ಫ್ರಾನ್ಸ್‌ ಅಧ್ಯಕ್ಷರಾಗಿ ಇಮಾನ್ಯುಯೆಲ್‌ ಮ್ಯಾಕ್ರಾನ್‌ ಪುನರಾಯ್ಕೆ - Vistara News

ವಿದೇಶ

ಫ್ರಾನ್ಸ್‌ ಅಧ್ಯಕ್ಷರಾಗಿ ಇಮಾನ್ಯುಯೆಲ್‌ ಮ್ಯಾಕ್ರಾನ್‌ ಪುನರಾಯ್ಕೆ

ಫ್ರಾನ್ಸ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ತೀವ್ರ ಬಲಪಂಥೀಯ ಲೀ ಪೆನ್‌ ಅವರನ್ನು ಹಿಂದಿಕ್ಕಿ ಇಮಾನ್ಯುಯೆಲ್‌ ಮ್ಯಾಕ್ರಾನ್‌ ಪುನರಾಯ್ಕೆಯಾಗಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ಯಾರಿಸ್‌: ಫ್ರಾನ್ಸ್‌ ದೇಶ ಮುಂದಿನ ಐದು ವರ್ಷಗಳಿಗೆ ಅಧ್ಯಕ್ಷರನ್ನಾಗಿ ಹಾಲಿ ಅಧ್ಯಕ್ಷ ಇಮಾನ್ಯುಯೆಲ್‌ ಮ್ಯಾಕ್ರಾನ್‌ ಅವರನ್ನು ಪುನರಾಯ್ಕೆ ಮಾಡಿದೆ.

44 ವರ್ಷ ವಯಸ್ಸಿನ ಮ್ಯಾಕ್ರಾನ್‌ ಅವರಿಗೆ ತೀವ್ರ ಬಲಪಂಥೀಯರಾದ ಲೀ ಪೆನ್‌ ಚುನಾವಣಾ ಕಣದಲ್ಲಿ ತೀವ್ರ ಪೈಪೋಟಿ ನೀಡಿದ್ದರು. ರಾಜಕೀಯವಾಗಿ ನಡುಪಂಥೀಯರಾದ ಮ್ಯಾಕ್ರಾನ್‌ ಅವರಿಗೆ 58.55% ಹಾಗೂ ಲೀ ಪೆನ್‌ ಅವರಿಗೆ 41.5% ಮತಗಳು ದೊರೆತಿವೆ.
ʼʼನನ್ನನ್ನು ಬೆಂಬಲಿಸಲು, ಬಲಪಂಥೀಯ ಆಡಳಿತವನ್ನು ತಡೆಯಲು ನನಗೆ ಮತ ಹಾಕಿದವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಇನ್ನು ಮುಂದೆ ನಾನು ಒಂದು ಬಣದ ಅಭ್ಯರ್ಥಿಯಲ್ಲ, ಎಲ್ಲರ ಅಧ್ಯಕ್ಷʼʼ ಎಂದು ಮ್ಯಾಕ್ರಾನ್‌ ಹೇಳಿದ್ದಾರೆ.
ಲೀ ಪೆನ್‌ ಆಗಮನದ ಬಗ್ಗೆ ಹೂಡಿಕೆದಾರರು ಚಿಂತಿತರಾಗಿದ್ದರು. ಲೀ ಪೆನ್‌ ಅವರು ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರ ಬಗ್ಗೆ ಮೆಚ್ಚುಗೆ ಹೊಂದಿದ್ದ ವ್ಯಕ್ತಿಯಾಗಿದ್ದು, ಅವರ ಗೆಲುವು ಯುರೋಪ್‌ ಒಕ್ಕೂಟದಲ್ಲಿ ಕೋಲಾಹಲದ ಸಂಭಾವ್ಯತೆ ತಂದಿಟ್ಟಿತ್ತು. ಮ್ಯಾಕ್ರಾನ್‌ ಗೆಲವಿನಿಂದ ಹೂಡಿಕೆದಾರರು ಹಾಗೂ ಯುರೋಪ್‌ ಒಕ್ಕೂಟ ಸಮಾಧಾನದ ನಿಟ್ಟುಸಿರು ಬಿಟ್ಟಿದೆ.

ಮ್ಯಾಕ್ರಾನ್‌ ಅವರ ಈ ಹಿಂದಿನ ಆಡಳಿತಾವಧಿ ಹಲವು ಕ್ಷೋಭೆಗಳಿಗೆ ಸಾಕ್ಷಿಯಾಗಿತ್ತು. ಕೊರೊನಾ ವೈರಸ್‌ ಹಾವಳಿ, ಬೀದಿ ಪ್ರತಿಭಟನೆಗಳು, ಮುಸ್ಲಿಂ ಮೂಲಭೂತವಾದದ ವಿರುದ್ಧ ಅಸಹನೆ, ಹಿಜಾಬ್‌ ನಿಷೇಧದ ಪ್ರತಿಧ್ವನಿಗಳು, ಹಣದುಬ್ಬರ ಮತ್ತು ಏರುತ್ತಿರುವ ಬೆಲೆಗಳು ಇದಕ್ಕೆ ಸಾಕ್ಷಿಯಾಗಿದ್ದವು. ಪ್ರಸ್ತುತ ಹಳೆಯ ಆಡಳಿತದ ರಾಜಕೀಯ ರೀತಿನೀತಿ ಮುಂದುವರಿಯಲಿವೆ. ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಸೇರಿದಂತೆ ವಿಶ್ವನಾಯಕರು ಮ್ಯಾಕ್ರಾನ್‌ ಅವರಿಗೆ ಅಭಿನಂದನೆ ಹೇಳಿದ್ದಾರೆ.

ಯಾರು ಈ ಮ್ಯಾಕ್ರಾನ್?‌

ಮ್ಯಾಕ್ರಾನ್ 1977ರ ಡಿಸೆಂಬರ್ 21ರಂದು ಉತ್ತರ ಫ್ರಾನ್ಸ್‌ನ ಅಮಿಯೆನ್ಸ್‌ನಲ್ಲಿ ಜನಿಸಿದರು. ಅವರ ಪೋಷಕರಿಬ್ಬರೂ ವೈದ್ಯರು, ಇವರು ಮೂವರು ಮಕ್ಕಳಲ್ಲಿ ಹಿರಿಯ. ಅವರ ಬಾಲ್ಯ ಪಿಯಾನೋ ಪಾಠಗಳು, ಕ್ರೀಡೆ, ವಸತಿ ಸ್ಕೂಲ್, ಸ್ಕೀಯಿಂಗ್ ರಜಾದಿನಗಳು ಮತ್ತು ವಿದೇಶ ಪ್ರವಾಸಗಳಿಂದ ಸಮೃದ್ಧವಾಗಿತ್ತು. ಪ್ರತಿಭಾವಂತ ವಿದ್ಯಾರ್ಥಿ ಮ್ಯಾಕ್ರಾನ್ ತಮ್ಮ 16ನೇ ವಯಸ್ಸಿನಲ್ಲಿ ಫ್ರೆಂಚ್ ಭಾಷೆಯ ಕೌಶಲ್ಯಕ್ಕಾಗಿ ರಾಷ್ಟ್ರೀಯ ಬಹುಮಾನ ಗೆದ್ದರು.

ಅಮಿಯೆನ್ಸ್‌ನ ಖಾಸಗಿ ಕ್ಯಾಥೋಲಿಕ್ ಶಾಲೆ ಲಾ ಪ್ರಾವಿಡೆನ್ಸ್‌ನಲ್ಲಿ ಅಧ್ಯಯನ ಮಾಡಿದ ನಂತರ, ಮ್ಯಾಕ್ರಾನ್‌ನ ಪೋಷಕರು ತಮ್ಮ ಹದಿಹರೆಯದ ಮಗನನ್ನು ಕಲಿಯಲು ಪ್ಯಾರಿಸ್‌ಗೆ ಕಳುಹಿಸಿದರು. ಅದಕ್ಕೆ ಕಾರಣ ಅವರ ಪ್ರೇಯಸಿಯಿಂದ ದೂರ ಇರಲಿ ಅಂತ! ಆ ಪ್ರೇಯಸಿಯಾದರೋ ಮ್ಯಾಕ್ರಾನ್‌ಗಿಂತ 24 ವರ್ಷ ದೊಡ್ಡವಳು ಮತ್ತು ಮ್ಯಾಕ್ರಾನ್‌ನ ಥಿಯೇಟರ್‌ ಟೀಚರ್‌ ಆಗಿದ್ದವಳು! ಆದರೆ ಹೆತ್ತವರು ಎಷ್ಟು ಪ್ರಯತ್ನಿಸಿದರೂ ಇವರಿಬ್ಬರೂ ಕೆಲವು ವರ್ಷಗಳ ಬಳಿಕ ಮದುವೆಯಾದರು! ಬ್ರಿಗೆಟ್ಟೆ ಟ್ರಾನೆಕ್ಸ್‌ ಎಂಬ ಹೆಸರಿನ ಈಕೆಗೆ ಮೊದಲ ಮದುವೆಯಿಂದ ಮೂವರು ಮಕ್ಕಳಿದ್ದಾರೆ. ಮ್ಯಾಕ್ರಾನ್‌ಗೆ ಮಕ್ಕಳಿಲ್ಲ.

ಇದನ್ನೂ ಓದಿ: Explainer: ಭಾರತದ ಮಿಲಿಟರಿ ವೆಚ್ಚ ರಷ್ಯಾಕ್ಕಿಂತಲೂ ಹೆಚ್ಚು!

ಪ್ಯಾರಿಸ್‌ಗೆ ಹೋದ ಬಳಿಕ ನಾಂಟೇರೆ ಯೂನಿವರ್ಸಿಟಿಯಲ್ಲಿ ಫಿಲಾಸಫಿ ಪದವಿ ಪಡೆದ ಮ್ಯಾಕ್ರಾನ್‌, ಅಲ್ಲಿನ ಸಾರ್ವಜನಿಕ ಸೇವೆಗೆ ಸೇರಿಕೊಂಡರು. 2012ರಲ್ಲಿ ಆಗಿನ ಅಧ್ಯಕ್ಷ ಪ್ರಾಂಕ್ವಾ ಹಾಲೆಂಡೆ ಜೊತೆಗೆ ಸೇರಿಕೊಂಡರು, ಅವರ ಸಂಪುಟದಲ್ಲಿ ಸಚಿವರಾದರು. 2016ರಲ್ಲಿ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಹಾಲೆಂಡೆ ವಿರುದ್ಧವೇ ಬಂಡಾಯ ಎದ್ದು, ತಮ್ಮದೇ ಪಕ್ಷವನ್ನು (ಎನ್‌ ಮಾರ್ಷ್)‌ ಸ್ಥಾಪಿಸಿ, ಚುನಾವಣೆಗೆ ನಿಂತು ಅಧ್ಯಕ್ಷರಾಗಿ ಆರಿಸಿ ಬಂದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Killer Python: ಮಹಿಳೆಯನ್ನು ಜೀವಂತವಾಗಿ ನುಂಗಿದ ಹೆಬ್ಬಾವು! ಹೊಟ್ಟೆ ಸೀಳಿ ಹೊರ ತೆಗೆದರು!

45 ವರ್ಷದ ಮಹಿಳೆಯೊಬ್ಬರನ್ನು ಸುಮಾರು 16 ಅಡಿ ಉದ್ದದ ಹೆಬ್ಬಾವು (Killer Python) ಜೀವಂತವಾಗಿ ನುಂಗಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ಮಹಿಳೆ ಮನೆಗೆ ಹಿಂದಿರುಗದೇ ಇದ್ದಾಗ ಅನುಮಾನಗೊಂಡ ಪತಿ ಗ್ರಾಮಸ್ಥರ ನೆರವಿನಿಂದ ಮಹಿಳೆಯ ಹುಡುಕಾಟದಲ್ಲಿ ತೊಡಗಿದ್ದರು.

VISTARANEWS.COM


on

By

Killer Python
Koo

ಇಂಡೋನೇಷ್ಯಾ: ನಾಪತ್ತೆಯಾದ 45 ವರ್ಷದ ಮಹಿಳೆಯೊಬ್ಬರು (women) ಶವವಾಗಿ ಮೂರು ದಿನಗಳ ಬಳಿಕ ಹೆಬ್ಬಾವಿನ (Killer Python) ಹೊಟ್ಟೆಯೊಳಗೆ ಪತ್ತೆಯಾಗಿರುವ ಘಟನೆ ಇಂಡೋನೇಷ್ಯಾದಲ್ಲಿ (Indonesian) ನಡೆದಿದೆ. ಮಹಿಳೆಯ ಪತಿ ಸೇರಿದಂತೆ ದಕ್ಷಿಣ ಸುಲವೆಸಿ ಪ್ರಾಂತ್ಯದ ಕಲೆಂಪಂಗ್ ಗ್ರಾಮದ ನಿವಾಸಿಗಳು ಸುಮಾರು 16 ಅಡಿ ಉದ್ದದ ಹೆಬ್ಬಾವಿನೊಳಗೆ (python) ಮಹಿಳೆ ಇರುವುದನ್ನು ಪತ್ತೆ ಹಚ್ಚಿದ್ದಾರೆ.

ಮಧ್ಯ ಇಂಡೋನೇಷ್ಯಾದಲ್ಲಿ ಹೆಬ್ಬಾವು 45 ವರ್ಷದ ಫರೀದಾ ಅವರನ್ನು ಸಂಪೂರ್ಣವಾಗಿ ನುಂಗಿತ್ತು. ಅದರ ಹೊಟ್ಟೆಯಲ್ಲಿ ಫರೀದಾ ಅವರ ಶವ ಪತ್ತೆಯಾಗಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ನಾಲ್ಕು ಮಕ್ಕಳ ತಾಯಿಯಾಗಿರುವ ಫರೀದಾ ಗುರುವಾರ ರಾತ್ರಿ ನಾಪತ್ತೆಯಾಗಿದ್ದರು. ಹೀಗಾಗಿ ಅವರ ಪತಿ ಮತ್ತು ಮಕ್ಕಳು ಸಾಕಷ್ಟು ಹುಡುಕಾಡಿದ್ದಾರೆ. ಎಲ್ಲೂ ಪತ್ತೆಯಾಗದ ಹಿನ್ನೆಲೆಯಲ್ಲಿ ಗ್ರಾಮದ ಮುಖ್ಯಸ್ಥ ಸುರ್ದಿ ರೋಸಿ ಎಎಫ್‌ಪಿಗೆ ಮಾಹಿತಿ ನೀಡಿದ್ದಾರೆ. ಮಹಿಳೆ ನಾಪತ್ತೆಯಾದ ಸ್ಥಳದಲ್ಲಿ ಮಹಿಳೆಯ ವಸ್ತುಗಳು ಕಂಡು ಬಂದಿದೆ. ಇದರಿಂದ ಅನುಮಾನಗೊಂಡ ಆಕೆಯ ಪತಿ ಮತ್ತು ಗ್ರಾಮಸ್ಥರು ಆ ಪ್ರದೇಶವನ್ನು ಹುಡುಕಿದರು. ಆಗ ಅವರಿಗೆ ದೊಡ್ಡ ಹೊಟ್ಟೆಯ ಹೆಬ್ಬಾವೊಂದು ಕಂಡು ಬಂದಿದೆ.

ಅವರು ಹೆಬ್ಬಾವಿನ ಹೊಟ್ಟೆಯನ್ನು ಸೀಳಿದಾಗ ತಕ್ಷಣ ಫರೀದಾ ಅವರ ತಲೆ ಗೋಚರಿಸಿದೆ ಮತ್ತು ಹಾವಿನೊಳಗೆ ಫರೀದಾ ಸಂಪೂರ್ಣ ಬಟ್ಟೆ ಧರಿಸಿದ ಸ್ಥಿತಿಯಲ್ಲೇ ಇರುವುದು ಕಂಡುಬಂದಿದೆ. ಇಂತಹ ಘಟನೆಗಳನ್ನು ಅತ್ಯಂತ ಅಪರೂಪವೆಂದು ಪರಿಗಣಿಸಲಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಂಡೋನೇಷ್ಯಾದಲ್ಲಿ ಹೆಬ್ಬಾವುಗಳು ಹಲವಾರು ಜನರನ್ನು ಸಂಪೂರ್ಣ ನುಂಗಿರುವ ಪ್ರಕರಣಗಳು ನಡೆದಿವೆ.

ಕಳೆದ ವರ್ಷ ಆಗ್ನೇಯ ಸುಲವೆಸಿಯ ಟಿನಾಂಗ್ಜಿಯಾ ಜಿಲ್ಲೆಯ ನಿವಾಸಿಗಳು ಎಂಟು ಮೀಟರ್ ಹೆಬ್ಬಾವನ್ನು ಕೊಂದಾಗ ಅದು ಹಳ್ಳಿಯೊಂದರಲ್ಲಿ ರೈತರೊಬ್ಬರನ್ನು ಕತ್ತು ಹಿಸುಕಿ ತಿಂದಿರುವುದು ಕಂಡುಬಂದಿದೆ.

ಇದನ್ನೂ ಓದಿ: Road Accident : ವಾಕಿಂಗ್‌ ಹೊರಟಿದ್ದ ವೃದ್ಧೆಗೆ ಬೈಕ್‌ ಡಿಕ್ಕಿ; ಕ್ಷಣದಲ್ಲೇ ಹಾರಿಹೋಯ್ತು ಪ್ರಾಣ

2018 ರಲ್ಲಿ ಆಗ್ನೇಯ ಸುಲವೆಸಿಯ ಮುನಾ ಪಟ್ಟಣದಲ್ಲಿ 54 ವರ್ಷದ ಮಹಿಳೆ ಏಳು ಮೀಟರ್ ಹೆಬ್ಬಾವಿನೊಳಗೆ ಶವವಾಗಿ ಪತ್ತೆಯಾಗಿದ್ದರು. ಅದಕ್ಕೂ ಮೊದಲು ಪಶ್ಚಿಮ ಸುಲವೆಸಿಯ ರೈತರೊಬ್ಬರು ತಾಳೆ ಎಣ್ಣೆ ತೋಟದಲ್ಲಿ ಕಾಣೆಯಾಗಿದ್ದು, ನಾಲ್ಕು ಮೀಟರ್ ಉದ್ದದ ಹೆಬ್ಬಾವು ಅವರನ್ನು ಜೀವಂತವಾಗಿ ನುಂಗಿತ್ತು.

ದೇವರ ದರ್ಶನ ಮಾಡಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಯತ್ನ; ಒಬ್ಬನ ಸಾವು

ಕೌಟುಂಬಿಕ ಸಮಸ್ಯೆಯಿಂದಾಗಿ ಒಂದೇ ಕುಟುಂಬದ ನಾಲ್ವರು ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದರಲ್ಲಿ ಒಬ್ಬರು ಮೃತಪಟ್ಟಿದ್ದು, ಮೂವರು ತೀವ್ರ ಅಸ್ವಸ್ಥಗೊಂಡಿದ್ದರು. ಈ ಮಲೆಮಹದೇಶ್ವರ ಬೆಟ್ಟ ವ್ಯಾಪ್ತಿಯ ತಾಳಬೆಟ್ಟದಲ್ಲಿ ಘಟನೆ ನಡೆದಿದೆ.

ಚಂದಗಾಲು ಗ್ರಾಮದ ಮಹದೇವನಾಯಕ (65) ಮೃತರು. ಅಸ್ವಸ್ಥಗೊಂಡ ಮಹದೇವನಾಯಕನ ಪತ್ನಿ ಗೌರಮ್ಮ(60), ರಿಷಿತಾ (21), ಲೀಲಾವತಿ (45) ಎಂಬವರನ್ನು ಮೈಸೂರಿನ ಕೆಆರ್‌ನಗರ ತಾಲೂಕಿನ ಚಂದಗಾಲು ಗ್ರಾಮಸ್ಥರು ಎಂದು ತಿಳಿದು ಬಂದಿದೆ.

ಮಹದೇಶ್ವರ ಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆದು ವಾಪಸ್ ಬರುವಾಗ ತಾಳ ಬೆಟ್ಟದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಹದೇವನಾಯಕ ವಿಷ ಸೇವಿಸಿದ ಕೂಡಲೇ ಒದ್ದಾಡಿ ಮೃತಪಟ್ಟಿದ್ದಾರೆ. ಇತ್ತ ಗೌರಮ್ಮ, ಲೀಲಾವತಿ, ರಿಷಿತಾ ವಿಷ ಸೇವನೆ ಮಾಡಿದ್ದಾರೆ. ಆದರೆ ದೇಹದಲ್ಲಿ ಉರಿ ಕಾಣಿಸಿಕೊಂಡು ಜೋರಾಗಿ ಕೂಗಿಕೊಂಡು ನರಳಾಡಿದ್ದಾರೆ.

ಈ ವೇಳೆ ತಾಳ ಬೆಟ್ಟದಲ್ಲಿದ್ದ ಸ್ಥಳೀಯರು ಕೂಡಲೇ ಅವರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು. ಮೂವರು ಮಹಿಳೆಯರಿಗೆ ಚಿಕಿತ್ಸೆ ಮುಂದುವರಿದಿದೆ. ಈ ಕುರಿತು ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

Continue Reading

ವಿದೇಶ

Israel-Hamas Conflict: ಹಮಾಸ್‌ ಉಗ್ರರ ಸೆರೆಯಲ್ಲಿದ್ದ ನಾಲ್ವರ ರಕ್ಷಣೆ; 265 ದಿನಗಳ ನರಕಯಾತನೆ ಬಳಿಕ ತಾಯ್ನಾಡಿಗೆ ವಾಪಾಸ್‌

Israel-Hamas Conflict:ರಕ್ಷಿಸಲ್ಪಟ್ಟ ಒತ್ತೆಯಾಳುಗಳನ್ನು ನೋವಾ ಅರ್ಗಾಮನಿ(25ವರ್ಷ), ಅಲ್ಮೋಗ್‌ ಮೀರ್‌ ಜಾನ್‌ (21ವರ್ಷ), ಆಂಡ್ರೆ ಕೊಜ್ಲೋವ್‌ (27ವರ್ಷ) ಹಾಗೂ ಶ್ಲೋಮಿ ಝಿವ್‌ (40ವರ್ಷ) ಎಂದು ಗುರುತಿಸಲಾಗಿದೆ. ಇವರನ್ನು ಹಮಾಸ್‌ ಉಗ್ರರು 2023ರ ಅಕ್ಟೋಬರ್‌ 7ರಂದು ಸೂಪರ್ನೋವಾ ಸಂಗೀತ ರಸಮಂಜರಿ ಕಾರ್ಯಕ್ರಮದ ವೇಳೆ ಅಪಹರಿಸಿಕೊಂಡು ಹೋಗಿರುವುದಾಗಿ ದ ಟೈಮ್ಸ್‌ ಆಫ್‌ ಇಸ್ರೇಲ್‌ ವರದಿ ಮಾಡಿದೆ.

VISTARANEWS.COM


on

Israel-Hamas Conflict
Koo

ಇಸ್ರೇಲ್‌: ಹಮಾಸ್‌ ಉಗ್ರರು ಗಾಜಾ ಪಟ್ಟಿಯಲ್ಲಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ನಾಲ್ವರು ಇಸ್ರೇಲ್‌(Israel-Hamas Conflict) ಪ್ರಜೆಗಳನ್ನು ರಕ್ಷಿಸಲಾಗಿದೆ. ಇಸ್ರೇಲ್‌ ರಕ್ಷಣಾ ಪಡೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ನಾಲ್ವರನ್ನು ರಕ್ಷಿಸಿ ತಮ್ಮ ದೇಶಕ್ಕೆ ಮರಳಿ ತರುವಲ್ಲಿ ಯಶಸ್ವಿಯಾಗಿದೆ. ದುರಾದೃಷ್ಟವಶಾತ್‌ ಈ ರಕ್ಷಣಾ ಕಾರ್ಯಾಚಣೆ ವೇಳೆ ಒಬ್ಬ ಇಸ್ರೇಲ್‌ ಯೋಧ ಹುತಾತ್ಮನಾಗಿದ್ದಾರೆ.

ರಕ್ಷಿಸಲ್ಪಟ್ಟ ಒತ್ತೆಯಾಳುಗಳನ್ನು ನೋವಾ ಅರ್ಗಾಮನಿ(25ವರ್ಷ), ಅಲ್ಮೋಗ್‌ ಮೀರ್‌ ಜಾನ್‌ (21ವರ್ಷ), ಆಂಡ್ರೆ ಕೊಜ್ಲೋವ್‌ (27ವರ್ಷ) ಹಾಗೂ ಶ್ಲೋಮಿ ಝಿವ್‌ (40ವರ್ಷ) ಎಂದು ಗುರುತಿಸಲಾಗಿದೆ. ಇವರನ್ನು ಹಮಾಸ್‌ ಉಗ್ರರು 2023ರ ಅಕ್ಟೋಬರ್‌ 7ರಂದು ಸೂಪರ್ನೋವಾ ಸಂಗೀತ ರಸಮಂಜರಿ ಕಾರ್ಯಕ್ರಮದ ವೇಳೆ ಅಪಹರಿಸಿಕೊಂಡು ಹೋಗಿರುವುದಾಗಿ ದ ಟೈಮ್ಸ್‌ ಆಫ್‌ ಇಸ್ರೇಲ್‌ ವರದಿ ಮಾಡಿದೆ.

ಇದೀಗ ಬರೋಬ್ಬರಿ 265 ದಿನಗಳ ಬಳಿಕ ತಮ್ಮ ತಾಯ್ನಾಡಿಗೆ ಮರಳಿರುವ ನಾಲ್ವರ ಕುಟುಂಬಸ್ಥರ ಖುಷಿಗೆ ಪಾರವೇ ಇಲ್ಲದಂತಾಗಿದೆ. ಇನ್ನು ರಕ್ಷಿಸಲ್ಪಿಟ್ಟಿರುವ ನಾಲ್ವರು ಒತ್ತೆಯಾಳುಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತಾವು ಆರೋಗ್ಯವಾಗಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ. ಇವರನ್ನು ಆರೋಗ್ಯ ತಪಾಸಣೆಗಾಗಿ ಆರೋಗ್ಯ ಕೇಂದ್ರಗಳಿಗೆ ಕಳುಹಿಸಲಾಗಿದೆ.

ಇನ್ನು ಈ ಬಗ್ಗೆ ಇಸ್ರೇಲ್‌ ಅಧಿಕೃತ ಮಾಹಿತಿ ನೀಡಿದ್ದು, ಗಾಜಾದಲ್ಲಿ ಸೆರೆಯಾಗಿದ್ದ ನಾಲ್ವರನ್ನು ನಾವು ಸುರಕ್ಷಿತವಾಗಿ ರಕ್ಷಿಸಿದ್ದೇವೆ. ಕಾರ್ಯಾಚರಣೆ ವೇಳೆ ಕೆಲವು ಸಾವು ನೋವುಗಳು ಸಂಭವಿಸಿದೆ. ಇನ್ನು ರಕ್ಷಿಸಲ್ಪಟ್ಟ ನಾಲ್ವರನ್ನು ಕಳೆದ ವರ್ಷ ಹಮಾಸ್‌ ಉಗ್ರರು ಸಂಗೀತ ಕಾರ್ಯಕ್ರಮವೊಂದರಿಂದ ಅಪಹರಿಸಿದ್ದರು. ಕಳೆದ ವರ್ಷ ಅಕ್ಟೋಬರ್‌ 7ರಂದು ನೋವಾ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದ ಮೇಲೆ ದಾಳಿ ನಡೆಸಿದ್ದ ಹಮಾಸ್‌ ಉಗ್ರರು ಹಲವರನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ ಎನ್ನಲಾಗಿದೆ. ಬರೋಬ್ಬರಿ 251 ಇಸ್ರೇಲಿ ಪ್ರಜೆಗಳು ಹಮಾಸ್‌ ಉಗ್ರ ಕೈಗೆ ಸಿಲುಕಿಕೊಂಡಿದ್ದು, ಅವರಲ್ಲಿ 116ಜನ ಸದ್ಯ ಗಾಜಾದಲ್ಲಿದ್ದಾರೆ. ಯೋಧರು ಸೇರಿದಂತೆ ಒಟ್ಟು 41 ಜನ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದಕ್ಕೆ ತನ್ನ ಬೆರಳನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ ಮೋದಿ ‘ಭಕ್ತ’!

Continue Reading

ವಿದೇಶ

Pakistan: ಇಡೀ ಜಗತ್ತೇ ಮೋದಿಗೆ ಅಭಿನಂದಿಸಿದರೂ ಪಾಕಿಸ್ತಾನ ಮಾತ್ರ ಇನ್ನೂ Congratulations ಎಂದಿಲ್ಲ!

Pakistan: ಪಾಕ್‌ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರೆ ಮುಮ್ತಾಜ್‌ ಜಹ್ರಾ ಬಲೂಚ್‌ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ತಮ್ಮ ನಾಯಕನನ್ನು ಆಯ್ಕೆ ಮಾಡುವ ಅಧಿಕಾ ಭಾರತೀಯರಿಗಿದೆ. ಹೀಗಿರುವಾಗ ಅದರ ಬಗ್ಗೆ ಪಾಕಿಸ್ತಾನಕ್ಕೆ ಯಾವುದೇ ರೀತಿಯ ಅಭಿಪ್ರಾಯ ಇಲ್ಲ ಎಂದು ಹೇಳಿದ್ದಾರೆ.ಭಾರತ ಸೇರಿದಂತೆ ನೆರೆಯ ರಾಷ್ಟ್ರಗಳ ಜೊತೆ ಉತ್ತಮ ಸಂಬಂಧ ಹೊಂದಬೇಕೆಂಬುದಷ್ಟೇ ಪಾಕಿಸ್ತಾನದ ಆಶಯ. ಅದೂ ಅಲ್ಲದೇ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಪಾಕಿಸ್ತಾನದ ಗುರಿ ಎಂದು ಹೇಳಿದ್ದಾರೆ.

VISTARANEWS.COM


on

Pakistan
Koo

ಇಸ್ಲಮಾಬಾದ್‌: ಈ ಬಾರಿಯ ಲೋಕಸಭೆ ಚುನಾವಣೆ(Lok Sabha Election 2024)ಯಲ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ನರೇಂದ್ರ ಮೋದಿ(PM Narendra Modi)ಗೆ ದೇಶ ವಿದೇಶಗಳ ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಮೋದಿಗೆ ವಿದೇಶಗಳ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ. ಅದೂ ಅಲ್ಲದೇ ನಾಳೆ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮದಲ್ಲೂ ಅವರು ಭಾಗಿಯಾಗಲಿದ್ದಾರೆ. ಆದರೆ ನೆರೆಯ ರಾಷ್ಟ್ರ ಪಾಕಿಸ್ತಾನ(Pakistan) ಮಾತ್ರ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿಲ್ಲ. ಇದು ಎಲ್ಲ ಕಡೆ ಬಹಳ ಚರ್ಚೆ ಆಗುತ್ತಿದೆ. ಇದರ ನಡುವೆ ಈ ಬಗ್ಗೆ ಪಾಕಿಸ್ತಾನವೇ ಪ್ರತಿಕ್ರಿಯಿಸಿದೆ.

ಪಾಕ್‌ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರೆ ಮುಮ್ತಾಜ್‌ ಜಹ್ರಾ ಬಲೂಚ್‌ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ತಮ್ಮ ನಾಯಕನನ್ನು ಆಯ್ಕೆ ಮಾಡುವ ಅಧಿಕಾ ಭಾರತೀಯರಿಗಿದೆ. ಹೀಗಿರುವಾಗ ಅದರ ಬಗ್ಗೆ ಪಾಕಿಸ್ತಾನಕ್ಕೆ ಯಾವುದೇ ರೀತಿಯ ಅಭಿಪ್ರಾಯ ಇಲ್ಲ ಎಂದು ಹೇಳಿದ್ದಾರೆ.ಭಾರತ ಸೇರಿದಂತೆ ನೆರೆಯ ರಾಷ್ಟ್ರಗಳ ಜೊತೆ ಉತ್ತಮ ಸಂಬಂಧ ಹೊಂದಬೇಕೆಂಬುದಷ್ಟೇ ಪಾಕಿಸ್ತಾನದ ಆಶಯ. ಅದೂ ಅಲ್ಲದೇ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಪಾಕಿಸ್ತಾನದ ಗುರಿ ಎಂದು ಹೇಳಿದ್ದಾರೆ.

ಭಾರತದಲ್ಲಿ ಇನ್ನೂ ಹೊಸ ಸರ್ಕಾರ ಅಧಿಕೃತವಾಗಿ ಅಧಿಕಾರಕ್ಕೆ ಬಂದಿಲ್ಲ. ಹೀಗಿರುವಾಗ ಭಾರತದ ಪ್ರಧಾನಿಗೆ ಅಭಿನಂದನೆ ಸಲ್ಲಿಸಲು ಇದು ಸಕಾಲವಲ್ಲ. ಅದೂ ಅಲ್ಲದೇ ಭಾರತದ ಚುನಾವಣಾ ಪ್ರಕ್ರಿಯೆ ಬಗ್ಗೆ ಪ್ರತಿಕ್ರಿಯೆ ನೀಡಲು ಪಾಕಿಸ್ತಾನಕ್ಕೆ ಏನೂ ಉಳಿದಿಲ್ಲ. ಜಮ್ಮು-ಕಾಶ್ಮೀರ ಬಿಕ್ಕಟ್ಟು ಸೇರಿದಂತೆ ಭಾರತದ ಜೊತೆಗಿರುವ ಎಲ್ಲಾ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಪಾಕಿಸ್ತಾನ ಬಯಸುತ್ತದೆ ಎಂದು ಅವರು ತಿಳಿಸಿದ್ದಾರೆ.

ನರೇಂದ್ರ ಮೋದಿ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಬೆನ್ನಲ್ಲೇ ವಿಶ್ವದ ಹಲವು ನಾಯಕರಿಂದ ಅಭಿನಂದನೆ ಮಹಾಪೂರಗಳು ಹರಿದುಬಂದಿವೆ. ಮಾಲ್ಡೀವಿಯನ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಮತ್ತು ಇಟಾಲಿಯನ್ ಅಧ್ಯಕ್ಷೆ ಜಾರ್ಜಿಯಾ ಮೆಲೋನಿ ಸೇರಿದಂತೆ ನೆರೆಯ ರಾಷ್ಟ್ರಗಳಾದ ಭೂತಾನ್‌, ನೇಪಾಳಗಳಿಂದ ನಾಯಕರು ಟ್ವೀಟ್‌ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಹೀಗಾಗಿ ನಾಳೆ ಪ್ರಧಾನಿ ಮೋದಿಯ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ದಕ್ಷಿಣ ಏಷ್ಯಾದ ಪ್ರಮುಖ ನಾಯಕರು ಉಪಸ್ಥಿತರಿರಲಿದ್ದಾರೆ. ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಇಂದೇ ದೆಹಲಿಗೆ ಬಂದಿಳಿದಿದ್ದಾರೆ.

ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ಕಚೇರಿಯ ಮಾಧ್ಯಮ ವಿಭಾಗವು ಭಾನುವಾರದ ಕಾರ್ಯಕ್ರಮಕ್ಕೆ ಹಾಜರಾಗಲು ಅವರು ಆಹ್ವಾನವನ್ನು ಸ್ವೀಕರಿಸಿದ್ದಾರೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಪ್ರಧಾನಿ ಮೋದಿಯವರನ್ನು ಅಭಿನಂದಿಸಿದ ಮೊದಲ ವಿದೇಶಿ ನಾಯಕರಲ್ಲಿ ಒಬ್ಬರು, ಬಾಂಗ್ಲಾದೇಶ ಮಾಧ್ಯಮಗಳ ಪ್ರಕಾರ, ಕಾರ್ಯಕ್ರಮಕ್ಕೆ ಒಂದು ದಿನ ಮುಂಚಿತವಾಗಿ ಅಂದರೆ ಇಂದು ದೆಹಲಿಗೆ ಆಗಮಿಸುತ್ತಾರೆ.

ಇದನ್ನೂ ಓದಿ:Rahul Gandhi: ಷೇರುಪೇಟೆಯಲ್ಲಿ ಭಾರಿ ಹಗರಣವಾಗಿದೆ ಎಂದಿದ್ದ ರಾಹುಲ್ ಗಾಂಧಿಗೆ ಐದೇ ದಿನದಲ್ಲಿ 25 ಲಕ್ಷ ರೂ. ಲಾಭ!

Continue Reading

ವಿದೇಶ

Drown In River: ರಷ್ಯಾದಲ್ಲಿ ಘೋರ ದುರಂತ; ನದಿಯಲ್ಲಿ ಮುಳುಗಿ ನಾಲ್ವರು ಭಾರತೀಯ ವಿದ್ಯಾರ್ಥಿಗಳ ಸಾವು

Drown In River: ರಷ್ಯಾದ ಸೈಂಟ್‌ ಪೀಟರ್ಸ್‌ಬರ್ಗ್‌ ಬಳಿ ನದಿಯಲ್ಲಿ ಮುಳುಗಿ ನಾಲ್ವರು ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಇವರು ವೆಲಿಕಿ ನೊವ್ಗೊರೊಡ್ ನಗರದ ಸಮೀಪದಲ್ಲಿರುವ ನೊವ್ಗೊರೊಡ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಅಧ್ಯಯನ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ವೋಲ್ಖೋವ್ ನದಿಗೆ ಬಿದ್ದ ವಿದ್ಯಾರ್ಥಿನಿಯನ್ನು ರಕ್ಷಿಸಲು ಆಕೆಯ ನಾಲ್ವರು ಸ್ನೇಹಿತರು ಯತ್ನಿಸಿದ ವೇಳೆ ಈ ದುರಂತ ನಡೆದಿದೆ.

VISTARANEWS.COM


on

Drown In Rive
Koo

ಮಾಸ್ಕೋ: ರಷ್ಯಾದಲ್ಲಿ ಘೋರ ದುರಂತವೊಂದು ನಡೆದಿದ್ದು, ನದಿಯಲ್ಲಿ ಮುಳುಗಿ ನಾಲ್ವರು ಭಾರತೀಯ ಮೂಲದ ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ (Drown In River). ಓರ್ವ ವಿದ್ಯಾರ್ಥಿಯನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸೈಂಟ್‌ ಪೀಟರ್ಸ್‌ಬರ್ಗ್‌ (St. Petersburg) ಬಳಿ ನದಿಯಲ್ಲಿ ಈ ಅವಘಡ ಸಂಭವಿಸಿದೆ ಎಂದು ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಶುಕ್ರವಾರ ದೃಢಪಡಿಸಿದೆ. ಶವಗಳನ್ನು ಆದಷ್ಟು ಬೇಗ ಭಾರತಕ್ಕೆ ಕಳುಹಿಸಲು ರಷ್ಯಾದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದೆ.

ʼʼಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮತ್ತು ಇಬ್ಬರು ವಿದ್ಯಾರ್ಥಿನಿಯ ಮೃತಪಟ್ಟಿದ್ದು, ಇವರ ವಯಸ್ಸು ಅಂದಾಜು 18-20 ವರ್ಷ. ಇವರು ವೆಲಿಕಿ ನೊವ್ಗೊರೊಡ್ ನಗರದ ಸಮೀಪದಲ್ಲಿರುವ ನೊವ್ಗೊರೊಡ್ ಸ್ಟೇಟ್ ಯೂನಿವರ್ಸಿಟಿ(Novgorod State University)ಯಲ್ಲಿ ಅಧ್ಯಯನ ಮಾಡುತ್ತಿದ್ದರುʼʼ ಎಂದು ಮೂಲಗಳು ವರದಿ ಮಾಡಿವೆ.

ದುರಂತ ನಡೆದಿದ್ದು ಹೇಗೆ?

ವೋಲ್ಖೋವ್ ನದಿಗೆ ಬಿದ್ದ ವಿದ್ಯಾರ್ಥಿನಿಯನ್ನು ರಕ್ಷಿಸಲು ಆಕೆಯ ನಾಲ್ವರು ಸ್ನೇಹಿತರು ಯತ್ನಿಸಿದ ವೇಳೆ ಈ ದುರಂತ ನಡೆದಿದೆ. ಈ ಪೈಕಿ ಓರ್ವನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸದ್ಯ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಷ್ಯಾದ ಮಾಧ್ಯಮಗಳು ಹೇಳಿವೆ. “ಸಾಧ್ಯವಾದಷ್ಟು ಬೇಗ ಶವಗಳನ್ನು ಸಂಬಂಧಿಕರಿಗೆ ಕಳುಹಿಸಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಅಪಾಯದಿಂದ ಪಾರಾದ ವಿದ್ಯಾರ್ಥಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಮಾಸ್ಕೋದಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಅಮೆರಿಕದಲ್ಲಿ ಮೂವರು ಭಾರತೀಯ ವಿದ್ಯಾರ್ಥಿಗಳ ಸಾವು

ಕೆಲವು ದಿನಗಳ ಹಿಂದೆ ಅಮೆರಿಕದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೂವರು ಭಾರತೀಯ ಮೂಲದ ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಜಾರ್ಜಿಯಾದ ಆಲ್ಫಾರೆಟ್ಟಾ ಬಳಿ ನಡೆದ ಕಾರು ಅಪಘಾತದಲ್ಲಿ ಮೂವರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದರು.

ಆರ್ಯನ್‌ ಜೋಷಿ, ಶ್ರಿಯಾ ಅವಸರಲ ಮತ್ತು ಅನ್ವಿ ಶರ್ಮಾ ಮೃತ ವಿದ್ಯಾರ್ಥಿಗಳು. ಈ ಪೈಕಿ ಆರ್ಯನ್‌ ಜೋಷಿ, ಶ್ರೀಯಾ ಅವಸರಳ ಸ್ಥಳದಲ್ಲೇ ಅಸುನೀಗಿದ್ದರೆ, ಅನ್ವಿ ಶರ್ಮಾ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಗಾಯಯೊಂಡವರನ್ನು ಋತ್ವಿಕ್‌ ಸೋಮೆಪಳ್ಳಿ ಹಾಗೂ ಮೊಹಮ್ಮದ್‌ ಲಿಯಾಕತ್‌ ಎಂದು ಗುರುತಿಸಲಾಗಿತ್ತು.

ಈ ಐವರು ಆಲ್ಫಾರೆಟ್ಟಾ ಹೈಸ್ಕೂಲ್‌ ಮತ್ತು ಜಾರ್ಜಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು. ಇವರಿದ್ದ ಕಾರು ಅತಿ ವೇಗದಲ್ಲಿ ಸಂಚರಿಸುತ್ತಿದ್ದುದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದರು. ಚಾಲಕನ ನಿಯಂತ್ರಣಕ್ಕೆ ಸಿಗದೆ ಮೇ 14ರಂದು ಕಾರು ಆಲ್ಫಾರೆಟ್ಟಾ ಬಳಿ ಅಪಘಾತಕ್ಕೀಡಾಗಿತ್ತು. ʼʼಚಾಲಕನ ನಿಯಂತ್ರಣ ತಪ್ಪಿದ ನಂತರ ವೇಗವಾಗಿ ಚಲಿಸುತ್ತಿದ್ದ ಕಾರು ಪಲ್ಟಿಯಾಗಿ ತಲೆಕೆಳಗಾಗಿ ನಿಂತಿತ್ತುʼʼ ಎಂದಯ ಪ್ರತ್ಯಕ್ಷದರ್ಶಿಯೊಬ್ಬರು ಘಟನೆಯ ತೀವ್ರತೆಯನ್ನು ವಿವರಿಸಿದ್ದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳು

ಇವರೆಲ್ಲ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿದ್ದರು. ಶ್ರೀಯಾ ಅವಸರಳ ಯುಜಿಎ ಶಿಕಾರಿ (UGA Shikaari) ಡ್ಯಾನ್ಸ್‌ ತಂಡದ ಸದಸ್ಯೆಯಾಗಿದ್ದರು. ಇನ್ನು ಅನ್ವಿ ಶರ್ಮಾ ಯುಜಿಎ ಕಲಾಕಾರ್‌ (UGA Kalakaar) ಮತ್ತು ಕ್ಯಾಪೆಲ್ಲ ಗ್ರೂಪ್‌ (Capella Group)ನ ಗಾಯಕಿಯಾಗಿ ಗುರುತಿಸಿಕೊಂಡಿದ್ದರು. ನೀವೊಮ್ಮ ಅದ್ಭುತ ಡ್ಯಾನ್ಸರ್‌. ನಿಮ್ಮ ಕಣ್ಮರೆಯ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲʼʼ ಎಂದು ಶಿಕಾರಿ ತಂಡ ಆಘಾತ ಸೂಚಿಸಿತ್ತು. ಕಲಾಕಾರ್‌ ಗ್ರೂಪ್‌ ಕೂಡ ಅನ್ವಿ ಶರ್ಮಾಗೆ ಶ್ರದ್ಧಾಂಜಲಿ ಸಲ್ಲಿಸಿತ್ತು.

ಆರ್ಯನ್‌ ಜೋಷಿ ಪದವಿ ಪಡೆಯಲು ಸಿದ್ಧತೆ ನಡೆಸಿಕೊಂಡಿದ್ದರು. ಆಲ್ಫಾರೆಟ್ಟಾ ಹೈ ಕ್ರಿಕೆಟ್‌ ಟೀಮ್‌ (Alpharetta High cricket team) ತನ್ನ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಆರ್ಯನ್‌ ಜೋಷಿ ನಿಧನಕ್ಕೆ ನೋವು ತೋಡಿಕೊಂಡು, ʼʼಆರ್ಯನ್‌ ಜೋಷಿ ನಮ್ಮ ಬಹು ದೊಡ್ಡ ಬೆಂಬಲಿಗರಾಗಿದ್ದರು ಮತ್ತು ತಮ್ಮ ತಂಡದ ಬೆನ್ನೆಲುಬಾಗಿದ್ದರು. ನಮ್ಮ ತಂಡದ ಗೆಲುವಿನಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದು. ಅವರ ಅಗಲಿಕೆ ನಮ್ಮ ಪಾಲಿಗೆ ತುಂಬಲಾರದ ನಷ್ಟʼʼ ಎಂದು ಬರೆದುಕೊಂಡಿತ್ತು.

ಇದನ್ನೂ ಓದಿ: Student Murder: ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಕೊಲೆ; 9ನೇ ಘಟನೆ

Continue Reading
Advertisement
Modi 3.0 Cabinet
ದೇಶ7 mins ago

Modi 3.0 Cabinet: ನಡ್ಡಾ To ಎಚ್‌ಡಿಕೆ ;‌ ಮೋದಿ ಸಂಪುಟದಲ್ಲಿ ಸ್ಥಾನ ಪಡೆದ ಹೊಸ ಮುಖಗಳಿವು

Modi 3.0 Cabinet
ದೇಶ18 mins ago

Modi 3.0 Cabinet: 30 ಕ್ಯಾಬಿನೆಟ್‌ ದರ್ಜೆ, 5 ಸ್ವತಂತ್ರ, 36 ಸಂಸದರಿಗೆ ರಾಜ್ಯ ಖಾತೆ; ಇಲ್ಲಿದೆ ಕಂಪ್ಲೀಟ್‌ ಲಿಸ್ಟ್

V Somanna profile
ಪ್ರಮುಖ ಸುದ್ದಿ59 mins ago

V Somanna profile : ಅಂದು ಜನತಾ ಬಜಾರ್‌ನಲ್ಲಿ ಸೇಲ್ಸ್‌ಮ್ಯಾನ್‌; ಇಂದು ಕೇಂದ್ರ ಸಚಿವ! ವಿ ಸೋಮಣ್ಣ ರಾಜಕೀಯ ಹಾದಿ ಕುತೂಹಲಕರ

Terror Attack
ಕ್ರೈಂ1 hour ago

Terror Attack: ಕಾಶ್ಮೀರದಲ್ಲಿ ಹಿಂದೂ ಯಾತ್ರಿಗಳಿದ್ದ ಬಸ್‌ ಮೇಲೆ ಉಗ್ರರ ದಾಳಿ; 10 ಸಾವು

Ind vs pak
ಪ್ರಮುಖ ಸುದ್ದಿ2 hours ago

IND VS PAK : ಭಾರತ- ಪಾಕಿಸ್ತಾನ ಪಂದ್ಯ ಅರ್ಧ ಗಂಟೆ ತಡ; ಟಾಸ್ ಗೆದ್ದ ಪಾಕ್​ನಿಂದ ಫೀಲ್ಡಿಂಗ್ ಆಯ್ಕೆ

Narendra Modi
ದೇಶ2 hours ago

Narendra Modi: ರಾಜಕೀಯದಾಚೆ ಕವಿ, ಗಾಳಿಪಟ ಪ್ರೇಮಿ; ಮೋದಿ ಬಗ್ಗೆ ನಿಮಗೆ ಗೊತ್ತಿರದ 20 ಸಂಗತಿ ಇಲ್ಲಿವೆ

Bus Accident
ಕ್ರೈಂ2 hours ago

Bus Accident: ಪಂಕಜಾ ಮುಂಡೆ ಸೋತರೆ ಸಾಯುತ್ತೇನೆ ಎಂದು ವಿಡಿಯೊ ಮಾಡಿದ್ದ ವ್ಯಕ್ತಿ ಅಪಘಾತದಲ್ಲಿ ಸಾವು!

HD Kumaraswamy
ಕರ್ನಾಟಕ2 hours ago

HD Kumaraswamy Profile: ಹರದನಹಳ್ಳಿಯಿಂದ ದೆಹಲಿವರೆಗೆ; ಕುಮಾರಸ್ವಾಮಿ ಸಾಗಿಬಂದ ದಾರಿ ಹೀಗಿದೆ

Narendra Modi
ದೇಶ3 hours ago

Narendra Modi: ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ; 3.0 ಯುಗಾರಂಭ!

Narendra Modi 3.0
ಪ್ರಮುಖ ಸುದ್ದಿ3 hours ago

Narendra Modi 3.0 : ಮೋದಿ ಪ್ರಮಾಣ ವಚನ; ಬಿರಿಯಾನಿ, ಹೋಳಿಗೆ ಹಂಚಿದ ಕರುನಾಡಿನ ಅಭಿಮಾನಿಗಳು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ2 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ6 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ6 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌