Zomato Pure Veg: ʼಜೊಮ್ಯಾಟೋ ಪ್ಯೂರ್‌ ವೆಜ್‌ʼ ಡೆಲಿವರಿಗೆ ಅಪಹಾಸ್ಯ? ʼಜಾಹೀರಾತು ಮಾಲೀಕ ನಾನಲ್ಲʼ ಎಂದ ಸ್ವಿಗ್ಗಿ! - Vistara News

ವೈರಲ್ ನ್ಯೂಸ್

Zomato Pure Veg: ʼಜೊಮ್ಯಾಟೋ ಪ್ಯೂರ್‌ ವೆಜ್‌ʼ ಡೆಲಿವರಿಗೆ ಅಪಹಾಸ್ಯ? ʼಜಾಹೀರಾತು ಮಾಲೀಕ ನಾನಲ್ಲʼ ಎಂದ ಸ್ವಿಗ್ಗಿ!

Zomato Pure Veg: ಇದೀಗ ವೈರಲ್‌ ಆಗಿರುವ ಈ ʼನಕಲಿ ಜಾಹೀರಾತʼನ್ನು ಟೆಕ್ ಕಂಪನಿ ಸ್ನೋ ಮೌಂಟೇನ್ AIನ ಸಹ-ಸಂಸ್ಥಾಪಕ ಮತ್ತು CTO ನಿಲೇಶ್ ತ್ರಿವೇದಿ ಮಾಡಿದ್ದಾರೆ.

VISTARANEWS.COM


on

Zomato Pure Veg swiggy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ಜನಪ್ರಿಯ ಆಹಾರ ವಿತರಣಾ ಸಂಸ್ಥೆಯಾದ ಜೊಮ್ಯಾಟೋದ ʼಜೊಮ್ಯಾಟೋ ಪ್ಯೂರ್‌ ವೆಜ್‌ ಫುಡ್‌ ಫ್ಲೀಟ್‌ʼ (Zomato Pure Veg Fleet) ಅನ್ನು ಪರಿಚಯಿಸುವ ನಿರ್ಧಾರವನ್ನು ಅಪಹಾಸ್ಯ ಮಾಡುವ ಜಾಹೀರಾತಿನ ಪೋಸ್ಟರ್‌ ಒಂದು (Advertisement poster) ನಿನ್ನೆಯಿಂದ ಸೋಶಿಯಲ್‌ ಮೀಡಿಯಾಗಳಲ್ಲಿ (Social media) ಹರಿದಾಡುತ್ತಿದೆ. ಜೊಮ್ಯಾಟೋದ ಪ್ರತಿಸ್ಪರ್ಧಿ ಸಂಸ್ಥೆ ಸ್ವಿಗ್ಗಿ (Swiggy) ಸಂಸ್ಥೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು “ಆ ಜಾಹೀರಾತು ಮಾಲೀಕ ನಾನಲ್ಲ” ಎಂದಿದೆ.

ʼಸಸ್ಯಾಹಾರಿ ಮಾತ್ರʼ ಫ್ಲೀಟ್ ಅನ್ನು ಪರಿಚಯಿಸುವ Zomato ನಿರ್ಧಾರವನ್ನು ಅಪಹಾಸ್ಯ ಮಾಡುವ ವೈರಲ್ ಪೋಸ್ಟರ್ ಕುರಿತ ಗೊಂದಲವನ್ನು ಪರಿಹರಿಸಲು ಸ್ವಿಗ್ಗಿ ಪ್ರಕಟಣೆ ನೀಡಿದೆ. ಯಾಕೆಂದರೆ, ಇದರಲ್ಲಿ ಸ್ವಿಗ್ಗಿಯ ಹೆಸರು- ಲೋಗೋವನ್ನೂ ಸೇರಿಸಲಾಗಿದ್ದು, ಸ್ವಿಗ್ಗಯದೇ ಎಂಬರ್ಥ ಬರುವಂತಿದೆ.

“ಸ್ವಿಗ್ಗಿ ಹೆಸರಿನಲ್ಲಿ ಓಡಾಡುತ್ತಿರುವ ಪೋಸ್ಟ್ ಅನ್ನು ನಾವು ಅಥವಾ ಸ್ವಿಗ್ಗಿಯೊಂದಿಗೆ ಸಂಬಂಧ ಹೊಂದಿರುವ ಯಾರೂ ರಚಿಸಿಲ್ಲ. ದಯವಿಟ್ಟು ಅದನ್ನು ಚಲಾವಣೆ ಮಾಡುವುದನ್ನು ಅಥವಾ ಸ್ವಿಗ್ಗಿಗೆ ಆರೋಪ ಮಾಡುವುದನ್ನು ತಡೆಯಿರಿ” ಎಂದು ಸ್ವಿಗ್ಗಿ ಕಂಪನಿಯ ಪ್ರಕಟಣೆ ತಿಳಿಸಿದೆ.

ಇದೀಗ ವೈರಲ್‌ ಆಗಿರುವ ಈ ʼನಕಲಿ ಜಾಹೀರಾತʼನ್ನು ಟೆಕ್ ಕಂಪನಿ ಸ್ನೋ ಮೌಂಟೇನ್ AIನ ಸಹ-ಸಂಸ್ಥಾಪಕ ಮತ್ತು CTO ನಿಲೇಶ್ ತ್ರಿವೇದಿ ಮಾಡಿದ್ದಾರೆ. ತ್ರಿವೇದಿ ಇದನ್ನು Xನಲ್ಲಿ ಮಾರ್ಚ್ 20ರಂದು ಹಂಚಿಕೊಂಡಿದ್ದರು. ಅದಕ್ಕೆ “ಹೊಸ ಸ್ವಿಗ್ಗಿ ಜಾಹೀರಾತು ತುಂಬಾ ಹಿಟ್ ಆಗಿದೆ. /s” ಎಂದು ಶೀರ್ಷಿಕೆ ನೀಡಿದ್ದರು. ಸಾಮಾನ್ಯವಾಗಿ ‘/s’ ಪೋಸ್ಟ್ ವಿಡಂಬನೆ, ವ್ಯಂಗ್ಯ ಎಂಬುದನ್ನು ಸೂಚಿಸುತ್ತದೆ. ಆದರೆ ತುಂಬಾ ಜನ ಅದನ್ನು Swiggyಯ ನಿಜವಾದ ಪೋಸ್ಟ್ ಎಂದು ಭಾವಿಸಿದ್ದಾರೆ.

ವೈರಲ್‌ ಆಗಿರುವ ಪೋಸ್ಟರ್‌ ಸ್ವಿಗ್ಗಿಯ ಲೋಗೋವನ್ನು ಹೊಂದಿದೆ. ಕೆಳಗಿರುವ ಡಿಜಿಟಲ್‌ ಚಿತ್ರದಲ್ಲಿ, ಕೇಸರಿ ಬಣ್ಣದ ಅಂಗಿ ಡೆಲಿವರಿ ಬಾಯ್‌ ಆಹಾರದ ಪಾರ್ಸೆಲ್‌ ಅನ್ನು ಹಿರಿಯ ವ್ಯಕ್ತಿಯೊಬ್ಬರಿಗೆ ನೀಡುತ್ತಿದ್ದಾನೆ. ಹಿನ್ನೆಲೆಯಲ್ಲಿ ಕೆಲವು ಜನರು ಹಸಿರು ಅಂಗಿ ಧರಿಸಿದ ಬೇರೊಬ್ಬ ಡೆಲಿವರಿ ಬಾಯ್‌ ಅನ್ನು ದೊಣ್ಣೆಗಳಿಂದ ಬಡಿದಟ್ಟುತ್ತಿದ್ದಾರೆ. “ಪ್ರತ್ಯೇಕತೆಯಿಂದ ಮುಕ್ತವಾದ ಆಹಾರ ವಿತರಣೆ. ನಿಮ್ಮ ಆಹಾರದ ಆದ್ಯತೆಗಳನ್ನು ಖಾಸಗಿಯಾಗಿ ಇರಿಸಲಾಗುತ್ತದೆ. ನಮ್ಮ ಡೆಲಿವರಿ ಫ್ಲೀಟ್ ನಿಮ್ಮ ಖಾಸಗಿ ಅಭ್ಯಾಸಗಳನ್ನು ಜಗತ್ತಿಗೆ ಸೋರಿಕೆ ಮಾಡುವುದಿಲ್ಲ. ಸಂಭವನೀಯ ಗುಂಪು ಹಲ್ಲೆಗಳ ವಿರುದ್ಧ ನಮ್ಮ ಡೆಲಿವರಿ ಸಿಬ್ಬಂದಿಯ ಜೀವ ವಿಮೆಗಾಗಿ ನಾವು ಹಣ ಪಾವತಿಸಬೇಕಾಗಿಲ್ಲವಾದುದರಿಂದ ನೀವು ಸ್ವಲ್ಪ ಹಣವನ್ನು ಉಳಿಸುತ್ತೀರಿ” ಎಂದು ಈ ಪೋಸ್ಟರ್‌ನಲ್ಲಿ ಬರೆದಿದೆ.

ಈ ಪೋಸ್ಟ್ 8,000ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಇದು ವೈರಲ್‌ ಆದ ನಂತರ ತ್ರಿವೇದಿ ಅವರು ಸ್ಪಷ್ಟನೆ ನೀಡಿದ್ದಾರೆ. “ನಾನು ಹಂಚಿಕೊಂಡದ್ದು ವಿಡಂಬನೆ. ಅದು ಸ್ವಿಗ್ಗಿಯ ಜಾಹೀರಾತಲ್ಲ. ತುಂಬಾ ಮಂದಿ ಅದನ್ನು ತಪ್ಪು ತಿಳಿದಿದ್ದಾರೆ, ಇದು ನನ್ನ ತಪ್ಪು” ಎಂದಿದ್ದಾರೆ.

ಜೊಮ್ಯಾಟೋ ಮೊನ್ನೆ ತಾನು ಶೀಘ್ರದಲ್ಲೇ ಪ್ರಾರಂಭಿಸಲಿರುವ “ಶುದ್ಧ ವೆಜ್ ಫ್ಲೀಟ್”ನೊಂದಿಗೆ ಶುದ್ಧ- ಶಾಕಾಹಾರಿ ರೆಸ್ಟೋರೆಂಟ್‌ಗಳಿಂದ ಆಹಾರ ಬಯಸುವ ಸಸ್ಯಾಹಾರಿಗಳಿಗೆ ವಿಶೇಷವಾಗಿ ಪೂರೈಸುವುದಾಗಿ ಘೋಷಿಸಿದ ನಂತರ ಸೋಶಿಯಲ್‌ ಮೀಡಿಯಾ ಈ ಬಗ್ಗೆ ಸಕ್ರಿಯವಾಗಿದೆ. ಈ ಫ್ಲೀಟ್‌ನಲ್ಲಿ ಕೆಲಸ ಮಾಡುವ ಸವಾರರು ಜೊಮ್ಯಾಟೊದ ಸಾಮಾನ್ಯ ಕೆಂಪು ಬಣ್ಣದ ಸಮವಸ್ತ್ರದ ಬದಲಿಗೆ ಹಸಿರು ಸಮವಸ್ತ್ರವನ್ನು ಧರಿಸುತ್ತಾರೆ ಎಂದಿತ್ತು. ಆದರೆ ಇದು, ಜೊಮ್ಯಾಟೊ ಕೆಲಸಗಾರರ ಹಾಗೂ ಬಳಕೆದಾರರ ವಿರುದ್ಧ ಜನರ ತಾರತಮ್ಯಕ್ಕೆ ಕಾರಣವಾಗಬಹುದು ಎಂದು ಹಲವರು ಟೀಕಿಸಿದ್ದರು. ಇದರ ಬಳಿಕ Zomato ಸಿಇಒ ದೀಪಿಂದರ್ ಗೋಯಲ್ ಅವರು ತಮ್ಮ ನಿರ್ಧಾರದಲ್ಲಿ ಕೊಂಚ ಬದಲಾವಣೆ ಮಾಡಿದ್ದು, ಹಸಿರು ಸಮವಸ್ತ್ರದ ಐಡಿಯಾವನ್ನು ಬಿಟ್ಟುಕೊಟ್ಟಿದ್ದರು. ಎಲ್ಲರೂ ಕೆಂಪು ಸಮವಸ್ತ್ರದಲ್ಲೇ ಇರುವುದಾಗಿ ತಿಳಿಸಿದ್ದರು.

ಇದನ್ನೂ ಓದಿ: Zomato Pure Veg: ಜೊಮ್ಯಾಟೋ ಪ್ಯೂರ್‌ ವೆಜ್‌ ಫು‌ಡ್; ಸೋಶಿಯಲ್‌ ಮೀಡಿಯಾದಲ್ಲಿ ಬಿತ್ತು ಬೆಂಕಿ! ಅಳುಕಿದ ಸಂಸ್ಥೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Rahul Dravid: ಸುದ್ದಿಗೋಷ್ಠಿಯಲ್ಲಿ ಉರ್ದು ಮಾತನಾಡಿದ ರಾಹುಲ್​ ದ್ರಾವಿಡ್​; ವಿಡಿಯೊ ವೈರಲ್​

Rahul Dravid: ಟಿ20 ವಿಶ್ವಕಪ್​ ಟೂರ್ನಿ ಬಳಿಕ ರಾಹುಲ್​ ದ್ರಾವಿಡ್​ ಅವರು ಭಾರತ ತಂಡದ ಕೋಚ್​ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಈಗಾಗಲೇ ಅವರು ತಮ್ಮ ಈ ನಿರ್ಧಾರವನ್ನು ಕೂಡ ಪ್ರಕಟಿಸಿದ್ದಾರೆ. ದ್ರಾವಿಡ್ ನವೆಂಬರ್ 2021ರಲ್ಲಿ ಭಾರತ ತಂಡದ ಕೋಚ್ ಆಗಿ ಆಯ್ಕೆಯಾದರು.

VISTARANEWS.COM


on

Rahul Dravid
Koo

ನ್ಯೂಯಾರ್ಕ್​: ಟೀಮ್​ ಇಂಡಿಯಾ ಇಂದು(ಬುಧವಾರ) ಐರ್ಲೆಂಡ್(India vs Ireland)​ ವಿರುದ್ಧ ತನ್ನ ಮೊದಲ ಟಿ20 ವಿಶ್ವಕಪ್(T20 World Cup 2024)​ ಪಂದ್ಯವನ್ನಾಡಲಿದೆ. ಈ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಭಾರತ ತಂಡದ ಮುಖ್ಯ ಕೋಚ್(head coach Rahul Dravid)​ ರಾಹುಲ್ ದ್ರಾವಿಡ್(Rahul Dravid)​ ಅವರು ಉರ್ದುವಿನಲ್ಲಿ(Dravid Speaks Urdu) ಮಾತನಾಡಿ ಎಲ್ಲರನ್ನು ಅಚ್ಚರಿ ಪಡುವಂತೆ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ದ್ರಾವಿಡ್​ ತಮ್ಮ ತಂಡದ ತಯಾರಿಯ ಬಗ್ಗೆ ಮಾತನಾಡುವ ವೇಳೆಯಲ್ಲಿ ಉರ್ದು ಭಾಷೆಯಲ್ಲಿಯೂ ಮಾತನಾಡಿದರು. ‘ಈ ಸ್ವರೂಪದ ಕ್ರಿಕೆಟ್​ನಲ್ಲಿ ಯಾರನ್ನೂ ಕಡೆಗಣಿಸಲು ಅಥವಾ ಯಾರನ್ನೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ” ಎಂದು ಉರ್ದುವಿನಲ್ಲಿ ಹೇಳಿ ಜೋರಾಗಿ ನಕ್ಕಿದ್ದಾರೆ. ಜತೆಗೆ ವೆಲ್​ ಡನ್​ ರಾಹುಲ್​ ಎಂದು ಸ್ವತಃ ತಮ್ಮನ್ನು ತಾವೇ ಪ್ರಶಂಶಿಸಿದ್ದಾರೆ. ಈ ವೇಳೆ ಸುದ್ದಿಗೋಷ್ಠಿಯಲ್ಲಿದ್ದ ಪತ್ರಕರ್ತರು ಕೂಡ ಜೋರಾಗಿ ನಗಾಡಿದ್ದಾರೆ. ದ್ರಾವಿಡ್ ಉರ್ದುವಿನಲ್ಲಿ ಮಾತನಾಡಿದ ವಿಡಿಯೊ ವೈರಲ್(viral video)​ ಆಗಿದೆ.

ಇದನ್ನೂ ಓದಿ Rahul Dravid: ಕೋಚ್ ಹುದ್ದೆಯಲ್ಲಿ ಮುಂದುವರಿಯಲ್ಲ; ಅಧಿಕೃತ ಹೇಳಿಕೆ ನೀಡಿದ ದ್ರಾವಿಡ್


ಟಿ20 ವಿಶ್ವಕಪ್​ ಟೂರ್ನಿ ಬಳಿಕ ರಾಹುಲ್​ ದ್ರಾವಿಡ್​ ಅವರು ಭಾರತ ತಂಡದ ಕೋಚ್​ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಈಗಾಗಲೇ ಅವರು ತಮ್ಮ ಈ ನಿರ್ಧಾರವನ್ನು ಕೂಡ ಪ್ರಕಟಿಸಿದ್ದಾರೆ. ದ್ರಾವಿಡ್ ನವೆಂಬರ್ 2021ರಲ್ಲಿ ಭಾರತ ತಂಡದ ಕೋಚ್ ಆಗಿ ಆಯ್ಕೆಯಾದರು. ದ್ರಾವಿಡ್ ಕೋಚ್​ ಆದಾಗ ಅವರ ಮೇಲೆ ಅತಿಯಾದ ನಿರೀಕ್ಷೆಯಿತ್ತು. ಆದರೆ ನಿರೀಕ್ಷೆಗೆ ತಕ್ಕ ಪ್ರದರ್ಶನ ಅವರ ಕೋಚಿಂಗ್​ ಅವಧಿಯಲ್ಲಿ ಕಂಡು ಬರಲಿಲ್ಲ. ಹೀಗಾಗಿ ಅವರ ಕೋಚಿಂಗ್​ ಬಗ್ಗೆ ಹಲವು ಟೀಕೆಗಳು ಕೂಡ ವ್ಯಕ್ತವಾಗಿತ್ತು. ರಾಹುಲ್ ದ್ರಾವಿಡ್ ಅವರು ಭಾರತ ತಂಡದ ಹೆಡ್ ಕೋಚ್ ಆದ ಬಳಿಕ ನಿರೀಕ್ಷಿತ ಯಶಸ್ಸು ತಂಡಕ್ಕೆ ಸಿಕ್ಕಿಲ್ಲ. ಅಂಡರ್​-19 ಕ್ರಿಕೆಟ್​ ಮಾರ್ಗದರ್ಶನದಲ್ಲಿ ಅವರಿಗೆ ಸಿಕ್ಕಷ್ಟು ಯಶಸ್ಸು ಸೀನಿಯರ್ಸ್‌ ತಂಡದಲ್ಲಿ ಸಿಗಲಿಲ್ಲ.

ದ್ರಾವಿಡ್​ಗೆ ಟೀಮ್​ ಇಂಡಿಯಾದ ಕೋಚಿಂಗ್​ ಬಗ್ಗೆ ಮೊದಲಿನಿಂದಲೇ ಆಸಕ್ತಿ ಇರಲಿಲ್ಲ. ಆದರೆ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಅಂದಿನ ಅಧ್ಯಕ್ಷ ಸೌರವ್ ಗಂಗೂಲಿ ಅವರ ಒತ್ತಾಯದ ಮೇರೆಗೆ ದ್ರಾವಿಡ್​ ಕೋಚ್​ ಹುದ್ದೆ ವಹಿಸಿಕೊಂಡಿದ್ದರು. ಕೊನೆಯ ಬಾರಿಗೆ ಕೋಚಿಂಗ್​ ನಡೆಸುತ್ತಿರುವ ದ್ರಾವಿಡ್​ ಟಿ20 ವಿಶ್ವಕಪ್​ನಲ್ಲಾದರೂ ಕಪ್​ ಗೆದ್ದು ಗೆಲುವಿನ ವಿದಾಯ ಸಿಗಲಿ ಎನ್ನುವುದು ಕ್ರಿಕೆಟ್​ ಅಭಿಮಾನಿಗಳ ಆಶಯ.

Continue Reading

ರಾಜಕೀಯ

Lok Sabha Election 2024: ಹಿಂದೂಗಳಿಗೆ ಬುದ್ಧಿ ಇದ್ದಿದ್ದರೆ ಬಿಜೆಪಿ ಇಷ್ಟು ಹಿನ್ನಡೆ ಕಾಣುತ್ತಿರಲಿಲ್ಲ! ವಿಡಿಯೊ ವೈರಲ್‌

ಈ ಬಾರಿ ಲೋಕಸಭಾ ಚುನಾವಣಾ ಫಲಿತಾಂಶವು (Lok Sabha Election 2024) ಎನ್ ಡಿಎಗೆ ಗೆಲುವು ತಂದು ಕೊಟ್ಟಿದ್ದರೂ ಅದು ಸರ್ಕಾರ ರಚನೆಗೆ ಟಿಡಿಪಿ ಮತ್ತು ಜೆಡಿ (ಯು) ಅನ್ನು ಅವಲಂಬಿಸಬೇಕಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಆರ್ಟಿಕಲ್ 370ನೇ ವಿಧಿ ರದ್ದು ಅನ್ನು ಲೆಕ್ಕಿಸದೆ ನಾವು ಎನ್ ಡಿಎ ಮೈತ್ರಿಕೂಟಕ್ಕೆ 400+ ಗೆಲುವು ತಂದುಕೊಡಲು ವಿಫಲರಾಗಿದ್ದೇವೆ. ಇದು ಹಿಂದೂಗಳಿಗೆ ನಾಚಿಗೇಡಿನ ವಿಚಾರ ಎಂದು ವ್ಯಕ್ತಿಯೊಬ್ಬರು ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

VISTARANEWS.COM


on

By

Lok Sabha Election 2024
Koo

ನರೇಂದ್ರ ಮೋದಿ (Narendra Modi) ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಪಾರ್ಟಿ (NDA) ದೇಶಾದ್ಯಂತ 293 ಲೋಕಸಭಾ ಸ್ಥಾನಗಳನ್ನು (Lok Sabha Election 2024) ಗೆಲ್ಲುವ ಮೂಲಕ ಮೂರನೇ ಅವಧಿಗೆ ಮತ್ತೆ ಅಧಿಕಾರಕ್ಕೆ ಬರಲು ಸಜ್ಜಾಗಿದೆ. ಆದರೂ ಭಾರತೀಯ ಜನತಾ ಪಕ್ಷವು (BJP) ಬಹುಮತದ ಕೊರತೆಯನ್ನು ಅನುಭವಿಸಿದೆ. 240 ಸ್ಥಾನಗಳು ತನ್ನದಾದರೂ ಸರ್ಕಾರ ರಚಿಸಲು ಬೇಕಾದ 272 ಸ್ಥಾನಗಳನ್ನು ಪಡೆಯಲು ಟಿಡಿಪಿ (TDP) ಮತ್ತು ಜೆಡಿ ಯು (JDU) ನಂತಹ ಮೈತ್ರಿ ಪಾಲುದಾರರೊಂದಿಗೆ ಅದು ಹೆಚ್ಚು ಅವಲಂಬಿತವಾಗಿದೆ.

ಅದ್ಧೂರಿಯಾಗಿ ರಾಮ ಮಂದಿರ ನಿರ್ಮಿಸಿದರೂ ಅಯೋಧ್ಯೆಯಲ್ಲೇ ಬಿಜೆಪಿ ಸೋತಿದೆ. ಸ್ವತಃ ಮೋದಿಯೇ ವಾರಾಣಸಿಯಲ್ಲಿ ಕಡಿಮೆ ಅಂತರದಿಂದ ಗೆದ್ದಿದ್ದಾರೆ. ಈ ಕುರಿತು ಆನ್‌ಲೈನ್‌ನಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ವ್ಯಕ್ತಿಯೊಬ್ಬರು ಚುನಾವಣಾ ಫಲಿತಾಂಶದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದು, ಈ ಬಗ್ಗೆ ಅವರು ಹೇಳಿರುವುದು ಹೀಗೆ: ಈ ಚುನಾವಣೆಯ ದುರಂತ ನೋಡಿ. ಬಿಜೆಪಿ ಕೇವಲ 240 ಸ್ಥಾನಗಳನ್ನು ಪಡೆದುಕೊಂಡಿದೆ. ಇದು ಎಲ್ಲಾ ಹಿಂದೂಗಳಿಗೆ ಅವಮಾನಕರ ಸುದ್ದಿಯಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಪ್ರಾತಿನಿಧ್ಯ ನೀಡಿದ್ದ ಆರ್ಟಿಕಲ್ 370ನೇ ವಿಧಿಯನ್ನು ರದ್ದುಗೊಳಿಸಿದರೂ, ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕಟ್ಟಲಾಗಿದ್ದರೂ ಬಿಜೆಪಿಗೆ ನಾವು 400+ ಗಡಿ ದಾಟಲು ಸಹಕರಿಸಲಿಲ್ಲ. ಈ ಚುನಾವಣಾ ಫಲಿತಾಂಶ ಹಿಂದೂಗಳಿಗೆ ಕಪಾಳಮೋಕ್ಷ ಮಾಡಿದಂತಿದೆ ಎಂದು ಹೇಳಿದ್ದಾರೆ.

ಇಂಡಿಯಾ ಬ್ಲಾಕ್‌ನ ಕಾಂಗ್ರೆಸ್, ಆಪ್, ಸಮಾಜವಾದಿ ಪಕ್ಷ (ಎಸ್‌ಪಿ), ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಒಳಗೊಂಡ ಒಕ್ಕೂಟವು ಒಟ್ಟಾಗಿ 232 ಸ್ಥಾನಗಳನ್ನು ಗೆದ್ದಿವೆ. ಕಾಂಗ್ರೆಸ್ 99 ಸ್ಥಾನಗಳನ್ನು ಪಡೆದುಕೊಂಡಿತು. ಸಮಾಜವಾದಿ ಪಕ್ಷ ಗಮನಾರ್ಹ ಪ್ರದರ್ಶನವನ್ನು ನೀಡಿದೆ. 2019ರಲ್ಲಿ 5 ಸ್ಥಾನಗಳಿಂದ ಉತ್ತರ ಪ್ರದೇಶದಲ್ಲಿ 37 ಸ್ಥಾನಗಳಿಗೆ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 29 ಸ್ಥಾನಗಳನ್ನು ಗೆದ್ದಿದ್ದರೆ, ಡಿಎಂಕೆ 22 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎನ್ ಸಿಪಿ 7 ಸ್ಥಾನಗಳನ್ನು ಗೆದ್ದುಕೊಂಡಿತು, ಶಿವಸೇನೆ ಉದ್ಧವ್ ಠಾಕ್ರೆ ಬಣ 9 ಸ್ಥಾನಗಳನ್ನು ಪಡೆದುಕೊಂಡಿತು, ಬಿಹಾರದ 4 ಕ್ಷೇತ್ರಗಳಲ್ಲಿ ಆರ್ ಜೆಡಿ ಮುನ್ನಡೆ ಸಾಧಿಸಿತು ಮತ್ತು ಆಪ್ ಮತ್ತು ಜೆಎಂಎಂ ಎರಡೂ ತಲಾ 3 ಸ್ಥಾನಗಳನ್ನು ಗೆದ್ದವು.

ಬಿಜೆಪಿಯ ಒಟ್ಟಾರೆ ವಿಜಯದ ಹೊರತಾಗಿಯೂ ಪಕ್ಷದ ಕಾರ್ಯಕ್ಷಮತೆಯು 2019ರ ಅದರ 303 ಸ್ಥಾನಗಳಿಂದ ಗಮನಾರ್ಹ ಕುಸಿತವನ್ನು ಕಂಡಿದೆ. ಕಳೆದ ಬಾರಿಗಿಂತ 63 ಸ್ಥಾನಗಳನ್ನು ಕಳೆದುಕೊಂಡಿದೆ. ಬಿಜೆಪಿ ಸ್ವಂತವಾಗಿ 370 ಸ್ಥಾನಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿತ್ತು. ಎನ್‌ಡಿಎಗೆ 400ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ವಿಶ್ವಾಸವಿತ್ತು.


ಎಕ್ಸಿಟ್ ಪೋಲ್ ಮುನ್ನೋಟಗಳಿಗೆ ವ್ಯತಿರಿಕ್ತವಾಗಿ, ದಕ್ಷಿಣದಲ್ಲಿ ಗಮನಾರ್ಹ ಲಾಭ ಗಳಿಸುವ ಭರವಸೆಯ ಹೊರತಾಗಿಯೂ ತಮಿಳುನಾಡಿನಲ್ಲಿ ಬಿಜೆಪಿ ಒಂದೇ ಒಂದು ಸ್ಥಾನವನ್ನು ಪಡೆಯಲು ಸಾಧ್ಯವಾಗಲಿಲ್ಲ.
ಚುನಾವಣಾ ಫಲಿತಾಂಶಗಳು ಭಾರತದಲ್ಲಿ ಬದಲಾಗುತ್ತಿರುವ ರಾಜಕೀಯ ಸನ್ನಿವೇಶವನ್ನು ಎತ್ತಿ ತೋರಿಸಿವೆ.

Continue Reading

ದೇಶ

Muslim Women: ಟಕಾ ಟಕ್‌ ಅಂದ್ರಲ್ಲ, 1 ಲಕ್ಷ ರೂ. ಕೊಡಿ; ಕಾಂಗ್ರೆಸ್‌ ಕಚೇರಿಗೆ ಲಗ್ಗೆ ಇಟ್ಟ ಮುಸ್ಲಿಂ ಮಹಿಳೆಯರು!

Muslim Women: ಕಾಂಗ್ರೆಸ್‌ನಿಂದ ಮಹಿಳೆಯರ ಬ್ಯಾಂಕ್‌ ಖಾತೆಗೆ 1 ಲಕ್ಷ ರೂ. ಜಮೆಯಾಗುತ್ತದೆ ಎಂದು ಭಾವಿಸಿ ಬೆಂಗಳೂರಿನ ಹಲವೆಡೆ ಮುಸ್ಲಿಂ ಮಹಿಳೆಯರು ಪೋಸ್ಟ್‌ ಆಫೀಸ್‌ ಎದುರು ಸಾಲಾಗಿ ನಿಂತಿರುವುದು ಕಂಡು ಬಂದಿತ್ತು. ಈಗ, ಚುನಾವಣೆ ಬಳಿಕ 1 ಲಕ್ಷ ರೂ. ಕೊಡುತ್ತೇವೆ ಎಂದಿದ್ರಲ್ಲ, ಕೊಡಿ ಎಂದು ಮುಸ್ಲಿಂ ಮಹಿಳೆಯರು ಲಖನೌನಲ್ಲಿರುವ ಕಾಂಗ್ರೆಸ್‌ ಕಚೇರಿ ಎದುರು ಸಾಲಾಗಿ ನಿಂತಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

VISTARANEWS.COM


on

Muslim Women
Koo

ಲಖನೌ: ಲೋಕಸಭೆ ಚುನಾವಣೆ ಮುಗಿದು, ಫಲಿತಾಂಶವೂ (Lok Sabha Election Result 2024) ಪ್ರಕಟವಾಗಿದೆ. ಸರ್ಕಾರ ರಚನೆಗೆ ಎನ್‌ಡಿಎ ಮೈತ್ರಿಕೂಟ, ಇಂಡಿಯಾ ಒಕ್ಕೂಟದ ನಾಯಕರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಅತ್ತ, ನರೇಂದ್ರ ಮೋದಿ (Narendra Modi) ಅವರೂ ರಾಜೀನಾಮೆ ನೀಡಿದ್ದು, ಶೀಘ್ರದಲ್ಲೇ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಇದರ ಬೆನ್ನಲ್ಲೇ, ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರು (Muslim Women) ಕಾಂಗ್ರೆಸ್‌ ಕಚೇರಿಗೆ ಲಗ್ಗೆ ಇಟ್ಟಿದ್ದಾರೆ. “ಚುನಾವಣೆ ಬಳಿಕ 1 ಲಕ್ಷ ರೂ. ಕೊಡುತ್ತೇವೆ ಎಂದಿದ್ರಲ್ಲ, ಕೊಡಿ” ಎಂದು ಮುಸ್ಲಿಂ ಮಹಿಳೆಯರು ಲಖನೌನಲ್ಲಿರುವ ಕಾಂಗ್ರೆಸ್‌ ಕಚೇರಿ ಎದುರು ಸಾಲಾಗಿ ನಿಂತಿದ್ದಾರೆ. ಈ ಕುರಿತು ಆಜ್‌ ತಕ್‌ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ವಿಡಿಯೊ ಕೂಡ ವೈರಲ್‌ ಆಗಿದೆ.

ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದರೆ ಮಹಿಳೆಯರಿಗೆ 1 ಲಕ್ಷ ರೂ. ಸೇರಿ ಹಲವು ಗ್ಯಾರಂಟಿಗಳನ್ನು ನೀಡಿತ್ತು. ಈ ಕುರಿತು ಗ್ಯಾರಂಟಿ ಕಾರ್ಡ್‌ ಕೂಡ ಬಿಡುಗಡೆ ಮಾಡಿತ್ತು. ಈ ಕಾರ್ಡ್‌ಅನ್ನು ಹಿಡಿದುಕೊಂಡ ಮುಸ್ಲಿಂ ಮಹಿಳೆಯರು ಕಾಂಗ್ರೆಸ್‌ ಕಚೇರಿ ಎದುರು ಸಾಲಾಗಿ ನಿಂತಿದ್ದಾರೆ. “ನಮಗೆ 1 ಲಕ್ಷ ರೂ. ನೀಡುತ್ತೇವೆ ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದರು. ಅದರಂತೆ, ಗ್ಯಾರಂಟಿ ಕಾರ್ಡ್‌ಗಳನ್ನು ಹಿಡಿದುಕೊಂಡು ನಾವು ಇಲ್ಲಿಗೆ ಬಂದಿದ್ದೇವೆ. ಅವರು ಕೊಡುತ್ತೇನೆ ಎಂದಿದ್ದರು, ಫಾರ್ಮ್‌ ಕೂಡ ಕೊಟ್ಟಿದ್ದರು. ಅವುಗಳನ್ನು ತೆಗೆದುಕೊಂಡು ಬಂದಿದ್ದೇವೆ. ಇದುವರೆಗೆ ಸಿಕ್ಕಿಲ್ಲ” ಎಂದು ಮುಸ್ಲಿಂ ಮಹಿಳೆಯರು ಹೇಳಿದ್ದಾರೆ. ಅಲ್ಲದೆ, “12 ಗಂಟೆಗೆ ಬನ್ನಿ ಎಂದಿದ್ದರು, ಅದಕ್ಕಾಗಿ ಬಂದಿದ್ದೇವೆ. ಇದುವರೆಗೆ ದುಡ್ಡು ಸಿಕ್ಕಿಲ್ಲ” ಎಂದು ಕೆಲವು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಹುಲ್‌ ಗಾಂಧಿ ಹೇಳಿದ್ದೇನು?

ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ನಾಯಕರ ರಾಹುಲ್‌ ಗಾಂಧಿ ಅವರು ಮಹಿಳೆಯರಿಗೆ 1 ಲಕ್ಷ ರೂ. ನೀಡುವ ಕುರಿತು ಹಲವು ಬಾರಿ ಘೋಷಣೆ ಮಾಡಿದ್ದರು. “ದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಹೆಣ್ಣುಮಕ್ಕಳ ಬ್ಯಾಂಕ್‌ ಖಾತೆಗಳಿಗೆ ಮಾಸಿಕ 8,500 ರೂ.ನಂತೆ ವರ್ಷಕ್ಕೆ ಒಂದು ಲಕ್ಷ ರೂ. ನೀಡಲಾಗುತ್ತದೆ. ದೇಶದ ಬಡ ಮಹಿಳೆಯರ ಕಲ್ಯಾಣಕ್ಕಾಗಿ ಕಾಂಗ್ರೆಸ್‌ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರುತ್ತದೆ. ಇದು ಕಾಂಗ್ರೆಸ್‌ ಗ್ಯಾರಂಟಿಯಾಗಿದೆ. ಟಕಾ ಟಕ್‌ ಅಂತ ಮಹಿಳೆಯರ ಖಾತೆಗೆ ಹಣ ಜಮೆಯಾಗಲಿದೆ” ಎಂಬುದಾಗಿ ಹೇಳಿದ್ದರು. ಹಾಗಾಗಿ, ಚುನಾವಣೆ ಮುಗಿದ ಕೂಡಲೇ ಮುಸ್ಲಿಂ ಮಹಿಳೆಯರು ಕಾಂಗ್ರೆಸ್‌ ಕಚೇರಿಗೆ ಲಗ್ಗೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕರ್ನಾಟಕದಲ್ಲೂ ಖಾತೆ ತೆರೆಯಲು ಕ್ಯೂ

ಕಾಂಗ್ರೆಸ್‌ನಿಂದ ಮಹಿಳೆಯರ ಬ್ಯಾಂಕ್‌ ಖಾತೆಗೆ 1 ಲಕ್ಷ ರೂ. ಜಮೆಯಾಗುತ್ತದೆ ಎಂದು ಭಾವಿಸಿ ಬೆಂಗಳೂರಿನ ಹಲವೆಡೆ ಮುಸ್ಲಿಂ ಮಹಿಳೆಯರು ಪೋಸ್ಟ್‌ ಆಫೀಸ್‌ ಎದುರು ಸಾಲಾಗಿ ನಿಂತಿರುವುದು ಕಂಡು ಬಂದಿತ್ತು. ಬೆಂಗಳೂರಿನ ಶಿವಾಜಿ ನಗರ, ವಸಂತನಗರ ಸೇರಿ ಹಲವೆಡೆ ಮುಸ್ಲಿಂ ಮಹಿಳೆಯರು ಬ್ಯಾಂಕ್‌ ಖಾತೆ ತೆರೆಯಲು ಪೋಸ್ಟ್‌ ಆಫೀಸ್‌ ಎದುರು ಸಾಲುಗಟ್ಟಿ ನಿಂತಿದ್ದರು. ಕಾಂಗ್ರೆಸ್‌ 1 ಲಕ್ಷ ರೂ. ಗ್ಯಾರಂಟಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಬ್ಯಾಂಕ್‌ ಖಾತೆ ತೆರೆಯಲು ಮುಂದಾಗಿದ್ದರು.

ಇದನ್ನೂ ಓದಿ: PM Narendra Modi: ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ರಾಜೀನಾಮೆ

Continue Reading

ದೇಶ

Viral Video: ಮಕ್ಕಳ ಎದುರೇ ತಂದೆಯನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

ಮೂವರು ಮಕ್ಕಳೊಂದಿಗೆ ಕ್ಲಬ್ ಗೆ ಬಂದಿದ್ದ ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆದಿದ್ದು, ಈ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಆರೋಪಿಗಳು ಅರ್ಷದ್ ಅವರ ತಲೆಗೆ ಅತಿ ಸಮೀಪದಿಂದ ಪಾಯಿಂಟ್ ಬ್ಲಾಂಕ್ ರೇಂಜ್‌ ನಲ್ಲಿ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಹಳೆ ವೈಷಮ್ಯವೇ ಘಟನೆಗೆ ಕಾರಣ ಎನ್ನಲಾಗಿದೆ.

VISTARANEWS.COM


on

By

Viral Video
Koo

ಮೀರತ್: ಮೂವರು ಚಿಕ್ಕ ಮಕ್ಕಳ ಎದುರೇ ತಂದೆಯನ್ನು ಗುಂಡಿಕ್ಕಿ ಹತ್ಯೆ (murder) ಮಾಡಿರುವ ಘಟನೆ ಉತ್ತರ ಪ್ರದೇಶದ (uttarpradesh) ಮೀರತ್‌ನ (Meerut) ಕ್ಲಬ್‌ನಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮೀರತ್‌ನ ಜೈದಿ ಫಾರ್ಮ್‌ನ ನಿವಾಸಿ ಅರ್ಷದ್ (25) ಹತ್ಯೆಯಾದ ವ್ಯಕ್ತಿ. ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳು ಮತ್ತು ಮಗನೊಂದಿಗೆ ಮೀರತ್‌ನ ಕ್ಲಬ್‌ಗೆ ಬಂದಿದ್ದಾಗ ಈ ಘಟನೆ ನಡೆದಿದೆ.

ಉತ್ತರ ಪ್ರದೇಶದ ಮೀರತ್‌ನ ಲೋಹಿಯಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral Video) ಆಗಿದೆ. ಅರ್ಷದ್ ಮಂಗಳವಾರ ರಾತ್ರಿ ಮಕ್ಕಳೊಂದಿಗೆ ಭದಾನದಲ್ಲಿರುವ ಕ್ಲಬ್‌ನ ಈಜುಕೊಳಕ್ಕೆ ತೆರಳಿದ್ದರು. ಜನರಿಂದ ತುಂಬಿದ್ದ ಕ್ಲಬ್‌ನಲ್ಲಿ ಅರ್ಷದ್ ಒಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಾಗಲೇ ಈ ಘಟನೆ ನಡೆದಿದೆ. ಈ ಘಟನೆ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದೆ. ಅರ್ಷದ್ ತನ್ನ ಫೋನ್ ಅನ್ನು ನೋಡುತ್ತಿದ್ದಂತೆ ಒಬ್ಬ ವ್ಯಕ್ತಿ ಅವರನ್ನು ಜನರ ಗುಂಪಿನಿಂದ ಪ್ರತ್ಯೇಕಿಸಲು ಪ್ರಯತ್ನಿಸುತ್ತಾನೆ. ಕೂಡಲೇ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ನೆಲಕ್ಕೆ ಬಿದ್ದ ಅವರತ್ತ ಮಕ್ಕಳು ಅಳುತ್ತಾ ಓಡಿ ಬಂದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ವಿಕ್ರಮ್ ತಿಳಿಸಿದ್ದಾರೆ.

ಆರೋಪಿಗಳು ಅರ್ಷದ್ ಅವರ ತಲೆಗೆ ಅತಿ ಸಮೀಪದಿಂದ ಪಾಯಿಂಟ್ ಬ್ಲಾಂಕ್ ರೇಂಜ್‌ ನಲ್ಲಿ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಹಳೆ ವೈಷಮ್ಯವೇ ಘಟನೆಗೆ ಕಾರಣ ಎನ್ನಲಾಗಿದೆ.


ಕೆಲವು ದಿನಗಳ ಹಿಂದೆ ಹಣದ ವಿಚಾರವಾಗಿ ಬಿಲಾಲ್ ಮತ್ತು ಅರ್ಷದ್ ನಡುವೆ ತೀವ್ರ ಜಗಳವಾಗಿತ್ತು. ಇಬ್ಬರ ವಿರುದ್ಧವೂ ಹಲವು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ಅರ್ಷದ್ ಕುಟುಂಬದ ದೂರಿನ ಮೇರೆಗೆ ಬಿಲಾಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಆತನ ಬಂಧನಕ್ಕೆ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading
Advertisement
French Open 2024
ಕ್ರೀಡೆ5 mins ago

French Open 2024: ಸೆಮಿಫೈನಲ್​ ಪ್ರವೇಶಿಸಿದ ಬೋಪಣ್ಣ-ಮ್ಯಾಥ್ಯೂ ಜೋಡಿ

Minister Of Parliament
Latest29 mins ago

Minister Of Parliament: ನೀವು ಮತ ಹಾಕಿ ಕಳುಹಿಸಿರುವ ಸಂಸದರಿಗೆ ಎಷ್ಟು ಸಂಬಳ ಸಿಗುತ್ತದೆ ಗೊತ್ತೇ?

Uttarakhand Trekking Tragedy
ಪ್ರಮುಖ ಸುದ್ದಿ30 mins ago

Uttarakhand Trekking Tragedy: ಉತ್ತರಾಖಂಡದಿಂದ ರಾಜ್ಯದ ಚಾರಣಿಗರನ್ನು ಸುರಕ್ಷಿತವಾಗಿ ಕರೆತರಲು ಕ್ರಮ: ಸಿಎಂ

India Bloc Meeting
ದೇಶ39 mins ago

India Bloc Meeting: ಆಡಳಿತದ ಆಸೆ ಕೈಬಿಟ್ಟ ಇಂಡಿಯಾ ಒಕ್ಕೂಟ; ಒಗ್ಗಟ್ಟಿಗಾಗಿ ಸಭೆ, ಬಲಿಷ್ಠ ಪ್ರತಿಪಕ್ಷದ ಗುರಿ!

India vs Ireland
ಕ್ರೀಡೆ1 hour ago

India vs Ireland: ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ಭಾರತ; ರೋಹಿತ್​ ಜತೆ ಕೊಹ್ಲಿ ಇನಿಂಗ್ಸ್​ ಆರಂಭ

Water Supply Cut
ಕರ್ನಾಟಕ1 hour ago

Water Supply Cut: ಬೆಂಗಳೂರಿನಲ್ಲಿ ಇನ್ನೆರಡು ದಿನ ಕಾವೇರಿ ನೀರು ಪೂರೈಕೆಯಿಲ್ಲ!

Lowest Margin of Wins
ದೇಶ1 hour ago

Lowest Margin of Wins: ಕೇವಲ 48 ಮತ ಅಂತರದ ಗೆಲುವು! ಕಡಿಮೆ ಅಂತರದಿಂದ ಗೆದ್ದವರ ಪಟ್ಟಿ ಇಲ್ಲಿದೆ

Rahul Dravid
ಕ್ರೀಡೆ2 hours ago

Rahul Dravid: ಸುದ್ದಿಗೋಷ್ಠಿಯಲ್ಲಿ ಉರ್ದು ಮಾತನಾಡಿದ ರಾಹುಲ್​ ದ್ರಾವಿಡ್​; ವಿಡಿಯೊ ವೈರಲ್​

Drowned in Water young man drowned in tungabhadra river and died
ಕರ್ನಾಟಕ2 hours ago

Drowned in Water: ನದಿಗೆ ಬಿದ್ದವನು ಬದುಕಿದ, ರಕ್ಷಿಸಲು ಹೋದವನು ಸತ್ತ

Operation London Cafe movie will be released very soon
ಕರ್ನಾಟಕ2 hours ago

Kannada New Movie: ಅತೀ ಶೀಘ್ರದಲ್ಲೇ ತೆರೆಗೆ ಬರಲಿದೆ ‘ಆಪರೇಷನ್ ಲಂಡನ್ ಕೆಫೆ’!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ2 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ2 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ2 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು4 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ6 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌