ರಾಜೀವ್‌ ಗಾಂಧಿ ಹಂತಕರಂತೆ ನನ್ನನ್ನೂ ಬಿಡುಗಡೆ ಮಾಡಿ: ಸುಪ್ರೀಂ ಕೋರ್ಟಿಗೆ ಸ್ವಾಮಿ ಶ್ರದ್ಧಾನಂದ ಅರ್ಜಿ - Vistara News

ಕೋರ್ಟ್

ರಾಜೀವ್‌ ಗಾಂಧಿ ಹಂತಕರಂತೆ ನನ್ನನ್ನೂ ಬಿಡುಗಡೆ ಮಾಡಿ: ಸುಪ್ರೀಂ ಕೋರ್ಟಿಗೆ ಸ್ವಾಮಿ ಶ್ರದ್ಧಾನಂದ ಅರ್ಜಿ

ರಾಜೀವ್‌ ಗಾಂಧಿ ಹಂತಕರಂತೆ ನನ್ನನ್ನೂ ಬಿಡುಗಡೆಗೊಳಿಸಿ ಎಂದು ಪತ್ನಿಯನ್ನು ಸಜೀವವಾಗಿ ಹೂತುಹಾಕಿದ ಪಾತಕಿ ಸ್ವಾಮಿ ಶ್ರದ್ಧಾನಂದ ಸುಪ್ರೀಂ ಕೋರ್ಟ್ ಮುಂದೆ ಮೊರೆಯಿಟ್ಟಿದ್ದಾನೆ.

VISTARANEWS.COM


on

shakhara
ಪಾತಕಿ ಸ್ವಾಮಿ ಶ್ರದ್ಧಾನಂದ ಮತ್ತು ಹತ್ಯೆಯಾದ ಶಾಖರಾ ಖಲೀಲಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ರಾಜೀವ್‌ ಗಾಂಧಿ ಹಂತಕರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿರುವುದರಿಂದ, ನನ್ನನ್ನೂ ಜೈಲಿನಿಂದ ಬಿಡುಗಡೆ ಮಾಡಿ ಎಂದು ಜೈಲಿನಲ್ಲಿರುವ ಕೊಲೆಪಾತಕಿ ಸ್ವಾಮಿ ಶ್ರದ್ದಾನಂದ ಸುಪ್ರೀಂ ಕೋರ್ಟ್‌ ಮುಂದೆ ಬೇಡಿಕೆ ಮಂಡಿಸಿದ್ದಾನೆ.

ಈತ ತನ್ನ ಪತ್ನಿ ಶಾಖರಾ ಖಲೀಲಿ ಎಂಬಾಕೆಯನ್ನು ಆಕೆಯ ಆಸ್ತಿಯ ಲೋಭದಿಂದ ಕೊಲೆ ಮಾಡಿದ್ದಕ್ಕಾಗಿ ಶಿಕ್ಷೆಯಾಗಿ ಜೈಲಿನಲ್ಲಿದ್ದಾನೆ. ಈತನಿಗೆ ಮೊದಲು ಗಲ್ಲು ಶಿಕ್ಷೆ ಘೋಷಿಸಲಾಗಿತ್ತು. ನಂತರ ಅದನ್ನು ಜೀವಿತಾವಧಿ ಪೂರ್ತಿ ಜೈಲುವಾಸಕ್ಕೆ ಇಳಿಸಲಾಗಿದೆ.

ʼʼʼನನ್ನ ಕಕ್ಷಿದಾರರಾದ ಸ್ವಾಮಿ ಶ್ರದ್ಧಾನಂದ ಒಂದು ಕೊಲೆಗಾಗಿ ಜೈಲಿನಲ್ಲಿದ್ದು, ಈಗಾಗಲೇ 29 ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾನೆ. ಆತನಿಗೆ ಒಂದು ದಿನವೂ ಪರೋಲ್‌ ಕೂಡ ನೀಡಲಾಗಿಲ್ಲ. ಆದರೆ ದೇಶದ ಪ್ರಧಾನಿಯಾಗಿದ್ದ ರಾಜೀವ್‌ ಗಾಂಧಿಯವರನ್ನು ಕೊಂದವರೇ ಜೈಲಿನಿಂದ ಮುಕ್ತಿ ಪಡೆದಿದ್ದಾರೆ. ಆ ಘಟನೆಯಲ್ಲಿ ರಾಜೀವ್‌ ಗಾಂಧಿ ಸೇರಿದಂತೆ 16 ಮಂದಿ ಮೃತಪಟ್ಟಿದ್ದರು. 43 ಮಂದಿ ಗಾಯಗೊಂಡಿದ್ದರು. 30 ವರ್ಷಗಳ ಜೈಲುವಾಸದ ಬಳಿಕ ಆರೋಪಿಗಳು ಬಿಡುಗಡೆಯಾಗಿದ್ದಾರೆ. ಅದಕ್ಕೂ ಮುನ್ನ ಅವರಿಗೆ ಪರೋಲ್‌ ಸೌಲಭ್ಯ ಕೂಡ ಸಿಕ್ಕಿತ್ತು. ಇವುಗಳನ್ನು ಹೋಲಿಸಿದಾಗ, ಸಮಾನತೆಯ ಹಕ್ಕನ್ನು ಇಲ್ಲಿ ಉಲ್ಲಂಘಿಸಲಾಗಿದೆʼʼ ಎಂದು ಶ್ರದ್ಧಾನಂದನ ವಕೀಲರಾದ ವರುಣ್‌ ಠಾಕೂರ್‌ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ಹಾಗೂ ನ್ಯಾ. ಹಿಮಾ ಕೋಹ್ಲಿ ಅವರ ಪೀಠದ ಮುಂದೆ ಸಲ್ಲಿಸಿರುವ ಅರ್ಜಿಯಲ್ಲಿ ವಾದಿಸಿದ್ದಾರೆ.

1986ರಲ್ಲಿ ಮೈಸೂರು ಸಂಸ್ಥಾನದ ಮಾಜಿ ದಿವಾನರಾದ ಮಿರ್ಜಾ ಇಸ್ಮಾಯಿಲ್‌ ಅವರ ಮೊಮ್ಮಗಳು ಶಾಖರಾ ಅವರನ್ನು ಶ್ರದ್ಧಾನಂದ ಮದುವೆಯಾಗಿದ್ದ. ಇದಕ್ಕೂ ಮುನ್ನ ಮೊದಲಿನ ಪತಿ ಅಕ್ಬರ್‌ ಖಲೀಲಿಗೆ 21 ವರ್ಷಗಳ ದಾಂಪತ್ಯದ ಬಳಿಕ ಶಾಖರಾ ವಿಚ್ಛೇದನ ನೀಡಿದ್ದರು. 1991ರಲ್ಲಿ ಶಾಖರಾಗೆ ಮತ್ತು ಬರುವ ಔಷಧಿ ಕುಡಿಸಿ, ಆಕೆಯನ್ನು ಶ್ರದ್ಧಾನಂದ ಸಜೀವವಾಗಿ ಹೂತು ಹಾಕಿದ್ದ. 1994ರಲ್ಲಿ ಶ್ರದ್ಧಾನಂದನ ಬಂಧನವಾಗಿ, 2000ದಲ್ಲಿ ಆತನಿಗೆ ಗಲ್ಲು ಶಿಕ್ಷೆಯಾಗಿತ್ತು. 2008ರಲ್ಲಿ ಅದನ್ನು ಸುಪ್ರೀಂ ಕೋರ್ಟ್‌ ಜೀವಿತಾವಧಿ ಶಿಕಷೆಯಾಗಿ ಪರಿವರ್ತಿಸಿತ್ತು.

ಈಗ ಶ್ರದ್ಧಾನಂದನಿಗೆ 80ಕ್ಕೂ ಹೆಚ್ಚು ವಯಸ್ಸಾಗಿದೆ. 1994ರಿಂದ ಜೈಲಿನಲ್ಲಿದ್ದಾನೆ. ಗಲ್ಲು ಶಿಕ್ಷೆಗೊಳಗಾಗಿದ್ದಾಗ ಮೂರು ವರ್ಷ ಏಕಾಂತವಾಸದಲ್ಲೂ ಇದ್ದ. ಹಲವು ಕಾಯಿಲೆಗಳೂ ಆತನನ್ನು ಬಾಧಿಸುತ್ತಿವೆ.

ಇದನ್ನೂ ಓದಿ | Nalini Sriharan | ರಾಜೀವ್‌ ಗಾಂಧಿ ಹತ್ಯೆ ಕೇಸ್‌ನಲ್ಲಿ ಜೈಲಿನಿಂದ ಹೊರಬಂದ ನಳಿನಿ ಶ್ರೀಹರನ್‌ ಹೇಳಿದ್ದೇನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Pavitra Gowda : ರೇಣುಕಾ ಸ್ವಾಮಿ ಕೊಲೆ ಕೇಸ್‌; ಪವಿತ್ರಾಗೌಡ ಸಲ್ಲಿಸಿದ ಜಾಮೀನು ಅರ್ಜಿ ವಜಾ

Renuka swamy Murder case : ರೇಣುಕಾ ಸ್ವಾಮಿ ಕೊಲೆ ಕೇಸ್‌ ಎ1 ಆರೋಪಿ ಆಗಿರುವ ಪವಿತ್ರಾಗೌಡ (Pavitra Gowda) ಸಲ್ಲಿಸಿದ ಜಾಮೀನು ಅರ್ಜಿ ವಜಾಗೊಂಡಿದೆ. ಈ ಮೂಲಕ ಪವಿತ್ರಾಗೆ ಜೈಲುವಾಸ ಮುಂದುವರಿದಿದೆ.

VISTARANEWS.COM


on

By

Renuka Swamy murder case Pavithra Gowdas bail plea rejected
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ಪವಿತ್ರಾಗೌಡ (Pavitra Gowda) ಪರ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ. ಅರ್ಜಿ ವಜಾಗೊಳಿಸಿ ಸಿಸಿಎಚ್‌ (CCH)57ನೇ ನ್ಯಾಯಾಲಯದ ನ್ಯಾಯಾಧೀಶರಾದ ಜೈ ಶಂಕರ್‌ ಆದೇಶ ಹೊರಡಿಸಿದ್ದಾರೆ. ಎ1 ಆರೋಪಿ‌ ಪವಿತ್ರಾಗೌಡ ಪರ ಅನುಕುಮಾರ್ ಸಲ್ಲಿಸಿದ ಜಾಮೀನು ಅರ್ಜಿ ವಜಾಗೊಂಡಿದೆ.

ದರ್ಶನ್- ಪವಿತ್ರಾ ದೂರದೂರವಾದರೂ ಒಂದಾಯಿತು ಇವರಿಬ್ಬರ ಮನೆಯ ಶ್ವಾನಗಳು

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಿಂದ (Parappana Agrahara Jail) ಬಳ್ಳಾರಿ ಜೈಲಿಗೆ (Bellary Jail) ನಟ ದರ್ಶನ್ (Actor Darshan) ಸ್ಥಳಾಂತರಗೊಂಡಿದ್ದರೂ ಪವಿತ್ರಾ ಗೌಡ (Pavitra Gowda) ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದಾರೆ. ಹೀಗಾಗಿ ದರ್ಶನ್ ಮತ್ತು ಪವಿತ್ರಾ ದೂರದೂರವಾಗಿದ್ದಾರೆ. ಆದರೆ ಇವರಿಬ್ಬರ ಶ್ವಾನಗಳು ಮಾತ್ರ ಇದೀಗ ಒಂದಾಗಿವೆ.

ದರ್ಶನ್ ಮತ್ತು ಪವಿತ್ರ ಗೌಡ ಜೈಲು ಸೇರುತ್ತಿದ್ದ ಹಾಗೆ ಇವರ ಶ್ವಾನಗಳು ಒಂದಾಗಿದ್ದವು. ಪವಿತ್ರಗೌಡ ಮನೆಯಲ್ಲಿದ್ದ ಶ್ವಾನಗಳನ್ನು ದರ್ಶನ್ ಮನೆಗೆ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಈಗ ದರ್ಶನ್ ಮತ್ತು ಪವಿತ್ರಾ ಗೌಡ ಮನೆಯ ಶ್ವಾನಗಳು ಸ್ನೇಹಿತರಾಗಿದೆ.


ಪವಿತ್ರಾ ಗೌಡ ಮನೆಯಲ್ಲಿದ್ದ ವೈಟ್ ಫ್ರೆಂಚ್ ಬುಲ್ ಡಾಗ್ ಮತ್ತು ಬೆಲ್ಜಿಯಂ ಮಲಿನಾಯ್ಸ್ ತಳಿಯ ಶ್ವಾನಗಳು ಮನೆಯೊಡತಿ ಇಲ್ಲದೆ ಸೊರಗಿದ್ದವು. ಅವುಗಳನ್ನು ಪೀಪಲ್ಸ್ ಫಾರ್ ಅನಿಮಲ್ಸ್ ಟೀಂ ರಕ್ಷಣೆ ಮಾಡಿತ್ತು. ಬಳಿಕ ಅಧಿಕಾರಿಗಳು ಅವುಗಳನ್ನು ದರ್ಶನ್ ಮನೆಗೆ ಬಿಟ್ಟಿದ್ದಾರೆ.

ಶ್ವಾನ ಪ್ರೇಮಿಯಾಗಿದ್ದ ದರ್ಶನ್ ಸ್ನೇಹಿತೆ ಪವಿತ್ರಾಗೌಡ ಮನೆಯಲ್ಲಿ ವಿವಿಧ ತಳಿಯ 3 ಶ್ವಾನಗಳಿದ್ದವು. ಅವುಗಳಲ್ಲಿ ಒಂದನ್ನು ಕುಟುಂಬಸ್ಥರು ತೆಗೆದುಕೊಂಡು ಹೋಗಿದ್ದಾರೆ. ಒಲಿದ ಎರಡು ಶ್ವಾನಗಳನ್ನು ಪವನ್ ನೋಡಿಕೊಳ್ಳುತ್ತಿದ್ದ. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾ ಮತ್ತು ಪವನ್ ಜೈಲು ಸೇರಿದ್ದಾರೆ. ಬಳಿಕ ಶ್ವಾನಗಳನ್ನು ನೋಡಿಕೊಳ್ಳುವವರಿಲ್ಲದೆ ಅವುಗಳು ಸೊರಗಿದ್ದವು.

Actor Darshan
Actor Darshan


ದರ್ಶನ್ ಮನೆಗೆ ಎಂಟ್ರಿ

ಪವಿತ್ರಾ ಮತ್ತು ಪವನ್ ಜೈಲು ಸೇರಿದ್ದರಿಂದ ಸರಿಯಾಗಿ ಆಹಾರ ಇಲ್ಲದೆ ಬಲಹೀನವಾಗಿದ್ದ ಶ್ವಾನಗಳ ದೃಶ್ಯ ಕಣ್ಣೀರು ತರಿಸುವಂತ್ತಿತ್ತು. ಇದನ್ನು ತಿಳಿದು ಅಲರ್ಟ್ ಆದ ಪೀಪಲ್ಸ್ ಫಾರ್ ಅನಿಮಲ್ಸ್ ಟೀಂ ಈ ವಿಚಾರವನ್ನು ಆರ್.ಆರ್. ನಗರದ ಪೊಲೀಸರ ಗಮನಕ್ಕೆ ತಂದಿದ್ದರು.

ಪೀಪಲ್ಸ್ ಫಾರ್ ಅನಿಮಲ್ಸ್ ನ‌ ಲೀನಾ ಮತ್ತು ಹರೀಶ್ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಿಬಿಎಂಪಿ ಪಶುಸಂಗೋಪನಾ‌ ಇಲಾಖೆಗೆ ಮಾಹಿತಿ ನೀಡಿರುವ ಪೊಲೀಸರು ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳ ಸಹಾಯದಿಂದ ಪವಿತ್ರಾ ಮನೆಯಲ್ಲಿದ್ದ ಎರಡು ಶ್ವಾನವನ್ನು ದರ್ಶನ್ ಮನೆಗೆ ಸ್ಥಳಾಂತರಿಸಿದ್ದಾರೆ. ದರ್ಶನ್ ಮನೆಯಲ್ಲಿ ಶ್ವಾನಗಳನ್ನು ನೋಡಿಕೊಳ್ಳಲು ಕೇರ್ ಟೇಕರ್ ಗಳು ಇರುವುದರಿಂದ ಈ ಶ್ವಾನಗಳನ್ನು ದರ್ಶನ್ ಮನೆಗೆ ಸ್ಥಳಾಂತರಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

CM Siddaramaiah: ಸಿದ್ದರಾಮಯ್ಯಗೆ ಮುಡಾ ಪರೀಕ್ಷೆ! ಸರ್ಕಾರದ ಬದಲು ಸ್ವತಂತ್ರ ಸಂಸ್ಥೆಯಿಂದ ತನಿಖೆಗೆ ದೂರದಾರರಿಂದ ಒತ್ತಾಯ

CM Siddaramaiah: 2004 ರಲ್ಲಿ 3.24 ಲಕ್ಷ ರೂ. ಇದ್ದ ಜಮೀನಿನ ಮೌಲ್ಯ ಈಗ 55 ಕೋಟಿ ರೂ. ಇದೆ. ಹೀಗಾಗಿ ಅಕ್ರಮವೆಸಗಲು ಸಂಚು ನಡೆದಿದೆ. ಜನರ ಹಣವನ್ನು ಜನಸೇವಕನೇ ಲೂಟಿ‌ ಮಾಡುವ ಸಂಚು ನಡೆದಿದೆ ಎಂದು ಸ್ನೇಹಮಯಿ‌ಕೃಷ್ಣ ಪರ ಹಿರಿಯ ವಕೀಲ‌ ಮಣೀಂಧರ್ ಸಿಂಗ್ ವಾದ ಮಂಡಿಸಿದರು.

VISTARANEWS.COM


on

By

CM Siddaramaiah MUDA case Complainants demand probe by independent agency instead of govt
Koo

ಬೆಂಗಳೂರು: ಮುಡಾ ಹಗರಣದಲ್ಲಿ (Muda Scam) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ (High Court) ಶನಿವಾರ (ಆ.31) ಸುದೀರ್ಘವಾಗಿ ಮುಂದುವರಿದಿತ್ತು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಿತು. ಮೊದಲಿಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಲಾ ಪಾಯಿಂಟ್‌ಗಳನ್ನು ಹಾಕಿ ತಮ್ಮ ವಾದ ಮಂಡಿಸಿದ್ದರು.

ಬಳಿಕ ಸ್ನೇಹಮಯಿ‌ಕೃಷ್ಣ ಪರ ಹಿರಿಯ ವಕೀಲ‌ ಮಣೀಂಧರ್ ಸಿಂಗ್ ವಾದ ಆರಂಭಿಸಿ, ಸರ್ಕಾರದ ಬದಲು ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಯಬೇಕಿದ್ದು ಮನವಿ ಮಾಡಿದರು. 1992 ಲ್ಯಾಂಡ್ ಅಕ್ವಿಜೇಷನ್ ಪ್ರಕ್ರಿಯೆ ಶುರುವಾಗಿದೆ. ಅಂತಿಮ ನೋಟಿಫಿಕೇಷನ್ 1997ರಲ್ಲಿ ಮುಗಿದಿದೆ. ಲ್ಯಾಂಡ್ ಅಕ್ವಿಜೇಷನ್, ಪರಿಹಾರದ ಹಣ, ನಂತರದ‌ ಬೆಳವಣಿಗೆಗಳನ್ನು ಉಲ್ಲೇಖಿಸಿ ಮಣೀಂದರ್ ಸಿಂಗ್ ವಾದ ಶುರು ಮಾಡಿದರು. ಆಕ್ಷೇಪಾರ್ಹವಾದ 3.16 ಎಕರೆ ಭೂಮಿ ವರ್ಗಾವಣೆಯ ಕುರಿತು ವಿವರಣೆ ನೀಡಿದರು. 1997ರಲ್ಲಿ ಅಂತಿಮ ನೋಟಿಫಿಕೇಷನ್ ಆಗಿದ್ದು ವಶಕ್ಕೆ ಪಡೆಯಲಾಗಿದೆ.

1998ರಲ್ಲಿ ಈ ಭೂಮಿ ಮುಡಾ ವಶದಲ್ಲಿ ಇತ್ತು. ಇದು ರೆವಿನ್ಯೂ ರೆಕಾರ್ಡ್‌ನಲ್ಲಿ ಎಂಟ್ರಿ ಆಗಿದೆ. ಎಲ್ಲ ಪ್ರಕ್ರಿಯೆಗಳು ಕಾನೂನು ಬಾಹಿರವಾಗಿದೆ. ಇದೆಲ್ಲಾ ತನಿಖೆಯಿಂದ ಹೊರಬರಬೇಕಿದೆ. 2001-02 ರಲ್ಲಿ ಬಡಾವಣೆ ಅಭಿವೃದ್ಧಿ ಪಡಿಸಲಾಗಿದೆ. ಸೈಟ್‌ಗಳನ್ನು ಮಾರಾಟ ಮಾಡಲಾಗಿದೆ. ಸ್ವಾಧೀನವಾದ ಜಮೀನಿನಲ್ಲಿ 2001, 2004 ನಡುವೆ ಮುಡಾ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಕ್ಯಾಬಿನೆಟ್ ನೋಟ್‌ನಲ್ಲಿ ರಿಟ್ ಅರ್ಜಿ ಎಂದು ಉಲ್ಲೇಖಿಸಲಾಗಿದೆ. ಸಿಎಂ ಪತ್ನಿಗೆ 14 ನಿವೇಶನ ಹಂಚಲು ಬೇರೆ ಕೇಸ್ ಗಳ ಹೈಕೋರ್ಟ್ ಆದೇಶ ಉಲ್ಲೇಖಿಸಿದ್ದಾರೆ. ಆದರೆ ರಿಟ್ ಅರ್ಜಿಗಳ ಸಂಪೂರ್ಣ ವಿವರಗಳೇ ಇದರಲ್ಲಿ ಇಲ್ಲ.

1998ರಲ್ಲಿ ಭೂಮಿ ಸ್ವಾಧೀನ ಬಳಿಕ ಮುಡಾ ಮಾಲೀಕತ್ವದಲ್ಲಿತ್ತು. ಭೂಸ್ವಾಧೀನವನ್ನು ಯಾರೂ ಪ್ರಶ್ನಿಸಿ ಕೋರ್ಟ್‌ಗೆ ಹೋಗಿಲ್ಲ. ಪರಿಹಾರವನ್ನೂ ನಿಗದಿಪಡಿಸಿ ಆದೇಶ ಮಾಡಲಾಗಿತ್ತು. ಇದಾದ ಮೇಲಿನ ಡಿನೋಟಿಫಿಕೇಷನ್ ಭೂಮಿ ಕಬಳಿಸಲು ಮಾಡಿದ ವಂಚನೆ ಯಾಗಿತ್ತು. ಆಗ ಆ ಜಮೀನಿನ ಮೌಲ್ಯ ಕೇವಲ 3 ಲಕ್ಷ 24 ಸಾವಿರ ಮೌಲ್ಯವಾಗಿತ್ತು ಎಂದು ಮಣೀಂದರ್ ಸಿಂಗ್ ವಾದಿಸಿದರು. ನಮ್ಮ ವಾದ ಈ ಮುಡಾ ಹಗರಣದ ಕುರಿತು ತನಿಖೆ ನಡೆಸಬೇಕು ಎಂಬುದಕಷ್ಟೇ. ಪ್ರಕರಣದ ಪ್ರೈಮಾಫಸಿಯನ್ನು ಪರಿಗಣಿಸಿ ತನಿಖೆಗೆ ಅವಕಾಶ ಕೊಡುವಂತೆ ಮನವಿ ಮಾಡಿದರು.

ರೆವಿನ್ಯು ಭೂಮಿ ಹೇಗಾಯಿತು?

ಈ ವೇಳೆ ಲಿಖಿತ ವಾದವನ್ನು ಮಂಡಿಸುತ್ತಿದ್ದೀರಾ ಎಂದು ಮಣೀಂದರ್ ಸಿಂಗ್‌ಗೆ ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದರು. ಅಭಿವೃದ್ಧಿಪಡಿಸಿದ ಭೂಮಿ, ರೆವಿನ್ಯು ಭೂಮಿ ಹೇಗಾಯಿತು?ಎಂದು ಜಡ್ಜ್‌ ಪ್ರಶ್ನಿಸಿದಾಗ, ಅದು ಮ್ಯಾಜಿಕ್.. ಹೇಗೆ ಆಯಿತು ಎಂಬುದು ತನಿಖೆಯಿಂದ ತಿಳಿಯಬೇಕು ಎಂದು ಮಣೀಂದರ್ ಸಿಂಗ್ ಉತ್ತರಿಸಿದರು. ಭೂಮಿಯ ಪ್ರಾಥಮಿಕ ಅಧಿಸೂಚನೆಯಾಗದೆ ಕೇಸ್‌ನ ತೀರ್ಪನ್ನು ಈ ಕೇಸ್‌ಗೆ ಬಳಸಲಾಗಿದೆ. ಸ್ವಾಧೀನವೇ ಆಗದೇ ಜಮೀನು ಬಳಸಿಕೊಳ್ಳುವುದಕ್ಕೂ, ಪ್ರಕ್ರಿಯೆ ಪಾಲಿಸಿ ಸ್ವಾಧೀನಕ್ಕೂ ವ್ಯತ್ಯಾಸವಿದೆ. ಅಲ್ಲಿ ಬಳಸಿದ ಮಾನದಂಡವನ್ನು ಈ ಕೇಸ್‌ಗೆ ಬಳಸಿಕೊಳ್ಳಲಾಗಿದೆ ಎಂದು ಮಣೀಂದರ್ ಸಿಂಗ್ ವಾದಿಸಿದ್ದರು.

ತನಿಖಾಧಿಕಾರಿ ಸಮರ್ಥವಾಗಿದ್ದರೆ ಕಂಡುಹಿಡಿಯಬಹುದು. ಕ್ಯಾಬಿನೆಟ್ ಇಂತಹ ಕೃತ್ಯಕ್ಕೆ ಸಮರ್ಥನೆ ನೀಡುತ್ತಿದೆ.
ತನಿಖೆ ನಡೆಯದಿದ್ದರೆ ಇದು ದೊಡ್ಡ ದುರಂತವಾಗಲಿದೆ. 2004 ರಲ್ಲಿ 3.24 ಲಕ್ಷ ರೂ. ಇದ್ದ ಜಮೀನಿನ ಮೌಲ್ಯ ಈಗ 55 ಕೋಟಿ ರೂ. ಇದೆ. ಹೀಗಾಗಿ ಅಕ್ರಮವೆಸಗಲು ಸಂಚು ನಡೆದಿದೆ. ಜನರ ಹಣವನ್ನು ಜನಸೇವಕನೇ ಲೂಟಿ‌ ಮಾಡುವ ಸಂಚು ನಡೆದಿದೆ ಎಂದು ಕಟುವಾಗಿ ವಾದ ಮಂಡಿಸಿದರು.

ಮುಲಾಯಂ ಸಿಂಗ್ ಪ್ರಕರಣದ ತೀರ್ಪು ಸೇರಿದಂತೆ ಹಲವು ತೀರ್ಪುಗಳ ಉಲ್ಲೇಖಿಸಿದ ಮಣೀಂದರ್ ಸಿಂಗ್ ವಾದ ಮಂಡನೆ ಮುಂದುವರಿಸಿದರು. ಸರ್ಕಾರ ಈಗಾಗಲೇ ಈ ಕೇಸ್ ಸಂಬಂಧ ಒಂದು ನಿಲುವು ತೆಗೆದುಕೊಂಡಿದೆ. ಹೀಗಾಗಿ ರಾಜ್ಯ ಸರ್ಕಾರದ ಅಡಿಯ ತನಿಖಾಧಿಕಾರಿಯಿಂದ ಈ ಕೇಸ್ ತನಿಖೆ ನಡೆಸುವುದು ಸಾಧ್ಯವೇ? ಸ್ವತಂತ್ರ ತನಿಖೆ ನಡೆಯಬೇಕಾದಷ್ಟು ಅಂಶಗಳು ಈ ಕೇಸಿನಲ್ಲಿವೆ. ಜನಸಾಮಾನ್ಯರೂ ಕೂಡಾ ಭೂಸ್ವಾಧೀನದಿಂದ ಬಿಡಿಸಿಕೊಳ್ಳಲು ಪರದಾಡುತ್ತಾರೆ. ಶಾಲೆ ಇದ್ದರೂ ಭೂಸ್ವಾಧೀನದಿಂದ ಬಿಡುಗಡೆ ಮಾಡುವುದಿಲ್ಲ. ಆದರೆ ಈ ಕೇಸಿನಲ್ಲಿ ಮೂಡಾ ಬಡಾವಣೆ ಅಭಿವೃದ್ದಿಯಾಗಿದ್ದರೂ ಸ್ವಾಧೀನದಿಂದ ಕೈಬಿಟ್ಟಿದ್ದಾರೆ. ಒಂದು ಬಾರಿ ಭೂಸ್ವಾಧೀನ ಅಂತಿಮಗೊಂಡಾಗ ಬದಲಿ ಜಮೀನಿಗೆ ಅವಕಾಶವಿಲ್ಲ. ಪರಿಹಾರದ ಹಣಕ್ಕೆ 9 ಪರ್ಸೆಂಟ್ ಬಡ್ಡಿ ಪಡೆಯಲು ಮಾತ್ರ ಅವಕಾಶವಿದೆ ಎಂದು ಇಂದೋರ್ ಡೆವಲಪ್ಮೆಂಟ್ ಕೇಸ್ ಉಲ್ಲೇಖಿಸಿ ಮಣೀಂದರ್ ಸಿಂಗ್ ಮಾತಿಗಿಳಿದರು.

ಬಳಿಕ ಮಣೀಂದರ್ ಸಿಂಗ್ ಮುಂದಿನ ವಾದ ಸೋಮವಾರ ಮಂಡಿಸುವುದಾಗಿ ಮನವಿ ಮಾಡಿದರು. ಹೀಗಾಗಿ ಮುಂದಿನ ವಿಚಾರಣೆಯನ್ನೂ ಹೈಕೋರ್ಟ್ ಮಧ್ಯಾಹ್ನ 2.30 ಕ್ಕೆ ಮುಂದೂಡಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ರಾಜಕೀಯ

CM Siddaramaiah : ಮುಡಾ ಕೇಸ್‌; ಹೈಕೋರ್ಟ್‌ನಲ್ಲಿ ಸಿಎಂ ಭವಿಷ್ಯ ನಿರ್ಧಾರ! ಹೇಗಿತ್ತು ರಾಜ್ಯಪಾಲರ ಪರ ತುಷಾರ್ ಮೆಹ್ತಾ ವಾದ

CM Siddaramaiah :ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಶನಿವಾರ ನಡೆದಿದೆ. ಆಗಸ್ಟ್ 29ರಂದು ಸಿಎಂ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿದ್ದರು. ಆ.31ರಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದರು.

VISTARANEWS.COM


on

By

CM Siddaramaiah
Koo

ಬೆಂಗಳೂರು: ಮುಡಾ ಹಗರಣದಲ್ಲಿ (Muda Scam) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ (High Court) ಶನಿವಾರ (ಆ.31) ಮುಂದುವರಿಯಿತು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಿತು. ರಾಜ್ಯಪಾಲರ ಪರ ಸುಮಾರು 10:30ಕ್ಕೆ ಶುರುವಾದ ತುಷಾರ್‌ ಮೆಹ್ತಾ ವಾದ ಸುದೀರ್ಘ ಎರಡ್ಮೂರು ಗಂಟೆಗಳ ಕಾಲ ನಡೆಯಿತು.

ಆಗಸ್ಟ್ 29ರಂದು ಸಿಎಂ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿದ್ದರು. ಭ್ರಷ್ಟಾಚಾರ ತಡೆ ಕಾಯ್ದೆ 17 ಎ ಬಗ್ಗೆ ವಾದಿಸಿ, ಪೊಲೀಸ್ ಅಧಿಕಾರಿ ಅನುಮತಿ ಪಡೆಯದೇ ತನಿಖೆ ಮಾಡುವಂತಿಲ್ಲ. ಸಾರ್ವಜನಿಕ ಸೇವಕನ ಶಿಫಾರಸು, ನಿರ್ಧಾರಗಳ ಕುರಿತಾದ ತನಿಖೆ ಇರಬೇಕು. ಈ ಎರಡೂ ಅಂಶಗಳನ್ನು ರಾಜ್ಯಪಾಲರು ಪಾಲಿಸಿಲ್ಲ. 17 ಎ ಮಾನದಂಡ ಪಾಲನೆಯಾಗದಿದ್ದರೂ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಅರ್ಜಿದಾರ ಅಬ್ರಾಹಂ 17 ಎ ಅಡಿ ಪೂರ್ವಾನುಮತಿ ಬೇಕಿಲ್ಲವೆಂದು ಹೇಳಿದ್ದಾರೆ. ಇವೆಲ್ಲ ಕೇವಲ ಪ್ರಕ್ರಿಯೆಗಳಷ್ಟೇ ಎಂದಿದ್ದಾರೆ. ಹೀಗಾಗಿ ರಾಜ್ಯಪಾಲರು ಹಾಗೂ ಅಬ್ರಹಾಂಗೆ ದಂಡ ವಿಧಿಸಿ ದೂರು ವಜಾಗೊಳಿಸಬೇಕು.

ರಾಜ್ಯಪಾಲರ ಮುಂದೆ ಒಂದು, ಕೋರ್ಟ್ ಮುಂದೆ ಒಂದು ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ರಾಜ್ಯಪಾಲರ ಅನುಮತಿ ನೀಡಿಲ್ಲವೆಂದು ಕೋರ್ಟ್ ಭಾವಿಸಬೇಕು ಎಂದಿದ್ದರು. ಸ್ನೇಹಮಯಿ ಕೃಷ್ಣ, ರಾಜ್ಯಪಾಲರಿಗೆ ದೂರು ನೀಡಿದ ಬಗ್ಗೆ ರಾಜ್ಯಪಾಲರು ಉಲ್ಲೇಖಿಸಿಲ್ಲ. ತರಾತುರಿಯಲ್ಲಿ ವಿವೇಚನೆ ಬಳಸದೇ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. 10-15 ವರ್ಷ ಹಳೆಯ ಘಟನೆಗಳಿಗೆ ಈಗಿನ ಕಾನೂನು ಅನ್ವಯಿಸಲಾಗುತ್ತಿದೆ. ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಹೆಚ್ ಡಿ ಕುಮಾರಸ್ವಾಮಿ ಇವರುಗಳ ಆರೋಪಪಟ್ಟಿ ಸಿದ್ದವಾಗಿದ್ದರೂ ರಾಜ್ಯಪಾಲರು ಅನುಮತಿ ನೀಡುತ್ತಿಲ್ಲ‌. ರಾಜ್ಯಪಾಲರು ಕ್ಯಾಬಿನೆಟ್ ಸಲಹೆಯನ್ನೂ ಪಾಲಿಸಿಲ್ಲ, ರಾಜ್ಯಪಾಲರೂ ಸಹಜ ನ್ಯಾಯದ ಪ್ರಕ್ರಿಯೆ ಪಾಲಿಸಬೇಕೆಂದು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ಸಿಂಘ್ವಿ ವಾದ ಮಾಡಿದ್ದರು.

ನೋಟಿಫಿಕೇಷನ್‌ಗಾಗಿ ಸಿದ್ದರಾಮಯ್ಯ ಯಾವುದೇ ಪ್ರತಿಫಲ ಪಡೆದಿಲ್ಲ. ಜಮೀನಿಗೆ ಬದಲಿಯಾಗಿ ನಿವೇಶನ ಪಡೆದಿದ್ದಾರೆ. ಇದನ್ನು ದೊಡ್ಡ ಹಗರಣದಂತೆ ಬಿಂಬಿಸಲಾಗುತ್ತಿದೆ. ಯಾವ ಆಧಾರದ ಮೇಲೆ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದಾರೆ ತಿಳಿಯುತ್ತಿಲ್ಲ ಎಂದು ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿದ್ದರು. ಇತ್ತ ಶನಿವಾರ ವಾದ ಮಂಡಿಸುವುದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮನವಿ ಮಾಡಿದ್ದರು. ಹೀಗಾಗಿ ಹೈಕೋರ್ಟ್ ಶನಿವಾರ ಬೆಳಗ್ಗೆ 10.30 ಕ್ಕೆ ವಿಚಾರಣೆ ಮುಂದೂಡಿತ್ತು.

ಶನಿವಾರ ನಡೆದ ವಿಚಾರಣೆಯಲ್ಲಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದರೆ, ಸ್ನೇಹಮಯಿ‌ಕೃಷ್ಣ ಪರ ಮಾಜಿ ಎಎಸ್‌ಜಿ ಮಣೀಂದರ್ ಸಿಂಗ್ ವಾದ ಮಂಡಿಸಿದ್ದರು. ಅಬ್ರಾಹಂ ಪರ ವಕೀಲ ಪ್ರಭುಲಿಂಗ ನಾವದಗಿ ಆಗಮಿಸಿದ್ದರು. ಸಿಎಂ ಸಿದ್ದರಾಮಯ್ಯರ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹಾಜರಿದ್ದರು. ಇನ್ನು ವಾದ-ಪ್ರತಿವಾದವನ್ನು ಆಲಿಸಲೆಂದು ಕೋರ್ಟ್ ಹಾಲ್‌ನಲ್ಲಿ ವಕೀಲರು ಕಿಕ್ಕಿರಿದು ಜಮಾಯಿಸಿದ್ದರು.

ಹೈ ವೋಲ್ಟೇಜ್‌ ಲೀಗಲ್‌ ಫೈಟ್‌ ಹೇಗಿತ್ತು?

ಮೊದಲಿಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಲು ಮುಂದಾದರು. ಈ ವೇಳೆ ಹಿರಿಯ ವಕೀಲ ಫ್ರೊ ರವಿವರ್ಮ ಕುಮಾರ್ ಮೆಹ್ತಾ ಅವರಿಗೂ ಮುನ್ನ ವಾದಕ್ಕೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತುಷಾರ್‌ ಮೆಹ್ತಾ ನನ್ನ ವಾದ ಆರು ಕಂಪಾರ್ಟ್‌ಮೆಂಟ್‌ಗಳಲ್ಲಿವೆ. ಮೊದಲನೆಯದಾಗಿ 17A ಹಾಗೂ 19 ನಡುವೆ ವ್ಯತ್ಯಾಸ ಇದೆ ಎಂಬುದನ್ನು ವಾದ ಮಾಡುತ್ತೇನೆ. ನ್ಯಾಯಮೂರ್ತಿಗಳಿಗೆ ಈ ಕೇಸಿನ ಎಲ್ಲಾ ಅಂಶಗಳೂ ತಿಳಿದಿವೆ. ನಾನು ರಾಜ್ಯಪಾಲರ ಪರ ನನ್ನ ವಾದ ಮಂಡಿಸುತ್ತಿದ್ದೇನೆ ಎಂದರು. ಆಗ ರವಿ ವರ್ಮ ಕುಮಾರ್ ಮಧ್ಯಪ್ರವೇಶಿಸಿ ರಾಜ್ಯಪಾಲರ ಆದೇಶದ ಒಂದು ಪ್ಯಾರಾ ಓದಲು ಮನವಿ ಮಾಡಿದರು.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ ಅಡಿಯಲ್ಲಿ ಅನುಮತಿ ನೀಡಲಾಗಿದೆ. ಆರೋಪಿತ ಘಟನೆ ನಡೆದಾಗ ಭಾರತೀಯ ನ್ಯಾಯ ಸಂಹಿತೆ ಜಾರಿಯಲ್ಲಿರಲಿಲ್ಲ. ಹೀಗಾಗಿ ರಾಜ್ಯಪಾಲರ ಅನುಮತಿಯೇ ಕಾನೂನುಬಾಹಿರವೆಂದು ವಾದ ಮಾಡಿದರು. ಐಪಿಸಿ ಅಡಿ ಅನುಮತಿ ನೀಡುತ್ತೇನೆಂದು ಹೇಳಬಹುದಿತ್ತು. ರಾಜ್ಯಪಾಲರು ತಮ್ಮ ವಿವೇಚನೆ ಬಳಸಿಲ್ಲವೆಂಬುದಕ್ಕೆ ಇದು ಸಾಕ್ಷಿ ಎಂದು ರವಿವರ್ಮ ಕುಮಾರ್‌ ಚಾಟಿ ಬೀಸಿದರು. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಅವರ ಸಹೋದರನ ವಿರುದ್ಧ ಆರೋಪವಿದೆ. ಪತ್ನಿ ಹಾಗೂ ಮೈದುನನ ಲೋಪಗಳಿಗೆ ಸಿಎಂ ಜವಾಬ್ದಾರಿಯಾಗುತ್ತಾರೆಯೇ? ಎಂದು ಸಿಎಂ ಪರ ಹಿರಿಯ ವಕೀಲ ರವಿವರ್ಮಕುಮಾರ್ ವಾದ ಮಂಡಿಸಿದರು.

ಬಳಿಕ ವಾದ ಆರಂಭಿಸಿದ ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರಾಸಿಕ್ಯೂಷನ್ ಅನುಮತಿ ನೀಡುವಾಗ ರಾಜ್ಯಪಾಲರು ವಿವೇಚನೆ ಬಳಸಿದ್ದಾರೆ. ಅಬ್ರಹಾಂ ಪ್ರಕರಣದಲ್ಲಿ ನೋಟಿಸ್‌ ನೀಡಲಾಗಿದೆ. ಸ್ನೇಹಮಯಿ ಕೃಷ್ಣ, ಪ್ರದೀಪ್‌ ಕುಮಾರ್‌ ಪ್ರಕರಣದಲ್ಲಿ ನೋಟಿಸ್‌ ನೀಡಿಲ್ಲ ಎಂದಿದ್ದಾರೆ. ರಾಜ್ಯಪಾಲರು ಕಾನೂನಿನ ಪ್ರಕಾರ ನೋಟಿಸ್‌ ನೀಡುವ ಅಗತ್ಯವೇ ಇಲ್ಲ,. ಪಿಸಿ ಕಾಯಿದೆ ಸೆಕ್ಷನ್‌ 17ಎ ಅಥವಾ 19 ಸಂದರ್ಭದಲ್ಲೂ ನೋಟಿಸ್‌ ನೀಡಬೇಕಿಲ್ಲ. ಯಾವ ಸೆಕ್ಷನ್‌ ಅಡಿ ಆರೋಪ ಪಟ್ಟಿ ಸಲ್ಲಿಸಬೇಕು ಎಂಬುದು ತನಿಖಾಧಿಕಾರಿಗೆ ಬಿಟ್ಟ ವಿಚಾರವಾಗಿದೆ. ಹೀಗಾಗಿ ಇಲ್ಲಿ ಬಿಎನ್‌ಎಸ್‌/ಐಪಿಸಿ ಉಲ್ಲೇಖಿಸಲಾಗಿದೆ ಎಂಬ ವಿಚಾರ ಬರುವುದಿಲ್ಲ.

ಕಳೆದ 26 ಜುಲೈನಲ್ಲಿ ನೊಟೀಸ್ ನೀಡಲಾಗಿದೆ. ದೂರುದಾರರಿಗೆ ಆರೋಪಗಳಿಗೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿದೆ ಎಂದು ವಾದಿಸಿದ್ದಾರೆ. ಮೂರನೇ ದೂರುದಾರಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿದ್ದಾರೆ. ಉಳಿದ ಇಬ್ಬರು ದೂರುದಾರರಿಗೆ ಸಂಬಂಧಿಸಿದಂತೆ ಉಲ್ಲೇಖಿಸಿಲ್ಲ ಎಂದು ವಾದಿಸಿದ್ದಾರೆ. ಸಿಎಂ ಯಾವುದೇ ಶಿಫಾರಸ್ಸು ಮಾಡಿಲ್ಲ ಎಂದಿದ್ದಾರೆ. ಹೀಗಿರುವಾಗ ಪಿಸಿ ಕಾಯಿದೆ ಸೆಕ್ಷನ್‌ 17ಎ ಅಗತ್ಯವೇ ಇಲ್ಲ. ಹೀಗಿರುವಾಗ ನಮ್ಮ ವಾದ ಏತಕ್ಕಾಗಿ? ರಾಜ್ಯಪಾಲರ ಕಡತವನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಲ್ಲದೇ ಅರ್ಜಿದಾರರಿಗೂ ಕೊಡುತ್ತೇನೆ. ಪ್ರಾಸಿಕ್ಯೂಷನ್ ಅನುಮತಿ ನೀಡುವಾಗ ವಿವೇಚನೆ ಬಳಸಲಾಗಿದೆ ಎಂಬುದನ್ನು ಎಲ್ಲರು ತಿಳಿಯಬೇಕು ಮೆಹ್ತಾ ವಾದವನ್ನು ಮುಂದುವರಿಸಿದರು.

ಸೆ.19 ಅಡಿಯಲ್ಲಿಯೂ ನ್ಯಾಚುಲರ್ ಜಸ್ಟೀಸ್ ಬೇಕಿಲ್ಲವೆಂದು ಸುಪ್ರೀಂಕೋರ್ಟ್ ಹೇಳಿದೆ. ತನಿಖಾ ಹಂತದಲ್ಲಿ ತನಿಖಾಧಿಕಾರಿ ಎಲ್ಲದರ ಪರಿಶೀಲನೆ ಮಾಡಬೇಕು. ರಾಜ್ಯಪಾಲರು ತನಿಖೆಗೆ ಮೊದಲೇ ಎಲ್ಲವನ್ನೂ ಹೇಳಬೇಕಿಲ್ಲ. ಸಿಎಂ ಪತ್ನಿಯ ಮೇಲಿನ ಕ್ರಿಮಿನಲ್ ಹೊಣೆಗಾರಿಕೆ ಪತಿ ಮೇಲೆ ವರ್ಗಾಯಿಸಬಾರದು. ಹೀಗೆಂದು ಸಿಎಂ ಪರ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ವಾದ ಮಾಡಿದ್ದಾರೆ. ಅವರ ಮಾತನ್ನು ಒಪ್ಪಿದರೆ 17ಎ ಅಡಿಯ ಅನುಮತಿಯೇ ಬೇಕಿಲ್ಲ ಎಂದು ಹೈಕೋರ್ಟ್‌ಗೆ ಲಿಖಿತ ಹೇಳಿಕೆಯನ್ನು ತುಷಾರ್ ಮೆಹ್ತಾ ಸಲ್ಲಿಸಿದ್ದರು. ರಾಜ್ಯಪಾಲರ ಕಡತವನ್ನು ತಮ್ಮ ಮಾಹಿತಿಗೆ ಸಲ್ಲಿಸುತ್ತಿದ್ದೇನೆ. ಇದರಲ್ಲಿ ಮುಚ್ಚಿಡುವಂತದ್ದೇನೂ ಇಲ್ಲ. 26 ಜುಲೈರಂದು ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿದ್ದರು. ಜುಲೈ 27 ರಂದು ಸಿಎಂ ಮುಖ್ಯಕಾರ್ಯದರ್ಶಿಗೆ ಸೂಚಿಸಿದರು. ಅಡ್ವೊಕೆಟ್ ಜನರಲ್ ಅಭಿಪ್ರಾಯ ಪಡೆದು ಕ್ಯಾಬಿನೆಟ್ ಮುಂದಿಡುವಂತೆ ಸಿಎಂ ಸೂಚಿಸಿದ್ದರು ಎಂದು ಮೆಹ್ತಾ ವಾದಿಸಿದರು.

ಬಳಿಕ ಪ್ರಾಸಿಕ್ಯೂಷನ್ ಅನುಮತಿ ಸಂಬಂಧ ಸಾಂವಿಧಾನಿಕ ಪೀಠಗಳು‌ ನೀಡಿರುವ ತೀರ್ಪುಗಳನ್ನು ಓದಿ ಮೆಹ್ತಾ ವಾದ ಮಂಡಿಸಿದ್ದರು. ರಾಜ್ಯಪಾಲರ ಕಡತ ಗಮನಿಸಿದರೆ ವಿವೇಚನೆ ಬಳಸಿರುವುದು ತಿಳಿಯುತ್ತದೆ. ರಾಜ್ಯಪಾಲರು ಎಲ್ಲವನ್ನು ಸಮಗ್ರವಾಗಿ ವಿವರಣೆ ನೀಡಿದ್ದಾರೆ. ಆಗಸ್ಟ್ 14ರಂದು ಎಲ್ಲಾ ಕಡತಗಳನ್ನು ಓದಿ ನೋಟ್ಸ್ ಮಾಡಿದ್ದಾರೆ. ಕ್ಯಾಬಿನೆಟ್ ಸಲಹೆಯನ್ನು ಪರಿಗಣಿಸಿ ವಿವರವಾದ ಪಟ್ಟಿ ತಯಾರಿಸಿದ್ದಾರೆ. ದೂರಿನ ವಿವರ, ಕ್ಯಾಬಿನೆಟ್ ಸಲಹೆ, ತಮ್ಮ ಅಭಿಪ್ರಾಯ ಎಲ್ಲವನ್ನೂ ದಾಖಲಿಸಿದ್ದಾರೆ. ರಾಜ್ಯಪಾಲರು ಎಲ್ಲವನ್ನೂ ಪರಿಶೀಲಿಸಿ ಅಂತಿಮವಾಗಿ ಆದೇಶಿಸಿದ್ದಾರೆ. ರಾಜ್ಯಪಾಲರು ಎಲ್ಲವನ್ನೂ ಅಂತಿಮವಾಗಿ ನಿರ್ಧರಿಸಬೇಕಿಲ್ಲ. ಈ ಕೇಸ್ ಕಾಗ್ನಿಜೆನ್ಸಿ ಅಪರಾಧವೋ ಅಲ್ಲವೋ ತೀರ್ಮಾನಿಸಬೇಕಿಲ್ಲ ಎಂದು ಶ್ರೀರೂಪಾ ಪ್ರಕರಣವನ್ನು ಉಲ್ಲೇಖಿಸಿ ತುಷಾರ್ ಮೆಹ್ತಾ ವಾದ ಮಾಡಿದರು. ಯಾವುದೇ ಆಡಳಿತಾತ್ಮಕ ಆದೇಶ ವಿವೇಚನೆ ಬಳಸಲೇಬೇಕು. ಇದಕ್ಕೆ ಯಾವುದೇ ತೀರ್ಪುಗಳ ಸಮರ್ಥನೆಯೇ ಬೇಕಿಲ್ಲ. ಎಷ್ಟರ ಮಟ್ಟಿನ ವಿವೇಚನೆ ಬಳಸಬೇಕೆಂಬುದು ಆ ಪ್ರಕರಣ ಆಧರಿಸುತ್ತದೆ. 2013ರ ಲಲಿತ ಕುಮಾರಿ vsಉತ್ತರ ಪ್ರದೇಶ ಸರ್ಕಾರದ ಸುಪ್ರೀಂ ಕೋರ್ಟ್‌ನ ರಾಜೇಶ್ ಅಗರ್ ವಾಲ್ ತೀರ್ಪು ಅನ್ನು ಉಲ್ಲೇಖಿಸಿದರು.

ಸಿಆರ್‌ಪಿಸಿ 154 ರಲ್ಲಿ ಹೇಗೆ ಎಫ್‌ಐಆರ್ ದಾಖಲು ಮಾಡಲಾಗುತ್ತದೆ. ಭ್ರಷ್ಟಾಚಾರ ತಡೆ ಕಾಯ್ದೆ 17 ಎ ಅಡಿಯ ವ್ಯಾಪ್ತಿ ಪರಿಗಣಿಸಬೇಕು. ಪೊಲೀಸ್ ಅಧಿಕಾರಿ ತನಿಖೆಗೂ ಮೊದಲು ಅನುಮತಿ ಪಡೆಯಬೇಕು. ಲಲಿತಾಕುಮಾರ್ ಪ್ರಕರಣದ ತೀರ್ಪನ್ನು ಹೈಕೋರ್ಟ್ ಪರಿಗಣಿಸಬೇಕು. ಯಾವುದೇ ಮಾಹಿತಿ ಸಂಜ್ಞೇಯವಾಗಿದ್ದರೆ ಸಾಕು ಎಫ್ಐಆರ್ ದಾಖಲಿಸಬೇಕು. ತಹಸೀಲ್ದಾರ್ ಆಗಿರಲಿ ರಾಜ್ಯಪಾಲರಾಗಲೀ ಕರ್ತವ್ಯ ಪಾಲಿಸಬೇಕು. ಕಾಗ್ನಿಜೆಬಲ್ ಅಪರಾಧದ ಮಾಹಿತಿ ನೀಡಿದರೆ ಎಫ್‌ಐಆರ್ ದಾಖಲಿಸಬೇಕು. ರಾಜ್ಯಪಾಲರು ವಿವರವಾದ ಸಾಕ್ಷ್ಯ ವಿಚಾರಣೆ ನಡೆಸುವಂತಿಲ್ಲ. ಸೆಕ್ಷನ್ 19 ಅಡಿಯೂ ರಾಜ್ಯಪಾಲರು ಅನುಮತಿ ನೀಡುತ್ತಿಲ್ಲ. 17 ಎ ಅಡಿಯಷ್ಟೇ ಅನುಮತಿ ನೀಡುತ್ತಿದ್ದಾರೆ. ಇದು ಇನ್ವೆಸ್ಟಿಗೇಷನ್‌ಗೆ ಮಾತ್ರ ನೀಡಿರುವ ಅನುಮತಿ ಎಂದಷ್ಟೇ ಪರಿಗಣಿಸಬೇಕು. 17ಎ ಎಲ್ಲ ಪಬ್ಲಿಕ್ ಸರ್ವೆಂಟ್‌ಗೆ ಅನ್ವಯವಾಗುತ್ತದೆ. ಇದು ಲಲಿತಾ ಕುಮಾರಿ ಕೇಸ್‌ ಹಾಗೂ ಅಶೋಕ್ ಪ್ರಕರಣದಲ್ಲೂ ಇದನ್ನೂ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.

ಇನ್ನು 17ಎ ಅಡಿಯಲ್ಲಿ ಪೂರ್ವಾನುಮತಿ ಪಡೆಯುವ ಮುನ್ನ ನೊಟೀಸ್ ನೀಡಲು ಕೆಲ ಕಾರಣಗಳಿರುತ್ತದೆ. ನೋಟಿಸ್ ನೀಡಿದರೆ ಸಾಕ್ಷಿಗಳ ನಾಶವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಸಿಆರ್‌ಪಿಸಿ 154 ಹಾಗೂ 17aನಲ್ಲಿ ಶೋಕಾಸ್ ನೊಟೀಸ್ ವಿಷಯ ಆಗಲ್ಲ. ಮೇಲ್ನೋಟಕ್ಕೆ ಅಪರಾಧವಾಗಬಹುದೇ ಇಲ್ಲವೇ ಎಂದಷ್ಟೇ ನೋಡಬೇಕು. 17 ಎ ಅಡಿ ಅನುಮತಿ ನೀಡುವ ಮುನ್ನ ಇಷ್ಟನ್ನ ನೋಡಬೇಕು ಎಂದು ಮೆಹ್ತಾ ವಾದಿಸಿದರು. ಈ ಮಧ್ಯೆ ಪ್ರವೇಶಿಸಿದ ನ್ಯಾಯಮೂರ್ತಿಗಳು 17 ಎ ಅಡಿ ನ್ಯಾಚುರಲ್ ಜಸ್ಟೀಸ್ ಪಾಲಿಸಬೇಕಾದರೆ ಎಫ್‌ಐಆರ್ ದಾಖಲಿಸುವ ಮುನ್ನವೂ ಆರೋಪಿಯ ಹೇಳಿಕೆ ದಾಖಲಿಸಬೇಕೇ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತ್ಯುತ್ತರ ನೀಡಿದ ಮೆಹ್ತಾ 17ಎ ಮೊದಲು ಪ್ರಾಥಮಿಕ ತನಿಖೆಯೂ ಬೇಕಿಲ್ಲವೆಂಬುದೇ ನನ್ನ ವಾದ. ಎಲ್ಲದರ ವಿಚಾರಣೆ ನಡೆಸಿದರೆ ಸಾಕ್ಷ್ಯನಾಶವಾಗಬಹುದು. ಪೊಲೀಸರ ತನಿಖೆ ಮೇಲೆಯೂ ಇದರ ಪರಿಣಾಮವಾಗಬಹುದು ಎಂದು ರಾಜ್ಯಪಾಲರು ಬರೆಸಿರುವ ಆದೇಶವನ್ನು ಓದಿ ಹೇಳಿದರು. ನಾನು ಟಿ.ಜೆ.ಅಬ್ರಹಾಂರ ದಾಖಲೆಗಳನ್ನು ಗಮನಿಸಿದ್ದೇನೆ. ದೂರುದಾರರ ವಾದವನ್ನೂ ಖುದ್ದಾಗಿ ಆಲಿಸಿದ್ದೇನೆ. ಇದರ ಸಂಬಂಧ ಶೋಕಾಸ್ ನೋಟಿಸ್ ಅನ್ನು ಸಿಎಂಗೆ ನೀಡಿದ್ದಾರೆ. ಅದಾದ ನಂತರ 91 ಪುಟಗಳ ಕ್ಯಾಬಿನೆಟ್ ನಿರ್ಧಾರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ಇತಿಹಾಸದಲ್ಲಿಯೇ ಇಷ್ಟು ಪುಟಗಳ ಕ್ಯಾಬಿನೆಟ್ ನಿರ್ಧಾರವನ್ನು ಯಾರೂ ತೆಗೆದುಕೊಂಡಿಲ್ಲ. ಇದರಲ್ಲಿ ಇನ್ನೂ ಒಂದು ಆಸಕ್ತಿಕರ ಅಂಶವಿದೆ.

ಅಬ್ರಹಾಂ ಮತ್ತು ಸರ್ಕಾರದ ದಾಖಲೆಗಳನ್ನು ರಾಜ್ಯಪಾಲರು ಗಮನಿಸಿದ್ದಾರೆ. ಕ್ಯಾಬಿನೆಟ್ ನಿರ್ಣಯ ಸೇರಿ ಎಲ್ಲ ದಾಖಲೆಗಳನ್ನೂ ತಮ್ಮ ಮುಂದಿಡಲು ಸೂಚಿಸಿದ್ದಾರೆ. ಮೂರು ಕಲಂಗಳನ್ನು ರಚಿಸಿದ್ದಾರೆ. ಟಿ.ಜೆ. ಅಬ್ರಹಾಂ ದೂರು, ಕ್ಯಾಬಿನೆಟ್ ಉತ್ತರ, ಸಿಎಂ ಉತ್ತರ ಎಲ್ಲವನ್ನೂ ಪರಾಮರ್ಶೆ ಮಾಡಿದ್ದಾರೆ. ರಾಜ್ಯಪಾಲರು ಫೈಲ್ ನೋಡಿದ್ದೇನೆ ಎಂದು ಬರೆದಿದ್ದಾರೆ. ರಾಜ್ಯಪಾಲರ ಒರಿಜಿನಲ್ ಫೈಲ್‌ ಅನ್ನು ತುಷಾರ್ ಮೆಹ್ತಾ ಕೋರ್ಟ್‌ಗೆ ಸಲ್ಲಿಸಿ, ಬಳಿಕ ಪ್ರತಿಗಳನ್ನು ಸಿಎಂ ಪರ ವಕೀಲರಿಗೆ ನೀಡಿದರು. ಸದ್ಯಕ್ಕೆ ಕಡತವನ್ನು ನನ್ನ ಬಳಿಯೇ ಇಟ್ಟುಕೊಳ್ಳಬಹುದೇ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಕೇಳಿದಾಗ ದಯವಿಟ್ಟು ಇದರ ಪ್ರತಿಗಳನ್ನು ಬೇರೆ ಯಾರಿಗೂ ನೀಡದಂತೆ ಸಿಎಂ ಪರ ವಕೀಲರಿಗೆ ಹಾಗೂ ಹೈಕೋರ್ಟ್‌ಗೆ ತುಷಾರ್ ಮೆಹ್ತಾ ಮನವಿ ಮಾಡಿದರು.

ಪ್ರತಿ ಹಂತದಲ್ಲೂ ರಾಜ್ಯಪಾಲರ ನೋಟ್‌ ಸಿದ್ಧ

ಪ್ರತಿ ಹಂತದಲ್ಲೂ ರಾಜ್ಯಪಾಲರು ನೋಟ್ ಸಿದ್ಧಪಡಿಸಿದ್ದಾರೆ. ಅದಾದ ನಂತರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಸಚಿವ ಸಂಪುಟದ ಮಂತ್ರಿಗಳನ್ನು ಸಿಎಂ ಆಯ್ಕೆ ಮಾಡುತ್ತಾರೆ. ಹೀಗಾಗಿ ತಮ್ಮನ್ನು ಆಯ್ಕೆ ಮಾಡಿದ ಸಿಎಂ ವಿರುದ್ಧ ಕ್ಯಾಬಿನೆಟ್ ನಿರ್ಣಯ ಸಾಧ್ಯವಿಲ್ಲ. ಆದ್ದರಿಂದ ಇಂತಹ ಕ್ಯಾಬಿನೆಟ್ ನಿರ್ಣಯವನ್ನು ರಾಜ್ಯಪಾಲರು ಒಪ್ಪಬೇಕಿಲ್ಲ ಎಂದು ಮೆಹ್ತಾ ವಾದ ಮಂಡಿಸಿದರು.

ಕ್ಯಾಬಿನೆಟ್ ಸೂಚನೆಯನ್ನೂ ಏಕೆ ಪಾಲಿಸಿಲ್ಲವೆಂಬುದನ್ನೂ ರಾಜ್ಯಪಾಲರು ಹೇಳಿದ್ದಾರೆ. ಮುಡಾ ಆರೋಪಗಳ ಬಗ್ಗೆಯೂ ರಾಜ್ಯಪಾಲರು ಪ್ರಸ್ತಾಪಿಸಿದ್ದಾರೆ. 40 -60 ಹಾಗೂ 50 -50 ಗೆ ನಿಯಮ ಬದಲಾಯಿಸಲಾಗಿದೆ. ಸಿದ್ದರಾಮಯ್ಯ ಪುತ್ರ ಯತೀಂದ್ರ ಮುಡಾ ಸಭೆಯಲ್ಲಿ ಭಾಗವಹಿಸಿದ್ದಾರೆ. ಬಹಳ ಪ್ರತಿಷ್ಟಿತ ಬಡಾವಣೆಯಲ್ಲಿ ಬದಲಿ ನಿವೇಶನ ನೀಡಲಾಗಿದೆ. ಇಷ್ಟೆಲ್ಲಾ ಅಂಶಗಳಿದ್ದರೂ ಕ್ಯಾಬಿನೆಟ್ ತಾರತಮ್ಯಪೂರಿತ ನಿರ್ಣಯ ಕೈಗೊಂಡಿದೆ. ಹೀಗಾಗಿ ಸೂಚನೆ ಪಾಲಿಸದೇ ಸ್ವಂತ ವಿವೇಚನೆ ಬಳಸುತ್ತಿದ್ದೇನೆ ಎಂದು ರಾಜ್ಯಪಾಲರು ಸ್ಪಷ್ಟವಾಗಿ ತಮ್ಮ ಆದೇಶದಲ್ಲಿ ಹೇಳಿದ್ದಾರೆ. ಎಂ.ಪಿ.ಪೊಲೀಸ್ ಎಸ್ಟಾಬ್ಲಿಷ್ ಮೆಂಟ್ ಕೇಸ್‌ನ ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿದ್ದಾರೆ. ಅಧಿಕಾರದಲ್ಲಿರುವವರು ಕಾನೂನು ಉಲ್ಲಂಘಿಸಿ ಆರಾಮವಾಗಿರುತ್ತಾರೆ ಎಂದು ಮೆಹ್ತಾ ವಾದಿಸಿದರು.

ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ 17 ಎ ಅಡಿ ಅನುಮತಿಯಿಲ್ಲದೇ ಪೊಲೀಸರು ತನಿಖೆ ನಡೆಸುವಂತಿಲ್ಲವೆಂದಿದೆ. ಆದರೆ ಪೊಲೀಸರೇ ಅನುಮತಿ ಪಡೆಯಬೇಕೆಂದು ಉಲ್ಲೇಖವಾಗಿಲ್ಲ. ಯಾರು ಬೇಕಾದರೂ ಸಕ್ಷಮ ಪ್ರಾಧಿಕಾರಿಯ ಅನುಮತಿ ಪಡೆಯಬಹುದು. ಇದನ್ನೇ ನಾನು ನನ್ನ ಹಿಂದಿನ ತೀರ್ಪಿನಲ್ಲಿ ಹೇಳಿದ್ದೇನೆ ಎಂದರು.

ಮುಖ್ಯ ಕಾರ್ಯದರ್ಶಿ ವಾಸ್ತವಿಕ ಅಂಶಗಳನ್ನು ಪರಿಶೀಲಿಸಿ, ಅಡ್ವೊಕೇಟ್‌ ಜನರಲ್‌ ಕಚೇರಿಗೆ ಕಳುಹಿಸಿದ್ದಾರೆ. ನಂತರ ಕ್ಯಾಬಿನೆಟ್‌ಗೆ ಕಳುಹಿಸಿದ್ದಾರೆ. ಅಡ್ವೊಕೇಟ್‌ ಜನರಲ್‌ ಅವರ ದಾಖಲೆಯನ್ನು ಕ್ಯಾಬಿನೆಟ್ ಕಾಪಿ ಮಾಡಿದೆ. ಸಚಿವ ಸಂಪುಟದ ಸಲಹೆ , 90 ಪುಟಗಳು ಹಾಗೂ ಅಡ್ವೋಕೇಟ್ ಜನರಲ್ ಸಲಹೆ ಹಾಗೂ ಸಿಎಂ ಉತ್ತರವನ್ನು ಕಾಮ, ಫುಲ್ ಸ್ಟಾಫ್ ಸಮೇತ ಎಲ್ಲವನ್ನು ಕಾಫಿ ಫೇಸ್ಟ್ ಮಾಡಿ ಕಳಿಸಿದ್ದಾರೆ.

ಮುಡಾ ಕೇಸ್‌ನಲ್ಲಿ ಹಲವು ನಿಯಮ ಉಲ್ಲಂಘನೆ ಆಗಿವೆ. ಮುಡಾದಲ್ಲಿ ಸಿಎಂ ಪುತ್ರ ಸಹ ಇದ್ದಾರೆ . ಇದು ದಲಿತರೊಬ್ಬರಿಗೆ ಸೇರಿದ ಜಮೀನಾಗಿದ್ದು, ಬಳಿಕ ಇದನ್ನು ಸಿಎಂ ಸಂಬಂಧಿಕರು ಖರೀದಿ ಮಾಡಿ, ಸಿಎಂ ಪತ್ನಿಗೆ ಗಿಫ್ಟ್ ಕೊಡುತ್ತಾರೆ. ಸಿಎಂ ಮಗ ಮುಡಾ ಕಮಿಟಿಯಲ್ಲಿಇರುತ್ತಾರೆ. ಇದು ಹೊರ ಬಂದ ಬಳಿಕ ಕಮಿಟಿ ರಚನೆ ಮಾಡಿ, ಈ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ಜತೆಗೆ ಸುದೀರ್ಘ ವಿವರಣೆಯನ್ನು ಕೊಟ್ಟಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಕೊಡುವ ಅಧಿಕಾರ ಇದೆ. ಆದರೆ ಸಿಎಂ ಈಗಲೂ ಖಾಸಗಿ ವ್ಯಕ್ತಿ ಪ್ರಾಸಿಕ್ಯೂಷನ್‌ಗೆ ಕೇಳುವ ಅಧಿಕಾರ ಇಲ್ಲ ಅಂತಿದ್ದಾರೆ ಎಂದು ಮೆಹ್ತಾ ಲಾ ಪಾಯಿಂಟ್‌ ಹಾಕಿದ್ದರು. ಕ್ಯಾಬಿನೆಟ್‌ನಲ್ಲಿ ಮಾಡಿದ ನಿರ್ಣಯ ನಾನ್ ಅಪ್ಲಿಕೇಶನ್ ಮೈಂಡ್ ಮಾಡಿದ್ದಾರೆ . ಅಡ್ವೋಕೇಟ್ ಜನರಲ್ ಸಿಎಸ್ ಅವರನ್ನು ಪರಿಗಣಿಸಿಲ್ಲ. ಬಳಿಕ ಸಿಎಂ ವೈಯುಕ್ತಿಕವಾಗಿ ಉತ್ತರ ಕೊಡುವಾಗ ಕಾಪಿ ಪೇಸ್ಟ್ ಮಾಡಿದ್ದಾರೆ. ಇದನ್ನು ಕ್ಯಾಬಿನೆಟ್ ಒಳಗೆ ಅಪ್ಲಿಕೇಶನ್ ಮೈಂಡ್ ಇಲ್ಲ ಅನ್ನೋದು ಸ್ಪಷ್ಟವಾಗುತ್ತೆ ಎಂದು ಮೆಹ್ತಾ ವಾದಿಸಿದರು.

ನಂಬೋದರಿ ಪ್ರಕರಣ ಪ್ರಸ್ತಾಪ ಮಾಡಿದ ಮೆಹ್ತಾ ಇದರಲ್ಲೂ ಎಫ್ಐಆರ್ ಹಾಗೂ ಚಾರ್ಜ್ ಶೀಟ್‌ಗೂ ಮೊದಲು ಪ್ರಾಸಿಕ್ಯೂಷನ್ ಕೊಡಬಹುದು ಎಂದಿದ್ದಾರೆ. ಮಹಿಂದರ್ ಸಿಂಗ್ ಗಿಲ್ ಕೇಸ್‌ನಲ್ಲಿ ಇದನ್ನೇ ಹೇಳಿದ್ದಾರೆ. ಎಲ್ಲ ಕಾರಣಗಳನ್ನು ಹೇಳಿಯೇ ಪ್ರಾಸಿಕ್ಯೂಷನ್ ಕೊಡಬೇಕು ಅಂತೇನಿಲ್ಲ. 6 ಪುಟಗಳ ಉತ್ತರ ಬರೆದಿದ್ದೇನೆ, ಅಪ್ಲಿಕೇಶನ್ ಮೈಂಡ್ ಇಟ್ಕೊಂಡು ಮಾಡಿರುವ ನಿರ್ಧಾರ ಇದು. ಆದರೆ ಅಪ್ಲಿಕೇಶನ್ ಮೈಂಡ್ ಉಪಯೋಗಿಸಿಲ್ಲ ಅನ್ನೋದು ತಪ್ಪು. ಇದು ನೇರವಾಗಿ ಕಾರ್ಯಾಂಗದ ಕೆಲಸವಾಗಿದೆ. ಆಡಳಿತಾತ್ಮಕ ನಿರ್ಧಾರ ಹೀಗಾಗಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಕೊಟ್ಟಿರುವುದು. ಸಹಜ ಕಾನೂನಿಗೆ ಅವಕಾಶ ಕೊಟ್ಟೆ ನಿರ್ಧಾರ ಮಾಡಿದ್ದೇವೆ ಎಂದು ಮೆಹ್ತಾ ವಾದಿಸಿದರು.

ಮೂವರು ಅರ್ಜಿ ಕೊಟ್ಟಿರುವುದು ನಿಜ. ಒಬ್ಬರು ಮೈಸೂರು, ಮತ್ತಿಬ್ಬರು ಬೆಂಗಳೂರು ಇರಬಹುದು. ಆದರೆ ಜಮೀನು ಹಾಗೂ ಆರೋಪಿ ಒಂದೇ, ಹೀಗಾಗಿ ನಾನೇಕೆ ಮೂರು ಅರ್ಜಿಗಳ ಮೇಲೆ ಶೋಕಾಸ್ ನೋಟೀಸ್ ಕೊಡಬೇಕು. ಒಂದೇ ರೀತಿಯ ದಾಖಲೆ ಇದ್ದಾಗ ಮೂವರ ಅರ್ಜಿ ಮೇಲೆ ಶೋಕಾಸ್ ಕೊಡುವ ಅಗತ್ಯವಿಲ್ಲ. ಮೂರು ಅರ್ಜಿಗಳನ್ನು ಒಂದೇ ಎಂದು ಪರಿಗಣಿಸಿ ತೀರ್ಮಾನ ಮಾಡಿದ್ದಾರೆ. ಹೋಲಿಕೆಯನ್ನು ಗಮನಿಸಿ ರಾಜ್ಯಪಾಲರು ಪೂರ್ವಾನುಮತಿ ನೀಡಿದ್ದಾರೆ. ಹೀಗಾಗಿ ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್‌ ಕುಮಾರ್‌ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್‌ ನೀಡಬೇಕಿಲ್ಲ.

ಅನುಮತಿ ನೀಡುವ ಮುನ್ನ ಆರೋಪಿಯ ಹೇಳಿಕೆ ದಾಖಲಿಸಬೇಕಿಲ್ಲ ಎಂದು ಸುಪ್ರೀಂಕೋರ್ಟ್‌ನ ವಿವಿಧ ತೀರ್ಪುಗಳನ್ನು ತುಷಾರ್ ಮೆಹ್ತಾ ಉಲ್ಲೇಖಿಸಿದರು. ರಾಜೇಶ್ ಅಗರ್ ವಾಲ್ ಕೇಸ್ , ಆರ್‌ಬಿಐಗೆ ವಂಚನೆ ಪ್ರಕರಣ ಪ್ರಸ್ತಾಪಿಸಿದರು. ಆಡಳಿತಾತ್ಮಕ ನಿರ್ಧಾರಕ್ಕೆ ಯಾವುದೇ ವಿಚಾರಣೆ ಅವಶ್ಯಕತೆ ಇಲ್ಲ. ತನಿಖೆ ಅವಶ್ಯವಿದೆಯೇ ಇಲ್ಲವೇ ಎಂಬುದನ್ನಷ್ಟೇ 17ಎ ಅಡಿ ತೀರ್ಮಾನಿಸಬೇಕು. ಎಲ್ಲವನ್ನೂ ಈ ಹಂತದಲ್ಲಿಯೇ ವಿವರಿಸಿದರೆ ಸಾಕ್ಷ್ಯ ನಾಶವಾಗಬಹುದು ಎಂದು ಮೆಹ್ತಾ ಸುಬ್ರಹ್ಮಣ್ಯಸ್ವಾಮಿ ತೀರ್ಪು ಉಲ್ಲೇಖಿಸಿದರು.

ಸಂಪುಟ ಸಭೆ ನಡೆಸಲು ಸಿಎಂ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಡಿಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಕ್ಯಾಬಿನೆಟ್ ನಡೆದಿದೆ. ಅದು ಸಿಎಂ ಸಿದ್ದರಾಮಯ್ಯ ಅವರೇ ಸಂಪುಟ ಸಭೆ ನಡೆಸಲು ನಾಮನಿರ್ದೇಶನ ಮಾಡಿದ್ದಾರೆ. ಆ ಸಲಹೆಯನ್ನು ರಾಜ್ಯಪಾಲರು ಪರಿಗಣಿಸಬೇಕಿಲ್ಲ. ಏಕೆಂದರೆ ಅಲ್ಲಿ ಪಕ್ಷಪಾತದ ನಿಲುವು ಇರುತ್ತದೆ. ಶಂಶೇರ್ ಸಿಂಗ್ ಹಾಗೂ ಎಂ .ಪಿ.ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್ ಮೆಂಟ್ ಕೇಸ್ ಉಲ್ಲೇಖಿಸಿ ರಾಜ್ಯಪಾಲರು ಕೆಲ ಅಪರೂಪದ ಸಂದರ್ಭದಲ್ಲಿ ಸ್ವತಂತ್ರ ವಿವೇಚನೆ ಬಳಸಬಹುದು.

ರಾಜ್ಯಪಾಲರು ಸಾಂವಿಧಾನಿಕ ಹುದ್ದೆ ನಿರ್ವಹಣೆಯಲ್ಲಿದ್ದಾರೆ. ಅವರನ್ನು ಫ್ರೆಂಡ್ಲಿ ಗವರ್ನರ್ ಎಂದು ಉಲ್ಲೇಖಿಸುತ್ತಾರೆ. ನಾನು ಸಿಎಂ ಅವರನ್ನು ಗೌರವಾನ್ವಿತ ಸಿಎಂ ಎಂದೇ ಕರೆಯುತ್ತಿದ್ದೇನೆ. ಹೀಗಾಗಿ ವಾದ ಮಂಡನೆ ಮಾಡುವಾಗ ನಮ್ಮ ಪದ ಬಳಕೆ ಸರಿಯಿರಬೇಕೆಂದು ಸಿಂಘ್ವಿ ವಾದ ಮಂಡನೆ ಮಾಡುವಾಗ ಅಬ್ರಹಾಂ ಹಾಗೂ ರಾಜ್ಯಪಾಲರ ಬಗ್ಗೆ ಮಾತನಾಡಿದಕ್ಕೆ ಮೆಹ್ತಾ ಕೌಂಟರ್ ಕೊಟ್ಟರು. ನಾನು ಸಾಂವಿಧಾನಿಕ ಕ್ರಿಯೆಗಳನ್ನು ಮಾತ್ರ ನಿರ್ವಹಿಸಿದ್ದೇನೆ. ನಾನು 17a ಅನುಮತಿ ನೀಡಿದ್ದೇನೆ. ಫಲಾನುಭವಿ ಮಾತ್ರ ಅಪರಾಧಿಯಾಗುತ್ತಾನೆ. ತನಿಖೆಯಾಗಲಿ ಬಿಡಿ ಯಾಕೆ ಚಿಂತಿಸುತ್ತೀರಿ. ಮೂಡಾದಲ್ಲಿ ಭಾರಿ ಪ್ರಮಾಣದ ಹಗರಣ ನಡೆದಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಮ್ಮ ವಾದ ಮುಕ್ತಾಯ ಗೊಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ರಾಜಕೀಯ

DK Shivakumar: ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ; ಸಿಬಿಐ, ಯತ್ನಾಳ್ ಅರ್ಜಿ ವಜಾ: ಡಿಕೆ ಶಿವಕುಮಾರ್‌ಗೆ ಬಿಗ್ ರಿಲೀಫ್

ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (DK Shivakumar) ವಿರುದ್ಧ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

DK Shivakumar
Koo

ಬೆಂಗಳೂರು: ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ವಿರುದ್ಧ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆ ನಡೆಸಲು ಕೇಂದ್ರ ತನಿಖಾ ಸಂಸ್ಥೆಗೆ (ಸಿಬಿಐ) ಹಿಂದಿನ ಬಿಜೆಪಿ ಸರ್ಕಾರದಿಂದ ಅನುಮತಿ ನೀಡಲಾಗಿತ್ತು. ಆದರೆ ಹಾಲಿ ಕಾಂಗ್ರೆಸ್ ಸರ್ಕಾರವು ಇದನ್ನು ಹಿಂಪಡೆದಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮತ್ತು ಸಿಬಿಐ ರಿಟ್‌ ಅರ್ಜಿ ಸಲ್ಲಿಸಿತ್ತು.

ಇದನ್ನೂ ಓದಿ: CM Siddaramaiah : ಮುಡಾ ಹಗರಣ ಸಿಎಂಗೆ ತಾತ್ಕಾಲಿಕ ರಿಲೀಫ್‌; ಆ.31ಕ್ಕೆ ವಿಚಾರಣೆ ಮುಂದೂಡಿಕೆ

ಗುರುವಾರ (ಆ.29) ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾಯಪೀಠವು ಎರಡು ಕಡೆಯ ವಕೀಲರಿಂದ ವಾದ-ಪ್ರತಿವಾದ ಆಲಿಸಲಾಗಿದೆ. ಪಿಸಿ ಆಕ್ಟ್ ಅಡಿಯಲ್ಲಿ ಕೇಸ್ ದಾಖಲಿಸಿಲಾಗಿತ್ತು. ಇದು ಸರ್ಕಾರ ಮತ್ತು ಸಿಬಿಐ ನಡುವಿನ ವಿವಾದವಾಗಿದೆ. ಹೀಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಸುವುದು ಸೂಕ್ತ. ರಾಜ್ಯ ಸರ್ಕಾರ ಮತ್ತು ಸಿಬಿಐ ನಡುವಿನ ವಿವಾದ ಸುಪ್ರೀಂ ಕೋರ್ಟ್ ತೀರ್ಮಾನಿಸಬೇಕು. ಹೈಕೋರ್ಟ್ ತೀರ್ಮಾನಿಸುವುದು ಸೂಕ್ತವಲ್ಲವೆಂದು ನ್ಯಾಯಮೂರ್ತಿಗಳಾದ ಕೆ. ಸೋಮಶೇಖರ್, ಉಮೇಶ್ ಎಂ.ಅಡಿಗ ಅವರ ಪೀಠ ತೀರ್ಪು ನೀಡಿದೆ. ಇದರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಬಿಗ್ ರಿಲೀಫ್‌ ಸಿಕ್ಕಿದೆ.

ಇನ್ನು ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ನಾವು ಶ್ರಮ ಪಟ್ಟು ರಾಜಕಾರಣ ಮಾಡುತ್ತಿದ್ದೇವೆ. ಬಿಜೆಪಿ ನಾಯಕರ ಮೇಲೆ ಸಾವಿರಾರು ಕೇಸ್ ಇವೆ. ಯಾವುದನ್ನು ಕೂಡ ತನಿಖೆ ಮಾಡುತ್ತಿಲ್ಲ. ಲೋಕಾಯುಕ್ತ ಕೋರ್ಟ್‌ನಲ್ಲೂ ಕೂಡ ಇವೆ. ಈ ಹಿಂದೆ ಕೇಸ್ ಹಾಕಿ ನನ್ನ ಜೈಲಿಗೆ ಕಳುಹಿಸಿದ್ದರು. ನಾನು ಏನು ತಪ್ಪು ಮಾಡಿಲ್ಲ ನ್ಯಾಯ ಸಿಗುತ್ತೆ ಎಂದು ಅವತ್ತೆ ಹೇಳಿದ್ದೆ, ಇವತ್ತು ಹೇಳುತ್ತೇನೆ. ಸಿಬಿಐಗೆ ಕೊಟ್ಟಿದ್ದು ಸರಿಯಲ್ಲ, ಸಿಬಿಐ ಅರ್ಧ ತನಿಖೆ ಮಾಡಿದ್ದೇವೆ ಎಂದು ಹೇಳಿದರು. ಆದರೆ ಯಾವುದೇ ತನಿಖೆ ಮಾಡಿರಲಿಲ್ಲ. ನಾವು ನ್ಯಾಯುತವಾಗಿ ಆಸ್ತಿ ಮಾಡಿದ್ದೇವೆ. ಯಾರಿಗೂ ತೊಂದರೆ ಕೊಟ್ಟಿಲ್ಲ ಎಂದರು.

Continue Reading
Advertisement
Yettinahole project lift work to be inaugurated on September 6 Gowri festival
ಬೆಂಗಳೂರು36 mins ago

Yettinahole Project: ಗೌರಿ ಹಬ್ಬದಂದು ಎತ್ತಿನಹೊಳೆ ಯೋಜನೆ ಏತ ಕಾಮಗಾರಿ ಉದ್ಘಾಟನೆ; ಪಕ್ಷಬೇಧ ಮರೆತು ಎಲ್ಲರಿಗೂ ಆಹ್ವಾನ- ಡಿಸಿಎಂ

Rain News
ಮಳೆ51 mins ago

Rain News : ವಿಜಯವಾಡದಲ್ಲಿ ಭಾರಿ ಮಳೆಗೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ; ಕಲಬುರಗಿಯಲ್ಲೂ ಅಬ್ಬರ

Bike rider in deadly accident Elderly woman dies of electric shock
ಬೆಂಗಳೂರು1 hour ago

Road Accident : ಡೆಡ್ಲಿ ಆ್ಯಕ್ಸಿಡೆಂಟ್‌ಗೆ ಬೈಕ್‌ ಸವಾರ ಸ್ಪಾಟ್‌ ಡೆತ್‌; ಕರೆಂಟ್‌ ಶಾಕ್‌ನಿಂದ ಒದ್ದಾಡಿ ಪ್ರಾಣಬಿಟ್ಟ ವೃದ್ಧೆ

Girl commits suicide after being fed up with rumours of love
ಮಂಡ್ಯ2 hours ago

Mandya News : ನಾಲ್ವರು ಬಾಲಕರ ಪ್ರೀತಿ-ಪ್ರೇಮದ ಅಪಪ್ರಚಾರ; ಗಾಳಿ ಸುದ್ದಿಗೆ ಬಾಲಕಿ ಆತ್ಮಹತ್ಯೆ

Do you know when Darshan got royalty in Central Jail
ಸಿನಿಮಾ3 hours ago

Actor Darshan : ಸೆಂಟ್ರಲ್‌ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ಸಿಕ್ಕಿದ್ದು ಯಾವಾಗಿನಿಂದ ಗೊತ್ತಾ? ಬಿಸ್ಕತ್‌ ಹಾಕಿಲ್ವಾ ಸುಮ್ಮಿನಿರು ಅಂದ್ರಾ ಕರಿಯಾ!

Actor Darshan shifted back to Bengaluru from Ballari
ಬಳ್ಳಾರಿ3 hours ago

Actor Darshan : ಬಳ್ಳಾರಿಯಿಂದ ನಟ ದರ್ಶನ್‌ ಮತ್ತೆ ಬೆಂಗಳೂರಿಗೆ ಶಿಫ್ಟ್‌! ಪತ್ನಿ ಬಂದು ಹೋದ್ಮೆಲೆ ಫುಲ್ ಆಕ್ಟೀವ್

police Firing
ಕಲಬುರಗಿ4 hours ago

Police Firing: ಪೊಲೀಸರ ಮೇಲೆ ಚಾಕುಯಿಂದ ದಾಳಿ ಮಾಡಿದ ದರೋಡೆಕೋರ; ಆರೋಪಿ ಕಾಲಿಗೆ ಫೈರಿಂಗ್‌ ಮಾಡಿದ ಖಾಕಿ

karnataka weather Forecast
ಮಳೆ9 hours ago

Karnataka Weather : ರಾಜ್ಯಾದ್ಯಂತ ಮುಂದಿನ 24 ಗಂಟೆಯಲ್ಲಿ ವ್ಯಾಪಕ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ10 hours ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

Rishab Shetty And NTR
ಸಿನಿಮಾ18 hours ago

Rishab Shetty And NTR: ತಾಯಿ ಜತೆಗೆ ಉಡುಪಿ ಶ್ರೀಕೃಷ್ಣನಿಗೆ ನಮಿಸಿದ ತೆಲುಗು ನಟ ಜ್ಯೂ.ಎನ್‌ಟಿಆರ್‌; ಜತೆಯಾದ ಡಿವೈನ್‌ ಸ್ಟಾರ್‌ ರಿಷಬ್‌

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್1 day ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 days ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 week ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ3 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌