ಕಾಂಗ್ರೆಸ್‌ ಅಧ್ಯಕ್ಷತೆಗೆ ಇಂದು ಚುನಾವಣೆ, ಮಲ್ಲಿಕಾರ್ಜುನ ಖರ್ಗೆ ಆಯ್ಕೆಗೆ ಕ್ಷಣಗಣನೆ - Vistara News

ದೇಶ

ಕಾಂಗ್ರೆಸ್‌ ಅಧ್ಯಕ್ಷತೆಗೆ ಇಂದು ಚುನಾವಣೆ, ಮಲ್ಲಿಕಾರ್ಜುನ ಖರ್ಗೆ ಆಯ್ಕೆಗೆ ಕ್ಷಣಗಣನೆ

ಶತಮಾನ ದಾಟಿರುವ ಭಾರತೀಯ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಗಾದಿಗೆ ಇಂದು ಐದನೇ ಬಾರಿಯ ಚುನಾವಣೆ ನಡೆಯಲಿದೆ. ಮಲ್ಲಿಕಾರ್ಜುನ ಖರ್ಗೆ, ಶಶಿ ತರೂರ್‌ ಸ್ಪರ್ಧಿಗಳಾಗಿದ್ದಾರೆ.

VISTARANEWS.COM


on

AICC president
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಅಖಿಲ ಭಾರತ ಕಾಂಗ್ರೆಸ್ ಪಕ್ಷದ (ಎಐಸಿಸಿ) ಅತ್ಯುನ್ನತ ಹುದ್ದೆಗೆ ಇಂದು ಮತದಾನ ನಡೆಯಲಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯ ತನಕ ಮತದಾನ ನಡೆಯಲಿದೆ.

ಮತದಾನಕ್ಕಾಗಿ ಕೆಪಿಸಿಸಿ ಕಚೇರಿಯಲ್ಲಿ ಒಟ್ಟು 3 ಬೂತ್ ವ್ಯವಸ್ಥೆ ಮಾಡಲಾಗಿದ್ದು, ಪ್ರದೇಶ ಚುನಾವಣಾಧಿಕಾರಿಯಾಗಿ ನಾಚಿಯಪ್ಪನ್ ನೇಮಕ ಮಾಡಲಾಗಿದೆ. ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಬಳ್ಳಾರಿಯ ಬಳ್ಳಾರಿಯ ಸಂಗನಕಲ್ಲುನಲ್ಲಿ ರಾಹುಲ್ ಮತದಾನ ಮಾಡಲಿದ್ದಾರೆ. ಅಧ್ಯಕ್ಷ ಸ್ಥಾನದ ಸ್ಪರ್ಧಿ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಘಟಾನುಘಟಿಗಳು ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಮತದಾನ ಮಾಡಲಿದ್ದಾರೆ.

ಪ್ರದೇಶ ಕಾಂಗ್ರೆಸ್‌ ಸಮಿತಿಯ 40ಕ್ಕೂ ಅಧಿಕ ಮಂದಿ ಸದಸ್ಯರು ಭಾರತ್ ಜೋಡೋ ಯಾತ್ರೆಯಲ್ಲಿರುವುದರಿಂದ ಅವರಿಗೂ ಬಳ್ಳಾರಿಯಲ್ಲೇ ಮತದಾನಕ್ಕೆ ಅವಕಾಶ ಮಾಡಲಾಗಿದೆ. ಮತದಾನಕ್ಕೆ ಬ್ಯಾಲೆಟ್ ಪೇಪರ್ ಬಳಕೆ ಮಾಡಲಾಗುತ್ತದೆ. ದೇಶಾದ್ಯಂತ ಒಟ್ಟು 9100 ಮತದಾರರು ಮತದಾನಕ್ಕೆ ಅರ್ಹರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 503 ಮಂದಿ ಮತದಾನಕ್ಕೆ ಅರ್ಹರಿದ್ದಾರೆ. 479 ಪಿಸಿಸಿ ಮೆಂಬರ್ಸ್ ಹಾಗೂ ಸಿಎಲ್‌ಪಿ ವತಿಯಿಂದ 15 ಮಂದಿ, ರಾಜ್ಯವನ್ನು ಪ್ರತಿನಿಧಿಸುವ ಎಐಸಿಸಿ ಸದಸ್ಯರು ಸೇರಿದಂತೆ ಒಟ್ಟು 503 ಜನ ಮತದಾನ ಮಾಡಲಿದ್ದಾರೆ. ಅಕ್ಟೋಬರ್ 19ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ | Congress President | ಅಧ್ಯಕ್ಷ ಚುನಾವಣೆಗೆ ಮುನ್ನವೇ ಕಾಂಗ್ರೆಸ್‌ ಮಹತ್ವದ ಬದಲಾವಣೆ, ಏನದು?

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಇದು ಐದನೇ ಚುನಾವಣೆಯಾಗಿದೆ. ಮೊದಲ ಚುನಾವಣೆಯಲ್ಲಿ ಸುಭಾಸ್ ಚಂದ್ರ ಬೋಸ್ ಹಾಗೂ ಪಟ್ಟಾಭಿ ಸೀತಾರಾಮಯ್ಯ ನಡುವೆ ಪೈಪೋಟಿ ಇತ್ತು. ಸುಭಾಸ್ ಚಂದ್ರ ಬೋಸ್ ಗೆಲುವು ದಾಖಲಿಸಿದ್ದರು. 1950ರಲ್ಲಿ ನಡೆದ ಚುನಾವಣೆಯಲ್ಲಿ ಆಚಾರ್ಯ ಕೃಪಲಾನಿ ಹಾಗೂ ಪುರುಷೋತ್ತಮ ದಾಸ ಟಂಡನ್ ನಡುವೆ ಪೈಪೋಟಿಯಿತ್ತು. ಪುರುಷೋತ್ತಮ ದಾಸ ಟಂಡನ್ ಜಯ ಗಳಿಸಿದ್ದರು. 1997ರಲ್ಲಿ ಸೀತಾರಾಮ್ ಕೇಸರಿ ಗೆಲುವು ಕಂಡಿದ್ದರು. 2000ರಲ್ಲಿ ಸೋನಿಯಾ ಗಾಂಧಿ ಗೆದ್ದು ಜಿತೇಂದ್ರ ಪ್ರಸಾದ್ ಸೋಲು ಅನುಭವಿಸಿದ್ದರು.

ಪ್ರಸ್ತುತ 2022ರಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರು ನಡುವೆ ಪೈಪೋಟಿ ನಡೆದಿದೆ. ಮಲ್ಲಿಕಾರ್ಜುನ ಖರ್ಗೆಗೆ ಗಾಂಧಿ ಕುಟುಂಬದ ಬೆಂಬಲವಿದೆ. ಶಶಿ ತರೂರ್‌ಗೆ ತಮ್ಮ ರಾಜ್ಯದ ಮುಖಂಡರಿಂದಲೂ ಬೆಂಬಲ ಸಾಕಷ್ಟು ಇಲ್ಲ. ಹಾಗಾಗಿ ಬಹುತೇಕ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಖಚಿತ ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Cloudburst: ಮೇಘಸ್ಫೋಟದಿಂದ ಹಿಮಾಚಲ ಪ್ರದೇಶದಲ್ಲಿ ಮೃತರ ಸಂಖ್ಯೆ 13ಕ್ಕೆ ಏರಿಕೆ; 40ಕ್ಕೂ ಹೆಚ್ಚು ಮಂದಿ ನಾಪತ್ತೆ

Cloudburst: ಹಿಮಾಚಲ ಪ್ರದೇಶದ 3 ಜಿಲ್ಲೆಗಳಲ್ಲಿ ಕಂಡುಬಂದ ಮೇಘಸ್ಫೋಟ ದಿಂದ ಉಂಟಾದ ದಿಢೀರ್‌ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, ಮಂಡಿ ಮತ್ತು ಶಿಮ್ಲಾ ಜಿಲ್ಲೆಗಳಲ್ಲಿ ಭಾನುವಾರ 4 ಮೃತದೇಹ ಪತ್ತೆಯಾಗಿದೆ. ಕಾಣೆಯಾದ 40ಕ್ಕೂ ಅಧಿಕ ಮಂದಿ ಇನ್ನೂ ಪತ್ತೆಯಾಗಿಲ್ಲ. ಜುಲೈ 31ರ ರಾತ್ರಿ ಹಿಮಾಚಲ ಪ್ರದೇಶದ ಕುಲ್ಲುವಿನ ನಿರ್ಮಾಂಡ್, ಸೈಂಜ್ ಮತ್ತು ಮಲಾನಾ, ಮಂಡಿಯ ಪಧರ್ ಮತ್ತು ಶಿಮ್ಲಾದ ರಾಂಪುರ ಉಪವಿಭಾಗದಲ್ಲಿ ಸರಣಿ ಮೇಘಸ್ಫೋಟ ಸಂಭವಿಸಿತ್ತು.

VISTARANEWS.COM


on

Cloudburst
Koo

ಧರ್ಮಶಾಲಾ: ಹಿಮಾಚಲ ಪ್ರದೇಶ (Himachal Pradesh)ದ 3 ಜಿಲ್ಲೆಗಳಲ್ಲಿ ಕಂಡುಬಂದ ಮೇಘಸ್ಫೋಟ (Cloudburst)ದಿಂದ ಉಂಟಾದ ದಿಢೀರ್‌ ಪ್ರವಾಹ (Flash floods)ದಿಂದ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, ಮಂಡಿ ಮತ್ತು ಶಿಮ್ಲಾ ಜಿಲ್ಲೆಗಳಲ್ಲಿ ಭಾನುವಾರ 4 ಮೃತದೇಹ ಪತ್ತೆಯಾಗಿದೆ. ಕಾಣೆಯಾದ 40ಕ್ಕೂ ಅಧಿಕ ಮಂದಿ ಇನ್ನೂ ಪತ್ತೆಯಾಗಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಜುಲೈ 31ರ ರಾತ್ರಿ ಹಿಮಾಚಲ ಪ್ರದೇಶದ ಕುಲ್ಲುವಿನ ನಿರ್ಮಾಂಡ್, ಸೈಂಜ್ ಮತ್ತು ಮಲಾನಾ, ಮಂಡಿಯ ಪಧರ್ ಮತ್ತು ಶಿಮ್ಲಾದ ರಾಂಪುರ ಉಪವಿಭಾಗದಲ್ಲಿ ಸರಣಿ ಮೇಘಸ್ಫೋಟ ಸಂಭವಿಸಿತ್ತು. ಕಳೆದ ಐದು ದಿನಗಳಲ್ಲಿ ಉಂಟಾದ ಮೇಘಸ್ಫೋಟ, ಪ್ರವಾಹ ಮತ್ತು ಭೂಕುಸಿತದಿಂದಾಗಿ ಹಿಮಾಚಲ ಪ್ರದೇಶದಲ್ಲಿನ ಒಟ್ಟು 87 ರಸ್ತೆಗಳ ಸಂಚಾರ ನಿರ್ಬಂಧಿಲಾಗಿದೆ.

ಕಾರ್ಯಾಚರಣೆ

ಯಂತ್ರೋಪಕರಣಗಳು, ಸ್ನಿಫರ್ ಶ್ವಾನದಳ, ಡ್ರೋನ್‌ ಮತ್ತು ಇತರ ಉಪಕರಣಗಳ ಮೂಲಕ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಅವಶೇಷಗಳಡಿ ಸಿಲುಕಿರುವವರ ಪತ್ತೆ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ. ಶಿಮ್ಲಾ ಮತ್ತು ಕುಲ್ಲು ಗಡಿಯಲ್ಲಿರುವ ಸಮೇಜ್, ಧಾರಾ ಸರ್ದಾ ಮತ್ತು ಕುಶ್ವಾ ಎಂಬ ಮೂರು ಹಳ್ಳಿಗಳಲ್ಲಿ ದುರಂತ ಸಂಭವಿಸಿದಾಗಿನಿಂದ ವಿದ್ಯುತ್ ಇಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಹೀಗಾಗಿ ವಿದ್ಯುತ್‌ ವ್ಯವಸ್ಥೆಯನ್ನು ಮರುಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಸೇನೆ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಐಟಿಬಿಪಿ, ಸಿಐಎಸ್ಎಫ್, ಹಿಮಾಚಲ ಪ್ರದೇಶ ಪೊಲೀಸ್ ಮತ್ತು ಗೃಹರಕ್ಷಕ ದಳದ 410 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ʼʼಹೆಚ್ಚುವರಿಯಾಗಿ ಇನ್ನೂ 4 ಜೆಸಿಬಿ ಯಂತ್ರಗಳನ್ನು ನಿಯೋಜಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ನದಿಯಲ್ಲಿ ನೀರಿನ ಹರಿವು ಕಡಿಮೆಯಾದ ಕಾರಣ ಶೋಧ ಕಾರ್ಯಕ್ಕೆ ವೇಗ ಸಿಕ್ಕಿದೆʼʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಂದೇ ಗ್ರಾಮದ 30 ಮಂದಿ ನಾಪತ್ತೆ

ರಾಂಪುರ ಉಪವಿಭಾಗದ ಸಮೇಜ್ ಗ್ರಾಮದ 30ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ಬುಧವಾರ ರಾತ್ರಿ ಹಠಾತ್ ಪ್ರವಾಹ ಸಂಭವಿಸಿದಾಗಿನಿಂದ ಹಳ್ಳಿಗಳಲ್ಲಿ ವಿದ್ಯುತ್‌ ಇಲ್ಲ ಮತ್ತು ರಸ್ತೆಗಳು ಸಹ ಹಾನಿಗೊಳಗಾಗಿವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಜೈ ರಾಮ್ ಠಾಕೂರ್ ಸೋಮವಾರ ಸಮೇಜ್ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಸಂಸತ್ರಸ್ತರೊಂದಿಗೆ ಸಮಾಲೋಚನೆ ನಡೆಸಿದರು.

ಇದನ್ನೂ ಓದಿ: Cloudburst: ಮೇಘಸ್ಫೋಟದಿಂದ ಉತ್ತರ ಭಾರತದಲ್ಲಿ ಅಲ್ಲೋಲ ಕಲ್ಲೋಲ; ಏನಿದು ವಿದ್ಯಮಾನ? ಹೇಗೆ ಸಂಭವಿಸುತ್ತದೆ? ಇಲ್ಲಿದೆ ವಿವರ

ಪರಿಹಾರ ಧನ ಘೋಷಣೆ

ರಾಜ್ಯ ಸರ್ಕಾರವು ಶುಕ್ರವಾರ ಸಂತ್ರಸ್ತರಿಗೆ 50,000 ರೂ.ಗಳ ತಕ್ಷಣದ ಪರಿಹಾರವನ್ನು ಘೋಷಿಸಿದೆ ಮತ್ತು ಮುಂದಿನ ಮೂರು ತಿಂಗಳವರೆಗೆ ಗ್ಯಾಸ್, ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ನೀಡುವುದಾಗಿ ತಿಳಿಸಿದೆ. ಜತೆಗೆ ತಿಂಗಳಿಗೆ 5,000 ರೂ.ಗಳನ್ನು ಬಾಡಿಗೆಗೆ ನೀಡಲಾಗುವುದು ಎಂದು ಹೇಳಿದೆ. ಮಳೆಗಾಲ ಆರಂಭವಾದಾಗಿನಿಂದ ಜೂನ್ 27ರಿಂದ ಆಗಸ್ಟ್ 4ರವರೆಗೆ ಹಿಮಾಚಲ ಪ್ರದೇಶ ಸುಮಾರು 662 ಕೋಟಿ ರೂ.ಗಳ ನಷ್ಟ ಅನುಭವಿಸಿದೆ. ಮಳೆ ಸಂಬಂಧಿತ ಘಟನೆಗಳಲ್ಲಿ ಒಟ್ಟು 85 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.

Continue Reading

ಪ್ರಮುಖ ಸುದ್ದಿ

Stock Market News: ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ, ರೂ.17.03 ಲಕ್ಷ ಕೋಟಿ ನಷ್ಟ

Stock Market News: ಷೇರು ಮಾರುಕಟ್ಟೆ ಮೌಲ್ಯ ಹಿಂದಿನ ದಾಖಲಾತಿ ರೂ.457.16 ಲಕ್ಷ ಕೋಟಿಯ ಮೌಲ್ಯದಿಂದ ರೂ.440.13 ಲಕ್ಷ ಕೋಟಿಗೆ ಒಟ್ಟಾರೆ ಮೌಲ್ಯ ಕುಸಿಯಿತು. ಸೆನ್ಸೆಕ್ಸ್ 2,037 ಅಂಕಗಳನ್ನು ಕಳೆದುಕೊಂಡು 78,944ಕ್ಕೆ ಮತ್ತು ನಿಫ್ಟಿ 661 ಅಂಕಗಳನ್ನು ಕಳೆದುಕೊಂಡು 24,056ಕ್ಕೆ ತಲುಪಿತು.

VISTARANEWS.COM


on

Indian stock market
Koo

ಮುಂಬಯಿ: ಷೇರು ಮಾರುಕಟ್ಟೆಯಲ್ಲಿ (Stock Market News) ಇಂದು ಸಂಭವಿಸಿದ ಭಾರೀ ಕುಸಿತದ ಪರಿಣಾಮ, ಹೂಡಿಕೆದಾರರ (Investors) ) ಸಂಪತ್ತು ರೂ.17.03 ಲಕ್ಷ ಕೋಟಿಯಷ್ಟು ನಷ್ಟ ಕಂಡಿತು. ಷೇರು ಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ (Sensex) ಮತ್ತು ನಿಫ್ಟಿ (Nifty) ಇಂದು ಎರಡು ಸಲ ಭಾರಿ ಕುಸಿತ ದಾಖಲಿಸಿದವು. ಅಮೆರಿಕದ ಆರ್ಥಿಕತೆಯ (US Economy recession) ಹಿಂಜರಿತದ ಭೀತಿಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಪಲ್ಲಟ ಆಗಿದೆ.

ಷೇರು ಮಾರುಕಟ್ಟೆ ಮೌಲ್ಯ ಹಿಂದಿನ ದಾಖಲಾತಿ ರೂ.457.16 ಲಕ್ಷ ಕೋಟಿಯ ಮೌಲ್ಯದಿಂದ ರೂ.440.13 ಲಕ್ಷ ಕೋಟಿಗೆ ಒಟ್ಟಾರೆ ಮೌಲ್ಯ ಕುಸಿಯಿತು. ಸೆನ್ಸೆಕ್ಸ್ 2,037 ಅಂಕಗಳನ್ನು ಕಳೆದುಕೊಂಡು 78,944ಕ್ಕೆ ಮತ್ತು ನಿಫ್ಟಿ 661 ಅಂಕಗಳನ್ನು ಕಳೆದುಕೊಂಡು 24,056ಕ್ಕೆ ತಲುಪಿತು. ಟಾಟಾ ಮೋಟಾರ್ಸ್, ಅದಾನಿ ಪೋರ್ಟ್ಸ್, ಎಂ & ಎಂ, ಎಸ್‌ಬಿಐ, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಟೈಟಾನ್‌ನಂತಹ ಷೇರುಗಳು ಸೆನ್ಸೆಕ್ಸ್ 5.04% ವರೆಗೆ ಕುಸಿದವು. ಸೆನ್ಸೆಕ್ಸ್‌ನ 30 ಷೇರುಗಳಲ್ಲಿ 28 ಷೇರುಗಳು ರೆಡ್‌ನಲ್ಲಿ ವಹಿವಾಟಾಗುತ್ತಿವೆ.

ನಿಫ್ಟಿ ಷೇರುಗಳು ಕುಸಿದವು. 46 ನಿಫ್ಟಿ ಶೇರುಗಳು ರೆಡ್‌ನಲ್ಲಿ ವಹಿವಾಟಾಗುತ್ತಿವೆ. ಟಾಟಾ ಮೋಟಾರ್ಸ್, ಹಿಂಡಾಲ್ಕೊ, ಒಎನ್‌ಜಿಸಿ, ಶ್ರೀರಾಮ್ ಫೈನಾನ್ಸ್ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ನಿಫ್ಟಿಯಲ್ಲಿ ಟಾಪ್ ಲೂಸರ್ ಆಗಿದ್ದು, ಆರಂಭಿಕ ವ್ಯವಹಾರಗಳಲ್ಲಿ 4.37% ವರೆಗೆ ಕುಸಿದಿದೆ.

ಇಂದು 88 ಷೇರುಗಳು ತಮ್ಮ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿವೆ. ಮತ್ತೊಂದೆಡೆ, ಸೋಮವಾರದ ಆರಂಭಿಕ ವ್ಯವಹಾರಗಳಲ್ಲಿ 42 ಷೇರುಗಳು ಬಿಎಸ್‌ಇಯಲ್ಲಿ ತಮ್ಮ 52 ವಾರಗಳ ಕನಿಷ್ಠ ಮಟ್ಟವನ್ನು ತಲುಪಿದವು. 3,421 ಷೇರುಗಳಲ್ಲಿ 394 ಷೇರುಗಳು ಹಸಿರು ಬಣ್ಣದಲ್ಲಿ ವಹಿವಾಟಾಗಿವೆ. ಸುಮಾರು 2891 ಷೇರುಗಳು ಕೆಂಪು ಬಣ್ಣದಲ್ಲಿ ವಹಿವಾಟು ನಡೆಸುತ್ತಿದ್ದರೆ 136 ಷೇರುಗಳು ಬದಲಾಗದೆ ಉಳಿದಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ ನಿವ್ವಳ ಆಧಾರದ ಮೇಲೆ ರೂ. 3,310 ಕೋಟಿ ಮೌಲ್ಯದ ಈಕ್ವಿಟಿಗಳನ್ನು ಮಾರಾಟ ಮಾಡಿದರು. ಆದರೆ ದೇಶೀಯ ಹೂಡಿಕೆದಾರರು ರೂ. 2,965.94 ಕೋಟಿ ಷೇರುಗಳನ್ನು ಖರೀದಿಸಿದ್ದಾರೆ. ಇದು ತಾತ್ಕಾಲಿಕ ಎನ್‌ಎಸ್‌ಇ ಡೇಟಾ.

ಶುಕ್ರವಾರದ ವಹಿವಾಟಿನಲ್ಲಿ ನಿಫ್ಟಿ 293 ಪಾಯಿಂಟ್‌ಗಳ ಕುಸಿತದೊಂದಿಗೆ 24,717 ಕ್ಕೆ ಕೊನೆಗೊಂಡಿತು ಮತ್ತು ಸೆನ್ಸೆಕ್ಸ್ 886 ಪಾಯಿಂಟ್‌ಗಳನ್ನು ಕಳೆದುಕೊಂಡು 80,982 ಕ್ಕೆ ತಲುಪಿದೆ.

ಅಮೆರಿಕದ ಮಾರುಕಟ್ಟೆಗಳು

ಯುಎಸ್ ಆರ್ಥಿಕತೆಯು ಆರ್ಥಿಕ ಹಿಂಜರಿತದ ಕಡೆಗೆ ಹೋಗಬಹುದು ಎಂದು ಆರ್ಥಿಕ ಮಾಹಿತಿ ತೋರಿಸಿದೆ. ಕಳೆದ ವಾರ ಬಿಡುಗಡೆಯಾದ ದುರ್ಬಲ US ಉದ್ಯೋಗಗಳ ಮಾಹಿತಿಯು ಶುಕ್ರವಾರ US ಮಾರುಕಟ್ಟೆಗಳಲ್ಲಿ ಕುಸಿತಕ್ಕೆ ಕಾರಣವಾಯಿತು. NASDAQ ಸಂಯೋಜಿತ ಸೂಚ್ಯಂಕವು 417 ಅಂಕಗಳು ಅಥವಾ 2.43% ರಷ್ಟು ಕುಸಿದು 16,776 ಕ್ಕೆ ತಲುಪಿದರೆ, S&P 500 ಸೂಚ್ಯಂಕ 1.84% ಅಥವಾ 100 ಪಾಯಿಂಟ್‌ಗಳು ಕಡಿಮೆಯಾಗಿ 5,346 ಕ್ಕೆ ತಲುಪಿದೆ. ಡೌ ಜೋನ್ಸ್ ಇಂಡಸ್ಟ್ರಿಯಲ್ ಸರಾಸರಿ 1.51% ಅಥವಾ 610 ಪಾಯಿಂಟ್‌ಗಳು ಶುಕ್ರವಾರ 39,737 ಕ್ಕೆ ಕುಸಿದವು.

ಅಮೆರಿಕದ ಕಾರ್ಮಿಕ ಮಾರುಕಟ್ಟೆಯಲ್ಲಿ 249,000 ಉದ್ಯೋಗ ಕುಸಿತ ಆಗಬಹುದು ಎಂದು ವರದಿಗಳು ಸೂಚಿಸಿವೆ. ಅಲ್ಲದೆ, USನಲ್ಲಿ ಜುಲೈನಲ್ಲಿ ISM ಉತ್ಪಾದನೆಯು ಕುಸಿದಿದೆ ಎಂದು ಡೇಟಾ ತೋರಿಸಿದೆ. ISM ಉತ್ಪಾದನಾ ಸೂಚ್ಯಂಕವು ಜೂನ್‌ನಲ್ಲಿ 48.5% ರಿಂದ ಜುಲೈನಲ್ಲಿ 46.8% ಕ್ಕೆ ಕುಸಿಯಿತು. ಇದು ಎಂಟು ತಿಂಗಳ ಕನಿಷ್ಠ. US ಕಾರ್ಖಾನೆಗಳು ಇನ್ನೂ ಕುಸಿಯುತ್ತಿವೆ.

ಏಷ್ಯ, ಯುರೋಪ್‌ ಮಾರುಕಟ್ಟೆಯಲ್ಲಿ ಕುಸಿತ

ಯುಎಸ್ ಮಾರುಕಟ್ಟೆಯಲ್ಲಿನ ದುರ್ಬಲತೆಯ ಭಾವನೆ ಏಷ್ಯನ್ ಮತ್ತು ಯುರೋಪಿಯನ್ ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರಿದೆ. ಜಪಾನ್‌ನ ನಿಕ್ಕಿ ಇಂದು 2747 ಅಂಕಗಳಿಂದ 33,162 ಅಂಕಗಳಿಗೆ ಕುಸಿದಿದೆ ಮತ್ತು ಹ್ಯಾಂಗ್ ಸೆಂಗ್ 36 ಅಂಕಗಳಿಂದ 16,908ಕ್ಕೆ ಕುಸಿದಿದೆ. ತೈವಾನ್ ಸೂಚ್ಯಂಕವು 1584 ಅಂಕಗಳನ್ನು ಕಳೆದುಕೊಂಡು 20,044 ಕ್ಕೆ ತಲುಪಿದೆ. ಕೊಸ್ಪಿ ಸೋಮವಾರ 182 ಅಂಕಗಳ ಕುಸಿತ ಕಂಡು 2,494 ಅಂಕಗಳಿಗೆ ತಲುಪಿತ್ತು.

FTSE ಶುಕ್ರವಾರ 108 ಅಂಕಗಳೊಂದಿಗೆ 8174ಕ್ಕೆ ಕುಸಿದಿದೆ. ಫ್ರಾನ್ಸ್‌ನ CAC 119 ಅಂಕಗಳನ್ನು ಕಳೆದುಕೊಂಡು 7251 ಕ್ಕೆ ತಲುಪಿತು ಮತ್ತು DAX 421 ಅಂಕಗಳು ಕಡಿಮೆಯಾಗಿ 17,661 ಕ್ಕೆ ಕೊನೆಗೊಂಡಿತು.

ಇದನ್ನೂ ಓದಿ: Stock Market: ಷೇರುಪೇಟೆ ಮಹಾ ಪತನ; ಸೆನ್ಸೆಕ್ಸ್‌ 2,000 ಅಂಕ ಕುಸಿತ; 17 ಲಕ್ಷ ಕೋಟಿ ರೂ. ಲಾಸ್‌!

Continue Reading

ಪ್ರಮುಖ ಸುದ್ದಿ

AAP VS Delhi LG: ಆಪ್‌ಗೆ ಹಿನ್ನಡೆ; ದಿಲ್ಲಿ ನಗರಸಭೆಗೆ ಸದಸ್ಯರನ್ನು ನೇಮಿಸುವ ಎಲ್‌ಜಿ ಅಧಿಕಾರ ಎತ್ತಿಹಿಡಿದ ಸುಪ್ರೀಂ ಕೋರ್ಟ್

AAP VS Delhi LG: ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್, ನ್ಯಾ. ಜೆಬಿ ಪರ್ದಿವಾಲಾ, ನ್ಯಾ. ಪಿ.ಎಸ್ ನರಸಿಂಹ ಅವರಿದ್ದ ಪೀಠ ತೀರ್ಪು ಪ್ರಕಟಿಸಿದೆ. ಈ ವಿಷಯದಲ್ಲಿ ರಾಜ್ಯ ಸಚಿವ ಸಂಪುಟದ ನೆರವು ಮತ್ತು ಸಲಹೆಗೆ ಎಲ್‌ಜಿ ಬದ್ಧರಾಗಿರಬೇಕಿಲ್ಲ. ಎಲ್‌ಜಿ ಅವರ “ಕಾನೂನುಬದ್ಧ ಕರ್ತವ್ಯ”ದ ಪ್ರಕಾರ ಆಲ್ಡರ್‌ಮೆನ್‌ಗಳ ನೇಮಕವಾಗಿದೆ ಎಂದು ನ್ಯಾಯಪೀಠ ಹೇಳಿದೆ.

VISTARANEWS.COM


on

Koo

ಬೆಂಗಳೂರು: ರಾಜ್ಯ ಸಚಿವ ಸಂಪುಟವನ್ನು (Cabinet) ಸಮಾಲೋಚಿಸದೆ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (Delhi Municipal Corporation- ಎಂಸಿಡಿ)ಗೆ ಹತ್ತು ಆಲ್ಡರ್‌ಮನ್‌ಗಳನ್ನು (ನಗರಸಭೆ ಸದಸ್ಯ) ನೇಮಿಸಿರುವ ಲೆಫ್ಟಿನೆಂಟ್ ಗವರ್ನರ್ (Leftinant Governor) ಕ್ರಮವನ್ನು ಸುಪ್ರೀಂ ಕೋರ್ಟ್ (Supreme Court) ಎತ್ತಿಹಿಡಿದಿದೆ. ಹೀಗಾಗಿ, ಎಲ್‌ಜಿ (LG) ನಡೆಯನ್ನು ಪ್ರಶ್ನಿಸಿದ್ದ ಆಮ್ ಆದ್ಮಿ ಪಕ್ಷ (Aam Admi Party- ಎಎಪಿ) ನೇತೃತ್ವದ ದೆಹಲಿ ಸರ್ಕಾರಕ್ಕೆ (AAP VS Delhi LG) ಹಿನ್ನಡೆಯಾಗಿದೆ.

ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್, ನ್ಯಾ. ಜೆಬಿ ಪರ್ದಿವಾಲಾ, ನ್ಯಾ. ಪಿ.ಎಸ್ ನರಸಿಂಹ ಅವರಿದ್ದ ಪೀಠ ತೀರ್ಪು ಪ್ರಕಟಿಸಿದೆ. ಈ ವಿಷಯದಲ್ಲಿ ರಾಜ್ಯ ಸಚಿವ ಸಂಪುಟದ ನೆರವು ಮತ್ತು ಸಲಹೆಗೆ ಎಲ್‌ಜಿ ಬದ್ಧರಾಗಿರಬೇಕಿಲ್ಲ. ಎಲ್‌ಜಿ ಅವರ “ಕಾನೂನುಬದ್ಧ ಕರ್ತವ್ಯ”ದ ಪ್ರಕಾರ ಆಲ್ಡರ್‌ಮೆನ್‌ಗಳ ನೇಮಕವಾಗಿದೆ ಎಂದು ನ್ಯಾಯಪೀಠ ಹೇಳಿದೆ.

1993ರಲ್ಲಿ ತಿದ್ದುಪಡಿ ಮಾಡಲಾದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಡಿಎಂಸಿ) ಕಾಯಿದೆಯ ಸೆಕ್ಷನ್ 3(3)(ಬಿ)(ಐ) ಪ್ರಕಾರ ಎಲ್‌ಜಿಗೆ ಆಲ್ಡರ್‌ಮೆನ್‌ಗಳನ್ನು ನೇಮಿಸಲು ಅಧಿಕಾರ ಇರುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ. ಗವರ್ನರ್‌ಗೆ ನೀಡಲಾದ ಈ ಅಧಿಕಾರ ಸಾಂವಿಧಾನಿಕ ಅಧಿಕಾರದ ಅತಿಕ್ರಮಣವಲ್ಲ ಎಂದಿದೆ.

ಕಳೆದ ವರ್ಷ ಮೇ 17ರಂದು ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಆಲ್ಡರ್‌ಮೆನ್‌ಗಳನ್ನು ನಾಮನಿರ್ದೇಶನ ಮಾಡಲು ಎಲ್‌ಜಿ ಅಧಿಕಾರವನ್ನು ನೀಡುವುದು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಎಂಸಿಡಿಯನ್ನು ಅಸ್ಥಿರಗೊಳಿಸಬಹುದು ಎಂದು ಅದು ಹಿಂದೆ ಎಚ್ಚರಿಸಿತ್ತು. ಎಂಸಿಡಿ 250 ಚುನಾಯಿತ ಮತ್ತು 10 ನಾಮನಿರ್ದೇಶಿತ ಸದಸ್ಯರನ್ನು ಹೊಂದಿದೆ.

“ಎಂಸಿಡಿಯಲ್ಲಿ ವಿಶೇಷ ವ್ಯಕ್ತಿಗಳ ನಾಮನಿರ್ದೇಶನದ ಅಧಿಕಾರವನ್ನು ಎಲ್‌ಜಿಗೆ ನೀಡುವುದು ಎಂದರೆ ಅವರು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಮುನ್ಸಿಪಲ್ ಸಮಿತಿಗಳನ್ನು ಅಸ್ಥಿರಗೊಳಿಸಿದಂತಾಗಬಹುದು. ಏಕೆಂದರೆ ಆಲ್ಡರ್‌ಮೆನ್ ಸಹ ಮತದಾನದ ಅಧಿಕಾರವನ್ನು ಹೊಂದಿರುತ್ತಾರೆ” ಎಂದು ಉನ್ನತ ನ್ಯಾಯಾಲಯ ಹಿಂದೆ ಹೇಳಿತ್ತು.

ಡಿಸೆಂಬರ್ 2022ರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) 134 ವಾರ್ಡ್‌ಗಳನ್ನು ಪೌರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿತ್ತು. ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೋಲಿಸಿತ್ತು. ಎಂಸಿಡಿ ಮೇಲಿನ ಬಿಜೆಪಿಯ 15 ವರ್ಷಗಳ ನಿಯಂತ್ರಣವನ್ನು ಕೊನೆಗೊಳಿಸಿತು. ಬಿಜೆಪಿ 104 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಕಾಂಗ್ರೆಸ್ 9 ಸ್ಥಾನಗಳನ್ನು ಗಳಿಸಿದೆ.

ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು, ನಾಮನಿರ್ದೇಶನ ಮಾಡುವವರು ನಗರಾಡಳಿತದ ಸಹಾಯ ಮತ್ತು ಸಲಹೆಯನ್ನು ಅನುಸರಿಸಬೇಕು, ಅದು 30 ವರ್ಷಗಳ ರೂಢಿ ಎಂದರು. ಆದರೆ ದೀರ್ಘಕಾಲದ ರೂಢಿ ಇದ್ದ ಮಾತ್ರಕ್ಕೆ ಅದು ಸರಿ ಎಂದಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಪ್ರತಿಪಾದಿಸಿದರು.

ಇದನ್ನೂ ಓದಿ: Arvind Kejriwal: ಅರವಿಂದ್‌ ಕೇಜ್ರಿವಾಲ್‌ಗೆ ಮತ್ತೊಂದು ಸಂಕಷ್ಟ; ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಿದ ಸಿಬಿಐ

Continue Reading

ರಾಜಕೀಯ

Parliament Session: ವಕ್ಫ್ ಕಾಯ್ದೆ 1995ರ ತಿದ್ದುಪಡಿ ಮಸೂದೆ ಇಂದು ಮಂಡನೆ ಸಾಧ್ಯತೆ; ಅಧಿವೇಶನದ Live ಇಲ್ಲಿ ನೋಡಿ

Parliament Session: ಸಂಸತ್‌ನಲ್ಲಿ ನಡೆಯುತ್ತಿರುವ ಬಜೆಟ್‌ ಅಧಿವೇಶನ ಎರಡು ದಿನಗಳ ಬಿಡುವಿನ ಬಳಿಕ ಇಂದು ಪುನರಾರಂಭವಾಗಲಿದೆ. ಕೇಂದ್ರ ಸರ್ಕಾರವು ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದು, ಇಂದು ಸಂಸತ್‌ನಲ್ಲಿ ವಿಧೇಯಕ ಮಂಡಿಸುವ ಸಾಧ್ಯತೆ ಇದೆ. ಈಗಾಗಲೇ ಇದಕ್ಕೆ ವಿರೋಧ ವ್ಯಕ್ತವಾಗಿದ್ದು, ಸಂಸತ್‌ನಲ್ಲಿ ಕೋಲಾಹಲ ನಡೆಯಲಿದೆ.

VISTARANEWS.COM


on

Parliament Session
Koo

ನವದೆಹಲಿ: ಸಂಸತ್‌ನಲ್ಲಿ ನಡೆಯುತ್ತಿರುವ ಬಜೆಟ್‌ ಅಧಿವೇಶನ (Parliament Session) ಎರಡು ದಿನಗಳ ಬಿಡುವಿನ ಬಳಿಕ ಇಂದು ಪುನರಾರಂಭವಾಗಲಿದ್ದು, ಕಾವೇರಿದ ಚರ್ಚೆಗೆ ಉಭಯ ಸದನಗಳು ಸಾಕ್ಷಿಯಾಗಲಿವೆ. ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರವು ವಕ್ಫ್‌ ಕಾಯ್ದೆಗೆ (Waqf Act) ತಿದ್ದುಪಡಿ ತರಲು ಮುಂದಾಗಿದ್ದು, ಇಂದು ಸಂಸತ್‌ನಲ್ಲಿ ವಿಧೇಯಕ ಮಂಡಿಸುವ ಸಾಧ್ಯತೆ ಇದೆ. ಈಗಾಗಲೇ ಇದಕ್ಕೆ ವಿರೋಧ ವ್ಯಕ್ತವಾಗಿದ್ದು, ಸಂಸತ್‌ನಲ್ಲಿ ಕೋಲಾಹಲ ನಡೆಯಲಿದೆ.

ಜತೆಗೆ ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಧನವಿನಿಯೋಗ ಮಸೂದೆ ಮತ್ತು ಹಣಕಾಸು ಮಸೂದೆಯನ್ನು ಮಂಡಿಸಲಿದ್ದಾರೆ. ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಗೋವಾ ವಿಧಾನಸಭೆಯಲ್ಲಿ ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಮೀಸಲಾತಿ ನೀಡುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಪ್ರಸ್ತುತ ಗೋವಾ ವಿಧಾನಸಭೆಯಲ್ಲಿ ಎಸ್‌ಟಿ ಸಮುದಾಯಕ್ಕೆ ಯಾವುದೇ ಸ್ಥಾನಗಳನ್ನು ಕಾಯ್ದಿರಿಸಲಾಗಿಲ್ಲ.

ರಾಜ್ಯಸಭೆಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ತೈಲ ಕ್ಷೇತ್ರಗಳು (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಮಸೂದೆಯನ್ನು ಪರಿಚಯಿಸಲಿದ್ದಾರೆ.

ಚರ್ಚೆ ಹುಟ್ಟು ಹಾಕಿದ ವಕ್ಫ್‌ ಕಾಯ್ದೆ ತಿದ್ದುಪಡಿ ಪ್ರಸ್ತಾವ

ಸದ್ಯ ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರಲು ಮುಂದಾದ ಕೇಂದ್ರ ಸರ್ಕಾರದ ನಿರ್ಧಾರ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ. ʼʼಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತರಲು ಕಾನೂನನ್ನು ತಿದ್ದುಪಡಿ ಮಾಡಬೇಕೆಂದು ಮುಸ್ಲಿಂ ಸಮುದಾಯದಿಂದ ಬೇಡಿಕೆಗಳು ಬಂದಿವೆ. ಪ್ರಸ್ತುತ ವಕ್ಫ್ ಮಂಡಳಿಗಳು ತೆಗೆದುಕೊಂಡ ನಿರ್ಧಾರವನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ ಎನ್ನುವ ನಿಯಮವಿದೆ. ಈಗ ತಿದ್ದುಪಡಿ ಮಸೂದೆಯು ಅದನ್ನು ಸರಿಪಡಿಸಲು ಪ್ರಯತ್ನಿಸುತ್ತದೆ” ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಕಾಯ್ದೆಗೆ ಏನೆಲ್ಲ ತಿದ್ದುಪಡಿ?

ಯಾವುದಾದರೂ ಒಂದು ಆಸ್ತಿಯನ್ನು ವಕ್ಫ್‌ ಮಂಡಳಿಗೆ ಸೇರಿಸಲು ಪಾರದರ್ಶಕ ನಿಯಮಗಳ ಪಾಲನೆಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅದರಲ್ಲೂ, ಯಾವುದಾದರೂ ಒಂದು ಆಸ್ತಿಯನ್ನು ವಕ್ಫ್‌ ಆಸ್ತಿ ಎಂದು ಘೋಷಿಸುವ ಪರಮಾಧಿಕಾರ ತೆಗೆಯಲಿದೆ. ಇನ್ನು, ವಕ್ಫ್‌ ಆಸ್ತಿಗಳ ಮೇಲೆ ನಿಗಾ ಇರಿಸುವ ಅಧಿಕಾರವನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಇದುವರೆಗೆ ವಕ್ಫ್‌ ಮಂಡಳಿಯಲ್ಲಿ ಹೆಣ್ಣುಮಕ್ಕಳ ಸಹಭಾಗಿತ್ವವೇ ಇರಲಿಲ್ಲ. ಹಾಗಾಗಿ, ಪ್ರತಿಯೊಂದು ರಾಜ್ಯಗಳ ವಕ್ಫ್‌ ಮಂಡಳಿಗಳಲ್ಲಿ ಹೆಣ್ಣುಮಕ್ಕಳಿಗೂ ಸ್ಥಾನ ನೀಡುವುದು. ರಾಜ್ಯಗಳ ಮಂಡಳಿಗಳಲ್ಲಿ ಕನಿಷ್ಠ ಇಬ್ಬರು ಮಹಿಳೆಯರಿಗೆ ಸ್ಥಾನ ನೀಡುವುದು. ಕೇಂದ್ರ ಸಮಿತಿಗಳಲ್ಲೂ ಇಬ್ಬರೂ ಹೆಣ್ಣುಮಕ್ಕಳು ಇರಬೇಕು ಎಂಬ ನಿಯಮ ಜಾರಿಗೆ ತರುವುದು. ಮುಸ್ಲಿಮರು ಕೂಡ ವಕ್ಫ್‌ ಆಸ್ತಿಯನ್ನು ಸೃಷ್ಟಿಸಬಹುದು ಎಂಬ ನಿಯಮ ಜಾರಿಗೊಳಿಸುವುದು ಸೇರಿ ಹಲವು ತಿದ್ದುಪಡಿಗಳಿಗೆ ಪ್ರಸ್ತಾವನೆ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಾರ್ವಜನಿಕ ಲೆಕ್ಕಪತ್ರ ಸಮಿತಿ ರಚನೆ

ಅದೇ ರೀತಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ (Public Accounts Committee) ಸೇರಿದಂತೆ ಪ್ರಮುಖ ಸಂಸದೀಯ ಸಮಿತಿಗಳು ರಚಿಸಲಾಗುತ್ತಿದೆ. ಕಾಂಗ್ರೆಸ್‌ನ ಹಿರಿಯ ನಾಯಕ ಕೆ.ಸಿ.ವೇಣುಗೋಪಾಲ್, ಡಿಎಂಕೆ ನಾಯಕ ಟಿ.ಆರ್.ಬಾಲು, ಬಿಜೆಪಿ ಮುಖಂಡರಾದ ಅನುರಾಗ್ ಠಾಕೂರ್, ರವಿಶಂಕರ್ ಪ್ರಸಾದ್, ತೇಜಸ್ವಿ ಸೂರ್ಯ, ಟಿಎಂಸಿ ನಾಯಕ ಸೌಗತ ರೇ ಮತ್ತು ಎಸ್‌ಪಿ ಮುಖಂಡ ಧರ್ಮೇಂದ್ರ ಯಾದವ್ ಪಿಎಸಿಯ ಸದಸ್ಯರಾಗಿದ್ದಾರೆ.

ಪಿಎಸಿ ಹೊರತುಪಡಿಸಿ ಸಾರ್ವಜನಿಕ ಉದ್ಯಮಗಳ ಸಮಿತಿ, ಅಂದಾಜುಗಳ ಸಮಿತಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ, ಲಾಭದಾಯಕ ಹುದ್ದೆಯ ಜಂಟಿ ಸಮಿತಿ ಮತ್ತು ಇತರ ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿಯನ್ನು ಚುನಾವಣೆ ಇಲ್ಲದೆ ರಚಿಸಲಾಗಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಶೀಘ್ರದಲ್ಲೇ ಸಮಿತಿಗಳ ಅಧ್ಯಕ್ಷರನ್ನು ನಾಮನಿರ್ದೇಶನ ಮಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ: Waqf Act: ವಕ್ಫ್‌ ಮಂಡಳಿ ಪರಮಾಧಿಕಾರಕ್ಕೆ ಮೋದಿ ಮೂಗುದಾರ; ಏನೆಲ್ಲ ತಿದ್ದುಪಡಿ? 9.4 ಲಕ್ಷ ಎಕರೆ ಯಾರ ಪಾಲು?

Continue Reading
Advertisement
Physical Abuse
ವಿಜಯಪುರ11 mins ago

Physical Abuse : ಬಸ್‌ ಸ್ಟಾಪ್‌ನಲ್ಲಿ ನಿಂತಿದ್ದ ಮಹಿಳೆಗೆ ಕಣ್ಣು ಹೊಡೆದು ಚುಡಾಯಿಸಿದವನಿಗೆ ಚಪ್ಪಲಿ ಏಟು

Sex Racket
Latest14 mins ago

Sex Racket: ಹೋಟೆಲ್‍ನಲ್ಲಿ ಸೆಕ್ಸ್ ದಂಧೆ ಪತ್ತೆ; ನಗ್ನ ಸ್ಥಿತಿಯಲ್ಲಿದ್ದ 10 ಜೋಡಿಗಳು ಪೊಲೀಸ್‌ ಬಲೆಗೆ!

Duniya Vijay- Ganesh To Combined together make Movie in future
ಸ್ಯಾಂಡಲ್ ವುಡ್15 mins ago

Duniya Vijay- Ganesh: ದುನಿಯಾ ವಿಜಯ್-ಗಣೇಶ್ ಕಾಂಬಿನೇಷನ್ ಸಿನಿಮಾ ಬರೋದು ಪಕ್ಕಾ; ʻಭೀಮʼನದ್ದೇ ಆ್ಯಕ್ಷನ್‌ ಕಟ್‌!

Cloudburst
ದೇಶ17 mins ago

Cloudburst: ಮೇಘಸ್ಫೋಟದಿಂದ ಹಿಮಾಚಲ ಪ್ರದೇಶದಲ್ಲಿ ಮೃತರ ಸಂಖ್ಯೆ 13ಕ್ಕೆ ಏರಿಕೆ; 40ಕ್ಕೂ ಹೆಚ್ಚು ಮಂದಿ ನಾಪತ್ತೆ

Viral Video
Latest21 mins ago

Viral Video: ಅಳುತ್ತಿರುವ ಹುಡುಗನನ್ನು ಸಮಾಧಾನಪಡಿಸಿದ ನಾಯಿ ಮರಿ! ಆನಂದ್‌ ಮಹೀಂದ್ರಾ ಹಂಚಿಕೊಂಡ ವಿಡಿಯೊ ಇದು

Valmiki Corporation Scam
ಪ್ರಮುಖ ಸುದ್ದಿ31 mins ago

Valmiki Corporation scam: ವಾಲ್ಮೀಕಿ ನಿಗಮ ಹಗರಣ; ಕೋರ್ಟ್‌ಗೆ 3 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಎಸ್‌ಐಟಿ

Indian stock market
ಪ್ರಮುಖ ಸುದ್ದಿ32 mins ago

Stock Market News: ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ, ರೂ.17.03 ಲಕ್ಷ ಕೋಟಿ ನಷ್ಟ

Kannada New Movie idu enta lokavayya movie Kannada ananth nag
ಸಿನಿಮಾ51 mins ago

Kannada New Movie: ʻಇದು ಎಂಥಾ ಲೋಕವಯ್ಯʼ ಸಿನಿಮಾ ಬಿಡುಗಡೆಗೆ ಸಜ್ಜು; ತಂಡಕ್ಕೆ ನಟ ಅನಂತ್ ನಾಗ್ ಸಾಥ್‌!

Nursing student dies
ಕರ್ನಾಟಕ58 mins ago

Nursing Student Dies: 6ನೇ ಮಹಡಿಯಿಂದ ಬಿದ್ದು ನರ್ಸಿಂಗ್‌ ವಿದ್ಯಾರ್ಥಿನಿ ಸಾವು

Stock Market
ವಾಣಿಜ್ಯ1 hour ago

Stock Market: ಷೇರುಪೇಟೆ ಮಹಾ ಪತನ; ಸೆನ್ಸೆಕ್ಸ್‌ 2,000 ಅಂಕ ಕುಸಿತ; 17 ಲಕ್ಷ ಕೋಟಿ ರೂ. ಲಾಸ್‌!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ1 day ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ4 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ6 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ6 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ7 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ7 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌