ಬಿಬಿಎಂಪಿ ಚುನಾವಣೆ: ಕೆಂಪೇಗೌಡ ಪೌರ ಸಭಾಂಗಣಕ್ಕೆ ಹೈಟೆಕ್ ಸ್ಪರ್ಶ - Vistara News

ಬೆಂಗಳೂರು

ಬಿಬಿಎಂಪಿ ಚುನಾವಣೆ: ಕೆಂಪೇಗೌಡ ಪೌರ ಸಭಾಂಗಣಕ್ಕೆ ಹೈಟೆಕ್ ಸ್ಪರ್ಶ

ವಾರ್ಡ್‌ ಮರುವಿಂಗಡಣೆ ಹಾಗೂ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆಯನ್ನು 8 ವಾರಗಳೊಳಗೆ ಪೂರ್ಣಗೊಳಿಸಲು ಇತ್ತೀಚೆಗೆ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿತ್ತು.

VISTARANEWS.COM


on

BBMP
ಕಟ್ಟಡ ನವೀಕರಣದ ನೀಲಿನಕ್ಷೆ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್‌ ನೀಡಿರುವ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿ ಚುನಾವಣಾ ಸಿದ್ಧತೆ ಗರಿಗೆದರಿದೆ. ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ 198 ರಿಂದ 243ಕ್ಕೆ ಏರಿಕೆಯಾಗಿರುವುದರಿಂದ ಎಲ್ಲ ಸದಸ್ಯರು ಹಾಗೂ ಜನಪ್ರತಿನಿಧಿಗಳಿಗೆ ಆಸನ ವ್ಯವಸ್ಥೆ ಮಾಡಲು ಹೊಸ ಕೌನ್ಸಿಲ್ ಹೌಸ್ ನಿರ್ಮಾಣ ಮಾಡಲಾಗುತ್ತಿದೆ.

ಕೆಂಪೇಗೌಡ ಪೌರ ಸಭಾಂಗಣಕ್ಕೆ ಹೈಟೆಕ್ ಸ್ಪರ್ಶ ನೀಡಲು ಬಿಬಿಎಂಪಿ ಯೋಜನೆ ರೂಪಿಸಿದೆ. ಆಸನಗಳ ಸಾಮರ್ಥ್ಯ ಹೆಚ್ಚಳ, ಇನ್ನಿತರ ಮೂಲಸೌಕರ್ಯ ಒದಗಿಸಲು ಕೌನ್ಸಿಲ್ ಕಟ್ಟಡ ನವೀಕರಣಕ್ಕೆ ಪಾಲಿಕೆ ಅಡಳಿತಾಧಿಕಾರಿಯಿಂದ ಹಸಿರು ನಿಶಾನೆ ತೋರಲಾಗಿದೆ. ಕೌನ್ಸಿಲ್ ಕಟ್ಟಡ ಮರು ವಿನ್ಯಾಸದಲ್ಲಿ ಹೈಟೆಕ್ ತಂತ್ರಜ್ಞಾನ ಅಳವಡಿಕೆಗೆ ಅಧಿಕಾರಿಗಳು ಮುಂದಾಗಿದ್ದಾರೆ.

ಇದನ್ನೂ ಓದಿ | ಬಿಬಿಎಂಪಿ ಚುನಾವಣೆ ನಡೆಸಲು ಅಗತ್ಯವಿರುವ ಪ್ರಕ್ರಿಯೆ 8 ವಾರದಲ್ಲಿ ಮುಗಿಸಿ: ಸುಪ್ರೀಂಕೋರ್ಟ್‌ ಸೂಚನೆ

ಸೆಪ್ಟೆಂಬರ್‌ನಲ್ಲಿ ಪಾಲಿಕೆ ಚುನಾವಣೆ ನಡೆಯುವ ನಿರೀಕ್ಷೆ ಇಟ್ಟುಕೊಂಡು ಕೌನ್ಸಿಲ್ ಹಾಲ್ ನೀಲಿ ನಕ್ಷೆ ಸಿದ್ಧಮಾಡಲಾಗಿದೆ. ₹10 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದೆ. ಇದುವರೆಗೆ ಕೌನ್ಸಿಲ್ ಹಾಲ್‌ನಲ್ಲಿ 270 ಮಂದಿ ಕೂಲು ಆಸನ ವ್ಯವಸ್ಥೆ ಇತ್ತು. ಈ ಬಾರಿ ವಾರ್ಡ್‌ ಸದಸ್ಯರು 243, ಎಂಎಲ್‌ಎ 28, ಎಂಎಲ್‌ಸಿ 6, ಎಂಪಿ 3, ಸಚಿವರು 4, ನಾಮ ನಿರ್ದೇಶನ ಸದಸ್ಯರು 25, ಅಧಿಕಾರಿಗಳು 55 ಆಸನ ಸೇರಿ ಒಟ್ಟು 364 ಮಂದಿ ಕೂರುವಂತಹ ಹಾಲ್ ನಿರ್ಮಾಣ ಮಾಡಲಾಗುತ್ತದೆ.

ಪ್ರತಿ ಆಸನವನ್ನೂ ಟೀಕ್ ಮರದಲ್ಲಿ ನಿರ್ಮಾಣ ಮಾಡಿ, ಪ್ರತಿ ಸದಸ್ಯರ ಆಸನದಲ್ಲಿ ಮೈಕ್ ಅಳವಡಿಕೆ ಮಾಡಲಾಗುತ್ತದೆ. ಸೌಂಡ್ ಪ್ರೂಫ್ ಸಭಾಂಗಣ, ಎಲ್ಇಡಿ, ಸಿಸಿ ಕ್ಯಾಮರಾ ಅಳವಡಿಕೆ, ಕೌನ್ಸಿಲ್‌ ಸಭೆ ವೀಕ್ಷಿಸಲು ಸಾರ್ವಜನಿಕರು ಹಾಗೂ ಮಾಧ್ಯದವರಿಗೆ ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಕೌನ್ಸಿಲ್‌ ಕಟ್ಟಡ ಈಗ 330.15 ಚದರ ಮೀಟರ್‌ ವಿಸ್ತೀರ್ಣ ಹೊಂದಿದೆ. ನವೀಕರಣದ ನಂತರ ಕಟ್ಟಡದ ವಿಸ್ತೀರ್ಣ 382.83 ಚದರ ಮೀಟರ್‌ಗೆ ವಿಸ್ತರಣೆಯಾಗಲಿದೆ.

2 ವರ್ಷಗಳ ಹಿಂದೆಯೇ ಪಾಲಿಕೆ ಆಡಳಿತ ಅವಧಿ ಮುಗಿದಿದ್ದು, 8 ವಾರಗಳೊಳಗೆ ವಾರ್ಡ್‌ ಮರು ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಸಲು ಸುಪ್ರೀಂಕೋರ್ಟ್‌ ಇತ್ತೀಚೆಗೆ ನಿರ್ದೇಶನ ನೀಡಿತ್ತು. ಜತೆಗೆ ಅಧಿಸೂಚನೆ ಹೊರಬಿದ್ದ ಒಂದು ವಾರದಲ್ಲಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.

ಇದನ್ನೂ ಓದಿ | ರಾಜ್ಯದಲ್ಲಿ ಯಾವುದೇ ಚುನಾವಣೆ ಎದುರಿಸಲು ಬಿಜೆಪಿ ಸಂಪೂರ್ಣ ಸಿದ್ಧ: ನಳಿನ್ ಕುಮಾರ್ ಕಟೀಲ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

MLC Election: ಹೈಕಮಾಂಡ್ ಅಂಗಳದಲ್ಲಿ ಪರಿಷತ್ ಕೈ ಅಭ್ಯರ್ಥಿಗಳ ಆಯ್ಕೆ ಕಸರತ್ತು; ನಾಳೆ ದೆಹಲಿಗೆ ಸಿಎಂ, ಡಿಸಿಎಂ

MLC Election: ಕಾಂಗ್ರೆಸ್‌ಗೆ ಸಿಗುವ 7 ಸ್ಥಾನಗಳಿಗೆ 64ಕ್ಕೂ ಅಧಿಕ ಆಕಾಂಕ್ಷಿಗಳಿಂದ ಲಾಬಿ ನಡೆಯುತ್ತಿದೆ. ಹೀಗಾಗಿ ಅಭ್ಯರ್ಥಿಗಳ ಆಯ್ಕೆ ವಿಚಾರ ಸಿಎಂ, ಡಿಸಿಎಂಗೆ ತಲೆ ನೋವಾಗಿ ಪರಿಣಮಿಸಿದೆ.

VISTARANEWS.COM


on

MLC Election
Koo

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ (MLC Election) ಹಿನ್ನೆಲೆ ಹೈಕಮಾಂಡ್ ಅಂಗಳದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಯುತ್ತಿದೆ. ಇದಕ್ಕಾಗಿ ಮೇ 28ರಂದು ಬೆಳಗ್ಗೆ ದೆಹಲಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದುಬಂದಿದೆ.

ಮೇ 28ರಂದು ಬೆಳಗ್ಗೆ 11ಕ್ಕೆ ವಿಶೇಷ ವಿಮಾನದ ಮೂಲಕ ದೆಹಲಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಪಯಣ ಬೆಳೆಸಲಿದ್ದು, ಮಧ್ಯಾಹ್ನದ ಬಳಿಕ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದು, ಇದಕ್ಕಾಗಿ ನಾಳೆ ದೆಹಲಿಯಲ್ಲೇ ಸಿಎಂ, ಡಿಸಿಎಂ ವಾಸ್ತವ್ಯ ಹೂಡಲಿದ್ದಾರೆ.

ಕಾಂಗ್ರೆಸ್‌ಗೆ ಸಿಗುವ 7 ಸ್ಥಾನಗಳಿಗೆ 64ಕ್ಕೂ ಅಧಿಕ ಆಕಾಂಕ್ಷಿಗಳಿಂದ ಲಾಬಿ ನಡೆಯುತ್ತಿದೆ. ಹೀಗಾಗಿ ಅಭ್ಯರ್ಥಿಗಳ ಆಯ್ಕೆ ವಿಚಾರ ಸಿಎಂ, ಡಿಸಿಎಂಗೆ ತಲೆ ನೋವಾಗಿ ಪರಿಣಮಿಸಿದೆ. ಸಮುದಾಯವಾರು, ಪ್ರಾದೇಶಿಕವಾರು ಪರಿಷತ್ ಸ್ಥಾನ ಹಂಚಿಕೆ ಮಾಡಲು ಹಿರಿಯ ಸಚಿವರಿಂದ ಒತ್ತಾಯ ಕೇಳಿಬಂದಿದೆ. ಒಬಿಸಿ 2, ದಲಿತ 2, ಲಿಂಗಾಯತ 1, ಒಕ್ಕಲಿಗ 1, ಕ್ರಿಶ್ಚಿಯನ್ ಸಮುದಾಯಕ್ಕೆ 1 ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಆದರೆ, ಇನ್ನೂ ಯಾವುದೇ ಸ್ಥಾನಗಳು ಅಂತಿಮವಾಗಿಲ್ಲ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜತೆ ಚರ್ಚಿಸಲು ಸಿಎಂ, ಡಿಸಿಎಂ ತೆರಳಲಿದ್ದಾರೆ.

ಇದನ್ನೂ ಓದಿ | Robert Vadra: “ಮಣಿಶಂಕರ್‌ ಅಯ್ಯರ್‌ ಬಾಯಿ ಬಡುಕ…ಕೇಜ್ರಿವಾಲ್‌ ಅವಕಾಶವಾದಿ”-ರಾಬರ್ಟ್‌ ವಾದ್ರಾ ಅಚ್ಚರಿಯ ಹೇಳಿಕೆ

ವಿಧಾನ ಪರಿಷತ್‌ ಚುನಾವಣೆ: ಖರ್ಗೆ, ಸಿದ್ದು, ಡಿಕೆಶಿ ಆಪ್ತರಿಗೆ ಸ್ಥಾನ ಕೊಡಿಸಲು 2+2+2+1=7 ಫಾರ್ಮುಲಾ; ಏನಿದು?

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ 11 ಸದಸ್ಯರ ಆಯ್ಕೆಗಾಗಿ ನಡೆಯುವ ಚುನಾವಣೆಯು (Karnataka Legislative Council Election) ಕರ್ನಾಟಕ ಕಾಂಗ್ರೆಸ್‌ನಲ್ಲಿ ಬಣಗಳ ಸೃಷ್ಟಿಗೆ ಕಾರಣವಾಗಿದೆ. ಕಾಂಗ್ರೆಸ್‌ ಏಳು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (D K Shivakumar) ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸೇರಿ ಹಲವು ನಾಯಕರ ಆಪ್ತರು ಲಾಬಿ ನಡೆಸುತ್ತಿದ್ದು, ಇದಕ್ಕಾಗಿ ಕಾಂಗ್ರೆಸ್‌ ನಾಯಕರು ಭಿನ್ನಮತವೇ ಬೇಡ ಎಂದು 2+2+2+1=7 ಫಾರ್ಮುಲಾ ಕಂಡು ಹಿಡಿದಿದ್ದಾರೆ ಎಂದು ತಿಳಿದಬಂದಿದೆ.

ಯಾರಿಗೆ ಸ್ಥಾನಗಳನ್ನು ನೀಡಬೇಕು ಎಂಬುದರ ಬಗ್ಗೆ ಗೊಂದಲ ಬಗೆಹರಿಸಿಕೊಳ್ಳುವ ದಿಸೆಯಲ್ಲಿ ಫಾರ್ಮುಲಾ ಕಂಡು ಹಿಡಿಯಲಾಗಿದೆ. ಎರಡು ಸ್ಥಾನ ಸಿದ್ದರಾಮಯ್ಯ ಬಣಕ್ಕೆ, ಎರಡು ಸ್ಥಾನ ಡಿಕೆಶಿ ಬಣಕ್ಕೆ, ಇನ್ನೆರಡು ಸ್ಥಾನ ಮಲ್ಲಿಕಾರ್ಜುನ ಖರ್ಗೆ ಹಾಗೂ ಒಂದು ಸ್ಥಾನವನ್ನು ಕಾಂಗ್ರೆಸ್‌ ಹೈಕಮಾಂಡ್ ತೀರ್ಮಾನಿಸುತ್ತದೆ. ಇನ್ನು ಏಳು ಸ್ಥಾನಗಳಿಗಾಗಿ 50 ಆಕಾಂಕ್ಷಿಗಳು ಸಾಲುಗಟ್ಟಿ ನಿಂತಿದ್ದು, ಯಾರು ಯಾವ ಬಣದಲ್ಲಿದ್ದಾರೆ ಎಂಬುದರ ಮೇಲೆ ಮಣೆ ಹಾಕಲಾಗುತ್ತದೆ ಎಂದು ತಿಳಿದುಬಂದಿದೆ.

ಯಾವ ಸಮುದಾಯಕ್ಕೆ ಯಾವ ನಾಯಕ ಮಣೆ ಹಾಕುತ್ತಿದ್ದಾರೆ? ಯಾರ ಯಾರ ಪರ, ಯಾರು ಲಾಬಿ ಮಾಡುತ್ತಿದ್ದಾರೆ ಎಂಬುದರ ಮಾಹಿತಿ ಹೀಗಿದೆ.

ಸಿದ್ದರಾಮಯ್ಯ
ಯತೀಂದ್ರ ಸಿದ್ದರಾಮಯ್ಯ( ಕುರುಬ), ಕೆ.ಗೋವಿಂದ ರಾಜು ( ಒಕ್ಕಲಿಗ), ಎಚ್.ಎಂ. ರೇವಣ್ಣ ( ಕುರುಬ), ವಿ.ಆರ್. ಸುದರ್ಶನ್ (ಗಾಣಿಗ).

ಡಿ.ಕೆ ಶಿವಕುಮಾರ್
ಸಿಗುವ ಎರಡು ಸ್ಥಾನಕ್ಕೆ ವಿಜಯ್ ಮುಳಗುಂದ್ ( ಬ್ರಾಹ್ಮಣ), ವಿನಯ್ ಕಾರ್ತಿಕ್ (ಒಕ್ಕಲಿಗ), ಬಿ.ಎಲ್. ಶಂಕರ್ (ಒಕ್ಕಲಿಗ) ರಮೇಶ್ ಬಾಬು (ಬಲಿಜ), ಐಶ್ವರ್ಯ ಮಹದೇವ ( ಕುರುಬ), ನಟರಾಜ ಗೌಡ ( ಒಕ್ಕಲಿಗ), ನಲಪಾಡ್ ( ಮುಸ್ಲಿಂ) ಅವರು ಲಾಬಿ ನಡೆಸುತ್ತಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ
ಮುದ್ದುಗಂಗಾಧರ್ (ಖರ್ಗೆ ಆಪ್ತ), ಸೂರಜ್ ಹೆಗ್ಡೆ , ಪುಷ್ಪ ಅಮರನಾಥ (ದಲಿತ), ಮುಂಡರಗಿ ನಾಗರಾಜ್ (ದಲಿತ), ವಿ.ಆರ್. ಸುದರ್ಶನ್ (ಗಾಣಿಗ), ಕರಡಿ ಸಂಗಣ್ಣ (ಲಿಂಗಾಯತ), ಹುಸೇನ್ (ಮುಸ್ಲಿಂ)

ಹೈಕಮಾಂಡ್
ಬೋಸರಾಜು (ಹಾಲಿ ಸಚಿವ)

ದೆಹಲಿಗೆ ತೆರಳಲು ಸಿದ್ದು, ಡಿಕೆಶಿ ತೀರ್ಮಾನ

ಇದನ್ನೂ ಓದಿ: Legislative Council Election: ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ದಿನಾಂಕ ಫಿಕ್ಸ್;‌ ಜೂನ್‌ 13ಕ್ಕೆ ಮತದಾನ

ಕಾಂಗ್ರೆಸ್‌ಗೆ ಲಭಿಸುವ ಏಳು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಕಗ್ಗಂಟಾಗಿರುವ ಹಿನ್ನೆಲೆಯಲ್ಲಿ ಶಾರ್ಟ್‌ ಲಿಸ್ಟ್‌ ಹಿಡಿದುಕೊಂಡು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರು ದೆಹಲಿಗೆ ತೆರಳಲು ತೀರ್ಮಾನಿಸಿದ್ದಾರೆ. ಮೇ 28, 29ರಂದು ದೆಹಲಿಯಲ್ಲಿರಲಿರುವ ಇಬ್ಬರೂ ನಾಯಕರು, ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಲಿದ್ದಾರೆ. ಇದಾದ ಬಳಿಕವೇ ಅಭ್ಯರ್ಥಿಗಳ ಆಯ್ಕೆಯನ್ನು ಘೋಷಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Continue Reading

ಪ್ರಮುಖ ಸುದ್ದಿ

BS Yediyurappa: ಯಡಿಯೂರಪ್ಪ ವಿರುದ್ಧ ಪೋಕ್ಸೊ ಕೇಸ್ ದಾಖಲಿಸಿದ್ದ ಮಹಿಳೆ ಸಾವು

BS Yediyurappa: ಉಸಿರಾಟ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮಹಿಳೆ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧ ನೀಡಿದ ದೂರಿನ ಮೇರೆಗೆ ಮಾರ್ಚ್‌ 14ರಂದು ಪೋಕ್ಸೊ ಪ್ರಕರಣ ದಾಖಲಾಗಿತ್ತು.

VISTARANEWS.COM


on

BS Yediyurappa
Koo

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಪೋಕ್ಸೊ ಕೇಸ್‌ ದಾಖಲಿಸಿದ್ದ ಮಹಿಳೆ ಮೃತಪಟ್ಟಿದ್ದಾರೆ. ಉಸಿರಾಟದ ತೊಂದರೆಯಿಂದ ಹುಳಿಮಾವು ಬಳಿಯ ನ್ಯಾನೋ‌ ಆಸ್ಪತ್ರೆಯಲ್ಲಿ ಮಹಿಳೆ ಮೃತಪಟ್ಟಿದ್ದಾರೆ. ಮಮತಾ ಮೃತ ಮಹಿಳೆ. ಉಸಿರಾಟ ಸಮಸ್ಯೆ ಸಂಬಂಧ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಮಹಿಳೆಯ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಈ ಹಿಂದೆ ಲೈಂಗಿಕ ದೌರ್ಜನ್ಯ ಆಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಎಸ್‌ಐಟಿ ತನಿಖೆಗೆ ವಹಿಸುವಂತೆ ಸಹಕರಿಸಬೇಕು ಎಂದು ಮನವಿ ಮಾಡಲು 2024ರ ಫೆಬ್ರವರಿ 2ರಂದು ಯಡಿಯೂರಪ್ಪನವರ ಮನೆಗೆ ಸಂತ್ರಸ್ತ ಮಗಳ ಜತೆಗೆ ಮಹಿಳೆ ಹೋಗಿದ್ದರು. ಈ ವೇಳೆ ಯಡಿಯೂರಪ್ಪ ಅವರು ತಾಯಿ ಮತ್ತು ಮಗಳ ಜತೆ 9 ನಿಮಿಷಗಳ ಕಾಲ ಮಾತನಾಡಿದ್ದರು ಎನ್ನಲಾಗಿತ್ತು. ಆಗ ಅವರು ಬಾಲಕಿಗೆ ಮತ್ತು ಆಕೆಯ ತಾಯಿಗೆ ಸಾಂತ್ವನ ಹೇಳಿದ್ದರು ಎನ್ನಲಾಗಿತ್ತು. ಆದರೆ ಆ ಬಾಲಕಿಯ ತಾಯಿ ಕೆಲ ದಿನಗಳ ಬಳಿಕ ಯಡಿಯೂರಪ್ಪ ವಿರುದ್ಧವೇ ಆರೋಪ ಮಾಡಿದ್ದರು. ಆದರೆ ಈ ಆರೋಪವನ್ನು ಯಡಿಯೂರಪ್ಪ ಅವರು ಸ್ಪಷ್ಟವಾಗಿ ನಿರಾಕರಿಸಿದ್ದರು. ಈ ಆರೋಪ ದುರುದ್ದೇಶಪೂರಿತ ಎಂದು ಹೇಳಿದ್ದರು. ನಂತರ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.

ಇದನ್ನೂ ಓದಿ | Road Accident: ಭೀಕರ ರಸ್ತೆ ಅಪಘಾತ; ಕೆಕೆಆರ್‌ಟಿಸಿ ಬಸ್‌ ಅಪ್ಪಳಿಸಿ 3 ಬೈಕ್‌ ಸವಾರರು ಬಲಿ

ಸೆಲೆಬ್ರಿಟಿಗಳ ಬಳಿಕ ಈಗ ಬೆಂಗಳೂರು ಶಾಲಾ ವಿದ್ಯಾರ್ಥಿನಿಯರಿಗೆ ಡೀಪ್‌ಫೇಕ್‌ ಕಾಟ; ನಗ್ನ ಫೋಟೋ ವೈರಲ್

deep fake

ಬೆಂಗಳೂರು: ಡೀಪ್‌ಫೇಕ್‌ ತಂತ್ರಜ್ಞಾನದ (Deep fake Technology) ದುರ್ಬಳಕೆ ಎಂದರೆ ಇದುವರೆಗೆ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್‌, ಸಚಿನ್‌ ತೆಂಡೂಲ್ಕರ್‌ ಅವರಂತಹ ಸೆಲೆಬ್ರಿಟಿಗಳು, ನಟಿಯರ ತಿರುಚಿದ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ಎಂದಾಗಿತ್ತು. ಆದರೆ, ಡೀಪ್‌ಫೇಕ್‌ ತಂತ್ರಜ್ಞಾನದ ಕಾವು (Deep fake Scam) ಶಾಲಾ ವಿದ್ಯಾರ್ಥಿಯರಿಗೂ ಎದುರಾಗಿದೆ.

ಸೆಲೆಬ್ರಿಟಿಗಳಿಗೆ ಕಾಡುತ್ತಿದ್ದ ಡೀಪ್‌ಫೇಕ್‌ ಕಾಟವು ಇದೀಗ ಶಾಲಾ ವಿದ್ಯಾರ್ಥಿನಿಯರಿಗೆ ಶುರುವಾಗಿದೆ. ಪ್ರತಿಷ್ಠಿತ ಶಾಲೆಯ ವಿದ್ಯಾರ್ಥಿನಿಯರ ಮಾರ್ಫಿಂಗ್ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪೋಷಕರಲ್ಲಿ ಆತಂಕ ಹೆಚ್ಚಿದೆ.

ಖಾಸಗಿ ಶಾಲೆಯೊಂದರ 9ನೇ ತರಗತಿ ವಿದ್ಯಾರ್ಥಿನಿಯ AI ಅಲ್ಲಿ ರಚನೆಯಾದ ನಗ್ನ ಫೋಟೋ ವೈರಲ್ ಆಗಿದೆ. ಮೇ 24 ರಂದು ಬೆಳಕಿಗೆ ಬಂದ ಪ್ರಕರಣವು ಈಗ ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ 50ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳು ಇದ್ದ ಇನ್ಸ್ಟ್ರಾಗ್ರಾಂನಲ್ಲಿ ಗ್ರೂಪ್‌ವೊಂದು ರಚನೆ ಮಾಡಿದ್ದರು. ಆ ಗ್ರೂಪ್‌ನಲ್ಲಿ ಅನಾಮಧೇಯ ವ್ಯಕ್ತಿಯಿಂದ ವಿದ್ಯಾರ್ಥಿನಿಯರ ಮಾರ್ಫಿಂಗ್ ಫೋಟೋಸ್ ವೈರಲ್ ಆಗಿದೆ. ಆ ವ್ಯಕ್ತಿ ಯಾರು ಎಂಬುದರ ಅರಿವು ಕೂಡ ವಿದ್ಯಾರ್ಥಿನಿಯರಿಗೆ ಇಲ್ಲ.

ಇದನ್ನೂ ಓದಿ | physical Abuse : ಮಗನ ಕಾಮಚೇಷ್ಠೆಗೆ ತಾಯಿ ಸಾಥ್‌; ಬೆತ್ತಲೆ ಫೋಟೊ ತೋರಿ ಬೆದರಿಸುತ್ತಿದ್ದ ಕಾಮುಕರಿಬ್ಬರು ಅರೆಸ್ಟ್‌

ಶಾಲಾ ಗ್ರೂಪ್‌ನಲ್ಲಿ ಇದ್ದಾನೆಂದರೆ ಅವನು ಖಂಡಿತ ವಿದ್ಯಾರ್ಥಿ ಆಗಿರಬಹುದೆಂದು ಶಂಕಿಸಲಾಗಿದೆ. ಈ ವಿಚಾರ ತಿಳಿದ ಕೂಡಲೇ ವಿದ್ಯಾರ್ಥಿನಿಯರು ಕುಗ್ಗಿ ಹೋಗಿದ್ದಾರೆ. ಈಗಾಗಲೇ ವಿದ್ಯಾರ್ಥಿನಿಯರ ಪೋಷಕರು ಸೈಬರ್ ಸೆಲ್‌ಗೆ ದೂರು ನೀಡಿದ್ದಾರೆ. ಡೀಪ್‌ಫೇಕ್ ಕಾಟಕ್ಕೆ ವಿದ್ಯಾರ್ಥಿನಿಯರು ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ.

Continue Reading

ಬೆಂಗಳೂರು

Deep fake Scam : ಸೆಲೆಬ್ರಿಟಿಗಳ ಬಳಿಕ ಈಗ ಬೆಂಗಳೂರು ಶಾಲಾ ವಿದ್ಯಾರ್ಥಿನಿಯರಿಗೆ ಡೀಪ್‌ಫೇಕ್‌ ಕಾಟ; ನಗ್ನ ಫೋಟೋ ವೈರಲ್

Deep fake Scam : ದೇಶದಲ್ಲಿ ನಟಿಯರ ಡೀಪ್‌ಫೇಕ್‌ ವಿಡಿಯೊಗಳು ವೈರಲ್‌ ಆಗಿರುವುದು ತಂತ್ರಜ್ಞಾನದ ದುರ್ಬಳಕೆ ಕುರಿತು ಆತಂಕ ವ್ಯಕ್ತವಾಗುತ್ತಿದೆ. ಈ ನಡುವೆ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಷ್ಠಿತ ಶಾಲೆಗಳ ವಿದ್ಯಾರ್ಥಿನಿಯರಿಗೆ ಡೀಪ್‌ಫೇಕ್‌ ಕಾಟ ಶುರುವಾಗಿದೆ.

VISTARANEWS.COM


on

By

deep fake
Koo

ಬೆಂಗಳೂರು: ಡೀಪ್‌ಫೇಕ್‌ ತಂತ್ರಜ್ಞಾನದ (Deep fake Technology) ದುರ್ಬಳಕೆ ಎಂದರೆ ಇದುವರೆಗೆ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್‌, ಸಚಿನ್‌ ತೆಂಡೂಲ್ಕರ್‌ ಅವರಂತಹ ಸೆಲೆಬ್ರಿಟಿಗಳು, ನಟಿಯರ ತಿರುಚಿದ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ಎಂದಾಗಿತ್ತು. ಆದರೆ, ಡೀಪ್‌ಫೇಕ್‌ ತಂತ್ರಜ್ಞಾನದ ಕಾವು (Deep fake Scam) ಶಾಲಾ ವಿದ್ಯಾರ್ಥಿಯರಿಗೂ ಎದುರಾಗಿದೆ.

ಸೆಲೆಬ್ರಿಟಿಗಳಿಗೆ ಕಾಡುತ್ತಿದ್ದ ಡೀಪ್‌ಫೇಕ್‌ ಕಾಟವು ಇದೀಗ ಶಾಲಾ ವಿದ್ಯಾರ್ಥಿನಿಯರಿಗೆ ಶುರುವಾಗಿದೆ. ಪ್ರತಿಷ್ಠಿತ ಶಾಲೆಯ ವಿದ್ಯಾರ್ಥಿನಿಯರ ಮಾರ್ಫಿಂಗ್ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪೋಷಕರಲ್ಲಿ ಆತಂಕ ಹೆಚ್ಚಿದೆ.

ಖಾಸಗಿ ಶಾಲೆಯೊಂದರ 9ನೇ ತರಗತಿ ವಿದ್ಯಾರ್ಥಿನಿಯ AI ಅಲ್ಲಿ ರಚನೆಯಾದ ನಗ್ನ ಫೋಟೋ ವೈರಲ್ ಆಗಿದೆ. ಮೇ 24 ರಂದು ಬೆಳಕಿಗೆ ಬಂದ ಪ್ರಕರಣವು ಈಗ ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ 50ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳು ಇದ್ದ ಇನ್ಸ್ಟ್ರಾಗ್ರಾಂನಲ್ಲಿ ಗ್ರೂಪ್‌ವೊಂದು ರಚನೆ ಮಾಡಿದ್ದರು. ಆ ಗ್ರೂಪ್‌ನಲ್ಲಿ ಅನಾಮಧೇಯ ವ್ಯಕ್ತಿಯಿಂದ ವಿದ್ಯಾರ್ಥಿನಿಯರ ಮಾರ್ಫಿಂಗ್ ಫೋಟೋಸ್ ವೈರಲ್ ಆಗಿದೆ. ಆ ವ್ಯಕ್ತಿ ಯಾರು ಎಂಬುದರ ಅರಿವು ಕೂಡ ವಿದ್ಯಾರ್ಥಿನಿಯರಿಗೆ ಇಲ್ಲ.

ಶಾಲಾ ಗ್ರೂಪ್‌ನಲ್ಲಿ ಇದ್ದಾನೆಂದರೆ ಅವನು ಖಂಡಿತ ವಿದ್ಯಾರ್ಥಿ ಆಗಿರಬಹುದೆಂದು ಶಂಕಿಸಲಾಗಿದೆ. ಈ ವಿಚಾರ ತಿಳಿದ ಕೂಡಲೇ ವಿದ್ಯಾರ್ಥಿನಿಯರು ಕುಗ್ಗಿ ಹೋಗಿದ್ದಾರೆ. ಈಗಾಗಲೇ ವಿದ್ಯಾರ್ಥಿನಿಯರ ಪೋಷಕರು ಸೈಬರ್ ಸೆಲ್‌ಗೆ ದೂರು ನೀಡಿದ್ದಾರೆ. ಡೀಪ್‌ಫೇಕ್ ಕಾಟಕ್ಕೆ ವಿದ್ಯಾರ್ಥಿನಿಯರು ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ.

ಇದನ್ನೂ ಓದಿ: Dhruva Sarja:  ಧ್ರುವ ಸರ್ಜಾ ಜತೆಗಿದ್ದ ಜಿಮ್ ಟ್ರೈನರ್ ಮೇಲೆ ಮಚ್ಚಿನಿಂದ‌ ಹಲ್ಲೆ?

ಡೀಪ್‌ಫೇಕ್‌ ಬಳಸಿ ಕಂಪನಿಗೆ 200 ಕೋಟಿ ರೂ. ವಂಚಿಸಿದ ದುಷ್ಟರು! ಹೇಗೆ?

ನವದೆಹಲಿ: ಡೀಪ್‌ಫೇಕ್‌ ತಂತ್ರಜ್ಞಾನದ (Deepfake Technology) ದುರ್ಬಳಕೆ ಎಂದರೆ ಇದುವರೆಗೆ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್‌, ಸಚಿನ್‌ ತೆಂಡೂಲ್ಕರ್‌ ಅವರಂತಹ ಸೆಲೆಬ್ರಿಟಿಗಳು, ನಟಿಯರ ತಿರುಚಿದ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ಎಂದಾಗಿತ್ತು. ಆದರೆ, ಡೀಪ್‌ಫೇಕ್‌ ತಂತ್ರಜ್ಞಾನವನ್ನೀಗ ನೂರಾರು ಕೋಟಿ ರೂ. ವಂಚಿಸುವ (Deepfake Scam) ಮಟ್ಟಿಗೆ ದುಷ್ಕರ್ಮಿಗಳು ಬಳಸಿಕೊಳ್ಳುತ್ತಿದ್ದಾರೆ. ಹಾಂಕಾಂಗ್‌ನಲ್ಲಿ (Hong Kong) ಬಹುರಾಷ್ಟ್ರೀಯ ಕಂಪನಿಯೊಂದಕ್ಕೆ ಡೀಪ್‌ಫೇಕ್‌ ಮೂಲಕವೇ ಸುಮಾರು 207 ಕೋಟಿ ರೂ. (25 ದಶಲಕ್ಷ ಡಾಲರ್)‌ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಹಾಗೆಯೇ, ಇದು ಜಗತ್ತಿನ ಅತಿದೊಡ್ಡ ಡೀಪ್‌ಫೇಕ್‌ ವಂಚನೆ (Deepfake Fraud) ಎಂದು ಹೇಳಲಾಗುತ್ತಿದೆ.

ಹೌದು, ಹಾಂಕಾಂಗ್‌ ಮೂಲದ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿಯೊಬ್ಬರಿಗೆ ಡೀಪ್‌ಫೇಕ್‌ ಮೂಲಕ ವಂಚಿಸಿದ ದುಷ್ಕರ್ಮಿಗಳು, ಸುಮಾರು 207 ಕೋಟಿ ರೂಪಾಯಿಯನ್ನು ವಂಚಿಸಿದ್ದಾರೆ. ನೂರಾರು ಕೋಟಿ ರೂ. ವಂಚನೆ ಪ್ರಕರಣ ವಿಶ್ವಾದ್ಯಂತ ಸುದ್ದಿಯಾದರೂ ಇದುವರೆಗೆ ಡೀಪ್‌ಫೇಕ್‌ ತಂತ್ರಜ್ಞಾನದ ಮೂಲಕ ವಂಚಿಸಿದ ದುರುಳರ ಕುರಿತು ಪೊಲೀಸರಿಗೆ ಸ್ವಲ್ಪವೂ ಮಾಹಿತಿ ಲಭ್ಯವಾಗಿಲ್ಲ. ಇದುವರೆಗೆ ಒಬ್ಬನನ್ನೂ ಬಂಧಿಸಲು ಸಾಧ್ಯವಾಗಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ. ಕಳೆದ ಜನವರಿಯಲ್ಲಿಯೇ ಹಗರಣ ಬೆಳಕಿಗೆ ಬಂದರೂ ಇದುವರೆಗೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: Rashmika Mandanna: ಡೀಪ್‌ಫೇಕ್‌ ವಿಡಿಯೊ ಆರೋಪಿ ಬಂಧನ; ಪ್ರತಿಕ್ರಿಯಿಸಿದ ರಶ್ಮಿಕಾ!

ವಂಚನೆ ಮಾಡಿದ್ದು ಹೇಗೆ?

ಹಾಂಕಾಂಗ್‌ ಮೂಲದ ಕಂಪನಿಯ ಹಣಕಾಸು ವಿಭಾಗದ ಉದ್ಯೋಗಿಯೊಬ್ಬರ ಮೊಬೈಲ್‌ಗೆ ಮೆಸೇಜ್‌ ರವಾನೆಯಾಗಿದೆ. ಆ ಮೆಸೇಜ್‌ನಲ್ಲಿ ಉದ್ಯೋಗಿಗೆ ಬ್ರಿಟನ್‌ ಮೂಲದ, ತಾನು ಕೆಲಸ ಮಾಡುವ ಕಂಪನಿಯದ್ದೇ ಮುಖ್ಯ ಹಣಕಾಸು ಅಧಿಕಾರಿ (CFO) ಎಂಬುದಾಗಿ ನಂಬಿಸಲಾಗಿದೆ. ಹಾಂಕಾಂಗ್‌ ಕಂಪನಿಯ ಉದ್ಯೋಗಿಯು ಇದನ್ನು ನಂಬಿದ ಉದ್ಯೋಗಿಯು ಮೆಸೇಜ್‌ನಲ್ಲಿ ಬಂದ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದ್ದಾನೆ. ಆಗ ಕಂಪನಿಯ ಸಿಎಫ್‌ಒ ಎಂದು ಹೇಳಲಾದ ವ್ಯಕ್ತಿ ಜತೆ ವಿಡಿಯೊ ಕಾಲ್‌ ಡಯಲ್‌ ಆಗಿದೆ. ಆಗ ಕಂಪನಿಯ ಉದ್ಯೋಗಿ ಮತ್ತು ಬ್ರಿಟನ್‌ ಮೂಲದ ಸಿಎಫ್‌ಒ ಮಾತುಕತೆ ನಡೆಸಿದ್ದಾರೆ.

ವಿಡಿಯೊ ಕಾಲ್‌ ವೇಳೆ ಕಾನ್ಫರೆನ್ಸ್‌ ಮೂಲಕ ಹಲವು ಉದ್ಯೋಗಿಗಳ ಜತೆ ಮಾತುಕತೆ ನಡೆಸಿದಂತೆ ಸಿಎಫ್‌ಒ ಎಂದು ಹೇಳಿಕೊಂಡವನು ನಾಟಕ ಮಾಡಿದ್ದಾನೆ. ಅಷ್ಟೇ ಅಲ್ಲ, ಸಿಎಫ್‌ಒ ಆದೇಶದಂತೆ ಹಾಂಕಾಂಗ್‌ನ ಸುಮಾರು 15 ಬ್ಯಾಂಕ್‌ ಖಾತೆಗಳಿಗೆ ಉದ್ಯೋಗಿಯು 207 ಕೋಟಿ ರೂ. ವರ್ಗಾಯಿಸಿದ್ದಾನೆ. ಇಷ್ಟೆಲ್ಲ ನಡೆದ ಬಳಿಕವೇ ವಂಚನೆಯ ಜಾಲ ಬಯಲಾಗಿದೆ. ಡೀಪ್‌ಫೇಕ್‌ ತಂತ್ರಜ್ಞಾನ ಬಳಸಿ ಹಾಂಕಾಂಗ್‌ ಕಂಪನಿಯ ಉದ್ಯೋಗಿ ಜತೆ ವಿಡಿಯೊ ಕಾಲ್‌ನಲ್ಲಿ ನಕಲಿ ವ್ಯಕ್ತಿಗಳು ಮಾತನಾಡಿದ ಹಾಗೆ ಚಿತ್ರಿಸಲಾಗಿದೆ. ಇದನ್ನು ನಂಬಿದ ವ್ಯಕ್ತಿಯು ಸಿಎಫ್‌ಒ ಎಂದು ಭಾವಿಸಿ ನೂರಾರು ಕೋಟಿ ರೂ. ವರ್ಗಾಯಿಸಿದ್ದಾನೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಚಿನ್ನದ ದರ

Gold Rate Today: 22K ಚಿನ್ನದ ಬೆಲೆ ಗ್ರಾಂಗೆ ₹25 ಏರಿಕೆ; 24K ಬಂಗಾರದ ಬೆಲೆ ಎಷ್ಟು ಏರಿದೆ ಗಮನಿಸಿ

Gold Rate Today: ಇಂದು (ಸೋಮವಾರ) 10 ಗ್ರಾಂ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಚಿನ್ನದ ಬೆಲೆ ಕ್ರಮವಾಗಿ ₹250 ಹಾಗೂ ₹270 ಏರಿಕೆಯಾಗಿವೆ. ಇಂದಿನ ಬೆಂಗಳೂರು ಸುವರ್ಣ ಮಾರುಕಟ್ಟೆಯ ದರಗಳು ಹೀಗಿವೆ.

VISTARANEWS.COM


on

gold rate today 27
Koo

ಬೆಂಗಳೂರು: ರಾಜ್ಯದ ಚಿನ್ನದ ಮಾರುಕಟ್ಟೆಯಲ್ಲಿ ಶುಕ್ರವಾರ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today) ಸ್ವಲ್ಪ ಮಟ್ಟಿಗೆ ಏರಿದೆ. ನಿನ್ನೆ ಹಾಗೂ ಮೊನ್ನೆ ದರಗಳು ಯಥಾಸ್ಥಿತಿ ಕಾಪಾಡಿಕೊಂಡಿದ್ದವು. ಇಂದು (ಸೋಮವಾರ) 10 ಗ್ರಾಂ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಚಿನ್ನದ ಬೆಲೆ ಕ್ರಮವಾಗಿ ₹250 ಹಾಗೂ ₹270 ಏರಿಕೆಯಾಗಿವೆ. ಇಂದಿನ ಬೆಂಗಳೂರು ಸುವರ್ಣ ಮಾರುಕಟ್ಟೆಯ ದರಗಳು ಹೀಗಿವೆ.

ಇಂದು ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,665ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹53,320 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹66,650 ಮತ್ತು ₹6,66,500 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,271 ಆಗಿದ್ದರೆ, ಎಂಟು ಗ್ರಾಂ ಬೆಲೆ ₹58,168 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹72,710 ಮತ್ತು ₹7,27,100 ವೆಚ್ಚವಾಗಲಿದೆ.

ನಗರ22 ಕ್ಯಾರಟ್24 ಕ್ಯಾರಟ್
ದಿಲ್ಲಿ66,80072,860
ಮುಂಬಯಿ66,650 72,710
ಬೆಂಗಳೂರು66,650 72,710
ಚೆನ್ನೈ67,20073,310

ಒಂದು ಗ್ರಾಂ ಬೆಳ್ಳಿಯ ಬೆಲೆ (Silver rate today) ₹92, ಎಂಟು ಗ್ರಾಂ ₹736 ಮತ್ತು 10 ಗ್ರಾಂ ₹920ರಷ್ಟಿದೆ. 100 ಗ್ರಾಂಗೆ ಗ್ರಾಹಕರು ₹9,200 ಮತ್ತು 1 ಕಿಲೋಗ್ರಾಂಗೆ ₹92,000 ಪಾವತಿಸಬೇಕಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ.

ಚಿನ್ನದ ದರದ ಮೇಲೆ ಪರಿಣಾಮ ಬೀರುವ ಅಂಶಗಳು

ಬೇಡಿಕೆ ಮತ್ತು ಪೂರೈಕೆ: ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ, ಚಿನ್ನದ ಪೂರೈಕೆ ಹೆಚ್ಚಾದರೆ, ದರ ಕಡಿಮೆಯಾಗುತ್ತದೆ.

ಜಾಗತಿಕ ಆರ್ಥಿಕ ಪರಿಸ್ಥಿತಿಗಳು: ಚಿನ್ನದ ದರದ ಮೇಲೆ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಕೂಡ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಜಾಗತಿಕ ಆರ್ಥಿಕತೆಯು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಕಾಣಬಹುದು. ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ರಾಜಕೀಯ ಅಸ್ಥಿರತೆ: ರಾಜಕೀಯ ಅಸ್ಥಿರತೆ ಚಿನ್ನದ ದರದ ಮೇಲೂ ಪರಿಣಾಮ ಬೀರಬಹುದು. ಉದಾಹರಣೆಗೆ, ಒಂದು ದೊಡ್ಡ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದರೆ, ಹೂಡಿಕೆದಾರರು ಅನಿಶ್ಚಿತತೆಯ ವಿರುದ್ಧ ಸುರಕ್ಷಿತರಾಗಲು ಚಿನ್ನವನ್ನು ಖರೀದಿಸಬಹುದು, ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ಇದಲ್ಲದೆ, ಭಾರತದಲ್ಲಿನ ಚಿಲ್ಲರೆ ಚಿನ್ನದ ಬೆಲೆಯು ಭಾರತದಲ್ಲಿ ಗ್ರಾಹಕರಿಗೆ ಚಿನ್ನವನ್ನು ಮಾರಾಟ ಮಾಡುವ ಬೆಲೆಯಾಗಿದೆ. ಜಾಗತಿಕ ಚಿನ್ನದ ಬೆಲೆ, ಭಾರತೀಯ ರೂಪಾಯಿ, ಮತ್ತು ಚಿನ್ನದ ಆಭರಣಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ ಸೇರಿದಂತೆ ಹಲವಾರು ಅಂಶಗಳಿಂದ ಇದನ್ನು ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಚಿಲ್ಲರೆ ಚಿನ್ನದ ಬೆಲೆಯು ಸಾಮಾನ್ಯವಾಗಿ ಜಾಗತಿಕ ಚಿನ್ನದ ಬೆಲೆಗಿಂತ ಹೆಚ್ಚಾಗಿರುತ್ತದೆ, ಏಕೆಂದರೆ ಇದು ಆಭರಣ ಮತ್ತು ಇತರ ವೆಚ್ಚ ಒಳಗೊಂಡಿರುತ್ತದೆ.

ಇದನ್ನೂ ಓದಿ: Gold Rate : ಏರುಗತಿಯಲ್ಲಿದೆ ಬಂಗಾರದ ಬೆಲೆ; ಇನ್ನೂ ಏರುವ ಮೊದಲು ಖರೀದಿ ಸೂಕ್ತ

Continue Reading
Advertisement
MLC Election
ರಾಜಕೀಯ22 mins ago

MLC Election: ಹೈಕಮಾಂಡ್ ಅಂಗಳದಲ್ಲಿ ಪರಿಷತ್ ಕೈ ಅಭ್ಯರ್ಥಿಗಳ ಆಯ್ಕೆ ಕಸರತ್ತು; ನಾಳೆ ದೆಹಲಿಗೆ ಸಿಎಂ, ಡಿಸಿಎಂ

Kiccha Sudeep visit chamundeshwari temple
ಸ್ಯಾಂಡಲ್ ವುಡ್41 mins ago

Kiccha Sudeep: ಚಾಮುಂಡಿ ಬೆಟ್ಟಕ್ಕೆ ಕಿಚ್ಚ ಸುದೀಪ್ ಭೇಟಿ; ಇವರನ್ನು ನೋಡಲು ಜನವೋ ಜನ!

Viral Video
ವೈರಲ್ ನ್ಯೂಸ್1 hour ago

Viral Video: ರೈಫಲ್‌ ಜೊತೆ ಬಾರ್‌ಗೆ ನುಗ್ಗಿದ ಕಿಡಿಗೇಡಿ..ಡಿಜೆ ಮೇಲೆ ಗುಂಡಿನ ದಾಳಿ-ಶಾಕಿಂಗ್‌ ವಿಡಿಯೋ ನೋಡಿ

Mitchell Starc
ಕ್ರೀಡೆ1 hour ago

Mitchell Starc : ಐಪಿಎಲ್ ಯಶಸ್ಸಿನ ಶ್ರೇಯಸ್ಸನ್ನು ಪತ್ನಿಗೆ ಅರ್ಪಿಸಿದ ಸ್ಟಾರ್ಕ್​; ಅವರ ಪತ್ನಿಯೂ ಕ್ರಿಕೆಟರ್​

Love Propose
ಬಾಗಲಕೋಟೆ2 hours ago

Love Propose : I Love You ಮೆಸೇಜ್‌ ಕಳಿಸಿದ ಮುಸ್ಲಿಂ ಯುವಕನಿಗೆ ವಿವಾಹಿತೆಯಿಂದ ಚಪ್ಪಲಿ ಏಟು!

Dhruva Sarja Trainer Prashanth Was Attacked First Reaction
ಸ್ಯಾಂಡಲ್ ವುಡ್2 hours ago

Dhruva Sarja: ಜಿಮ್ ಟ್ರೈನರ್ ಮೇಲೆ ಹಲ್ಲೆ; ಧ್ರುವ ಸರ್ಜಾ ನೀಡಿದ ಸ್ಪಷ್ಟನೆ ಏನು?

Asaduddin Owaisi Party Leader
ದೇಶ2 hours ago

Asaduddin Owaisi: ಓವೈಸಿ ಪಕ್ಷದ ನಾಯಕನ ಮೇಲೆ ಗುಂಡಿನ ದಾಳಿ

BS Yediyurappa
ಪ್ರಮುಖ ಸುದ್ದಿ2 hours ago

BS Yediyurappa: ಯಡಿಯೂರಪ್ಪ ವಿರುದ್ಧ ಪೋಕ್ಸೊ ಕೇಸ್ ದಾಖಲಿಸಿದ್ದ ಮಹಿಳೆ ಸಾವು

Fire accident
ದೇಶ2 hours ago

Fire Accident: 4 ವರ್ಷ ನೀವು ನಿದ್ದೆಯಲ್ಲಿದ್ರಾ? ನಿಮಗೆ ಕಣ್ಣು ಕಾಣೋದಿಲ್ವಾ?-ಗುಜರಾತ್‌ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

Sunil Narine
ಪ್ರಮುಖ ಸುದ್ದಿ2 hours ago

Sunil Narine : ಐಪಿಎಲ್​ 2024ರ ‘ಮೌಲ್ಯಯುತ ಆಟಗಾರ ಪ್ರಶಸ್ತಿ’ ಗೆದ್ದು ಹೊಸ ದಾಖಲೆ ಬರೆದ ಸುನಿಲ್ ನರೈನ್​​

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ21 hours ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು22 hours ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ4 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ5 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು6 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 week ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ಟ್ರೆಂಡಿಂಗ್‌