Smriti Singh: ಹುತಾತ್ಮ ಯೋಧನ 1 ಕೋಟಿ ರೂಪಾಯಿಯಲ್ಲಿ ಪೋಷಕರಿಗೆ 50%, ಪತ್ನಿಗೆ 50%; ಕೊನೆಗೂ ಸಿಕ್ಕಿತು ನ್ಯಾಯ - Vistara News

ದೇಶ

Smriti Singh: ಹುತಾತ್ಮ ಯೋಧನ 1 ಕೋಟಿ ರೂಪಾಯಿಯಲ್ಲಿ ಪೋಷಕರಿಗೆ 50%, ಪತ್ನಿಗೆ 50%; ಕೊನೆಗೂ ಸಿಕ್ಕಿತು ನ್ಯಾಯ

Smriti Singh: ಕಳೆದ ವರ್ಷ ಸಿಯಾಚಿನ್‌ನಲ್ಲಿ ಹುತಾತ್ಮರಾದ ಅಂಶುಮಾನ್ ಸಿಂಗ್ ಅವರಿಗೆ ಜುಲೈ 5 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮರಣೋತ್ತರವಾಗಿ ಕೀರ್ತಿ ಚಕ್ರವನ್ನು ನೀಡಿ ಗೌರವಿಸಿದರು. ಹುತಾತ್ಮ ಯೋಧ ಅನ್ಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ಮತ್ತು ಅವರ ತಾಯಿ ಮಂಜು ದೇವಿ ಈ ಗೌರವವನ್ನು ಸ್ವೀಕರಿಸಿದರು. ಆದರೆ ಇದೀಗ ಮಾಧ್ಯಮದವರೊಂದಿಗೆ ಮಾತನಾಡಿದ ಹುತಾತ್ಮ ಯೋಧನ ಪೋಷಕರು ತಮ್ಮ ಸೊಸೆ ಸ್ಮೃತಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು.‌ ಈಗ ಪರಿಹಾರದ ಹಣವನ್ನು ಸಮನಾಗಿ ಹಂಚಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

VISTARANEWS.COM


on

Smriti Singh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಕಾಶ್ಮೀರದಲ್ಲಿ ಕಳೆದ ವರ್ಷ (2023) ಹುತಾತ್ಮರಾಗಿದ್ದ ಕ್ಯಾಪ್ಟನ್‌ ಅಂಶುಮಾನ್‌ ಸಿಂಗ್‌(Captain Anshuman Singh) ಕುಟುಂಬದಲ್ಲಿ ಇದೀಗ ಒಡಕು ಮೂಡಿದೆ. ಇತ್ತೀಚೆಗಷ್ಟೇ ಯೋಧನ ಪತ್ನಿ ಸ್ಮೃತಿ ಸಿಂಗ್‌ (Smriti Singh) ಅವರು ರಾಷ್ಟ್ರಪತಿಯವರಿಂದ ಕೀರ್ತಿ ಚಕ್ರ (Keerthi Chakra) ಸ್ವೀಕರಿಸಿದ ಬಳಿಕ ಇದೀಗ ಅವರ ಪೋಷಕರು ಹೇಳಿಕೆ ನೀಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಹುತಾತ್ಮ ಯೋಧ ಕ್ಯಾಪ್ಟನ್ ಅನ್ಶುಮಾನ್ ಅವರ ಪೋಷಕರು ತಮ್ಮ ಹೇಳಿಕೆಯಲ್ಲಿ ತಮ್ಮ ಮಗ ಹುತಾತ್ಮನಾಗಿದ್ದಾನೆ ಆದರೆ ಸೊಸೆ ಎಲ್ಲವನ್ನೂ ತೆಗೆದುಕೊಂಡು ಹೋಗಿದ್ದಾಳೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ, ಹುತಾತ್ಮ ಯೋಧನ ಕುಟುಂಬಸ್ಥರಿಗೆ ಸರ್ಕಾರ ನೀಡುವ ಒಂದು ಕೋಟಿ ರೂ. ವಿಮಾ ಮೊತ್ತವನ್ನು ಯೋಧನ ತಂದೆ-ತಾಯಿ ಹಾಗೂ ಸ್ಮೃತಿ ಸಿಂಗ್‌ ಮಧ್ಯೆ ಸಮನಾಗಿ ಹಂಚಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಸೇನೆಯ ಮೂಲಗಳ ಪ್ರಕಾರ, ಆರ್ಮಿ ಗ್ರೂಪ್‌ ಇನ್ಶುರೆನ್ಸ್‌ ಫಂಡ್‌ನ ಒಂದು ಕೋಟಿ ರೂಪಾಯಿಯ ಮೊತ್ತವನ್ನು ಹುತಾತ್ಮ ಯೋಧನ ಪೋಷಕರು ಹಾಗೂ ಸ್ಮೃತಿ ಸಿಂಗ್‌ ಮಧ್ಯೆ ಸಮನಾಗಿ ಹಂಚಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಪಿಂಚಣಿಯ ಮೊತ್ತವು ನೇರವಾಗಿ ಸ್ಮೃತಿ ಸಿಂಗ್‌ ಖಾತೆ ಹೋಗುತ್ತದೆ. ಅಲ್ಲಿ ಹಂಚಿಕೆ ಮಾಡಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಇನ್ನು, ಉತ್ತರ ಪ್ರದೇಶ ಸರ್ಕಾರವು ಹುತಾತ್ಮ ಯೋಧನ ಕುಟುಂಬಸ್ಥರಿಗೆ 50 ಲಕ್ಷ ರೂ. ಘೋಷಿಸಿದ್ದು, ಅದರಲ್ಲಿ 35 ಲಕ್ಷ ರೂ. ಯೋಧನ ಪತ್ನಿಗೆ ಹಾಗೂ 15 ಲಕ್ಷ ರೂ. ಪೋಷಕರಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Captain Anshuman Singh

ಸ್ಮೃತಿ ಸಿಂಗ್‌ (Smriti Singh) ಬಗ್ಗೆ ಅಹ್ಮದ್‌ ಕೆ. ಎಂಬಾತನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಕಮೆಂಟ್‌ ಮಾಡಿದ್ದು, ಆತನ ವಿರುದ್ಧ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಫ್‌ಐಆರ್‌ ದಾಖಲಿಸಲಾಗಿದೆ. ಅಹ್ಮದ್‌ ಕೆ ಎಂಬಾತನ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

“ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಕಮೆಂಟ್‌ ಮಾಡಿದ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNS) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ” ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಶ್ಲೀಲ ಕಮೆಂಟ್‌ಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗವು ದೂರು ನೀಡಿದ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

2023ರ ಜುಲೈ 19ರಂದು ಸಿಯಾಚಿನ್‌ನಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಬೆಳಗಿನ ಜಾವ ಭಾರತೀಯ ಸೇನೆಯ ಶಸ್ತ್ರಾಸ್ತ್ರಗಳನ್ನು ಇರಿಸುವ ನೆಲೆಯಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿತ್ತು. ಫೈಬರ್‌ ಗ್ಲಾಸ್‌ನ ಕೋಣೆಯಲ್ಲಿ ಸಿಲುಕಿದ್ದ ಹಲವು ಸೈನಿಕರನ್ನು ಕ್ಯಾಪ್ಟನ್‌ ಅನ್ಶುಮಾನ್ ಸಿಂಗ್‌ ಅವರು ರಕ್ಷಣೆ ಮಾಡಿದ್ದರು. ಆದರೆ, ರಕ್ಷಣೆ ಮಾಡಿದ ಬಳಿಕ ಅವರೇ ಅಗ್ನಿಯ ಕೆನ್ನಾಲಗೆಗೆ ಸಿಲುಕಿ ಹುತಾತ್ಮರಾಗಿದ್ದರು.

ಇದನ್ನೂ ಓದಿ: Smriti Singh: ಹುತಾತ್ಮ ಯೋಧನ ಪತ್ನಿ ಬಗ್ಗೆ ಅಶ್ಲೀಲ ಕಮೆಂಟ್;‌ ಅಹ್ಮದ್‌ ವಿರುದ್ಧ ಎಫ್‌ಐಆರ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Grassroot Boxing: ಬೆಂಗಳೂರಿನಲ್ಲಿ ರೋಮಾಂಚನಗೊಳಿಸಿದ ಬಾಕ್ಸಿಂಗ್‌ ಪಂದ್ಯ

Grassroot Boxing: ಬೆಂಗಳೂರಿನಲ್ಲಿ ನಡೆದ ಅಪ್ರತಿಮ ಕ್ರೀಡಾಪಟುಗಳ ನಡುವಿನ ಬಿರುಸಿನ ಬಾಕ್ಸಿಂಗ್ ಪಂದ್ಯಗಳು ಕ್ರೀಡಾಭಿಮಾನಿಗಳಲ್ಲಿ ರೋಚಕತೆ ಮೂಡಿಸಿದವು. ಒಟ್ಟು 44 ಬಾಕ್ಸರ್‌ಗಳು ಈ ಅತ್ಯುನ್ನತ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದು, ಸ್ಪರ್ಧಿಗಳ ಪೈಕಿ 94 ಕೆಜಿ ವಿಭಾಗದಲ್ಲಿ ತಹೇರ್ ಖುರಾಮ್, 53.523 ಕೆಜಿ ಸ್ಪರ್ಧಿಗಳ ವಿಭಾಗದಲ್ಲಿ ಮಜರ್ ಹುಸೇನ್ ಮತ್ತು ವಿಕ್ರಂ ಸಿಂಗ್ ಜೇಷ್ಠ, 50.802 ಕೆಜಿ ಸ್ಪರ್ಧಿಗಳ ವಿಭಾಗದಲ್ಲಿ ಪ್ರದೀಶ್ ಎ, 52.163 ಕೆಜಿ ಸ್ಪರ್ಧಿಗಳ ವಿಭಾಗದಲ್ಲಿ ಮೊಹಮ್ಮದ್ ಶಮಿನ್ ಸೇರಿದಂತೆ ಹಲವಾರು ಸ್ಪರ್ಧಿಗಳು ಗೆಲುವಿನ ಕಿರಿಟವನ್ನು ಮುಡಿಗೇರಿಸಿಕೊಂಡರು.

VISTARANEWS.COM


on

Grassroot Boxing match in Bengaluru
Koo

ಬೆಂಗಳೂರು: ನಗರದಲ್ಲಿ ನಡೆದ ಅಪ್ರತಿಮ ಕ್ರೀಡಾಪಟುಗಳ ನಡುವಿನ ಬಿರುಸಿನ ಬಾಕ್ಸಿಂಗ್ ಪಂದ್ಯಗಳು (Grassroot Boxing) ಕ್ರೀಡಾಭಿಮಾನಿಗಳಲ್ಲಿ ರೋಚಕತೆ ಮೂಡಿಸಿದವು. ಭಾರತದ ಮೂಲೆಮೂಲೆಯ ಶ್ರೇಷ್ಠ ಬಾಕ್ಸರ್‌ಗಳು ನಗರದಲ್ಲಿ ಮುಖಾಮುಖಿಯಾಗಿದ್ದು, ಕ್ರೀಡಾ ಉತ್ಸಾಹಿಗಳಲ್ಲಿ ಸಂಚಲನ ಮೂಡಿಸಿತು.

ಗ್ರಾಸ್ರೂಟ್ ಬಾಕ್ಸಿಂಗ್ ಈ ಜಟ್ಟಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಅವರ ಬಾಕ್ಸಿಂಗ್ ದಾಖಲೆಗಳನ್ನು ಹೆಚ್ಚಿಸಲು ಅತ್ಯುತ್ತಮ ವೇದಿಕೆಯನ್ನು ರೂಪಿಸಿತ್ತು. ಈ ವೇದಿಕೆಯು ಕ್ರೀಡಾಪಟುಗಳನ್ನು ವೃತ್ತಿಪರ ಪಂದ್ಯಗಳಿಗೆ ಸಜ್ಜುಗೊಳಿಸುವುದರ ಜತೆಗೆ ಬಾಕ್ಸಿಂಗ್ ಪಂದ್ಯವನ್ನು ಭಾರತದಲ್ಲಿ ಪ್ರೋತ್ಸಾಹಿಸುವ ಆಶಯವನ್ನು ಹೊಂದಿದೆ.

44 ಬಾಕ್ಸರ್‌ಗಳು ಸ್ಪರ್ಧೆಯಲ್ಲಿ ಕಣಕ್ಕೆ

ಒಟ್ಟು 44 ಬಾಕ್ಸರ್‌ಗಳು ಈ ಅತ್ಯುನ್ನತ ಸ್ಪರ್ಧೆಯಲ್ಲಿ ಕಣಕ್ಕೆ ಇಳಿದಿದ್ದು, ಸ್ಪರ್ಧಿಗಳ ಪೈಕಿ 94 ಕೆಜಿ ವಿಭಾಗದಲ್ಲಿ ತಹೇರ್ ಖುರಾಮ್, 53.523 ಕೆಜಿ ಸ್ಪರ್ಧಿಗಳ ವಿಭಾಗದಲ್ಲಿ ಮಜರ್ ಹುಸೇನ್ ಮತ್ತು ವಿಕ್ರಂ ಸಿಂಗ್ ಜೇಷ್ಠ, 50.802 ಕೆಜಿ ಸ್ಪರ್ಧಿಗಳ ವಿಭಾಗದಲ್ಲಿ ಪ್ರದೀಶ್ ಎ, 52.163 ಕೆಜಿ ಸ್ಪರ್ಧಿಗಳ ವಿಭಾಗದಲ್ಲಿ ಮೊಹಮ್ಮದ್ ಶಮಿನ್ ಸೇರಿದಂತೆ ಹಲವಾರು ಸ್ಪರ್ಧಿಗಳು ಗೆಲುವಿನ ಕಿರಿಟವನ್ನು ಮುಡಿಗೇರಿಸಿಕೊಂಡರು.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್ ಯಾವಾಗ ಆರಂಭ? ಬೃಹತ್​ ಕ್ರೀಡಾಕೂಟಕ್ಕೆ ನಡೆಸಿರುವ ಸಿದ್ಧತೆಗಳೇನು?

ಈ ಕುರಿತು ಗ್ರಾಸ್ರೂಟ್ ವ್ಯವಸ್ಥಾಪಕ ಮುಜ್ತಬ ಕಮಲ್ ಮಾತನಾಡಿ, ಪ್ರತಿಭೆಗಳನ್ನು ಪ್ರೋತ್ಸಾಹಿಸುವುದೇ ನಮ್ಮ ಗುರಿ. ಅದಕ್ಕಾಗಿ ನಾವು ವೇದಿಕೆಯನ್ನು ಒದಗಿಸಲು ಸದಾ ಸಿದ್ಧ ಎಂದು ತಿಳಿಸಿದರು.

ಗ್ರಾಸ್ರೂಟ್ ಬಾಕ್ಸಿಂಗ್, ತಳಮಟ್ಟದಿಂದ ಪ್ರತಿಭೆಯನ್ನು ಪೋಷಿಸುವುದರೆಡೆಗೆ ಗಮನಹರಿಸುತ್ತಿದೆ. ಇದು ಯುವ ಮತ್ತು ಹವ್ಯಾಸಿ ಬಾಕ್ಸರ್‌ಗಳ ಕೌಶಲ್ಯಗಳನ್ನು ಗೌರವಿಸಲು ರೂಪಿಸಲಾಗಿದೆ. ಅಗತ್ಯ ಸಂಪನ್ಮೂಲಗಳು, ತರಬೇತಿ ಮತ್ತು ವೃತ್ತಿ ನಿರ್ಮಾಣ ಅವಕಾಶಗಳನ್ನು ಒದಗಿಸುವ ಮೂಲಕ, ತಳಮಟ್ಟದ ಉಪಕ್ರಮಗಳು ಜಾಗತಿಕ ವೇದಿಕೆಯಲ್ಲಿ ಸ್ಪರ್ಧಿಸಬಹುದಾದ ನುರಿತ ಕ್ರೀಡಾಪಟುಗಳ ತಂಡವನ್ನು ಬೆಳೆಸುವ ಗುರಿಯನ್ನು ಹೊಂದಿದೆ.

ಈ ಸ್ಪರ್ಧೆಯಲ್ಲಿನ ಗೆಲುವು ವಿಜೇತರಿಗೆ ಅಂತಾರಾಷ್ಟ್ರೀಯ ಮನ್ನಣೆಗೆ ಅವಕಾಶದ ಬಾಗಿಲು ತೆರೆಯುವಂತೆ ಮಾಡುತ್ತದೆ. ಈ ಮಾನ್ಯತೆ ಅವರ ಬಾಕ್ಸಿಂಗ್ ದಾಖಲೆಗಳನ್ನು ಹೆಚ್ಚಿಸುವುದು ಮಾತ್ರವಲ್ಲದೆ ಭವಿಷ್ಯದ ಅವಕಾಶಗಳು ಮತ್ತು ಜಾಗತಿಕ ಬಾಕ್ಸಿಂಗ್ ಸಮುದಾಯದಲ್ಲಿ ಗುರುತಿಸುವಿಕೆಗಾಗಿ ವೇದಿಕೆಯಾಗಲಿದೆ ಎಂದರು.

ಭಾರತೀಯ ವೃತ್ತಿಪರ ಬಾಕ್ಸಿಂಗ್ ಅನ್ನು ವಿಶ್ವ ವೇದಿಕೆಗೆಯೆಡೆಗೆ ಕೊಂಡೊಯ್ಯುವುದು ಇದರ ಉದ್ದೇಶವಾಗಿದೆ. ಭಾರತ ಮತ್ತು ಏಷ್ಯಾದಲ್ಲಿ ಕ್ರೀಡಾಪಟುಗಳ ನಿರ್ವಹಣೆ, ಪ್ರಚಾರಗಳು ಮತ್ತು ಒಟ್ಟಾರೆ ವೃತ್ತಿಪರ ಬಾಕ್ಸಿಂಗ್ ನಿರ್ವಹಣೆಯಲ್ಲಿ ಟ್ರಯಲ್‌ ಬ್ಲೇಜರ್ ಆಗಿರುವ ಗ್ರಾಸ್ರೂಟ್ ಬಾಕ್ಸಿಂಗ್, ದೇಶದ ಹಲವು ಅಸಾಧಾರಣ ಬಾಕ್ಸರ್‌ಗಳ ವೃತ್ತಿಜೀವನವನ್ನು ಯಶಸ್ವಿಯಾಗಿ ರೂಪಿಸಿದೆ.

ಇದನ್ನೂ ಓದಿ: Teachers Recruitment: 10 ಸಾವಿರ ಶಿಕ್ಷಕರ ನೇಮಕಕ್ಕೆ ಶೀಘ್ರದಲ್ಲೇ ಅಧಿಸೂಚನೆ: ಸಚಿವ ಮಧು ಬಂಗಾರಪ್ಪ

ಇಲ್ಲಿಯವರೆಗೆ ಗ್ರಾಸ್ರೂಟ್ ಬಾಕ್ಸಿಂಗ್ ಭಾರತ, ಯುಎಇ, ಥೈಲ್ಯಾಂಡ್ ಮತ್ತು ಉಗಾಂಡಾದಾದ್ಯಂತ 41 ವೃತ್ತಿಪರ ಬಾಕ್ಸಿಂಗ್ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಜಾಗತಿಕ ಮಟ್ಟದಲ್ಲಿ ಭಾರತೀಯ ವೃತ್ತಿಪರ ಬಾಕ್ಸರ್‌ಗಳ ಅಪಾರ ಸಾಮರ್ಥ್ಯದ ಬಗ್ಗೆ ದೃಢವಾದ ನಂಬಿಕೆಯೊಂದಿಗೆ, ಗ್ರಾಸ್ರೂಟ್ ಬಾಕ್ಸಿಂಗ್ ಅಥ್ಲೀಟ್ ನಿರ್ವಹಣೆಯಲ್ಲಿ ಮ್ಯಾಚ್ರೂಮ್, ಟಾಪ್ರಾಂಕ್, ಗೋಲ್ಡನ್ ಬಾಯ್ ಮತ್ತು ಕ್ರೀಡೆಯಲ್ಲಿನ ಇತರ ಪ್ರಮುಖ ಘಟಕಗಳನ್ನು ಒಳಗೊಂಡಂತೆ ವಿಶ್ವಾದ್ಯಂತ ಪ್ರಸಿದ್ಧ ಬಾಕ್ಸಿಂಗ್ ಪ್ರಚಾರ ಸಹಯೋಗವನ್ನು ಪ್ರಾರಂಭಿಸಿದೆ.

Continue Reading

ವೈರಲ್ ನ್ಯೂಸ್

Viral Video: ಬಾಂಬ್‌ ಇಡಲು ಮುಸ್ಲಿಮರು ಬೇಕು, ಉನ್ನತ ಸ್ಥಾನ ಮಾತ್ರ ಹಿಂದೂಗಳಿಗೆ; ಟಿಎಂಸಿ ನಾಯಕನ ಸ್ಫೋಟಕ ಹೇಳಿಕೆ!

Viral Video: ಬಾಂಬ್ ತಯಾರಿಕೆಯಿಂದ ಪ್ರಾರಂಭಿಸಿ ನಾವು ಮುಸ್ಲಿಮರು ಎಲ್ಲಾ ಕೊಳಕು ಕೆಲಸಗಳನ್ನು ಮಾಡುತ್ತಾರೆ. ಆದರೆ ಅಧಿಕಾರ ಮಾತ್ರ ಹಿಂದೂಗಳಿಗೆ ಎಂದು ತೃಣಮೂಲ ಕಾಂಗ್ರೆಸ್‌ ವಿರುದ್ಧ ಆ ಪಕ್ಷದ ಮುಸ್ಲಿಂ ನಾಯಕರೇ ದನಿ ಎತ್ತಿದ್ದಾರೆ. ಅವರ ಈ ಹೇಳಿಕೆ ಭಾರಿ ಸಂಚಲನ ಮೂಡಿಸಿದೆ. ಸ್ವಂತ ಬೂತ್‌ಗಳಲ್ಲಿ ಗೆಲ್ಲಲು ಸಾಧ್ಯವಿಲ್ಲದವರು ಪಕ್ಷವನ್ನು ಮುನ್ನಡೆಸಲು ಯಾವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ? ಹಿಂದೂಗಳು ಎಲ್ಲಾ ಕೋರ್ ಕಮಿಟಿಗಳ ಚುಕ್ಕಾಣಿ ಹಿಡಿದಿದ್ದಾರೆ. ನಾವು ಅದರ ಬಗ್ಗೆ ಯೋಚಿಸಬೇಕಾಗಿದೆ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದರು.

VISTARANEWS.COM


on

By

Viral Video
Koo

ಹಿಂದೂಗಳು (hindu) ಪಕ್ಷದ ಉನ್ನತ ಸ್ಥಾನಗಳನ್ನು ಕಸಿದುಕೊಳ್ಳುತ್ತಿದ್ದಾರೆ ಮತ್ತು ಮುಸ್ಲಿಮರು (muslim) ಬಾಂಬ್ ತಯಾರಿಸುವ ಕೊಳಕು ಕೆಲಸ ಮಾಡುತ್ತಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ನ (TMC) ಅಲ್ಪಸಂಖ್ಯಾತ ಮೋರ್ಚಾ ನಾಯಕ ಮೊಹಮ್ಮದ್ ಯೂನಸ್ ಆರೋಪಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಈ ವಿಚಾರ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಸೈಂಥಿಯಾ ನಗರದಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಇದರ ವಿಡಿಯೋದಲ್ಲಿ ಯೂನಸ್ ಅವರು ಅಲ್ಪಸಂಖ್ಯಾತರು ಎಲ್ಲಿ ಕೆಲಸ ಮಾಡಬೇಕು, ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ. ಬಹುಸಂಖ್ಯಾತ ಹಿಂದೂಗಳು ಪಕ್ಷದ ಎಲ್ಲಾ ಉನ್ನತ ಸ್ಥಾನಗಳನ್ನು ಪಡೆದಿದ್ದಾರೆ. ನಾವು ಅವರ ಕಣ್ಣುಗಳಲ್ಲಿ ಇರುವುದನ್ನು ನಮ್ಮ ಅಸ್ತಿತ್ವವನ್ನು ಅವರಿಗೆ ತೋರಿಸಬೇಕಾಗಿದೆ ಎಂದು ಹೇಳಿದರು.

ಸ್ವಂತ ಬೂತ್‌ಗಳಲ್ಲಿ ಗೆಲ್ಲಲು ಸಾಧ್ಯವಿಲ್ಲದವರು ಪಕ್ಷವನ್ನು ಮುನ್ನಡೆಸಲು ಯಾವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ? ಹಿಂದೂಗಳು ಎಲ್ಲಾ ಕೋರ್ ಕಮಿಟಿಗಳ ಚುಕ್ಕಾಣಿ ಹಿಡಿದಿದ್ದಾರೆ. ನಾವು ಅದರ ಬಗ್ಗೆ ಯೋಚಿಸಬೇಕಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಬಾಂಬ್ ತಯಾರಿಕೆಯಿಂದ ಪ್ರಾರಂಭಿಸಿ ನಾವು ಮುಸ್ಲಿಮರು ಎಲ್ಲಾ ಕೊಳಕು ಕೆಲಸಗಳನ್ನು ಮಾಡುತ್ತೇವೆ ಎಂದಿರುವ ಅವರ ಹೇಳಿಕೆ ಭಾರಿ ಸಂಚಲನ ಮೂಡಿಸಿದೆ. ಅವರನ್ನು ಪಕ್ಷದಿಂದ ಅಮಾನತುಗೊಳಿಸುವ ಚಿಂತನೆಯೂ ನಡೆಯುತ್ತಿದೆ.
ಈ ಕುರಿತು ಮಾತನಾಡಿದ ಬಿಜೆಪಿ ನಾಯಕ ಧ್ರುಬಾ ಸಹಾ, ಅವರು ಬಾಂಬ್‌ಗಳನ್ನು ತಯಾರಿಸುತ್ತಾರೆ, ಬೂತ್‌ಗಳನ್ನು ವಶಪಡಿಸಿಕೊಳ್ಳುತ್ತಾರೆ ಮತ್ತು ಟಿಎಂಸಿಯ ಗೆಲುವನ್ನು ಖಚಿತಪಡಿಸಿಕೊಳ್ಳಲು ಜನರ ಪ್ರಜಾಸತ್ತಾತ್ಮಕ ಹಕ್ಕನ್ನು ಕೊಲ್ಲುತ್ತಾರೆ ಎನ್ನುವುದನ್ನು ಒಪ್ಪಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ಈ ತಿಂಗಳ ಆರಂಭದಲ್ಲಿ ಕೋಲ್ಕತ್ತಾದ ಮೇಯರ್ ಫಿರ್ಹಾದ್ ಹಕೀಮ್ ಅವರು ಜನರನ್ನು ಇಸ್ಲಾಂಗೆ ಮತಾಂತರಿಸುವಂತೆ ಮುಕ್ತ ಕರೆ ನೀಡಿರುವುದನ್ನೂ ಬಿಜೆಪಿ ನಾಯಕ ಸಹಾ ಪ್ರಸ್ತಾಪಿಸಿದ್ದಾರೆ.

ಫಿರ್ಹಾದ್ ಹಕೀಮ್ ಅವರು ಇತ್ತೀಚೆಗೆ ನಡೆದ ಅಖಿಲ ಭಾರತ ಕುರಾನ್ ಸ್ಪರ್ಧೆಯಲ್ಲಿ ಮಾತನಾಡಿ, ಇಸ್ಲಾಂ ಧರ್ಮದಲ್ಲಿ ಹುಟ್ಟದೇ ಇರುವವರು ದುರದೃಷ್ಟದಿಂದ ಜನಿಸಿದರು, ನಾವು ಅವರಿಗೆ ಮತಾಂತರಕ್ಕೆ ಕರೆಯುತ್ತೇವೆ. ಅಲ್ಲಾನನ್ನು ಸಂತೋಷಪಡಿಸಿ ಎಂದು ಹೇಳುತ್ತೇವೆ ಎಂದಿದ್ದರು.

ಮುಸ್ಲಿಮೇತರರಲ್ಲಿ ನಾವು ಇಸ್ಲಾಂ ಧರ್ಮವನ್ನು ಹರಡಬೇಕಾಗಿದೆ. ನಾವು ಯಾರನ್ನಾದರೂ ಇಸ್ಲಾಮಿನ ಹಾದಿಯಲ್ಲಿ ತರಲು ಸಾಧ್ಯವಾದರೆ, ನಂಬಿಕೆಯ ಹರಡುವಿಕೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ನಾವು ನಿಜವಾದ ಮುಸ್ಲಿಮರೆಂದು ಸಾಬೀತುಪಡಿಸುತ್ತೇವೆ ಎಂದು ಅವರು ತಿಳಿಸಿದ್ದರು. ಸಾವಿರಾರು ಜನರು ನಾವು ಧರಿಸುವ ಸ್ಕಲ್ ಕ್ಯಾಪ್ ಧರಿಸಿ ಕುಳಿತಾಗ ನಾವು ಶಕ್ತಿಯನ್ನು ಪ್ರದರ್ಶಿಸಿದಂತಾಗುತ್ತದೆ. ಇದು ಏಕತೆಯನ್ನು ತೋರಿಸುತ್ತದೆ ಮತ್ತು ಯಾರೂ ನಮ್ಮನ್ನು ಬಗ್ಗುಬಡಿಯಲು ಸಾಧ್ಯವಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದರು.


ಇಸ್ಲಾಂ ಧರ್ಮದಲ್ಲಿ ಜನಿಸಿದ ಕಾರಣ ಪ್ರವಾದಿ ಮತ್ತು ಅಲ್ಲಾ ನಮಗೆ ಜನ್ನತ್‌ಗೆ ಸ್ಪಷ್ಟವಾದ ಮಾರ್ಗವನ್ನು ಒದಗಿಸಿದ್ದಾರೆ. ನಾವು ಯಾವುದೇ ಪಾಪಗಳನ್ನು ಮಾಡದಿದ್ದರೆ, ನಾವು ನೇರವಾಗಿ ಜನ್ನತ್‌ಗೆ ಹೋಗುತ್ತೇವೆ ಎಂದು ತಿಳಿಸಿದ್ದರು.

ಇದನ್ನೂ ಓದಿ: Viral Video: ರೈಲ್ವೆ ಸೇತುವೆ ಮೇಲೆ ಫೋಟೊಶೂಟ್‌; ರೈಲು ಬಂದಾಗ 90 ಅಡಿ ಆಳಕ್ಕೆ ಜಿಗಿದ ದಂಪತಿ!

ಸಾರ್ವಜನಿಕ ಥಳಿತಕ್ಕೆ ಸಮರ್ಥನೆ

ಮುಸ್ಲಿಂ ರಾಷ್ಟ್ರದಲ್ಲಿ ಮಹಿಳೆಯ ಮೇಲೆ ತಾಲಿಬಾನ್ ಮಾದರಿಯ ಸಾರ್ವಜನಿಕ ಥಳಿತವನ್ನು ಟಿಎಂಸಿ ಶಾಸಕ ಹಮೀದುಲ್ ರೆಹಮಾನ್ ಇತ್ತೀಚೆಗೆ ಸಮರ್ಥಿಸಿಕೊಂಡಿದ್ದರು. ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಚೋಪ್ರಾದಲ್ಲಿ ಸಾರ್ವಜನಿಕವಾಗಿ ಮಹಿಳೆಯ ಮೇಲೆ ಥಳಿಸಲಾಗಿತ್ತು.

ಪತಿ ಇಲ್ಲದ ಸಮಯದಲ್ಲಿ ಮಹಿಳೆ ಅನೈತಿಕ ಕೆಲಸ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಗ್ರಾಮಸ್ಥರು ಸಭೆ ನಡೆಸಿ ಸಾಮೂಹಿಕವಾಗಿ ಆಕೆಯನ್ನು ಥಳಿಸಿದ್ದರು. ಘಟನೆ ನಡೆದ ಪ್ರದೇಶ ‘ಮುಸ್ಲಿಂ ರಾಷ್ಟ್ರ’ ಎಂದು ಹಮೀದುಲ್ ರೆಹಮಾನ್ ಹೇಳಿಕೊಂಡಿದ್ದರು.

Continue Reading

ದೇಶ

House Arrest: ಯುಪಿ ಶಾಸಕ ರಾಜಾಭಯ್ಯಾರ ತಂದೆಗೆ ಗೃಹ ಬಂಧನ

House Arrest: ಭದ್ರಿ ಮಹಲ್‌ನ ಹೊರಗೆ ಪೊಲೀಸ್ ಮತ್ತು ಪಿಎಸಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸ್ಥಳೀಯ ಅಧಿಕಾರಿಗಳು ಹೊರಗೆ ನೋಟಿಸ್ ಅಂಟಿಸಿದ್ದಾರೆ. ಮೊಹರಂ ಸಂದರ್ಭದಲ್ಲಿ ಉಭಯ ಸಮುದಾಯಗಳ ನಡುವೆ ಘರ್ಷಣೆ ಉಂಟಾಗುವುದನ್ನು ತಪ್ಪಿಸಲು ಜಿಲ್ಲಾಡಳಿತ ಉದಯ ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಂಡಿದೆ. ಅವರನ್ನು ಮೂರು ದಿನಗಳ ಕಾಲ ಅವರ ಅರಮನೆಯಲ್ಲಿ ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಇಲ್ಲಿನ ಸ್ಥಳೀಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

VISTARANEWS.COM


on

House arrest
Koo

ಲಖನೌ: ಉತ್ತರಪ್ರದೇಶದ ಜನಸತ್ತಾ ದಳ(Jana Sattha Dal)ದ ಶಾಸಕ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾ ಭಯ್ಯಾ(Raja Bhayya’s Father) ಅವರ ತಂದೆ ಉದಯ್ ಪ್ರತಾಪ್ ಸಿಂಗ್(Uday Prathap Singh) ಅವರನ್ನು ಸೋಮವಾರ ಜಿಲ್ಲಾ ಪೊಲೀಸರು ಬೇಟಿಯಲ್ಲಿರುವ ಅವರ ಅರಮನೆಯ ಭದ್ರಿ ಮಹಲ್‌ನಲ್ಲಿ ಗೃಹಬಂಧನದಲ್ಲಿ ಇರಿಸಿದ್ದಾರೆ. ಮುಂಬರುವ ಮೊಹಾರಂ ಹಬ್ಬ(Moharram) ಇರುವ ಕಾರಣ ಗೃಹ ಬಂಧನ(House Arrest)ದಲ್ಲಿಡಲಾಗಿತ್ತು.

ಭದ್ರಿ ಮಹಲ್‌ನ ಹೊರಗೆ ಪೊಲೀಸ್ ಮತ್ತು ಪಿಎಸಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸ್ಥಳೀಯ ಅಧಿಕಾರಿಗಳು ಹೊರಗೆ ನೋಟಿಸ್ ಅಂಟಿಸಿದ್ದಾರೆ. ಮೊಹರಂ ಸಂದರ್ಭದಲ್ಲಿ ಉಭಯ ಸಮುದಾಯಗಳ ನಡುವೆ ಘರ್ಷಣೆ ಉಂಟಾಗುವುದನ್ನು ತಪ್ಪಿಸಲು ಜಿಲ್ಲಾಡಳಿತ ಉದಯ ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಂಡಿದೆ. ಅವರನ್ನು ಮೂರು ದಿನಗಳ ಕಾಲ ಅವರ ಅರಮನೆಯಲ್ಲಿ ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಇಲ್ಲಿನ ಸ್ಥಳೀಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಉದಯ್ ಪ್ರತಾಪ್ ಸಿಂಗ್ ಸೋಮವಾರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಬರೆದಿದ್ದಾರೆ, “ಆಡಳಿತವು ಇದಕ್ಕೆ ಪರಿಹಾರವನ್ನು ಕಂಡುಕೊಂಡಿದೆ. ಮುಸಲ್ಮಾನರನ್ನು ವಿರೋಧಿಸುವವರನ್ನು ಬಂಧಿಸಿ ಸರ್ಕಾರ ಬಂಧಿಸುತ್ತಿದೆ. ಶೇಖ್‌ಪುರದಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಹಿಂದೂಗಳ ಭಂಡಾರವನ್ನು (ಸಾರ್ವಜನಿಕ ಔತಣ) ಆಡಳಿತವು ಹೊಸ ಪದ್ಧತಿ ಎಂದು ಕರೆದು ನಿಲ್ಲಿಸಿತು, ಆದರೆ ಮಜಿಲ್‌ಗಾಂವ್‌ನಲ್ಲಿ ರಸ್ತೆಗೆ ಅಡ್ಡಲಾಗಿ ಮುಸ್ಲಿಮರು ಹೊಸ ಗೇಟ್ ಸ್ಥಾಪಿಸುವುದನ್ನು ಅವರು ತಡೆಯುತ್ತಿಲ್ಲ ಎಂದು ಟ್ವೀಟ್‌ ಮಾಡಿ ಕಿಡಿ ಕಾರಿದ್ದಾರೆ.

2012ರಲ್ಲಿ ಮೊಹರಂ ದಿನದಂದು ಶೇಖ್‌ಪುರ ಗ್ರಾಮದ ರಸ್ತೆಬದಿಯಲ್ಲಿ ಮಂಗವೊಂದನ್ನು ಗುಂಡು ಹಾರಿಸಿ ಕೊಲ್ಲಲಾಗಿತ್ತು. ಅಂದಿನಿಂದ, ಗ್ರಾಮಸ್ಥರು ಅಲ್ಲಿ ಹನುಮಾನ್ ದೇವಾಲಯವನ್ನು ನಿರ್ಮಿಸಿದರು ಮತ್ತು ಸಿಂಗ್ ಅವರ ಆಶ್ರಯದಲ್ಲಿ ಮೊಹರಂನಲ್ಲಿ ಹನುಮಾನ್ ಪಠಣ ಮತ್ತು ಭಂಡಾರವನ್ನು ಆಯೋಜಿಸಲು ಪ್ರಾರಂಭಿಸಿದರು.

ಮೊಹರಂ ದಿನದಂದು ಮಾತ್ರ ಭಂಡಾರ ನಡೆಯುವುದು ವಿಶೇಷ. ಎರಡು ಆರಂಭಿಕ ವರ್ಷಗಳಲ್ಲಿ, ಭಂಡಾರ ಮತ್ತು ಮೊಹರಂ ಮೆರವಣಿಗೆಗಳು ಏಕಕಾಲದಲ್ಲಿ ನಡೆದವು. 2015ರಲ್ಲಿ ದೇವಸ್ಥಾನದಲ್ಲಿ ಭಂಡಾರ ಮತ್ತು ಧ್ವಜಗಳನ್ನು ವಿರೋಧಿಸಿ ಮುಸ್ಲಿಂ ಸಮುದಾಯದವರು ತಾಜಿಯಾ ಮೆರವಣಿಗೆ ನಡೆಸಿರಲಿಲ್ಲ. ವಿಷಯ ತಾರಕಕ್ಕೇರಿದಾಗ ಆಡಳಿತ ಮಧ್ಯ ಪ್ರವೇಶಿಸಬೇಕಾಯಿತು.

2016 ರಲ್ಲಿ, ಜಿಲ್ಲಾಡಳಿತವು ಭಂಡಾರಕ್ಕೆ ಅನುಮತಿಯನ್ನು ತಡೆಹಿಡಿದು ಶೇಖ್‌ಪುರದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿತು. ಇದೀಗ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಬಗ್ಗೆ ಡಿಎಂ ಅವರ ವಿವೇಚನೆಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲಾಗಿದ್ದು, ಹೀಗಾಗಿ ರಾಜಾ ಉದಯ್ ಪ್ರತಾಪ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇನ್ನು ಮುಂಜಾಗೃತಾ ಕ್ರಮವಾಗಿ ಪ್ರತಿ ಮೊಹರಂಗೆ ಅವರನ್ನು ಗೃಹಬಂಧನದಲ್ಲಿ ಇಡುವುದು ವಾಡಿಕೆ. ಈ ಬಾರಿ ಶಾಂತಿ ಕಾಪಾಡಲು ಅವರ ಮಹಲ್ ಸುತ್ತಲೂ ಹಲವು ಪೊಲೀಸ್ ಠಾಣೆಗಳ ಪಡೆಗಳನ್ನು ನಿಯೋಜಿಸಲಾಗಿದೆ. ಜುಲೈ 17 ರಂದು ಮುಹರಂ ಮೆರವಣಿಗೆ ನಡೆಯಲಿದೆ.

ಇದನ್ನೂ ಓದಿ: One Nation One Rate: ಚಿನ್ನಕ್ಕೆ ದೇಶಾದ್ಯಂತ ಒಂದೇ ದರ! ಹೊಸ ನಿಯಮ ಶೀಘ್ರ! ಬಂಗಾರ ದರ ಇಳಿಕೆ?

Continue Reading

ದೇಶ

Kedarnath Temple: ಕೇದಾರನಾಥ ದೇಗುಲದಿಂದ 228 ಕೆ.ಜಿ ಚಿನ್ನ ಮಾಯ; ದೇವರ ಕಣ್ಣೆದುರೇ ಹಗರಣ!

Kedarnath Temple: ಕೇದಾರನಾಥ ದೇವಾಲಯದಲ್ಲಿ ಚಿನ್ನದ ಹಗರಣ ನಡೆದಿದೆ. ಈ ಕುರಿತು ಯಾರೂ ಏಕೆ ಮಾತನಾಡುವುದಿಲ್ಲ? ಕೇದಾರನಾಥ ದೇವಾಲಯದಲ್ಲಿಯೇ ಹಗರಣ ನಡೆದಿರುವಾಗ, ದೆಹಲಿಯಲ್ಲಿ ದೇವಾಲಯ ನಿರ್ಮಿಸಲಾಗುತ್ತದೆಯೇ ಎಂಬುದಾಗಿ ಮಹಾರಾಷ್ಟ್ರದ ಮುಂಬೈನಲ್ಲಿ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Kedarnath Temple
Koo

ಮುಂಬೈ: ಒಡಿಶಾದ ಪುರಿಯಲ್ಲಿರುವ ವಿಶ್ವಪ್ರಸಿದ್ಧ ಜಗನ್ನಾಥ ದೇವಾಲಯದಲ್ಲಿರುವ ರತ್ನಭಂಡಾರವನ್ನು ತೆಗೆಯಲಾಗಿದ್ದು, ಕೆ.ಜಿಗಟ್ಟಲೆ ಚಿನ್ನ, ಬೆಳ್ಳಿಯ ಆಭರಣಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆಯೇ, ಉತ್ತರಾಖಂಡದಲ್ಲಿರುವ ಐತಿಹಾಸಿಕ ಕೇದಾರನಾಥ ದೇವಾಲಯದಲ್ಲಿದ್ದ (Kedarnath Temple) ಸುಮಾರು 228 ಕೆ.ಜಿ ಚಿನ್ನವನ್ನು ಕಳ್ಳತನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ (Swami Avimukteshwaranand) ಅವರೇ ಈ ಕುರಿತು ಆರೋಪ ಮಾಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಮಹಾರಾಷ್ಟ್ರದ ಮುಂಬೈನಲ್ಲಿ ಶಿವಸೇನೆ ನಾಯಕ (UBT) ಉದ್ಧವ್‌ ಠಾಕ್ರೆ ಅವರನ್ನು ಭೇಟಿಯಾದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ದೆಹಲಿಯಲ್ಲಿ ಕೇದಾರನಾಥ ದೇವಾಲಯ ನಿರ್ಮಾಣದ ಕುರಿತು ಚಿಂತನೆ ನಡೆದಿರುವ ಬಗ್ಗೆ ಅವರು ಪ್ರತಿಕ್ರಿಯಿಸಿದರು. “ಕೇದಾರನಾಥ ದೇವಾಲಯದಲ್ಲಿ ಚಿನ್ನದ ಹಗರಣ ನಡೆದಿದೆ. ಈ ಕುರಿತು ಯಾರೂ ಏಕೆ ಮಾತನಾಡುವುದಿಲ್ಲ? ಕೇದಾರನಾಥ ದೇವಾಲಯದಲ್ಲಿಯೇ ಹಗರಣ ನಡೆದಿರುವಾಗ, ದೆಹಲಿಯಲ್ಲಿ ದೇವಾಲಯ ನಿರ್ಮಿಸಲಾಗುತ್ತದೆಯೇ? ಆ ಮೂಲಕ ಇಲ್ಲೂ ಹಗರಣ ಮಾಡಲಾಗುತ್ತದೆಯೇ” ಎಂದು ಪ್ರಶ್ನಿಸಿದರು.

“ಉತ್ತರಾಖಂಡದ ಕೇದಾರನಾಥ ದೇವಾಲಯದಲ್ಲಿ 228 ಕೆ.ಜಿ ಚಿನ್ನವನ್ನು ಮಂಗಮಾಯ ಮಾಡಲಾಗಿದೆ. ಆದರೆ, ಇದುವರೆಗೆ ತನಿಖೆ ಆರಂಭವಾಗಿಲ್ಲ. ಇದಕ್ಕೆಲ್ಲ ಯಾರು ಹೊಣೆ? ಈಗ ಅವರು ದೆಹಲಿಯಲ್ಲಿ ಕೇದಾರನಾಥ ದೇವಾಲಯ ನಿರ್ಮಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಇದೆಲ್ಲ ನಡೆಯಬಾರದು” ಎಂಬುದಾಗಿ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಖಾರವಾಗಿ ಹೇಳಿದರು. ದ್ವಾದಶ ಜ್ಯೋತಿರ್ಲಿಂಗಗಳ ಪೈಕಿ ಕೇದಾರನಾಥ ದೇವಾಲಯವೂ ಒಂದಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಹಿಂದುಗಳು ಭೇಟಿ ನೀಡುತ್ತಾರೆ. ಕೆಲ ದಿನಗಳ ಹಿಂದಷ್ಟೇ ಕೇದಾರನಾಥ ಯಾತ್ರೆ ಆರಂಭವಾಗಿದೆ.

ಉದ್ಧವ್‌ ಠಾಕ್ರೆ ಮತ್ತೆ ಸಿಎಂ ಆಗಲಿ

ಉದ್ಧವ್‌ ಠಾಕ್ರೆ ಅವರನ್ನು ಭೇಟಿಯಾದ ಕುರಿತು ಮಾತನಾಡಿದ ಅವರು, “ನಾವೆಲ್ಲರೂ ಸನಾತನ ಧರ್ಮವನ್ನು ಅನುಸರಿಸುವವರು. ನಮಗೆ ಪಾಪ ಹಾಗೂ ಪುಣ್ಯದ ವ್ಯಾಖ್ಯಾನ ಗೊತ್ತಿದೆ. ಜಗತ್ತಿನಲ್ಲೇ ದೊಡ್ಡ ಪಾಪ ಎಂದರೆ ಅದು ಮೋಸ ಮಾಡುವುದು. ಉದ್ಧವ್‌ ಠಾಕ್ರೆ ಅವರಿಗೆ ಅಂತಹ ಮೋಸ ಆಗಿದೆ. ಅವರು ಮತ್ತೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವವರೆಗೂ ನಮಗಾದ ನೋವು ಕಡಿಮೆಯಾಗುವುದಿಲ್ಲ. ಉದ್ಧವ್‌ ಠಾಕ್ರೆ ಅವರಿಗೆ ಮೋಸ ಆಗಿದ್ದಕ್ಕೆ ಮಹಾರಾಷ್ಟ್ರದ ಜನರಿಗೂ ನೋವಾಗಿದೆ. ಕಳೆದ ಚುನಾವಣೆಯಲ್ಲೂ ಇದರ ಪ್ರತಿಬಿಂಬ ಗೋಚರವಾಗಿದೆ” ಎಂದು ಹೇಳಿದರು. ಉದ್ಧವ್‌ ಠಾಕ್ರೆ ಅವರ ಶಿವಸೇನೆಯು ಇಬ್ಭಾಗವಾಗಿ, ಏಕನಾಥ್‌ ಶಿಂಧೆ ಅವರು ಬಿಜೆಪಿ ಜತೆ ಕೈಜೋಡಿಸಿ, ಸರ್ಕಾರ ರಚಿಸಿದ ಕುರಿತು ಅವರು ಹೇಳಿದರು.

ಇದನ್ನೂ ಓದಿ: Sushant Singh: ಕೇದಾರನಾಥಕ್ಕೆ ಭೇಟಿ ಕೊಟ್ಟಾಗ ಸುಶಾಂತ್ ಸಿಂಗ್ ನೆನೆದು ಕಣ್ಣೀರಿಟ್ಟ ಸಹೋದರಿ!

Continue Reading
Advertisement
dina Bhavishya
ಭವಿಷ್ಯ43 mins ago

Dina Bhavishya : ಈ ರಾಶಿಯವರಿಗೆ ಹೂಡಿಕೆ ವ್ಯವಹಾರವು ಇಮ್ಮಡಿ ಲಾಭ ತರುವುದು

Virat Kohli
ಪ್ರಮುಖ ಸುದ್ದಿ6 hours ago

Virat Kohli : ಹಣ, ಹೆಸರು ಬಂದ ತಕ್ಷಣ ಕೊಹ್ಲಿಗೆ ಅಹಂಕಾರ ಬಂತು; ಮಾಜಿ ಆಟಗಾರನ ಅರೋಪ

Smriti Singh
ದೇಶ6 hours ago

Smriti Singh: ಹುತಾತ್ಮ ಯೋಧನ 1 ಕೋಟಿ ರೂಪಾಯಿಯಲ್ಲಿ ಪೋಷಕರಿಗೆ 50%, ಪತ್ನಿಗೆ 50%; ಕೊನೆಗೂ ಸಿಕ್ಕಿತು ನ್ಯಾಯ

7th Pay Commission
ಕರ್ನಾಟಕ7 hours ago

7th Pay Commission: ವೇತನ ಏರಿಕೆಗೆ ಒಪ್ಪಿಗೆ; ಒಪಿಎಸ್, ಆರೋಗ್ಯ ಯೋಜನೆ ಬೇಡಿಕೆ ಬಾಕಿ; ನೌಕರರ ಸಂಘದ ಮುಂದಿನ ನಿರ್ಧಾರ ಏನು?

Viral Video
ವೈರಲ್ ನ್ಯೂಸ್7 hours ago

Viral Video: ಚಲಿಸುತ್ತಿರುವ ರೈಲಿನಲ್ಲಿ ಅಪಾಯಕಾರಿ ಸಾಹಸ! ವಿಡಿಯೊ ನೋಡಿ

Jasprit Bumrah
ಕ್ರಿಕೆಟ್7 hours ago

Jasprit Bumrah : ಬುಮ್ರಾ ಶೈಲಿಯಲ್ಲೇ ಬೌಲಿಂಗ್ ಮಾಡುವ ಪಾಕಿಸ್ತಾನದ ಬಾಲಕನ ವಿಡಿಯೊ ವೈರಲ್​

Round table meeting on June 16 in Bengaluru
ಕರ್ನಾಟಕ7 hours ago

Round table meeting: ಶಿಕ್ಷಣ ಗುಣಮಟ್ಟ ಸುಧಾರಿಸಲು ಜು.16ರಂದು ದುಂಡು ಮೇಜಿನ ಸಭೆ

Emergency Operations Center opened for public assistance says DC Lakshmipriya
ಉತ್ತರ ಕನ್ನಡ7 hours ago

Uttara Kannada News: ಸಾರ್ವಜನಿಕರ ನೆರವಿಗೆ ತುರ್ತು ಕಾರ್ಯಾಚರಣೆ ಕೇಂದ್ರ ಸ್ಥಾಪನೆ: ಡಿಸಿ

district level various departments officials Meeting by DC MS Diwakar
ವಿಜಯನಗರ7 hours ago

Vijayanagara News: ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು: ಡಿಸಿ ಎಂ.ಎಸ್.ದಿವಾಕರ್‌ ಸೂಚನೆ

Assembly Session Government is making sincere efforts to solve the problems in the Survey Department says Minister Krishna Byre Gowda
ಕರ್ನಾಟಕ7 hours ago

Assembly Session: ಸರ್ವೆ ಇಲಾಖೆ ಸಮಸ್ಯೆಗಳ ಪರಿಹಾರಕ್ಕೆ ಚುರುಕಿನ ಕ್ರಮ: ಸಚಿವ ಕೃಷ್ಣ ಬೈರೇಗೌಡ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ12 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ19 hours ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ23 hours ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ1 day ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ2 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ3 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

ಟ್ರೆಂಡಿಂಗ್‌