Padma Awards 2023: ಲಕ್ಷಾಂತರ ಮಂದಿಯ ಜೀವ ಉಳಿಸಿದ ಡಾ. ದಿಲೀಪ್‌ ಮಹಲ್‌ ನಬೀಸ್‌ಗೆ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ - Vistara News

Latest

Padma Awards 2023: ಲಕ್ಷಾಂತರ ಮಂದಿಯ ಜೀವ ಉಳಿಸಿದ ಡಾ. ದಿಲೀಪ್‌ ಮಹಲ್‌ ನಬೀಸ್‌ಗೆ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ

ವಿಶ್ವಾದ್ಯಂತ ಲಕ್ಷಾಂತರ ಜೀವಗಳನ್ನು ಕಾಪಾಡಿದ್ದ ಖ್ಯಾತ ವೈದ್ಯ ಡಾ. ದಿಲೀಪ್‌ ಮಹಲ್‌ ನಬೀಸ್‌ ಅವರಿಗೆ ಕೇಂದ್ರ ಸರಕಾರ 2023ರ ಸಾಲಿನ ಮರಣೋತ್ತರ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದೆ.

VISTARANEWS.COM


on

Dilip Mahalanabis
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಅತಿಸಾರ ಅಥವಾ ಇತರೆ ಯಾವುದೇ ಕಾರಣದಿಂದ ದೇಹ ನಿರ್ಜಲೀಕರಣಗೊಂಡಾಗ ನೀಡುವ ಓಆರ್‌ಎಸ್‌ (ORS) (ಓರಲ್‌ ರೀಹೈಡ್ರೇಷನ್‌ ಸೊಲ್ಯೂಷನ್‌) (Oral Rehydration Solution) ಚಿಕಿತ್ಸೆ ಸಂಶೋಧಿಸುವ ಮೂಲಕ ವಿಶ್ವಾದ್ಯಂತ ಲಕ್ಷಾಂತರ ಜೀವಗಳನ್ನು ಕಾಪಾಡಿದ್ದ ಖ್ಯಾತ ವೈದ್ಯ ಡಾ. ದಿಲೀಪ್‌ ಮಹಲ್‌ ನಬೀಸ್‌(dr. dilip mahalanabis) ಅವರಿಗೆ ಕೇಂದ್ರ ಸರಕಾರ 2023ರ ಸಾಲಿನ ಮರಣೋತ್ತರವಾಗಿ ಪದ್ಮ ವಿಭೂಷಣ ಪ್ರಶಸ್ತಿ(padma awards 2023) ನೀಡಿ ಗೌರವಿಸಿದೆ.

ಪ್ರತಿಷ್ಠಿತ ರಾಯಲ್‌ ಸ್ವೀಡಿಷ್‌ ಅಕಾಡೆಮಿ ಆಫ್‌ ಸೈನ್ಸಸ್‌ನ ಸದಸ್ಯರೂ ಆಗಿದ್ದ ಡಾ. ದಿಲೀಪ್‌ ಅವರು 1971ರಲ್ಲಿ ಸಂಶೋಧಿಸಿದ ಒಆರ್‌ಎಸ್‌ ಥೆರಪಿ, ವೈದ್ಯಕೀಯ ಕ್ಷೇತ್ರದಲ್ಲಿ 20ನೇ ಶತಮಾನದ ಅತ್ಯಂತ ಮಹತ್ವದ ಸಂಶೋಧನೆ ಎಂದು ಲ್ಯಾನ್ಸೆಟ್‌ ತನ್ನ ವರದಿಯಲ್ಲಿ ತಿಳಿಸಿತ್ತು. ಈ ವೈದ್ಯರಿಗೆ ಭಾರತ ಸರ್ಕಾರ ಇದುವರೆಗೆ ಯಾವುದೇ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿರಲಿಲ್ಲ. ಇದೀಗ ಕೇಂದ್ರ ಸರಕಾರ 2023ರ ಸಾಲಿನಲ್ಲಿ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

1971ರಲ್ಲಿ ಬಾಂಗ್ಲಾದೇಶದ ವಿಮೋಚನಾ ಯುದ್ಧ ಆರಂಭವಾದಾಗ ಲಕ್ಷಾಂತರ ನಿರಾಶ್ರಿತರು ಪಶ್ಚಿಮ ಬಂಗಾಳದ ಶಿಬಿರಗಳಲ್ಲಿ ಆಶ್ರಯ ಪಡೆದರು. ಈ ವೇಳೆ ಶುಚಿತ್ವದ ಹಾಗೂ ಶುದ್ಧ ಕುಡಿಯುವ ನೀರಿನ ತೊಂದರೆಯಿಂದಾಗಿ ಕಾಲರಾ, ಅತಿಸಾರದಿಂದ ತೀವ್ರವಾಗಿ ರೋಗ ಹರಡಲು ಆರಂಭವಾಯಿತು. ಸೋಂಕಿಗೆ ಬಹಳಷ್ಟು ಮಕ್ಕಳು ಬಲಿಯಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಡಾ. ಮಹಲ್‌ ನಬೀಸ್‌ ಮೌಖಿಕ ಪುನರ್ಜಲೀಕರಣ ಚಿಕಿತ್ಸೆ (Oral Rehydration Therapy) (ಒಆರ್‌ಟಿ) (ORT) ಕಂಡುಹಿಡಿದಿದ್ದರು.

1980ರಿಂದ 1990ರ ದಶಕದಲ್ಲಿ ಮಹಲ್‌ ನಬೀಸ್‌ ಅವರು ಜಿನೇವಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಅತಿಸಾರ ನಿಯಂತ್ರಣ ಕಾರ್ಯಕ್ರಮದ ವೈದ್ಯಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.

ಇದನ್ನೂ ಓದಿ | Padma Awards 2023: ಕರ್ನಾಟಕದ ರಾಣಿ ಮಾಚಯ್ಯ, ಮುನಿ ವೆಂಕಟಪ್ಪ ಸೇರಿ ಹಲವರಿಗೆ ಪದ್ಮ ಪ್ರಶಸ್ತಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Canne Film Festival 2024: ಕಾನ್‌ ಫಿಲ್ಮ್ ಫೆಸ್ಟಿವಲ್‌ನ ರೆಡ್‌ ಕಾರ್ಪೆಟ್‌ನಲ್ಲಿ ತಾರೆಯರ ಫ್ಯಾಷನ್ ಕಲರವ!

ಕಾನ್‌ ಫಿಲ್ಮ್ ಫೆಸ್ಟಿವಲ್‌ನ 3ನೇ ದಿನದಂದು (Canne Film Festival 2024) ಬಾಲಿವುಡ್ ನಟಿ ಅಥಿಯಾ ಶೆಟ್ಟಿಯ ಶಿಮ್ಮರ್ ಜಂಪ್‌ಸೂಟ್‌ನಲ್ಲಿ ಶೋಭಿತಾ ಕಾಣಿಸಿಕೊಂಡರೆ; ಊರ್ವಶಿ ರೌತೆಲಾ ಆಕರ್ಷಕ ರೆಡ್ ಗೌನ್‌ನಲ್ಲಿ ಕಣ್ಮನ ಸೆಳೆದರು. ಇನ್ನುಳಿದವರು ಹೇಗೆಲ್ಲಾ ಕಂಡರು? ಇದಕ್ಕಾಗಿ ಹೇಗೆಲ್ಲಾ ಸಿದ್ಧಗೊಂಡಿರುತ್ತಾರೆ ಎಂಬುದರ ಬಗ್ಗೆ ಫ್ಯಾಷನ್ ವಿಮರ್ಶಕರು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Canne Film Festival 2024
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಾನ್‌ ಫಿಲ್ಮ್ ಫೆಸ್ಟಿವಲ್ 2024ರ ರೆಡ್‌ ಕಾರ್ಪೆಟ್‌ (Canne Film Festival 2024) ಮೇಲೆ ಒಂದೊಂದು ದಿನವೂ ಒಂದೊಂದು ಬಗೆಯ ವಿಶೇಷವಾದ ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್ ನಟಿಯರು ಹಾಗೂ ಸೆಲೆಬ್ರೆಟಿಗಳು 3ನೇ ದಿನವೂ ಕೂಡ ಆಫ್ ಶೋಲ್ಡರ್ ಡಿಸೈನರ್‌ವೇರ್‌ಗಳಿಗೆ ಪ್ರಾಮುಖ್ಯತೆ ನೀಡಿದ್ದರು. ಅಂದಹಾಗೆ, ಬಾಲಿವುಡ್ ನಟಿ ಶೋಭಿತಾ, ಕಳೆದ ಬಾರಿ ನಟಿ ಅಥಿಯಾ ಶೆಟ್ಟಿ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಡಿಸೈನರ್ ನಮ್ರತಾ ವಿನ್ಯಾಸಗೊಳಿಸಿ, ಧರಿಸಿದ್ದ ಶಿಮ್ಮರ್ ಪರ್ಪಲ್ ಜಂಪ್‌ಸೂಟ್‌ನಲ್ಲಿ ಕಾಣಿಸಿಕೊಂಡರು. ಹಳೆಯ ಡಿಸೈನ್ ಮತ್ತೊಮ್ಮೆ ರಿಪೀಟ್ ಮಾಡಿದರು.

ಊರ್ವಶಿ ರೌತೆಲಾ ಆಕರ್ಷಕ ರೆಡ್ ಗೌನ್: ಇನ್ನು ಬಾಲಿವುಡ್ ನಟಿ ಊರ್ವಶಿ ರೌತೆಲಾ, ತುನೇಸಿಯನ್ ಡಿಸೈನರ್‌ನ ಆಫ್ ಶೋಲ್ಡರ್ ಕೇಪ್ ಶೈಲಿಯ ಬಲೂನ್ ಸ್ಲೀವ್‌ನ ಆಕರ್ಷಕ ರೆಡ್ ಗೌನ್‌ನಲ್ಲಿ ಯೂರೋಪಿಯನ್ ಕ್ವೀನ್ ಲುಕ್‌ ಮೂಲಕ ಕಣ್ಮನ ಸೆಳೆದರು.

ಇದನ್ನೂ ಓದಿ: Kanguva Film: 10,000 ಜನರನ್ನು ಒಳಗೊಂಡಿತ್ತು ʻಕಂಗುವʼ ಚಿತ್ರದ ಸೂರ್ಯ-ಬಾಬಿ ಡಿಯೋಲ್‌ರ ಈ ದೃಶ್ಯ!

ದೀಪ್ತಿ – ನಮಿತಾ ತಾಪರ್ ಡಿಸೈನರ್‌ವೇರ್ಸ್: ಇನ್ನು, ದೀಪ್ತಿ ಯೆಲ್ಲೋ & ಗೋಲ್ಡ್ ಫಿಶ್ಟೇಲ್ ರಫಲ್ ಗೌನ್‌ನಲ್ಲಿ ಕಾಣಿಸಿಕೊಂಡರೆ, ನಮಿತಾ ರಾಯಲ್ ಬ್ಲ್ಯೂ ಸ್ಯಾಟೀನ್ ಗೌನ್‌ನಲ್ಲಿ ಪೋಸ್ ನೀಡಿದರು.

ಸೆಲೆಬ್ರೆಟಿಗಳ ರೆಡ್‌ಕಾರ್ಪೆಟ್‌ ಸ್ಟೈಲಿಂಗ್ ಬದಲಾವಣೆ: ಮೊದಲ ದಿನ ಬಹುತೇಕ ಸೆಲೆಬ್ರೆಟಿಗಳು ತಮ್ಮ ಡಿಸೈನರ್‌ವೇರ್‌ಗಳು ಎಕ್ಸ್ಕ್ಲೂಸಿವ್ ಡಿಸೈನ್ ಹೊಂದಿವೆ ಎಂದು ಭಾವಿಸಿಯೇ ರೆಡ್ ಕಾರ್ಪೆಟ್‌ ಮೇಲೆ ವಾಕ್ ಮಾಡಿದರೆ, ತದನಂತರ ಕೊಂಚ ಜಾಗರೂಕರಾಗಿ ಸ್ಟೈಲಿಂಗ್‌ನಲ್ಲಿ ಬದಲಾವಣೆ ತಂದಿರುವುದು ಕಂಡು ಬಂದಿತು.

ಡಿಸೈನರ್‌ವೇರ್‌ ಬದಲಿಸಲಾಗದು!

ಹಾಗೆಂದು ಇದ್ದಕ್ಕಿದ್ದಂತೆ ಯಾವ ಸೆಲೆಬ್ರೆಟಿಗೂ ಕೂಡ ಡಿಸೈನರ್ವೇರ್ ಮತ್ತೊಬ್ಬರ ದಿರಸಿನಂತೆ ಇದೆ ಎಂದು ಅರಿವಾದಾಕ್ಷಣ ಬದಲಿಸಲು ಆಗುವುದಿಲ್ಲ! ಯಾಕೆಂದರೇ, ಅವರು ಧರಿಸುವ ಒಂದೊಂದು ಉಡುಪು ಲಕ್ಷಗಟ್ಟಲೆ ರೂ. ಬೆಲೆ ಬಾಳುತ್ತವೆ. ಅಲ್ಲದೇ, ತಿಂಗಳಾನುಗಟ್ಟಲೇ ಮೊದಲೇ ಯಾವುದನ್ನು ಧರಿಸಬೇಕೆಂಬುದು ನಿರ್ಧರಿತವಾಗಿರುತ್ತದೆ. ಇದಕ್ಕಾಗಿ ಸ್ಟಾರ್ಗಳ ಡಿಸೈನರ್‌ಗಳು ಕೂಡ ತಿಂಗಳಾನುಗಟ್ಟಲೇ ಹೋಮ್‌ ವರ್ಕ್‌ ಮಾಡಿರುತ್ತಾರೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ವಿಶೇಷ ದಿರಸನ್ನು ಸಿದ್ಧಪಡಿಸಲು ಸಾಕಷ್ಟು ಕಷ್ಟಪಟ್ಟಿರುತ್ತಾರೆ. ಕೆಲವು ಯಾರೂ ಧರಿಸದ ಹೊಸ ಡಿಸೈನರ್‌ಗಳಾಗಿ ಹಿಟ್ ಲಿಸ್ಟ್‌ಗೆ ಸೇರಿದರೇ, ಮತ್ತೆ ಕೆಲವು ಸೇಮ್ ಟು ಸೇಮ್ ಅಥವಾ ಕಾಪಿಕ್ಯಾಟ್ ಆಗಿ ನಗೆಪಾಟಲೀಗಿಡಾಗುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟಾ ರಾಕ್.

(ಲೇಖಕಿ ಫ್ಯಾಷನ್ ಪತ್ರಕರ್ತೆ)

Continue Reading

ಕಲೆ/ಸಾಹಿತ್ಯ

Konkani Book Release: ಇಟಾಲಿಯನ್-ಬ್ರಿಟಿಷ್ ಲೇಖಕ ರಚಿಸಿರುವ ಜಿಎಸ್‌ಬಿ ಕೊಂಕಣಿ ಮಾರ್ಗದರ್ಶಿ ಕೃತಿ ಬಿಡುಗಡೆ

ಸಂಸ್ಕೃತಿಗಳ ಗಮನಾರ್ಹ ಸಮ್ಮಿಲನದ ಕುರಿತಾಗಿ ಇಟಾಲಿಯನ್- ಬ್ರಿಟಿಷ್ ಪ್ರಜೆ ಗಿನೋ ಡಿ ಕ್ಲೆಮೆಂಟೆ ಅವರು ಸಂಪಾದಿಸಿ ಬರೆದಿರುವ ಕೃತಿಯನ್ನು ಕೇರಳದ ಎರ್ನಾಕುಲಂನಲ್ಲಿರುವ ಕಾಶಿ ಮಠದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು (Konkani Book Release ) ಬಿಡುಗಡೆಗೊಳಿಸಿದರು. ಕರಾವಳಿಯಲ್ಲಿ ಕೊಂಕಣಿ ಮಾತನಾಡುವ ಜಿಎಸ್‌ಬಿ ಸಮುದಾಯದವರು ಸಾಕಷ್ಟು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಇದೊಂದು ಅಪೂರ್ವ ಕೃತಿಯಾಗಿದೆ.

VISTARANEWS.COM


on

By

Konkani Book Release
Koo

ಮಂಗಳೂರು: ಇಟಾಲಿಯನ್- ಬ್ರಿಟಿಷ್ ಲೇಖಕ (Italian-born British citizen) ಗಿನೋ ಡಿ’ಕ್ಲೆಮೆಂಟೆ ಅವರು ಸಂಪಾದಿಸಿದ ಕೃತಿ ”ಜಿಎಸ್‌ಬಿ ಕೊಂಕಣಿ ಮಾರ್ಗದರ್ಶಿ’ ಕೃತಿಯನ್ನು (Konkani Book Release) ಕೇರಳದ (kerala) ಎರ್ನಾಕುಲಂನಲ್ಲಿರುವ (Ernakulam) ಕಾಶಿ ಮಠದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು (Samyameendra Thirtha Swamiji ) ಬಿಡುಗಡೆಗೊಳಿಸಿದರು.

ಸಂಸ್ಕೃತಿಗಳ ಗಮನಾರ್ಹ ಸಮ್ಮಿಲನದ ಕುರಿತಾಗಿ ಇಟಾಲಿಯನ್-ಬ್ರಿಟಿಷ್ ಪ್ರಜೆ ಗಿನೋ ಡಿ ಕ್ಲೆಮೆಂಟೆ ಅವರು ಸಂಪಾದಿಸಿ ಬರೆದಿರುವ ಸಂವಾದಾತ್ಮಕ ಜಿಎಸ್‌ಬಿ (ಗೌಡ ಸಾರಸ್ವತ ಬ್ರಾಹ್ಮಣ) ಕೊಂಕಣಿ ಕೃತಿಯನ್ನು ಆಳವಾಗಿ ಅಧ್ಯಯನ ನಡೆಸಿ ರಚಿಸಿದ್ದಾರೆ.

ಕೇರಳದ ಎರ್ನಾಕುಲಂನಲ್ಲಿರುವ ಕಾಶಿ ಮಠದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಪ್ರತಿಷ್ಠಿತ ದಿಗ್ವಿಜಯ್ ಮಹೋತ್ಸವದಲ್ಲಿ ಅನಾವರಣಗೊಂಡ ಈ ಮಾರ್ಗದರ್ಶಿ ಕೃತಿ ಶ್ರೀಮಂತ ಭಾರತೀಯ ಭಾಷೆಯ ಸಂರಕ್ಷಣೆ ಮತ್ತು ಪ್ರಚಾರದಲ್ಲಿ ಮಹತ್ವದ ಮೈಲುಗಲ್ಲನ್ನು ಗುರುತಿಸುತ್ತದೆ.


Gino’s Guide for Conversational GSB Konkani ಕೃತಿಯು ಜಿ ಎಸ್ ಬಿ ಸಮುದಾಯದ ಪರಂಪರೆಯನ್ನು ಪೋಷಿಸುವ ಸಮರ್ಪಿತ ಸಂಸ್ಥೆಯಾದ ಜಿಎಸ್ ಬಿ ವರ್ಲ್ಡ್‌ವೈಡ್‌ನ ಯುವಜನರಿಂದ ಸುಗಮಗೊಳಿಸಲ್ಪಟ್ಟ ಅಡ್ಡ-ಸಾಂಸ್ಕೃತಿಕ ತಿಳುವಳಿಕೆ ಮತ್ತು ಭಾಷಾ ಸಂರಕ್ಷಣೆಗೆ ಅಸಾಧಾರಣ ಬದ್ಧತೆಯನ್ನು ಪ್ರತಿನಿಧಿಸುತ್ತದೆ.

ಕೃತಿಯ ಕುರಿತು ಮಾತನಾಡಿದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ, ಇದು ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಸಮುದಾಯಗಳ ಮೇಲೆ ಬೀರುವ ಮಹತ್ವದ ಪರಿಣಾಮವನ್ನು ಒತ್ತಿ ಹೇಳುತ್ತದೆ ಎಂದರು.

ಗಿನೋ ಡಿ ಕ್ಲೆಮೆಂಟೆ ಅವರ ಕೆಲಸವು ಸಮರ್ಪಣಾ ಶಕ್ತಿ ಮತ್ತು ಸಾಂಸ್ಕೃತಿಕ ಮೆಚ್ಚುಗೆಗೆ ಸಾಕ್ಷಿಯಾಗಿದೆ. ನಮ್ಮ ಸಮುದಾಯದ ಹೊರಗಿನವರಿಂದ ಅಂತಹ ಆಳವಾದ ತೊಡಗಿಸಿಕೊಳ್ಳುವಿಕೆಯನ್ನು ನೋಡುವುದು ಅಪರೂಪ. ಈ ಮಾರ್ಗದರ್ಶಿ ನಮ್ಮ ಭಾಷಾ ಸಂರಕ್ಷಣೆಯ ಪ್ರಯತ್ನಗಳಲ್ಲಿ ಒಂದು ಸ್ಮಾರಕ ಸಾಧನೆಯಾಗಿದೆ ಎಂದು ಹೇಳಿದರು.

ಮಾರ್ಗದರ್ಶಿಯು ದೈನಂದಿನ ಸಂಭಾಷಣೆಗಳಿಗೆ ಪ್ರಾಯೋಗಿಕ ನುಡಿಗಟ್ಟುಗಳು ಮತ್ತು ಉದಾಹರಣೆಗಳೊಂದಿಗೆ ಉಚ್ಚಾರಣೆ, ವ್ಯಾಕರಣ ಮತ್ತು ಶಬ್ದಕೋಶದ ವಿವರವಾದ ಅವಲೋಕನವನ್ನು ನೀಡುತ್ತದೆ. ಇದು ಆರಂಭಿಕ ಮತ್ತು ಮುಂದುವರಿದ ಕಲಿಯುವವರಿಬ್ಬರನ್ನೂ ಪೂರೈಸುತ್ತದೆ, ಜಿಎಸ್ ಬಿ ಕೊಂಕಣಿಯನ್ನು ಕರಗತ ಮಾಡಿಕೊಳ್ಳಲು ಉತ್ಸುಕರಾಗಿರುವ ಯಾರಿಗಾದರೂ ಇದೊಂದು ಬಹುಮುಖ್ಯ ಸಂಪನ್ಮೂಲವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Narayana Murthy: ಕೃತಕ ಬುದ್ಧಿಮತ್ತೆಯಿಂದ ಉದ್ಯೋಗಗಳಿಗೆ ಕತ್ತರಿ? ನಾರಾಯಣ ಮೂರ್ತಿ ಶಾಕಿಂಗ್‌ ಹೇಳಿಕೆ

ಲೇಖಕರ ಹಿನ್ನೆಲೆ ಏನು?

ಜಿನೋ ಡಿ ಕ್ಲೆಮೆಂಟೆ ಮೂಲತಃ ಇಟಲಿಯವರಾಗಿದ್ದು, ಈಗ ಬ್ರಿಟಿಷ್ ಪ್ರಜೆಯಾಗಿದ್ದಾರೆ. ಮದುವೆಯ ಮೂಲಕ ಜಿ ಎಸ್ ಬಿ ಸಂಸ್ಕೃತಿಗೆ ಆಳವಾದ ವೈಯಕ್ತಿಕ ಸಂಪರ್ಕವನ್ನು ಹೊಂದಿದ್ದಾರೆ. ಅವರ ಸಂಗಾತಿಯು ಕರ್ನಾಟಕದ ಕಾರ್ಕಳ ತಾಲೂಕಿನ ಮೂಲದವರಾಗಿದ್ದಾರೆ. ಈ ಕೌಟುಂಬಿಕ ಬಂಧವು ಜಿನೋ ಅವರ ಜಿಎಸ್‌ಬಿ ಕೊಂಕಣಿಯ ತಲ್ಲೀನಗೊಳಿಸುವ ಅಧ್ಯಯನಕ್ಕೆ ಪ್ರೇರೇಪಿಸಿತು. ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅವರ ಉತ್ಸಾಹವು ಈ ಸಮಗ್ರ ಮಾರ್ಗದರ್ಶಿಯಲ್ಲಿ ಉತ್ತುಂಗಕ್ಕೇರಿತು. ಭಾರತೀಯ ಭಾಷೆಗಳ ದಾಖಲೀಕರಣ ಮತ್ತು ಪ್ರಚಾರಕ್ಕೆ ಮಹತ್ವದ ಕೊಡುಗೆಯನ್ನು ನೀಡಿದೆ.

Continue Reading

ಪ್ರಮುಖ ಸುದ್ದಿ

IPL 2024 : ಆರ್​ಸಿಬಿ ವಿರುದ್ಧ ವೇಗದ ಬೌಲರ್​ ಕಣಕ್ಕೆ; ಚೆನ್ನೈ ತಂಡದಲ್ಲಿ ಸಂಭ್ರಮ

IPL 2024: ದೀಪಕ್ ಚಾಹರ್ ಸದಾ ಗಾಯದಿಂದ ಬಳಲುತ್ತಿರುವ ಬೌಲರ್ ಎನಿಸಿಕೊಂಡಿದ್ದಾರೆ. ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ಹಲವಾರು ಗಾಯಗಳನ್ನು ಅನುಭವಿಸಿದ್ದಾರೆ. ಗಾಯದಿಂದ ಚೇತರಿಸಿಕೊಂಡ ನಂತರ ಅವರು ಐಪಿಎಲ್ 2024 ಗೆ ಬಂದಿದ್ದರು ಆದರೆ ಸಿಎಸ್​ಕೆ ಪರ 8 ಪಂದ್ಯಗಳನ್ನು ಆಡಿದ ನಂತರ ಅವರು ಹೊಸ ಹೊಡೆತವನ್ನು ತಿಂದರು. ಅವರ ಅನುಪಸ್ಥಿತಿಯು ತಂಡದಲ್ಲಿ ದೊಡ್ಡ ಸಮಸ್ಯೆ ಉಂಟುಮಾಡಿತ್ತು.

VISTARANEWS.COM


on

IPL 2024
Koo

ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ದೀಪಕ್ ಚಾಹರ್ ಗಾಯದ ಸಮಸ್ಯೆಯಿಂದ ಹೊರಬಂದಿದ್ದು, ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ. ಐಪಿಎಲ್ 2024 ರ (IPL 2024) ಕೊನೆಯ ಲೀಗ್ ಪಂದ್ಯದಲ್ಲಿ ಸಿಎಸ್​ಕೆ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಚೆನ್ನೈನಲ್ಲಿ ನಡೆದ ಋತುವಿನ ಆರಂಭಿಕ ಪಂದ್ಯದಲ್ಲಿ ಕೊನೆಯ ಬಾರಿಗೆ ಭೇಟಿಯಾದ ಎರಡು ದಕ್ಷಿಣ ಭಾರತದ ಫ್ರಾಂಚೈಸಿಗಳ ನಡುವಿನ ರಿವರ್ಸ್ ಪಂದ್ಯ ಇದಾಗಿದೆ. ಹಿಂದಿನ ಪಂದ್ಯದಲ್ಲಿ ದೀಪಕ್ ಚಾಹರ್ 37 ರನ್ ನೀಡಿ ಗ್ಲೆನ್ ಮ್ಯಾಕ್ಸ್​ವೆಲ್​ ವಿಕೆಟ್ ಪಡೆದಿದ್ದರು.

ದೀಪಕ್ ಚಾಹರ್ ಸದಾ ಗಾಯದಿಂದ ಬಳಲುತ್ತಿರುವ ಬೌಲರ್ ಎನಿಸಿಕೊಂಡಿದ್ದಾರೆ. ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ಹಲವಾರು ಗಾಯಗಳನ್ನು ಅನುಭವಿಸಿದ್ದಾರೆ. ಗಾಯದಿಂದ ಚೇತರಿಸಿಕೊಂಡ ನಂತರ ಅವರು ಐಪಿಎಲ್ 2024 ಗೆ ಬಂದಿದ್ದರು ಆದರೆ ಸಿಎಸ್​ಕೆ ಪರ 8 ಪಂದ್ಯಗಳನ್ನು ಆಡಿದ ನಂತರ ಅವರು ಹೊಸ ಹೊಡೆತವನ್ನು ತಿಂದರು. ಅವರ ಅನುಪಸ್ಥಿತಿಯು ತಂಡದಲ್ಲಿ ದೊಡ್ಡ ಸಮಸ್ಯೆ ಉಂಟುಮಾಡಿತ್ತು.

ಮೇ 1 ರಂದು ಐಪಿಎಲ್ 2024 ರ 49 ನೇ ಪಂದ್ಯಕ್ಕಾಗಿ ಚೆಪಾಕ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೂಪರ್ ಕಿಂಗ್ಸ್ ತಂಡ ಆತಿಥ್ಯ ನೀಡಿದಾಗ ದೀಪಕ್ ಚಾಹರ್​​ ಪೂರ್ತಿ ಸ್ಪೆಲ್​ ಎಸೆಯಲು ವಿಫಲಗೊಂಡಿದ್ದರು. ಅವರು ಗಾಯದಿಂದಾಗಿ ಪೆವಿಲಿಯನ್​ಗೆ ಮರಳಿದ್ದರು.

163 ರನ್​ಗಳ ಗುರಿ ಬೆನ್ನಟ್ಟಿ ಚೆನ್ನೈ ತಂಡಕ್ಕೆ ಸ್ಯಾಮ್ ಕರ್ರನ್ ಪಡೆ 162 ರನ್ಗಳ ಗುರಿ ನೀಡಿತ್ತು. ಗುರಿ ಕಡಿಮೆ ಇತ್ತು. ಹೀಗಾಗಿ ಬೌಲರ್​ಗಳ ನೆರವು ಅಗತ್ಯವಾಗಿತ್ತು. ಆದಾಗ್ಯೂ, ಪಂದ್ಯದ ಮೊದಲ ಓವರ್​ನಲ್ಲಿ ದೀಪಕ್ ಚಹರ್ ಕೇವಲ 2 ಎಸೆತಗಳನ್ನು ಎಸೆದ ನಂತರ ನೋವಿನಿಂದ ಮೈದಾನದಿಂದ ಹೊರನಡೆದಾಗ ಆತಿಥೇಯರಿಗೆ ದೊಡ್ಡ ಹೊಡೆತ ಸಿಕ್ಕಂತಾಯಿತು.

ಇದನ್ನೂ ಓದಿ: IPL 2024 : ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯದ ವಿಜೇತರು ಯಾರು ಎಂದು ತಿಳಿಸಿದ ಬ್ರಿಯಾನ್ ಲಾರಾ

ದೀಪಕ್ ಚಹರ್ ಮೈದಾನದಿಂದ ನಿರ್ಗಮಿಸಿದ ನಂತರ, ಪಂಜಾಬ್ ಕಿಂಗ್ಸ್ ಅಗ್ರ ಕ್ರಮಾಂಕವು 113 ರನ್ ಗಳಿಸಿದ ನಂತರ ಕ್ರೀಸ್ ನಿಂದ ನಿರ್ಗಮಿಸಿತು. 4 ಮತ್ತು 5ನೇ ಕ್ರಮಾಂಕದ ಬ್ಯಾಟರ್​ಗಳಾದ ಶಶಾಂಕ್ ಸಿಂಗ್ ಮತ್ತು ಸ್ಯಾಮ್ ಕರ್ರನ್ ತಮ್ಮ ಜೊತೆಯಾಟದ ಮೂಲಕ ಪಂಜಾಬ್ ತಂಡವನ್ನು ಗೆಲುವು ಕಂಡಿತು.

ಗಾಯದ ಆತಂಕ

ಪಂದ್ಯದ ನಂತರ, ಸಿಎಸ್ಕೆ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಚಾಹರ್ ಅವರ ಗಾಯದ ಬಗ್ಗೆ ಹೀಗೆ ಹೇಳಿದ್ದರು, ದೀಪಕ್ ಚಹರ್ ಉತ್ತಮವಾಗಿ ಕಾಣುತ್ತಿಲ್ಲ. ಆದ್ದರಿಂದ, ಫಿಸಿಯೋ ಮತ್ತು ವೈದ್ಯರು ನೋಡಿದಾಗ ಹೆಚ್ಚು ಸಕಾರಾತ್ಮಕ ವರದಿಯನ್ನು ನಾನು ಆಶಿಸುತ್ತೇನೆ ಎಂದು ಹೇಳಿದ್ದರು.

ಬೆಂಗಳೂರಿನಲ್ಲಿ ಸಿಎಸ್​ಕೆ ತಂಡದ ಅಭ್ಯಾಸದ ಸಮಯದಲ್ಲಿ, ದೀಪಕ್ ಚಹರ್ ಪೂರ್ಣ ತೀವ್ರತೆಯಲ್ಲಿ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಇದು ವೇಗಿ ಆರ್​ಸಿಬಿ ವಿರುದ್ಧ ಆಡಲು ಫಿಟ್ ಆಗಿದ್ದಾರೆ ಎಂದು ಸೂಚಿಸುತ್ತದೆ. ಅವರು ನೇರವಾಗಿ ಪ್ಲೇಯಿಂಗ್ ಇಲೆವೆನ್​ಗೆ ಬರುತ್ತಾರೆಯೇ ಅಥವಾ ಇಂಪ್ಯಾಕ್ಟ್​ ಪ್ಲೇಯರ್​ ಆಗಿರುತ್ತಾರೆಯೇ ನೋಡಬೇಕಾಗಿದೆ.

Continue Reading

ಮನಿ ಗೈಡ್

Bal Jeevan Bima: ಮಕ್ಕಳ ಹೆಸರಲ್ಲಿ ನಿತ್ಯ 6 ರೂ.ನಂತೆ ಕಟ್ಟಿದರೆ 1 ಲಕ್ಷ ರೂ. ವಿಮೆಯ ರಕ್ಷಣೆ

ಬಾಲ ಜೀವನ್ ವಿಮಾ ಯೋಜನೆಯು ಭಾರತೀಯ ಅಂಚೆ ಕಚೇರಿಯು ಮಕ್ಕಳಿಗಾಗಿ ನೀಡುವ ಜೀವ ವಿಮಾ (Bal Jeevan Bima) ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ, ಪೋಷಕರು ಪೋಸ್ಟ್ ಆಫೀಸ್ ಖಾತೆಯಲ್ಲಿ ದಿನಕ್ಕೆ 6 ರೂ. ನಷ್ಟು ಕಡಿಮೆ ಹಣವನ್ನು ಠೇವಣಿ ಮಾಡಬಹುದು

VISTARANEWS.COM


on

By

Bal Jeevan Bima
Koo

ಮಗುವಿನ ಜನನದ (child birth) ಅನಂತರ ಅನೇಕ ಪೋಷಕರು ತಮ್ಮ ಮಗುವಿನ ಭವಿಷ್ಯಕ್ಕಾಗಿ ವಿವಿಧ ಯೋಜನೆಯಲ್ಲಿ (insurance scheme) ಹೂಡಿಕೆಯನ್ನು ಮಾಡಲು ಪ್ರಾರಂಭಿಸುತ್ತಾರೆ. ಇದಕ್ಕಾಗಿ ಹೂಡಿಕೆಯ (Bal Jeevan Bima) ವಿವಿಧ ಮಾರ್ಗಗಳನ್ನು ಅನ್ವೇಷಿಸುತ್ತಾರೆ. ಹೆಣ್ಣು ಮಕ್ಕಳಿಗಾಗಿ (girl child) ಹಲವು ಉಳಿತಾಯ ಯೋಜನೆಗಳಿವೆ. ಅಂತೆಯೇ ಎಲ್ಲ ಮಕ್ಕಳಿಗೂ ಪ್ರಯೋಜನವಾಗುವ ಕೆಲವು ಯೋಜನೆಗಳಿವೆ. ಅದರಲ್ಲಿ ಅಂಚೆ ಕಚೇರಿಯಲ್ಲಿ ಸಿಗುವ ಬಾಲ ಜೀವನ್ ವಿಮಾ ಯೋಜನೆಯೂ ಒಂದು. ಇದು ಮಕ್ಕಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಜೀವ ವಿಮಾ ಯೋಜನೆಯಾಗಿದೆ.

ಬಾಲ ಜೀವನ್ ವಿಮಾ ಯೋಜನೆಯು ಭಾರತೀಯ ಅಂಚೆ ಕಚೇರಿಯು ಮಕ್ಕಳಿಗಾಗಿ ನೀಡುವ ಜೀವ ವಿಮಾ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ, ಪೋಷಕರು ಪೋಸ್ಟ್ ಆಫೀಸ್ ಖಾತೆಯಲ್ಲಿ ದಿನಕ್ಕೆ 6 ರೂ. ನಷ್ಟು ಕಡಿಮೆ ಹಣವನ್ನು ಠೇವಣಿ ಮಾಡಬಹುದು. ಮಗುವಿನ ಅಕಾಲಿಕ ಅಥವಾ ದುರದೃಷ್ಟಕರ ಮರಣದ ಸಂದರ್ಭದಲ್ಲಿ ನಾಮನಿರ್ದೇಶಿತ ಫಲಾನುಭವಿಗೆ ಒಟ್ಟು 1 ಲಕ್ಷ ರೂ. ಪರಿಹಾರ ವಿಮೆ ದೊರೆಯುವುದು. ಶಿಕ್ಷಣ ಶುಲ್ಕ ಕಟ್ಟುವ ಸಂದರ್ಭದಲ್ಲೂ ಇದು ನೆರವಾಗುತ್ತದೆ. ಪಾಲಿಸಿ ಅವಧಿ ಮುಗಿದ ಬಳಿಕವೂ 1 ಲಕ್ಷ ರೂ. ಸಿಗುತ್ತದೆ. ಪೋಷಕರು ಗರಿಷ್ಠ ಇಬ್ಬರು ಮಕ್ಕಳಿಗೆ ಈ ವಿಮೆ ಮಾಡಿಸಬಹುದು.

ಬಾಲ ಜೀವನ್ ವಿಮಾ ಯೋಜನೆಯು 5ರಿಂದ 20 ವರ್ಷ ವಯಸ್ಸಿನ ಮಕ್ಕಳಿಗೆ ನೀಡಲಾಗುತ್ತದೆ. 20 ವರ್ಷ ವಯಸ್ಸಿನವರೆಗೆ ಇದು ಅವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಈ ಯೋಜನೆಯ ಗಮನಾರ್ಹ ವೈಶಿಷ್ಟ್ಯವೆಂದರೆ ಕೈಗೆಟುಕುವಿಕೆ ದರದಲ್ಲಿ ಇದನ್ನು ಪ್ರಾರಂಭಿಸಬಹುದು. ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕವಾಗಿ ಪ್ರೀಮಿಯಂ ಕಟ್ಟಬಹುದು.

ಏನು ಲಾಭ?

ಪ್ರತಿನಿತ್ಯ 6 ರೂ. ನಂತೆ ಹೂಡಿಕೆ ಮಾಡಿ ಇದನ್ನು ಪ್ರಾರಂಭಿಸಬಹುದು. 20 ವರ್ಷಕ್ಕಿಂತ ಮೊದಲು ವಿಮೆ ಮಾಡಲಾದ ಮಗುವಿನ ಯಾವುದೇ ಕಾರಣದಿಂದ ಮೃತಪಟ್ಟರೆ 1 ಲಕ್ಷ ರೂ. ವರೆಗೆ ವಿಮಾ ರಕ್ಷಣೆಯನ್ನು ಭರವಸೆ ನೀಡುತ್ತದೆ. ಮಗುವು 20 ವರ್ಷಗಳ ವಯಸ್ಸಿನ ಮಿತಿಯನ್ನು ದಾಟಿದ ಅನಂತರವೂ ಈ ಪ್ರಯೋಜನ ಪಡೆಯಬಹುದು. ಅದರ ಅನಂತರ ವಿಮೆ ಪಾವತಿಗೆ ಯಾವುದೇ ನಿಬಂಧನೆ ಇಲ್ಲ.

ಇದು ಮಗುವಿನ ಶಿಕ್ಷಣ ಅಥವಾ ಇತರ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಭರಿಸಲು ಸಹಾಯ ಮಾಡುತ್ತದೆ.

ಮಕ್ಕಳಲ್ಲಿ ಉಳಿತಾಯ ಮತ್ತು ಆರ್ಥಿಕ ಶಿಸ್ತನ್ನು ಉತ್ತೇಜಿಸಲು ಇದು ಸಹಾಯ ಮಾಡುತ್ತದೆ. ಖಾತೆಗೆ ನಿಯಮಿತ ಠೇವಣಿಗಳನ್ನು ಮಾಡುವ ಮೂಲಕ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಉಳಿತಾಯ ಮತ್ತು ಆರ್ಥಿಕ ಯೋಜನೆಗಳ ಮಹತ್ವವನ್ನು ಕಲಿಯುತ್ತಾರೆ.

ಅರ್ಜಿ ಸಲ್ಲಿಸುವುದು ಹೇಗೆ?

ಬಾಲ ಜೀವನ್ ವಿಮಾ ಯೋಜನೆಗೆ ಅರ್ಜಿ ಸಲ್ಲಿಸಲು ಪೋಷಕರು ತಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕಾಗುತ್ತದೆ. ಫಾರ್ಮ್‌ ನಲ್ಲಿ ಹೆಸರು, ವಯಸ್ಸು ಮತ್ತು ವಿಳಾಸದಂತಹ ಮಗುವಿನ ಬಗ್ಗೆ ವಿವರಗಳು ಮತ್ತು ನಾಮನಿರ್ದೇಶಿತ ಫಲಾನುಭವಿಯ ವಿವರಗಳನ್ನು ಸಲ್ಲಿಸಬೇಕು. ಅರ್ಜಿದಾರರು ಗುರುತಿನ ಮತ್ತು ವಿಳಾಸದ ಪುರಾವೆಯನ್ನು ಸಹ ಒದಗಿಸಬೇಕಾಗುತ್ತದೆ.


ನಿಯಮ ಏನಿದೆ?

ಈ ಯೋಜನೆಯು ಪಾಲಿಸಿದಾರರ ಮಕ್ಕಳಿಗೆ ಜೀವ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಪಾಲಿಸಿದಾರರ (ಪೋಷಕರ) ಗರಿಷ್ಠ ಇಬ್ಬರು 5 ರಿಂದ 20 ವರ್ಷದೊಳಗಿನ ಮಕ್ಕಳು ಅರ್ಹರಾಗಿರುತ್ತಾರೆ.
ಗರಿಷ್ಠ ವಿಮಾ ಮೊತ್ತ 1 ಲಕ್ಷ ರೂ. ಅಥವಾ ಪೋಷಕರ ವಿಮಾ ಮೊತ್ತಕ್ಕೆ ಸಮ. ಯಾವುದು ಕಡಿಮೆಯೋ ಅದು. ಪಾಲಿಸಿದಾರರ (ಪೋಷಕರು) 45 ವರ್ಷಕ್ಕಿಂತ ಮೇಲ್ಪಟ್ಟಿರಬಾರದು.
ಪಾಲಿಸಿದಾರರ (ಪೋಷಕರ) ಮರಣದ ಬಳಿಕ ಮಕ್ಕಳ ಪಾಲಿಸಿಗೆ ಯಾವುದೇ ಪ್ರೀಮಿಯಂ ಪಾವತಿಸಬೇಕಾಗಿಲ್ಲ. ಪೂರ್ಣ ವಿಮಾ ಮೊತ್ತ ಮತ್ತು ಸಂಚಿತ ಬೋನಸ್ ಅನ್ನು ಅವಧಿಯ ಪೂರ್ಣಗೊಂಡ ಅನಂತರ ಪಾವತಿಸಲಾಗುತ್ತದೆ
ಮಕ್ಕಳ ಪಾಲಿಸಿಯ ಪಾವತಿಗೆ ಪಾಲಿಸಿದಾರರು (ಪೋಷಕರು) ಜವಾಬ್ದಾರರಾಗಿರುತ್ತಾರೆ. ಯಾವುದೇ ಸಾಲವನ್ನು ಸ್ವೀಕರಿಸಲಾಗುವುದಿಲ್ಲ
5 ವರ್ಷಗಳ ಕಾಲ ನಿರಂತರವಾಗಿ ಪ್ರೀಮಿಯಂ ಪಾವತಿಸಿದರೆ ಅದನ್ನು ಪಾವತಿಸುವ ಸೌಲಭ್ಯವಿದೆ. ಪಾಲಿಸಿಯನ್ನು ಮಧ್ಯೆ ನಿಲ್ಲಿಸುವ ಸೌಲಭ್ಯವಿಲ್ಲ. ಅರ್ಜಿ ಸಲ್ಲಿಸಲು ಮಗುವಿನ ವೈದ್ಯಕೀಯ ಪರೀಕ್ಷೆ ಅಗತ್ಯವಿಲ್ಲ. ಆದರೂ ಮಗು ಆರೋಗ್ಯವಾಗಿರಬೇಕು. ಪ್ರಸ್ತಾಪವನ್ನು ಸ್ವೀಕರಿಸಿದ ದಿನದಿಂದ ರಿಸ್ಕ್ ಕವರ್ ಪ್ರಾರಂಭವಾಗುತ್ತದೆ. ಬೋನಸ್ ದರವು ಪ್ರತಿ ವರ್ಷಕ್ಕೆ 1000 ರೂ. ಗೆ 48 ರೂ. ಆಗಿರುತ್ತದೆ.

ಇದನ್ನೂ ಓದಿ: Money Guide: ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಮುನ್ನ ವಿವಿಧ ಬ್ಯಾಂಕ್‌ಗಳ ಬಡ್ಡಿದರ ಪರಿಶೀಲಿಸಿ

ಯಾರು ಅರ್ಜಿ ಸಲ್ಲಿಸಬಹುದು?

ಬಾಲ ಜೀವನ್ ವಿಮಾ ಯೋಜನೆಯು 5 ರಿಂದ 20 ವರ್ಷದೊಳಗಿನ ಮಕ್ಕಳಿಗಾಗಿ. ಹೀಗಾಗಿ ಅರ್ಜಿ ನೀಡುವ ಸಮಯದಲ್ಲಿ ಮಗುವಿನ ವಯಸ್ಸನ್ನು ಪರಿಗಣಿಸಲಾಗುತ್ತದೆ ಮತ್ತು ಮಗುವಿಗೆ 20 ವರ್ಷ ತುಂಬುವವರೆಗೆ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ.

ಪೋಷಕರು ತಮ್ಮ 10 ವರ್ಷದ ಮಗುವಿಗೆ ಬಾಲ ಜೀವನ್ ವಿಮಾ ಯೋಜನೆಗೆ ಸೇರಿಸಲು ಬಯಸಿದರೆ ಪೋಷಕರು ತಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬಹುದು. ಅರ್ಜಿ ನಮೂನೆಯನ್ನು ಭರ್ತಿ ಮಾಡಿ ದಿನಕ್ಕೆ 6 ರೂ.ಗಳ ಠೇವಣಿಗಳನ್ನು ಮಾಡಲು ಪ್ರಾರಂಭಿಸಬಹುದು.

Continue Reading
Advertisement
Pension and NAREGA money credited to farmers loans CM Siddaramaiah slams bank
ರಾಜಕೀಯ59 seconds ago

CM Siddaramaiah: ಪಿಂಚಣಿ, ನರೇಗಾ ಹಣ ರೈತರ ಸಾಲಕ್ಕೆ ಜಮೆ; ಬ್ಯಾಂಕ್‌ ವಿರುದ್ಧ ಸಿಎಂ ಗರಂ! ಕೂಡಲೇ ನಿಲ್ಲಿಸಲು ಸೂಚನೆ

Canne Film Festival 2024
ಪ್ರಮುಖ ಸುದ್ದಿ4 mins ago

Canne Film Festival 2024: ಕಾನ್‌ ಫಿಲ್ಮ್ ಫೆಸ್ಟಿವಲ್‌ನ ರೆಡ್‌ ಕಾರ್ಪೆಟ್‌ನಲ್ಲಿ ತಾರೆಯರ ಫ್ಯಾಷನ್ ಕಲರವ!

Konkani Book Release
ಕಲೆ/ಸಾಹಿತ್ಯ9 mins ago

Konkani Book Release: ಇಟಾಲಿಯನ್-ಬ್ರಿಟಿಷ್ ಲೇಖಕ ರಚಿಸಿರುವ ಜಿಎಸ್‌ಬಿ ಕೊಂಕಣಿ ಮಾರ್ಗದರ್ಶಿ ಕೃತಿ ಬಿಡುಗಡೆ

MLC Meeting
ರಾಜಕೀಯ17 mins ago

MLC Election: ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣಾ ಪೂರ್ವಸಿದ್ಧತೆ ಸಭೆ; ಬಿಜೆಪಿ ಅಭ್ಯರ್ಥಿ ಅ. ದೇವೇಗೌಡ ಗೆಲುವಿಗೆ ರಣತಂತ್ರ

Arvind Kejriwal
ದೇಶ22 mins ago

Arvind Kejriwal: ಅಬಕಾರಿ ಕೇಸ್‌: ಕೇಜ್ರಿವಾಲ್‌ಗೆ ಬಿಗ್ ಶಾಕ್; ಇ.ಡಿ ಚಾರ್ಜ್‌ಶೀಟ್‌ನಲ್ಲಿ ಇವರೇ ಆರೋಪಿ!

HD Revanna case Hearing in Holenarasipura sexual assault case adjourned to Monday
ಹಾಸನ58 mins ago

HD Revanna Case: ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಕೇಸ್‌ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ; ರೇವಣ್ಣಗೆ ಜೈಲಾ? ಬೇಲಾ?

Kanguva Film Suriya-Bobby Deol's war scene with 10,000 people
ಕಾಲಿವುಡ್1 hour ago

Kanguva Film: 10,000 ಜನರನ್ನು ಒಳಗೊಂಡಿತ್ತು ʻಕಂಗುವʼ ಚಿತ್ರದ ಸೂರ್ಯ-ಬಾಬಿ ಡಿಯೋಲ್‌ರ ಈ ದೃಶ್ಯ!

karnataka weather Forecast
ಮಳೆ1 hour ago

Karnataka Weather : ತುಮಕೂರಲ್ಲಿ ಸಿಡಿಲಿಗೆ ಜಾನುವಾರು ಬಲಿ; ಚಿಕ್ಕಮಗಳೂರಲ್ಲಿ ಮಳೆ ಅವಾಂತರಕ್ಕೆ ಜನ ತತ್ತರ

Narendra Modi
ದೇಶ1 hour ago

ಪಾಕ್‌ ಬಳಿ ಅಣು ಬಾಂಬ್‌ ಇದೆ, ಆದ್ರೆ, ಮೆಂಟೇನ್ ಮಾಡೋಕೂ ಅವರ ಬಳಿ ದುಡ್ಡಿಲ್ಲ ಎಂದ ಮೋದಿ; ಕಾಂಗ್ರೆಸ್‌ಗೆ ಚಾಟಿ

IPL 2024
ಪ್ರಮುಖ ಸುದ್ದಿ1 hour ago

IPL 2024 : ಆರ್​ಸಿಬಿ ವಿರುದ್ಧ ವೇಗದ ಬೌಲರ್​ ಕಣಕ್ಕೆ; ಚೆನ್ನೈ ತಂಡದಲ್ಲಿ ಸಂಭ್ರಮ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ12 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ13 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ1 day ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌