ʼಹೆಸರಿನವನಾದ ನಾನುʼ ಎಂದು ಕನಸು ಕಾಣುತ್ತಿದ್ದವರ ಸ್ವಪ್ನಭಂಗ ಮಾಡಿದ ಸಿಎಂ ಬೊಮ್ಮಾಯಿ - Vistara News

ಕರ್ನಾಟಕ

ʼಹೆಸರಿನವನಾದ ನಾನುʼ ಎಂದು ಕನಸು ಕಾಣುತ್ತಿದ್ದವರ ಸ್ವಪ್ನಭಂಗ ಮಾಡಿದ ಸಿಎಂ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ ಗುರುವಾರ ನವ ದೆಹಲಿಗೆ ಪ್ರಯಾಣ ಮಾಡುತ್ತಾರೆ ಎಂಬ ವಿಚಾರ ಬಹಿರಂಗವಾದಾಗಿನಿಂದ ಪಕ್ಷದಲ್ಲಿ ಡಿಮ್ಯಾಂಡ್‌ ಹೆಚ್ಚಾಗಿತ್ತು. ತಮಗೂ ಸಚಿವ ಸ್ಥಾನ ಕೊಡಿಸಿ ಎನ್ನುತ್ತ ಹಿರಿಯರು, ಮಾಜಿ ಸಚಿವರುಗಳೆಲ್ಲ ದುಂಬಾಲು ಬಿದ್ದಿದ್ದರು.

VISTARANEWS.COM

on

basavaraja bommai emergency
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಇನ್ನೇನು ಸಂಪುಟ ವಿಸ್ತರಣೆ ಆಗಿಯೇಬಿಡುತ್ತದೆ, ರಾಜಭವನದ ಗಾಜಿನ ಮನೆಯಲ್ಲಿ ʼಈ ಹೆಸರಿನವನಾದ ನಾನುʼ ಎಂದು ಪ್ರಮಾಣವಚನ ಸ್ವೀಕರಿಸುವ ಕನಸು ಕಾಣುತ್ತಿದ್ದವರಿಗೆ ಬಿಜೆಪಿ ತಣ್ಣೀರೆರೆಚಿದೆ. ನವ ದೆಹಲಿಗೆ ಹೋದ ಸಿಎಂ ಬಸವರಾಜ ಬೊಮ್ಮಾಯಿ ಇನ್ನೇನು ಸಚಿವರ ಪಟ್ಟಿಯೊಂದಿಗೆ ಬರುತ್ತಾರೆ ಎಂದು ಕಾದು ಕುಳಿತಿದ್ದವರಿಗೆ ನಿರಾಸೆಯಾಗಿದೆ.

ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಕಳೆದ ವಾರ ಪ್ರವಾಸ ಮಾಡಿದ್ದರು. ಈ ಸಮಯದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಹಾಗೂ ಯಾವುದೇ ನಕಾರಾತ್ಮಕತೆ ಇಲ್ಲದಂತೆ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ ವಹಿಸಿದ್ದರು. ಸ್ವತಃ ನಡ್ಡಾ ಹಾಗೂ ಮೋದಿ ಅವರಿಂದ ವೇದಿಕೆ ಮೇಲಿಂದಲೇ ಶಹಬ್ಬಾಸ್‌ಗಿರಿ ಪಡೆದಿದ್ದರು.

ಇದನ್ನೂ ಓದಿ | ಸಂಪುಟದ ಕುರಿತು ಸಿಎಂ ನಿರ್ಧಾರಕ್ಕೆ ಬದ್ಧ ಎಂದ ಸುನಿಲ್‌ಕುಮಾರ್‌

ಇದೆಲ್ಲದರ ನಂತರ CM ಬಸವರಾಜ ಬೊಮ್ಮಾಯಿಗುರುವಾರ ನವ ದೆಹಲಿಗೆ ಪ್ರಯಾಣ ಮಾಡುತ್ತಾರೆ ಎಂಬ ವಿಚಾರ ಬಹಿರಂಗವಾದಾಗಿನಿಂದ ಪಕ್ಷದಲ್ಲಿ ಡಿಮ್ಯಾಂಡ್‌ ಹೆಚ್ಚಾಗಿತ್ತು. ತಮಗೂ ಸಚಿವ ಸ್ಥಾನ ಕೊಡಿಸಿ ಎನ್ನುತ್ತ ಹಿರಿಯರು, ಮಾಜಿ ಸಚಿವರುಗಳೆಲ್ಲ ದುಂಬಾಲು ಬಿದ್ದಿದ್ದರು.

ಗುರುವಾರ ಬೆಳಗ್ಗೆ ಬೊಮ್ಮಾಯಿ ಅವರ ಆರ್‌.ಟಿ. ನಗರದ ನಿವಾಸಕ್ಕೆ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಭೇಟಿ ನೀಡಿದರು. ಮತ್ತೆ ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಸಿಎಂಗೆ ಮನವಿ ಮಾಡಿದ್ದರು. ಈಶ್ವರಪ್ಪ ನಂತರ ಮಾಜಿ ಸಚಿವ ಲಕ್ಷ್ಮಣ ಸವದಿ ಸಹ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು. ಸಚಿವ ಸ್ಥಾನಕ್ಕೆ ತಮ್ಮ ಹೆಸರನ್ನು ಪರಿಗಣಿಸುವಂತೆ ಮನವಿ ಮಾಡಿದ್ದರು.

ಮುಖತಃ ಇಬ್ಬರು ಭೇಟಿ ಮಾಡಿದ್ದಾರಾದರೂ ಅನೇಕರು ದೂರವಾಣಿ ಮೂಲಕ ಒತ್ತಡ ಹೇರುತ್ತಿದ್ದರು. ಕೆಲವರು ನೇರವಾಗಿ ಒತ್ತಡ ಹೇರಿದರೆ ಕೆಲವರು ವಿವಿಧ ಮಠಾಧೀಶರು, ಗಣ್ಯ ವ್ಯಕ್ತಿಗಳ ಮೂಲಕ ಸಚಿವ ಸ್ಥಾನಕ್ಕೆ ಒತ್ತಾಯ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿದ್ದವು.

ನಾನು ಹೇಳೋವರೆಗೂ ಇಲ್ಲ ಎಂದರು

ಗುರುವಾರ ನವದೆಹಲಿಗೆ ತೆರಳೀದ ಸಿಎಂ ಬಸವರಾಜ ಬೊಮ್ಮಾಯಿ, ಶುಕ್ರವಾರ ಮದ್ಯಾಹ್ನ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ನಾಮಪತ್ರ ಸಲ್ಲಿಕೆ ವೇಳೆ ಭಾಗವಹಿಸಿದರು. ಸ್ವತಃ ಸೂಚಕರಾಗಿಯೂ ಸಹಿ ಮಾಡಿದರು. ಈ ಸಂದರ್ಭದಲ್ಲಿ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ, ಪ್ರತಿ ಬಾರಿ ನಾನು ದೆಹಲಿಗೆ ಬಂದಾಗಲೆಲ್ಲ ಸಚಿವ ಸಂಪುಟ ವಿಸ್ತರಣೆ ವಿಚಾರ ಚರ್ಚೆ ಆಗುತ್ತದೆ. ಆದರೆ ನಾನಾಗಿಯೇ ಸಂಪುಟದ ಕುರಿತು ಹೇಳುವವರೆಗೂ ಅಂತಹ ಯಾವುದೇ ವಿಚಾರ ಇರುವುದಿಲ್ಲ ಎಂದರು.

ಆದರೂ ಸಿಎಂ ಅದೇಕೋ ಯಾವುದೋ ವಿಚಾರವನ್ನು ಮುಚ್ಚಿಡುತ್ತಿದ್ದಾರೆ ಎಂದೇ ಕರ್ನಾಟಕದಲ್ಲಿ ಸಚಿವಾಕಾಂಕ್ಷಿಗಳು ನಿರೀಕ್ಷಿಸುತ್ತಿದ್ದರು. ಏಕೆಂದರೆ, ಶುಕ್ರವಾರ ಮದ್ಯಾಹ್ನ ನವ ದೆಹಲಿಯಿಂದ ವಿಮಾನ ಹತ್ತಬೇಕಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಪ್ರಯಾಣವನ್ನು 4.30ಕ್ಕೆ ಮುಂದೂಡಿದ್ದರು. ಸಂಜೆ 5 ಗಂಟೆಗೆ ವಿಧಾನಸೌಧದಲ್ಲಿ ನಡೆಯಬೇಕಿದ್ದ ಅಂಜನಾದ್ರಿ ಬೆಟ್ಟದ ಕುರಿತ ಮಹತ್ವದ ಸಭೆಯನ್ನು ಮುಂದೂಡಿದ್ದರು. ಹೀಗಾಗಿ ಸಿಎಂ ಯಾವುದೋ ಪ್ರಮುಖ ವಿಚಾರದಲ್ಲಿ ಚರ್ಚಿಸಲಿದ್ದಾರೆ ಎಂದೇ ಭಾವಿಸಲಾಗಿತ್ತು.

ವರಿಷ್ಠರ ಮೇಲೆ ಹೊರೆ

ಶುಕ್ರವಾರ ನವ ದೆಹಲಿಯಿಂದ ಆಗಮಿಸಿದ ನಂತರವಾಗಲಿ, ಶನಿವಾರ ಇಡೀದಿನವಾಗಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟ ವಿಚಾರದಲ್ಲಿ ಚಕಾರ ಎತ್ತಿಲ್ಲ. ಬೆಳಗ್ಗೆಯಿಂದ ವಿವಿಧ ಸಭೆಗಳಲ್ಲಿ ಭಾಗವಹಿಸುತ್ತಲೇ ಇದ್ದು, ಸಭೆ ಕುರಿತು ಮಾತ್ರ ಮಾಹಿತಿ ನೀಡಿದ್ದಾರೆ. ಸಿಎಂ ನವ ದೆಹಲಿಯಲ್ಲಿ ವರಿಷ್ಠರ ಜತೆಗೆ ಸಂಪುಟ ವಿಚಾರ ಚರ್ಚೆ ಮಾಡಿದ್ದಾರೆಯೇ ಇಲ್ಲವೇ ಎಂಬ ಮಾಹಿತಿಯನ್ನೂ ಪಕ್ಷದೊಳಗೆ ಬಿಟ್ಟುಕೊಟ್ಟಿಲ್ಲ.

ಈ ಕುರಿತು ಪ್ರಶ್ನಿಸಿದ ಆಕಾಂಕ್ಷಿಗಳಿಗೆ, ವರಿಷ್ಠರ ಮಟ್ಟದಲ್ಲಿ ಸಂಪುಟ ವಿಸ್ತರಣೆ ಯೋಚನೆ ಇಲ್ಲ. ವರಿಷ್ಠರು ರಾಷ್ಟ್ರಪತಿ ಚುನಾವಣೆ ಬಳಿಕ ಗುಜರಾತ್ ಚುನಾವಣೆಯಲ್ಲಿ ಬ್ಯುಸಿ ಆಗುತ್ತಾರೆ. ರಾಜ್ಯ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆ ಚಿಂತೆ ಬಿಟ್ಟು ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡಿ. ಕ್ಷೇತ್ರದಲ್ಲಿಯೇ ಟೀಕಾಣಿ ಹೂಡಿ, ಯಾವುದೇ ಡಿಸ್ಟರ್ಬ್ ಇಲ್ಲದೇ ಸರ್ಕಾರ ನಡೆಸಲು ಸಂಪುಟ ವಿಸ್ತರಣೆ ಮತ್ತು ಪುನರ್ ರಚನೆ ಚರ್ಚೆ ಕೈಬಿಡಲಾಗಿದೆ ಎಂದು, ವರಿಷ್ಠರ ಮೇಲೆ ಭಾರ ಹೊರಿಸಿ ಕೈತೊಳೆದುಕೊಂಡಿದ್ದಾರೆ.

ನವ ದೆಹಲಿಗೆ ತೆರಳುವಾಗ ಸಿಎಂ ಸಹ ಸಚಿವ ಸಂಪುಟ ವಿಸ್ತರಣೆ ಕುರಿತು ಆಸಕ್ತಿ ಹೊಂದಿದ್ದರು. ಆದಷ್ಟು ಬೇಗನೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡಿದರೆ ಸರ್ಕಾರದಲ್ಲಿ ಹೊಸ ಹುಮ್ಮಸ್ಸು ಮೂಡಿ ಚುನಾವಣಾ ವರ್ಷದಲ್ಲಿ ಸಹಾಯವಾಗುತ್ತದೆ ಎಂದು ಭಾವಿಸಿದ್ದರು. ಹಾಗೂ, ಸಚಿವ ಸಂಪುಟ ವಿಸ್ತರಣೆಗೆ ವರಿಷ್ಠರು ಒಪ್ಪಿದರು ಎಂದರೆ, ತಮ್ಮ ಸ್ಥಾನ ಭದ್ರವಾಗುತ್ತದೆ ಎಂಬ ದೂರಾಲೋಚನೆಯೂ ಇತ್ತು. ಆದರೆ ಅದೇಕೊ ಹಸಿರು ನಿಶಾನೆ ಸಿಕ್ಕಂತೆ ಕಾಣುತ್ತಿಲ್ಲ. ಸದ್ಯದಲ್ಲೆ ಈ ಕುರಿತು ಸ್ಪಷ್ಟತೆ ಸಿಗಬಹುದು ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ | ಸಂಪುಟ ವಿಸ್ತರಣೆ ಬಗ್ಗೆ ಕರ್ನಾಟಕದಲ್ಲೆ ತೀರ್ಮಾನ: CM ಬೊಮ್ಮಾಯಿಗೆ ತಿಳಿಸಿದ ವರಿಷ್ಠರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತಂತ್ರಜ್ಞಾನ

Reliance Jio: ಜಿಯೋಫೈಬರ್, ಏರ್ ಫೈಬರ್ ಗ್ರಾಹಕರಿಗೆ ಆಫರ್‌; 15 ಒಟಿಟಿ ಅಪ್ಲಿಕೇಷನ್‌ ಜತೆಗೆ 888 ರೂ. ಪೋಸ್ಟ್ ಪೇಯ್ಡ್ ಪ್ಲಾನ್

Reliance Jio: ರಿಲಯನ್ಸ್ ಜಿಯೋದಿಂದ ಜಿಯೋಫೈಬರ್ ಹಾಗೂ ಜಿಯೋ ಏರ್ ಫೈಬರ್ ಗ್ರಾಹರಿಗಾಗಿ ಹೊಸ ಪೋಸ್ಟ್ ಪೇಯ್ಡ್ ಯೋಜನೆಯನ್ನು ಪರಿಚಯಿಸಲಾಗಿದ್ದು, ಒಟಿಟಿ ಪ್ಲಾಟ್ ಫಾರ್ಮ್‌ಗಳನ್ನು ಅತಿ ಹೆಚ್ಚು ಬಳಕೆ ಮಾಡುವವರಿಗೆ, ಇಷ್ಟ ಪಡುವವರಿಗೆ ಇದು ಹೇಳಿ ಮಾಡಿಸಿದ ಯೋಜನೆಯಾಗಿದೆ. ಈ ಪ್ಲಾನ್‌ಗೆ ತಿಂಗಳಿಗೆ 888 ರೂ. ಆಗಲಿದ್ದು, ಜಿಯೋಫೈಬರ್ ಹಾಗೂ ಜಿಯೋ ಏರ್ ಫೈಬರ್ ಗ್ರಾಹರಿಗಾಗಿ ಲಭ್ಯವಿದೆ. ಪೋಸ್ಟ್ ಪೇಯ್ಡ್ ಒಟಿಟಿ ಜತೆಗೂಡಿ ಬರುತ್ತದೆ. ಇದರ ಅಡಿಯಲ್ಲಿ ಗ್ರಾಹಕರು 15 ಪ್ರೀಮಿಯಂ ಒಟಿಟಿ ಅಪ್ಲಿಕೇಷನ್‌ಗಳನ್ನು ಪಡೆಯಲಿದ್ದು, ಅನಿಯಮಿತ ಡೇಟಾ ಸಹ ದೊರೆಯುತ್ತಿದೆ.

VISTARANEWS.COM

on

888 rupees postpaid plan with 15 OTT applications for JioFiber AirFiber customers
Koo

ನವದೆಹಲಿ: ಜಿಯೋಫೈಬರ್ (Jio Fiber) ಹಾಗೂ ಜಿಯೋ ಏರ್ ಫೈಬರ್ (Jio Air Fiber) ಗ್ರಾಹಕರಿಗಾಗಿ ರಿಲಯನ್ಸ್ ಜಿಯೋದಿಂದ (Reliance Jio) ಹೊಸ ಪೋಸ್ಟ್ ಪೇಯ್ಡ್ ಯೋಜನೆಯನ್ನು ಪರಿಚಯಿಸಲಾಗಿದ್ದು, ಒಟಿಟಿ ಪ್ಲಾಟ್ ಫಾರ್ಮ್‌ಗಳನ್ನು ಅತಿ ಹೆಚ್ಚು ಬಳಕೆ ಮಾಡುವವರಿಗೆ, ಇಷ್ಟ ಪಡುವವರಿಗೆ ಇದು ಹೇಳಿ ಮಾಡಿಸಿದ ಯೋಜನೆಯಾಗಿದೆ. ಈ ಪ್ಲಾನ್‌ಗೆ ತಿಂಗಳಿಗೆ 888 ರೂಪಾಯಿ ಆಗಲಿದೆ.

ಪೋಸ್ಟ್ ಪೇಯ್ಡ್ ಒಟಿಟಿ ಜತೆಗೂಡಿ ಬರುತ್ತದೆ. ಇದರ ಅಡಿಯಲ್ಲಿ ಗ್ರಾಹಕರು 15 ಪ್ರೀಮಿಯಂ ಒಟಿಟಿ ಅಪ್ಲಿಕೇಷನ್‌ಗಳನ್ನು ಪಡೆಯಲಿದ್ದು, ಅನಿಯಮಿತ (Unlimited) ಡೇಟಾ ಸಹ ದೊರೆಯುತ್ತಿದೆ. ಇದರಿಂದಾಗಿ ಗ್ರಾಹಕರು ತಮ್ಮ ಅಚ್ಚುಮೆಚ್ಚಿನ ಅಪ್ಲಿಕೇಷನ್‌ಗಳಲ್ಲಿ ಯಾವಾಗ ಮತ್ತು ಎಲ್ಲಿ ಬೇಕಾದರೂ ಕಾರ್ಯಕ್ರಮಗಳ ವೀಕ್ಷಣೆ ಮಾಡಬಹುದಾಗಿದೆ.

ಇದನ್ನೂ ಓದಿ: Dr C N Manjunath: ಮತ್ತೆ ವೈದ್ಯ ವೃತ್ತಿಗೆ ಮರಳಿದ್ದಾರೆ ಹೃದ್ರೋಗ ತಜ್ಞ ಡಾ.ಸಿ.ಎನ್‌. ಮಂಜುನಾಥ್‌

ಈ ಹೊಸ ಯೋಜನೆಯ ಅಡಿಯಲ್ಲಿ ಗ್ರಾಹಕರು 30 ಎಂಬಿಪಿಎಸ್ (Mbps) ವೇಗವನ್ನು ಪಡೆಯಲಿದ್ದು, ಇದರ ಜತೆಗೆ ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್, ಜಿಯೋಸಿನಿಮಾ ಪ್ರೀಮಿಯಂ ರೀತಿಯ ಹದಿನೈದಕ್ಕೂ ಹೆಚ್ಚು ಪ್ರಮುಖ ಒಟಿಟಿ ಅಪ್ಲಿಕೇಷನ್‌ಗಳು ದೊರೆಯುತ್ತವೆ. ಈ ಅಪ್ಲಿಕೇಷನ್‌ನ ಸಬ್‌ಸ್ಕ್ರಿಪ್ಷನ್ ದೊರೆಯುವುದು ಯೋಜನೆಯ ಜತೆಗೆ ಮಾತ್ರ. ಈ ಯೋಜನೆಯನ್ನು ಹೊಸ ಚಂದಾದಾರಷ್ಟೇ ಅಲ್ಲ, 10 ಅಥವಾ 30 ಎಂಬಿಪಿಎಸ್ ಯೋಜನೆಯನ್ನು ಈಗಾಗಲೇ ಬಳಸುತ್ತಿರುವ ಜಿಯೋದ ಈಗಿನ ಬಳಕೆದಾರರು ಸಹ ಪಡೆಯಬಹುದಾಗಿದೆ.

ಇನ್ನು ಈ 888 ರೂಪಾಯಿಯ ಪೋಸ್ಟ್‌ಪೇಯ್ಡ್ ಯೋಜನೆಯು ಪ್ರತಿಯೊಬ್ಬರಿಗೂ ದೊರೆಯಲಿದ್ದು, ಸದ್ಯಕ್ಕೆ ಪ್ರಿಪೇಯ್ಡ್ ಯೋಜನೆ ಹೊಂದಿರುವ ಗ್ರಾಹಕರು ಈ ಹೊಸ ಪೋಸ್ಟ್ ಪೇಯ್ಡ್ ಯೋಜನೆಗೆ ಅಪ್‌ಗ್ರೇಡ್ ಮಾಡಬಹುದು.

ಇದನ್ನೂ ಓದಿ: T20 World Cup : ವಿಶ್ವ ಕಪ್​ಗೆ ಭಾರತ ತಂಡ ಪ್ರಯಾಣಿಸುವ ದಿನಾಂಕ ಪ್ರಕಟಿಸಿದ ಜಯ್​ ಶಾ

ಇನ್ನೊಂದು ವಿಶೇಷತೆಯೆಂದರೆ ಇತ್ತೀಚೆಗೆ ಘೋಷಣೆಯಾದ ಜಿಯೋ ಐಪಿಎಲ್ ಧನ್ ಧನಾ ಧನ್ ಆಫರ್ ಕೂಡ ಈ ಯೋಜನೆಗೆ ಅನ್ವಯಿಸುತ್ತದೆ. ಜಿಯೋಫೈಬರ್ ಅಥವಾ ಏರ್ ಫೈಬರ್‌ನ ಅರ್ಹ ಗ್ರಾಹಕರು ತಮ್ಮ ಜಿಯೋ ಹೋಮ್ ಬ್ರಾಡ್ ಬ್ಯಾಂಡ್ ಸಂಪರ್ಕದಲ್ಲಿ 50 ದಿನ ರಿಯಾಯಿತಿ ಕ್ರೆಡಿಟ್ ವೋಚರ್ ಸಹ ಪಡೆಯಬಹುದು. ಈ ಪ್ಲಾನ್ ಮೇ 31, 2024ರ ವರೆಗೆ ಲಭ್ಯವಿರುತ್ತದೆ, ಜಿಯೋ ಡಿಡಿಡಿ (Jio Dhan Dhana Dhan) ಕೊಡುಗೆಯನ್ನು ವಿಶೇಷವಾಗಿ ಟಿ20 ಋತುವಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Continue Reading

ಕ್ರೈಂ

Prajwal Revanna case: ಪ್ರಜ್ವಲ್‌ ರೇವಣ್ಣ ವಿರುದ್ಧ ರೆಡ್‌ ಕಾರ್ನರ್ ಬ್ರಹ್ಮಾಸ್ತ್ರ; ಯಾವ ದೇಶದಲ್ಲಿದ್ದರೂ ಅರೆಸ್ಟ್‌ ಮಾಡಲು ಸಿದ್ಧತೆ?

Prajwal Revanna case: ಮೂರು ಕೇಸ್ ದಾಖಲಾಗಿದ್ದರೂ ಪ್ರಜ್ವಲ್‌ ರೇವಣ್ಣ ಇನ್ನೂ ಪತ್ತೆಯಾಗಿಲ್ಲ. ಈಗ ಇನ್ನೂ ಕೆಲ ಸಂತ್ರಸ್ತೆಯರು ಪ್ರಜ್ವಲ್ ವಿರುದ್ಧ ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಪೆನ್‌ಡ್ರೈವ್‌ ಕೇಸ್ ಸಂತ್ರಸ್ತರಿದ್ದರೆ ಹೆಲ್ಪ್‌ಲೈನ್‌ಗೂ ಕಾಲ್‌ ಮಾಡಿ ಎಂದು ಎಸ್‌ಐಟಿ ಹೇಳಿದೆ. ಅದಕ್ಕೆ ಹಲವು ಕರೆಗಳು ಬರುತ್ತಿವೆ ಎನ್ನಲಾಗಿದೆ. ಇನ್ನೊಂದೆಡೆ ಈಗಾಗಲೇ ಪ್ರಜ್ವಲ್ ಬಂಧನಕ್ಕೆ ಬ್ಲೂಕಾರ್ನರ್ ನೋಟಿಸ್ ಅನ್ನು ಜಾರಿ ಮಾಡಲಾಗಿತ್ತು. ಆದರೆ, 15 ದಿನವಾದರೂ ಪ್ರಜ್ವಲ್‌ ಸುಳಿವು ಇಲ್ಲದೇ ಇರುವ ಕಾರಣ ರೆಡ್‌ ಕಾರ್ನರ್‌ ನೋಟಿಸ್‌ ನೀಡಿ ಅರೆಸ್ಟ್‌ ಮಾಡಲು ಎಸ್‌ಐಟಿ ಸಿದ್ಧತೆಯನ್ನು ನಡೆಸಿದೆ ಎಂದು ಹೇಳಲಾಗಿದೆ.

VISTARANEWS.COM

on

Prajwal Revanna case SIT to issue Red Corner Notice against Prajwal
Koo

ಬೆಂಗಳೂರು: ಈಗಾಗಲೇ ಲೈಂಗಿಕ ದೌರ್ಜನ್ಯ (Physical abuse) ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna case) ವಿರುದ್ಧ ಒಟ್ಟು ಮೂರು ಅತ್ಯಾಚಾರ ಕೇಸ್‌ಗಳು ದಾಖಲಾಗಿವೆ. ಆದರೆ, ಅವರು ವಿದೇಶದಲ್ಲಿ ತಲೆಮರೆಸಿಕೊಂಡು ಇರುವ ಕಾರಣ ಈಗಾಗಲೇ ಬ್ಲೂಕಾರ್ನರ್ ನೋಟಿಸ್ ನೀಡಲಾಗಿತ್ತು. ಆದರೆ, ಶತಾಯಗತಾಯ ಅವರನ್ನು ಬಂಧಿಸಿ ಕರೆತರಲೇಬೇಕು ಎಂದು ತೀರ್ಮಾನಿಸಿರುವ ಎಸ್‌ಐಟಿ ಈಗ ರೆಡ್‌ ಕಾರ್ನರ್ ಬ್ರಹ್ಮಾಸ್ತ್ರ ಬಿಡಲು ಮುಂದಾಗಿದೆ.

ಮೂರು ಕೇಸ್ ದಾಖಲಾಗಿದ್ದರೂ ಪ್ರಜ್ವಲ್‌ ರೇವಣ್ಣ ಇನ್ನೂ ಪತ್ತೆಯಾಗಿಲ್ಲ. ಈಗ ಇನ್ನೂ ಕೆಲ ಸಂತ್ರಸ್ತೆಯರು ಪ್ರಜ್ವಲ್ ವಿರುದ್ಧ ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಪೆನ್‌ಡ್ರೈವ್‌ ಕೇಸ್ ಸಂತ್ರಸ್ತರಿದ್ದರೆ ಹೆಲ್ಪ್‌ಲೈನ್‌ಗೂ ಕಾಲ್‌ ಮಾಡಿ ಎಂದು ಎಸ್‌ಐಟಿ ಹೇಳಿದೆ. ಅದಕ್ಕೆ ಹಲವು ಕರೆಗಳು ಬರುತ್ತಿವೆ ಎನ್ನಲಾಗಿದೆ. ಇನ್ನೊಂದೆಡೆ ಈಗಾಗಲೇ ಪ್ರಜ್ವಲ್ ಬಂಧನಕ್ಕೆ ಬ್ಲೂಕಾರ್ನರ್ ನೋಟಿಸ್ ಅನ್ನು ಜಾರಿ ಮಾಡಲಾಗಿತ್ತು. ಆದರೆ, 15 ದಿನವಾದರೂ ಪ್ರಜ್ವಲ್‌ ಸುಳಿವು ಇಲ್ಲದೇ ಇರುವ ಕಾರಣ ರೆಡ್‌ ಕಾರ್ನರ್‌ ನೋಟಿಸ್‌ ನೀಡಿ ಅರೆಸ್ಟ್‌ ಮಾಡಲು ಎಸ್‌ಐಟಿ ಸಿದ್ಧತೆಯನ್ನು ನಡೆಸಿದೆ ಎಂದು ಹೇಳಲಾಗಿದೆ.

ರೆಡ್‌ ಕಾರ್ನರ್‌ ಜಾರಿಯಾದರೆ ಏನಾಗುತ್ತೆ?

ಪ್ರಜ್ವಲ್ ರೇವಣ್ಣ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಮನವಿ ಮಾಡಲು ಎಸ್‌ಐಟಿ ಚಿಂತನೆ ನಡೆಸಿದೆ. ಇದಕ್ಕೆ ಮೊದಲು ಸಿಬಿಐ ಸಂಸ್ಥೆಯು ಇಂಟರ್‌ಪೋಲ್‌ ಅನ್ನು ಸಂಪರ್ಕಿಸಿ ರೆಡ್ ಕಾರ್ನರ್ ನೋಟಿಸ್‌ಗೆ ಬೇಡಿಕೆ ಸಲ್ಲಿಸಬೇಕು. ರೆಡ್ ಕಾರ್ನರ್ ನೋಟಿಸ್ ಜಾರಿಯಾದರೆ, ಯಾವ ದೇಶದಲ್ಲಿದ್ದರೂ ಆ ದೇಶದ ಪೊಲೀಸರು ಆರೋಪಿಯನ್ನು ಬಂಧಿಸಿ ಸಂಬಂಧಪಟ್ಟ ದೇಶಕ್ಕೆ ಮಾಹಿತಿ ನೀಡುತ್ತಾರೆ. ನಂತರ ಇಲ್ಲಿನ ಪೊಲೀಸರು ಹೋಗಿ ಆತನನ್ನು ಕರೆತರುತ್ತಾರೆ. ಹೀಗಾಗಿ ಪ್ರಜ್ವಲ್‌ ವಿರುದ್ಧ ಈ ಕ್ರಮಕ್ಕೆ ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.

ಬ್ಲ್ಯೂ ಕಾರ್ನರ್‌ ನೋಟಿಸ್‌ ಏಕೆ?

ಬ್ಲೂ ಕಾರ್ನರ್ ನೋಟಿಸ್‌ ಜಾರಿಯಾದ ಬಳಿಕ ಇಂಟರ್‌ಪೋಲ್ ಇತರ ಕಡೆಗಳಿಗೂ ಆರೋಪಿಯ ಮಾಹಿತಿಯನ್ನು ಕಳಿಸಿ, ಆರೋಪಿಯ ನೆಲೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತದೆ. ಆರೋಪಿ ಯಾವ ದೇಶದಲ್ಲಿ ಇದ್ದಾರೆ? ಎಲ್ಲಿ ಲೊಕೇಟ್ ಆಗಿದ್ದಾರೆ ಅನ್ನುವ ಚಲನವಲನಗಳನ್ನು ಈ ಮೂಲಕ ಪತ್ತೆ ಮಾಡುತ್ತಾರೆ. ಬಳಿಕ ಸಿಬಿಐಗೆ ಆರೋಪಿಯ ಚಲನವಲನ ಬಗ್ಗೆ ಮಾಹಿತಿ ನೀಡುತ್ತಾರೆ. ಸಿಬಿಐ ಮೂಲಕ ಎಸ್ಐಟಿಗೆ ಪ್ರಜ್ವಲ್ ಎಲ್ಲಿದ್ದಾರೆ ಅನ್ನುವ ಮಾಹಿತಿ ಸಿಗುತ್ತದೆ. ಹೀಗಾಗಿ ಈ ನೋಟಿಸ್‌ ನೀಡಲಾಗಿದ್ದು, ಇದು ಸುಳಿವು ಪಡೆಯಲು ಮುಖ್ಯವಾಗಿದೆ. ಆದರೆ, ಇದರಿಂದ ಪ್ರಜ್ವಲ್‌ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ ಎನ್ನಲಾಗಿದೆ.

ಕಠಿಣ ಸೆಕ್ಷನ್‌ ಜಡಿದ SIT! ಯಾವುದಕ್ಕೆ ಎಷ್ಟು ವರ್ಷ ಜೈಲು?

ಎರಡು ದಿನದ ಹಿಂದಷ್ಟೇ ಪ್ರಜ್ವಲ್‌ ರೇವಣ್ಣ ಮೇಲೆ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಈ ಮೂರನೇ ಎಫ್ಐಆರ್‌ನಲ್ಲಿ ಒಂದಕ್ಕಿಂತ ಒಂದು ಕಠಿಣ ಸೆಕ್ಷನ್‌ಗಳನ್ನು ಹಾಕಲಾಗಿದೆ. ಹೀಗಾಗಿ ಪ್ರಜ್ವಲ್‌ ಒಂದು ವೇಳೆ ಅರೆಸ್ಟ್‌ ಆಗಿ ಅಪರಾಧ ಸಾಬೀತಾದರೆ ಜೈಲು ಶಿಕ್ಷೆ ಗ್ಯಾರಂಟಿ ಎನ್ನಲಾಗಿದೆ.

ಸಿಐಡಿಯ ಸೈಬರ್ ಕ್ರೈಂನಲ್ಲಿ ದಾಖಲಾಗಿರುವ ಈ ಪ್ರಕರಣದಲ್ಲೂ ಸಾಕಷ್ಟು ಗಂಭೀರವಾದ ಸೆಕ್ಷನ್‌ಗಳನ್ನು ಹಾಕಲಾಗಿದೆ. ಇದೇ ಮೇ 8ರಂದು ದಾಖಲಾಗಿರುವ ಎಫ್ಐಆರ್ ಇದಾಗಿದ್ದು, ಐಪಿಸಿ 376(2)(N), 376(2)(K), 354(A) 354(B), 354(C) ಹಾಗೂ 506 ಸೆಕ್ಷನ್‌ಗಳನ್ನು ಹಾಕಲಾಗಿದೆ. ಅದರಲ್ಲಿ 376(2)(n) ಅನ್ನು ಸೆಕ್ಷನ್ ನಿರಂತರವಾಗಿ ಅತ್ಯಾಚಾರವನ್ನು ನಡೆಸಲಾಗಿದೆ ಎಂದು ದಾಖಲು ಮಾಡಲಾಗಿದೆ.

ಇನ್ನು ಇತ್ತ ಇದೇ ವಿಚಾರವಾಗಿ ಇಬ್ಬರು ಸರ್ಕಾರಿ ಅಧಿಕಾರಿಗಳನ್ನೂ ಕೂಡ ಎಸ್‌ಐಟಿ ತನಿಖೆ ವೇಳೆ ವಿಚಾರಣೆ ನಡೆಸಿದೆ.‌ ವರ್ಗಾವಣೆ ಮಾಡಿಸುತ್ತೇನೆ ಎಂದು ಹೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬುದು ಸಂತ್ರಸ್ತೆಯಾದ ಸರ್ಕಾರಿ ಅಧಿಕಾರಿಯ ಆರೋಪವಾಗಿದೆ. ಮೊದಲಿಗೆ ಈ ವಿಚಾರದಲ್ಲಿ ನಮ್ಮನ್ನು ಎಳಿಯಬೇಡಿ ಎಂದಿದ್ದ ಸಂತ್ರಸ್ತೆಯರು ಕೊನೆಗೂ ಎಸ್‌ಐಟಿ ಮುಂದೆ ಹಾಜರಾಗಿ ಕೆಲವು ವಿಷಯಗಳನ್ನು ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ.

ಇತ್ತ ಕಿಡ್ನ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಕಿಡ್ನ್ಯಾಪ್ ಮಾಡಿದ್ದು ಮೂರು ಜನರಲ್ಲ ಏಳು ಜನ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎನ್ನಲಾಗಿದೆ. ಕರೆದೊಯ್ಯಲು ಒಬ್ಬರು, ಕೂಡಿ ಹಾಕಲು ಒಬ್ಬರು ಎಂಬಂತೆ ಒಟ್ಟಾರೆಯಾಗಿ ಏಳು ಜನರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಎಸ್‌ಐಟಿ ಹೇಳುತ್ತಿದೆ. ಈ ವಿಚಾರವಾಗಿ ತನಿಖೆ ನಡೆಯುತ್ತಿದೆ.

ಯಾವ ಯಾವ ಸೆಕ್ಷನ್‌ ಏನು ಹೇಳುತ್ತದೆ?

  • 376(2)(N)- ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ.
    ಶಿಕ್ಷೆ – ಕನಿಷ್ಠ 10 ವರ್ಷ ಹಾಗೂ ಗರಿಷ್ಠ ಜೀವಾವಧಿ ಶಿಕ್ಷೆ
  • ಸೆಕ್ಷನ್‌ – IPC 376(2)(K) – ಜನಪ್ರತಿನಿಧಿಯಾಗಿ ಅಧಿಕಾರ ದುರ್ಬಳಕೆ, ಅತ್ಯಾಚಾರ
    ಶಿಕ್ಷೆ – ಕನಿಷ್ಠ 7ರಿಂದ 10 ವರ್ಷ ಹಾಗೂ ಗರಿಷ್ಠ ಜೀವಾವಧಿ ಶಿಕ್ಷೆ
  • ಸೆಕ್ಷನ್‌ – IPC 354(A) – ಲೈಂಗಿಕ ಕೃತ್ಯಕ್ಕೆ ಆಮಿಷವೊಡ್ಡಿದ ರೀತಿ ನಡವಳಿಕೆ, ದೌರ್ಜನ್ಯ
    ಶಿಕ್ಷೆ – ಗರಿಷ್ಠ 3 ವರ್ಷ ಜೈಲು ಶಿಕ್ಷೆ
  • ಸೆಕ್ಷನ್‌ – IPC 354(B) – ಮಹಿಳೆಯ ಬಟ್ಟೆ ಹಿಡಿದು ಎಳೆದಾಡಿ ಮಾನಭಂಗ ಯತ್ನ
    ಶಿಕ್ಷೆ – ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆ
  • ಸೆಕ್ಷನ್‌ – IPC 354(C)-ಖಾಸಗಿ ಚಿತ್ರ ಸೆರೆಹಿಡಿದು ವೀಕ್ಷಣೆ ಮಾಡುವುದು
    ಶಿಕ್ಷೆ – ಗರಿಷ್ಠ ಏಳು ವರ್ಷ ಜೈಲು ಶಿಕ್ಷೆ
  • ಸೆಕ್ಷನ್‌ – IPC 506 – ಬೆದರಿಕೆ ಹಾಕಿರುವುದಾಗಿ ಪ್ರಜ್ವಲ್‌ ವಿರುದ್ಧ FIRನಲ್ಲಿ ಉಲ್ಲೇಖ
    ಶಿಕ್ಷೆ – ಕನಿಷ್ಠ 2 ವರ್ಷ ಅಥವಾ ಏಳು ವರ್ಷ ಜೈಲು ಶಿಕ್ಷೆ

ಹೀಗೆ ಮೂರನೇ ಎಫ್ಐಆರ್‌ನಲ್ಲಿ ಕಠಿಣ ಸೆಕ್ಷನ್‌ಗಳನ್ನು ಎಸ್ಐಟಿ ಹಾಕಿದ್ದು, ಪ್ರಜ್ವಲ್‌ಗೆ ಭಾರಿ ಉರುಳಾಗಲಿದೆ.

ಸುಳ್ಳು ಕೇಸ್‌ ಹಾಕಲು ಮಹಿಳೆಯನ್ನು SIT ಸಂಪರ್ಕ ಮಾಡಿಲ್ಲ; ಕಾಟ ಕೊಟ್ಟವನನ್ನು ಬಿಡಲ್ಲ!

ಈಗಾಗಲೇ ಲೈಂಗಿಕ ದೌರ್ಜನ್ಯ (Physical abuse) ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna case) ವಿರುದ್ಧ ಸುಳ್ಳು ಕೇಸ್ (Fake case) ಹಾಕಲು ತನಗೆ ಒತ್ತಾಯಿಸಲಾಗುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (National Commission for Women) ಮಹಿಳೆಯೊಬ್ಬರು ನೀಡಿರುವ ದೂರು ಹೊಸ ತಿರುವನ್ನು ಪಡೆದುಕೊಂಡಿದೆ. ಎಸ್‌ಐಟಿಯಿಂದ ಯಾರೂ ಆಕೆಯನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ. ಆದರೆ, ಸಂಪರ್ಕ ಮಾಡಿದವರ ಬಗ್ಗೆ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಐಟಿ ತಿಳಿಸಿದೆ.

ಸಂತ್ರಸ್ತ ಮಹಿಳೆಗೆ ಎಸ್ಐಟಿ ಅಧಿಕಾರಿ ಎಂದು ಕರೆ ಮಾಡಿ ತೊಂದರೆ ಮಾಡಿರುವ ಆರೋಪ ವಿಚಾರವಾಗಿ ಎಸ್ಐಟಿ ಉನ್ನತ ಮೂಲಗಳು ಸ್ಪಷ್ಟನೆ ನೀಡಿದೆ. ಅಲ್ಲದೆ, ಎನ್‌ಸಿಡಬ್ಲ್ಯು ದೂರನ್ನು ಎಸ್‌ಐಟಿಗೆ ರವಾನಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್‌ಐಟಿ, ಗುರುವಾರವಷ್ಟೇ ಈ ಮಹಿಳೆಯ ಬಗ್ಗೆ ಎಸ್‌ಐಟಿಗೆ ತಿಳಿದುಬಂದಿದೆ.

ಎಸ್‌ಐಟಿಯಿಂದ ಯಾರೂ ಆಕೆಯನ್ನು ಈ ಹಿಂದೆ ಸಂಪರ್ಕಿಸಿಲ್ಲ. ಮಹಿಳಾ ಆಯೋಗಕ್ಕೆ ದೂರು ನೀಡಿದ ಮಹಿಳೆಯು ನಮಗೆ ಯಾವುದೇ ದೂರು ನೀಡಿಲ್ಲ. ಮಹಿಳೆಗೆ ಕರೆ ಮಾಡಿದ ವ್ಯಕ್ತಿಯ ಗುರುತು ತಿಳಿಯಲು ಎಸ್‌ಐಟಿ ವಿಚಾರಣೆ ಆರಂಭಿಸಿದೆ. ಅಂತಹವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತೆ ಕೋರಿ ಮಹಿಳಾ ಆಯೋಗಕ್ಕೆ ಪತ್ರ ಬರೆದಿರುವ ಮಹಿಳೆ

ಪ್ರಜ್ವಲ್‌ ರೇವಣ್ಣ ಹಾಗೂ ಎಚ್‌.ಡಿ ರೇವಣ್ಣ (HD revanna jailed) ಅವರ ವಿರುದ್ಧ ರಾಜಕೀಯ ಪ್ರೇರಿತ ಸುಳ್ಳು ದೂರುಗಳನ್ನು ದಾಖಲಿಸಲಾಗುತ್ತಿದೆ ಎಂದು ಜೆಡಿಎಸ್‌ (JDS) ಪ್ರತಿಭಟನೆ ನಡೆಸುತ್ತಿರುವುದರ ಹಿನ್ನೆಲೆಯಲ್ಲಿ ಈ ದೂರು ಮಹತ್ವ ಪಡೆದುಕೊಂಡಿದೆ. ಸೂಕ್ತ ಭದ್ರತೆಗೆ ಕೋರಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮಹಿಳೆಯೊಬ್ಬರು ಪತ್ರ ಬರೆದಿದ್ದಾರೆ.

ಪ್ರಜ್ವಲ್ ರೇವಣ್ಣ ವಿರುದ್ಧ ದೂರು ನೀಡುವಂತೆ ನನಗೆ ಒತ್ತಡ ಹಾಕಲಾಗುತ್ತಿದೆ. ಮೂವರು ಸಿವಿಲ್ ಡ್ರೆಸ್‌ನಲ್ಲಿ ಬಂದವರು ಒತ್ತಡ ಹಾಕಿದ್ದು, ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಬೆದರಿಕೆ ಹಾಕಿದ್ದಾರೆ. ನನ್ನ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಿ ಎಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮಹಿಳೆ ಪತ್ರ ಬರೆದಿದ್ದಾರೆ.

ಮಹಿಳೆ ಪತ್ರ ಬರೆದಿರುವ ಬಗ್ಗೆ ವಿಸ್ತಾರ ನ್ಯೂಸ್‌ಗೆ ರಾಷ್ಟ್ರೀಯ ಮಹಿಳಾ ಆಯೋಗ ಮಾಹಿತಿ ನೀಡಿದೆ. ಹಾಸನ ಮೂಲದ ಮಹಿಳೆ ಪತ್ರ ಬರೆದಿದ್ದು, ಪತ್ರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮಾಹಿತಿ ನೀಡಲಾಗಿದೆ. ದೂರಿನ ಪ್ರತಿ ಹಾಗೂ ಸೂಕ್ತ ಭದ್ರತೆಗೆ ಮನವಿ ಮಾಡಲಾಗಿದೆ.

ಇದನ್ನೂ ಓದಿ: Lok Sabha Election 2024: ಲೋಕಸಭಾ ಪ್ರಚಾರಕ್ಕೆ 26 ಸಾವಿರ ಕಿಲೋ ಮೀಟರ್ ಸಂಚಾರ, ದಿನಕ್ಕೆ ಸರಾಸರಿ 14-18 ಗಂಟೆ ಸಿಎಂ ಪ್ರಚಾರ!

ಪ್ರಜ್ವಲ್ ಕೇಸ್‌ನಲ್ಲಿ ಮಹಿಳೆಗೆ ದೂರು ನೀಡುವಂತೆ ಒತ್ತಡ ಹಾಕಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆಯೋಗದಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಇಂದು ಮತ್ತೆ ಪತ್ರ ಬರೆಯುತ್ತೇವೆ. ಆಯೋಗದ ಅಧಿಕಾರಿಗಳು ಪತ್ರ ಬರೆದ ಮಹಿಳೆಯನ್ನು ಭೇಟಿ ಮಾಡುತ್ತೇವೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ತಿಳಿಸಿದೆ.

Continue Reading

ಕ್ರೈಂ

Prajwal Revanna case: ಪ್ರಜ್ವಲ್‌ ಮೇಲೆ ಒಟ್ಟು ಮೂರು FIR; ಮೂರರಲ್ಲೂ ವಾಂಟೆಡ್‌ ಲಿಸ್ಟ್‌ನಲ್ಲಿ ಸಂಸದ!

Prajwal Revanna case: ದೇಶ ಬಿಟ್ಟು ಪರಾರಿಯಾದ ಪ್ರಜ್ವಲ್‌ ಸದ್ಯಕ್ಕೆ 3 ಕೇಸ್‌ಗಳಲ್ಲಿ ವಾಂಟೆಡ್‌ ಆಗಿದ್ದಾರೆ. ಅವರ ಮೇಲೆ ಯಾವ ಯಾವ ದಿನ ಕೇಸ್‌ ಅನ್ನು ಹಾಕಲಾಗಿದೆ ಎಂಬುದನನ್ನು ನೋಡುವುದಾದರೆ, ಏಪ್ರಿಲ್ 28ರಂದು ಹೊಳೆನರಸೀಪುರ ಠಾಣೆಯಲ್ಲಿ ಮೊದಲ ಎಫ್‌ಐಆರ್, ಮೇ 1ರಂದು ಬೆಂಗಳೂರಿನ ಸಿಐಡಿ ಠಾಣೆಯಲ್ಲಿ ಎರಡನೇ ಎಫ್‌ಐಆರ್ ಹಾಗೂ ಮೇ 8ರಂದು ಬೆಂಗಳೂರಿನ ಸಿಐಡಿ ಠಾಣೆಯಲ್ಲಿ ಮತ್ತೊಂದು ಕೇಸ್‌ ಅನ್ನು ದಾಖಲು ಮಾಡಲಾಗಿದೆ. ಹೀಗಾಗಿ ಈ ಕೇಸ್‌ಗಳು ಪ್ರಜ್ವಲ್‌ಗೆ ಖಂಡಿತವಾಗಿಯೂ ಮುಳುವಾಗುವ ಲಕ್ಷಣಗಳೂ ಕಾಣಿಸುತ್ತಿವೆ.

VISTARANEWS.COM

on

Prajwal Revanna case Three FIRs against Prajwal Wanted list in all three
Koo

ಬೆಂಗಳೂರು: ಈಗಾಗಲೇ ಲೈಂಗಿಕ ದೌರ್ಜನ್ಯ (Physical abuse) ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna case) ವಿರುದ್ಧ ಈಗ ಮೂರು ಕೇಸ್‌ಗಳು ದಾಖಲಾಗಿವೆ. ಅಲ್ಲದೆ, ಈ ಮೂರೂ ಕೇಸ್‌ಗಳಲ್ಲಿ ಅವರು ವಾಂಟೆಡ್‌ ಲಿಸ್ಟ್‌ನಲ್ಲಿದ್ದಾರೆ.

ಪೆನ್‌ಡ್ರೈವ್ ಪಾಪಕೂಪದಲ್ಲಿ ಪ್ರಜ್ವಲ್‌ ಮೇಲೆ ಕೇಸ್ ಮೇಲೆ ಕೇಸ್‌ ಅನ್ನು ಹಾಕಲಾಗಿದೆ. ಅವರ ಮೇಲೆ ದೂರು ನೀಡಲು ಸಂತ್ರಸ್ತೆಯರು ಮೊದಲು ಹಿಂದೇಟು ಹಾಕಿದ್ದಾರಾದರೂ ಈಗ ಮಹಿಳಾ ಅಧಿಕಾರಿಗಳೂ ಸೇರಿದಂತೆ ಹಲವರು ಮುಂದೆ ಬರುತ್ತಿದ್ದಾರೆ. ಹೀಗಾಗಿ ಈ ಕೇಸ್‌ಗಳು ಪ್ರಜ್ವಲ್‌ಗೆ ಖಂಡಿತವಾಗಿಯೂ ಮುಳುವಾಗುವ ಲಕ್ಷಣಗಳೂ ಕಾಣಿಸುತ್ತಿವೆ.

ಪ್ರಜ್ವಲ್ ರೇವಣ್ಣ ವಿರುದ್ಧ ಇದುವರೆಗೂ ಮೂರು FIR ದಾಖಲಾಗಿದೆ. ಮೇ 8ರ ಬುಧವಾರ ಸಿಐಡಿ ಠಾಣೆಯಲ್ಲಿ ಹೊಸ ಎಫ್‌ಐಆರ್ ಅನ್ನು ದಾಖಲು ಮಾಡಲಾಗಿತ್ತು. ಇದು ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾದ ಲೇಟೆಸ್ಟ್ ರೇಪ್ ಕೇಸ್ ಆಗಿದೆ. ಇದರಲ್ಲಿ IPC 376(2)(N), 376(2)(K), 354(A), 354(B) ಹಾಗೂ 354C ಹಾಗೂ 506 ಅಡಿಯಲ್ಲಿ ಕೇಸ್‌ ಅನ್ನು ಬುಕ್‌ ಮಾಡಲಾಗಿದೆ.

ವಾಂಟೆಡ್ ಪ್ರಜ್ವಲ್!

ದೇಶ ಬಿಟ್ಟು ಪರಾರಿಯಾದ ಪ್ರಜ್ವಲ್‌ ಸದ್ಯಕ್ಕೆ 3 ಕೇಸ್‌ಗಳಲ್ಲಿ ವಾಂಟೆಡ್‌ ಆಗಿದ್ದಾರೆ. ಅವರ ಮೇಲೆ ಯಾವ ಯಾವ ದಿನ ಕೇಸ್‌ ಅನ್ನು ಹಾಕಲಾಗಿದೆ ಎಂಬುದನನ್ನು ನೋಡುವುದಾದರೆ, ಏಪ್ರಿಲ್ 28ರಂದು ಹೊಳೆನರಸೀಪುರ ಠಾಣೆಯಲ್ಲಿ ಮೊದಲ ಎಫ್‌ಐಆರ್, ಮೇ 1ರಂದು ಬೆಂಗಳೂರಿನ ಸಿಐಡಿ ಠಾಣೆಯಲ್ಲಿ ಎರಡನೇ ಎಫ್‌ಐಆರ್ ಹಾಗೂ ಮೇ 8ರಂದು ಬೆಂಗಳೂರಿನ ಸಿಐಡಿ ಠಾಣೆಯಲ್ಲಿ ಮತ್ತೊಂದು ಕೇಸ್‌ ಅನ್ನು ದಾಖಲು ಮಾಡಲಾಗಿದೆ.

ಕಠಿಣ ಸೆಕ್ಷನ್‌ ಜಡಿದ SIT! ಯಾವುದಕ್ಕೆ ಎಷ್ಟು ವರ್ಷ ಜೈಲು?

ಎರಡು ದಿನದ ಹಿಂದಷ್ಟೇ ಪ್ರಜ್ವಲ್‌ ರೇವಣ್ಣ ಮೇಲೆ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಈ ಮೂರನೇ ಎಫ್ಐಆರ್‌ನಲ್ಲಿ ಒಂದಕ್ಕಿಂತ ಒಂದು ಕಠಿಣ ಸೆಕ್ಷನ್‌ಗಳನ್ನು ಹಾಕಲಾಗಿದೆ. ಹೀಗಾಗಿ ಪ್ರಜ್ವಲ್‌ ಒಂದು ವೇಳೆ ಅರೆಸ್ಟ್‌ ಆಗಿ ಅಪರಾಧ ಸಾಬೀತಾದರೆ ಜೈಲು ಶಿಕ್ಷೆ ಗ್ಯಾರಂಟಿ ಎನ್ನಲಾಗಿದೆ.

ಸಿಐಡಿಯ ಸೈಬರ್ ಕ್ರೈಂನಲ್ಲಿ ದಾಖಲಾಗಿರುವ ಈ ಪ್ರಕರಣದಲ್ಲೂ ಸಾಕಷ್ಟು ಗಂಭೀರವಾದ ಸೆಕ್ಷನ್‌ಗಳನ್ನು ಹಾಕಲಾಗಿದೆ. ಇದೇ ಮೇ 8ರಂದು ದಾಖಲಾಗಿರುವ ಎಫ್ಐಆರ್ ಇದಾಗಿದ್ದು, ಐಪಿಸಿ 376(2)(N), 376(2)(K), 354(A) 354(B), 354(C) ಹಾಗೂ 506 ಸೆಕ್ಷನ್‌ಗಳನ್ನು ಹಾಕಲಾಗಿದೆ. ಅದರಲ್ಲಿ 376(2)(n) ಅನ್ನು ಸೆಕ್ಷನ್ ನಿರಂತರವಾಗಿ ಅತ್ಯಾಚಾರವನ್ನು ನಡೆಸಲಾಗಿದೆ ಎಂದು ದಾಖಲು ಮಾಡಲಾಗಿದೆ.

ಇನ್ನು ಇತ್ತ ಇದೇ ವಿಚಾರವಾಗಿ ಇಬ್ಬರು ಸರ್ಕಾರಿ ಅಧಿಕಾರಿಗಳನ್ನೂ ಕೂಡ ಎಸ್‌ಐಟಿ ತನಿಖೆ ವೇಳೆ ವಿಚಾರಣೆ ನಡೆಸಿದೆ.‌ ವರ್ಗಾವಣೆ ಮಾಡಿಸುತ್ತೇನೆ ಎಂದು ಹೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬುದು ಸಂತ್ರಸ್ತೆಯಾದ ಸರ್ಕಾರಿ ಅಧಿಕಾರಿಯ ಆರೋಪವಾಗಿದೆ. ಮೊದಲಿಗೆ ಈ ವಿಚಾರದಲ್ಲಿ ನಮ್ಮನ್ನು ಎಳಿಯಬೇಡಿ ಎಂದಿದ್ದ ಸಂತ್ರಸ್ತೆಯರು ಕೊನೆಗೂ ಎಸ್‌ಐಟಿ ಮುಂದೆ ಹಾಜರಾಗಿ ಕೆಲವು ವಿಷಯಗಳನ್ನು ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ.

ಇತ್ತ ಕಿಡ್ನ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಕಿಡ್ನ್ಯಾಪ್ ಮಾಡಿದ್ದು ಮೂರು ಜನರಲ್ಲ ಏಳು ಜನ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎನ್ನಲಾಗಿದೆ. ಕರೆದೊಯ್ಯಲು ಒಬ್ಬರು, ಕೂಡಿ ಹಾಕಲು ಒಬ್ಬರು ಎಂಬಂತೆ ಒಟ್ಟಾರೆಯಾಗಿ ಏಳು ಜನರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಎಸ್‌ಐಟಿ ಹೇಳುತ್ತಿದೆ. ಈ ವಿಚಾರವಾಗಿ ತನಿಖೆ ನಡೆಯುತ್ತಿದೆ.

ಯಾವ ಯಾವ ಸೆಕ್ಷನ್‌ ಏನು ಹೇಳುತ್ತದೆ?

  • 376(2)(N)- ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ.
    ಶಿಕ್ಷೆ – ಕನಿಷ್ಠ 10 ವರ್ಷ ಹಾಗೂ ಗರಿಷ್ಠ ಜೀವಾವಧಿ ಶಿಕ್ಷೆ
  • ಸೆಕ್ಷನ್‌ – IPC 376(2)(K) – ಜನಪ್ರತಿನಿಧಿಯಾಗಿ ಅಧಿಕಾರ ದುರ್ಬಳಕೆ, ಅತ್ಯಾಚಾರ
    ಶಿಕ್ಷೆ – ಕನಿಷ್ಠ 7ರಿಂದ 10 ವರ್ಷ ಹಾಗೂ ಗರಿಷ್ಠ ಜೀವಾವಧಿ ಶಿಕ್ಷೆ
  • ಸೆಕ್ಷನ್‌ – IPC 354(A) – ಲೈಂಗಿಕ ಕೃತ್ಯಕ್ಕೆ ಆಮಿಷವೊಡ್ಡಿದ ರೀತಿ ನಡವಳಿಕೆ, ದೌರ್ಜನ್ಯ
    ಶಿಕ್ಷೆ – ಗರಿಷ್ಠ 3 ವರ್ಷ ಜೈಲು ಶಿಕ್ಷೆ
  • ಸೆಕ್ಷನ್‌ – IPC 354(B) – ಮಹಿಳೆಯ ಬಟ್ಟೆ ಹಿಡಿದು ಎಳೆದಾಡಿ ಮಾನಭಂಗ ಯತ್ನ
    ಶಿಕ್ಷೆ – ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆ
  • ಸೆಕ್ಷನ್‌ – IPC 354(C)-ಖಾಸಗಿ ಚಿತ್ರ ಸೆರೆಹಿಡಿದು ವೀಕ್ಷಣೆ ಮಾಡುವುದು
    ಶಿಕ್ಷೆ – ಗರಿಷ್ಠ ಏಳು ವರ್ಷ ಜೈಲು ಶಿಕ್ಷೆ
  • ಸೆಕ್ಷನ್‌ – IPC 506 – ಬೆದರಿಕೆ ಹಾಕಿರುವುದಾಗಿ ಪ್ರಜ್ವಲ್‌ ವಿರುದ್ಧ FIRನಲ್ಲಿ ಉಲ್ಲೇಖ
    ಶಿಕ್ಷೆ – ಕನಿಷ್ಠ 2 ವರ್ಷ ಅಥವಾ ಏಳು ವರ್ಷ ಜೈಲು ಶಿಕ್ಷೆ

ಹೀಗೆ ಮೂರನೇ ಎಫ್ಐಆರ್‌ನಲ್ಲಿ ಕಠಿಣ ಸೆಕ್ಷನ್‌ಗಳನ್ನು ಎಸ್ಐಟಿ ಹಾಕಿದ್ದು, ಪ್ರಜ್ವಲ್‌ಗೆ ಭಾರಿ ಉರುಳಾಗಲಿದೆ.

ಸುಳ್ಳು ಕೇಸ್‌ ಹಾಕಲು ಮಹಿಳೆಯನ್ನು SIT ಸಂಪರ್ಕ ಮಾಡಿಲ್ಲ; ಕಾಟ ಕೊಟ್ಟವನನ್ನು ಬಿಡಲ್ಲ!

ಈಗಾಗಲೇ ಲೈಂಗಿಕ ದೌರ್ಜನ್ಯ (Physical abuse) ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna case) ವಿರುದ್ಧ ಸುಳ್ಳು ಕೇಸ್ (Fake case) ಹಾಕಲು ತನಗೆ ಒತ್ತಾಯಿಸಲಾಗುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (National Commission for Women) ಮಹಿಳೆಯೊಬ್ಬರು ನೀಡಿರುವ ದೂರು ಹೊಸ ತಿರುವನ್ನು ಪಡೆದುಕೊಂಡಿದೆ. ಎಸ್‌ಐಟಿಯಿಂದ ಯಾರೂ ಆಕೆಯನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ. ಆದರೆ, ಸಂಪರ್ಕ ಮಾಡಿದವರ ಬಗ್ಗೆ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಐಟಿ ತಿಳಿಸಿದೆ.

ಸಂತ್ರಸ್ತ ಮಹಿಳೆಗೆ ಎಸ್ಐಟಿ ಅಧಿಕಾರಿ ಎಂದು ಕರೆ ಮಾಡಿ ತೊಂದರೆ ಮಾಡಿರುವ ಆರೋಪ ವಿಚಾರವಾಗಿ ಎಸ್ಐಟಿ ಉನ್ನತ ಮೂಲಗಳು ಸ್ಪಷ್ಟನೆ ನೀಡಿದೆ. ಅಲ್ಲದೆ, ಎನ್‌ಸಿಡಬ್ಲ್ಯು ದೂರನ್ನು ಎಸ್‌ಐಟಿಗೆ ರವಾನಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್‌ಐಟಿ, ಗುರುವಾರವಷ್ಟೇ ಈ ಮಹಿಳೆಯ ಬಗ್ಗೆ ಎಸ್‌ಐಟಿಗೆ ತಿಳಿದುಬಂದಿದೆ.

ಎಸ್‌ಐಟಿಯಿಂದ ಯಾರೂ ಆಕೆಯನ್ನು ಈ ಹಿಂದೆ ಸಂಪರ್ಕಿಸಿಲ್ಲ. ಮಹಿಳಾ ಆಯೋಗಕ್ಕೆ ದೂರು ನೀಡಿದ ಮಹಿಳೆಯು ನಮಗೆ ಯಾವುದೇ ದೂರು ನೀಡಿಲ್ಲ. ಮಹಿಳೆಗೆ ಕರೆ ಮಾಡಿದ ವ್ಯಕ್ತಿಯ ಗುರುತು ತಿಳಿಯಲು ಎಸ್‌ಐಟಿ ವಿಚಾರಣೆ ಆರಂಭಿಸಿದೆ. ಅಂತಹವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತೆ ಕೋರಿ ಮಹಿಳಾ ಆಯೋಗಕ್ಕೆ ಪತ್ರ ಬರೆದಿರುವ ಮಹಿಳೆ

ಪ್ರಜ್ವಲ್‌ ರೇವಣ್ಣ ಹಾಗೂ ಎಚ್‌.ಡಿ ರೇವಣ್ಣ (HD revanna jailed) ಅವರ ವಿರುದ್ಧ ರಾಜಕೀಯ ಪ್ರೇರಿತ ಸುಳ್ಳು ದೂರುಗಳನ್ನು ದಾಖಲಿಸಲಾಗುತ್ತಿದೆ ಎಂದು ಜೆಡಿಎಸ್‌ (JDS) ಪ್ರತಿಭಟನೆ ನಡೆಸುತ್ತಿರುವುದರ ಹಿನ್ನೆಲೆಯಲ್ಲಿ ಈ ದೂರು ಮಹತ್ವ ಪಡೆದುಕೊಂಡಿದೆ. ಸೂಕ್ತ ಭದ್ರತೆಗೆ ಕೋರಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮಹಿಳೆಯೊಬ್ಬರು ಪತ್ರ ಬರೆದಿದ್ದಾರೆ.

ಪ್ರಜ್ವಲ್ ರೇವಣ್ಣ ವಿರುದ್ಧ ದೂರು ನೀಡುವಂತೆ ನನಗೆ ಒತ್ತಡ ಹಾಕಲಾಗುತ್ತಿದೆ. ಮೂವರು ಸಿವಿಲ್ ಡ್ರೆಸ್‌ನಲ್ಲಿ ಬಂದವರು ಒತ್ತಡ ಹಾಕಿದ್ದು, ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಬೆದರಿಕೆ ಹಾಕಿದ್ದಾರೆ. ನನ್ನ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಿ ಎಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮಹಿಳೆ ಪತ್ರ ಬರೆದಿದ್ದಾರೆ.

ಮಹಿಳೆ ಪತ್ರ ಬರೆದಿರುವ ಬಗ್ಗೆ ವಿಸ್ತಾರ ನ್ಯೂಸ್‌ಗೆ ರಾಷ್ಟ್ರೀಯ ಮಹಿಳಾ ಆಯೋಗ ಮಾಹಿತಿ ನೀಡಿದೆ. ಹಾಸನ ಮೂಲದ ಮಹಿಳೆ ಪತ್ರ ಬರೆದಿದ್ದು, ಪತ್ರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮಾಹಿತಿ ನೀಡಲಾಗಿದೆ. ದೂರಿನ ಪ್ರತಿ ಹಾಗೂ ಸೂಕ್ತ ಭದ್ರತೆಗೆ ಮನವಿ ಮಾಡಲಾಗಿದೆ.

ಇದನ್ನೂ ಓದಿ: Lok Sabha Election 2024: ಲೋಕಸಭಾ ಪ್ರಚಾರಕ್ಕೆ 26 ಸಾವಿರ ಕಿಲೋ ಮೀಟರ್ ಸಂಚಾರ, ದಿನಕ್ಕೆ ಸರಾಸರಿ 14-18 ಗಂಟೆ ಸಿಎಂ ಪ್ರಚಾರ!

ಪ್ರಜ್ವಲ್ ಕೇಸ್‌ನಲ್ಲಿ ಮಹಿಳೆಗೆ ದೂರು ನೀಡುವಂತೆ ಒತ್ತಡ ಹಾಕಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆಯೋಗದಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಇಂದು ಮತ್ತೆ ಪತ್ರ ಬರೆಯುತ್ತೇವೆ. ಆಯೋಗದ ಅಧಿಕಾರಿಗಳು ಪತ್ರ ಬರೆದ ಮಹಿಳೆಯನ್ನು ಭೇಟಿ ಮಾಡುತ್ತೇವೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ತಿಳಿಸಿದೆ.

Continue Reading

ಪ್ರಮುಖ ಸುದ್ದಿ

Prajwal Revanna Case: ಸ್ಫೋಟಕ ಆಡಿಯೊ ರಿಲೀಸ್‌ ಮಾಡಿದ ಬೆನ್ನಲ್ಲೇ ವಕೀಲ ದೇವರಾಜೇಗೌಡ ವಶಕ್ಕೆ

Prajwal Revanna Case: ಹಾಸನ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿ ಸ್ಫೋಟಕ ಆಡಿಯೊ ರಿಲೀಸ್‌ ಮಾಡಿದ ಬೆನ್ನಲ್ಲೇ ವಕೀಲ ದೇವರಾಜೇಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

VISTARANEWS.COM

on

Prajwal Revanna Case
Koo

ಬೆಂಗಳೂರು: ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ ಸ್ಫೋಟಕ ಆಡಿಯೊ ಹೊರಬಿದ್ದಿದೆ. ಇತ್ತೀಚೆಗೆ ಈ ಹಗರಣದಲ್ಲಿ ಡಿಸಿಎಂ ಡಿಕೆಶಿ ಕೈವಾಡ ಎಂದು ಆರೋಪಿಸಿದ್ದ ವಕೀಲ ದೇವರಾಜೇಗೌಡ, ಇದೀಗ ಮತ್ತೊಂದು ಆಡಿಯೊ ಬಾಂಬ್‌ ಹಾಕಿದ್ದಾರೆ. ದೇವರಾಜೇಗೌಡ-ಶಿವರಾಮೇಗೌಡ ನಡುವಿನ ಮಾತುಕತೆಯ 36 ಸೆಕೆಂಡ್ಸ್‌ ಆಡಿಯೊ ವೈರಲ್‌ ಆಗಿದೆ. ಇದರ ಬೆನ್ನಲ್ಲೇ ವಕೀಲ ದೇವರಾಜೇಗೌಡ ಅವರನ್ನು ಹಿರಿಯೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಿರಿಯೂರಿನಲ್ಲಿ ವಕೀಲ ದೇವರಾಜೇಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಎಸ್‌ಐಟಿಗೆ ಒಪ್ಪಿಸಲು ತಯಾರಿ ನಡೆಸಿದ್ದಾರೆ. ಹೊಳೆನರಸೀಪುರ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಬೆಂಗಳೂರಿನಿಂದ ಬಳ್ಳಾರಿಗೆ ಹೋಗುತ್ತಿದ್ದಾಗ ಅವರನ್ನು ವಶಕ್ಕೆ ಪಡೆಯಲಾಗಿದೆ. ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಹೊಳೆನರಸೀಪುರ ಠಾಣೆಯಲ್ಲಿ ದೇವರಾಜೇಗೌಡ ವಿರುದ್ಧ ಏ.1ರಂದು ಕೇಸ್‌ ದಾಖಲಾಗಿತ್ತು.

ಆಡಿಯೊ ವೈರಲ್‌

ಪೊಲೀಸರು ವಶಕ್ಕೆ ಪಡೆಯುವ ಮುನ್ನ ವಿಡಿಯೊದಲ್ಲಿ ಮಾತನಾಡಿರುವ ವಕೀಲ ದೇವರಾಜೇಗೌಡ, ನಾನು ಎಲ್ಲೂ ಕಾಣೆ ಆಗಿಲ್ಲಾ. ಮೂರು ದಿನ ರಜೆ ಇರುವುದರಿಂದ ದೇವಾಲಯಕ್ಕೆ ಹೊಗುತ್ತಿದ್ದೇನೆ. ಕಾಣೆ ಆಗುವ ಪರಿಸ್ಥಿತಿ ನನಗೆ ಬಂದಿಲ್ಲ. ಕುಟುಂಬ ಸಮೇತ ದೇವಸ್ಥಾನಕ್ಕೆ ತೆರಳಿದ್ದೇನೆ. ಆಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಇನ್ನು ಇದೇ ವೇಳೆ ಹಾಸನ ಅಶ್ಲೀಲ‌ ವಿಡಿಯೋ ಪ್ರಕರಣದ ಸಂಬಂಧ ಅಜ್ಞಾತ ಸ್ಥಳದಿಂದ ದೇವರಾಜೇಗೌಡ ಮೂರು ಆಡಿಯೊ ಕ್ಲಿಪ್ ಬಿಡುಗಡೆ ಮಾಡಿದ್ದಾರೆ. ಮಾಜಿ ಸಂಸದ ಶಿವರಾಮೇಗೌಡ ಜತೆ ಮಾತನಾಡಿರುವ ಎನ್ನಲಾದ ಎರಡು ಆಡಿಯೊ ತುಣುಕು ವೈರಲ್‌ ಆಗಿದೆ.

ಹನಿಟ್ರ್ಯಾಪ್ ಸಂಬಂಧ ಮಹಿಳೆ ಗಂಡನ ಜತೆ ಮಾತನಾಡಿದ ಒಂದು ಆಡಿಯೊ ಇದೆ. ಇನ್ನು ಡಿಕೆಶಿ ವಿಚಾರ ಶಿವರಾಮೇಗೌಡ ಜತೆ ದೇವರಾಜೇಗೌಡ ಮಾತನಾಡುತ್ತಿರುವ ಆಡಿಯೊ ಕೂಡ ಇದ್ದು, ಎಸ್‌ಐಟಿ ವಿಚಾರಣೆಯಲ್ಲಿ ಡಿಕೆಶಿ ಹೆಸರೇಳದಂತೆ ಶಿವರಾಮೇಗೌಡ ಸೂಚಿಸಿದ್ದಾರೆ.

ಇದನ್ನೂ ಓದಿ | Prajwal Revanna case: ಪ್ರಜ್ವಲ್‌ ಮೇಲೆ ಮತ್ತೊಂದು ಅತ್ಯಾಚಾರ ಕೇಸ್‌; ಕಠಿಣ ಸೆಕ್ಷನ್‌ ಜಡಿದ SIT! ಯಾವುದಕ್ಕೆ ಎಷ್ಟು ವರ್ಷ ಜೈಲು?

ದೇವರಾಜೇಗೌಡ-ಶಿವರಾಮೇಗೌಡ ನಡುವಿನ ಮಾತುಕತೆಯ 36 ಸೆಕೆಂಡ್ಸ್‌ ಆಡಿಯೊ ವೈರಲ್‌ ಆಗಿದ್ದು, ಇದರಲ್ಲಿ ನಮಗೆ ಏನಾದರೂ ಎಸ್‌ಐಟಿ ನೋಟಿಸ್‌ ಕೊಡುತ್ತಾರಾ ಎಂದು ವಕೀಲ ಕೇಳಿದ್ದಾರೆ. ಆಗ ಈ ಹಿಂದಿನಿಂದ ರೇವಣ್ಣ ಫ್ಯಾಮಿಲಿ ವಿರುದ್ಧ ಹೋರಾಡುತ್ತಿದ್ದೀನಿ, ಕೋರ್ಟ್‌ನಲ್ಲೂ ಹೋರಾಟ ಮಾಡುತ್ತಿದ್ದೀನಿ ಅಂತ ಹೇಳು ಎಂದು ದೇವರಾಜೇಗೌಡಗೆ ಶಿವರಾಮೇಗೌಡ ಕಿವಿಮಾತು ಹೇಳಿರುವುದು ಆಡಿಯೊದಲ್ಲಿ ಇದೆ.

Continue Reading
Advertisement
Mr. & Mrs. Mahi'
ಪ್ರಮುಖ ಸುದ್ದಿ7 mins ago

Mr. & Mrs. Mahi : ಬಾಲಿವುಡ್​ ಬ್ಯೂಟಿ ಜಾಹ್ನವಿ ಕಪೂರ್​ ನಟನೆಯ ಮಿಸ್ಟರ್& ಮಿಸೆಸ್​ ಮಹಿ’ ಬಿಡುಗಡೆ ದಿನಾಂಕ ಪ್ರಕಟ

888 rupees postpaid plan with 15 OTT applications for JioFiber AirFiber customers
ತಂತ್ರಜ್ಞಾನ40 mins ago

Reliance Jio: ಜಿಯೋಫೈಬರ್, ಏರ್ ಫೈಬರ್ ಗ್ರಾಹಕರಿಗೆ ಆಫರ್‌; 15 ಒಟಿಟಿ ಅಪ್ಲಿಕೇಷನ್‌ ಜತೆಗೆ 888 ರೂ. ಪೋಸ್ಟ್ ಪೇಯ್ಡ್ ಪ್ಲಾನ್

Prajwal Revanna case SIT to issue Red Corner Notice against Prajwal
ಕ್ರೈಂ46 mins ago

Prajwal Revanna case: ಪ್ರಜ್ವಲ್‌ ರೇವಣ್ಣ ವಿರುದ್ಧ ರೆಡ್‌ ಕಾರ್ನರ್ ಬ್ರಹ್ಮಾಸ್ತ್ರ; ಯಾವ ದೇಶದಲ್ಲಿದ್ದರೂ ಅರೆಸ್ಟ್‌ ಮಾಡಲು ಸಿದ್ಧತೆ?

IPL 2024
ಕ್ರೀಡೆ58 mins ago

IPL 2024 : ಐಪಿಎಲ್​ನಲ್ಲಿ ಹೊಸ ಇತಿಹಾಸ; ಸಚಿನ್​ ದಾಖಲೆ ಮುರಿದ ಸಾಯಿ ಸುದರ್ಶನ್​

US
ಪ್ರಮುಖ ಸುದ್ದಿ1 hour ago

ಮಹಿಳೆಯ ಕುತ್ತಿಗೆಗೆ ಬೆಲ್ಟ್‌ನಿಂದ ಬಿಗಿದು, ರಸ್ತೆ ಬದಿಯೇ ಅತ್ಯಾಚಾರ ಎಸಗಿದ ದುಷ್ಟ; ಭೀಕರ ವಿಡಿಯೊ ಇಲ್ಲಿದೆ

Prajwal Revanna case Three FIRs against Prajwal Wanted list in all three
ಕ್ರೈಂ1 hour ago

Prajwal Revanna case: ಪ್ರಜ್ವಲ್‌ ಮೇಲೆ ಒಟ್ಟು ಮೂರು FIR; ಮೂರರಲ್ಲೂ ವಾಂಟೆಡ್‌ ಲಿಸ್ಟ್‌ನಲ್ಲಿ ಸಂಸದ!

Prajwal Revanna Case
ಪ್ರಮುಖ ಸುದ್ದಿ1 hour ago

Prajwal Revanna Case: ಸ್ಫೋಟಕ ಆಡಿಯೊ ರಿಲೀಸ್‌ ಮಾಡಿದ ಬೆನ್ನಲ್ಲೇ ವಕೀಲ ದೇವರಾಜೇಗೌಡ ವಶಕ್ಕೆ

Prajwal Revanna case Another rape case filed against Prajwal
ಕ್ರೈಂ2 hours ago

Prajwal Revanna case: ಪ್ರಜ್ವಲ್‌ ಮೇಲೆ ಮತ್ತೊಂದು ಅತ್ಯಾಚಾರ ಕೇಸ್‌; ಕಠಿಣ ಸೆಕ್ಷನ್‌ ಜಡಿದ SIT! ಯಾವುದಕ್ಕೆ ಎಷ್ಟು ವರ್ಷ ಜೈಲು?

IPL 2024
ಕ್ರೀಡೆ2 hours ago

IPL 2024 : “ಶಾರುಖ್​ ಎಂದೂ ನಮ್ಮನ್ನು ಪ್ರಶ್ನಿಸಿಲ್ಲ”, ಎಲ್​ಎಸ್​​ಜಿ ಮಾಲೀಕನಿಗೆ ತಿರುಗೇಟು ಕೊಟ್ಟ ಗಂಭೀರ್​

Dr C N Manjunath
ಕರ್ನಾಟಕ2 hours ago

Dr C N Manjunath: ಮತ್ತೆ ವೈದ್ಯ ವೃತ್ತಿಗೆ ಮರಳಿದ್ದಾರೆ ಹೃದ್ರೋಗ ತಜ್ಞ ಡಾ.ಸಿ.ಎನ್‌. ಮಂಜುನಾಥ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Physical Abuse The public prosecutor called the client woman to the lodge
ಕ್ರೈಂ9 hours ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ10 hours ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ11 hours ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ18 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ1 day ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ1 day ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ1 day ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ1 day ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

ಟ್ರೆಂಡಿಂಗ್‌