Viral video | ಊಟಿಯ ಗಾಲ್ಫ್‌ ಕೋರ್ಸ್‌ ಪಕ್ಕದಲ್ಲೇ ಹುಲಿ ಹಸುವನ್ನು ತಿನ್ನುವ ದೃಶ್ಯ ವೈರಲ್! - Vistara News

ವೈರಲ್ ನ್ಯೂಸ್

Viral video | ಊಟಿಯ ಗಾಲ್ಫ್‌ ಕೋರ್ಸ್‌ ಪಕ್ಕದಲ್ಲೇ ಹುಲಿ ಹಸುವನ್ನು ತಿನ್ನುವ ದೃಶ್ಯ ವೈರಲ್!

ದಂಗುಬಡಿಸುವ ಸುದ್ದಿ ಊಟಿಯಿಂದ ಬಂದಿದೆ. ಊಟಿಯ ಗಾಲ್ಫ್‌ ಕೋರ್ಸ್‌ ಪಕ್ಕದಲ್ಲೇ ಹುಲಿಯೊಂದು ತನ್ನ ಬೇಟೆಯನ್ನು ತಿನ್ನುತ್ತಿರುವ ವಿಡಿಯೋವೊಂದು ಎಲ್ಲೆಡೆ ಹರಿದಾಡುತ್ತಿದ್ದು ಪ್ರವಾಸಿಗರ ಮೈಯಲ್ಲೂ ನಡುಕ ಹುಟ್ಟಿಸಿದೆ!

VISTARANEWS.COM


on

ooty tiger
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದು ಎಲ್ಲರ ಕೈಗೂ ಮೊಬೈಲ್‌ ಫೋನ್‌, ಕ್ಯಾಮರಾ ಬಂದಿರುವುದರಿಂದ, ಎಲ್ಲೆಡೆ ಸಿಸಿಟಿವಿಗಳಿರುವುದರಿಂದ ಅಂತರ್ಜಾಲದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವಿಡಿಯೋಗಳದ್ದೇ ಕಾರುಬಾರು. ಅದರಲ್ಲೂ, ಪ್ರಾಣಿಪಕ್ಷಿಗಳ, ಕ್ರೂರಮೃಗಗಳ ಆಶ್ಚರ್ಯವೆನಿಸುವ, ತಮಾಷೆಯ ವಿಡಿಯೋಗಳೂ ಕೂಡಾ ವೈರಲ್‌ ಆಗಿ ದಂಗುಬಡಿಸುತ್ತವೆ. ಈಗ ಹಾಗೆಯೇ ದಂಗುಬಡಿಸುವ ಸುದ್ದಿ ಊಟಿಯಿಂದ ಬಂದಿದೆ. ಊಟಿಯ ಗಾಲ್ಫ್‌ ಕೋರ್ಸ್‌ ಪಕ್ಕದಲ್ಲೇ ಹುಲಿಯೊಂದು ತನ್ನ ಬೇಟೆಯನ್ನು ತಿನ್ನುತ್ತಿರುವ ವಿಡಿಯೋವೊಂದು ಎಲ್ಲೆಡೆ ಹರಿದಾಡುತ್ತಿದ್ದು ಪ್ರವಾಸಿಗರ ಮೈಯಲ್ಲೂ ನಡುಕ ಹುಟ್ಟಿಸಿದೆ!

ತಮ್ಮ ಮನೆಯ, ಹೊಟೇಲಿನ ಸುತ್ತಮುತ್ತ ಚಿರತೆಗಳು ಸುತ್ತಾಡುವುದನ್ನು, ನಾಯಿಯನ್ನು ಹೊತ್ತೊಯ್ದ ಸುದ್ದಿಯನ್ನು ಜನರ ಬಾಯಿಯಲ್ಲಿ ಸಾಮಾನ್ಯವಾಗಿ ಕೇಳಿರುತ್ತೇವೆ. ಹಾಗೂ ನೋಡಿರುತ್ತೇವೆ ಕೂಡಾ. ಹಾಗೂ ಇದು ಬಹಳ ಸಾಮಾನ್ಯವೂ ಕೂಡಾ. ಆದರೆ ಹುಲಿಯ ಹೆಸರು ಕೇಳಿದರೆ ಮಾತ್ರ ಎಲ್ಲರ ಮೈಯ ರೋಮವೂ ನೆಟ್ಟಗಾಗುತ್ತದೆ. ಯಾಕೆಂದರೆ, ಹುಲಿಯೆಂದರೆ ಹುಲಿಯೇ!

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಭಾರೀ ಸದ್ದು ಮಾಡುತ್ತಿದ್ದು, ಊಟಿಯ ಗಾಲ್ಫ್‌ ಕೋರ್ಸ್‌ನ ಬೇಲಿಯಿಂದಾಚೆಗೆ ಹುಲಿಯೊಂದು ಹಸುವೊಂದನ್ನು ತಿನ್ನುತ್ತಿರುವ ದೃಶ್ಯ ಸೆರೆಯಾಗಿದೆ. ʻಹುಲಿ ತನ್ನ ಆಹಾರದೊಂದಿಗೆ!ʼ ಎಂಬ ತಲೆಬರಹದ ಅಡಿಯಲ್ಲಿ ʻಇದು ಊಟಿಯ ಗಾಲ್ಫ್‌ ಕೋರ್ಸ್‌ನ ಬದಿಯಲ್ಲೇʼ ಎಂಬ ವಿವರಣೆಯೊಂದಿಗೆ ಪೋಸ್ಟ್‌ ಮಾಡಲಾದ ವಿಡಿಯೋ ನೋಡಿ ಜನ ದಂಗಾಗಿದ್ದಾರೆ.

ಸತ್ತು ಬಿದ್ದಿರುವ ಹಸುವಿನ ಹಿಂಭಾಗದಲ್ಲಿ ಸ್ವಲ್ಪ ಭಾಗವನ್ನು ಈಗಾಗಲೇ ತಿಂದಿರುವ ಹುಲಿಯೊಂದು ಅಲ್ಲೇ ಪೊದೆಗಳ ಅಕ್ಕ ಪಕ್ಕ ಅಡ್ಡಾಡುವ ವಿಡಿಯೋನ ಸಣ್ಣ ತುಣಕು ಇದಾಗಿದೆ. ಮನುಷ್ಯರ ವಸತಿಯಿರುವ ಪ್ರದೇಶದಲ್ಲಿ ಬಹಳ ಹತ್ತಿರದಲ್ಲೇ ಹುಲಿಯೊಂದು ಹೀಗೆ ಕಾಣ ಸಿಕ್ಕಿದ್ದು ಮಾತ್ರ ಬಹುತೇಕರಿಗೆ ಶಾಕ್‌ ಆಗಿದೆ.

ಇದನ್ನೂ ಓದಿ | Viral video | ಹಸಿವಿಲ್ಲದಂತೆ ನಟಿಸುವ ಈ ನಾಯಿಯ ಅಭಿನಯಕ್ಕೆ ಫಿದಾ ಆಗದವರೇ ಇಲ್ಲ!

ʻಊಟಿಯ ಬಳಿ ದಟ್ಟವಾದ ಕಾಡಿನ ನಡುವೆಯೇ ಈ ಗಾಲ್ಫ್‌ ಕೋರ್ಸ್‌ ಮಾಡಲಾಗಿದೆ ಅನಿಸುತ್ತದೆ. ಅದಕ್ಕಾಗಿಯೇ ಇಷ್ಟು ಹತ್ತಿರದಲ್ಲಿ ಹುಲಿಗಳು ಕಾಣಿಸುತ್ತಿವೆ. ಆದರೆ ಇಲ್ಲಿ ಗಾಲ್ಫ್‌ ಆಡುವಾಗ ಆದಷ್ಟು ಹುಷಾರಾಗಿರಬೇಕು. ಬಹಳ ಡೇಂಜರಸ್‌ ವಿಷಯ ಇದುʼ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ.

ಇನ್ನೊಬ್ಬರು, ʻಮನುಷ್ಯರು ಅಲ್ಲಿ ಆಡುವಾಗ ಮನುಷ್ಯರಿಗಿಂತ ಹೆಚ್ಚು ಹುಲಿಯೇ ಜಾಗ್ರತೆ ವಹಿಸಬೇಕಾಗಿದೆ. ಯಾಕೆಂದರೆ, ನಾವು ಹುಲಿಗಳಿಗೆ ಸೇರಬೇಕಾದ ಜಾಗವನ್ನು ನಾವು ಆಕ್ರಮಿಸಿಕೊಂಡಿದ್ದೇವೆ. ನಮ್ಮ ಮನರಂಜನೆಗಾಗಿ ಅವುಗಳು ಬದುಕುವ ಪ್ರದೇಶವನ್ನು ನಮ್ಮ ವಶದಲ್ಲಿಟ್ಟುಕೊಂಡಿದ್ದೇವೆ. ತಮಾಷೆಯಲ್ಲ, ಇದು ಸತ್ಯ ಕೂಡಾʼ ಎಂದಿದ್ದಾರೆ.

ʻಅಯ್ಯೋ, ಇಲ್ಲಿ ನಾನು ಗಾಲ್ಫ್‌ ಆಡಿದ್ದೇನೆ. ಆದರೆ, ಹುಲಿಯನ್ನು ಇಷ್ಟು ಹತ್ತಿರದಿಂದ ನೋಡುವ ಅದೃಷ್ಟ ನನಗೆ ಸಿಕ್ಕಿಲ್ಲʼ ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ʻಇದು ಬಹಳ ಬೇಸರದ ವಿಷಯ. ಮನುಷ್ಯ ತನ್ನ ಲೋಭ, ಲಾಭಕ್ಕೆ ಕಾಡನ್ನು ಅತಿಕ್ರಮಿಸುತ್ತಿದ್ದಾನೆ. ಹುಲಿಯೊಂದು ಹಸುವನ್ನು ಬೇಟೆಯಾಡಿ ತಿಂದಿರುವುದು ಅವು ನರಭಕ್ಷಕರಾಗುವುದಕ್ಕೆ ಮೊದಲ ಹೆಜ್ಜೆʼ ಎಂದು ಇನ್ನೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Viral post | ಚಂಡಮಾರುತದಲ್ಲಿ ಗಾಯಗೊಂಡಿದ್ದ ರಣಹದ್ದು 5 ವರ್ಷ ಬಳಿಕ ವಿಮಾನದಲ್ಲಿ ಮರಳಿ ಗೂಡಿಗೆ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024: ಧೋನಿ, ಚೆನ್ನೈ ಪಂದ್ಯ ನೋಡಲು ದೆಹಲಿ ವರೆಗೂ ನಡೆದುಕೊಂಡು ಹೋಗುವೆ ಎಂದ ಶತಾಯುಷಿ ಅಭಿಮಾನಿ; ವಿಡಿಯೊ ವೈರಲ್​

IPL 2024: 103 ವರ್ಷದ(103-year-old CSK fan) ಎಸ್ ರಾಮದಾಸ್(S Ramdas) ಅವರು ಧೋನಿಯನ್ನು(MS Dhoni) ಭೇಟಿ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಜತೆಗೆ ಚೆನ್ನೈ ಮತ್ತು ಧೋನಿಯನ್ನು ನೋಡಲು ದೆಹಲಿಯ ವರೆಗೂ ನಡೆದುಕೊಂಡೇ ಹೋಗುವೆ ಎಂದು ಹೇಳಿದ್ದಾರೆ. ಈ ವಿಡಿಯೊವನ್ನು ಚೆನ್ನೈ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ.

VISTARANEWS.COM


on

IPL 2024
Koo

ಚೆನ್ನೈ: ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ಹಾಗೂ ಮಹೇಂದ್ರ ಸಿಂಗ್​ ಧೋನಿಯ ಅಪಟ್ಟ ಅಭಿಮಾನಿಯಾಗಿರುವ 103 ವರ್ಷದ(103-year-old CSK fan) ಎಸ್ ರಾಮದಾಸ್(S Ramdas) ಅವರು ಧೋನಿಯನ್ನು(MS Dhoni) ಭೇಟಿ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಜತೆಗೆ ಚೆನ್ನೈ ಮತ್ತು ಧೋನಿಯನ್ನು ನೋಡಲು ದೆಹಲಿಯ ವರೆಗೂ ನಡೆದುಕೊಂಡೇ ಹೋಗುವೆ ಎಂದು ಹೇಳಿದ್ದಾರೆ. ಈ ವಿಡಿಯೊವನ್ನು ಚೆನ್ನೈ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ.

ರಾಮದಾಸ್ ಅವರು ಕ್ರಿಕೆಟ್​ನ ಕಟ್ಟಾ ಅಭಿಮಾನಿಯಾಗಿದ್ದು ಇಂದಿಗೂ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಸಮಯ ತೆಗೆದುಕೊಳ್ಳುತ್ತಾರೆ. ಬ್ರಿಟಿಷ್ ಮಿಲಿಟರಿಯ ಸೈನ್ಯದ ಭಾಗವಾಗಿದ್ದ ರಾಮದಾಸ್ ಕ್ರಿಕೆಟ್ ಆಡಲು ಹೆದರುತ್ತಿದ್ದರಂತೆ. ಆದರೆ ಸಿಎಸ್‌ಕೆ ಜರ್ಸಿ ಧರಿಸಿ ಟಿವಿ ಮುಂದೆ ಕುಳಿತು ಐಪಿಎಲ್ ಆಟವನ್ನು ನೋಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

ಮಗ ತಂದೆಯ ಬಳಿ ನೀವು ಎಂಎಸ್ ಧೋನಿಯನ್ನು ಭೇಟಿಯಾಗಲು ಬಯಸುತ್ತೀರಾ ಎಂದು ಕೇಳಿದಾಗ “ಓಹ್ ಹೌದು” ಎಂದಿದ್ದಾರೆ. ಸೂಪರ್ ಕಿಂಗ್ಸ್ ಒಳಗೊಂಡ ಐಪಿಎಲ್ ಪಂದ್ಯವನ್ನು ಮತ್ತು ಧೋನಿಯನ್ನು ನೋಡಲು ರಾಜಧಾನಿಗೆ ಪ್ರಯಾಣಿಸಲು ನೀವು ಸಿದ್ಧರಿದ್ದೀರಾ ಎಂದು ಕೇಳಿದಾಗ “ನಾನು ದೆಹಲಿಯವರೆಗೂ ನಡೆದುಕೊಂಡು ಹೋಗುತ್ತೇನೆ” ಎಂದು ರಾಮದಾಸ್ ಹೇಳಿದರು. 103 ವರ್ಷದ ಈ ಅಭಿಮಾನಿಯ ವಿಡಿಯೊ ವೈರಲ್​ ಆಗಿದೆ. ಮುಂದಿನ ಪಂದ್ಯದಲ್ಲಿ ಈ ಶತಾಯುಷಿ ಅಭಿಮಾನಿಗೆ ಚೆನ್ನೈ ಪಂದ್ಯ ವೇಳೆ ಕಾಣಿಸಿಕೊಂಡು ಧೋನಿಯನ್ನು ಭೇಟಿಯಾದರೂ ಅಚ್ಚರಿಯಿಲ್ಲ.

ಎಂ.ಎಸ್.ಧೋನಿ(MS Dhoni), ಕ್ಯಾಪ್ಟನ್‌ ಕೂಲ್‌, ಮಾಹಿ, ತಾಲಾ… ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುವ ಮಹೇಂದ್ರ ಸಿಂಗ್‌ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ಹೀಗಾಗಿ ಧೋನಿ ಅವರ ಬ್ಯಾಟಿಂಗ್​ ಕುಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಪ್ರತಿ ಪಂದ್ಯದ ವೇಳೆಯೂ ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತಾರೆ.

ಇದನ್ನೂ ಓದಿ IPL 2024: ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆಯಲು ಸಜ್ಜಾದ ಆರ್​ಸಿಬಿ

ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಧೋನಿ ಕಳೆದ ವರ್ಷ ಮುಂಬೈಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಬಾರಿಯ ಐಪಿಎಲ್​ನ ಮೊದಲ ಪಂದ್ಯದಲ್ಲಿಯೇ ಧೋನಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂದಿತ್ತು. ಕಳೆದ ಮುಂಬೈ ಮತ್ತು ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್​ ನಡೆಸಿದ ವೇಳೆ ಕುಂಟುತಾ ನಡೆದಾಡಿದ ಫೋಟೊ ಮತ್ತು ವಿಡಿಯೊ ವೈರಲ್​ ಆಗಿತ್ತು. ಕಳೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯಗೆ ಹ್ಯಾಟ್ರಿಕ್​ ಸಿಕ್ಸರ್​ಗಳ ರುಚಿ ತೋರಿಸಿದ್ದರು. ವಯಸ್ಸು 42 ಆದರೂ, ತಮ್ಮ ಬ್ಯಾಟಿಂಗ್​ ಫಾರ್ಮ್​ ಮಾತ್ರ ಈ ಹಿಂದಿನಂತೆಯೇ ಇದೆ.​

Continue Reading

ದೇಶ

ಪಾಕಿಸ್ತಾನದ ಯುವತಿಯ ಪ್ರಾಣ ಉಳಿಸಿತು ಭಾರತದ ಹೃದಯ; ‘ಹಾರ್ಟ್‌’ ಟಚಿಂಗ್ ಸ್ಟೋರಿ ಇದು!

ಪಾಕಿಸ್ತಾನದ ಆಯೇಷಾ ರೆಶಾನ್‌ ಅವರು ಕಳೆದ ಒಂದು ದಶಕದಿಂದ ಹೃದಯದ ಕಾಯಿಲೆಯಿಂದ ಬಳಲುತ್ತಿದ್ದರು. ಹಾರ್ಟ್‌ ಪಂಪ್‌ ಡಿವೈಸ್‌ ಅಳವಡಿಕೆಯ ಸರ್ಜರಿ ಕೂಡ ವಿಫಲವಾಯಿತು. ಆದರೆ, ಚೆನ್ನೈನಲ್ಲಿರುವ ಎಂಜಿಎಂ ಹೆಲ್ತ್‌ಕೇರ್‌ ಆಸ್ಪತ್ರೆ ನುರಿತ ವೈದ್ಯರು ಆಯೇಷಾಗೆ ಹೃದಯದ ಕಸಿ ಮಾಡುವ ಮೂಲಕ, ಬೇರೊಬ್ಬರ ಹೃದಯವನ್ನು ಇವರಿಗೆ ಅಳವಡಿಸುವ ಮೂಲಕ ಆಕೆಯ ಬಾಳಿಗೆ ಬೆಳಕಾಗಿದ್ದಾರೆ.

VISTARANEWS.COM


on

Pakistan Teen
Koo

ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ (India Pakistan) ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಇದೆ. ಭಾರತದ ಮೇಲೆ ಪಾಕ್‌ ಕೃಪಾಪೋಷಿತ ಉಗ್ರರು ದಾಳಿ ಮಾಡಿದಾಗ, ಭಾರತ-ಪಾಕಿಸ್ತಾನ ಮಧ್ಯೆ ಕ್ರಿಕೆಟ್‌ ಪಂದ್ಯ ನಡೆದಾಗ ಭಾರತೀಯರು ಪಾಕಿಸ್ತಾನವನ್ನು ಬಗ್ಗುಬಡಿಯಲಿ ಎಂದು ಪ್ರಾರ್ಥಿಸುತ್ತೇವೆ. ಆದರೆ, ಇಷ್ಟೆಲ್ಲ ಬಿಕ್ಕಟ್ಟಿನ ಮಧ್ಯೆಯೂ ಭಾರತ ಹಾಗೂ ಪಾಕಿಸ್ತಾನ ನಾಗರಿಕರ ಮಧ್ಯೆ ಸಹೋದರತ್ವದ ಭಾವನೆ ಇದೆ. ಭಾರತದಲ್ಲಿ (India) ಜನಿಸಿ, ದೇಶ ಇಬ್ಭಾಗವಾದಾಗ ಪಾಕ್‌ಗೆ ತೆರಳಿದವರು ಈಗಲೂ ಭಾರತದ ನಂಟನ್ನು ನೆನಪಿಸಿಕೊಳ್ಳುತ್ತಾರೆ. ಈ ನಂಟಿಗೆ ನಿದರ್ಶನ ಎಂಬಂತೆ, ಭಾರತದ ʼಹೃದಯʼವೊಂದು (Indian Heart) ಪಾಕಿಸ್ತಾನದ ಯುವತಿಯ (Pakistan Teen) ಪ್ರಾಣವನ್ನು ಉಳಿಸಿದೆ.

ಹೌದು, ಹೃದಯದ ಸಮಸ್ಯೆಯಿಂದಾಗಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ಆಯೇಷಾ ರೆಶಾನ್‌ (19) ಎಂಬ ಯುವತಿಗೆ ಚೆನ್ನೈನಲ್ಲಿರುವ ಎಂಜಿಎಂ ಹೆಲ್ತ್‌ಕೇರ್‌ ಆಸ್ಪತ್ರೆ ವೈದ್ಯರು ಉಚಿತವಾಗಿ ಹೃದಯದ ಕಸಿ ಮಾಡುವ ಮೂಲಕ ನೆರೆ ರಾಷ್ಟ್ರದ ಯುವತಿಯ ಬಾಳಿಗೆ ಬೆಳಕಾಗಿದ್ದಾರೆ. ಭಾರತೀಯರೊಬ್ಬರ ಹೃದಯವನ್ನು ಪಾಕಿಸ್ತಾನದ ಯುವತಿಗೆ ಕಸಿ ಮಾಡುವ ಮೂಲಕ, ಆಕೆ ಮತ್ತೆ ಬದುಕು ಕಟ್ಟಿಕೊಳ್ಳಲು ಅಪೂರ್ವ ಅವಕಾಶ ನೀಡುವ ಮೂಲಕ ಔದಾರ್ಯ ಮೆರೆದಿದ್ದಾರೆ. ಇದಕ್ಕಾಗಿ ಆಯೇಷಾ ರೆಶಾನ್‌ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಆಯೇಷಾ ರೆಶಾನ್‌ಗೆ ಏನಾಗಿತ್ತು?

ಕಾಲೇಜು ವಿದ್ಯಾರ್ಥಿನಿಯಾಗಿರುವ ಆಯೇಷಾ ರೆಶಾನ್‌ ಅವರು ಕಳೆದ 10 ವರ್ಷಗಳಿಂದ ಹೃದ್ರೋಗದಿಂದ ಬಳಲುತ್ತಿದ್ದರು. ಅವರಿಗೆ ಹಾರ್ಟ್‌ ಪಂಪ್‌ ಡಿವೈಸ್‌ ಅಳವಡಿಸಬೇಕಾಗಿತ್ತು. ಇದಕ್ಕಾಗಿ ಅವರು ತಮಿಳುನಾಡಿಗೆ ಆಗಮಿಸಿದ್ದರು. ಆದರೆ, ಹಾರ್ಟ್‌ ಪಂಪ್‌ ಅಳವಡಿಸಿದ ಬಳಿಕ ಶಸ್ತ್ರಚಿಕಿತ್ಸೆಯು ವಿಫಲವಾಗಿತ್ತು. ಇದರಿಂದಾಗಿ ಆಯೇಷಾ ರೆಶಾನ್‌ ಅವರ ಪ್ರಾಣಕ್ಕೆ ಕುತ್ತು ಬಂದಿತ್ತು. ಆಗ, ಆಸ್ಪತ್ರೆಯ ಸರ್ಜನ್‌ಗಳು ದಾನಿಯೊಬ್ಬರ ಹೃದಯವನ್ನು ಆಯೇಷಾ ರೆಷಾನ್‌ ಅವರಿಗೆ ಅಳವಡಿಸುವ ಮೂಲಕ ಆಕೆಯ ಪ್ರಾಣ ಉಳಿಸಿದ್ದಾರೆ.

ಹೃದಯದ ಕಸಿ ಮಾಡಲು ಸುಮಾರು 35 ಲಕ್ಷ ರೂ. ಖರ್ಚಾಗುತ್ತದೆ. ಆದರೆ, ಚೆನ್ನೈನ ಐಶ್ವರ್ಯನ್‌ ಟ್ರಸ್ಟ್‌ ಹಾಗೂ ಆಸ್ಪತ್ರೆ ವೈದ್ಯರೇ ಖರ್ಚು ಭರಿಸಿ, ಉಚಿತವಾಗಿ ಕಸಿ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ದೆಹಲಿ ಮೂಲದ ದಾನಿಯಿಂದ ಹೃದಯ ಪಡೆದ ವೈದ್ಯರು, ಆಯೇಷಾಗೆ ಅಳವಡಿಸಿದ್ದಾರೆ. “ಹೃದಯ ಕಸಿ ಬಳಿಕ ನಾನೀಗ ಆರೋಗ್ಯದಿಂದ ಇದ್ದೇನೆ. ಚೆನ್ನೈ ವೈದ್ಯರಿಂದಾಗಿ ನಾನು ಉಸಿರಾಡುತ್ತಿದ್ದೇನೆ. ನನ್ನ ಜೀವ ಉಳಿಸಿದ ವೈದ್ಯರಿಗೆ ಕೃತಜ್ಞತೆಗಳು. ಪಾಕಿಸ್ತಾನಕ್ಕೆ ತೆರಳಿ ನಾನು ಪದವಿ ಪಡೆಯುತ್ತೇನೆ” ಎಂಬುದಾಗಿ ಆಯೇಷಾ ಹೇಳಿದ್ದಾರೆ.

ಇದನ್ನೂ ಓದಿ: Humanity : ಗಡಿ ಮೀರಿದ ಮಾನವೀಯತೆ; ನಿರಾಶ್ರಿತರಿಗೆ ಹಣ ಹಂಚಿದ ಆಫ್ಘನ್ ಆಟಗಾರ ಗುರ್ಬಜ್​

Continue Reading

ದೇಶ

ರಾಹುಲ್‌ ಗಾಂಧಿ ಗಂಡಸ್ತನ ತಿಳಿಯಲು ಅವರ ಜತೆ ನಿಮ್ಮ ತಾಯಿಯನ್ನು ಮಲಗಿಸಿ ಎಂದ ಕಾಂಗ್ರೆಸ್‌ ನಾಯಕ!

ರಾಹುಲ್‌ ಗಾಂಧಿ ಅವರು ಗಂಡಸು ಹೌದೋ, ಅಲ್ಲವೋ ಎಂಬುದನ್ನು ತಿಳಿಯಲು ಬಿಜೆಪಿ ನಾಯಕರು ತಮ್ಮ ತಾಯಿ, ಪುತ್ರಿಯರನ್ನು ಅವರ ಜತೆ ಮಲಗಿಸಬೇಕು ಎಂದು ಗುಜರಾತ್‌ ಕಾಂಗ್ರೆಸ್‌ ನಾಯಕ ಪ್ರತಾಪ್‌ ದುಧನ್‌ ಹೇಳಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಇವರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Pratap Dudhat
Koo

ಗಾಂಧಿನಗರ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ಹೇಳಿಕೆಗಳು ವಿವಾದ ಸೃಷ್ಟಿಸುತ್ತಿವೆ. ಪ್ರತಿಪಕ್ಷ ನಾಯಕರ ವಿರುದ್ಧ ಮಾತನಾಡುವ ಭರದಲ್ಲಿ ಅವಾಚ್ಯ, ಅಶ್ಲೀಲ ಪದಗಳ ಬಳಕೆ, ಏಕವಚನದಲ್ಲಿಯೇ ದಾಳಿ ಮಾಡುವುದು ಸೇರಿ ಹಲವು ರೀತಿಯ ಹೇಳಿಕೆಗಳು ಜನರಲ್ಲಿ ಅಸಹ್ಯ ಮೂಡಿಸಿವೆ. ಇದರ ಬೆನ್ನಲ್ಲೇ, ಗುಜರಾತ್‌ ಕಾಂಗ್ರೆಸ್‌ ನಾಯಕ (Gujarat Congress Leader) ಪ್ರತಾಪ್‌ ದುಧತ್‌ (Pratap Dudhat) ಅವರು ನೀಡಿದ ಹೇಳಿಕೆಯು ಭಾರಿ ವಿವಾದ ಭುಗಿಲೆಬ್ಬಿಸಿದೆ. “ರಾಹುಲ್‌ ಗಾಂಧಿ ಅವರು ಗಂಡಸೋ ಅಥವಾ ನಪುಂಸಕರೋ ಎಂಬುದನ್ನು ತಿಳಿಯಲು, ನಿಮ್ಮ ತಾಯಿ, ಪುತ್ರಿಯರನ್ನು ಅವರ ಜತೆ ಮಲಗಿಸಿ” ಎಂಬುದಾಗಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವುದು ಭಾರಿ ಸಂಚಲನ ಮೂಡಿಸಿದೆ.

ಚುನಾವಣಾ ಸಭೆಯೊಂದರಲ್ಲಿ ಮಾತನಾಡಿದ ಪ್ರತಾಪ್‌ ದುಧತ್‌, ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು. “ಬಿಜೆಪಿ ನಾಯಕರು ಯಾವಾಗಲೂ ರಾಹುಲ್‌ ಗಾಂಧಿ ಅವರ ಮದುವೆ ಬಗ್ಗೆ ಮಾತನಾಡುತ್ತಾರೆ. ಅಷ್ಟಕ್ಕೂ, ರಾಹುಲ್‌ ಗಾಂಧಿ ಅವರು ಗಂಡಸೋ ಅಥವಾ ನಪುಂಸಕರೋ ಎಂಬುದನ್ನು ತಿಳಿಯಲು ನಿಮ್ಮ ಪುತ್ರಿಯರು, ತಾಯಿಯನ್ನು ಅವರ ಜತೆ ಮಲಗಿಸಿ. ಆಗ ನಿಮಗೆ ರಾಹುಲ್‌ ಗಾಂಧಿ ಗಂಡಸು ಹೌದೋ, ಅಲ್ಲವೋ ಎಂಬುದು ಗೊತ್ತಾಗುತ್ತದೆ” ಎಂದು ಹೇಳಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗಿದ್ದು, ಕಾಂಗ್ರೆಸ್ ನಾಯಕನ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಾಪ್‌ ದುಧತ್‌ ಅವರ ವಿಡಿಯೊ ವೈರಲ್‌ ಆಗುತ್ತಲೇ ಜನ ಪ್ರತಿಕ್ರಿಯಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. “ದೇಶದ ಹೆಣ್ಣುಮಕ್ಕಳಿಗೆ ಕಾಂಗ್ರೆಸ್‌ ಕೊಡುವ ಗೌರವ ಹೇಗಿದೆ ನೋಡಿ” ಎಂಬುದಾಗಿ ಒಬ್ಬರು ಟೀಕಿಸಿದ್ದಾರೆ. “ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 25 ಕ್ಷೇತ್ರಗಳಲ್ಲೂ ಗೆಲ್ಲಬಾರದು ಎಂದು ತೀರ್ಮಾನಿಸಿದೆ. ಇದೇ ಕಾರಣಕ್ಕಾಗಿ ಆ ಪಕ್ಷದ ನಾಯಕರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಮತಗಳನ್ನು ಕೇಳಲು ಬಂದಾಗ ಇಂತಹ ನಾಯಕರಿಗೆ ಹೆಣ್ಣುಮಕ್ಕಳು ಸರಿಯಾಗಿ ಪಾಠ ಕಲಿಸಬೇಕು” ಎಂದು ಇನ್ನೊಬ್ಬರು ಹೇಳಿದ್ದಾರೆ. ಅಷ್ಟೇ ಅಲ್ಲ, “ಈ ಕಾಂಗ್ರೆಸ್ ನಾಯಕನ ವಿರುದ್ಧ ಕೇಸ್‌ ದಾಖಲಿಸಬೇಕು”, “ಹೆಣ್ಣುಮಕ್ಕಳ ಬಗ್ಗೆ ಕಾಂಗ್ರೆಸ್‌ ನಾಯಕರು ಹೀಗೆ ಮಾತಾಡಿ, ಮಾತಾಡಿಯೇ ಕಾಂಗ್ರೆಸ್‌ ಸೋಲಿಗೆ ಕಾರಣರಾಗಿದ್ದಾರೆ”, “ಕಾಂಗ್ರೆಸ್‌ನಲ್ಲಿ ಟಿಕೆಟ್‌ ಗಿಟ್ಟಿಸಿಕೊಳ್ಳಲು ಹೀಗೆ ಮಾತನಾಡುವುದೇ ಮೊದಲ ಅರ್ಹತೆ ಇರಬೇಕು” ಎಂಬುದು ಸೇರಿ ನೂರಾರು ಜನ ಕಾಂಗ್ರೆಸ್‌ ನಾಯಕನ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌ ನಾಯಕ ಸುರ್ಜೇವಾಲಾ ಅವರ ವಿವಾದಾತ್ಮಕ ಹೇಳಿಕೆ ಬಳಿಕ ಟಿಎಂಸಿಗೂ ಸಂಕಷ್ಟ

Continue Reading

ಕ್ರೀಡೆ

Sachin Tendulkar Birthday: ಈ ಬಾರಿ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಚಿನ್‌ ತೆಂಡೂಲ್ಕರ್‌; ವಿಡಿಯೊ ವೈರಲ್​

Sachin Tendulkar Birthday: ಸಚಿನ್‌ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್​ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್​ ಎಲ್ಲ ಕ್ರಿಕೆಟ್​ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.

VISTARANEWS.COM


on

Sachin Tendulkar Birthday
Koo

ಮುಂಬಯಿ: ವಿಶ್ವ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್‌, ಲೆಜೆಂಡರಿ ಕ್ರಿಕೆಟರ್‌, ಕ್ರಿಕೆಟ್‌ ದೇವರು ಎಂದೆಲ್ಲ ನಾಮಾಂಕಿತರಾದ ಸಚಿನ್‌ ತೆಂಡೂಲ್ಕರ್‌(Sachin Tendulkar Birthday) ಅವರು ಎಪ್ರಿಲ್​ 24ರಂದು ತಮ್ಮ 51ನೇ ವರ್ಷದ ಹುಟ್ಟು ಹಬ್ಬವನ್ನು ‘ಸಚಿನ್​ ತೆಂಡೂಲ್ಕರ್​ ಫೌಂಡೇಶನ್‌’ನ(sachin tendulkar foundation) ಮಕ್ಕಳೊಂದಿಗೆ ಆಚರಿಸಿದ್ದರು. ಇದರ ವಿಡಿಯೊವನ್ನು ಸಚಿನ್(Sachin Tendulkar)​ ತಮ್ಮ ಇನ್​ಸ್ಟಾಗ್ರಾಮ್​ ಮತ್ತು ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ಸಚಿನ್​ ಅವರಿಗೆ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹರಸಿ ಹಾರೈಸಿದ್ದಾರೆ.

ಸಚಿನ್​ ಅವರು ‘ಸಚಿನ್​ ತೆಂಡೂಲ್ಕರ್ ಫೌಂಡೇಶನ್‌’ ಎನ್ನುವ ಹೆಸರಿನ ಪ್ರತಿಷ್ಠಾನದ ಮೂಲಕ ಬಡ ಮಕ್ಕಳಿಗೆ ಶಿಕ್ಷಣ, ಕ್ರಿಡೆ ಮತ್ತು ವೈದ್ಯಕೀಯ ನೆರವನ್ನು ನೀಡುತ್ತಿದ್ದಾರೆ. ಸಮಾಜಮುಖಿ ಕಾರ್ಯವನ್ನು ಮಾಡುವ ಮೂಲಕ ಅನೇಕ ಬಡ ಮಕ್ಕಳ ಕನಸನ್ನು ನನಸು ಮಾಡುವ ಕಾರ್ಯ ಮಾಡುತ್ತಿದ್ದಾರೆ. ಈ ಪ್ರತಿಷ್ಠಾನವು ಮಕ್ಕಳಿಗೆ ಸಮಾನ ಅವಕಾಶವನ್ನು ನೀಡಲು ಮತ್ತು ಉತ್ತಮ ಜಗತ್ತನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

ಸಚಿನ್​ ಅವರು ತಮ್ಮ ಹುಟ್ಟು ಹಬ್ಬವನ್ನು ಈ ಫೌಂಡೇಶನ್​ನ ಮಕ್ಕಳೊಂದಿದೆ ಕೆಲ ಕಾಲ ಫುಟ್ಬಾಲ್​ ಆಡಿ, ಊಟ ಮಾಡುವ ಜತೆಗೆ ಕೇಕ್​ ಕತ್ತರಿಸಿ ಆಚರಿಸಿದ್ದಾರೆ. ಬಳಿಕ ಮಕ್ಕಳಿಗೆ ವಿಶೇಷವಾಗಿ ಹಾರೈಸಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಕಿವಿ ಮಾತು ಹೇಳಿದ್ದಾರೆ.

ಇದನ್ನೂ ಓದಿ Sachin Tendulkar : ಕಾಶ್ಮೀರದ ಬಾಲಕಿಯ ಕ್ರಿಕೆಟ್​ ಪ್ರೀತಿ ಸಚಿನ್ ಫಿದಾ; ಇಲ್ಲಿದೆ ವಿಡಿಯೊ

​ಕಳೆದ ವರ್ಷ ಸಚಿನ್​ ಅವರು ತಮ್ಮ 50ನೇ ವರ್ಷದ ಜನ್ಮ ದಿನಾಚರಣೆಯನ್ನು ತಮ್ಮ ಕುಟುಂಬದೊಂದಿಗೆ ಗೋವಾದಲ್ಲಿ ಆಚರಿಸಿದ್ದರು. ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾದ ಸಚಿನ್​ ಅವರು ತಮ್ಮ ಹುಟ್ಟು ಹಬ್ಬವನ್ನು ಮಾತ್ರ ಹಳ್ಳಿ ಸೊಗಡಿನಲ್ಲಿ ಆಚರಿಸಿದ್ದರು. ಪತ್ನಿ ಅಂಜಲಿ ಮತ್ತು ಮಗಳು ಸಾರಾ ತೆಂಡೂಲ್ಕರ್ ಅವರೊಂದಿಗೆ ಒಲೆಯ ಪಕ್ಕದಲ್ಲಿ ಕುಳಿತು ಸಚಿನ್ ಒಲೆ ಊದುತ್ತಿರುವ ಫೋಟೊವನ್ನು ಹಂಚಿಕೊಂಚಿಕೊಂಡಿದ್ದರು.

2020ರಲ್ಲಿ ಹುಟ್ಟುಹಬ್ಬ ಆಚರಿಸದ ಸಚಿನ್​!

ಪ್ರತಿ ವರ್ಷವೂ ಸಂಭ್ರಮದೊಂದಿಗೆ ಹುಟ್ಟು ಹಬ್ಬ ಆಚರಿಸುತ್ತಿದ್ದ ಸಚಿನ್​ 2020ರಲ್ಲಿ ತಮ್ಮ 47ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದ ಕೋವಿಡ್​ ಸಂಕಷ್ಟದಲ್ಲಿ ಸೇವೆ ಸಲ್ಲಿಸಿದ್ದ ಆರೋಗ್ಯ ಸೈನಿಕರಿಗೆ ಗೌರವ ಕೊಡುವ ನಿಟ್ಟಿನಲ್ಲಿ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿರಲಿಲ್ಲ. ಮನೆಯಲ್ಲಿಯೇ ತಾಯಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದರು.

24 ವರ್ಷಗಳ ಕ್ರಿಕೆಟ್‌ ಬಾಳ್ವೆಯಲ್ಲಿ 664 ಪಂದ್ಯ, 34,357 ರನ್‌, 201 ವಿಕೆಟ್‌, 100 ಅಂತಾರಾಷ್ಟ್ರೀಯ ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ದೇಶದ ಶ್ರೇಷ್ಠ ಗೌರವ ಭಾರತ ರತ್ನ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್‌ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್​ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್​ ಎಲ್ಲ ಕ್ರಿಕೆಟ್​ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.

Continue Reading
Advertisement
Kiara Advani Joins Salaar 2
ಟಾಲಿವುಡ್2 mins ago

Kiara Advani: ಪ್ರಭಾಸ್ ನಟನೆಯ ʻಸಲಾರ್ 2ʼ ಸಿನಿಮಾದಲ್ಲಿ ಕಿಯಾರಾ ಆಡ್ವಾಣಿ?

IPL 2024
ಕ್ರೀಡೆ18 mins ago

IPL 2024: ಧೋನಿ, ಚೆನ್ನೈ ಪಂದ್ಯ ನೋಡಲು ದೆಹಲಿ ವರೆಗೂ ನಡೆದುಕೊಂಡು ಹೋಗುವೆ ಎಂದ ಶತಾಯುಷಿ ಅಭಿಮಾನಿ; ವಿಡಿಯೊ ವೈರಲ್​

Break Up
ದೇಶ27 mins ago

ಇದ್ದರೂ ಜತೆಗೆ, ಸತ್ತರೂ ಜತೆಗೆ; ಅಪಘಾತದಲ್ಲಿ ಪತ್ನಿ ಸಾವು, ನೊಂದ ಪತಿ ನೇಣಿಗೆ ಶರಣು

IPL 2024
ಕ್ರೀಡೆ55 mins ago

IPL 2024: ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆಯಲು ಸಜ್ಜಾದ ಆರ್​ಸಿಬಿ

Pakistan Teen
ದೇಶ56 mins ago

ಪಾಕಿಸ್ತಾನದ ಯುವತಿಯ ಪ್ರಾಣ ಉಳಿಸಿತು ಭಾರತದ ಹೃದಯ; ‘ಹಾರ್ಟ್‌’ ಟಚಿಂಗ್ ಸ್ಟೋರಿ ಇದು!

Comedy Khiladigalu Premier League From 27th April On Zee Kannada
ಕಿರುತೆರೆ56 mins ago

Comedy Khiladigalu Premier League: ಹೇಗಿರಲಿದೆ ಹೊಸ ಶೋ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ʼ?

Pushpa The Rule first single on May 1
ಟಾಲಿವುಡ್1 hour ago

Pushpa The Rule: ಬಿಗ್‌ ಅಪ್‌ಡೇಟ್‌ ಹಂಚಿಕೊಂಡ ʻಪುಷ್ಪ 2ʼ: ಮೇ 1ಕ್ಕೆ ತಂಡದಿಂದ ಗುಡ್‌ ನ್ಯೂಸ್‌!

actress amulya father in law election officers ride
ಕ್ರೈಂ1 hour ago

Election Officer Raid: ನಟಿ ಅಮೂಲ್ಯ ಮಾವ, ಬಿಜೆಪಿ ಮುಖಂಡನ ಮನೆ ಮೇಲೆ ಚುನಾವಣಾ ಅಧಿಕಾರಿಗಳ ದಾಳಿ

Rahul Gandhi
ದೇಶ1 hour ago

Rahul Gandhi: ಶೀಘ್ರವೇ ಅಯೋಧ್ಯೆಗೆ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ; ರಾಮಲಲ್ಲಾನ ದರ್ಶನ!

IPL 2024
ಕ್ರೀಡೆ2 hours ago

IPL 2024: ದುಬಾರಿ ರನ್​ ನೀಡಿ ಐಪಿಎಲ್​ನಲ್ಲಿ ಅನಗತ್ಯ ದಾಖಲೆ ಬರೆದ ಮೋಹಿತ್​ ಶರ್ಮ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ5 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20245 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌