Virat Kohli : ಹಣ, ಹೆಸರು ಬಂದ ತಕ್ಷಣ ಕೊಹ್ಲಿಗೆ ಅಹಂಕಾರ ಬಂತು; ಮಾಜಿ ಆಟಗಾರನ ಅರೋಪ - Vistara News

ಪ್ರಮುಖ ಸುದ್ದಿ

Virat Kohli : ಹಣ, ಹೆಸರು ಬಂದ ತಕ್ಷಣ ಕೊಹ್ಲಿಗೆ ಅಹಂಕಾರ ಬಂತು; ಮಾಜಿ ಆಟಗಾರನ ಅರೋಪ

Virat Kohli : ನಂತರ 2017 ರಲ್ಲಿ, ಅವರು ಏಕದಿನ ಮತ್ತು ಟಿ 20 ಐ ತಂಡಗಳ ಉಸ್ತುವಾರಿ ವಹಿಸಿಕೊಂಡರು. 2021 ರ ಟಿ 20 ವಿಶ್ವಕಪ್ ನಂತರ, ಕೊಹ್ಲಿ ಒಂದರ ನಂತರ ಒಂದರಂತೆ ನಾಯಕತ್ವದಿಂದ ಕೆಳಗಿಳಿಯಲು ಪ್ರಾರಂಭಿಸಿದರು. ಭಾರತಕ್ಕಾಗಿ 22 ಟೆಸ್ಟ್, 36 ಏಕದಿನ ಮತ್ತು 10 ಟಿ 20 ಪಂದ್ಯಗಳನ್ನು ಆಡಿರುವ ಮಿಶ್ರಾ, ವಿರಾಟ್ ಮತ್ತು ರೋಹಿತ್ ಶರ್ಮಾ ಅವರ ಸ್ವಭಾವವನ್ನು ಹೋಲಿಕೆ ಮಾಡಿದ್ದಾರೆ.

VISTARANEWS.COM


on

Virat Kohli
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ವಿರಾಟ್ ಕೊಹ್ಲಿ (Virat Kohli) ತಮ್ಮ ಆರಂಭಿಕ ದಿನಗಳಲ್ಲಿ ಹೇಗಿದ್ದರೋ ಅದಕ್ಕಿಂತ ಸಾಕಷ್ಟು ಬದಲಾಗಿದ್ದಾರೆ ಎಂದು ಹಿರಿಯ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಆರೋಪಿಸಿದ್ದಾರೆ. ಕೊಹ್ಲಿಯೊಂದಿಗೆ ಸಾಕಷ್ಟು ಅಂತರರಾಷ್ಟ್ರೀಯ ಕ್ರಿಕೆಟ್ ಆಡಿರುವ ಮಿಶ್ರಾ ದೆಹಲಿ ಕ್ರಿಕೆಟಿಗ ತನ್ನ ವೃತ್ತಿಜೀವನವು ಮುಂದುವರಿದಂತೆ ಖ್ಯಾತಿ ಮತ್ತು ಹಣ ಗಳಿಸಿದ ನಂತರ ಬದಲಾಗಿದ್ದಾನೆ ಎಂದು ಹೇಳಿದ್ದಾರೆ. 2014-15ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎಂಎಸ್ ಧೋನಿ ನಿವೃತ್ತಿ ಘೋಷಿಸಿದಾಗ ಕೊಹ್ಲಿ ನಾಯಕತ್ವದ ಅವಕಾಶ ಪಡೆದಿದ್ದರು.

ನಂತರ 2017 ರಲ್ಲಿ, ಅವರು ಏಕದಿನ ಮತ್ತು ಟಿ 20 ಐ ತಂಡಗಳ ಉಸ್ತುವಾರಿ ವಹಿಸಿಕೊಂಡರು. 2021 ರ ಟಿ 20 ವಿಶ್ವಕಪ್ ನಂತರ, ಕೊಹ್ಲಿ ಒಂದರ ನಂತರ ಒಂದರಂತೆ ನಾಯಕತ್ವದಿಂದ ಕೆಳಗಿಳಿಯಲು ಪ್ರಾರಂಭಿಸಿದರು. ಭಾರತಕ್ಕಾಗಿ 22 ಟೆಸ್ಟ್, 36 ಏಕದಿನ ಮತ್ತು 10 ಟಿ 20 ಪಂದ್ಯಗಳನ್ನು ಆಡಿರುವ ಮಿಶ್ರಾ, ವಿರಾಟ್ ಮತ್ತು ರೋಹಿತ್ ಶರ್ಮಾ ಅವರ ಸ್ವಭಾವವನ್ನು ಹೋಲಿಕೆ ಮಾಡಿದ್ದಾರೆ.

ರೋಹಿತ್ ಬದಲಾಗಿಲ್ಲ. ಆದರೆ ಕೊಹ್ಲಿಯ ನಡವಳಿಕೆಯಲ್ಲಿ ತೀವ್ರ ಬದಲಾವಣೆಯಾಗಿದೆ ಎಂದು ಮಿಶ್ರಾ ಹೇಳಿದ್ದಾರೆ. ತಮ್ಮ ಕಾರ್ಯಕ್ರಮದಲ್ಲಿ ಯೂಟ್ಯೂಬರ್ ಶುಭಂಕರ್ ಮಿಶ್ರಾ ಅವರೊಂದಿಗೆ ಮಾತನಾಡುವಾಗ ಮಿಶ್ರಾ ಈ ಆರೋಪ ಮಾಡಿದ್ದಾರೆ

“ನಾನು ಸುಳ್ಳು ಹೇಳುವುದಿಲ್ಲ. ಒಬ್ಬ ಕ್ರಿಕೆಟಿಗನಾಗಿ, ನಾನು ಅವರನ್ನು ತುಂಬಾ ಗೌರವಿಸುತ್ತೇನೆ. ಆದರೆ ನಾನು ಮೊದಲಿನಂತೆ ಅವರೊಂದಿಗೆ ಅದೇ ಅಭಿಮಾನ ಹಂಚಿಕೊಳ್ಳುವುದಿಲ್ಲ. ವಿರಾಟ್ ಗೆ ಕಡಿಮೆ ಸ್ನೇಹಿತರು ಏಕೆ ಇದ್ದಾರೆ? ಅವರ ಮತ್ತು ರೋಹಿತ್ ಅವರ ಸ್ವಭಾವಗಳು ವಿಭಿನ್ನವಾಗಿವೆ. ರೋಹಿತ್ ಬಗ್ಗೆ ನಾನು ನಿಮಗೆ ಉತ್ತಮ ವಿಷಯ ಹೇಳುತ್ತೇನೆ. ನಾನು ಅವರನ್ನು ಮೊದಲ ದಿನ ಭೇಟಿಯಾದಾಗ ಮತ್ತು ಈಗ ನಾನು ಅವರನ್ನು ಭೇಟಿಯಾದಾಗ, ಅದೇ ರೋಹಿತ್ ಮುಂದಿರುತ್ತಾರೆ. ಆದ್ದರಿಂದ ನೀವು ಅವರೊಂದಿಗೆ ಉತ್ತಮ ಸಂಬಂಧ ಹೊಂದಬಹುದು. ಆದರೆ, ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುವ ಯಾರೊಂದಿಗಾದರೂ ಸಂಬಂಧ ಹೊಂದುವುದು ಸಾಧ್ಯವೇ ಎಂದು ಮಿಶ್ರಾ ಹೇಳಿದರು.

ಇದನ್ನೂ ಓದಿ: Jasprit Bumrah : ಬುಮ್ರಾ ಶೈಲಿಯಲ್ಲೇ ಬೌಲಿಂಗ್ ಮಾಡುವ ಪಾಕಿಸ್ತಾನದ ಬಾಲಕನ ವಿಡಿಯೊ ವೈರಲ್​

ವಿರಾಟ್ ಸಾಕಷ್ಟು ಬದಲಾಗುವುದನ್ನು ನಾನು ನೋಡಿದ್ದೇನೆ. ನಾವು ಮಾತನಾಡುವುದನ್ನು ಬಹುತೇಕ ನಿಲ್ಲಿಸಿದ್ದೆವು. ನೀವು ಖ್ಯಾತಿ ಮತ್ತು ಅಧಿಕಾರವನ್ನು ಪಡೆದಾಗ ಒಳ್ಳೆಯವರಾಗಬೇಕ. ನಾನು ಎಂದಿಗೂ ಅವರಲ್ಲಿ ಒಬ್ಬನಾಗಿರಲಿಲ್ಲ. ಕೊಹ್ಲಿ 14 ವರ್ಷದವನಿದ್ದಾಗಿನಿಂದಲೂ ನನಗೆ ಗೊತ್ತು. ಆತ ಹೆಚ್ಚು ಸಮೋಸಾ ತಿನ್ನುತ್ತಿದ್ದ. ಅವನಿಗೆ ಪ್ರತಿದಿನ ರಾತ್ರಿ ಪಿಜ್ಜಾ ಬೇಕಾಗಿತ್ತು. ಆದರೆ ನಾನು ಕಂಡಿರುವ ಕೊಹ್ಲಿ ಮತ್ತು ನಾಯಕ ವಿರಾಟ್ ಕೊಹ್ಲಿಯಲ್ಲಿ ಭಾರಿ ವ್ಯತ್ಯಾಸವಿದೆ. ಅವರು ನನ್ನನ್ನು ಭೇಟಿಯಾದಾಗಲೆಲ್ಲಾ ಬೇರೆ ರೀತಿ ಕಾಣುತ್ತಿದ್ದರು ಎಂದು ಮಿಶ್ರಾ ಹೇಳಿದ್ದಾರೆ.

ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆದ ಟಿ 20 ವಿಶ್ವಕಪ್ ಗೆದ್ದ ನಂತರ ಕೊಹ್ಲಿ ಇತ್ತೀಚೆಗೆ ಟಿ 20 ಯಿಂದ ನಿವೃತ್ತರಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಗೆದ್ದ ಫೈನಲ್ ನಲ್ಲಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ವಿಶ್ವಕಪ್, ಐಪಿಎಲ್ ಮತ್ತು ದ್ವಿಪಕ್ಷೀಯ ವ್ಯವಹಾರಗಳನ್ನು ಒಳಗೊಂಡ ಕ್ರಿಕೆಟ್​​ ಅಭಿಯಾನದ ನಂತರ ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಪ್ರಸ್ತುತ ವಿರಾಮದಲ್ಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಭವಿಷ್ಯ

Dina Bhavishya : ಈ ರಾಶಿಯವರಿಗೆ ಹೂಡಿಕೆ ವ್ಯವಹಾರವು ಇಮ್ಮಡಿ ಲಾಭ ತರುವುದು

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷದ ದಶಮಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

dina Bhavishya
Koo

ಚಂದ್ರನು ವೃಶ್ಚಿಕ ರಾಶಿಯಿಂದ ಮಂಗಳವಾರ ರಾತ್ರಿ 09:24ಕ್ಕೆ ಧನಸ್ಸು ರಾಶಿಗೆ ಪ್ರವೇಶಿಸುತ್ತಾನೆ. ಇದರಿಂದಾಗಿ ವೃಷಭ, ಮಿಥುನ, ಕನ್ಯಾ, ವೃಶ್ಚಿಕ, ಮಕರ, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ವೃಷಭ ರಾಶಿಯವರು ದ್ವೇಷದ ಭಾವನೆ ನಿಮ್ಮ ಮನಸ್ಸಿಗೆ ಅಸಮಾಧಾನ ತರುವುದರೊಂದಿಗೆ ಒತ್ತಡ ಉಂಟುಮಾಡುವ ಸಾಧ್ಯತೆ ಇದೆ. ಕುಟುಂಬದ ಸದಸ್ಯರೊಂದಿಗೆ ಸಮಾಧಾನದಿಂದ ವರ್ತಿಸಿ. ಮೌನದಿಂದ ಇರುವುದು ಒಳಿತು. ಕಟಕ ರಾಶಿಯವರು ಬಿಡುವಿಲ್ಲದ ಕೆಲಸದಿಂದ ಒತ್ತಡ, ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಆರ್ಥಿಕ ಪ್ರಗತಿ ಇರಲಿದೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿಯಾಗಲಿದ್ದು, ಮನಸ್ಸಿಗೆ ನೋವುಂಟು ಮಾಡಬಹುದು. ಆಪ್ತರೊಂದಿಗೆ ಭಾವನೆ ಹಂಚಿಕೊಳ್ಳುವಿರಿ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (16-07-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ.
ತಿಥಿ: ದಶಮಿ 20:33 ವಾರ: ಮಂಗಳವಾರ
ನಕ್ಷತ್ರ: ವಿಶಾಖ 26:12 ಯೋಗ: ಸಾಧ್ಯ 07:17
ಕರಣ: ತೈತುಲ 08:01 ಅಮೃತಕಾಲ: ಸಂಜೆ 04:48 ರಿಂದ 06:31
ದಿನದ ವಿಶೇಷ: ಉಡುಪಿ ಕೃಷ್ಣಮಠ ಮಹಾಭಿಷೇಕ

ಸೂರ್ಯೋದಯ : 06:01   ಸೂರ್ಯಾಸ್ತ : 06:50

ರಾಹುಕಾಲ: ಮಧ್ಯಾಹ್ನ 3.00 ರಿಂದ 4.30
ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30
ಯಮಗಂಡಕಾಲ: ಬೆಳಗ್ಗೆ 9.00 ರಿಂದ 10.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದೆ. ನಿಮ್ಮ ವರ್ತನೆ ಇತರರಿಗೆ ಒತ್ತಡ ಉಂಟುಮಾಡುವ ಸಾಧ್ಯತೆ ಇದೆ. ಹಣಕಾಸು ಪ್ರಗತಿ ಉತ್ತಮವಾಗಿರಲಿದೆ. ಧಾರ್ಮಿಕ ವ್ಯಕ್ತಿಗಳ ಭೇಟಿ ಮಾಡುವಿರಿ, ಕ್ಷೇತ್ರ ದರ್ಶನ ಮಾಡುವಿರಿ. ಕೌಟುಂಬಿಕವಾಗಿ ಸಾಧಾರಣ ಫಲ
ಅದೃಷ್ಟ ಸಂಖ್ಯೆ: 7

Horoscope Today

ವೃಷಭ: ದ್ವೇಷದ ಭಾವನೆ ನಿಮ್ಮ ಮನಸ್ಸಿಗೆ ಅಸಮಾಧಾನ ತರುವುದರೊಂದಿಗೆ ಒತ್ತಡ ಉಂಟುಮಾಡುವ ಸಾಧ್ಯತೆ ಇದೆ. ಕುಟುಂಬದ ಸದಸ್ಯರೊಂದಿಗೆ ಸಮಾಧಾನದಿಂದ ವರ್ತಿಸಿ. ಮೌನದಿಂದ ಇರುವುದು ಒಳಿತು. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 7

Horoscope Today

ಮಿಥುನ: ಮಹತ್ವಾಕಾಂಕ್ಷೆಯ ಯೋಜನೆಗಳು ಸಫಲವಾಗುವುದು. ಮಕ್ಕಳಿಗಾಗಿ ಖರ್ಚು ಮಾಡುವ ಅನಿವಾರ್ಯತೆ ಎದುರಾಗಲಿದೆ. ಅನವಶ್ಯಕವಾಗಿ ಒತ್ತಡ ತೆಗೆದುಕೊಂಡು ಜೀವನದ ಮಹತ್ವದ ವಿಷಯಗಳ ಬಗ್ಗೆ ಆಲಸ್ಯ ಮಾಡುವುದು ಬೇಡ. ಆರ್ಥಿಕವಾಗಿ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 5

Horoscope Today

ಕಟಕ: ಬಿಡುವಿಲ್ಲದ ಕೆಲಸದಿಂದ ಒತ್ತಡ, ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಆರ್ಥಿಕ ಪ್ರಗತಿ ಇರಲಿದೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿಯಾಗಲಿದ್ದು, ಮನಸ್ಸಿಗೆ ನೋವುಂಟು ಮಾಡಬಹುದು. ಆಪ್ತರೊಂದಿಗೆ ಭಾವನೆ ಹಂಚಿಕೊಳ್ಳುವಿರಿ. ಕುಟುಂಬದ ಸದಸ್ಯರಿಂದ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 8

Horoscope Today

ಸಿಂಹ: ಸಾಮಾಜಿಕವಾಗಿ ಮನ್ನಣೆ ಸಿಗಲಿದೆ. ಪ್ರಭಾವಿ ವ್ಯಕ್ತಿಗಳ ಬೆಂಬಲ ಪಡೆದು ಕಾರ್ಯದಲ್ಲಿ ಯಶಸ್ಸು ಪಡೆಯುವಿರಿ. ಬಹುದಿನಗಳ ಕನಸು ನನಸಾಗುವ ಸಮಯವಿದು. ಆರೋಗ್ಯದ ಬಗೆಗೆ ಕಾಳಜಿ ವಹಿಸಿ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ಕನ್ಯಾ: ಸಂತೋಷದಿಂದ ಇದ್ದು, ಇತರರಿಗೆ ಸಂತಸ ಹಂಚಿಕೊಳ್ಳಲು ಹವಣಿಸುವಿರಿ. ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಆತುರದ ಭರದಲ್ಲಿ ಇತರರನ್ನು ಟೀಕೆ ಮಾಡುವುದು ಬೇಡ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 5

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ನಿಮ್ಮ ಹರಿತವಾದ ಮಾತುಗಳಿಂದ ಇತರರ ಮನಸ್ಸು ನೋವು ಆಗವುದು ಬೇಡ, ಆಲೋಚಿಸಿ ಮಾತನಾಡಿ. ಕುಟುಂಬದ ಪ್ರತಿಯೊಂದು ವಿಷಯದಲ್ಲೂ ತಪ್ಪು ಹುಡುಕುವುದು ಬೇಡ, ಇದರಿಂದ ಮನಸ್ಸು ಘಾಸಿಯಾಗುವುದು. ಆಧ್ಯಾತ್ಮದ ಹಾದಿ ದಾರಿ ತೋರಿತು. ಗುರು ದತ್ತಾತ್ರೇಯನನ್ನು ಆರಾಧಿಸಿ. ಅದೃಷ್ಟ ಸಂಖ್ಯೆ: 7

Horoscope Today

ವೃಶ್ಚಿಕ : ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುಲು ಸಮಯ ನೀಡುವಿರಿ. ಆಧ್ಯಾತ್ಮಿಕ ವ್ಯಕ್ತಿಗಳ ಮಾರ್ಗದರ್ಶನ ಪಡೆಯುವಿರಿ. ಭೂಮಿ, ಆಸ್ತಿ ಖರೀದಿಗಾಗಿ ಆಲೋಚನೆ ಮಾಡುವಿರಿ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

Horoscope Today

ಧನಸ್ಸು: ದೀರ್ಘಕಾಲದ ಪ್ರಯಾಣ ಮಾಡಬೇಕಾದಿತು. ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಹೊಸ ಕೆಲಸಗಳಲ್ಲಿ ದಿನದ ಮಟ್ಟಿಗೆ ತೊಡಗುವುದು ಬೇಡ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ಮಕರ: ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಹಿಂದೆ ಮಾಡಿದ ಹೂಡಿಕೆ ವ್ಯವಹಾರವು ಇಮ್ಮಡಿ ಲಾಭ ತರುವುದು. ಮುಂಗೋಪ ದಿಂದ ನಷ್ಟ ಸಾಧ್ಯತೆ ಇದೆ. ಸ್ನೇಹಿತರ ಸಲಹೆ ಸಹಕಾರ ಸಿಗುವುದು. ಅದೃಷ್ಟ ಸಂಖ್ಯೆ: 6

Horoscope Today

ಕುಂಭ: ಆಲಸ್ಯದಿಂದ ಕಾರ್ಯ ಹಾನಿಯಾಗಲಿದೆ. ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ.
ಸೃಜನಾತ್ಮಕವಾಗಿ ಕೆಲಸ ಮಾಡಿ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

Horoscope Today

ಮೀನ: ಹೊಸ ಅವಕಾಶಗಳು ಗರಿಗೆದರಲಿವೆ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ನಿಮ್ಮ ಹಿಂದೆ ಟೀಕೆಗಳನ್ನು ಮಾಡುವ ಜನರಿಂದ ದೂರ ಇರಿ. ದಿನ ಮಟ್ಟಿಗೆ ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಆಗುವ ಸಾಧ್ಯತೆ ಇದೆ. ಸಂಗಾತಿಯ ಸ್ವಾರ್ಥದಿಂದ ಕುಟುಂಬದ ವಾತಾವರಣದಲ್ಲಿ ವ್ಯತ್ಯಾಸವಾಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 1

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ದೇಶ

Smriti Singh: ಹುತಾತ್ಮ ಯೋಧನ 1 ಕೋಟಿ ರೂಪಾಯಿಯಲ್ಲಿ ಪೋಷಕರಿಗೆ 50%, ಪತ್ನಿಗೆ 50%; ಕೊನೆಗೂ ಸಿಕ್ಕಿತು ನ್ಯಾಯ

Smriti Singh: ಕಳೆದ ವರ್ಷ ಸಿಯಾಚಿನ್‌ನಲ್ಲಿ ಹುತಾತ್ಮರಾದ ಅಂಶುಮಾನ್ ಸಿಂಗ್ ಅವರಿಗೆ ಜುಲೈ 5 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮರಣೋತ್ತರವಾಗಿ ಕೀರ್ತಿ ಚಕ್ರವನ್ನು ನೀಡಿ ಗೌರವಿಸಿದರು. ಹುತಾತ್ಮ ಯೋಧ ಅನ್ಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ಮತ್ತು ಅವರ ತಾಯಿ ಮಂಜು ದೇವಿ ಈ ಗೌರವವನ್ನು ಸ್ವೀಕರಿಸಿದರು. ಆದರೆ ಇದೀಗ ಮಾಧ್ಯಮದವರೊಂದಿಗೆ ಮಾತನಾಡಿದ ಹುತಾತ್ಮ ಯೋಧನ ಪೋಷಕರು ತಮ್ಮ ಸೊಸೆ ಸ್ಮೃತಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು.‌ ಈಗ ಪರಿಹಾರದ ಹಣವನ್ನು ಸಮನಾಗಿ ಹಂಚಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

VISTARANEWS.COM


on

Smriti Singh
Koo

ನವದೆಹಲಿ: ಕಾಶ್ಮೀರದಲ್ಲಿ ಕಳೆದ ವರ್ಷ (2023) ಹುತಾತ್ಮರಾಗಿದ್ದ ಕ್ಯಾಪ್ಟನ್‌ ಅಂಶುಮಾನ್‌ ಸಿಂಗ್‌(Captain Anshuman Singh) ಕುಟುಂಬದಲ್ಲಿ ಇದೀಗ ಒಡಕು ಮೂಡಿದೆ. ಇತ್ತೀಚೆಗಷ್ಟೇ ಯೋಧನ ಪತ್ನಿ ಸ್ಮೃತಿ ಸಿಂಗ್‌ (Smriti Singh) ಅವರು ರಾಷ್ಟ್ರಪತಿಯವರಿಂದ ಕೀರ್ತಿ ಚಕ್ರ (Keerthi Chakra) ಸ್ವೀಕರಿಸಿದ ಬಳಿಕ ಇದೀಗ ಅವರ ಪೋಷಕರು ಹೇಳಿಕೆ ನೀಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಹುತಾತ್ಮ ಯೋಧ ಕ್ಯಾಪ್ಟನ್ ಅನ್ಶುಮಾನ್ ಅವರ ಪೋಷಕರು ತಮ್ಮ ಹೇಳಿಕೆಯಲ್ಲಿ ತಮ್ಮ ಮಗ ಹುತಾತ್ಮನಾಗಿದ್ದಾನೆ ಆದರೆ ಸೊಸೆ ಎಲ್ಲವನ್ನೂ ತೆಗೆದುಕೊಂಡು ಹೋಗಿದ್ದಾಳೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ, ಹುತಾತ್ಮ ಯೋಧನ ಕುಟುಂಬಸ್ಥರಿಗೆ ಸರ್ಕಾರ ನೀಡುವ ಒಂದು ಕೋಟಿ ರೂ. ವಿಮಾ ಮೊತ್ತವನ್ನು ಯೋಧನ ತಂದೆ-ತಾಯಿ ಹಾಗೂ ಸ್ಮೃತಿ ಸಿಂಗ್‌ ಮಧ್ಯೆ ಸಮನಾಗಿ ಹಂಚಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಸೇನೆಯ ಮೂಲಗಳ ಪ್ರಕಾರ, ಆರ್ಮಿ ಗ್ರೂಪ್‌ ಇನ್ಶುರೆನ್ಸ್‌ ಫಂಡ್‌ನ ಒಂದು ಕೋಟಿ ರೂಪಾಯಿಯ ಮೊತ್ತವನ್ನು ಹುತಾತ್ಮ ಯೋಧನ ಪೋಷಕರು ಹಾಗೂ ಸ್ಮೃತಿ ಸಿಂಗ್‌ ಮಧ್ಯೆ ಸಮನಾಗಿ ಹಂಚಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಪಿಂಚಣಿಯ ಮೊತ್ತವು ನೇರವಾಗಿ ಸ್ಮೃತಿ ಸಿಂಗ್‌ ಖಾತೆ ಹೋಗುತ್ತದೆ. ಅಲ್ಲಿ ಹಂಚಿಕೆ ಮಾಡಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಇನ್ನು, ಉತ್ತರ ಪ್ರದೇಶ ಸರ್ಕಾರವು ಹುತಾತ್ಮ ಯೋಧನ ಕುಟುಂಬಸ್ಥರಿಗೆ 50 ಲಕ್ಷ ರೂ. ಘೋಷಿಸಿದ್ದು, ಅದರಲ್ಲಿ 35 ಲಕ್ಷ ರೂ. ಯೋಧನ ಪತ್ನಿಗೆ ಹಾಗೂ 15 ಲಕ್ಷ ರೂ. ಪೋಷಕರಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Captain Anshuman Singh

ಸ್ಮೃತಿ ಸಿಂಗ್‌ (Smriti Singh) ಬಗ್ಗೆ ಅಹ್ಮದ್‌ ಕೆ. ಎಂಬಾತನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಕಮೆಂಟ್‌ ಮಾಡಿದ್ದು, ಆತನ ವಿರುದ್ಧ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಫ್‌ಐಆರ್‌ ದಾಖಲಿಸಲಾಗಿದೆ. ಅಹ್ಮದ್‌ ಕೆ ಎಂಬಾತನ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

“ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಕಮೆಂಟ್‌ ಮಾಡಿದ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNS) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ” ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಶ್ಲೀಲ ಕಮೆಂಟ್‌ಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗವು ದೂರು ನೀಡಿದ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

2023ರ ಜುಲೈ 19ರಂದು ಸಿಯಾಚಿನ್‌ನಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಬೆಳಗಿನ ಜಾವ ಭಾರತೀಯ ಸೇನೆಯ ಶಸ್ತ್ರಾಸ್ತ್ರಗಳನ್ನು ಇರಿಸುವ ನೆಲೆಯಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿತ್ತು. ಫೈಬರ್‌ ಗ್ಲಾಸ್‌ನ ಕೋಣೆಯಲ್ಲಿ ಸಿಲುಕಿದ್ದ ಹಲವು ಸೈನಿಕರನ್ನು ಕ್ಯಾಪ್ಟನ್‌ ಅನ್ಶುಮಾನ್ ಸಿಂಗ್‌ ಅವರು ರಕ್ಷಣೆ ಮಾಡಿದ್ದರು. ಆದರೆ, ರಕ್ಷಣೆ ಮಾಡಿದ ಬಳಿಕ ಅವರೇ ಅಗ್ನಿಯ ಕೆನ್ನಾಲಗೆಗೆ ಸಿಲುಕಿ ಹುತಾತ್ಮರಾಗಿದ್ದರು.

ಇದನ್ನೂ ಓದಿ: Smriti Singh: ಹುತಾತ್ಮ ಯೋಧನ ಪತ್ನಿ ಬಗ್ಗೆ ಅಶ್ಲೀಲ ಕಮೆಂಟ್;‌ ಅಹ್ಮದ್‌ ವಿರುದ್ಧ ಎಫ್‌ಐಆರ್

Continue Reading

ಕರ್ನಾಟಕ

7th Pay Commission: ವೇತನ ಏರಿಕೆಗೆ ಒಪ್ಪಿಗೆ; ಒಪಿಎಸ್, ಆರೋಗ್ಯ ಯೋಜನೆ ಬೇಡಿಕೆ ಬಾಕಿ; ನೌಕರರ ಸಂಘದ ಮುಂದಿನ ನಿರ್ಧಾರ ಏನು?

7th Pay Commission: ಏಳನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಹಳೇ ಪಿಂಚಣಿ ಯೋಜನೆ, ಆರೋಗ್ಯ ಯೋಜನೆ ಸೇರಿ ಇತರ ಬೇಡಿಕೆಗಳ ಈಡೇರಿಕೆಗಾಗಿ ನೌಕರರ ಸಂಘವು ಜುಲೈ 23ರಂದು ಪ್ರಮುಖ ಸಭೆ ನಡೆಸಲು ತೀರ್ಮಾನಿಸಿದೆ. ಸಭೆಯಲ್ಲಿ ಚರ್ಚಿಸಿದ ಬಳಿಕ ಉಳಿದ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತದೆ ಎಂದು ತಿಳಿದುಬಂದಿದೆ.

VISTARANEWS.COM


on

7th Pay Commission
Koo

ಬೆಂಗಳೂರು: ಕರ್ನಾಟಕದಲ್ಲಿ 7ನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ (7th Pay Commission) ರಾಜ್ಯ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಪ್ರಸಕ್ತ ವರ್ಷದ ಆಗಸ್ಟ್‌ 1ರಿಂದಲೇ ಶಿಫಾರಸುಗಳು ಜಾರಿಗೆ ಬರಲಿವೆ. ಇದರಿಂದ ಲಕ್ಷಾಂತರ ನೌಕರರ (Karnataka Government Employees) ವೇತನವು ಶೇ.27.5ರಷ್ಟು ಏರಿಕೆಯಾಗಲಿದೆ. ಇನ್ನು, ರಾಜ್ಯ ಸರ್ಕಾರವು ಆಯೋಗದ ಶಿಫಾರಸುಗಳ ಜಾರಿ ಕುರಿತು ಸರ್ಕಾರದ ತೀರ್ಮಾನವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಸ್ವಾಗತಿಸಿದೆ. ಇದರ ಬೆನ್ನಲ್ಲೇ, ಹಳೇ ಪಿಂಚಣಿ ಯೋಜನೆ (ಒಪಿಎಸ್)‌, ಆರೋಗ್ಯ ಯೋಜನೆ ಬೇಡಿಕೆಗಳ ಈಡೇರಿಕೆಗೆ ಸಂಘವು ಒತ್ತಾಯಿಸಿದೆ.

ರಾಜ್ಯ ಸರ್ಕಾರದ ತೀರ್ಮಾನದ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದು, ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. “ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾದ 7ನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿರುವುದು ಸಮಾಧಾನಕರ ಸಂಗತಿಯಾಗಿದೆ. ಇದಕ್ಕಾಗಿ ನೌಕರರ ಸಂಘ ಸೇರಿ ಎಲ್ಲ ಸಂಘಗಳು ಹಾಗೂ ನೌಕರರ ಪರವಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ” ಎಂದು ತಿಳಿಸಿದರು.

ಜುಲೈ 23ರಂದು ಪ್ರಮುಖ ಸಭೆ

ಏಳನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಇತರ ಬೇಡಿಕೆಗಳ ಈಡೇರಿಕೆಗಾಗಿ ನೌಕರರ ಸಂಘವು ಜುಲೈ 23ರಂದು ಪ್ರಮುಖ ಸಭೆ ನಡೆಸಲು ತೀರ್ಮಾನಿಸಿದೆ. “ಹಳೇ ಪಿಂಚಣಿ ಯೋಜನೆ, ನೌಕರರಿಗೆ ಆರೋಗ್ಯ ಯೋಜನೆ ಸೇರಿ ಹಲವು ಬೇಡಿಕೆಗಳ ಈಡೇರಿಕೆ ಬಾಕಿ ಇದೆ. ಇಷ್ಟೆಲ್ಲ ವಿಚಾರಗಳ ಕುರಿತು ಚರ್ಚಿಸಲು ರಾಜ್ಯದ ಸರ್ಕಾರಿ ನೌಕರರ ಸಂಘಗಳ ಎಲ್ಲ ವೃಂದಗಳು, ರಾಜ್ಯ ಕೇಡರ್‌ ಅಸೋಸಿಯೇಷನ್‌ ಹಾಗೂ ಎಕ್ಸಿಕ್ಯೂಟಿವ್‌ ಸಭೆಯನ್ನು ಜುಲೈ 23ರಂದು ಕರೆಯಲಾಗಿದೆ. ಸಭೆಯಲ್ಲಿ ಎಲ್ಲ ವಿಷಯಗಳ ಕುರಿತು ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು” ಎಂದು ಸಿ.ಎಸ್.ಷಡಾಕ್ಷರಿ ಮಾಹಿತಿ ನೀಡಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಇತರ ಬೇಡಿಕೆಗಳು

1) ಎನ್.ಪಿ.ಎಸ್. ರದ್ದುಪಡಿಸಿ ಹಳೇ ಪಿಂಚಣೆ ಯೋಜನೆಯನ್ನು ಮರು ಜಾರಿಗೊಳಿಸುವುದು: ರಾಜ್ಯದ ಎನ್.ಪಿ.ಎಸ್. ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್.ಪಿ.ಎಸ್. ನೌಕರರನ್ನು ಓ.ಪಿ.ಎಸ್. ವ್ಯಾಪ್ತಿಗೆ ತರುವುದು ಸರ್ಕಾರದ ಜವಾಬ್ದಾರಿ. ಈಗಾಗಲೇ ಪಂಜಾಬ್, ರಾಜಸ್ಥಾನ, ಚತ್ತೀಸ್‌ ಘಡ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುವಂತೆ ಹಾಗೂ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಕರ್ನಾಟಕದಲ್ಲೂ ಸಹ ಎನ್.ಪಿ.ಎಸ್.
ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು.

2) ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸುವುದು: ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಚಿಕಿತ್ಸೆ ನೀಡುವ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ” (ಕೆ.ಎ.ಎಸ್.ಎಸ್)ಯನ್ನು ಜಾರಿಗೆ ತರಲು ಈ ಹಿಂದಿನ ರಾಜ್ಯ ಸರ್ಕಾರವು 2021-22ರ ಆಯವ್ಯದಲ್ಲಿ ಘೋಷಿಸಿತ್ತು. ಈಗಾಗಲೇ ಸಚಿವ ಸಂಪುಟದ ಅನುಮೋದನೆ ಪಡೆದು ದಿನಾಂಕ: 05-09-2022 ರಂದು ಸರ್ಕಾರಿ ಆದೇಶ ಹೊರಡಿಸಿರುತ್ತದೆ. ಈ ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ವೇತನದಿಂದ ಪ್ರತಿ ತಿಂಗಳು ವೃಂದವಾರು ವಂತಿಗೆ ಕಟಾವಣೆಯಾಗಲಿದ್ದು, ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ. ಯೋಜನೆಯ ಅನುಷ್ಟಾನಾಧಿಕಾರಿಗಳು ತಾಂತ್ರಿಕ ಹಾಗೂ ಇನ್ನಿತರೆ ಕಾರಣಗಳನ್ನು ನೀಡಿ ಈ ಯೋಜನೆಯನ್ನು ಜಾರಿಗೊಳಿಸಲು ಅನಗತ್ಯ ವಿಳಂಬ ಮಾಡುತ್ತಿದ್ದು, ಚಿಕಿತ್ಸೆ ಪಡೆಯಲು ನೌಕರರಿಗೆ ಆರ್ಥಿಕ ಹೊರೆಯಾಗುತ್ತಿರುವುದರಿಂದ ಶೀಘ್ರವಾಗಿ ಈ ಯೋಜನೆಯನ್ನು ಲೋಕಾರ್ಪಣೆ ಮಾಡುವುದು.

ಇದನ್ನೂ ಓದಿ: 7th Pay Commission: 7ನೇ ವೇತನ ಆಯೋಗ ಜಾರಿ; ನೌಕರರ ಸಂಬಳ ಎಷ್ಟು ಹೆಚ್ಚಾಗಲಿದೆ? ಇಲ್ಲಿದೆ ಪಟ್ಟಿ

Continue Reading

ಕ್ರಿಕೆಟ್

Jasprit Bumrah : ಬುಮ್ರಾ ಶೈಲಿಯಲ್ಲೇ ಬೌಲಿಂಗ್ ಮಾಡುವ ಪಾಕಿಸ್ತಾನದ ಬಾಲಕನ ವಿಡಿಯೊ ವೈರಲ್​

Jasprit Bumrah : ಚಿಕ್ಕ ಮಕ್ಕಳು ಜಸ್ಪ್ರೀತ್ ಬುಮ್ರಾ ಅವರ ಕ್ರಮವನ್ನು ನಕಲು ಮಾಡಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ಏಕೆಂದರೆ ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್​ನ ಮಕ್ಕಳು ಬುಮ್ರಾ ಅವರ ಬೌಲಿಂಗ್ ಕ್ರಮವನ್ನು ಅನುಕರಿಸುವ ವೀಡಿಯೊ ವೈರಲ್ ಆಗಿತ್ತು. ಬುಮ್ರಾ ಅವರ ವಿಶೇಷ ಬೌಲಿಂಗ್ ಶೈಲಿಯನ್ನು ಬೇರೆ ಬೇರೆ ರೀತಿಯಲ್ಲಿ ಅನುಕರಿಸುವುದಕ್ಕೆ ಕಾರಣ ಅವರ ಯಶಸ್ಸು. ಯಾಕೆಂದರೆ ಅವರು ಬೌಲಿಂಗ್​ನಲ್ಲಿ ಅತಿ ಹೆಚ್ಚು ವಿಕೆಟ್​ಗಳನ್ನು ಪಡೆಯುವ ಕಾರಣ ಮಕ್ಕಳು ಅದರ ಕಡೆಗೆ ಆಕರ್ಷಿತರಾಗಿದ್ದಾರೆ.

VISTARANEWS.COM


on

Jasprit Bumrah
Koo

ಬೆಂಗಳೂರು: ಮುಂಬೈ ಇಂಡಿಯನ್ ತಂಡದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಆಧುನಿಕ ಯುಗದ ಅತ್ಯುತ್ತಮ ವೇಗದ ಬೌಲರ್. ಅವರು ತಮ್ಮ ವೃತ್ತಿ ಜೀವನದ ಅತ್ಯುತ್ತಮ ಫಾರ್ಮ್​​ನಲ್ಲಿದ್ದಾರೆ. 2024 ರ ಟಿ 20 ವಿಶ್ವಕಪ್​​ನಲ್ಲಿ ಬುಮ್ರಾ ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಸಾಬೀತುಪಡಿಸಿದ್ದಾರೆ. ಅಲ್ಲಿ ಅವರು ತಮ್ಮ ಅದ್ಭುತ ಪ್ರದರ್ಶನಕ್ಕಾಗಿ ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಪ್ರಶಸ್ತಿ ಗೆದ್ದಿದ್ದಾರೆ. ಮುಕ್ತಾಯಗೊಂಡ ಆ ಆವೃತ್ತಿಯಲ್ಲಿ ಜಸ್ಪ್ರೀತ್ 15 ವಿಕೆಟ್​ಗಳನ್ನು ಪಡೆದುಕೊಂಡಿದ್ದಾರೆ. ಬುಮ್ರಾ ಅವರ ಕ್ರೇಜ್ ಮತ್ತು ಜನಪ್ರಿಯತೆ ವೇಗವಾಗಿ ಬೆಳೆಯುತ್ತಿದೆ ಮತ್ತು ಅವರ ಅಭಿಮಾನಿ ಬಳಗವೂ ದೇಶದ ಗಡಿಗಳನ್ನು ದಾಟುತ್ತಿದೆ. ಬುಮ್ರಾ ಅವರ ಪ್ರಭಾವದ ಇತ್ತೀಚಿನ ಉದಾಹರಣೆಯನ್ನು ಪಾಕಿಸ್ತಾನದಲ್ಲಿ ಕಾಣಬಹುದು. ಅಲ್ಲಿ ಚಿಕ್ಕ ಮಗುವೊಂದು ಗಲ್ಲಿ ಕ್ರಿಕೆಟ್ ಪಂದ್ಯದಲ್ಲಿ ಬುಮ್ರಾ ಶೈಲಿಯನ್ನು ಅನುಕರಿಸಿದೆ. ಆ ವಿಡಿಯೊ ವೈರಲ್ ಆಗಿದೆ.

ಚಿಕ್ಕ ಮಕ್ಕಳು ಜಸ್ಪ್ರೀತ್ ಬುಮ್ರಾ ಅವರ ಕ್ರಮವನ್ನು ನಕಲು ಮಾಡಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ಏಕೆಂದರೆ ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್​ನ ಮಕ್ಕಳು ಬುಮ್ರಾ ಅವರ ಬೌಲಿಂಗ್ ಕ್ರಮವನ್ನು ಅನುಕರಿಸುವ ವೀಡಿಯೊ ವೈರಲ್ ಆಗಿತ್ತು. ಬುಮ್ರಾ ಅವರ ವಿಶೇಷ ಬೌಲಿಂಗ್ ಶೈಲಿಯನ್ನು ಬೇರೆ ಬೇರೆ ರೀತಿಯಲ್ಲಿ ಅನುಕರಿಸುವುದಕ್ಕೆ ಕಾರಣ ಅವರ ಯಶಸ್ಸು. ಯಾಕೆಂದರೆ ಅವರು ಬೌಲಿಂಗ್​ನಲ್ಲಿ ಅತಿ ಹೆಚ್ಚು ವಿಕೆಟ್​ಗಳನ್ನು ಪಡೆಯುವ ಕಾರಣ ಮಕ್ಕಳು ಅದರ ಕಡೆಗೆ ಆಕರ್ಷಿತರಾಗಿದ್ದಾರೆ.

2022ರಲ್ಲಿ ಬುಮ್ರಾ ಕಷ್ಟದ ದಿನಗಳನ್ನು ಕಂಡಿದ್ದರು. ಅವರು ಬೆನ್ನುನೋವಿನಿಂದಾಗಿ ಬಹುತೇಕ ಪಂದ್ಯಗಳಿಂದ ಹೊರಗುಳಿದಿದ್ದರು. ಆ ಸಮಯದಲ್ಲಿ, ಹಲವಾರು ಪಂಡಿತರು ಮತ್ತು ಅಭಿಮಾನಿಗಳು ಅವರ ಬೌಲಿಂಗ್ ಕ್ರಮವನ್ನು ಟೀಕಿಸಿದ್ದರು. ಏಕೆಂದರೆ ಅದನ್ನು ಗಾಯದ ಸಾಧ್ಯತೆ ಎಂದು ಪರಿಗಣಿಸಿದ್ದಾರೆ. ಆದಾಗ್ಯೂ, ಬಲಗೈ ವೇಗಿ ತನ್ನ ಪುನರಾಗಮನದೊಂದಿಗೆ ತನ್ನ ಟೀಕಾಕಾರ ಬಾಯಿ ಮುಚ್ಚಿಸಿದ್ದಾರೆ. ಈ ಬಾರಿ ಪಂಡಿತರು ಅವರ ವಿಶೇಷ ಬೌಲಿಂಗ್ ಶೈಲಿಯೇ ಅವರಿಗೆ ವರದಾನ ಎಂದು ಹೇಳಿದ್ದಾರೆ.

ಐಸಿಸಿ ತಿಂಗಳ ಪ್ರಶಸ್ತಿ ಗೆದ್ದ ಜಸ್​ಪ್ರೀತ್​ ಬುಮ್ರಾ

ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ತೋರಿದ ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಜಸ್​ಪ್ರೀತ್​ ಬುಮ್ರಾ(Jasprit Bumrah)​ ಅವರು ಜೂನ್ ತಿಂಗಳ ಐಸಿಸಿ ಆಟಗಾರ(ICC Player Of The Month Award) ಗೌರವಕ್ಕೆ ಭಾಜನರಾಗಿದ್ದಾರೆ. ಇದೇ ವೇಳೆ ಭಾರತ ಮಹಿಳಾ ತಂಡದ ಆಟಗಾರ್ತಿ ಸ್ಮೃತಿ ಮಂಧಾನ(Smriti Mandhana) ಐಸಿಸಿ ಮಹಿಳಾ ಆಟಗಾರ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: Virat kohli : ಕೊಹ್ಲಿ ಜತೆಗಿನ ಮುನಿಸು ಕೊನೆಗೊಳಿಸಿದ್ದೇ ಗಂಭೀರ್​; ವಿರಾಟ್ ಅಹಂ ಬಿಡಲಿಲ್ಲ ಎಂದ ಮಾಜಿ ಸ್ಪಿನ್ನರ್​​

ಜೂನ್​ ತಿಂಗಳ ಐಸಿಸಿ ಆಟಗಾರ ಪಟ್ಟಿಯಲ್ಲಿ ಜಸ್​ಪ್ರೀತ್​ ಬುಮ್ರಾ ಜತೆ ರೋಹಿತ್ ಶರ್ಮಾ ಹಾಗೂ ಅಫಘಾನಿಸ್ತಾನದ ಆರಂಭಿಕ ಬ್ಯಾಟರ್ ರೆಹಮಾನುಲ್ಲಾ ಗುರ್ಬಾಜ್ ಕೂಡ ರೇಸ್​ನಲ್ಲಿದ್ದರು. ಆದರೆ ಇವರನ್ನು ಬುಮ್ರಾ ಹಿಂದಿಕ್ಕಿ ಪ್ರಶಸ್ತಿ ಗೆದ್ದಿದ್ದಾರೆ.

30 ವರ್ಷದ ಬುಮ್ರಾ ಟಿ20 ವಿಶ್ವಕಪ್​ ಟೂರ್ನಿಯಲ್ಲಿ 8.26ರ ಸರಾಸರಿಯಲ್ಲಿ ಒಟ್ಟು 15 ವಿಕೆಟ್‌ಗಳನ್ನು ಕಬಳಿಸಿದ್ದರು. ಅಲ್ಲದೆ ಸರಣಿಶ್ರೇಷ್ಠ ಪ್ರಶಸ್ತಿಯನ್ನೂ ಕೂಡ ತಮ್ಮದಾಗಿಸಿಕೊಂಡಿದ್ದರು. ಐರ್ಲೆಂಡ್ (3/6), ಪಾಕಿಸ್ತಾನ (3/14), ಇಂಗ್ಲೆಂಡ್ (2/12), ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ (2/18) ವಿಕೆಟ್​ ಕಿತ್ತಿದ್ದರು. ಫೈನಲ್​ ಪಂದ್ಯದಲ್ಲಿ ಶ್ರೇಷ್ಠ ಬೌಲಿಂಗ್​ ಪ್ರದರ್ಶನ ತೋರದೇ ಹೋಗಿದ್ದರೆ ಭಾರತ ಕಪ್​ ಗೆಲ್ಲುವುದು ಕೂಡ ಅಸಾಧ್ಯ ಎನ್ನುವಂತಿತ್ತು. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್​ನಲ್ಲಿ ಬುಮ್ರಾ ಬೆನ್ನು ನೋವಿನ ಕಾರಣದಿಂದ ಆಡಿರಲಿಲ್ಲ.

Continue Reading
Advertisement
Char Dham Yatra 2024
ಪ್ರವಾಸ21 mins ago

Char Dham Yatra 2024: ಚಾರ್‌ಧಾಮ್‌, ಕೇದಾರನಾಥನ ದರ್ಶನ ಮಾಡುವ ಆಸೆ ಇದೆಯೆ? ಈ ಮಹತ್ವದ ಸಂಗತಿಗಳನ್ನು ತಿಳಿದುಕೊಂಡಿರಿ

karnataka weather Forecast
ಮಳೆ21 mins ago

Karnataka Weather : ಅಬ್ಬರಿಸುತ್ತಿರುವ ಮುಂಗಾರು; ಕರಾವಳಿ, ಮಲೆನಾಡಿನಲ್ಲಿ ಇಂದು ಸಹ ಜೋರು ಮಳೆ

Vastu Tips
ಧಾರ್ಮಿಕ21 mins ago

Vastu Tips: ವಾಸ್ತು ಪ್ರಕಾರ ಮಕ್ಕಳ ಅಧ್ಯಯನ ಕೊಠಡಿ ಹೀಗಿರಬೇಕು

Mosquito Repellent Plants
ಆರೋಗ್ಯ51 mins ago

Mosquito Repellent Plants: ನಿಮಗೆ ಗೊತ್ತೆ? ಈ 5 ಬಗೆಯ ಗಿಡಗಳು ಸೊಳ್ಳೆಗಳನ್ನು ಓಡಿಸುತ್ತವೆ!

Somanathapura Talakadu Madhyaranga Bharachukki Gaganachukki KSRTC Package Tour from Bengaluru
ಕರ್ನಾಟಕ51 mins ago

KSRTC Package Tour: ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿಗೆ ಕೆಎಸ್‌ಆರ್‌ಟಿಸಿ ಪ್ಯಾಕೇಜ್‌ ಟೂರ್‌; ದರವೆಷ್ಟು?

dina Bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರಿಗೆ ಹೂಡಿಕೆ ವ್ಯವಹಾರವು ಇಮ್ಮಡಿ ಲಾಭ ತರುವುದು

Virat Kohli
ಪ್ರಮುಖ ಸುದ್ದಿ7 hours ago

Virat Kohli : ಹಣ, ಹೆಸರು ಬಂದ ತಕ್ಷಣ ಕೊಹ್ಲಿಗೆ ಅಹಂಕಾರ ಬಂತು; ಮಾಜಿ ಆಟಗಾರನ ಅರೋಪ

Smriti Singh
ದೇಶ7 hours ago

Smriti Singh: ಹುತಾತ್ಮ ಯೋಧನ 1 ಕೋಟಿ ರೂಪಾಯಿಯಲ್ಲಿ ಪೋಷಕರಿಗೆ 50%, ಪತ್ನಿಗೆ 50%; ಕೊನೆಗೂ ಸಿಕ್ಕಿತು ನ್ಯಾಯ

7th Pay Commission
ಕರ್ನಾಟಕ8 hours ago

7th Pay Commission: ವೇತನ ಏರಿಕೆಗೆ ಒಪ್ಪಿಗೆ; ಒಪಿಎಸ್, ಆರೋಗ್ಯ ಯೋಜನೆ ಬೇಡಿಕೆ ಬಾಕಿ; ನೌಕರರ ಸಂಘದ ಮುಂದಿನ ನಿರ್ಧಾರ ಏನು?

Viral Video
ವೈರಲ್ ನ್ಯೂಸ್8 hours ago

Viral Video: ಚಲಿಸುತ್ತಿರುವ ರೈಲಿನಲ್ಲಿ ಅಪಾಯಕಾರಿ ಸಾಹಸ! ವಿಡಿಯೊ ನೋಡಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ13 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ20 hours ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ1 day ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ3 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

ಟ್ರೆಂಡಿಂಗ್‌