Rakesh Pal: ಭಾರತೀಯ ನೌಕಾಪಡೆಯ ಮಹಾನಿರ್ದೇಶಕ ರಾಕೇಶ್ ಪಾಲ್ ಹೃದಯಾಘಾತದಿಂದ ವಿಧಿವಶ - Vistara News

ಪ್ರಮುಖ ಸುದ್ದಿ

Rakesh Pal: ಭಾರತೀಯ ನೌಕಾಪಡೆಯ ಮಹಾನಿರ್ದೇಶಕ ರಾಕೇಶ್ ಪಾಲ್ ಹೃದಯಾಘಾತದಿಂದ ವಿಧಿವಶ

Rakesh Pal:ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಿನ್ನೆ ಪಾಲ್ ಬಂದಿದ್ದರು. ಈ ವೇಳೆ ಅವರು ಅಸ್ವಸ್ಥರಾಗಿದ್ದರು. ತಕ್ಷಣ ರಾಜೀವ್ ಗಾಂಧಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ರಾಕೇಶ್‌ ಪಾಲ್‌ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

VISTARANEWS.COM


on

Rakesh pal
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚೆನ್ನೈ: ಭಾರತೀಯ ಕೋಸ್ಟ್ ಗಾರ್ಡ್ (ICG) ಮಹಾನಿರ್ದೇಶಕ ರಾಕೇಶ್ ಪಾಲ್(Rakesh Pal) ಅವರು ಹೃದಯಾಘಾತ(Heart attack)ದಿಂದ ಭಾನುವಾರ ಚೆನ್ನೈನಲ್ಲಿ ವಿಧಿವಶರಾಗಿದ್ದಾರೆ. ತೀವ್ರ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ರಾಕೇಶ್‌ ಪಾಲ್‌ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಿನ್ನೆ ಪಾಲ್ ಬಂದಿದ್ದರು. ಈ ವೇಳೆ ಅವರು ಅಸ್ವಸ್ಥರಾಗಿದ್ದರು. ತಕ್ಷಣ ರಾಜೀವ್ ಗಾಂಧಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ರಾಕೇಶ್‌ ಪಾಲ್‌ ಅವರ ಅಕಾಲಿಕ ನಿಧನಕ್ಕೆ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಂಬನಿ ಮಿಡಿದಿದ್ದಾರೆ. ಅವರು ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ‘ರಾಕೇಶ್ ಪಾಲ್ ಅಕಾಲಿಕ ನಿಧನದಿಂದ ತೀವ್ರ ದುಃಖವಾಗಿದೆ. ಸಮರ್ಥ ಮತ್ತು ಬದ್ಧ ಅಧಿಕಾರಿಯಾಗಿದ್ದು, ಅವರ ನಾಯಕತ್ವದಲ್ಲಿ ICG ಭಾರತದ ಕಡಲ ಭದ್ರತೆಯನ್ನು ಬಲಪಡಿಸುವಲ್ಲಿ ದೊಡ್ಡ ದಾಪುಗಾಲುಗಳನ್ನು ಇಡುತ್ತಿತ್ತು. ಮೃತರ ಕುಟುಂಬಕ್ಕೆ ನನ್ನ ಸಂತಾಪಗಳು’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾಮಾಜಿಕ ಜಾಲತಾಣ ‘ ಎಂದಿದ್ದಾರೆ. ಅಲ್ಲದೇ ರಾಕೇಶ್‌ ಪಾಲ್‌ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

ಇನ್ನ ರಾಕೇಶ್‌ ಪಾಲ್‌ ಅವರು ಕಳೆದ ತಿಂಗಳಷ್ಟೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ತಮ್ಮ ವಿಶೇಷ ಸೇವೆ ವಿಶಿಷ್ಟ ಸೇವಾ ಮೆಡಲ್‌ ಪಡೆದಿದ್ದರು.

ಇದನ್ನೂ ಓದಿ: Indian Navy: ನೌಕಾಪಡೆ ಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ಅಬ್ಬಾ.. ಸಾವು ಹೀಗೂ ಬರುತ್ತಾ? ಸ್ನೇಹಿತನೊಂದಿಗೆ ಮಾತಾಡ್ತಾ ನಿಂತಿದ್ದವನ ಮೇಲೆ ದೊಪ್ಪೆಂದು ಬಿದ್ದ ಎಸಿ-ವಿಡಿಯೋ ಇದೆ

Viral Video: ದೆಹಲಿಯ ದೇಶ್ ಬಂಧು ಗುಪ್ತಾ ರಸ್ತೆಯಲ್ಲಿರುವ ಡೋರಿವಾಲಾ ಪ್ರದೇಶದಲ್ಲಿ ನಿನ್ನೆ ಸಂಜೆ 6:40 ರ ಸುಮಾರಿಗೆ ಈ ಘಟನೆ ನಡೆದಿದೆ. ಮೃತ ದುರ್ದೈವಿಯನ್ನು ಇದೇ ಪ್ರದೇಶದ ಜಿತೇಶ್‌ ಎಂದು ಗುರುತಿಸಲಾಗಿದೆ. ಕಿಟಕಿಗೆ ಅಳವಡಿಸಿದ್ದ ಎಸಿ ಜಿತೇಶ್‌ನ ತಲೆಯ ಮೇಲೆ ಬೀಳುತ್ತದೆ. ಎರಡನೇ ಮಹಡಿಯಿಂದ ಎಸಿ ಬಿದ್ದ ರಭಸಕ್ಕೆ ಜಿತೇಶ್‌ ಗಂಭೀರವಾಗಿ ಗಾಯಗೊಂಡು ತಕ್ಷಣವೇ ಕೊನೆಯುಸಿರೆಳೆಯುತ್ತಾನೆ.

VISTARANEWS.COM


on

Viral Video
Koo

ನವದೆಹಲಿ: ಸಾವು ಎಂಬುದು ಕ್ಷಣ ಕ್ಷಣಕ್ಕೂ ನೆರಳಿನಂತೆ ನಮ್ಮ ಹಿಂದೆಯೇ ಇರುತ್ತದೆ. ಯಾವಾಗ ಯಾವ ರೀತಿಯಲ್ಲಾದರೂ, ಯಾವ ರೂಪದಲ್ಲಾದರೂ ಸಾವು ಬರುತ್ತದೆ ಎಂಬುದಕ್ಕೆ ಈ ದುರ್ಘಟನೆಯೇ ನಿದರ್ಶನ. ಸ್ನೇಹಿತನ ಜೊತೆ ಹರಟೆ ಹೊಡೆಯುತ್ತಾ, ಎಂಜಾಯ್‌ ಮಾಡುತ್ತಾ ನಿಂತಿದ್ದ ಯುವಕನಿಗೆ ಯಮಸ್ವರೂಪಿಯಾಗಿ ಬಂದಿದ್ದು ಬೇರೇ ಏನೂ ಅಲ್ಲ ಮೇಲಿನ ಮಹಡಿಯಲ್ಲಿದ್ದ ಏರ್ ಕಂಡಿಷನರ್(AC). ಕೆಳಗೆ ನಿಂತಿದ್ದ ಯುವಕನ ಮೇಲೆ ಎಸಿ ಬಿದ್ದಿದೆ. ಬಿದ್ದ ರಭಸಕ್ಕೆ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆಯುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗುತ್ತಿದೆ.

ಘಟನೆ ವಿವರ:

ದೆಹಲಿಯ ದೇಶ್ ಬಂಧು ಗುಪ್ತಾ ರಸ್ತೆಯಲ್ಲಿರುವ ಡೋರಿವಾಲಾ ಪ್ರದೇಶದಲ್ಲಿ ನಿನ್ನೆ ಸಂಜೆ 6:40 ರ ಸುಮಾರಿಗೆ ಈ ಘಟನೆ ನಡೆದಿದೆ. ಮೃತ ದುರ್ದೈವಿಯನ್ನು ಇದೇ ಪ್ರದೇಶದ ಜಿತೇಶ್‌ ಎಂದು ಗುರುತಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ, 18 ವರ್ಷದ ಜಿತೇಶ್ ತನ್ನ ಸ್ಕೂಟರ್‌ನಲ್ಲಿ ಇನ್ನೊಬ್ಬ ಹುಡುಗ ಪ್ರಾಂಶು ಎಂಬಾತನೊಂದಿಗೆ ಹರಟೆ ಹೊಡೆಯುತ್ತಾ ಬೈಕ್‌ ಮೇಲೆ ಕುಳಿತಿರುವುದನ್ನು ಕಾಣಬಹುದು. ಇಬ್ಬರೂ ಪರಸ್ಪರ ಅಪ್ಪಿಕೊಂಡು ಇನ್ನೇನು ಇಬ್ಬರು ಅಲ್ಲಿಂದ ಹೊರಬೇಕಾಗಿತ್ತು. ಆಗ ಕಿಟಕಿಗೆ ಅಳವಡಿಸಿದ್ದ ಎಸಿ ಜಿತೇಶ್‌ನ ತಲೆಯ ಮೇಲೆ ಬೀಳುತ್ತದೆ. ಎರಡನೇ ಮಹಡಿಯಿಂದ ಎಸಿ ಬಿದ್ದ ರಭಸಕ್ಕೆ ಜಿತೇಶ್‌ ಗಂಭೀರವಾಗಿ ಗಾಯಗೊಂಡು ತಕ್ಷಣವೇ ಕೊನೆಯುಸಿರೆಳೆಯುತ್ತಾನೆ. ಇನ್ನು ಘಟನೆಯಲ್ಲಿ ಪ್ರಾಂಶು ಕೂಡ ಗಾಯಗೊಂಡಿದ್ದಾನೆ. ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿತೇಶ್ ದೆಹಲಿಯ ಡೋರಿವಾಲಾ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ಪ್ರಾಂಶು ಪಟೇಲ್ ನಗರದ ನಿವಾಸಿ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇಂತಹದ್ದೇ ಒಂದು ಘಟನೆ ಥಾಣೆಯಲ್ಲಿ ಕೆಲವು ದಿನಗಳ ಹಿಂದೆ ನಡೆದಿತ್ತು.ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಮೇಲೆ ಐದನೇ ಮಹಡಿಯಿಂದ ನಾಯಿಯೊಂದು ಬಿದ್ದಿದ್ದು ಬಾಲಕಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಥಾಣೆ(Thane)ಯಲ್ಲಿ ನಡೆದಿದೆ. ಮುಂಬ್ರಾದಲ್ಲಿ ಜನನಿಬಿಡ ರಸ್ತೆಯಲ್ಲಿ ತನ್ನ ತಾಯಿಯೊಂದಿಗೆ ನಡೆದುಕೊಂಡು ಬರುತ್ತಿದ್ದ ಮೂರು ವರ್ಷ ಬಾಲಕಿ ಮೇಲೆ ನಾಯಿ ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಕೊನೆಯುಸಿರೆಳೆದಿದ್ದಾಳೆ. ಇನ್ನು ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾ(CCTV Camera)ದಲ್ಲಿ ರೆಕಾರ್ಡ್‌ ಆಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಇದನ್ನೂ ಓದಿ: Viral Video: ಐದನೇ ಮಹಡಿಯಿಂದ ಬಾಲಕಿ ಮೇಲೆ ಬಿದ್ದ ಶ್ವಾನ; ಆಮೇಲೆ ಆಗಿದ್ದೇನು? ವಿಡಿಯೋ ಇದೆ

Continue Reading

ದೇಶ

Viral News: ಒಂಟಿಯಾಗಿದ್ದಾಗ ಮೈ ಮುಟ್ಟೋಕೆ ಬಂದೋನ ಖಾಸಗಿ ಅಂಗಕ್ಕೆ ಸಟ್ಟುಗದಲ್ಲೇ ಚುಚ್ಚಿದ್ಳು!

Viral News: ಪೊಲೀಸರ ಮಾಹಿತಿ ಪ್ರಕಾರ, ಶುಕ್ರವಾರ ಭಿವಂಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅನಿಲ್ ಸತ್ಯನಾರಾಯಣ ರಚ್ಚಾ(30) ಎಂಬಾತ 26 ವರ್ಷದ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇನ್ನು ಮಹಿಳೆ ಮತ್ತು ಈತ ಪರಸ್ಪರ ಪರಿಚಿತರೇ. ಶುಕ್ರವಾರ ಮಧ್ಯಾಹ್ನ 3.30ರ ಸುಮಾರಿಗೆ ರಚ್ಚ ತನ್ನ ಮನೆಗೆ ಬಂದು ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ.

VISTARANEWS.COM


on

Viral Video
Koo

ಮುಂಬೈ: ಮನೆಯಲ್ಲಿ ಒಬ್ಬಂಟಿಯಾಗಿದ್ದ ವೇಳೆ ತನ್ನ ಅಸಭ್ಯವಾಗಿ ವರ್ತಿಸಿದ ಕಿಡಿಗೇಡಿಗೆ ಮಹಿಳೆಯೊಬ್ಬಳು ತಕ್ಕಪಾಠ ಕಲಿಸಿದ್ದಾಳೆ. ಮಹಾರಾಷ್ಟ್ರ(Maharashtra)ದ ಥಾಣೆ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಕಬ್ಬಿಣದ ಸಟ್ಟುಗ(spatula)ದಿಂದಲೇ 30 ವರ್ಷದ ವ್ಯಕ್ತಿಯ ಖಾಸಗಿ ಅಂಗಕ್ಕೆ ಚುಚ್ಚಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ(Viral News).

ಏನಿದು ಘಟನೆ?

ಪೊಲೀಸರ ಮಾಹಿತಿ ಪ್ರಕಾರ, ಶುಕ್ರವಾರ ಭಿವಂಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅನಿಲ್ ಸತ್ಯನಾರಾಯಣ ರಚ್ಚಾ(30) ಎಂಬಾತ 26 ವರ್ಷದ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇನ್ನು ಮಹಿಳೆ ಮತ್ತು ಈತ ಪರಸ್ಪರ ಪರಿಚಿತರೇ. ಶುಕ್ರವಾರ ಮಧ್ಯಾಹ್ನ 3.30ರ ಸುಮಾರಿಗೆ ರಚ್ಚ ತನ್ನ ಮನೆಗೆ ಬಂದು ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ. ಅಲ್ಲದೆ ಆಕೆ ಮೇಲೆ ಹಲ್ಲೆಗೆ ಯತ್ನಿಸಿದ್ದ. ಈ ವೇಳೆ ಮಹಿಳೆ, ತನ್ನನ್ನು ತಾನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ, ಅಡುಗೆಮನೆಗೆ ಓಡಿ ಸಟ್ಟುಗ(ಸೌಟು) ತೆಗೆದುಕೊಂಡಳು. ಅದರಿಂದಲೇ ಅವಳು ರಚ್ಚಾ ಮೇಲೆ ದಾಳಿ ಮಾಡಿ ಅವನ ಜನನಾಂಗಗಳಿಗೆ ಗಾಯಗೊಳಿಸಿದಳು ಎಂದು ತಿಳಿದು ಬಂದಿದೆ.

ಗಂಭೀರವಾಗಿ ಗಾಯಗೊಂಡಿದ್ದ ರಚ್ಚಾನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್‌ ಆತ ಅಪಾಯದಿಂದ ಪಾರಾಗಿದ್ದಾನೆ. ಇನ್ನು ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ರಚ್ಚಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯ, ಲೈಂಗಿಕ ಕಿರುಕುಳ ಮತ್ತು ಅತಿಕ್ರಮಣಕ್ಕೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆರೋಪಿ ಇನ್ನೂ ಆಸ್ಪತ್ರೆಯಲ್ಲಿರುವುದರಿಂದ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ತಿಂಗಳು, ಬಿಹಾರದ ಮಹಿಳೆಯೊಬ್ಬಳು ತನ್ನನ್ನು ಮದುವೆಯಾಗಲು ನಿರಾಕರಿಸಿದ ಕಾರಣ ಸರನ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರ ಖಾಸಗಿ ಅಂಗಗಳನ್ನು ಕತ್ತರಿಸಿ ಹಾಕಿದ್ದಳು. ಈ ಸುದ್ದಿ ಭಾರೀ ವೈರಲ್‌ ಆಗಿತ್ತು. ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಆಕೆಯ ಬಳಿಯಿದ್ದ ರಕ್ತಸಿಕ್ತ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ.

ವಿಚಾರಣೆಯ ನಂತರ, ಆರೋಪಿಯು ತಾನು ಮತ್ತು ಸಂತ್ರಸ್ತೆ ಕಳೆದ ಎರಡು ವರ್ಷಗಳಿಂದ ಸಂಬಂಧ ಹೊಂದಿರುವುದಾಗಿ ಹೇಳಿದ್ದಾನೆ, ಆದರೆ ವ್ಯಕ್ತಿ ಅವಳನ್ನು ಮದುವೆಯಾಗಲು ನಿರಾಕರಿಸಿದನು. ತನ್ನ ಪ್ರಸ್ತಾಪವನ್ನು ನಿರಾಕರಿಸಿದ ನಂತರ ವಾದದ ನಂತರ ಅವಳು ಅವನ ಮೇಲೆ ಹಲ್ಲೆ ನಡೆಸಿದ್ದಾಳೆ. ಮದುವೆಯ ನೆಪದಲ್ಲಿ ತನ್ನನ್ನು ಲೈಂಗಿಕವಾಗಿ ಶೋಷಿಸುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ.

ಇದನ್ನೂ ಓದಿ: Viral News: ‘ಅಸ್ವಾಭಾವಿಕ ಲೈಂಗಿಕಕ್ರಿಯೆ’ಗೆ ಒತ್ತಾಯಿಸುತ್ತಿದ್ದ ಗಂಡನ ಶಿಶ್ನವನ್ನೇ ಬಾಯಿಂದ ಕತ್ತರಿಸಿದ ಹೆಂಡತಿ!

Continue Reading

ದೇಶ

Champai Soren: ನನ್ನ ಎದುರು ಮೂರು ಆಯ್ಕೆಗಳಿವೆ; ಬಿಜೆಪಿ ಸೇರ್ಪಡೆ ಬಗ್ಗೆ ಚಂಪೈ ಸೊರೆನ್‌ ಹೇಳಿದ್ದೇನು? ಇಲ್ಲಿದೆ ಡಿಟೇಲ್ಸ್‌

Champai Soren: ನನಗೆ ಮೂರು ಆಯ್ಕೆಗಳಿವೆ, ಮೊದಲನೆಯದಾಗಿ, ರಾಜಕೀಯದಿಂದ ನಿವೃತ್ತಿ, ಎರಡನೆಯದು, ನನ್ನದೇ ಆದ ಪ್ರತ್ಯೇಕ ಸಂಘಟನೆಯನ್ನು ಸ್ಥಾಪನೆ ಮತ್ತು ಮೂರನೆಯದಾಗಿ, ನಾನು ಈ ಹಾದಿಯಲ್ಲಿ ಮತ್ತೊಬ್ಬ ಜೊತೆಗಾರನನ್ನು ಹುಡುಕಿಕೊಳ್ಳುವುದು(ಪರೋಕ್ಷವಾಗಿ ಬಿಜೆಪಿ ಸೇರ್ಪಡೆ) ಆ ದಿನದಿಂದ ಇಂದಿನವರೆಗೆ ಮತ್ತು ಮುಂಬರುವ ಜಾರ್ಖಂಡ್ ಅಸೆಂಬ್ಲಿ ಚುನಾವಣೆಯವರೆಗೆ, ಈ ಪ್ರಯಾಣದಲ್ಲಿ ನನಗೆ ಎಲ್ಲಾ ಆಯ್ಕೆಗಳು ಮುಕ್ತವಾಗಿವೆ ಎಂದು ಪೋಸ್ಟ್‌ ಮಾಡಿದ್ದಾರೆ.

VISTARANEWS.COM


on

Champai Soren
Koo

ನವದೆಹಲಿ: ಜಾರ್ಖಂಡ್‌ ರಾಜಕೀಯದಲ್ಲಿ (Jharkhand Politics) ಮತ್ತೊಂದು ಮಹತ್ವದ ಬೆಳವಣಿಗೆ ಸಂಭವಿಸಿದ್ದು, ಸ್ವಪಕ್ಷದ ಬಗ್ಗೆ ತೀವ್ರ ಬೇಸರಗೊಂಡು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳು ಬಲವಾಗಿ ಕೇಳುತ್ತಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ, ಜಾರ್ಖಂಡ್‌ ಮುಕ್ತಿ ಮೋರ್ಚಾ (Jharkhand Mukti Morcha-JMM)ದ ಹಿರಿಯ ನಾಯಕ ಚಂಪೈ ಸೊರೆನ್ (Champai Soren) ತಮ್ಮ ಮುಂದಿನ ನಡೆ ಬಗ್ಗೆ ಮಹತ್ವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್‌ವೊಂದನ್ನು ಮಾಡಿರುವ ಚಂಪೈ, ತಮ್ಮ ಮುಂದೆ ಮೂರು ಆಯ್ಕೆಗಳಿವೆ ಎಂದಿದ್ದಾರೆ.

ಭಾರವಾದ ಹೃದಯದಿಂದ, ನಾನು ಅದೇ ಶಾಸಕಾಂಗ ಪಕ್ಷದ ಸಭೆಯಲ್ಲಿ “ಇಂದಿನಿಂದ ನನ್ನ ಜೀವನದ ಹೊಸ ಅಧ್ಯಾಯ ಪ್ರಾರಂಭವಾಗಲಿದೆ ಎಂದು ಹೇಳಿದ್ದೆ. ಇದರಲ್ಲಿ ನನಗೆ ಮೂರು ಆಯ್ಕೆಗಳಿವೆ, ಮೊದಲನೆಯದಾಗಿ, ರಾಜಕೀಯದಿಂದ ನಿವೃತ್ತಿ, ಎರಡನೆಯದು, ನನ್ನದೇ ಆದ ಪ್ರತ್ಯೇಕ ಸಂಘಟನೆಯನ್ನು ಸ್ಥಾಪನೆ ಮತ್ತು ಮೂರನೆಯದಾಗಿ, ನಾನು ಈ ಹಾದಿಯಲ್ಲಿ ಮತ್ತೊಬ್ಬ ಜೊತೆಗಾರನನ್ನು ಹುಡುಕಿಕೊಳ್ಳುವುದು(ಪರೋಕ್ಷವಾಗಿ ಬಿಜೆಪಿ ಸೇರ್ಪಡೆ) ಆ ದಿನದಿಂದ ಇಂದಿನವರೆಗೆ ಮತ್ತು ಮುಂಬರುವ ಜಾರ್ಖಂಡ್ ಅಸೆಂಬ್ಲಿ ಚುನಾವಣೆಯವರೆಗೆ, ಈ ಪ್ರಯಾಣದಲ್ಲಿ ನನಗೆ ಎಲ್ಲಾ ಆಯ್ಕೆಗಳು ಮುಕ್ತವಾಗಿವೆ ಎಂದು ಪೋಸ್ಟ್‌ ಮಾಡಿದ್ದಾರೆ.

ನಾನು ಒಳಗೊಳಗೇ ಒಡೆದು ಚೂರಾಗಿದ್ದೇನೆ. ಏನು ಮಾಡಬೇಕೆಂದು ನನಗೆ ಅರ್ಥವಾಗಲಿಲ್ಲ. ಎರಡು ದಿನಗಳ ಕಾಲ ನಾನು ಶಾಂತವಾಗಿ ಕುಳಿತು ಆತ್ಮಾವಲೋಕನ ಮಾಡಿಕೊಂಡೆ, ಇಡೀ ಘಟನೆಯಲ್ಲಿ ನನ್ನ ತಪ್ಪನ್ನು ಹುಡುಕುತ್ತಲೇ ಇದ್ದೆ. ನನಗೆ ಅಧಿಕಾರದ ದುರಾಸೆ ಸ್ವಲ್ಪವೂ ಇರಲಿಲ್ಲ, ಆದರೆ ನನ್ನ ಸ್ವಾಭಿಮಾನಕ್ಕೆ ಈ ಹೊಡೆತ ಬಿದ್ದಿದೆ. ನನ್ನ ಸ್ವಂತ ಜನರು ಉಂಟುಮಾಡಿದ ನೋವನ್ನು ನಾನು ಎಲ್ಲಿ ವ್ಯಕ್ತಪಡಿಸಬಹುದು?” ಎಂದು ಚಂಪೈ ಸೊರೆನ್ ಪೋಸ್ಟ್‌ನಲ್ಲಿ ಸೇರಿಸಿದ್ದಾರೆ.

ಮುಖ್ಯಮಂತ್ರಿ ಜೈಲಿನಿಂದ ಹೊರಬಂದ ನಂತರ ಶಾಸಕರು ಮತ್ತು ಇತರ ಭಾರತ ಬ್ಲಾಕ್ ನಾಯಕರ ಸಭೆಯ ಕಾರ್ಯಸೂಚಿಯ ಬಗ್ಗೆ ನನಗೆ ತಿಳಿದಿಲ್ಲ ಎಂದು ಅವರು ಹೇಳಿದರು. ಶಾಸಕರ ಸಭೆ ಕರೆಯುವ ಹಕ್ಕು ಮುಖ್ಯಮಂತ್ರಿಗೆ ಇದ್ದರೂ ಸಭೆಯ ಅಜೆಂಡಾವನ್ನೂ ಹೇಳಿಲ್ಲ, ಸಭೆಯ ವೇಳೆ ರಾಜೀನಾಮೆ ನೀಡುವಂತೆ ಹೇಳಿದ್ದು ಅಚ್ಚರಿ ತಂದಿದೆ, ಆದರೆ ದುರಾಸೆ ಇರಲಿಲ್ಲ. ಬೇರೆಯವರ ಅಧಿಕಾರದ ಆಸೆಗಾಗಿ, ನಾನು ತಕ್ಷಣ ರಾಜೀನಾಮೆ ನೀಡಿದ್ದೇನೆ, ಆದರೆ ಇದು ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಚಂಪೈ ಸೊರೆನ್ ಹೇಳಿದ್ದಾರೆ.

ಇದನ್ನೂ ಓದಿ: Champai Soren: ಜಾರ್ಖಂಡ್‌ ರಾಜಕೀಯಲ್ಲಿ ಸಂಚಲನ; ಮಾಜಿ ಸಿಎಂ ಚಂಪೈ ಸೊರೆನ್ ಬಿಜೆಪಿ ಸೇರ್ಪಡೆ?

Continue Reading

ಕರ್ನಾಟಕ

Zika Virus: ಡೆಂಗ್ಯೂ ಮಧ್ಯೆ ಝಿಕಾ ವೈರಸ್‌ ಆತಂಕ; ಸೋಂಕು ತಡೆಗೆ ಮಾರ್ಗಸೂಚಿ ಪ್ರಕಟ

Zika Virus Case: ಡೆಂಗ್ಯೂ, ಚಿಕನ್ ಗುನ್ಯಾ ಹಾಗೂ ಝಿಕಾ ವೈರಸ್ ಸೋಂಕು ಹರಡುವಿಕೆ ನಿಯಂತ್ರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಝಿಕಾ ವೈರಸ್ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದರಿಂದ, ಡೆಂಗ್ಯೂ ಜ್ವರದ ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ಹಾಗೂ ನಿರ್ವಹಣೆ ಮಾಡಲಾಗುತ್ತದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚಿಸಿದೆ.

VISTARANEWS.COM


on

Zika Virus Case
Koo

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಜ್ವರ ಪ್ರಕರಣಗಳ ಏರಿಕೆಯೊಂದಿಗೆ, ಝಿಕಾ ವೈರಸ್ ಸೋಂಕಿನ ಪ್ರಕರಣಗಳು (Zika Virus Case) ವರದಿಯಾಗುತ್ತಿರುವುದು (7 ಪ್ರಕರಣಗಳು) ಜನರಲ್ಲಿ ಆತಂಕ ಮೂಡಿಸಿದೆ. ಈಡಿಸ್ ಸೊಳ್ಳೆಗಳಲ್ಲಿ ಝಿಕಾ ವೈರಸ್ ಪತ್ತೆಯಾಗಿರುವುದು (2 ಜಿಲ್ಲೆಗಳಲ್ಲಿ) ಆತಂಕದ ವಿಷಯವಾಗಿದೆ. ಈಡಿಸ್ ಲಾರ್ವಾ ನಿರ್ಮೂಲನೆಯು ಸಮರ್ಪಕವಾಗಿ ನಡೆದಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ ಹಾಗೂ ಝಿಕಾ ವೈರಸ್ ಸೋಂಕು ಹರಡುವಿಕೆ ನಿಯಂತ್ರಿಸಬಹುದು. ಹೀಗಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಈ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್‌ ಅವರು ಸುತ್ತೋಲೆ ಹೊರಡಿಸಿದ್ದಾರೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಿಗದಿತವಾಗಿ ಮತ್ತು ಪ್ರತಿ ಶುಕ್ರವಾರ ಲಾರ್ವಾ ನಿರ್ಮೂಲನಾ ದಿನವೆಂದು ಘೋಷಿಸಿ, ಸಮರೋಪಾದಿಯಲ್ಲಿ ಲಾರ್ವಾ ನಿರ್ಮೂಲನೆಯನ್ನು ಫಲಿತಾಂಶ ಆಧಾರಿತ ಚಟುವಟಿಕೆಯನ್ನಾಗಿ ಕೈಗೊಳ್ಳಲು ಈಗಾಗಲೇ ಸಲಹಾ ಪತ್ರಗಳು, ಸುತ್ತೋಲೆಗಳು, ನಿರ್ದೇಶನಗಳನ್ನು ನೀಡಿದ್ದರೂ, ಈ ಚಟುವಟಿಕೆಯು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳದ ಹಿನ್ನೆಲೆ ಝಿಕಾ ವೈರಸ್ ಪ್ರಸರಣವೂ ಕಂಡುಬಂದಿದೆ.

ಝಿಕಾ ವೈರಸ್ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದರಿಂದ, ಡೆಂಗ್ಯೂ ಜ್ವರದ ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ಹಾಗೂ ನಿರ್ವಹಣೆ ಮಾಡಲಾಗುತ್ತದೆ. ಮುಂದುವರಿದು, ಗರ್ಭಿಣಿಯರು ಝಿಕಾ ವೈರಸ್ ಸೋಂಕಿತರಾದಲ್ಲಿ ಹುಟ್ಟುವ ಮಗುವಿನಲ್ಲಿ ಮೈಕ್ರೋಸೆಫಾಲಿ ಹಾಗೂ ಇನ್ನಿತರ ನರಸಂಬಂಧಿ ಅಂಗವೈಕಲ್ಯ (Neurological Anomalies) ಗಳು ಮತ್ತು ದೃಷ್ಟಿ ದೋಷ ಉಂಟಾಗುವ ಸಾಧ್ಯತೆಯು ಅಧಿಕವಾಗಿರುತ್ತದೆ. ಆದ್ದರಿಂದ, ಝಿಕಾ ವೈರಸ್ ಸೋಂಕಿನ ನಿಯಂತ್ರಣಕ್ಕಾಗಿ ಈ ಕೆಳಕಂಡ ಕ್ರಮಗಳನ್ನು ಆಯಾ ಜಿಲ್ಲಾಡಳಿತದ ಮೇಲ್ವಿಚಾರಣೆಯಲ್ಲಿ, ಕಟ್ಟುನಿಟ್ಟಾಗಿ ಕೈಗೊಳ್ಳಲು ಸೂಚಿಸಿದೆ.

ಜಿಲ್ಲಾಡಳಿಗಳಿಗೆ ಮಾರ್ಗಸೂಚಿ

  • ಝಿಕಾ ವೈರಸ್ ಸೋಂಕಿತ ಈಡಿಸ್ ಸೊಳ್ಳೆ ಕಚ್ಚುವುದರಿಂದ ಹರಡುತ್ತದೆ. ಆದ್ದರಿಂದ, ಎಲ್ಲೆಡೆಯಲ್ಲಿ ಅಂದರೆ, ಗ್ರಾಮೀಣ, ಅರೆ-ನಗರ ಪ್ರದೇಶ, ವಲಸೆ ಕಾರ್ಮಿಕರ ವಾಸಸ್ಥಳಗಳು ಹಾಗೂ ನಗರ ಪ್ರದೇಶಗಳಲ್ಲಿನ ಮನೆಗಳು, ಅಪಾರ್ಟ್ ಮೆಂಟ್‌ಗಳು, ವಾಣಿಜ್ಯ ಸಂಕೀರ್ಣಗಳು, ಅಂಗಡಿ-ಮುಂಗಟ್ಟುಗಳು, ಟೈರ್ ಪಂಕ್ಚರ್ ಸರಿಪಡಿಸುವ ಅಂಗಡಿಗಳು, ಕಚೇರಿಗಳು, ಶಾಲಾ ಕಾಲೇಜು, ಅಂಗನವಾಡಿ, ಹಾಸ್ಟೆಲ್, ಆಸ್ಪತ್ರೆಗಳು, ಧಾರ್ಮಿಕ ಸ್ಥಳಗಳು, ಬಹು ಮಹಡಿ ಕಟ್ಟಡಗಳು, ಕಟ್ಟಡ ನಿರ್ಮಾಣ ಪ್ರದೇಶಗಳು, ಘನತ್ಯಾಜ್ಯ ಸಂಗ್ರಹಣಾ ಸ್ಥಳಗಳು, ಖಾಲಿ ನಿವೇಶನಗಳು, ಸಂತೆ / ದೈನಂದಿನ ಮಾರ್ಕೆಟ್ ನಡೆಯುವ ಸ್ಥಳಗಳು, ಧಾರ್ಮಿಕ ಸ್ಥಳಗಳು, ಹೊಟೇಲ್, ಸಭೆ ಸಮಾರಂಭಗಳು ನಡೆಯುವ ಛತ್ರಗಳು, ಇತ್ಯಾದಿಗಳ ಒಳಾಂಗಣ, ಹೊರಾಂಗಣದಲ್ಲಿರುವ ನೀರಿನ ಸಂಗ್ರಹಣಾ ಪರಿಕರಗಳು ಹಾಗೂ ಮೇಲ್ಮಾವಣಿಯಲ್ಲಿ ಬಿಸಾಡಿದ ಘನತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾದ ಮಳೆನೀರಿನಲ್ಲಿ ಉತ್ಪತ್ತಿಯಾಗುವ ಈಡಿಸ್ ಲಾರ್ವಾಗಳನ್ನು ನಿರ್ಮೂಲನೆ ಮಾಡುವುದು ಕಡ್ಡಾಯವಾಗಿದೆ.
  • ಝಿಕಾ ವೈರಸ್ ಸೋಂಕಿನ ಲಕ್ಷಣಗಳು: ಜ್ವರ, ಕೆಂಪಾದ ಕಣ್ಣುಗಳು, ತಲೆನೋವು ಗಂಧೆಗಳು, ಸ್ನಾಯು ಮತ್ತು ಕೀಲುಗಳಲ್ಲಿ ನೋವು ಇವು 2-7 ದಿನಗಳ ಅವಧಿಗೆ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಇಂತಹ ಲಕ್ಷಣಗಳನ್ನು ಹೊಂದಿರುವವರ ಸೀರಂ ಮಾದರಿಯನ್ನು ಬೆಂಗಳೂರು ಎನ್‌ಐವಿ ಸಂಸ್ಥೆಗೆ ಜಿಕಾ ವೈರಸ್ ಪರೀಕ್ಷೆಗೆ ರವಾನಿಸಬೇಕು.
  • ಸೀರಂ ಮಾದರಿ ಪರೀಕ್ಷೆಯಿಂದ ಝಿಕಾ ವೈರಸ್ ಸೋಂಕು ದೃಢಪಟ್ಟ ಪ್ರಕರಣದ ಕುಟುಂಬದ ಎಲ್ಲಾ ಸದಸ್ಯರ ಸೀರಂ ಮಾದರಿಗಳನ್ನೂ ಸಹ ಎನ್ ಐ ವಿಗೆಗೆ ಜಿಕಾ ವೈರಸ್ ಪರೀಕ್ಷೆಗೆ ರವಾನಿಸಬೇಕು.
  • ಸೀರಂ ಮಾದರಿಯಲ್ಲಿ ಅಥವಾ ಈಡಿಸ್ ಸೊಳ್ಳೆಗಳಲ್ಲಿ ಝಿಕಾ ವೈರಸ್ ಸೋಂಕು ದೃಢಪಟ್ಟಲ್ಲಿ ಸುತ್ತಲಿನ 3 ಕಿ ಮೀ ವ್ಯಾಪ್ತಿಯ (Diameter) ಪ್ರದೇಶವನ್ನು ‘ಕಂಟೋನ್ಮೆಂಟ್ ವಲಯ’ವೆಂದು ಗುರುತಿಸಬೇಕು.
  • ಕಂಟೋನ್ಮೆಂಟ್ ವಲಯದಲ್ಲಿರುವ ಎಲ್ಲಾ ಗರ್ಭಿಣಿಯರ ಸೀರಂ ಹಾಗೂ ಮೂತ್ರದ ಮಾದರಿಗಳನ್ನು ಝಿಕಾ ಪರೀಕ್ಷೆಗಾಗಿ ಎನ್‌ಐವಿಗೆ ರವಾನಿಸಬೇಕು.
  • ಕಂಟೋನ್ಮೆಂಟ್ ವಲಯ’ ವ್ಯಾಪ್ತಿಯಿಂದ 1 ಕಿಮೀ (Diameter) ಪ್ರದೇಶವನ್ನು Risk Zone ಎಂದು ಗುರುತಿಸಿ ಲಾರ್ವಾ ಸಮೀಕ್ಷೆಯನ್ನು ತೀವ್ರಗೊಳಿಸುವುದು ಕಡ್ಡಾಯವಾಗಿದೆ. ಹಾಗೂ ಶಂಕಿತ ಜಿಕಾ ಜ್ವರ ಪ್ರಕರಣಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸುವುದು.
  • ಶಂಕಿತ ಪ್ರಕರಣಗಳ ಹಾಗೂ ಗರ್ಭಿಣಿಯರ ಮಾದರಿ ಸಂಗ್ರಹಣೆ, ಪರೀಕ್ಷೆಗಾಗಿ ಸಲ್ಲಿಕೆ ಹಾಗು ಲೈನ್ ಲಿಸ್ಟ್ ನಿರ್ವಹಣೆಯ ಜವಾಬ್ದಾರಿಯು ಆಯಾ ಜಿಲ್ಲಾ ಸರ್ವೇಕ್ಷಣಾ ಘಟಕದ್ದಾಗಿದ್ದು, ಉಳಿದಂತೆ. ಈಡಿಸ್ ಲಾರ್ವಾ ನಿರ್ಮೂಲನೆ ಸೇರಿದಂತೆ, ರೋಗವಾಹಕ ನಿಯಂತ್ರಣ ಕ್ರಮಗಳ ಅನುಷ್ಠಾನವು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳದ್ದಾಗಿದೆ.
  • ಕಂಟೋನ್ಮೆಂಟ್ ವಲಯದ ಎಲ್ಲಾ ಮನೆಗಳಿಗೆ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು (Incubation period of ZVD is 3-14 days, hence double the incubation period) ಪ್ರತಿ ದಿನ ಭೇಟಿ ನೀಡಿ ಜ್ವರ ಸಮೀಕ್ಷೆ ನಡೆಸುವುದು ಹಾಗೂ ಶಂಕಿತ ಪ್ರಕರಣಗಳು ಕಂಡುಬಂದಲ್ಲಿ ಆರೋಗ್ಯ ಸಂಸ್ಥೆಗೆ ತೆರಳಲು ತಿಳಿಸುವುದು ಸ್ವಯಂ ರಕ್ಷಣಾ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಆರೋಗ್ಯ ಶಿಕ್ಷಣ ನೀಡುವುದು ಮತ್ತು ಈಡಿಸ್ ಲಾರ್ವಾ ನಿರ್ಮೂಲನೆ ಮಾಡುವುದು ಕಡ್ಡಾಯವಾಗಿದೆ.
  • ಸಿಬ್ಬಂದಿ ಕೊರತೆ ಇದ್ದಲ್ಲಿ ನೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಿಬ್ಬಂದಿ, ಆಶಾ, ಅರೆ – ವೈದ್ಯಕೀಯ ವಿದ್ಯಾರ್ಥಿಗಳು, ಸ್ವಯಂಸೇವಕರ ಸೇವೆಯನ್ನು ಬಳಸಿಕೊಳ್ಳುವುದು.
  • ಕಂಟೋನ್ಮೆಂಟ್ ವಲಯ ವ್ಯಾಪ್ತಿಯ ಎಲ್ಲಾ ಆರೋಗ್ಯ ಸಂಸ್ಥೆಯ ವೈದ್ಯಕೀಯ ಹಾಗೂ ಅರೆ-ವೈದ್ಯಕೀಯ ಸಿಬ್ಬಂದಿಗೆ ಅಗತ್ಯ ತರಬೇತಿಯನ್ನು ನೀಡುವುದು.
  • ಗ್ರಾಮವಾರು, ಪ್ರದೇಶವಾರು ವರದಿಯಾಗುವ (House index, Container Index Beetran Indes ಗಳನ್ನು ಪ್ರತಿದಿನ ವಿಶ್ಲೇಷಿಸಿ, ಅಗತ್ಯ ಸೂಚನೆಗಳನ್ನು ನೀಡುವುದು.
  • ರೋಗವಾಹಕ ಈಡಿಸ್ ಸೊಳ್ಳೆಗಳ ಸಾಂದ್ರತೆಯನ್ನು ತಗಿಸಲು ತುರ್ತು ಕ್ರಮವಾಗಿ Pyrethrum 2% Extract ಅನ್ನು ಬಳಸಿ Indoor space spray ಯನ್ನು ಕೈಗೊಳ್ಳಬಹುದಾಗಿದೆ.
  • ಕಳೆದ 3 ತಿಂಗಳ ಅವಧಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿನ ಹೆರಿಗೆಗಳ ಮಾಹಿತಿಯನ್ನು ಪಡೆದು, ಅವುಗಳ ಪೈಕಿ ಮೈಕ್ರೋಸೆಫಾಲಿ ಪ್ರಕರಣಗಳಿದ್ದಲ್ಲಿ ತಕ್ಷಣವೇ ವರದಿ ಮಾಡುವುದು.
  • ಖಾಸಗಿ ಆಸ್ಪತ್ರೆಗಳಲ್ಲಿನ ವೈದ್ಯರಿಗೆ ಜಿಕಾ ವೈರಸ್ ಸೋಂಕು ಹಾಗೂ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ, ತರಬೇತಿಯನ್ನು ನೀಡುವುದು.
  • ಝಿಕಾ ವೈರಸ್ ಸೋಂಕಿನ ನಿಯಂತ್ರಣದ ಸಂಬಂಧ ಅಂತರ-ಇಲಾಖಾ ಸಮನ್ವಯ ಸಮಿತಿ ಸಭೆಯನ್ನು ನಡೆಸುವುದು ಹಾಗೂ ಲಭ್ಯ ಮಾಧ್ಯಮಗಳ ಮೂಲಕ ಜಿಕಾ ವೈರಸ್ ಮುಂಜಾಗ್ರತಾ ಕ್ರಮಗಳನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಚುರ ಪಡಿಸುವುದು.

ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಮನವಿ

  • ಸಾರ್ವಜನಿಕರು ಝಿಕಾ ವೈರಸ್ ಸೋಂಕು ಹಾಗೂ ನಿಯಂತ್ರಣದ ಕುರಿತು ಮಾಹಿತಿಯರನ್ನು ಹೊಂದಿರಬೇಕು ಹಾಗೂ ಅನಗತ್ಯ ಭಯದಿಂದ ದೂರವಿದ್ದು, ಈ ಕೆಳಕಂಡ ಕ್ರಮಗಳನ್ನು ಪಾಲಿಸುವುದು ಅಗತ್ಯವಾಗಿದೆ.
  • ಝಿಕಾ ಸೋಂಕಿನ ಲಕ್ಷಣಗಳು ಸಾಮಾನ್ಯವಾಗಿ ಸೌಮ್ಯ ಸ್ವರೂಪದ್ದಾಗಿದ್ದು, ತೀವ್ರ ಸ್ವರೂಪದ ಸೋಂಕಿನ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳು ಹಾಗೂ ಸೋಂಕಿನಿಂದ ಮರಣ ಪ್ರಕರಣಗಳು ಅತಿ ವಿರಳ.
  • ಆದಾಗ್ಯೂ ಜ್ವರ, ಕೆಂಪಾದ ಕಣ್ಣುಗಳು, ತಲೆನೋವು, ಗಂಧೆಗಳು, ಸ್ನಾಯು ಮತ್ತು ಕೀಲುಗಳಲ್ಲಿ ನೋವು, ಈ ಲಕ್ಷಣಗಳನ್ನು ಹೊಂದಿದವರು ಹತ್ತಿರದ ಆರೋಗ್ಯ ಸಂಸ್ಥೆಗೆ ಭೇಟಿ ನೀಡಿ ಅಗತ್ಯ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಸದರಿ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದರಿಂದ, ರೋಗ ಲಕ್ಷಣಗಳಿಗನುಗುಣವಾಗಿ ನಿರ್ವಹಣೆ ಮಾಡಲಾಗುವುದು.
  • ಶಂಕಿತ/ ದೃಢ ಝಿಕಾ ಸೋಂಕಿನ ಪ್ರಕರಣಗಳು ಪ್ರತ್ಯೇಕವಾಗಿದ್ದು, ಅಗತ್ಯ ವಿಶ್ರಾಂತಿಯನ್ನು ಪಡೆಯಬೇಕು. ದ್ರವರೂಪದ ಆಹಾರವನ್ನು ಹೆಚ್ಚಿಗೆ ಸೇವಿಸಬೇಕು ಹಾಗೂ ಮಲಗುವಾಗ, ವಿಶ್ರಾಂತಿ ಪಡೆಯುವಾಗ (ಹಗಲು ಹೊತ್ತಿನಲ್ಲಿಯೂ ಸಹ) ಸೊಳ್ಳೆ ಪರದೆಯನ್ನು ಬಳಸಬೇಕು.
  • ಗರ್ಭಿಣಿಯರು ಈಡಿಸ್ ಸೊಳ್ಳೆ ಕಡಿತದಿಂದ ಪಾರಾಗಲು ಸ್ವಯಂ ರಕ್ಷಣಾ ವಿಧಾನಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು.
  • ಕಂಟೋನ್ಮೆಂಟ್ ವಲಯದಲ್ಲಿರುವ ಗರ್ಭಿಣಿಯರು ಸೀರಂ ಮತ್ತು ಮೂತ್ರದ ಮಾದರಿಯನ್ನು ಝಿಕಾ ವೈರಸ್ ಪರೀಕ್ಷೆಗೆ ಸಲ್ಲಿಸಬೇಕು ಹಾಗೂ ಸ್ಕ್ಯಾನಿಂಗ್ ವರದಿಯನ್ನು ತಜ್ಞರಿಂದ ವಿಶ್ಲೇಷಿಸಬೇಕು.
  • ದೇಹವನ್ನು ಸಂಪೂರ್ಣವಾಗಿ ಮುಚ್ಚುವಂತೆ ಬಟ್ಟೆಯನ್ನು ಭರಿಸುವುದು, ಸೊಳ್ಳೆ ವರದೆಯ ಬಳಕೆಯೂ ಸೇರಿದಂತೆ ಇತರ ಸ್ವಯಂ ರಕ್ಷಣಾ ವಿಧಾನಗಳನ್ನು ಸಾರ್ವಜನಿಕರು ಪಾಲಿಸುವುದು ಅಗತ್ಯವಾಗಿದೆ.
  • ಸಾರ್ವಜನಿಕರು ತಮ್ಮ ಮನೆಯ ಹಾಗೂ ಸಿಬ್ಬಂದಿಗಳು ತಮ್ಮ ಕಚೇರಿಗಳ ಒಳಾಂಗಣ ಹಾಗೂ ಸುತ್ತ-ಮುತ್ತಲಿರುವ ಈಡಿಸ್ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವುದು ಹಾಗೂ ಆರೋಗ್ಯ ಸಿಬ್ಬಂದಿ / ಆಶಾ ನೀಡುವ ಸಲಹೆ-ಸೂಚನೆಗಳನ್ನು ಪಾಲಿಸುವುದು ಅಗತ್ಯವಾಗಿದೆ.

ಒಟ್ಟಾರೆಯಾಗಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ, ಜಿಕಾ ವೈರಸ್ ನಿಯಂತ್ರಣಕ್ಕಾಗಿ ಬಿಬಿಎಂಪಿ ಹಾಗೂ ಜಿಲ್ಲಾಡಳಿತಗಳು ಈ ಮೇಲಿನ ಸೂಚನೆಗಳನ್ನು ಪಾಲಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಆಯುಕ್ತ ರಂದೀಪ್ ಡಿ. ಸೂಚಿಸಿದ್ದಾರೆ.

ಇದನ್ನೂ ಓದಿ | Zika Virus : ಆನೇಕಲ್‌ನಲ್ಲಿ ಆರು ಮಂದಿಗೆ ಝಿಕಾ ವೈರಸ್ ಪತ್ತೆ; 3 ಕಿ.ಮೀ ರೇಡಿಯಸ್ ಕಂಟೋನ್ಮೆಂಟ್ ಜೋನ್‌

Continue Reading
Advertisement
Viral Video
ವೈರಲ್ ನ್ಯೂಸ್2 hours ago

Viral Video: ಪಬ್ಲಿಕ್‌ನಲ್ಲೇ ಲಂಚದ ಹಣ ಹಂಚಿಕೊಂಡ ಟ್ರಾಫಿಕ್‌ ಪೊಲೀಸರು; ಖಾಕಿಯ ಲಂಚಾವತಾರ ಸಿಸಿಟಿವಿಯಲ್ಲಿ ಸೆರೆ

Viral Video
ವೈರಲ್ ನ್ಯೂಸ್2 hours ago

Viral Video: ಅಬ್ಬಾ.. ಸಾವು ಹೀಗೂ ಬರುತ್ತಾ? ಸ್ನೇಹಿತನೊಂದಿಗೆ ಮಾತಾಡ್ತಾ ನಿಂತಿದ್ದವನ ಮೇಲೆ ದೊಪ್ಪೆಂದು ಬಿದ್ದ ಎಸಿ-ವಿಡಿಯೋ ಇದೆ

Rakesh pal
ಪ್ರಮುಖ ಸುದ್ದಿ3 hours ago

Rakesh Pal: ಭಾರತೀಯ ನೌಕಾಪಡೆಯ ಮಹಾನಿರ್ದೇಶಕ ರಾಕೇಶ್ ಪಾಲ್ ಹೃದಯಾಘಾತದಿಂದ ವಿಧಿವಶ

Viral Video
ದೇಶ3 hours ago

Viral News: ಒಂಟಿಯಾಗಿದ್ದಾಗ ಮೈ ಮುಟ್ಟೋಕೆ ಬಂದೋನ ಖಾಸಗಿ ಅಂಗಕ್ಕೆ ಸಟ್ಟುಗದಲ್ಲೇ ಚುಚ್ಚಿದ್ಳು!

Health Tips
ಆರೋಗ್ಯ4 hours ago

Health Tips: ಮಾನಸಿಕ ಒತ್ತಡ ನಿವಾರಿಸಿಕೊಳ್ಳುವುದು ಹೇಗೆ? ಇಲ್ಲಿದೆ ಸುಲಭೋಪಾಯ!

Madurai Tour
Latest4 hours ago

Madurai Tour: ಮಧುರೈಗೆ ಹೋದಾಗ ನೋಡಲೇಬೇಕಾದ 6 ರಮಣೀಯ ಸ್ಥಳಗಳು

Vastu Tips
ಧಾರ್ಮಿಕ4 hours ago

Vastu Tips: ಮಲಗುವ ದಿಕ್ಕು ಸತಿಪತಿ ನಡುವಿನ ವಿರಸಕ್ಕೆ ಕಾರಣ ಆಗಬಹುದು!

Kundapura Kannada Habba 2024
ಕರ್ನಾಟಕ4 hours ago

Kundapura Kannada Habba 2024: ಕುಂದಾಪ್ರ ಕನ್ನಡ ಅಧ್ಯಯನ ಪೀಠಕ್ಕೆ ಸದ್ಯದಲ್ಲೇ ಸಮಿತಿ ರಚನೆ: ಜಯಪ್ರಕಾಶ ಹೆಗ್ಡೆ

Physical Abuse
ಕರ್ನಾಟಕ4 hours ago

Physical Abuse: ಕಿಡ್ನ್ಯಾಪ್ ಮಾಡಿ ಮಹಿಳೆ ಮೇಲೆ ಅತ್ಯಾಚಾರ, ಮಗನ ಮೇಲೂ ಹಲ್ಲೆ; 9 ಆರೋಪಿಗಳ ಅರೆಸ್ಟ್‌

Champai Soren
ದೇಶ5 hours ago

Champai Soren: ನನ್ನ ಎದುರು ಮೂರು ಆಯ್ಕೆಗಳಿವೆ; ಬಿಜೆಪಿ ಸೇರ್ಪಡೆ ಬಗ್ಗೆ ಚಂಪೈ ಸೊರೆನ್‌ ಹೇಳಿದ್ದೇನು? ಇಲ್ಲಿದೆ ಡಿಟೇಲ್ಸ್‌

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌