Viral video | ನೀರಿಗೆ ಬಿದ್ದ ಕಾಗೆಯನ್ನು ರಕ್ಷಿಸಿದ ಕರಡಿ! - Vistara News

ವೈರಲ್ ನ್ಯೂಸ್

Viral video | ನೀರಿಗೆ ಬಿದ್ದ ಕಾಗೆಯನ್ನು ರಕ್ಷಿಸಿದ ಕರಡಿ!

ಪ್ರಾಣಿಗಳಲ್ಲೂ ಮಾನವೀಯತೆ ಇದೆ ಎಂಬುದನ್ನು ಮನುಷ್ಯನಿಗೆ ಆಗಾಗ ಮನವರಿಕೆ ಮಾಡುವ ಕೆಲಸವನ್ನು ಇಂಥ ವಿಡಿಯೋಗಳು ಮಾಡುತ್ತಿರುತ್ತವೆ. ಇದು ಅಂಥದೊಂದು ವಿಡಿಯೋ.

VISTARANEWS.COM


on

viral
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಾವೆಲ್ಲ ಪಂಚತಂತ್ರದ ಕಥೆಗಳನ್ನು ಕೇಳಿ ಬೆಳೆದಿದ್ದೇವೆ. ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಇರುವೆಯನ್ನು ರಕ್ಷಿಸಿದ ಪಾರಿವಾಳಕ್ಕೆ ಕಷ್ಟಕಾಲದಲ್ಲಿ ನೆರವಾದ ಇರುವೆಯ ಕಥೆಯನ್ನೂ ಕೇಳಿ ಅದರ ನೀತಿಯನ್ನು ಮನಗಂಡಿದ್ದೇವೆ. ಇದೆಲ್ಲ ಕೇವಲ ಕಥೆಗಳಲ್ಲಿ ಮಾತ್ರವೇ ಎಂಬುದು ಕಾಲಕ್ರಮೇಣ ಮನುಷ್ಯನಿಗೆ ಅರಿವಾದರೂ, ಆಗೊಮ್ಮೆ ಈಗೊಮ್ಮೆ ಇಂಥ ಘಟನೆಗಳು ಮನುಷ್ಯನ ಕಣ್ಣು ತೆರೆಸುವ ಕೆಲಸ ಮಾಡುತ್ತದೆ. ಮನುಷ್ಯ ಮಾನವೀಯತೆ ಮರೆತರೆ, ಪ್ರಾಣಿಗಳಂತೆ ಎಂದು ಮನುಷ್ಯನನ್ನು ಹೋಲಿಕೆ ಮಾಡುವುದೂ ಬಹಳ ಸಾಮಾನ್ಯ. ಆದರೆ, ಪ್ರಾಣಿಗಳಲ್ಲೂ ಮಾನವೀಯತೆ ಇದೆ ಎಂಬುದನ್ನು ಮನುಷ್ಯನಿಗೆ ಆಗಾಗ ಮನವರಿಕೆ ಮಾಡುವ ಕೆಲಸವನ್ನು ಇಂಥ ವಿಡಿಯೋಗಳು ಮಾಡುತ್ತಿರುತ್ತವೆ.

ಸದ್ಯಕ್ಕೆ ವೈರಲ್‌ ಆಗಿರುವ ವಿಡಿಯೋ ಒಂದು ಕರಡಿಯದ್ದು. ʻಹುಲಿ, ಆನೆಯ ಕೈಗೆ ಸಿಕ್ಕರಾದರೂ ಬಚಾವಾಗಬಹುದು, ಆದರೆ, ಕರಡಿಯ ಕೈಯಲ್ಲಿ ಸಾಧ್ಯವಿಲ್ಲ, ಅಷ್ಟು ಡೇಂಜರಸ್‌ ಪ್ರಾಣಿ ಕರಡಿʼ ಎಂಬ ಮಾತುಗಳನ್ನು ಕೇಳಿಸಿಕೊಂಡಿದ್ದೇವಾದರೂ, ಇಲ್ಲೊಂದು ಕರಡಿ ತನ್ನ ಇನ್ನೊಂದು ಮುಖವನ್ನು ಜಗತ್ತಿಗೆ ತೋರಿಸಿದೆ. ನೀರಿನಲ್ಲಿ ಮುಳುತ್ತಿದ್ದ ಕಾಗೆಯೊಂದನ್ನು ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದೆ.

ಹಂಗೇರಿಯ ಬುಡಾಪೆಸ್ಟ್‌ ಪ್ರಾಣಿ ಸಂಗ್ರಹಾಲಯದಲ್ಲಿರುವ ವಾಲಿ ಎಂಬ ಹೆಸರಿನ ಕರಡಿಯೊಂದು ಆರಾಮವಾಗಿ ಏನೋ ತಿಂದುಕೊಂಡು ಅಡ್ಡಾಡುತ್ತಿದ್ದಾಗ ಅಲ್ಲೇ ಕೆಳಗೆ ಕಾಗೆಯೊಂದು ಕೊಳಕ್ಕೆ ಬಿದ್ದು ಜೀವಭಯದಲ್ಲಿ ರೆಕ್ಕೆ ಬಡಿದುಕೊಂಡು ದಡ ಸೇರಲು ತಿಳಿಯದೆ ಒದ್ದಾಡುತ್ತಿರುತ್ತದೆ. ಕರಡಿ ಒಮ್ಮೆ ಆ ಕಾಗೆಯತ್ತ ದೃಷ್ಟಿ ಹರಿಸಿದರೂ, ಅದನ್ನು ರಕ್ಷಿಸಲು ಒಡನೆಯೇ ಹೊರಡುವುದಿಲ್ಲ. ತನ್ನ ಪಾಡಿಗೆ ತಾನು ತಿನ್ನುವ ಕಾರ್ಯದಲ್ಲಿ ಮಗ್ನವಾಗಿ ಬಿಡುತ್ತದೆ. ಆದರೆ, ಮತ್ತೆ ತನ್ನ ದೃಷ್ಠಿಯನ್ನು ಕಾಗೆಯತ್ತ ಹರಿಸಿದಾಗ, ಮತ್ತೆಯೂ ಅದರ ಒದ್ದಾಟ ಮುಂದುವರಿದಿರುವುದನ್ನು ಗಮನಿಸಿ, ಕೂಡಲೇ, ತನ್ನ ಒಂದು ಕೈಯನ್ನು ನೀರಿನೊಳಗೆ ಹಾಕಿ ಕಾಗೆಯನ್ನು ಮೇಲೆತ್ತಿ ಅಲ್ಲೇ ನೆಲದಲ್ಲಿ ವಾಪಸ್‌ ಹಾಕಿ, ತನಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ತಿನ್ನುವ ಕಾರ್ಯ ಮುಂದುವರಿಸುತ್ತದೆ. ಸ್ವಲ್ಪ ಹೊತ್ತು ಸತ್ತಂತೆ ಬಿದ್ದುಕೊಂಡ ಕಾಗೆ, ಮತ್ತೆ ರೆಕ್ಕೆ ಬಡಿದುಕೊಂಡು ಹೇಗೋ ಮೊದಲಿನಂತಾಗಿ ಚೈತನ್ಯ ಪಡೆಯುತ್ತದೆ. ಎದ್ದು ನಿಂತ ಕಾಗೆ ಅಲ್ಲೇ ತಿನ್ನುತ್ತಾ ಸುತ್ತಾಡುತ್ತಿರುವ ಕರಡಿಯನ್ನು ನೋಡುತ್ತಾ ನಿಲ್ಲುತ್ತದೆ, ಆದರೆ ಕರಡಿ ಮಾತ್ರ, ತಾನು ಕಾಗೆಗೆ ಜೀವದಾನ ಮಾಡಿದ್ದು ಅಂಥ ದೊಡ್ಡ ಸಂಗತಿಯೇ ಅಲ್ಲ ಎಂಬಂತೆ ತನ್ನ ಕೆಲಸದಲ್ಲೇ ಮಗ್ನವಾಗಿರುತ್ತದೆ.

ಇದನ್ನೂ ಓದಿ | Baby Bump | ಹಾರ್ಲೇ ಡೇವಿಡ್ಸನ್ ಬೈಕ್ ರೈಡ್‌ ಮಾಡಿದ ಗರ್ಭಿಣಿ; ಬೇಬಿ ಬಂಪ್‌ ಫೋಟೊ ಶೂಟ್‌ ವೈರಲ್‌

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ೪.೫ ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡಿದ್ದು, ಜನರನ್ನು ದಂಗಾಗಿಸಿದೆ. ʻತನ್ನದೇ ಬೇಟೆಯಾಗಬಹುದಾಗಿದ್ದ ಜೀವವನ್ನು ಇನ್ನೊಂದು ಪ್ರಾಣಿ ರಕ್ಷಿಸುವುದು ನಿಜಕ್ಕೂ ಪ್ರಕೃತಿಯ ವಿಸ್ಮಯವೇ ಸರಿ, ಇದೊಂದು ನಿಜವಾದ ಮಾನವೀಯತೆʼ ಎಂದು ವಿವರಿಸುವ ಮೂಲಕ ಹಲವರನ್ನು ಈ ವಿಡಿಯೋ ಚಿಂತನೆಗೆ ಹಚ್ಚಿದಂತಿದೆ. ಆ ಕರಡಿ ಮಾಡಿದ ಉಪಕಾರವನ್ನು ಆ ಕಾಗೆ ಎಂದಿಗೂ ಮರೆಯದು ಎಂದು ಒಬ್ಬರು ಕಮೆಂಟ್‌ ಮಾಡಿದರೆ, ಇನ್ನೂ ಒಬ್ಬರು, ಮಾನವರಲ್ಲೂ ಕಾಣದ ಮಾನವೀಯತೆಯಿದು ಎಂದು ಬಣ್ಣಿಸಿದ್ದಾರೆ.

ʻತನ್ನದೇ ಬೇಟೆಯನ್ನು ರಕ್ಷಿಸುವ ಈ ಪ್ರಾಣಿಗಳ ಇಂಥ ನಡತೆಯನ್ನು ಕಂಡಾಗಲೆಲ್ಲ ಆಶ್ಚರ್ಯವಾಗುತ್ತದೆ. ಕೇವಲ ಹಸಿವಾದಾಗ ಮಾತ್ರ ಎಷ್ಟೇ ಕ್ರೂರ ಪ್ರಾಣಿಯಾದರೂ ಇನ್ನೊಂದು ಜೀವದ ಬೇಟೆಯಾಡುತ್ತದೆ. ಬಾಕಿ ಸಮಯದಲ್ಲಿ ತನ್ನಂತೆ ಒಂದು ಜೀವ ಎಂಬ ಅಂತಃಕರಣ ಪ್ರಾಣಿಗಳಲ್ಲೂ ಇರುತ್ತದೆʼ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ.

ಇನ್ನೂ ಒಬ್ಬರು, ಪ್ರಾಣಿಗಳನ್ನು ನೋಡಿ ನಾವು ಮನುಷ್ಯರು ಕಲಿಯುವಂಥದ್ದು ಬಹಳಷ್ಟಿವೆ. ನಮ್ಮನ್ನು ನಾವು ತಿದ್ದಿಕೊಳ್ಳಬೇಕೆಂದರೆ, ನಾವು ಪ್ರಾಣಿಗಳ ನಡತೆಯನ್ನು ಗಮನಿಸುತ್ತಿರಬೇಕು. ಕೆಲವೊಮ್ಮೆ ನಮ್ಮ ನಡತೆಗೆ ನಾವೇ ನಾಚಿಕೆ ಪಟ್ಟುಕೊಳ್ಳಬೇಕು. ಪ್ರಕೃತಿಯ ಇಂತಹ ವಿಸ್ಮಯಗಳೆಲ್ಲ ಎಷ್ಟು ಚಂದ! ಎಂದಿದ್ದಾರೆ.

ಇದನ್ನೂ ಓದಿ | RRR Film | ಜ್ಯೂ.ಎನ್‌ಟಿಆರ್‌ ನೋಡಿ ಭಾವುಕರಾದ ಜಪಾನ್‌ ಅಭಿಮಾನಿಗಳು: ವಿಡಿಯೊ ವೈರಲ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ಮುಂಬಯಿ ವಿಮಾನ ನಿಲ್ದಾಣದಲ್ಲಿ ಯುವತಿಯ ರೀಲ್ಸ್ ಹುಚ್ಚಾಟ; ಸಿಡಿದೆದ್ದ ನೆಟ್ಟಿಗರು

ಮುಂಬಯಿ ವಿಮಾನ ನಿಲ್ದಾಣದಲ್ಲಿ ರೀಲ್ಸ್ ಮಾಡಿದ ಮಹಿಳೆಯೊಬ್ಬಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ನೆಟ್ಟಿಗರಿಂದ ಭಾರೀ ಟೀಕೆಗೆ ಗುರಿಯಾಗಿದೆ. ಆಕೆಯ ವಿರುದ್ಧ ಕ್ರಮಕ್ಕೆ ಸಾಕಷ್ಟು ಮಂದಿ ಒತ್ತಾಯಿಸಿದ್ದಾರೆ.

VISTARANEWS.COM


on

By

Viral Video
Koo

ಸಾರ್ವಜನಿಕ ಸ್ಥಳಗಳಲ್ಲಿ (public areas) ಇತ್ತೀಚೆಗೆ ವಿಡಿಯೋ ಮಾಡುವವರ ಹಾವಳಿ ಹೆಚ್ಚಾಗಿದೆ. ಮುಂಬಯಿ ವಿಮಾನ ನಿಲ್ದಾಣದಲ್ಲಿ (Mumbai Airport) ಮಹಿಳೆಯೊಬ್ಬರು ನೃತ್ಯ ಮಾಡಿರುವ ವಿಡಿಯೋವನ್ನು (Viral Video) ಸಾಮಾಜಿಕ ಜಾಲತಾಣದಲ್ಲಿ (social media) ಹಂಚಿಕೊಂಡಿದ್ದು, ಸಾಕಷ್ಟು ಟೀಕೆಗೆ ಗುರಿಯಾಗಿದೆ. ಕೆಲವರು ಆಕೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮೆಟ್ರೋ ರೈಲುಗಳು, ರೈಲು ಪ್ಲಾಟ್‌ಫಾರ್ಮ್‌ಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಜನರು ನೃತ್ಯ ಮಾಡುವ ಪ್ರವೃತ್ತಿಯಲ್ಲಿ ಇತ್ತೀಚೆಗೆ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಈ ಕುರಿತು ಕಾನೂನು ಕ್ರಮ ಕೈಗೊಳ್ಳಬೇಕಿದೆ ಎನ್ನುವ ಒತ್ತಾಯಗಳೂ ಕೇಳಿ ಬರುತ್ತಿದೆ.

ಇತರ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುವ, ಕಿರಿಕಿರಿ ಮಾಡುವ ವಿಡಿಯೋವೊಂದನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ಚಿತ್ರೀಕರಿಸಲಾಗಿದೆ. ಬಾಲಿವುಡ್ ಹಾಡಿಗೆ ಮಹಿಳೆಯೊಬ್ಬರು ನೃತ್ಯ ಮಾಡುತ್ತಿರುವ ಈ ಹೊಸ ವಿಡಿಯೋ ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಕುರುಕ್ಷೇತ್ರದ ‘ಆಪ್ ಕಾ ಆನಾ’ ಹಾಡಿನಲ್ಲಿ ಮಹಿಳೆಯೊಬ್ಬಳು ಸಲ್ವಾರ್ ಕುರ್ತಾ ಧರಿಸಿ ನೃತ್ಯ ಮಾಡಿದ್ದಾಳೆ. ಆಕೆಯ ಕೆಲವು ಭಂಗಿಗಳು ಸಾರ್ವಜನಿಕರಿಗೆ ಮುಜುಗರ ಉಂಟು ಮಾಡಿದೆ. ಅನೇಕ ಜನರು ಅವಳನ್ನು ಕುತೂಹಲದಿಂದ ನೋಡುತ್ತಿದ್ದರೆ, ಇತರರು ನೋಡಿಯೂ ನೋಡದಂತೆ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

”ವೈರಸ್ ವಿಮಾನ ನಿಲ್ದಾಣವನ್ನು ತಲುಪಿದೆ” ಎಂಬ ಶೀರ್ಷಿಕೆಯಡಿ @desimojito ಎಂಬ ಹೆಸರಿನ ಬಳಕೆದಾರ ಎಕ್ಸ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾನೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅನೇಕರು ಆಕೆಯನ್ನು ಟೀಕಿಸಿದ್ದಾರೆ. ಇದೊಂದು ಸಾರ್ವಜನಿಕ ಉಪದ್ರವ ಎಂದು ಹೇಳಿದ್ದಾರೆ. ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಕೆಲವರು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಹೆಚ್ಚುತ್ತಿರುವ ಈ ಪ್ರವೃತ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇದು ಶೀಘ್ರದಲ್ಲೇ ನಿಲ್ಲುವಂತೆ ತೋರುತ್ತಿಲ್ಲ ಎಂದು ಹೇಳಿದ್ದಾರೆ.

ಒಬ್ಬ ಬಳಕೆದಾರನು ಹೀಗೆ ಬರೆದಿದ್ದಾನೆ, ಅಷ್ಟು ಗಟ್ಟಿಯಾಗಿ ನನ್ನ ಕರುಳನ್ನು ಗಂಟುಗೆ ತಿರುಗಿಸಿದೆ. ಇದು ಯಾವಾಗಲೂ ಭಯಾನಕ, ಅಸ್ಪಷ್ಟ 90ರ ಬಾಲಿವುಡ್ ಹಾಡು ಎಂದು ಹೇಳಿದ್ದು, ಮತ್ತೊಬ್ಬರು, ಮಾನವೀಯತೆ ಮತ್ತು ವಿವೇಕ ಎಲ್ಲಿಗೆ ಹೋಗುತ್ತಿದೆ?’ ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು ‘ಇವರಂತಹ ಜನರಿಗೆ ಕಠಿಣ ಕಾನೂನು ಮತ್ತು ದಂಡದ ಅಗತ್ಯವಿದೆ. ಅವರು ಪ್ರತಿ ಸ್ಥಳವನ್ನು ಸರ್ಕಸ್ ಆಗಿ ಪರಿವರ್ತಿಸಿದ್ದಾರೆ ಎಂದು ತಿಳಿಸಿದ್ದಾರೆ.


ಮತ್ತೊಬ್ಬರು ಪ್ರಧಾನಿ ಮೋದಿ ಅವರ ಮುಂದಿನ ಅವಧಿಯಲ್ಲಿ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಈ ವಿದೂಷಕರನ್ನು ನಿಷೇಧಿಸುವಂತೆ ನಾನು ಒತ್ತಾಯಿಸುತ್ತೇನೆ ಎಂದು ಹೇಳಿದ್ದು, ಇನ್ನೊಬ್ಬರು ವಿಮಾನ ನಿಲ್ದಾಣದ ಒಳಗೆ ಮತ್ತು ಹೊರಗೆ ಇಂತಹ ಪ್ರದರ್ಶನಕ್ಕೆ ಅನುಮತಿ ಇರುವುದಿಲ್ಲ. ಜನರು ಗಂಭೀರ ವ್ಯವಹಾರಕ್ಕಾಗಿ ವಿಮಾನ ನಿಲ್ದಾಣಗಳಿಗೆ ಭೇಟಿ ನೀಡುವುದು. ಟೈಮ್ ಪಾಸ್ ಮತ್ತು ಮನರಂಜನೆಗಾಗಿ ಅಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Viral News: ಸರ ಕದ್ದು ಪರಾರಿಯಾಗಲು ಬೈಕ್‌ ಏರಿದವರಿಗೆ ಕಾದಿತ್ತು ಶಾಕ್‌; ವಿಡಿಯೊ ಇಲ್ಲಿದೆ

ಈ ಬಗ್ಗೆ ಇಲ್ಲಿಯವರೆಗೆ ಯಾವುದೇ ಅಧಿಕಾರಿಗಳಿಂದ ಪ್ರತಿಕ್ರಿಯೆ ಬಂದಿಲ್ಲ.

ಈ ಹಿಂದೆ ಮುಂಬಯಿನಲ್ಲಿ ಚಲಿಸುತ್ತಿರುವ ಲೋಕಲ್ ರೈಲಿನೊಳಗೆ ಯುವತಿಯೊಬ್ಬಳು ಭೋಜ್‌ಪುರಿ ಹಾಡುಗಳಿಗೆ ಡ್ಯಾನ್ಸ್ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು.

Continue Reading

ವೈರಲ್ ನ್ಯೂಸ್

Viral Video: ಪ್ರಜ್ಞೆ ಕಳೆದುಕೊಂಡು ಬಿದ್ದ ಕೋತಿಗೆ ಮರುಜೀವ ನೀಡಿದ ಪೊಲೀಸ್ ಅಧಿಕಾರಿ; ಮನ ಮಿಡಿಯೋ ವಿಡಿಯೊ ಇಲ್ಲಿದೆ

ಮರದಿಂದ ಪ್ರಜ್ಞೆ ಕಳೆದುಕೊಂಡು ಬಿದ್ದ ಕೋತಿಗೆ ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಸಿಪಿಆರ್ ತುರ್ತು ಚಿಕಿತ್ಸೆ ನೀಡಿ ಜೀವ ಉಳಿಸಿದ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral Video) ಆಗಿದೆ.

VISTARANEWS.COM


on

By

Viral Video
Koo

ಮರದಿಂದ ಪ್ರಜ್ಞೆ ಕಳೆದುಕೊಂಡು ಬಿದ್ದ ಕೋತಿಗೆ (monkey) ಪೊಲೀಸ್ ಅಧಿಕಾರಿಯೊಬ್ಬರು (police officer) ಮರುಜೀವ ನೀಡಿದ ಘಟನೆ ಉತ್ತರಪ್ರದೇಶದ (uttarpradesh) ಬುಲಂದ್‌ಶಹರ್‌ನಲ್ಲಿ (Bulandshahr) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ (social media) ಭಾರೀ ವೈರಲ್ (Viral Video) ಆಗಿದ್ದು, ಪೊಲೀಸ್ ಅಧಿಕಾರಿಯ ನಡೆಗೆ ಭಾರಿ ಪ್ರಶಂಸೆ ಕೇಳಿ ಬರುತ್ತಿದೆ.

ಪೊಲೀಸ್ ಠಾಣೆ ಆವರಣದೊಳಗೆ ನಿರ್ಜೀವವಾಗಿ ಬಿದ್ದಿದ್ದ ಕೋತಿಯನ್ನು ಕಂಡ ಪೊಲೀಸ್ ಅಧಿಕಾರಿ ಕೂಡಲೇ ಅದಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಿ ಮರುಜೀವ ನೀಡಿದ್ದಾರೆ. ಮೇ 24 ರಂದು ತೀವ್ರವಾದ ಬಿಸಿಲಿನಿಂದ ಕೋತಿ ಪ್ರಜ್ಞೆ ಕಳೆದುಕೊಂಡು ಮರದಿಂದ ಕೆಳಗೆ ಬಿದ್ದಿತ್ತು. ಇದನ್ನು ನೋಡಿದ ಛಾತಾರಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ವಿಕಾಸ್ ತೋಮರ್ ಅವರು ಕೋತಿಗೆ ಮರುಜೀವ ನೀಡಲು ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (CPR) ಅನ್ನು ನೀಡಿದರು. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ನಾವು ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ತರಬೇತಿ ಪಡೆದಿದ್ದೇವೆ. ಮನುಷ್ಯರು ಮತ್ತು ಕೋತಿಗಳ ದೇಹಗಳು ತುಂಬಾ ಹೋಲುವುದರಿಂದ ಈ ರೀತಿ ಮಾಡಿದೆ. ಸಹೋದ್ಯೋಗಿಗಳು ಉದ್ರೇಕಗೊಂಡ ಗುಂಪಿನಿಂದ ಈ ಕೋತಿಯನ್ನು ರಕ್ಷಿಸಲು ನಾನು ಪ್ರಯತ್ನಿಸಿದೆ. ಸುಮಾರು 45 ನಿಮಿಷಗಳ ಕಾಲ ಎದೆಯನ್ನು ಉಜ್ಜಿ ಸ್ವಲ್ಪ ಪ್ರಮಾಣದ ನೀರನ್ನು ಬಾಯಿಗೆ ಸುರಿದೆ. ಅಂತಿಮವಾಗಿ ಅದಕ್ಕೆ ಜೀವ ಬಂದಿತ್ತು ಎಂದು ಅವರು ತಿಳಿಸಿದ್ದಾರೆ.

ಕೋತಿಗೆ ಪ್ರಜ್ಞೆ ಮರಳಿದ ಬಳಿಕ ಪಶುವೈದ್ಯ ಡಾ. ಹರಿ ಓಂ ಶರ್ಮಾ ಅವರು ಅದಕ್ಕೆ ಚಿಕಿತ್ಸೆ ಮುಂದುವರಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಇದರ ವಿಡಿಯೊವನ್ನು ಸುದ್ದಿ ಸಂಸ್ಥೆ ಐಎಎನ್‌ಎಸ್ ಹಂಚಿಕೊಂಡಿದ್ದು, ವ್ಯಾಪಕ ಗಮನ ಸೆಳೆದಿದೆ.

ಬುಲಂದ್‌ಶಹರ್‌ ಪೊಲೀಸ್ ಠಾಣೆಯ ಆವರಣದಲ್ಲಿ ಶಾಖದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಿರ್ಜೀವ ಕೋತಿಯನ್ನು ಪೋಲೀಸ್ ಅಧಿಕಾರಿಯೊಬ್ಬರು ಪುನರುಜ್ಜೀವನಗೊಳಿಸಿದ್ದಾರೆ, ಅದಕ್ಕೆ ನೀರು ನೀಡಿ, ಅದರ ಜೀವವನ್ನು ಉಳಿಸಿದ್ದಾರೆ ಎಂಬ ಶೀರ್ಷಿಕೆ ನೀಡಿ ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ವಿಡಿಯೋದಲ್ಲಿ ಪ್ರಜ್ಞಾಹೀನ ಕೋತಿಯ ಮೇಲೆ ತೋಮರ್ ಸಿಪಿಆರ್ ಮಾಡುತ್ತಿರುವುದು, ಹಿನ್ನಲೆಯಲ್ಲಿ ಯಾರೋ “ಇಸ್ಕೋ ಥೋಡಾ ಸಾ ಪಾನಿ ಔರ್ ದೋ. ಥೋಡಾ ಪಾನಿ ಡಾಲ್ ದೋ ಅಂದರೆ ಇನ್ನಷ್ಟು ನೀರು ಕೊಡಿ. ಅದರ ಮೇಲೆ ಸ್ವಲ್ಪ ನೀರು ಸುರಿಯಿರಿ ಎಂದು ಹೇಳುತ್ತಿರುವುದು ಕೇಳುತ್ತದೆ.


ವಿಡಿಯೋ ಮುಂದುವರಿದಂತೆ, ತೋಮರ್ ಕೋತಿಯ ಮುಂಭಾಗದ ಕಾಲುಗಳನ್ನು ಹಿಡಿದುಕೊಂಡು ಅದರ ಹಿಂಗಾಲುಗಳ ಮೇಲೆ ನಿಲ್ಲಲು ಸಹಾಯ ಮಾಡಿದರು. ಕ್ಲಿಪ್‌ನ ಕೊನೆಯಲ್ಲಿ ಕೋತಿಗೆ ಪ್ರಜ್ಞೆ ಮರಳಿ ಬಂದಿದೆ. ತೋಮರ್ ಅದರ ಮೇಲೆ ನೀರನ್ನು ಸುರಿಯುತ್ತಿದ್ದಂತೆ ಅದು ಅತ್ತಿತ್ತ ಜಿಗಿಯ ತೊಡಗುತ್ತದೆ. ಗುರುವಾರ ಹಂಚಿಕೊಳ್ಳಲಾದ ಈ ವಿಡಿಯೋ ಹಲವಾರು ವೀಕ್ಷಣೆಗಳನ್ನು ಗಳಿಸಿದೆ. ಅನೇಕ ವೀಕ್ಷಕರು ಅಧಿಕಾರಿಯ ಪ್ರಯತ್ನಗಳನ್ನು ಶ್ಲಾಘಿಸಲು ಕಾಮೆಂಟ್‌ ಮಾಡಿದ್ದಾರೆ.

Continue Reading

ಕ್ರಿಕೆಟ್

Team India T20 World Cup: ಚಿಂಟುವಿನ ಆಸೆ ನೆರವೇರಿಸಲು ಟೀಮ್​ ಇಂಡಿಯಾ ಜತೆ ನ್ಯೂಯಾರ್ಕ್​ಗೆ ತೆರಳಿದ ತಾಯಿ

Team India T20 World Cup: 2007ರಲ್ಲಿ ನಡೆದಿದ್ದ ಚೊಚ್ಚಲ ಆವೃತ್ತಿಯಲ್ಲಿ ಕಪ್​ ಗೆದ್ದ ಬಳಿಕ ಇದುವರೆಗೆ ಭಾರತ(Team India) ಕಪ್​ ಗೆದಿಲ್ಲ. 17 ವರ್ಷಗಳ ಬಳಿಕ ಮತ್ತೊಂದು ಕಪ್​ ಗೆಲ್ಲುವ ಇರಾದೆಯೊಂದಿಗೆ ಆಟಗಾರರು ಕಣಕ್ಕಿಳಿಯಲಿದ್ದಾರೆ. ಇದೀಗ ಡ್ರೀಮ್​ ಇಲೆವೆನ್​ನ(Dream11) ಜಾಹೀರಾತೊಂದು ಭಾರೀ ಸದ್ದು ಮಾಡುತ್ತಿದೆ.

VISTARANEWS.COM


on

Team India Dream 11
Koo

ಮುಂಬಯಿ: ಟಿ20 ವಿಶ್ವಕಪ್​ ಟೂರ್ನಿ(T20 World Cup 2024) ಇನ್ನೆರಡು ದಿನಗಳಲ್ಲಿ ಕಾವೇರಲಿದೆ. ಭಾರತ(Team India T20 World Cup) ತನ್ನ ಮೊದಲ ಪಂದ್ಯವನ್ನು ಜೂನ್​ 5ರಂದು ಐರ್ಲೆಂಡ್​ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. 2007ರಲ್ಲಿ ನಡೆದಿದ್ದ ಚೊಚ್ಚಲ ಆವೃತ್ತಿಯಲ್ಲಿ ಕಪ್​ ಗೆದ್ದ ಬಳಿಕ ಇದುವರೆಗೆ ಭಾರತ(Team India) ಕಪ್​ ಗೆದಿಲ್ಲ. 17 ವರ್ಷಗಳ ಬಳಿಕ ಮತ್ತೊಂದು ಕಪ್​ ಗೆಲ್ಲುವ ಇರಾದೆಯೊಂದಿಗೆ ಆಟಗಾರರು ಕಣಕ್ಕಿಳಿಯಲಿದ್ದಾರೆ. ಇದೀಗ ಡ್ರೀಮ್​ ಇಲೆವೆನ್​ನ(Dream11) ಜಾಹೀರಾತೊಂದು ಭಾರೀ ಸದ್ದು ಮಾಡುತ್ತಿದೆ.

ಭಾರತ ತಂಡ ಉತ್ತಮವಾಗಿ ಆಡು ಕಪ್​ ಗೆಲ್ಲಲಿ ಎನ್ನುವ ಪ್ರಧಾನ ಗುರಿಯೊಂದಿಗೆ ಡ್ರೀಮ್​ ಇಲೆವೆನ್​ ಜಾಹೀರಾತೊಂದನ್ನು ಬಿಡುಗಡೆ ಮಾಡಿದೆ. ಇದಲ್ಲಿ ಪುಟ್ಟ ಮಗು ಭಾರತ ತಂಡ ಜೆರ್ಸಿ ತೊಟ್ಟು ತನ್ನ ತಾಯಿಯ ಬಳಿ ನನ್ನ ತಂದೆ, ಸಹೋದರ ಭಾರತ ತಂಡ ವಿಶ್ವಕಪ್​ ಗೆದ್ದಿರುವುದನ್ನು ನೋಡಿದ್ದಾರೆ. ಆದರೆ ನಾನು ಯಾವಾಗ ಈ ಸುಂದರ ಕ್ಷಣವನ್ನು ನೋಡಲು ಸಾಧ್ಯ. ಈ ಬಾರಿ ಖಂಡಿತವಾಗಿಯೂ ನೋಡಲು ಸಾಧ್ಯವೇ? ಎಂದು ಪ್ರಶ್ನೆ ಮಾಡುತ್ತಾನೆ. ಈ ವಿಡಿಯೊವನ್ನು ತಾಯಿ ಟೀಮ್​ ಇಂಡಿಯಾದ ಆಟಗಾರರಿಗೆ ತೋರಿಸಿ ನೀವು ಏನು ಮಾಡುತ್ತೀರಾ ಎಂದು ನನಗೆ ತಿಳಿದಿಲ್ಲ ನನ್ನ ಮಗ ಚಿಂಟುವಿನ ಆಸೆಯನ್ನು ಈ ಬಾರಿ ಈಡೇರಿಸಲೇ ಬೇಕೆಂದು ಮಗುವಿನ ತಾಯಿ ಆಟಗಾರರಿಗೆ ಖಡಕ್​ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ T20 World Cup 2007: ಚೊಚ್ಚಲ ಟಿ20 ವಿಶ್ವಕಪ್ ಭಾರತ-ಪಾಕ್​ ಫೈನಲ್​ ಪಂದ್ಯದ ಮೆಲುಕು ನೋಟ

ಈ ಬಾರಿಯ ಟೂರ್ನಿಗೆ ಸಿದ್ಧತೆ ಹೇಗಿದೆ ಎಂದು ಕೇಳಿದಾಗ ರೋಹಿತ್​ ನಾವು ಕಠಿಣ ತರಬೇತಿ ಪಡೆಯುತ್ತಿದ್ದೇವೆ ಎನ್ನುತ್ತಾರೆ. ಈ ವೇಳೆ ಚಿಂಟು ತಾಯಿ ನೋಡುತ್ತಿದ್ದೇನೆ ನಿಮ್ಮ ತಯಾರಿಯನ್ನು… ಹೀಗೆ ಅಭ್ಯಾಸ ನಡೆಸಿದರೆ ಕಪ್​ ಗೆಲ್ಲಲು ಸಾಧ್ಯವೇ ಎನ್ನುತ್ತಾರೆ. ಈ ವೇಳೆ ಉಪನಾಯಕ ಹಾರ್ದಿಕ್​ ಪಾಂಡ್ಯ ನೀವು ಆಶೀರ್ವಾದ ಮಾಡಿ ಸಾಕು ಉಳಿದದ್ದು ನಾವು ನೋಡಿಕೊಳ್ಳುತ್ತೇವೆ ಎನ್ನುತ್ತಾರೆ. ನಾವು ವಿಶ್ವದ ನಂ.1 ತಂಡ ಎಂದು ರೋಹಿತ್​ ಹೇಳುತ್ತಾರೆ. ಆಗ ಈ ತಾಯಿ ತಾನು ಈ ವಿಶ್ವದ ನಂ.1 ಮಮ್ಮಿ ಎಂದು ಹೇಳುತ್ತಾರೆ. ಈ ವೇಳೆ ಜಡೇಜಾ ಮಮ್ಮಿಜೀ ಇದು ಕ್ರಿಕೆಟ್​ ಎಂದು ಹೇಳುತ್ತಾರೆ. ಇದಕ್ಕೆ ಮಮ್ಮಿ ಹಾ… ಇದು ಕ್ರಿಕೆಟ್..​ ಬ್ಯಾಟ್​, ವಿಕೆಟ್​ ಮತ್ತು ಚೆಂಡು ತಂದು ಅಭ್ಯಾಸ ಆರಂಭಿಸಿ ಎಂದು ಹೇಳುವ ಮೂಲಕ ಕೋಚಿಂಗ್​ ಮಾಡುತ್ತಾರೆ.

ಈ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡು, ವಿಶ್ವಕಪ್‌ಗಳು ಅಭಿಮಾನಿಗಳ ಶಕ್ತಿಯ ಜತೆಗೆ ಈ ಬಾರಿ ತಾಯಂದಿರ ಹರ್ಷೋದ್ಗಾರ ಜೋರಾಗಿರಲಿವೆ. ‘ಮಮ್ಮಿ ಕೆ ಮ್ಯಾಜಿಕ್ ಕೆ ಸಾಥ್'(ತಾಯಿಯ ವಿಶೇಷ ಬೆಂಬಲದೊಂದಿಗೆ) ಟೀಮ್​ ಇಂಡಿಯಾ ವಿಶ್ವಕಪ್​ ಗೆಲ್ಲಲು ಸಜ್ಜಾಗಿದೆ ಎಂದು ಬರೆದುಕೊಂಡಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

Continue Reading

ವೈರಲ್ ನ್ಯೂಸ್

Viral News: ಸರ ಕದ್ದು ಪರಾರಿಯಾಗಲು ಬೈಕ್‌ ಏರಿದವರಿಗೆ ಕಾದಿತ್ತು ಶಾಕ್‌; ವಿಡಿಯೊ ಇಲ್ಲಿದೆ

Viral News: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಿಂದ ಸರ ಕಸಿದ ಕಳ್ಳರು ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸಿದ ಕಳ್ಳರಿಬ್ಬರಿಗೆ ಬಸ್‌ ಚಾಲಕನೊಬ್ಬ ತಕ್ಕ ಪಾಠ ಕಲಿಸಿದ ವಿಡಿಯೊ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಡುತ್ತಿದೆ. ಬಸ್‌ ಚಾಲಕ ಬೈಕ್‌ಗೆ ಡಿಕ್ಕಿ ಹೊಡೆದು ಕಳ್ಳರಿಬ್ಬರನ್ನು ಬೀಳಿಸಿದ್ದು, ಆತನ ಸಮಯ ಪ್ರಜ್ಞೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

VISTARANEWS.COM


on

Viral News
Koo

ಚಂಡೀಗಢ: ಸರ ಕಳ್ಳತನ-ಸಾಮಾನ್ಯವಾಗಿ ನಾವು ಆಗಾಗ ಕೇಳುವ ಕ್ರೈಂ ಸುದ್ದಿ ಇದು. ರಸ್ತೆಯಲ್ಲಿ ಓಡಾಡುವ ಮಹಿಳೆಯರು, ವೃದ್ಧೆಯರು, ಮಕ್ಕಳ ಕುತ್ತಿಗೆಯಿಂದ ಚಿನ್ನದ ಸರ ಕಸಿಯುವ ಚಾಲಾಕಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರ ಇರಲಿ, ಗ್ರಾಮಾಂತರ ಪ್ರದೇಶವೇ ಇರಲಿ ಈ ಕಳ್ಳರ ಕೃತ್ಯಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಅದರಲ್ಲಿಯೂ ದ್ವಿಚಕ್ರ ವಾಹನದಲ್ಲಿ ಬರುವ ಖದೀಮರಿಗೆ ಒಂಟಿ ಮಹಿಳೆಯರೇ ಟಾರ್ಗೆಟ್‌. ಕೆಲವೊಮ್ಮೆ ಈ ಕೃತ್ಯ ಸಂತ್ರಸ್ತರಿಗೆ ಮಾರಣಾಂತಿಕವಾಗಿಯೂ ಪರಿಣಮಿಸುತ್ತದೆ. ಈಗ ಇಷ್ಟೆಲ್ಲ ಪೀಠಿಕೆ ಹಾಕಲೂ ಕಾರಣವಿದೆ. ಸದ್ಯ ಇಂತಹ ಚಾಲಕಿ ಕಳ್ಳರ ಕೈ ಚಳಕ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಫಾರ್‌ ಎ ಚೇಂಜ್‌ ಎಂಬಂತೆ ಈ ಘಟನೆಯ ಕೊನೆಯಲ್ಲಿ ಸಖತ್‌ ಟ್ವಿಸ್ಟ್‌ ಎದುರಾಗುತ್ತದೆ. ಅದು ಏನು ಎನ್ನುವುದನ್ನು ತಿಳಿಯಲು ಈ ವಿಡಿಯೊ ನೋಡಿ (Viral News).

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಿಂದ ಸರ ಕಸಿದ ಕಳ್ಳರು ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸುತ್ತಾರೆ. ಇದನ್ನು ಗಮನಿಸಿದ ಬಸ್‌ ಡ್ರೈವರ್‌ ಎದುರಿನಿಂದ ಬಂದು ಬೈಕ್‌ಗೆ ಡಿಕ್ಕಿ ಹೊಡೆದು ಕಳ್ಳರಿಬ್ಬರನ್ನು ಬೀಳಿಸುತ್ತಾನೆ. ಅನಿರೀಕ್ಷಿತ ಆಘಾತದಿಂದ ಕಳ್ಳರು ತತ್ತರಿಸುತ್ತಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದ್ದು, ಬಸ್‌ ಚಾಲಕನ ಸಮಯ ಪ್ರಜ್ಞೆಗೆ ನೆಟ್ಟಿಗರು ಶಹಬ್ಬಾಸ್‌ಗಿರಿ ನೀಡಿದ್ದಾರೆ.

ಘಟನೆಯ ವಿವರ

ನಡು ರಸ್ತೆಯಲ್ಲಿ ವ್ಯಕ್ತಿಯೊಬ್ಬ ಬೈಕ್‌ ನಿಲ್ಲಿಸಿಕೊಂಡಿರುವ ದೃಶ್ಯವನ್ನು ತೋರಿಸುವ ಮೂಲಕ ವಿಡಿಯೊ ಆರಂಭವಾಗುತ್ತಿದೆ. ಆತನ ʼಕ್ರೈಂ ಪಾರ್ಟನರ್‌ʼ ಮಹಿಳೆಯ ಕುತ್ತಿಗೆಯಿಂದ ಸರವನ್ನು ಎಗರಿಸುವ ದೃಶ್ಯ ಹಿನ್ನಲೆಯಲ್ಲಿ ಅಸ್ಪಷ್ಟವಾಗಿ ಕಾಣಿಸುತ್ತದೆ. ಬಳಿಕ ಆತ ಓಡಿ ಬಂದು ಬೈಕ್‌ ಏರುತ್ತಾನೆ. ಮೊದಲೇ ಬೈಕ್‌ ಸ್ಟಾರ್ಟ್‌ ಮಾಡಿ ಕಾದುಕೊಂಡಿದ್ದ ಇನ್ನೊಬ್ಬ ತಮ್ಮ ʼಮಿಷನ್‌ ಸಕ್ಸಸ್‌ʼ ಆದ ಖುಷಿಯಲ್ಲಿ ಬೈಕ್‌ ಓಡಿಸುತ್ತಾನೆ. ಆದರೆ ಅಷ್ಟರಲ್ಲಿ ʼರಿಯಲ್‌ ಹೀರೋʼನ ಎಂಟ್ರಿಯಾಗುತ್ತದೆ. ಇದನ್ನೆಲ್ಲ ಗಮನಿಸುತ್ತಿದ್ದ ಬಸ್‌ ಚಾಲಕ ಬೇಕಂತಲೇ ಮುಂದಕ್ಕೆ ಬಂದು ಬೈಕ್‌ಗೆ ಮೆಲ್ಲನೆ ಡಿಕ್ಕಿ ಹೊಡೆಯುತ್ತಾನೆ.

ಇದರಿಂದ ಕಳ್ಳರಿಬ್ಬರು ಬೈಕ್‌ ಸಮೇತ ರಸ್ತೆಗೆ ಬಿದ್ದು ಬಿಡುತ್ತಾರೆ. ಬಸ್‌ ಚಾಲಕ ಉದ್ದೇಶ ಪೂರ್ವಕವಾಗಿ ಡಿಕ್ಕಿ ಹೊಡೆದಿದ್ದರಿಂದ ಇಬ್ಬರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಬೈಕ್‌ ನೆಲಕ್ಕೆ ಉರುಳುತ್ತಿದ್ದಂತೆ ಇಬ್ಬರೂ ʼಬದುಕಿದರೆ ಬೇಡಿಯಾದರೂ ತಿನ್ನಬಹುದುʼ ಎನ್ನುವಂತೆ ಅಲ್ಲಿಂದ ಓಡಿ ಹೋಗುತ್ತಾರೆ. ಬಳಿಕ ಅವರು ಸಿಕ್ಕಿ ಬಿದ್ದಿದ್ದಾರಾ ಅಥವಾ ಪರಾರಿಯಾಗಿದ್ದಾರಾ ಎನ್ನುವುದು ತಿಳಿದು ಬಂದಿಲ್ಲ.

ಇದನ್ನೂ ಓದಿ: Viral News: 10 ಅಡಿಯ ದೈತ್ಯ ಮೊಸಳೆಯಿಂದ ಕಬ್ಬಿಣದ ಗೇಟು ಹಾರಲು ಯತ್ನ; ಮೈ ಜುಮ್ಮೆನ್ನಿಸುವ ವಿಡಿಯೊ ಇಲ್ಲಿದೆ

ಅದೇನೇ ಇರಲಿ ಸದ್ಯ ಬಸ್‌ ಚಾಲಕನ ಸಮಯ ಪ್ರಜ್ಞೆಯನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ಆತನೇ ನಿಜವಾದ ಹೀರೋ ಎಂದೆಲ್ಲ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಖದೀಮರಿಗೆ ತಕ್ಕ ಪಾಠ ಕಲಿಸಲು ಇಂತಹ ಧೈರ್ಯವಂತರ ಅಗತ್ಯ ವಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಕಳ್ಳರ ಅಹಂಕಾರಕ್ಕೆ ತಕ್ಕ ಶಾಸ್ತಿಯಾಗಿದೆ. ಒಂದೊಳ್ಳೆ ಆ್ಯಕ್ಷನ್‌ ಸಿನಿಮಾ ನೋಡಿದ ಅನುಭವವಾಯಿತು ಎಂದು ಇನ್ನು ಕೆಲವರು ಕಮೆಂಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ಈ ಘಟನೆ ಸರ ಕಳ್ಳರಿಗೆ ನಡುಕ ಹುಟ್ಟಿಸಿದ್ದು ಸುಳ್ಳಲ್ಲ.

Continue Reading
Advertisement
Prajwal Revanna Case
ಕರ್ನಾಟಕ3 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೊನೆಗೂ ಬಂಧನ; ಮುಂದೇನಾಗುತ್ತದೆ? ಏನಿದೆ ಪ್ರಕ್ರಿಯೆ?

Prajwal Revanna Case
ಪ್ರಮುಖ ಸುದ್ದಿ3 hours ago

Prajwal Revanna Case: ಪ್ರಜ್ವಲ್ ರೇವಣ್ಣ ಬಂಧನ ಆಗಿದ್ದು ಹೇಗೆ? ಏರ್​ಪೋರ್ಟ್​​ನಲ್ಲಿ ನಡೆದ ಪ್ರಕ್ರಿಯೆಗಳೇನು?

Prajwal Revanna Case
ಕರ್ನಾಟಕ3 hours ago

Prajwal Revanna Case: ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಪ್ರಜ್ವಲ್‌ ರೇವಣ್ಣ ಕೊನೆಗೂ ಬಂಧನ; ಏರ್‌ಪೋರ್ಟ್‌ನಲ್ಲೇ ಅರೆಸ್ಟ್!

3 Indian companies have featured in Time magazines list of 100 most influential companies in the world
ದೇಶ5 hours ago

Reliance Industries: ಟೈಮ್ ಮ್ಯಾಗಜೀನ್‌ನ ಜಗತ್ತಿನ ಪ್ರಭಾವಿ 100 ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌

Murder News
ಪ್ರಮುಖ ಸುದ್ದಿ6 hours ago

Murder News : ಬಾಯ್​ಫ್ರೆಂಡ್​ ಜತೆ ಸೇರಿ ಅಪ್ಪ, ತಮ್ಮನನ್ನು ಕೊಂದು ಕತ್ತರಿಸಿ ಫ್ರಿಜ್​ನಲ್ಲಿಟ್ಟಿದ್ದ 16ರ ಬಾಲಕಿ

Reserve Bank of India
ದೇಶ6 hours ago

Reserve Bank of India : ಭಾರತದ ಬ್ಯಾಂಕ್​ಗಳಲ್ಲಿವೆ ವಾರಸುದಾರರಿಲ್ಲದ 78,213 ಕೋಟಿ ರೂಪಾಯಿ!

Modi Meditation
ದೇಶ7 hours ago

Modi Meditation: ಧ್ಯಾನ ಮಾಡುವ 45 ಗಂಟೆಯೂ ಆಹಾರ ಸೇವಿಸಲ್ಲ ಮೋದಿ; 2 ದಿನ ಪಾನೀಯವೇ ಆಹಾರ!

Virat kohli
ಕ್ರಿಕೆಟ್7 hours ago

Virat Kohli : ವಿರಾಟ್​ ಕೊಹ್ಲಿ ಟೀಕಿಸಿದ ನ್ಯೂಜಿಲ್ಯಾಂಡ್​ ಮಾಜಿ ಆಟಗಾರನಿಗೆ ಕೊಲೆ ಬೆದರಿಕೆ!

Hindu Janajagruthi Samithi demands declaration of Zakir Naik as international terrorist
ಬೆಂಗಳೂರು7 hours ago

Zakir Naik: ಜಾಕೀರ್ ನಾಯಕ್‌ನನ್ನು ಭಯೋತ್ಪಾದಕನೆಂದು ಘೋಷಿಸಿ; ಹಿಂದೂ ಜನಜಾಗೃತಿ ಸಮಿತಿ ಆಗ್ರಹ

Necessary Preparation for North East Graduate Constituency Election Voting says DC M S Diwakar
ವಿಜಯನಗರ8 hours ago

MLC Election: ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆಯ ಮತದಾನಕ್ಕೆ ಸಿದ್ಧತೆ: ಡಿಸಿ ಎಂ.ಎಸ್. ದಿವಾಕರ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ15 hours ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು3 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌