Hathras Stampede: ಹತ್ರಾಸ್‌ ಕಾಲ್ತುಳಿತದಲ್ಲಿ ಮೃತರ ಸಂಖ್ಯೆ 116ಕ್ಕೆ ಏರಿಕೆ; ಸತ್ಸಂಗ ನಡೆಸಿದ ಭೋಲೆ ಬಾಬಾ ನಾಪತ್ತೆ - Vistara News

ಪ್ರಮುಖ ಸುದ್ದಿ

Hathras Stampede: ಹತ್ರಾಸ್‌ ಕಾಲ್ತುಳಿತದಲ್ಲಿ ಮೃತರ ಸಂಖ್ಯೆ 116ಕ್ಕೆ ಏರಿಕೆ; ಸತ್ಸಂಗ ನಡೆಸಿದ ಭೋಲೆ ಬಾಬಾ ನಾಪತ್ತೆ

Hathras Stampede: ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಗ್ರಾಮದಲ್ಲಿ ಮಂಗಳವಾರ ನಡೆದ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಸಂಭವಿಸಿದ್ದು, ಮೃತರ ಸಂಖ್ಯೆ 116ಕ್ಕೆ ತಲುಪಿದೆ. ಈ ಮಧ್ಯೆ ಸತ್ಸಂಗ ಕಾರ್ಯಕ್ರಮ ಆಯೋಜಿಸಿದ್ದ ನಾರಾಯಣ ಸಕಾರ್‌ ಹರಿ ಅಥವಾ ಸಕಾರ್‌ ವಿಶ್ವ ಹರಿ ಅಥವಾ ಭೋಲೆ ಬಾಬಾ ನಾಪತ್ತೆಯಾಗಿದ್ದಾರೆ.

VISTARANEWS.COM


on

Hathras Stampede
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಖನೌ: ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಗ್ರಾಮದಲ್ಲಿ ಮಂಗಳವಾರ ನಡೆದ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ (Hathras Stampede) ಸಂಭವಿಸಿದ್ದು, ಮೃತರ ಸಂಖ್ಯೆ 116ಕ್ಕೆ ತಲುಪಿದೆ. ಈ ಮಧ್ಯೆ ಸತ್ಸಂಗ ಕಾರ್ಯಕ್ರಮ ಆಯೋಜಿಸಿದ್ದ ನಾರಾಯಣ ಸಕಾರ್‌ ಹರಿ (Narayan Sakaar Hari) ಅಥವಾ ಸಕಾರ್‌ ವಿಶ್ವ ಹರಿ ಅಥವಾ ಭೋಲೆ ಬಾಬಾ (Bhole Baba) ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಉತ್ತರ ಪ್ರದೇಶ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ʼʼಭೋಲೆ ಬಾಬಾ ಅವರಿಗಾಗಿ ಮೈನ್ಪುರಿ ಜಿಲ್ಲೆಯ ರಾಮ್ ಕುಟೀರ್ ಚಾರಿಟಬಲ್ ಟ್ರಸ್ಟ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತಾದರೂ ಅವರು ಕ್ಯಾಂಪಸ್ ಒಳಗೆ ಕಂಡುಬಂದಿಲ್ಲʼʼ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಕುಮಾರ್ ತಿಳಿಸಿದರು.

ಸತ್ಸಂಗ ಮುಗಿಸಿ ಭೋಲೆ ಬಾಬಾ ಅವರು ಅಪರಾಹ್ನ 3.30ರ ಸುಮಾರಿಗೆ ಸ್ಥಳದಿಂದ ಹೊರಡುವಾಗ ಕಾಲ್ತುಳಿತ ಸಂಭವಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ಈಗಾಗಲೇ ಆದೇಶಿಸಿದ್ದಾರೆ. ಹತ್ರಾಸ್ ಘಟನೆಯ ಹಿಂದಿನ ಸತ್ಯವನ್ನು ಬಹಿರಂಗಪಡಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

“ಒಟ್ಟು 23 ಶವಗಳನ್ನು ಅಲಿಗಢಕ್ಕೆ ತರಲಾಗಿದೆ. ಹತ್ರಾಸ್ ಘಟನೆಯಲ್ಲಿ ಗಾಯಗೊಂಡ ಮೂವರು ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಸ್ಥಿರವಾಗಿದ್ದರೆ, ಒಬ್ಬರ ಸ್ಥಿತಿ ಗಂಭೀರವಾಗಿದೆ. ನಾವು ಆಸ್ಪತ್ರೆಯ ಆಡಳಿತದೊಂದಿಗೆ ಮಾತನಾಡಿದ್ದೇವೆʼʼ ಎಂದು ಅಲಿಗಢ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ ವಿಶಾಕ್ ಜಿ. ಅಯ್ಯರ್ ಮಾಹಿತಿ ನೀಡಿದರು.

ಈವರೆಗೆ ಒಟ್ಟು 116 ಮಂದಿ ಮೃತಪಟ್ಟಿದ್ದಾರೆ. 19 ಶವಗಳನ್ನು ಗುರುತಿಸಲಾಗಿದೆ. ಉಳಿದವರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆʼʼ ಎಂದು ಹತ್ರಾಸ್ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಮಂಜೀತ್ ಸಿಂಗ್ ಹೇಳಿದರು.

ಹೆಣಗಳ ರಾಶಿ ನೋಡಿ ಪೊಲೀಸ್‌ಗೆ ಹೃದಯಾಘಾತ; ಸಾವು

ಆಸ್ಪತ್ರೆಯಲ್ಲಿ ಭದ್ರತಾ ಡ್ಯೂಟಿಗೆ ನಿಯೋಜನೆಯಾಗಿದ್ದ ರಜನೀಶ್ ಎಂಬ ಪೊಲೀಸ್‌ ಕಾನ್ಸ್‌ಟೇಬಲ್‌ ಇಟಾಹ್ ಜಿಲ್ಲಾ ಆಸ್ಪತ್ರೆಯಲ್ಲಿ ಬಿದ್ದಿದ್ದ ಹೆಣಗಳ ರಾಶಿಯನ್ನು ನೋಡಿದ ನಂತರ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಟಾಹ್ ಮೆಡಿಕಲ್ ಕಾಲೇಜಿನಲ್ಲಿ ತುರ್ತು ಕರ್ತವ್ಯದಲ್ಲಿದ್ದ ರಜನೀಶ್ ಮೃತದೇಹಗಳ ರಾಶಿಯನ್ನು ನೋಡಿ ಆಘಾತಗೊಂಡು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏನಿದು ಘಟನೆ?

ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಮಂಗಳವಾರ ಭೋಲೆ ಬಾಬಾ ನೇತೃತ್ವದಲ್ಲಿ ಸತ್ಸಂಗ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿದೆ. ವಿಶೇಷವಾಗಿ ಹಾಕಲಾಗಿದ್ದ ಪೆಂಡಾಲ್​ನಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಆಯೋಜನೆಗೆ ಮುನ್ನ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ಅಲ್ಲದೆ ಕಾರ್ಯಕ್ರಮ ನಡೆದ ಜಾಗ ಇಕ್ಕಟ್ಟಿನಿಂದ ಕೂಡಿತ್ತು ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Hathras Stampede: ಹತ್ರಾಸ್‌ನಲ್ಲಿ ಕಾಲ್ತುಳಿತ ಹೇಗಾಯ್ತು? ಸತ್ಸಂಗ ನಡೆಸಿದ ಭೋಲೆ ಬಾಬಾ ಯಾರು? ಇಲ್ಲಿದೆ ಮಾಹಿತಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Self Harming: ಮೊದಲ ರಾತ್ರಿಯ ಟೆನ್ಶನ್‌ಗೆ ವರ ಆತ್ಮಹತ್ಯೆ? ಉತ್ತರ ಪ್ರದೇಶದಲ್ಲೊಂದು ವಿಲಕ್ಷಣ ಘಟನೆ

Self Harming: ಮದುವೆ ಬಗ್ಗೆ ಸಾವಿರಾರು ಕನಸುಗಳಿರುತ್ತದೆ. ತನ್ನ ಕೈ ಹಿಡಿದ ವರನು ಬದುಕಿಡಿ ಜೊತೆಯಾಗಿ ಇರುತ್ತಾನೆ ಎಂಬ ನಂಬಿಕೆ ಇರುತ್ತದೆ. ಇಂತಹದ್ದೇ ಕನಸು ಕಟ್ಟಿಕೊಂಡ ವಧುವೊಬ್ಬಳು ಮೊದಲ ರಾತ್ರಿಯ ಕೋಣೆಯೊಳಗೆ ಪ್ರವೇಶಿಸಿದಾಗ ಅಘಾತವೊಂದು ಎದುರಾಗಿದೆ. ಅವಳ ಹೊಸ ಬದುಕು ಚಿಗುರುವ ಮೊದಲೇ ಕಮರಿ ಹೋಗಿದೆ. ಸಂಭ್ರಮದ ಮದುವೆ ಆಚರಣೆಗಳು ಮುಗಿದು ವಧು ಮೊದಲ ರಾತ್ರಿಗೆಂದು ವರನಿಗೆ ಹಾಲು ತೆಗೆದುಕೊಂಡು ಕೋಣೆಗೆ ಹೋದಾಗ ವರನು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡು ಬಂದಿದೆ.

VISTARANEWS.COM


on

Koo

ಮದುವೆಯಾದ ಮೇಲೆ ಗಂಡನ ಮನೆಗೆ ಬರುವ ವಧು ತನ್ನ ಪತಿಯ ಜೊತೆ ಸುಖವಾಗಿ ಸಂಸಾರ ನಡೆಸುವಂತಹ ಹಲವಾರು ಕನಸುಗಳನ್ನು ಹೊತ್ತು ಬರುತ್ತಾಳೆ. ಆದರೆ ಅಂತಹ ವಧುವಿನ ಕನಸು ಕ್ಷಣಮಾತ್ರದಲ್ಲಿ ನುಚ್ಚು ನೂರಾದರೆ ಅವಳಿಗೆ ಆಘಾತವಾಗುವುದು ಖಂಡಿತ. ಅಂತಹದೊಂದು ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ನಡೆದಿದೆ. ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು ಮೊದಲ ರಾತ್ರಿಗಾಗಿ ಕೋಣೆಗೆ ಹಾಲು ತೆಗೆದುಕೊಂಡು ಹೋದಾಗ ಅಲ್ಲಿ ವರನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Self Harming) ಶರಣಾಗಿದ್ದ.

ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ರತನ್ಪುರ ಗ್ರಾಮದಲ್ಲಿ ಸಂಭ್ರಮದ ಮದುವೆ ಆಚರಣೆಗಳು ಮುಗಿದು ವಧು ಮೊದಲ ರಾತ್ರಿಗೆಂದು ವರನಿಗೆ ಹಾಲು ತೆಗೆದುಕೊಂಡು ಕೋಣೆಗೆ ಹೋದಾಗ ವರನು ಆತ್ಮಹತ್ಯೆ ಮಾಡಿಕೊಂಡಿದ್ದನು. ಇದರಿಂದ ಆ ಕುಟುಂಬದಲ್ಲಿ ಗೋಳಾಟ ಮುಗಿಲುಮುಟ್ಟಿದೆ.

Self Harming

24 ವರ್ಷದ ಸತ್ಯೇಂದ್ರ ಆತ್ಮಹತ್ಯೆ ಮಾಡಿಕೊಂಡ ವರ. ಈತ ಆತನ ವಧು ವಿನಿತಾ ಕುಮಾರಿ ಅವರೊಂದಿಗೆ ಅದ್ಧೂರಿಯಾಗಿ ಮದುವೆಯಾಗಿದ್ದು, ನಂತರ ದಿಬ್ಬಣ ಭರ್ಜರಿ ಮೆರವಣಿಗೆಯೊಂದಿಗೆ ಆತನ ಗ್ರಾಮಕ್ಕೆ ಮರಳಿದೆ. ನವವಿವಾಹಿತ ವಧುವನ್ನು ಮನೆಗೆ ಸಂಭ್ರಮದಿಂದ ಸ್ವಾಗತಿಸಲಾಗಿತ್ತು. ಹಾಗೇ ವಧುವರರ ಮೊದಲ ರಾತ್ರಿಗೆಂದು ಸಿದ್ಧತೆ ನಡೆಯುತ್ತಿದ್ದು, ವಧು ಹಾಲು ಹಿಡಿದುಕೊಂಡು ಪತಿಯ ಕೋಣೆಗೆ ಹೋದಾಗ ಆತ ಮದುವೆಯ ಉಡುಗೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಇದನ್ನು ಕಂಡು ವಧು ಆಘಾತಕ್ಕೊಳಗಾಗಿದ್ದಾಳೆ. ಈ ಸುದ್ದಿ ಕುಟುಂಬಸ್ಥರು ಮತ್ತು ಅತಿಥಿಗಳಿಗೆ ನಂಬಲು ಅಸಾಧ್ಯವಾಗಿದೆ.

ಈ ಬಗ್ಗೆ ಉಸ್ರಾಹರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಸತೇಂದ್ರ ಅವರ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆದರೆ ಸತ್ಯೇಂದ್ರ ಅವರ ಆತ್ಮಹತ್ಯೆಯ ಹಿಂದಿನ ಉದ್ದೇಶ ತಿಳಿದುಬಂದಿಲ್ಲ. ಮೊದಲ ರಾತ್ರಿಯ ಟೆನ್ಶನ್‌ಗೆ ಆತ್ಮಹತ್ಯೆ ಮಾಡಿಕೊಂಡಿರಬಹುದಾ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸತ್ಯೇಂದ್ರ ಅವರ ಅಕಾಲಿಕ ಸಾವಿನ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಬುಲೆಟ್‌ ಮೇಲೆ ಬಂದ ಹುಡುಗಿ ಆಟೊ ಚಾಲಕನ ಬುರುಡೆ ಒಡೆದಳು!

ಸಂಭ್ರಮಾಚರಣೆಯಲ್ಲಿ ತೇಲಾಡುತ್ತಿದ್ದ ಕುಟುಂಬವನ್ನು ಈ ಘಟನೆ ಶೋಕಾಚರಣೆಯಲ್ಲಿ ಮುಳುಗುವಂತೆ ಮಾಡಿದೆ. ಇನ್ನೂ ಮದುವೆಯಾಗಿ ಕ್ಷಣಗಳೇ ಕಳೆದಿದ್ದು, ಜೀವನಪರ್ಯಂತ ಒಟ್ಟಿಗೆ ಇರುತ್ತಾನೆ ಎಂದು ಭಾವಿಸಿದ ಪತಿ ಸಾವಿಗೆ ಶರಣಾಗಿದ್ದನ್ನು ಕಂಡು ವಧು ಆಘಾತಕ್ಕೊಳಗಾಗಿದ್ದಾಳೆ. ಅಲ್ಲದೇ ಸಾಲಸೂಲ ಮಾಡಿ ಮಗಳು ಗಂಡನ ಮನೆಯಲ್ಲಿ ಸುಖವಾಗಿರಲಿ ಎಂದು ಬಯಸಿದ ಆಕೆಯ ಪೋಷಕರಿಗೆ ಈ ಘಟನೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತೆ ಭಾಸವಾಗಿದೆ. ಒಟ್ಟಾರೆ ಈ ಮದುವೆ ಸಂಭ್ರಮ ದುರಂತದ ತಿರುವು ತೆಗೆದುಕೊಂಡಿದೆ.

Continue Reading

ಪ್ರಮುಖ ಸುದ್ದಿ

Valmiki Corporation Scam: ವಾಲ್ಮೀಕಿ ನಿಗಮ ಹಗರಣದಲ್ಲಿ ಮುಂದುವರಿದ ಮಾಜಿ ಸಚಿವರ ಪಿಎಸ್‌ ವಿಚಾರಣೆ; ನಾಗೇಂದ್ರಗೆ ಢವಢವ!

Valmiki Corporation Scam: ಈಗಾಗಲೇ ವಾಲ್ಮೀಕಿ ನಿಗಮದ (Valmiki Development Corporation) ಎಂಡಿ ಪದ್ಮನಾಭ ಮತ್ತು ಅಕೌಟೆಂಟ್ ಪರಶುರಾಮ್ ಬಂಧನವಾಗಿದ್ದಾರೆ.‌ ಜೊತೆಗೆ ಪ್ರಕರಣದ ಕಿಂಗ್ ಪಿನ್ ಸತ್ಯನಾರಾಯಣ ವರ್ಮ, ಸಾಯಿ ತೇಜ ಕೂಡ ಆರೆಸ್ಟ್ ಆಗಿದ್ದಾರೆ. ಅಕ್ರಮವಾಗಿ ಆಂಧ್ರದ ಫಸ್ಟ್ ಬ್ಯಾಂಕ್‌ಗೆ ಹಣ ರವಾನಿಸಿದ ಎಂಡಿ ಹಾಗೂ ಸಚಿವ ನಾಗೇಂದ್ರರ ಪಿಎಸ್ ಆಗಿದ್ದ ದೇವಂದ್ರರನ್ನು ಎಸ್ಐಟಿ ವಿಚಾರಣೆ ನಡೆಸಿದೆ.

VISTARANEWS.COM


on

Valmiki Corporation Scam
Koo

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ (Valmiki Corporation Scam) ವಿಚಾರಣೆಗೆ ಸಂಬಂಧಿಸಿ ಮಾಜಿ ಸಚಿವ ನಾಗೇಂದ್ರಗೆ (Ex minister Nagendra) ಢವಢವ ಶುರುವಾಗಿದೆ. ನಾಗೇಂದ್ರ ಆಪ್ತ ಕಾರ್ಯದರ್ಶಿಯನ್ನು ಎಸ್ಐಟಿ ತನಿಖೆ (SIT Enquiry) ನಡೆಸುತ್ತಿದ್ದು, ಮುಂದಿನ ಹಂತದಲ್ಲಿ ನಾಗೇಂದ್ರ ಕೂಡ ತನಿಖೆಗೆ ಹಾಜರಾಗಬೇಕಿದೆ.

ಈಗಾಗಲೇ ವಾಲ್ಮೀಕಿ ನಿಗಮದ (Valmiki Development Corporation) ಎಂಡಿ ಪದ್ಮನಾಭ ಮತ್ತು ಅಕೌಟೆಂಟ್ ಪರಶುರಾಮ್ ಬಂಧನವಾಗಿದ್ದಾರೆ.‌ ಜೊತೆಗೆ ಪ್ರಕರಣದ ಕಿಂಗ್ ಪಿನ್ ಸತ್ಯನಾರಾಯಣ ವರ್ಮ, ಸಾಯಿ ತೇಜ ಕೂಡ ಆರೆಸ್ಟ್ ಆಗಿದ್ದಾರೆ. ಅಕ್ರಮವಾಗಿ ಆಂಧ್ರದ ಫಸ್ಟ್ ಬ್ಯಾಂಕ್‌ಗೆ ಹಣ ರವಾನಿಸಿದ ಎಂಡಿ ಹಾಗೂ ಸಚಿವ ನಾಗೇಂದ್ರರ ಪಿಎಸ್ ಆಗಿದ್ದ ದೇವಂದ್ರರನ್ನು ಎಸ್ಐಟಿ ವಿಚಾರಣೆ ನಡೆಸಿದೆ.

ಅಕ್ರಮವಾಗಿ ಕೋಟಿ ಕೋಟಿ ಹಣ ಪಡೆದಿರುವುದಾಗಿ ಸತ್ಯನಾರಾಯಣ ವರ್ಮ ಹೇಳಿದ್ದ. ಹೀಗಾಗಿ ಪಿಎಸ್ ದೇವೇಂದ್ರಪ್ಪಗೆ ಎಸ್ಐಟಿ ನೋಟೀಸ್ ನೀಡಿ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ, ದೇವೇಂದ್ರಪ್ಪಗೆ 4.4 ಕೋಟಿ ಹಣ ನೀಡಿರುವುದು ಬೆಳಕಿಗೆ ಬಂದಿದೆ. ಈ ಹಣದಲ್ಲಿ 4 ಕೋಟಿ ರಿಕವರಿಯಾಗಿದ್ದು, ಇನ್ನೂ ಸುಮಾರು 40 ಲಕ್ಷ ಹಣ ಮರಳಿ ಸಿಗಬೇಕಿದೆ.

ಆದರೆ ಪಿಎಸ್ ದೇವೇಂದ್ರಪ್ಪ ಸೇರಿದಂತೆ ಬಂಧಿತ ಆರೋಪಿಗಳು ಮಾಜಿ ಸಚಿವ ನಾಗೇಂದ್ರ ಹೆಸರನ್ನು ಎಲ್ಲೂ ಬಾಯಿ ಬಿಟ್ಟಿಲ್ಲ. ನಿನ್ನೆ ಸಿಐಡಿ ದೇವೇಂದ್ರಪ್ಪ ವಿಚಾರಣೆ ನಡೆಸಿದೆ. ಮತ್ತೆ ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ. ಇಂದು ನಿಗಮದ ಅಧ್ಯಕ್ಷ ಗದ್ದಲ್ ಪಿಎಸ್ ಹಂಪಣ್ಣಗೂ‌‌‌ ಎಸ್ಐಟಿ ಬುಲಾವ್‌ ಮಾಡಿದೆ. ನೋಟೀಸ್ ಹಿನ್ನಲೆ ಇಂದು ಹಂಪಣ್ಣ ವಿಚಾರಣೆಗೆ ಹಾಜರಾಗಬೇಕಿದೆ.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಳಿಕ ನಾಗೇಂದ್ರ ಎಲ್ಲೂ ಕಾಣಿಸಿಕೊಂಡಿಲ್ಲ. ಶಾಸಕರ ಸಭೆಯಲ್ಲಾಗಲೀ, ಕ್ಷೇತ್ರದ ಕಾರ್ಯಕ್ರಮಗಳಲ್ಲಾಗಲೀ ಭಾಗವಹಿಸಿಲ್ಲ. ನಾಗೇಂದ್ರ ನಡೆ ನಿಗೂಢವಾಗಿದ್ದು, ಈ ಪ್ರಕರಣದಿಂದ ಪಾರಾಗುವ ಕಾನೂನು ಸಾಧ್ಯತೆಗಳನ್ನು ವಕೀಲರ ಜತೆ ಸಮಾಲೋಚಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

28 ಕೋಟಿ ಹಣ ರಿಕವರಿ

ವಾಲ್ಮೀಕಿ ನಿಗಮ ಹಗರಣದಲ್ಲಿ ಎಸ್‌ಐಟಿ ಅಧಿಕಾರಿಗಳು ರಿಕವರಿ ಮಾಡಿರುವ ಹಣ ಕೋರ್ಟ್ ಅಕೌಂಟ್‌ಗೆ ಜಮೆ ಮಾಡಲಾಗುತ್ತಿದೆ. ದೊಡ್ಡ ಮೊತ್ತದ ಹಣವನ್ನು ಸಿಐಡಿ ಕಚೇರಿಯಲ್ಲಿಡುವುದು ಕಷ್ಟ. ಭದ್ರತಾ ದೃಷ್ಟಿಯಿಂದ ಅಧಿಕಾರಿಗಳು ಕೋರ್ಟ್ ಅನುಮತಿ ಪಡೆದು ಕೋರ್ಟ್ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು ಹಣ ಜಮಾ ಮಾಡಿದ್ದಾರೆ. ನೆನ್ನೆಯಿಂದ ದಿನಕ್ಕೆ ನಾಲ್ಕು ಕೋಟಿಯಂತೆ ಹಣ ಜಮೆ ಮಾಡಲಾಗುತ್ತಿದೆ. ಇದುವರೆಗೂ ಸುಮಾರು 28 ಕೋಟಿ ಹಣ ರಿಕವರಿ ಆಗಿದೆ.

28 ಕೋಟಿ ಹಣವಮ್ನ ಒಟ್ಟಿಗೆ ಜಮೆ ಮಾಡೋದು ಕಷ್ಟ. ಹೀಗಾಗಿ ಅಷ್ಟು ಹಣ ಎಣಿಕೆ ಮಾಡಲು ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ದಿನಕ್ಕೆ ನಾಲ್ಕು ಕೋಟಿ ಹಣವನ್ನು ಮಾತ್ರ ಬ್ಯಾಂಕ್‌ಗೆ ಜಮೆ ಮಾಡಲಾಗುತ್ತಿದೆ.

ಮಾರ್ಚ್ 30ರಂದು ನವೀನ್ ಜಿ ಮಾಲೀಕತ್ವದ ಜಿ.ಎನ್ ಇಂಡಸ್ಟ್ರೀಸ್ ಕಂಪನಿ ಹೆಸರಲ್ಲಿ 4.42 ಕೋಟಿ ವರ್ಗಾವಣೆ ಆಗಿತ್ತು. ವಿಜಯ್ ಕೃಷ್ಣ ಆರ್ ಮಾಲೀಕತ್ವದ ರಾಮ್ ಎಂಟರ್ ಪ್ರೈಸಸ್ ಖಾತೆಗೆ 5.7 ಕೋಟಿ ಹಣ ವರ್ಗಾವಣೆ. ರಾಘವೇಂದ್ರ ಅವರ ನೋವೆಲ್ ಸೆಕ್ಯೂರಿಟಿ ಸರ್ವಿಸಸ್ ಪ್ರೈ.ಲಿ.ಕಂಪನಿ ಹೆಸರಿನ ಖಾತೆಗೆ 4 ಕೋಟಿ ಹಣ ವರ್ಗಾವಣೆ.
ರೇಖಾ ಎಂಬುವವರ ಮಾಲೀಕತ್ವದ ಸುಜಲ್ ಎಂಟರ್ ಪ್ರೈಸಸ್ ಹೆಸರಿನ ಖಾತೆಗೆ 5.63 ಕೋಟಿ ಹಣ ವರ್ಗಾವಣೆ.

ಎಲ್ಲಾ ಕಂಪನಿ ಹೆಸರಲ್ಲಿ ನಕಲಿ ಖಾತೆ ತೆಗೆದು ಹಣ ವರ್ಗಾವಣೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಖಾತೆ ಓಪನ್ ಮಾಡಿದ್ದ ಆಸಾಮಿಗಳು, ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಖಾತೆಗಳಿಗೆ ಹಣ ಜಮೆ ಮಾಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Valmiki Corporation Scam: ಬಿ ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಮೀರ್‌ ಅಹ್ಮದ್ ನೇಮಕ

Continue Reading

Latest

Viral News: ಕಾಮ ದಾಹ ತಣಿಸಿಕೊಳ್ಳಲು ವಿದ್ಯಾರ್ಥಿಗಳನ್ನೇ ಬಳಸಿಕೊಂಡ ಶಿಕ್ಷಕಿಗೆ ಶಿಕ್ಷೆ

Viral News: ಗುರುವೆಂದರೆ ಗುರಿ ತೋರಿಸುವವರು ಎಂಬ ನಂಬಿಕೆ. ಆದರೆ ಇಲ್ಲೊಬ್ಬಳು ಶಿಕ್ಷಕಿ ಪಾಠ ಮಾಡುವ ಬದಲು ವಿದ್ಯಾರ್ಥಿಗಳೊಂದಿಗೆ ಕಾಮದಾಟವಾಡಿ ಈಗ ಗರ್ಭಿಣಿಯಾಗಿದ್ದಾಳೆ. ಯುನೈಟೆಡ್ ಕಿಂಗ್ ಡಮ್‌ನಲ್ಲಿ ಇಬ್ಬರು ಹದಿಹರೆಯದ ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಅವರಲ್ಲಿ ಒಬ್ಬರಿಂದ ಗರ್ಭಿಣಿಯಾದ ಆರೋಪದ ಮೇಲೆ ಬ್ರಿಟಿಷ್ ಮಹಿಳಾ ಶಿಕ್ಷಕಿಗೆ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್ ಆರೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

VISTARANEWS.COM


on

Viral News
Koo

ಶಿಕ್ಷಕರು ವಿದ್ಯಾರ್ಥಿಗಳನ್ನು ಸರಿಯಾದ ಮಾರ್ಗದಲ್ಲಿ ನಡೆಸುವವರು ಎಂದು ಹೇಳುತ್ತಾರೆ. ಆದರೆ ಇಲ್ಲೊಬ್ಬ ಶಿಕ್ಷಕಿ ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳಲು ವಿದ್ಯಾರ್ಥಿಗಳನ್ನೇ ಬಳಸಿಕೊಂಡು ಜೈಲು ಪಾಲಾಗಿದ್ದಳು. ಯುನೈಟೆಡ್ ಕಿಂಗ್ ಡಮ್‌ನಲ್ಲಿ ಇಬ್ಬರು ಹದಿಹರೆಯದ ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಅವರಲ್ಲಿ ಒಬ್ಬರಿಂದ ಗರ್ಭಿಣಿಯಾದ ಆರೋಪದ ಮೇಲೆ ಬ್ರಿಟಿಷ್ ಮಹಿಳಾ ಶಿಕ್ಷಕಿಗೆ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್ ಈಗ ಆರೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್‌ (Viral News) ಆಗಿದೆ.

ರೆಬೆಕಾ ಜಾಯ್ನೆಸ್ (30) ಜೈಲು ಶಿಕ್ಷೆಗೆ ಒಳಗಾದ ಶಿಕ್ಷಕಿ. ಈಕೆ ಇಬ್ಬರು ಹುಡುಗರಿಗೆ ಸೋಶಿಯಲ್ ಮೀಡಿಯಾದಲ್ಲಿ ಮೆಸೇಜ್ ಮಾಡುವ ಮೂಲಕ ಅವರ ಪರಿಚಯ ಮಾಡಿಕೊಂಡು ಈ ಕೃತ್ಯ ನಡೆಸಿದ್ದಾಳೆ. ಈ ಹಿಂದೆ ಈ ಶಿಕ್ಷಕಿಗೆ ಒಬ್ಬ ಬಾಲಕನ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಕ್ಕಾಗಿ ಕೋರ್ಟ್ ಶಿಕ್ಷೆ ವಿಧಿಸಿತ್ತು. ಆದರೆ ಜಾಮೀನಿನ ಮೇಲೆ ಹೊರಬಂದ ಶಿಕ್ಷಕಿ ಮತ್ತೆ ಇನ್ನೊಬ್ಬ ಬಾಲಕನೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದು, ಇದರಿಂದ ಗರ್ಭಿಣಿಯಾಗಿದ್ದಾಳೆ.

ಅಲ್ಲದೇ ಶಿಕ್ಷಕಿಯ ಜೊತೆಗಿನ ಲೈಂಗಿಕ ಸಂಬಂಧವನ್ನು ನಿರಾಕರಿಸಿದರೂ ಆಕೆ ತಮ್ಮನ್ನು ಬಲವಂತವಾಗಿ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾಳೆ. ತಮ್ಮನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡಿದ್ದಾಳೆ. ಹಾಗೇ ತಮ್ಮನ್ನು ಮಾನಸಿಕವಾಗಿ ನಿಂದಿಸಿದ್ದಾಳೆ. ಈ ಘಟನೆಯಿಂದ ಹೊರಬರಲು ತಾವು ಹೆಣಗಾಡುತ್ತಿರುವುದಾಗಿ ಬಾಲಕರು ಶಿಕ್ಷಕಿಯ ಮೇಲೆ ಆರೋಪ ಮಾಡಿದ್ದರು.

ಹಾಗಾಗಿ ವಾಯವ್ಯ ಇಂಗ್ಲೆಂಡ್‍ನ ಮ್ಯಾಂಚೆಸ್ಟರ್ ಕ್ರೌನ್ ನ್ಯಾಯಾಲಯದ ನ್ಯಾಯಾಧೀಶರು ಆಕೆಯ ನಡವಳಿಕೆ ಆಕ್ಷೇಪಕಾರಿ ಆಗಿದೆ. ವಯಸ್ಕಳಾಗಿದ್ದೂ ಎಲ್ಲಾ ತಿಳಿವಳಿಕೆ ಹೊಂದಿದ್ದೂ ತನ್ನನ್ನು ತಾನು ನಿಯಂತ್ರಿಸಿಕೊಳ್ಳಬೇಕಿತ್ತು. ಆದರೆ ಅದರ ಬದಲಾಗಿ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ತನ್ನ ಲೈಂಗಿಕ ದಾಹವನ್ನು ತೀರಿಸಿಕೊಳ್ಳಲು ಇಂತಹ ಘೋರ ತಪ್ಪು ಮಾಡಿರುವುದಾಗಿ ತಿಳಿಸಿದ್ದಾರೆ. ಹಾಗಾಗಿ ಆಕೆಗೆ ಆರೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.

ಇದನ್ನೂ ಓದಿ: ನೀರು ತುಂಬಿದ್ದ ರಸ್ತೆ ಗುಂಡಿಗೆ ಬಿದ್ದ ಬಾಲಕಿ; ಜೀವ ಉಳಿಸಿದ ಹುಡುಗ

ಶಿಕ್ಷಕಿಗೆ ನ್ಯಾಯಾಲಯ ಈ ಹಿಂದೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾರೊಂದಿಗೂ ಲೈಂಗಿಕ ಸಂಬಂಧ ಹೊಂದದಂತೆ ಎಚ್ಚರಿಕೆ ನೀಡಿದರೂ ಅದನ್ನು ನಿರ್ಲಕ್ಷ್ಯ ಮಾಡಿ ಮತ್ತೊಂದು ಬಾಲಕನೊಂದಿಗೆ ಸಂಬಂಧ ಹೊಂದಿದ್ದಾಳೆ. ಹಾಗಾಗಿ ಶಿಕ್ಷೆಗೆ ಒಳಗಾದ ಶಿಕ್ಷಕಿಯು ಜನ್ಮ ನೀಡಿದ ಮಗುವನ್ನು ಆಕೆಯಿಂದ ತೆಗೆದುಕೊಂಡು ಆಕೆಯನ್ನು ಜೈಲಿಗೆ ಹಾಕಲಾಗಿದೆ.

ಈ ಘಟನೆ ನೋಡಿದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಮಾತ್ರ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿಲ್ಲ. ಜೊತೆಗೆ ಪುರುಷರು ಹಾಗೂ ಮಕ್ಕಳೂ ಕೂಡ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ.

Continue Reading

ಶಿಕ್ಷಣ

Edu Guide: ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌: IDFC FIRST ಬ್ಯಾಂಕ್‌ನಿಂದ 2 ಲಕ್ಷ ರೂ. ಸ್ಕಾಲರ್‌ಶಿಪ್‌; ಹೀಗೆ ಅಪ್ಲೈ ಮಾಡಿ

Edu Guide: ಎಂಬಿಎ ಓದುತ್ತಿರುವ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌. ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ನೀಡುವ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನಿಸಲಾಗಿದೆ. 2 ಲಕ್ಷ ರೂ. ನೀಡುವ ಸ್ಕಾಲರ್‌ಶಿಪ್‌ ಇದಾಗಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 31. ಅರ್ಜಿ ಸಲ್ಲಿಸುವ ವಿಧಾನ, ಯಾರೆಲ್ಲ ಅರ್ಹರು ಮುಂತಾದ ವಿವರ ಇಲ್ಲಿದೆ.

VISTARANEWS.COM


on

Edu Guide
Koo

ಬೆಂಗಳೂರು: ದೇಶದಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡುತ್ತಿದೆ. ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗುತ್ತಿದೆ. ಅದಾಗ್ಯೂ ಉನ್ನತ ಶಿಕ್ಷಣ ಎನ್ನುವುದು ಇನ್ನೂ ಹಲವು ಕಡೆ ಗಗನ ಕುಸುಮ ಎನಿಸಿಕೊಂಡಿದೆ. ಅದರಲ್ಲಿಯೂ ಎಂಜಿನಿಯರಿಂಗ್‌, ಮೆಡಿಕಲ್‌, ಎಂಬಿಎಯಂತಹ ಉನ್ನತ ಶಿಕ್ಷಣದಲ್ಲಿದಲ್ಲಿನ ದುಬಾರಿ ಫೀಸ್‌ ಕಾರಣದಿಂದ ಹಣ ಹೊಂದಿಸಲು ಬಡ ಮತ್ತು ಮಧ್ಯಮ ವರ್ಗದ ಮಂದಿ ಇಂದಿಗೂ ಪರದಾಡುತ್ತಿದ್ದಾರೆ. ಇದೇ ಕಾರಣಕ್ಕೆ ಸರ್ಕಾರಗಳು ಮತ್ತು ಬ್ಯಾಂಕ್‌ನಂತಹ ಕೆಲವು ಖಾಸಗಿ ಸಂಸ್ಥೆಗಳು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ನೀಡಲು ಮುಂದು ಬಂದಿವೆ (Scholarship For Students). ಈ ಪೈಕಿ ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ನೀಡುವ ಸ್ಕಾಲರ್‌ಶಿಪ್‌ ಪ್ರಮುಖವಾದುದು (IDFC FIRST Bank MBA Scholarship 2024-26). ಬ್ಯಾಂಕ್‌ ಬಡ ಎಂಬಿಎ ವಿದ್ಯಾರ್ಥಿಗಳಿಗೆ 2 ವರ್ಷಕ್ಕೆ 2 ಲಕ್ಷ ರೂ. ಒದಗಿಸುತ್ತಿದೆ. ಇದಕ್ಕೆ ಯಾರೆಲ್ಲ ಅರ್ಹರು? ಅಪ್ಲೈ ಮಾಡುವುದು ಹೇಗೆ? ಮುಂತಾದ ವಿವರ ಇಲ್ಲಿದೆ (Edu Guide).

ಏನಿದು ಯೋಜನೆ?

ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಎಂಬಿಎ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಈ ಯೋಜನೆಯನ್ನು 2018ರಲ್ಲಿ ಪರಿಚಯಿಸಿದೆ. ಈ ಯೋಜನೆ ಮೂಲಕ ಅರ್ಹ ವಿದ್ಯಾರ್ಥಿಗಳ ಶಿಕ್ಷಣಕ್ಕೆ 2 ಲಕ್ಷ ರೂ. ನೆರವು ಒದಗಿಸಲಾಗುತ್ತದೆ. ಇದುವರೆಗೆ 152 ಕಾಲೇಜುಗಳ ಸುಮಾರು 1,154 ವಿದ್ಯಾರ್ಥಿಗಳು ಸ್ಕಾಲರ್‌ಶಿಪ್‌ ಪಡೆದುಕೊಂಡಿದ್ದಾರೆ.

ಯಾರೆಲ್ಲ ಅರ್ಹರು?

ಈ ಬಾರಿಯ ಸ್ಕಾಲರ್‌ಶಿಪ್‌ನ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅರ್ಹರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಜುಲೈ 31. ಸ್ಕಾಲರ್‌ಶಿಪ್‌ಗೆ ಈ ಕೆಳಗಿನ ಅರ್ಹತೆ ಅಗತ್ಯ.

  • ಭಾರತೀಯ ನಾಗರಿಕರಾಗಿರಬೇಕು.
  • ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ರೂ. ಅಥವಾ ಅದಕ್ಕಿಂತ ಕಡಿಮೆ ಇರಬೇಕು.
  • ಪಟ್ಟಿಯಲ್ಲಿ ಇರುವ ಕಾಲೇಜಿನಲ್ಲಿ ಪ್ರವೇಶ ಪಡೆದಿರಬೇಕು (ಕಾಲೇಜಿನ ಪಟ್ಟಿ ಕೆಳಗೆ ನೀಡಲಾಗಿದೆ).
  • 2 ವರ್ಷಗಳ ಪೂರ್ಣ ಅವಧಿಯ ಎಂಬಿಎ ಕೋರ್ಸ್‌ನ ಮೊದಲ ವರ್ಷದಲ್ಲಿರಬೇಕು.
  • ಆಧಾರ್‌ ನಂಬರ್‌ ಜತೆ ಲಿಂಕ್‌ ಆಗಿರುವ ಮೊಬೈಲ್‌ ನಂಬರ್‌ ಹೊಂದಿರಬೇಕು.

ಅಗತ್ಯ ದಾಖಲೆಗಳು

  • ಕಾಲೇಜಿಗೆ ಪ್ರವೇಶ ಪಡೆದಿರುವ ಪುರಾವೆ (ಕಾಲೇಜು ಹೆಸರು, ಅಡ್ಮಿಷನ್‌ ವರ್ಷ ಇತ್ಯಾದಿ ಮಾಹಿತಿ ಒಳಗೊಂಡಿರಬೇಕು).
  • ಶುಲ್ಕ ಪಾವತಿಯ ರಸೀದಿ.
  • ಪದವಿ ತರಗತಿಯ ಅಂಕಪಟ್ಟಿ ಮತ್ತು ಉತ್ತೀರ್ಣ ಪ್ರಮಾಣಪತ್ರದ ಪ್ರತಿ.
  • ಆದಾಯ ಪ್ರಮಾಣ ಪತ್ರ.

ಕಾಲೇಜಿನ ಪಟ್ಟಿ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ (https://d2w7l1p59qkl0r.cloudfront.net/static/files/list-of-institutions-idfc-first-bank-mba-scholarship-2024-26.pdf)

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://www.buddy4study.com/page/idfc-first-bank-mba-scholarship#scholarships)
  • ಹೆಸರು ನೋಂದಾಯಿಸಿ.
  • ಈಗ IDFC FIRST Bank MBA Scholarship 2024-26 ಪುಟ ಕಾಣಿಸುತ್ತದೆ.
  • ವಿವರಗಳನ್ನು ಓದಿ ‘Apply Now’ ಬಟನ್‌ ಕ್ಲಿಕ್‌ ಮಾಡಿ.
  • ಆಧಾರ್‌ ನಂಬರ್‌ನೊಂದಿಗೆ ಲಿಂಕ್‌ ಆಗಿರುವ ಮೊಬೈಲ್‌ ನಂಬರ್‌ ನಮೂದಿಸಿ.
  • ಈಗ ಯುಆರ್‌ಎಲ್‌, ಯೂಸರ್‌ ಐಡಿ, ಮತ್ತು ಪಾಸ್‌ವರ್ಡ್‌ ಸ್ವೀಕರಿಸುತ್ತೀರಿ.
  • ಅದನ್ನು ಬಳಸಿ ಲಾಗಿನ್‌ ಆಗಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ.
  • ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.

ಇದನ್ನೂ ಓದಿ: Edu Guide: ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಸಿಗಲಿವೆ ಇವೆಲ್ಲ ಸ್ಕಾಲರ್‌ಶಿಪ್‌

Continue Reading
Advertisement
Rakshit Shetty Richard Anthony Produce By Hombale
ಅವಿಭಾಗೀಕೃತ1 second ago

Ayodhya Ram Mandir: ಅಯೋಧ್ಯೆ ರಾಮ ಮಂದಿರದ ಅರ್ಚಕರಿಗೆ ಹೊಸ ಸಮವಸ್ತ್ರ; ನಿಯಮದಲ್ಲಿ ಬದಲಾವಣೆ: ಕಾರಣವೇನು?

Latest5 mins ago

Self Harming: ಮೊದಲ ರಾತ್ರಿಯ ಟೆನ್ಶನ್‌ಗೆ ವರ ಆತ್ಮಹತ್ಯೆ? ಉತ್ತರ ಪ್ರದೇಶದಲ್ಲೊಂದು ವಿಲಕ್ಷಣ ಘಟನೆ

Valmiki Corporation Scam
ಪ್ರಮುಖ ಸುದ್ದಿ8 mins ago

Valmiki Corporation Scam: ವಾಲ್ಮೀಕಿ ನಿಗಮ ಹಗರಣದಲ್ಲಿ ಮುಂದುವರಿದ ಮಾಜಿ ಸಚಿವರ ಪಿಎಸ್‌ ವಿಚಾರಣೆ; ನಾಗೇಂದ್ರಗೆ ಢವಢವ!

Team India's Victory Parade
ಕ್ರಿಕೆಟ್10 mins ago

Team India’s Victory Parade: ಟೀಮ್ ಇಂಡಿಯಾದ ವಿಕ್ಟರಿ ಪೆರೇಡ್​ನಲ್ಲಿ ಹಲವು ಅಭಿಮಾನಿಗಳಿಗೆ ಗಾಯ; ಆಸ್ಪತ್ರೆಗೆ ದಾಖಲು

Viral News
Latest14 mins ago

Viral News: ಕಾಮ ದಾಹ ತಣಿಸಿಕೊಳ್ಳಲು ವಿದ್ಯಾರ್ಥಿಗಳನ್ನೇ ಬಳಸಿಕೊಂಡ ಶಿಕ್ಷಕಿಗೆ ಶಿಕ್ಷೆ

Dengue Fever
ಕರ್ನಾಟಕ28 mins ago

Dengue Fever: ಡೆಂಗ್ಯೂ ಆತಂಕ; ರಾಜಧಾನಿಯಲ್ಲಿ ಇನ್ಮುಂದೆ ಎಲ್ಲೆಂದರಲ್ಲಿ ಕಸ ಬಿಸಾಡಿದರೆ ಬೀಳಲಿದೆ ಭಾರಿ ದಂಡ!

Fire accident
ದೇಶ39 mins ago

Fire accident: ಮಾಲ್‌ನಲ್ಲಿ ಭೀಕರ ಅಗ್ನಿ ಅವಘಡ; ಭಾರೀ ಸಾವು-ನೋವಿನ ಶಂಕೆ

Rashmika Mandanna Kubera interesting first look
ಕಾಲಿವುಡ್45 mins ago

Rashmika Mandanna: ಧನುಷ್‌ ನಟನೆಯ ʻಕುಬೇರʼ ಸಿನಿಮಾದ ರಶ್ಮಿಕಾ ಫಸ್ಟ್‌ ಲುಕ್‌ ಪೋಸ್ಟರ್‌ ಔಟ್‌!

IND vs ZIM
ಕ್ರೀಡೆ47 mins ago

IND vs ZIM: ನಾಳೆಯಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ; ಯುವ ಪಡೆಗೆ ಸ್ಫೂರ್ತಿಯಾಗಲಿ ಟಿ20 ವಿಶ್ವಕಪ್​ ಗೆಲುವು

Edu Guide
ಶಿಕ್ಷಣ59 mins ago

Edu Guide: ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌: IDFC FIRST ಬ್ಯಾಂಕ್‌ನಿಂದ 2 ಲಕ್ಷ ರೂ. ಸ್ಕಾಲರ್‌ಶಿಪ್‌; ಹೀಗೆ ಅಪ್ಲೈ ಮಾಡಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Elephant attack in Hassan and Chikmagalur
ಹಾಸನ1 hour ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು2 hours ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು3 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ7 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ19 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ21 hours ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ22 hours ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ24 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ1 day ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ1 day ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

ಟ್ರೆಂಡಿಂಗ್‌