KPSC Exam 2024 : ಕೆಪಿಎಸ್‌ಸಿ ಮರುಪರೀಕ್ಷೆಗೆ ಸರ್ಕಾರ ಅಸ್ತು; ಕರ್ತವ್ಯ ಲೋಪವೆಸಗಿದ ಅಧಿಕಾರಿಗಳು ಅಮಾನತು - Vistara News

ಪ್ರಮುಖ ಸುದ್ದಿ

KPSC Exam 2024 : ಕೆಪಿಎಸ್‌ಸಿ ಮರುಪರೀಕ್ಷೆಗೆ ಸರ್ಕಾರ ಅಸ್ತು; ಕರ್ತವ್ಯ ಲೋಪವೆಸಗಿದ ಅಧಿಕಾರಿಗಳು ಅಮಾನತು

KPSC Exam 2024 : ಕೆಪಿಎಸ್ ಸಿ ಮರುಪರೀಕ್ಷೆಗೆ ಸರ್ಕಾರ ಅಸ್ತು ಎಂದಿದ್ದು, ಕರ್ತವ್ಯ ಲೋಪವೆಸಗಿದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

VISTARANEWS.COM


on

Govt approves KPSC re-examination Officials suspended for dereliction of duty
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕೆಪಿಎಸ್‌ಸಿ ಪ್ರಿಮಿಲ್ಸ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಎಡವಟ್ಟು ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸಲು ಸಿಎಂ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ. ತಮ್ನ X ಖಾತೆ ಮೂಲಕ ಮರು ಪರೀಕ್ಷೆ ನಡೆಸುವ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡಕ್ಕೆ ಅನುವಾದ ಮಾಡುವ ವೇಳೆ ಆಗಿದ್ದ ಲೋಪದೋಷಗಳ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸಲು ಸಿಎಂ ಸೂಚನೆ ನೀಡಿದ್ದಾರೆ.

ಕಳೆದ ಆಗಸ್ಟ್ 27ರಂದು ಕೆಪಿಎಸ್‌ಸಿ ಪೂರ್ವ ಭಾವಿ ಪರೀಕ್ಷೆ ನಡೆದಿತ್ತು. 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್‌-ಎ ಮತ್ತು ಗ್ರೂಪ್‌-ಬಿ ವೃಂದದ ಒಟ್ಟು 384 ಹುದ್ದೆಗಳಿಗೆ ಪ್ರಿಲಿಮ್ಸ್ ಎಕ್ಸಾಂ ನಡೆಸಿತ್ತು. ಸುಮಾರು 2 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಈ ಪರೀಕ್ಷೆ ಬರೆದಿದ್ದಾರೆ. ಆದರೆ ಈ ಪರೀಕ್ಷೆಯಲ್ಲಿ ಕನ್ನಡದ ಕಗ್ಗೋಲೆ ಮಾಡಲಾಗಿದೆ, ಕನ್ನಡದ ಪ್ರಶ್ನೆಗಳನ್ನು ತಪ್ಪಾಗಿ ಕೇಳಲಾಗಿದೆ. ಇದರಿಂದ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ತೊಂದರೆಯಾಗಿತ್ತು. 60ಕ್ಕೂ ಹೆಚ್ಚು ತಪ್ಪುಗಳನ್ನು ಈ ಪರೀಕ್ಷೆಯಲ್ಲಿ ಮಾಡಲಾಗಿತ್ತು.

ಕೆಪಿಎಸ್‌ಸಿ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕವಾಗಿದ್ದವೆಂಬ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣ, ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಮುಂದಿನ ಎರಡು ತಿಂಗಳುಗಳ ಒಳಗೆ ಮರುಪರೀಕ್ಷೆ ಮಾಡುವಂತೆ ಕೆಪಿಎಸ್‌ಸಿಗೆ ಸೂಚನೆ ನೀಡಿದ್ದೇನೆ.

ಕರ್ತವ್ಯ ಲೋಪವೆಸಗಿದ ಅಧಿಕಾರಿಗಳನ್ನು ಸೇವೆಯನ್ನು ಅಮಾನತು ಮಾಡಲಾಗಿದೆ. ಮುಂಬರುವ ಪರೀಕ್ಷೆಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ, ಸಮರ್ಪಕವಾಗಿ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ನಾವು ನೇಮಕಾತಿ ಪ್ರಕ್ರಿಯೆಗಳ ಸಮಗ್ರತೆ ಮತ್ತು ನಂಬಿಕಾರ್ಹತೆಯನ್ನು ಎತ್ತಿಹಿಡಿದು, ಪರೀಕ್ಷಾರ್ಥಿಗಳ ಹಿತರಕ್ಷಿಸಲು ಬದ್ಧರಾಗಿದ್ದೇವೆ.

ಕೆಪಿಎಸ್‌ಸಿ ಮರುಪರೀಕ್ಷೆಗೆ ಸರ್ಕಾರ ಅಸ್ತು ಹಿನ್ನೆಲೆಯಲ್ಲಿ ಫ್ರೀಡ್ಂ ಪಾರ್ಕ್‌ನಲ್ಲಿ ಅಭ್ಯರ್ಥಿಗಳ ಸಂಭ್ರಮಾಚರಣೆ ಜೋರಾಗಿತ್ತು. ಈ ಕುರಿತು ಕರವೇ ನಾರಾಯಣ ಗೌಡ ಪ್ರತಿಕ್ರಿಯಿಸಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆ ಗೊಂದಲಕ್ಕೆ ಕಾರಣವಾಗಿತ್ತು. ಕನ್ನಡದ ಮಕ್ಕಳಿಗೆ ಅನ್ಯಾಯವಾಗಿತ್ತು. 160 ಪ್ರಶ್ನೆಗಳು ಗೊಂದಲ ಇದೆ ಎಂದು ಅಭ್ಯರ್ಥಿಗಳು ಹೇಳಿದ್ದರು. ಅಭ್ಯರ್ಥಿಗಳ ಜತೆ ನಾವಿದ್ದೇವೆ ಎಂದು ಹೋರಾಟಕ್ಕೆ ಕರೆ ಕೊಟ್ಟಿದ್ದೆವು. ಮರು ಪರೀಕ್ಷೆಗೆ ನಾವು ಆಗ್ರಹಿಸಿದ್ದೆವು. ಲಕ್ಷಾಂತರ ಮಕ್ಕಳ ಒತ್ತಾಯದಂತೆ ಮರು ಪರೀಕ್ಷೆ ಮಾಡಲು ಆಗ್ರಹಿಸಿದ್ದೆವು. ನಾವು ಸರ್ಕಾರದ ಮುಂದೆ ಬೇಡಿಕೆಯನ್ನು ಇಟ್ಟಿದ್ದವು. ಇವತ್ತು ಸರ್ಕಾರ, ಸಿಎಂ ಮರು ಪರೀಕ್ಷೆಗೆ ಆದೇಶ ಮಾಡಿದ್ದಾರೆ. ಮರು ಪರೀಕ್ಷೆಗೆ ಅವಕಾಶ ಕೊಟ್ಟಿರುವ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ. ಯಾವ ಅಧಿಕಾರಿಗಳು ಈ ಲೋಪಕ್ಕೆ ಕಾರಣವಾಗಿದ್ರಲ್ಲ ಅವರಿಗೆ ಶಿಕ್ಷೆಯಾಗಬೇಕು. ಇದು ಕನ್ನಡಿಗರ ಸಿಕ್ಕ ಜಯವೆಂದು ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು ಗ್ರಾಮಾಂತರ

Gold Smuggling: ಗುದದ್ವಾರದಲ್ಲಿತ್ತು ಕೋಟಿ ಮೌಲ್ಯದ ಚಿನ್ನ; ಶ್ರೀಲಂಕಾದಿಂದ ಬಂದವರು ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಲಾಕ್‌

ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುದದ್ವಾರದಲ್ಲಿ ಚಿನ್ನ ಅಡಗಿಸಿ (Gold Smuggling) ಅಕ್ರಮವಾಗಿ ಚಿನ್ನ ಸಾಗಾಣಿಕೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.

VISTARANEWS.COM


on

By

Three arrested for smuggling gold in rectum
Koo

ದೇವನಹಳ್ಳಿ: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ ನಡೆದಿದೆ. ಗುದದ್ವಾರದಲ್ಲಿ ಚಿನ್ನ ಅಡಗಿಸಿ (Gold Smuggling) ಅಕ್ರಮವಾಗಿ ಚಿನ್ನ ಸಾಗಾಣಿಕೆ ಮಾಡುತ್ತಿದ್ದ ಮೂವರ ಬಂಧನ ಮಾಡಲಾಗಿದೆ. ಶ್ರೀಲಂಕಾದ ಕೊಲೊಂಬೊದಿಂದ 6E 1168 ವಿಮಾನದಲ್ಲಿ ಕೆಂಪೇಗೌಡ ಏರ್‌ಪೋರ್ಟ್‌ಗೆ ಬಂದಿದ್ದ ಪ್ರಯಾಣಿಕರ ತಪಾಸಣೆ ಮಾಡುವಾಗ ಸಿಕ್ಕಿ ಬಿದ್ದಿದ್ದಾರೆ.

Three arrested for smuggling gold in rectum
Three arrested for smuggling gold in rectum

ತಪಾಸಣೆ ವೇಳೆ ಮೂವರು ಆರೋಪಿಗಳು ಪೆಸ್ಟ್ ರೂಪದಲ್ಲಿ ಗುದದ್ವಾರದಲ್ಲಿ ಚಿನ್ನ ಅಡಗಿಸಿ ಇಟ್ಟುಕೊಂಡಿರುವುದು ಪತ್ತೆಯಾಗಿದೆ. ಪೆಸ್ಟ್ ರೂಪದಲ್ಲಿ ಇಟ್ಟುಕೊಂಡು ಬಂದಿದ್ದ 1 ಕೋಟಿ 19 ಲಕ್ಷದ 38 ಸಾವಿರ ಮೌಲ್ಯದ 1,670 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಕಸ್ಟಮ್ಸ್ ಅಧಿಕಾರಿಗಳಿಂದ ತೀವ್ರ ವಿಚಾರಣೆ ನಡೆಯುತ್ತಿದೆ.

ವೃದ್ಧನ ಗುದದ್ವಾರದಲ್ಲಿತ್ತು 16 ಇಂಚಿನ ಸೋರೆಕಾಯಿ! ವೈದ್ಯರಿಗೇ ಗಾಬರಿ!

ಈ ಹಿಂದೆ ಮನುಷ್ಯರ ದೇಹದಿಂದ ಸೂಜಿ, ಪಿನ್ನು, ಕಬ್ಬಿಣದ ತುಂಡುಗಳು, ಮುಂತಾದ ಚಿಕ್ಕ ಚಿಕ್ಕ ವಸ್ತುಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ದೇಹದಿಂದ ಹೊರಗೆ ತೆಗೆದ ಅನೇಕ ಘಟನೆಗಳು ನಡೆದಿತ್ತು. ಇಂತಹ ಚಿಕ್ಕ ವಸ್ತುಗಳನ್ನು ದೇಹದಿಂದ ಹೊರತೆಗೆಯುವುದು ವೈದ್ಯರಿಗೆ ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ವ್ಯಕ್ತಿಯ ದೇಹದಲ್ಲಿರುವ ವಸ್ತುವನ್ನು ಕಂಡು ವೈದ್ಯರಿಗೆ ಆಘಾತವನ್ನುಂಟಾಗಿದೆ. ಮಧ್ಯಪ್ರದೇಶದ ವ್ಯಕ್ತಿಯೊಬ್ಬನ ಗುದದ್ವಾರದಿಂದ ಸೋರೆಕಾಯಿ ಅನ್ನು ವೈದ್ಯರು ತೆಗೆದುಹಾಕಿದ್ದು, ಇದು ಅಚ್ಚರಿಗೆ ಕಾರಣವಾಗಿದೆ. ಈ ಸುದ್ದಿ ಈಗ ಹೆಚ್ಚು ವೈರಲ್‌ (Viral News) ಆಗಿದೆ.

60 ವರ್ಷದ ರೈತನೊಬ್ಬ ತೀವ್ರ ಹೊಟ್ಟೆನೋವಿನಿಂದ ನರಳುತ್ತಾ ವೈದ್ಯರ ಬಳಿಗೆ ಹೋಗಿದ್ದ. ಆಗ ವೈದ್ಯರು ಎಕ್ಸ್-ರೇ ಮಾಡಿದ್ದಾರೆ. ಆಗ ಅವನ ಗುದನಾಳದಲ್ಲಿ ಸೋರೆಕಾಯಿ ಇರುವುದು ಕಂಡುಬಂದಿದೆ! ಆದರೆ ಈ ತರಕಾರಿ ಅವನ ಗುದ್ವಾರದೊಳಗೆ ಹೇಗೆ ಹೋಗಿದೆ ಎಂಬುದು ಸ್ಪಷ್ಟವಾಗಿಲ್ಲ. ಅಲ್ಲದೆ, ಆ ವ್ಯಕ್ತಿ ಈ ಬಗ್ಗೆ ಯಾವುದೇ ಸ್ಪಷ್ಟೀಕರಣವನ್ನು ನೀಡುತ್ತಿಲ್ಲ ಎನ್ನಲಾಗಿದೆ. ವೈದ್ಯರು ಆ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು, ಎರಡು ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಆ ವಸ್ತುವನ್ನು ಹೊರಗೆ ತೆಗೆದು ಹಾಕಿದ್ದಾರೆ. ಡಾ. ಮನೋಜ್ ಚೌಧರಿ, ಡಾ. ನಂದಕಿಶೋರ್ ಜಾತವ್, ಡಾ. ಆಶಿಶ್ ಶುಕ್ಲಾ ಮತ್ತು ಡಾ. ಸಂಜಯ್ ಮೌರ್ಯ ಅವರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ. ಇದರಿಂದ ಆ ವ್ಯಕ್ತಿ ಅಪಾಯದಿಂದ ಪಾರಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಯ ಹಿಂದಿನ ಕಾರಣ ಮಾನಸಿಕ ಅಸ್ವಸ್ಥತೆ, ಲೈಂಗಿಕ ಸಮಸ್ಯೆ ಅಥವಾ ಅಪಘಾತ ಆಗಿರಬಹುದು ಎಂದು ಡಾ. ಚೌಧರಿ ತಿಳಿಸಿದ್ದಾರೆ. ಆದರೆ ನಿಖರವಾದ ಕಾರಣವನ್ನು ತಿಳಿಯಲು ಆಸ್ಪತ್ರೆ ತನಿಖೆಯನ್ನು ಪ್ರಾರಂಭಿಸಿದೆ ಎನ್ನಲಾಗಿದೆ.

ಇದಕ್ಕೂ ಮುನ್ನ ಮಾರ್ಚ್‍ನಲ್ಲಿ ವಿಯೆಟ್ನಾಂನಲ್ಲಿ ಇದೇ ರೀತಿಯ ಘಟನೆ ಜನರನ್ನು ಬೆಚ್ಚಿಬೀಳಿಸಿತು. 34 ವರ್ಷದ ವ್ಯಕ್ತಿಯೊಬ್ಬರು ತೀವ್ರ ಹೊಟ್ಟೆ ನೋವಿನಿಂದ ವೈದ್ಯರನ್ನು ಭೇಟಿಯಾದಾಗ, ಅವರಿಗೆ ಆಘಾತಕಾರಿ ಸಮಸ್ಯೆ ಇರುವುದು ತಿಳಿದುಬಂದಿದೆ. ಅಲ್ಟ್ರಾಸೌಂಡ್ ಮತ್ತು ಎಕ್ಸ್-ರೇ ನಂತರ, ವೈದ್ಯರಿಗೆ ಅವನ ಅನಾರೋಗ್ಯದ ಹಿಂದಿನ ಕಾರಣ ಅವನ ಹೊಟ್ಟೆಯಲ್ಲಿ ಸಿಕ್ಕಿಹಾಕಿಕೊಂಡ 30 ಸೆಂ.ಮೀ ಉದ್ದದ ಈಲ್ ಎಂಬುದು ತಿಳಿದು ಬಂದಿತ್ತು.

ಇದನ್ನೂ ಓದಿ: ಮಗ ಸತ್ತು ಶವ ಕೊಳೆಯುತ್ತಿದ್ದರೂ ಮಲಗಿದ್ದಾನೆಂದು ಮನೆಯಲ್ಲೇ ಇರಿಸಿಕೊಂಡಿದ್ದ ತಾಯಿ-ಮಗಳು!

ಅದು ಗುದದ್ವಾರದ ಮೂಲಕ ವ್ಯಕ್ತಿಯ ದೇಹವನ್ನು ಪ್ರವೇಶಿಸಿ ನಂತರ ಅವನ ಕರುಳಿಗೆ ಜಾರಿತ್ತು ಎಂದು ವೈದ್ಯರು ತಿಳಿಸಿದ್ದರು. ಇದೊಂದು ಅಪರೂಪದ ಪ್ರಕರಣವಾಗಿದ್ದು, ಗುದದ್ವಾರದ ಪ್ರದೇಶವು ಸಾಕಷ್ಟು ಮಲದ ದ್ರವವನ್ನು ಹೊಂದಿರುತ್ತದೆ. ಸುಲಭವಾಗಿ ಬ್ಯಾಕ್ಟೀರಿಯಾದಿಂದ ಸೋಂಕಿಗೆ ಒಳಗಾಗುತ್ತದೆ. ಆದರೂ ವೈದ್ಯರು ಸುರಕ್ಷಿತವಾಗಿ ಶಸ್ತ್ರಚಿಕಿತ್ಸೆ ಮಾಡಿ ಆತನನ್ನು ಕಾಪಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕಲಬುರಗಿ

Rain Alert : ಕಲಬುರಗಿಯಲ್ಲಿ ಭಾರಿ ಮಳೆ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ; ಮನೆ ಗೋಡೆ ಕುಸಿದು ಬಿದ್ದು ವೃದ್ಧೆ ಸಾವು

Rain alert : ಕಲಬುರಗಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಶಾಲಾ -ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.

VISTARANEWS.COM


on

By

Rain alert
Koo

ಕಲಬುರಗಿ: ಉತ್ತರ ಒಳನಾಡಿನಲ್ಲಿ ಮಳೆಯು (Rain alert) ಅಬ್ಬರಿಸುತ್ತಿದೆ. ಅದರಲ್ಲೂ ಕಲಬುರಗಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಶಾಲಾ -ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಮನೆ ಗೋಡೆ ಕುಸಿದು ಮಹಿಳೆ ಸಾವು

ಮಳೆ ಅವಾಂತರಕ್ಕೆ ಮನೆ ಗೋಡೆ ಕುಸಿದು ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಸಕೀನಾಬಿ ನದಾಫ್ (70) ಮೃತ ದುರ್ದೈವಿ. ಮನೆ ಗೋಡೆ ಕುಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ವೃದ್ಧೆ ಸಕೀನಾಬಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಪರಿಚಿತ ಮಲ್ಲಿಕಾರ್ಜುನ ಅವರ ಮನೆ ಮುಂಭಾಗದ ಕಟ್ಟೆ ಮೇಲೆ ಮಹಿಳೆಯರ ಜತೆ ಮಾತನಾಡುತ್ತಾ ಕುಳಿತಿದ್ದಾಗ, ಮಲ್ಲಿಕಾರ್ಜುನ ಅವರ ಮನೆ ಗೋಡೆಕುಸಿದು ಬಿದ್ದಿತ್ತು. ಇಬ್ಬರು ಮಹಿಳೆಯರಿಗೆ ಸಣ್ಣಪುಟ್ಟ ಗಾಯವಾಗಿದ್ದರೆ, ವೃದ್ಧೆ ಮೃತಪಟ್ಟಿದ್ದಾರೆ. ಭೀಮರಾಯನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಯಾದಗಿರಿದಲ್ಲಿ ಮನೆಗಳಿಗೆ ನುಗ್ಗಿದ ನೀರು

ಯಾದಗಿರಿ ಜಿಲ್ಲೆಯಲ್ಲಿ ವರುಣನ ಅಬ್ಬರ ಜೋರಾಗಿದೆ. ಮೊಟ್ನಳ್ಳಿ ಗ್ರಾಮದಲ್ಲಿರುವ 15ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಗ್ರಾಮದಲ್ಲಿರುವ ರಸ್ತೆಗಳು ಜಲಾವೃತಗೊಂಡಿದೆ. ತೆಲಂಗಾಣ ಸಂಪರ್ಕ ಕಲ್ಪಿಸುವ ಗುರುಮಠಕಲ್ ತಾಲೂಕಿನ ನಂದೆಪಲ್ಲಿ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ನಿರಂತರ ಮಳೆ ಪರಿಣಾಮ ಚಿಂತನಹಳ್ಳಿ ಜಲಪಾತ ಉಕ್ಕಿ ಹರಿಯುತ್ತಿದೆ. ಶ್ರೀ ಗವಿಸಿದ್ದೇಶ್ವರ ಗರ್ಭ ಗುಡಿಯ ಮೇಲ್ಭಾಗದಲ್ಲಿ ಹರಿಯುವ ಜಲಪಾತ ಇದಾಗಿದೆ.

ರಾಯಚೂರಿನಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಕೆರೆಕೋಡಿ ಕಿತ್ತು ಹೋಗಿದೆ. ಕೆರೆ ಕೋಡಿ ಕಿತ್ತು ಹೋದ ಹಿನ್ನೆಲೆಯಲ್ಲಿ ರಸ್ತೆಗೆ ನೀರು ನುಗ್ಗಿದೆ. ರಾಯಚೂರು ತಾಲ್ಲೂಕಿನ ಆತ್ಕೂರು ಗ್ರಾಮದ ಬಳಿ ಘಟನೆ ನಡೆದಿದೆ. ರಸ್ತೆಗೆ ನೀರು ನುಗ್ಗಿದ ಹಿನ್ನೆಲೆ ವಾಹನ ಸವಾರರು ಪರದಾಡಿದರು.ಇತ್ತ ಕೆರೆ ಕೋಡಿ ಒಡೆದು ಅಕ್ಕ ಪಕ್ಕದ ಹೊಲ ಗದ್ದೆಗಳಿಗೆ ನೀರು ನುಗ್ಗಿದೆ. ವಿಟೋಜಿ ಎಂಬುವವರ ಹತ್ತಿ ಹೊಲಕ್ಕೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ.

ಗುಡುಗು, ಗಾಳಿ ಸಹಿತ ಅಬ್ಬರಿಸಲಿದೆ ಮಳೆ

ಬೆಂಗಳೂರು: ಕರ್ನಾಟಕದ ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ (Karnataka Weather Forecast) ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲೂ ಪ್ರತ್ಯೇಕವಾಗಿ ಭಾರಿ ಮಳೆ (Rain News) ಹಾಗೂ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನಲ್ಲಿ ಚದುರಿದಂತೆ ಸಾಧಾರಣ ಮಳೆಯಾದರೆ, ದಕ್ಷಿಣ ಒಳನಾಡಿನಲ್ಲಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ದಕ್ಷಿಣ ಒಳನಾಡಿನಲ್ಲಿ ವ್ಯಾಪಕವಾಗಿ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ. ದಾವಣಗೆರೆ ಮತ್ತು ರಾಮನಗರ ಜಿಲ್ಲೆಗಳಲ್ಲಿ ಚದುರಿದ ಸ್ಥಳಗಳಲ್ಲಿ ಸಾಧಾರಣದೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡಿನ ಬೀದರ್, ಕಲಬುರಗಿ ಮತ್ತು ಯಾದಗಿರಿಯಲ್ಲಿ ವ್ಯಾಪಕ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ವಿಜಯಪುರ, ಬಾಗಲಕೋಟೆ, ರಾಯಚೂರು ಮತ್ತು ಬೆಳಗಾವಿಯಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.

ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನದಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಚದುರಿದಂತೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Pot Holes: ರಸ್ತೆಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಕಮಿಷನರ್‌ಗೆ ಡಿಕೆಶಿ ಖಡಕ್‌ ಸೂಚನೆ; 15 ದಿನಗಳ ಗಡುವು

ಬೆಂಗಳೂರಿನಲ್ಲಿ ಹಗುರ ಮಳೆ

ರಾಜಧಾನಿ ಬೆಂಗಳೂರಿನಲ್ಲಿ ವ್ಯಾಪಕವಾಗಿ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇಲ್ಲೆಲ್ಲ ವ್ಯಾಪಕ ಮಳೆ

ಉತ್ತರ ಕನ್ನಡ, ಬೀದರ್, ಕಲಬುರಗಿ ಮತ್ತು ವಿಜಯಪುರದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ರಾಯಚೂರು, ಬಳ್ಳಾರಿ ಹಾಗೂ ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮೀನುಗಾರರಿಗೂ ಎಚ್ಚರಿಕೆ

ಸೆಪ್ಟೆಂಬರ್ 4ರವರೆಗೆ ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 35 ರಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಸಮುದ್ರತೀರದಲ್ಲಿ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಈ ವೇಳೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಭವಿಷ್ಯ

Dina Bhavishya : ಆಪ್ತರೊಂದಿಗೆ ಶುರು ಮಾಡುವ ವ್ಯಾಪಾರ ನಷ್ಟ ತಂದಿತು ಎಚ್ಚರ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷದ ಅಮವಾಸ್ಯೆ ಅಹೋರಾತ್ರಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina bhavishya
Koo

ಚಂದ್ರನು ಕನ್ಯಾರಾಶಿಯಲ್ಲೇ ನೆಲಸಲಿದ್ದು, ಇದರಿಂದಾಗಿ ಮಿಥುನ, ಸಿಂಹ, ತುಲಾ, ವೃಶ್ಚಿಕ, ಕುಂಭ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮಿಥುನ ರಾಶಿಯವರು ಬೇರೆಯವರ ಮಾತನ್ನು ಕೇಳಿಕೊಂಡು ನಿಮ್ಮನ್ನು ಪ್ರೀತಿಯಿಂದ ಕಾಣುವ ವ್ಯಕ್ತಿಗಳನ್ನು ದ್ವೇಷಿಸುವುದು ಬೇಡ. ಇತರರ ಸಮಸ್ಯೆಗಳನ್ನು ಪರಿಹರಿಸಲು ನೀವು ಮಧ್ಯಪ್ರವೇಶ ಮಾಡುವ ಸಾಧ್ಯತೆ ಇದೆ. ದೀಢಿರ್ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಮೇಷ ರಾಶಿಯವರು ಕೆಲವು ನಿರ್ಧಾರಗಳು ಹತಾಶೆ ಮತ್ತು ಮಾನಸಿಕ ಪ್ರಕ್ಷುಬ್ಧತೆಗೆ ಕಾರಣವಾಗುತ್ತದೆ. ಆಪ್ತರಿಂದ ಸಹಾಯದ ಕೋರಿಕೆ ಬರಬಹುದು. ಒತ್ತಡದ ಕೆಲಸದಿಂದಾಗಿ ದೈಹಿಕವಾಗಿ ಬಳಲುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (2-09-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ.
ತಿಥಿ: ಅಮವಾಸ್ಯೆ ಅಹೋರಾತ್ರಿ ವಾರ: ಸೋಮವಾರ
ನಕ್ಷತ್ರ: ಮಘಾ 24:19 ಯೋಗ: ಶಿವ 18:18
ಕರಣ: ಚತುಷ್ಪಾದ 18:20 ಅಮೃತಕಾಲ: ರಾತ್ರಿ 09:41ರಿಂದ 11:27
ದಿನದ ವಿಶೇಷ: ಬೆನಕನ ಅಮವಾಸ್ಯೆ, ಅಮಾಸೋಮವಾರ ವ್ರತ

ಸೂರ್ಯೋದಯ : 06:09   ಸೂರ್ಯಾಸ್ತ : 06:30

ರಾಹುಕಾಲ: ಬೆಳಗ್ಗೆ 07:42 ರಿಂದ 09:15
ಗುಳಿಕಕಾಲ: ಮಧ್ಯಾಹ್ನ 01:54 ರಿಂದ 03:28
ಯಮಗಂಡಕಾಲ: ಬೆಳಗ್ಗೆ 10:48 ರಿಂದ 12:21

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಕೆಲವು ನಿರ್ಧಾರಗಳು ಹತಾಶೆ ಮತ್ತು ಮಾನಸಿಕ ಪ್ರಕ್ಷುಬ್ಧತೆಗೆ ಕಾರಣವಾಗುತ್ತದೆ. ಆಪ್ತರಿಂದ ಸಹಾಯದ ಕೋರಿಕೆ ಬರಬಹುದು. ಒತ್ತಡದ ಕೆಲಸದಿಂದಾಗಿ ದೈಹಿಕವಾಗಿ ಬಳಲುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಸದೃಢವಾಗಿ ಇರುವಿದಿ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 1

Horoscope Today

ವೃಷಭ: ಆಂತರಿಕ ಭಯ ನಿಮ್ಮ ಸಂತೋಷವನ್ನು ಹಾಳುಗೆಡವಬಹುದು. ನಕಾರಾತ್ಮಕ ಆಲೋಚನೆಗಳನ್ನು ಮಾಡದಿರಿ, ಆಗ ನಿಮ್ಮ ಹಾಸ್ಯದ ಪ್ರಕೃತಿ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಬೆಳಗಿಸುತ್ತದೆ. ದಿನ ಕೊನೆಯ ಭಾಗದಲ್ಲಿ ಯಾವುದಾದರೂ ಶುಭ ಸುದ್ದಿ ಕೇಳುವ ಸಾಧ್ಯತೆ. ಆರೋಗ್ಯ ಕೊಂಚ ಮಟ್ಟಿಗೆ ಹದಗೆಡುವಲಿದೆ. ಆರ್ಥಿಕವಾಗಿ ಪ್ರಗತಿ ಇರಲಿದೆ. ಅದೃಷ್ಟ ಸಂಖ್ಯೆ: 9

Horoscope Today

ಮಿಥುನ: ಬೇರೆಯವರ ಮಾತನ್ನು ಕೇಳಿಕೊಂಡು ನಿಮ್ಮನ್ನು ಪ್ರೀತಿಯಿಂದ ಕಾಣುವ ವ್ಯಕ್ತಿಗಳನ್ನು ದ್ವೇಷಿಸುವುದು ಬೇಡ. ಇತರರ ಸಮಸ್ಯೆಗಳನ್ನು ಪರಿಹರಿಸಲು ನೀವು ಮಧ್ಯಪ್ರವೇಶ ಮಾಡುವ ಸಾಧ್ಯತೆ ಇದೆ. ದೀಢಿರ್ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಅನಾವಶ್ಯಕ ಖರ್ಚು ಇರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ಕಟಕ: ಅನಿವಾರ್ಯ ಪ್ರಸಂಗಗಳು ನಿಮಗೆ ಕೋಪವನ್ನು ತರಿಸುವ ಸಾಧ್ಯತೆ ಇದೆ, ಭಾವನೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡರೆ ಉತ್ತಮ. ಕಠಿಣ ಪರಿಶ್ರಮ ನಿಮಗೆ ಫಲ ನೀಡಲಿದೆ. ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಆರ್ಥಿಕವಾಗಿ ಲಾಭ ಇರಲಿದೆ. ಉದ್ಯೋಗಿಗದ ಸ್ಥಳದಲ್ಲಿ ಒತ್ತಡ ಇರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ಸಿಂಹ: ನಿಮ್ಮ ಸಭ್ಯ ನಡವಳಿಕೆ ಇತರರಿಂದ ಮೆಚ್ಚುಗೆ ಪಡೆಯುತ್ತದೆ. ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ. ದಿನದ ಆರಂಭದಲ್ಲಿ ಇಂದು ನೀವು ಯಾವುದೇ ಆರ್ಥಿಕ ನಷ್ಟವನ್ನು ಹೊಂದಬಹುದು.ಇದರಿಂದ ನಿಮ್ಮ ಪೂರ್ತಿ ದಿನ ಹದಗೆಡಬಹುದು. ಇತರರಿಗೆ ಪ್ರತಿಫಲಗಳು ತರುವ ನಿಮ್ಮ ಸಾಮರ್ಥ್ಯ ಪ್ರತಿಫಲ ತರುತ್ತದೆ. ಆರೋಗ್ಯ ಪರಿಪೂರ್ಣ.ಉದ್ಯೋಗಿಗಳಿಗೆ ಭರವಸೆ ಅವಕಾಶ ಸಿಗಲಿದೆ.ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 9

Horoscope Today

ಕನ್ಯಾ: ಒತ್ತಡದಿಂದ ವಿಮುಕ್ತಿ ಹೊಂದಿ ವಿರಾಮದ ಸಂತೋಷವನ್ನು ಅನುಭವಿಸಲಿದ್ದೀರಿ. ದೀರ್ಘಕಾಲದ ದೃಷ್ಟಿಕೋನದಿಂದ ಮಾಡಿದ ಹೂಡಿಕೆಯಿಂದ ಲಾಭ ಪಡೆಯುವಿರಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕುಟುಂಬದ ಸಂಪೂರ್ಣ ಸಹಕಾರ ಸಿಗಲಿದೆ. ಉದ್ಯೋಗಿಗಳಿಗೆ ಅದೃಷ್ಟ ಖುಲಾಯಿಸಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ದಿಢೀರ್ ಧನಾಗಮನದಿಂದ ಸಂತೋಷ ಇಮ್ಮಡಿಯಾಗಲಿದೆ. ಅನೇಕ ಸಮಸ್ಯೆಗಳು ಇಂದು ಪರಿಹಾರವಾಗುವುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಬಹಳ ದಿನಗಳಿಂದ ಕಂಡ ಕನಸು ನನಸಾಗಲಿದೆ. ಉದ್ಯೋಗಿಗಳಿಗೆ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ವೃಶ್ಚಿಕ: ಇಂದು ಪ್ರಮುಖ ನಿರ್ಧಾರಗಳಿಂದಾಗಿ ಮಾನಸಿಕವಾಗಿ ನೀವು ಬಳಲುವ ಸಾಧ್ಯತೆ ಇದೆ. ಅನಾವಶ್ಯಕ ಖರ್ಚು ಮಾಡಿ ಕೊರಗುವ ಸಾಧ್ಯತೆ ಇದೆ. ಆದಷ್ಟು ನಿಯಂತ್ರಣದಲ್ಲಿರಿ. ಸಂಗಾತಿಯ ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭಫಲ, ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 2

Horoscope Today

ಧನಸ್ಸು: ಆರೋಗ್ಯದ ಆರೈಕೆ ಇಂದು ಅಗತ್ಯವಿದೆ. ಆಪ್ತರೊಂದಿಗೆ ಸೇರಿಕೊಂಡು ಮಾಡುವ ವ್ಯಾಪಾರ ನಷ್ಟ ತಂದಿತು ಆದಷ್ಟು ಎಚ್ಚರಿಕೆ ಯಿಂದ ಹೆಜ್ಜೆ ಇಡಿ. ನಿಮ್ಮ ಆಂತರಿಕ ಶಕ್ತಿ ದಿನದ ಕೆಲಸವನ್ನು ಉತ್ತಮಗೊಳಿಸುವಲ್ಲಿ ನಿಮ್ಮನ್ನು ಬೆಂಬಲಿಸುತ್ತದೆ. ಉದ್ಯೋಗಿಗಳಿಗೆ ಮಧ್ಯಮ ಫಲ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 8

Horoscope Today

ಮಕರ: ಆಹಾರ ಕ್ರಮದ ವ್ಯತ್ಯಾಸದಿಂದಾಗಿ ಆರೋಗ್ಯದಲ್ಲಿ ಕೊಂಚ ಏರುಪೇರು ಸಾಧ್ಯತೆ, ಆದಷ್ಟು ಆಹಾರ ನಿಯಂತ್ರಣ ಮಾಡಿ. ಅನಿವಾರ್ಯ ಕಾರಣಗಳಿಂದ ಖರ್ಚು ಇರಲಿದೆ. ಕುಟುಂಬದ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಆದಷ್ಟು ಮಾತಿನಲ್ಲಿ ಹಿಡಿತವಿರಲಿ. ದಿಢೀರ್ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 8

Horoscope Today

ಕುಂಭ: ನಿಮ್ಮ ಸಾಧನೆಗೆ ಇಂದು ಪ್ರೋತ್ಸಾಹ ಸಿಗಲಿದೆ. ಅನೇಕ ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲಿವೆ. ವ್ಯಾಪಾರದ ಉದ್ದೇಶಕ್ಕಾಗಿ ಕೈಕೊಂಡ ಪ್ರಯಾಣ ಲಾಭವನ್ನು ತಂದುಕೊಡಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಮಿಶ್ರ ಫಲ, ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 6

Horoscope Today

ಮೀನ: ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆವರಿಸಬಹುದು. ಆದಷ್ಟು ಸಕಾರಾತ್ಮಕವಾಗಿ ಆಲೋಚಿಸಿ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಪ್ರಗತಿ. ನಿಮ್ಮ ಸಹೋದ್ಯೋಗಿಗಳು ನಿಮ್ಮನ್ನು ಟೀಕಿಸುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4.

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಸ್ಯಾಂಡಲ್ ವುಡ್

Actor Upendra : ಕೂಲಿ ಚಿತ್ರದಲ್ಲಿ ಸೂಪರ್‌ ಸ್ಟಾರ್‌ ತಲೈವಾ ಜತೆಗೆ ರಿಯಲ್ ಸ್ಟಾರ್; ಕಲೀಷ ಪಾತ್ರದಲ್ಲಿ ಮಿಂಚಲಿರುವ ಉಪೇಂದ್ರ

Actor Upendra : ಸೂಪರ್‌ ಸ್ಟಾರ್‌ ತಲೈವಾ ರಜಿನಿಕಾಂತ್‌ ಜತೆಗೆ ರಿಯಲ್ ಸ್ಟಾರ್ ಉಪೇಂದ್ರ ಮಿಂಚಲಿದ್ದಾರೆ. ಕೂಲಿ ಚಿತ್ರದಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

VISTARANEWS.COM


on

By

Real Star Upendra Acting with Superstar Rajinikanth Coolie Movie
Koo

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಹೊಸ ಸಿನಿಮಾ ಕೂಲಿಯಲ್ಲಿ ಕನ್ನಡದ ರಿಯಲ್‌ ಸ್ಟಾರ್‌ ಉಪೇಂದ್ರ ಅಭಿನಯಿಸಲಿದ್ದಾರೆ. ಈ ಕುರಿತು ಉಪೇಂದ್ರ ಅವರು ಅಧಿಕೃತ ಪೋಸ್ಟ್ ಹಂಚಿಕೊಂಡಿದ್ದಾರೆ.

Real Star Upendra Acting with Superstar Rajinikanth Coolie Movie
Real Star Upendra Acting with Superstar Rajinikanth Coolie Movie

ಕೂಲಿ ಸಿನಿಮಾವು ತಮಿಳು, ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರಲಿದೆ. ಲೋಕೇಶ್ ಕನಕರಾಜ್‌ ಡೈರೆಕ್ಷನ್‌ನಲ್ಲಿ ಕೂಲಿ ಸಿನಿಮಾ ಮೂಡಿಬರುತ್ತಿದೆ.

Real Star Upendra Acting with Superstar Rajinikanth Coolie Movie
Real Star Upendra Acting with Superstar Rajinikanth Coolie Movie

ತಲೈವಾ ರಜನಿಕಾಂತ್‌ ಅವರ 171ನೇ ಸಿನಿಮಾ ಕೂಲಿ ಆಗಿದೆ. ಜೈಲರ್‌ನಂತಹ ಬ್ಲಾಕ್ ಬಸ್ಟರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಸನ್ ಪಿಕ್ಚರ್ಸ್ ಕೂಲಿಯನ್ನು ನಿರ್ಮಿಸಲಿದೆ.

Real Star Upendra Acting with Superstar Rajinikanth Coolie Movie
Real Star Upendra Acting with Superstar Rajinikanth Coolie Movie

ರಜನಿಕಾಂತ್‌ ಮತ್ತು ಲೋಕೇಶ್ ಕನಕರಾಜ್‌ ಕಾಂಬಿನೇಷನ್‌ನ ‘ಕೂಲಿ’ ಸಿನಿಮಾದಲ್ಲಿ ಕನ್ನಡದ ಸೂಪರ್‌ ಸ್ಟಾರ್‌ ಉಪೇಂದ್ರ ನಟಿಸಲಿದ್ದಾರೆ.

ಈ ಕುರಿತು ಉಪೇಂದ್ರ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಕೂಲಿ ಸಿನಿಮಾದ ಪೋಸ್ಟರ್‌ ಹಾಕಿ ತಿಳಿಸಿದ್ದಾರೆ. ತಲೈವಾ ರಜಿನಿಕಾಂತ್‌ ನಟನೆಯ ಕೂಲಿ ಚಿತ್ರದಲ್ಲಿ ಉಪೇಂದ್ರ ಕಲೀಷ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.

Real Star Upendra Acting with Superstar Rajinikanth Coolie Movie
Real Star Upendra Acting with Superstar Rajinikanth Coolie Movie

ನಿಮ್ಮ ಆಶೀರ್ವಾದದಿಂದ ನನ್ನ ಗುರು ನನ್ನ ಸೂಪರ್‌ ಸ್ಟಾರ್‌ ರಜಿನಿ ಸರ್‌ ಜತೆಗೆ ಕೂಲಿ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ. ಫೀಲಿಂಗ್‌‌ ಬ್ಲೆಸ್ಡ್ ಅಂತ ಲೋಕೇಶ್‌ ಕನಕರಾಜ್‌ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

Continue Reading
Advertisement
Kiccha Sudeep Call Boss To Only Two Persons
ಸಿನಿಮಾ16 mins ago

Kiccha Sudeepa: ನನ್ನ ಫ್ಯಾನ್ಸ್ ಒಳ್ಳೆಯವರು ಅದಕ್ಕೆ ನಾನು ಒಳ್ಳೆಯವನು- ದರ್ಶನ್ ಫ್ಯಾನ್ಸ್‌ಗೆ ಟಾಂಗ್

kichcha sudeepa
ಸಿನಿಮಾ1 hour ago

Kichcha Sudeepa: “ಮ್ಯಾಕ್ಸಿಮಮ್ ಮಾಸ್” ಆಟ ಆರಂಭ; ಕಿಚ್ಚನ ಹುಟ್ಟುಹಬ್ಬಕ್ಕೆ “ಮ್ಯಾಕ್ಸ್” ಚಿತ್ರದ ಮೊದಲ ಗೀತೆ ಬಿಡುಗಡೆ

Lakshmi Hebbalkar
ಬೆಂಗಳೂರು1 hour ago

Lakshmi Hebbalkar: ಗೃಹಲಕ್ಷ್ಮೀಯರೇ ರೀಲ್ಸ್ ಮಾಡಿ, ಬಹುಮಾನ ಗೆಲ್ಲಿ; ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Govt approves KPSC re-examination Officials suspended for dereliction of duty
ಪ್ರಮುಖ ಸುದ್ದಿ2 hours ago

KPSC Exam 2024 : ಕೆಪಿಎಸ್‌ಸಿ ಮರುಪರೀಕ್ಷೆಗೆ ಸರ್ಕಾರ ಅಸ್ತು; ಕರ್ತವ್ಯ ಲೋಪವೆಸಗಿದ ಅಧಿಕಾರಿಗಳು ಅಮಾನತು

Gram Panchayat member drowns in river while fishing
ಉತ್ತರ ಕನ್ನಡ2 hours ago

Accident Case : ಮೀನು ಹಿಡಿಯಲು ಹೋದ ಗ್ರಾ.ಪಂ ಸದಸ್ಯ ನದಿಯಲ್ಲಿ ಮುಳುಗಿ ಸಾವು

Yoga guru arrested in Chikmagalur
ಚಿಕ್ಕಮಗಳೂರು3 hours ago

Physical Abuse : ಅತ್ಯಾಚಾರ ಆರೋಪ ವಿದೇಶಿ ಮಹಿಳೆಯಿಂದ ದೂರು; ಚಿಕ್ಕಮಗಳೂರಿನಲ್ಲಿ ಯೋಗ ಗುರು ಬಂಧನ

Physical Abuse
ಶಿವಮೊಗ್ಗ3 hours ago

Physical Abuse : ಅರ್ಥವಾಗದ ಪಾಠವನ್ನು ಹೇಳಿಕೊಡುವುದಾಗಿ ವಿದ್ಯಾರ್ಥಿನಿಯನ್ನು ಕರೆಸಿ ಅತ್ಯಾಚಾರವೆಸಗಿದ ಉಪನ್ಯಾಸಕ

Three arrested for smuggling gold in rectum
ಬೆಂಗಳೂರು ಗ್ರಾಮಾಂತರ4 hours ago

Gold Smuggling: ಗುದದ್ವಾರದಲ್ಲಿತ್ತು ಕೋಟಿ ಮೌಲ್ಯದ ಚಿನ್ನ; ಶ್ರೀಲಂಕಾದಿಂದ ಬಂದವರು ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಲಾಕ್‌

Several injured as tree falls on them in Bengaluru
ಬೆಂಗಳೂರು4 hours ago

Bengaluru News : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್‌ ಮರ; ಆಸ್ಪತ್ರೆ ಪಾಲಾದ ಅಣ್ಣ-ತಂಗಿ

Rain alert
ಕಲಬುರಗಿ6 hours ago

Rain Alert : ಕಲಬುರಗಿಯಲ್ಲಿ ಭಾರಿ ಮಳೆ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ; ಮನೆ ಗೋಡೆ ಕುಸಿದು ಬಿದ್ದು ವೃದ್ಧೆ ಸಾವು

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್2 days ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್4 days ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 week ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌