RBI Caution : ಮೋಸಗಾರರಿದ್ದಾರೆ; ಕೆವೈಸಿ ಅಪ್​ಡೇಟ್ ಹೆಸರಲ್ಲಿ ಕರೆ ಬಂದರೆ ಎಚ್ಚರ ವಹಿಸಿ ಎಂದ ಆರ್​ಬಿಐ - Vistara News

ಪ್ರಮುಖ ಸುದ್ದಿ

RBI Caution : ಮೋಸಗಾರರಿದ್ದಾರೆ; ಕೆವೈಸಿ ಅಪ್​ಡೇಟ್ ಹೆಸರಲ್ಲಿ ಕರೆ ಬಂದರೆ ಎಚ್ಚರ ವಹಿಸಿ ಎಂದ ಆರ್​ಬಿಐ

RBI Caution: ಕೆವೈಸಿ ಅಪ್​ಡೇಟ್ ಹೆಸರಲ್ಲಿ ಬರುವ ಫೋನ್ ಕರೆಗಳು, ಎಸ್ಎಂಎಸ್​ಗಳು ಮತ್ತು ಇಮೇಲ್​ಗಳಿಗೆ ಸ್ಪಂದಿಸಬಾರದು ಎಂಬುದಾಗಿ ಆರ್​ಬಿಐ ಎಚ್ಚರಿಕೆ ನೀಡಿದೆ.

VISTARANEWS.COM


on

Bank Fraud
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನೋ ಯುವರ್ ಕಸ್ಟಮರ್ (ಕೆವೈಸಿ) ಅಪ್​ಡೇಟ್​ ಮಾಡುವುದಾಗಿ ಹೇಳಿ ಖಾತೆಯಿಂದ ದುಡ್ಡು ಎಗರಿಸುವ ಜಾಲಗಳು ಕಾರ್ಯಾಚರಿಸುತ್ತಿವೆ. ಇಂಥ ಮಹಾನ್​ ವಂಚನೆ ತಡೆಗಟ್ಟಲು ಮತ್ತು ತಮ್ಮನ್ನು ರಕ್ಷಿಸಿಕೊಳ್ಳಲು ಎಚ್ಚರಿಕೆ ವಹಿಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಾಗರಿಕರಿಗೆ ಸೂಚನೆ ನೀಡಿದೆ. ಕೆವೈಸಿ ಅಪ್​ಡೇಟ್​ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಗಳಿಗೆ ಗ್ರಾಹಕರು ಬಲಿಯಾಗುತ್ತಿರುವ ಘಟನೆಗಳು ಮತ್ತು ವರದಿಗಳ ಹಿನ್ನೆಲೆಯಲ್ಲಿ, ಆರ್​ಬಿಐ ಫೆಬ್ರವರಿ 02 ರಂದು ಬಿಡುಗಡೆ ಮಾಡಿದೆ. ಇದರೊಂದಿಗೆ ಸೆಪ್ಟೆಂಬರ್ 13, 2021 ರಂದು ಹೊರಡಿಸಿದ ತನ್ನ ಮಾಹಿತಿಯನ್ನು ಮತ್ತೊಮ್ಮೆ ಪ್ರಕಟಿಸಿದೆ.

KYC ಅಪ್​ಡೇಟ್ ಹೆಸರಲ್ಲಿ ವಂಚನೆ ಹೇಗೆ ಮಾಡುತ್ತಾರೆ?

ಕೆವೈಸಿ ವಂಚಕರು ಸಾಮಾನ್ಯವಾಗಿ ಫೋನ್ ಕರೆಗಳು, ಎಸ್ಎಂಎಸ್. ಇಮೇಲ್​ ಸೇರಿದಂತೆ ಅನಪೇಕ್ಷಿತ ಸಂಪರ್ಕವನ್ನು ಮಾಡುತ್ತಾರೆ. ಈ ಮೂಲಕ ಗ್ರಾಹಕರ ವೈಯಕ್ತಿಕ ಮಾಹಿತಿ, ಬ್ಯಾಂಕ್​​ ಖಾತೆ. ಲಾಗಿನ್ ವಿವರಗಳನ್ನು ಪಡೆದುಕೊಳ್ಳುತ್ತಾರೆ. ಅದೇ ರೀತಿ ಅನಧಿಕೃತವಲ್ಲದ ಲಿಂಕ್​ಗಳನ್ನು ಕಳುಹಿಸಿ ಅದನ್ನು ಫೋನ್​ಗೆ ಹಾಕಿಸಿಕೊಂಡು ಅಲ್ಲಿಂದ ಎಲ್ಲ ಮಾಹಿತಿಗಳನ್ನು ಕದಿಯುತ್ತಾರೆ.

ವಂಚಕರು ಬಹುಪಾಲು ಬೆದರಿಕೆ ತಂತ್ರವನ್ನು ಒಡ್ಡುತ್ತಾರೆ. ಬ್ಯಾಂಕ್​ ಖಾತೆ ನಿಷ್ಕ್ರಿಯವಾಗುತ್ತದೆ. ಹಣ ಕಳೆದುಕೊಳ್ಳುತ್ತೀರಿ ಎಂದೆಲ್ಲ ಗ್ರಾಹಕರನ್ನು ಭಯಭೀತಿಗೊಳಿಸುತ್ತಾರೆ. ಮಾಹಿತಿ ಕೊಡದೇ ಹೋದರೆ ಖಾತೆಯಲ್ಲಿರುವ ಹಣ ಸಿಗುವುದಿಲ್ಲ ಎಂದು ಹೆದರಿಸುತ್ತಾರೆ.

ಕೆಲವು ವಂಚರು ನಯವಾಗಿ ಮಾತನಾಡಿ ಒಂದು ಲಿಂಕ್ ಕಳುಹಿಸುತ್ತಾರೆ. ಆ ಲಿಂಕ್ ಒತ್ತುವ ಮೂಲಕ ಅನಧಿಕೃತವಾಗಿ ಖಾತೆಗೆ ಪ್ರವೇಶ ಪಡೆಯುವಂತೆ ಹೇಳುತ್ತಾರೆ. ಅಲ್ಲದೆ ಮೋಸದ ಚಟುವಟಿಕೆಯಲ್ಲಿ ತೊಡಗುತ್ತಾರೆ.

ಗ್ರಾಹಕರು ಏನು ಮಾಡಬೇಕು?

  • ಕೆವೈಸಿ ನವೀಕರಣಕ್ಕಾಗಿ ಯಾವುದೇ ವಿನಂತಿಯನ್ನು ಸ್ವೀಕರಿಸಿದ ಸಂದರ್ಭದಲ್ಲಿ ತಕ್ಷಣವೇ ಕಡೊದೆ ದೃಢೀಕರಣ ಅಥವಾ ಸಹಾಯಕ್ಕಾಗಿ ನೇರವಾಗಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯನ್ನು ಸಂಪರ್ಕಿಸಬೇಕು.
  • ಬ್ಯಾಂಕ್, ಹಣಕಾಸು ಸಂಸ್ಥೆಯ ಸಂಪರ್ಕ ಸಂಖ್ಯೆಯನ್ನು ಕಸ್ಟಮರ್​ ಕೇರ್​ ಫೋನ್​ ಸಂಖ್ಯೆಯನ್ನು ಅಧಿಕೃತ ವೆಬ್​ಸೈಟ್​ ಮೂಲಕ ಮಾತ್ರ ಪಡೆದುಕೊಳ್ಳಬೇಕು.
  • ಯಾವುದೇ ಸೈಬರ್ ವಂಚನೆ ಘಟನೆ ಸಂಭವಿಸಿದಲ್ಲಿ ತಕ್ಷಣ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ಮಾಹಿತಿ ನೀಡಿ ಖಾತೆಯನ್ನು ನಿಷ್ಕ್ರಿಯಗೊಳಿಸಬೇಕು.
  • ಕೆವೈಸಿ ವಿವರಗಳನ್ನು ನವೀಕರಿಸಲು ಲಭ್ಯವಿರುವ ವಿಧಾನಗಳು ಅಥವಾ ಆಯ್ಕೆಗಳನ್ನು ತಿಳಿದುಕೊಳ್ಳುವುದಕ್ಕೆ ಬ್ಯಾಂಕ್ ಶಾಖೆಯೊಂದಿಗೆ ಮಾತ್ರ ಸಂವಹನ ನಡೆಸಬೇಕು.
  • ಇದನ್ನೂ ಓದಿ : EPF Interest Rate Hike: ನೌಕರರಿಗೆ ಸಿಹಿಸುದ್ದಿ: ಇಪಿಎಫ್‌ ಬಡ್ಡಿ ದರ ಶೇ.8.25ಕ್ಕೆ ಏರಿಕೆ

ಈ ತಪ್ಪುಗಳನ್ನು ಮಾಡಲೇಬೇಡಿ

  • ಖಾತೆ ಲಾಗಿನ್ ರುಜುವಾತುಗಳು, ಕಾರ್ಡ್ ಮಾಹಿತಿ, ಪಿನ್ ಗಳು, ಪಾಸ್ ವರ್ಡ್ ಗಳು, ಒಟಿಪಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
  • ಅಪರಿಚಿತ ಅಥವಾ ಅಪರಿಚಿತ ವ್ಯಕ್ತಿಗಳು ಅಥವಾ ಸಂಸ್ಥೆಗಳೊಂದಿಗೆ KYC ದಾಖಲೆಗಳು ಅಥವಾ KYC ದಾಖಲೆಗಳ ನಕಲು ಪ್ರತಿಗಳನ್ನು ಹಂಚಿಕೊಳ್ಳಬೇಡಿ.
  • ಪರಿಶೀಲಿಸದ ಅಥವಾ ಅನಧಿಕೃತ ವೆಬ್​ಸೈಟ್​​ಗಳು ಅಥವಾ ಅಪ್ಲಿಕೇಶನ್​ಗಳ ಮೂಲಕ ಯಾವುದೇ ಗೌಪ್ಯ ಡೇಟಾ ಅಥವಾ ಮಾಹಿತಿಯನ್ನು ಹಂಚಿಕೊಳ್ಳಬೇಡಿ.
  • ಮೊಬೈಲ್ ಅಥವಾ ಇಮೇಲ್ ನಲ್ಲಿ ಸ್ವೀಕರಿಸಿದ ಅನುಮಾನಾಸ್ಪದ ಅಥವಾ ಪರಿಶೀಲಿಸದ ಲಿಂಕ್ ಗಳನ್ನು ಕ್ಲಿಕ್ ಮಾಡಲೇಬಾರದು. ಅಂತಹ ಯಾವುದೇ ಮನವಿ ಸ್ವೀಕರಿಸಿದರೆ, ಗ್ರಾಹಕರು ಬ್ಯಾಂಕ್, ಶಾಖೆಗೆ ಮಾಹಿತಿ ನೀಡಬೇಕು.

ಯಾರಿಗೆ ದೂರು ನೀಡಬೇಕು?

ಹಣಕಾಸು ಸೈಬರ್ ವಂಚನೆಯ ಸಂದರ್ಭದಲ್ಲಿ, ಸಾರ್ವಜನಿಕರು ತಕ್ಷಣ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (www.cybercrime.gov.in) ಅಥವಾ ಸೈಬರ್ ಕ್ರೈಮ್ ಸಹಾಯವಾಣಿ (1930) ಮೂಲಕ ದೂರು ದಾಖಲಿಸಬೇಕು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2024 : ಮಾಜಿ ನಾಯಕ ಶೇನ್​ ವಾರ್ನ್​ ದಾಖಲೆ ಸರಿಗಟ್ಟಿದ ಸಂಜು ಸ್ಯಾಮ್ಸನ್​

IPL 2024 : ಸಂಜು ಸ್ಯಾಮ್ಸನ್​ ಸ್ಪಿನ್ ಮಾಂತ್ರಿಕ ವಾರ್ನ್ ಅವರ ದಾಖಲೆಯನ್ನು ಸರಿಗಟ್ಟಿದಂತಾಗಿದೆ. ರಾಜಸ್ಥಾನ್ ತಂಡದ ಇತರ ಮಾಜಿ ನಾಯಕರುಗಳಾದ ರಾಹುಲ್ ದ್ರಾವಿಡ್ (18 ಗೆಲುವುಗಳು), ಶೇನ್ ವ್ಯಾಟ್ಸನ್ (8 ಗೆಲುವುಗಳು), ಅಜಿಂಕ್ಯ ರಹಾನೆ (9 ಗೆಲುವುಗಳು) ಮತ್ತು ಸ್ಟೀವ್ ಸ್ಮಿತ್ (15 ಗೆಲುವು) ಅವರಂತಹ ಆಟಗಾರರನ್ನು ಪರಿಗಣಿಸಿದಾಗ ಈ ಸಾಧನೆಯ ಮಹತ್ವದ್ದಾಗಿದೆ.

VISTARANEWS.COM


on

IPL 2024
Koo

ಅಹಮದಾಬಾದ್​​: ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಐಪಿಎಲ್​ನ ರಾಜಸ್ಥಾನ್​ ರಾಯಲ್ಸ್​​ ಫ್ರ್ಯಾಂಚೈಸಿ ಇತಿಹಾಸದ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದುಕೊಂಡಿದ್ದಾರೆ. ಅವರು ಮಾಜಿ ನಾಯಕ ಹಾಗೂ ವಿಶ್ವ ಪ್ರಸಿದ್ಧ ಸ್ಪಿನ್ನರ್​ ದಿ. ಶೇನ್ ವಾರ್ನ್ ಅವರ ಸಾಧನೆಯೊಂದನ್ನು ಸರಿಗಟ್ಟಿದ್ದಾರೆ. ಬುಧವಾರ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024 ಎಲಿಮಿನೇಟರ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಿರ್ಣಾಯಕ ಗೆಲುವು ಸಾಧಿಸಿದ ಬಳಿಕ ಸಂಜು ಈ ಸಾಧನೆಗೆ ಪಾತ್ರರಾಗಿದ್ದಾರೆ.

ಈ ಗೆಲುವಿನೊಂದಿಗೆ ನಾಯಕನಾಗಿ ಸಂಜು ಸ್ಯಾಮ್ಸನ್ ಅವರ ಒಟ್ಟು ಗೆಲುವು 31 ಪಂದ್ಯಗಳಿಗೆ ತಲುಪಿತು. ಇದು 2008 ರಲ್ಲಿ ತಂಡವನ್ನು ಉದ್ಘಾಟನಾ ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದ್ದ ಸ್ಪಿನ್ ಮಾಂತ್ರಿಕ ವಾರ್ನ್ ಅವರ ದಾಖಲೆಯನ್ನು ಸರಿಗಟ್ಟಿದಂತಾಗಿದೆ. ರಾಜಸ್ಥಾನ್ ತಂಡದ ಇತರ ಮಾಜಿ ನಾಯಕರುಗಳಾದ ರಾಹುಲ್ ದ್ರಾವಿಡ್ (18 ಗೆಲುವುಗಳು), ಶೇನ್ ವ್ಯಾಟ್ಸನ್ (8 ಗೆಲುವುಗಳು), ಅಜಿಂಕ್ಯ ರಹಾನೆ (9 ಗೆಲುವುಗಳು) ಮತ್ತು ಸ್ಟೀವ್ ಸ್ಮಿತ್ (15 ಗೆಲುವು) ಅವರಂತಹ ಆಟಗಾರರನ್ನು ಪರಿಗಣಿಸಿದಾಗ ಈ ಸಾಧನೆಯ ಮಹತ್ವದ್ದಾಗಿದೆ.

ಇದನ್ನೂ ಓದಿ: IPL 2024 : ಮುಂದಿನ ವರ್ಷವೂ ಧೋನಿ ಐಪಿಎಲ್​ ಆಡ್ತಾರೆ; ಸಿಎಸ್​ಕೆ ಸಿಇಒ ಸ್ಪಷ್ಟನೆ

ಈ ನಾಯಕರಲ್ಲಿ ಪ್ರತಿಯೊಬ್ಬರೂ ಫ್ರ್ಯಾಂಚೈಸಿ ಕ್ರಿಕೆಟ್​ನಲ್ಲಿ ವಿಶಿಷ್ಟವಾದ ಹೆಗ್ಗುರುತು ಸ್ಥಾಪಿಸಿದ್ದರು. ಆದರೆ ಉದ್ಘಾಟನಾ ಋತುವಿನಲ್ಲಿ ಶೇನ್ ವಾರ್ನ್ ಅವರ ಬಲವಾದ ನಾಯಕತ್ವವು ಉನ್ನತ ಮಾನದಂಡ ಸ್ಥಾಪಿಸಿದೆ. ಈಗ, 2021ರಲ್ಲಿ ಸ್ಮಿತ್ ಅವರಿಂದ ನಾಯಕತ್ವದ ಅಧಿಕಾರ ವಹಿಸಿಕೊಂಡ ಬಳಿಕ ಸ್ಯಾಮ್ಸನ್ ತನ್ನನ್ನು ತಾನು ಯೋಗ್ಯ ಉತ್ತರಾಧಿಕಾರಿಯೆಂದು ಸಾಬೀತುಪಡಿಸಿಕೊಳ್ಳುತ್ತಿದ್ದಾರೆ.

ಆರ್​ಸಿಬಿ ವಿರುದ್ಧದ ರೋಚಕ ಪಂದ್ಯ

ಎಲಿಮಿನೇಟರ್​ ಆಟದ ವಿಚಾರಕ್ಕೆ ಬಂದರೆ ಎರಡೂ ಕಡೆಯವರ ನಡುವಿನ ಘರ್ಷಣೆ ಒಂದು ಅದ್ಭುತ ಪ್ರದರ್ಶನವಾಗಿತ್ತು. ಋತುವನ್ನು ಅಬ್ಬರದಿಂದ ಪ್ರಾರಂಭಿಸಿದ ರಾಜಸ್ಥಾನ ರಾಯಲ್ಸ್ ಕೊನೆಯಲ್ಲಿ ಸತತ ನಾಲ್ಕು ಸೋಲು ಕಂಡಿತು. ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಏಳು ಬೀಳುಗಳ ನಡುವೆ ಪ್ಲೇಆಫ್​ಗೇರಿದ್ದು ಆರ್​ಸಿಬಿ ಪಾಲಿಗೆ ಅಚ್ಚರಿಯ ವಿಚಾರ. ಅಂತೆಯೇ ಎರಡೂ ತಂಡಗಳು ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವು.

ಅನುಕ್ರಮವಾಗಿ ಎರಡು ಮತ್ತು ಮೂರು ವಿಕೆಟ್​ಗಳನ್ನು ಪಡೆದ ರವಿಚಂದ್ರನ್ ಅಶ್ವಿನ್ ಮತ್ತು ಅವೇಶ್ ಖಾನ್ ನೇತೃತ್ವದ ರಾಜಸ್ಥಾನದ ಬೌಲಿಂಗ್ ಘಟಕವು ಆರ್​ಸಿಬಿಯನ್ನು 172 ರನ್​ಗಳಿಗೆ ನಿಯಂತ್ರಿಸಿತು. ರನ್​ ಚೇಸಿಂಗ್ ಕೆಲವೊಂದು ಕ್ಷಣದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿದರೂ ಇನ್ನೂ ಒಂದು ಓವರ್​ ಬಾಕಿ ಇರುವಂತೆಯೇ ಆರ್​ಆರ್​ ಗುರಿ ತಲುಪಿತ್ತು.

ಮೇ 24 ರಂದು ಚೆಪಾಕ್​ನಲ್ಲಿ ನಡೆಯಲಿರುವ ಕ್ವಾಲಿಫೈಯರ್ 2 ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಮುಖಾಮುಖಿಯಾಗಲಿದೆ ರಾಜಸ್ಥಾನ್​. ಹೀಗಾಗಿ ಸಂಜು ಪಡೆಗೆ ಇನ್ನು ಫೈನಲ್​ಗೇರಲು ಒಂದು ಹೆಜ್ಜೆ ಬಾಕಿಯಿದೆ. ಸಂಜು ನೇತೃತ್ವದ ತಂಡದ ಪ್ರಶಸ್ತಿಗಾಗಿ ಕಾಯುತ್ತಿದೆ.

Continue Reading

ಕ್ರೀಡೆ

IPL 2024 : ಮುಂದಿನ ವರ್ಷವೂ ಧೋನಿ ಐಪಿಎಲ್​ ಆಡ್ತಾರೆ; ಸಿಎಸ್​ಕೆ ಸಿಇಒ ಸ್ಪಷ್ಟನೆ

IPL 2024: ಐದು ಬಾರಿಯ ಚಾಂಪಿಯನ್‌ ತಂಡ 2024ರ ಆವೃತ್ತಿಯ ಗುಂಪು ಹಂತದಿಂದ ಹೊರಕ್ಕೆ ಹೋಗಿತ್ತು. ಹೀಗಾಗಿ ಧೋನಿ ಮುಂದಿನ ಋತುವಿಗೆ ಮರಳುತ್ತಾರೆಯೇ ಎಂಬುದರ ಕುರಿತು ಯಾವುದೇ ಸ್ಪಷ್ಟನೆ ಇಲ್ಲ. ಆದಾಗ್ಯೂ, ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥನ್ ಅವರು ಮುಂದೆ ಬಂದು ಧೋನಿ ಮರಳುವ ಭರವಸೆಯಲ್ಲಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

VISTARANEWS.COM


on

IPL 2024
Koo

ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಬ್ಯಾಟರ್ ಎಂಎಸ್ ಧೋನಿ ಹಲವು ವರ್ಷಗಳಿಂದ ಫ್ರಾಂಚೈಸಿಗೆ ಬಲಿಷ್ಠ ಆಸ್ತಿಯಾಗಿದ್ದಾರೆ. ಐದು ಐಪಿಎಲ್ ಪ್ರಶಸ್ತಿಗಳಿಗೆ ತಂಡವನ್ನು ಮುನ್ನಡೆಸಿದ ಧೋನಿ ಕ್ರಿಕೆಟ್​ ಕ್ಷೇತ್ರದ ದಂತಕತೆ ಎನಿಸಿಕೊಂಡಿದ್ದಾರೆ. ಅವರು ಸಿಎಸ್‌ಕೆ ಅಭಿಮಾನಿಗಳಿಗೆ ದೇವರಂತಹ ವ್ಯಕ್ತಿ. 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಧೋನಿ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಆಡುವುದನ್ನು ಮುಂದುವರಿಸಿದ್ದಾರೆ. 2024ರ ಐಪಿಎಲ್​ನಲ್ಲಿಯೂ (IPL 2024) ಅವರು ಅಭಿಮಾನಿಗಳಿಂದ ಸಾಕಷ್ಟು ಪ್ರೀತಿ ಗಳಿಸಿದ್ದಾರೆ.

ತಂಡವು 2023ರಲ್ಲಿ ಐಪಿಎಲ್ ಗೆದ್ದ ನಂತರ, ಎಂಎಸ್ ಧೋನಿ ಆ ಋತುವಿನಲ್ಲಿ ಅಭಿಮಾನಿಗಳು ತೋರಿದ ಪ್ರೀತಿಗೆ ಪ್ರತಿಯಾಗಿ ಮತ್ತೊಂದು ಋತುವಿನಲ್ಲಿ ಆಡುವ ಭರವಸೆ ನೀಡಿದ್ದರು. ಹೀಗಾಗಿ ಐಪಿಎಲ್​ 2024 ರ ಆವೃತ್ತಿಯಲ್ಲಿ ಆಡಿದ್ದರು. ಆದಾಗ್ಯೂ ಧೋನಿಯ ಕ್ರಿಕೆಟ್​ ಅಧ್ಯಾಯದ ಕೊನೆ ಎಲ್ಲಿ ಎಂದು ಯಾರಿಗೂ ಗೊತ್ತಿಲ್ಲ. ಈ ಬಾರಿಯೂ ಅವರು ವಿದಾಯ ಘೋಷಿಸಿಲ್ಲ.

ಐದು ಬಾರಿಯ ಚಾಂಪಿಯನ್‌ ತಂಡ 2024ರ ಆವೃತ್ತಿಯ ಗುಂಪು ಹಂತದಿಂದ ಹೊರಕ್ಕೆ ಹೋಗಿತ್ತು. ಹೀಗಾಗಿ ಧೋನಿ ಮುಂದಿನ ಋತುವಿಗೆ ಮರಳುತ್ತಾರೆಯೇ ಎಂಬುದರ ಕುರಿತು ಯಾವುದೇ ಸ್ಪಷ್ಟನೆ ಇಲ್ಲ. ಆದಾಗ್ಯೂ, ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥನ್ ಅವರು ಮುಂದೆ ಬಂದು ಧೋನಿ ಮರಳುವ ಭರವಸೆಯಲ್ಲಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

“ಧೋನಿಯ ಬಗ್ಗೆ ನನಗೆ ಗೊತ್ತಿಲ್ಲ. ಇದು ಅವರು ಮಾತ್ರ ಉತ್ತರಿಸಬಹುದಾದ ಪ್ರಶ್ನೆ, ನಮ್ಮ ಬದ್ಧತೆ ಏನೆಂದರೆ ಅವರು ತೆಗೆದುಕೊಂಡ ನಿರ್ಧಾರಗಳನ್ನು ನಾವು ಯಾವಾಗಲೂ ಗೌರವಿಸುವುದು. ಅದನ್ನು ನಾವು ಅವರಿಗೆ ಬಿಟ್ಟಿದ್ದೇವೆ. ನಿಮಗೆಲ್ಲ ತಿಳಿದಿರುವಂತೆ, ಅವರು ಯಾವಾಗಲೂ ಅತ್ಯುತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರು ನಿರ್ಧರಿಸಿದಂತೆ ನಾವು ನಮ್ಮ ಕೆಲಸ ಮಾಡುತ್ತೇವೆ. ಆದಾಗ್ಯೂ ಮುಂದಿನ ವರ್ಷ ಅವರು ಸಿಎಸ್‌ಕೆಗೆ ಲಭ್ಯವಾಗುತ್ತಾರೆ ಎಂದೇ ನಾವು ಭಾವಿಸುತ್ತೇವೆ ” ಎಂದು ಕಾಶಿ ವಿಶ್ವನಾಥನ್ ಸಿಎಸ್​ಕೆ ಯ ಯೂಟ್ಯೂಬ್ ಚಾನೆಲ್‌ ಮೂಲಕ ಹೇಳಿದ್ದಾರೆ.

ಸ್ಟೀಫನ್ ಫ್ಲೆಮಿಂಗ್ ಬಗ್ಗೆ ಹೆಚ್ಚು ಚರ್ಚಿಸಿಲ್ಲ.

ಭಾರತೀಯ ಪುರುಷರ ಹಿರಿಯ ತಂಡದ ಮುಖ್ಯ ತರಬೇತುದಾರರಾಗಿ ಸಿಎಸ್​ಕೆ ಕೋಚ್​ ಸ್ಟೀಫನ್ ಫ್ಲೆಮಿಂಗ್ ಹೋಗುತ್ತಾರೆ ಎಂಬುದರ ಬಗ್ಗೆಯೂ ಕಾಶಿ ವಿಶ್ವನಾಥನ್ ಅವರು ಮಾತನಾಡಿದರು. ಸಿಎಸ್ಕೆ ತಂಡದ ಮುಖ್ಯ ಕೋಚ್ ಹುದ್ದೆಗೆ ಸ್ಟೀಫನ್ ಫ್ಲೆಮಿಂಗ್ ಬದ್ಧರಾಗಿದ್ದಾರೆ. ಭಾರತದ ಮುಖ್ಯ ತರಬೇತುದಾರನ ಹುದ್ದೆಯನ್ನು ವಹಿಸಿಕೊಳ್ಳುವುದು ಫ್ಲೆಮಿಂಗ್​ ಅವರಿಗೆ ಇಷ್ಟವಾಗುವುದಿಲ್ಲ ಎಂದು ವಿಶ್ವನಾಥನ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Virat Kohli : ಕೊಹ್ಲಿಯ ಗೌರವ ಸಲ್ಲಿಸಲೇಬೇಕು ಎಂದು ಹೇಳಿದ ಆಸ್ಟ್ರೇಲಿಯಾದ ಮಾಜಿ ಬ್ಯಾಟರ್​​
“ನಾನು ತಮಾಷೆಯಾಗಿ ಸ್ಟೀಫನ್ ಅವರನ್ನು ಕೇಳಿದ್ದೆ. ‘ನೀವು ಭಾರತೀಯ ಕೋಚಿಂಗ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದೀರಾ? ಸ್ಟೀಫನ್ ಸುಮ್ಮನೆ ನಕ್ಕರು ಮತ್ತು ಹೇಳಿದ್ದರು. ‘ನೀವು ನನ್ನನ್ನು ಬಯಸುತ್ತೀರಾ? ಎಂದು. ಅವರಿಗೆ ಆ ಹುದ್ದೆ ಆಗುವುದಿಲ್ಲ ಎಂದು ನನಗೆ ತಿಳಿದಿದೆ ಏಕೆಂದರೆ ಅವರು ವರ್ಷದಲ್ಲಿ ಒಂಬತ್ತು-ಹತ್ತು ತಿಂಗಳು [ತರಬೇತಿಯಲ್ಲಿ] ತೊಡಗಿಸಿಕೊಳ್ಳಲು ಇಷ್ಟಪಡುವುದಿಲ್ಲ. ಅದು ನನ್ನ ಭಾವನೆ. ನಾನು ಅವರ ಬಗ್ಗೆ ಹೆಚ್ಚು ಚರ್ಚಿಸಿಲ್ಲ “ಎಂದು ವಿಶ್ವನಾಥನ್ ಹೇಳಿದರು.

Continue Reading

ದೇಶ

Prashant Kishor: ಜೂನ್‌ 4ರಂದು ಪ್ರತಿಪಕ್ಷಗಳು ನೀರು ಕುಡಿಯಲಿವೆ; ಪ್ರಶಾಂತ್‌ ಕಿಶೋರ್‌ ಮಾತಿನ ಮರ್ಮವೇನು?

Prashant Kishor: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂಬುದಾಗಿ ಪ್ರಶಾಂತ್‌ ಕಿಶೋರ್‌ ಪ್ರತಿಪಾದಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ, ಪ್ರಶಾಂತ್‌ ಕಿಶೋರ್‌ ಅವರು ಪ್ರತಿಪಕ್ಷಗಳಿಗೆ, ಟೀಕಾಕಾರರಿಗೆ ವ್ಯಂಗ್ಯವಾಗಿ ಉತ್ತರ ನೀಡಿದ್ದಾರೆ. “ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಜೂನ್‌ 4ರಂದು ಪಕ್ಕದಲ್ಲಿ ನೀರು ಇಟ್ಟುಕೊಂಡಿರಿ” ಎಂದು ಪೋಸ್ಟ್‌ ಮಾಡಿದ್ದಾರೆ. ಬಿಜೆಪಿಗೆ 300ಕ್ಕೂ ಅಧಿಕ ಸ್ಥಾನಗಳು ಲಭಿಸುವುದು ನಿಶ್ಚಿತ ಎಂಬುದಾಗಿ ಪ್ರಶಾಂತ್‌ ಕಿಶೋರ್‌ ಹೇಳಿದ್ದರು.

VISTARANEWS.COM


on

Prashant Kishor
Koo

ನವದೆಹಲಿ: ಚುನಾವಣಾ ರಣತಂತ್ರಗಾರ, ರಾಜಕೀಯ ತಜ್ಞ ಪ್ರಶಾಂತ್‌ ಕಿಶೋರ್‌ (Prashant Kishor) ಅವರು ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶದ ಬಗ್ಗೆ ಮಾತನಾಡಿರುವ, ಸಂದರ್ಶನದಲ್ಲಿ ಉಲ್ಲೇಖಿಸಿರುವ ಅಂಶಗಳು ದೇಶಾದ್ಯಂತ ಚರ್ಚೆಯಾಗುತ್ತಿವೆ. ನರೇಂದ್ರ ಮೋದಿ (Narendra Modi) ಅವರ ವರ್ಚಸ್ಸು ಕಡಿಮೆಯಾದರೂ ಬಿಜೆಪಿ ಬಹುಮತ ಸಾಬೀತುಪಡಿಸಲಿದೆ ಎಂಬುದಾಗಿ ವಿಶ್ಲೇಷಿಸಿದ್ದಾರೆ. ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂಬುದಾಗಿ ಪ್ರಶಾಂತ್‌ ಕಿಶೋರ್‌ ಪ್ರತಿಪಾದಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ, ಪ್ರಶಾಂತ್‌ ಕಿಶೋರ್‌ ಅವರು ಪ್ರತಿಪಕ್ಷಗಳಿಗೆ, ಟೀಕಾಕಾರರಿಗೆ ವ್ಯಂಗ್ಯವಾಗಿ ಉತ್ತರ ನೀಡಿದ್ದಾರೆ. “ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಜೂನ್‌ 4ರಂದು ಪಕ್ಕದಲ್ಲಿ ನೀರು ಇಟ್ಟುಕೊಂಡಿರಿ” ಎಂದು ಪೋಸ್ಟ್‌ ಮಾಡಿದ್ದಾರೆ.

“ಹೆಚ್ಚಿನ ಪ್ರಮಾಣದ ನೀರು ಕುಡಿಯುವುದರಿಂದ ದೇಹ ಹಾಗೂ ಮನಸ್ಸು ನಿರ್ಜಲೀಕರಣಗೊಳ್ಳುತ್ತದೆ. ನಾನು ನೀಡಿರುವ ಸಮೀಕ್ಷಾ ವರದಿಯ ಕುರಿತು ಗಾಬರಿಗೊಂಡವರು ಜೂನ್‌ 4ರಂದು ಹೆಚ್ಚಿನ ಪ್ರಮಾಣದ ನೀರನ್ನು ಪಕ್ಕದಲ್ಲೇ ಇಟ್ಟುಕೊಳ್ಳುವುದು ತುಂಬ ಒಳಿತು” ಎಂಬುದಾಗಿ ಪ್ರಶಾಂತ್‌ ಕಿಶೋರ್‌ ಅವರು ಎಕ್ಸ್‌ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಷ್ಟೇ ಅಲ್ಲ, 2021ರಲ್ಲಿ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆ ಫಲಿತಾಂಶ ಹಾಗೂ ಪ್ರಶಾಂತ್‌ ಕಿಶೋರ್‌ ಲೆಕ್ಕಾಚಾರ ನಿಖರವಾಗಿತ್ತು ಎಂಬುದನ್ನು ಕೂಡ ಅವರು ನೆನಪಿಸಿದ್ದಾರೆ.

ಪ್ರಶಾಂತ್‌ ಕಿಶೋರ್‌ ಹೇಳಿದ್ದೇನು?

ಕೆಲ ದಿನಗಳ ಹಿಂದಷ್ಟೇ ಸಂದರ್ಶನವೊಂದರಲ್ಲಿ ಪ್ರಶಾಂತ್‌ ಕಿಶೋರ್‌ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದರು. “ದೇಶದಲ್ಲಿ ನರೇಂದ್ರ ಮೋದಿ ಅವರ ವರ್ಚಸ್ಸು ಕಡಿಮೆಯಾದರೂ ಜನಕ್ಕೆ ಅವರ ಮೇಲೆ ಸಿಟ್ಟಿಲ್ಲ. ಹಾಗಾಗಿ, ಬಿಜೆಪಿ 300ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ” ಎಂದಿದ್ದರು. ಹಾಗೆಯೇ, ವಿರೋಧ ಪಕ್ಷಗಳ ಕಾರ್ಯ ವೈಖರಿಯನ್ನೂ ಅವರು ಟೀಕಿಸಿದ್ದರು. ಬಿಜೆಪಿ ವಿರುದ್ಧ ಪ್ರಯೋಗಿಸಬಹುದಾದ ಅನೇಕ ಅಸ್ತ್ರಗಳನ್ನು, ಅವಕಾಶಗಳನ್ನು ʼಇಂಡಿಯಾʼ ಮೈತ್ರಿಕೂಟ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದರು.

ಕಾಂಗ್ರೆಸ್‌ ರಾಜ್ಯ ವಿಧಾನಸಭಾ ಚುನಾವಣೆಗಳ ಮೇಲೆ ಗಮನ ಕೇಂದ್ರೀಕರಿಸಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಮತ್ತು ಡಿಸೆಂಬರ್ ನಡುವಿನ ನಿರ್ಣಾಯಕ ತಿಂಗಳುಗಳು ವ್ಯರ್ಥವಾಗಿದೆ. ಇದು ʼಇಂಡಿಯಾʼ ಬಣದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಅವರು ಒತ್ತಿ ಹೇಳಿದ್ದರು. ಡಿಸೆಂಬರ್‌ನಲ್ಲಿ ಮೂರು ರಾಜ್ಯಗಳಲ್ಲಿನ ಬಿಜೆಪಿಯ ಗೆಲುವು ಮತ್ತು ಜನವರಿಯಲ್ಲಿ ನಡೆದ ಅಯೋಧ್ಯೆ ರಾಮ ಮಂದಿರದ ಉದ್ಘಾಟನೆ ಕಮಲ ಪಡೆಯ ಗೆಲುವಿಗೆ ಇನ್ನಷ್ಟು ಶಕ್ತಿ ನೀಡಲಿದೆ ಎಂದಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿದ್ದವು.

ಇದನ್ನೂ ಓದಿ: Lok Sabha Election : ಬಿಜೆಪಿ 305 ಸೀಟ್ ಗೆಲ್ಲೋದು ಗ್ಯಾರಂಟಿ; ಅಮೆರಿಕದ ರಾಜಕೀಯ ಪಂಡಿತನ ಭವಿಷ್ಯ

Continue Reading

ಕ್ರೀಡೆ

Virat Kohli : ಕೊಹ್ಲಿಗೆ ಗೌರವ ಸಲ್ಲಿಸಲೇಬೇಕು ಎಂದು ಹೇಳಿದ ಆಸ್ಟ್ರೇಲಿಯಾದ ಮಾಜಿ ಬ್ಯಾಟರ್​​

Virat Kohli: ವಿರಾಟ್ ಕೊಹ್ಲಿ ಬ್ಯಾಟಿಂಗ್ ಸಾಮರ್ಥ್ಯವನ್ನು ಮಾತ್ರ ಮ್ಯಾಥ್ಯೂ ಹೇಡನ್ ಹೊಗಳಲಿಲ್ಲ. ಅವರ ಫೀಲ್ಡಿಂಗ್​ ಕರಾಮತ್ತನ್ನು ಕೂಡ ಮೆಚ್ಚಿದ್ದಾರೆ. ಮೈದಾನದಲ್ಲಿ ಚಿಗರೆಯಂತೆ ಓಡಿ ಫೀಲ್ಡಿಂಗ್ ಮಾಡುವ ಅವರಿಂದಾಗಿ ವಿಕೆಟ್​ಗಳು ಲಭಿಸಿವೆ ಎಂಬುದಾಗಿ ಹೇಡನ್​ ಹೇಳಿದ್ದಾರೆ. ಅವರ ಅತ್ಯುತ್ತಮ ಪ್ರಯತ್ನದಿಂದಾಗಿಯೇ ಆರ್​ಸಿಬಿ ತಂಡ ಪ್ಲೇಆಫ್​ ಹಂತಕ್ಕೆ ಏರಲು ಸಾಧ್ಯವಾಯಿತು. ಹೀಗಾಗಿ ಕೊಹ್ಲಿಗೆ ನಿಜವಾದ ಗೌರವ ಸಲ್ಲಬೇಕು ಎಂದು ಮಾಜಿ ಆರಂಭಿಕ ಬ್ಯಾಟರ್ ನುಡಿದಿದ್ದಾರೆ.

VISTARANEWS.COM


on

Virat Kohli
Koo

ಬೆಂಗಳೂರು: ಮೇ 22 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024 ರ ಎಲಿಮಿನೇಟರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಾಲ್ಕು ವಿಕೆಟ್‌ಗಳ ಸೋಲನ್ನು ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಮತ್ತು ವೀಕ್ಷಕ ವಿವರಣೆಗಾರ ಮ್ಯಾಥ್ಯೂ ಹೇಡನ್ ಬೇಸರದ ವಿಷಯ ಎಂದು ವಿಶ್ಲೇಷಿಸಿದ್ದಾರೆ. ಇದೇ ವೇಳೆ ಅವರು ವಿರಾಟ್​ ಕೊಹ್ಲಿಗೆ ನಿಜವಾದ ಗೌರವ ಸಲ್ಲಿಸಬೇಕು. ತಂಡದ ಸೋಲಿಗೆ ಅವರನ್ನು ಹೊಣೆಗಾರನನ್ನಾಗಿ ಮಾಡಬಾರದು ಒತ್ತಿ ಹೇಳಿದರು. ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗರು ಪಂದ್ಯದುದ್ದಕ್ಕೂ ಕೊಹ್ಲಿಯ ಸಮರ್ಪಣೆ ಮತ್ತು ಪ್ರಭಾವಶಾಲಿ ಆಟವನ್ನು ಶ್ಲಾಘಿಸಿದ್ದಾರೆ.

ವಿರಾಟ್ ಕೊಹ್ಲಿ ಬ್ಯಾಟಿಂಗ್ ಸಾಮರ್ಥ್ಯವನ್ನು ಮಾತ್ರ ಮ್ಯಾಥ್ಯೂ ಹೇಡನ್ ಹೊಗಳಲಿಲ್ಲ. ಅವರ ಫೀಲ್ಡಿಂಗ್​ ಕರಾಮತ್ತನ್ನು ಕೂಡ ಮೆಚ್ಚಿದ್ದಾರೆ. ಮೈದಾನದಲ್ಲಿ ಚಿಗರೆಯಂತೆ ಓಡಿ ಫೀಲ್ಡಿಂಗ್ ಮಾಡುವ ಅವರಿಂದಾಗಿ ವಿಕೆಟ್​ಗಳು ಲಭಿಸಿವೆ ಎಂಬುದಾಗಿ ಹೇಡನ್​ ಹೇಳಿದ್ದಾರೆ. ಅವರ ಅತ್ಯುತ್ತಮ ಪ್ರಯತ್ನದಿಂದಾಗಿಯೇ ಆರ್​ಸಿಬಿ ತಂಡ ಪ್ಲೇಆಫ್​ ಹಂತಕ್ಕೆ ಏರಲು ಸಾಧ್ಯವಾಯಿತು. ಹೀಗಾಗಿ ಕೊಹ್ಲಿಗೆ ನಿಜವಾದ ಗೌರವ ಸಲ್ಲಬೇಕು ಎಂದು ಮಾಜಿ ಆರಂಭಿಕ ಬ್ಯಾಟರ್ ನುಡಿದಿದ್ದಾರೆ.

ಆರ್‌ಆರ್ ವಿರುದ್ಧ 24 ಎಸೆತಗಳಲ್ಲಿ 33 ರನ್ ಬಾರಿಸಿದ ಕೊಹ್ಲಿ ಅದ್ಭುತ ಮೈಲಿಗಲ್ಲನ್ನು ಸಾಧಿಸಿದ್ದರು. ಐಪಿಎಲ್‌ನಲ್ಲಿ 8000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹೇಡನ್ ಇದನ್ನು ಅಸಾಮಾನ್ಯ ಸಾಧನೆ ಎಂದು ಕರೆದಿದ್ದಾರೆ. ಭಾರತೀಯ ಬ್ಯಾಟಿಂಗ್ ಮಾಸ್ಟರ್ ಅವರು ಎಂದು ಹೇಳಿದ್ದಾರೆ

ಇದಲ್ಲದೆ, ಐಪಿಎಲ್ 2024 ರಲ್ಲಿ ಆರ್​​ಬಿಗಾಗಿ ಕೊಹ್ಲಿ ತೋರಿದ ಸ್ಪರ್ಧಾತ್ಮಕ ಮನೋಭಾವ ಸ್ಥಿರ ಪ್ರದರ್ಶನವನ್ನು ಹೇಡನ್ ಶ್ಲಾಘಿಸಿದರು. ಬಲಗೈ ಬ್ಯಾಟರ್​ ಈ ಋತುವಿನಲ್ಲಿ ರನ್‌ಗಾಗಿ ಹಸಿದ ರೀತಿಯಲ್ಲಿ ತೋರುತ್ತಿದ್ದರು. ಮೈದಾದನದಲ್ಲಿ ಅವರ ಉಪಸ್ಥಿತಿಯು ಪರಿಣಾಮ ಬೀರಿತ್ತು. ಬೆಂಗಳೂರು ತಂಡ ಪ್ಲೇಆಫ್‌ ಪ್ರವೇಶಿಸುವಲ್ಲಿ ಅವರ ಪಾತ್ರ ಮುಖ್ಯ ಎಂದು ಹೇಳಿದರು.

ಆರ್‌ಆರ್‌ಗೆ ಆರ್‌ಸಿಬಿ ಸೋಲಿಗೂ ವಿರಾಟ್ ಕೊಹ್ಲಿಗೂ ಯಾವುದೇ ಸಂಬಂಧವಿಲ್ಲ: ಮ್ಯಾಥ್ಯೂ ಹೇಡನ್

ಮ್ಯಾಥ್ಯೂ ಹೇಡನ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೀಗೆ ಹೇಳಿದ್ಧಾರೆ. “ಈ ಸೋಲಿಗೆ ಕೊಹ್ಲಿಯೊಂದಿಗೆ ಯಾವುದೇ ಸಂಬಂಧವಿಲ್ಲ. ನಮಗೆ ತಿಳಿದಿದೆ, ಅವರು ತನ್ನ ಸಂಪೂರ್ಣ ಹೃದಯ ಮತ್ತು ಆತ್ಮವನ್ನು ತಂಡಕ್ಕಾಗಿ ಕೊಟ್ಟಿದ್ದಾರೆ. ಅವರ ಫೀಲ್ಡಿಂಗ್ ಪ್ರಯತ್ನದ ಬಗ್ಗೆ ನೀವು ಯೋಚಿಸಿದಾಗ ಇನ್ನು ವಿಶೇಷ ಎನಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Glenn Maxwell : ಮ್ಯಾಕ್ಸ್​​ವೆಲ್​ಗೆ ಕೊಟ್ಟ ಹಣ ವಾಪಸ್​ ಪಡೆಯಿರಿ; ಅಭಿಮಾನಿಗಳ ಒತ್ತಾಯ

ವಿರಾಟ್ ಕೊಹ್ಲಿ ಈ ಋತುವಿನಲ್ಲಿ ಬ್ಯಾಟ್‌ನೊಂದಿಗೆ ಅದ್ಭುತವಾಗಿದ್ದರು. 15 ಪಂದ್ಯಗಳಲ್ಲಿ 154 ರ ಪ್ರಭಾವಶಾಲಿ ಸ್ಟ್ರೈಕ್ ರೇಟ್‌ನಲ್ಲಿ 741 ರನ್ ಗಳಿಸಿದ್ದಾರೆ. ಪಂದ್ಯಾವಳಿಯಲ್ಲಿ ಕೊಹ್ಲಿ ಆಗಾಗ್ಗೆ ಆರ್​ಸಿಬಿ ತಂಡವನ್ನು ಅನ್ನು ಏಕಾಂಗಿಯಾಗಿ ಗೆಲ್ಲಿಸಿದ್ದರು. 2024 ರಲ್ಲಿ ಮುಂಬರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕೊಹ್ಲಿ ಶೀಘ್ರದಲ್ಲೇ T20 ವಿಶ್ವಕಪ್ 2024 ಗಾಗಿ ಭಾರತೀಯ ತಂಡದೊಂದಿಗೆ ಯುಎಸ್​ಎ ಮತ್ತು ವೆಸ್ಟ್​ ಇಂಡೀಸ್​​ಗೆ ತೆರಳಲಿದ್ದಾರೆ. ಅವರು ಜೂನ್ 5 ರಂದು ನ್ಯೂಯಾರ್ಕ್‌ನಲ್ಲಿ ಐರ್ಲೆಂಡ್ ವಿರುದ್ಧ ತಮ್ಮ ಅಭಿಯಾನ ಪ್ರಾರಂಭಿಸಲಿದ್ದಾರೆ. ಆರ್​ಸಿಬಿ ಓಪನರ್ ಐಪಿಎಲ್ 2024 ರಲ್ಲಿ ಉತ್ತಮ ಫಾರ್ಮ್​ ತೋರಿದ ಕಾರಣ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕ ಆಟಗಾರನಾಗಿ ಆಡುವ ಸಾಧ್ಯತೆಯಿದೆ.

Continue Reading
Advertisement
IPL 2024
ಪ್ರಮುಖ ಸುದ್ದಿ6 mins ago

IPL 2024 : ಮಾಜಿ ನಾಯಕ ಶೇನ್​ ವಾರ್ನ್​ ದಾಖಲೆ ಸರಿಗಟ್ಟಿದ ಸಂಜು ಸ್ಯಾಮ್ಸನ್​

IPL 2024
ಕ್ರೀಡೆ28 mins ago

IPL 2024 : ಮುಂದಿನ ವರ್ಷವೂ ಧೋನಿ ಐಪಿಎಲ್​ ಆಡ್ತಾರೆ; ಸಿಎಸ್​ಕೆ ಸಿಇಒ ಸ್ಪಷ್ಟನೆ

Golden Star Ganesh Krishnam Pranaya Sakhi movie first song release on May 25 in Mysore
ಸಿನಿಮಾ35 mins ago

Golden Star Ganesh: ಮೈಸೂರಿನಲ್ಲಿ ಮೇ 25ರಂದು ʼಕೃಷ್ಣಂ ಪ್ರಣಯ ಸಖಿʼ ಚಿತ್ರದ ಫಸ್ಟ್‌ ಸಾಂಗ್‌ ರಿಲೀಸ್‌

Prashant Kishor
ದೇಶ54 mins ago

Prashant Kishor: ಜೂನ್‌ 4ರಂದು ಪ್ರತಿಪಕ್ಷಗಳು ನೀರು ಕುಡಿಯಲಿವೆ; ಪ್ರಶಾಂತ್‌ ಕಿಶೋರ್‌ ಮಾತಿನ ಮರ್ಮವೇನು?

Virat Kohli
ಕ್ರೀಡೆ55 mins ago

Virat Kohli : ಕೊಹ್ಲಿಗೆ ಗೌರವ ಸಲ್ಲಿಸಲೇಬೇಕು ಎಂದು ಹೇಳಿದ ಆಸ್ಟ್ರೇಲಿಯಾದ ಮಾಜಿ ಬ್ಯಾಟರ್​​

Karnataka rain
ಮಳೆ2 hours ago

Karnataka Rain : ಮಳೆ ಅವಘಡಕ್ಕೆ ಜನರು ತತ್ತರ; ಧರೆಗುರುಳಿದ ಮರಗಳು, ಕುಸಿದು ಬಿದ್ದ ಮನೆಗಳು

Shivasharane Hemaraddi Mallamma Jayanti celebration in Srisailam
ಯಾದಗಿರಿ2 hours ago

Yadgiri News: ಶ್ರೀಶೈಲಂನಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ

union minister Pralhad Joshi latest statement in bidar
ಕರ್ನಾಟಕ2 hours ago

Pralhad Joshi: ಅಮಾಯಕ ಹೆಣ್ಣುಮಕ್ಕಳ ಹತ್ಯೆಯಾದರೂ ಪೊಲೀಸರ ಮೌನ; ಪ್ರಲ್ಹಾದ ಜೋಶಿ ಆರೋಪ

Rave party 86 people including Hema and Ashi consumed drugs in the rave party Blood report positive
ಕ್ರೈಂ2 hours ago

Rave party: ರೇವ್‌ ಪಾರ್ಟಿಯಲ್ಲಿ ಹೇಮಾ, ಆಶಿ ಸೇರಿ 86 ಮಂದಿಯಿಂದ ಮಾದಕ ವಸ್ತು ಸೇವನೆ; ಬ್ಲಡ್‌ ರಿಪೋರ್ಟ್‌ ಪಾಸಿಟಿವ್‌

Remedies For SadeSati
ಧಾರ್ಮಿಕ2 hours ago

Remedies For SadeSati: ಶನಿಯ ವಕ್ರದೃಷ್ಟಿ ಕಡಿಮೆ ಮಾಡಲು ಇಲ್ಲಿದೆ ಸುಲಭ ಪರಿಹಾರ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ15 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌