ವಿಸ್ತಾರ TOP 10 NEWS | ಪ್ರವೀಣ್‌- ಫಾಜಿಲ್‌ ಹತ್ಯೆ ಹಿನ್ನೆಲೆ ನೈಟ್‌ ಕರ್ಫ್ಯೂ ಹಾಗೂ ಇನ್ನಿತರೆ ಪ್ರಮುಖ ಸುದ್ದಿಗಳಿವು - Vistara News

ಪ್ರಮುಖ ಸುದ್ದಿ

ವಿಸ್ತಾರ TOP 10 NEWS | ಪ್ರವೀಣ್‌- ಫಾಜಿಲ್‌ ಹತ್ಯೆ ಹಿನ್ನೆಲೆ ನೈಟ್‌ ಕರ್ಫ್ಯೂ ಹಾಗೂ ಇನ್ನಿತರೆ ಪ್ರಮುಖ ಸುದ್ದಿಗಳಿವು

ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWSನಲ್ಲಿ.

VISTARANEWS.COM


on

Vistara Top 10 news
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸುಳ್ಯದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ನಂತರ ಪರಿಸ್ಥಿತಿ ತಹಬದಿಗೆ ಬರುವ ಮುನ್ನವೇ ಮುಸ್ಲಿಂ ಯುವಕ ಫಾಜಿಲ್‌ ಹತ್ಯೆ ನಡೆದಿದ್ದು, ದಕ್ಷಿಣ ಕನ್ನಡ ಪ್ರಕ್ಷುಬ್ಧದಲ್ಲಿದೆ. ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ವಾಕ್ಸಮರ ನಡೆಯುತ್ತಿದೆ ಹಾಗೂ ದಿನದ ಇನ್ನಿತರೆ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣವನ್ನು NIAಗೆ ವಹಿಸಿದ ರಾಜ್ಯ ಸರ್ಕಾರ: ಸಿಎಂ ಬೊಮ್ಮಾಯಿ ಘೋಷಣೆ
ಸುಳ್ಯದಲ್ಲಿ ಹತ್ಯೆಗೀಡಾಗಿದ್ದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಜತೆ ಸಭೆ ನಡೆಸಿದ ನಂತರ ಈ ಕುರಿತು ಮಾತನಾಡಿದ ಬೊಮ್ಮಾಯಿ, ಪ್ರವೀಣ್ ಹತ್ಯೆ,ಸಂಘಟಿತ ಅಪರಾಧವಾಗಿದೆ. ಪ್ರಕರಣದ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇನೆ. ಪ್ರಕರಣದ ತನಿಖೆ ತ್ವರಿತಗತಿಯಾಗಿ ನಡೆಯುತ್ತಿದೆ. ಪ್ರಕರಣ ಎರಡು ರಾಜ್ಯಕ್ಕೆ ಸಂಬಂಧಿಸಿದ್ದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ NIA ಗೆ ಲೆಟರ್ ಬರೆಯೋದಕ್ಕೆ ಹೇಳಿದ್ದೇನೆ, ಎನ್‌ಐಗೆ ವಹಿಸಲು ತೀರ್ಮಾನಿಸಿದ್ದೇವೆ ಎಂದರು. (ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ಮಾಡಿ)
Night Curfew | ದ.ಕನ್ನಡ ಜಿಲ್ಲೆಯಲ್ಲಿ ಆ.1ವರೆಗೆ ನೈಟ್‌ ಕರ್ಫ್ಯೂ: ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ

2. ಫಾಜಿಲ್‌ ಹತ್ಯೆಗೆ ಮಿಸ್ಟೇಕನ್‌ ಐಡೆಂಟಿಟಿ ಕಾರಣವೇ?: ಪೊಲೀಸರಲ್ಲಿ ಹೀಗೊಂದು ಅನುಮಾನ
ಸುಳ್ಯದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಬೆನ್ನಿಗೇ ಸುರತ್ಕಲ್‌ನಲ್ಲಿ ಗುರುವಾರ ನಡೆದ ಫಾಜಿಲ್‌ ಕೊಲೆ ಪ್ರಕರಣವು ಮಿಸ್ಟೇಕನ್‌ ಐಡೆಂಟಿಟಿಯ (Mistaken Identity) ಫಲಶ್ರುತಿಯೇ ಎಂಬ ಅನುಮಾನ ಶುರುವಾಗಿದೆ. ಅಸಲಿಗೆ ಸುರತ್ಕಲ್‌ನಲ್ಲಿ ಹತ್ಯೆಗೀಡಾದ ಫಾಜಿಲ್‌ ನಿಜವಾದ ಟಾರ್ಗೆಟ್‌ ಆಗಿರಲಿಲ್ಲ. ಹಂತಕರು ಎಸ್‌.ಕೆ. ಮೊಬೈಲ್ಸ್‌ ಅಂಗಡಿ ಮಾಲೀಕ ಎಸ್‌.ಕೆ. ಫಾರೂಕ್‌ನನ್ನು ಗುರಿಯಾಗಿಸಿ ದಾಳಿ ಮಾಡಿದ್ದರು. ಈ ಹಿಂದೆ ಎಸ್‌.ಕೆ. ಫಾರೂಕ್‌ ಕೆ.ಎಫ್‌.ಡಿ. ಸಂಘಟನೆಯಲ್ಲಿ ನಾಯಕನಾಗಿದ್ದ. (ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ಮಾಡಿ)
ಫಾಜಿಲ್‌ ಕುಟುಂಬಕ್ಕೂ ₹25 ಲಕ್ಷ ನೀಡಲು ಯು.ಟಿ. ಖಾದರ್‌ ಆಗ್ರಹ: ಪ್ರಮೋದ್‌ ಮುತಾಲಿಕ್‌ಗೆ ನಿರ್ಬಂಧ

3. ವೇದವಾಕ್ಯ ಅಲ್ಲ ಅವನು ಹೇಳಿದ್ದು: ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ಹರಿಹಾಯ್ದ ಸಿಎಂ ಬೊಮ್ಮಾಯಿ
ಪದೇಪದೆ ನಡೆಯುತ್ತಿರುವ ಹತ್ಯೆಗಳ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ ಮಾತಿಗೆ ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶಭರಿತರಾಗಿದ್ದು, ಅವನು ಹೇಳಿದ್ದೇ ವೇದವಾಕ್ಯ ಅಲ್ಲ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ, ಸಂಸದ ತೇಜಸ್ವಿ ಸೂರ್ಯ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸುವಾಗ ಭಾವೋದ್ವೇಗಕ್ಕೊಳಗಾದ ಸಿದ್ದರಾಮಯ್ಯ ನಂತರ ತಮ್ಮ ಮಾತನ್ನು ಹಿಂಪಡೆದಿದ್ದಾರೆ. ಬಸವರಾಜ ಬೊಮ್ಮಾಯಿ ವಿಫಲ ಮುಖ್ಯಮಂತ್ರಿ ಎಂದಿದ್ದಾರೆ. (ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ಮಾಡಿ)

4. Vistara Money+| ವಿಸ್ತಾರ ಮೀಡಿಯಾದಿಂದ ಹಣಕಾಸು ಕುರಿತ ಯೂಟ್ಯೂಬ್‌ ಚಾನೆಲ್‌ ಲೋಕಾರ್ಪಣೆ
ರಾಜ್ಯದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ವಿಸ್ತಾರ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ಜನರಲ್ಲಿ ಹಣಕಾಸು ಸಾಕ್ಷರತೆ ಹೆಚ್ಚಿಸುವ ಉದ್ದೇಶದಿಂದ ʻವಿಸ್ತಾರ ಮನಿ ಪ್ಲಸ್‌ʼ ಎಂಬ ಹೊಸ ಯೂಟ್ಯೂಬ್‌ ಚಾನೆಲ್‌ ಆರಂಭಿಸಿದೆ. ಇದರ ಲೋಕಾರ್ಪಣೆ ಕಾರ್ಯಕ್ರಮ ಶುಕ್ರವಾರ ಬೆಂಗಳೂರಿನ ಕ್ವೀನ್ಸ್‌ ರಸ್ತೆಯಲ್ಲಿರುವ ವಿಸ್ತಾರ ನ್ಯೂಸ್‌ ಕಚೇರಿಯಲ್ಲಿ ನಡೆಯಿತು.
ವಿಸ್ತಾರ ಮೀಡಿಯಾದ ವೆಬ್‌ಸೈಟ್‌ vistaranews.com ಕಳೆದ ಜುಲೈ ೨೩ರಂದು ಲೋಕಾರ್ಪಣೆಗೊಂಡು ಜನಪ್ರಿಯತೆ ಪಡೆಯುತ್ತಿರುವಂತೆಯೇ, ಕೇವಲ ಆರೇ ದಿನಗಳಲ್ಲಿ ಕನ್ನಡ ನಾಡಿಗೆ ಎರಡನೇ ಕೊಡುಗೆಯಾಗಿ ವಿಸ್ತಾರ ಮನಿ ಪ್ಲಾಸ್‌ ಯೂ ಟ್ಯೂಬ್‌ ಚಾನೆಲ್‌ ಅನಾವರಣಗೊಂಡಿದೆ.
ಅರ್ಥಶಾಸ್ತ್ರಜ್ಞ, ಬರಹಗಾರ ರಂಗಸ್ವಾಮಿ ಮೂಕನಹಳ್ಳಿ ಅವರು ಯೂಟ್ಯೂಬ್‌ ಚಾನೆಲ್‌ಗೆ ಶುಕ್ರವಾರ ಚಾಲನೆ ನೀಡಿದರು. ಏಮ್‌ ಹೈ ಕನ್ಸಲ್ಟೆನ್ಸಿ ಸಂಸ್ಥೆಯ ಸಿಇಒ ಆಗಿರುವ ಎನ್‌. ರವಿಶಂಕರ್‌ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಿಇಒ ಮತ್ತು ಪ್ರಧಾನ ಸಂಪಾದಕರಾಗಿರುವ ಹರಿಪ್ರಕಾಶ್‌ ಕೋಣೆಮನೆ, ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರಾಗಿರುವ ಎಚ್‌.ವಿ. ಧರ್ಮೇಶ್‌ ಹಾಗೂ ನಿರ್ದೇಶಕರಾಗಿರುವ ಶ್ರೀನಿವಾಸ ಹೆಬ್ಬಾರ್‌ ಅವರ ಮಾರ್ಗದರ್ಶನದಲ್ಲಿ ಈ ಚಾನೆಲ್‌ ಮೂಡಿಬರುತ್ತಿದೆ. ಎಕ್ಸಿಕ್ಯೂಟಿವ್‌ ಎಡಿಟರ್‌ ಶರತ್‌ ಎಂ.ಎಸ್‌ ನೇತೃತ್ವದಲ್ಲಿ ಈ ಚಾನೆಲ್‌ ರೂಪುಗೊಂಡಿದೆ. (ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ಮಾಡಿ)

5. ಸಿದ್ದರಾಮೋತ್ಸವ | ಸಿದ್ದರಾಮಯ್ಯಗೆ ವರವೋ? ಶಾಪವೋ?
ಕಾಂಗ್ರೆಸ್ ಮಾಸ್‌ ಲೀಡರ್‌ ಹಾಗೂ ಹಿಂದುಳಿದ ವರ್ಗಗಳ ಶಕ್ತಿ ಎಂದೇ ಹೆಸರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನದ ಅಂಗವಾಗಿ ಆಗಸ್ಟ್ 3ರಂದು ಹಮ್ಮಿಕೊಳ್ಳಲಾದ “ಸಿದ್ದರಾಮೋತ್ಸವ” ಕಾರ್ಯಕ್ರಮವು ಪರೋಕ್ಷ ಶಕ್ತಿ ಪ್ರದರ್ಶನ ಎಂದೇ ಹೇಳಲಾಗುತ್ತಿದೆ. ಆದರೆ, ಇದು ನಿಜವಾಗಿಯೂ ಸಿದ್ದರಾಮಯ್ಯ ಅವರಿಗೆ ವರವಾಗಲಿದೆಯೋ? ಶಾಪವಾಗಲಿದೆಯೋ? ಎಂಬ ಚರ್ಚೆಗಳು ನಡೆಯುತ್ತಿವೆ. (ವಿಸ್ತಾರ ವಿಶೇಷ ವರದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

6. CWG-2022 | ಪಾಕ್‌ ಬಾಕ್ಸರ್ ಮಣಿಸಿದ ಶಿವ ಥಾಪ 16ನೇ ಸುತ್ತಿಗೆ ಪ್ರವೇಶ
ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ (CWG- 2022) ಪಾಲ್ಗೊಂಡಿರುವ ಭಾರತದ ಬಾಕ್ಸರ್‌ ಶಿವ ಥಾಪಾ ತಮ್ಮ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಗೆಲುವು ಸಾಧಿಸುವುದರೊಂದಿಗೆ ೧೬ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಅವರು ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನದ ಸುಲೇಮಾನ್‌ ಬಲೂಚ್‌ ವಿರುದ್ಧ ೫-೦ ಅಂತರದ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಎಂಟ್ರಿ ಪಡೆದರು. (ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ಮಾಡಿ)

7. ಮಾದರಿ ಕುಟುಂಬ | ಏಳೇಳು ಜನ್ಮಕ್ಕೂ ಒಂದೇ ಅಂದರು 8 ಸಹೋದರರು; ಒಂದೇ ವಿನ್ಯಾಸದ 7 ಮನೆ ಕಟ್ಟಿದರು!
ಇದು ಹುಟ್ಟಿದಾಗ ಅಣ್ಣ-ತಮ್ಮ, ಬೆಳೆಯುತ್ತಾ ಬೆಳೆಯುತ್ತಾ ದಾಯಾದಿ ಎನ್ನುವ ನಾಣ್ಣುಡಿಗೆ ಅಪವಾದದಂತೆ ಬದುಕಿ ಮಾದರಿಯಾಗಿರುವ ಅವಿಭಕ್ತ ಕುಟುಂಬದ ಒಗ್ಗಟ್ಟಿನ (ಮಾದರಿ ಕುಟುಂಬ) ಕತೆ. ಹೌದು, ಒಬ್ಬಿಬ್ಬರು ಅಣ್ಣ-ತಮ್ಮಂದಿರಲ್ಲೇ ಒಡಕನ್ನು ಕಾಣುವ ಈ ಕಾಲದಲ್ಲೂ 8 ಮಂದಿ ಸಹೋದರರು ಏಕತೆಯ ಮಂತ್ರವನ್ನು ಜಪಿಸುತ್ತಿದ್ದಾರೆ. ಈಗ ಇವರು ಒಂದೇ ತೆರನಾದ 7 ಮನೆಯನ್ನು ಕಟ್ಟುವ ಮೂಲಕ ಸುದ್ದಿಯಲ್ಲಿದ್ದಾರೆ. (ವಿಸ್ತಾರ ವಿಶೇಷ ವರದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

8. ಕೋಟಿ ಹಣವಷ್ಟೇ ಅಲ್ಲ, ಅರ್ಪಿತಾ ಮುಖರ್ಜಿ ಮನೆಯಲ್ಲಿ ಸಿಕ್ಕಿವೆ ರಾಶಿ ರಾಶಿ ಲೈಂಗಿಕ ಆಟಿಕೆಗಳು !
ಪಶ್ಚಿಮ ಬಂಗಾಳ ಶಾಲಾ ನೇಮಕಾತಿಯಲ್ಲಿ ನಡೆದ ಹಗರಣದಲ್ಲಿ ಪಾರ್ಥ ಚಟರ್ಜಿ ಹೆಸರು ಮುನ್ನೆಲೆಗೆ ಬಂದಾಗಿನಿಂದಲೂ ಅವರ ಆಪ್ತೆ ಅರ್ಪಿತಾ ಮುಖರ್ಜಿ ಕೂಡ ಟ್ರೆಂಡಿಂಗ್‌ನಲ್ಲಿದ್ದಾಳೆ. ಅರ್ಪಿತಾ ಮುಖರ್ಜಿ ಮನೆಯಲ್ಲಿ ಕೋಟಿಕೋಟಿ ಹಣ ಪತ್ತೆಯಾಗಿದೆ. ಹಣ ಎಣಿಸುವ ಯಂತ್ರ ಹಿಡಿದು ಈಕೆಯ ಮನೆಯ ಮೇಲೆ ರೇಡ್‌ ಮಾಡುತ್ತಿರುವ ಇ ಡಿ, ಸಿಕ್ಕ ಹಣ ಹೊತ್ತೊಯ್ಯಲು ಟ್ರಕ್‌ಗಳನ್ನು ಬಳಸಿಕೊಳ್ಳುತ್ತಿದೆ. ಅರ್ಪಿತಾ ಮನೆಯಲ್ಲಿ ಈಗಾಗಲೇ 50 ಕೋಟಿ ರೂಪಾಯಿಗೂ ಅಧಿಕ ನಗದು, ಅಪಾರ ಚಿನ್ನಾಭರಣಗಳು ಪತ್ತೆಯಾಗಿದ್ದು ಜಗಜ್ಜಾಹೀರಾಗಿದೆ. ಆದರೆ ಈಗ ಇನ್ನೊಂದು ಕುತೂಹಲಕಾರಿ ಸಂಗತಿ ಹೊರಬಿದ್ದಿದೆ. ಅರ್ಪಿತಾ ಮನೆಯಲ್ಲಿ ಬರೀ ಹಣವಷ್ಟೇ ಅಲ್ಲ, ಅಪಾರ ಪ್ರಮಾಣದ ಸೆಕ್ಸ್‌ ಟಾಯ್ಸ್‌ (ಲೈಂಗಿಕ ಆಟಿಕೆಗಳು-ಲೈಂಗಿಕ ಸುಖಕ್ಕಾಗಿ ಬಳಸುವ ವಸ್ತುಗಳು)ಗಳು ಕೂಡ ಪತ್ತೆಯಾಗಿವೆ ಎಂದು ಇಡಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. (ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ಮಾಡಿ)

9. IT Retrun | 4 ಕೋಟಿಗೆ ಏರಿದ ಐಟಿ ರಿಟರ್ನ್‌ ಸಲ್ಲಿಕೆ, ಗಡುವು ಮುಂದೂಡಿಕೆ ಇಲ್ಲ ಎಂದ ಕೇಂದ್ರ
ಸಾಮಾಜಿಕ ಜಾಲತಾಣಗಲ್ಲಿ ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆಗೆ ಜುಲೈ ೩೧ರ ಗಡುವನ್ನು ವಿಸ್ತರಿಸಲು ಒತ್ತಾಯಿಸಿ ಅಭಿಯಾನದ ಮೂಲಕ ಒತ್ತಡ ಹೇರಲಾಗುತ್ತಿದ್ದರೂ, ಮುಂದೂಡಿಕೆಯ ಸಾಧ್ಯತೆ ಇಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ೨೦೨೧ರ ಡಿಸೆಂಬರ್‌ ೩೧ರ ಮಟ್ಟವನ್ನು ಹೋಲಿಸಿದರೆ ಈಗ ೬೮% ಮಂದಿ ಐಟಿ ರಿಟರ್ನ್‌ ಸಲ್ಲಿಸಿದ್ದಾರೆ. ರಿಟರ್ನ್‌ ಸಲ್ಲಿಸಿದವರ ಒಟ್ಟು ಸಂಖ್ಯೆ ಗುರುವಾರ ಸಂಜೆಯ ವೇಳೆಗೆ ೪ ಕೋಟಿಗೆ ಏರಿಕೆಯಾಗಿದೆ. ಕಳೆದ ವರ್ಷ ಕೋವಿಡ್-‌೧೯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜುಲೈ ೩೧ರ ಗಡುವನ್ನು ಡಿಸೆಂಬರ್‌ ೩೧ರ ತನಕ ವಿಸ್ತರಿಸಲಾಗಿತ್ತು. ಐಟಿ ರಿಟರ್ನ್‌ ಸಲ್ಲಿಕೆ ಚುರುಕಾಗಿದ್ದು, ಗುರುವಾರ ಪ್ರತಿ ಗಂಟೆಗೆ ಸರಾಸರಿ ೩ ಲಕ್ಷ ರಿಟರ್ನ್‌ಗಳು ಸಲ್ಲಿಕೆಯಾಗಿವೆ ಎಂದು ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ. (ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ಮಾಡಿ)

10. Vikrant rona collection | ವಿಕ್ರಾಂತ್‌ ರೋಣ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವಿವರ
ಕಿಚ್ಚ ಸುದೀಪ್‌ ನಟನೆಯ ವಿಕ್ರಾಂತ್‌ ರೋಣ (Vikrant Rona) ಅದ್ಧೂರಿಯಾಗಿ ಬಿಡುಗಡೆಯಾಗಿ ಜನಮನ್ನಣೆ ಪಡೆದುಕೊಂಡಿದೆ. ಗುರುವಾರ (ಜು.28)ಕ್ಕೆ ವಿಶ್ವಾದ್ಯಂತ ಬಿಡುಗಡೆಗೊಂಡಿದ್ದು, ಇದೀಗ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮಾಹಿತಿ ಬಗ್ಗೆ ಚಿತ್ರತಂಡ ಹೇಳಿಕೊಂಡಿದೆ. ಮೊದಲ ದಿನ 35 ಕೋಟಿಗೂ ಅಧಿಕ ಕಲೆಕ್ಷನ್ ವಿಕ್ರಾಂತ್‌ ರೋಣ ಮಾಡಿದ್ದು, ಕರ್ನಾಟಕದಲ್ಲಿ ಮೊದಲ ದಿನ 16 ಕೋಟಿ ರೂ., ಟಾಲಿವುಡ್‌ನಲ್ಲಿ 4‌ ಕೋಟಿ 50 ಲಕ್ಷ ರೂ., ಬಾಲಿವುಡ್‌ನಲ್ಲಿ 4 ಕೋಟಿ ರೂ., ಮಾಲಿವುಡ್‌ನಲ್ಲಿ 1 ಕೋಟಿ ರೂ., ಕಾಲಿವುಡ್ ಅಂಗಳದಲ್ಲಿ 2.5 ಕೋಟಿ ರೂ., ಓವರ್ ಸೀಸ್‌ನಲ್ಲಿ 7 ಕೋಟಿ ರೂ. ಕಲೆಕ್ಷನ್ ಮಾಡಿದೆ. ವಾರದ ಅಂತ್ಯದಲ್ಲಿ ದಾಖಲೆ ಸಂಗ್ರಹ ಬರುವ ಸಾಧ್ಯತೆಗಳಿವೆ. (ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ಮಾಡಿ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IND vs SL : ಭಾರತ ವಿರುದ್ಧದ ಏಕ ದಿನ ಸರಣಿಗೆ ಶ್ರೀಲಂಕಾ ತಂಡ ಪ್ರಕಟ; ಹೊಸ ನಾಯಕನ ಘೋಷಣೆ

IND vs SL: ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಪ್ರಭಾವಶಾಲಿ ಆರಂಭ ನೀಡಿದ್ದ 24 ವರ್ಷದ ನಿಶಾನ್ ಮಧುಶಂಕಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಡಿರುವ 8 ಟೆಸ್ಟ್ ಪಂದ್ಯಗಳಲ್ಲಿ 42.07ರ ಸರಾಸರಿಯಲ್ಲಿ ರನ್​ ಬಾರಿಸಿದ್ದಾರೆ.ರ ಬ್ರಾಂಕೈಟಿಸ್ ಮತ್ತು ಉಸಿರಾಟದ ಸೋಂಕಿನಿಂದಾಗಿ ಟಿ 20 ಐ ಸರಣಿಯಿಂದ ಹೊರಗುಳಿದಿದ್ದ ದುಷ್ಮಂತ ಚಮೀರಾ ಅವರು ಪ್ರವಾಸದ ಏಕದಿನ ಹಂತದಿಂದಲೂ ಹೊರಗುಳಿಯಲಿದ್ದಾರೆ.

VISTARANEWS.COM


on

IND vs SL
Koo

ಬೆಂಗಳೂರು ಪ್ರವಾಸಿ ಭಾರತ ವಿರುದ್ಧದ ಮೂರು ಪಂದ್ಯಗಳ ಏಕ ದಿನ ಸರಣಿಗೆ (IND vs SL) 16 ಸದಸ್ಯರ ಶ್ರೀಲಂಕಾ ತಂಡ ಮಂಗಳವಾರ ಪ್ರಕಟಗೊಂಡಿದೆ. ಮೂರು ಪಂದ್ಯಗಳ ಏಕದಿನ ಸರಣಿಯು ಆಗಸ್ಟ್ 2 ರಿಂದ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಟಿ 20 ಐ ಸರಣಿಯನ್ನು ಕಳೆದುಕೊಂಡ ನಂತರ ಶ್ರೀಲಂಕಾ ಏಕದಿನ ಪಂದ್ಯಗಳಲ್ಲಿ ಪುನರಾಗಮನ ಮಾಡುವ ಗುರಿ ಹೊಂದಿದೆ. ಏತನ್ಮಧ್ಯೆ, ಚರಿತ್ ಅಸಲಂಕಾ ತಂಡವನ್ನು ಮುನ್ನಡೆಸಲಿದ್ದಾರೆ.

ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಪ್ರಭಾವಶಾಲಿ ಆರಂಭ ನೀಡಿದ್ದ 24 ವರ್ಷದ ನಿಶಾನ್ ಮಧುಶಂಕಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಡಿರುವ 8 ಟೆಸ್ಟ್ ಪಂದ್ಯಗಳಲ್ಲಿ 42.07ರ ಸರಾಸರಿಯಲ್ಲಿ ರನ್​ ಬಾರಿಸಿದ್ದಾರೆ.ರ ಬ್ರಾಂಕೈಟಿಸ್ ಮತ್ತು ಉಸಿರಾಟದ ಸೋಂಕಿನಿಂದಾಗಿ ಟಿ 20 ಐ ಸರಣಿಯಿಂದ ಹೊರಗುಳಿದಿದ್ದ ದುಷ್ಮಂತ ಚಮೀರಾ ಅವರು ಪ್ರವಾಸದ ಏಕದಿನ ಹಂತದಿಂದಲೂ ಹೊರಗುಳಿಯಲಿದ್ದಾರೆ.

ಚಾಂಪಿಯನ್ಸ್ ಟ್ರೋಫಿ 2025 ಕ್ಕೆ ಮುಂಚಿತವಾಗಿ ಆಡಲು ಸಜ್ಜಾಗಿರುವ ಆರು ಏಕದಿನ ಪಂದ್ಯಗಳಲ್ಲಿ ಮೂರು ಪಂದ್ಯಗಳ ಈ ಸರಣಿಯು ಭಾರತಕ್ಕೆ ಪ್ರಮುಖ ಮಹತ್ವದ್ದಾಗಿದೆ. ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ಈ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದು 2023 ರ ವಿಶ್ವಕಪ್ ಫೈನಲ್ ನಂತರ ಏಕದಿನ ಪಂದ್ಯಗಳಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದೆ. ಈ ಸರಣಿಯು ಶ್ರೇಯಸ್ ಅಯ್ಯರ್ ತಮ್ಮ ಕೇಂದ್ರ ಒಪ್ಪಂದವನ್ನು ಕಳೆದುಕೊಂಡ ನಂತರ ಭಾರತೀಯ ತಂಡಕ್ಕೆ ಮರಳಿದ್ದಾರೆ.

ಇದನ್ನೂ ಓದಿ: Neeraj Chopra : ನಮಸ್ಕಾರ ಪ್ಯಾರಿಸ್​​; ಒಲಿಂಪಿಕ್ಸ್​ ಕ್ರೀಡಾಗ್ರಾಮ ತಲುಪಿದ ಚಿನ್ನದ ಹುಡುಗ ನೀರಜ್ ಚೋಪ್ರಾ

ರಿಯಾನ್ ಪರಾಗ್ ತಮ್ಮ ಮೊದಲ ಏಕದಿನ ಕರೆಯನ್ನು ಗಳಿಸಿದರೆ, ಶಿವಂ ದುಬೆ ಐದು ವರ್ಷಗಳ ನಂತರ ಏಕದಿನ ತಂಡಕ್ಕೆ ಮರಳಿದ್ದಾರೆ.

ಶ್ರೀಲಂಕಾ ತಂಡ: ಚರಿತ್ ಅಸಲಂಕಾ (ನಾಯಕ), ಪಥುಮ್ ನಿಸ್ಸಾಂಕಾ, ಅವಿಷ್ಕಾ ಫರ್ನಾಂಡೊ, ಕುಸಲ್ ಮೆಂಡಿಸ್, ಸದೀರಾ ಸಮರವಿಕ್ರಮ, ಕಮಿಂಡು ಮೆಂಡಿಸ್, ಜನಿತ್ ಲಿಯಾನಗೆ, ನಿಶಾನ್ ಮಧುಷ್ಕಾ, ವನಿಂದು ಹಸರಂಗ, ದುನಿತ್ ವೆಲ್ಲಗೆ, ಚಮಿಕಾ ಕರುಣರತ್ನೆ, ಮಹೇಶ್ ತೀಕ್ಷಾನ, ಅಕಿಲಾ ಧನಂಜಯ, ದಿಲ್ಶಾನ್ ಮಧುಶಂಕಾ, ಮಥೀಶಾ ಪತಿರಾನಾ, ಅಸಿತಾ ಫರ್ನಾಂಡೊ.

ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ. ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷ್ದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

Continue Reading

ಪ್ರಮುಖ ಸುದ್ದಿ

Wayanad Landslide: ಕೇರಳದಲ್ಲಿ ರಕ್ಷಣೆ, ಪರಿಹಾರ ಕಾರ್ಯಾಚರಣೆಗೆ ಇಬ್ಬರು IAS ಅಧಿಕಾರಿಗಳನ್ನು ನಿಯೋಜಿಸಿದ ಸಿಎಂ ಸಿದ್ದರಾಮಯ್ಯ

Wayanad Landslide: ಕರ್ನಾಟಕ ಸರ್ಕಾರವು ಕೇರಳ ಸರ್ಕಾರದ ವಿಪತ್ತು ನಿರ್ವಹಣಾ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ನೆರವು ಒದಗಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

VISTARANEWS.COM


on

Koo

ನವ ದೆಹಲಿ: ಭೂ ಕುಸಿತದಿಂದ ತತ್ತರಿಸಿರುವ ವಯನಾಡಿನಲ್ಲಿ (Wayanad Landslide) ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದ್ದು, ಇದಕ್ಕಾಗಿ ಇಬ್ಬರು ಐಎಎಸ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ನವ ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಅವರು ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು, ವಯನಾಡಿನಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆ ನೆರವಾಗಲು ಬೆಂಗಳೂರಿನಲ್ಲಿರುವ ಎನ್‌ಡಿಆರ್‌ಎಫ್ ತಂಡ ಹಾಗೂ ಮದ್ರಾಸ್ ಎಂಜಿನಿಯರ್ ಗ್ರೂಪ್ ಸೇನಾ ಪಡೆಯ ತಂಡಗಳು ತ್ವರಿತವಾಗಿ ತೆರಳಲು ಹಾಗೂ ಅಗತ್ಯ ಉಪಕರಣಗಳು ಮತ್ತು ಇತರ ಅಗತ್ಯ ಪರಿಹಾರ ಸಾಮಗ್ರಿಗಳನ್ನು ರವಾನೆ ಮಾಡಲು ನೆರವು ನೀಡಲಾಗಿದೆ.

ಎಂಇಜಿಯ ಒಬ್ಬರು ಅಧಿಕಾರಿ, ಇಬ್ಬರು ಜೆ.ಸಿ.ಓ.ಗಳು ಹಾಗೂ 70 ಮಂದಿ ವಿವಿಧ ರ‍್ಯಾಂಕ್‌ನ ಸಿಬ್ಬಂದಿ ಈಗಾಗಲೇ ರಕ್ಷಣೆ ಹಾಗೂ ಪರಿಹಾರ ಸಾಮಗ್ರಿಗಳೊಂದಿಗೆ 15 ವಾಹನಗಳಲ್ಲಿ ವಯನಾಡಿಗೆ ತೆರಳಿದ್ದಾರೆ. ಇನ್ನೂ ಇಬ್ಬರು ಅಧಿಕಾರಿಗಳು, ನಾಲ್ಕು ಮಂದಿ ಜೆ.ಸಿ.ಓ.ಗಳು, ಹಾಗೂ 100 ಮಂದಿ ಸೇನಾ ಸಿಬ್ಬಂದಿ ರಕ್ಷಣಾ ಉಪಕರಣಗಳೊಂದಿಗೆ 40 ವಾಹನಗಳಲ್ಲಿ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ತಂಡಗಳು ವಯನಾಡಿಗೆ ಶೀಘ್ರವೇ ತಲುಪಲು ಅನುವಾಗುವಂತೆ, ಬಂಡೀಪುರ ಚೆಕ್ ಪೋಸ್ಟ್‌ನಲ್ಲಿ ಈ ಎನ್‌ಡಿಆರ್‌ಎಫ್ ಹಾಗೂ ಸೇನೆಯ ತಂಡಗಳಿಗೆ ಹಾಗೂ ಪರಿಹಾರ ಸಾಮಗ್ರಿಗಳ ಸಾಗಾಣಿಕೆ ವಾಹನಗಳಿಗೆ ಗ್ರೀನ್‌ ಕಾರಿಡಾರ್‌ ಮೂಲಕ ಅನಿರ್ಬಂಧಿತ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ. ಕರ್ನಾಟಕ ಸರ್ಕಾರವು ಕೇರಳ ಸರ್ಕಾರದ ವಿಪತ್ತು ನಿರ್ವಹಣಾ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ನೆರವು ಒದಗಿಸಲಾಗುತ್ತಿದೆ. ಅಲ್ಲದೆ ಗಡಿ ಭಾಗದ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಹ ಸೂಕ್ತ ಬೆಂಬಲ ನೀಡುತ್ತಿದ್ದಾರೆ ಎಂದು ತಿಳಿಸಿದರು.

ವೈದ್ಯಕೀಯ ನೆರವು, ಆಸ್ಪತ್ರೆ ಸೌಲಭ್ಯ ಹಾಗೂ ಗಾಯಾಳುಗಳನ್ನು ಕರೆತರಲು ಬಸ್‌ಗಳನ್ನು ಎಚ್‌.ಡಿ. ಕೋಟೆಯಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಚಾಮರಾಜನಗರ ಜಿಲ್ಲಾಡಳಿತವೂ ಜಿಲ್ಲೆಯ ಗಡಿಭಾಗದಿಂದ ವಯನಾಡಿಗೆ ಆಗಾಗ ತೆರಳುವ ನಾಗರಿಕರ ನೆರವಿಗಾಗಿ ಸಹಾಯವಾಣಿ ಪ್ರಾರಂಭಿಸಿದೆ. ಮುಖ್ಯಮಂತ್ರಿಗಳು ಸ್ವತಃ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದು, ವಯನಾಡಿನಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಚರಣೆಗೆ ಎಲ್ಲ ರೀತಿಯ ಬೆಂಬಲ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದಲ್ಲದೆ ವಯನಾಡಿನಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳ ಕುರಿತಂತೆ ಸಮನ್ವಯಕ್ಕಾಗಿ ಹಿರಿಯ ಐಎಎಸ್‌ ಅಧಿಕಾರಿ ಪಿ.ಸಿ. ಜಾಫರ್‌ (ಮೊಬೈಲ್‌ ಸಂಖ್ಯೆ 9448355577) ಹಾಗೂ ದಿಲೀಶ್‌ ಶಶಿ (9446000514) ಅವರನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ | Wayanad Landslide: ಕೇರಳಕ್ಕೆ ಅಗತ್ಯವಿರುವ ಎಲ್ಲಾ ನೆರವನ್ನು ನಮ್ಮ ಸರ್ಕಾರ ನೀಡಲಿದೆ: ಸಿಎಂ ಸಿದ್ದರಾಮಯ್ಯ

ಕನ್ನಡಿಗರ ರಕ್ಷಣೆಗೆ ಪ್ರಯತ್ನ

ವಯನಾಡಿನಲ್ಲಿ ಕನ್ನಡಿಗರು ಸಿಲುಕಿಕೊಂಡಿರುವ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆತಿದ್ದು, ಅವರ ರಕ್ಷಣೆಗೆ ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

Continue Reading

ದೇಶ

Love Jihad: ಲವ್‌ ಜಿಹಾದ್‌ ವಿರುದ್ಧ ಯೋಗಿ ದಿಟ್ಟ ಕ್ರಮ; ಇನ್ನು ಜಿಹಾದಿಗಳಿಗೆ ಜೀವಾವಧಿ ಶಿಕ್ಷೆ ಗ್ಯಾರಂಟಿ!

Love Jihad: ಬಲವಂತದ ಮತಾಂತರ, ಲವ್‌ ಜಿಹಾದ್‌ನಲ್ಲಿ ತೊಡಗುವವರಿಗೆ ಕಠಿಣ ಶಿಕ್ಷೆ ವಿಧಿಸುವ ವಿಧೇಯಕಕ್ಕೆ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ. ಇದರೊಂದಿಗೆ ಲವ್‌ ಜಿಹಾದಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಯೋಗಿ ಸರ್ಕಾರದ ಉದ್ದೇಶಕ್ಕೆ ಬಲ ಬಂದಂತಾಗಿದೆ.

VISTARANEWS.COM


on

Love Jihad
Koo

ಲಖನೌ: ಲವ್‌ ಜಿಹಾದ್‌ ವಿರುದ್ಧ ಕ್ರಮ ತೆಗೆದುಕೊಳ್ಳುವ ದಿಸೆಯಲ್ಲಿ ಉತ್ತರ ಪ್ರದೇಶ ಸರ್ಕಾರವು (Uttar Pradesh Government) ಮಹತ್ವದ ಹೆಜ್ಜೆ ಇರಿಸಿದೆ. ಲವ್‌ ಜಿಹಾದ್‌ನಲ್ಲಿ (Love Jihad) ತೊಡಗುವವರಿಗೆ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸುವ ಉತ್ತರ ಪ್ರದೇಶ ಕಾನೂನು ಬಾಹಿರ ಧಾರ್ಮಿಕ ಮತಾಂತರ (ತಿದ್ದುಪಡಿ) ವಿಧೇಯಕಕ್ಕೆ ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ. ರಾಜ್ಯಪಾಲರ ಅಂಕಿತ ಸಿಕ್ಕರೆ ವಿಧೇಯಕವು ಕಾಯ್ದೆಯಾಗಿ ಜಾರಿಗೆ ಬರಲಿದೆ. ಕಾಯ್ದೆ ಜಾರಿಯಾದರೆ, ಲವ್‌ ಜಿಹಾದ್‌ನಲ್ಲಿ ತೊಡಗಿಸಿಕೊಂಡವರಿಗೆ ಗರಿಷ್ಠ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ.

ಉತ್ತರ ಪ್ರದೇಶದ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ 2021ರಲ್ಲಿ ಬಲವಂತದ ಮತಾಂತರಕ್ಕೆ 1ರಿಂದ 10 ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶವಿತ್ತು. ಹೊಸ ಮಸೂದೆಯಡಿ ಮೋಸ ಅಥವಾ ಸುಳ್ಳಿನ ಮೂಲಕ ನಡೆಸುವ ಮತಾಂತರಗಳನ್ನು ಸಹ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುತ್ತದೆ. ಸ್ವಯಂಪ್ರೇರಿತ ಮತಾಂತರಕ್ಕಾಗಿ ವ್ಯಕ್ತಿಗಳು ಎರಡು ತಿಂಗಳ ಮುಂಚಿತವಾಗಿ ಮ್ಯಾಜಿಸ್ಟ್ರೇಟ್‌ಗೆ ತಿಳಿಸಬೇಕು. ಇಲ್ಲದಿದ್ದರೆ 6 ತಿಂಗಳಿನಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ 10,000 ರೂ. ವಿಧಿಸಲಾಗುತ್ತದೆ ಎಂದು ಮಸೂದೆ ವಿವರಿಸುತ್ತದೆ.

ಈ ಮಸೂದೆಯು ಪ್ರಕಾರ ಬಲವಂತದ ಅಥವಾ ಮೋಸದ ಮತಾಂತರಕ್ಕೆ 1ರಿಂದ 5 ವರ್ಷಗಳ ಜೈಲು ಶಿಕ್ಷೆ ಮತ್ತು 15,000 ರೂ. ದಂಡ ವಿಧಿಸಲು ಪ್ರಸ್ತಾವಿಸುತ್ತದೆ. ಅಪ್ರಾಪ್ತ ವಯಸ್ಕರು, ಮಹಿಳೆಯರು ಅಥವಾ ಎಸ್‌ಸಿ-ಎಸ್‌ಟಿ ಸಮುದಾಯದ ಸದಸ್ಯರನ್ನು ಮತಾಂತರ ಮಾಡಿದರೆ ಶಿಕ್ಷೆಯ ಪ್ರಮಾಣ ಹೆಚ್ಚಲಿದೆ. ಅಂತಹ ಸಂದರ್ಭದಲ್ಲಿ 3ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸುವ ಸಾಧ್ಯತೆ ಇದೆ.

ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವು ಲವ್‌ ಜಿಹಾದ್‌ ವಿರುದ್ಧ ಹಿಂದಿನಿಂದಲೂ ಕಠಿಣ ನಿಲುವು ತಾಳಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಲವ್ ಜಿಹಾದ್ ಅನ್ನು ಪ್ರಮುಖ ವಿಷಯವಾಗಿ ಕೈಗೆತ್ತಿಕೊಂಡಿತ್ತು. ಅಂದಿನಿಂದ ಈ ಸಮಸ್ಯೆಯನ್ನು ಪರಿಹರಿಸಲು ಕಠಿಣ ಕಾನೂನುಗಳನ್ನು ರಚಿಸಲು ಸರ್ಕಾರ ಬದ್ಧವಾಗಿದೆ. ಹೊಸ ಮಸೂದೆಯು ಸಂತ್ರಸ್ತರ ವೈದ್ಯಕೀಯ ವೆಚ್ಚಗಳನ್ನು ಸರಿದೂಗಿಸಲು ಹಣಕಾಸಿನ ನೆರವು ನೀಡುವ ನಿಬಂಧನೆಗಳನ್ನೂ ಒಳಗೊಂಡಿದೆ.

ಇದಲ್ಲದೆ ಈ ಮಸೂದೆಯು ಲವ್ ಜಿಹಾದ್ ಪ್ರಕರಣಗಳನ್ನು ಯಾರು ವರದಿ ಮಾಡಬಹುದು ಎಂಬ ವ್ಯಾಪ್ತಿಯನ್ನೂ ವಿವರಿಸುತ್ತದೆ. ಈ ಹಿಂದೆ ಸಂತ್ರಸ್ತರು ಅವರ ಪೋಷಕರು ಅಥವಾ ಒಡಹುಟ್ಟಿದವರು ಮಾತ್ರ ದೂರುಗಳನ್ನು ಸಲ್ಲಿಸಬಹುದಿತ್ತು. ಹೊಸ ಮಸೂದೆಯಡಿ ಯಾರು ಬೇಕಾದರೂ ಪೊಲೀಸರಿಗೆ ಲಿಖಿತ ದೂರುಗಳನ್ನು ಸಲ್ಲಿಸಬಹುದು. ನಂತರ ಅವರು ತನಿಖೆ ನಡೆಸಲಿದ್ದಾರೆ.

ಇದನ್ನೂ ಓದಿ: ‌Love Jihad: ಲವ್‌ ಜಿಹಾದ್‌ಗೆ ಮತ್ತೊಂದು ಬಲಿ? ಹೋಟೆಲ್ ರೂಮ್ ನಲ್ಲಿ ಹಿಂದೂ ಯುವತಿ ಶವ ಪತ್ತೆ; ಮುಸ್ಲಿಂ ಯುವಕ ಎಸ್ಕೇಪ್‌

Continue Reading

ಕರ್ನಾಟಕ

Martin Movie: ಆ.4ಕ್ಕೆ ಮಾರ್ಟಿನ್ ಚಿತ್ರದ ಟ್ರೈಲರ್‌ 1 ರಿಲೀಸ್‌; ವಿಎಫ್‌ಎಕ್ಸ್‌ ವಂಚನೆ ಬಗ್ಗೆ ನಿರ್ಮಾಪಕ ಹೇಳಿದ್ದೇನು?

Martin Movie: ನಟ ಧ್ರುವ ಸರ್ಜಾ ಅಭಿನಯದ ʼಮಾರ್ಟಿನ್ʼ ಸಿನಿಮಾದ ಟ್ರೈಲರ್‌ 1 ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಆಗಸ್ಟ್ 4ರಂದು ಹಾಗೂ ಮುಂಬೈನಲ್ಲಿ ಆಗಸ್ಟ್ 5ರಂದು ರಿಲೀಸ್ ಆಗಲಿದೆ. ಈ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ.

VISTARANEWS.COM


on

Martin Movie
Koo

ಬೆಂಗಳೂರು: ನಟ ಧ್ರುವ ಸರ್ಜಾ ಅಭಿನಯದ ʼಮಾರ್ಟಿನ್ʼ ಸಿನಿಮಾ (Martin Movie) ಅ.11ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಪಂಚ ಭಾಷೆಗಳಲ್ಲಿ ಬೆಳ್ಳಿ ತೆರೆಗೆ ಅಪ್ಪಳಿಸಲು ಸಿದ್ಧವಾಗಿರುವ ಎ.ಪಿ.ಅರ್ಜುನ್‌ ನಿರ್ದೇಶನದ ಈ ಚಿತ್ರದ ಟ್ರೈಲರ್‌ 1 ರಿಲೀಸ್ ಮಾಡಲು ನಿಗದಿ ಮಾಡಿದೆ. ಮುಂಬೈ ಮತ್ತು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಟ್ರೈಲರ್‌ 1 ರಿಲೀಸ್‌ ಮಾಡಲು ಚಿತ್ರತಂಡ ಪ್ಲ್ಯಾನ್‌ ಮಾಡಿದೆ.

ಆಗಸ್ಟ್ 4ರಂದು ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಹಾಗೂ ಆಗಸ್ಟ್ 5ರಂದು ಮುಂಬೈನಲ್ಲಿ ಟ್ರೈಲರ್‌ 1 ರಿಲೀಸ್ ಆಗಲಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಉದಯ್ ಮೆಹ್ತಾ ಮಾಹಿತಿ ನೀಡಿದ್ದಾರೆ. ಈ ವೇಳೆ ಧ್ರುವ ಸರ್ಜಾ, ಎ.ಪಿ. ಅರ್ಜುನ್ ಉಪಸ್ಥಿತರಿದ್ದರು.

ಮೊದಲು ಕನ್ನಡಿಗರಿಗೆ ಟ್ರೇಲರ್ ತೋರಿಸುತ್ತೇವೆ ಎಂದ ಧ್ರುವ ಸರ್ಜಾ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಧ್ರುವ ಸರ್ಜಾ ಅವರು, ಆಗಸ್ಟ್‌ 4ರಂದು ಮೊದಲು ನಮ್ಮ ಕನ್ನಡಿಗರಿಗೆ ಮಾರ್ಟಿನ್‌ ಚಿತ್ರದ ಟ್ರೈಲರ್‌ 1 ತೋರಿಸುತ್ತೇವೆ. ಆ.5ರಂದು ಮುಂಬೈನಲ್ಲಿ ಟ್ರೇಲರ್ ರಿಲೀಸ್ ಆಗಲಿದೆ. ಕಾರ್ಯಕ್ರಮಕ್ಕೆ 28 ದೇಶಗಳಿಂದ ಮಾಧ್ಯಮದವರು ಬರುತ್ತಿದ್ದಾರೆ. ಅದರ ಜತೆ ಭಾರತದ ವಿವಿಧೆಡೆಯಿಂದ ರಿಪೋರ್ಟರ್ಸ್ ಬರುತ್ತಾರೆ ಎಂದು ತಿಳಿಸಿದರು.

ಆಗಸ್ಟ್ 2ರಿಂದ ಬುಕ್ ಮೈ ಶೋನಲ್ಲಿ ಟ್ರೇಲರ್ ರಿಲೀಸ್‌ ಟಿಕೆಟ್‌ ಬುಕ್ ಮಾಡಬಹುದು. ಆಗಸ್ಟ್ 4ರಂದು ಮಧ್ಯಾಹ್ನ 1 ಗಂಟೆಗೆ ಟ್ರೇಲರ್ ರಿಲೀಸ್ ಆಗಲಿದೆ ಎಂದು ಹೇಳಿದರು.

ನಿರ್ದೇಶಕನ ವಿರುದ್ಧ ದೂರು ನೀಡಿಲ್ಲ: ನಿರ್ಮಾಪಕ ಉದಯ್ ಮೆಹ್ತಾ

ಮಾರ್ಟಿನ್‌ ಚಿತ್ರದ ವಿಎಫ್‌ಎಕ್ಸ್‌ಗಾಗಿ ನಿರ್ದೇಶಕ ಎ.ಪಿ. ಅರ್ಜುನ್‌ 50 ಲಕ್ಷ ರೂ. ಕಮಿಷನ್‌ ಪಡೆದಿದ್ದಾರೆ ಎಂಬ ಆರೋಪದ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಪ್ರತಿಕ್ರಿಯಿಸಿ, ಪ್ರಕರಣದಲ್ಲಿ ಆರೋಪಿಗಳ ಬಂಧನವಾಗಿರುವ ವಿಷಯ ಎಲ್ಲರಿಗೂ ಗೊತ್ತಿದೆ. ನಾನು ನೆನ್ನೆ ಭಾರತಕ್ಕೆ ಬಂದೆ, ಈ ಬಗ್ಗೆ ಕೂಲಂಕಷವಾಗಿ ಚರ್ಚೆ ಮಾಡುತ್ತೇನೆ. ನಮ್ಮ ಟೀಮ್‌ನ ಯಾವ ಸದಸ್ಯನ ಮೇಲೂ ಕಂಪ್ಲೇಂಟ್ ಕೊಟ್ಟಿಲ್ಲ. ನಾನು ಕಂಪ್ಲೇಂಟ್ ಕೊಟ್ಟಿರುವುದು ಸತ್ಯ ರೆಡ್ಡಿ ಎಂಬುವವರ ಡಿಜಿಟಲ್ ಕಂಪನಿ ವಿರುದ್ಧ ಎಂದು ತಿಳಿಸಿದರು.

15 ವರ್ಷಗಳಿಂದ ನಾನು ಸಿನಿಮಾ ರಂಗದಲ್ಲಿದೇನೆ. ಇದುವರೆಗೂ ನಾನು ಯಾವುದೇ ವಿವಾದ ಮಾಡಿಲ್ಲ. ನಾನು ಫ್ಯಾಷನೇಟ್ ಪ್ರೊಡ್ಯೂಸರ್, ನನಗೆ ಈ ರೀತಿ ಮೋಸವಾಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಇಲ್ಲಿ ಅನುಭವ ಲೆಕ್ಕಕ್ಕೆ ಬರೋಲ್ಲ, ಸಡನ್ ಅಪಘಾತವಾದಾಗ ಏನೂ ಮಾಡಲು ಆಗುವುದಿಲ್ಲ ಎಂದು ತಿಳಿಸಿದರು.

ಕಮಿಷನ್‌ ಪಡೆದಿರುವುದು ಸಾಬೀತಾದ್ರೆ 1 ಕೋಟಿ ಕೊಡ್ತೇನೆ: ನಿರ್ದೇಶಕ ಎ.ಪಿ.ಅರ್ಜುನ್

50 ಲಕ್ಷ ಕಮಿಷನ್‌ ಆರೋಪ ಬಗ್ಗೆ ನಿರ್ದೇಶಕ ಪ್ರತಿಕ್ರಿಯಿಸಿ, ಸುದ್ದಿ ಮಾಡುವವರು ಆಧಾರಗಳನ್ನು ಇಟ್ಟುಕೊಟ್ಟು ಪ್ರಸಾರ ಮಾಡಬೇಕು. ನಾನು ಕೇವಲ 5000 ರೂ. ಕಮಿಷನ್‌ ಪಡೆದಿರುವುದು ಸಾಬೀತಾದರೂ ನಿಮಗೆ 1 ಕೋಟಿ ರೂ. ಕೊಡುತ್ತೇನೆ. ಈ ರೀತಿ ಸುಳ್ಳು ಆರೋಪಗಳಿಂದ ನಮ್ಮ ಕುಟುಂಬಸ್ಥರು ಗಾಬರಿಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Actor Shahrukh Khan: ಅಮೆರಿಕದಲ್ಲಿ ಶಾರುಖ್ ಖಾನ್‌ಗೆ ಶಸ್ತ್ರಚಿಕಿತ್ಸೆ; ಬಾಲಿವುಡ್‌ ಬಾದ್‌ಶಾಗೆ ಕಾಡುತ್ತಿರುವ ಸಮಸ್ಯೆ ಏನು?

‘ಮಾರ್ಟಿನ್’ ಚಿತ್ರದ ವಿಎಫ್‌ಎಕ್ಸ್‌ ವರ್ಕ್‌ ಜವಾಬ್ದಾರಿಯನ್ನು ಡಿಜಿಟಲ್‌ ಟೆರೇನ್ ಕಂಪನಿಗೆ ನೀಡಲಾಗಿತ್ತು. ಇದಕ್ಕಾಗಿ ನಿರ್ಮಾಪಕ ಉದಯ್‌ ಕೊಟ್ಟಿದ್ದ 2.5 ಕೋಟಿ ರೂ.ಗಳಲ್ಲಿ 50 ಲಕ್ಷ ರೂ.ಗಳನ್ನು ನಿರ್ದೇಶಕ ಎ.ಪಿ.ಅರ್ಜುನ್ ಕಮಿಷನ್‌ ಆಗಿ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ನಿರ್ದೇಶಕ ಎ.ಪಿ.ಅರ್ಜುನ್ ಹಾಗೂ ನಿರ್ಮಾಪಕ ಉದಯ್‌ ಮೆಹ್ತಾ ಸ್ಪಷ್ಟನೆ ನೀಡಿದ್ದಾರೆ.

ಮಾರ್ಟಿನ್ ಚಿತ್ರಕ್ಕೆ ಮಣಿ ಶರ್ಮಾ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಮಾರ್ಟಿನ್‌ ಸಿನಿಮಾದಲ್ಲಿ ಕನ್ನಡದ ಕಲಾವಿದರ ಜತೆಗೆ ಹಿಂದಿ, ತೆಲುಗು, ತಮಿಳು ಚಿತ್ರರಂಗದ ಕಲಾವಿದರು ನಟಿಸಿದ್ದಾರೆ. ಅಚ್ಯುತ್‌ ಕುಮಾರ್‌, ನಿಕಿತನ್‌ ಧೀರ್‌, ನವಾಬ್‌ ಶಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಧೀರನ್‌ ಅಧಿಕಾರಂ ಒಂಡ್ರು’ತಮಿಳು ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ ರೋಹಿತ್‌ ಪಾಠಕ್‌ ಸಹ ‘ಮಾರ್ಟಿನ್‌’ನಲ್ಲಿ ಬಹು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Continue Reading
Advertisement
Aryan Khan
ಸಿನಿಮಾ3 mins ago

Aryan Khan: ದಿಲ್ಲಿಯ ಸಣ್ಣ ಮನೆಯಲ್ಲಿದ್ದ ಶಾರುಖ್‌ ದಂಪತಿ; ಅಲ್ಲಿನ ಬಂಗಲೆಯನ್ನು 37 ಕೋಟಿ ರೂ.ಗೆ ಖರೀದಿಸಿದ ಪುತ್ರ!

IND vs SL
ಪ್ರಮುಖ ಸುದ್ದಿ7 mins ago

IND vs SL : ಭಾರತ ವಿರುದ್ಧದ ಏಕ ದಿನ ಸರಣಿಗೆ ಶ್ರೀಲಂಕಾ ತಂಡ ಪ್ರಕಟ; ಹೊಸ ನಾಯಕನ ಘೋಷಣೆ

ಪ್ರಮುಖ ಸುದ್ದಿ11 mins ago

Wayanad Landslide: ಕೇರಳದಲ್ಲಿ ರಕ್ಷಣೆ, ಪರಿಹಾರ ಕಾರ್ಯಾಚರಣೆಗೆ ಇಬ್ಬರು IAS ಅಧಿಕಾರಿಗಳನ್ನು ನಿಯೋಜಿಸಿದ ಸಿಎಂ ಸಿದ್ದರಾಮಯ್ಯ

Star Saree Styling Tips
ಫ್ಯಾಷನ್11 mins ago

Star Saree Styling Tips: ಎಂಬ್ರಾಯ್ಡರಿ ಸೀರೆಯಲ್ಲಿ ನಟಿ ರಶ್ಮಿಕಾ ಮಂದಣ್ಣರಂತೆ ಕಾಣಿಸಬೇಕೇ? ಈ 5 ಟಿಪ್ಸ್ ಫಾಲೋ ಮಾಡಿ

karnataka Weather Forecast
ಮಳೆ13 mins ago

Karnataka Weather : ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ; ಮಲೆನಾಡಿನ ಶಾಲಾ-ಕಾಲೇಜು ರಜೆ

Love Jihad
ದೇಶ25 mins ago

Love Jihad: ಲವ್‌ ಜಿಹಾದ್‌ ವಿರುದ್ಧ ಯೋಗಿ ದಿಟ್ಟ ಕ್ರಮ; ಇನ್ನು ಜಿಹಾದಿಗಳಿಗೆ ಜೀವಾವಧಿ ಶಿಕ್ಷೆ ಗ್ಯಾರಂಟಿ!

Tata Motors launched two programs Vidyadhana and Utkarsha to facilitate higher education of technician children
ವಾಣಿಜ್ಯ26 mins ago

Tata Motors: ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗಲು ಟಾಟಾ ಮೋಟಾರ್ಸ್‌ನಿಂದ ‘ವಿದ್ಯಾಧನ’, ‘ಉತ್ಕರ್ಷ’ ಯೋಜನೆ

ಕರ್ನಾಟಕ35 mins ago

Wayanad Landslide: ಕೇರಳ ಭೂ ಕುಸಿತ; ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸಲು ಸರ್ಕಾರಕ್ಕೆ ಎಚ್‌ಡಿಕೆ ಸಲಹೆ

Custard Apple Benefits
Latest1 hour ago

Custard Apple Benefits: ಕ್ಯಾನ್ಸರ್‌ ಸೇರಿದಂತೆ ಹಲವು ರೋಗಗಳನ್ನು ತಡೆಯುವ ಶಕ್ತಿ ಸೀತಾಫಲಕ್ಕಿದೆ!

namma Metro
ಬೆಂಗಳೂರು1 hour ago

Namma Metro : ವಿದ್ಯುತ್‌ ಸರಬರಾಜು ವ್ಯವಸ್ಥೆಯಲ್ಲಿ ದೋಷ; ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ವ್ಯತ್ಯಯ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 hours ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ6 hours ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ7 hours ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 day ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ1 day ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ1 day ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ2 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ2 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ2 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ2 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌