರ್ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡು ‘ಕ್ರಿಕೆಟ್‌ನಲ್ಲಿ ಬಿಲಿಯನ್ ಕ್ಷಣವನ್ನು ನೋಡಿದ್ದೇನೆ. ಆದರೆ ಈ ರೀತಿಯ ರೋಚಕ ಕ್ಷಣವನ್ನು ನೋಡಿದ್ದು ಇದೇ ಮೊದಲು’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ T20 World Cup : ಭಾರತ- ಪಾಕ್ ಪಂದ್ಯ ಐಸಿಸ್​ ಉಗ್ರರಿಂದ ಬಾಂಬ್ ಬೆದರಿಕೆ

ಐಸಿಸಿ ಕೂಟಗಳಲ್ಲಿ ಅಂಪೈರ್​ ರಿಚರ್ಡ್‌ ಕೆಟಲ್‌ಬರೋ ಟೀಮ್ ಇಂಡಿಯಾ ಪಾಲಿಗೆ ಐರನ್ ಲೆಗ್ ಎನಿಸಿಕೊಂಡಿದ್ದಾರೆ. ರಿಚರ್ಡ್‌ ಕೆಟಲ್‌ಬರೋ ಕಾರ್ಯನಿರ್ವಹಿಸಿದ ಎಲ್ಲ ಮಹತ್ವದ ಪಂದ್ಯದಲ್ಲಿಯೂ ಭಾರತ ತಂಡ ಸೋಲುಕಂಡಿದೆ.

2014 ರಿಂದ ರಿಚರ್ಡ್‌ ಕೆಟಲ್‌ಬರೋ ಅಂಪೈರಿಂಗ್‌ ಮಾಡಿದ ಎಲ್ಲ ಪ್ರಮುಖ ಪಂದ್ಯಗಳಲ್ಲಿಯೂ ಟೀಮ್‌ ಇಂಡಿಯಾ ಸೋಲು ಕಂಡಿದೆ. 2014ರ ಟಿ20 ವಿಶ್ವ ಕಪ್ ಫೈನಲ್, 2015ರ ಏಕದಿನ ವಿಶ್ವ ಕಪ್ ಸೆಮಿಫೈನಲ್, 2016ರ ಟಿ20 ವಿಶ್ವ ಕಪ್ ಸೆಮಿಫೈನಲ್, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್, 2019ರ ಏಕದಿನ ವಿಶ್ವ ಕಪ್ ಸೆಮಿಫೈನಲ್, 2021ರ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್, 2023ರ ಏಕದಿನ ವಿಶ್ವಕಪ್ ಫೈನಲ್​​ ಪಂದ್ಯದಲ್ಲಿ ಭಾರತ ಸೋತಿತ್ತು. ಹೀಗಾಗಿ ಭಾರತ ತಂಡ ಆಡುವ ಪ್ರಮುಖ ಪಂದ್ಯಗಳಲ್ಲಿ ರಿಚರ್ಡ್‌ ಕೆಟಲ್‌ಬರೋ ಅಂಪೈರ್ ಆದರೆ ಭಾರತ ಸೋಲುವುದು ಖಚಿತ ಎಂಬ ಅಭಿಪ್ರಾಯ ಅಭಿಮಾನಿಗಳದ್ದಾಗಿದೆ.

Continue Reading

ರಾಜಕೀಯ

All Eyes on Rafah: 30 ಮಿಲಿಯನ್ ಜನರನ್ನು ತಲುಪಿದ ‘ಆಲ್ ಐಸ್ ಆನ್ ರಫಾ’ ಪೋಸ್ಟ್‌!

All Eyes on Rafah:’ಆಲ್ ಐಸ್ ಆನ್ ರಫಾ’ ಎಐ ನಿರ್ಮಿತ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ 30 ಮಿಲಿಯನ್ ಜನರನ್ನು ಇದು ತಲುಪಿದ್ದು, ಸಾಕಷ್ಟು ಸಲೆಬ್ರಿಟಿಗಳು ಇದನ್ನು ಹಂಚಿಕೊಳ್ಳುತ್ತಿದ್ದಾರೆ.

VISTARANEWS.COM


on

By

All Eyes on Rafah
Koo

ನವದೆಹಲಿ: ಹಲವಾರು ಮಂದಿಯ ಇನ್ ಸ್ಟಾಗ್ರಾಮ್ (Instagram) ಖಾತೆಗಳಲ್ಲಿ ಮಂಗಳವಾರ ‘ಆಲ್ ಐಸ್ ಆನ್ ರಫಾ’ (All Eyes on Rafah) ಎಂಬ ಶೀರ್ಷಿಕೆಯೊಂದಿಗೆ ಚಿತ್ರ ಕಾಣಿಸಿಕೊಂಡಿದೆ. ಸೋಶಿಯಲ್ ಮೀಡಿಯಾ (social media) ಬಳಕೆದಾರರು ಎಐ (artificial intelligence) ರಚಿತವಾದ ಚಿತ್ರವನ್ನು ಪೋಸ್ಟ್ ಮಾಡಿದ್ದು, ಹಲವಾರು ಟೆಂಟ್ ಮನೆಗಳನ್ನು (tent house) ಚಿತ್ರದಲ್ಲಿ ಕಾಣಬಹುದಾಗಿದೆ.

ಆಲ್ ಐಸ್ ಆನ್ ರಫಾ ಚಿತ್ರವು ಗಾಝಾದ ದಕ್ಷಿಣದಲ್ಲಿರುವ ರಾಫಾ ನಗರದ ನಿರಾಶ್ರಿತರ ಶಿಬಿರದಲ್ಲಿರುವ ಡೇರೆಗಳನ್ನು ತೋರಿಸಿದೆ. ಅಲ್ಲಿ ಇಸ್ರೇಲ್ ನಿಂದ ನಡೆಸಿದ ದಾಳಿಯ ಅನಂತರ ಅನೇಕ ಪ್ಯಾಲೇಸ್ಟಿನಿಯರು ಇಲ್ಲಿಗೆ ಸ್ಥಳಾಂತರಗೊಂಡಿದ್ದಾರೆ. ಇಸ್ರೇಲ್ ದಾಳಿಯನ್ನು ಖಂಡಿಸಿ ಪ್ಯಾಲೆಸ್ಟೈನ್‌ ಗೆ ಬೆಂಬಲ ಸೂಚಿಸಿ ಅನೇಕರು ಇನ್ ಸ್ಟಾ ಗ್ರಾಮ್ ನಲ್ಲಿ ‘ಆಲ್ ಐಸ್ ಆನ್ ರಫಾ’ ಘೋಷಣೆಯೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನು ಇನ್ ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿರುವವರ ಸಂಖ್ಯೆ 30 ಮಿಲಿಯನ್ ದಾಟಿದೆ.

ಪ್ಯಾಲೇಸ್ಟಿನಿಯನ್ನರ ವಿರುದ್ಧದ ದಾಳಿಯನ್ನು ಖಂಡಿಸಿ ಮತ್ತು ಕದನ ವಿರಾಮಕ್ಕೆ ಒತ್ತಾಯಿಸಲು ಇದು ಸಾಮಾಜಿಕ ಜಾಲತಾಣದ ಮೂಲಕ ಜನರನ್ನು ಒಗ್ಗೂಡಿಸುತ್ತಿದೆ. ವರದಿಗಳ ಪ್ರಕಾರ ಡಬ್ಲ್ಯೂ ಹೆಚ್ ಒ ಪ್ರತಿನಿಧಿ ರಿಚರ್ಡ್ ಪೀಪರ್‌ಕಾರ್ನ್ ಅವರು ಫೆಬ್ರವರಿಯಲ್ಲಿ ಮೊದಲು ಈ ಘೋಷಣೆಯನ್ನು ಮಾಡಿದರು. ಡೇರೆ ಶಿಬಿರಗಳಿಂದ ತುಂಬಿದ ಪ್ರದೇಶವನ್ನು ಚಿತ್ರದಲ್ಲಿ ಕಾಣಬಹುದು. ಇದು ಇತ್ತೀಚಿನದು. ಎಲ್ಲರ ಗಮನ ಸೆಳೆಯಲು ಇದು ಅವರ ಪ್ರಯತ್ನ. ಇಸ್ರೇಲ್ ದಾಳಿಯಿಂದ ರಫಾದಲ್ಲಿ ಕನಿಷ್ಠ 45 ನಾಗರಿಕರು ಮೃತಪಟ್ಟಿದ್ದಾರೆ ಎಂದು ಹಲವರು ನೆಟ್ಟಿಗರು ಕಾಮೆಂಟ್ ನಲ್ಲಿ ಹೇಳಿದ್ದಾರೆ.

ಪೋಸ್ಟ್‌ ಶೇರ್‌ ಮಾಡಿದ ಸೆಲೆಬ್ರಿಟಿಗಳು

ಭಾರತೀಯ ನಟರಾದ ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ ಕರೀನಾ ಕಪೂರ್ ಖಾನ್ ಮತ್ತು ವರುಣ್ ಧವನ್ ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮ ಸಲಹೆಗಾರ ಮ್ಯಾಟ್ ನವರ್ರಾ ಅವರು “‘ಆಲ್ ಐಸ್ ಆನ್ ರಾಫಾ’ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದ ಬೆಂಬಲ ಸಿಗುತ್ತದೆ ಎಂದು ನಾವು ಆರಂಭದಲ್ಲಿ ಭಾವಿಸಿರಲಿಲ್ಲ. ಸಾಕಷ್ಟು ಪ್ರಭಾವಿಗಳು ಮತ್ತು ಸೆಲೆಬ್ರಿಟಿಗಳು ಇದನ್ನು ಹಂಚಿಕೊಂಡಿದ್ದಾರೆ. ಈ ಸಂದೇಶದ ಭಾವನೆ ಅಥವಾ ಉದ್ದೇಶ ಒಂದೇ. ಅನೇಕರನ್ನು ತಲುಪುವುದು ಮತ್ತು ಅಲ್ಲಿನ ಪರಿಸ್ಥಿತಿ ಬಗ್ಗೆ ಎಲ್ಲರ ಗಮನ ಸೆಳೆಯುವುದು.

ಇದನ್ನೂ ಓದಿ: Viral Video: ಭಾರತ-ಚೀನಾ ಯೋಧರ ನಡುವೆ ಹಗ್ಗಜಗ್ಗಾಟ; ಗೆದ್ದವರು ಯಾರು? ವಿಡಿಯೊ ನೋಡಿ!

ರಫಾ ನಿರ್ಮೂಲನೆ ಮಾಡುವ ಗುರಿ

ಇದರ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ದೇಶದಲ್ಲಿ ಈ ಸಾವುನೋವುಗಳು ‘ದುರಂತ’ ಎಂದು ಹೇಳಿದ್ದಾರೆ. ರಫಾವನ್ನು ಹಮಾಸ್‌ ಉಗ್ರರ ಕಟ್ಟ ಕಡೆಯ ಭದ್ರಕೋಟೆ ಎಂದಿರುವ ನೆತನ್ಯಾಹು, ಅದನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದ್ದರು. ಈ ಪ್ರದೇಶದಲ್ಲಿ ಸುಮಾರು 14 ದಶಲಕ್ಷಕ್ಕೂ ಹೆಚ್ಚು ಪ್ಯಾಲೇಸ್ಟಿನಿಯರು ಆಶ್ರಯ ಪಡೆದಿದ್ದಾರೆ. ಪ್ಯಾಲೇಸ್ಟಿನ್ ಮೇಲಿನ ಇಸ್ರೇಲ್‌ ದಾಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

Continue Reading
Advertisement
Babar Azam
ವೈರಲ್ ನ್ಯೂಸ್10 mins ago

Babar Azam: ಫೋಟೋ ತೆಗೆಯಲು ಬಂದ ಅಭಿಮಾನಿಗಳಿಗೆ ಬೈದು ಓಡಿಸಿದ ಬಾಬರ್ ಅಜಂ; ವಿಡಿಯೊ ವೈರಲ್​

Madhu Chopra on Priyanka Chopra-Nick Jonas' age gap
ಬಾಲಿವುಡ್17 mins ago

Madhu Chopra: ಮಗಳು-ಅಳಿಯನ ವಯಸ್ಸಿನ ಅಂತರ ಬಗ್ಗೆ ಪ್ರಿಯಾಂಕಾ ಚೋಪ್ರಾ ತಾಯಿ ಹೇಳಿದ್ದೇನು?

Tamarind Fruit Benefits
ಆರೋಗ್ಯ17 mins ago

Tamarind Fruit Benefits: ಜೀರ್ಣಶಕ್ತಿ ಹೆಚ್ಚಿಸಿ ತೂಕ ಇಳಿಸಲು ಹುಣಸೇ ಹಣ್ಣು ಸುಲಭದ ಉಪಾಯ!

Karnataka Weather
ಮಳೆ33 mins ago

Karnataka Weather: ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಇಂದು ಸಂಜೆ ಭಾರಿ ಮಳೆ ಸಾಧ್ಯತೆ!

Viral News
ವೈರಲ್ ನ್ಯೂಸ್49 mins ago

Viral News: 10 ಅಡಿಯ ದೈತ್ಯ ಮೊಸಳೆಯಿಂದ ಕಬ್ಬಿಣದ ಗೇಟು ಹಾರಲು ಯತ್ನ; ಮೈ ಜುಮ್ಮೆನ್ನಿಸುವ ವಿಡಿಯೊ ಇಲ್ಲಿದೆ

Rashmika Mandanna shares why she doesn’t speak English
ಸಿನಿಮಾ53 mins ago

Rashmika Mandanna: ಸಮಾರಂಭಗಳಲ್ಲಿ ರಶ್ಮಿಕಾ ಇಂಗ್ಲೀಷ್‌ ಏಕೆ ಮಾತನಾಡಲ್ಲ? ನಟಿ ಕೊಟ್ಟ ಸ್ಪಷ್ಟನೆ ಏನು?

Bhavani Revanna
ಕರ್ನಾಟಕ59 mins ago

Bhavani Revanna: ಭವಾನಿ ರೇವಣ್ಣ ‘ಜಾಮೀನು’ ತೀರ್ಪು ಕಾಯ್ದಿರಿಸಿದ ಕೋರ್ಟ್;‌ ಮೇ 31 ಅಮ್ಮ-ಮಗನಿಗೆ ಬಿಗ್‌ ಡೇ!

Team India's T20 WC Jersey
ಕ್ರೀಡೆ1 hour ago

Team India’s T20 WC Jersey: ನೂತನ ಜೆರ್ಸಿಯಲ್ಲಿ ಕಂಗೊಳಿಸಿದ ರಿಷಭ್​ ಪಂತ್​; ಅಭಿಮಾನಿಗಳಿಂದಲೂ ಬೆಂಬಲ

Missing Case
ಕರ್ನಾಟಕ1 hour ago

Missing Case: ಚಿಕ್ಕಬಳ್ಳಾಪುರದಲ್ಲಿ ಯುವತಿಯರ ನಾಪತ್ತೆ ಕೇಸ್‌ಗಳು ಹೆಚ್ಚಳ; ಒಂದೇ ವಾರದಲ್ಲಿ ಇಬ್ಬರು ಮಿಸ್ಸಿಂಗ್‌!

Prajwal Revanna Case
ಕರ್ನಾಟಕ1 hour ago

Prajwal Revanna Case: ಭಾರತಕ್ಕೆ ಬರುವ ಮೊದಲೇ ಜಾಮೀನಿಗಾಗಿ ಪ್ರಜ್ವಲ್‌ ಅರ್ಜಿ ಸಲ್ಲಿಕೆ; ಮುಂದೇನಾಗತ್ತೆ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ22 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 day ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ7 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌