ವಿಸ್ತಾರ ಸಂಪಾದಕೀಯ: ಸಿಆರ್‌ಪಿಎಫ್ ಆಯ್ಕೆ ಪರೀಕ್ಷೆ ಕನ್ನಡದಲ್ಲಿ ಏಕಿಲ್ಲ? - Vistara News

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಸಿಆರ್‌ಪಿಎಫ್ ಆಯ್ಕೆ ಪರೀಕ್ಷೆ ಕನ್ನಡದಲ್ಲಿ ಏಕಿಲ್ಲ?

ನಮ್ಮದು ಒಕ್ಕೂಟ ವ್ಯವಸ್ಥೆ. ಎಲ್ಲ ಪ್ರಾದೇಶಿಕ ಭಾಷೆಗಳನ್ನು ಒಟ್ಟಿಗೆ ತೆಗೆದುಕೊಂಡು ಹೋದರೆ ಮಾತ್ರ ಸರ್ವಾಂಗೀಣ ಬೆಳವಣಿಗೆ ಸಾಧ್ಯ. ಪ್ರಾದೇಶಿಕ ಭಾಷೆಯನ್ನೇ ಅವಲಂಬಿಸಿರುವ ಯುವ ಜನ ಕೇವಲ ಭಾಷೆಯ ಕಾರಣಕ್ಕೆ ಉದ್ಯೋಗ ವಂಚಿತರಾಗಬಾರದು.

VISTARANEWS.COM


on

why CRPF selection test is not available in Kannada?
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೇಂದ್ರ ಮೀಸಲು ಪೊಲೀಸ್ ಪಡೆಯ 9212 ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಕರ್ನಾಟಕದ 466 ಹುದ್ದೆಗಳೂ ಸೇರಿವೆ. ಆದರೆ ಈ ಹುದ್ದೆಗಳ ನೇಮಕಕ್ಕೆ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಮಾತ್ರ ಲಿಖಿತ ಪರೀಕ್ಷೆ ನಡೆಸಲಾಗುತ್ತಿದೆ. ರಾಜ್ಯದಲ್ಲಿರುವ ಖಾಲಿ ಹುದ್ದೆಗಳಿಗೂ ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಪರೀಕ್ಷೆ ನಡೆಸುತ್ತಿರುವುದಕ್ಕೆ ಹೆಚ್ಚಿನ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʻʻನಮ್ಮ ರಾಜ್ಯದಲ್ಲಿರುವ ಹುದ್ದೆಗಳಿಗೆ ಹಿಂದಿಯಲ್ಲಿ, ಇಂಗ್ಲಿಷ್‌ನಲ್ಲಿ ಏಕೆ ಪರೀಕ್ಷೆ ನಡೆಸಬೇಕುʼʼ ಎಂದ ಪ್ರಶ್ನಿಸಿದ್ದಾರೆ. ಹಿಂದಿಯ ಬದಲು ಕನ್ನಡದಲ್ಲಿ ಪರೀಕ್ಷೆ ನಡೆಸಿ ಎಂದು ಒತ್ತಾಯಿಸಿದ್ದಾರೆ. ಒಕ್ಕೂಟ ಸರ್ಕಾರ ಈ ಮಾತುಗಳಲ್ಲಿರುವ ಆಕ್ರೋಶ, ಆತಂಕ, ಕಳವಳ ಹಾಗೂ ಬೇಡಿಕೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಮೊದಲಿಗೆ, ಈ ಹುದ್ದೆಗಳ ವಿದ್ಯಾರ್ಹತೆ ಏನು ಎಂಬುದನ್ನು ಗಮನಿಸಬೇಕು. ಬಹುತೇಕ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಕೆಲವು ಹುದ್ದೆಗಳಿಗೆ ಮಾತ್ರ ದ್ವಿತೀಯ ಪಿಯುಸಿ ವಿದ್ಯಾರ್ಹತೆ. ಇವರಿಗೆ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ನಡೆಸುವ ಪರೀಕ್ಷೆ ಎದುರಿಸುವುದು ಕಷ್ಟ. ಇದರಿಂದ ಯಾರಿಗೆ ಲಾಭವೆಂದರೆ, ಹಿಂದಿಯಲ್ಲಿ ಪರೀಕ್ಷೆ ಬರೆಯಬಲ್ಲ ಉತ್ತರ ಭಾರತೀಯರಿಗೆ ಮಾತ್ರ. ಇನ್ನು ಇಂಗ್ಲಿಷ್‌ ಚೆನ್ನಾಗಿ ಬಲ್ಲವರು ಸಿಆರ್‌ಪಿಎಫ್‌ ಪರೀಕ್ಷೆಗಳಿಗೆ ಬರೆಯುತ್ತಾರೆ ಎಂದು ಭಾವಿಸುವಂತಿಲ್ಲ. ಸಾಮಾನ್ಯವಾಗಿ ಸಮಾಜದ ತಳಮಟ್ಟದಿಂದ ಬಂದವರು, ಕಡಿಮೆ ವಿದ್ಯಾರ್ಹತೆ ಹೊಂದಿದವರು, ದೈಹಿಕ ಪರಿಶ್ರಮದ ದುಡಿಮೆಯತ್ತ ಗಮನ ನೆಟ್ಟವರು ಈ ಹುದ್ದೆ ಬಯಸುತ್ತಾರೆ. ಇವರಲ್ಲಿ ಹೆಚ್ಚಿನವರಿಗೆ ಸ್ಥಳೀಯ ಭಾಷೆ, ಮಾತೃಭಾಷೆಗಳೇ ಅನ್ನ ಕೊಡುವ ಸಂಗಾತಿಗಳು. ಹೀಗಿರುವಾಗ ಕನ್ನಡಿಗರು ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ಬರೆಯಲಿ ಎಂದರೆ ಹೇಗೆ?

ಈ ನಿಯಮದಿಂದಾಗಿ ಹಿಂದಿ ಭಾಷೆ ಬಲ್ಲ ಉತ್ತರ ಭಾರತದ ಯುವ ಜನ ಸರಾಗವಾಗಿ ಪರೀಕ್ಷೆ ಬರೆಯುತ್ತಾರೆ‌. ಆದರೆ ದಕ್ಷಿಣ ಭಾರತದ ಯುವಜನ ಅನಿವಾರ್ಯವಾಗಿ ಇಂಗ್ಲಿಷ್‌ನಲ್ಲೇ ಪರೀಕ್ಷೆ ಬರೆಯಬೇಕಾಗುತ್ತದೆ. ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳ ಯುವ ಜನರಿಗೆ ಈ ಉದ್ಯೋಗ ಗಿಟ್ಟಿಸುವಲ್ಲಿ ಹಿನ್ನಡೆ ಆಗುವಂತಾಗಿದೆ. ಸಿಆರ್‌ಪಿಎಫ್‌ನಂಥ ಹುದ್ದೆಗಳಿಗೆ ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡುವುದು ಅಗತ್ಯ. ಈ ಕೇಂದ್ರ ಮೀಸಲು ಪೊಲೀಸ್‌ ಪಡೆಗೆ ಸೇರಿದವರು ದೇಶದ ಎಲ್ಲೇ ನೇಮಕಾತಿಯಾದರೂ ಅಲ್ಲಿಗೆ ತೆರಳಬೇಕು ಎಂಬುದು ನಿಜ; ಆದರೆ ದಿನಚರಿಯ ಭಾಷೆ ಬೇರೆ, ಪರೀಕ್ಷೆ ಬರೆಯಬೇಕಾದ ಭಾಷೆ ಬೇರೆ. ಈ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ಏನೇ ಇರಲಿ, ಕೇಂದ್ರ ಮಟ್ಟದ ಪರೀಕ್ಷೆಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಅವಕಾಶ ಅಗತ್ಯ.

ಇಂಥ ಅನ್ಯಾಯ ಕನ್ನಡಿಗರಿಗೂ ಇತರ ದಕ್ಷಿಣ ಭಾರತೀಯ ಭಾಷಿಕರಿಗೂ ಹಲವೆಡೆಗಳಲ್ಲಿ ಆಗುತ್ತಲೇ ಇದೆ. 2011ಕ್ಕಿಂತ ಮೊದಲು ರೈಲ್ವೆ ನೇಮಕಾತಿ ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ನಡೆಯುತ್ತಿದ್ದವು. ಆಗ ರೈಲ್ವೆ ಇಲಾಖೆಯಲ್ಲಿ ಹಿಂದಿ ಭಾಷಿಕರೇ ತುಂಬಿ ತುಳುಕುತ್ತಿದ್ದರ. ಇತ್ತೀಚೆಗೆ ಭಾರಿ ಹೋರಾಟದ ಬಳಿಕ ಕನ್ನಡದಲ್ಲೂ ರೈಲ್ವೆ ನೇಮಕಾತಿ ಪರೀಕ್ಷೆ ಲಭ್ಯವಾಗುವಂತಾಗಿದೆ. ಆದರೆ ಬ್ಯಾಂಕಿಂಗ್‌ ಪರೀಕ್ಷೆಗಳು, ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌, ಸಿಆರ್‌ಪಿಎಫ್‌, ಎಲ್‌ಐಸಿ, ಸೇನಾ ನೇಮಕಾತಿ ಮುಂತಾದ ಕೇಂದ್ರ ಇಲಾಖೆಗಳು ನಡೆಸುವ ಪರೀಕ್ಷೆಗಳು ಕನ್ನಡದಲ್ಲಿ ಲಭ್ಯವಿಲ್ಲ. ಪರಿಣಾಮವಾಗಿ ಕರ್ನಾಟಕದ ಬ್ಯಾಂಕ್‌ಗಳಲ್ಲಿ ಉತ್ತರ ಭಾರತೀಯರೇ ತುಂಬಿ ಹೋಗಿದ್ದಾರೆ. ಕನ್ನಡಿಗರ ಪಾಲಿನ ಹುದ್ದೆಗಳನ್ನು ಇತರರು ದೋಚುತ್ತಿದ್ದಾರೆ. ವರ್ಷಕ್ಕೆ ಒಂದು ಲಕ್ಷಕ್ಕೂ ಅಧಿಕ ಹುದ್ದೆಗಳನ್ನು ನೀಡುವ ಬ್ಯಾಂಕಿಂಗ್‌ ವಲಯದಲ್ಲಿ ಕನ್ನಡಿಗರ ನೇಮಕ ಕೆಲವು ನೂರುಗಳನ್ನು ದಾಟುವುದಿಲ್ಲ. ಇನ್ನು ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಬರೆಯಬಹುದು ಎಂಬ ಅವಕಾಶ ನೀಡಲಾಗಿದೆ; ಆದರೆ ಇಲ್ಲೂ ಪೂರ್ವಭಾವಿ ಪರೀಕ್ಷೆಗಳನ್ನು ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿಯೇ ಬರೆಯಬೇಕು. ಈ ಅನ್ಯಾಯಕ್ಕೆ ಕೊನೆಯೇ ಇರುವಂತೆ ಕಾಣುವುದಿಲ್ಲ.

ಇದನ್ನೂ ಓದಿ: CRPF Recruitment 2023 : ಸಿಆರ್‌ಪಿಎಫ್‌ನಲ್ಲಿ ನಡೆಯಲಿದೆ ಭರ್ಜರಿ ನೇಮಕ; 1.30 ಲಕ್ಷ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅಧಿಸೂಚನೆ

ನಮ್ಮದು ಒಕ್ಕೂಟ ವ್ಯವಸ್ಥೆ. ಎಲ್ಲ ಪ್ರಾದೇಶಿಕ ಭಾಷೆಗಳನ್ನು ಒಟ್ಟಿಗೇ ತೆಗೆದುಕೊಂಡು ಹೋದರೆ ಮಾತ್ರ ಸರ್ವಾಂಗೀಣ ಬೆಳವಣಿಗೆ ಸಾಧ್ಯ. ಒಂದು ಕಡೆಯ ಭಾಷೆ ಇನ್ನೊಂದೆಡೆ ಹೇರಿಕೆಯಾದಾಗ ಅಲ್ಲಿ ಆಕ್ರೋಶ ಭುಗಿಲೇಳುತ್ತದೆ. ಇದನ್ನು ತಮಿಳುನಾಡಿನಲ್ಲಿ ನಡೆದ ಹಿಂದಿ ವಿರೋಧಿ ಚಳವಳಿಯಲ್ಲಿ ಗಮನಿಸಬಹುದು. ಇತ್ತೀಚೆಗೆ ಕರ್ನಾಟಕದಲ್ಲೂ ಹಿಂದಿ ಹೇರಿಕೆಯ ವಿರುದ್ಧ ಕೂಗು ಜೋರಾಗುತ್ತಿದೆ. ಇದು ದಾವಾನಲವಾಗುವ ಮುನ್ನ ಒಕ್ಕೂಟ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಪ್ರಧಾನಿ ಮೋದಿ ಅವರು ಆಗಾಗ ಪ್ರಾದೇಶಿಕ ಭಾಷೆಗಳ ಸ್ಥಾನಮಾನ, ಅದರ ಮಹತ್ವದ ಬಗ್ಗೆ ಒತ್ತಿ ಹೇಳುತ್ತಾರೆ. ಆದರೆ ಇದು ಬರಿಯ ಹೇಳಿಕೆಯಾಗಿ ಉಳಿಯಬಾರದು. ವಾಸ್ತವಿಕವಾಗಿ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ಸಿಗಬೇಕು. ಪ್ರಾದೇಶಿಕ ಭಾಷೆಯನ್ನೇ ಅವಲಂಬಿಸಿರುವ ಯುವ ಜನ ಕೇವಲ ಭಾಷೆಯ ಕಾರಣಕ್ಕೆ ಉದ್ಯೋಗ ವಂಚಿತರಾಗಬಾರದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿಜ್ಞಾನ

Zero Shadow Day: ನಾಳೆ ಬೆಂಗಳೂರಿನಲ್ಲಿ ನೆರಳೇ ಮೂಡುವುದಿಲ್ಲ; ಅದ್ಯಾಕೆ? ಏನಿದು ʼಶೂನ್ಯ ನೆರಳಿನ ದಿನʼ ?

Zero Shadow Day: ಎಲ್ಲರೂ ನಮ್ಮನ್ನು ತೊರೆದರೂ ನೆರಳು ಯಾವತ್ತೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎನ್ನುವ ಮಾತಿದೆ. ಆದರೆ ಈ ಮಾತು ನಾಳೆ ಕೆಲವು ನಿಮಿಷಗಳ ಮಟ್ಟಿಗೆ ಬೆಂಗಳೂರಿಗರ ಪಾಲಿಗೆ ಸುಳ್ಳಾಗಲಿದೆ. ಅಂದರೆ ಮಧ್ಯಾಹ್ನ ನೆರಳೇ ಮೂಡುವುದಿಲ್ಲ. ಇದನ್ನು ʼಶೂನ್ಯ ನೆರಳಿನ ದಿನʼ ಎನ್ನುತ್ತಾರೆ. ಇದು ಯಾಕೆ ಸಂಭವಿಸುತ್ತದೆ? ಏನಿದರ ವೈಶಿಷ್ಟ್ಯ? ಮುಂತಾದ ವಿವರ ಇಲ್ಲಿದೆ.

VISTARANEWS.COM


on

Zero Shadow Day
Koo

ಬೆಂಗಳೂರು: ನಾಳೆ (ಏಪ್ರಿಲ್‌ 24) ಬೆಂಗಳೂರಿಗರು ವಿಶಿಷ್ಟ ವಿದ್ಯಾಮಾನವೊಂದಕ್ಕೆ ಸಾಕ್ಷಿಯಾಗಲಿದ್ದಾರೆ. ಪ್ರತಿ ಕ್ಷಣವೂ ನಿಮ್ಮೊಂದಿಗೆ ಇರುವ ನೆರಳು ಕೆಲ ಹೊತ್ತು ನಿಮ್ಮನ್ನು ಬಿಟ್ಟು ದೂರ ಹೋಗಲಿದೆ. ಅಂದರೆ ಯಾವುದೇ ಲಂಬ ವಸ್ತುವೂ ನೆರಳನ್ನು ಹೊಂದಿರುವುದಿಲ್ಲ! ಇದನ್ನೇ ʼಶೂನ್ಯ ನೆರಳಿನ ದಿನʼ (Zero Shadow Day) ಎಂದು ಕರೆಯುತ್ತಾರೆ. ಇದು ಹೇಗೆ ರೂಪುಗೊಳ್ಳುತ್ತದೆ? ಏನಿದರ ವೈಶಿಷ್ಟ್ಯ ? ಮುಂತಾದ ನಿಮ್ಮ ಕುತೂಹಲಗಳಿಗೆ ಇಲ್ಲಿದೆ ಉತ್ತರ.

ಮಧ್ಯಾಹ್ನ 12.17ರಿಂದ 12.23ರ ನಡುವೆ ಈ ವಿದ್ಯಾಮಾನ ಸಂಭವಿಸಲಿದ್ದು, ಈ ವೇಳೆ ಸೂರ್ಯನ ಸ್ಥಾನವು ನಿಖರವಾಗಿ ಉತ್ತುಂಗದಲ್ಲಿರುತ್ತದೆ. ಹೀಗಾಗಿ ಎಲ್ಲ ವಸ್ತುಗಳ ನೆರಳು ಕಣ್ಮರೆಯಾಗುತ್ತದೆ. ಬೆಂಗಳೂರಿನ ಕೋರಮಂಗಲದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಈ ಸಂದರ್ಭಕ್ಕಾಗಿ ತನ್ನ ಕ್ಯಾಂಪಸ್‌ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಏನಿದು ʼಶೂನ್ಯ ನೆರಳಿನ ದಿನʼ ?

ಸೂರ್ಯನು ಮಧ್ಯಾಹ್ನ ನಡು ನೆತ್ತಿಯ ಮೇಲಿರುವಾಗ ಲಂಬವಾಗಿರುವ ವಸ್ತುವಿಗೆ ಸ್ವಲ್ಪ ಮಾತ್ರವಾದರೂ ನೆರಳು ಇದ್ದೇ ಇರುತ್ತದೆ. ಆದರೆ ನಾಳೆ ಅಂಥ ಯಾವುದೇ ನೆರಳು ಇರುವುದಿಲ್ಲ. ಉಷ್ಣವಲಯದ ಸ್ಥಳಗಳಲ್ಲಿ (ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಯ ನಡುವೆ) ವರ್ಷಕ್ಕೆ ಎರಡು ಬಾರಿ ಶೂನ್ಯ ನೆರಳು ದಿನ ಸಂಭವಿಸುತ್ತದೆ.

ಸೂರ್ಯನ ಸುತ್ತ ಭೂಮಿಯ ಪರಿಭ್ರಮಣೆಯ ಅಕ್ಷವು ತನ್ನ ಸಮತಲದಿಂದ 23.5 ಡಿಗ್ರಿಗಳಷ್ಟು ಬಾಗಿದೆ. ಇದರಿಂದ ವಿವಿಧ ಋತುಗಳು ಸಂಭವಿಸುತ್ತವೆ. ಇದರಿಂದಾಗಿ ಸೂರ್ಯನು ದಿನದ ಅತ್ಯುನ್ನತ ಬಿಂದುವಿನಲ್ಲಿರುವಾಗ, ಉತ್ತರಾಯಣದಲ್ಲಿ ಆಕಾಶ ಸಮಭಾಜಕದ ದಕ್ಷಿಣದ 23.5 ಡಿಗ್ರಿಗಳಿಂದ ಸಮಭಾಜಕದ ಉತ್ತರಕ್ಕೆ 23.5 ಡಿಗ್ರಿಗಳಿಗೆ ಚಲಿಸುತ್ತಾನೆ ಮತ್ತು ದಕ್ಷಿಣಾಯನದಲ್ಲಿ ಇದರ ವಿರುದ್ಧಕ್ಕೆ ಚಲಿಸುತ್ತಾನೆ. ಈ ಪರಿಭ್ರಮಣ ಚಲನೆಯಿಂದಾಗಿ, ಒಂದು ಶೂನ್ಯ ನೆರಳು ದಿನವು ಉತ್ತರಾಯಣದಲ್ಲಿ (ಸೂರ್ಯ ಉತ್ತರದ ಕಡೆಗೆ ಚಲಿಸುವಾಗ) ಬರುತ್ತದೆ ಮತ್ತು ಇನ್ನೊಂದು ದಕ್ಷಿಣಾಯನದಲ್ಲಿ (ಸೂರ್ಯನು ದಕ್ಷಿಣಕ್ಕೆ ಚಲಿಸುವಾಗ) ಬರುತ್ತದೆ. 23.5 ಡಿಗ್ರಿ ಉತ್ತರ ಮತ್ತು 23.5 ಡಿಗ್ರಿ ದಕ್ಷಿಣ ಅಕ್ಷಾಂಶಗಳ ನಡುವೆ ವಾಸಿಸುವ ಜನರಿಗೆ, ಸೂರ್ಯನ ಅವನತಿಯು ಅವರ ಅಕ್ಷಾಂಶಕ್ಕೆ ಎರಡು ಬಾರಿ ಸಮನಾಗಿರುತ್ತದೆ.

ಮಹತ್ವ

ಇದು ಸೂರ್ಯನ ನಿಖರವಾದ ಸ್ಥಾನವನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ಜತೆಗೆ ವಿಜ್ಞಾನಿ ಮತ್ತು ಖಗೋಳಶಾಸ್ತ್ರಜ್ಞರಿಗೆ ಸೂರ್ಯನ ಬೆಳಕಿನ ನಡವಳಿಕೆ ಮತ್ತು ಭೂಮಿಯ ವಾತಾವರಣದ ಮೇಲೆ ಅದು ಬೀರುವ ಪರಿಣಾಮಗಳ ಬಗ್ಗೆ ಸಂಶೋಧನೆ ನಡೆಸಲು ಅವಕಾಶವನ್ನು ಕಲ್ಪಿಸುತ್ತದೆ. ಸಾಮಾನ್ಯವಾಗಿ ಶೂನ್ಯ ನೆರಳು ಸುಮಾರು ಒಂದೂವರೆ ನಿಮಿಷ ಕಾಲ ಅನುಭವಕ್ಕೆ ಬರುತ್ತದೆ.

ಎಲ್ಲೆಲ್ಲಿ , ಯಾವಾಗ?

ಶೂನ್ಯ ನೆರಳಿನ ದಿನ ದೇಶದ ವಿವಿಧ ನಗರಗಳಲ್ಲಿ ವರ್ಷದಲ್ಲಿ ಎರಡು ಬಾರು ಅನುಭವಕ್ಕೆ ಬರುತ್ತದೆ. ಅದು ಯಾವಾಗ ಎನ್ನುವ ವಿವರ ಇಲ್ಲಿದೆ.

  • ಕನ್ಯಾಕುಮಾರಿ: ಏಪ್ರಿಲ್ 10 ಮತ್ತು ಸೆಪ್ಟೆಂಬರ್ 1 (ಮಧ್ಯಾಹ್ನ: 12.21, 12.22)
  • ಬೆಂಗಳೂರು: ಏಪ್ರಿಲ್ 24 ಮತ್ತು ಆಗಸ್ಟ್ 18 (ಮಧ್ಯಾಹ್ನ: 12.17, 12.25)
  • ಹೈದರಾಬಾದ್: ಮೇ 9 ಮತ್ತು ಆಗಸ್ಟ್ 5 (ಮಧ್ಯಾಹ್ನ: 12.12, 12.19)
  • ಮುಂಬೈ: ಮೇ 15 ಮತ್ತು ಜೂನ್ 27 (ಮಧ್ಯಾಹ್ನ: 12.34, 12.45)
  • ಭೋಪಾಲ್: ಜೂನ್ 13 ಮತ್ತು ಜೂನ್ 28 (ಮಧ್ಯಾಹ್ನ: 12.20, 12.23)

ಇದನ್ನೂ ಓದಿ: Chandrayaan-3 mission: ಇಸ್ರೋದ ಚಂದ್ರಯಾನ-3 ಟೀಮ್‌ಗೆ ಅಮೆರಿಕದ ಪ್ರಶಸ್ತಿ: ʼಸ್ಫೂರ್ತಿʼ ಎಂದ ಸ್ಪೇಸ್‌ ಫೌಂಡೇಶನ್

Continue Reading

ಕ್ರೀಡೆ

Mohammad Rizwan : ಪಾಕ್​ ಬ್ಯಾಟರ್​ನನ್ನು ಬ್ರಾಡ್ಮನ್ ಎಂದು ಹೊಗಳಿದ ನಾಯಕ; ಗೊಳ್ಳೆಂದು ನಗುತ್ತಿರುವ ನೆಟ್ಟಿಗರು!

Mohammad Rizwan: ಮೊಹಮ್ಮದ್ ರಿಜ್ವಾನ್, ಟಿ20 ಐನಲ್ಲಿ ವೇಗವಾಗಿ 3000 ರನ್ ಗಳಿಸಿದ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಾದಿಯಲ್ಲಿ ಅವರು ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ರಿಜ್ವಾನ್ 2 92 ನೇ ಟಿ 20 ಅಂತರರಾಷ್ಟ್ರೀಯ ಪಂದ್ಯ ಮತ್ತು 79 ನೇ ಇನ್ನಿಂಗ್ಸ್​ನಲ್ಲಿ ಈ ವೈಯಕ್ತಿಕ ಮೈಲಿಗಲ್ಲನ್ನು ತಲುಪಿದ್ದಾರೆ. 81 ಇನ್ನಿಂಗ್ಸ್​​ಗಳಲ್ಲಿ 3000 ಟಿ 20 ರನ್ ಗಳಿಸಿದ ವೈಟ್-ಬಾಲ್ ನಾಯಕ ಬಾಬರ್ ಅಜಮ್ ಅವರನ್ನೂ 31 ವರ್ಷದ ಆಟಗಾರ ಹಿಂದಿಕ್ಕಿದ್ದಾರೆ.

VISTARANEWS.COM


on

Mohammad Rizwan
Koo

ಬೆಂಗಳೂರು: ಪಾಕಿಸ್ತಾನದ ಮಾಜಿ ಟಿ 20 ಐ ಮಾಜಿ ನಾಯಕ ಹಾಗೂ ವೇಗದ ಬೌಲರ್​​ ಶಾಹೀನ್ ಅಫ್ರಿದಿ ತಂಡದ ಸಹ ಆಟಗಾರ ಮೊಹಮ್ಮದ್ ರಿಜ್ವಾನ್ ಅವರನ್ನು ಟಿ 20 ಕ್ರಿಕೆಟ್ನ ಬ್ರಾಡ್ಮನ್ ಎಂದು ಹೊಗಳಿರುವುದು ನೆಟ್ಟಿಗರ ಪಾಲಿಗೆ ತಮಾಷೆಯ ಸುದ್ದಿಯಾಗಿ ಪರಿವರ್ತನೆಗೊಂಡಿದೆ. ಸೋಶೀಯಲ್​ ಮೀಡಿಯಾಗಳಲ್ಲಿ ಇದನ್ನು ವರ್ಷದ ಜೋಕ್ ಎಂದರೆ ಕರೆದರೆ ಕೆಲವರು ಬಿದ್ದು ಬಿದ್ದು ನಗುತ್ತಿದ್ದಾರೆ.

ಏಪ್ರಿಲ್ 21 ರಂದು ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ 20 ಐ ಸರಣಿಯ 3 ನೇ ಪಂದ್ಯದಲ್ಲಿ ರಿಜ್ವಾನ್ ಕ್ರಿಕೆಟ್​ ಚುಟುಕು ಸ್ವರೂಪದಲ್ಲಿ 3000 ರನ್ ಪೂರೈಸಿದ್ದಾರೆ. ಹೀಗಾಗಿ ಅಫ್ರಿದಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಭಯಂಕರ ಹೇಳಿಕೆ ನೀಡಿದ್ದಾರೆ. ರಾವಲ್ಪಿಂಡಿ ಕ್ರೀಡಾಂಗಣದಲ್ಲಿ ನಡೆದ 2ನೇ ಟಿ 20 ಪಂದ್ಯದಲ್ಲಿ ಪಾಕ್ ತಂಡ ಗೆದ್ದಿತ್ತು. ಆದರೆ, 3ನೇ ಪಂದ್ಯವನ್ನು 7 ವಿಕೆಟ್​ಗಳಿಂದ ಕಳೆದುಕೊಂಡಿತ್ತು.

“ಟಿ20 ಕ್ರಿಕೆಟ್​ನ ಬ್ರಾಡ್ಮನ್ ಮತ್ತು ಟಿ 20ಐನಲ್ಲಿ 3,000 ರನ್ ಗಳಿಸಿದ ಪಾಕಿಸ್ತಾನದ ಸೂಪರ್​ಮ್ಯಾನ್​ ಮೊಹಮ್ಮದ್ ರಿಜ್ವಾನ್ ಅವರಿಗೆ ಅಭಿನಂದನೆಗಳು! 🏏🌟 ನಿಮ್ಮ ಪ್ರಭಾವವು ಆಟದ ರೀತಿಯನ್ನು ಪರಿವರ್ತಿಸಿದೆ ಮತ್ತು ಟೀಕಾಕಾರರನ್ನು ಮೌನಗೊಳಿಸಿದೆ. ಬೆಳೆಯುತ್ತಲೇ ಇರಿ, ಚಾಂಪಿಯನ್! ನೀವು ಅನೇಕರಿಗೆ ಸ್ಫೂರ್ತಿಯಾಗಿದ್ದೀರಿ” ಎಂದು ಶಾಹೀನ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ. ಈ ಪೋಸ್ಟ್​​ ತಮಾಷೆಯ ಸಂಗತಿಯಾಗಿ ಮಾರ್ಪಟ್ಟಿದೆ.

ಮೊಹಮ್ಮದ್ ರಿಜ್ವಾನ್, ಟಿ20 ಐನಲ್ಲಿ ವೇಗವಾಗಿ 3000 ರನ್ ಗಳಿಸಿದ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಾದಿಯಲ್ಲಿ ಅವರು ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ರಿಜ್ವಾನ್ 2 92 ನೇ ಟಿ 20 ಅಂತರರಾಷ್ಟ್ರೀಯ ಪಂದ್ಯ ಮತ್ತು 79 ನೇ ಇನ್ನಿಂಗ್ಸ್​ನಲ್ಲಿ ಈ ವೈಯಕ್ತಿಕ ಮೈಲಿಗಲ್ಲನ್ನು ತಲುಪಿದ್ದಾರೆ. 81 ಇನ್ನಿಂಗ್ಸ್​​ಗಳಲ್ಲಿ 3000 ಟಿ 20 ರನ್ ಗಳಿಸಿದ ವೈಟ್-ಬಾಲ್ ನಾಯಕ ಬಾಬರ್ ಅಜಮ್ ಅವರನ್ನೂ 31 ವರ್ಷದ ಆಟಗಾರ ಹಿಂದಿಕ್ಕಿದ್ದಾರೆ.

ರೆಕಾರ್ಡ್​ ಮಾತ್ರ, ಗೆಲುವು ಇಲ್ಲ

ಮೊಹಮ್ಮದ್ ರಿಜ್ವಾನ್ ಮತ್ತು ಪಾಕಿಸ್ತಾನ ಇಬ್ಬರಿಗೂ ರಾತ್ರಿ ಅಂತಿಮವಾಗಿ ಉತ್ತಮವಾಗಿ ಕೊನೆಗೊಳ್ಳಲಿಲ್ಲ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ತಮ್ಮ 3000 ನೇ ಟಿ 20 ರನ್ ತಲುಪಿದ ಕೂಡಲೇ ಗಾಯಗೊಂಡರು. ಪಾಕಿಸ್ತಾನ 178 ರನ್ ಗಳಿಸಿದ್ದ ಮೊದಲ ಇನಿಂಗ್ಸ್​​ನಲ್ಲಿ 21 ಎಸೆತಗಳಲ್ಲಿ 22 ರನ್ ಗಳಿಸಿದ ನಂತರ ರಿಜ್ವಾನ್ ಡ್ರೆಸ್ಸಿಂಗ್ ರೂಮ್​ಗೆ ಮರಳಿದರು. ಪ್ರತಿಯಾಗಿ ಆಡಿದ ಮೈಕೆಲ್ ಬ್ರೇಸ್ವೆಲ್ ನೇತೃತ್ವದ ನ್ಯೂಜಿಲ್ಯಾಂಡ್ ತಂಡ 19 ನೇ ಓವರ್​ನ ಎರಡನೇ ಎಸೆತದಲ್ಲಿ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿ ಸರಣಿಯನ್ನು 1-1 ರಿಂದ ಸಮಬಲಗೊಳಿಸಿತು.

ಇದನ್ನೂ ಓದಿ : Suresh Raina : ಧೋನಿ ನೇತೃತ್ವದಲ್ಲಿ ವಿಶ್ವ ಕಪ್ ಗೆದ್ದಿರುವುದು ಪೂರ್ವ ನಿಯೋಜಿತ; ಸ್ಫೋಟಕ ಮಾಹಿತಿ ಬಹಿರಂಗ ಮಾಡಿದ ರೈನಾ!

ರಿಜ್ವಾನ್ ತನ್ನ ವೃತ್ತಿಜೀವನದಲ್ಲಿ ಬ್ರಾಡ್ಮನ್ ಹೊಂದಿದ್ದ ಸರಾಸರಿಗೆ ಹತ್ತಿರದಲ್ಲಿಯೂ ಇಲ್ಲ. ಹಾಗಿರುವಾಗ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಶಾಹೀನ್ ಅವರನ್ನು ಪ್ರಶ್ನಿಸಿದ್ದಾರೆ. ರಿಜ್ವಾನ್​ ಅವರನ್ನು ಬ್ರಾಡ್ಮನ್ ಎಂದು ಕರೆಯಲು ಹೇಗೆ ಸಾಧ್ಯ ಎಂದ ಪ್ರಶ್ನಿಸಿದ್ದಾರೆ.

ಬಾಬರ್ ಅಜಮ್ ಅವರನ್ನು ಮತ್ತೆ ನೇಮಕ ಮಾಡಲು ಪಿಸಿಬಿ ಕಳೆದ ತಿಂಗಳು ಅವರನ್ನು ನಾಯಕತ್ವದಿಂದ ವಜಾಗೊಳಿಸಿದ ನಂತರ ಕೆಲವು ಅಭಿಮಾನಿಗಳು ಅವರ ಮಾನಸಿಕ ಸ್ಥಿರತೆಯ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆ. ಹೀಗಾಗಿಯೇ ಶಾಹೀನ್ ರಿಜ್ವಾನ್ ಅವರನ್ನು ಟಿ 20 ಕ್ರಿಕೆಟ್​​ ಬ್ರಾಡ್ಮನ್ ಎಂದು ಕರೆದಿದ್ದಾರೆ ಎಂದು ಹೇಳಲಾಗುತ್ತಿದೆ.

Continue Reading

Lok Sabha Election 2024

Lok Sabha Election 2024: ಸಂವಿಧಾನ ತಿದ್ದುಪಡಿ ಮಾಡುವುದಾಗಿ ಘೋಷಿಸಿದ ಪ್ರಿಯಾಂಕಾ ಗಾಂಧಿ!

Lok Sabha Election 2024: ಜಾತಿ ಗಣತಿಯನ್ನು ಇಡೀ ದೇಶದಲ್ಲಿ ನಡೆಸುತ್ತೇವೆ. ಯಾವ ಸಮುದಾಯದವರು ಎಷ್ಟಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತೇವೆ. ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಪ್ರತ್ಯೇಕ ಬಜೆಟ್ ಅನ್ನು ಮಂಡಿಸುತ್ತೇವೆ. ಅಲ್ಲದೆ, ಸಂವಿಧಾನ ತಿದ್ದುಪಡಿ ಮಾಡಿ ಶೇಕಡಾ 50ರಷ್ಟು ಮೀಸಲಾತಿ ಕೊಡುತ್ತೇವೆ. ಕೃಷಿಗಾಗಿ ಹೊಸ ನೀತಿ ಮಾಡುತ್ತೇವೆ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

VISTARANEWS.COM


on

Lok Sabha Election 2024 Priyanka Gandhi announces constitutional amendment
Koo

ಚಿತ್ರದುರ್ಗ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಈಗ ಪ್ರಿಯಾಂಕಾ ಗಾಂಧಿ (Priyanka Gandhi) ಕರ್ನಾಟಕಕ್ಕೆ ಬಂದಿದ್ದು, ಚಿತ್ರದುರ್ಗ ಸಮಾವೇಶದಲ್ಲಿ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಹೇಳಿದ್ದಾರೆ. ಈ ಮೂಲಕ ಮಹಿಳೆಯರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ. ಸಂವಿಧಾನ ತಿದ್ದುಪಡಿ (Constitutional Amendment) ಮಾಡಿ ಶೇಕಡಾ 50ರಷ್ಟು ಮೀಸಲಾತಿ ಕೊಡುತ್ತೇವೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ನಡೆದ ಕಾಂಗ್ರೆಸ್ ನ್ಯಾಯ ಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಜಾತಿ ಗಣತಿಯನ್ನು ಇಡೀ ದೇಶದಲ್ಲಿ ನಡೆಸುತ್ತೇವೆ. ಯಾವ ಸಮುದಾಯದವರು ಎಷ್ಟಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತೇವೆ. ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಪ್ರತ್ಯೇಕ ಬಜೆಟ್ ಅನ್ನು ಮಂಡಿಸುತ್ತೇವೆ. ಅಲ್ಲದೆ, ಸಂವಿಧಾನ ತಿದ್ದುಪಡಿ ಮಾಡಿ ಶೇಕಡಾ 50ರಷ್ಟು ಮೀಸಲಾತಿ ಕೊಡುತ್ತೇವೆ. ಕೃಷಿಗಾಗಿ ಹೊಸ ನೀತಿ ಮಾಡುತ್ತೇವೆ ಎಂದು ಹೇಳಿದರು.

ಬಂಡವಾಳಶಾಹಿಗಳಿಗೆ ದೇಶದ ಆಸ್ತಿ ಮಾರಾಟ

ದೇಶದಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ನಾನು ಮಾತನಾಡುತ್ತೇನೆ. ದೇಶದಲ್ಲಿ ಎರಡು ಸತ್ಯಗಳಿವೆ. ಒಂದು, ನೀವು ಬೆಲೆ ಏರಿಕೆಯಿಂದ ಕಷ್ಟ ಪಡುತ್ತಿದ್ದೀರಿ. ಮತ್ತೊಂದು, ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಾತನಾಡುವುದಾಗಿದೆ ಎಂದು ಮಾಧ್ಯಮಗಳು ಹೇಳುತ್ತಿರುವುದು. ಆದರೆ, ದೇಶದಲ್ಲಿ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆಗಳಿವೆ. ದೊಡ್ಡ ದೊಡ್ಡ ಮಾತುಗಳನ್ನು ಮೋದಿ ಆಡಿದ್ದರು. ಹೆಣ್ಣುಮಕ್ಕಳು ಹಬ್ಬ ಹರಿ ದಿನ ಮಾಡಲು ಕಷ್ಟ ಪಡುತ್ತಿದ್ದಾರೆ. ಬೆಲೆ ಏರಿಕೆಯಿಂದ ಕಷ್ಟಪಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲದರಲ್ಲೂ ಬೆಲೆ ಏರಿಕೆ ಆಗಿದೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿಲ್ಲ, ಜಿಎಸ್‌ಟಿಯಿಂದ ಜನ ಕಷ್ಟದಲ್ಲಿ ಇದ್ದಾರೆ. ದೇಶದ ಆಸ್ತಿಯನ್ನು ಬಂಡವಾಳಶಾಹಿಗಳಿಗೆ ಮೋದಿ ಮಾರಾಟ ಮಾಡುತ್ತಿದ್ದಾರೆ. ಅವರಿಗೆ 16 ಲಕ್ಷ ಕೋಟಿ ಸಬ್ಸಿಡಿ ಕೊಟ್ಟಿದ್ದಾರೆ. ವಿಮಾನ ನಿಲ್ದಾಣ, ಬಂದರು ಸೇರಿದಂತೆ ಎಲ್ಲವನ್ನು ಮಾರಾಟ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳ ಬಾಯಿ ಮುಚ್ಚಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಬಿಜೆಪಿಗೆ ಚಂದಾ ಕೊಟ್ಟಿರುವ ಐಟಿ ದಾಳಿಗೊಳಪಟ್ಟ ಕಂಪನಿಗಳು

ಕಾಂಗ್ರೆಸ್‌ನ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿದ್ದಾರೆ. ಒಬ್ಬರು ಸಿಎಂ, ಇನ್ನೊಬ್ಬರು ಮಾಜಿ ಮುಖ್ಯಮಂತ್ರಿಯನ್ನು ಬಂಧಿಸಿದ್ದಾರೆ. ಚುನಾವಣಾ ಬಾಂಡ್‌ಗಳ ಮೂಲಕ ಹಗರಣ ಮಾಡಿದ್ದಾರೆ. ದಾನ ಮಾಡಿದವರ ಹೆಸರು ಯಾರಿಗೂ ಗೊತ್ತಾಗುವುದಿಲ್ಲ. ಹೆಸರು ಮುಚ್ಚಿಡುವುದು ಸರಿಯಲ್ಲ, ಬಹಿರಂಗಗೊಳಿಸಿ ಎಂದು ಕೋರ್ಟ್ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಯಾರ ಬಳಿ ಚಂದಾ ವಸೂಲಿ ಮಾಡಿದ್ದಾರೆ ಎಂದು ಲಿಸ್ಟ್ ಹೊರಗೆ ಬಂದ ಮೇಲೆ ಗೊತ್ತಾಯಿತು. ಯಾವ ಕಂಪನಿಗಳ ಮೇಲೆ ದಾಳಿಯಾಗಿತ್ತೋ ಆ ಕಂಪನಿಗಳು ದಾನ ಕೊಟ್ಟಿವೆ. ಕಪ್ಪು ಹಣ ತರಲು ನೋಟು ರದ್ದು ಮಾಡಿದ್ದಾಗಿ ಹೇಳಿದ್ದರು. ಆ ಸಂದರ್ಭದಲ್ಲಿ ನೀವು ಕಷ್ಟ ಪಟ್ಟಿದ್ದೀರಿ. ಆದರೆ, ಅದೇ ಸಮಯದಲ್ಲಿ ಕಪ್ಪು ಹಣವನ್ನು ವೈಟ್ ಮಾಡಿಕೊಂಡರು. ಅವರ ತಪ್ಪು ಮುಚ್ಚಿಕೊಳ್ಳಲು ವಿಪಕ್ಷದವರು ಭ್ರಷ್ಟರು ಎಂದು ಕರೆಯುತ್ತಿದ್ದಾರೆ. ದೇಶವನ್ನು ಆರ್ಥಿಕವಾಗಿ ಹಾಳು ಮಾಡುತ್ತಿದ್ದಾರೆ. ಚುನಾವಣೆ ಬಂದಾಗ ಜಾತಿ, ಧರ್ಮದ ಬಗ್ಗೆ ಮಾತನಾಡಿ ಗಮನವನ್ನು ಬೇರೆ ಕಡೆ ಸೆಳೆಯುತ್ತಾರೆ ಎಂದು ಪ್ರಿಯಾಂಕಾ ಗಾಂಧಿ ಕಿಡಿಕಾರಿದರು.

ಸಂವಿಧಾನ ಬದಲಾವಣೆ ಮಾತನಾಡುವ ಬಿಜೆಪಿ ನಾಯಕರು

ನಿಮ್ಮ ಕಷ್ಟದ ಬಗ್ಗೆ ಮಾತನಾಡದ ನರೇಂದ್ರ ಮೋದಿ ಅವರು, 400 ಹೆಚ್ಚು ಸ್ಥಾನ ಕೊಡಿ, ಒಳ್ಳೆಯ ಕೆಲಸ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಇದರ ಅರ್ಥವೇನು? ಜನರೇ ಸಾರ್ವಭೌಮರು ಎಂದು ಸಂವಿಧಾನ ಹೇಳಿದೆ. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ನಿಮ್ಮ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಕಿಡಿಕಾರಿದರು.

ಸುಳ್ಳು ಬಿಟ್ಟರೆ ಬೇರೇನನ್ನೂ ಹೇಳಿಲ್ಲ

ದೇಶದಲ್ಲಿ ಜನರ ಕಷ್ಟಗಳು ದೊಡ್ಡದಾಗಿವೆ. ನೀವು ಎಷ್ಟು ಸಂಘರ್ಷ ಮಾಡುತ್ತಿದ್ದೀರ ಎಂಬುದು ನರೇಂದ್ರ ಮೋದಿ ಅವರಿಗೆ ಗೊತ್ತಿಲ್ಲ. ಒಂದು ಕಾಲದಲ್ಲಿ ಪ್ರಧಾನ ಮಂತ್ರಿಗಳು ನಿಮ್ಮ ಹಳ್ಳಿ, ನಿಮ್ಮ ಮನೆಗಳಿಗೆ ಬರುತ್ತಿದ್ದರು. ಒಂದು ಕಾಲದಲ್ಲಿ ದೇಶದ ನಾಯಕರು ಸೇವಾ ಮನೋಭಾವದಿಂದ ಇರುತ್ತಿದ್ದರು. ಆದರೆ, ಇಂದಿನ ನಾಯಕನ ಬಳಿ ಅಹಾಂಕರ ಕಾಣುತ್ತಿದೆ. ಮೋದಿ ಸರ್ಕಾರ ಸುಳ್ಳು ಬಿಟ್ಟರೆ ಬೇರೆ ಏನನ್ನೂ ಹೇಳಿಲ್ಲ ಎಂದು ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.

ಸಿಎಂ ಸಿದ್ದರಾಮಯ್ಯ ಬರ ಪರಿಹಾರದ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದು ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಕಳಸಾ ಬಂಡೂರಿ ಯೋಜನೆಗೆ ಅನುಮತಿ ಕೊಟ್ಟಿಲ್ಲ. ಭದ್ರಾ ಯೋಜನೆಗೆ ಹಣ ಕೊಟ್ಟಿಲ್ಲ. ಕರ್ನಾಟಕಕ್ಕೆ ಯಾಕೆ ಮೋದಿ ಹೀಗೆ ಮಾಡುತ್ತಿದ್ದಾರೆ? ಯಾವ ರಾಜ್ಯದಲ್ಲಿ ಅವರಿಗೆ ಅಧಿಕಾರ ಇರುವುದದಿಲ್ಲವೋ ಅಲ್ಲಿ ಹಣ ಕೊಡೋದಿಲ್ಲ. ಕೇವಲ ಬಿಜೆಪಿ ಸರ್ಕಾರ ಇರುವ ರಾಜ್ಯಗಳಿಗೆ ಮಾತ್ರ ಹಣ ಕೊಡಲಾಗುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Lok Sabha Election 2024: ಇಲ್ಲಿರೋದು ಗ್ಯಾರಂಟಿ ಅಲೆ ಮಾತ್ರ; ಹಸಿ ಸುಳ್ಳು ಹೇಳುತ್ತಿರುವ ಮೋದಿ, ದೇವೇಗೌಡ: ಸಿಎಂ ಸಿದ್ದರಾಮಯ್ಯ

ಅಗ್ನಿಪಥ್‌ಗೆ ಬ್ರೇಕ್‌

ಗ್ಯಾರಂಟಿ ಯೋಜನೆಯಿಂದ ನಿಮ್ಮ ಬದುಕು ಬದಲಾಗಿಲ್ಲವಾ? ಸುಧಾರಣೆಯಾಗಿಲ್ಲವಾ ಎಂದು ಪ್ರಶ್ನಿಸಿದ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ನ್ಯಾಯ ಪತ್ರವನ್ನು ಬಿಡುಗಡೆ ಮಾಡಿದೆ. ನಮ್ಮ ಪಕ್ಷ ಅಧಿಕಾರಿಕ್ಕೆ ಬಂದರೆ ವರ್ಷಕ್ಕೆ ಒಂದು ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಕೊಡುತ್ತೇವೆ. ಕೇಂದ್ರ ಸರ್ಕಾರದ ಉದ್ಯೋಗದಲ್ಲಿ ಶೇಕಡಾ 50ರಷ್ಟನ್ನು ಮಹಿಳೆಯರಿಗೆ ಮೀಸಲಿಡುತ್ತೇವೆ. ಆರೋಗ್ಯ ವಿಮೆ, ಅಂಗನವಾಡಿ ಕಾರ್ಯಕರ್ತರ ಸಂಬಳವನ್ನು ಹೆಚ್ಚಳ ಮಾಡುತ್ತೇವೆ. ಶಿಕ್ಷಣಕ್ಕೆ ಸಾಲ ಕೊಡುತ್ತೇವೆ, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸಾಲ ಕೊಡುತ್ತೇವೆ. ನರೇಂದ್ರ ಮೋದಿ ಸರ್ಕಾರದಲ್ಲಿ ಎಷ್ಟು ಉದ್ಯೋಗ ಖಾಲಿ ಇದೆಯೋ ಅಷ್ಟನ್ನೂ ಭರ್ತಿ ಮಾಡುತ್ತೇವೆ. ಅಗ್ನಿಪಥ್ ನಿಲ್ಲಿಸಿ ಹಿಂದಿನ ರೀತಿಯಲ್ಲಿ ನೇಮಕಾತಿ ಮಾಡುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ಭರವಸೆ ನೀಡಿದರು.

Continue Reading

ಪ್ರಮುಖ ಸುದ್ದಿ

Suresh Raina : ಧೋನಿ ನೇತೃತ್ವದಲ್ಲಿ ವಿಶ್ವ ಕಪ್ ಗೆದ್ದಿರುವುದು ಪೂರ್ವ ನಿಯೋಜಿತ; ಸ್ಫೋಟಕ ಮಾಹಿತಿ ಬಹಿರಂಗ ಮಾಡಿದ ರೈನಾ!

Suresh Raina: ಆ ವಿಶ್ವಕಪ್ ಆವೃತ್ತಿಯಲ್ಲಿ ಸುರೇಶ್ ಟೀಮ್ ಇಂಡಿಯಾ ಪರ ಹೆಚ್ಚು ಪಂದ್ಯಗಳನ್ನು ಆಡಿರಲಿಲ್ಲ. ಆದರೆ ಅವರು ತಂಡದ ಭಾಗವಾಗಿದ್ದರು. ವಿಶ್ವಕಪ್ ಗೆಲುವಿನ ವೇಳೆಯಲ್ಲಿ ಘಟಿಸಿರು ಪ್ರತಿಯೊಂದು ವಿಷಯವನ್ನೂ ತಿಳಿದಿದ್ದರು. ರೈನಾ ಕಡಿಮೆ ಪಂದ್ಯಗಳನ್ನು ಆಡಿರಬಹುದು. ಆದರೆ ಆಡಿದ ಪಂದ್ಯಗಳು ಬಹಳ ಮುಖ್ಯವಾಗಿದ್ದವು.

VISTARANEWS.COM


on

Suresh Raina
Koo

ನವದೆಹಲಿ: ಎಂಎಸ್ ಧೋನಿ (MS Dhoni) ನಾಯಕತ್ವದಲ್ಲಿ ಭಾರತ ತಂಡ 2011ರ ಏಕ ದಿನ ವಿಶ್ವ ಕಪ್​ (2011 ODI World Cup) ಗೆದ್ದಿದೆ. ಆ ಟೂರ್ನಿಯಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಸುರೇಶ್ ರೈನಾ (Suresh Raina) ಕೂಡಾ ಭಾರತ ತಂಡದ ಭಾಗವಾಗಿದ್ದರು. ಅವರೀಗ ವಿಶ್ವ ಕಪ್​ ಗೆಲುವಿನ ಕುರಿತು ಸ್ಫೋಟಕ ಮಾಹಿತಿ ಬಹಿರಂಗ ಮಾಡಿದ್ದು ಅದು ಪೂರ್ವ ನಿಯೋಜಿತ ಗೆಲುವು ಎಂದು ಹೇಳಿದ್ದಾರೆ. ಶ್ರೀಲಂಕಾ ವಿರುದ್ಧದ ಫೈನಲ್​​ ಫೈನಲ್ ಗೆಲುವು ಸೇರಿದಂತೆ ಇಡೀ ಪಂದ್ಯಾವಳಿಯುನ್ನು ಮೊದಲೇ ಪ್ಲ್ಯಾನ್ ಮಾಡಲಾಗಿತ್ತು ಎಂದು ಎಂದು ರೈನಾ ಇತ್ತೀಚೆಗೆ ಲಾಲಾಂಟಾಪ್ ಸಂದರ್ಶನದಲ್ಲಿ ಹೇಳಿದ್ದಾರೆ. ಮಾಜಿ ಎಡಗೈ ಬ್ಯಾಟರ್​ ಆ ಸಂದರ್ಶನದಲ್ಲಿ ಇನ್ನಷ್ಟು ಆಸಕ್ತಿದಾಯಕ ಬಹಿರಂಗಪಡಿಸಿದ್ದಾರೆ. ಅದರಲ್ಲಿ ಗಮನ ಸೆಳೆದಿರುವುದು ವಿಶ್ವ ಕಪ್ ಗೆಲುವು

ಆ ವಿಶ್ವಕಪ್ ಆವೃತ್ತಿಯಲ್ಲಿ ಸುರೇಶ್ ಟೀಮ್ ಇಂಡಿಯಾ ಪರ ಹೆಚ್ಚು ಪಂದ್ಯಗಳನ್ನು ಆಡಿರಲಿಲ್ಲ. ಆದರೆ ಅವರು ತಂಡದ ಭಾಗವಾಗಿದ್ದರು. ವಿಶ್ವಕಪ್ ಗೆಲುವಿನ ವೇಳೆಯಲ್ಲಿ ಘಟಿಸಿರು ಪ್ರತಿಯೊಂದು ವಿಷಯವನ್ನೂ ತಿಳಿದಿದ್ದರು. ರೈನಾ ಕಡಿಮೆ ಪಂದ್ಯಗಳನ್ನು ಆಡಿರಬಹುದು. ಆದರೆ ಆಡಿದ ಪಂದ್ಯಗಳು ಬಹಳ ಮುಖ್ಯವಾಗಿದ್ದವು. 50 ಓವರ್​ಗಳ ವಿಶ್ವಕಪ್​ನಲ್ಲಿ ಅವರು ವೆಸ್ಟ್ ಇಂಡೀಸ್ ವಿರುದ್ಧ ಚೆನ್ನೈನಲ್ಲಿ ಪಾದಾರ್ಪಣೆ ಮಾಡಿದ್ದರು.

ರೈನಾ ಚೊಚ್ಚಲ ವಿಶ್ವಕಪ್ ಆವೃತ್ತಿ

ಅಹ್ಮದಾಬಾದ್​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್​​ನ 2 ನೇ ಕ್ವಾರ್ಟರ್ ಫೈನಲ್​​ನಲ್ಲಿ ಸುರೇಶ್ ರೈನಾ ಎರಡನೇ ಬಾರಿಗೆ ಕಾಣಿಸಿಕೊಂಡಿದ್ದರು ಅಲ್ಲಿ ಭಾರತವು ಹಾಲಿ ಚಾಂಪಿಯನ್​ಗಳನ್ನು ಸೋಲಿಸಿತು. ನಂತರ ಅವರು ಮೊಹಾಲಿಯಲ್ಲಿ ಪಾಕಿಸ್ತಾನ ವಿರುದ್ಧ ಸೆಮಿಫೈನಲ್​​ನಲ್ಲಿ ಆಡಿದರು. ಅವರ 4ನೇ ಪಂದ್ಯವು ಮುಂಬೈನಲ್ಲಿ ನಡೆದ ಫೈನಲ್ ಆಗಿತ್ತು. ಅಲ್ಲಿ ಭಾರತೀಯರು ಶ್ರೀಲಂಕಾವನ್ನು 6 ವಿಕೆಟ್​ಗಳಿಂದ ಸೋಲಿಸಿ 1983ರ ನಂತರ ಮೊದಲ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿದರು.

ಗೆಲವು ಹೇಗೆ ಪೂರ್ವ ನಿಯೋಜಿತ ಎಂಬ ಸುರೇಶ್ ರೈನಾ ವಿವರಣೆ ಹೀಗಿದೆ

ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರನ್ನು ಬೇಗ ಔಟ್ ಆದ ತಕ್ಷಣ ಡ್ರೆಸ್ಸಿಂಗ್ ಕೋಣೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು ಎಂಬುದನ್ನು ಸುರೇಶ್ ರೈನಾ ಮೊದಲು ಒಪ್ಪಿಕೊಂಡಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ 3 ನೇ ವಿಕೆಟ್​​ಗೆ ಉತ್ತಮ ಜೊತೆಯಾಟ ನೀಡಿದಾಗ ಭರವಸೆಗಳು ಉಂಟಾದವು. ಕೊಹ್ಲಿ ನಿರ್ಗಮನದ ನಂತರ ಎಂಎಸ್ ಧೋನಿ ತಮ್ಮ ಪ್ರಧಾನ ಫಾರ್ಮ್​ನಲ್ಲಿದ್ದ ಯುವರಾಜ್ ಸಿಂಗ್ ಬದಲಿಗೆ ಬ್ಯಾಟಿಂಗ್ ಮಾಡಲು ಹೊರನಡೆದಿದ್ದು ಅಚ್ಚರಿ ರೈನಾ ನೆನಪಿಸಿಕೊಂಡರು.

ಇದನ್ನೂ ಓದಿ: Virat Kohli : ವಿರಾಟ್ ಕೊಹ್ಲಿಯ 50ನೇ ಏಕದಿನ ಕ್ರಿಕೆಟ್​ ಶತಕಕ್ಕೆ ಅಂತಾರಾಷ್ಟ್ರೀಯ ಗೌರವ

ಮುರಳೀಧರನ್ ಅವರ ಸ್ಪಿನ್ ದಾಳಿಯನ್ನು ನಿಭಾಯಿಸಲು ಯೋಜಿಸಿದ ಧೋನಿ, ಎಡಗೈ ಮತ್ತು ಬಲಗೈ ಸಂಯೋಜನೆಯನ್ನು ಬಯಸಿದ್ದರು. ಅದಕ್ಕಾಗಿ ಯುವರಾಜ್ ಅವರಿಗಿಂತ ಮೊದಲು ಧೋನಿ ಬ್ಯಾಟಿಂಗ್ ಮಾಡಲು ಮುಂದಾದರು ಎಂದು ಸುರೇಶ್ ರೈನಾ ಹೇಳಿದ್ದಾರೆ. ಮ್ಯಾನ್​ ಆಫ್​​​ ದಿ ಟೂರ್ನಮೆಂಟ್​ ಪ್ರಶಸ್ತಿ ಪಡೆದ ಯುವರಾಜ್ ಅವರಿಗಿಂತ ಮುಂದೆ ಹೋಗುವ ಧೋನಿಯ ನಿರ್ಧಾರವು ಮಾಸ್ಟರ್ ಸ್ಟ್ರೋಕ್ ಆಗಿತ್ತು. ಇವೆಲ್ಲವೂ ಪೂರ್ವ ನಿಯೋಜಿತ ಎಂದರು. ಅಂದ ಹಾಗೆ ಈ ನಿಯೋಜನೆಯನ್ನು ಮಾಡಿದ್ದು ಯಾರು ಎಂದು ಕೇಳಿದ ಪ್ರಶ್ನೆಗೆ ‘ಮೇಲಿರುವ ಭಗವಂತ’ ಎಂದು ಉತ್ತರಿಸಿದ್ದಾರೆ.

“ಮೊದಲ ಎರಡು ವಿಕೆಟ್​ಗಳು ಬಿದ್ದ ನಂತರ ಡ್ರೆಸ್ಸಿಂಗ್ ರೂಮ್​​ನಲ್ಲಿ ಮೌನವಿತ್ತು. ಆದರೆ ಗೌತಮ್ ಗಂಭೀರ್​ ಮತ್ತು ವಿರಾಟ್ ನಡುವಿನ ಪಾಲುದಾರಿಕೆ (ಪಂದ್ಯವನ್ನು ಬದಲಾಯಿಸಿತು). ವಿರಾಟ್ ವಿಕೆಟ್ ಬಿದ್ದಾಗ ನಾನು ಡ್ರೆಸ್ಸಿಂಗ್ ರೂಮ್​ನಲ್ಲಿದ್ದೆ. ಧೋನಿ ಭಾಯ್ ಬ್ಯಾಟಿಂಗ್ ಮಾಡಲು ಹೊರಗೆ ಹೊರಟರು. ನಾನು ಇದ್ದಕ್ಕಿದ್ದಂತೆ ಏನಾಯಿತು ಎಂದು ನೋಡಿದಾಗ ನಾನು ಹಾಗೆ ಭಾವಿಸಿದೆ”ಎಂದು ಸುರೇಶ್ ರೈನಾ ಹೇಳಿದ್ದಾರೆ.

“ಧೋನಿ ಭಾಯ್ ತೆಗೆದುಕೊಂಡ ಎಲ್ಲಾ ನಿರ್ಧಾರಗಳು ಮಾಸ್ಟರ್ ಸ್ಟ್ರೋಕ್​ಗಳಾಗಿದ್ದವು. ಏಕೆಂದರೆ ಆ ಸಮಯದಲ್ಲಿ ಸಿಎಸ್​ಕೆ ಪರ ಆಡುತ್ತಿದ್ದ ಮುರಳೀಧರನ್ ಎದುರಾಳಿ ತಂಡದಲ್ಲಿದೆ. ಆದ್ದರಿಂದ ಯುವಿ ಪ್ರಧಾನ ಫಾರ್ಮ್​ನಲ್ಲಿದ್ದರೂ ಅವರು ಎಡ-ಬಲ ಸಂಯೋಜನೆಯನ್ನು ಹೊಂದಲು ಬಯಸಿದರು ಎಂದು ಹೇಳಿದ್ದಾರೆ.

ಇಡಿ ಟೂರ್ನಿಯಲ್ಲಿ ಕಾಲಕಾಲಕ್ಕೆ ಬದಲಾವಣೆ ಮಾಡಲಾಗಿದೆ. ಆಟಗಾರರನ್ನು ಬಳಸಿಕೊಳ್ಳಲಾಗಿದೆ. ಆದ್ದರಿಂದ ವಿಶ್ವಕಪ್ ಸ್ಕ್ರಿಪ್ಟ್ ಮಾಡಲಾಗಿದೆ ಎಂದು ನನಗೆ ಅನಿಸಿತು. ಏನಾಗುತ್ತಿದೆಯೋ ಅದು ಖಂಡಿತವಾಗಿಯೂ ಸಂಭವಿಸುತ್ತದೆ ಮತ್ತು ಅದನ್ನು ಮೇಲಿನ ಭಗವಂತ ಬರೆದಿದ್ದಾನೆ”ಎಂದು ರೈನಾ ಮುಕ್ತಾಯಗೊಳಿಸಿದರು.

Continue Reading
Advertisement
Zero Shadow Day
ವಿಜ್ಞಾನ11 mins ago

Zero Shadow Day: ನಾಳೆ ಬೆಂಗಳೂರಿನಲ್ಲಿ ನೆರಳೇ ಮೂಡುವುದಿಲ್ಲ; ಅದ್ಯಾಕೆ? ಏನಿದು ʼಶೂನ್ಯ ನೆರಳಿನ ದಿನʼ ?

Mohammad Rizwan
ಕ್ರೀಡೆ14 mins ago

Mohammad Rizwan : ಪಾಕ್​ ಬ್ಯಾಟರ್​ನನ್ನು ಬ್ರಾಡ್ಮನ್ ಎಂದು ಹೊಗಳಿದ ನಾಯಕ; ಗೊಳ್ಳೆಂದು ನಗುತ್ತಿರುವ ನೆಟ್ಟಿಗರು!

bike taxi services
ಬೆಂಗಳೂರು38 mins ago

Bike Taxi Services: ಬೈಕ್ ಟ್ಯಾಕ್ಸಿ ಸವಾರರಿಗೆ ಕಿರುಕುಳ ನೀಡುವವರ ವಿರುದ್ಧ ಕ್ರಮಕ್ಕೆ ಹೈಕೋರ್ಟ್‌ ಸೂಚನೆ

Lok Sabha Election 2024 Priyanka Gandhi announces constitutional amendment
Lok Sabha Election 202450 mins ago

Lok Sabha Election 2024: ಸಂವಿಧಾನ ತಿದ್ದುಪಡಿ ಮಾಡುವುದಾಗಿ ಘೋಷಿಸಿದ ಪ್ರಿಯಾಂಕಾ ಗಾಂಧಿ!

Lok Sabha Election 2024
Lok Sabha Election 202451 mins ago

Lok Sabha Election 2024: ಸೂರತ್‌ನಲ್ಲಿ ಕಮಲ ಪಡೆಯ ಗೆಲುವಿಗೆ ಪರೋಕ್ಷ ಕಾರಣಕರ್ತರಾದ ಕಾಂಗ್ರೆಸ್‌ ಅಭ್ಯರ್ಥಿ ಬಿಜೆಪಿ ಸೇರ್ಪಡೆ?

Latest1 hour ago

Voter ID: ಮತದಾನಕ್ಕೆ ವೋಟರ್ ಐಡಿ ಇಲ್ಲದಿದ್ದರೆ ಚಿಂತೆ ಬೇಡ, ಈ ದಾಖಲೆಗಳು ಸಾಕು

Road Accident
ಕರ್ನಾಟಕ1 hour ago

Road Accident: ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು; ಅಪಘಾತದ ಬಳಿಕ ಹೊತ್ತಿ ಉರಿದ ಬಸ್

Himanta Biswa Sarma
ರಾಜಕೀಯ1 hour ago

Himanta Biswa Sarma: ಕಾಂಗ್ರೆಸ್ ಪ್ರಣಾಳಿಕೆ ಪಾಕಿಸ್ತಾನದ ಜನರಿಗೆ ಹೆಚ್ಚು ಸೂಕ್ತ: ಹಿಮಂತ ಬಿಸ್ವಾ ಶರ್ಮಾ

Dungarees Fashion In Summer
ಫ್ಯಾಷನ್1 hour ago

Dungarees Fashion In Summer: ಬೇಸಿಗೆ ಸೀಸನ್‌ನಲ್ಲಿ ಹೀಗಿರಲಿ ಲೈಟ್‌ವೈಟ್‌ ಡಂಗ್ರೀಸ್‌ ಕಾಂಬಿನೇಷನ್‌

Voting awareness programme in Shira
ತುಮಕೂರು1 hour ago

Lok Sabha Election 2024: ಶಿರಾದಲ್ಲಿ ಕ್ಯಾಂಡಲ್‌ ಹಿಡಿದು ಮತದಾನ ಜಾಗೃತಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ14 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು1 day ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ1 day ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌