ಗೋರಖನಾಥ ದೇವಸ್ಥಾನ ದಾಳಿ ಪ್ರಕರಣ ವಿಚಾರಣೆಗೆ ಮುಂಬೈ ತಲುಪಿದ ಭಯೋತ್ಪಾದನಾ ನಿಗ್ರಹ ದಳ - Vistara News

ದೇಶ

ಗೋರಖನಾಥ ದೇವಸ್ಥಾನ ದಾಳಿ ಪ್ರಕರಣ ವಿಚಾರಣೆಗೆ ಮುಂಬೈ ತಲುಪಿದ ಭಯೋತ್ಪಾದನಾ ನಿಗ್ರಹ ದಳ

ಗೋರಖನಾಥ್ ದೇವಸ್ಥಾನದಲ್ಲಿನ ದಾಳಿಯ ತನಿಖೆ ನಡೆಸಲು ಉತ್ತರಪ್ರದೇಶದ ಭಯೋತ್ಪಾದನೆ ನಿಗ್ರಹ ದಳ ಮಂಬೈ ತಲುಪಿದೆ. ಆರೋಪಿ ಮುರ್ತುಜಾ ಕಳೆದ ಮೂರು ವರ್ಷದಿಂದ ಕುಟುಂಬದವರನ್ನು ಭೇಟಿ ಮಾಡಿಲ್ಲ ಎನ್ನಲಾಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಉತ್ತರಪ್ರದೇಶ: ಗೋರಖನಾಥ್‌ ದೇವಸ್ಥಾನದ ಮೇಲೆ ಏಕಾಏಕಿ ದಾಳಿ ನಡೆಸಿದ್ದೂ ಅಲ್ಲದೆ ಪೋಲಿಸ್‌ ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದ ಘಟನೆ ಕುರಿತು ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರ ರಚಿಸಿರುವ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್‌) ಮುಂಬೈ ತಲುಪಿದೆ.

ಈ ಪ್ರಕರಣದಲ್ಲಿ ಮುಖ್ಯ ಆರೋಪಿ ಮುರ್ತುಜಾ ಅಬ್ಬಾಸಿಯನ್ನು ಉತ್ತರಪ್ರದೇಶ ಪೋಲಿಸರು ಈಗಾಗಲೆ ಬಂಧಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಈ ಪ್ರಕರಣವನ್ನು ಭಯೋತ್ಪಾದನಾ ನಿಗ್ರಹ ದಳಕ್ಕೆ ಹಸ್ತಾಂತರಿಸಲಾಗಿದೆ.
ಆರೋಪಿ ಮುರ್ತುಜಾ ಈ ಮುನ್ನ ಮುಂಬೈನಲ್ಲಿ ತನ್ನ ಕುಟುಂಬದವರೊಂದಿಗೆ ವಾಸಿಸುತ್ತಿದ್ದ ಎಂಬ ಮಾಹಿತಿಯಿತ್ತು. ಹಾಗಾಗಿ ಭಯೊತ್ಪಾದನಾ ನಿಗ್ರಹ ದಳ ಮುಂಬೈಯಲ್ಲಿರುವ ಮುರ್ತುಜಾ ಮನೆಗೆ ಭೇಟಿ ನೀಡಿ ಆರೋಪಿಯ ತಂದೆಯನ್ನು ವಿಚಾರಣೆ ಮಾಡಿದ್ದಾರೆ.

ಮಾನಸಿಕ ಸಮತೋಲನ ಸರಿ ಇಲ್ಲ ಎಂದ ತಂದೆ

ತನಿಖೆಗೆ ಸಹಕರಿಸಿದ ಮುರ್ತುಜಾರ ತಂದೆ ಮುನೀರ್‌ ಅಹ್ಮದ್‌ ಅಬ್ಬಾಸಿ ʼಆತ ಕುಟುಂಬದವರನ್ನು ಭೇಟಿ ಮಾಡದೇ ಮೂರು ವರ್ಷಗಳಾಗಿವೆʼ ಎಂದು ತಿಳಿಸಿದ್ದಾರೆ.

ಇನ್ನು, ದೇವಸ್ಥಾನಕ್ಕೆ ದಾಳಿ ನಡೆಸಿದ ಘಟನೆಯ ಕುರಿತು ಮಾತನಾಡಿದ ಮುನೀರ್‌ ಅಬ್ಬಾಸಿ ʼ ಅವನು ಉದ್ದೇಶಪೂರ್ವಕವಾಗಿ ದಾಳಿ ನಡೆಸಿರಲು ಸಾಧ್ಯವಿಲ್ಲ. ನನ್ನ ಮಗನ ಮಾನಸಿಕ ಸಮತೋಲನ ಸರಿ ಇಲ್ಲ, ಆತ ಕಿರಿಯ ವಯಸ್ಸಿನಿಂದಲೇ ಖಿನ್ನತೆಗೆ ಒಳಗಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆʼ ಎಂದು ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಉತ್ತರಪ್ರದೇಶ ಉಪಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ, ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಮುರ್ತುಜಾ ಅಬ್ಬಾಸಿಯ ಪ್ರಕರಣದ ತನಿಖೆ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Hathras Case: ಭೋಲೆ ಬಾಬಾ ಇರುತ್ತಿದ್ದುದು ಫೈವ್‌ ಸ್ಟಾರ್‌ ಆಶ್ರಮದಲ್ಲಿ! ಅವರಿಗಿದೆ ಅಪಾರ ಆಸ್ತಿ!

Hathras Case: ಹತ್ರಾಸ್‌ನಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ 121 ಜನರು ಸಾವನ್ನಪ್ಪಿದ್ದಾರೆ. ಇದರ ನಡುವೆ ಈ ದುರಂತಕ್ಕೆ ಕಾರಣವಾಗಿದ್ದ ಸ್ವಯಂ ಘೋಷಿತ ದೇವಮಾನವ ಭೋಲೆ ಬಾಬಾ ಅಲಿಯಾಸ್ ನಾರಾಯಣ್ ಸಾಕರ್ ಹರಿ ಬಗ್ಗೆ ಹೆಚ್ಚಿನ ಕುತೂಹಲಕಾರಿ ಮಾಹಿತಿಗಳು ಹೊರಬರುತ್ತಿವೆ. ಉತ್ತರ ಪ್ರದೇಶದ ಮೈನ್ಪುರಿಯಲ್ಲಿರುವ 13 ಎಕರೆ “ಪಂಚತಾರಾ” ಆಶ್ರಮ ಸೇರಿದಂತೆ ಅವರ ಅಪಾರ ಸಂಪತ್ತಿನ ಬಗ್ಗೆ ವಿವರ ನೀಡುವಂತಹ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

VISTARANEWS.COM


on

Bhole Baba
Koo

ಲಕ್ನೋ: ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ (Hathras Case) ಕಾಲ್ತುಳಿತಕ್ಕೆ ಸಿಲುಕಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ 121 ಜನರು ಸಾವನ್ನಪ್ಪಿದ ಘಟನೆಯ ನಂತರ, ಈ ದುರಂತಕ್ಕೆ ಕಾರಣವಾಗಿದ್ದ ಸ್ವಯಂ ಘೋಷಿತ ದೇವಮಾನವ ಭೋಲೆ ಬಾಬಾ ಅಲಿಯಾಸ್ ನಾರಾಯಣ್ ಸಾಕರ್ ಹರಿ ಬಗ್ಗೆ ಹೆಚ್ಚಿನ ಕುತೂಹಲಕಾರಿ ಮಾಹಿತಿಗಳು ಹೊರಬರುತ್ತಿವೆ.

ಬಾಬಾನ ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣಗಳಿರುವ ಬಗ್ಗೆ ಬಹಿರಂಗವಾದ ಕೆಲವೇ ಗಂಟೆಗಳಲ್ಲಿ, ಉತ್ತರ ಪ್ರದೇಶದ ಮೈನ್ಪುರಿಯಲ್ಲಿರುವ 13 ಎಕರೆ “ಪಂಚತಾರಾ” ಆಶ್ರಮ ಸೇರಿದಂತೆ ಅವರ ಅಪಾರ ಸಂಪತ್ತಿನ ಬಗ್ಗೆ ವಿವರ ನೀಡುವಂತಹ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Bhole Baba

ಉತ್ತರ ಪ್ರದೇಶದ ಮೈನ್ಪುರಿಯಲ್ಲಿರುವ 13 ಎಕರೆ “ಪಂಚತಾರಾ” ಆಶ್ರಮದ ಜಮೀನಿನ ಮೌಲ್ಯ 4 ಕೋಟಿ ರೂ. ಎಂಬುದಾಗಿ ತಿಳಿದುಬಂದಿದೆ. ಇನ್ನು ಮೈನ್ಪುರಿ ಆಶ್ರಮವು ಪಂಚತಾರಾ ಹೋಟೆಲ್‌ನಲ್ಲಿರುವ ಸೌಲಭ್ಯಗಳನ್ನು ಹೊಂದಿವೆ ಎನ್ನಲಾಗಿದೆ. ಈ ಆಶ್ರಮದಲ್ಲಿ ವಾಸವಾಗಿದ್ದ, ದೇವತಾಮಾನ ಎಂದು ಕರೆಯುವ ಬಾಬಾರಿಗೆ ಈ ಆಶ್ರಮದಲ್ಲಿ ಆರು ಕೊಠಡಿಗಳನ್ನು ಮೀಸಲಿಡಲಾಗಿದೆ. ಇನ್ನೂ ಆರು ಕೊಠಡಿಗಳನ್ನು ಸಮಿತಿಯ ಸದಸ್ಯರು ಮತ್ತು ಅವರ ಸಂಸ್ಥೆಯ ಸ್ವಯಂಸೇವಕರಿಗೆ ಮೀಸಲಿಡಲಾಗಿದೆ. ಆಶ್ರಮವು ಖಾಸಗಿ ರಸ್ತೆಯನ್ನು ಮಾತ್ರವಲ್ಲದೆ ಅತ್ಯಾಧುನಿಕ ಕೆಫೆಟೇರಿಯಾವನ್ನು ಸಹ ಹೊಂದಿದೆ ಎನ್ನಲಾಗಿದೆ.

Bhole Baba

ಆಶ್ರಮಕ್ಕಾಗಿ ಭೂಮಿಯನ್ನು 3-4 ವರ್ಷಗಳ ಹಿಂದೆ ತನಗೆ ಉಡುಗೊರೆಯಾಗಿ ನೀಡಲಾಗಿದೆ ಎಂದು ಬಾಬಾ ಹೇಳಿದ್ದಾರೆ. ಆದರೆ ದಾಖಲೆಗಳು ಅವರು ಕೋಟಿಗಟ್ಟಲೆ ಮೌಲ್ಯದ ಹಲವಾರು ಆಸ್ತಿಗಳನ್ನು ಹೊಂದಿದ್ದಾರೆ ಎಂದು ಬಹಿರಂಗಪಡಿಸುತ್ತವೆ. ದೇಶದ ಇತರ ಸ್ಥಳಗಳಲ್ಲಿನ ಹೆಚ್ಚಿನ ಆಶ್ರಮಗಳು ಈ ಆಸ್ತಿಗಳ ವ್ಯಾಪ್ತಿಯಲ್ಲಿ ಬರುತ್ತದೆ ಎನ್ನಲಾಗಿದೆ.

Hathras Case

ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ಬಾಬಾ ಮತ್ತು ಅವರ ಸಂಸ್ಥೆ ಆಯೋಜಿಸಿದ್ದ ‘ಸತ್ಸಂಗ’ (ಧಾರ್ಮಿಕ ಕಾರ್ಯಕ್ರಮ) ದಲ್ಲಿ ಕಾಲ್ತುಳಿತದಿಂದ ಕನಿಷ್ಠ ಏಳು ಮಕ್ಕಳು ಸೇರಿದಂತೆ 121 ಜನರ ಸಾವು ಸಂಭವಿಸಿದೆ. 80,000 ಜನರಿಗೆ ಅನುಮತಿ ನೀಡಲಾಗಿದ್ದು, 2.5 ಲಕ್ಷ ಜನರು ಕಾರ್ಯಕ್ರಮಕ್ಕೆ ಜಮಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಾಬಾ ತನ್ನ ಕಾರಿನಲ್ಲಿ ಹೊರಟಾಗ, ಜನಸಮೂಹವು ಅವರ ಆಶೀರ್ವಾದ ಪಡೆಯಲು ಅವರ ಹಿಂದೆ ಓಡಿದ್ದಾರೆ. ಜನಸಂದಣಿಯನ್ನು ನಿಯಂತ್ರಿಸುವ ಪ್ರಯತ್ನದಲ್ಲಿ, ಸ್ವಯಂಸೇವಕರು ಮತ್ತು ಬಾಬಾ ಅವರ ಭದ್ರತಾ ಪಡೆ ಜನರನ್ನು ಹಿಂದಕ್ಕೆ ತಳ್ಳಲು ಪ್ರಾರಂಭಿಸಿದರು. ಇದರಿಂದ ಹಲವಾರು ಭಕ್ತರು ಕೆಳೆಗೆ ಬಿದ್ದು ಕಾಲ್ತುಳಿತಕ್ಕೆ ಒಳಗಾದರು.
ಈ ಪ್ರಕರಣದ ಬಗ್ಗೆ ಮಾತನಾಡಿದ ಬಾಬಾ ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದರು ಮತ್ತು ಈ ದುರಂತದ ಹಿಂದೆ ಸಮಾಜ ವಿರೋಧಿ ಶಕ್ತಿಗಳ ಕೈವಾಡವಿದೆ ಎಂದು ಹೇಳಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:  34 ವರ್ಷಗಳ ಬಳಿಕ ತಾಯ್ನಾಡಿಗೆ ಮರಳಿದ ಕಾಶ್ಮೀರಿ ಪಂಡಿತ; ಪಾಳುಬಿದ್ದ ಮನೆ ನೋಡಿ ಭಾವುಕ

ಈ ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿ ಬಂದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ತಕ್ಷಣ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಹಾಗೇ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೇ ಗಾಯಾಳುಗಳು ಬೇಗನೆ ಗುಣಮುಖರಾಗುವಂತೆ ಹಾರೈಸಿದ್ದಾರೆ ಎನ್ನಲಾಗಿದೆ.

Continue Reading

ಉದ್ಯೋಗ

Job Alert: 6,128 ಬ್ಯಾಂಕ್ ಕ್ಲರ್ಕ್‌ ಹುದ್ದೆಯ ಅವಕಾಶ; ಬೇಗ ಅರ್ಜಿ ಸಲ್ಲಿಸಿ

ಐಬಿಪಿಎಸ್ ಕ್ಲರ್ಕ್ ಪರೀಕ್ಷೆಯನ್ನು (Job Alert) ಪ್ರತಿ ವರ್ಷ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು ರಾಷ್ಟ್ರಾದ್ಯಂತ 11 ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಕ್ಲೆರಿಕಲ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತದೆ. ಐಬಿಪಿಎಸ್ ಕ್ಲರ್ಕ್ 2024ರ ಕುರಿತು ಸಂಪೂರ್ಣ ಮಾಹಿತಿಯನ್ನು www.ibps.in ನಲ್ಲಿ ಪ್ರಕಟಿಸಲಾಗಿದೆ. 11 ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ 6,128 ಕ್ಲೆರಿಕಲ್ ಪೋಸ್ಟ್‌ಗಳ ಖಾಲಿ ಹುದ್ದೆಗಳೊಂದಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಬ್ಯಾಂಕ್‌ ಉದ್ಯೋಗದ ನಿರೀಕ್ಷೆಯಲ್ಲಿರುವ ಪದವೀಧರರಿಗೆ ಇದೊಂದು ಸುವರ್ಣ ಅವಕಾಶ. ಈ ಬಾರಿ ನಡೆಯಲಿರುವ ನೇಮಕಾತಿ ಪ್ರಕ್ರಿಯೆಯ ಕುರಿತು ಸಂಪೂರ್ಣ ವಿವರ ಇಲ್ಲಿದೆ.

VISTARANEWS.COM


on

By

Job Alert
Koo

ದೇಶಾದ್ಯಂತ ಖಾಲಿ ಇರುವ 11 ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ (public sector banks) 6128 ಕ್ಲೆರಿಕಲ್ ಹುದ್ದೆಗಳನ್ನು (clerical posts) ಭರ್ತಿ ಮಾಡಲು ಐಬಿಪಿಎಸ್ ಕ್ಲರ್ಕ್ ನೇಮಕಾತಿ 2024ರ (IBPS Clerk exam) ಅಧಿಸೂಚನೆಯನ್ನು (Job Alert) ಹೊರಡಿಸಲಾಗಿದೆ. ಇದಕ್ಕಾಗಿ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಜುಲೈ 1ರಿಂದ ಪ್ರಾರಂಭಿಸಲಾಗಿದೆ. ಇದರ ನೋಂದಣಿ ಪ್ರಕ್ರಿಯೆ, ಪರೀಕ್ಷೆಯ ಮಾದರಿ, ಖಾಲಿ ಹುದ್ದೆ, ಅರ್ಹತಾ ಮಾನದಂಡಗಳು, ಆಯ್ಕೆ ಪ್ರಕ್ರಿಯೆ, ಫಲಿತಾಂಶ, ಸಂಬಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಐಬಿಪಿಎಸ್ ಕ್ಲರ್ಕ್ 2024ರ ಕುರಿತು ಸಂಪೂರ್ಣ ಮಾಹಿತಿಯನ್ನು www.ibps.in ನಲ್ಲಿ ಪ್ರಕಟಿಸಲಾಗಿದೆ. 11 ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ 6,128 ಕ್ಲೆರಿಕಲ್ ಪೋಸ್ಟ್‌ಗಳ ಖಾಲಿ ಹುದ್ದೆಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಬ್ಯಾಂಕ್‌ ಉದ್ಯೋಗದ ನಿರೀಕ್ಷೆಯಲ್ಲಿರುವ ಎಲ್ಲಾ ಪದವೀಧರರಿಗೆ ಇದೊಂದು ಸುವರ್ಣ ಅವಕಾಶ.

ಹುದ್ದೆಗಳ ವಿವರ

ಆರ್ಗನೈಸೇಶನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) 11 ಸಾರ್ವಜನಿಕ ವಲಯದ ಬ್ಯಾಂಕ್‌ ಗಳಿಗೆ 6,128 ಕ್ಲೆರಿಕಲ್ ಪೋಸ್ಟ್‌ಗಳಿಗೆ ಪರೀಕ್ಷೆ ನಡೆಸಲಿದೆ.

ಐಬಿಪಿಎಸ್ ಕ್ಲರ್ಕ್ 2024 ಪರೀಕ್ಷೆಗೆ ರಾಜ್ಯವಾರು ಮತ್ತು ವರ್ಗವಾರು ಖಾಲಿ ಹುದ್ದೆಗಳ ಮಾಹಿತಿಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಈ ವರ್ಷ ಉತ್ತರ ಪ್ರದೇಶ ರಾಜ್ಯಕ್ಕೆ 1,246 ಒಟ್ಟು ಹುದ್ದೆಗಳೊಂದಿಗೆ ಗರಿಷ್ಠ ಹುದ್ದೆಗಳನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕದಲ್ಲಿ ಎಸ್ ಸಿ 75, ಎಸ್ ಟಿ 39, ಒಬಿಸಿ 108, ಇಡಬ್ಲ್ಯೂ ಸಿ 44, ಸಾಮಾನ್ಯ 191 ಹುದ್ದೆಗಳು ಸೇರಿ ಒಟ್ಟು 457 ಹುದ್ದೆಗಳಿವೆ. ದೇಶಾದ್ಯಂತ ಎಸ್ ಸಿ 1068, ಎಸ್ಟಿ 388, ಒಬಿಸಿ 1426, ಇಡಬ್ಲ್ಯೂ ಸಿ 562, ಸಾಮಾನ್ಯ 2684 ಸೇರಿ ಒಟ್ಟು 6,128 ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಸಂಬಳ ವಿವರ

ಐಬಿಪಿಎಸ್ ಕ್ಲರ್ಕ್‌ಗಳಿಗೆ ಮೂಲ ವೇತನವು ತಿಂಗಳಿಗೆ 19,900 ರೂ.ನಿಂದ 47,920 ರೂ. ಆಗಿದೆ. ಐಬಿಪಿಎಸ್ ಕ್ಲರ್ಕ್ ವೇತನದಲ್ಲಿ 19,900 ರೂ. ಮೂಲ ವೇತನವಾಗಿದ್ದು, ಉಳಿದ ವೇತನವು ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ವೈದ್ಯಕೀಯ ಭತ್ಯೆ ಮತ್ತು ಸಾರಿಗೆ ಭತ್ಯೆಯನ್ನು ಒಳಗೊಂಡಿದೆ. ಆರಂಭದಲ್ಲಿ ಸೇರುವವರಿಗೆ ಐಬಿಪಿಎಸ್ ಕ್ಲರ್ಕ್ ವೇತನಕ್ಕೆ ಸಂಬಂಧಿಸಿ ನಗದು 29,453 ರೂ. ಆಗಿದೆ.

ಪ್ರಮುಖ ದಿನಾಂಕಗಳು

ಐಬಿಪಿಎಸ್ ಕ್ಲರ್ಕ್ 2024ರ ನೇಮಕಾತಿಗೆ ಪ್ರಿಲಿಮ್ಸ್ ಪರೀಕ್ಷೆಯು 2024ರ ಆಗಸ್ಟ್ 24, 25 ಮತ್ತು 31 ರಂದು ನಡೆಯಲಿದೆ. ಐಬಿಪಿಎಸ್ ಕ್ಲರ್ಕ್ ಪರೀಕ್ಷೆಯು ಅಕ್ಟೋಬರ್ 13ರಂದು ನಡೆಯಲಿದೆ. ನೋಂದಣಿ ಪ್ರಕ್ರಿಯೆ ಜುಲೈ 1ರಿಂದ 21ರವರೆಗೆ ನಡೆಯಲಿದೆ.

ನೋಂದಣಿ ಪ್ರಕ್ರಿಯೆ

ನೋಂದಣಿ ಪ್ರಕ್ರಿಯೆ ಜುಲೈ 1 ರಿಂದ 21ರವರೆಗೆ ನಡೆಯಲಿದ್ದು, ಅಧಿಕೃತ ವೆಬ್‌ಸೈಟ್ www.ibps.in ಮೂಲಕ ಅರ್ಜಿ ಸಲ್ಲಿಸಬಹುದು. 20ರಿಂದ 28 ವರ್ಷಗಳ ಪದವೀಧರರು ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ ಎಸ್ ಸಿ, ಎಸ್ ಟಿ, ಇಡಬ್ಲ್ಯೂ ಸಿ ಅಭ್ಯರ್ಥಿಗಳಿಗೆ 175 ರೂ., ಸಾಮಾನ್ಯ ಮತ್ತು ಇತರರ ಅಭ್ಯರ್ಥಿಗಳಿಗೆ 850 ನೋಂದಣಿ ಶುಲ್ಕ ವಿಧಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಇದರೊಂದಿಗೆ ಅಗತ್ಯ ದಾಖಲೆಗಳು, ಛಾಯಾಚಿತ್ರ, ಸಹಿ ಮತ್ತು ಐಬಿಪಿಎಸ್ ಕ್ಲರ್ಕ್ ಕೈಬರಹದ ಪತ್ರವನ್ನು ವೆಬ್ ಸೈಟ್ ನಲ್ಲಿ ಸಲ್ಲಿಸಬೇಕು. ಅರ್ಜಿಯನ್ನು ಆನ್‌ಲೈನ್‌ನಲ್ಲಿ ಭರ್ತಿ ,ಮಾಡುವಾಗ ತಾಂತ್ರಿಕ ದೋಷಗಳನ್ನು ತಪ್ಪಿಸಲು Internet Explorer 8, Mozilla FireFox 3.0, Google Chrome 3.0 ಮತ್ತು ಹೆಚ್ಚಿನದರಲ್ಲೇ ಮಾಡುವಂತೆ ಸೂಚಿಸಲಾಗಿದೆ.

ವಯೋಮಿತಿ ಅರ್ಹತೆ

ಐಬಿಪಿಎಸ್ ಕ್ಲರ್ಕ್ 2024 ಅರ್ಹತಾ ಮಾನದಂಡ ವನ್ನು ಪ್ರಕಟಿಸಲಾಗಿದೆ. ಅಭ್ಯರ್ಥಿಯು 20 ವರ್ಷದಿಂದ 28 ವರ್ಷ ವಯಸ್ಸಿನವರಾಗಿರಬೇಕು. ಅಭ್ಯರ್ಥಿಯು 02.07.1996 ಕ್ಕಿಂತ ಮೊದಲು ಮತ್ತು 01.07.2004 ಕ್ಕಿಂತ ಅನಂತರ ಹುಟ್ಟಿರಬಾರದು. ವಿಶೇಷ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸ್ವಲ್ಪ ಸಡಿಲಿಕೆ ಮಾಡಲಾಗಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ 5 ವರ್ಷ, ಹಿಂದುಳಿದ ವರ್ಗಗಳಿಗೆ 3 ವರ್ಷ, ವಿಕಲಾಂಗ ವ್ಯಕ್ತಿಗಳಿಗೆ 10 ವರ್ಷ, ಮಾಜಿ ಸೈನಿಕರು / ಅಂಗವಿಕಲ ಮಾಜಿ ಸೈನಿಕರು ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸಿದ ಸೇವಾ ಅವಧಿ + 3 ವರ್ಷಗಳ ಸಡಿಲಿಕೆ ಇದೆ.

ಶೈಕ್ಷಣಿಕ ಅರ್ಹತೆ

ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿಯ ಕನಿಷ್ಠ ಅರ್ಹತೆಯನ್ನು ಹೊಂದಿರಬೇಕು ಅಥವಾ ಕೇಂದ್ರ ಸರ್ಕಾರದಿಂದ ಗುರುತಿಸಲ್ಪಟ್ಟ ಯಾವುದೇ ಸಮಾನ ಅರ್ಹತೆಯನ್ನು ಹೊಂದಿರಬೇಕು. ಅಭ್ಯರ್ಥಿಯು ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪುರಾವೆಯಾಗಿ ಪ್ರಮಾಣಪತ್ರವನ್ನು ಒದಗಿಸಬೇಕು. ಆನ್‌ಲೈನ್‌ನಲ್ಲಿ ನೋಂದಾಯಿಸುವಾಗ ಪದವಿಯಲ್ಲಿ ಪಡೆದ ಅಂಕಗಳ ಶೇಕಡಾವಾರು ಪ್ರಮಾಣವನ್ನು ಸೂಚಿಸಬೇಕು.

ಅಭ್ಯರ್ಥಿಗಳಿಗೆ ಕಂಪ್ಯೂಟರ್ ಸಿಸ್ಟಂಗಳಲ್ಲಿ ಆಪರೇಟಿಂಗ್ ಮತ್ತು ಕೆಲಸದ ಜ್ಞಾನ ಕಡ್ಡಾಯವಾಗಿದೆ. ಕೆಲಸ ಮಾಡಲು ಬಯಸುವ ರಾಜ್ಯದ ಅಧಿಕೃತ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದಿರಬೇಕು.

ಇದನ್ನೂ ಓದಿ: Job Alert: ಬರೋಬ್ಬರಿ 17,727 ಹುದ್ದೆಗಳ ಭರ್ತಿಗೆ ಮುಂದಾದ SSC; ಇಂದೇ ಅಪ್ಲೈ ಮಾಡಿ

ಆಯ್ಕೆ ಪ್ರಕ್ರಿಯೆ

ಐಬಿಪಿಎಸ್ ಕ್ಲರ್ಕ್ ನೇಮಕಾತಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯನ್ನು ಆನ್ ಲೈನ್ ಮೂಲಕ ನಡೆಸಲಾಗುತ್ತದೆ. ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಹಿಂದಿ ಜೊತೆಗೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುತ್ತದೆ.

ಕರ್ನಾಟಕದ ಅಭ್ಯರ್ಥಿಗಳಿಗೆ ಇಂಗ್ಲಿಷ್, ಹಿಂದಿ, ಕನ್ನಡ ಮತ್ತು ಕೊಂಕಣಿ ಭಾಷೆಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು. ಕ್ಲೆರಿಕಲ್ ಕೇಡರ್ ಹುದ್ದೆಗೆ ಆಯ್ಕೆಯಾಗುವವರು ಈ ಎರಡೂ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಮುಖ್ಯ ಪರೀಕ್ಷೆಯ ಅನಂತರ ಅಭ್ಯರ್ಥಿಗಳ ಆಯ್ಕೆಗೆ ಯಾವುದೇ ಸಂದರ್ಶನ ಪ್ರಕ್ರಿಯೆ ಇರುವುದಿಲ್ಲ.

Continue Reading

ದೇಶ

Lonavla Tragedy: ಲೋನಾವಲಾದಲ್ಲಿ ಇದುವರೆಗೆ 37 ದುರಂತ ಪ್ರಕರಣಗಳು; 47 ಮಂದಿ ದಾರುಣ ಸಾವು

Lonavla Tragedy: ಲೊನೋವಲಾದಲ್ಲಿರುವ ಭೂಷಿ ಅಣೆಕಟ್ಟಿನಲ್ಲಿ ಇದುವರೆಗೆ 37 ದುರಂತಗಳು ಸಂಭವಿಸಿದ್ದು, ಪ್ರವಾಸಿಗರ ನಿರ್ಲಕ್ಷ್ಯದಿಂದಾಗಿಯೇ ಇಂತದ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಇತ್ತೀಚೆಗೆ ನಡೆದ ದುರಂತ ಕೂಡ ಪ್ರವಾಸಿಗರ ನಿರ್ಲಕ್ಷ್ಯದಿಂದಲೇ ನಡೆದಿದೆ. ಇನ್ನು ಇಂತಹ ದುರಂತಗಳನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಘೋಷಿಸಿದೆ. ಅದೂ ಅಲ್ಲದೇ ಮೃತ ಕುಟುಂಬಕ್ಕೆ ತಲಾ 5ಲಕ್ಷ ರೂ. ಪರಿಹಾರ ನೀಡಿದೆ.

VISTARANEWS.COM


on

Lonalva Tragedy
Koo

ಮುಂಬೈ: ಮುಂಬೈ ಸಮೀಪದ ಲೋನಾವಾಲಾ(Lonavla Tragedy)ದಲ್ಲಿ ಉಕ್ಕಿ ಹರಿಯುತ್ತಿದ್ದ ಜಲಪಾತದ ಮಧ್ಯದಲ್ಲಿ ನಿಂತಿದ್ದ ಪುರುಷ, ಮಹಿಳೆ ಮತ್ತು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ನೀರಿನಲ್ಲಿ ಕೊಚ್ಚಿಹೋಗಿರುವ ಘಟನೆ ನಾಲ್ಕು ದಿನಗಳ ಹಿಂದೆ ನಡೆದಿತ್ತು. ಆದರೆ ಇದೇ ಜಾಗದಲ್ಲಿ ಕಳೆದ ಏಳು ವರ್ಷಗಳಲ್ಲಿ ಇಂತಹದ್ದೇ ಘಟನೆಗಳು ಹಲವು ಬಾರಿ ನಡೆದಿದ್ದು, ಬರೋಬ್ಬರಿ 47 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಲೊನೋವಲಾದಲ್ಲಿರುವ ಭೂಷಿ ಅಣೆಕಟ್ಟಿನಲ್ಲಿ ಇದುವರೆಗೆ 37 ದುರಂತಗಳು ಸಂಭವಿಸಿದ್ದು, ಪ್ರವಾಸಿಗರ ನಿರ್ಲಕ್ಷ್ಯದಿಂದಾಗಿಯೇ ಇಂತದ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಇತ್ತೀಚೆಗೆ ನಡೆದ ದುರಂತ ಕೂಡ ಪ್ರವಾಸಿಗರ ನಿರ್ಲಕ್ಷ್ಯದಿಂದಲೇ ನಡೆದಿದೆ. ಇನ್ನು ಇಂತಹ ದುರಂತಗಳನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಘೋಷಿಸಿದೆ. ಅದೂ ಅಲ್ಲದೇ ಮೃತ ಕುಟುಂಬಕ್ಕೆ ತಲಾ 5ಲಕ್ಷ ರೂ. ಪರಿಹಾರ ನೀಡಿದೆ.

ಮಳೆಗಾಲದಲ್ಲಿ ಈ ಗಿರಿಧಾಮಕ್ಕೆ ಭೇಟಿ ನೀಡುವ ಪ್ರವಾಸಿಗರಂತೆ, ಈ ಕುಟುಂಬವು ಭಾನುವಾರ ಮಧ್ಯಾಹ್ನ ಭೂಷಿ ಅಣೆಕಟ್ಟಿನ ಹಿನ್ನೀರಿನ ಬಳಿಯ ಜಲಪಾತದಲ್ಲಿ ಪಿಕ್ನಿಕ್ ಗೆ ಹೋಗಿತ್ತು. ರಾಪ್ಸೋಡಿಕ್ ಜಲಪಾತದ ಮಧ್ಯದಲ್ಲಿರುವ ಬಂಡೆಯ ಮೇಲೆ ನಿಂತಿದ್ದರು. ಮುಂಜಾನೆಯಿಂದ ಈ ಪ್ರದೇಶದಲ್ಲಿ ಭಾರಿ ಮಳೆ ಬಂದಿದ್ದ ಕಾರಣ ಅಣೆಕಟ್ಟು ಉಕ್ಕಿ ಹರಿದಿತ್ತು. ಇದು ಜಲಪಾತದಲ್ಲಿ ನೀರಿನ ಹರಿವನ್ನು ಹೆಚ್ಚಿಸಿತು. ಕುಟುಂಬದ ಸದಸ್ಯರು ಕೊಚ್ಚಿ ಹೋಗುತ್ತಿದ್ದ ಕ್ಷಣಗಳು ಬೇರೆ ಪ್ರವಾಸಿಗ ಕ್ಯಾಮೆರಾದದಲ್ಲಿ ದಾಖಲಾಗಿದೆ.

ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ, ರಭಸವಾಗಿ ಹರಿಯುವ ನೀರಿನಲ್ಲಿ ಅವರೆಲ್ಲರೂ ಕೊಚ್ಚಿ ಹೋಗಿದ್ದರು. ಅವರು ಸಹಾಯಕ್ಕಾಗಿ ಕಿರುಚಿದರೂ ಅಲ್ಲಿದ್ದವರಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಇತರ ಪ್ರವಾಸಿಗರು ಸಹ ದಡದಲ್ಲಿ ಜಮಾಯಿಸಿ ಸಹಾಯಕ್ಕಾಗಿ ಕೂಗಿದ್ದರು. ರಭಸವಾಗಿ ಹರಿಯುವ ನೀರಿನಿಂದ ಆಗ ಅವರ ರಕ್ಷಣೆಗೆ ಹೋಗಲು ಸಾಧ್ಯವಾಗಲಿಲ್ಲ.

ಪೊಲೀಸರ ಪ್ರಕಾರ, ಪ್ರವಾಸಿಗರು ಜಲಪಾತಕ್ಕೆ ಜಾರಿ ಕೆಳಭಾಗದ ಜಲಾಶಯದಲ್ಲಿ ಮುಳುಗಿದ್ದಾರೆ. ಜಲಪಾತದ ತಳದಲ್ಲಿ ಅವರು ನಿಂತಿದ್ದ ಪಾಚಿ ಬಂಡೆಗಳ ಮೇಲೆ ನಿಂತಿದ್ದ ಕಾರಣ ಅವರಿಗೆ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. ಈ ಅಪಘಾತವು ಜಲಪಾತ ಮತ್ತು ಕೆಳಭಾಗದ ಅಣೆಕಟ್ಟಿನ ಭದ್ರತಾ ವ್ಯವಸ್ಥೆಗಳ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಅದೇ ಸ್ಥಳದಿಂದ ಬಂದ ಮತ್ತೊಂದು ವೀಡಿಯೊದಲ್ಲಿ ನೂರಾರು ಜನರು ಅಣೆಕಟ್ಟಿನ ಅಂಚಿನಲ್ಲಿ ಮತ್ತು ಅದರ ಗೋಡೆಯ ಮೇಲೆ ನಿಂತಿರುವುದು ಕಾಣಬಹುದು. ಪ್ರವಾಸಿಗರು ಪ್ರವಾಹದ ನೀರಿನಲ್ಲಿ ಯಾವುದೇ ಸುರಕ್ಷತೆ ಇಲ್ಲದೆ ಸಂಭ್ರಮಿಸುತ್ತಿರುವುದು ಕಂಡು ಬಂದಿದೆ. ಈ ಪ್ರದೇಶದಲ್ಲಿ ಯಾವುದೇ ಭದ್ರತಾ ವ್ಯವಸ್ಥೆ ಕಂಡುಬಂದಿಲ್ಲ.

ಇದನ್ನೂ ಓದಿ:Uttar Pradesh Politics: ಉತ್ತರಪ್ರದೇಶದಲ್ಲಿ ಬಿಜೆಪಿಗೆ ಹೀನಾಯ ಸೋಲು; ಟಾಸ್ಕ್‌ಫೋರ್ಸ್‌ ವರದಿಯಲ್ಲಿ ಗಂಭೀರ ಅಂಶಗಳು ಬಯಲು

Continue Reading

ದೇಶ

Hathras Stampede: ಹತ್ರಾಸ್‌ ಕಾಲ್ತುಳಿತಕ್ಕೆ ಸಮಾಜಘಾತುಕ ಶಕ್ತಿ ಕಾರಣ ಎಂದ ಭೋಲೇ ಬಾಬಾ

Hathras Stampede: ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಗ್ರಾಮದಲ್ಲಿ ಜುಲೈ 2ರಂದು ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ. ಇದೀಗ ಘಟನೆ ನಡೆದ ಬಳಿಕ ತಲೆ ಮರೆಸಿಕೊಂಡಿರುವ ಸ್ವಯಂಘೋಷಿತ ʼದೇವ ಮಾನವʼ ನಾರಾಯಣ ಸಾಕಾರ್‌ ಹರಿ ಆಲಿಯಾಸ್‌ ಭೋಲೇ ಬಾಬಾ ಇದೀಗ ಘಟನೆಗೆ ಸಮಾಜಘಾತುಕ ಶಕ್ತಿ ಕಾರಣ ಎಂದು ದೂರಿದ್ದಾರೆ. ತಾನು ಸ್ಥಳದಿಂದ ನಿರ್ಗಮಿಸಿದ ಬಹಳ ಸಮಯದ ನಂತರ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.

VISTARANEWS.COM


on

Hathras Stampede
Koo

ಲಖನೌ: ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಗ್ರಾಮದಲ್ಲಿ ಜುಲೈ 2ರಂದು ನಡೆದ ಕಾಲ್ತುಳಿತ (Hathras Stampede) ಪ್ರಕರಣದ ಆಘಾತದಿಂದ ದೇಶ ಇನ್ನೂ ಹೊರ ಬಂದಿಲ್ಲ. ಭೋಲೆ ಬಾಬಾ (Bhole Baba) ಅವರ ಸತ್ಸಂಗ ಕಾರ್ಯಕ್ರಮದಲ್ಲಿ ಈ ದುರಂತ ಸಂಭವಿಸಿದ್ದು, ಸುಮಾರು 121 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ನಡೆದ ಬಳಿಕ ತಲೆ ಮರೆಸಿಕೊಂಡಿರುವ ಸ್ವಯಂಘೋಷಿತ ʼದೇವ ಮಾನವʼ ನಾರಾಯಣ ಸಾಕಾರ್‌ ಹರಿ ಆಲಿಯಾಸ್‌ ಭೋಲೇ ಬಾಬಾ ಇದೀಗ ಘಟನೆಗೆ ಸಮಾಜಘಾತುಕ ಶಕ್ತಿ ಕಾರಣ ಎಂದು ದೂರಿದ್ದಾರೆ.

ಅಜ್ಞಾತ ಸ್ಥಳದಿಂದ ಹೇಳಿಕೆ ಬಿಡುಗಡೆ ಮಾಡಿರುವ ಭೋಲೇ ಬಾಬಾ, ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಜತೆಗೆ ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ತಾನು ಸ್ಥಳದಿಂದ ನಿರ್ಗಮಿಸಿದ ಬಹಳ ಸಮಯದ ನಂತರ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.

ಭೋಲೇ ಬಾಬಾ ಹೇಳಿದ್ದೇನು?

“ನಾನು / ನಾವು ಮೃತರ ಕುಟುಂಬಗಳಿಗೆ ಸಂತಾಪವನ್ನು ಸಂತಾಪ ಸೂಚಿಸುತ್ತಿದ್ದೇವೆ. ಅವರ ಕುಟುಂಬಕ್ಕೆ ನೋವು ಮರೆಸುವ ಶಕ್ತಿ ಲಭಿಸಲಿ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಭು / ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇವೆ” ಎಂದು ಹೇಳಿದ್ದಾರೆ. ಕೆಲವು ಸಮಾಜ ವಿರೋಧಿ ಶಕ್ತಿಗಳು ಸೃಷ್ಟಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ವಕೀಲ ಎ.ಪಿ.ಸಿಂಗ್ ಅವರಲ್ಲಿ ವಿನಂತಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಪ್ರಾಥಮಿಕ ವರದಿಯಲ್ಲಿ ಏನಿದೆ?

ʼʼ80 ಸಾವಿರ ಜನರಿಗಾಗಿ ಅನುಮತಿ ಪಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಭೋಲೆ ಬಾಬಾ ಮಧ್ಯಾಹ್ನ 12.30ರ ಸುಮಾರಿಗೆ ಸತ್ಸಂಗ ಪೆಂಡಾಲ್‌ಗೆ ಆಗಮಿಸಿದ್ದರು. ಕಾರ್ಯಕ್ರಮವು 1 ಗಂಟೆ ನಡೆಯಿತು. ನಂತರ ಮಧ್ಯಾಹ್ನ 1.40ರ ಸುಮಾರಿಗೆ ಭೋಲೆ ಬಾಬಾ ಪೆಂಡಾಲ್‌ನಿಂದ ಹೊರಬಂದರು” ಎಂದು ವರದಿ ತಿಳಿಸಿದೆ.

ʼʼಭೋಲೆ ಬಾಬಾ ಹೊರಡುವ ವೇಳೆ ವೇಳೆ ಲಕ್ಷಾಂತರ ಮಂದಿ ಅವರ ಪಾದ ಮುಟ್ಟಿ, ಅವರು ಮೆಟ್ಟಿದ ನೆಲದ ಮಣ್ಣನ್ನು ತೆಗೆದುಕೊಳ್ಳಲು ಓಡಿ ಹೋಗಿದ್ದಾರೆ. ಹಾಗೆ ಓಡಿ ಹೋಗುವ ಭರದಲ್ಲಿ ಕಾಲ್ತುಳಿತ ಉಂಟಾಗಿದೆ. ಒಬ್ಬರನ್ನೊಬ್ಬರು ತುಳಿದುಕೊಂಡು ಮುಂದೆ ಸಾಗಿದ್ದು ಹಾಗೂ ಚರಂಡಿಯಲ್ಲಿ ಬಿದ್ದಿದ್ದು ಸಾವಿನ ಸಂಖ್ಯೆ ಜಾಸ್ತಿಯಾಗಲು ಕಾರಣ” ಎಂದು ತನಿಖೆಯ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Hathras Stampede: ಹತ್ರಾಸ್‌ ಕಾಲ್ತುಳಿತ- FIRನಲ್ಲಿ ಭೋಲೇ ಬಾಬಾನ ಹೆಸರೇ ಇಲ್ಲ!

ಕಾಲ್ತುಳಿತದಿಂದ ಮೃತಪಟ್ಟವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ. ಘಟನೆ ಬಗ್ಗೆ ಈಗಾಗಲೇ ತನಿಖೆ ಆರಂಭವಾಗಿದೆ. ಬುಧವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ ಮತ್ತು ಗಾಯಾಳುಗಳನ್ನು ಸಂತೈಸಿದ್ದಾರೆ. ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮೃತರ ಮತ್ತು ಗಾಯಗೊಂಡವರ ಕುಟುಂಬಕ್ಕೆ ಕ್ರಮವಾಗಿ 2 ಲಕ್ಷ ರೂ. ಮತ್ತು 50 ಸಾವಿರ ರೂ. ಪರಿಹಾರ ಧನವನ್ನು ಈಗಾಗಲೇ ಘೋಷಿಸಲಾಗಿದೆ.

Continue Reading
Advertisement
drivers protest
ಪ್ರಮುಖ ಸುದ್ದಿ6 mins ago

Drivers Protest: ಆಟೋ, ಕ್ಯಾಬ್ ಚಾಲಕರಿಂದ ದಿಢೀರ್‌ ರಸ್ತೆ ತಡೆ, ಸಾರಿಗೆ ಇಲಾಖೆ ಕಚೇರಿಗೆ ಮುತ್ತಿಗೆ, ಸಂಚಾರ ಅಸ್ತವ್ಯಸ್ತ

Viral News
ವೈರಲ್ ನ್ಯೂಸ್29 mins ago

Viral News: ಇವನು ಅಂತಿಂತಾ ಕಳ್ಳನಲ್ಲ…ಮನೆ ಎಲ್ಲಾ ದೋಚಿ, ಲೆಟರ್‌ ಬರೆದಿಟ್ಟು ಕ್ಷಮೆ ಕೇಳ್ತಾನೆ!

Chikkaballapura News
ಚಿಕ್ಕಬಳ್ಳಾಪುರ38 mins ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

Team India
ಕ್ರೀಡೆ50 mins ago

Team India: ಟೀಮ್‌ ಇಂಡಿಯಾ ಆಟಗಾರರನ್ನು ಸನ್ಮಾನಿಸಿದ ಪ್ರಧಾನಿ ಮೋದಿ

Bhole Baba
Latest55 mins ago

Hathras Case: ಭೋಲೆ ಬಾಬಾ ಇರುತ್ತಿದ್ದುದು ಫೈವ್‌ ಸ್ಟಾರ್‌ ಆಶ್ರಮದಲ್ಲಿ! ಅವರಿಗಿದೆ ಅಪಾರ ಆಸ್ತಿ!

Team India victory parade
ಪ್ರಮುಖ ಸುದ್ದಿ58 mins ago

Team India victory parade: ಸಂಜೆ 5ರಿಂದ 7ರವರೆಗೆ ಮುಂಬಯಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ರೋಡ್ ಶೋ; ನೇರ ಪ್ರಸಾರ ವೀಕ್ಷಣೆ ಹೇಗೆ?

karnataka Rain
ಮಳೆ1 hour ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Yuva Rajkumar Shreedevi Divorce Application case
ಸ್ಯಾಂಡಲ್ ವುಡ್1 hour ago

Yuva Rajkumar: ಶ್ರೀದೇವಿ-ಯುವರಾಜ್ ವಿಚ್ಛೇದನ: ಆಗಸ್ಟ್ 23ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ

Job Alert
ಉದ್ಯೋಗ1 hour ago

Job Alert: 6,128 ಬ್ಯಾಂಕ್ ಕ್ಲರ್ಕ್‌ ಹುದ್ದೆಯ ಅವಕಾಶ; ಬೇಗ ಅರ್ಜಿ ಸಲ್ಲಿಸಿ

heart attack death
ಪ್ರಮುಖ ಸುದ್ದಿ1 hour ago

Heart Attack: ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಎಳೇ ಜೀವ ಬಲಿ; ಈ ಸಲ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Chikkaballapura News
ಚಿಕ್ಕಬಳ್ಳಾಪುರ38 mins ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ1 hour ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ2 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ3 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ2 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ3 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ4 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು4 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ5 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ5 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

ಟ್ರೆಂಡಿಂಗ್‌