Modi 8 years: ಎಂಟು ವರ್ಷಗಳಲ್ಲಿ ಭಾರತ ಹೇಗೆ ಬದಲಾಯ್ತು, ಇಲ್ಲಿದೆ ಹತ್ತು ಪಾಯಿಂಟು! - Vistara News

ದೇಶ

Modi 8 years: ಎಂಟು ವರ್ಷಗಳಲ್ಲಿ ಭಾರತ ಹೇಗೆ ಬದಲಾಯ್ತು, ಇಲ್ಲಿದೆ ಹತ್ತು ಪಾಯಿಂಟು!

2014ರಲ್ಲಿ ಭಾರತ ಹೇಗಿತ್ತು, 2022ರಲ್ಲಿ ಹೇಗಾಯ್ತು? ನರೇಂದ್ರ ಮೋದಿ ಆಡಳಿತದ ಎಂಟು ವರ್ಷಗಳಲ್ಲಿ (Modi 8 years) ಇಲ್ಲಿ ಆಗಿರುವ ಸೈಲೆಂಟ್‌ ಬದಲಾವಣೆಗಳು ಇಲ್ಲಿವೆ ನೋಡಿ.

VISTARANEWS.COM


on

narendra modi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

2014ರ ಮೇ 26ರಂದು ಮೊದಲ ಬಾರಿಗೆ ನರೇಂದ್ರ ಮೋದಿ ಅವರು ಸಂಸತ್ತಿನ ಮೆಟ್ಟಿಲುಗಳಿಗೆ ಹಣೆ ಹಚ್ಚಿ ನಮಸ್ಕರಿಸಿ, ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಎರಡನೇ ಬಾರಿಗೆ 2019ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದಿಂದ ಮತ್ತೆ ಆರಿಸಿ ಬಂದು ಮೂರು ವರ್ಷ ಪೂರೈಸಿದ್ದಾರೆ. ಈ ಎಂಟು ವರ್ಷಗಳಲ್ಲಿ ಅವರ ಆಡಳಿತದಿಂದ ಈ ದೇಶದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಒಳಿತೂ ಆಗಿವೆ, ಕೆಡುಕೂ ಆಗಿವೆ. ನಮ್ಮ ಕಣ್ಣಿಗೆ ನೇರವಾಗಿ ಕಾಣಿಸದೇ ಇರೋ ಹಲವು ಬದಲಾವಣೆಗಳೂ ಆಗಿವೆ. ಅವು ಯಾವುವು ಅಂತ ಇಲ್ಲಿದೆ ನೋಡಿ…

ಒಂದು
ಭಾರತ ಸ್ಟ್ರಾಂಗ್‌ ಆಗಿದೆ ಎಂಬ ಸಂದೇಶ ತಲುಪಬೇಕಾದಲ್ಲಿಗೆ ತಲುಪಿತು

1947ರಲ್ಲಿ ಬ್ರಿಟಿಷರು ಬಿಟ್ಟು ಹೋದಾಗ ಇದ್ದ ಬಡ ಭಾರತ ಈಗ ಹಾಗಿಲ್ಲ, ನಾವು ಯಾವ ದೇಶದ ಕಿರುಕುಳವನ್ನೂ ಸಹಿಸುವವರಲ್ಲ ಎಂಬ ಖಡಕ್‌ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ರವಾನಿಸಿದ್ದಾರೆ. 1962ರಲ್ಲಿ ಚೀನಾದ ಸೈನ್ಯ ಅರುಣಾಚಲ ಪ್ರದೇಶದಲ್ಲಿ ಸಾವಿರಾರು ಕಿಲೋಮೀಟರ್‌ ಒಳನುಗ್ಗಿ ಬಂದು ಝಂಡಾ ಊರಿತ್ತು. ಆಗ ಪ್ರಧಾನಿಯಾಗಿದ್ದ ಜವಾಹರಲಾಲ್‌ ನೆಹರೂ ಸೋಲು ಒಪ್ಪಿಕೊಂಡಿದ್ದರು. ನಂತರ ಚೀನಾದ ಸೈನ್ಯ ತಾನಾಗಿ ಹಿಂದೆ ಹೋಗಿತ್ತು. ಆದ್ರೆ 2020ರ ಮೇ ತಿಂಗಳಲ್ಲಿ ಹೀಗಾಗಲಿಲ್ಲ. ಹಿಮಾಲಯದ ಲಡಾಕ್‌ನ ಗಲ್ವಾನ್‌ ಭಾಗದಲ್ಲಿ ಚೀನಾದ ಸೈನಿಕರು ನಮ್ಮ ದೇಶದ ಒಳಗೆ ನುಗ್ಗೋಕೆ ಯತ್ನಿಸಿದಾಗ, ಭಾರತೀಯ ಸೈನಿಕರು ಪ್ರಬಲವಾಗಿ ಪ್ರತಿಭಟಿಸಿದರು. ಹೋರಾಟದ ಸಂದರ್ಭದಲ್ಲಿ ಇಪ್ಪತ್ತು ಭಾರತೀಯ ಸೈನಿಕರು ಹುತಾತ್ಮರಾದರು, ಆದರೆ ಅಷ್ಟೇ ಸಂಖ್ಯೆಯ ಚೀನಾ ಸೈನಿಕರನ್ನು ಬಲಿ ತೆಗೆದುಕೊಂಡರು. ನಮ್ಮ ಸೈನಿಕರಿಗೆ ಈ ಕೆಚ್ಚು, ಈ ಪ್ರತಿಭಟನೆಯ ಕಾವು ಬಂದಿದ್ದು ಎಲ್ಲಿಂದ? ನಮ್ಮ ಹಿಂದೆ ನಮ್ಮ ಸರಕಾರ ಬಲವಾಗಿ ಬಂಡೆಯ ಹಾಗೆ ನಿಲ್ಲುತ್ತೆ ಎಂಬ ಭರವಸೆ ಇಲ್ಲದೇ ಹೋಗಿದ್ರೆ ಇದು ಸಾಧ್ಯವಾಗ್ತಾ ಇರಲಿಲ್ಲ.

ಹಾಗೇ ಉರಿ ವಾಯುಪಡೆ ನೆಲೆ ಮೇಲೆ ನಡೆದ ಉಗ್ರಗಾಮಿಗಳ ದಾಳಿ, ನಂತರ ಪುಲ್ವಾಮಾದಲ್ಲಿ ಭಾರತೀಯ ಸೈನಿಕರ ಕ್ಯಾರವಾನ್‌ ಮೇಲೆ ನಡೆದ ಎಸ್‌ಯುವಿ ಅಟ್ಯಾಕ್‌ಗಳನ್ನು ಗಂಭೀರವಾಗಿ ಪರಿಗಣಿಸಿದ ನಮ್ಮ ಸೈನ್ಯ, ಪಾಕಿಸ್ತಾನದ ಒಳಗೆ ನುಗ್ಗಿ ಅಲ್ಲಿನ ಭಯೋತ್ಪಾದಕರ ನೆಲೆಗಳನ್ನು ನಾಶ ಮಾಡಿತು. ಈ ಸರ್ಜಿಕಲ್‌ ಸ್ಟ್ರೈಕ್‌ಗಳು ನಮ್ಮ ಅಕ್ಕಪಕ್ಕದ ಶತ್ರು ದೇಶಗಳಲ್ಲಿ ನಡುಕ ಮೂಡಿಸಿದ್ದು ಖಂಡಿತಾ ಸುಳ್ಳಲ್ಲ. ತನ್ನ ಸಾರ್ವಭೌಮತೆಯನ್ನು ರಕ್ಷಿಸೋಕೆ ಭಾರತ ಯಾವ ಲೆವೆಲ್ಲಿಗೆ ಬೇಕಾದ್ರೂ ಹೋಗುತ್ತೆ ಎಂಬ ಸಂದೇಶವನ್ನು ಈ ಘಟನೆಗಳು ರವಾನಿಸಿದವು. ಇದರ ಜೊತೆಗೆ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು, ಚೀನಾವನ್ನು ಒಂಟಿಯಾಗಿ ಮಾಡೋಕೆ ನಮಗೆ ಸಾಧ್ಯವಾಯಿತು. ನಮ್ಮ ವಿದೇಶಾಂಗ ಸಚಿವರು, ಕಾರ್ಯದರ್ಶಿಗಳು ದಿಟ್ಟ ಧ್ವನಿಯಲ್ಲಿ ಮಾತನಾಡಿದರು. ಇನ್ನೆಂದೂ ಭಾರತವನ್ನು ಕಡೆಗಣಿಸೋಕೆ ಸಾಧ್ಯವಿಲ್ಲ ಅಂತ ಲೋಕಕ್ಕೇ ಅರ್ಥವಾಯಿತು.

ಎರಡು
ತೆರಿಗೆ ವಂಚಿಸೋಕೆ ಈಗ ಸಾಧ್ಯವೇ ಇಲ್ಲ

ಮೋದಿಯವರ ಸರಕಾರ ತಂದ ಎರಡು ಮುಖ್ಯವಾದ ಕ್ರಮಗಳೆಂದರೆ ಸಾವಿರ ರೂಪಾಯಿ ಹಾಗೂ ಐನೂರು ರೂಪಾಯಿ ಮುಖಬೆಲೆಯ ಕರೆನ್ಸಿಗಳನ್ನು ದಿಡೀರನೆ ಡಿಮಾನಿಟೈಸೇಷನ್‌ ಮಾಡಿದ್ದು ಹಾಗೂ ನಂತರ ಗೂಡ್ಸ್‌ ಆಂಡ್‌ ಸರ್ವಿಸ್‌ ಟ್ಯಾಕ್ಸ್‌(ಜಿಎಸ್‌ಟಿ) ಜಾರಿಗೆ ತಂದಿದ್ದು. ಡಿಮಾನಿಟೈಸೇಷನ್‌ ಸಂದರ್ಭದಲ್ಲಿ ಸಾಮಾನ್ಯ ಜನಕ್ಕೆ ಸಂಕಷ್ಟ ಆಗಿದ್ದು ನಿಜ. ಆದ್ರೆ, ಇನ್ನು ಮುಂದೆ ಕರೆನ್ಸಿಯಲ್ಲಿ ಕಪ್ಪು ಹಣದ ವ್ಯವಹಾರ ನಡೆಸೋಕೆ ಆಗಲ್ಲ ಎಂಬುದು ಭ್ರಷ್ಟಾಚಾರದ ವಹಿವಾಟು ನಡೆಸ್ತಾ ಇದ್ದ ಜನಕ್ಕೆ ಗೊತ್ತಾಗಿ ಹೋಯಿತು. ಅದರ ನಂತರದ ಎರಡನೇ ನಡೆಯಾಗಿ ಜಿಒಎಸ್‌ಟಿ ಜಾರಿಗೆ ತರಲಾಯ್ತು. ಆಗ ಒಟ್ಟಾರೆ ಟ್ಯಾಕ್ಸ್‌ಪೇಮೆಂಟ್‌ ಮಾಡುವ ರೀತಿನೀತಿಯೇ ಬದಲಾಗಿ ಹೋಯಿತು. ಟ್ಯಾಕ್ಸ್‌ ಪಾವತಿ ಸುಲಭವಾಯಿತು ಮಾತ್ರವಲ್ಲ ಹೆಚ್ಚು ಪಾರದರ್ಶಕವಾಯ್ತು. ತೆರಿಗೆ ಪಾವತಿ ಮಾಡದೇ ಇರೋರ ಮೇಲೆ ಟ್ಯಾಕ್ಸ್‌ ಡಿಪಾರ್ಟ್‌ಮೆಂಟ್‌ ಹದ್ದಿನಗಣ್ಣು ಇಟ್ಟಿತು. ಹೀಗಾಗಿ ತೆರಿಗೆ ವಂಚನೆ ಮಾಡೋದು ಈಗ ಸುಲಭವಲ್ಲ. 2014ರಲ್ಲಿ ಏಳು ಲಕ್ಷ ಕೋಟಿ ರೂಪಾಯಿ ಇದ್ದ ಟ್ಯಾಕ್ಸ್‌ ಕಲೆಕ್ಷನ್‌, ಈಗ ವರ್ಷಕ್ಕೆ 27 ಲಕ್ಷ ಕೋಟಿ ರೂಪಾಯಿಗೆ ಬಂದಿದೆ. ಅಂದರೆ ಎಂಟು ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಿದೆ.

ಮೂರು
ಸರಕಾರದ ಕಾಸು ಒಂದು ಪೈಸೆಯೂ ವ್ಯರ್ಥವಾಗಲ್ಲ

ಸರಕಾರದ ಕಡೆಯಿಂದ ಒಂದು ರೂಪಾಯಿ ಬಿಡುಗಡೆಯಾದರೆ ಅದು ಕೊಟ್ಟ ಕೊನೆಯ ಹಳ್ಳಿಗನನ್ನು ತಲುಪುವಷ್ಟರಲ್ಲಿ ಹತ್ತು ಪೈಸೆ ಮಾತ್ರ ಉಳಿದಿರುತ್ತೆ- ಅಂತ ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರು ಹಿಂದೊಮ್ಮೆ ಹೇಳಿದ್ರು. ಸರಕಾರದ ಎಲ್ಲಾ ದೊಡ್ಡ ದೊಡ್ಡ ಕಲ್ಯಾಣ ಕಾರ್ಯಕ್ರಮಗಳು, ಸೌಲಭ್ಯ ಸವಲತ್ತುಗಳು ಗ್ರಾಮೀಣ ಭಾರತದ ಕೊಟ್ಟ ಕೊನೆಯ ವ್ಯಕ್ತಿಯನ್ನು ತಲುಪುವ ಮೊದಲು ದಲ್ಲಾಳಿಗಳು ಶೇಕಡ ತೊಂಬತ್ತರಷ್ಟನ್ನು ನುಂಗಿ ಹಾಕ್ತಾ ಇದ್ರು. ಈಗ ಸರಕಾರದಿಂದ ಬಿಡುಗಡೆಯಾದ ಅಷ್ಟೂ ಹಣ ಫಲಾನುಭವಿಗಳನ್ನು ತಲುಪ್ತಾ ಇದೆ. ಬ್ಯಾಂಕಿಂಗ್‌ ಆರ್ಥಿಕ ವ್ಯವಸ್ಥೆಯಿಂದ ಹೊರಗುಳಿದಿದ್ದ ಜನರನ್ನು ವ್ಯವಸ್ಥೆಯೊಳಗೆ ಸೇರ್ಪಡೆಗೊಳಿಸುವ ರಾಷ್ಟ್ರೀಯ ಮಿಷನ್- ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ)ಯನ್ನು ಆಗಸ್ಟ್ 15, 2014ರಂದು ಕೆಂಪು ಕೋಟೆಯಿಂದ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮೋದಿ ಘೋಷಿಸಿದರು. ವಿದ್ಯಾರ್ಥಿವೇತನಗಳು, ಸಬ್ಸಿಡಿಗಳು, ಪಿಂಚಣಿಗಳು ಮತ್ತು ಕೋವಿಡ್ ಪರಿಹಾರ ನಿಧಿಗಳಂತಹ ಪ್ರಯೋಜನಗಳನ್ನು ಜನ್ ಧನ್ ಖಾತೆಗಳು ಸೇರಿದಂತೆ ಬ್ಯಾಂಕ್ ಖಾತೆಗಳಿಗೆ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಜಮಾ ಮಾಡಲಾಗುತ್ತದೆ. ಈ ವರ್ಷದ ಜನವರಿ 2ರ ಹೊತ್ತಿಗೆ, ಜನ್ ಧನ್ ಯೋಜನೆಯಡಿ ತೆರೆಯಲಾದ ಬ್ಯಾಂಕ್ ಖಾತೆಗಳಲ್ಲಿನ ಠೇವಣಿ 1.5 ಲಕ್ಷ ಕೋಟಿ ರೂಪಾಯಿ ದಾಟಿದೆ. ಹಣಕಾಸು ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, 2021ರ ಡಿಸೆಂಬರ್ ಅಂತ್ಯದ ವೇಳೆಗೆ 44.23 ಕೋಟಿ ಪಿಎಂಜೆಡಿವೈ ಖಾತೆಗಳಲ್ಲಿನ ಒಟ್ಟು ಬ್ಯಾಲೆನ್ಸ್ 1,50,939.36 ಕೋಟಿ ರೂ. ಆಗಿತ್ತು. ಅಂದರೆ, ಅಷ್ಟು ಹಣ ಸೇರಬೇಕಾದವರನ್ನು ನೇರವಾಗಿ ಸೇರಿದೆ ಎಂದು ಅರ್ಥ. ಇದರ ಜೊತೆಗೆ, ಮುದ್ರಾ ಯೋಜನೆಯ ಮೂಲಕ 35 ಕೋಟಿ ಮಂದಿಗೆ ಸಣ್ಣಪುಟ್ಟ ವ್ಯಾಪಾರಗಳಿಗೆ ಸಾಲ ನೀಡಲಾಗಿದೆ. ಇದು ವ್ಯಾಪಾರ ವಹಿವಾಟಿನಲ್ಲಿ ಒಂದು ಕ್ರಾಂತಿ.

ನಾಲ್ಕು
ಜೇಬಿನಲ್ಲಿ ಹಣವಿಲ್ಲದೇ ಇಡೀ ದೇಶ ಸುತ್ತಾಡಬಹುದು!

ಎಂಟು ಹತ್ತು ವರ್ಷಗಳಿಗೆ ಮೊದಲು ಡಿಜಿಟಲ್‌ ಪಾವತಿ ಅಂದ್ರೆ ಏನು ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ಮೆಟ್ರೋಗಳಲ್ಲಿ ಬ್ಲೂ ಕಾಲರ್‌ ಜಾಬ್‌ಗಳಲ್ಲಿ ಇರುವವರಿಗೆ ಕೂಡ ಆನ್‌ಲೈನ್‌ ಬ್ಯಾಂಕಿಂಗ್‌ ಗೊತ್ತಿತ್ತು ಬಿಟ್ರೆ, ತಮ್ಮ ಮೊಬೈಲ್‌ನಲ್ಲಿ ಒಂದು ಆಪ್‌ ಹಾಕಿಸಿಕೊಳ್ಳುವ ಮೂಲಕ ಎಷ್ಟೇ ದೊಡ್ಡ ಮೊತ್ತದ ಹಣದ ವಹಿವಾಟನ್ನೂ ಒಂದೇ ಒಂದು ಕ್ಲಿಕ್ಕಿನಲ್ಲಿ ಮಾಡಬಹುದು ಅನ್ನೋದು ಗೊತ್ತಿರಲಿಲ್ಲ. ಇಂದು ಹಣದ ವ್ಯವಹಾರಕ್ಕಾಗಿ ಬ್ಯಾಂಕಿಗೆ ಹೋಗೋರು, ಎಟಿಎಂಗೆ ಹೋಗೋರು ಬಹಳ ಕಡಿಮೆ ಸಂಖ್ಯೆಯ ಜನ. ಹೆಚ್ಚಿನವರ ಬಳಿ ಡಿಜಿಟಲ್‌ ಪಾವತಿ ಆಪ್‌ಗಳಿವೆ. ಎಲ್ಲರಿಗೂ ಯುಪಿಐ ಐಡಿ ದೊರೆಯುವಂತೆ ಮಾಡಿದೆ ಸರಕಾರ. ತರಕಾರಿ ಮಾರುವವರ ಬಳಿಯೂ ಭೀಮ್‌ ಆಪ್‌ ಇದೆ. ಒಂದು ರೂಪಾಯೀನ ಕೂಡ ನೀವು ಡಿಜಿಟಲ್‌ ಪೇಮೆಂಟ್‌ ಮಾಡಬಹುದು ಮತ್ತು ಜೇಬಿನಲ್ಲಿ ಒಂದು ಪೈಸೆ ಕೂಡ ಇಟ್ಟುಕೊಳ್ಳದೆ ಭಾರತ ತುಂಬಾ ಓಡಾಡಬಹುದು. ಐದು ವರ್ಷಗಳ ಹಿಂದೆ ನೀವು ಇದನ್ನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ ಅಲ್ವಾ!

ಇದನ್ನೂ ಓದಿ: Modi 8 years: ಎಂಟು ವರ್ಷಗಳಲ್ಲಿ ಮೋದಿ ಮಾಡಿದ್ದು ಎಲ್ಲವೂ ಸರಿಯೆ? ಇಲ್ಲ, ಏಕೆಂದರೆ…

ಐದು
ಷೇರು ಮಾರುಕಟ್ಟೆ ಬಂಡವಾಳ ಮೂರು ಪಟ್ಟು ಹೆಚ್ಚಾಗಿದೆ

ಮೋದಿ ಅವರು 2014ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಕಳೆದ 8 ವರ್ಷಗಳಲ್ಲಿ ಷೇರು ಮಾರುಕಟ್ಟೆ ಬಂಡವಾಳ ಮೌಲ್ಯ ಮುಂಬಯಿ ಷೇರು ಮಾರುಕಟ್ಟೆ ಬಿಎಸ್‌ಇನಲ್ಲಿ 3 ಪಟ್ಟು ಹೆಚ್ಚಳ ಆಗಿದೆ. 1,450 ಷೇರುಗಳ ಮೌಲ್ಯ ಇಮ್ಮಡಿಗೂ ಹೆಚ್ಚು ವೃದ್ಧಿಸಿದೆ. ಮೋದಿ ಸರಕಾರದ ಆರ್ಥಿಕ ಸುಧಾಣಾ ಕ್ರಮಗಳು, ಮಾರುಕಟ್ಟೆಯ ಅಚ್ಚುಕಟ್ಟಾದ ನಿಯಂತ್ರಕ ವ್ಯವಸ್ಥೆ ಸಕಾರಾತ್ಮಕ ಪ್ರಭಾವ ಬೀರಿದೆ. ಕಾರ್ಪೊರೇಟ್‌ಕಂಪನಿಗಳ ಆದಾಯ ವೃದ್ಧಿಗೆ ಸಹಕರಿಸಿದೆ. ಇದು ಅವುಗಳ ಷೇರುಗಳು ಲಾಭ ಗಳಿಸಲೂ ಕಾರಣವಾಗಿದೆ ಎಂದು ತಜ್ಞರು ಹೇಳುತ್ತಾರೆ. ಬಿಎಸ್ಇ ಮಾರುಕಟ್ಟೆ ಬಂಡವಾಳ ಮೌಲ್ಯ 8 ವರ್ಷಗಳ ಹಿಂದೆ 85.20 ಲಕ್ಷ ಕೋಟಿ ರೂ.ಗಳಾಗಿತ್ತು. ಈಗ 253.79 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಈ ಅವಧಿಯಲ್ಲಿ 220 ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಐಪಿಒ ಮೂಲಕ 3.2 ಲಕ್ಷ ಕೋಟಿ ರೂ.ಗೂ ಹೆಚ್ಚು ಬಂಡವಾಳವನ್ನು ಪಡೆದಿವೆ. ನೋಟು ಅಮಾನ್ಯತೆ, ಜಿಎಸ್‌ಟಿ, ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು, ಗತಿ ಶಕ್ತಿ ಯೋಜನೆ, ಮೇಕಿಂಗ್‌ಇಂಡಿಯಾ, ಡಿಜಿಟಲ್‌ಇಂಡಿಯಾ ಇತ್ಯಾದಿ ಯೋಜನೆಗಳು ಷೇರು ಹೂಡಿಕೆದಾರರನ್ನು ಉತ್ತೇಜಿಸಿವೆ. ಮೋದಿ ನಾಯಕತ್ವದ ಭಾಜಪ ಚುನಾವಣೆಗಳಲ್ಲಿ ಗೆದ್ದಾಗಲೆಲ್ಲಾ ಷೇರು ಪೇಟೆ ಚೇತರಿಸಿದೆ.

ಆರು
ನೀವೀಗ ಕಾಶ್ಮೀರದಲ್ಲಿ ಹಣ ಹೂಡಬಹುದು

ಭೂಮಿಯ ಮೇಲಿನ ಸ್ವರ್ಗ ಎಂದೇ ಹೊಗಳಿಸಿಕೊಂಡಿದ್ದ ಜಮ್ಮು ಕಾಶ್ಮೀರದಲ್ಲಿ ಪ್ರಕೃತಿ ಸೌಂದರ್ಯ ಹೇರಳವಾಗಿ ಇದ್ರೂ, ಅಲ್ಲಿ ಭಾರತದ ಬೇರೆ ಕಡೆಯ ಜನ ಹೋಗೋಕೆ ಹೆದರ್ತಾ ಇದ್ರು. ಅಲ್ಲಿನ ಮೂಲಸೌಕರ್ಯ ಚೆನ್ನಾಗಿರಲಿಲ್ಲ. ಶಿಕ್ಷಣ, ಆರೋಗ್ಯ ಸೇವೆ ಚೆನ್ನಾಗಿರಲಿಲ್ಲ. ಸಾಫ್ಟ್‌ವೇರ್‌ ಮೊದಲಾದ ಇಂಡಸ್ಟ್ರಿಗಳು ಅಲ್ಲಿ ಯಾವತ್ತೂ ಕಾಲಿಡಲಿಲ್ಲ. ಈಗ ಹಾಗಲ್ಲ. ಆರ್ಟಿಕಲ್‌ 370 ರದ್ದು ಪಡಿಸಿರೋದರಿಂದಾಗಿ, ಕಾಶ್ಮೀರದ ವಿಶೇಷ ಸ್ಥಾನಮಾನಗಳ ರದ್ದಾಗಿ, ಕಾಶ್ಮೀರದವರಲ್ಲದ ವ್ಯಕ್ತಿಗಳೂ ಕೂಡ ಅಲ್ಲಿ ಉದ್ಯಮ ಆರಂಭಿಸಲು, ಜಮೀನು ಕೊಳ್ಳಲು, ವ್ಯವಹಾರ ನಡೆಸಲು ಸಾಧ್ಯವಾಗ್ತಿದೆ.

ಏಳು
ಒಂದೇ ಒಂದು ಹಗರಣವೂ ಇಲ್ಲ
ಸಾಮಾನ್ಯವಾಗಿ ಒಂದು ಸರಕಾರ ಐದು ವರ್ಷ ಆಡಳಿತ ನಡೆಸಿದಾಗ ಅದರ ಅವಧಿಯಲ್ಲಿ ನಡೆದ ಹಲವಾರು ಹಗರಣಗಳು ಹೊರಗೆ ಬೀಳುತ್ತವೆ. ಆದರೆ ಮೋದಿ ಅವರ ಎಂಟು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರ ನಡೆದ ಪ್ರಕರಣವೂ ಕಂಡುಬಂದಿಲ್ಲ. ಫ್ರಾನ್ಸ್‌ನಿಂದ 36 ರಫೇಲ್‌ ಜೆಟ್‌ ಫೈಟರ್‌ಗಳನ್ನು ಖರೀದಿಸಿದ ಪ್ರಕರಣದಲ್ಲಿ ದೊಡ್ಡ ಹಗರಣ ನಡೆದಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದವು. ಆದರೆ ಈ ಆರೋಪವನ್ನು ಸಾಬೀತುಪಡಿಸೋಕೆ ಆಗದೆ, ಸ್ವತಃ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರೇ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಳ್ಳಬೇಕಾಗಿ ಬಂತು. ಇನ್ನು ಮೋದಿ ಅವರ ಆಡಳಿತ ಇನ್ನಷ್ಟು ಪಾರದರ್ಶಕವಾಗಿ ಇರೋಕೆ ಕಾರಣ ಸ್ವತಃ ಪಾರದರ್ಶಕ ವ್ಯಕ್ತಿತ್ವ ಹೊಂದಿರೋ ವ್ಯಕ್ತಿಗಳನ್ನು ಇಲಾಖೆಯ ಸಚಿವರನ್ನಾಗಿ ಮಾಡಿರೋದು ಮತ್ತು ಜೈಶಂಕರ್‌ ಅವರಂಥ ಪ್ರಾಮಾಣಿಕ, ಪ್ರತಿಭಾವಂತ ಅಧಿಕಾರಿಗಳನ್ನು ಸಚಿವರ ಲೆವೆಲ್‌ಗೆ ತಂದಿರೋದು.

ಇದನ್ನೂ ಓದಿ: Modi 8 years: ಮೋದಿ – ಶಾ ನೇತೃತ್ವದಲ್ಲಿ ಬಿಜೆಪಿ ಈ ಪರಿ ಬೆಳೆದಿದ್ದು ಹೇಗೆ?

ಎಂಟು
ಮಹಿಳೆಯರಿಗೆ ಮೊದಲಿಗಿಂತ ಹೆಚ್ಚು ಗೌರವ

ಮೋದಿ ಸರಕಾರ ಸ್ತ್ರೀಯರ ಘನತೆ ಹೆಚ್ಚಿಸುವಂಥ ಅನೇಕ ಕಾನೂನುಗಳನ್ನು ತಂದಿದೆ, ಕ್ರಮಗಳನ್ನು ಕೈಗೊಂಡಿದೆ. ಉದಾಹರಣೆಗೆ ತ್ರಿವಳಿ ತಲಾಕ್‌ ರದ್ದು ಮಾಡಿದ ಕಾಯಿದೆಯಿಂದಾಗಿ, ಶತಮಾನಗಳಿಂದ ಮುಸ್ಲಿಂ ಮಹಿಳೆಯರು ಅನುಭವಿಸ್ತಾ ಇದ್ದ ತಾರತಮ್ಯ ಕೊನೆಯಾಗಿದೆ. ಈಗ ಮೊದಲಿನ ಹಾಗೆ ಗಂಡ ಮೂರು ಸಲ ತಲಾಕ್‌ ಎಂದು ಹೇಳಿ ಪತ್ನಿಯಿಂದ ಕಳಚಿಕೊಳ್ಳೋದಕ್ಕೆ ಸಾಧ್ಯವಿಲ್ಲ. ಬೇಟಿ ಬಚಾವೊ ಬೇಟಿ ಪಢಾವೊ ಯೋಜನೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆ, ಸಖಿ ಯೋಜನೆಗಳೆಲ್ಲಾ ವುಮನ್‌ ಎಂಪವರ್‌ಮೆಂಟ್‌ಗೆ ಪೂರಕವಾಗಿವೆ. ಹಾಗೇ ತಮ್ಮ ಕ್ಯಾಬೆನಟ್‌ನಲ್ಲಿ 11 ಮಹಿಳಾ ಸಚಿವರನ್ನು ಅವರ ಸೇರಿಸಿಕೊಂಡಿರೋದು ಕೂಡ ಮಹಿಳಾ ಪ್ರಾತಿನಿಧ್ಯಕ್ಕೆ ಒಂದು ದ್ಯೋತಕ ಅನ್ನಬಹುದು.

ಒಂಬತ್ತು
ಪರಿಸರ ಸಂರಕ್ಷಣೆಯಲ್ಲಿ ನಾವೇ ಲೀಡರ್‌

ದಿನೇ ದಿನೇ ಜಾಗತಿಕ ತಾಪಮಾನ ಹೆಚ್ಚಾಗ್ತಾ ಇದೆ. ಇದನ್ನು ತಡೆಯೋಕೆ ಎಲ್ಲಾ ದೇಶಗಳೂ ಸೇರಿ, ಮುಂದಿನ ವರ್ಷಗಳಲ್ಲಿ ಪರಿಸರ ಮಾಲಿನ್ಯ ಕಡಿಮೆ ಮಾಡಿಕೊಳ್ಳೋಣ ಎಂದೆಲ್ಲಾ ಒಪ್ಪಂದ ಮಾಡಿಕೊಳ್ತಾ ಇವೆ. ಒಪ್ಪಂದಗಳೇನೋ ಸರಿ, ಆದರೆ ಎಷ್ಟು ದೇಶಗಳು ಅವನ್ನು ಪ್ರಾಮಾಣಿಕವಾಗಿ ಪಾಲಿಸ್ತಾ ಇವೆ ಅಂತ ಕೇಳಿದರೆ ಉತ್ತರ ಸಿಗೋಲ್ಲ. ಆದರೆ ಭಾರತ, ಸ್ಪಷ್ಟವಾಗಿ ತನ್ನ ಪೊಲ್ಯುಷನ್‌ ಕಂಟ್ರೋಲ್‌ ಗುರಿಯನ್ನು ಹೇಳಿರೋದು ಮಾತ್ರವಲ್ಲ, ಅದನ್ನು ಆಚರಿಸ್ತಾನೂ ಇದೆ. ಉದಾಹರಣೆಗೆ, ಕಲ್ಲಿದ್ದಲಿನಿಂದ ಉತ್ಪಾದಿಸೋ ವಿದ್ಯುತ್‌ ಪ್ರಮಾಣ ಕಡಿಮೆ ಮಾಡಿ, ಮರುಬಳಕೆ ಇಂಧನಗಳನ್ನು ಹೆಚ್ಚಾಗಿ ಬಳಸಬೇಕು ಎಂಬ ಗುರಿಯಿದೆ. ಭಾರತ ಈಗಾಗಲೇ ಶೇ.40ರಷ್ಟು ವಿದ್ಯುತ್ತನ್ನು ಕಲ್ಲಿದ್ದಲು ಹೊರತುಪಡಿಸಿ ಸೋಲಾರ್‌, ಗಾಳಿ ಮುಂತಾದವುಗಳಿಂದ ಉತ್ಪಾದಿಸ್ತಾ ಇದೆ. ಇನ್ನು ಎಲೆಕ್ಟ್ರಿಕ್‌ ವಾಹನಗಳ ಮಾರುಕಟ್ಟೆಗೆ ಎಷ್ಟು ಉತ್ತೇಜನ ಕೊಡ್ತಾ ಇದೆ ಅಂದರೆ, ಎಲ್ಲಾ ಅಟೋಮೊಬೈಲ್‌ ಕಂಪನಿಗಳೂ ಸರಕಾರದ ವೇಗಕ್ಕೆ ಸರಿಯಾಗಿ ಎಲೆಕ್ಟ್ರಿಕ್‌ ವೆಹಿಕಲ್‌ಗಳನ್ನು ಮಾರುಕಟ್ಟೆಗೆ ಬಿಡ್ತಾ ಇವೆ. 2030ರ ಹೊತ್ತಿಗೆ ಭಾರತದ ರಸ್ತೆಗಳಲ್ಲಿರೋ ವಾಹನಗಳಲ್ಲಿ ಶೇ.50ರಷ್ಟು ಇವಿಗಳಾಗಿರ್ತವೆ ಅಂತ ಅಂದಾಜಿದೆ. ಸ್ವತಃ ಪ್ರಧಾನಿ ಮೋದಿ ಅವರೇ ಜಪಾನ್‌ ಮೊದಲಾದ ದೇಶಗಳ ಜೊತೆಗೆ ಸೋಲಾರ್‌ ಒಕ್ಕೂಟ ಸ್ಥಾಪಿಸಿದ್ದಾರೆ. ಬೇರೆ ಯಾವ ದೇಶವೂ ಭಾರತದಷ್ಟು ವೇಗವಾಗಿ ಪರಿಸರ ಸಂರಕ್ಷಣೆ ಗುರಿಗಳನ್ನು ಸಾಧಿಸಿಲ್ಲ. ಹೀಗಾಗಿ, ವಿಶ್ವಸಂಸ್ಥೆಯ ಅಧ್ಯಕ್ಷರು ಮೋದಿ ಅವರನ್ನು ʼʼಹಿ ಈಸ್‌ದಿ ಲೀಡರ್‌ ಆಫ್‌ ಟ್ಯಾಕ್ಲಿಂಗ್‌ ಕ್ಲೈಮ್ಯಾಟ್‌ ಚೇಂಜ್‌ʼʼ ಎಂದು ಹೇಳಿದ್ದರು.

ಹತ್ತು
ನೀವೀಗ ಗಂಗಾನದಿಯಲ್ಲಿ ಸ್ನಾನ ಮಾಡಬಹುದು!

ಕಳೆದ ಆರೇಳು ವರ್ಷಗಳ ಹಿಂದೆ, ವಾರಾಣಸಿಯಂಥ ತೀರ್ಥಕ್ಷೇತ್ರಗಳಲ್ಲಿ ಕೂಡ ಪವಿತ್ರ ಎನಿಸಿಕೊಂಡ ಗಂಗಾನದಿಯಲ್ಲಿ ಸ್ನಾನ ಮಾಡೋಕೆ ಸಾಧ್ಯವಿರಲಿಲ್ಲ. ಸುತ್ತಮುತ್ತಲಿನ ಕೈಗಾರಿಕೆಗಳ ಕಲುಷಿತ ನೀರು, ನಗರದ ಕಲ್ಮಷ, ಅರ್ಧ ಬೆಂದು ತೇಲಿಬಿಟ್ಟ ಹೆಣಗಳು ಇತ್ಯಾದಿಗಳೆಲ್ಲಾ ಸೇರಿಕೊಂಡು ಗಂಗಾನದಿಯನ್ನು ಮಾಲಿನ್ಯದ ಮಡುವಾಗುವಂತೆ ಮಾಡಿದ್ದವು. ಆದರೆ ಮೋದಿಯವರು ಆರಂಭಿಸಿದ ʼನಮಾಮಿ ಗಂಗಾʼ ಪ್ರಾಜೆಕ್ಟಿನ ಪರಿಣಾಮ ಈಗ ಗಂಗಾನದಿಯ ನೀರು ಸ್ನಾನ ಮಾಡುವಷ್ಟು ಆರೋಗ್ಯಕರವಾಗಿದೆ ಎಂದು ಸರಕಾರ ಮಾಹಿತಿ ನೀಡಿದೆ. ಇದಕ್ಕಾಗಿ 5227 ಕಿಲೋಮೀಟರ್‌ನಷ್ಟು ಸೀವೇಜ್‌ ಟ್ರೀಟ್‌ಮೆಂಟ್‌ ನೆಟ್‌ವರ್ಕ್‌ ಸ್ಥಾಪಿಸಿ, ಪ್ರತಿದಿನ ಲಕ್ಷಾಂತರ ಲೀಟರ್‌ ಕೊಳಚೆ ನೀರನ್ನು ಶುದ್ಧೀಕರಿಸಲಾಗ್ತಾ ಇದೆ. ಅಂದ್ರೆ ನೀವೀಗ ವಾರಾಣಸಿಗೆ ಭೇಟಿ ನೀಡಿದರೆ ಗಂಗಾನದಿಯಲ್ಲಿ ಯಾವುದೇ ಆತಂಕವಿಲ್ಲದೇ ಸ್ನಾನ ಮಾಡಿ ಶುದ್ಧವಾದ ಅನುಭೂತಿ ಹೊಂದಬಹುದು.

ಇದನ್ನೂ ಓದಿ: Visual Info: ಮೋದಿಯ ಅಪ್ಪುಗೆ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Udupi-Chikmagalur Lok Sabha constituency: ಬದಲಾವಣೆ ನಡುವೆ ಯಾರಿಗೆ ಮಣೆ ಹಾಕಲಿದ್ದಾರೆ ಉಡುಪಿ ಕ್ಷೇತ್ರದ ಮತದಾರರು?

Udupi-Chikmagalur Lok Sabha constituency: 2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕುಮಾರಿ ಶೋಭಾ ಕರಂದ್ಲಾಜೆ 7,18,916 ಮತಗಳನ್ನು ಪಡೆದು ಜಯಗಳಿಸಿದ್ದರು. ಜೆಡಿಎಸ್ ನ ಪ್ರಮೋದ್ ಮಧ್ವರಾಜ್ 3,69,317 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದರು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ನ ಜಯಪ್ರಕಾಶ್ ಹೆಗ್ಡೆ ಅವರನ್ನು 1,81,000 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು.

VISTARANEWS.COM


on

Udupi-Chikmagalur Lok Sabha constituency
Koo

ಬೆಂಗಳೂರು: ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರ 2008ರ ಕ್ಷೇತ್ರ ಮರು ವಿಂಗಡಣೆ (Udupi-Chikmagalur Lok Sabha constituency) ನಂತರ ಅಸ್ತಿತ್ವಕ್ಕೆ ಬಂದಿತು. 2019 ರವರೆಗೆ ಈ ಕ್ಷೇತ್ರದಲ್ಲಿ ಮೂರು ಚುನಾವಣೆಗಳು ನಡೆದಿವೆ. ಇದರಲ್ಲಿ 2012 ರ ಉಪಚುನಾವಣೆಯೂ ಸೇರಿದೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಭದ್ರಕೋಟೆಯಾಗಿದ್ದು ಉಪಚುನಾವಣೆಯಲ್ಲಿ ಮಾತ್ರ ಒಮ್ಮೆ ಕಾಂಗ್ರೆಸ್ ಗೆದ್ದಿದೆ. ಈ ಕ್ಷೇತ್ರದಲ್ಲಿ ಮೊದಲ ಚುನಾವಣೆ 2009ರಲ್ಲಿ ರಲ್ಲಿ ನಡೆಯಿತು. ಕುಂದಾಪುರ, ಉಡುಪಿ, ಕಾಪು, ಕಾರ್ಕಳ, ಶೃಂಗೇರಿ, ಮೂಡಿಗೆರೆ (ಎಸ್ಸಿ), ಚಿಕ್ಕಮಗಳೂರು, ತರೀಕೆರೆ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ 7,18,916 ಮತಗಳನ್ನು ಪಡೆದು ಜಯಗಳಿಸಿದ್ದರು. ಜೆಡಿಎಸ್ ನ ಪ್ರಮೋದ್ ಮಧ್ವರಾಜ್ 3,69,317 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದರು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ನ ಜಯಪ್ರಕಾಶ್ ಹೆಗ್ಡೆ ಅವರನ್ನು 1,81,000 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ 5,81,168 ಮತಗಳನ್ನು ಪಡೆದರೆ, ಜಯಪ್ರಕಾಶ್ 3,99,525 ಮತಗಳನ್ನು ಪಡೆದರು.

ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಮಾಜಿ ಸಚಿವರಾಗಿರುವ ಕೋಟಾ ಶ್ರೀನಿವಾಸ ಪೂಜಾರಿ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಅವರು 2019 ರಿಂದ 2023 ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಸದನದ ನಾಯಕರಾಗಿ ಮತ್ತು 2018-19 ರ ಅವಧಿಯಲ್ಲಿ ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.

ಜಯಪ್ರಕಾಶ್ ಹೆಗ್ಡೆ ಅವರು 2024ಲ್ಲಿ ಕಾಂಗ್ರೆಸ್ ಅಭ್ಯರ್ಥಿ. 1994ರಲ್ಲಿ ಜನತಾದಳದ ಅಭ್ಯರ್ಥಿಯಾಗಿ ಹಾಗೂ 1999 ಮತ್ತು 2004ರಲ್ಲಿ ಸ್ವತಂತ್ರ ಶಾಸಕರಾಗಿ ಬ್ರಹ್ಮಾವರ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಕ್ಷೇತ್ರ ಪುನರ್ವಿಂಗಡಣೆಯಿಂದಾಗಿ ಬ್ರಹ್ಮಾವರ ಕ್ಷೇತ್ರ ಅಸ್ತಿತ್ವ ಕಳೆದುಕೊಂಡಾಗ 2008ರ ವಿಧಾನಸಭೆ ಚುನಾವಣೆಯಲ್ಲಿ ಕುಂದಾಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು ಅವರು.

ಇದನ್ನೂ ಓದಿ: Dakshina Kannada Lok Sabha Constituency : ದಕ್ಷಿಣ ಕನ್ನಡದಲ್ಲಿ ವಿಜಯ ಅಭಿಯಾನ ಮುಂದುವರಿಸಲು ಬಿಜೆಪಿ ಕಾತರ

2012ರ ಉಪಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಿಜೆಪಿ ಸೇರಿದ ನಂತರ ಹೆಗಡೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ನಂತರ ಅವರ ಕಾಂಗ್ರೆಸ್​ ಪಕ್ಷಕ್ಕೆ ಸೇರಿ ಟಿಕೆಟ್​ ಪಡೆದುಕೊಂಡಿದ್ದರು. ಉಡುಪಿ ಚಿಕ್ಕಮಗಳೂರು ತನ್ನ ಗಡಿಯನ್ನು ಇತರ ಐದು ಲೋಕಸಭಾ ಕ್ಷೇತ್ರಗಳೊಂದಿಗೆ ಹಂಚಿಕೊಂಡಿದೆ. ದಾವಣಗೆರೆ, ಶಿವಮೊಗ್ಗ, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ ಕ್ಷೇತ್ರ ಸುತ್ತಲಿದೆ.

ಹಿಂದಿನ ಫಲಿತಾಂಶಗಳು

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಅವರು ಜೆಡಿಎಸ್​​ನ ಪ್ರಮೋದ್ ಮಧ್ವರಾಜ್ ಅವರನ್ನು 3,49,599 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿ ಶೇ.62.43ರಷ್ಟು ಮತಗಳನ್ನು ಪಡೆದಿತ್ತು.

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್​​ನ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು 1,81,643 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಶೇ.56.2ರಷ್ಟು ಮತಗಳನ್ನು ಗಳಿಸಿದೆ.

2009ರ ಸಾರ್ವತ್ರಿಕ ಚುನಾವಣೆಯಲ್ಲಿ ಡಿ.ವಿ.ಸದಾನಂದ ಗೌಡ ಅವರು ಕಾಂಗ್ರೆಸ್​​ನ ಪಕ್ಷದ ಜಯಪ್ರಕಾಶ್ ಹೆಗ್ಡೆ ಅವರನ್ನು 27,018 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಶೇ.48.06ರಷ್ಟು ಮತಗಳನ್ನು ಪಡೆದಿತ್ತು.

Continue Reading

ದೇಶ

Heat Wave: ಒಡಿಶಾದಲ್ಲಿ ಬಿಸಿಗಾಳಿ ಶಾಖಕ್ಕೆ ಒಂದೇ ದಿನ 45 ಜನ ಬಲಿ

Heat Wave: ದೇಶಾದ್ಯಂತ ಬಿಸಿಗಾಳಿ ತಾಪಮಾನಕ್ಕೆ ಒಟ್ಟು 211 ಜನ ಬಲಿಯಾಗಿದ್ದು, 141 ಸಾವು ಒಡಿಶಾದಲ್ಲೇ ಆಗಿದೆ. ಕಳೆದ 24ಗಂಟೆಗಳಲ್ಲಿ 45 ಜನ ಸಾವನ್ನಪ್ಪಿರುವುದು ದೃಢಪಟ್ಟಿದೆ. ಇನ್ನುಳಿದ 107 ಸಾವು ಬಿಸಿಗಾಳಿಯಿಂದಾಗಿಯೇ ಆಗಿರುವುದೇ ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿಯಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಒಡಿಶಾದ ಸುಂದರ್‌ ಘರ್‌ ಜಿಲ್ಲೆ ಬಿಸಿಗಾಳಿ ಸಮಸ್ಯೆಗೆ ಅತಿ ಹೆಚ್ಚಾಗಿ ತುತ್ತಾಗಿರುವ ಜಿಲ್ಲೆಯಾಗಿದ್ದು, ಇಲ್ಲಿ ಕಳೆದ ಮೂರು ದಿನಗಳಲ್ಲಿ 35 ಜನ ಸಾವನ್ನಪ್ಪಿದ್ದಾರೆ.

VISTARANEWS.COM


on

Heat wave
Koo

ಭುವನೇಶ್ವರ: ಉತ್ತರಭಾರತದ ವಿವಿಧ ರಾಜ್ಯಗಳಲ್ಲಿ ಬಿಸಿಗಾಳಿ(Heat Wave) ಸಮಸ್ಯೆ ಮುಂದುವರೆದಿದ್ದು, ಸುಮಾರು 200ಕ್ಕೂ ಅಧಿಕ ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಒಡಿಶಾ(Odisha)ದಲ್ಲಿ ಕಳೆದ ಕೆಲವು ದಿನಗಳಲ್ಲಿ ವಾತಾವರಣದ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಆಗಿದೆ. ಒಡಿಶಾದಲ್ಲಿ ಕಳೆದ 24 ಗಂಟೆಗಳಲ್ಲಿ 45 ಜನ ಬಲಿಯಾಗಿದ್ದಾರೆ ಎನ್ನಲಾಗಿದೆ. ಇನ್ನೂ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ದೇಶಾದ್ಯಂತ ಬಿಸಿಗಾಳಿ ತಾಪಮಾನಕ್ಕೆ ಒಟ್ಟು 211 ಜನ ಬಲಿಯಾಗಿದ್ದು, 141 ಸಾವು ಒಡಿಶಾದಲ್ಲೇ ಆಗಿದೆ. ಕಳೆದ 24ಗಂಟೆಗಳಲ್ಲಿ 45 ಜನ ಸಾವನ್ನಪ್ಪಿರುವುದು ದೃಢಪಟ್ಟಿದೆ. ಇನ್ನುಳಿದ 107 ಸಾವು ಬಿಸಿಗಾಳಿಯಿಂದಾಗಿಯೇ ಆಗಿರುವುದೇ ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿಯಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಒಡಿಶಾದ ಸುಂದರ್‌ ಘರ್‌ ಜಿಲ್ಲೆ ಬಿಸಿಗಾಳಿ ಸಮಸ್ಯೆಗೆ ಅತಿ ಹೆಚ್ಚಾಗಿ ತುತ್ತಾಗಿರುವ ಜಿಲ್ಲೆಯಾಗಿದ್ದು, ಇಲ್ಲಿ ಕಳೆದ ಮೂರು ದಿನಗಳಲ್ಲಿ 35 ಜನ ಸಾವನ್ನಪ್ಪಿದ್ದಾರೆ.

ಭಾರತೀಯ ಹವಾಮಾನ ಇಲಾಖೆ (IMD) ಈ ಬಗ್ಗೆ ಮಾಹಿತಿ ನೀಡಿದ್ದು, ಜೂನ್ 3 ರಂದು ದೇಶದ ಹಲವು ಪ್ರದೇಶಗಳಲ್ಲಿ ಬಿಸಿಗಾಳಿ ಪರಿಸ್ಥಿತಿಗಳು ಮುಂದುವರಿಯುತ್ತದೆ ಎಂದು ಹೇಳಿದ್ದು, ಪಂಜಾಬ್, ಹರಿಯಾಣ-ಚಂಡೀಗಢ-ದೆಹಲಿ, ಜಮ್ಮು ವಿಭಾಗ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶದ ಕೆಲವು ಕಡೆ, ರಾಜಸ್ಥಾನ, ಮಧ್ಯಪ್ರದೇಶ, ವಿದರ್ಭ, ಛತ್ತೀಸ್‌ಗಢ ಮತ್ತು ಒಡಿಶಾದಲ್ಲಿ ಜೂನ್ 3 ರಂದು ಬಿಸಿಗಾಳಿ ಶಾಖದ ಪ್ರಮಾಣ ಅತಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದೇಶದ ಬಿಸಿಗಾಳಿ ಸಂಬಂಧಿತ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆಯಷ್ಟೇ ಸಭೆ ನಡೆಸಿದ್ದಾರೆ. ಸಭೆಯಲ್ಲಿ, IMD ಮುನ್ಸೂಚನೆಗಳ ಪ್ರಕಾರ, ರಾಜಸ್ಥಾನ, ಗುಜರಾತ್ ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಶಾಖದ ಅಲೆಯು ಮುಂದುವರಿಯುವ ಸಾಧ್ಯತೆಯಿದೆ ಎಂದು ಪ್ರಧಾನಿಗೆ ವಿವರಿಸಲಾಯಿತು.

Continue Reading

ಅಂಕಣ

ರಾಜಮಾರ್ಗ ಅಂಕಣ: ಜಾರ್ಜ್ ಫರ್ನಾಂಡಿಸ್ ಮತ್ತು ಕೊಂಕಣ್ ರೈಲ್ವೆ ಎಂಬ ಮಹಾ ಕನಸು!

ರಾಜಮಾರ್ಗ ಅಂಕಣ: ಜಾರ್ಜ್ ಭರವಸೆ ಕೊಟ್ಟ ಹಾಗೆ ಎಂಟು ವರ್ಷಗಳ ಒಳಗೆ ಈ ಪ್ರಾಜೆಕ್ಟ್ ಪೂರ್ತಿ ಆಯಿತು. 1998 ಜನವರಿ 26ರಂದು ಅಂದಿನ ಪ್ರಧಾನಿ ವಾಜಪೇಯಿ ಅವರು ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಕೊಂಕಣ ರೈಲ್ವೆಯ ಹೊಸ ಮಾರ್ಗವನ್ನು ಉದ್ಘಾಟನೆ ಮಾಡಿದರು. ತನ್ನ ತಂದೆ ಮರಣವನ್ನು ಹೊಂದಿದಾಗಲೂ ಕಣ್ಣೀರು ಹಾಕದೆ ಇದ್ದ ಉಕ್ಕಿನ ಮನುಷ್ಯ ಜಾರ್ಜ್ ಫರ್ನಾಂಡಿಸ್ ಅಂದು ಅಕ್ಷರಶಃ ಪುಟ್ಟ ಮಗುವಿನ ಹಾಗೆ ಕಣ್ಣೀರು ಹಾಕಿದ್ದರು!

VISTARANEWS.COM


on

George Fernandes ರಾಜಮಾರ್ಗ ಅಂಕಣ
Koo

ಇಂದು( ಜೂನ್ 3) ಜಾರ್ಜ್ ಫರ್ನಾಂಡಿಸ್ ಅವರ ಹುಟ್ಟಿದ ಹಬ್ಬ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: 1989ರ ಇಸವಿಯಲ್ಲಿ ಪ್ರಧಾನಿ ವಿ.ಪಿ ಸಿಂಗ್ (VP Singh) ಅವರ ಕ್ಯಾಬಿನೆಟ್‌ನಲ್ಲಿ ರೈಲ್ವೇ ಮಂತ್ರಿ (Railway minister) ಆಗಿ ಪ್ರತಿಜ್ಞೆ ಸ್ವೀಕರಿಸಿದ ತಕ್ಷಣ ಜಾರ್ಜ್ ಫರ್ನಾಂಡಿಸ್ (George Fernandes) ಉನ್ನತ ರೈಲ್ವೇ ಅಧಿಕಾರಿಗಳ ತುರ್ತು ಸಭೆಯನ್ನು ಕರೆದಿದ್ದರು.

ಜಾರ್ಜ್ ಫರ್ನಾಂಡಿಸ್ ಅಂದು ಹೇಳಿದ್ದು ಎರಡೇ ಮಾತು – ನನ್ನ ಮನಸಿನಲ್ಲಿ ಎರಡು ರೈಲ್ವೇಯ ಯೋಜನೆಗಳು ಇವೆ. ಒಂದು ಬಿಹಾರದಲ್ಲಿ ಚಿಟ್ಟೌನಿ, ಮತ್ತೊಂದು ಕರ್ನಾಟಕದಲ್ಲಿ ಕೊಂಕಣ ರೈಲ್ವೆ (Konkan Railway). ಮುಂದಿನ ಬಜೆಟ್ಟಿನಲ್ಲಿ ಅವುಗಳಿಗೆ ನಾನು ಹಣವನ್ನು ಮೀಸಲು ಇಡುತ್ತೇನೆ. ಅವೆರಡೂ ಪೂರ್ತಿ ಆಗಬೇಕು.

ಅವರು ಎರಡು ರೈಲ್ವೇ ಯೋಜನೆಗಳ ಹಿಂದೆ ಬಿದ್ದದ್ದೇಕೆ?

ಆಗ ಪತ್ರಕರ್ತರು ಅವೆರಡು ಯೋಜನೆಗಳು ಮಾತ್ರವೇ ಯಾಕೆ? ಎಂದು ಕೇಳಿದ್ದರು. ಅದಕ್ಕೆ ಜಾರ್ಜ್ ಫರ್ನಾಂಡೀಸ್ ಹೇಳಿದ್ದು – ಒಂದು ನನಗೆ ವೋಟನ್ನು ಹಾಕಿ ಗೆಲ್ಲಿಸಿದ ರಾಜ್ಯ ಬಿಹಾರ್. ಇನ್ನೊಂದು ನನ್ನ ಜನ್ಮ ಕೊಟ್ಟ ರಾಜ್ಯ ಕರ್ನಾಟಕ! ಎರಡು ರಾಜ್ಯಗಳ ಋಣವನ್ನು ಮರೆಯಲು ಸಾಧ್ಯವೇ?

ಜಾರ್ಜ್ ಅವರಿಗೆ ಮಂತ್ರಿಯಾಗಿ ಮುಂದೆ ತಾನು ಏನು ಮಾಡಬೇಕು ಅನ್ನುವುದು ಸ್ಪಷ್ಟ ಆಗಿತ್ತು! ನಾನು ಇವತ್ತು ʻಕೊಂಕಣ ರೈಲ್ವೆ’ ಎಂಬ ಮಹತ್ವಾಕಾಂಕ್ಷೆಯ ಯೋಜನೆಯು ಅನುಷ್ಠಾನವಾದ ಬಗ್ಗೆ ತುಂಬಾ ವಿಸ್ತಾರ ಆಗಿ ಬರೆಯಬೇಕು. ಏಕೆಂದರೆ ಜಾರ್ಜ್ ಇಲ್ಲವಾದ್ರೆ ಅದು ಇವತ್ತಿಗೂ ಪೂರ್ತಿ ಆಗುತ್ತಿರಲಿಲ್ಲ!

ʻಕೊಂಕಣ ರೈಲ್ವೆ ‘ ಎಂಬ ಮಹಾ ಮಿಷನ್!

ಭಾರತದ ಅತೀ ದೊಡ್ಡ, ಸವಾಲಿನ ರೈಲ್ವೇ ಪ್ರಾಜೆಕ್ಟ್ ಅದು! 70ರ ದಶಕದಲ್ಲಿ ಕರಾವಳಿ ಕರ್ನಾಟಕದ ಬೇರೆ ಬೇರೆ ಕಡೆಯಿಂದ ಮುಂಬೈಗೆ ಹೋಗಿ ಉದ್ಯಮ, ವ್ಯವಹಾರ ಆರಂಭ ಮಾಡಿದ್ದ ತುಳುವರಿಗೆ ಮುಂಬೈಗೆ ಹೋಗಲು ಆಗ 48 ಗಂಟೆ ಅವಧಿಯು ಬೇಕಾಗಿತ್ತು! ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರಭಸವಾಗಿ ಹರಿಯುತ್ತಿದ್ದ ದೊಡ್ಡ ದೊಡ್ಡ ನದಿಗಳಿಗೆ ಆಗ ಸೇತುವೆಗಳು ಆಗಿರಲಿಲ್ಲ.

ಕರಾವಳಿ ಕರ್ನಾಟಕದ ಮಂದಿಯು ರಸ್ತೆಯ ಮಾರ್ಗದಲ್ಲಿ ಚಿಕ್ಕಮಗಳೂರಿನವರೆಗೆ (ಕಡೂರು)ಹೋಗಿ ಅಲ್ಲಿಂದ ಟ್ರೈನನ್ನು ಏರಿಕೊಂಡು ಮುಂಬಯಿ ತಲುಪುವಾಗ ಎರಡು ದಿನ ಮತ್ತು ಎರಡು ರಾತ್ರಿಗಳು ಕಳೆದುಹೋಗುತ್ತಿದ್ದವು! ಬೇರೆ ಯಾವುದೇ ಮಾರ್ಗವು ಕೂಡ ಆಗ ಇರಲಿಲ್ಲ. ವಿಮಾನ ಆರಂಭ ಆಗಿರಲಿಲ್ಲ.

ಕೊಂಕಣ ರೈಲ್ವೇಗೆ ಎದುರಾಯಿತು ನೂರಾರು ಸವಾಲು

ಜಾರ್ಜ್ ತಾವು ಭರವಸೆ ಕೊಟ್ಟ ಹಾಗೆ ರೈಲ್ವೆ ಬಜೇಟಲ್ಲಿ ಕೊಂಕಣ್ ರೈಲ್ವೆಗೆ ಮಂಜೂರಾತಿ ಪಡೆದರು. ಒಂದಿಷ್ಟು ದುಡ್ಡು ಕೂಡ ಪಡೆದರು. ಆದರೆ ಅದು ‘ರಾವಣನ ಹೊಟ್ಟೆಗೆ ಕಾಸಿನ ಮಜ್ಜಿಗೆ’ ಎಂಬ ಹಾಗೆ ಇತ್ತು. ಆದರೆ ಜಾರ್ಜ್ ಹಿಡಿದ ಹಠ ಬಿಡುವ ಜಾಯಮಾನದವರೆ ಅಲ್ಲವಲ್ಲ!

ಮುಂದೆ ಒಂದೆರಡು ತಿಂಗಳ ಒಳಗೆ ಕೊಂಕಣ ರೈಲ್ವೆಸ್ ಕಂಪೆನಿಯು ಉದ್ಘಾಟನೆ ಆಯಿತು(1990 ಜುಲೈ 19). ಕೆಲವೇ ತಿಂಗಳ ಹಿಂದೆ ಕೇಂದ್ರ ಸರಕಾರದ ಸೇವೆಯಿಂದ ನಿವೃತ್ತಿ ಹೊಂದಿದ್ದ ಚೀಫ್ ಇಂಜಿನಿಯರ್ ಕೇರಳದ ಈ. ಶ್ರೀಧರನ್ ಅವರನ್ನು ಆ ಕಂಪೆನಿಯ ಮುಖ್ಯಸ್ಥರಾಗಿ ಆಗಮಿಸಲು ಜಾರ್ಜ್ ವಿನಂತಿ ಮಾಡಿದರು. ಶ್ರೀಧರನ್ ಒಪ್ಪಿದರು. ಅವರಿಗೆ ಜಾರ್ಜ್ ಹೇಳಿದ್ದು ಒಂದೇ ಮಾತು – ಸರ್, ನೀವು ಕೆಲಸ ಮಾಡ್ತಾ ಹೋಗಿ. ಕೆಲಸ ನಿಲ್ಲಬಾರದು. ದುಡ್ಡು ನಾನು ಹೊಂದಿಸುವೆ!

ನಾನು ರೈಲ್ವೆ ಮಂತ್ರಿ ಆಗಿರದಿದ್ದರೂ….!

ಮುಂದೆ ಶಿಲಾನ್ಯಾಸದ ಕಾರ್ಯಕ್ರಮ ನಡೆದಾಗ ರೈಲ್ವೆ ಮಂತ್ರಿ ಜಾರ್ಜ್ ಹೇಳಿದ್ದು – ಮುಂದೆ ನಾನು ರೈಲ್ವೆ ಮಂತ್ರಿ ಆಗಿರುತ್ತೇನೋ ಇಲ್ಲವೋ ಗೊತ್ತಿಲ್ಲ. ಎಂಟು ವರ್ಷಗಳ ಒಳಗೆ ಈ ಯೋಜನೆಯು ಖಂಡಿತವಾಗಿ ಪೂರ್ತಿ ಆಗುತ್ತದೆ. ಅದಕ್ಕೆ ಬೇಕಾದ ದುಡ್ಡು ನನ್ನ ಹೊಣೆ!

ಜಾರ್ಜ್ ಫರ್ನಾಂಡಿಸ್ ನುಡಿದ ಹಾಗೆ ನಡೆದರು. ಸರಕಾರದ ದುಡ್ಡು ಸಾಲದೆ ಹೋದಾಗ ಪಬ್ಲಿಕ್ ಇಶ್ಯುಸ್ ಮೂಲಕ ಫಂಡ್ಸ್ ಒಟ್ಟು ಮಾಡಿದರು. ಆ ಯೋಜನೆಯ ಫಲಾನುಭವಿಗಳ ಸಭೆ ಕರೆದು ಭಿಕ್ಷಾಪಾತ್ರೆ ಹಿಡಿದರು. ಜನರು ಹಿಂದೆ ಮುಂದೆ ನೋಡದೆ ಜಾರ್ಜ್ ಮೇಲೆ ಭರವಸೆ ಇಟ್ಟರು. ಜಾರ್ಜ್ ಅವರ ಕನ್ವಿನ್ಸಿಂಗ್ ಪವರ್ ತುಂಬಾ ಅದ್ಭುತ ಆಗಿತ್ತು. ಅವರ ಕೊಂಕಣಿ, ತುಳು, ಹಿಂದೀ, ಇಂಗ್ಲಿಷ್, ಮರಾಠಿ ಭಾಷೆಯ ಮಾತುಗಳು ಜನರಲ್ಲಿ ಭಾರೀ ಭರವಸೆ ಮೂಡಿಸಿದವು.

ಶ್ರೀಧರನ್ ಎಂಬ ಮಹಾನ್ ಕಾಯಕ ರಾಕ್ಷಸ

ಇನ್ನು ಈ ಶ್ರೀಧರನ್ ಸಾಮರ್ಥ್ಯದ ಬಗ್ಗೆ ಎಷ್ಟು ಬರೆದರೂ ಅದು ಕಡಿಮೆಯೇ! ಆತ ಮಹಾ ಕಾಯಕ ರಾಕ್ಷಸ! ತುಂಬಾ ಸ್ಟ್ರಾಂಗ್ ಆಗಿದ್ದ ಯುವ ಇಂಜಿನಿಯರಗಳ ತಂಡವನ್ನು ಕಟ್ಟಿಕೊಂಡ ಅವರು ಮುಂದಿನ ಎಂಟು ವರ್ಷಗಳ ಕಾಲ ಮಾಡಿದ್ದೆಲ್ಲವೂ ಅದ್ಭುತ! ಎಲ್ಲವೂ ಮಹೋನ್ನತ!

ಅತ್ಯಂತ ದುರ್ಗಮವಾದ ಪರ್ವತಗಳ ಶ್ರೇಣಿ! ಜಾರುವ ಬಂಡೆಗಳು! ಒಂದು ಮಳೆಗೆ ಜಾರಿ ಕುಸಿದು ಹೋಗುವ ಶೇಡಿ ಮಣ್ಣಿನ ನೆಲ! ಬೆಟ್ಟಗಳನ್ನು ಅಗೆದು ಮೈಲು ದೂರದ ಸುರಂಗಗಳನ್ನು ಕೊರೆಯುವ ಸವಾಲು! ಅದು ಇಡೀ ಭಾರತದ ರೈಲ್ವೆ ಇತಿಹಾಸದ ಅತ್ಯಂತ ಸಾಹಸದ ಮತ್ತು ಕಠಿಣ ಸವಾಲಿನ ಪ್ರಾಜೆಕ್ಟ್ ಆಗಿತ್ತು!

ಮೂರು ರಾಜ್ಯಗಳ ಹೃದಯದ ಮೂಲಕ ಹಾದು ಹೋಗುವ 760 ಕಿಲೋಮೀಟರ್ ರೈಲ್ವೆ ಹಳಿಗಳು! 2000 ಸಣ್ಣ ಸೇತುವೆಗಳು! 179 ದೊಡ್ಡ ಸೇತುವೆಗಳು! 92 ಭಾರೀ ಸುರಂಗಗಳು! ಅದರಲ್ಲಿ ಕೆಲವು ಮೈಲುಗಟ್ಟಲೆ ಉದ್ದ ಇವೆ! 59 ವೈಭವದ ನಿಲ್ದಾಣಗಳು! ಆಗಾಗ ಗುಡ್ಡದ ಕುಸಿತದ ಹಿನ್ನೆಲೆಯಲ್ಲಿ ಕೆಲಸವು ಕಷ್ಟ ಆಯ್ತು. ಆದರೆ ಈ. ಶ್ರೀಧರನ್ ಕೆಲಸವನ್ನು ನಿಲ್ಲಲು ಬಿಡಲಿಲ್ಲ! ಜಾರ್ಜ್ ಅವರನ್ನು ಬೆನ್ನು ಬಿಡಬೇಕಲ್ಲ!

ಜಾರ್ಜ್ ಫರ್ನಾಂಡಿಸ್ ನುಡಿದಂತೆ ನಡೆದರು

ಜಾರ್ಜ್ ಭರವಸೆ ಕೊಟ್ಟ ಹಾಗೆ ಎಂಟು ವರ್ಷಗಳ ಒಳಗೆ ಈ ಪ್ರಾಜೆಕ್ಟ್ ಪೂರ್ತಿ ಆಯಿತು. 1998 ಜನವರಿ 26ರಂದು ಅಂದಿನ ಪ್ರಧಾನಿ ವಾಜಪೇಯಿ ಅವರು ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಕೊಂಕಣ ರೈಲ್ವೆಯ ಹೊಸ ಮಾರ್ಗವನ್ನು ಉದ್ಘಾಟನೆ ಮಾಡಿದರು. ಆಗ ಕೇಂದ್ರದ ರಕ್ಷಣಾ ಮಂತ್ರಿ ಆಗಿದ್ದರು ಜಾರ್ಜ್ ಫರ್ನಾಂಡಿಸ್. ಅಂದು ವೇದಿಕೆಯಲ್ಲಿ ಇದ್ದು ಆನಂದ ಭಾಷ್ಪ ಸುರಿಸಿದರು! ತನ್ನ ತಂದೆ ಮರಣವನ್ನು ಹೊಂದಿದಾಗಲೂ ಕಣ್ಣೀರು ಹಾಕದೆ ಇದ್ದ ಉಕ್ಕಿನ ಮನುಷ್ಯ ಜಾರ್ಜ್ ಫರ್ನಾಂಡಿಸ್ ಅಂದು ಅಕ್ಷರಶಃ ಪುಟ್ಟ ಮಗುವಿನ ಹಾಗೆ ಕಣ್ಣೀರು ಹಾಕಿದ್ದರು! ಅಂದು ಮಂಗಳೂರು ಮುಂಬೈ ನಡುವೆ ಮೊದಲ ಟ್ರೈನ್ ಓಡಿತ್ತು!

ಕೊಂಕಣ ರೈಲು ಕ್ರಾಂತಿಯನ್ನೇ ಮಾಡಿತು!

ಅದುವರೆಗೆ ಮಂಗಳೂರು ಮುಂಬೈ ನಡುವಿನ ಪ್ರಯಾಣಕ್ಕೆ 48 ಗಂಟೆ ತೆಗೆದುಕೊಳ್ಳುತ್ತಿದ್ದ ಕರಾವಳಿಯ ಮಂದಿ ಅಂದು ಕೇವಲ 15 ಗಂಟೆಯಲ್ಲಿ ಮುಂಬೈ ತಲುಪಿದ್ದರು! ಈಗಇನ್ನೂ ಕಡಿಮೆಯ ಸಮಯವು ಸಾಕಾಗುತ್ತದೆ. ದೂರವು 1200 ಕಿಲೋಮೀಟರ್‌ನಿಂದ 760 ಕಿಲೋಮೀಟರ್‌ಗೆ ಇಳಿದಿದೆ. ಅತ್ಯಂತ ಆಕರ್ಷಕವಾದ 59 ಸ್ಟೇಶನ್‌ಗಳು ಕೂಡ ಮುಗಿದು ಬಿಟ್ಟಿದ್ದವು. ತುಳುವರ ಸಂತೋಷಕ್ಕೆ ಅಂದು ಪಾರವೇ ಇರಲಿಲ್ಲ. ಈ. ಶ್ರೀಧರನ್ ಈ ಪ್ರಾಜೆಕ್ಟನ್ನು ಪೂರ್ತಿ ಮಾಡಿ ಇನ್ನೊಂದು ಪ್ರಾಜೆಕ್ಟ್ ಹಿಂದೆ ಹೋದರು. ಅವರೆಲ್ಲಿ ವಿಶ್ರಾಂತಿ ಪಡೆಯುತ್ತಾರೆ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಅಳಿಸಲಾಗದ ನೋವು ಬಿಟ್ಟು ಹೋದ ಮಂಗಳೂರು ವಿಮಾನ ದುರಂತ!

ಇಂದು ಅದೇ ಕೊಂಕಣ್ ರೈಲ್ವೆ ಹಳಿಗಳ ಮೂಲಕ ನೂರಾರು ಟ್ರೈನಗಳು ಓಡುತ್ತಿವೆ. ದಕ್ಷಿಣ ಭಾರತ ಮತ್ತು ಉತ್ತರ ಭಾರತವನ್ನು ಕನೆಕ್ಟ್ ಮಾಡುವ ಶ್ರೇಷ್ಟ ಸಾರಿಗೆ ವ್ಯವಸ್ಥೆ ಅದು. ಅದೇ ಹಳಿಗಳ ಮೇಲೆ ಈಗ ಭಾರತದ ಅತ್ಯಂತ ವೇಗವಾದ ರೈಲು ಕೂಡ ಓಡುತ್ತಿದೆ. ಖರ್ಚು ಕೂಡ ತುಂಬಾ ಕಡಿಮೆ.

ಜಾರ್ಜ್ ಫರ್ನಾಂಡಿಸ್ ಆದರು ಲೆಜೆಂಡ್

ಇಂದು( ಜೂನ್ 3) ಜಾರ್ಜ್ ಫರ್ನಾಂಡಿಸ್ ಅವರ ಹುಟ್ಟಿದ ಹಬ್ಬ. ಬದುಕಿದ್ದರೆ ಅವರಿಗೆ ಇಂದು 94ವರ್ಷ ಆಗಿರುತ್ತಿತ್ತು. ಅವರಿಂದು ಬದುಕಿಲ್ಲ. ಅವರು ಗತಿಸಿ ಐದು ವರ್ಷಗಳೇ ಆಗಿವೆ. ಆದರೆ ಪ್ರತೀ ದಿನವೂ ರೈಲಿನಲ್ಲಿ ಪ್ರಯಾಣ ಮಾಡುವ ಜನರ ಹೃದಯದಲ್ಲಿ ಅವರು ಸದಾ ಜೀವಂತ ಇರುತ್ತಾರೆ.

ಉಡುಪಿ ಇಂದ್ರಾಳಿ ಜಂಕ್ಷನನಿಂದ ರೈಲ್ವೆ ನಿಲ್ದಾಣದ ತನಕ ಹೋಗುವ ರಸ್ತೆಗೆ ಜಾರ್ಜ್ ಫರ್ನಾಂಡಿಸ್ ಅವರ ಹೆಸರು ಇಡಲಾಗಿದೆ. ಆದರೆ ಆ ನಾಮಫಲಕವು ಎಲ್ಲೋ ಮರೆಗೆ ಹೋಗಿದೆ. ಸರಕಾರಗಳು ಅವರನ್ನು ಮರೆತಿವೆ. ಅವರ ಬಗ್ಗೆ ನಿರ್ಲಕ್ಷ್ಯವು ಖಂಡಿತಾ ಸಲ್ಲದು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಸಾವನ್ನೇ ಆಹ್ವಾನಿಸಿದ ಸುಂದರಿ ಝೋರಯಾ ಟರ್ ಬ್ರೀಕ್

Continue Reading

ದೇಶ

Lok Sabha Election 2024: ಬಿಜೆಪಿ ಫೈರ್‌ ಬ್ರ್ಯಾಂಡ್‌ಗಳ ಸೋಲು ಗೆಲುವಿನ ಲೆಕ್ಕಾಚಾರ ಹೇಗಿದೆ? ಎಕ್ಸಿಟ್‌ ಪೋಲ್‌ ಹೇಳೋದೇನು?

Lok Sabha Election 2024: ಚುನಾವಣೆಗೂ ಮುನ್ನ ಹಾಗೂ ಚುನಾವಣೆ ಸಂದರ್ಭದಲ್ಲೂ ಅಬ್ಬರದ ಪ್ರಚಾರ, ವಾಗ್ದಾಳಿ ಮೂಲಕ ಬಹಳ ಸದ್ದು ಮಾಡುತ್ತಿದ್ದ ಬಿಜೆಪಿ ಫೈರ್‌ ಬ್ರ್ಯಾಂಡ್‌ಗಳ ಫಲಿತಾಂಶ ಹೇಗಿರಲಿದೆ? ಈ ಬಾರಿ ಅವರ ಚಾರ್ಮಿಂಗ್‌, ವ್ಯಕ್ತಿತ್ವ, ವಿಶೇಷ ನಡೆ ನುಡಿ, ಪ್ರತಿಪಕ್ಷ ನಾಯಕರಿಗೆ ನೀಡುವ ಖಡಕ್‌ ಟಾಂಗ್‌ ಇವೆಲ್ಲವೂ ಜನರ ಮೇಲೆ ಪ್ರಭಾವ ಬೀರಿದೆಯೇ? ಜನ ಈ ಪೈಯರ್‌ ಬ್ರ್ಯಾಂಡ್‌ಗಳನ್ನು ಗೆಲ್ಲಿಸುವ ಸಾಧ್ಯಾಸಾಧ್ಯತೆಗಳು ಎಷ್ಟಿವೆ

VISTARANEWS.COM


on

Koo

ನವದೆಹಲಿ:ಲೋಕಸಭಾ ಚುನಾವಣಾ ಫಲಿತಾಂಶಕ್ಕೆ (Lok Sabha Election 2024) ಮುಂಚಿತವಾಗಿ ಪ್ರಕಟಗೊಂಡಿರುವ ಮತಗಟ್ಟೆ ಸಮೀಕ್ಷೆಯ ಪ್ರಕಾರ (Exit Poll 2024) ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುದು ಖಚಿತವಾಗಿದೆ. ಅಷ್ಟೇ ಅಲ್ಲದೇ ಕೆಲವು ಎಕ್ಸಿಟ್‌ ಪೋಲ್‌ ಫಲಿತಾಂಶ ಗಮನಿಸಿದರೆ ಈ ಬಾರಿ ಬಿಜೆಪಿ ನಿರೀಕ್ಷೆ 400ಕ್ಕೂ ಅಧಿಕ ಸ್ಥಾನಗಳನ್ನು ಗಳಿಸುವ ಮೂಲಕ ಪ್ರಚಂಡ ಗೆಲವು ಸಾಧಿಸುವ ಸಾಧ್ಯೆ ದಟ್ಟವಾಗಿದೆ. ಹೀಗಿರುವಾಗ ಚುನಾವಣೆಗೂ ಮುನ್ನ ಹಾಗೂ ಚುನಾವಣೆ ಸಂದರ್ಭದಲ್ಲೂ ಅಬ್ಬರದ ಪ್ರಚಾರ, ವಾಗ್ದಾಳಿ ಮೂಲಕ ಬಹಳ ಸದ್ದು ಮಾಡುತ್ತಿದ್ದ ಬಿಜೆಪಿ ಫೈರ್‌ ಬ್ರ್ಯಾಂಡ್‌ಗಳ ಫಲಿತಾಂಶ ಹೇಗಿರಲಿದೆ? ಈ ಬಾರಿ ಅವರ ಚಾರ್ಮಿಂಗ್‌, ವ್ಯಕ್ತಿತ್ವ, ವಿಶೇಷ ನಡೆ ನುಡಿ, ಪ್ರತಿಪಕ್ಷ ನಾಯಕರಿಗೆ ನೀಡುವ ಖಡಕ್‌ ಟಾಂಗ್‌ ಇವೆಲ್ಲವೂ ಜನರ ಮೇಲೆ ಪ್ರಭಾವ ಬೀರಿದೆಯೇ? ಜನ ಈ ಪೈಯರ್‌ ಬ್ರ್ಯಾಂಡ್‌ಗಳನ್ನು ಗೆಲ್ಲಿಸುವ ಸಾಧ್ಯಾಸಾಧ್ಯತೆಗಳು ಎಷ್ಟಿವೆ ಎಂದು ನೋಡೋಣ ಬನ್ನಿ.

ಬಶೀರ್‌ಹತ್:

ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಈ ಬಾರಿ ಅತಿ ಹೆಚ್ಚು ಸೀಟುಗಳನ್ನು ಪಡೆಯಲಿದೆ. ಆಕ್ಸಿಸ್ ಮೈ ಇಂಡಿಯಾದ ಎಕ್ಸಿಟ್ ಪೋಲ್ ಪ್ರಕಾರ, ರಾಜ್ಯದಲ್ಲಿ ಬಿಜೆಪಿ 31 ರಿಂದ 42 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಲಾಗಿದೆ. ಏತನ್ಮಧ್ಯೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ) 11 ರಿಂದ 14 ಸ್ಥಾನಗಳನ್ನು ಗಳಿಸಬಹುದು ಮತ್ತು ಭಾರತೀಯ ಮೈತ್ರಿಕೂಟವು 0 ರಿಂದ 2 ಸ್ಥಾನಗಳನ್ನು ಪಡೆಯಬಹುದು ಎಂದು ಎಕ್ಸಿಟ್‌ ಪೋಲ್‌ ಹೇಳಿದೆ.

ಆದಾಗ್ಯೂ, ಇದರ ಹೊರತಾಗಿಯೂ, ಹೆಚ್ಚಿನ ಸ್ಥಾನದಲ್ಲಿರುವ ಬಶೀರ್‌ಹತ್ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗಬಹುದು ಏಕೆಂದರೆ ಅದರ ಅಭ್ಯರ್ಥಿಯು ಟಿಎಂಸಿ ಅಭ್ಯರ್ಥಿಯ ಕೈಯಲ್ಲಿ ಸೋಲನ್ನು ಎದುರಿಸಬೇಕಾಗುತ್ತದೆ. ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಸಂದೇಶ್‌ಖಲಿ ಹಿಂಸಾಚಾರದ ಸಂತ್ರಸ್ತೆ ರೇಖಾ ಆಗಿದ್ದು, ಈ ಕ್ಷೇತ್ರ ಬಿಜೆಪಿಗೆ ಅತ್ಯಂತ ಪ್ರತಿಷ್ಠೆಯ ಕ್ಷೇತ್ರವಾಗಿದೆ. ಸಂದೇಶ್‌ಖಾಲಿ ಪ್ರದೇಶವು ಬಶೀರ್‌ಹತ್ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತದೆ ಮತ್ತು ಇಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಭೂಕಬಳಿಕೆಯ ವಿಷಯಗಳ ಬಗ್ಗೆ ಸಾಕಷ್ಟು ವಿವಾದಗಳಿವೆ. ಸಂದೇಶಖಾಲಿಯ ಬಲಿಪಶು ರೇಖಾ ಪಾತ್ರ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು,. ಆದರೆ ಅವರು ಟಿಎಂಸಿ ಅಭ್ಯರ್ಥಿ ಹಾಜಿ ನೂರುಲ್ ಇಸ್ಲಾಂ ವಿರುದ್ಧ ಸೋಲಬಹುದು ಎಂದು ಎಕ್ಸಿಟ್ ಪೋಲ್ ಸೂಚಿಸುತ್ತದೆ.

ಅಮರಾವತಿ:

ಅಮರಾವತಿಯ ಬಿಜೆಪಿ ಅಭ್ಯರ್ಥಿ ಆಗಿರುವ ಹಿಂದೂ ಫೈರ್‌ ಬ್ರ್ಯಾಂಡ್‌ ನವನೀತ್ ರಾಣಾ ಕೂಡ ಸೋಲನ್ನು ಎದುರಿಸಬೇಕಾಗಬಹುದು ಎಂದು ಸಮೀಕ್ಷೆ ಹೇಳಿದೆ. ಸ್ಕೂಲ್ ಆಫ್ ಪಾಲಿಟಿಕ್ಸ್ (SOP) ಎಕ್ಸಿಟ್ ಪೋಲ್ ಪ್ರಕಾರ, ನವನೀತ್ ರಾಣಾ ಅವರು ಕಾಂಗ್ರೆಸ್ ಅಭ್ಯರ್ಥಿ ಬಲವಂತ ಬಸವಂತ್ ವಾಂಖೆಡೆ ವಿರುದ್ಧ ಸೋಲುತ್ತಾರೆ. ನವನೀತ್ ರಾಣಾ ಬಿಜೆಪಿಯ ಪ್ರಮುಖ ನಾಯಕರಾಗಿದ್ದು, ಮತ್ತು ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿದ್ದಾರೆ.

ಕೊಯಮತ್ತೂರು:

ತಮಿಳುನಾಡಿನಲ್ಲಿ ಕೇಸರಿ ಪಕ್ಷ ಗೆಲ್ಲುವ ನಿರೀಕ್ಷೆಯಲ್ಲಿರುವ ಕೆಲವೇ ಸೀಟುಗಳಲ್ಲಿ ಕೊಯಮತ್ತೂರು ಕೂಡ ಒಂದು. ಬಿಜೆಪಿ 1998 ಮತ್ತು 1999ರಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ಈ ಸ್ಥಾನವನ್ನು ಗೆದ್ದಿತ್ತು. ಕಳೆದ ನಾಲ್ಕು ಚುನಾವಣೆಗಳಲ್ಲಿ ಎಡಪಕ್ಷಗಳು ಕೊಯಮತ್ತೂರಿನಲ್ಲಿ ಮೂರು ಬಾರಿ ಗೆದ್ದಿವೆ – 2004, 2009, ಮತ್ತು 2019. ಎಐಎಡಿಎಂಕೆ 2014 ರಿಂದ 2019 ರವರೆಗೆ ಈ ಸ್ಥಾನವನ್ನು ಹೊಂದಿತ್ತು. ಈ ಬಾರಿ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ಇಲ್ಲಿಂದ ಕಣಕ್ಕಿಳಿಸಿದೆ. ಅಣ್ಣಾಮಲೈ ಅವರು ಬಿಜೆಪಿಯ ಪರವಾಗಿ ದಕ್ಷಿಣದಲ್ಲಿ ತನ್ನ ಹೆಜ್ಜೆಗುರುತುಗಳನ್ನು ಮೂಡಿಸಲು ಬಿರುಸಿನ ಪ್ರಚಾರವನ್ನು ನಡೆಸಿದ್ದಾರೆ ಆದರೆ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ 2024 ರ ಪ್ರಕಾರ, ಅಣ್ಣಾಮಲೈ ಇಲ್ಲಿ ಸೋಲನ್ನು ಎದುರಿಸುವ ಹೆಚ್ಚಿನ ಸಾಧ್ಯತೆಗಳಿವೆ. ಎಕ್ಸಿಟ್ ಪೋಲ್ ಅಂದಾಜಿನ ಪ್ರಕಾರ ಡಿಎಂಕೆ ನಾಯಕ ಪಿ.ಗಣಪತಿ ರಾಜ್‌ಕುಮಾರ್ ಕೊಯಮತ್ತೂರಿನಿಂದ ಗೆಲ್ಲುತ್ತಾರೆ.

ಚಂಡೀಗಢ:

ನಗರ ಕ್ಷೇತ್ರವಾಗಿರುವ ಚಂಡೀಗಢ ಯಾವಾಗಲೂ ಬಿಜೆಪಿಯ ಪ್ರಬಲ ಭದ್ರಕೋಟೆಯಾಗಿದೆ. ಆದರೆ, ಈ ಬಾರಿ ಇಲ್ಲಿ ಪಕ್ಷಕ್ಕೆ ಭಾರಿ ಹಿನ್ನಡೆಯಾಗಬಹುದು. ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್ ಹಿರಿಯ ನಾಯಕ ಮನೀಶ್ ತಿವಾರಿ ಚಂಡೀಗಢದಲ್ಲಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಚುನಾವಣಾ ಕದನದಲ್ಲಿ ಬಿಜೆಪಿ ಇಲ್ಲಿಂದ ಸಂಜಯ್ ಟಂಡನ್ ಅವರನ್ನು ಕಣಕ್ಕಿಳಿಸಿದೆ. ಇದಕ್ಕೂ ಮುನ್ನ ಬಿಜೆಪಿ ನಾಯಕಿ ಕಿರಣ್ ಖೇರ್ ಅವರು ಇಲ್ಲಿಂದ ಸ್ಪರ್ಧಿಸಿ ಗೆದ್ದಿದ್ದರು.

ಹೈದರಾಬಾದ್:

ಈ ಬಾರಿ ಹೈದರಾಬಾದ್‌ನಲ್ಲಿ ಬಿಜೆಪಿ ತನ್ನ ಫೈರ್‌ಬ್ರಾಂಡ್ ಹಿಂದುತ್ವವಾದಿ ನಾಯಕಿ ಮಾಧವಿ ಲತಾ ಅವರನ್ನು ಕಣಕ್ಕಿಳಿಸಿದೆ. ಆದರೆ ಹೈದರಾಬಾದ್ ಕ್ಷೇತ್ರ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯ ಭದ್ರಕೋಟೆಯಾಗಿದ್ದು, ಇಲ್ಲಿ ಬಿಜೆಪಿ ಗೆಲುವು ಬಹಳ ಕಷ್ಟ ಸಾಧ್ಯ ಎನ್ನಲಾಗಿದೆ.

ಇದನ್ನೂ ಓದಿ:2nd PUC Exam 3: ದ್ವಿತೀಯ ಪಿಯುಸಿ ಪರೀಕ್ಷೆ-3ರ ದಂಡಸಹಿತ ಶುಲ್ಕ ಪಾವತಿಗೆ ಇಂದೇ ಕೊನೇ ದಿನ

Continue Reading
Advertisement
Udupi-Chikmagalur Lok Sabha constituency
ದೇಶ10 mins ago

Udupi-Chikmagalur Lok Sabha constituency: ಬದಲಾವಣೆ ನಡುವೆ ಯಾರಿಗೆ ಮಣೆ ಹಾಕಲಿದ್ದಾರೆ ಉಡುಪಿ ಕ್ಷೇತ್ರದ ಮತದಾರರು?

Vasishta Simha Lovely Kannada Film Trailer Event
ಸ್ಯಾಂಡಲ್ ವುಡ್15 mins ago

Vasishta Simha: ಟ್ರೈಲರ್‌ ಲಾಂಚ್ ವೇಳೆ ರಿಷಬ್ ಶೆಟ್ಟಿ ಕಾಲಿಗೆ ಬಿದ್ದ ವಸಿಷ್ಠ ಸಿಂಹ!

Heat wave
ದೇಶ15 mins ago

Heat Wave: ಒಡಿಶಾದಲ್ಲಿ ಬಿಸಿಗಾಳಿ ಶಾಖಕ್ಕೆ ಒಂದೇ ದಿನ 45 ಜನ ಬಲಿ

Food Poisoning
ಮೈಸೂರು17 mins ago

Food Poisoning : ಮೈಸೂರಲ್ಲಿ ಗೃಹ ಪ್ರವೇಶದ ಊಟ ತಿಂದ ವೃದ್ಧೆ ಸಾವು; 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Gold Rate Today
ಚಿನ್ನದ ದರ26 mins ago

Gold Rate Today: ಚಿನ್ನದ ಬೆಲೆ ಮತ್ತೂ ಇಳಿಕೆ; ಇಂದಿನ ಧಾರಣೆಯನ್ನು ಇಲ್ಲಿ ಗಮನಿಸಿ

karnataka Rain
ಮಳೆ37 mins ago

Karnataka Rain : ಸಿಡಿಲಿಗೆ ಆಕಳು ಬಲಿ; ಹಲವೆಡೆ ಮಳೆ ಅವಾಂತರಕ್ಕೆ ಜನರು ತತ್ತರ

Team India
ಪ್ರಮುಖ ಸುದ್ದಿ46 mins ago

Team India : ಈ ಕೆಲಸ ಇಷ್ಟವಿದೆ; ಟೀಮ್ ಇಂಡಿಯಾ ಕೋಚ್​ ಹುದ್ದೆಯ ಬಗ್ಗೆ ಮೊದಲ ಹೇಳಿಕೆ ನೀಡಿದ ಗೌತಮ್ ಗಂಭೀರ್​

Priyanka Chopra The Bluff team Malti enjoys
ಬಾಲಿವುಡ್54 mins ago

Priyanka Chopra: ಆಸ್ಟ್ರೇಲಿಯಾದ ಬೀಚ್‌ನಲ್ಲಿ ಅಮ್ಮನ ಸಿನಿ ತಂಡದ ಜತೆ ಎಂಜಾಯ್ ಮಾಡಿದ ಮಾಲತಿ ಮೇರಿ ಚೋಪ್ರಾ!

George Fernandes ರಾಜಮಾರ್ಗ ಅಂಕಣ
ಅಂಕಣ55 mins ago

ರಾಜಮಾರ್ಗ ಅಂಕಣ: ಜಾರ್ಜ್ ಫರ್ನಾಂಡಿಸ್ ಮತ್ತು ಕೊಂಕಣ್ ರೈಲ್ವೆ ಎಂಬ ಮಹಾ ಕನಸು!

gold rate today
ಕರ್ನಾಟಕ1 hour ago

Gold Rate Today: ಚಿನ್ನ ಕೊಳ್ಳಲು ಇದೇ ಸೂಕ್ತ ಸಮಯ; ಮತ್ತೆ ಬಂಗಾರದ ದರ ಇಳಿಕೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ7 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌