ದಶಮುಖ ಅಂಕಣ | ಚಂದ್ರಲೋಕದಲ್ಲಿ ಒಂದು ಯಾನ - Vistara News

ಪ್ರಮುಖ ಸುದ್ದಿ

ದಶಮುಖ ಅಂಕಣ | ಚಂದ್ರಲೋಕದಲ್ಲಿ ಒಂದು ಯಾನ

ಬಾಲ್ಯಕ್ಕೂ ಚಂದ್ರನಿಗೂ ಬಿಟ್ಟೂಬಿಡದ ನಂಟು. ಅಮ್ಮನ ಸೊಂಟದ ಮೇಲೆ ಕುಳಿತು ಚಂದಮಾಮನನ್ನು ನೋಡುತ್ತಾ ಬಾಯಿಗೆ ತುತ್ತುಣಿಸಿಕೊಳ್ಳುವ ದಿನಗಳಿಂದಲೇ ನಮ್ಮ ಮತ್ತು ಅವನ ಗೆಳೆತನ ಆರಂಭವಾಗುತ್ತದೆ. ಚಂದ್ರಗ್ರಹಣದ ಹಿನ್ನೆಲೆಯಲ್ಲಿ ನಮ್ಮೆಲ್ಲರ ಪ್ರೀತಿಯ ಚಂದ್ರನ ಬಗೆಗೆ ಒಂದು ಲಹರಿ.

VISTARANEWS.COM


on

moon alaka
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಈ ಅಂಕಣವನ್ನು ಇಲ್ಲಿ ಕೇಳಬಹುದು:

alaka column

ಇಂದು ಚಂದ್ರಗ್ರಹಣ. ತನ್ನಷ್ಟಕ್ಕೆ ತಾನು ಸಂಭವಿಸುವ ಖಗೋಳದ ವಿದ್ಯಮಾನದ ಬಗ್ಗೆ ಮಾನವರ ಕುತೂಹಲ ಸಹಜ. ಈ ಕೌತುಕ ಕೆಲವರನ್ನು ವೈಜ್ಞಾನಿಕ ದೃಷ್ಟಿಕೋನ ಹೊಂದಲು ಪ್ರೇರೇಪಿಸಿದರೆ, ಕೆಲವರನ್ನು ಭಯದಿಂದ ಮೌಢ್ಯದತ್ತ ದೂಡುತ್ತದೆ. ನಿಗದಿತ ಸಮಯಕ್ಕೆ ಆರಂಭವಾಗಿ, ಕರಾರುವಾಕ್ಕಾದ ಸಮಯಕ್ಕೇ ಮುಗಿಯುವ ಈ ಘಟನೆಯ ಬಗ್ಗೆ, ಘಟನೆಗೆ ಕಾರಣರಾದವರ ಬಗ್ಗೆ ನಮ್ಮ ಭಾವನೆಗಳು ನಿಗದಿತ ದಿಕ್ಕಿನೆಡೆಗೇ ಹರಿಯಬೇಕೆಂದಿಲ್ಲವಲ್ಲ. ಈಗಾದದ್ದೂ ಅದೇ! ಗ್ರಹಣದ ನೆವನದಲ್ಲಿ ಚಂದ್ರ ಮನವನ್ನು ಆವರಿಸಿಕೊಂಡಿದ್ದ. ಅರಿಯುವ ಮುನ್ನವೇ ಲಹರಿಯೊಂದು ಹುಟ್ಟಿಕೊಂಡಿತು.

ಬಾಲ್ಯಕ್ಕೂ ಚಂದ್ರನಿಗೂ ಬಿಟ್ಟೂಬಿಡದ ನಂಟು. ಅಮ್ಮನ ಸೊಂಟದ ಮೇಲೆ ಕುಳಿತು ಚಂದಮಾಮನನ್ನು ನೋಡುತ್ತಾ ಬಾಯಿಗೆ ತುತ್ತುಣಿಸಿಕೊಳ್ಳುವ ದಿನಗಳಿಂದಲೇ ನಮ್ಮ ಮತ್ತು ಅವನ ಗೆಳೆತನ ಆರಂಭವಾಗುತ್ತದಲ್ಲ. ಹೀಗೆ ಎಳೆಯ ಕಂದಮ್ಮಗಳಿಂದ ಆರಂಭವಾದರೆ, ಶಾಲೆಗೆ ಹೋಗುವ ಚಿಣ್ಣರಿಂದ ಹಿಡಿದು, ಪ್ರೇಮಿಗಳ ಪ್ರೀತಿಪಾತ್ರನೂ ಆಗಿ, ಕಡೆಗೆ ಎಷ್ಟು ದೊಡ್ಡವರಲ್ಲೂ ಎಳೆತನ ಎಬ್ಬಿಸಿ, ತಲೆ ನೆರೆತು ಆರಾಮ ಕುರ್ಚಿಯಲ್ಲಿ ಕುಳಿತವರಿಗೂ ಆರಾಮ ನೀಡುವವ ಈತ. ಹಾಗೆಂದೇ ಇರಬೇಕು, ಚಂದ್ರಮನ ಕುರಿತಾದ ಪ್ರಶ್ನೆ, ಕುತೂಹಲ, ಕವಿಸಮಯ, ಮಾತು, ಕಥೆ, ಆಟ, ತುಂಟಾಟಗಳಿಗೆ ತುದಿ-ಮೊದಲೇ ಇಲ್ಲ. ನಮ್ಮ ಭಾಷೆಯ ಜಾಯಮಾನದಲ್ಲೂ ಚಂದಿರನ ಬಗ್ಗೆ ಬರುವಂಥ ಹೆಸರು, ವರ್ಣನೆಗಳು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತವೆ.

ಚಂದ್ರನ ಮೇಲಿರುವ ಕಲೆಗಳ ಬಗ್ಗೆ ಚಿಕ್ಕವರಿದ್ದಾಗ ಅಜ್ಜಿಕಥೆಯೊಂದು ಕೇಳಿದ್ದು ನೆನಪಾಗುತ್ತದೆ. ಒಂದಾನೊಂದು ಕಾಡಿನಲ್ಲಿ ಅಪ್ಪ-ಅಮ್ಮನನ್ನು ಕಳೆದುಕೊಂಡು ಅನಾಥವಾಗಿದ್ದ ಮೊಲದ ಮರಿಯೊಂದು, ಬೆಳದಿಂಗಳ ರಾತ್ರಿಯಲ್ಲಿ ತೊರೆಯ ಬಳಿ ಕುಳಿತು ಶೋಕಿಸುತ್ತಿತ್ತು. ಆಗ ಆಕಸ್ಮಿಕವಾಗಿ ಸಿಂಹಿಣಿಯ ಕೈಗೆ ಸಿಕ್ಕಿಬಿತ್ತು. ಆ ಕಾಲದಲ್ಲಿ ಸಿಂಹಿಣಿಗೂ ಕೇಸರಗಳಿದ್ದುವಂತೆ. ಕಾಡನ್ನು ಪಾಲಿಸುವವರಿಗೆ ಅನಾಥರನ್ನು ರಕ್ಷಿಸುವುದು ಧರ್ಮ ಎಂದು ನಡುಗುತ್ತಲೇ ಹೇಳಿದ ಮೊಲದ ಮರಿಗೆ, ಕಾಡಿನ ನ್ಯಾಯದ ಪ್ರಕಾರ ತಾನೀಗ ನಿನ್ನನ್ನು ತಿನ್ನಲೇಬೇಕೆಂದು ಅಬ್ಬರಿಸಿತು ಸಿಂಹಿಣಿ. ʻಕಾಪಾಡಿ…ʼ ಎಂದು ಹುಯಿಲಿಡುತ್ತಿದ್ದ ಮೊಲವನ್ನು ಕಂಡು ಕನಿಕರಗೊಂಡ ಚಂದ್ರ, ಪುಟ್ಟ ಮೊಲವನ್ನು ಬಿಟ್ಟುಬಿಡುವಂತೆ ಸಿಂಹಿಣಿಯಲ್ಲಿ ಕೇಳಿದ. ಬೋಳುಮಂಡೆಯ ಚಂದ್ರನ ಮಾತನ್ನು ಕೇಳಿ ವ್ಯವಹಾರ ಮಾಡುವವಳು ತಾನಲ್ಲ ಎಂದ ಸಿಂಹಿಣಿಯ ಮಾತಿಗೆ ಕೋಪಗೊಂಡ ಚಂದ್ರ, ನಿನ್ನ ಮಂಡೆಯೂ ಬೋಳಾಗಲಿ ಎಂದು ಶಪಿಸಿ, ಮೊಲವನ್ನು ತನ್ನಲ್ಲಿ ಹುದುಗಿಸಿಟ್ಟುಕೊಂಡನಂತೆ. ಅದರಿಂದ ಚಂದ್ರನಲ್ಲಿ ಕೃತಜ್ಞತೆಯಿಂದ ಕೈ ಮುಗಿದು ಕುಳಿತ ಮೊಲದ ಕಲೆ ಕಂಡರೆ, ಸಿಂಹಣಿಯ ಕೇಸರಗಳೆಲ್ಲಾ ಉದುರಿ ಬೋಳಾದವಂತೆ. ಈ ಕಥೆ ಹೀಗಾದರೆ, ಮಗುವಾಗಿದ್ದಾಗ ಶ್ರೀರಾಮನು ಚಂದ್ರನನ್ನು ಬಯಸಿ ರಚ್ಚೆ ಹಿಡಿದ ಕಥೆ ನಮಗ್ಯಾರಿಗೆ ಗೊತ್ತಿಲ್ಲ? ಮಂಥರೆ ತಂದು ಕೊಟ್ಟ ಕನ್ನಡಿಯಲ್ಲಿ ಚಂದ್ರಬಿಂಬವನ್ನು ಕಂಡು, ಚಂದ್ರನೇ ಕೈಗೆ ಸಿಕ್ಕ ಎಂದು ಸಂತೋಷಪಟ್ಟ ಕಥೆ ಇಂದಿಗೂ ಮಕ್ಕಳನ್ನು ರಂಜಿಸುವಂಥ ಗುಣವುಳ್ಳದ್ದು.

ಚಂದ್ರನ ಕುರಿತಾದ ಶಿಶುಗೀತೆಗಳಿರುವುದು ಒಂದೇ ಎರಡೇ. “ದೇವರ ಪೆಪ್ಪರಮೆಂಟೇನಮ್ಮಾ ಗಗನದೊಳಲೆಯುವ ಚಂದಿರನು?/ ಎಷ್ಟೇ ತಿಂದರು ಖರ್ಚೇ ಆಗದ ಬೆಳೆಯುವ ಪೆಪ್ಪರಮೆಂಟಮ್ಮಾ!” ಎನ್ನುವ ಮೂಲಕ ಕುವೆಂಪು ಅವರೊಳಗಿರುವ ಮಗು ಚಂದ್ರನನ್ನು ತಿಂದು ನೋಡಿದರೆ ಹೇಗಿದ್ದೀತು ಎಂದು ಯೋಚಿಸುತ್ತದೆ. “ಚಂದಿರನೇತಕೆ ಓಡುವನಮ್ಮಾ, ಮೋಡಕೆ ಬೆದರಿಹನೇ?” ಪದ್ಯವಂತೂ ಈಗಿನ ಅಜ್ಜ-ಅಜ್ಜಿಯರ ಕಾಲದಲ್ಲೂ ಶಿಶುಗೀತೆಯಾಗಿ ಇದ್ದಿರಬಹುದು. ಇದೇ ಪದ್ಯದಲ್ಲಿ ಮುಂದುವರಿದು, “ಚಂದಿರನೆನ್ನಯ ಗೆಳೆಯನು ಅಮ್ಮಾ ನನ್ನೊಡನಾಡುವನು/ ನಾನೂ ಓಡಲು ತಾನೂ ಓಡುವ ಚೆನ್ನಿಗ ಚಂದಿರನು” ಎನ್ನುವ ಕವಿ ನೀ. ರೆ. ಹಿರೇಮಠ ಅವರ ವರ್ಣನೆಯಂತೂ ನಮ್ಮನ್ನು ಥಟ್ಟನೆ ಚಿಣ್ಣರನ್ನಾಗಿಸಿ, ಯಾವುದೋ ಒಂದು ಗೊತ್ತಿಲ್ಲದ ಜಾಗಕ್ಕೆ ಕರೆದೊಯ್ಯುವ ಸಂಜೆಯ ಬಸ್ಸಿನಲ್ಲಿ ನಮ್ಮನ್ನು ಕುಳ್ಳಿರಿಸಿಬಿಡುತ್ತದೆ. ಬಾಲ್ಯದ ಆ ಬಸ್ಸು ಎಷ್ಟೇ ವೇಗದಲ್ಲಿ ಓಡಿದರೂ, ಕಿಟಕಿಯಲ್ಲಿ ನೋಡಿದಾಗೆಲ್ಲ ತಪ್ಪದೇ ಗೋಚರಿಸುತ್ತಿದ್ದ ಆ ಚಂದಿರ ಹುಟ್ಟಿಸುತ್ತಿದ್ದ ಬೆರಗೇನು ಸಾಮಾನ್ಯದ್ದೇ? ಬಿ. ಎಂ. ಶರ್ಮಾ ಅವರ ʻಬಾವಿಯಲ್ಲಿ ಚಂದ್ರʼ ಕವನದಲ್ಲಿ ಗೋಪಿ ಮತ್ತು ಪುಟ್ಟು ಬಾವಿಯಲ್ಲಿ ಇಣುಕಿ ನೋಡಿದಾಗ ಒಂದು ಘೋರ ಅನಾಹುತವಾಗಿಬಿಡುತ್ತದೆ. “ಬಾವಿಲಿ ಚಂದ್ರನ ಬಿಂಬವ ಕಂಡು/ ಚಂದ್ರನು ಬಾವಿಗೆ ಬಿದ್ದನು ಎಂದು/ ಅಯ್ಯೋ! ಪಾಪವೆ! ಎನ್ನುತಲೊಂದು/ ಕೊಕ್ಕೆಯ ಹುಡುಕಿದರು”. ಚಂದ್ರನ ಹೆಸರಿನಲ್ಲಿ ಚಿಣ್ಣರ ಚಿತ್ತ ನಡೆಸುವ ತುಂಟಾಟಗಳ ಕ್ಯಾನ್ವಾಸ್‌ ಸಹ ಆಕಾಶದಷ್ಟೇ ದೊಡ್ಡದು.

ಇಂತಿಪ್ಪ ಚಂದ್ರ ಇರುವಂತೆ ಇರದಷ್ಟು ಚಂಚಲ. ಹಾಗಾಗಿ ಯಾವತ್ತು ಹೇಗಿರುತ್ತಾನೆ ಎಂಬುದನ್ನು ತುಂಬಾ ರಸವತ್ತಾಗಿ ವರ್ಣಿಸುತ್ತಾರೆ ನಮ್ಮ ದ. ರಾ ಬೇಂದ್ರೆಯವರು. ಬಿದಿಗೆ ಚಂದಿರನಿಗೆ ದೀಪ ಹಚ್ಚಿದಂತೆ ಜೋಡಿದ್ದರೆ, ಚವತಿ ಚಂದ್ರ ಕೋಡು ಮೂಡಿದಂತೆ ಇರುತ್ತಾನೆ. “ಅಷ್ಟಮಿ ಚಂದಿರನು ಬಂದ/ ಅರ್ಧಬಿಟ್ಟು ಅರ್ಧ ತಿಂದ/ ಉಂಡಿ ಚೆಲ್ಲಿ ಕೊಟ್ಟನಿಲ್ಲಿ ಹುಡುಗನಾವನು?” ಎಂಬ ಕವಿಕಲ್ಪನೆ ಚಂದ್ರನಷ್ಟೇ ಪ್ರಿಯ ಎನಿಸುವುದಿಲ್ಲವೇ? ಇಂಥ ಚಂದ್ರನ ಮೇಲೆ ಮನುಷ್ಯ ಕಾಲಿಟ್ಟಾಗ ಅಜ್ಞಾತ ಕವಿಯೊಬ್ಬರಿಗೆ ಸಿಕ್ಕಾಪಟ್ಟೆ ಗಾಬರಿಯಾಗಿರಬೇಕು. ಹಾಗೆಂದೇ ಎಲ್ಲಾ ಮಕ್ಕಳ ಪರವಾಗಿ, “ಚಂದ್ರಲೋಕದೊಳಿನ್ನು ಮನೆಯ ಕಟ್ಟುವರಂತೆ/ ಇರುವೊಬ್ಬ ಚಂದ್ರನನು ಅಂದಗೆಡಿಸುವರೇ?/ ಚಂದಮಾಮ ಎಂದು ಕರೆವುದಾರಮ್ಮ/ ಬಾಲರಾನಂದಕೆ ಬರೆಯ ಕೊಡಿಸುವರೇ?” ಎಂದು ಮನಸ್ಸು ಕರಗುವಂತೆ ದುಃಖಿಸುತ್ತಾರೆ.

ಇವೆಲ್ಲ ಮಕ್ಕಳ ಮನದ ಮಾತುಗಳಾದವು. ದೊಡ್ಡವರೇನು ಕಡಿಮೆಯೇ? ರಸ್ತೆ ಮೇಲೆ ನಡೆಯುವ ಮದಿರಾಪ್ರಿಯರ ಪಾಲಿಗೆ ಲೋಕವೇ ತೂರಾಡಿದರೂ, ಚರಂಡಿ ತಾ ದಾರಿ ತಪ್ಪಿದರೂ, ತಪ್ಪದೇ ದಾರಿ ದೀಪವಾಗುವವ ಚಂದ್ರನೇ ತಾನೆ? ಹಾಗೆಂದೇ ನಮ್ಮ ಜಿ.ಪಿ. ರಾಜರತ್ನಂ ಅವರು ʻಬೆಳದಿಂಗಳ ರಾತ್ರಿʼ ಅನ್ನುವ ಕವನದಲ್ಲಿ ಹೇಳಿದ್ದು, “ಆಕಾಶದ ಚಂದ್ರನ್ನ ಪಡಖಾನೆ ದೀಪಕ್ಕೆ ಹೋಲಿಸದೆ ಹೋಯ್ತಂದ್ರೆ ತೆಪ್ಪಾಯ್ತದೆ”. ಇನ್ನು, “ಉಡುಗಣವೇಷ್ಟಿತ ಚಂದ್ರ ಸುಶೋಭಿತ”, “ತಿಂಗಳ ಚೆಲುವಿನ ಮಂಗಳ ಮೂರುತಿ”ಯಂಥ ವರ್ಣನೆಗಳು ಹಲವೆಡೆ ದೊರೆಯಬಹುದು. ಚಂದ್ರನ ಬೆಳಕನ್ನೇ ಸೇವಿಸಿ ಬದುಕುವ ಚಕೋರ ಪಕ್ಷಿಯ ಕಲ್ಪನೆಯಂತೂ ರಮ್ಯ ಕವಿಸಮಯ. ಕೆ.ಎಸ್.‌ ನರಸಿಂಹಸ್ವಾಮಿ ಅವರ “ಕಬ್ಬಿಗನೂರಿಗೆ ದಾರಿಗಳಿದ್ದರೆ ಕನಸೇ ಇರಬೇಕು” ಸಾಲುಗಳನ್ನು ಬದಲಿಸಿ, “ಚಂದಿರನೂರಿಗೆ ದಾರಿಗಳಿದ್ದರೆ ಕನಸೇ ಇರಬೇಕು/ ಅಲ್ಲಿಯ ಒಡೆತನ ಸಿಗುವಂತಿದ್ದರೆ ನನಗೇ ಸಿಗಬೇಕು” ಎಂದು ಉಲ್ಲೇಖಿಸಿದ್ದನ್ನೂ ಕೇಳಿದ್ದೇನೆ. ಹೀಗೆನ್ನುವಲ್ಲಿ, ಚಂದಿರ-ಚಂದಿರನೂರು ಎಂಬೆಲ್ಲಾ ಕಲ್ಪನೆಗಳು ನಮಗೆಷ್ಟು ಪ್ರಿಯವಾದವು ಎಂಬುದಕ್ಕೆ ಬೇರೆ ಸಾಕ್ಷಿ ಬೇಕೆ?

ಇದನ್ನೂ ಓದಿ | ದಶಮುಖ ಅಂಕಣ | ಶಾಂತಿಯ ಸಾರುವ ಕಾಂತಿಯ ಕಿಡಿಗಳು

ಚಂದ್ರನೊಂದಿಗೆ ಹೊಂದಿಕೊಂಡಂಥ ಹೆಸರುಗಳೂ ಒಂದಕ್ಕಿಂದ ಒಂದು ಚಂದ. ಮೃಗಾಂಕ, ಶಶಾಂಕ, ತಿಂಗಳು, ತಂಗದಿರ ಮುಂತಾದ ಹೆಸರುಗಳೇ ತಂಪಾದ ಭಾವನೆ ಮೂಡಿಸುತ್ತದೆ. ಇಂದುಮತಿ, ಇಂದುವದನೆ, ಇಂದುಲೇಖಾ ಎಂದೆಲ್ಲಾ ಕರೆದರೆ ಚಂದ್ರಮತಿ, ಚಂದ್ರಮುಖಿ, ಚಂದ್ರಲೇಖೆಯರೇನೂ ಬೇಸರಿಸಲಾರರು. ಆದರೆ ಚಂದ್ರಕಳಾಧರಿಯರನ್ನು ʻಚಂದ್ರಕಲೆʼ ಎಂದು ಕರೆದರೆ ಕುಚೇಷ್ಟೆಯಾದೀತು, ಎಚ್ಚರ! ʻಪೂರ್ಣಚಂದ್ರʼನತ್ತ ನಗೆಚೆಲ್ಲುವ ʻಪೂರ್ಣಿಮೆʼಯ ಕಂಡು ಚಂದ್ರಶೇಖರ, ಸೋಮಶೇಖರರ ಮುಖದಲ್ಲೂ ನಗೆ ಮೂಡಬಹುದು. ಪ್ರೇಮಿಗಳ ಪಾಲಿಗೆ ʻಕಡಲಮೋಹಿತʼ; ತಾರೆಯರ ಪಾಲಿಗೆ ʻಉಡುಪತಿʼ; ನಿಶೆಯ ಪಾಲಿಗೆ ʻಯಾಮಿನೀಕರʼ.

ನಮಗೆಲ್ಲಾ ಇಷ್ಟೊಂದು ಪ್ರಿಯನಾದ ಚಂದ್ರನನ್ನೂ ಶಾಪ ಬಿಡಲಿಲ್ಲ. ಭಾದ್ರಪದ ಚೌತಿಯಂದು ಸಿಕ್ಕಾಪಟ್ಟೆ ತಿಂದು ಹೊಟ್ಟೆ ಒಡೆದುಕೊಂಡು, ಹಾವು ಸುತ್ತಿಕೊಂಡ ಗಣಪತಿಯನ್ನು ಕಂಡು ನಕ್ಕನಂತೆ ಚಂದ್ರ. ಕುಪಿತನಾದ ಗಣಪತಿ, ಚೌತಿ ಚಂದ್ರನ ಮುಖ ನೋಡಿದವರ ಮೇಲೆ ಆಪಾದನೆ ಬರಲಿ ಎಂದು ಶಪಿಸಿದ ಕಥೆ ಹೊಸದೇನಲ್ಲ. ಕೃಷ್ಣನ ಮೇಲೆ ಬಂದ ಕಳ್ಳತನದ ಆಪಾದನೆ ಹೋಗುವುದಕ್ಕೆ ಶಮಂತಕ ಮಣಿಯನ್ನು ತಂದು, ಈ ನೆವದಲ್ಲಿ ಇನ್ನೊಂದೆರಡು ಮದುವೆಯಾಗಬೇಕಾಯ್ತು. ಮೊದಲಿಗೆ ನಷ್ಟ ಎನಿಸಿದ್ದು ಮತ್ತೆ ಲಾಭವಾಗುವುದು ಹೀಗೇ ಅಲ್ಲವೇ? ಈ ಲಾಭ-ನಷ್ಟಗಳು ಏನೇ ಇರಲಿ, ಗ್ರಹಣದ ಹೆಸರಿನಲ್ಲಿ ಚಂದಿರನ ಮೇಲೆ ಒಂದಿಷ್ಟು ಹರಟೆಯಾಯಿತು. ಚಂದ್ರನ ಬಗ್ಗೆ ಎಷ್ಟೇ ಪ್ರೀತಿಯಿದ್ದರೂ ಬರಿಗಣ್ಣಿನಲ್ಲಿ ಮಾತ್ರ ಗ್ರಹಣದ ಚಂದ್ರನನ್ನು ನೋಡಬೇಡಿ. ಈಗ ಕ್ಷೇಮವಾಗಿ ಗ್ರಹಣ ನೋಡುವ ಸಾಧನಗಳು ಲಭ್ಯವಿವೆ. ಈಗಲೂ ಪ್ರಯೋಜನ ಪಡೆಯದೆ ಹೆದರಿಕೊಂಡು ಕುಳಿತರೆ ನಷ್ಟ ಯಾರಿಗೆ ಎನ್ನುವುದನ್ನು ನಾವು ಯೋಚಿಸಬೇಕು. “ಋಷಿ ವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜೀವನಕೆ ಮಂಕುತಿಮ್ಮ” ಎಂಬ ಕವಿವಾಣಿ ಸದಾ ನಮ್ಮ ಮನದಲ್ಲಿರಲಿ.

ಇದನ್ನೂ ಓದಿ | ದಶಮುಖ ಅಂಕಣ | ನೆಲದ ಮೇಲೆಯೇ ನಡೆವ ದೇವರುಗಳು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Delhi Floods: ದೆಹಲಿಯಲ್ಲಿ ಭಾರಿ ಮಳೆ; ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಇಬ್ಬರು ವಿದ್ಯಾರ್ಥಿನಿಯರ ಸಾವು!

Delhi Floods: ಮೂವರು ವಿದ್ಯಾರ್ಥಿಗಳು ಕೂಡ ಐಎಎಸ್‌ ಅಧಿಕಾರಿಯಾಗುವ ಕನಸು ಕಂಡಿದ್ದರು. ಮೃತಪಟ್ಟಿರುವ ಇಬ್ಬರು ವಿದ್ಯಾರ್ಥಿನಿಯರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಯು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

VISTARANEWS.COM


on

Delhi Floods
Koo

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಾತಾವರಣವೇ ಹಾಗೆ. ಮಳೆಗಾಲದಲ್ಲಿ ವಿಪರೀತ ಮಳೆ, ಬೇಸಿಗೆಯಲ್ಲಿ ವಿಪರೀತ ಬಿಸಿಲು ಹಾಗೂ ಚಳಿಗಾಲದಲ್ಲಿ ಮೈ ಕೊರೆಯುವ ಚಳಿ ಇರುತ್ತದೆ. ಮೂರು ಸೀಸನ್‌ಗಳು ಕೂಡ ಜನರಿಗೆ ಮಾರಣಾಂತಿಕವಾಗಿರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ದೆಹಲಿಯಲ್ಲೀಗ ಭಾರಿ ಮಳೆ (Rain In Delhi) ಸುರಿಯುತ್ತಿದೆ. ಇನ್ನು, ದೆಹಲಿಯ ಹಲವೆಡೆ ಪ್ರವಾಹದ ಸ್ಥಿತಿ (Delhi Floods) ಉಂಟಾಗಿದ್ದು, ರಾವ್‌ ಐಎಎಸ್‌ ಕೋಚಿಂಗ್‌ ಸೆಂಟರ್‌ಗೆ (Rao IAS Coaching Institute) ನೀರು ನುಗ್ಗಿವೆ. ನೆಲಮಹಡಿ ತುಂಬ ನೀರುತ್ತಿದ್ದು, ಇಬ್ಬರು ವಿದ್ಯಾರ್ಥಿನಿಯರು ಮೃತಪಟ್ಟಿದ್ದಾರೆ. ವಿದ್ಯಾರ್ಥಿಯೊಬ್ಬರು ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಶನಿವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ರಾಜೇಂದ್ರ ನಗರದಲ್ಲಿ ಭಾರಿ ಪ್ರವಾಹದ ಸ್ಥಿತಿ ಉಂಟಾಗಿದೆ. ಇದರಿಂದಾಗಿ, ರಾಜೇಂದ್ರ ನಗರದಲ್ಲಿರುವ ರಾವ್‌ ಐಎಎಸ್‌ ಸ್ಟಡಿ ಸರ್ಕಲ್‌ನ ನೆಲಮಹಡಿಗೆ ನೀರು ನುಗ್ಗಿದೆ. ಸಂಜೆ 7.19ಕ್ಕೆ ಏಕಾಏಕಿ ನೀರು ನುಗ್ಗಿದ ಕಾರಣ ಮೂವರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ಇವರಲ್ಲಿ ಇಬ್ಬರು ವಿದ್ಯಾರ್ಥಿನಿಯರು ಮೃತಪಟ್ಟಿದ್ದು, ಶವ ಪತ್ತೆಯಾಗಿವೆ. ಈಗ ಮತ್ತೊಬ್ಬ ವಿದ್ಯಾರ್ಥಿಯ ಪತ್ತೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿದುಬಂದಿದೆ.

ಮೂವರು ವಿದ್ಯಾರ್ಥಿಗಳು ಕೂಡ ಐಎಎಸ್‌ ಅಧಿಕಾರಿಯಾಗುವ ಕನಸು ಕಂಡಿದ್ದರು. ಮೃತಪಟ್ಟಿರುವ ಇಬ್ಬರು ವಿದ್ಯಾರ್ಥಿನಿಯರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಯು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ತಡರಾತ್ರಿಯಾದರೂ ಮತ್ತೊಬ್ಬ ವಿದ್ಯಾರ್ಥಿಯ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇಬ್ಬರು ವಿದ್ಯಾರ್ಥಿನಿಯರ ಶವ ಪತ್ತೆಯಾಗಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

“ಶನಿವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಕೋಚಿಂಗ್‌ ಸೆಂಟರ್‌ನ ಬೇಸ್‌ಮೆಂಟ್‌ಗೆ ನೀರು ನುಗ್ಗಿದೆ. ನೆಲಮಹಡಿಯಲ್ಲಿದ್ದ ಮೂವರು ವಿದ್ಯಾರ್ಥಿಗಳು ಹೊರಬರಲು ಆಗದೆ, ಮೇಲಿನ ಮಹಡಿಗೂ ಹೋಗಲು ಆಗದೆ ನೀರಿನಲ್ಲೇ ಸಿಲುಕಿರುವ ಸಾಧ್ಯತೆ ಇದೆ. ಇದರಿಂದಾಗಿ ಇಬ್ಬರು ವಿದ್ಯಾರ್ಥಿನಿಯರ ಸಾವುಂಟಾಗಿದೆ. ಕೂಡಲೇ ಎನ್‌ಡಿಆರ್‌ಎಫ್‌ ಸಿಬ್ಬಂದಿಯು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಈಗಲೂ ಕಾರ್ಯಾಚರಣೆ ಮುಂದುವರಿದಿದೆ” ಎಂಬುದಾಗಿ ಸೆಂಟ್ರಲ್‌ ದೆಹಲಿ ಡಿಸಿಪಿ ಎಂ. ಹರ್ಷವರ್ಧನ್‌ ತಿಳಿಸಿದ್ದಾರೆ.

ಇದನ್ನೂ ಓದಿ: Accident News : ಭಾರಿ ಮಳೆಗೆ ಉರುಳಿ ಬಿದ್ದ ಮರ; ಬೈಕ್‌ನಲ್ಲಿ ತೆರಳುತ್ತಿದ್ದ ಹೆಸ್ಕಾಂ ನೌಕರರ ದುರ್ಮರಣ

Continue Reading

ದೇಶ

Pervez Musharraf: ಭಾರತ ವಿರೋಧಿ ಪರ್ವೇಜ್‌ ಮುಷರ‍್ರಫ್‌ಗೆ ಕೇರಳ ಬ್ಯಾಂಕ್‌ ಗೌರವ; ಭುಗಿಲೆದ್ದ ವಿವಾದ

Pervez Musharraf: ಕಾರ್ಗಿಲ್‌ ಯುದ್ಧದ ವಿಜಯಕ್ಕೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಾಂಕ್‌ ಆಫ್‌ ಇಂಡಿಯಾದ ಉದ್ಯೋಗಿಗಳ ಒಕ್ಕೂಟವು ಜುಲೈ 27ರಂದು ಆಲಪ್ಪುಳದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಇದೇ ವೇಳೆ, ರಾಜ್ಯ ಸಮಾವೇಶವೂ ನಡೆದಿದೆ. ಸಮಾವೇಶದಲ್ಲಿ ಹಲವು ಮಹನೀಯರಿಗೆ ಗೌರವ ಸಲ್ಲಿಸುವ ಪಟ್ಟಿಯಲ್ಲಿ ಪರ್ವೇಜ್‌ ಮುಷರ‍್ರಫ್‌ ಹೆಸರು ಕೂಡ ಸೇರಿದೆ. ಇದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.

VISTARANEWS.COM


on

Pervez Musharraf
Koo

ತಿರುವನಂತಪುರಂ: ಭಾರತ ವಿರೋಧಿಯಾಗಿದ್ದ, 1999ರಲ್ಲಿ ಕಾರ್ಗಿಲ್‌ ಯುದ್ಧಕ್ಕೆ ಕಾರಣನಾದ, ಜಮ್ಮು-ಕಾಶ್ಮೀರಕ್ಕೆ ಉಗ್ರರನ್ನು ಛೂ ಬಿಟ್ಟು ಅಶಾಂತಿಗೆ ಕಾರಣನಾದ ಪಾಕಿಸ್ತಾನದ (Pakistan) ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರ‍್ರಫ್‌ಗೆ (Pervez Musharraf) ಕೇರಳದ ಬ್ಯಾಂಕ್‌ ಆಫ್‌ ಇಂಡಿಯಾ (BOI) ನೌಕರರ ಒಕ್ಕೂಟದಲ್ಲಿ ಗೌರವ ನಮನ ಸಲ್ಲಿಸಲು ತೀರ್ಮಾನಿಸಿದ್ದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಜುಲೈ 27ರಂದು ಕೇರಳದ ಆಲಪ್ಪಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರ್ವೇಜ್‌ ಮುಷರ‍್ರಫ್‌ಗೆ ಗೌರವ ಸಲ್ಲಿಸಲು ಕಾರ್ಯಕ್ರಮಕ್ಕೂ ಮೊದಲೇ ತೀರ್ಮಾನಿಸಿತ್ತು ಎಂದು ತಿಳಿದುಬಂದಿದೆ.

ಕಾರ್ಗಿಲ್‌ ಯುದ್ಧದ ವಿಜಯಕ್ಕೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಾಂಕ್‌ ಆಫ್‌ ಇಂಡಿಯಾದ ಉದ್ಯೋಗಿಗಳ ಒಕ್ಕೂಟವು ಜುಲೈ 27ರಂದು ಆಲಪ್ಪುಳದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಇದೇ ವೇಳೆ, ರಾಜ್ಯ ಸಮಾವೇಶವೂ ನಡೆದಿದೆ. ಸಮಾವೇಶದಲ್ಲಿ ಹಲವು ಮಹನೀಯರಿಗೆ ಗೌರವ ಸಲ್ಲಿಸುವ ಪಟ್ಟಿಯಲ್ಲಿ ಪರ್ವೇಜ್‌ ಮುಷರ‍್ರಫ್‌ ಹೆಸರು ಕೂಡ ಸೇರಿಸಿತ್ತು. ಇದರಿಂದಾಗಿ ಬ್ಯಾಂಕ್‌ ಆಫ್‌ ಇಂಡಿಯಾದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಬ್ಯಾಂಕ್‌ಗಳ ಎದುರು ಜನ ಪ್ರತಿಭಟನೆ ನಡೆಸಿದ್ದಾರೆ. ಇದಾದ ನಂತರ, ಒಕ್ಕೂಟವು ಗೌರವಕ್ಕೆ ಪಾತ್ರರಾಗುವವರ ಪಟ್ಟಿಯಿಂದ ಪರ್ವೇಜ್‌ ಮುಷರ‍್ರಫ್‌ ಹೆಸರು ತೆಗೆದಿದ್ದಾರೆ ಎಂದು ತಿಳಿದುಬಂದಿದೆ.

ಪಾಲಿ ಜಾರ್ಜ್‌ ನಗರದಲ್ಲಿ ಬ್ಯಾಂಕ್‌ ಆಫ್‌ ಇಂಡಿಯಾದ 23ನೇ ರಾಜ್ಯ ಸಮಾವೇಶ ನಡೆದಿದೆ. ಕಾಂಗ್ರೆಸ್‌ ಸಂಸದ ಕೆ.ಸಿ.ವೇಣುಗೋಪಾಲ್‌ ಅವರು ಸಮಾವೇಶವನ್ನು ಉದ್ಘಾಟಿಸಿದರು. ಇದೇ ವೇಳೆ, ಕಾರ್ಗಿಲ್‌ ಯುದ್ಧದ ವಿಜಯ, ಯೋಧರ ತ್ಯಾಗ, ಬಲಿದಾನವನ್ನು ಸ್ಮರಿಸಲಾಯಿತು. ಅಲ್ಲದೆ, ನಟರು, ಗಾಯಕರು, ನೃತ್ಯಪಟುಗಳು, ಕ್ರೀಡಾಪಟುಗಳು, ಹೋರಾಟಗಾರರು ಸೇರಿ ಹಲವು ಸಾಧಕರನ್ನು ಸನ್ಮಾನಿಸಲಾಯಿತು.

ಪರ್ವೇಜ್‌ ಮುಷರ‍್ರಫ್‌ಗೆ ಗೌರವ ಸಲ್ಲಿಸಲು ಮುಂದಾಗಿದ್ದ ಬ್ಯಾಂಕ್‌ ಆಫ್‌ ಇಂಡಿಯಾದ ವಿರುದ್ಧ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬ್ಯಾಂಕ್‌ ಎದುರು ಪ್ರತಿಭಟನೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಬ್ಯಾಂಕ್‌ ಆಫ್‌ ಇಂಡಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ದೇಶದ್ರೋಹದ ಕೃತ್ಯ ಎಂದೆಲ್ಲ ಜನ ಟೀಕಿಸಿದ್ದಾರೆ. ರಾಜ್ಯ ಬಿಜೆಪಿ ಘಟಕದ ನಾಯಕರು ಕೂಡ ಇದನ್ನು ಖಂಡಿಸಿದ್ದಾರೆ.

ಇದನ್ನೂ ಓದಿ: Narendra Modi: ಮೋದಿ ಎಚ್ಚರಿಕೆಗೆ ಪಾಕಿಸ್ತಾನ ಥಂಡಾ; ಗಡಿಯಲ್ಲಿ ಹೆಚ್ಚುವರಿ ಸೈನಿಕರ ನಿಯೋಜನೆ!

Continue Reading

ಪ್ರಮುಖ ಸುದ್ದಿ

Paris Olympics 2024 : ಷಟ್ಲರ್​ಗಳ ಪರಾಕ್ರಮ ಆರಂಭ; ಸಿಂಗಲ್ಸ್​ನಲ್ಲಿ ಲಕ್ಷ್ಯ ಸೇನ್​, ಡಬಲ್ಸ್​ನಲ್ಲಿ ಸಾತ್ವಿಕ್​- ಚಿರಾಗ್ ಜೋಡಿಗೆ ಗೆಲುವು

Paris Olympics 2024 : ಬೆಳಗ್ಗಿನ ಅವಧಿಯಲ್ಲಿ ಭಾರತದ ಶೂಟರ್​ಗಳು ನಿರಾಸೆ ಮೂಡಿಸಿದ್ದರು. ಆದರೆ, ಸಂಜೆ ವೇಳೆ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್​ನಲ್ಲಿ ಫೈನಲ್ ಹಂತಕ್ಕೆ ಪ್ರವೇಶ ಪಡೆಕೊಳ್ಳುವ ಮೂಲಕ ಶುಭ ಸುದ್ದಿ ನೀಡಿದ್ದರು. ಇದೀಗ ಷಟ್ಲರ್​ಗಳು ಖುಷಿ ಕೊಟ್ಟಿದ್ದಾರೆ. ರೋಯಿಂಗ್​ನಲ್ಲಿ ಪುರುಷರ ಸಿಂಗಲ್ ಸ್ಕಲ್ಸ್ ಸ್ಪರ್ಧೆಯಲ್ಲಿ​​ ಬಲರಾಜ್ ಪನ್ವಾರ್ 4ನೇ ಸ್ಥಾನಕ್ಕೇರಿದ್ದಾರೆ.

VISTARANEWS.COM


on

Paris Olympics 2024
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ನ (Paris Olympics 2024) ಮೊದಲ ದಿನ ಭಾರತದ ಷಟ್ಲರ್​ಗಳು ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದಾರೆ. ಸಿಂಗಲ್ಸ್​ನಲ್ಲಿ ಲಕ್ಷ್ಯ ಸೇನ್ ಹಾಗೂ ಡಬಲ್ಸ್​ ಜೋಡಿಯಾಗಿರು ಸಾತ್ವಿಕ್ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ತಮ್ಮ ಮೊಲದ ಪಂದ್ಯಗಳಲ್ಲಿ ಗೆಲುವು ಕಂಡಿದ್ದಾರೆ. ಇದೇ ವೇಳೆ ಟೇಬಲ್ ಟೆನಿಸ್​ನ ಪುರುಷರ ಸಿಂಗಲ್ಸ್​ನಲ್ಲಿ ಹರ್ಮೀತ್ ದೇಸಾಯಿ 64ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಜತೆಗೆ ಹಾಕಿ ತಂಡವೂ ಬಿ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಮಣಿಸಿದೆ.

ಬೆಳಗ್ಗಿನ ಅವಧಿಯಲ್ಲಿ ಭಾರತದ ಶೂಟರ್​ಗಳು ನಿರಾಸೆ ಮೂಡಿಸಿದ್ದರು. ಆದರೆ, ಸಂಜೆ ವೇಳೆ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್​ನಲ್ಲಿ ಫೈನಲ್ ಹಂತಕ್ಕೆ ಪ್ರವೇಶ ಪಡೆಕೊಳ್ಳುವ ಮೂಲಕ ಶುಭ ಸುದ್ದಿ ನೀಡಿದ್ದರು. ಇದೀಗ ಷಟ್ಲರ್​ಗಳು ಖುಷಿ ಕೊಟ್ಟಿದ್ದಾರೆ. ರೋಯಿಂಗ್​ನಲ್ಲಿ ಪುರುಷರ ಸಿಂಗಲ್ ಸ್ಕಲ್ಸ್ ಸ್ಪರ್ಧೆಯಲ್ಲಿ​​ ಬಲರಾಜ್ ಪನ್ವಾರ್ 4ನೇ ಸ್ಥಾನಕ್ಕೇರಿದ್ದಾರೆ.

ಬ್ಯಾಡ್ಮಿಂಟನ್​ ಸಿಂಗಲ್ಸ್ ನಲ್ಲಿ ಲಕ್ಷ್ಯ ಸೇನ್, ಗ್ವಾಟೆಮಾಲಾದ ಕೆವಿನ್ ಕಾರ್ಡನ್ ಅವರನ್ನು ನೇರ ಗೇಮ್‌ಗಳಿಂದ ಮಣಿಸಿದ್ದಾರೆ. 22ರ ಹರೆಯದ ಸೇನ್ 42 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಕಾರ್ಡನ್ ವಿರುದ್ಧ 21-8, 22-20 ಅಂತರದಲ್ಲಿ ಗೆದ್ದರು. ಅಂದ ಹಾಗೆ ಲಕ್ಷ್ಯಗೆ ಇದು ಮೊದಲ ಒಲಿಂಪಿಕ್ಸ್ ಪ್ರವೇಶ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಹಾಗೂ 2021ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದ ಸೇನ್, ಜುಲೈ 29ರಂದು ತಮ್ಮ ಎರಡನೇ ಗುಂಪು ಹಂತದ ಪಂದ್ಯದಲ್ಲಿ ಬೆಲ್ಜಿಯಂನ ಜೂಲಿಯನ್ ಕರಾಗ್ಗಿ ವಿರುದ್ಧ ಆಡಲಿದ್ದಾರೆ.

ಡಬಲ್ಸ್​ನಲ್ಲಿ ಧಮಾಕ


ಡಬಲ್ಸ್​​ನಲ್ಲಿ ತಮ್ಮ ಮೊದಲ ಗುಂಪು ಹಂತದ ಪಂದ್ಯದಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಗೆಲುವು ಕಂಡರು. ಈ ಮುಖಾಮುಖಿಯಲ್ಲಿ ಭಾರತದ ಜೋಡಿ 21-17, 21-14ರ ನೇರ ಗೇಮ್​ಗಳಿಂದ ಗೆದ್ದರು. ಅವರು ಆತಿಥೇಯ ಫ್ರಾನ್ಸ್​ ಜೋಡಿ ಲುಕಾಸ್ ಕಾರ್ವಿ ಮತ್ತು ರೊನಾನ್ ಲ್ಯಾಬರ್ ಅವರನ್ನು ಮಣಿಸಿದರು. ಸಾತ್ವಿಕ್-ಚಿರಾಗ್ ಮುಂದಿನ ಪಂದ್ಯದಲ್ಲಿ ಜರ್ಮನಿಯ ಮಾರ್ಕ್ ಲ್ಯಾಮ್ಸ್ಫಸ್ – ಮಾರ್ವಿನ್ ಸೀಡೆಲ್ ವಿರುದ್ಧ ಆಡಲಿದ್ದಾರೆ.

ಇದನ್ನೂ ಓದಿ: Paris Olympics 2024 : ಭಾರತ ಹಾಕಿ ತಂಡದ ಶುಭಾರಂಭ; ನ್ಯೂಜಿಲ್ಯಾಂಡ್ ವಿರುದ್ಧ 3-2 ಗೋಲ್​ಗಳ ಗೆಲುವು

ಹರ್ಮಿತ್​ಗೆ ಶುಭ ಸುದ್ದಿ

ಭಾರತದ ಟೆನಿಸ್ ಆಟಗಾರ ಹರ್ಮೀತ್ ದೇಸಾಯಿ ತಮ್ಮ ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಸಿಂಗಲ್ಸ್‌ನ ಪ್ರಾಥಮಿಕ ಮೊದಲ ಪಂದ್ಯದಲ್ಲಿ, ಜೋರ್ಡಾನ್‌ನ ಝೈದ್ ಅಬೋ ಯಮನ್‌ ಅವರನ್ನು 4-0 ಅಂತರದಿಂದ (11-7, 11-9, 11-5, 11-5) ಗೆದ್ದರು.

Continue Reading

ಪ್ರಮುಖ ಸುದ್ದಿ

Paris Olympics 2024 : ಭಾರತ ಹಾಕಿ ತಂಡದ ಶುಭಾರಂಭ; ನ್ಯೂಜಿಲ್ಯಾಂಡ್ ವಿರುದ್ಧ 3-2 ಗೋಲ್​ಗಳ ಗೆಲುವು

Paris Olympics 2024 : ನಾಯಕ ಹರ್ಮನ್​ ಪ್ರೀತ್ ಸಿಂಗ್ ಗಳಿಸಿದ ಪೆನಾಲ್ಟಿ ಸ್ಟ್ರೋಕ್ ಗೋಲಿನಿಂದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಅದ್ಭುತ ಪುನರಾಗಮನ ಮಾಡಿತು. ಪ್ಯಾರಿಸ್ ಕ್ರೀಡಾಕೂಟದ ನಂತರ ನಿವೃತ್ತಿ ಘೋಷಿಸುವುದಾಗಿ ಘೋಷಿಸಿದ ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ ಅವರು ನ್ಯೂಜಿಲೆಂಡ್ ಗೆ 7 ಪೆನಾಲ್ಟಿ ಕಾರ್ನರ್ ಗಳನ್ನು ನಿರಾಕರಿಸಿ ಮಿಂಚಿದರು.

VISTARANEWS.COM


on

Paris Olympics 2024
Koo

ಬೆಂಗಳೂರು: ಭಾರತದ ಪುರುಷರ ಹಾಕಿ ತಂಡ ಪ್ಯಾರಿಸ್ ಒಲಿಂಪಿಕ್ಸ್​ನ (Paris Olympics 2024) ತನ್ನ ಮೊದಲ ಪಂದ್ಯದಲ್ಲಿ ರೋಚಕ ಗೆಲುವಿನೊಂದಿಗೆ ತನ್ನ ಅಭಿಯಾನ ಪ್ರಾರಂಭಿಸಿದೆ. ಫ್ರೆಂಚ್ ರಾಜಧಾನಿಯ ಯೆವೆಸ್-ಡು-ಮನೋಯಿರ್ ಸ್ಟೇಡಿಯಂ 2 ರಲ್ಲಿ ಶನಿವಾರ (ಜುಲೈ 27) ನಡೆದ ಗುಂಪು ‘ಬಿ’ ಆರಂಭಿಕ ಪಂದ್ಯದಲ್ಲಿ ಹರ್ಮನ್​ಪ್ರೀತ್​ ಸಿಂಗ್ ಪಡೆ ಮೊದಲ ಕ್ವಾರ್ಟರ್​ನಲ್ಲಿ 0-1 ಅಂತರದ ಹಿನ್ನಡೆ ಎದುರಿಸಿದರೂ ಅಂತಿಮವಾಗಿ 3-2 ಅಂತರದಿಂದ ಗೆದ್ದುಕೊಂಡಿತು. ಮೊದಲ ಕ್ವಾರ್ಟರ್ನಲ್ಲಿ ಭಾರತ ತಂಡ ಹಿನ್ನಡೆ ಅನುಭವಿಸಿದರೂ, ಎರಡನೇ ಮತ್ತು ಮೂರನೇ ಕ್ವಾರ್ಟರ್​ನಲ್ಲಿ ಮನ್ದೀಪ್ ಸಿಂಗ್ ಮತ್ತು ವಿವೇಕ್ ಸಾಗರ್ ಪ್ರಸಾದ್ ಗಳಿಸಿದ ಗೋಲುಗಳ ನೆರವಿನಿಂದ ಭಾರತ ಮೇಲುಗೈ ಸಾಧಿಸಿತು.

ನಾಯಕ ಹರ್ಮನ್​ ಪ್ರೀತ್ ಸಿಂಗ್ ಗಳಿಸಿದ ಪೆನಾಲ್ಟಿ ಸ್ಟ್ರೋಕ್ ಗೋಲಿನಿಂದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಅದ್ಭುತ ಪುನರಾಗಮನ ಮಾಡಿತು. ಪ್ಯಾರಿಸ್ ಕ್ರೀಡಾಕೂಟದ ನಂತರ ನಿವೃತ್ತಿ ಘೋಷಿಸುವುದಾಗಿ ಘೋಷಿಸಿದ ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ ಅವರು ನ್ಯೂಜಿಲೆಂಡ್ ಗೆ 7 ಪೆನಾಲ್ಟಿ ಕಾರ್ನರ್ ಗಳನ್ನು ನಿರಾಕರಿಸಿ ಮಿಂಚಿದರು.

ಮುಂದಿನ ಪಂದ್ಯಗಳಲ್ಲಿ ಕಠಿಣ ಪರೀಕ್ಷೆಗಳನ್ನು ಎದುರಿಸಬೇಕಾಗಿರುವುದರಿಂದ ಪೂಲ್ ಬಿ ಯ ಆರಂಭಿಕ ಪಂದ್ಯದಲ್ಲಿ ಭಾರತಕ್ಕೆ ನಿರ್ಣಾಯಕ ಗೆಲುವಾಗಿದೆ. ಆಸ್ಟ್ರೇಲಿಯಾ, ಬೆಲ್ಜಿಯಂ, ಅರ್ಜೆಂಟೀನಾ ಮತ್ತು ಐರ್ಲೆಂಡ್ ತಂಡಗಳೊಂದಿಗೆ ಭಾರತ ‘ಪೂಲ್’ ನಲ್ಲಿ ಡ್ರಾ ಸಾಧಿಸಿದೆ. ಆರಂಭಿಕ ದಿನದ ಗೆಲುವಿನ ನಂತರ ಭಾರತವು ತಮ್ಮ ಪೂಲ್​ನಲ್ಲಿ ಎರಡನೇ ಸ್ಥಾನಕ್ಕೆ ಏರಿತು.

8ನೇ ನಿಮಿಷಕ್ಕೆ ಹಿನ್ನಡೆ

8ನೇ ನಿಮಿಷದ ಆರಂಭದಲ್ಲೇ ಭಾರತ 0-1ರ ಹಿನ್ನಡೆ ಅನುಭವಿಸಿತ್ತು. ಗ್ರೇಗ್ ಫುಲ್ಟನ್ ಅವರ ನೇತೃತ್ವದ ನ್ಯೂಜಿಲ್ಯಾಂಡ್​ ತಂಡ ಪಂದ್ಯದಲ್ಲಿ ಹಿಡಿತ ಸಾಧಿಸಿತ್ತು. ಆದರೆ ಅವರು ಗೋಲ್ ಪೋಸ್ಟ್​​ ಮುಂದೆ ಸ್ಥಿರತೆ ತೋರಲಿಲ್ಲ. ಅಭಿಷೇಕ್ ಭಾರತಕ್ಕೆ ಆರಂಭಿಕ ಮುನ್ನಡೆ ತರು ಭರವಸೆ ಕೊಟ್ಟರೂ ನ್ಯೂಜಿಲೆಂಡ್​ ಅನುಭವಿ ಗೋಲ್​ಕೀಪರ್​ ಡೊಮಿನಿಕ್ ಡಿಕ್ಸನ್ ತಡೆದರು. ಮೊದಲ ಕ್ವಾರ್ಟರ್​ನಲ್ಲಿ ಗುರ್ಜಂತ್ ಸಿಂಗ್​​ಗೆ ಗ್ರೀನ್ ಕಾರ್ಡ್ ಸಿಕ್ಕಿತು. ಇದು ಭಾರತದ ಸಮಬಲ ಸಾಧಿಸುವ ಅವಕಾಶಗಳಿಗೆ ಅಡ್ಡಿಯಾಯಿತು.

ಇದನ್ನೂ ಓದಿ: IND vs SL : ಶ್ರೀಲಂಕಾ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತಕ್ಕೆ 43 ರನ್​ ಭರ್ಜರಿ ಜಯ

ನಿಕ್ ವುಡ್ಸ್ ಹಳದಿ ಕಾರ್ಡ್ ನೊಂದಿಗೆ ಐದು ನಿಮಿಷಗಳ ಕಾಲ ಅಮಾನತುಗೊಂಡಿದ್ದರಿಂದ ನ್ಯೂಜಿಲೆಂಡ್ ಗೆ ಎರಡನೇ ಕ್ವಾರ್ಟರ್ ದೊಡ್ಡ ಹೊಡೆತವಾಯಿತು.

ಶೈಲಿಯಲ್ಲಿ ಪುಟಿದೇಳುವ ಭಾರತ!
ಹರ್ಮನ್ ಪ್ರೀತ್ ಸಿಂಗ್​ಗೆ ಎದುರಾಳಿ ತಂಡ ಪೆನಾಲ್ಟಿ ಕಾರ್ನರ್ ಅವಕಾಶ ನಿರಾಕರಿಸಿದ ಹೊರತಾಗಿಯೂ ನ್ಯೂಜಿಲೆಂಡ್ ನ ಬಲಿಷ್ಠ ಡಿಫೆನ್ಸ್ ವಿಭಾಗ ಕುಸಿಯಿತು. ಎರಡನೇ ಕ್ವಾರ್ಟರ್​ನಲ್ಲಿ ಭಾರತದ ನಾಯಕನಿಗೆ ಎರಡನೇ ಅವಕಾಶ ಸಿಕ್ಕಿತು. ಈ ವೇಳೆ ಗೋಲ್ ಪೋಸ್ಟ್​​ ಸಮೀಪದಲ್ಲಿದ್ದ ಮನ್ದೀಪ್ ಸಿಂಗ್ ಅವರು ಡಿಕ್ಸನ್ ಅವರನ್ನು ಹಿಂದಿಕ್ಕಿ ಭಾರತಕ್ಕೆ 1-1 ಅಂತರದ ಮುನ್ನಡೆ ತಂದುಕೊಟ್ಟರು. ಭಾರತವು ಮೂರನೇ ಕ್ವಾರ್ಟರ್ ಅನ್ನು ಹೊಸ ಆತ್ಮವಿಶ್ವಾಸದೊಂದಿಗೆ ಪ್ರಾರಂಭಿಸಿತು. ಮನ್ದೀಪ್ ಸಿಂಗ್ ಒಂದು ಗೋಲು ಬಾರಿಸಿದರು. ಆದರೆ, ಸ್ಕಾಟ್ ಬಾಯ್ಡೆ ಅವರ ಪ್ರಯತ್ನದ ಮೂಲಕ ನ್ಯೂಜಿಲೆಂಡ್ ತಿರುಗೇಟು ನೀಡಿತು. ಆದರೆ ಕೊನೆಯಲ್ಲಿ ಪೆನಾಲ್ಟಿ ಸ್ಟ್ರೋಕ್​ ಮೂಲಕ ನಾಯಕ ಹರ್ಮನ್​ ಪ್ರೀತ್ ಸಿಂಗ್ ಗೋಲ್ ಗಳಿಸಿ ಭಾರತಕ್ಕೆ ಜಯ ತಂದುಕೊಟ್ಟರು.

Continue Reading
Advertisement
Delhi Floods
ಪ್ರಮುಖ ಸುದ್ದಿ1 hour ago

Delhi Floods: ದೆಹಲಿಯಲ್ಲಿ ಭಾರಿ ಮಳೆ; ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಇಬ್ಬರು ವಿದ್ಯಾರ್ಥಿನಿಯರ ಸಾವು!

Paris Olympics 2024
ಕ್ರೀಡೆ2 hours ago

Paris Olympics 2024 : ಭಾರತಕ್ಕೆ ಒಲಿಂಪಿಕ್ ಕ್ರೀಡಾಕೂಟ ತರುವ ದಿನ ದೂರವಿಲ್ಲ; ಇಂಡಿಯಾ ಹೌಸ್ ಉದ್ಘಾಟನೆಯಲ್ಲಿ ನೀತಾ ಅಂಬಾನಿ

Pervez Musharraf
ದೇಶ2 hours ago

Pervez Musharraf: ಭಾರತ ವಿರೋಧಿ ಪರ್ವೇಜ್‌ ಮುಷರ‍್ರಫ್‌ಗೆ ಕೇರಳ ಬ್ಯಾಂಕ್‌ ಗೌರವ; ಭುಗಿಲೆದ್ದ ವಿವಾದ

Paris Olympics 2024
ಪ್ರಮುಖ ಸುದ್ದಿ2 hours ago

Paris Olympics 2024 : ಷಟ್ಲರ್​ಗಳ ಪರಾಕ್ರಮ ಆರಂಭ; ಸಿಂಗಲ್ಸ್​ನಲ್ಲಿ ಲಕ್ಷ್ಯ ಸೇನ್​, ಡಬಲ್ಸ್​ನಲ್ಲಿ ಸಾತ್ವಿಕ್​- ಚಿರಾಗ್ ಜೋಡಿಗೆ ಗೆಲುವು

Paris Olympics 2024
ಪ್ರಮುಖ ಸುದ್ದಿ2 hours ago

Paris Olympics 2024 : ಭಾರತ ಹಾಕಿ ತಂಡದ ಶುಭಾರಂಭ; ನ್ಯೂಜಿಲ್ಯಾಂಡ್ ವಿರುದ್ಧ 3-2 ಗೋಲ್​ಗಳ ಗೆಲುವು

Tihar Jail
ದೇಶ2 hours ago

Tihar Jail: ತಿಹಾರ ಜೈಲಿನ 125 ಕೈದಿಗಳಿಗೆ ಎಚ್‌ಐವಿ ಪಾಸಿಟಿವ್‌; ಇವರು ‘ಬೇಲಿ’ ಹಾರಿದ್ದು ಎಲ್ಲಿ?

IND vs SL
ಪ್ರಮುಖ ಸುದ್ದಿ3 hours ago

IND vs SL : ಶ್ರೀಲಂಕಾ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತಕ್ಕೆ 43 ರನ್​ ಭರ್ಜರಿ ಜಯ

Rishabh Pant
ಪ್ರಮುಖ ಸುದ್ದಿ3 hours ago

Rishabh Pant : ಧೋನಿಯಂತೆ ಭರ್ಜರಿ ಹೆಲಿಕಾಪ್ಟರ್​ ಶಾಟ್​​ ಮೂಲಕ ಸಿಕ್ಸರ್ ಬಾರಿಸಿದ ರಿಷಭ್ ಪಂತ್​

Puneeth Kerehalli
ಕರ್ನಾಟಕ3 hours ago

Puneeth Kerehalli: ಪುನೀತ್‌ ಕೆರೆಹಳ್ಳಿಗೆ ನ್ಯಾಯಾಂಗ ಬಂಧನ; 14 ದಿನ ಪರಪ್ಪನ ಅಗ್ರಹಾರವೇ ಗತಿ!

Mumbai Girl
ದೇಶ4 hours ago

ಬಾರೆ ಸಖಿ ಎಂದು 20 ವರ್ಷದ ಯುವತಿಯನ್ನು ಕರೆದುಕೊಂಡು ಹೋದ, ಕೊಂದು ಪೊದೆಯಲ್ಲಿ ಬಿಸಾಡಿದ; ಕೃತ್ಯಕ್ಕೆ ಕಾರಣವೇನು?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ7 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ12 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ13 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ1 day ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ1 day ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ1 day ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ1 day ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್3 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ3 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

ಟ್ರೆಂಡಿಂಗ್‌